Categories
ಶರಣರು / Sharanaru

ಬಾಲಸಂಗಣ್ಣ

ಅಂಕಿತ: ಕಮಠೇಶ್ವರ

ಈತನ ಜೀವನ ವಿವರ ಲಭ್ಯವಿಲ್ಲ ಕಾಲ-೧೧೬೦. ಅಂಕಿತ ಕಮಠೇಶ್ವರಲಿಂಗ. ೮ ವಚನಗಳು ದೊರೆತಿವೆ. ಜೀವ, ಆತ್ಮ, ಅರ್ಪಿತ, ಶರಣ, ಇವುಗಳ ಲಕ್ಷಣವನ್ನು ತನ್ನದೆ ಆದ ರೀತಿಯಲ್ಲಿ ವಿವರಿಸುತ್ತಾನೆ. ಉಪಮೆ, ದೃಷ್ಟಾಂತಗಳ ಮೂಲಕ ಲಿಂಗಾಂಗ ಸಾಮರಸ್ಯದಂಥ ಜಟಿಲ ವಿಷಯವನ್ನು ಸರಳ ಸುಂದರವಾಗಿ ನಿರೂಪಿಸಲಾಗಿದೆ.

ಊರೊಳಗಣ ಹೊಲೆಯ, ಊರ ಹೊರಗಣ ಕುಲಜ – ಇವರಲ್ಲಿ ಯಾರು ಉತ್ತಮರೆನ್ನುವುದನ್ನು ತಿಳಿದಿದ್ದರೆ ಪ್ರಾಣಲಿಂಗಸಂಬಂಧಿಯೆನ್ನುವೆ ಎಂಬ ಮಾತು ೧೨ ನೇ ಶತಮಾನದ ಜಾತ್ಯತೀತ ನಿಲುವಿಗೆ ಆಶ್ಚರ್ಯಕರರೀತಿಯಲ್ಲಿ ಹೊಂದಿಕೆಯಾಗುತ್ತದೆ. ವಚನಗಳಲ್ಲಿನ ಉಪಮೆಗಳು ಅರ್ಥಪೂರ್ಣವಾಗಿದೆ.