Categories
ಶರಣರು / Sharanaru

ನಂಜುಂಡ ಶಿವ ??

ಈ ಅಂಕಿತದ ಕರ್ತೃ ಸು.1600ರಲ್ಲಿ ಇದ್ದಿರಬೇಕು ವಚನ, ಸ್ವರವಚನ ಎರಡೂ ಪ್ರಕಾರಗಳಲ್ಲಿ ಕೃತಿರಚನೆ ಮಾಡಿದ್ದಾನೆ. ಸದ್ಯ 24 ವಚನ, 5 ಸ್ವರ ವಚನಗಳು ದೊರೆತಿವೆ. ಹೆಚ್ಚಿನ ವಚನಗಳು ದೀರ್ಘವಾಗಿವೆ. ಸಂಸ್ಕೃತ ಉದ್ಧರಣೆಗಳಿಂದ ತುಂಬಿಕೊಂಡಿವೆ, ತತ್ವಪ್ರಧಾನವೆನಿಸಿವೆ. ವಚನಗಳಲ್ಲಿ ಸಂಸ್ಕೃತ ಶ್ಲೋಕಗಳ ಬಳಕೆ ಹೆಚ್ಚಿಗೆ ಇದೆ. ಗುರು-ಲಿಂಗ-ಜಂಗಮಗಳ ಪ್ರಸಾದ ವಿಶೇಷವನ್ನು ಹೇಳಲಾಗಿದೆ.

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.