Categories
ವಚನಗಳು / Vachanagalu

ಸಂಗಮೇಶ ಅಪ್ಪಣ್ಣನ ವಚನಗಳು

ಅಂಗ ಲಿಂಗವೆಂದರಿದಾತಂಗೆ, ಅಂಗದಲೆ ಐಕ್ಯ.
ಕಂಗಳು ಲಿಂಗವೆಂದರಿದಾತಂಗೆ, ಕಂಗಳಲೆ ಐಕ್ಯ.
ಕರವೆ ಲಿಂಗವೆಂದರಿದಾತಂಗೆ, ಕರದಲೆ ಐಕ್ಯ.
ಈ ತ್ರಿವಿಧದ ನೆಲೆಯ, ಶ್ರುತಿ ಸ್ಮೃತಿಗಳರಿಯವು.
ಎಮ್ಮ ಬಸವಪ್ರಿಯ ಕೂಡಲಚನ್ನಸಂಗಮದೇವನಲ್ಲಿ
ಈ ಇರವ ಶರಣರೆ ಬಲ್ಲರು./1
ಅಂಗದ ಕಳೆ ಲಿಂಗದಲ್ಲಿ ಲೀಯವಾಗದು.
ಲಿಂಗದ ಕಳೆ ಅಂಗದಲ್ಲಿ ಲೀಯವಾಗದು.
ಮಾತಿನಮಾಲೆಯ ಬೊಮ್ಮವೇತರದೊ ?
ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು.
ಪ್ರಾಣ ಜಂಗಮವಾದಡೆ ಅರಿದಿರಬೇಕು.
ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ.
ಹಿರಿಯರು ಬಂದಡೆ ಇದಿರೆದ್ದು ಬಾರದವರ ಮನೆಗೆ ಅಡಿಯ ಇಡೆವೆಂದು,
ಬಸವಪ್ರಿಯ ಕೂಡಲಚನ್ನಸಂಗನ ಶರಣರು ಕಾಡಿಹರು ಕಾಣಾ,
ಸಂಗನಬಸವಣ್ಣಾ./2
ಅಂಗದ ಪ್ರಕೃತಿ ಲಿಂಗದಲ್ಲಿ ಅಳಿದು, ಮನದ ಪ್ರಕೃತಿ ಅರಿವಿನಲ್ಲಿ ಅಳಿದು,
ಜೀವಭ್ರಾಂತಿ ನಿಶ್ಚಿಂತಪದದಲ್ಲಿ ಅಳಿದು,
ನಿಶ್ಶೂನ್ಯ ನಿರಾಮಯವಾದ ನಿವಾಸಕ್ಕೆ ಸದಾಚಾರವೆಂಬ ಕೆಸರುಗಲ್ಲನಿಕ್ಕಿ,
ಸರ್ವಾಚಾರಸಂಪತ್ತೆಂಬ ಹೂಗಲ್ಲ ಮುಚ್ಚಿ,
ಅಂತಃಕರಣಚತುಷ್ಟಯವೆಂಬ ನಾಲ್ಕು ಕಂಬಗಳಂ ನಿಲಿಸಿ,
ಜ್ಞಾತೃವೆಂಬ ಭಿತ್ತಿಯ ಮೇಲೆ ಜ್ಞಾನವೆಂಬ ಶಿಖರಿಯನನುಗೊಳಿಸಿ,
ಜ್ಞೇಯವೆಂಬ ಹೊನ್ನಕಳಶಮಂ ಶೃಂಗಾರಮಂ ಮಾಡಿ,
ಬ್ರಹ್ಮರಂಧ್ರದ ಊಧ್ರ್ವದ್ವಾರವೆಂಬ ನಿಜದ್ವಾರಮಂ ಮಾಡಿ,
ನಿರ್ವಯಲಲ್ಲಿ ನೆಲೆಗೊಳಿಸಿ, ಬಸವಪ್ರಿಯ ಕೂಡಲಚನ್ನಸಂಗನ ಶರಣ
ಪ್ರಭುದೇವರ ಬರವಿಂಗೆ ಶೂನ್ಯಸಿಂಹಾಸನವಂ ರಚಿಸಿ,
ಬರವ ಹಾರುತ್ತಿದನೆನ್ನ ಪರಮಗುರು ಬಸವಣ್ಣನು./3
ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು.
ಸಂದ ಪುರಾತನರ ನೆನೆಯುತ್ತಿರಬೇಕು.
ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು.
ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ./4
ಅಗ್ಗದ ಹರಿಬ್ರಹ್ಮರ ಮರೆದೊಮ್ಮೆ ಹರಂಗೆ ಸಮವೆಂದಡೆ,
ಅವನು ಚಾಂಡಾಲನು. ಅವನ ಮುಖವ ನೋಡಲಾಗದು.
ಅದೆಂತೆಂದಡೆ: ಯೋ ಮಹಾದೇವಮನ್ಯೇನ ಹೀನದೇವೇನ ದುರ್ಮತಿಃ |
ಸಕೃತ್ಸಾಧಾರಣಂ ಬ್ರೂಯಾದಂತ್ಯಜಾನಾಂತ್ಯಜೋಂತಜಃ ||
ಇಂತೆಂದುದಾಗಿ, ನಿಮಗೆ ಕಿರುಕುಳದೈವಂಗಳ ಸಮವೆಂದು
ಬಗಳುವನ ಬಾಯಿ ಪಾಕುಳತಪ್ಪದು,
ಬಸವಪ್ರಿಯ ಕೂಡಲಚನ್ನಸಂಗಮದೇವಾ./5
ಅಜನಂದು ಸಾರಿ ಹೇಳಿದ ಸುರಮುನಿಗಳೆಲ್ಲರಿಗೂ :
ಶಿವನನೆ ಧ್ಯಾನಿಸಿ, ಶಿವನನೆ ಪೂಜಿಸಿ,
ಶಿವಭಕ್ತಿಯೆ ನಿಮಗೆ ಪರಮಸಾಧನವೆಂದು ಬೊಬ್ಬಿಟ್ಟು,
ಬೆರಳನೆತ್ತಿ ಸಾರಿದನು.
ವಿಷ್ಣುಭಕ್ತಿಯಿಂದವೂ ತನ್ನ ಭಕ್ತಿಯಿಂದವೂ ನಿಮಗೆ ಸದ್ಗತಿ ಇಲ್ಲವೆಂದನು.
ಅದೆಂತೆಂದಡೆ : ವಿಷ್ಣುಭಕ್ತ್ಯ ಚ ಮದ್ಭಕ್ತ ನಾಸ್ತಿ ನಾಸ್ತಿ ಪರಾಗತಿಃ |
ಶಂಭು ಭಕ್ತೈವ ಸರ್ವೆಷಾಂ ಸತ್ಯಮೇವಮಯೋದಿತಂ ||
ಎಂದುದಾಗಿ, ದ್ವಿಜರಿಗೆ ಉಪದೇಶ ಬೇರಿನ್ನು ಮತ್ತಿಲ್ಲ ,
ಬಸವಪ್ರಿಯ ಕೂಡಲಚನ್ನಸಂಗಮದೇವಾ./6
ಅಜಹರಿಸುರರೆಲ್ಲರು ಅಳಿದವರಲ್ಲದೆ, ಉಳಿದವರಿಲ್ಲ.
ಶಿವನೆ ನಿತ್ಯನೆಂದು ಹೊಡೆವಡುತ್ತಿವೆ ವೇದ.
ಉತೈನಂ ವಿಶ್ವಾಭೂತಾನಿ ಸದೃಷ್ಟೋ ಮೃಡಯಾತಿನಃ |
ನಮೋಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಡುಷೇ ||
ಎಂಬ ಶ್ರುತಿ, ಬಸವಪ್ರಿಯ ಕೂಡಲಚನ್ನಸಂಗಯ್ಯನೊರ್ವನೆ
ನಿತ್ಯನೆಂದು ಹೊಗಳುತ್ತಲಿದೆ./7
ಅತಕ್ರ್ಯನ ತರ್ಕಮುಖದಲ್ಲಿ ಸಾಧಿಸಿದೆನೆಂದಡೆ,
ನಿಮ್ಮ ತರ್ಕಶಾಸ್ತ್ರಕೊಂಬುದೆ ಎಲೆ ತರ್ಕಿಗರಿರಾ.
ಅಪ್ರಮಾಣನನ ಪ್ರಮಾಣಿಸಿದೆನೆಂದಡೆ
ನಿಮ್ಮ ಪ್ರಮಾಣೆಲ್ಲಿಗೆ ಬಹವೆಲೆ ಅಪ್ರಮಾಣಕರಿರಾ.
ವೇದ ವೇಧಿಸಲರಿಯದೆ `ಚಕಿತಮಭಿದತ್ತೇ’ ಎನಲು,
ಅಂತ್ಯನಾಸ್ತಿಯಾದ ಮಹಾಂತಂಗೆ
ನಿಮ್ಮ ವೇದಾಂತವೇಗುವವು ಎಲೆ ವೇದಾಂತಿಗಳಿರಾ.
ಕರ್ಮಾದಿರಹಿತ ನಿರ್ಮಾಯ ಶಿವಂಗೆ
ನಿಮ್ಮ ಕರ್ಮಂಗಳೆಲ್ಲಿಗೆ ನಿಲುಕವವು ಎಲೆ ಪ್ರಭಾತರಿರಾ.
ಕಾಲಂಗೆ ಕಾಲ ಮಹಾಕಾಲ ಕಾಲಾತೀತ ಮಹಾದೇವಂಗೆ
ನಿಮ್ಮ ಕಾಲವೇದವೇಗುವವು ಎಲೆ ಭ್ರಾಂತರಿರಾ.
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ |
ಅನಿಂದಿತಮನೌಪಮ್ಯಂ ಅಪ್ರಮೇಯಮನಾಮಯಂ
ಶುದ್ಧತ್ವಂ ಶಿವಮುದಿಷ್ಟಂ ಪರಾದೂಧ್ರ್ವಂ ಪರಾತ್ಪರಂ ||
ಇಂತೆಂದುದಾಗಿ,
ದರುಶನವಾದಿಗಳೆಲ್ಲ ದರುಷನ ಭ್ರಮೆಯ ಬಿಟ್ಟು
ಹರುಷದಿಂದ ಭಜಿಸಿ ಬದುಕಿರೆ,
ಬಸವಪ್ರಿಯ ಕೂಡಲಚನ್ನ ಸಂಗಯ್ಯನ./8
ಅನಿಮಿಷನಾದ ನಿಬ್ಬೆರಗಿನ ಲಿಂಗೈಕ್ಯನು, ಭಾವ ನಿರ್ಭಾವವನೆಯ್ದಿ,
ಜ್ಞಾನವೆ ಪರಮಾಶ್ರಯವಾಗಿಪ್ಪ ಲಿಂಗೈಕ್ಯನು,
ಮಹವನೊಳಕೊಂಡ ಮಹಿಮ ಲಿಂಗೈಕ್ಯನು,
ಬಸವಪ್ರಿಯ ಕೂಡಲ ಚನ್ನಸಂಗಯ್ಯಾ ನಿಮ್ಮ ಶರಣ ಪ್ರಭುದೇವರು./9
ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು,
ಮನೆಮನೆದಪ್ಪದೆ ತಿರುಗುವೆನು.
ಅವರ ಇಚ್ಛಿಗೆ ಅನುಮಾನವಿಡಿದು ನುಡಿವೆನು.
ಅವರ ಮನಧರ್ಮವನರಿಯದೆ ನುಡಿದೆನಾದಡೆ,
ಅನೇಕ ಪರಿಯಲ್ಲಿ ಭಂಗಬಡುವೆನು.
ದಿಟದ ಭಕುತನಂತೆ,
ಪುರಾತರ ವಚನಂಗಳ ಉದರ ನಿಮಿತ್ತವಾಗಿ ಬಳಸುವೆನು.
[ಕಡು] ಪಾಪಿಗಿನ್ನೇನು ಹದನಯ್ಯ,
ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ ?/10
ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ ಬೆಲ್ಲವ ಕಂಡು, ಎಲ್ಲರೂ ಮೆಲಬಂದರು.
ಬೆಲ್ಲಗಳಿದ್ದಡೆ ನಿಲಲೀಸದೆ ಎನ್ನ ಕಾಡುತ್ತಿದಾರೆಯೆಂದು,
ಆ ಬೆಲ್ಲವನಲ್ಲಿಯೆ ನುಂಗಿದಡೆ, ಹಲ್ಲು ಮುರಿದವು.
ಮೆಲಬಂದವರೆಲ್ಲ ಅಲ್ಲಿಯೆ ಬಯಲಾದರು.
ನಾ ನಿಮ್ಮಲ್ಲಿ ಕೂಡಿ ಸುಖಿಯಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./11
ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ.
ಮರ ಬೆಂದು ನಿಂದುರಿಯಿತ್ತು , ಮಣ್ಣು ಜರಿದು ಬಿದ್ದಿತ್ತು.
ಉರಿ ಹೊಗೆ ನಂದಿತ್ತು , ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು.
ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು .
ಇದ ಕಂಡು, ನಾ ಬೆರಗಾಗಿ ನೋಡುತ್ತಿದ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ./12
ಅಯ್ಯಾ ಹಳೆಯ ಹುತ್ತದೊಳಗೊಂದು ಎಳೆಯ ಸರ್ಪನ ಕಂಡೆ.
ಆ ಎಳೆಯ ಸರ್ಪ ಹೊರಟು, ಬೆಳಗು ಕತ್ತಲೆಯೆರಡೂ ನುಂಗಿತ್ತು.
ಆ ಎಳೆಯ ಸರ್ಪನ ಕಂಡು, ಅಲ್ಲಿದ್ದ ತಳಿರ ಮರ ನುಂಗಿತ್ತು.
ಆ ತಳಿರ ಮರನ ಕಂಡು ಮಹಾಬೆಳಗು ನುಂಗಿತ್ತು.
ಆ ಮಹಾಬೆಳಗ ಕಂಡು, ನಾನೊಳಹೊಕ್ಕು ನೋಡಿದಡೆ,
ಒಳಹೊರಗೆ ತೊಳತೊಳಗಿ ಬೆಳಗುತ್ತಿದ್ದಿತಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವ./13
ಅಯ್ಯಾ, ಎನಗೆ ಭಕ್ತಿಯುಂಟೆಂಬ ಮಾತೇ ಡಂಬು ನೋಡಯ್ಯಾ.
ಎನಗಾ ಮಾತಿಂಗಧಿಕಾರವೆಲ್ಲಿಯದಯ್ಯಾ.
ತಲೆಹುಳಿತ ನಾಯಿಗೆ ಉಚ್ಛಿಷ್ಟಾನ್ನ ಬಂದುದೆ ಭಾಗ್ಯವು.
ಒಂದರೊಳಗೊಂದನರಿಯೆನಯ್ಯಾ,
ಬಸವಪ್ರಿಯ ಕೂಡಲಚೆನ್ನ ಸಂಗಯ್ಯಾ./14
ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಅಯ್ಯಾ, ಜೈನರಾದವರು ತಮ್ಮ ಜಿನನ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಲಿಂಗವ ಬಿಟ್ಟು, ಇತರವ ಹಿಡಿದವರುಳ್ಳರೆ ಹೇಳಿರಯ್ಯಾ ?
ಉಳ್ಳಡೆಯೂ ಅವರು ವ್ರತಗೇಡಿಗಳೆನಿಸಿಕೊಂಬರು.
ಇದು ಕಾರಣ, ಋಷಿ ಕೃತಕದಿಂದಲಾದ ಕುಟಿಲದೈವಂಗಳ
ದಿಟವೆಂದು ಬಗೆವರೆ, ಬುದ್ಧಿವಂತರು ?
ಸಟೆಯ ಬಿಡಲಾರದೆ, ದಿಟವ ನಂಬಲಾರದೆ,
ನಷ್ಟವಾಗಿ ಹೋಯಿತ್ತೀ ಜಗವು ನೋಡಾ.
ಸಕಲದೈವಂಗಳಿಗೆ, ಸಕಲಸಮಯಂಗಳಿಗೆ
ನೀವೇ ಘನವಾಗಿ, ನಿಮಗೆ ಶರಣುವೊಕ್ಕೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./15
ಅಲ್ಲಿಂದತ್ತ ಪಶ್ಚಿಮಚಕ್ರಕ್ಕೆ ಏಕದಳ ಪದ್ಮ,
ಹವಣಿಸಬಾರದ ತೇಜ, ಏಕಾಕ್ಷರ,
ಕುರುಹಿಡಬಾರದ ನಾದ, ಅಪ್ರದರ್ಶನ ವರ್ಣ,
ನಿಭರ್ಿನ್ನ ಶಕ್ತಿ, ಸರ್ವಾತ್ಮನೆಂಬ ಜಂಗಮವೆ ಅಧಿದೇವತೆ.
ಪರಿಪೂರ್ಣ ಜಂಗಮಲಿಂಗ, ಅಕ್ಷರಾಕ್ಷ[ರ]ತೀತ, ನಿಶ್ಶಬವಾಗಿಪ್ಪುದು.
ಇಂತಪ್ಪ ಲಿಂಗಾಂಗವೆ ತಾನಾಗಿ, ಅವಿರಳ ಜಂಗಮಭಕ್ತಿಯ ಮಾಡಬಲ್ಲಾತನೆ,
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನಯ್ಯಾ, ಪ್ರಭುವೆ./16
ಅಷ್ಟತನುವಿನೊಳಗೊಂದು ತನುವಾಗಿ,
ಜೀವಾತ್ಮನು ಪಾಶಬದ್ಧನು ಪಶುಪಾಗತಂತ್ರನು ಸ್ವತಂತ್ರವೆಲ್ಲಿಯದೊ ?
ಸ್ವತಂತ್ರ ಶಿವನೊಬ್ಬನೆ ತನ್ನ ಇಚ್ಛಾಲೀಲೆಯಿಂದಾಡಿಸುವ
ಘೋರಸಂಸಾರ ಭವವಾರಿಧಿಯೊಳಗೆ
ರಾಟಾಳದ ಗುಂಡಿಗೆಯೊಳಗಣ ಜಲದ ತೆರದಿ
ತುಂಬುತ್ತ ಕೆಡಹುತ್ತವಿರುಹವೈಸಲ್ಲದೆ ತೆರಹಿಲ್ಲ.
ಪುಣ್ಯಪಾಪಂಗಳ ಮಾಡಿ ಸ್ವರ್ಗನರಕಂಗಳ ಭೋಗಿಸಿ
ಪರತಂತ್ರವಲ್ಲದೆ ಸ್ವತಂತ್ರವೆಲ್ಲಿಯದೊ ?
ಪುನರ್ಜನ್ಮ ಪುನಮರ್ೃತ್ಯುಃ ಪುನಃ ಕ್ಲೇಶಃ ಪುನಃ ಪುನಃ |
ಸಗರಸ್ಥಘಟನ್ಯಾಯೋ ನ ಕದಾಚಿದವೈದೃಶಃ ||
ಎಂದುದಾಗಿ, ಜೀವಾತ್ಮಂಗೆ ಪರಮಾತ್ಮತ್ವ ಸಲ್ಲದಾಗಿ,
ಅಷ್ಟತನುವಿನೊಳಗೊಂದು ತನು ಕಾಣಿಭೋ, ಎಲೆ ಅದ್ವೈತಿಗಳಿರಾ.
ಹುಟ್ಟುಕುರುಡನು ತನ್ನ ಹಿರಿಯಯ್ಯ ಹೆತ್ತಪ್ಪಂಗೆ ಮುಖವೆಲ್ಲ ಕಣ್ಣೆಂದಡೆ,
ತನಗಾದ ಸಿದ್ಧಿ ಯಾವುದು ?
ಆದಿ ಸಿದ್ಧಾಂತ ವೇದಾಂತ ಶಾಸ್ತ್ರವನೋದಿ ಕೇಳಿ ಹೇಳಿದಡೆ,
ತನಗೇನು ಸಿದ್ಧಿಯಾದುದೆಲೆ ಆತ್ಮತತ್ತ್ವವಾದಿಗಳಿರಾ ಹೇಳಿರೆ ?
ಅಷ್ಟತನುಗಳೆಲ್ಲ ಪರತಂತ್ರವೆಂಬುದ ಶ್ರುತದೃಷ್ಟಾನುಮಾನಂಗಳಿಂ
ನಿಮ್ಮ ತಿಳುಪುವದೆ ?
ಆತ್ಮಾಂತರಾಣಿ ಪಶವಃ ಪರತಂತ್ರಭಾವಾತ್ಸತಸ್ವತಂತ್ರಃ
ಪಶುಪತೇ ಪಸುಧೇಶ್ವರಸ್ವಂ |
ಆತ್ಮಾನಮಾಷನಿಷದಾ ಪ್ರವದಂತ್ಯನೀಶ ಈಶಂ ಭವಂತ
ಮುಖಯೋರುಭಯಂ ಸ್ವಭಾವಃ ||
ಇಂತೆಂದುದಾಗಿ, ಆತ್ಮಂಗೆ ಪಶುತ್ವವೆ ಸ್ವಭಾವ, ಶಿವಂಗೆ ಪತಿತ್ವವೆ ಸ್ವಭಾವ,
ಇದು ಶ್ರುತ. ಇನ್ನು ದೃಷ್ಟವೆಂತೆನಲು,
`ಜೀವಶ್ಶಿವಶಿವೋ ಜೀವಸ್ಯ ಜೀವಃ’, ಜೀವನೆ ಶಿವನು, ಶಿವನೆ ಜೀವನು.
ಬರಿದೆ ಶಿವನೆಂದು ನುಡಿವರು, ಮೇಲಣ ಪದಾರ್ಥವ ನುಡಿಯರು.
`ಪಾಶಬದ್ಧೋ ಪಶುಪ್ರೋಕ್ತಃ ಪಾಶಮುಕ್ತಃ ಪರಶ್ಶಿವಃ’
ಎಂಬ ಪದಾರ್ಥವ ನುಡಿಯರು.
ಪಾಶಬದ್ಧ ಜೀವನರಾಗಿ ಪಶುವೆನಿಸುವನು ಪಾಶಮುಕ್ತನು.
ಶಿವನಾಗಿ ಆ ಪಶುವಿಂಗೆ ಪರನಾದ ಶಿವನು ಪತಿಯೆನಿಸುವನು.
`ಬ್ರಹ್ಮದ ಸರ್ವದೇವಃ ವೇಷವಃ’ಯೆಂಬ ಶ್ರುತ್ಯಾರ್ಥವನು ಪ್ರಮಾಣಿಸಿ,
ಪಶುವೆ ಪತಿಯೆಂದು ನುಡಿವರು ಅನಭಿಜ್ಞರು. || ಶ್ರುತಿ ||
`ರುದ್ರಃ ಪಶುನಾಮಧಿಪತಿರಿತಃ’ ಪಶುಗಳಿಗೆ
ಶಿವನೆ ಒಡೆತನವುಳ್ಳ ತನ್ನಾಧೀನವುಳ್ಳ ಮಾಯಾಪಾಶದಿಂ ಕಟ್ಟಲು ಬಿಡಲು,
ಶಿವನೆ ಪತಿಯೆಂಬ ತಾತ್ಪಯರ್ಾರ್ಥವ ನುಡಿಯರು.
ಇದು ದೃಷ್ಟಾಂತ, ಇನ್ನು ಅನುಮಾನವೆಂತೆನಲು ಕೇಳಿರೆ.
ಮಾನುಷಂಗೆ ಪ್ರಸನ್ನಭಕ್ತಿ ಪ್ರಸಾದವ ಕೃಪೆ ಮಾಡಲು,
ಮಾನುಷ್ಯಂಗೆ ಕಾಮಿತ ನಿಃಕಾಮಿತ ಭಕ್ತಿಯಿಂದ
ಭೋಗಮೋಕ್ಷವನೀವನಾ ಶಿವನು.
ನರನೊಳಗಾಗಿ ನರಪತಿಯ ಸೇವೆಯ ಮಾಡುವಲ್ಲಿ,
ನಿರುಪಾಧಿಕಸೇವೆಯಿಂದ ಅತಿಶಯ ಪದವನೀವನು.
ಉಪಾಧಿಕಸೇವೆಯಿಂದ ಸಾಧಾರಣಪದವನೀವನು. ಇದೀಗ ಅನುಮಾನ ಕಂಡಿರೆ.
ಇಂತೀ ಅಷ್ಟತನುಗಳೊಳಗಾದ ಸಮಸ್ತರು ಪಶುಗಳು.
ಇವಕ್ಕೆ ಪತಿ ಶಿವನೆಂಬುದಕ್ಕೆ ಕೇಳಿರೆ.
ಪೃಥಿವ್ಯಾಭವ ಅಪಾಂ ಶರ್ವ ಆಜ್ಞೇ ರುದ್ರಃ ವಾಯೋಭರ್ಿಮಃ |
ಆಕಾಶ್ಶಾತ್ಯ ಮಹಾದೇವ ಸೂರ್ಯಸ್ಯೋಗ್ರಃ ಚಂದ್ರಸ್ಯ ಸೋಮಃ |
ಆತ್ಮನಃ ಪಶುಪತಿರಿತಃ |
ಎಂದೆನಲು, ಅಷ್ಟತನುಗಳು ಪಶುಗಳು, ಪತಿ ಶಿವನು ಕೇಳಿರೆ.
ಇಂತೀ ಅಷ್ಟತನುಗಳು ಶಿವನಾಜ್ಞೆಯ ಮೀರಲರಿಯವೆಂಬುದಕ್ಕೆ
ದೃಷ್ಟಾವಾರುಣಿಚೋಪನಿಷತ್ಸುಭೀಸ್ಮಾದ್ವಾತಃ ಪವತೇಶ್ಚಾಗ್ನಿಶ್ಚಭಿಷೋದೇತಿ
ಸೂರ್ಯಃ ಭೀಷಾಂದ್ರರ ಮೃತ್ಯುಧರ್ಾವತಿ ಪಂಚಮಃ |
ಇಂತಾಗಿ, ಆಕಾಶಃ ಪರಪರಮೇಶಸ್ಯ ಶಾಸನಾದೇವ ಸರ್ವದಾ
ಪ್ರಾಣಾಪಾನಾದಿಭಿಶ್ಚಯ
ಭೇದ್ಯದಂತಯಿರ್ಲಹಿರ್ಜಗತ್ ಭಿಬರ್ತಿ ಸರ್ವರೀ ಸರ್ವರೀ
ಸರ್ವಸ್ಯ ಶಾಸನೇವ ಪ್ರಭಾಜನಾ ||
ಎಂದುದಾಗಿ,
ಹವ್ಯಂ ವಹತಿ ದೇವಾನಾಂ ತವ್ಯಂ ತವ್ಯಾಶ ತಾಮಪಿ |
ಪಾಕಾದ್ಯಂ ಚ ಕರೋತ್ಯಗ್ನಿಃ ಪರಮೇಶ್ವರ ಶಾಸನಾತ್ ||
ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾಪಸ್ತದಾಜ್ಞಯಾ |
ವಿಶ್ವಂ ವಿಶ್ವಂಭರಾನ್ನಿತಂ ದತ್ತೇ ವಿಶ್ವೇಶ್ವರಾಜ್ಞಯಾ |
ತ್ರಿಭಿಕಿ ತ್ರೈಜಗಭಿಬ್ರತೇಜೋಬಿವರ್ಿಷಮಾದದೇ |
ವಿವಿಸ್ಸರ್ವಸ್ಯ ಸಭಾನು ದೇವದೇವಸ್ಯ ಶಾಸನಾತ್ |
ಪುಷ್ಯತ್ಯೇಷದಿಜತಾನಿ ಭೂತಾ ನಿಹ್ಲಾದಯಂತ್ಯಪಿ |
ದೇವೈಶ್ಯಪಿಯತೇ ಚಂದ್ರಶ್ಚಂದ್ರ ಭೂಷಣಂ ಶಾಸನಾತ್ |
ತೇಸ್ಯಾಜ್ಞಾಂ ವಿನಾ ತೃಣಾಗ್ರಮಪಿ ನಚಲತಿ ||
ಇಂತೆಂದುದಾಗಿ, ಇದು ಕಾರಣ,
ಆತ್ಮಸ್ವರ ಬಸವಪ್ರಿಯ ಕೂಡಲಚೆನ್ನಸಂಗಯ್ಯನೆಂದರಿಯರೆಲ್ಲರು.
