Categories
ಶರಣರು / Sharanaru

ಮಳುಬಾವಿಯ ಸೋಮಣ್ಣ

ಅಂಕಿತ: ಮಳುಬಾವಿಯ ಸೋಮ

ಈತನ ಜೀವನದ ವಿವರಗಳು ತಿಳಿದಿಲ್ಲ. ಕಾಲ-೧೬೫೦. ಅಂಕಿತ – ಮಳುಭಾವಿಯ ಸೋಮ. ಒಂದೇ ವಚನ ದೊರೆತಿದೆ. ವ್ಯರಾಗ್ಯಪರ ವಿಚಾರವನ್ನು ಸುಂದರವಾಗಿ ತಿಳಿಸಲಾಗಿದೆ.

ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು, ಸುಖವಿಲ್ಲದ ಸಂಸಾರ, ಎಳತಟಗೊಂಬ ಕಾಯದ ಸಂಗ, ಬಳಲಿಸುವ ಜೀವಭಾವ – ಇವುಗಳ ಚಿಂತೆಯನ್ನು ಬಿಟ್ಟಲ್ಲದೆ ಪರಮಾತ್ಮನನ್ನು ತಿಳಿಯಲಾಗದು ಎಂದಿರುವನು.