Categories
e-ದಿನ

ಅಕ್ಟೋಬರ್-16

 

ಪ್ರಮುಖ ಘಟನಾವಳಿಗಳು:

1829: ಅಮೇರಿಕಾದ ಮೊದಲ ಆಧುನಿಕ ಹೋಟೆಲ್ ಆದ ಟ್ರೆಮಾಂಟ್ ಹೋಟೆಲ್ ಬಾಸ್ಟನ್ನಿನಲ್ಲಿ ತೆರೆಯಲಾಯಿತು.

1841: ಕೆನೆಡಾದ ಕ್ವೀನ್ಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1848: ಮೊದಲ ಹೋಮಿಯೋಪತಿ ವೈದ್ಯ ಕಾಲೇಜು ಪೆನ್ಸಿಲ್ವೇನಿಯಾದಲ್ಲಿ ತೆರೆಯಲಾಯಿತು.

1861: ಒಕ್ಕೂಟದ ಅಂಚೆ ಕಛೇರಿ, ಅಂಚೆ ಚೀಟಿಗಳನ್ನು ಮಾರಾಟ ಮಾಡಲು ಆರಂಭಿಸಿತು.

1868: ನಿಕೋಬಾರ್ ದ್ವೀಪಗಳನ್ನು ಬ್ರಿಟೀಷರಿಗೆ ಮಾರುವ ಮೂಲಕ, ಡೆನ್ಮಾರ್ಕ್ ಭಾರತದಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಮುಕ್ತಾಯಗೊಳಿಸಿತು.

1905: ಪ್ರಾಂತೀಯ ರಾಜ್ಯವಾದ ಬಂಗಾಳವನ್ನು ವಿಭಜಿಸಲಾಯಿತು.

1923: ಡಿಸ್ನಿ ಬ್ರದರ್ಸ್ ಕಾರ್ಟೂನ್ ಸ್ಟೂಡಿಯೋ ಸ್ಥಾಪಿಸಲಾಯಿತು.

1923: ಸ್ವಯಂ-ಚಲನೆ ಗಡಿಯಾರಕ್ಕೆ ಜಾನ್ ಹಾರ್ವುಡ್ ಪೇಟೆಂಟ್ ಪಡೆದರು.

1942: ಭಾರತದಲ್ಲಿ ಚಂಡಮಾರುತದ ಪರಿಣಾಮ ಬಂಗಾಳದಲ್ಲಿ ಸುಮಾರು 40,000 ಜನ ಮೃತ ಪಟ್ಟರು.

1984: ಒಂದು ಆಫ್ರಿಕಾ ದೇಶದ ಮಂಗದ ಹೃದಯವನ್ನು 15 ದಿನದ ಹೆಣ್ಣು ಮಗುವಿಗೆ ಕಸಿ ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

2014: ಏಷಿಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯನ್ನು ಅಂತರರಾಷ್ಟ್ರೀಯ ಉತ್ಪಾದನಾ ಕೇಂದ್ರವಾಗಿ ಮಾರ್ಪಾಡು ಮಾಡುವ ಗುರಿಯಿಂದ ಕಾರ್ಮಿಕ ಸುಧಾರಣೆಯ ಸರಣಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು.

ಪ್ರಮುಖ ಜನನ/ಮರಣ:

1799: ಭಾರತೀಯ ಕಾರ್ಯಕರ್ತ ವೀರಪಾಂಡಿಯ ಕಟ್ಟಬೊಮ್ಮನ್ ನಿಧನರಾದರು.

1946: ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜನಿಸಿದರು.

1948: ಭಾರತದ ಖ್ಯಾತ ನಟಿ, ನೃತ್ಯಗಾರ್ತಿ, ರಾಜಕಾರಣಿಯಾದಹೇಮಾಮಾಲಿನಿ ಅವರು ಜನಿಸಿದರು.

1951: ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಲಿಯಾಖತ್ ಅಲಿ ಖಾನ್ ನಿಧನರಾದರು.

1974: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಚೆಂಬೈ ವೈದ್ಯನಾಥ ಭಾಗವತರ್ ನಿಧನರಾದರು.

1975: ಭಾರತೀಯ ಕ್ರಿಕೆಟ್ ಆಟಗಾರ ಶಡಗೋಪನ್ ರಮೇಶ್ ಅವರು ಜನಿಸಿದರು.

1982: ಭಾರತದ ನಟ, ಗಾಯಕ, ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಜನಿಸಿದರು.

1989: ಗ್ರಾಂಡ್ ಮಾಸ್ಟರ್ ಶೀರ್ಷಿಕೆ ಹೊಂದಿರುವ ಭಾರತೀಯ ಚೆಸ್ ಆಟಗಾರ ಅಭಿಜಿತ್ ಗುಪ್ತ ಜನಿಸಿದರು.

2013: ಭಾರತೀಯ ನಾಟಕಕಾರ ಮತ್ತು ಶಿಕ್ಷಣ ತಜ್ಞ ಗೋವಿಂದ್ ಪುರುಷೋತ್ತಮ್ ದೇಶ್ಪಾಂಡೆ ನಿಧನರಾದರು.