ಪಶುಗಳು ಪಾಶಬದ್ಧರೆಂದು ಎತ್ತಿ ತರ್ಜನಿಯವ
ಉತ್ತರ ಕೊಡುವರುಳ್ಳರೆ ನುಡಿ ಭೋ./17
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ,
ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ,
ಬೆಳಗು ಕತ್ತಲೆಯಿಲ್ಲದ ಮುನ್ನ,
ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ,
ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ,
ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ,
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು
ತಲೆದೋರದ ಮುನ್ನ,
ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ,
ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು,
ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ:
ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ.
ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು.
ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ.
ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ.
ಬಸವ ಎಂಬ ಮೂರಕ್ಷರವೆ ಮೂಲಪ್ರಣವ.
ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು,
ಸಯೆಂಬುದೆ ಚಿದ್ಬಿಂದುವಾಯಿತ್ತು,
ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು.
ವಾ ಯೆಂಬುದೆ ಚಿತ್ಕಳೆಯಾಯಿತ್ತು.
ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು.
ವಾಯೆಂಬುದೆ ಮಕರವಾಯಿತ್ತು.
ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು,
ವಾಯೆಂಬುದೆ ಕಳೆಯಾಯಿತ್ತು.
ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು,
ವಾ ಎಂಬುದೆ ಜಂಗಮವಾಯಿತ್ತು.
ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು,
ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು.
ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು
ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ.
ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು,
ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು.
ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು.
ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು.
ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು.
ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು.
ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು.
ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ,
ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ,
ಅಡಿಮುಡಿಗೆ ತಾನೆ ಆದಿಯಾಗಿ,
ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ
ಅಳಿವುತಿಪ್ಪವು ಕಾಣಿರೆ.
ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ
ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ.
ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ.
ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ.
ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ.
ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ.
ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ,
ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ.
ಇಂತೀ ಒಳ ಹೊರಗೆ ಕೈಕೊಂಬರೆ,
ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ.
ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ.
ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ
ಕಾಣುತಿದರ್ು ಕೇಳುತಿದರ್ು ಹೇಳುತಿದರ್ು ಅರಿದಿದರ್ು,
ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ,
ಹಲವು ಜಾತಿ ಹಲವುದರುಶನವೆನಿಸಿಕೊಂಡುಸ
ಹೊಲಬುದಪ್ಪಿದಿರಿ, ಹುಲುಮನುಜರಿರಾ.
ಇನ್ನಾದರೂ ಅರಿದು ನೆನದು ಬದುಕಿ,
ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ./18
ಆದಿ ಅನಾದಿಯೆಂಬವು ಸಂಗಷ್ಟವಾಗಿದರ್ು, ವಿಭೇದವಾಗುವಲ್ಲಿ
ಕುಂಡಲಿಯ ಶಕ್ತಿಯಲ್ಲಿ ಪ್ರಾಣವಾಯು ಪ್ರಣವಸ್ವರವನೊಡಗೂಡಿ
ಬ್ರಹ್ಮಸ್ಥಾನದಲ್ಲಿ ಸ್ಥಾಪ್ಯ ಶಿವನಾಗಿ,
ಭ್ರೂಮಧ್ಯಕಂಠಸ್ಥಾನದಲ್ಲಿ ನಿಃಕಲಸ್ವರೂಪನಾಗಿ,
ಹೃದಯನಾಭಿಯಲ್ಲಿ ಸಕಲನಿಃಕಲನಾಗಿ,
ಸ್ವಾಧಿಷ್ಠಾನ ಆಧಾರದಲ್ಲಿ ಕೇವಲಸಖನಾಗಿ,
ಆ ಸಕಲಕ್ಕೆ ಎರಡು ಪಾದವನಿತ್ತು,
ಒಂದು ಪಾದಕ್ಕೆ ಕ್ರಿಯಾಶಕ್ತಿ, ಒಂದು ಪಾದಕ್ಕೆ ಜ್ಞಾನಶಕ್ತಿಯ ಮಾಡಿ ನಿಲ್ಲಿಸಿ,
ಮೇಲಣ ಸಕಲ ನಿಃಕಲತತ್ತ್ವಕೈದಿ, ಅಲ್ಲಿಗೆ ಎರಡು ಹಸ್ತವನಿತ್ತು,
ಒಂದು ಹಸ್ತಕ್ಕೆ ಆದಿಶಕ್ತಿ, ಒಂದು ಹಸ್ತಕ್ಕೆ ಇಚ್ಛಾಶಕ್ತಿಯನಾದಿ ಮಾಡಿ ನಿಲಿಸಿ,
ಮೇಲಣ ನಿಃಕಲತತ್ತ್ವವನೈದಿ, ಅಲ್ಲಿಗೆ ನಾಲ್ಕು ಪಾದವನಿತ್ತು,
ಅವು ಆವವು ಎಂದಡೆ, ಜಿಹ್ವೆ ಘ್ರಾಣ ನೇತ್ರ ಶ್ರೋತ್ರವೆಂಬ
ನಾಲ್ಕು ಪಾದ ವನಾದಿಮಾಡಿ ನಿಲ್ಲಿಸಿ,
ನಾಲ್ಕು ಪಾದವಂ ನಿಲ್ಲಿಸಿದುದರಿಂದ ನಂದಿಯೆಂಬ ನಾಮವಾಯಿತ್ತು.
ಆ ನಂದೀಶ್ವರಂಗೆ ಚಿತ್ಶಕ್ತಿಯೆ ಅಂಗ, ಪರಶಕ್ತಿಯೆ ಮುಖ.
ಇಂತಪ್ಪ ನಂದೀಶ್ವರ ನಲಿದಾಡಿ ಅನಾದಿ ಪರಶಿವ ಅಖಿಳ ಬ್ರಹ್ಮಾಂಡವ
ಹೊತ್ತಿಪ್ಪನಲಾಯೆಂದರಿದು,
ಆದಿವಾಹನವಾದನು, ಅದೀಗ ಆದಿವೃಷಭನೆಂಬ ನಾಮವಾಯಿತ್ತು.
ಆದಿವೃಷಭನ ಆದಿಯಲ್ಲಿ ಪರಶಿವನಿಪ್ಪನು,
ಆ ಪರಶಿವನಾದಿಯಲ್ಲಿ ನಿಃಕಲವಿಪ್ಪುದು,
ಆ ನಿಃಕಲದಾದಿಯಲ್ಲಿ ಸಕಲ ನಿಃಕಲವಿಪ್ಪುದು.
ಆ ಸಕಲ ನಿಃಕಲದಾದಿಯಲ್ಲಿ ಕೇವಲ ಸಕಲವಿಪ್ಪುದು.
ಆ ಸಕಲವೆಂದರೆ ಅನಂತತತ್ತ್ವ.
ಬ್ರಹ್ಮಾಂಡ ಕೋಟ್ಯಾನುಕೋಟಿ ಲೋಕಾಲೋಕಂಗಳು
ದೇವದಾನವ ಮಾನವರು
ಸಚರಾಚರ ಎಂಬತ್ತನಾಲ್ಕು ಲಕ್ಷ ಜೀವಜಂತುಗಳುದ್ಭವಿಸಿದವು.
ಆ ಪಿಂಡ ಬ್ರಹ್ಮಾಂಡದ ಹೊರೆಯಲ್ಲಿ ಸಕಲಪದಾರ್ಥಗಳುದ್ಭವಿಸಿದವು.
ಸಕಲಪದಾರ್ಥಂಗಳ ಪುಣ್ಯಪಾಪದ ಸಾರವ ಕೈಕೊಂಬುದಕ್ಕೆ
ದೇವನಾವನುಂಟೆಂದು ಆಹ್ವಾನಿಸಿ ನೋಡಲು,
ಆ ನಿಃಕಲ ಮಹಾಲಿಂಗವೆ ಕ್ರಿಯಾಶಕ್ತಿಯ ಮುಖದಲ್ಲಿ ಇಷ್ಟಲಿಂಗವಾಗಿ ಬಂದು,
ಜ್ಞಾನಶಕ್ತಿಮುಖದಲ್ಲಿ ಸಕಲಪದಾರ್ಥಂಗಳ ಕೈಕೊಂಬಲ್ಲಿ,
ಪುಣ್ಯಪಾಪಂಗಳ ಸಾರವಳಿದು, ಲಿಂಗ ಸಾರವಾದ ರೂಪ ಇಷ್ಟಲಿಂಗಕ್ಕೆ ಕೊಟ್ಟು,
ಆ ರುಚಿಪ್ರಸಾದವ ಜ್ಞಾನಶಕ್ತಿ ಆದಿಶಕ್ತಿ ಕೈಯಲ್ಲಿಪ್ಪ ಪ್ರಾಣಲಿಂಗಕ್ಕೆ
ಇಚ್ಛಾಶಕ್ತಿಯ ಮುಖದಲ್ಲಿ ಕೊಡಲು,
ಆ ರುಚಿ ಪ್ರಸಾದವ ಪ್ರಾಣಲಿಂಗವಾರೋಗಿಸಿ, ಪರಮ ಪರಿಣಾಮವನೈದಲು,
ಆ ಪರಿಣಾಮ ಪ್ರಸಾದವ ಜ್ಞಾನಶಕ್ತಿಯು ನಂದೀಶ್ವರಂಗೆ ಕೊಡಲು,
ಆ ಪರಮ ತೃಪ್ತಿಯ ಶೇಷ ನಂದೀಶ್ವರ ಆರೋಗಿಸಿ ಪರವಶವನೈದಲು,
ಆ ಪರವಶದ ಶೇಷವ ಜ್ಞಾನಶಕ್ತಿ ಆರೋಗಿಸಿ,
ಅಡಿಮುಡಿಗೆ ತಾನೆ ಆದಿಯಾಗಲು,
ಅದೀಗ ಅಡಿಮುಡಿಯ ಶೇಷ ಹೊತ್ತಿಪ್ಪನೆಂದು
ವೇದಾಗಮಶಾಸ್ತ್ರಪುರಾಣಪುರುಷರು ನುಡಿಯುತಿಪ್ಪರು.
ಇಂತಪ್ಪ ಬಸವನ ಆದಿಮೂಲವ ಬಲ್ಲ ಶರಣನಾಯಿತ್ತು ತೊತ್ತು
ಮುಕ್ಕುಳಿಸಿ ಉಗುಳುವ ಪಡುಗ,
ಮೆಟ್ಟುವ ಚರ್ಮ ಹಾವುಗೆಯಾಗಿ ಬದುಕಿದೆನು ಕಾಣಾ,
ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವಾ,
ನಿಮ್ಮ ಧರ್ಮ ನಿಮ್ಮ ಧರ್ಮ./19
ಆಧಾರಚಕ್ರದಲ್ಲಿ ನಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಬ್ರಹ್ಮನು ಉತ್ತರಖಂಡಣೆಯೆಂಬ ವೇದವನುಚ್ಚರಿಸುತ್ತಿಹನು.
ಸ್ವಾಧಿಷ್ಠಾನಚಕ್ರದಲ್ಲಿ ಮಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ವಿಷ್ಣು ಪ್ರೌಢಲಕ್ಷಿತವೆಂಬ ವೇದವನುಚ್ಚರಿಸುತ್ತಿಹನು.
ಮಣಿಪೂರಕಚಕ್ರದಲ್ಲಿ ಶಿಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ರುದ್ರನು ಋಗ್ವೇದವನುಚ್ಚರಿಸುತ್ತಿಹನು.
ಅನಾಹತಚಕ್ರದಲ್ಲಿ ವಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಈಶ್ವರನು ಯಜುರ್ವೆದವನುಚ್ಚರಿಸುತ್ತಿಹನು.
ವಿಶುದ್ಧಿಚಕ್ರದಲ್ಲಿ ಯಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಸದಾಶಿವ ಸಾಮವೇದವನುಚ್ಚರಿಸುತ್ತಿಹನು.
ಆಜ್ಞಾಚಕ್ರದಲ್ಲಿ ಒಂಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಉಪಮಾತೀತನು ಅಥರ್ವಣವೇದವನುಚ್ಚರಿಸುತ್ತಿಹನು.
ಬ್ರಹ್ಮರಂಧ್ರದಲ್ಲಿ ಅಕಾರ ಉಕಾರ ಮಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಪ್ರಕೃತಿ ವಿಕೃತಿಗಳು ಗಾಯತ್ರಿಯನುಚ್ಚರಿಸುತ್ತಿಹವು.
ಇಂತಿವೆಲ್ಲವನರಿದು ಮರದು,
ನಿಜಲಿಂಗ ನಿಜಮಂತ್ರಂಗಳಲ್ಲಿ ಪರವಶವಾಗಿದರ್ೆನು ಕಾಣಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./20
ಉತ್ತಮಾಂಗವೆನಿಸುವ ಶಿರಸ್ಸಿಗೆ ನಿತ್ಯವಿದೆಂದು ಹೇಳಿತ್ತು ವೇದ.
ನೆಟ್ಟನೆ ಶಿವನಡಿಗೆರಗುವುದು, ಮತ್ತನ್ಯದೈವಕ್ಕೆರಗಲಾಗದೆಂದುದು ವೇದ.
ಒಂ ಯಸ್ಮೈನಮಃ ಸಚ್ಛಿರೋಧರ್ಮ ಮೂಧ್ನರ್ಿ ನಾನಾಬ್ರಹ್ಮೋತ್ತರಾ |
ಹನು ಯಜ್ಞೋದರಾ ವಿಷ್ಣು ಹೃದಯಂ ಸಂವತ್ಸರ ಪ್ರಜನನಮ್ ||
ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲದೆ
ಮತ್ತನ್ಯದೈವಕ್ಕೆರಗಿದಡೆ, ನಾಯಕನರಕ ತಪ್ಪದು./21
ಉದಯಕಾಲ ಮಧ್ಯಾಹ್ನಕಾಲ ಅಸ್ತಮಯಕಾಲದಲ್ಲಿ,
ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವಾತನೆ ಸದ್ಭಕ್ತನು.
ಇಂತೀ ತ್ರಿಕಾಲದಲ್ಲಿ ಲಿಂಗಾರ್ಚನೆಯ ಮಾಡುವಲ್ಲಿ,
ಹಿಂದಣ ಕ್ರೀಯಿಂದ ಮಾಡಬೇಕು.
ಅಂತಲ್ಲದೆ ಸುಮ್ಮನೆ ಲಿಂಗಾರ್ಚನೆಯ ಮಾಡುವಾತ,
ಭಕ್ತನಲ್ಲ, ಮಾಹೇಶ್ವರನಲ್ಲ, ಪ್ರಸಾದಿಯಲ್ಲ,
ಪ್ರಾಣಲಿಂಗಿಯಲ್ಲ, ಶರಣನಲ್ಲ ಐಕ್ಯನಲ್ಲ.
ಅವನು ಶ್ರೀಗುರುವಿನಾಜ್ಞೆಯ ಮೀರಿದವನು,
ಪಂಚಮಹಾಪಾತಕನು, ಲಿಂಗಚೋರಕನು.
ಇದನರಿದು ತ್ರಿಸಂಧ್ಯಾಕಾಲದಲ್ಲಿ
ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ
ಹಿಂದಣ ಕ್ರೀವಿಡಿದು ಮಾಡುವ ಸದ್ಭಕ್ತಂಗೆ
ನಮೋ ನಮೋ ಎನುತಿದರ್ೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./22
ಉಪ್ಪರಗುಡಿ ತೋರಣ ಕಟ್ಟಿತ್ತು ಕಲ್ಯಾಣದಲ್ಲಿ.
ಅಷ್ಟದ್ವಾರದಂಗಡಿ ರಾಜವೀಧಿಯೊಳೆಲ್ಲಾ ವ್ಯಾಸನ ಬಾಹುಗಳುಪ್ಪರಿಸಿದವು.
ಎಂಟುಬಾಗಿಲಲ್ಲಿ ನಡೆಮಡಿಗಳ ಹಾಸಿ,
ಸಂಕಲ್ಪ ಸಂತೋಷವ ಮಾಡಿದನು ವೃಷಭೇಶ್ವರನು,
ಬಸವಪ್ರಿಯ ಕೂಡಲಚೆನ್ನಸಂಗಯ್ಯ ಬಂದಾನೆಂದು,/23
ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು,
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು,
ಎನ್ನರಿವು ನಿಮ್ಮ ಘನದೊಳಗೆ ಸವೆದು, ನಿಶ್ಚಲ ನಿಜೈಕ್ಯವಾಗಿ,
ಬಸವಪ್ರಿಯ ಕೂಡಲಚೆನ್ನಸಂಗಯ್ಯಾ,
ನೀ ನಾನೆಂಬುದೇನಾಯಿತ್ತೆಂದರಿಯೆನು./24
ಎನ್ನ ಸದ್ಗುರು ತನ್ನ ಕರಕ್ಕೆ ಮಹತ್ತಪ್ಪ ಲಿಂಗದೊಳಗೆ
ಆ ಮಹಾಘನ ಗುರುವಪ್ಪ ಪರಶಿವ ಮೂರ್ತಿಗೊಂಡನು.
ಆ ಮೂರ್ತಿಯ ನಿಶ್ಚೈಸಲೆಂದು ಪ್ರಸನ್ನಿಸಿದವು.
ಶ್ರೀವಿಭೂತಿ ರುದ್ರಾಕ್ಷಿಗಳೆಂಬ ಜ್ಯೋತಿ ಲಿಪಿಯ ಮುದ್ರೆಗಳು.
ಇಂತಪ್ಪ ದಿವ್ಯಸಾಧನವಿಡಿದು, ಆತನ ಕರಸ್ಥಲದೊಳೊಪ್ಪುತಿಪ್ಪ
ದಿವ್ಯವಸ್ತುವ ಕಾಣಲೊಲ್ಲದೆ,
ಅಜ್ಞಾನವಶದಿಂದ ಕೈವಶವಾದ ವಸ್ತುವ ಬಿಟ್ಟು,
ಅತ್ತ ಬೇರೆ ವಸ್ತುವುಂಟೆಂದು ಬಯಲನಾಹ್ವಾನಿಸಿ,
ಅಲ್ಲಿ ವಸ್ತುವಿನ ನಿಶ್ಚಯವ ಕಾಣದೆ,
ಭವ ಭವದ ಲೆಂಕರಾಗಿ ಬರಿದೆ ಬಳಲುತ್ತಿಪ್ಪ
ಈ ತಾಮಸಜೀವಿಗಳಿಗೆ ಲಿಂಗದ ಹಂಗಿನ್ನೇತಕಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./25
ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ : ನಿಮ್ಮ ನಿಟಿಲತಟದಲ್ಲಿ
ಸಂಚಿತ ಪ್ರಾರಬ್ಧ ಆಗಾಮಿಯೆಂಬ ಲಿಖಿತವ ಬರೆದವರಾರು ? ಕೇಳಿರೆ.
ನೀವು ನೀವೇ ಬ್ರಹ್ಮವು, ಬೇರೆ ಈಶ್ವರನಿಲ್ಲೆಂದು ನುಡಿವಿರಿ.
ತಪಸ್ಸು ತನ್ನಂತೆ ಊಟ ಮನದಿಚ್ಛೆಯೆಂಬ ಗಾದೆಯ ಮಾತು ನಿಮಗಾಯಿತ್ತು.
ಅನ್ನವನುಂಡು, ವ್ಯಸನಕ್ಕೆ ಹರಿದು, ವಿಷಯಂಗಳೆಂಬ ಹಿಡಿಮಲಕ್ಕೆ ಸಿಕ್ಕಿ,
ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು,
ನಾಯಾಗಿ ಬಗಳಿ, ನಾಯಡೋಣಿಯಲುಂಡು ನಾಯಿಸಾವು ಸಾವ ಅದ್ವೈತಿಗಳಿರಾ,
ನಿಮಗೇಕೋ ಬೊಮ್ಮದ ಮಾತು ?
ಬ್ರಹ್ಮ ವಿಷ್ಣ್ವಾದಿಗಳು ಬ್ರಹ್ಮೋಹಮೆಂದು
ಕೆಮ್ಮನೆ ಕೆಟ್ಟು, ಹದ್ದು ಹೆಬ್ಬಂದಿಗಳಾದುದನರಿಯಿರೆ.
ಹಮ್ಮಿನಿಂದ ಸನತ್ಕುಮಾರ ಒಂಟಿಯಾದುದನರಿಯಿರೆ.
ಕರ್ತನು ಭರ್ತನು ಹರ್ತನು ಶಿವನಲ್ಲದೆ
ಬೇರೆ ಕಾವಲ್ಲಿ ಕೊಲುವಲ್ಲಿ ಮತ್ತೊಬ್ಬರುಳ್ಳರೆ ಹೇಳಿರೆ.
ಅದೆಂತೆಂದಡೆ : ತ್ವಂ ವಿಶ್ವಕತರ್ಾ ತವ ನಾಸ್ತಿ ಕತರ್ಾ ತ್ವಂ ವಿಶ್ವಭಕ್ತಾ ತನ್ನ ತವ ನಾಸ್ತಿ ಭರಾ |
ತ್ವಂ ವಿಶ್ವಹತರ್ಾ ತವ ನಾಸ್ತಿ ಹತರ್ಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ||
ಎಂದುದಾಗಿ, ಶಿವನೇ ನಿಮ್ಮನಿಲ್ಲೆಂದು,
ಬೊಮ್ಮ ತಾವೆಂಬ ಹಮ್ಮಿನ ಅದ್ವೈತಿಗಳ ಹಿಡಿದು,
ಕಾಲನ ಕೈಯಲ್ಲಿ ಕೆಡಹಿ, ಬಾಯಲ್ಲಿ ಹುಡಿಯ ಹೊಯಿಸಿ,
ನರಕಾಗ್ನಿಯಲ್ಲಿ ಅಕ್ಷಯಕಾಲವಿರಿಸದೆ ಮಾಣ್ಬನೆ,
ನಮ್ಮ ಬಸವಪ್ರಿಯ ಕೂಡಲಚೆನ್ನಸಂಗಮದೇವ./26
ಎಲೆ ವೈದಿಕರಿರಾ, ನಿಮಗೆ ಸತ್ವಬಲ ವೇದವಲ್ಲದೆ ಮತ್ತೇನೂ ಇಲ್ಲ.
ಆ ವೇದವೆ ಸ್ವಯಂಭುಯೆಂದು ನುಡಿವಿರಿ,
ನಾ ನಿಮಗೆ ತಿಳಿಯ ಪೇಳುವೆ.
ಆದಿಸಿದ್ಧಾಂತವಿಡಿದು ವೇದ ಸ್ವಯಂಭುವಲ್ಲ.
ಆದಿಮೂಲ ಶಿವನಿಂದಾದವೀ ವೇದಂಗಳು ಕೇಳಿರೆ.
ಶಿವನಿಂದಾದ ಮೂವತ್ತಾರುತತ್ತ್ವದೊಳೈದನೆಯದು ಆಕಾಶತತ್ತ್ವವು.
ಆ ಆಕಾಶತತ್ತ್ವದಿಂದಾದ ಶಬ ವಿಷಯವು ನಿತ್ಯವೆ ಹೇಳಿರೆ.
ಪಂಚಭೂತಂಗಳೊಳಗೊಂದು ಭೂತವಿಷಯವಾ ಶಬ್ಧ.
ಆ ಶಬ್ದ ಸಂಬಂಧವಾದ ವೇದಕ್ಕೆ ನಿತ್ಯವೆಲ್ಲಿಯದು ಹೇಳಿರೆ.
ಆ ವೇದ ತನಗೆ ತಾನಾದುದೆಂಬಿರೆ.
ಎಂಬಿರಾದಡೆ ಪ್ರಳಯಾಂತಕಾಲದಲ್ಲಿ ಅಳಿಯವೀ ವೇದಾದಿ ವಿದ್ಯೆಗಳು.
ಜಗತ್ ಸೃಷ್ಟಿಕಾಲದಲ್ಲಿ ಆದಿಕತರ್ಾರ ಸೃಷ್ಟಿ ಸ್ಥಿತಿ ಲಯ
ಪ್ರೇರಕಶಿವನಿಂದಾದವು ಕೇಳಿರೆ.
ಚರಣಬಹ ಸೂಕ್ತಿಗಳಲ್ಲಿ ಕೇಳ್ದರಿಯಿರೆ.
ಋಗ್ವೇದಕ್ಕೆ ದೇಹ ಉರುವರ್ಣ, ಅತ್ರಿಗೋತ್ರ,
ಗಾಯತ್ರಿ ಛಂದ, ಅಧಿದೇವತೆ ಬ್ರಹ್ಮ.
ಯಜುರ್ವೆದಕ್ಕೆ ಅಬ್ಜದಳಾಯತ ನೇತ್ರ,
ಕುಂಚಿತ ಚಿಬುಕು ಮುಂಗೂರ ಮೀಸೆ, ತಾಮ್ರವರ್ಣದೇಹ,
ಭಾರದ್ವಾಜಗೋತ್ರ, ತ್ರಿಷ್ಟುಪ್ ಛಂದ, ಅಧಿದೇವತೆ ವಿಷ್ಣು.
ಸಾಮವೇದಕ್ಕೆ ದೇಹ ಶ್ವೇತವರ್ಣ, ಕಾಶ್ಯಪಗೋತ್ರ,
ಜಗತಿ ಛಂದ, ಅಧಿದೇವತೆ ಈಶ್ವರನು.
ಧವಳಶೃಂಗವೆರಡು ಅಥರ್ವಣವೇದಕ್ಕೆ ದೇಹ,
ಕೃಷ್ಣವರ್ಣ, ವೈಭಾನುಗೋತ್ರ,
ಅನುಷ್ಟುಪ್ ಛಂದ, ಅಧಿದೇವತೆ ಇಂದ್ರನು.
ಇಂತು ಶ್ರುತಿಗಳಿಗೆ ಶರೀರವರ್ಣ, ಗೋತ್ರ, ಛಂದ, ಅಧಿದೇವತೆಗಳಿಂತಿರಲು,
ತಮಗೆ ತಾವಾದವೆಂದು ನೀವು ನುಡಿವ ಪರಿ ಹೇಗೆ ಹೇಳಿರೆ ವೈದಿಕರಿರಾ.
ಇವೇ ನಿತ್ಯವೆಂಬಿರಾದಡೆ ಲಯಗಮನಸ್ಥಿತಿಯುಂಟು ಕೇಳಿರೆ.
