Categories
e-ದಿನ

ಅಕ್ಟೋಬರ್-12

 

ಪ್ರಮುಖ ಘಟನಾವಳಿಗಳು:

1609: ಮಕ್ಕಳ ಹಾಡು (ರೈಮ್ಸ್) “ದಿ ಥ್ರೀ ಬ್ಲೈಂಡ್ ಮೈಸ್” ಲಂಡನ್ನಿನಲ್ಲಿ ಪ್ರಕಟವಾಯಿತು.

1773: ಅಮೇರಿಕಾದ ಮೊದಲ ಮಾನಸಿಕ ರೋಗಿಗಳಿಗೆ ಆಶ್ರಯವಾದ “ಪರ್ಸನ್ಸ್ ಆಫ್ ಇನ್ಸೇನ್ ಆಂಡ್ ಡಿಸ್ ಆರ್ಡರ್ಡ್ ಮೈಂಡ್ಸ್” ವರ್ಜಿನಿಯಾದಲ್ಲಿ ತೆರೆಯಲಾಯಿತು.

1792: ಮೊದಲ ಬಾರಿಗೆ “ಕೊಲಂಬಸ್” ದಿನಾಚರಣೆಯನ್ನು ಅಮೇರಿಕಾದ ನ್ಯೂಯಾರ್ಕಿನಲ್ಲಿ ಆಚರಿಸಲಾಯಿತು.

1823: ಸ್ಕಾಟ್ಲ್ಯಾಂಡಿನ ಚಾರ್ಲ್ಸ್ ಮ್ಯಾಕಿಂತೋಷ್ ಮೊದಲ ಮಳೆಯಂಗಿ(ರೈನ್ ಕೋಟ್)ಗಳ ಮಾರಾಟ ಮಾಡಿದರು.

1850: ಮೊದಲ ಮಹಿಳೆಯರಿಗೆ ವೈದ್ಯ ಶಾಲೆ ತೆರೆಯಲಾಯಿತು.

1871: ಕ್ರಿಮಿನಲ್ ಟ್ರೈಬ್ಸ್ ಕಾಯಿದೆ ಜಾರಿಗೆ ಬಂದಿತು.

1895: ಮೊದಲ ಹವ್ಯಾಸಿ ಗಾಲ್ಫ್ ಪಂದ್ಯಾವಳಿ ನಡೆಸಲಾಯಿತು.

1920: ಹಾಲ್ಯಾಂಡಿನ ಸುರಂಗದ ನಿರ್ಮಾಣ ಆರಂಭವಾಯಿತು.

1928: ಬಾಸ್ಟನ್ ಮಕ್ಕಳ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕಬ್ಬಿಣದ ಶ್ವಾಸಕೋಶದ ಬಳಕೆ ಮಾಡಲಾಯಿತು.

1948: ಬಿಲಾಸ್ಪುರ್ ಎಂದು ಕರೆಯಲ್ಪಡುವ ಕಹ್ಲೂರ್ ರಾಜ್ಯವನ್ನು ಭಾರತಕ್ಕೆ ಸೇರ್ಪಡೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1891: ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್ ಜನಿಸಿದರು.

1911: ಭಾರತೀಯ ಕ್ರಿಕೆಟ್ ಆಟಗಾರ ವಿಜಯ್ ಮಾಧವ್ ಜೀ ಜನಿಸಿದರು.

1918: ತೆಲುಗು ಭಾಷೆಯ ಚಿತ್ರ ನಿರ್ದೇಶಕ ಪಿ.ಎಸ್.ರಾಮಕೃಷ್ಣ ರಾವ್ ಜನಿಸಿದರು.

1935: ಭಾರತದ ರಕ್ಷಣಾ ಸಚಿವ ಶಿವ್ರಾಜ್ ಪಾಟಿಲ್ ಜನಿಸಿದರು.

1938: ಉರ್ದು ಕವಿ ನಿದಾ ಫಾಜಿಲ್ ಜನಿಸಿದರು.

1946: ರಣಜಿ ಕ್ರಿಕೆಟ್ ಆಟಗಾರ ಅಶೋಕ್ ವಿನೂ ಮಂಕಡ್ ಅವರು ಜನಿಸಿದರು.

1963: ಸಂಗೀತಕಾರ, ಗಿಟಾರ್ ವಾದಕ, ಸಂಗೀತ ಸಂಯೋಜಕ, ಎಹ್ಸಾನ್ ನೂರಾನಿ ಜನಿಸಿದರು.

1967: ಭಾರತದ ಸ್ವಾತಂತ್ರ ಹೋರಾಟಗಾರ ರಾಮ್ ಮನೋಹರ್ ಲೋಹಿಯಾ ನಿಧನರಾದರು.

2012: ಕೇರಳಾದ ರಾಜ್ಯಪಾಲ ಸುಖ್ದೇವ್ ಸಿಂಗ್ ಕಾಂಗ್ ನಿಧನರಾದರು.