Categories
ಶರಣರು / Sharanaru

ಮಲ್ಲಿಕಾರ್ಜುನ ಪಂಡಿತಾರಾಧ್ಯ

ಅಂಕಿತ: ಶ್ರೀ ಮಲ್ಲಿಕಾರ್ಜುನ

ಆಂಧ್ರ ಮೂಲದ ಆರಾಧ್ಯ ಪರಂಪರೆಗೆ ಸೇರಿದ ಈತನ ಕಾಲ ೧೧೬೦. ಬಸವಣ್ಣನವರು ಕಳಿಸಿದ ಭಸಿತ ಧಾರಣೆಯಿಂದ ಕನ್ನಡ ಕಲಿತನೆಂದೂ, ಬಸವಣ್ಣನವರನ್ನು ಕಾಣಲು ಹೊರಟ ಈತನಿಗೆ ಮಾರ್ಗಮಧ್ಯದಲ್ಲಿಯೇ ಅವರು ಐಕ್ಯರಾದರೆಂಬ ವಿಷಯ ತಿಳಿದು ತನ್ನ ಇಷ್ಟಲಿಂಗದಲ್ಲಿಯೇ ಆ ದೃಶ್ಯವನ್ನು ಕಂಡು ತೃಪ್ತಿಪಟ್ಟನೆಂದೂ ಕಥೆ ಇದೆ. ‘ಶ್ರೀ ಮಲ್ಲಿಕಾರ್ಜುನ’ ಅಂಕಿತದಲ್ಲಿ ಈತನ ೧೩ ವಚನಗಳು ದೊರೆಯುತ್ತವೆ. ದೇಹ ಅಸ್ಥಿರ; ಇರುವಾಗಲೇ ಅದನ್ನು ಶಿವಧ್ಯಾನ – ಶಿವಪೂಜೆಯಲ್ಲಿ ತೊಡಗಿಸಬೇಕು, ಪಾಪ-ಪುಣ್ಯಗಳ ಪ್ರಜ್ಞೆ ಜೀವಿಯಲ್ಲಿ ಸದಾ ಜಾಗೃತವಾಗಿರಬೇಕು ಎಂಬಂಥ ನೀತಿಪರ ನುಡಿಗಳು ಈತನಲ್ಲಿ ಆಧಿಕ. ಸರಳ ಭಾಷೆ ನೇರ ನಿರೂಪಣೆಯಿಂದ ವಚನಗಳು ಗಮನ ಸೆಳೆಯುತ್ತವೆ.

ಯಾರು ಯಾರನ್ನೋ `ಅಯ್ಯಾ’, `ದೇವಾ’ ಎನ್ನಲಾರೆ, ಜಗಭರಿತನಾದ ಪರಮಾತ್ಮನನ್ನು ಅಯ್ಯಾ ಎನ್ನುವೆ. ತನಗೆ ಯಾರೂ ಇಲ್ಲವಾದ ಕಾರಣ, ಆ ಪರಮಾತ್ಮನಿಗೆ ಶರಣುಹೋಗುವೆ ಎಂದಿರುವನು. ಧನ, ಯೌವ್ವನ, ಪ್ರಾಣ – ಇವೆಲ್ಲವೂ ಅಶಾಶ್ವತ. ಅದನ್ನು ತಿಳಿದು ಶ್ರೀ ಮಲ್ಲಿಕಾರ್ಜುನನನ್ನು ನೆನೆ ಎನ್ನುವನು. ಆದ್ರ್ರ ಭಕ್ತಿ, ಭಾವ ಇವನ ವಚನಗಳಲ್ಲಿದೆ.