ಹೃದಯ ದೈವ ಗಾಯಿತ್ರಿ ಸರ್ವವೇದೋತ್ತಮೋತ್ತಮ
ಲಿಯಂಕೇ ಮೂದ್ನರ್ಿ ವೈವೇದಾಸಷದೊ
ಎನಲು, ಆತ್ಮದೃಷ್ಟಿ ನೇತ್ರದೃಷ್ಟಿಯ ಪ್ರಮಾಣದಿಂ
ನಮ್ಮ ಟರುರಿವಿಂದರಿದೆವೆಂಬರೆ,
ನಿಮ್ಮ ನೀವರಿಯದವರು ಈ ಜಗದಾದಿಯನೆಂತರಿದಿರೆನಲು,
ಜ್ಞಾನಸಾಧನವಹ ಶಾಸ್ತ್ರಾದಿಗಳಿಂದ ಜ್ಞಾನೇಂದ್ರಿಯ
ಪ್ರಮಾಣ ನೇತ್ರದಿಂದರಿದವೆನಲು,
ನಿಮಗೆ ಜ್ಞಾನೇಂದ್ರಿಯ ಸಾಧನ ನೇತ್ರಗಳೆಲ್ಲಿಯವು.
ಈಶ್ವರನ ನಯನಾಶ್ವವೆನಿಸುವ ರವಿಚಂದ್ರಾಗ್ನಿ ತೇಜಸ್ಸಿಂದಲ್ಲದೆ,
ಜಾತ್ಯಂಧರು ನೀವು ನಿಮಗೆಲ್ಲಿಯ ದೃಷ್ಟಿವಾಳತನ.
ಅತಿಮತಿವಂತರೆನಿಸುವ ದೇವತೆಗಳುಂ ಕಾಣಲರಿಯರು.
ಮತಿವಿಕಳರು ನೀವು ಕಾಣಲರಿದಿರೆಂತು ಜಗದಾಗುಹೋಗುಗಳ.
ನೋಡಿಯರಿದೆವೆನಲು ಜಗವನಾಡಿ ನೀವು ಮೊನ್ನಿನವರು, ಸಾಮಾನ್ಯಮನುಜರು :
ಜಗದನಾದಿಯ ನೀವೆಂತರಿದಿರೆನಲು, ಅದು ಕಾರಣ,
ಜಗ ನಿರ್ಮಾಣಕ ಜಗ ಭ್ರಮಣ ಲೀಲಾಲೋಲ ಜಗದಂತಯರ್ಾಮಿ
ಜಗತ್ರೈರಕ್ಷಕನೊಬ್ಬನೆಯರಿವ ನಿಮಗರುವಿಲ್ಲೆನಲು,
ವೇದ ಶಾಸ್ತ್ರಾಗಮಾದಿಗಳಿಂ ಪ್ರಮಾಣಿಸಿ ಅರಿದೆವೆನಲು,
ನಿಮಗೆ ಶ್ರುತಿ ಪ್ರಮಾಣ ಯೋಚನೆಯದೆಲ್ಲಿಯದು
`ಜಗತಾಂ ಪತಯೇ ನಮಃ’ ಎಂದು ಶ್ರುತಿಯಿರಲು,
ಇದು ಕಾರಣ, ವೇದಾದಿಶಾಸ್ತ್ರಂಗಳಿಂದ ನಿಮಗೇನು ಆಗದು,
ಪಾಠಕರರುಹಿರಲ್ಲದೆ.
ಶ್ರುತಿಃ `ಶಿವೋ ಮಾಯೇವ ಪಿತರೌ’
ಎನಲು, ಶಿವನೇ ವೇದಂಗಳಿಗೆ ತಂದೆ ತಾಯಾಗಿರಲು,
ಜಗತ್ತಿಂಗೊಡೆಯನಾಗಿರಲು, `ಪಿತಾತದಸ್ಯಮಾ’ ಎಂದು ಪಿತನೆ ಶಿವನು
ತಾಯಿಪುತ್ರರೆಂದೆನಲು,
ವೇದಸ್ವಯಂಭು ಜಗನಿತ್ಯವೆಂಬ ಪರಿಯೆ ಹೇಂಗೆ ಹೇಳಿರೆ.
ಪೂರ್ವದಲ್ಲಿ ವೇದಪುರುಷರು, ಶಾಂಭವವ್ರತಿಗಳು, ಪಾಶುಪತವ್ರತಸ್ಥರು,
ಶಿವಸಿದ್ಧಾಂತ ಭಕ್ತಿನಿಷ್ಠಾ ಸಾವಧಾನವ್ರತರು. ವೇದಾಧಾರಯಂತಿ ಎನಲು,
ರುದ್ರಾಕ್ಷಧಾರಣ ಚತುವರ್ಿಧವ್ರತಿಗಳಿಗೆ ಮುಖ್ಯ
ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯತ್ರಿಯಾಯುಷಂ |
ಅಗಸ್ತಸ್ಯ ತ್ರಿಯಾಯುಷಂ ಯದ್ದೇವಾನಾಂ ತ್ರಿಯಾಯುಷಂ |
ತನ್ಮೇ ಅಸ್ತು ತ್ರಿಯಾಯುಷಂ’ ಎನಲು,
ಭಸ್ಮಾವಾಲಿಪ್ತರು ತ್ರಿಪುಂಡ್ರಾಂಕಿತನಿಷ್ಠರಾಗಿರದೆ,
`ವೇದಾಶ್ಚಕಾವಯಂತಿ’ ಎನಲು, `ತದಾಸ್ಮಾಮಿ’ ಎನಲು,
ತದಾಸ್ಮಾಮಿಯನೆ ಶಿವಚರಣಸಲಿಲ ಪ್ರಸಾದ ಸುಭೋಗ
ಸಾವಧಾನಿಗಳೆಂದು ತಾವೆ ಹೇಳುತ್ತಿರಲು,
ವೇದಾಗಮಶಾಸ್ತ್ರಗಳಿಗೂ ಪಂಚಾಕ್ಷರಿಮಂತ್ರಗಳಲ್ಲಿಯೆ
ಉದಯ ಸ್ಥಿತಿಲಯವೆನ್ನುತಿರಲು,
ನೀವಾ ವೇದಂಗಳ ಸ್ವಯಂಭೂಯೆಂದೂ ನಿತ್ಯವೆಂದೂ ಜಗವನೆನಬಹುದೆ.
ಅದು ಕಾರಣ, ಈ ಜಗಂಗಳನು ತನ್ನ ಲೀಲೆಯಿಂದಲೆ ನಿರ್ಮಿಸುವ ಭವನೆನಿಸಿ,
ತನ್ನ ಲೀಲೆಯಿಂದಲೆ ರಕ್ಷಿಸುವ ಮೃಡನಾಗಿ,
ತನ್ನ ಲೀಲೆ, ಈ ಲೀಲೆಯಿಂದಲೆ ಸಂಹರಿಸುವ ಹರನಾಗಿ,
ಲೀಲಾತ್ರಯರಹಿತನಾಗಿ ಶಿವನೆನಿಸುವ, || ಶ್ರುತಿ ||
`ಆದಿ ವೇದಸ್ಯ ಶಾಸ್ತ್ರಾಣಿ ಮಂತ್ರ ಪಂಚಾಕ್ಷರೇ ಸ್ಥಿತಾ’ ಎಂದುದಾಗಿ,
ಇದು ಕಾರಣ, ಉದ್ದೈಸುವ ರಕ್ಷಿಸುವ ಸಂಹರಿಪ ಭವಮೃಡಹರನಾದ ಶಿವನಿರಲು,
ನೀವು ವೇದಸ್ವಯಂಭು ಜಗನಿತ್ಯವೆನಲಾಗದು.
||ಶ್ರುತಿ|| `ಪರವೋ ಭವಂತಿ’ ಎನಲು, ವೇದ ದೇವತಾ ಸೃಷ್ಟಿಯೆನಲು,
ಈಹಿಂಗೆ ವೇದಂಗಳು ಶಿವನಿಂದ ತಮಗೆ ಉದಯಸ್ಥಿತಿಲಯವೆನಲು,
ಈ ಜಗ ಸೃಷ್ಟಿಸ್ಥಿತಿಲಯ ಕಾರಣ ಸರ್ವಜ್ಞ ಸರ್ವೆಶ್ವರ ಸರ್ವಕರ್ತು
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ’ ಎನಲು,
ಒಬ್ಬನೆ ಶಿವನು ಎರಡೆನಿಪ ದೇವರಾರುಯಿಲ್ಲವೆಂದರಿದಿರಿ.
ವೈದಿಕರಿರಾ, ವೇದಸ್ವಯಂಭುವಲ್ಲ ಶಿವನ ಶಿಶುಗಳು. ಜಗವು ನಿತ್ಯವಲ್ಲ.
ಶಿವನ ಆಜ್ಞಾವಶವರ್ತಿಗಳು. ಅಹಂಗಾಗಲದಕ್ಕೇನು
ವೈದಿಕಾಚರಣೆಯನಾಚರಿಸುವ ವೈದಿಕ ವ್ರತಿಗಳಿಗೆ
ಸಾಧನವೆನಿಸುವ ವೇದಮಂತ್ರಂಗಳೆ ದೈವವೆನಲು,
ವೇದಂಗಳೆ ದೈವವಾದಡೆ ಪಕ್ಷೀಶ್ವರನ ಕೈಯ ಸಿಲುಕುವುದೆ.
ವೇದವೆ ದೈವವಾದಡೆ ಮುನೀಶ್ವರನಿಂದ ಅಳಿದುಹೋಗಿ
ವೇದವ್ಯಾಸನಿಂದ ಪ್ರತಿಷ್ಠಿತವಹುದೆ.
ವೇದವೆ ದೈವವಾದಡೆ ಶುನಕನಪ್ಪುದೆ, ವೇದವೆ ದೈವವಾದಡೆ ದಕ್ಷನಳಿವನೆ.
ವೇದವೆ ದೈವವಾದಡೆ ತಮ್ಮಜನ ಶಿರಹೋಹಂದು ಸುಮ್ಮನಿಹವೆ.
ವೇದವೆ ದೈವವಾದಡೆ ಕವಿತೆಗೊಳಗಾಹುದೆಯೆಂದು ಎನಲು,
`ಆಘ್ರಾಯಘ್ರಾಯಾವದಂತಿ ವೇದ ಶ್ವಾನಶ್ಶನೈಶ್ಚನೈಃ
ಯತ್ಸದಾನಿಮಹಾದಿವಾಂತಂ ವಂದೇ ಶಭರೇಶ್ವರಂ’ ಇಂತೆಂದುದಾಗಿ,
ಇದು ಕಾರಣ,
ಶಿವನೇ ಸ್ವಯಂಭು ನಿತ್ಯವೆಂದರಿದ ವಿಪ್ರರೇ ವೈದಿಕೋತ್ತಮರು,
ಬಸವಪ್ರಿಯ ಕೂಡಲಚೆನ್ನಸಂಗಯ್ಯ./27
ಎಲೆ ಸಿದ್ಧರಾಮಯ್ಯಾ, ಬಸವಣ್ಣನೆ ಶಿವನು, ಶಿವನೆ ಬಸವಣ್ಣನಾದನಯ್ಯಾ.
ಬಸವಣ್ಣ ಚನ್ನಬಸವಣ್ಣ ಪ್ರಭುದೇವರು ಮಡಿವಾಳಯ್ಯ
ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ
ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ
ಎನುತಿದರ್ೆನಯ್ಯಾ, ಬಸವಣ್ಣಪ್ರಿಯ ಕೂಡಲಚೆನ್ನಸಂಗಮದೇವಾ./28
ಎಲ್ಲರಿಗಿಂದಧಿಕವು ಪುರಾತನರೆಂದು ಶರಣು ಶರಣೆನುತಿದೆ ವೇದ,
ಶರಣೆಂದು ಸಾರುತಿದೆ ವೇದ ನೋಡಾ.
ಒಂ ಅಥೋ ಯೇ ಅಸ್ಯ ಸತ್ವಾನೋಹಂ ತೇಭ್ಯೋಕರನ್ನಮಃ |
ಪ್ರಮುಂಚ ಧನ್ವನಸ್ತ್ವಮುಭಯೇರಾತ್ನಿ ಯೋಜರ್ಾಂ
ಯಾಶ್ಚತೇ ಹಸ್ತ ಇಷವಃ ಪರಾತಾ ||
ಎಂಬ ಶ್ರುತಿ, ಬಸವಪ್ರಿಯ ಕೂಡಚನ್ನಸಂಗಾ,
ಸದ್ಭಕ್ತರಿಗೆ ಶರಣೆನುತ್ತಿದೆ ವೇದ./29
ಎಲ್ಲಾ ಪುರಾತರ ಚರಣಕೆ ಇಲ್ಲಿದರ್ೆ ಶರಣೆಂದಡೆ ಸಾಲದೆ ?
ಬಸವಾ, ಬಸವಪ್ಪ, ಬಸವಯ್ಯ ಶರಣೆಂದಡೆ ಸಾಲದೆ ?
ಎಲ್ಲರ ಹೃದಯದಲ್ಲಿ ಜ್ಯೋತಿಯಂತೆ ಬೆಳಗುತಿಪ್ಪ
ಮಹಾಮಹಿಮ ನೀನಾಗಿ, ಎನಗಿದೇ ದಿವ್ಯಮಂತ್ರ.
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ
ಬಸವಾ, ಬಸವಾ, ಬಸವಾ ಶರಣೆಂದ[ಡೆ]ಸಾಲದೆ ?/30
ಒಂದು ಎರಡಹುದೆ ? ಎರಡು ಒಂದಹುದೆ ?
ಒಂದು ಒಂದೇ, ಎರಡು ಎರಡೇ.
ಅದು ಕಾರಣ, ಶಿವನು ತನ್ನ ಲೀಲಾಕಾರಣವಾಗಿ ಮಾಯಾ ನಿರ್ಮಿತವಂ ಮಾಡಿ,
ಆ ಮಾಯಾರಚನೆಯಿಂದಾದ ಬ್ರಹ್ಮಾಂಡ ಸಂದೋಹ,
ಹರಿ ವಿರಿಂಚಿ ಸುರಪತಿ ಸುರಾಸುರರು ನರನಿಕರ,
ಖಗಮೃಗ ಜೀವರಾಶಿಗಳೆಲ್ಲವೂ ಶಿವನಿಂದಲಾಗಿ,
ಶಿವನಿಂದ ಹೊರೆಯಿಸಿಕೊಂಡು, ಶಿವನಿಂದವೆ ಹೋದವೆಂದಡೆ,
ಅವರ ಆಗು ಹೋಗು ಇರವು ಹೋಗಿನೊಳಗೆ
ಲಯ ಗಮನ ಸ್ಥಿತಿ ಶಿವಂಗುಂಟೆ, ಎಲೆ ಮರುಳಗಳಿರಾ ?
ಗಗನದಲ್ಲಿ ತೋರಿದ ಮೇಘವು ಗಗನದಲ್ಲಿ ಅಡಗಿದವೆಂದಡೆ,
ಆ ಗಗನ ತಾ ಮೇಘವೆ ?
ತನ್ನಾಧೀನಶಕ್ತಿದಂಡದಿಂ ಕುಂಬಾರ ಚಕ್ರವ ತಿರುಗಿಸಲು,
ಆ ಚಕ್ರಭ್ರಮಣ ಚೈತನ್ಯವು ಆ ಕುಂಬಾರನೆ, ಮರುಳುಗಳಿರಾ ?
ಆ ಚೈತನ್ಯ ಅಡಗುವುದೆ ? ನಿಲ್ಲು ಮಾಣು.
ಬಿಲ್ಲ ನಾರಿಗೆ ಅಂಬಂ ಸಂಧಾನಿಸಿ ಎಸೆಯಲಾ,
ಅಂಬು ಹರಿದ ಚೈತನ್ಯ ಬಿಲ್ಲು ಕಾರಣವೆ ? ಅಲ್ಲ , ನಿಲ್ಲು , ಮಾಣು.
ಇವೆಲ್ಲವು ಚೈತನ್ಯಂಗಳು. ಅಂತು ಸರ್ವವೆಲ್ಲವು ತೋರಿಯಡಗುವುದು.
ಸರ್ವೆಶ್ವರನು, ಸರ್ವಕತರ್ೃ, ಸರ್ವಚೈತನ್ಯ, ಸೂತ್ರಯಂತ್ರವಾಹಕ ಶಿವನು.
ಸರ್ವಲಯ ಗಮನ ಸ್ಥಿತಿ ತನಗುಂಟೆ ?
ನಿಲ್ಲು , ಮಾಣಿರೆ, ಎಲೆ ಜಡಜೀವಿಗಳಿರಾ.
ಗಗನದ ರವಿ ಕಿರಣದಿಂದ ಸಕಲರೂಪಿತ ದ್ರವ್ಯಪದಾರ್ಥಂಗಳಲ್ಲಿ
ಪ್ರತಿಪ್ರಭೆ ತೋರಲು, ಆ ಪ್ರತಿಪ್ರಭೆಯ ಆಗುಹೋಗಿನ ಸ್ಥಿತಿಗತಿ
ಆ ಗಗನದ ಸೂರ್ಯಂಗುಂಟೆ, ಎಲೆ ಜಡಜೀವಿಗಳಿರಾ ?
ಈ ಪರಿಯಲೆ ವಿಶ್ವವೆಲ್ಲವಕ್ಕೂ ತಾನಲ್ಲದ ತಾನಿಲ್ಲದ
ಪ್ರೇರಣ ಚೈತನ್ಯವೇ ವಿಶ್ವದ ನಯನ, ವಿಶ್ವದ ಮುಖ,
ವಿಶ್ವದ ಬಾಹು, ವಿಶ್ವದ[ಚ]ರಣ, ಸ್ವರ್ಗಮತ್ರ್ಯ
ಭುವನಾದ್ಯಂಗಳ ಮೂಲಚೈತನ್ಯಸೂತ್ರ ತಾನಲ್ಲದೆ,
ತಾನಿಲ್ಲದೆ ಆಡಿಸುವ ಸೂತ್ರಾತ್ಮಕನಲ್ಲದೆ ಅವರಾಗು ತನಗುಂಟೆ,
ಎಲೆ ಭ್ರಮಿತರಿರಾ ?
`ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾ ಪಾತ್ |
ಸಂ ಬಾಹುಭ್ಯಾಂಧಮತಿ ಸಂಪತತ್ರೈದ್ಯರ್ಾವಾ ಭೂಮೀ ಜನಯನ್ ದೇವ ಏಕಃ ಎನಲು,
`ಈಶಾನಃ ಶಿವ ಏಕೋದೇವಃ ಶಿವಂ ಕರಃ
ತತ್ಸರ್ವಮನ್ಯತ್ ಪರಿತ್ಯಜೇತ್’ ಎನಲು,
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥು’ ಎನಲು,
ಶಿವನೊಬ್ಬನೇ, ಇಬ್ಬರಿಲ್ಲ .
`ನ ಯಥಾಸ್ತಿ ಕೂರ್ಮರೋಮಾಣಿ, ಶೃಂಗಂ ನ ನರಮಸ್ತಕೇ
ನ ಯಥಾಸ್ತಿ ವಿಯತ್ಪುಷ್ಪಂ ನ ತಥಾಸ್ತಿ ಪರಾತ್ಪರಃ |’
ನಾಲ್ಕು ವೇದಂಗಳು ಬಿನ್ನವಿಸಿದವು ಕೇಳಿರೇ ಎಲೆ ವಿಪ್ರರಿರಾ.
ಇದನರಿದು, ಬಸವಪ್ರಿಯ ಕೂಡಲಚೆನ್ನಸಂಗಯ್ಯನನೆ
ಧ್ಯಾನಿಸಿ, ನಿರೀಕ್ಷಿಸಿ, ಸ್ತುತಿಸಿ, ಯಜಿಸಿ ಕೃತಾರ್ಥರಾಗಿರೆ
ಎಲೆ ಮರುಳು ವಿಪ್ರರಿರಾ./31
ಕರ್ಮದಿಂದ ಬೊಮ್ಮದಿಂದ ಪುತ್ರರಿಂದ ಗೋತ್ರದಿಂದ
ಕಳತ್ರಯರಿಂದ ಗತಿಯಾಗದೆಂದು ಸಾರಿತ್ತು ಯಜುರ್ವೆದ.
ಅಪಾಧಿಯನಿಟ್ಟು ನಿರುಪಾಧಿಕನಾಗಿ,
ಅಂಗವನಾರಾಧಿಸಿ ನಿತ್ಯರಾದರೆಂದು ಸಾರಿತ್ತು ಯಜುರ್ವೆದ.
`ಒಂ ನ ಕರ್ಮಣಾ ನ ಪ್ರಜಾಯಾಧನೇನ ತ್ಯಾಗೇನೈಕೇನ
ಅಮೃತತ್ವಮಾನಶುಃ’ ಎಂದುದು ಶ್ರುತಿವಾಕ್ಯ.
ಈ ಪರಿಯಲಿ ವೇದ ಹೊಗಳಲ್ಕೆ,
ಎಮ್ಮ ಪುರಾತನರು ನಡೆದರು, ನಡೆದು ಮೆರೆಯಿತ್ತು , ಕಂಡು ನಂಬರು,
ಬಸವಪ್ರಿಯ ಕೂಡಲಚೆನ್ನಸಂಗಯ್ಯ./32
ಕಾಮಸಂಹಾರಿ, ಹರಿಯಜರಹಂಕಾರ ದರ್ಪಚ್ಚೈದನ ಲಿಂಗವೆಂದೆಂಬರು,
ಅದ ನಾವರಿಯೆವಯ್ಯಾ !
ನಾವು ಬಲ್ಲುದಿಷ್ಟಲ್ಲದೆ ಕಾಮ ಕ್ರೋಧ ಲೋಭ ಮೋಹ ಮಾತ್ಸರ್ಯವಿರಹಿತರು,
ನಮ್ಮ ಜಂಗಮದೇವರು ಕಾಣಿರಯ್ಯಾ !
ಇಹನಾಸ್ತಿ ಪರನಾಸ್ತಿ ಫಲಪಥಕ್ಕೆ ಹೊರಗಾಗಿ ಮಾಡುವ
ಭುಕ್ತಿಯ ಕೊಟ್ಟು, ಮುಕ್ತಿಯನೀವ.
ಚರಿಸಿದಡೆ ವಸಂತ, ನಿಂದಡೆ ನೆಳಲಿಲ್ಲ,
ನಡೆದಡೆ ಹೆಜ್ಜೆಯಿಲ್ಲ. ದಗ್ಧಪಟನ್ಯಾಯ,
ಯಥಾಸ್ವೇಚ್ಛ ತನ್ನ ನಿಲುವು ಅದಾರಿಗೆ ವಿಸ್ಮಯ, ಅಗೋಚರ.
ಚರಾಚರಾ ಸ್ಥಾವರಾತ್ಮಕನು ನಮ್ಮ ಜಂಗಮದೇವರು ಕಾಣಿರಯ್ಯಾ.
ಆ ಜಂಗಮವು ಭಕ್ತರಿಗೆ ಚರಣವ ಕರುಣಿಪನು.
ಆ ಭಕ್ತರು ಪಾದಪ್ರಕ್ಷಾಲನಂ ಗೆಯ್ದು,
ಗಂಧಾಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ
ವಿಭೂತಿ ರುದ್ರಾಕ್ಷಿಯಂ ಧರಿಸಿ,
ಮೈವಾಸವಂ ಭೂಷಣ ಎರೆದಲೆಯನ ಕರದಲ್ಲಿ ಹಿಡಿದು,
ಆ ಜಂಗಮದೇವರು ತೀರ್ಥವನೀವುದಯ್ಯಾ.
ಆಮೇಲೆ ತಂಡ ಮೊತ್ತಕ್ಕೆ ಮಂಡೆ ಬಾಗಿ,
ತಮ್ಮಿಷ್ಟಲಿಂಗಕ್ಕೆ ಮುಷ್ಟಿ ಅರ್ಪಿಸಿ, ತಾವು ಸಲಿಸುವುದಯ್ಯಾ.
ಆಮೇಲೆ ಗಣಸಮೂಹವು,
ತಾವು ರೋಹ ಅವರೋಹದಿಂದ ಅರ್ಪಿತವ ಮಾಡುವದು,
ಆಗಮಾಚಾರವಯ್ಯಾ.
ಲಿಂಗ ನಿರ್ಮಾಲ್ಯವನೆ ಲಿಂಗಕ್ಕೆ ಮತ್ತೆ ಮತ್ತೆ ಧರಿಸುವೆ,ಭಾವನಿರ್ಭಾವವನರಿದು,
ಇನ್ನೊಂದು ನಿರಂತರದ ಅವಧಾನವುಂಟು.
ತಾ ಪ್ರಸಾದವ ಸವಿವಾಗ,
ಜಂಗಮಲಿಂಗಕ್ಕೆ ಪದಾರ್ಥವ ಸಮೀಪಸ್ಥವ ಮಾಡಲು,
ಅದೇ ಹಸ್ತದಲ್ಲಿ ಸಜ್ಜಾಗೃಹಕ್ಕೆ ಸಮರ್ಪಿಸಿಕೊಂಬುವದೊಂದವಧಾನ.
ಆಚೆಗೆ ತೀರ್ಥ ಸಂಬಂಧಿಸಿ, ಎಯ್ದದಿರಲ್ಲದರಲ್ಲಿ
ಪಾದೋದಕವ ನೀಡುವದ ದಯಗೊಟ್ಟಡೆ ಸಂದಿಲ್ಲ.
ಅವು ಮೂರು, ಇವು ಮೂರು, ಆಚೆ ಹನ್ನೊಂದು,
ಈಚೆ ಹತ್ತರ ಅರುವತ್ತರಾಯ ಸಂದಿತ್ತು .
ಭಾಷೆ ಪೂರೈಸಿತ್ತು, ಲೆಕ್ಕ ತುಂಬಿತ್ತು, ಬಿತ್ತಕ್ಕೆ ವಟ್ಟವಿಲ್ಲ, ಕಾಳೆಗ ಮೊಗವಿಲ್ಲ.
ಕಾಳಿಂಗನ ಹಸ್ತಾಭರಣ, ನಮ್ಮ ಜಂಗಮಲಿಂಗಕ್ಕಯ್ಯಾ !
ಇಂತಪ್ಪ ಈ ನಡೆಯನರಿದಾಚರಿಸಿದ ಸಂಗನಬಸವಣ್ಣಂಗೆ
ಆಯತವನಾಯತವೆಂಬ ಅನಾಚಾರಿಯನು ಎನ್ನ ಮುಖದತ್ತ ತೋರದಿರಯ್ಯಾ.
ಆ ಮಹಾಮಹಿಮನ ಹೆಜ್ಜೆ ಹೆಜ್ಜೆಗಶ್ವಮೇಧಫಲ ತಪ್ಪದಯ್ಯಾ.
