Categories
ಶರಣರು / Sharanaru

ಪುರದ ನಾಗಣ್ಣ

ಅಂಕಿತ: ಅಮರಗುಂಡದ ಮಲ್ಲಿಕಾರ್ಜುನಾ

ಈತ ಅಮರಗುಂಡದ ಮಲ್ಲಿಕಾರ್ಜುನನ ಮಗ. ಸ್ಥಳ ಅಮರಗುಂಡ, ಅಂದರೆ ತುಮಕೂರು ಜಿಲ್ಲೆಯ ಗುಬ್ಬಿ. ಕಾಲ ೧೧೬೦ ‘ಅಮರಗುಂಡದ ಮಲ್ಲಿಕಾರ್ಜುನ’ ಅಂಕಿತದಲ್ಲಿ ೯ ವಚನಗಳು ದೊರೆತಿವೆ. ಬಸವಾದಿ ಶರಣರ ಸ್ತುತಿ, ನಿಜಾನಂದ ಭಕ್ತಿಯ ಬಯಕೆ, ಗುರುಪಾದೋದಕದ ಮಹಿಮೆ, ಶರಣನ ಸ್ವರೂಪ, ಲಿಂಗನಿಷ್ಠೆ ಮೊದಲಾದ ವಿಷಯಗಳ ವಿವರ ಅವುಗಳಲ್ಲಿದೆ. ಕೆಲವು ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ.

ಪಾದೋದಕದ ಮಹಿಮೆಯನ್ನು ಹೇಳಿರುವನು. ನೆನೆವ ಮನಕ್ಕೆ ಮಣ್ಣನ್ನೂ, ನೋಡುವ ಕಣ್ಣಿಗೆ ಹೆಣ್ಣನ್ನೂ, ಪೂಜಿಸುವ ಕೈಗೆ ಹೊನ್ನನ್ನೂ ಕೊಟ್ಟು ಮರಹನ್ನು ಅನುಗ್ರಹಿಸಿದ ಪರಮಾತ್ಮನ ಲೀಲೆಯನ್ನು ನೋಡಿ ಬೆರಗಾಗಿರುವನು. ಬೇಸಾಯದ ಕ್ರಿಯೆಯನ್ನು ಹೇಳುತ್ತಾ ಆಧ್ಯಾತ್ಮವನ್ನು ಅದಕ್ಕೆ ಅನ್ವಯಿಸುವನು. ಭಕ್ತನ ಲಿಂಗ ಭಿನ್ನವಾಗಲು ಆ ಲಿಂಗದೊಡನೆ ಪ್ರಾಣವನ್ನು ಬಿಡಬೇಕೆನ್ನುವನು