Categories
ಶರಣರು / Sharanaru

ಮಾರೇಶ್ವರೊಡೆಯ

ಅಂಕಿತ: ಮಾರೇಶ್ವರ

ಅಪ್ಪುವಿನ ಶಿಲೆಯ, ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ ?
ಅರಗಿನ ಪಟವ, ಉಳಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ ?
ಮೃತ್ತಿಕೆಯ ಹರುಗೋಲನೇರಿ, ನದಿಯ ತಪ್ಪಲಿಗೆ ಹೋಗಬಹುದೆ ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ !
ಶಿಲೆಯೊಳಗಣ ಸುರಭಿಯಂತೆ, ಪ್ರಳಯದೊಳಗಾಗದ ನಿಜನಿವಾಸದಂತೆ,
ಆಯದ ಗಾಯದಂತೆ, ಸಂಗಾಯದ ಸುಖದಂತೆ.
ಇಂತೀ ಭಾವರಹಿತವಾದ ಭಾವಜ್ಞನ ತೆರ,
ಕೂಗಿಂಗೆ ಹೊರಗು, ಮಹಾಮಹಿಮ ಮಾರೇಶ್ವರಾ. /೧೨೭೨

ಈತನ ಬದುಕಿನ ವಿವರಗಳು ದೊರೆತಿಲ್ಲ. ಕಾಲ-೧೧೬೦. ಅಂಕಿತ-ಮಾರೇಶ್ವರ. ದೊರೆತ ವಚನಗಳ ಸಂಖ್ಯೆ-೧೩, ಇಷ್ಟಲಿಂಗದ ಸ್ವರೂಪ, ಅರಿವು, ಆಚಾರ, ಲಿಂಗಾಂಗಿಯ ನಿಲುವು ಮೊದಲಾದ ವಿಷಯಗಳನ್ನು ನಿರೂಪಿಸುವ ಈತನ ವಚನಗಳು ಸಂಕ್ಷಿಪ್ತತೆ, ಭಾವಪೂರ್ಣತೆ, ಸರಳತೆಯನ್ನು ಒಳಗೊಂಡು ಆತ್ಮೀಯವೆನಿಸಿವೆ. ಕೆಲವು ಬೆಡಗಿನ ವಚನಗಳು ತತ್ವಬೋಧಕವಾಗಿವೆ.

ಉಂಬವರೆಲ್ಲ ಒಂದೇ ಪರಿಯೆ,
ತಮ್ಮ ತಮ್ಮ ಬಾಯಿಚ್ಫೆಯಲ್ಲದೆ ?
ಇಕ್ಕುವರಂದಕ್ಕೆ ಉಂಡಡೆ,
ತನಗೇ ಸಿಕ್ಕೆಂದೆ ಮಾರೇಶ್ವರಾ. /೧೨೭೩

ಬೆಡಗಿನ ರೀತಿಯಲ್ಲಿ ವಚನಗಳಿವೆ. ಶಿವನಲೀಲೆ, ಭಾವಜ್ಞನರೀತಿ ಮಾತಿನ ಮರ್ಮ – ಇವೇ ಮೊದಲಾದ ಸಂಗತಿಗಳನ್ನು ಮಾರ್ಮಿಕವಾಗಿ ಹೇಳುವನು. ಇಷ್ಟೆಲಿಂಗಾನುಗ್ರಹವನ್ನು ಕುರಿತು ಊಡಿದ ಡುಣ್ಣದು, ಒಡನೆ ಮಾತನಾಡದು, ನೋಡದು, ನುಡಿಯದು, ಬೇಡದು, ಕಾಡದು, ಕಾಡಬೆರಣೆಯ ಕೈಯಲ್ಲಿ ಕೊಟ್ಟು ಹೇಳದೇ ಹೋದ”ಎಂದಿರುವನು.