ಆ ಸಿದ್ಧಪುರುಷಂಗೆ ನಮೋ ನಮೋ ಎಂಬೆನು ಕಾಣಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./33
ಕುಲಜರೆಂದು ಹುಟ್ಟಿ, ಅಂತ್ಯಜರಾದರು ನೋಡಾ ದ್ವಿಜರು ;
ಶಿವನೆ ದೇವನೆಂದರಿದು ಪೂಜಿಸರಾಗಿ,
ಶ್ರುತಿಗಳು ಹೇಳಿದ ಶ್ರೀವಿಭೂತಿಯನೊಲ್ಲರಾಗಿ,
`ಏಕೋ ರುದ್ರೋ ನ ದ್ವಿತೀಯಾಯ ತಸ್ಥೆ’ ಎಂಬ ಶ್ರುತಿಯ ವಿಚಾರದಲ್ಲಿ ಇಲ್ಲವಾಗಿ,
ಅರಿದರಿದೆ, ಹೊಲೆಯ ಕೊಂಡಾಡಿತ್ತು ಲೋಕ.
ಇದೇನು ಸೋಜಿಗ, ಬಸವಪ್ರಿಯ ಕೂಡಲಚೆನ್ನಸಂಗಾ ?/34
ಕುಲವುಳ್ಳನ್ನಕ್ಕ ಭಕ್ತನಲ್ಲ, ಛಲವುಳ್ಳನಕ್ಕ ಮಹೇಶ್ವರನಲ್ಲ,
ಫಲವುಳ್ಳನ್ನಕ್ಕ ಪ್ರಸಾದಿಯಲ್ಲ.
ಕುಲ ಗುರುಕೃಪೆಯ ಕೆಡಿಸಿತ್ತು, ಛಲ ಲಿಂಗಾರ್ಚನೆಯ ಕೆಡಿಸಿತ್ತು.
ಫಲ ದುಃಖಂಗಳಿಗೆ ಗುರಿ ಮಾಡಿತ್ತು.
ಕುಲಂ ಛಲಂ ಧನಂ ಚೈವ ಯೌವನಂ ರೂಪಮೇವ ಚ |
ವಿದ್ಯಾ ರಾಜ್ಯಂ ತಪಶ್ಚೈವ ತೇ ಚಾಷ್ಟಮದಾ ಸ್ಮೃತಾಃ ||
ಎಂದುದಾಗಿ,
ಒಂದು ಸುರೆಯ ಕುಡಿದವರು ಬಂಧುಬಳಗವನರಿಯರು.
ಎಂಟು ಸುರೆಯ ಕುಡಿದವರು ನಿಮ್ಮನೆತ್ತಬಲ್ಲರಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?/35
ಗತಿಯ ಪಥವನರಿವಡೆ, ದಿಟವ ಸುಯಿದಾನ ಮಾಡು.
ದಿಟ ಬೇರೆ ಆಚಾರ ಶಿವಾಚಾರವೆಂ[ದರು]ಮರುಳೆ.
ಗುರು ದೇವನೆಂದರು ಮರುಳೆ.
ದೂರತೋಂ ಗುರುಂ ದಷ್ಟ್ವಾ ಉದಾಸೀನೇನ ಯೋ ವ್ರಜೇತ್ |
ಶ್ವಾನಯೋನಿಂ ಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಶಿವೇ ಕೃದ್ಧೇ ಗುರುಸ್ತ್ರಾತಾ ಗುರೌ ಕೃದ್ಧೇ ನ ಕಶ್ಚನ |
ತಸ್ಮಾದಿಷ್ಟಂ ಗುರೋಃ ಕುಯರ್ಾತ್ ಕಾಯೇನ ಮನಸಾ ಗಿರಾ ||
ಎಂದುದಾಗಿ,
ಬಸವಪ್ರಿಯ ಕೂಡಲಚೆನ್ನಸಂಗಮದೇವ ಮುನಿದಡೆ ತಿಳುಹಬಹುದು,
ಗುರು ಮುನಿದಡೆ ತಿಳುಹಬಾರದು, ಏಳೇಳು ನರಕ ತಪ್ಪದು./36
ಗುರುಲಿಂಗವೆ ಪರುಷವಾಗಿ, ಶಿಷ್ಯನೆ ಕಬ್ಬುನವಾಗಿ
ಬೆರಸಿ ನಡೆದೆನೆಂಬ ನರಕನಾಯಿಗಳು,
ಕುಲವನರಸುವಿರಿ, ಮತ್ತೆ ಹೊಲೆಯನರಸುವಿರಿ.
ಹೊಲೆಯನರಸುವಿರಿ ಸೂತಕವಳಿಯದೆ, ಪಾತಕ ಹಿಂಗದೆ.
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಮುಕ್ತಿಯನರಸುವಿರಿ./37
ಚಾಂಡಾಲನಾದಡೇನು ಶಿವಭಕ್ತನೆ ಕುಲಜನು.
ಆತನೊಡನೆ ನುಡಿಗಡಣವ ಮಾಡೂದೆನುತಿ[ದೆ] ವೇದ ಶ್ರುತಿ.
ಕುಲವ ನೋಡಲು ಬೇಡ, ಛಲವ ನೋಡಲು ಬೇಡ.
ಎಲ್ಲರಿಂದ ಹಿರಿಯರು ಆತನಿದ್ದಲ್ಲಿ ಇರುತಿಪ್ಪುದೆನುತಿ[ದೆ] ವೇದ.
ಒಂ ಅಪಿ ವಾ ಯಶ್ಚಾಂಡಾಲಶ್ಶಿವ ಇತಿ ವಾಚಂ ವದೇತ್ತೇನ ಸಹ
ಸಂವಿಶೇತ್ತೇನ ಸಹ ಭುಂಜೇತ್ ತೇನ ಸಹ ಸಂವದೇತ್ ||
ಇಂತೆನುತಿದ್ದುದು ಶ್ರುತಿವಾಕ್ಯ.
ನಮ್ಮ ಭಕ್ತರನು ಅವರಿವರೆಂದು ಕುಲವನೆತ್ತಿ ನುಡಿದಂಗೆ,
ಇಪ್ಪತ್ತೇಳುಕೋಟಿನರಕ ತಪ್ಪದು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./38
ಜನನಮರಣರಹಿತ ನೀನೊಬ್ಬನೆಯೆಂದು
ಸಂಸಾರಭಯಕ್ಕಂಜಿ ಶರಣುಹೊಕ್ಕೆನೆಂದಿತ್ತು ವೇದ.
ತಾರುಣ್ಯದಿಂದ ಸದಾ ರಕ್ಷಿಸುವುದೆಂದು
ಮಾರಾರಿಯನು ಶರಣುಹೊಕ್ಕಿತ್ತು ನೋಡಾ ವೇದ.
ಅಜಾಯತ್ತೇಧಂ ಕಶ್ಚಿತ್ ಭೇದಾತ್ |
ಪ್ರಪದ್ಯೋ ರುದ್ರಯತ್ತೇ ದಕ್ಷಿಣಂ ಮುಖಂ ||
ಎಂದುದು ಶ್ರುತಿವಚನ.
ಇದು ಕಾರಣ, ಅಜ ಹರಿ ಸುರರು ಮೊದಲಾದವರಿಗೆಲ್ಲಾ
ನೀನೆ ಶರಣನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ./39
ತಿಥಿವಾರವೆಂದರಿಯೆನಯ್ಯಾ, ಲಗ್ನವಿಲಗ್ನವೆಂದರಿಯೆನಯ್ಯಾ.
ಇದನರಿತು ಹದಿನಾರು ವಾರ, ಹದಿನೆಂಟು ಕುಲವೆಂದೆಂಬರು.
ನಾವಿದನರಿಯೆವಯ್ಯಾ, ಇರುಳೊಂದು ವಾರ, ಹಗಲೊಂದು ವಾರ.
ಭವಿಯೊಂದು ಕುಲ, ಭಕ್ತನೊಂದು ಕುಲ, ನಾವು ಬಲ್ಲುದು ಇದು ತಾನೆ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./40
ತಿರಿದುಕೊಂಡು ಬಂದಾದರೆಯೂ
ನಿಮ್ಮ ಭಕ್ತರಿಗೆ ಆನು ಬೆಸಕೆಯ್ವ ಭಾಗ್ಯವನು, ಮಾಡು ಕಂಡಯ್ಯಾ.
ಮನ ವಚನ ಕಾಯದಲ್ಲಿ ನಿಮ್ಮ ಶರಣರಿಗೆ ಆನು ತೊತ್ತಾಗಿಪ್ಪುದು,
ಮಾಡು ಕಂಡಯ್ಯಾ.
ಹಲವು ಮಾತೇನು ಲಿಂಗಜಂಗಮಕ್ಕೆ ಈವುದನೆ ಮಾಡು ಕಂಡಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಾ./41
ತೊತ್ತಿನ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ.
ಸೂಳೆಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ.
ಕನ್ಯೆಯ ಸಂಗವ ಮಾಡಿದಡೆ ಬಂಗಿಯ ತಿಂದ ಸಮಾನ.
ಗಂಡ ಬಿಟ್ಟವಳ ಸಂಗವ ಮಾಡಿದಡೆ ಉದಾನವ ಕೊಂಡ ಸಮಾನ.
ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ.
ಗಂಡನುಳ್ಳವಳ ಸಂಗವ ಮಾಡಿದಡೆ ಪಂಚಮಹಾಪಾತಕವ ಮಾಡಿದ ಸಮಾನ.
ಅದೆಂತೆಂದಡೆ: ವಿಧವ್ಯಾ ಚ ಸ್ತ್ರೀಯ ಹಂತಿ ದಾಸಿಸೀಲೆ ಕುಲಂ ತಥಾ |
ವೇಶ್ಯಾ ಮಾನಧನಂ ಹಂತಿ ಸರ್ವಂ ಹಂತಿ ಪರಾಂಗನಾ ||
ದಾಸಿ ಕನ್ಯಾ ಬಿಡಸ್ತ್ರೀಣಾಂ ವೇಶ್ಯಾವಿದೇ ಪರಸ್ತ್ರೀಯಾ |
ಸತತಂ ಪಾತಕಶ್ಚೈವ ಬ್ರಹ್ಮಹತ್ಯಂ ದಿನೇ ದಿನೇ ||
ಎಂದುದಾಗಿ, ಈ ಆರುಪ್ರಕಾರದ ಸ್ತ್ರೀಯರನು
ಮನ ವಚನ ಕಾಯದಲ್ಲಿ ನೆರೆದವಂಗೆ ರೌರವನರಕ ತಪ್ಪದಯ್ಯ.
ಈ ಷಡ್ವಿಧ ಸತಿಯರುಗಳ ಮನ ವಚನ ಕಾಯದಲ್ಲಿ ಬಿಟ್ಟವಂಗೆ
ಗುರುವುಂಟು ಲಿಂಗವುಂಟು ಜಂಗಮವುಂಟು
ಪಾದೋದಕವುಂಟು ಪ್ರಸಾದವುಂಟು ವಿಭೂತಿ ರುದ್ರಾಕ್ಷಿ
ಪ್ರಣಮ ಪಂಚಾಕ್ಷರವುಂಟು.
ಇಂತೀ ಆರುಪ್ರಕಾರದ ಸ್ತ್ರೀಯರು ಮೊದಲಾದ
ರಾಶಿಕೂಟದ ಸ್ತ್ರೀಯರುಗಳಿಗೆ ಮನ ಹೇಸದೆ
ಅಂಗವಿಸುವ ಭಕ್ತರು ಭವಿಗಿಂದ ಕಷ್ಟ ನೋಡಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./42
ದೇವ ದೇವ ಮಹಾಪ್ರಸಾದ:
ಕಂಗಳಲ್ಲಿ ಕರುಳಿಲ್ಲ, ಕಾಯದಲ್ಲಿ ಹೊರೆಯಿಲ್ಲ,
ನುಡಿಯಲ್ಲಿ ಕಡೆಯಿಲ್ಲ, ನಡೆಯಲ್ಲಿ ಗತಿಯಿಲ್ಲ.
ಇದೆಂತಹ ಸುಳುಹೆಂದರಿಯೆ, ಇದೆಂತಹ ನಿಲುವೆಂದು ತಿಳಿಯಬಾರದು.
ಮರುಳಿಲ್ಲದ ಮರುಳು, ಅರಿವಿಲ್ಲದ ಅರಿವು.
ಬಸವಪ್ರಿಯ ಕೂಡಲಚೆನ್ನಸಂಗನ ಶರಣರ ಬರವು
ಕೌತುಕವಾಯಿತ್ತು, ಚಿತ್ತೈಸಯ್ಯಾ ಸಂಗನಬಸವಣ್ಣಾ./43
ದೇವ ದೇವ ಮಹಾಪ್ರಸಾದ:
ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯಾ.
ತನುಮನಧನವ ಹಿಂದಿಕ್ಕಿಕೊಂಡಿಪ್ಪ ವಂಚಕ ನಾನಯ್ಯಾ.
ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೆ ?
`ಚಕಿತಮಭಿದತ್ತೇ ಶ್ರುತಿರಪಿ’ ಎನಲು,
ಎನ್ನ ನುಡಿ ನಿಮ್ಮ ಶರಣರ ತಾಗಬಲ್ಲುದೆ ?
ಹಣೆಯ ಹೊಣೆಯ ತೋರಿ ಉದರವ ಹೊರೆವಂತೆ,
ನಿಮ್ಮ ಮರೆಯಲಡಗಿರ್ಪ ಹಡಪಿಗ ನಾನಯ್ಯಾ.
ಬಸವಪ್ರಿಯ ಕೂಡಲಚೆನ್ನಸಂಗನ ಶರಣರು ಎನ್ನ ಮಾತಿಗೆ ಬಾರರು,
ನೀವೆ ಹೋಗಿ ಬಿಜಯಂಗೈಸಿಕೊಂಡು ಬಾರಾ, ಸಂಗನಬಸವಣ್ಣಾ . /44
ದೇವಾ ನಿಮ್ಮ ಪರಿಹಾಸ ಪರಿ ಪರಸಮಯಿಗಳ ಮನೆಯಲಿಪ್ಪರೆ.
ದೇವಾ ದೇವಾ ನಿಮ್ಮ ಪರಿಹಾಸ ಪರಿಹರಿಸರಿಯೆಂಬ
ಮಾತ ಹುಟ್ಟಿಸುವರೆ ಜಗದಿ.
ದೇವಾ ನೀವು ಮಾಡಿದ ಮಾಯೆ ಅಲ್ಲದಿರ್ದಡೆ
ನೊರಜುಗಳ ಸರಿಯೆಂಬರೆ ಹೇಳಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?/45
ದೈವವೆನಿಸಿಕೊಂಬ ಎಲ್ಲ ದೈವಂಗಳ ಬಿಟ್ಟು,
ಶಿವನನೊಬ್ಬನೆ ಹಿಡಿಯೆಂದುದಥರ್ವಣ ವೇದ.
ಶಿವನ ಪೂಜಿಸಿ, ಶಿವನ ನೆನೆದು, ಶಿವನ ಸ್ತುತಿಸುವುದೆಂದುದಥರ್ವಣ ವೇದ.
`ಈಶೋವಾ ಶಿವ ಏಕೋಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್’
ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ./46
ದ್ವಿಜರೊಮ್ಮೆ ಮರೆದು ನೀಳಬೊಟ್ಟನಿಟ್ಟರಾದಡೆ,
ಅದರ ಪರಿಯಲೆ ಅಸಿಯ ಗರಗಸವ ಮಾಡಿ,
ಯಮಕಿಂಕರರು ಸೀಳುವರೆಂದುದು ನೋಡಾ. ಸ್ಕಾಂದೇ:
ಊಧ್ರ್ವಪುಂಡ್ರಂ ದ್ವಿಜಂ ಕುಯರ್ಾತ್ ಲೀಲಯಾಪಿ ಕದಾಚನ |
ತಥಾ ಕಾಲೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈಃ ||
ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಂಚಂದ್ರಕಮ್ |
ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ ||
ಇದನರಿದಿನ್ನು ದ್ವಿಜರು ನಂಬಿ, ಬೇಗ ವಿಭೂತಿಯನಿಟ್ಟು ಬದುಕಿ,
ಬಸವಪ್ರಿಯ ಕೂಡಲಚೆನ್ನಸಂಗನನೊಲಿಸುವಡೆ./47
ನಾನೊಂದೂರಿಗೆ ಹಾದಿಯ ಕೇಳಿಕೊಂಡು ಹೋಗುತ್ತಿರಲಾಗಿ,
ಮುಂದೆ ಅರಣ್ಯದೊಳಗೆ ಮೂರುಬಟ್ಟೆಯಾಯಿತ್ತು.
ಎರಡು ಪಥವ ಬಿಟ್ಟು, ಒಂದು ಪಥವ ಹಿಡಿದು ಬರಲಾಗಿ,
ಮುಂದೆ ಮೂರು ಬಟ್ಟೆಯೂ ಒಂದಾದವು.
ಆ ಮೂರು ಬಟ್ಟೆ ಕೂಡಿದ ಬಳಿಯಲೊಂದು ಬೆಟ್ಟ ಹುಟ್ಟಿತ್ತು.
ಆ ಬೆಟ್ಟವ ಏರಬಾರದು, ಇಳಿಯಬಾರದು.
ಆ ಬೆಟ್ಟವ ಬಿಟ್ಟು ಹೋದಡೆ ಎನಗೆ ಪಥವಿಲ್ಲಾಯೆಂದು
ಸುತ್ತಿಸುತ್ತಿ ನೋಡುತ್ತಿರಲಾಗಿ,
ಆರು ಮೆಟ್ಟಿನದೊಂದು ಏಣಿ ಹಾಕಿರುವುದ ಕಂಡೆ.
ಆ ಏಣಿಯ ಮೆಟ್ಟಿ ಮೆಟ್ಟಿ,
ಆ ಬೆಟ್ಟದ ತುಟ್ಟತುದಿಯನೇರಿ ನೋಡಲಾಗಿ, ಬಟ್ಟಬಯಲಾಗಿದ್ದಿತು.
ಆ ಬಟ್ಟಬಯಲೊಳಗೆ ಹತ್ತಿ ಹೋಗುತ್ತಿರಲಾಗಿ,
ನಾನೆತ್ತ ಹೋದೆನೆಂದರಿಯೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./48
ನಾಲಿಗೆಗೆ ಶಿವನ ಹೊಗಳುವುದೇ ವಿಧಿಯೆಂದು ಹೇಳಿತ್ತು ವೇದ.
ಮತ್ತೆಯೂ ಶಿವನನೆ ಸ್ತುತಿಸುವುದೆ ವಿಧಿಯೆಂದು ಹೇಳಿತ್ತು ವೇದ.
ಅನ್ಯದೈವವ ಹೊಗಳಲಾಗದೆಂದುದು, ಋಗ್ವೇದ.
ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಬೀಮಮುಪಹತ್ನು ಮುಗ್ರಂ |
ಮೃಡಾ ಜರಿತ್ರೇ ರುದ್ರಸ್ತವಾನೋ ಅನ್ಯಂತೇ ಅಸ್ಮಿನ್ನಿವ ಪಂತು ಸೇನಾಃ ||
ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ./49
ನಿನ್ನಳವಲ್ಲ, ಎನ್ನಳವಲ್ಲ, ಇದಾರಳವಲ್ಲದ ಘನವು ನೋಡಯ್ಯಾ ;
ಕಾಬಡೆ ಕಂಗಳಿಗೆ ಅಸಾಧ್ಯ, ಮುಟ್ಟುವಡೆ ಸೋಂಕಿಂಗಸಾಧ್ಯ,
ಮಾತನಾಡಿಸಿ ನೋಡಿದಡೆ ವಾಙ್ಮನಾತೀತ,
ನಿಂದಡೆ ನೆಳಲಿಲ್ಲ, ಸುಳಿದಡೆ ಹೆಜ್ಜೆಯಿಲ್ಲ,
ಪ್ರಭುದೇವರೆಂಬ ಭಾವ ತೋರುತ್ತದೆ.
ಬಸವಪ್ರಿಯ ಕೂಡಲಚೆನ್ನಸಂಗನ ಶರಣರ
ಚರಣವ ಪಿಡಿಯಲೇಳಾ ಸಂಗನಬಸವಣ್ಣಾ./50
ನಿಮ್ಮ ತನು, ನಿಮ್ಮ ಧನ, ನಿಮ್ಮ ಮನ ನಿಮ್ಮದಲ್ಲದೆ
ಅನ್ಯವೆಂದಣುಮಾತ್ರವಿಲ್ಲ ನೋಡಯ್ಯಾ.
ಭಕ್ತನ ಮಠವೆ ತನ್ನ ಮಠವೆಂದು ಮುನ್ನವೆ ಅರಿದರಿದು ಬಂದು,
ಮತ್ತೊಂದ ಮತ್ತೊಂದ ನೆನೆವರೆ ?
ಬಸವಪ್ರಿಯ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ
ಸ್ವತಂತ್ರಭಾವವುಳ್ಳಡೆ ನಿಮ್ಮ ಪಾದದಾಣೆ./51
ನಿರಾಕಾರದ ಶಕ್ತಿಯಲ್ಲಿ ನಿರಾಳವೆಂಬ ತನು,
ನಿಃಶೂನ್ಯವೆಂಬ ಶೂನ್ಯಸಿಂಹಾನದ ಮೇಲೆ
ಘನವಾಗಿ ತೊಳಗಿ ಬೆಳಗುತ್ತಿರ್ದನು.
ದೆಸೆಯಲ್ಲಾ ಮುಖವಾಗಿ, ಮುಖವೆಲ್ಲಾ ಜಗವಾಗಿ,
ಅಖಂಡಪರಿಪೂರ್ಣ ಪರಬ್ರಹ್ಮ ತಾನಾದನು.
ಈ ಮಹಿಮನ ನೆನೆದಡೆ ಮನೋಮುಕ್ತಿ ,
ಕಂಡಡೆ ರೂಪುಮುಕ್ತಿ, ನುಡಿಸಿದಡೆ ಶಬ್ದಮುಕ್ತಿ ,
ಸಂಗವ ಮಾಡಿದಡೆ ಸರ್ವಾಂಗಲಿಂಗೈಕ್ಯ.
ಬಸವಪ್ರಿಯ ಕೂಡಲಚೆನ್ನಸಂಗಯ್ಯಾ,
ನಿಮ್ಮ ಪ್ರಭುವಿನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು./52
ನೆಲನ ಹೊದ್ದದು, ಆಕಾಶವ ಮುಟ್ಟದು ಎಡೆಯಲೊಂದು ರೂಪಿಲ್ಲ.
ಭಾವವೆ ಕಂಬ, ಜ್ಞಾನವೆ ನಿವಾಸ, ನಿರ್ಲೆಪವೆ ಭಿತ್ತಿ,
ನಿರಂಹಕಾರವೆ ಶಿಖರಿ, ಮಹದಹಂಕಾರವೆ ಶೃಂಗಾರ ಕಳಶ,
ಸಹಸ್ರಪತ್ರದ ನವಕಮಳ ಸಿಂಹಾಸನ, ನಿತ್ಯವೆ ಮಲಗು.
ನಿಜವೆಂಬ ವಿಸ್ತರದಲ್ಲಿ ನಿತ್ಯನಿರಾಳವೆಂಬ ಮಹಾಘನವು
ಬಂದು ಮೂರ್ತಿಗೊಳಲು,
ಕಾಯದ ಕಂಗೆ ಕಾಣಬಾರದು, ಮನದ ಮುಂದೆ ಅಳವಡದು,
ಭಾವದ ಬಗೆಗೆ ಮೇಲುದೋರದು.
ಬಸವಪ್ರಿಯ ಕೂಡಲಚೆನ್ನಸಂಗನಲ್ಲಿ
ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂಬೆನು./53
ಪರರಾಸೆಯೆಂಬ ಜ್ವರ ಹತ್ತಿತ್ತಾಗಿ, ಕಳವಳಿಸಿ, ನುಡಿವೆನಯ್ಯಾ.
ಹೊನ್ನು ಹೆಣ್ಣು ಮಣ್ಣು ಬಯಸಿ, ವಿಕಳಗೊಂಡಂತೆ ಪ್ರಳಾಪಿಸಿ,
ವಿಕಳಂಗೊಂಡು ನುಡಿಯುತ್ತಿಪರ್ೆನಯ್ಯಾ.
ಈ ಕಳವಳವನಳಿದು, ಸಂಭಾಷೆಯನಿತ್ತು ,
ನಿಮ್ಮ ಕರುಣಾಮೃತವೆಂಬ ಕಷಾಯವನೆರದು,
ಪರರಾಸೆಯೆಂಬ ಜ್ವರವ ಮಾಣಿಸು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./54
ಪರಶಿವನ ಚಿತ್ಕಲೆ ಜಗತ್ತಿನ ಶಿರೋಮಧ್ಯಕ್ಕೆ ಬಿಂಬಿಸಿ,
ಅದಕ್ಕೆ ಚೈತನ್ಯಗೊಳಿಸಿದಲ್ಲಿ, ಅದೇ ಪರಮಾತ್ಮನಾಯಿತ್ತು.
ಆ ಪರಮಾತ್ಮನೆ ಜಗತ್ತಿನ ಭ್ರೂಮಧ್ಯಕ್ಕೆ ಬಿಂಬಿಸಿದಲ್ಲಿ,
ಅದೇ ಅಂತರಾತ್ಮನಾಯಿತ್ತು.
ಆ ಅಂತರಾತ್ಮನೇ ಜಗತ್ತಿನ ಹೃದಯಕ್ಕೆ ಬಿಂಬಿಸಿದಲ್ಲಿ,
ಅದೇ ಜೀವಾತ್ಮನಾಯಿತ್ತು.
ಆ ಜೀವಾತ್ಮನೇ ಘಟ, ಅಂತಾರಾತ್ಮನೇ ಪ್ರಾಣ, ಪರಮಾತ್ಮನೇ ಸರ್ವಸಾಕ್ಷಿಕ.
ಆ ಸಾಕ್ಷಿಕನೇ ವಸ್ತು, ಆ ಪರಸ್ತು. ಈ ಜೀವಾಂತರಾದಿಗಳೆಂಬ ಅಂಗಪ್ರಾಣಕ್ಕೆ
ಪಂಚವಿಂಶತಿತತ್ವಂಗಳೆಂಬ ಪಾಶವಂ ತೊಡಿಸಿ, ಅಂತದನೇ ಪಶುವೆನಿಸಿ,
ತಾನದಕ್ಕೆ ಪತಿಯಾಗಿ, ಅಲ್ಲಿ ನಾನಾ ವಿನೋದಂಗಳಂ ವಿನೋದಿಸಿತ್ತು.
