Categories
ಶರಣರು / Sharanaru

ಬಿಬ್ಬಿ ಬಾಚಯ್ಯ

ಅಂಕಿತ: ಏಣಾಂಕಧರ ಸೋಮೇಶ್ವರ
ಕಾಯಕ: ಪ್ರಸಾದಿ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೊಬ್ಬೂರು ಈತನ ಸ್ಥಳ. ಇಲ್ಲಿ ‘ಅರ್ಪಣದ ಕಟ್ಟೆ’ ಎಂಬುದಿದ್ದು, ಇದು ಬಾಚಯ್ಯನ ಗದ್ದುಗೆಯಾಗಿರಬೇಕೆಂದು ಊಹಿಸಲಾಗಿದೆ. ಈತನ ಕಾಲ-೧೧೬೦. ಅಂಕಿತ ‘ಏಣಾಂಕಧರ ಸೋಮೇಶ್ವರ’. ೧೦೨ ವಚನಗಳು ದೊರೆತಿವೆ. ಬಾಚಯ್ಯ ಪ್ರಸಾದಿಸ್ಥಲದಲ್ಲಿ ನಿಂತ ಶರಣ. ಹೀಗಾಗಿ ಆತ ತನ್ನೆಲ್ಲ ವಚನಗಳಲ್ಲಿ ತಾನು ನಿಂತ ಸ್ಥಲದ ವಿಷಯವನ್ನು ವಿಶೇಷವಾಗಿ ಪ್ರತಿಪಾದಿಸುವುದು ಸಹಜವೆನಿಸಿದೆ. ಕೆಲವು ಬೆಡಗಿನ ವಚನಗಳೂ ಇವೆ. ಬೇರೆ ಬೇರೆ ಶೀರ್ಷೆಕೆಯ ಆರು ಸ್ಥಲಗಳ ಅಡಿಯಲ್ಲಿ ವಚನಗಳನ್ನು ವಿಭಜಿಸಲಾಗಿದೆ.

ಬಸವಣ್ಣ , ಚನ್ನಬಸವಣ್ಣ, ಪ್ರಭುದೇವ ಇವರ ಪ್ರಸಾದದ ಫಲವಾಗಿ ಕ್ರಮವಾಗಿ ಭಕ್ತಿ ಜ್ಞಾನ, ವೈರಾಗ್ಯಗಳು ಸಾಧ್ಯವಾಯಿತು ಎಂದಿರುವನು ಬೆಡಗಿನಿಂದ ಕೂಡಿವೆ. ಇವನು ತನ್ನದೇ ಆದ ಸ್ಥಲಕಲ್ಪನೆಯಲ್ಲಿ ವಚನಗಳನ್ನು ಬರೆದಿರುವನು.