Categories
ಶರಣರು / Sharanaru

ನಿರಾಲಂಬ ಪ್ರಭುದೇವ

ಅಂಕಿತ: ನಿಸ್ಸಂಗ ನಿರಾಳ ನಿಜಲಿಂಗ ಪ್ರಭುವೆ

‘ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ’ ಎಂಬ ಅಂಕಿತದಲ್ಲಿ ೧೪ ವಚನಗಳನ್ನು ಬಿಟ್ಟರೆ ಈತನ ಬಗೆಗೆ ಮತ್ತಾವ ಸಂಗತಿಗಳೂ ದೊರೆಯುವುದಿಲ್ಲ. ‘ಶಿವಭಕ್ತಿ ಪಂಚಾಂಗ ವಚನ’ ಎಂದು ಕರೆಯಲಾದ ಈ ವಚನಗಳಲ್ಲಿ ಶಿವಾಚಾರ ಪಥವನರಿಯದೆ ಪಂಚಾಂಗ ಕೇಳುವವರನ್ನು ಇತರ ಕಂದಾಚಾರಗಳನ್ನು ಕಟುವಾಗಿ ಟೀಕಿಸಲಾಗಿದೆ.

ಇವನ ವಚನಗಳನ್ನು ಶಿವಭಕ್ತಿಪಂಚಾಂಗದ ವಚನಗಳೆಂದು ಕರೆಯಲಾಗಿದೆ. ಶಿವಭಕ್ತರಾದವರು ಶುಭಾಶುಭಗಳಿಗೆ ಪಂಚಾಂಗ ಕೇಳುವುದನ್ನು ಕಟುವಾಗಿ ಟೀಕಿಸುವ ಇವನು “ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ ಈ ಐದು ಕೂಡಿ ದೇಹವಾಯಿತ್ತು. ಆ ದೇಹದೊಳಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಚ್ಚು, ಮುರಿಯುವುದೆ ಪಂಚಾಂಗ” ಎನ್ನುವನು, ವೈದಿಕರೆ ಹೇಳುವ ಪಂಚಾಂಗವನ್ನು ತಿರಸ್ಕರಿಸುವ ಇವನು ತನ್ನ ವಚನಗಳಲ್ಲಿ ಶಿವಭಕ್ತಿ ಪಂಚಾಂಗದ ಅರ್ಥವೇ ಬೇರೆಯಾಗಿರುವುದನ್ನು ವಿವರಿಸುವನು.