ಅದೆಂತೆಂದಡೆ : ವಿದ್ಯುದ್ರೂಪಮಿವಾಕಾಶೇ ಪ್ರತ್ಯಕ್ಷಂ ಸರ್ವತೋಮುಖ್ಯೆಃ |
ಶಿವತತ್ತ್ವಮಿದಂ ಪ್ರೋಕ್ತಂ ಸರ್ವತತ್ತ್ವಾಲಯಂ ವಿದುಃ ||
ಜೀವಾಂತರಪರಾತ್ಮೇತಿ ತ್ರಿಭಿರ್ನಾಮಭಿರುಚ್ಯತೇ |
ಆತ್ಮಸ್ವಜೀವ ಸಂಬಂಧಶ್ಚಾಂತರಃ ಪ್ರಾಣಸಂಯುತಃ ||
ಪರಮಾತ್ಮಾ ತತ್ತ್ವಸಂಯುಕ್ತಃ ಆತ್ಮತ್ರಯಮಿದಂ ಶೃಣು |
ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನು
ಇಂತೀ ಪರಿಯಲ್ಲಿ ಅಡಗಿರ್ದ, ಸರ್ವಜಗತ್ತನ್ನು./55
ಬಯಸಿದ ಬಯಕೆ ಕೈಸಾರುವಂತೆ, ನಿಧಿ ನಿಧಾನ ಮನೆಗೆ ಬಪ್ಪಂತೆ,
ಪರಿಮಳವನರಿಸಿ ಬಪ್ಪ ಭ್ರಮರನಂತೆ,
ಚಿಂತಾಮಣಿಯ ಪುತ್ಥಳಿ ನಡೆಗಲಿತಂತೆ,
ಬಸವಪ್ರಿಯ ಕೂಡಲಚೆನ್ನಸಂಗನಲ್ಲಿ
ಪ್ರಭುದೇವರ ಬರವು ಕಾಣಬರುತ್ತಿದೆ ನೋಡಾ ಸಂಗನಬಸವಣ್ಣಾ./56
ಬಿಡಿ ಬಿಡಿ ವಿಷ್ಣುವ, ನಿಮಗೆ ಗತಿಗೆ ಸಾಧನವಲ್ಲ, ಕಂಡಿರೆ ಎಲೆ ದ್ವಿಜರಿರಾ.
ಬಿಡದೆ ಧ್ಯಾನಿಸಿ ಶಿವನ ಅಡಿದಾವರೆಯ,
ಬಿಡದೆ ಪೂಜಿಸಿ ಶಿವನ ಶ್ರೀಪಾದಪದ್ಮಂಗಳ
ನಿಮಗೆ ತಡೆಯಿಲ್ಲದ ಮುಕ್ತಿದೊರಕೊಂಬದು. ಅಥರ್ವಣವೇದ:
`ಈಶಾನಃ ಶಿವ ಏಕೋಧ್ಯೇಯ’ ಶಿವಂಕರತ್ಸರ್ವಮನ್ಯತ್ಪರಿತ್ಯಜ್ಯ
ಇತಿ ಬ್ರಹ್ಮನೀತಿಯಲಿ: ಆತ್ಮ ಸರ್ವಂ ಪರಿತ್ಯಜ್ಯ ಶಿವಾದನ್ಯಂತು ದೈವತಂ
ತಮೇವ ಶರಣಂ ಚೇತ್ಸದ್ಯೋಮುಕ್ತಿಂ ಸುಗಚ್ಛತಿ ||
ಕೆಡಬೇಡ, ಸಾರಿ ಡಂಗುರ ಹೋಯ್ಯಿತ್ತು , ಶ್ರುತಿಯ ನೋಡಯ್ಯ.
ಬಸವಪ್ರಿಯ ಕೂಡಲ ಚೆನ್ನಸಂಗಯ್ಯನನೆ ಬಿಡದೆ ಧ್ಯಾನ ಪೂಜೆಯ ಮಾಡಲು
ಕೊಡುವ ನಿಮಗೆ ಪರಮಪದವನು./57
ಬ್ರಹ್ಮವಿಷ್ಣ್ವಾದಿ ದೇವತೆಗಳಿಗೆ ಶಿವನೆ ಜನಕನೆಂಬ
ಯಜುರ್ವೆದವ ಕೇಳಿರೆ ದ್ವಿಜರೆಲ್ಲರೂ.
ಅದೆಂತೆಂದಡೆ: ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾಪೃಥಿವ್ಯಾ
ಜನಿತಾಗ್ನಿರ್ಜನಿತಾ ಸೂರ್ಯಶ್ಚ ಜನಿತೇಂದ್ರೋ ಜನಿತಾಥ ವಿಷ್ಣೋಃ ||
ಮತ್ತಂ ಆದಿತ್ಯಪುರಾಣೇ: ಉಮಯಾ ಸಹಿತಃ ಸೋಮಃ ಸೋಮೇತುಚ್ಯ
ಸ್ವಯೇವ ಕಾರಣಂ ನಾನ್ಯೋ ವಿಷ್ಣೋರಪಿ ಚ ವೈ ಶ್ರುತಿಃ ||
ಮತೀನಾಂ ಚ ದಿವಃ ಪೃಥ್ವ್ಯಾ ವಹ್ನೇಃ ಸೂರ್ಯಸ್ಯ ವಜ್ರಿಣಃ ||
ಸಾಕ್ಷಾದಪಿ ಚ ವಿಷ್ಣೋರ್ವೆ ಸೋವಿೂ ಜನಯಿತೇಶ್ವರ ||
ಎಂದುದಾಗಿ, ಮತ್ತೆ ದೈವವುಂಟೆಂಬ ಅಜ್ಞಾನಿ ಜಾತ್ಯಂಧರ ನಾನೇನೆಂಬೆ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./58
ಬ್ರಾಹ್ಮಣ ದೇಹಿಕದೇವನಲ್ಲ, ಕ್ಷತ್ರಿಯ ದೇಹಿಕದೇವನಲ್ಲ.
ಭಕ್ತ ದೇಹಿಕದೇವನೆಂದು ಕೇಳಿದ ಅರಿಯವೊ,
ಶ್ವಪಚನಾದಡೇನು ಲಿಂಗಭಕ್ತನೆ ಕುಲಜನೆಂಬುದು.
ಶ್ವಪಚೋಪಿ ಮುನಿಶ್ರೇಷ್ಠಃ ಭಕ್ತಿಹೀನಃ ಪಿತಾಪಿ ವಾ |
ಚತುರ್ವೆದಧರೋ ವಿಪ್ರ ಶೈವಭಕ್ತಿವಿವಜರ್ಿತಃ |
ಇದು ಕಾರಣ, ಬಸವಪ್ರಿಯ ಕೂಡಲಚೆನ್ನಸಂಗ
ಹಿತನೆಂದು ಅಂಜುವೆ ಮತ್ತೆ ಮರೆವೆ./59
ಭಕ್ತರಿಗೆ ಮಾಡಿ ಕಣ್ಣುಕಾಲು ಕೈಗಳ ಪಡೆದರು,
ಭಕ್ತರಿಗೆ ಮಾಡಿ ಅರಿದ ತಲೆಯ ಪಡೆದರು,
ಭಕ್ತರಿಗೆ ಮಾಡಿ ನಿಲವೆರಸಿ ಹೋದರು.
ಮುನ್ನ ಭಕ್ತರಲ್ಲದವರಿಗೆ ಮಾಡಿ ಹಡೆದವರುಂಟೆ ಹೇಳಾ ?
ಭಕ್ತರಿಗೆ ಮಾಡಿ ಇವೆಲ್ಲವ ಹಡೆಯಿತ್ತ ಕಂಡು
ನಂಬದೆನ್ನ ಬೆಂದ ಮನ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./60
ಭಕ್ತರು ಮನೆಗೆ ಬಂದಡೆ, ತಮ್ಮ ಮನೆಯಲ್ಲಿ ತಾವಿಪ್ಪಂತಿರಬೇಕು.
ಅಂಜದೆ ಅಳುಕದೆ ನಡುಗುತ್ತಿರದೆ, ತಮ್ಮ ಶುದ್ಧಿ ತಾವಿರಬೇಕು.
ತಾವು ಆಳ್ವವರು ಅಲಿನಂತಿದ್ದಡೆ,
ಬಸವಪ್ರಿಯ ಕೂಡಲಚೆನ್ನಸಂಗ ಹಲ್ಲ ಕಳೆವ./61
ಭವರೋಗ ಮೊದಲಾದ ಎಲ್ಲಾ ರೋಗಂಗಳಿಗೆಯೂ
ಶಿವಲಿಂಗ ಪ್ರಸಾದವಲ್ಲದೆ ಮತ್ತೇನೂ ಇಲ್ಲವೆಂದುದು ವೇದ.
ದ್ವಿಪಾದಿಗಳು ಚತುಃಪಾದಿಗಳು ಮೊದಲಾದ ಸಕಲಪ್ರಾಣಿಗಳೆಲ್ಲವಕ್ಕೆ
ಇದೇ ಔಷಧಿಯೆಂದುದು ಯಜುರ್ವೆದ.
ಗಾಮೇಸ್ವಾಯ ಪುರುಹಾಯ ಭೇಷಜಂ ಅಧೋಲಿಸ್ಮಭ್ಯಂ |
ಭೇಷಜಂ ಸುಖೇಷಜಂ ಯದಿ ಸತಿ ಸುಗಮ್ಯೇಷ್ಯಾಂ |
ಅವಾಂಬ ರುದ್ರಮದಿ ಮಹೀಯದ ದೇವಂ ತ್ರ್ಯಂಬಕ ||
ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಾ./62
ಭುವನಸ್ಯ ಪಿತರಂಗಭರ್ೆ ರಾಭೇ ರುದ್ರಂ ಧೀವಾರ್ದಯಾ
ರುದ್ರವುವುಕಾರ ಬ್ರಹ್ಮಂ ತದೃಷ್ಟಮಜರಂ ಸುಷುಮ್ನ ದ್ರುಗ್ಯವೇಮಕಮಪಿವಾಸಃ||
ಎಂಬ ಶ್ರುತಿಯ ವಿಚಾರಿಸಲರಿಯದೆ, ಒಲಿದಂತೆ ನುಡಿವುತಿಪ್ಪರು ನೋಡಯ್ಯಾ.
`ಮಾತೃದೇವೋ ಭವ, ಪಿತೃದೇವೋ ಭವ’
ಎಂಬ ಶ್ರುತಿ, ದೇವಿ ದೇವನು ತಾಯಿತಂದೆಯೆಂದು ಹೇಳಿತ್ತು.
`ಆಚಾರ್ಯದೇವೋ ಭವ’ ಎಂಬ ಶ್ರುತಿ,
ತನಗೆ ಶುದ್ಧಶೈವವನನುಗ್ರಹವ ಮಾಡಿದ ಗುರುವೇ ದೈವವೆಂದು ಹೇಳಿತ್ತು.
`ಅತಿಥಿದೇವೋ ಭವ’ ಎಂಬ ಶ್ರುತಿ,
ತನ್ನ ಮನೆಗೆ ಬಂದ ಭಕ್ತನೇ ದೈವವೆಂದು ಹೇಳಿತ್ತು.
ಇದಲ್ಲದೆ ಸಾವುತ್ತ, ಹುಟ್ಟುತ್ತಿಪ್ಪ
ತಂದೆ ತಾಯಿ ದೈವವೆಂದ ಲಜ್ಜೆ ನಾಚಿಕೆ ಬೇಡ.
ಚಂಡೇಶ್ವರಪಿಳ್ಳೆ ಶಿವನು ತಂದೆಯೆಂದರಿದು,
ವಾಯದ ತಂದೆಯ ಕೊಂದುದನರಿಯಾ ?
ಎಂದೆಂದಿಗೆ ಕೇಡಿಲ್ಲದ ತಾಯಿತಂದೆ
ಬಸವಪ್ರಿಯ ಕೂಡಲಚೆನ್ನಸಂಗಮದೇವನೆಂದು ವೇದಂಗಳು ಸಾರುತ್ತವೆ./63
ಮತ್ತೆಯು ಸಮಸ್ತವಾದ ಕರ್ಮಕೃತ ಶರೀರಿಗಳಿಗೆ
ಭೋಗವುಳ್ಳುದೆ ತಪ್ಪದೆಂಬೆಯಾದಡೆ,
ಶರೀರಗಳಿಗಾಗಲಿ ಪ್ರೇರಕಹರ್ತುದಿಂದಲ್ಲವೆಂಬುದೆ ಪ್ರಮಾಣ.
ಶಿವ ಪ್ರೀತ್ಯರ್ಥವಾದಗ……ಳು ಕರ್ತವನೆಯ್ದುವವೆಂಬುದಕ್ಕೆ ಪ್ರಮಾಣವು ಎನಲು,
ಪಿತೃವಧೆಯಿಂದ ಚಂಡೇಶ್ವರನು ಅನುಪಮ ಗಣಪದವನೈದಿದನು.
ಸಿರಿಯಾಳನು ತನ್ನ ಮಗನನೆ ಹತಿಸಿ ಪುರಜನ ಬಾಂಧವರುಸಹಿತ
ಶಿವಲೋಕವನೈದನೆ ?
ಕಾಲಾಂತರದಲ್ಲಿ ಮನುಚೋಳನು ಪುತ್ರವಧೆ ಭ್ರೋಣಹತ್ಯವನು ಮಾ ಎಸಗಿ,
ತನುವರಸಿ ಶಿವಲೋಕವೆಯ್ದನೆ ?
ಅಯ್ಯೋಮ ರಾಜನು ವಿಪ್ರೋತ್ತಮನನೆ ವಧಿಸಿ ಲಿಂಗ ಗರ್ಭಾಂತರವನೆಯ್ದಿದನೆ ?
ಅಂದು ಜಗವರಿಯಲದಂತಿರಲಿ.
`ಸ್ವರ್ಗಕಾಮೋ ಯಜೇತ’ಯೆಂಬ ಶ್ರುತಿಪ್ರಮಾಣಿಂ ದಕ್ಷ ಪ್ರಜಾಪತಿ ಕ್ರಿಯೆಗಳಿಗೆ
ಅಧ್ವರ ಕರ್ಮದಿಂದ ಶಿರಚ್ಛೇದಿಯಾಗಿ ಕುರಿದಲೆ ಪಡೆಯನೆ ?
ಬರೀ ಅಚೇತನ ಕರ್ಮಂಗಳು ಕೊಡಬಲ್ಲವೆ ಸದ್ಗತಿ ದುರ್ಗತಿಗಳನು ?
ಕರ್ತು ಪ್ರೇರಕ ಶಿವನಲ್ಲದೆ,
`ಮನ್ನಿಮಿತ್ತಕೃತಂ ಪಾಪಮಪೀಡಾವಚಯೈ ಕಲ್ಪ್ಯತೇ’ ಎನಲು,
ಇಂತೀ ಚಿಟಿಮಿಟಿವಾದವೆಂಬುದು ಕೊಳ್ಳವು ಕೇಳಾ.
ಶಿವಭಕ್ತಿಯೆಂಬ ಪ್ರಚಂಡ ರವಿಕಿರಣದ
ಮುಂದೆ ಸಾಮಾನ್ಯಕರ್ಮವೆಂಬ ತಮ ನಿಲುವುದೆ ?
ಮರುಳೆ ಆ `ವೋರಾಜಾನಮಧ್ವರಸ್ಯ ರುದ್ರಗಂ’ ಎನಲು,
`ಇಂದ್ರ ಉಪೇಂದ್ರಾಯ ಸ್ವಾಹಾ’ ಎನಬಹುದೆ ?
ಪ್ರಥಮಾಹುತಿಯಲ್ಲಿಯೆಂದು ಬೆಳಲು ಭಸ್ಮವಹವಾ ಆಹುತಿ ಫಲಂಗಳು.
ಆದಡೆ ಕೆಳೆಯಾ ಶಿವಭಕ್ತಿಬಾಹ್ಯವಾದ
ಪಾಪಕರ್ಮಕೆ ಬಂದ ವಿಪರೀತ ಪ್ರಾಪ್ತಿಗಳು,
ವಿಷ್ಣು ಸುರರಿಗೆ ಹಿತವಾಗಿ ಭೃಗು ಸತಿಯ ಶಿರವನರಿದಡೆ,
ಕರ್ಮ ದಶಜನ್ಮಂಗಳಿಗೆ ತಂದು,
ಹೀನಪ್ರಾಣಿಗಳ ಯೋನಿಯಲ್ಲಿ ಬರಸಿದುದನರಿಯಿರೆ.
ಮತ್ತೆಯೂ ಬಾಲೆಯ ಕೊಂದ ಕರ್ಮ
ಕೃಷ್ಣಾವತಾರದಲ್ಲಿ ವ್ಯಾಧನಿಂದ ತನ್ನ ಕೊಲ್ಲಿಸಿತ್ತು.
ಮತ್ತೆಯೂ ಬಲಿಯ ಬಂಧಿಸಿದ ಕರ್ಮ ಮುಂದೆ ನಾಗಾರ್ಜುನನಿಂದ ಕಟ್ಟಿಸಿತ್ತು,
ಕೌರವಕುಲದ ಕೊಲಿಸಿದ ಕರ್ಮಫಲ ತನ್ನ ಯಾದವ ಕುಲವ ಕೊಲಿಸಿತ್ತು.
ಮತ್ತಾ ಲೀಲೆಯಿಂದ ಮತ್ತೆಯೂ ಪರ್ವತನಾರಂದರ ಸತಿಯ ಬಲುಮೆ,
ಇಂತೆ ಕೊಂಡ ಕರ್ಮಫಲ ರಾವಣಗೊಪ್ಪಿಸಿತ್ತು.
ತನ್ನ ಪ್ರಿಯತಮೆಯೆನಿಸುವ ಸೀತಾಂಗನೆಯ
ಇನ್ನು ಮಿಕ್ಕಿನ ದೇವದಾನವಮಾನವರನೊಕ್ಕಲಿಕ್ಕಿಯಾಡದಿಹುದೆಯಾ ಕರ್ಮವು.
ಆದಡಾ ಕರ್ಮವು ಸ್ವತಂತ್ರವೋ, ಪರತಂತ್ರವೋ ಎಂಬೆಯಾದಡೆ,
ಆ ಕರ್ಮ ಈಶ್ವರಾಜ್ಞೆಯಲ್ಲದ ಕರ್ಮಿ ತಾನಾದಂತೆ,
ಇದಂ ಗುರು ಕನಿಷ್ಠಾಧಮಮಧ್ಯಮ ಕ್ರಿಯೆಗಳಿಂ ವಿಧಿಸಿದ ವಿಧಿಗಳಿಂ,
ವಿಧಿನಿಷೇಧ ಕರ್ಮಂಗಳೆಂಬ ಸಮೂಹಕರ್ಮಗಳಿಗೆ ತಾರತಮ್ಯವಿಡಿದು,
ಪುಣ್ಯಪಾಪಂಗಳ ನಿರ್ಮಿಸಿ, ಅಜ್ಞಾನಿಪಿತವ ಮಾಡಿದನೀಶ್ವರನು.
ನಾಕನರಕಾದಿಗಳೆ ಸಾಧನವಾಗಿ, ಕರ್ಮಕರ್ತನನೆಯ್ದುವರೆ,
ಕರ್ಮ ಕರ್ತನು ಈಶ್ವರನಾದಡೆ ಕರ್ಮನಿ ಶ್ವರಾಜ್ಞೆಯಿಂದೈದುವಡೆ,
ಆ ಕರ್ಮ ಕರ್ತನಹ ಈಶ್ವರನನು ಬ್ರಹ್ಮನ ಮೇಲ್ದಲೆಯನರಿದುದಲಾ.
ಆ ಕರ್ಮ ಆತನನೆಯ್ದುದುಮೆನಲು, ಅಹಂಗಾಗದು.
ವಿರಿಂಚನು ರಜೋಗುಣಹಂಕಾರದಿಂ
ಸುರ ಕಿನ್ನರ ಗರುಡ ಗಾಂಧರ್ವ ಸಿದ್ಧ ವಿದ್ಯಾಧರರು
ತಮ್ಮೊಳು ಬ್ರಹ್ಮವಾದದಿಂ ಸಂಪಾದಿಸಿ
ತಿಳಿಯಲರಿಯದೆ, ಬ್ರಹ್ಮನಂ ಬೆಸಗೊಳಲು,
ಬೊಮ್ಮವಾನೆನಲು, ಆ ಕ್ಷಣಂ ಗಗನದೊಳು ತೋರ್ಪ
ಅತ್ಯನುಪಮ ದೇದೀಪ್ಯಮಾನ ತೇಜಃಪುಂಜ ಜ್ಯೋತಿಲರ್ಿಂಗಾಕಾರಮಂ
ತೋರಲಾ
ಬ್ರಹ್ಮೇಶ್ವರರು ಆ ವಸ್ತುನಿದರ್ೆಶಮಂ ಮಾಳ್ಪೆನೆಂದು
ಪಿತಾಮಹನು ಚತುಸ್ಶಿರ ಮಧ್ಯದಲ್ಲಿ ಮೇಲ್ದಲೆಯಂ ಪುಟ್ಟಿಸಿ,
||ಶ್ರುತಿ|| `ಋತಂ ಸತ್ಯಂ ಪರಂ ಬ್ರಹ್ಮ’ಯೆಂದು ಋಗ್ಯಜುಸ್ಸಿನಲ್ಲಿ ನುತಿಸುತ್ತಂ ಇರಲು,
ಬ್ರಹ್ಮಾಧಿಪತಿ ತತ್ಪರ ಬ್ರಹ್ಮಶಿವ ಇತಿ ಒಂ, ಇತಿ ಬ್ರಹ್ಮಾ ಇತಿ.
ಇಂತೀ ಶ್ರುತಿ ಸಮೂಹವೆಲ್ಲವು ಶಿವನನೆ ಪರಬ್ರಹ್ಮವೆಂದು ಲಕ್ಷಿಸಿ,
ಮತ್ತತನದಿಂ ಮರದೂ ಅಬ್ರಹ್ಮವೆನಲುಂ
ದ್ರುಹಿಣನ ಮೇಲ್ದಲೆಯಂ ಅಪ್ರತಿಮ ತೇಜೋಮಯ ಲೀಲಾಲೋಲಾ ಶೀಲ
ದುಷ್ಟನಿಗ್ರಹಿ ಶಿಷ್ಟ ಪ್ರತಿಪಾಲಕನನೆಯಾಕ್ಷಣಂ,
ಘನರೌದ್ರ ಕೋಪಾಟೋಪಿಯೆನಿಸುವ ಕಾಲರುದ್ರಂ ಸಮೀಪಸ್ಥನಾಗಿದರ್ು,
ಜ್ಯೇಷ್ಠಾ ತರ್ಜನಾಂಗುಲಿ ನಖಮುಖದಿಂ ಛೇದಿಸಲು,
ವಿಧಿ ಭಯಾತುರನಾಗಿ `ಒಂ ನಮೋ ದೇವಾಯ ದೇವ್ಯೈ ನಮಃ,
ಸೋಮಾಯ ಉಮಾಯೈ ನಮಃ’
ಎಂದು ಸೋಮಾಷ್ಟಕದಿಂ ಸ್ತುತಿಸಿ, ನಮಿಸಿಯಜಿಸಿ ಮೆಚ್ಚಿಸಿ,
ಸ್ವಾಮಿ ಸರ್ವೆಶ್ವರ, ಯ್ಯೋಮಕೇಶ, ದೇವದೇವ ಮಹಾಪ್ರಸಾದ.
ಈ ಶಿರಮಂ ಬಿಸಾಟದಿರಿ, ಬಿಸಾಟಲು ಪುರತ್ರಯ ಜಗಮಳಿಗುತ್ತಂ ನಿಮಿತ್ತಂ
ಪರಮ ಕೃಪಾನಿಧಿ ಪರಬ್ರಹ್ಮ ಪರಂಜ್ಯೋತಿ ಪರಮೇಶ್ವರ ಪರಮಭಟ್ಟಾರಕ
ಪರಾತ್ಪರತರಸದಕ್ಷರ ಚಿನ್ಮೂರ್ತಿ ಸ್ವಯಂಭೋ
ಸ್ವಾತಂತ್ರೇಶ್ವರಾಯೆನುತ ಕೀರ್ತಿಸುತ್ತಿರಲು,
ಪರಬ್ರಹ್ಮ ನಿರೂಪದಿಂ ಕಾಲರುದ್ರನ ಕಪಾಲಮಂ ಧರಿಸಿದನಂದು.
ಇನ್ನೆಮಗಿದೆ ಮತವೆಂದು ಸರ್ವದೆ ತಾ ಗರ್ವ ಕಂಡೂಷಮಂ
ಉವರ್ಿಯೊಳೀಗಮೆ ತೀಚರ್ಿಪೆನೆಂದು
ಪಿಡಿದು ನಡೆದಂ ಭಿಕ್ಷಾಟನಕಂದು.
ಅಹಲ್ಯೆ ಸಾಯಿತ್ತಿದು, ಕರ ಹೊಸತು ಇನಿತರಿಂದ ಕಾಲರುದ್ರಂಗೆ
ಬ್ರಹ್ಮೇತಿಯಾಯಿತ್ತೆಂಬ ಕರ್ಮವಾದಿ ಕೇಳಾದಡೆ.
||ಶಾಮಶ್ರುತಿ|| `ತ್ವಂ ದೇವೇಷು ಬ್ರಾಹ್ಮಣಾಹ್ವಯಃದುನುಷ್ಯೋಮನುಷ್ಯೇಮ
ಬ್ರಾಹ್ಮಣಾಮುಪದಾವತ್ಯುಪದಾರತ್ಯಾ’ ಎನಲು,
`ಬ್ರಾಹ್ಮಣೋ ಭಗವಾನ್ ರುದ್ರಃ’ ಎನಲು,
`ಕ್ಷತ್ರಿಯಃ ಪರಮೋ ಹರಿಃ’ ಎನುತಿರಲು,
`ಪಿತಾಮಹಸ್ತು ವೈಶ್ಯಸಾತ್’ ಎನಲು,
ಬ್ರಾಹ್ಮಣೋತ್ತಮ ಬ್ರಾಹ್ಮಣಾದಿ ಪತಿ ಪರಬ್ರಹ್ಮವಿದ್ದಂತೆ.
ತಾನೆ ಪರಬ್ರಹ್ಮಮೆನಲಾ ವಿಧಿಯ ಶಿಕ್ಷಿಪದು ವಿದಿತವಲ್ಲದೆ ನಿಷೇಧವಲ್ಲ.
ಅದೆಂತೆನಲು, ಭೂಚಕ್ರವಳಯದೊಳು
ಭೂಮೀಶನು ಅನ್ಯಾಯಗಳ ಶಿಕ್ಷಿಸಿದ ಭೂರಕ್ಷಣ್ಯವು,
ಲೋಕಹಿತವಲ್ಲದೆ ದೋಷ ಸಾಧನಮೆಯೆಲ್ಲಾ,
ಪಾಪಿಗೆ ತಕ್ಕ ಪ್ರಾಯಶ್ಚಿತ್ತಮೆಂದುಂಟಾಗಿ.
