ನಾಟಕವೊಂದು ಒಂದು ಮುದ್ರಣ ಕಾಣುವುದೇ ಪುಣ್ಯ ಎನ್ನುವಂತಹ ಸ್ಥಿತಿಯಲ್ಲಿ ನನ್ನ ನಾಟಕಗಳು ಹಲವಾರು ಮುದ್ರಣ ಕಂಡಿರುವುದು ನನ್ನ ಭಾಗ್ಯ ಎಂದೇ ಭಾವಿಸುತ್ತೇನೆ.

ಈಗ ಮರುಮುದ್ರಣವಾಗುತ್ತಿರುವ ‘ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು’, ‘ಪುಷ್ಪರಾಣಿ’ ಮತ್ತು ‘ಕಿಟ್ಟೀಕಥೆ’-ಮೂರು ಮಕ್ಕಳ ನಾಟಕಗಳು. ಶ್ರೀ ಬಿ.ಬಿ. ಕಾರಂತರ ಸಂಗೀತ ಮತ್ತು ಶ್ರೀಮತಿ ಪ್ರೇಮಾ ಕಾರಂತರ ನಿರ್ದೇಶನದಲ್ಲಿ ಈ ನಾಟಕಗಳು ಯಶಸ್ವಿಯಾಗಿ ಪ್ರಯೋಗವಾಗಿವೆ. ಅವರಿಗೆ;

ಈ ನಾಟಕಗಳಿಗೆ ಮುಖಪುಟ ವಿನ್ಯಾಸ ಮಾಡಿದ ಕಲಾವಿದ ಶ್ರೀ ಹಾದಿಮನಿ ಅವರಿಗೆ;

ಈ ನಾಟಕವನ್ನು ಮುದ್ರಿಸಿದ ಸ್ವ್ಯಾನ ಪ್ರಿಂಟರ್ಸ್ ಅವರಿಗೆ ಮತ್ತು ಪ್ರಕಟಿಸಿದ ಪ್ರಕಾಶ್‌ ಕಂಬತ್ತಳ್ಳಿ ದಂಪತಿಗಳಿಗೆ;

ನನ್ನ ನಾಟಕಗಳನ್ನು ಓದಿ, ನೋಡಿ ಮೆಚ್ಚಿದ ಪ್ರೇಕ್ಷಕರಿಗೆ, ಆಡಿದ ರಂಗ ತಂಡಗಳಿಗೆ;

ನನ್ನ ನಮನಗಳು ಸಲ್ಲುತ್ತವೆ.

ಚಂದ್ರಶೇಖರ ಕಂಬಾರ