Categories
e-ದಿನ

ಅಕ್ಟೋಬರ್-21

 

ಪ್ರಮುಖ ಘಟನಾವಳಿಗಳು:

1824: ಪೋರ್ಟ್ ಲ್ಯಾಂಡ್ ಸಿಮೆಂಟಿಗೆ ಜೋಸೆಫ್ ಆಸ್ಫಿನ್ ಪೇಟೆಂಟ್ ಪಡೆದರು.

1869: ಮೊದಲ ಬಾರಿಗೆ ತಾಜಾ ಸಿಂಪಿಗಳ ಸಾಗಾಣಿಕೆ ಬ್ಲಾಟಿಮೋರಿನಿಂದ ಮಾಡಲಾಯಿತು.

1916: ಅಮೇರಿಕಾದ ಸೈನ್ಯವು ರಿಸರ್ವ್ ಅಧಿಕಾರಿಗಳ ತರಬೇತಿ ಕಾರ್ಪ್ಸ್ ಅನ್ನು ರೂಪಿಸಿತು.

1918: ಒಂದು ನಿಮಿಷಕ್ಕೆ 170 ಪದಗಳನ್ನು ಟೈಪ್ ಮಾಡಿ ಮಾರ್ಗರೆಟ್ ಓವೆನ್ ವಿಶ್ವ ದಾಖಲೆ ರಚಿಸಿದರು.

1923: ಮ್ಯೂನಿಚಿನ ಡಾಶ್ ಮ್ಯೂಸಿಯಂನಲ್ಲಿ ಮೊದಲ ಪ್ಲಾನಿಟೇರಿಯಂ ತೆರೆಯಲಾಯಿತು.

1943: ಸುಭಾಷ್ ಚಂದ್ರ ಬೊಸ್ ಅವರು ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರವನ್ನು ಘೋಷಿಸಿದರು.

1945: ಫ್ರಾನ್ಸಿನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಮತ ಹಾಕಲು ಅವಕಾಶ ನೀಡಲಾಯಿತು.

1950: ಬೆಲ್ಜಿಯಂನಲ್ಲಿ ಮರಣದಂಡನೆಯನ್ನು ನಿಷೇಧಿಸಲಾಯಿತು.

1977: ಯುರೋಪಿಯನ್ ಪೇಟೆಂಟ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

2008: ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಯುನೈಟೆಡ್ ಫೋರಂನ 25,000 ಸದಸ್ಯರು ಪಿಂಚಣಿ ವಿವಾದದ ಬಗ್ಗೆ ಮುಷ್ಕರ ನಡೆಸಿದರು.

ಪ್ರಮುಖ ಜನನ/ಮರಣ:

1887: ಬಿಹಾರದ ಮೊದಲ ಮುಖ್ಯಮಂತ್ರಿ ಆಗಿದ್ದ ಕೃಷ್ಣ ಸಿಂಗ್ ಜನಿಸಿದರು.

1925: ಪಂಜಾಬಿನ ಮುಖ್ಯ ಮಂತ್ರಿ ಆಗಿದ್ದ ಸುರ್ಜಿತ್ ಸಿಂಗ್ ಬರ್ನಾಲ ಜನಿಸಿದರು.

1931: ಖ್ಯಾತ ಹಿಂದಿ ಚಲನಚಿತ್ರ ನಟ ಶಮ್ಮಿ ಕಪೂರ್ ಜನಿಸಿದರು.

1937: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದ ಫರೂಕ್ ಅಬ್ದುಲ್ಲಾ ಜನಿಸಿದರು.

1937: ತಮಿಳು ಚಿತ್ರರಂಗದ ಹಾಸ್ಯ ನಟ, ಗಾಯಕ ತೆಂಗೈ ಶ್ರೀನಿವಾಸನ್ ಜನಿಸಿದರು.

1967: ಖ್ಯಾತ ಕ್ರೀಡಾ ಪಟು, ಓಟಗಾರ್ತಿ ಅಶ್ವಿನಿ ನಾಚಪ್ಪ ಜನಿಸಿದರು.

1981: ನವೋದಯ ಸಮಯದ ಖ್ಯಾತ ಕವಿ ದ.ರಾ.ಬೇಂದ್ರೆ ನಿಧನರಾದರು.

1990: ಭಾರತೀಯ ಫುಟ್ಬಾಲ್ ಆಟಗಾರ ನಿರ್ಮಲ್ ಚೆಟ್ರಿ ಜನಿಸಿದರು.

2012: ಖ್ಯಾತ ಹಿಂದಿ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಯಶ್ ಚೋಪ್ರಾ ನಿಧನರಾದರು.