ಇದು ಕಾರಣ, ಶಿಕ್ಷಯೋಗ್ಯನ ಶಿಕ್ಷಿಸಿದವದ
ದೋಷವಿಲ್ಲೆಂದು ಭಾಟ್ಠ(?) ದೊಳೊಂದು ಪಕ್ಷಮಿರೆ,
ಮತ್ತಮದಲ್ಲದೆ, ಅದೊಮ್ಮೆ ಹತ್ತುತಲೆಯವನಂ ಅತ್ಯುಗ್ರದಿಂ ವಂದಿಸಿದ ಶ್ರೀರಾಮಂಗೆ
ಬ್ರಹ್ಮಹತ್ಯಾ ಬ್ರಹ್ಮಕರ್ಮ ವಿದ್ಯಾಬ್ರಹ್ಮರಿಂದಾವಾವ
ಪ್ರಾಯಶ್ಚಿತ್ತದಿಂತೆಮ್ಮನೆ ಕೆಡದಿರಲು,
ಆ ರಾಮಂ ಆ ರಾವಣಹತ ದೋಷನಿರುಹರಣಕ್ಕಾವುದು ಕಾಣದಿರಲು,
ಶಂಭುಪೌರಾಣಿಕನೆಂಬ ನಾಮವಂ ತಾಳ್ದು, ಶಿವಂ ರಾಮಂಗೆ ಪ್ರತ್ಯಕ್ಷಮಾಗಿ,
ಈ ದೋಷಕ್ಕೆ ಲಿಂಗಪ್ರತಿಷ್ಠೆಯ ನಿರೋಹರಣಮೆಂದರುಪಿ,
ಅರಿದಾ ರಾಮಂಗಂ ಗಂಧಮಾದ ಪರ್ವತವೇ ಆದಿಯಾಗಿ,
ಅದನು ಕೋಟೆಯ ಅವಧಿಯಾಗಿ
ಶಿವಲಿಂಗಪ್ರತಿಷ್ಠೆಯಂ ಮಾಡೆ,
ರಾಮೇಶ್ವರಲಿಂಗಮೆನಿಪ್ಪ ನಾಮಾಂಕಿತದಿಂ ತಕವಕ ಮಿಗೆವರಿದು
ಸ್ವಾತ್ವಿಕಭಕ್ತಿಭಾವದಿಂದಚರ್ಿಸಿ ಸ್ತುತಿಸಿ,
ಭೂವಳಯದೊಳೆಲ್ಲಂ ಪ್ರದಕ್ಷಿಣ ಮುಖದಿಂ ಶಿವಲಿಂಗಾಲಯಮನೆತ್ತಿಸಿ,
ಅಂತಾ ಸಹಸ್ರಾವಧಿಯೆನಿಸುವ ದಶಗ್ರೀವ ವಧೆಯಂ ಪರಿಹರಿಸಿದ ಹಾಗೆ,
ಶ್ರೀಮನ್ಮಹಾದೇವನೂ ದೇವಾದಿದೇವನೂ ದೇವಚಕ್ರವರ್ತಿ ದೇವಭಟ್ಟಾರಕನೂ
ದೇವವೇಶ್ಯಾಭುಜಂಗನೂ ಸರ್ವದೇವತಾ
ನಿಸ್ತಾರಕನೂ ಸರ್ವದೇವತಾ ಯಂತ್ರವಾಹಕನೂ
ಒಂದಾನೊಂದೆಡೆಯಲ್ಲಿ ಮಹಾದೇವೇಶ್ವರನು ರುದ್ರೇಶ್ವರನು ಈಶ್ವರೇಶ್ವರನು
ಶಂಕರೇಶ್ವರನೆನಿಪ ನಾಮಂಗಳಿಂ,
ಭೂವಳಯದೊಳು ಲಿಂಗಪ್ರತಿಷ್ಠೆಯಂ ಬ್ರಹ್ಮಶಿರಚ್ಛೇದನ
ನಿಮಿತ್ಯನಂ ಮಾಡಿದುದುಳ್ಳಡೆ,
ಹೇಳಿರೆ ಕರ್ಮವಾದಿಗಳು.
ಅಂತುಮದಲ್ಲದೆಯುಂ ಆ ಉಗ್ರನಿಂದಂ ಪಿತಾಮಹಂ ಅವಧಿಗಡಿಗೆ ಮಡಿವುದಂ
ಕೇಳರಿಯಿರೆ.
ಅದಲ್ಲದೆಯುಂ, ದಕ್ಷಾಧ್ವರದೊಳಾ ದಕ್ಷ ಪ್ರಜಾಪತಿಯ ಶಿರವನರಿದು,
ಕರಿಯದಲೆಯನೆತ್ತಿಸಿದ.
ಅದಲ್ಲದೆಯುಂ ಸುತೆಗಳುಪಿದ ವಿರಂಚಿ ಹತಿಸಿದಂದು,
ಅದಲ್ಲದೆಯುಂ ಸಮಸ್ತದೇವತೆಗಳ ಆಹಾರ ತೃಪ್ತಿಗೆ ಬೇಹ ಅಮೃತತರನಂ
ಚರಣಾಂಗುಷ್ಠದಿಂದೊರಸಿದಂದು,
ಅದಲ್ಲದೆಯುಂ ವಿಷ್ಣು ತಾನೆಯೆನಿಪ ವಿಶ್ವಕ್ಸೇನನ ತ್ರಿಶೂಲದಿಂದಿರಿದೆತ್ತಿ
ಹೆಗಲೊಳಿಟ್ಟಂದು,
ಅದಲ್ಲದೆಯುಂ ಮತ್ಸ್ಯ ಕೂರ್ಮ ವರಾಹ ನಾರಸಿಂಹ ತ್ರಿವಿಕ್ರಮಾದಿಗಳಂ
ಮುಂದುವರಿದು ಕೊಂದಂದು
ಅದಲ್ಲದೆಯುಂ ದೇವಿದ್ವಿಜರಿಗೆ ಗುರುವೆನಿಸುವ ಪಾವಕನ ಏಳು ನಾರಿಗೆಗಳ
ಕೀಳುವಂದು,
ಅದಲ್ಲದೆಯುಂ ಯಜ್ಞವಾಟದೊಳು ಪ್ರಾಜ್ಞನೆನಿಸುವ ಪೂಶಾದಿತ್ಯನ ಹಲ್ಲ ಕಳದು,
ಭಾಗಾದಿತ್ಯನಂ ಮೀಂಟಿ ವಾಣಿಯ ಮೂಗಂ ಮಾಣದೆ ಕೊಯ,
ದೇವಮಾತೃಕೆಯರ ದೊಲೆ ನಾಶಿಕವ ಚಿವುಟಿದಂದು,
ಅದಲ್ಲದೆಯುಂ ಬ್ರಹ್ಮಾಂಡಕೋಟಿಗಳನೊಮ್ಮೆ ನಿಟಿಲತಟನಯನಂ ಲಟಲಟಿಸಿ
ಶೀಘ್ರದಿಂದ ಸುಡಲು,
ಸುರಾಸುರ ಮುನಿನಿವಹ ಹರಿಹಿರಣ್ಯಗರ್ಭರು ಶತಕೋಟಿ ಹತವಾದಂದು,
ಪ್ರೊರ್ದದಾ ಬ್ರಹ್ಮಹತ್ಯಂ ನಿರ್ಧರಮಾಗಿ ಬೊಮ್ಮನ ಮೇಲ್ದಲೆಯೊಂದ
ಚಿವುಟಿದುದರಿಂದಂ
ಒಮ್ಮೆಯ ಶೂಲಪಾಣಿಗೆ ಬ್ರಹ್ಮೇತಿಯಾದುದತಿಚೋದ್ಯ ಚೋದ್ಯ.
ಅವಲ್ಲದೆಯೂ ಬ್ರಹ್ಮ ಸಾಯನು.
ಅಂಗಹೀನಮಾದುದಲ್ಲದೆ ಹೋಗಲಾ ಸಾಮಾನ್ಯ ಚಚರ್ೆ ಕರ್ಮಗತ
ಕರ್ಮಿಯೆನಿಸುವ ನಿನ್ನ ಕರ್ಮವಾದವೆಲ್ಲಿಗೂ ಸಲ್ಲದು.
ಬ್ರಹ್ಮಮಸ್ತಧಾರಣ ಲೀಲಾಲೋಲ ಶೀಲಬ್ರಹ್ಮೇಶ್ವರ ಪರಬ್ರಹ್ಮ
ಶ್ರೀಮನ್ಮಹಾದೇವನ ನಾಮಕೀರ್ತನ ಮುತ್ರದಿಂದು ಬ್ರಹ್ಮಹತ್ಯಕೋಟಿಗಳುಂ
ಮಹಾಪಾತಕವಗಣಿತಂ ನಿರಿಗೆಣೆಯಾದಕೂಲಮಂ ಭರದೊಳನಲ
ಗ್ರಹಿಸಿದಂತಾಗುಮೆನೆ.
ಬ್ರಹ್ಮ ಪಂಚಬ್ರಹ್ಮಮೆನಲು ಬ್ರಹ್ಮಪಾಪಕಾಶಿಯೆನಲು,
ಶಿವಲಿಂಗ ದರ್ಶನ ಮಾತ್ರ ಬ್ರಹ್ಮಹತ್ಯವಳಿವವೆನಲು,
ಆ ಶಿವನೆ ಬ್ರಹ್ಮಹತ್ಯವೆ ಇದುಯೆಂಬುದು ಮೊಲನ ಕೋಡಿನಂತೆ.
ಇದು ಕಾರಣ, ಕರ್ಮ ಶಿವನಾಜ್ಞೆವಿಡಿದು ಕರ್ಮಿಯ ಗ್ರಹಿಸೂದು.
ಕರ್ಮಸಾರಿಯಲಿ ಕರ್ಮ ನಿರ್ಮಲಕರ್ಮ ಕಾರಣ ಕತರ್ೃವೆಂದರಿಯದಡೆ,
ಎಲೆ ಕರ್ಮವಾದಿ, ನಿನಗೆ ಗತಿ ಉಂಟೆಂದುದು,
ಬಸವಪ್ರಿಯ ಕೂಡಲಚೆನ್ನಸಂಗನ ವಚನ. || /64
ಮನಕ್ಕೆ ಮನ ಒಂದಾಗಿ, ಭಾವಕ್ಕೆ ಭಾವ ಒಂದಾಗಿ,
ನಚ್ಚಿ ಮಚ್ಚಿದ ಶರಣರ ದರುಶನವಾದ ಬಳಿಕ,
ಎತ್ತಲೆಂದರಿಯೆನಯ್ಯಾ ಲೌಕಿಕವ.
ಬಸವಪ್ರಿಯ ಕೂಡಲಚೆನ್ನಸಂಗಾ, ನಿಮ್ಮ ಶರಣ ಪ್ರಭುದೇವರಿಗೆ
ಶರಣೆಂಬುದಲ್ಲದೆ ಅನ್ಯವನೇನೆಂದೂ ಅರಿಯೆನು. /65
ಮನದಲ್ಲಿ ಲಿಂಗ ಘನವೆಂದಡೆ ಸಾಲದೆ ಅಯ್ಯಾ ?
ವಚನದಲ್ಲಿ ಜಂಗಮ ಘನವೆಂದಡೆ ಸಾಲದೆ ಅಯ್ಯಾ ?
ಮನಸಿನ ವಚನದ ದಿಟಕ್ಕೆ ದೂರವೆ ಅಪ್ರಮಾಣವೆ ಅಯ್ಯಾ ?
ಹಿತ್ತಿಲಲ್ಲಿ ನಿಧಾನವಿರ್ದಡೇನು ತೆಗೆದು ಭೋಗಿಸದನ್ನಕ್ಕರ ?
ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ, ಅವರಂದಂದಿಗೆ ದೂರವಯ್ಯಾ /66
ಮಾಯಾಕೋಳಾಹಳನೆಂಬ ಬಿರುದ ಸೂರೆಗೊಂಡರು ಪ್ರಭುದೇವರು.
ಯೋಗಾಂಗವ ಸೂರೆಗೊಂಡರು ಸಿದ್ಧರಾಮೇಶ್ವರದೇವರು.
ಭಕ್ತಿಸ್ಥಲವ ಸೂರೆಗೊಂಡು, ನಿತ್ಯಪವಾಡವ ಗೆದ್ದರು ಬಸವೇಶ್ವರದೇವರು.
ಷಟ್ಸ್ಥಲವ ಸೂರೆಗೊಂಡರು ಚನ್ನಬಸವೇಶ್ವರದೇವರು.
ಐಕ್ಯಸ್ಥಲವ ಸೂರೆಗೊಂಡರು ಅಜಗಣ್ಣದೇವರು.
ಶರಣಸತಿ ಲಿಂಗಪತಿಯಾದರು ಉರಿಲಿಂಗದೇವರು.
ಪ್ರಸಾದಿಸ್ಥಲವ ಸೂರೆಗೊಂಡರು ಬಿಬ್ಬಿ ಬಾಚಯ್ಯಂಗಳು,
ಜ್ಞಾನವ ಸೂರೆಗೊಂಡರು ಚಂದಿಮರಸರು.
ನಿರ್ವಾಣವ ಸೂರೆಗೊಂಡರು ನಿಜಗುಣದೇವರು.
ಪ್ರಸಾದಕ್ಕೆ ಸತಿಯಾದರು ಅಕ್ಕನಾಗಮ್ಮನವರು.
ಉಟ್ಟುದ ತೊರೆದು ಬಟ್ಟಬಯಲಾದರು ಮೋಳಿಗಯ್ಯನ ರಾಣಿಯರು.
ಪರಮ ದಾಸೋಹವ ಮಾಡಿ,
ಲಿಂಗದಲ್ಲಿ ನಿರವಲಯನೈದಿದರು ನೀಲಲೋಚನೆಯಮ್ಮನವರು.
ಪರಮವೈರಾಗ್ಯದಿಂದ ಕಾಮನ ಸುಟ್ಟ ಭಸ್ಮವ
ಗುಹ್ಯದಲ್ಲಿ ತೋರಿಸಿ ಮೆರೆದರು ಮಹಾದೇವಿಯಕ್ಕಗಳು.
ಗಂಡ ಸಹಿತ ಲಿಂಗದಲ್ಲಿ ಐಕ್ಯವಾದರು ತಂಗಟೂರ ಮಾರಯ್ಯನ ರಾಣಿಯರು.
ಇಂತಿವರು ಮುಖ್ಯವಾದ ಏಳುನೂರೆಪ್ಪತ್ತು ಅಮರ ಗಣಂಗಳ
ಶ್ರೀಪಾದವ ಅಹೋರಾತ್ರಿಯಲ್ಲಿ ನೆನೆನೆದು ಬದುಕಿದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./67
ಮಿಂಚುಬುಳು ಒಮ್ಮೆ ಪ್ರಚಂಡ ತೇಜೋಮಯ ಸೂರ್ಯಂಗೆ
ಸರಿಯಾದಂದು, ಹರಿ ಹರಂಗೆ ಸರಿಯಹನು.
ಕಹಿಬೇವಿನ ಕೊರಡು ಬಾವನ್ನ ಶ್ರೀಗಂಧಕ್ಕೆ ಸರಿಯಾದಂದು,
ವಿರಿಂಚಿ ಗಿರೀಶಂಗೆ ಸರಿಯಹನು.
ಅಜ್ಞಾನ ಸುಜ್ಞಾನಕ್ಕೆ ಸರಿಯಾದಂದು, ವಜ್ರಪಾಣಿ ಮೊದಲಾದ
ದೇವ ದಾನವ ಮಾನವರು ಶೂಲಪಾಣಿಗೆ ಸರಿಯಹರು.
ಏನ ಹೇಳುವೆ, ಅಜ್ಞಾನಿ ಜನರ ಅಜ್ಞಾನಪ್ರಬಲ ಚೇಷ್ಟೆಯನು ?
ಅದೆಂತೆಂದಡೆ: ಖದ್ಯೋತೋಯದಿ ಚಂಡಭಾನು ಸದೃಶಸ್ತುತ್ಯೋ ಹರಿಃ ಶಂಭುನಾ
ಕಿಂ ಕಾಷ್ಠಂ ಹರಿಚಂದನೇನ ಸದೃಶಂ ತುಲ್ಯೋಹಮೀಶೇನ ಚ |
ಅಜ್ಞಾನಂ ಯದಿ ವೇದನೇನ ಸದೃಶಂ ದೇವೇನ ತುಲ್ಯೋ ಜನಾ
ಕಿಂ ವಕ್ಷ್ಯೇ ಸುರಪುಂಗವಾ ಅಹಮಹೋಮೋಹಸ್ಯದುಶ್ಚೇಷ್ಟಿತಂ
ನಿಮಗೆ ಸರಿಯೆಂಬವರಿಗೆ ನರಕವೆ ಗತಿಯಯ್ಯಾ,
ಬಸವಪ್ರಿಯ ಕೂಡಲಸಂಗಮದೇವಾ./68
ಯುಗಜುಗಂಗಳ ಅಳಿವು ಉಳಿವನರಿಯದೆ,
ಹಗಲಿರುಳೆಂಬವ ನೆನಹಿನಲೂ ಅರಿಯದೆ, ಲಿಂಗದಲ್ಲಿ ಪರವಶವಾಗಿರ್ದ
ಪರಮಪರಿಣಾಮಿಯನೇನೆಂದುಪಮಿಸುವೆನಯ್ಯಾ ?
ಆಹಾ ! ಎನ್ನ ಮುಕ್ತಿಯ ಮುಕುರದ ಇರವ ನೋಡಾ.
ಆಹಾ ! ಎನ್ನ ಸತ್ಯದಲ್ಲಿ ಸ್ವಾನುಭಾವದ ಕಳೆಯ ನೋಡಾ.
ಆಹಾ ! ಅಷ್ಟತನುಗಳ ಪಂಗನಳಿದು, ನಿಬ್ಬೆರಗಾಗಿ ನಿಂದ ಚಿತ್ಸುಖಿಯ ನೋಡಾ.
ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ,
ಪರಮಪ್ರಸಾದಿ ಮರುಳಶಂಕರದೇವರ ನಿಲವ
ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು, ಬದುಕಿದೆನು./69
ರಾಜಸ ತಾಮಸಕೆ ಕೊಂಡವರ, ಭಕ್ತರೆಂದವರ,
ನೆಲೆಗೊಂಡಿರೆ ಸಲೆಯಾಗದು.
ಆಗಳಿಕೆ ಆಗಳು ಅವಮಾನವಹುದು,
ಮನೋವಿರೋಧವನು ಕಳೆಯಲುಬಾರದು.
ಅವರು ತಮ್ಮಾಸೆಗೆ ಅದು ಸುಖವೆನುತಿಪ್ಪರು.
ಬಂದ ಸಮಯವ ಕೈಕೊಂಡು, ಉಳ್ಳುದನೀವುದು ಕರಲೇಸು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./70
ಲಿಂಗ ಜಂಗಮ, ಜಂಗಮ ಲಿಂಗವೆಂಬುದನಾರು ಬಲ್ಲರು ?
ಬಸವಣ್ಣನಲ್ಲದೆ.
ಲಿಂಗಕ್ಕೆ ಆಧಾರವಿಲ್ಲವೆಂದು ಮತ್ರ್ಯಲೋಕಕ್ಕೆ ಬಂದು,
ಅವತರಿಸಿದನಯ್ಯಾ ಬಸವಣ್ಣನು.
ಲಿಂಗಮುಖ ಜಂಗಮವೆಂದರಿದು,
ತನ್ನನರ್ಪಿಸಿ, ಇದಿರ ತಪ್ಪಿಸಿ ಇರಬಲ್ಲನಯ್ಯಾ ಬಸವಣ್ಣನು.
ಅಂಗಮುಖವೆಲ್ಲ ನಷ್ಟವಾಗಿ,
ಭೃತ್ಯಾಚಾರವೆ ತನುವಾಗಿರಬಲ್ಲನಯ್ಯಾ ಬಸವಣ್ಣನು.
ಪ್ರಾಣನ ಕಳೆಯರತು ಜಂಗಮವೇ ಪ್ರಾಣವಾಗಿರಬಲ್ಲನಯ್ಯಾ ಬಸವಣ್ಣನು.
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ,
ಆಚಾರವೇ ಪ್ರಾಣವಾಗಿಪ್ಪ ಸಂಗನಬಸವಣ್ಣನೆ
ನಿಮಗೆ ಭಕ್ತನಯ್ಯಾ ಪ್ರಭುವೆ./71
ಲಿಂಗ ಮುಂತಾದ ಭಕ್ತನ ಅಂಗದ ಮೇಲಣ ಲಿಂಗ
ಹೋಯಿತ್ತೆಂದು ಸಂದೇಹವ ಮಾಡಿ,
ಶೈಲ ವಾರಿ ಪಾಶ ಶಸ್ತ್ರ ಸಮಾಧಿ ಎಂಬಿವ ಕೊಳಲಾಗದು.
ಅದೆಂತೆಂದಡೆ: ಭಕ್ತಸ್ಯ ಲಿಂಗದೇಹಸ್ಯ ತದೇಹಂ ಲಿಂಗವಜರ್ಿತಂ |
ಶಸ್ತ್ರ ಶೈಲಂ ಜಲಂ ಪಾಶಂ ಸಮಾಧಿಶ್ಚ ವಿವರ್ಜಯೇತ್ ||
ಎಂದುದಾಗಿ, ಇದಕ್ಕೆ ಮುಕ್ತಿಯನೆಯುವ ಪಥವೆಂತೆಂದಡೆ:
ನಿಶ್ಚಿತಂ ನಿರ್ಮಲಂ ಚೈವ ನಿಶ್ಚಲಂ ನಿರುಪಾಧಿಕಂ |
ಭುಕ್ತಿಮುಕ್ತಿಪ್ರದಾತಾಹ ಇತ್ಯತ್ವಂ ಶಿವಮಂದಿರಂ ||
ಎಂದುದಾಗಿ, ಧ್ಯಾನ ಧಾರಣ ಸಮಾಧಿಯಲ್ಲಿಹುದು.
ಅದೆಂತೆಂದಡೆ: ತಪೋ ಧ್ಯಾನಾಧಿಕಂ ಕುರ್ವನ್ ರುದ್ರಾಕ್ಷಂ ಧಾರಯನ್ ಸದಾ |
ಶಿವಮಂತ್ರಜಪಂ ಶ್ಚೈವ ಶಿವಲೋಕೇ ಮಹೀಯತೇ ||
ಇಂತೆಂಬ ಶ್ರುತಿಯ ಮೀರಿ, ಅಂಗಕ್ಕೆ ಆಸೆಯ ಮಾಡಿ,
ಲಿಂಗವ ಧರಿಸಿ ಪೂಜೆಯ ಮಾಡುವ ಶಿಷ್ಯ ಗುರುದ್ರೋಹಿ.
ಹಣವಿಗಾಸೆ ಮಾಡಿ ಲಿಂಗಧಾರಣ ಮಾಡುವ ಗುರು ಶಿವದ್ರೋಹಿ.
ಅದೆಂತೆಂದಡೆ: ಲಿಂಗಬಾಹ್ಯಕೃತಂ ದೃಷ್ಟ್ವಾ ಪುನಲರ್ಿಂಗಂತು ಧಾರಯೇತ್ |
ಪೂಜಾಯಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ ||
ಎಂದುದಾಗಿ, ಇಂತು ಇವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ, ವಿಭೂತಿ ರುದ್ರಾಕ್ಷಿ
ಪ್ರಣವ ಪಂಚಾಕ್ಷರಿ ಇಲ್ಲವಾಗಿ ಸತ್ಪಥಕ್ಕೆ ಸಲ್ಲರು ಕಾಣಿಭೋ.
ಇವರು ಕಂಡಕಂಡವರೊಡನೆ ಹರಿವ ಚಾಂಡಾಲಗಿತ್ತಿಯಂತೆ.
ಇವಂದಿರ ಮುಖವ ನೋಡಲಾಗದು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./72
ಲಿಂಗ ಮುಟ್ಟಿ ಆಚಮನ ಮಾಡುವರು ಲಿಂಗಾಂಗಿಗಳಲ್ಲದವರು.
ಮಾಡಿದಡೆಯೂ ಮಾಡಲಿ.
ಲಿಂಗ ಪಾದೋದಕವ ಧರಿಸಿ,
ಮರಳಿ ಅಪವಿತ್ರ ಶಂಕೆಯಿಂದ ಆಚಮನ ಮಾಡಿದಡೆ
ಅಘೋರನರಕದಲ್ಲಿಕ್ಕುವದಯ್ಯಾ, ಆ ಪಾದೋದಕವೆ ವಿಷವಾಗಿ.
ಅದೆಂತೆಂದಡೆ: ಶಂಭೋಃ ಪಾದೋದಕಂ ಪೀತ್ವಾ ಪಶ್ಚಾದಶುಚಿಶಂಕಯಾ |
ಯ ಆಚಮತಿ ಮೋಹೇನ ತಂ ವಿದ್ಯಾದ್ಬ್ರಹ್ಮ ಘಾತಕಂ ||
ಇಂತೆಂಬ ವಚನವ ಕೇಳಿ ನಂಬುವದಯ್ಯಾ.
ಪರಮಪಾವನವಪ್ಪ ಪಾದೋದಕವ ನಂಬದವರು,
ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ ದೂರ./73
ವದನದ್ವಾರಕ್ಕೆ ಗುದದ್ವಾರ ಸರಿಯೆಂದು,
ಗುದದ್ವಾರದಲ್ಲಿ ಬಂದುದ ವದನದ್ವಾರದಲ್ಲಿ ಕೊಂಬವಂಗೆ
ಹೋ ಹೋ ! ಹರಂಗೆ ಹರಿಯ ಸರಿಯೆನಬಹುದು.
ಯಾದಾಸ್ಯಾಪಾನಯೋಃ ಸಾಮ್ಯಂ ಇಂದ್ರತ್ವೇಪಿ ನ ವಿದ್ಯತೇ |
ತಥಾ ವಿಷ್ಣ್ವಾದಿ ಬುಧೈಸ್ತು ರುದ್ರಸಾಮ್ಯಂ ನ ವಿದ್ಯತೇ ||
ಇಂತೆಂದುದಾಗಿ, ಇದು ಕಾರಣ, ಹರಿವಿರಿಂಚಾದಿ ದೇವತೆಗಳನು
ಶಿವಂಗೆ ಸರಿಯೆಂದು ಗಳಹುವ ನರಕಿಗಳ ಬಾಯಲಿ
ಹುಳು ಸುರಿಯದಿಹವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?/74
ವಿಭೂತಿಯಿಂದೆ ಮಾಡಬಹುದು ಅಬರ್ುದಕೋಟಿ ಭಕ್ತರನಾದಡೆಯೂ,
ವಿಭೂತಿಯಿಲ್ಲದೆ ಮಾಡಿ ತೋರಿರೆ ಓರ್ವ ದ್ವಿಜನ ?
ವಿಭೂತಿಯಿಂದೆ ವಿಪ್ರನಾಗನೆ ಕಬ್ಬಿಲಿತಿಯ ಮಗ ವ್ಯಾಸನು ?
ವಿಭೂತಿಯಿಂದಗ್ರಜನಾಗನೆ ಕುಂಭಸಂಭವನು ?
ವಿಭೂತಿಯಿಂದೆ ಹಾರುವನಾಗನೆ ಊರ್ವಶಿಗೆ ಹುಟ್ಟಿದ ವಶಿಷ್ಠನು ?
ವಿಭೂತಿಯಿಂದೆ ವಿಶ್ವಾಮಿತ್ರ ಸದ್ಬ್ರಾಹ್ಮಣನಾಗನೆ ?
ಉವರ್ಿಯೊಳಗೆ ಮುಂಗಯ್ಯ ಕಂಕಣಕ್ಕೆ ಶುಭ್ರದರ್ಪಣವೇಕೆ ?
ವಿಭೂತಿಯನೊಲ್ಲದ ನಿರ್ಭಾಗ್ಯದ್ವಿಜರು,
ಸರ್ವಶಾಸ್ತ್ರ ಶ್ರುತಿ ಸ್ಮೃತಿ ಪುರಾಣ ಶಾಪಹತರೆಂದು
ಶ್ರುತಿಗಳು ಬೊಬ್ಬಿಡುತ್ತಿವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ./75
ವೇದ ನಾಲ್ಕನು ಓದಿದಡೇನು ? ಶಾಸ್ತ್ರವ ನೆರೆ ಕೇಳಿದಡೇನು ?
ಶಿವಜ್ಞಾನಹೀನರು ಬಲ್ಲರೆ ಭಕ್ತಿಯ ಪಥವನು ?
ಅಲೋಡ್ಯಂ ಚ ಚತುರ್ವೆದೀ ಸರ್ವಶಾಸ್ತ್ರವಿಶಾರದಃ |
ಶಿವತತ್ವಂ ನ ಜಾನಾತಿ ದವರ್ಿ ಪಾಕರಸಂ ಯಥಾ ||
ಕ್ಷೀರದೊಳಗಣ ಸಟ್ಟುಗ ಸವಿಸ್ವಾದುಗಳ ಬಲ್ಲುದೆ ?
ಓದಿದ ನಿರ್ಣಯವ ನಮ್ಮ ಮಾದಾರ ಚೆನ್ನಯ್ಯ,
ಮಡಿವಾಳಯ್ಯ, ಡೋಹರ ಕಕ್ಕಯ್ಯನವರು ಬಲ್ಲರು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./76
ವೇದಂಗಳೆಲ್ಲವು ಶಿವಲಿಂಗಧಾರಣ ಮಾಡಿಸಿಕೊಂಡವೆಂದು ಹೇಳುತ್ತಿದೆ ವೇದ.
ದೇವ ದಾನವ ಮಾನವ ಹರಿವಿರಿಂಚಿಗಳು ಮೊದಲಾಗಿ
ಲಿಂಗವ ಪೂಜಿಸಿದರೆಲ್ಲರು ನೋಡಾ.
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿರಿವರ್ಧನಂ |
ಉರ್ವಾರುಕಮಿವ ಬಂಧನಾನ್ಮೃತ್ಯೋಮರ್ು ಕ್ಷೀಯ ಮಾಮೃತಾತ್ ||
ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ./77
ವೇದವೆಂಬ ಅಂಜನವ ನೆಚ್ಚಿಕೊಂಡು,
ಶಿವನೆಂಬ ನಿಧಾನವ ಕಾಣಲರಿಯರೀ ದ್ವಿಜರು.
ನರಗುರಿಗಳೆತ್ತ ಬಲ್ಲರು ಹೇಳಾ ? ಯಜುರ್ವೆದ:
ತದ್ವಿಷ್ಣೋಃ ಪರಮಂ ಪದಂ ಸದಾಪಶ್ಶಂತಿಸೂರಯಃ
ಜ್ವಾಲಾಯ ನಮಃ ಜ್ವಲಲಿಂಗಾಯ ನಮಃ
ಶ್ರೀರುದ್ರಭಾಷ್ಯೇ: ಉತ್ತಮ ವೇದ ಭೂಶಿಕೋ ದೇವೋತ್ತುಮಾಭ್ಯಂ |
ಪ್ರಜವನಮಾಲಂಕೃತಂ ಜಗತ್ಕಾರಣತ್ವೇನ ಜ |
ನಯಾಮಸ ಶಿವಸಂಕಲ್ಪೋಪನಿಷದಿ
ಪರಾತ್ಪರತರೋ ಬ್ರಹ್ಮಾ ಪರಾತ್ಪರತರೋ ಹರಿಃ
ಯತ್ಪಪರಾತ್ಪರತತೋರೀಶ ತನ್ಮೇಃ ಮನಃ ಶಿವಸಂಕಲ್ಪಮಸ್ತು ||
ಇಂತೆಂದುದಾಗಿ, ಇದು ಕಾರಣ, ಪಾಪಿಂಗೆ ಪರಮಗತಿಯೇಕೊ,
ಕುರುಡಗೆ ಕನ್ನಡಿಯೇಕೋ,
ಶಿವನ ನಿಜತತ್ವವೇಕೊ ದ್ವಿಜರೆಂಬ ಅರೆಮರುಳುಗಳಿಗೆ
ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ ?/78
ಶಿವಂಗೆ ಅಜ ಹರಿ ಸುರರು ಸರಿಯೆಂದು
ಮನದಲ್ಲಿದು ಹೊರವಂಟಡೆ, ಸ್ತುತಿಸಿದಡೆ,
ಶಿವದ್ರೋಹಿ ಚಾಂಡಾಲ ಮಟ್ಟಲಾಗದೆಂದುದು ವೇದ.
ಮಾತ್ವಾರುದ್ರಚುಕ್ರುಧಾ ಮಾನವಮೋಭಿರ್ಮಾ
ದುಷ್ಟುತೀ ವೃಷಭ ಮಾಸ ಹೂತೀ |
ಉನ್ನೋ ವೀರಾಂ ಅರ್ಪಯ ಭೇಷಜೇ
ಭಿಭರ್ಿಷಿಕ್ತಮಂ ತ್ವಾಂ ಭಿಷಜಾಂ ಶೃಣೋಮಿ ||
ಎಂದುದಾ ಶ್ರುತಿ.
ಇದನರಿದರಿದು ಸರಿಯೆಂದು ನರಕಕ್ಕಿಳಿವಡೆ,
ಕಾರಣವಲ್ಲದು, ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ./79
ಶಿವಂಗೆ ಬ್ರಹ್ಮವಿಷ್ಣುಗಳು ಸರಿಮಿಗಿಲೆನಲಾಗಿ,
ಸುರಿಯವೆ ಬಾಯಲ್ಲಿ ಬಾಲಹುಳುಗಳು ?
ಧರೆ ಚಂದ್ರ ರವಿವುಳ್ಳನ್ನ ಬರ,
ಇರದೆ ಉರಿಯುತ್ತಿಪ್ಪರಯ್ಯಾ, ನರಕದ ಕಿಚ್ಚಿನಲ್ಲಿ.
ರುದ್ರಸ್ಯ ಬ್ರಹ್ಮವಿಷ್ಣುಭ್ಯಾಂ ನಾಧಿಕಂ ಪ್ರವದಂತಿ ಯೇ |
ತೇಷಾಂ ಪಾಪಸ್ಯ ಸಾಂಕರ್ಯಮಸ್ತೀತಿ ಮಮ ನಿಶ್ಚಯಃ ||
ಇದು ಕಾರಣ, ಹರಿಬ್ರಹ್ಮಾದಿ ಸುರರೆಲ್ಲರೂ
ನಿಮ್ಮ ಡಿಂಗರಿಗರೆಂದರಿದವರಿಗೆ ಪರಮಪದವಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./80
ಶಿವನ ಪ್ರಸಾದವಲ್ಲದೆ ಉಣಲಾಗದೆಂದುದು ವೇದ.
ಶಿವನ ಪಾದೋಕವಲ್ಲದೆ ಕೊಳಲಾಗದೆಂದುದು ವೇದ.
ಜಾಬಾಲ ಶಾಖಾಯಾಂ : ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ ರುದ್ರೇಣ ಘ್ರಾತಂ ಜಿಘ್ನಂತಿ |
ತಸ್ಮಾದ್ಬ್ರಾಹ್ಮಣಾಃ ಪ್ರಶಾಂತಮನಸಃ ನಿರ್ಮಾಲ್ಯಮೇವ ಭಕ್ಷಯಂತಿ
ನಿರ್ಮಾಲ್ಯಮೇವಸ್ನಪತಿ ||
ಎಂದುದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ./81
ಶಿವನಲ್ಲದೆ ಮತ್ತೆ ದೈವವಿಲ್ಲೆಂಬುದು ದಕ್ಷನ ಜನ್ಮವು ತಾನೆ ಹೇಳದೆ ಉಳ್ಳಡೆ?
ಕ್ರತುವೇನು ಕಾಯಲಾಗದೆ ಉಳ್ಳಡೆ ? ತಮ್ಮ ಶಿರಂಗಳು ಹೋಗೊಡಲೇಕೆ ?
ಈ ಕ್ರಮಂಗಳೆಲ್ಲ ಶಿವನೇ ಒಡೆನೆಂದುದು ಋಗ್ವೇದ.
ಅವೋ ರಾಜಾನಮಸ್ಯ ರುದ್ರಂ ಹೋತಾರಂ ಮದ್ವಸತ್ಯಯಜುಗಂ |
ರೋದಸ್ಯೋಃ ಅಗ್ನಿಂ ಪುರಾತನಯಿತೋರಚಿತಾದ್ವಿರಣ್ಯರೂಪಮವಸೇ ಯಜದ್ವಂ |
ಎಂಬ ಶ್ರುತಿಯಿದೆ ಇದು ಕಾರಣ,
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲದಿಲ್ಲಾ./82
ಶಿವಲಿಂಗದೇವರ ಪೂಜಿಸದೆ ಉಂಬವರೆಲ್ಲರೂ
ಹೆಣನ ಮಲವನು ಒಂದಾಗಿಯೆ ತಿಂಬರಯ್ಯಾ,
ಅಲ್ಲಿ ಏನೂ ಸಂದೇಹವಿಲ್ಲಾಗಿ. ಶಿವಧರ್ಮ:
ಯಸ್ತು ಲಿಂಗಾರ್ಚನಂ ತ್ವಕ್ತ್ವಾಭುಙ್ತೇ ಕ್ರಿಮಿಕೀಟಮಾಂಸಾನ್ |
ನರೋ ನರಕಗಾಮೀ ಸ್ಯಾತ್ಸರ್ವಲೋಕಬಹಿಷ್ಕೃತಃ ||
ಅಕೃತ್ವಾ ಪೂಜನಂ ಶಂಭೋ ಯೋ ಭುಙ್ತೀ ಪಾಪಕೃದ್ವಿಜಃ |
ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ ||
ಎಂದುದಾಗಿ, ಇದು ಕಾರಣ, ನಿಮ್ಮ ನಂಬಲರಿಯದ ಪಾಪಿಗಳಿಗೆ
ಎಂದೆಂದಿಗೂ ನರಕ ತಪ್ಪದು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./83
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ
ಎಂಬುದು ವೇದವೇ ಅಲ್ಲ.
ಪ್ರತ್ಯಕ್ಷ ನಿಲ್ಲು, ಮಾಣು.
ಸಂಜೆ ಸಾವಿರಪಾಠವೆಂಬಲ್ಲಿಯೆ ತಾನು ಕಟ್ಟುಕ.
ವೇದವೆರಡುಂಟೆ, ದೈವವೆರಡುಂಟೆ ? ಒಂದೆಯಲ್ಲದೆ.
ಧ್ಯಾನ ಪೂಜಿಯೊಂದೆಯಲ್ಲದೆ ಎರಡುಂಟೆ ?
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ತೆ’ ಎಂಬ ಶ್ರುತಿಯಿರಲು,
ಶಿವನೊಬ್ಬನಲ್ಲದೆ ಇಬ್ಬರುಂಟೆ ?
`ಶಿವ ಏಕೋ’ ಧ್ಯೇಯಶ್ಶಮಕರಸ್ಸರ್ವಮನ್ಯತ್ ಪರಿತ್ಯಜೇತ್’
ಎಂದುದಾಗಿ, ವೇದವೆರಡುಂಟೆಂದು ಹೇಳಿ,
ತೋರುವವನ ಬಾಯಲಿ ಎಡದ ಕಾಲ ಕೆರ್ಪನಿಕ್ಕುವೆ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./84
ಶ್ರವವೆತ್ತಿ ನಡೆವಾಗ ಸ್ಮಶಾನವೈರಾಗ್ಯವಹುದು.
ಪುರಾಣಂಗಳ ಕೇಳುವಲ್ಲಿ ಪುಸ್ತಕವೈರಾಗ್ಯವಹುದು.
ನೆಟ್ಟನೆ ಶರಣಚಾರಿತ್ರವ ಕೇಳುವಲ್ಲಿ ಮರ್ಕಟವೈರಾಗ್ಯವಹುದು.
ಏನನೋದಿಯೂ ಏನ ಕೇಳಿಯೂ ಏನೂ ಫಲವಿಲ್ಲ.
ಹಿಂದೆ ಸತ್ತುದ ಕೇಳುತ್ತಿದೇನೆ.
ಮತ್ತೆಯೂ ಎನ್ನ ಅನ್ವಯದವರು ಅಲಿವುದ ಕಾಣುತ್ತಿದೇನೆ.
ಶುನಕ ಬೂದಿಯೊಳು ಮಲಗಿರ್ದಲ್ಲಿ ತನ್ನಾದಿಯ ನೆನೆದು,
ದೇಹದಿಚ್ಛೆಯ ಹಳಿದು, ಜನನ ಜಾಡ್ಯವ ಪರಿವೆನೆಂದು ಯೋಚಿಸುತ್ತಿರಲು,
ಮೆಲ್ಲನೆ ನಿದ್ರೆ ತಿಳಿಯಲು, ಆಗ ತನ್ನಾದಿಯ ಮರೆದು,
ಭ್ರಾಂತೆಡೆಗೊಂಡು, ಕಿವಿಯ ಕೊಡಹುತ್ತ ಹಡಿಕೆಗೆ ಹರಿವಂತೆ ಎನ್ನ ಮುಕ್ತಿ.
ಇಂತಪ್ಪ ಅನುಕ್ತಿಯನಳಿದು, ದೇಹದಿಚ್ಛೆಯ ಹಳಿದು,
ಪರಮವಿರಕ್ತಿಯನಿತ್ತು ರಕ್ಷಿಸಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./85
ಶ್ರೀಗುರುವಿನ ಕಾರುಣ್ಯದಿಂದ ಕರಸ್ಥಲಕ್ಕೆ ಪ್ರತ್ಯಕ್ಷವಾಗಿ,
ಶಿವಲಿಂಗವ ಬಿಜಯಂಗೈಸಿ, ಸರ್ವಾಂಗವೆಲ್ಲವನು
ಲಿಂಗಸ್ಪರುಶನವ ಮಾಡಿಕೊಟ್ಟ ಬಳಿಕ,
ಲಿಂಗಾಂಗನೆಯರು ಹೊಲೆಗಂಡೆನೆಂದು ತೊಲಗಲಾಗದು.
ಹೊಲತಿ ಲಿಂಗವ ಮುಟ್ಟಿ ಪೂಜಿಸಲಾಗದು.
ಅದೆಂತೆಂದಡೆ: ಲಿಂಗಾರ್ಚನರತಾ ನಾರೀ ಸೂತಕಸ್ಯಾ ರಜಸ್ವಲಾ |
ರವಿರಗ್ನಿರ್ಯಥಾ ವಾಯು ತಥಾ ಕೋಟಿಗುಣಃ ಶುಚಿ ||
ಮತ್ತಂ,
ಪೂಜಲೋಪೋನ ಕರ್ತವ್ಯಃ ಸೂತಕೇ ಮೃತಕೇಪಿವಾ |
ಜಲಬುದ್ಬುದವದ್ದೇಹಂ ತಸ್ಮಾಲ್ಲರ್ಿಂಗಂ ಸದಾರ್ಚಯೇತ್ ||
ಎಂದುದಾಗಿ, ಇದು ಕಾರಣ,
ಅಂಗದ ಮೇಲೆ ಲಿಂಗವುಳ್ಳ ಭಕ್ತಾಂಗನೆಯರಲ್ಲಿ
ಹೊಲೆಸೂತಕವ ಕಲ್ಲಿಸುವ[ವ]ರಿಗೆ ಗುರುಲಿಂಗವಿಲ್ಲವಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./86
ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ, ಆ ತಪಸ್ಸಿನ ಸಿದ್ಧಿ ಬಯಲು.
ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ, ಆ ದೀಕ್ಷೆಯೆಲ್ಲ ಬಯಲು.
ಶ್ರೀವಿಭೂತಿಯ ಬಿಟ್ಟು ಮಂತ್ರಂಗಳ ಸಾಧಿಸಿದೆಡೆ,
ಆ ಮಂತ್ರಸಿದ್ಧಿಯು ಬಯಲು.
ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ, ಆ ಯಜ್ಞಸಿದ್ಧಿಯು ಬಯಲು.
ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ,
ಆ ದೇವತಾರ್ಚನಾಸಿದ್ಧಿಯೂ ಬಯಲು.
ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ, ಆ ವಿದ್ಯಾಸಿದ್ಧಿಯು ಬಯಲು.
ಶ್ರೀವಿಭೂತಿಯ ಬಿಟ್ಟು ವೇದವ ಪಠಿಸಿದಡೆ, ಆ ವೇದಸಿದ್ಧಿಯು ಬಯಲು.
ಅದೆಂತೆಂದಡೆ:ಲೈಂಗೇ-
ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ |
ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮ್ಯವಜರ್ಿತಂ ||
ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ,
ನಿಮ್ಮ ದಿವ್ಯಾಲಂಕಾರಮಪ್ಪ ದಿವ್ಯಭಸಿತವ ಬಿಟ್ಟ
ಪಂಚಮಹಾಪಾತಕಂಗೆ ಆವ ಕಾರ್ಯವೂ ಸಿದ್ಧಿಯಿಲ್ಲ./87
ಶ್ರುತ್ಯಾಗಮ ಶಾಸ್ತ್ರಾದಿಗಳು ದೈವವಲ್ಲದಿರಲಾ, ಸ್ವರ್ಗಮೋಕ್ಷಂಗಳಿಗೆ
ಶ್ರುತ್ಯಾಗಮ ಶಾಸ್ತ್ರಪ್ರಮಾಣ ಸಾಧನವೆಂಬ ಕರ್ಮವಾದಿಗಳಿಗೆ
ನಿರುತ್ತರೋತ್ತರವ ಕೇಳಿರೆ : || ಶ್ರುತಿ || `ಜ್ಯೋತಿಷ್ಠೋಮೇನ ಸ್ವರ್ಗಕಾಮೋ ಯಜಜೇತ’ ಎಂಬ
ವೇದವಾಕ್ಯದ ಬಲುಮೆವಿಡಿದು ನುಡಿವರೆ,
ಯಜ್ಞದಿಂದ ಸ್ವಗರ್ಾಪೇಕ್ಷಿತನು ಅಗ್ನಿಯನೆ ಪೂಜಿಸುವಯೆಂದು,
ಕ್ರಿಯಾಕರ್ಮವೆ ದೈವವೆಂದು, ತಾನು ಮಾಡಿದ ಕರ್ಮ ಫಲವು
ತನಗೆ ಅನುಭವಿಸಲುಳ್ಳದೆಂದು,
ಕರ್ಮಕ್ಕೆ ಕತರ್ೃತ್ವವನ್ನು ಕೆಲಬರು ಕರ್ಮವಾದಿಗಳು ಹೇಳುತ್ತಿಹರು.
ಅಹಂಗಲ್ಲ, ಕರ್ಮವೆ ಶರೀರದಿಂದನುಭವಿಸಲುಳ್ಳರಾಗಿ ವರ್ತಿಸುತ್ತಿಹುದೊ,
ಅಲ್ಲ, ಮತ್ತಾ ಶರೀರಕ್ಕೆ ಕರ್ಮವೆ ಅನಾದಿಯಹುದೊ,
ಈ ಕರ್ಮಕ್ಕೆ ಕಾಯಂಗಳೆರಡು ಜೀವಾತ್ಮನನು ಒಂದೆಬಾರಿಯಯಿದಿದೊ.
ಈಹಿಂಗೆಂದು ಕೆಲಬರು ತರ್ಕಿಸುವರು. ಅದು ಹಂಗಾಗದಿಹುದಲ್ಲದೆ,
ಆ ಕರ್ಮವು ಕ್ಷಣಿಕವಾಗಿಯೂ ಅಚೇತನವಾಗಿಯೂ
ನಿಗರ್ುಣವಾಗಿಯೂ ಕಾಣಲುಳ್ಳದಾಗಿ,
ಅದು ಮಾಡುವಾತನನುಯೆ ಹಾಂಗೆಯಿಹುದು.
ಆಕರ್ತನು ಆವನೊಬ್ಬನು ಅಪರಾಧವ ಮಾಡಿದವ, ಮಾಡಿದ ಪುರುಷನು
ಆ ಅಪರಾಧಕ್ಕೆ ತಕ್ಕುದಾದ ಶಿಕ್ಷೆಯನು ತನಗೆ ತಾನೆ ಮಾಡಿದನೊಯೇನು ಅಲ್ಲ.
ಮತ್ತೆ ಆ ಅಪರಾಧವೆ ಸಂಕಲಿಯಾಗಿ, ಆ ಅಪರಾಧಿಯ ಕಾಲ ಬಂದಿಸುಹವನು.
ಮಾಡೊದೊಯೇನು ಅಲ್ಲ.
ಮತ್ತೆ ಆ ಅಪರಾಧಿಗೆ ಕರ್ಮಿಗೆ ಆ ಕರ್ಮವನು ಸಂಘಟಿಸಲು,
ಕರ್ಮಾಧೀನನಲ್ಲದಾತನಾಗಿ, ಸ್ವತಂತ್ರನಾಗಿ,
ಸರ್ವೆಶ್ವರ ಎಲ್ಲದಕ್ಕೂ ಒಡೆಯನಾಗಿ,
ಸರ್ವಗತನಾಗಿ ಸರ್ವಗತನಾದ ಶಿವನು ಉಂಟಾಗಿ
ಕರ್ಮಕ್ಕೆವೂ ಕರ್ಮಿಗೆವೂ ಕತರ್ೃತ್ವವಾಗದು.
ಈಹಿಂಗಾಂಗದಿಹುದೆ ಪೂರ್ವಮೀಮಾಂಸವನು ಹೇಳುವ ಒಬ್ಬುಳಿಯ ಕರ್ಮಂಗಳು
ಬೇರೆ ಬೇರೆ ಆರು ಕೆರಂಗಳಾಗುತಿಹವು. ಅವಾವೆನಲು,
ಅಮಾವಾಸ್ಯೆ ಹುಣ್ಣಿಮೆಗಳಲಿ ಪಿತೃಕಾರ್ಯ ಮೊದಲಾದ
ಕರ್ಮಂಗಳ ಮಾಡಬೇಕಾದುದರಿಂದ
ಒಂದಾನೊಂದು ಸಂಸ್ಕಾರವನ್ನು ಸಂಘಟಿಸುತ್ತಿಹವು.
ಆ ಸಂಸ್ಕಾರರೂಪಂಗಳಾದ ಆರು ಅಪೂರ್ವಂಗಳಾಗುತ್ತಿಹವು.
ಅವು ಬೇರೊಂದು ಪ್ರಮಾಣದಿಂದ ಪೂರ್ವಮಾಗಿ ಉತ್ಕೃಷ್ಟವಾದ
ಅಪೂರ್ವವನ್ನು ಹುಟ್ಟಿಸುತ್ತಿಹವು.
ಆ ಉತ್ಕೃಷ್ಟವಾದ ಪೂರ್ವದಿಂದ ಮಾತಲುಳ್ಳ ಫಲದ ಕಡೆವು.
ಅದೇ ದೈವವೆಂದು ಕಾಣಬಾರದೆಂದು,
ಕರ್ಮವೆಂದು ನಾಮ ಮೂರಾರದವರಿಂದ
ದೇಹಾಂತರ ಲೋಕಾಂತರ ದೇಶಾಂತರ ಕಾಲಾಂತರಗಳಲ್ಲಿ
ಅದು ಆತಂಗೆ ಅನುಭವಿಸಬೇಕಾದ ಫಲಂಗಳನು
ಕೊಡುತ್ತಿಹುದೆಂಬ ವಚನ ವ್ಯರ್ಥವು.
ಅದು ಹೇಗೆಂದಡೆ,
ಜಡಸ್ವರೂಪವಾದ ಕರ್ಮವು ದೇಹಾಂತರ ಮೊದಲಾದವರಲ್ಲಿ
ಆ ಫಲವನು ಕೊಡಲು ಸಮರ್ಥವಲ್ಲದಿಹುದೆ.
ಈಹಿಂಗಾಗಿ ಒಡೆಯನನು ತೊಲಗಿಸಿ, ಕರ್ಮಫಲವನು ಕೊಡವದಹುದೆ.
ಅಹಂಗಾದಡೆ, ಜೈನ ಬೌದ್ಧ ಭಾಷಾದಿ (?) ಕರ್ಮವಾದಿಗಳ
ಜಪತಪದಾನಧರ್ಮಫಲಂಗಳು ವ್ಯರ್ಥಂಗಳಾಗುತಿರಲು,
ಅವು ಪುಷ್ಟಿವರ್ಧನಭೂತವಾದ ಭೋಜನಕ್ರಿಯೆಗಳಿಂದಯೆಹಾಹಂಗೆ
ಮರಣವು ಆಯಿತ್ತು.
ಅಹಂಗೆ ಒಂದೆ ಕರ್ಮವು ಫಲವು ಕೊಡಲು ಸಮರ್ಥವಲ್ಲ.
ಅಹಂಗಾಗದಿಹುದೆ ಭೋಜನವ ಮಾಡಿದ ಮಾತ್ರವೆ
ಪುಷ್ಟಿಯಾಗುತ್ತಿಹುದು ಮರಣವಿಲ್ಲದಿಹುದು.
ಹಿಂಗಲ್ಲವೊ ಎಂದಡೆ, ಕೆಟ್ಟ ಕರ್ಮವುಯೆಯ್ದಿತ್ತು.
ಉಂಡದರೊಳಗೆ ಸಿಲ್ಕಿದ ಅನ್ನವು ವಿಷವಹುದಲಾ.
ಪುಷ್ಟಿಯ ತೊಲಗಿಸಿ ಮರಣವನು ಅಹಂಗೆ ಕೊಡುತ್ತಿರದು.
ಇದು ಕಾರಣ, ಸರ್ವಗತನಾದ ಶಿವನು ಅರಿಕರ್ಮಕ್ಕೆ
ತಕ್ಕ ಫಲವ ಕೊಡುವಾತನು.
ಹಿಂಗಾಗಿರಲಿ, ಕರ್ಮಕ್ಕೆ ತಾನೆ ಕತರ್ೃತ್ವವಾಗುಹವು, ಆಗುತ್ತಿರದು.
ಮತ್ತೆಯೂ ದೃಷ್ಟಾಂತರ ಸರಳು ಬಿಲ್ಲಕಾರನಿಲ್ಲದೆ
ತಾನು ಗುರಿಯ ತಾಗೂದೆಯೇನು ?
ಅಹಂಗೆ, ಕರ್ಮವು ಶಿವಪ್ರೇರಣೆಯಿಲ್ಲದೆ
ಅಕರ್ಮಿಗೆ ಮೇಲುಕೀಳಾದ ಕರ್ಮಫಲವನು
ತಾನೆ ಕೊಡಲು ಸಾಮಥ್ರ್ಯವಿಲ್ಲ, ತಪ್ಪದು. ವಾಯುವ್ಯದಲ್ಲಿ :
ಅಜ್ಞೋ ಜಂತುರನೀಶೋಯಮಾತ್ಮನಃ ಸುಖದುಃಖಯೋಃ |
ಈಶ್ವರಃ ಪ್ರೇರಿತೋ ಗಚ್ಛೇತ್ಸ್ವರ್ಗಂ ವಾ ಶ್ವಭ್ರಮೇವ ವಾ ||
ಅದು ಕಾರಣ, ಅರಿಯದವನಾಗಲಿ ಅಯಂ ಜಂತು-ಈ ಪ್ರಾಣಿ, ಆತ್ಮನಃ-ತನ್ನ,
ಸುಖದುಃಖಯೋಃ-ಸುಖದುಃಖಂಗಳಿಗೆ, ಅನಿಶಃ-ಒಡೆಯನಲ್ಲ.
ಈಶ್ವರ ಪ್ರೇರಿತ ಶಿವನು ಪ್ರೇರಿಸಲುಳ್ಳವನಾಗಿ,
ಸ್ವರ್ಗವನಾದಡೂ ನರಕವನಾದಡೂ ಎಯ್ದುವನು.
ನಾಭುಕ್ತ ಕ್ರಿಯತೇ ಕರ್ಮ ಕಲ್ಪಕೋಟಿಶತೈರಪಿ |
ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ ||
ಇವು ಮೊದಲಾದ ವಚನ ಪ್ರಮಾಣದಿಂದ ಕರ್ಮವು ಕಲ್ಪಕೋಟಿ
ಶತಂಗಳಿಂದಡಾ ಅನುಭವಿ…..ತಿರದು.
ಮಾಡಲುಳ್ಳದಾಗಿ ಮೇಲು ಕೀಳಾದವು.
ಏನ ಮಾಡಿಯೂ ಅನುಭವಿಸಬೇಕಾದುದು,
ಈಹಿಂಗೆಂಬ ವಚನವು ವ್ಯರ್ಥ ಪೋಗುತ್ತಿಹುದು.
ಅದು ಹೇಂಗೆಯಾಯೆಂದಡೆ :ವಾಯವ್ಯದಲ್ಲಿ-
ಅಹೋವಿಪಯರ್ಾಸಶ್ಚೇ ಮೇದೋ ಯಾವದ್ವರಂ ಯಜಮಾನ ಸ್ವಯಂ ದಕ್ಷಃ |
ಬ್ರಹ್ಮಪುತ್ರ ಪ್ರಜಾಪತಿಃ ಧರ್ಮಾದಯಃ ಸದಸ್ಯಾಶ್ಚ
ರಕ್ಷಿತಾ ಗರುಡಧ್ವಜಃ ಭಾನಾಶ್ಯಪ್ರತಿಗ್ರುಣ್ವಂಕ್ತಿ ಸಾಕ್ಷಾದಿಂದ್ರಾದಯಸ್ವರಾಃ
ತಥಾಪಿ ಯಜಮಾಸ್ಯದಕ್ಷಸ್ಯಾ ದಾಹಂರ್ತಿಜಃ
ಸದ್ಯಯೇವ ಶಿರಶ್ಛೇದ ಸಾದುಸಂಪದ್ಯತೇ ಫಲಂ
ಕೃತ್ವಾತು ಸಮಹತ್ಪುರಣ್ಯಾಮಿಷ್ಟ ಯಶಶತೈರಪಿ
ನ ತತ್ಫಲಮವಾಪ್ನೋತಿ ಭಕ್ತಿಹೀನೋ ಯದೀಶ್ವರೇ |
ಈ ಅರ್ಥದಲ್ಲಿ ಸತ್ಪುರುಷರ ವೇದದಿಂದರಿಯಲು,
ತಕ್ಕುದಾದ ಆಚಾರವನು ಬಿಟ್ಟು ಒಡನೆ ಹುಟ್ಟಿದುದಾದ
ತನ್ನವರೆಂಬ ಸ್ನೇಹದಲ್ಲಿ ಹುಟ್ಟಿದುದಾ[ದ] ಚರಣವನ್ನು ಬಿಟ್ಟು,
ಅಪಾಯರಹಿತವಾಗಿ ಪ್ರಮಥಪದವಿಯನು ಎಯ್ದಿದನು.
ಈಹಿಂಗಾಗಿಯೇ, ಬರಿಯ ಕರ್ಮಕ್ಕೆ ಕತರ್ೃತ್ವವುಂಟಾಗುತಿಹುದೆ ?
ಚಂಡೇಶ್ವರನಿಂದ ತನ್ನ ತಂದೆಯಾದ ಬ್ರಾಹ್ಮಣನ ಕಾಲುಗಳ ತರಿದಲ್ಲಿ,
ಆ ದೋಷಫಲವುಯಹಂಗೆ ಇಲ್ಲವಾಯಿತ್ತು.
ಮಾಮನಾದೃತ್ಯ ಪುಣ್ಯಂ ವಸ್ಯಾಂತ್ಪ್ರತಿಪಾದಿನಃ |
ಮನ್ನಿ ಮಿತ್ತಕೃತಂ ಪಾಪಂ ಪುಣ್ಯಂ ತದಪಿ ಜಾಯತೇ ||
ಇದು ಶಿವನ ನುಡಿ, ಮಾರಿಯೆನ್ನನು ಕೈಕೊಳ್ಳದ ಪುಣ್ಯವಾದಡೆಯು,
ಮಾಡುವವಂಗೆ ಪಾಪವು ಅಹುದು.
ನಾನು ನಿಮಿತ್ತ ಮಾಡಿದ ಪಾಪವಾಯಿತ್ತಾದಡೆಯು ಸುಕೃತವಾಗುತ್ತಿಹುದು.
`ಉಪಕ್ರಮ್ಯ ಕರ್ಮಾದಿ ಪತಿತ್ವ ವಿರುಪಾಕ್ರೋಸ್ಥಿತಿ ಸರ್ವಕರ್ಮಾದಿ ಪತಿಃ’
ಮತ್ತೆ ಉಪಕ್ರಮಿಸಿ ಕರ್ಮಂಗಳಿಗೊಡೆಯನು ಪರಮೇಶ್ವರನು ಉಂಟೆಂಬ
ವೇದವು ಮೊದಲಾದ ವಾಕ್ಯಪ್ರಮಾಣದಿಂದ,
ನಾನಾ ಪುರಾಣ ವಚನ ಪ್ರಮಾಣದಿಂದ
ಸಮಸ್ತ ಕರ್ಮಂಗಳಿಗೊಡೆಯನು ಶಿವನು.
ಆ ಶಿವನ ತೊಲಗಿಸಿ, ಬರಿಯ ಕರ್ಮಕ್ಕೆ ಕರ್ತನಾಗುಹವು ಇಲ್ಲದಿರುತ್ತಿಹುದು.
ಇದನರಿದು, ಎಲೆ ಕರ್ಮವಾದಿಗಳಿರಾ,
ಸಕಲಕರ್ಮಕ್ಕೆ ಶಿವನೆ ಕರ್ತುವೆಂದರಿದಿರಾದಡೆ,
ಬಸವಪ್ರಿಯ ಕೂಡಲಚೆನ್ನಸಂಗ
ನಿಮಗೆ ಸುಕರ್ಮ ಫಲವನು ಕೊಡುವ ಕಂಡಿರೆ./88
ಷಡಾಧಾರಚಕ್ರದ ಗಡಣೆಯನರಿದು, ಷಡಕ್ಷರವ ಏಕಾಕ್ಷರವ ಮಾಡಿ,
ಒದಗಿಹ ಲಿಂಗ ಒಂದೆಂಬುದನರಿದಡೆ, ಮೃಡಭಕ್ತರೊಳಧಿಕ
ಬಸವಪ್ರಿಯ ಕೂಡಲಚೆನ್ನಸಂಗಮದೇವನ ಶರಣ./89
ಸಂಸಾರವ ಉತ್ತಾರವನ್ನು ಮಾಡುವನಾವವೇಳೆಯಾದುದು ವೇದ.
ಒಂ ನಮಸ್ತಾರಾಯ ನಮಶ್ಶಂಭವೇ ಚ ವಯೋಭವೇ ಚ |
ನಮಶ್ಶಂಕರಾಯ ಚ ಮಯಸ್ಕರಾಯ ಚ ನಮಶ್ಶಿವಾಯ ||
ಈ ಪರಿಯಲ್ಲಿ, ಶಿವಯೇಕೋದೇವನೆಂದು ನೆನೆದು ಬದುಕಿ,
ಬಸವಪ್ರಿಯ ಕೂಡಲಚೆನ್ನಸಂಗನ./90
ಸಕಲೇಂದ್ರಿಯಕ್ಕೆಲ್ಲಾ ನಾಯಕವಪ್ಪ ಮನಕ್ಕೆ
ಇದೆ ವಿಧಿಯೆಂದು ಹೇಳಿತ್ತು ವೇದ.
ಶಿವನ ನೆನೆವುದು, ಶಿವನ ಭಜಿಸುವುದು,
ಮತ್ತನ್ಯದೈವವ ನೆನೆಯಲಾಗದೆಂದುದು ಋಗ್ವೇದ.
ತಮುಷ್ಟುಹಿಯಸ್ವಿಷುಸ್ಸುದಂ ಸ್ವಾಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ |
ಯಕ್ಷಾಮಹೀಸಾಯ ರುದ್ರಂ ನಮೋಬೇಧರ್ಿ ವಮಸುರುಮವಸ್ಯ |
ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯಾ./91
ಸನ್ಯಾಸಿಯಾದಡೂ ತ್ರಿಸಂಧ್ಯಾಕಾಲದಲ್ಲಿ
ಶ್ರೀವಿಭೂತಿಯ ಧರಿಸಬೇಕೆಂದುದು ವೇದ.
ಬಳಿಕಲೊಂದು ದಿವ್ಯಸ್ಥಾನದೊಳಗೆ ಶಿವಧ್ಯಾನದಲಿರಬೇಕೆಂದುದು ವೇದ.
ಅದೆಂತೆಂದಡೆ : ಯತೀನಾಂ ಭಸ್ಮಂ ತ್ರಿಸಂಧ್ಯಾಯಾಮುದ್ಧೂಲಯೇತ್ |
ದಿವ್ಯಸ್ಥಾನೇ ಶಿವಂ ಧ್ಯಾಯೇತ್ |
ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯಾ,
ಶ್ರೀವಿಭೂತಿಯೆ ಪರಮಗತಿ ಸಾಧನ./92
ಸಾಮವೇದಿಗಳು ಶ್ವಪಚಯ್ಯಗಳ ಹಸ್ತದಲ್ಲಿ ಗುರುಕಾರುಣ್ಯವ ಪಡೆದು,
ಅವರೊಕ್ಕುದ ಕೊಂಡು ಕೃತಾರ್ಥರಾದಂದು
ಎಲೆ ವಿಪ್ರರಿರಾ ನಿಮ್ಮ ಕುಲಂಗಳೆಲ್ಲಿಗೆ ಹೋದವು ?
ಕೆಂಬಾವಿ ಭೋಗಯ್ಯಗಳ ಮನವ ಶಿವನಂದು ನೋಡಲೆಂದು
ಅನಾಮಿಕ ವೇಷವ ಧರಿಸಿ ಬರಲು,
ಅವರನಾರಾಧಿಸಲು, ಭೋಗತಂದೆಗಳ ನೆರೆದ
ದ್ವಿಜರೆಲ್ಲರು ಪುರದಿಂದ ಪೊರಮಡಿಸಲು,
ಪುರದ ಲಿಂಗಗಳೆಲ್ಲವು ಬೆನ್ನಲುರುಳುತ್ತ ಪೋಗಲು,
ದುರುಳ ವಿಪ್ರರೆಲ್ಲರು ಬೆರಳ ಕಚ್ಚಿ ತ್ರಾಹಿ ತ್ರಾಹಿ, ಕರುಣಾಕರ ಮೂರ್ತಿಯೆಂದು
ಶರಣುಹೊಕ್ಕು ಮರಳಿ ಬಿಜಯಂಗೈಸಿಕೊಂಡು ಬಾಹಂದು,
ನಿಮ್ಮ ಕುಲಾಭಿಮಾನವೆಲ್ಲಿಗೆ ಹೋದವು ಹೇಳಿರೆ ?
ಈಶನೊಲಿದು ಚೆನ್ನಯ್ಯಗಳ ಏಕೋನಿಷ್ಠೆಯ
ಸ್ಥಾನದಾನ ಸಮರ್ಪಣಭಾವ ಬಲಿದು,
ಅಭವ ಪ್ರತ್ಯಕ್ಷನಾಗಿ ಕೈದುಡುಕಿ ಸಹಭೋಜನವ ಮಾಡುವಂದು,
ನಿಮ್ಮ ವೇದಾಗಮ ಶ್ರುತಿಮಾರ್ಗದಾಚಾರವೆಲ್ಲಿಗೆ ಹೋದವು ಹೇಳಿರೆ ?
ಬೊಬ್ಬೂರಲ್ಲಿ ಬಿಬ್ಬಿ ಬಾಚಯ್ಯಗಳು ಹರನ ಗಣಂಗಳ ನೆರಹಿ,
ಪರಮಾನಂದದಿಂ ಗಣಪರ್ವವಂ ಮಾಡಿ,
ಗಣಪ್ರಸಾದಮಂ ಪುರದವೀಥಿಗಳೊಳು ಮೆರಸುತ್ತ ಬರಲು,
ನೆರೆದ ವಿಪ್ರರೆಲ್ಲರು ಉಚ್ಛಿಷ್ಟಾ ಚಾಂಡಾಲವೆಂದು ದೂಷಿಸಿ,
ಬಂಡಿಯಂ ಮುರಿದು ತಂಡತಂಡದ ಭಕ್ತರನೆಲ್ಲನವಗಡಿಸುತ್ತಿರಲು,
ಹರಹರ ಮಹಾದೇವ ಮಹಾಪ್ರಸಾದ ಪರಂಜ್ಯೋತಿಯೆಂದು
ಪ್ರಸಾದಮಂ ಕೈಯೆತ್ತಿ ಸೂಸಲು,
ಪುರವೆಲ್ಲ ಬೆಂದು ಗಡ್ಡದ ಜನರೆಲ್ಲರು ಘರಿಘರಿಲ್ಲದೆ ಉರಿದು ಕರಿಯಾಗಲು,
ಉಳಿದ ವಿಪ್ರರೆಲ್ಲರೂ ತ್ರಾಹಿ ತ್ರಾಹಿ, ಶರಣಾಗತ ರಕ್ಷಕರಿರಾ
ಒಮ್ಮೆಗೆ ಕಾವುದೆಂದು ಧರೆಯೊಳು ಬಿದು ಬೆರಳಕಚ್ಚುವಂದು,
ಅಂದು ನಿಮ್ಮ ಆಗಮಾರ್ಥದ ಕುಲಾಚಾರ
ಮಾರ್ಗವೆಲ್ಲಿಗೆ ಹೋದವು ಹೇಳಿರೆ. ಸಾಕ್ಷಿ: ಸ್ತ್ರೀ ವಾಚಧಪುರುಷಃ ಷಂಡಶ್ಚಾಂಡಾಲೋ ದ್ವಿಜವಂಶಜಃ |
ನ ಜಾತಿಭೇದೋ ಲಿಂಗಾಚರ್ೆ ಸರ್ವೆ ರುದ್ರಗಣಾಃ ಸ್ಮೃತಾಃ ||
ಇದು ಕಾರಣ, ಶರಣರಿಗೆ ಪ್ರತಿಯಿಲ್ಲ.
ಬೆರಳನೆತ್ತದೆ ಇಕ್ಕಿದ ಮುಂಡಿಗೆಯನಾ ಸರ್ವರೆತ್ತಿಕೊಳ್ಳರೆ ದ್ವಿಜರು,
ಬಸವಪ್ರಿಯ ಕೂಡಲಚೆನ್ನಸಂಗಯ್ಯನೊಬ್ಬನೆಂದು./93
ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ,
ಕಾಳಾಂಧರ, ವಾರಿಧಿ, ಆತ್ಮಾನಾತ್ಮ ಇಂತಿವೇನೂ ಇಲ್ಲದಂದು,
ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು.
ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು.
ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು.
ಆ ಚಿಚ್ಛಕ್ತಿ ಸಕಲಚೈತನ್ಯಾತ್ಮಕ ಶರಣನಾಯಿತ್ತು.
ಆ ಶರಣನೊಳಗೊಂದು ಕೋಳಿ ದ್ವಾದಶವರ್ಣದ ಸುನಾದವಾಗಿ ಕೂಗಿತ್ತು.
ಆ ಸುನಾದಂಗಳ ಝೇಂಕಾರವು ಚತುರ್ದಶ ಸಾವಿರಕ್ಷರ ರೂಪಕವಾಗಿ,
ಆ ಶರಣನ ಸಪ್ತಚಕ್ರದ ಕಮಲದೊಳಗೆ ಪ್ರವೇಷ್ಟಿಸಿ, ಗೋಪ್ಯವಾಗಿದವು.
ಆ ಶರಣನಲ್ಲಿ ಷಡುಶಿವಮೂರ್ತಿಗಳುದಯಿಸಿದರು.
ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯೆಗಳು ತೋರಿದವು.
ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ,
ತೊಂಬತ್ತಾರುಸಾವಿರ ಶಿವಮೂರ್ತಿಗಳುದಯಿಸಿದರು.
ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ
ಇಂತಿವೆಲ್ಲ ತೋರಿದವು.
ಇವನೆಲ್ಲವ, ಶಿವಗಣಂಗಳಲ್ಲಿ ಆ ಶರಣನು,
ಉಪದೇಶಮಾರ್ಗದಿಂ ಧರಿಸಿಕೊಂಡು,
ನೂರೊಂದರ ಮೇಲೆ ನಿಂದು, ದ್ವಾದಶ ಸಪ್ತವಿಂಶತಿ
ಛತ್ತೀಸದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚಜಪಮಾಲೆಗಳಿಗೆ
ಹನ್ನೆರಡು ಸಿಡಿಲ ಸುನಾದವನೊಡದು,
ತ್ರಿ ಆರುವೇಳೆ ಕೂಡಿ, ನೂರೆಂಟಕ್ಕೆ ಸಂದಾನಿಸಿ
ಜಪಿಸುತ್ತಿಪ್ಪ ಅನಂತ ಪ್ರಮಥರಂ,
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು ಸುಖಿಯಾದೆನು./94
ಹರಂಗೆ ಅಜ ಹರಿ ಮೊದಲಾದ ದೈವಂಗಳ ಸರಿಯೆಂಬ ನರಕಿಗಳ,
ಗುರುವಿಂಗೆ ನರರ ಸರಿಯೆಂಬ ಕಡುಪಾಪಿಗಳ,
ಪರಶಿವಧರ್ಮಕ್ಕೆ ವೇದಾಗಮಂಗಳ ಸರಿಯೆಂಬ ಪಾತಕರ,
ಪರಶಕ್ತಿ ಜಗದಂಬೆ ಉಮಾದೇವಿಯರಿಗೆ
ಉಳಿದಾದ ಶಕ್ತಿಗಳ ಸರಿಯೆಂಬ ಕರ್ಮಿಗಳ,
ಇಂತಿವರ ಮುಖವ ನೋಡಿದವರಿಗೆ ನರಕವಲ್ಲದೆ ಮತ್ತೊಂದು ಗತಿಯಿಲ್ಲ.
ಇಂತಿವರ ಹೊರೆಯಲ್ಲಿರಲಾಗದು, ಒಡನೆ ನುಡಿಯಲಾಗದು,
ಒಂದಾಸನದಲ್ಲಿ ಕುಳ್ಳಿರಲಾಗದು.
ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಗುರುಃ ಪ್ರಾಕೃತೈಸ್ಸಮಂ |
ಶಿವಂ ವಿದ್ಯಾ ಚ ವೇದಾದ್ಯೈರ್ಮನುತೇ ಯಸ್ತು ಮಾನವಃ ||
ಸ ಪಾಪೀ ದುರ್ಮತಿಃ ಕ್ರೂರಃ ಶ್ವಪಚಃ ಶ್ವಪಚಾಧಮಃ |
ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಶಿವಂ ಲಕ್ಷ್ಯಾದಿ ಶಕ್ತಿಭಿಃ ||
ಸ್ವಗುರುಂ ಪ್ರಾಕೃತೈಸ್ಸಾರ್ಧಂ ಯೇ ಸ್ಮರಂತಿ ವದಂತಿ ಚ |
ತೇಷಾಂ ಪಾಪಾನಿ ನಶ್ಯಂತಿ ಶ್ರೀಮತ್ ಪಂಚನದಾಶ್ರಯಃ ||
ಇಂತೆಂದುದಾಗಿ, ಇದು ಕಾರಣ,
ಇಂತೀ ಮರುಳು ದುರಾತ್ಮರನೆನಗೆ ತೋರಿಸದಿರಯ್ಯಾ.
ಬಸವಪ್ರಿಯ ಕೂಡಲಚೆನ್ನಸಂಗಯ್ಯಾ,
ಬೇಡುವೆ ನಿಮ್ಮದೊಂದೇ ವರವನು./95
ಹರನ ಕೈಯ ಕಪಾಲವಿ[ಡಿ]ದ ತೆರನನರಿಯದಲ್ಲಾ ಲೋಕ.
ನರಜನ್ಮಕ್ಕಾಹುತಿಯ ಬಗೆದು, ಅರುವತ್ತುನಾಲ್ಕು ಭಾಗವ ಮಾಡಿ,
ಚೌಷಷ್ಟಿವಿದ್ಯವು ನಿಮಗೆ ಕಾಯಕಪ್ಪರವೆಂದು
ಕೈವರ್ತಿಸಿದನೀ ಜಗಕ್ಕೆ ಶಿವನು. ಇದು ಕಾರಣ,
ಶಿವಭಕ್ತರು ಕರ್ಮಮೂಲ ಕಾಯಕವಿಡಿದು ಬಂದುವೆ ಲಿಂಗಕ್ಕರ್ಪಿತ.
ಕಾಯಕ ಹೀನವೆಂದು ಬಿಟ್ಟು ಹಿಡಿದಡೆ ಭಕ್ತನಲ್ಲ.
ಪಥಕ್ಕೆ ಸಲ್ಲ , ಪುರಾತನರೊಲ್ಲರು, ಲಿಂಗ ಮೆಚ್ಚಲ್ಲ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./96
ಹರಿದು ಹತ್ತಿ ಮುಟ್ಟಲಿಲ್ಲ, ಮುಟ್ಟಿ ಮರಳಿ ಇಳಿಯಲಿಲ್ಲ,
ಬೆರಸಿಹೆನೆಂದು ನೆನೆಯಲಿಲ್ಲ.
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ
ಶಬ್ದಕ್ಕೆ ಇಂಬಿಲ್ಲದಿದರ್ೆನು./97
ಹವ್ಯಂ ವಹತಿ ದೇವಾವಾಂ ಕವ್ಯಂ ಕವ್ಯಾ ಶಿವಾಮಪಿ |
ಪಾಕಾದ್ಯಂಶ ಕರೋತ್ಯಗ್ನಿ ಃ ಪರಮೇಶ್ವರಶಾಸನಾತ್ ||
ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾ ಸಸ್ತಥಾಜ್ಞಯಂ |
ವಿಶ್ವಂ ವಿಶ್ವಂಭರಾ ನಿತ್ಯಂ ತಥಾ ವಿಶ್ವೇಶ್ವರಾಜ್ಞ ಯಾ |
ತ್ರಿಭಿರೇತ್ಯರ್ಜಗದ್ಭಿಃ ಭೃತ್ಯೇಜೋಭವರ್ಿಶ್ಚಮಾರವೇದಿ |
ವಿಸರ್ವಃ ಜಗಚ್ಚಕ್ಷುದರ್ೆವ ದೇವಸ್ಯ ಶಾಸನಾತ್ ||
ತೃಷ್ಣಾತ್ಯೋಷಧಿ ಜಾತಾನಿ ಭೂತಾನಿ ಹ್ಲಾದಯತ್ಯಪಿ
ದೇವೈಶ್ಚ ಪೀಯತೇ ಚಂದ್ರಶ್ಚಂದ್ರಭೂಷಣ ಶಾಸನಾತ್
ತೇನಾಜ್ಞಾಂ ವಿನಾ ತೃಣಾಗ್ರಮಪಿ ನ ಚಲತಿ ||
ಇಂತೆಂದುದಾಗಿ, ಇದು ಕಾರಣ,
ಬಸವಪ್ರಿಯ ಕೂಡಲ[ಚೆನ್ನ]ಸಂಗಯ್ಯನೆಂದರಿಯದವರೆಲ್ಲರೂ
ಪಶುಗಳು ಪಾಶಬದ್ಧರೆಂಬುದ ತರ್ಜನಿಯವಿತ್ತಿಹೆನು,
ಉತ್ತರ ಕೊಡುವರುಳ್ಳರೆ ನುಡಿಯಿರೊ, ಏಕಾತ್ಮವಾದಿಗಳಾ. /98
ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ
ದೆಸೆದೆಸೆಯಲ್ಲಿ ತಂದು ನೀಡುತ್ತಿರಲು,
ಹೊಸಪರಿಯ ಆರೋಗಣೆಯನವಧರಿಸುತ್ತಿರ್ದನು.
ಆವಾವ ದೆಸೆಯಲ್ಲಿ ತಂದು ನೀಡುತ್ತಿರ್ದಡೆ,
ಆ ದೆಸೆದೆಸೆಗಳೆಲ್ಲಾ ಬಾಯಾಗಿ ಕೊಳುತಿರ್ದನು !
ಎತ್ತ ನೋಡಿದಡೆ ಅತ್ತತ್ತ ಮುಖ. ಅಗೆಯ ಹೊಯಿದಂತೆ ತೆರಹಿಲ್ಲ.
ಒಂದು ನಿಮಿಷ ಎಡಹಿದಡೆ,
ಅಕ್ಕಿಗಚ್ಚು ನುಚ್ಚು ತವುಡು ಮೊದಲಾಗಿ ಹೆಚ್ಚಿದವು ನಿಮಿಷದೊಳು.
ಭಕ್ತಿಬಂಧುಗಳೆಲ್ಲಾ ತಮ್ಮ ತಮ್ಮ ಮಠದಲಾದ
ಸಯಿದಾನವ ತಂದು, ಸಾರಗಟ್ಟಿ ನೀಡುತ್ತಿರ್ದಡೆ,
ಅದ್ಭುತದಾರೋಗಣೆಯ ಕಂಡು, ಹರಿಹರಿದು ಪಾಕಯತ್ನವ ಮಾಡಿ ಎನ್ನುತ್ತ
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಸಂತೋಷದೊಳೋಲಾಡುತ್ತಿರ್ದನು
ಎನ್ನ ಪರಮಗುರು ಬಸವಣ್ಣನು./99
ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು.
ಮಧ್ಯಾಹ್ನದ ಹೊತ್ತು ಹಸಿವು ತೃಷೆಗೆ ಹೋಯಿತ್ತು.
ಮೂರನೆಯ ಜಾವದ ಹೊತ್ತು ಹೊಟ್ಟೆತುಂಬಿದ ಬಳಿಕ,
ಕಾಯದ ಕಳವಳವ ಕೈಕೊಂಬುದಯ್ಯಾ.
ಇರುಳಾದ ಬಳಿಕ ನಿದ್ರೆಗೈದು,
ಬೆಳಗಾಹನ್ನಬರ ಸತ್ತಂತಿಹೆನು ಹೆಣನಾಗಿ ಏನುವನರಿಯದೆ.
ಅಯ್ಯಾ, ನಿಮ್ಮ ನೆನೆವವರ ಚರಣಕ್ಕೆ ಶರಣೆಂಬೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ./100