ಶ್ರೀಗುರುವಿನೊಲಿಸುವ ಸಾಧನ ಸುಮ್ಮನಲ್ಲಾ |

ಸ್ತ್ರೀಶ್ರೀಸುತ ಸಂಪದ ಸಾಕಾಗದು |

ಭವವುಳ್ಳವಗೆಂದೆಂದಿಗೆ ಇಲ್ಲಾ ||ಪಲ್ಲ||

ಸೂಳಿ ಚೋಳಿಯೆಂಜಲ ತಿಂದ |

ಬೋನಂಬಲಿ ಬಯಸುಣ್ಣಲಿ ಬಂದ |

ಕಾಳೋರಗ ಕಾರಿಕೆದೊಳು ತಂದ |

ಕೂಳಿಗೆ ಕೂಸಿನ ಕೊಯ್ಕೊಯೆಂದ ||1||

ಬಲ್ಲಿದ ಬಾಲೆಯು ಬಂದರೆ ಬೈದ |

ಒಲ್ಲೆಂಬೆನುತಲಿ ಸೊಲ್ಲಭನಾದ |

ಕೊಲ್ಲಲಳುವ ಕೊಡಲಿಯ ಕೊರಳ್ಹಾದ |

ಸಲ್ಲದ ಸತಿ ಸಮ ರಮಿಸಿದಾ ||2||

ಸಿಂಧು ಮರಾಳನ್ನ ಓಡಿಸಿ ನಿಂದ |

ಬಂಧುವಿನೊಳು ನಂಬಿಗೆ ತೊತ್ತೆಂದಾ |

ಸುಂದರಿ ಮುತ್ತಿನ ಮುಡಿ ಕೊಯ್ಯಿ ತಂದಾ

ತಂದೆ ಮಹಾಂತನ ಇಂತಾನಂದಾ ||3||

ಗುರುವಿನ ಒಲಿಸುವತನಕ | ಭವ

ಪರಿಹರಿಸನು ತಾ ಬೆನಕ |

ಜರ ನಾಚಿಕ್ಕಿಲ್ಲೊ ನಿನಗಿನಕ | ಬಿಡ |

ಲರಿಯದು ಕೊಳೆಗೇರಿ ಶುನಕ ||ಪಲ್ಲ||

ಮಗನಿಗೆ ಮುಂದದ ಮಾರಿ |

ಮನಿ ಹೆಂಡತಿ ಆದಳು ಜಾರಿ |

ಮಗಳೆರೆದನ್ಯಗೆ ಧಾರಿ | ನೀ |

ನಗಿದೆ ವ್ಯರ್ಥವು ಗಾರಿ |

ಸೊಗಸಿನ ಸತಿ ನಡದಾಳೊ ಮನ ಮೀರಿ |

ಜಗದೊಳಗಾದಿ ಎಲೊ ಮಾಯ ವಿಕಾರಿ ||1||

ಹಲವು ವ್ಯಾಪಾರವ ಮಾಡಿ | ಒಳ್ಳೆ

ಬಲು ಗೆಲುವಿಗೆ ಹೋರಾಡಿ |

ಬಲವೆಲ್ಲಿ ಹೋಯಿತು ಜಾಡಿ |

ನಿನ್ನ ಮೈಯೆಲವು ಒಬ್ಬಳಿಗೂಡಿ |

ಚಲೋ ಆಗದು ದೊಡ್ಡ ದೇವರ ಬೇಡಿ |

ನೆಲೆಗಾಣದ ಹೋಗುವಿ ಎಲೆ ಖೋಡಿ ||2||

ಹಿರಿತನ ಮಾಡಲಿಕ್ಕಾಗಿ ಯಮ |

ನರಕದ ಬಾಯಿಗ್ಹೋಗಿ |

ತಿರುಗಿದಿ ನೀ ತಲೆ ತಾಗಿ | ನಿನ್ನ |

ಗರವಿಕಿಲ್ಲೆಲೊ ಭವರೋಗಿ |

ಮೆರೆಯುವ ಮಹಾಂತನ ನಿಜ ಅನುಭವ | ಕೂಗಿ |

ಉರಬುರ ಹೇಳುವೆ ಪರಹಿತನಾಗಿ ||3|

ಮಾಡುವದ್ಯಾತಕೋ ನೀ ಅವಿಶ್ವಾಸವ | ಸೋಸಿ

ನೋಡೊ ಶ್ರೀ ಗುರು ರೂಪಾದ ಸ್ವಾರ್ಥ ಸಾವಸವ ||ಪಲ್ಲ||

ಶ್ರದ್ಧೆ ನಿಷ್ಠೆ ದಷ್ಟಾ ಅಷ್ಟಾಗದೆ ಹೋ ಅಷ್ಟಾಗದೆ ಹಾ

ಭಕ್ತ ಮಹೇಶನಹುದೆ ಅಷ್ಟಾಗದೆ

ಬುದ್ಧಿವಂತ ಸಂತ ಅಂತಾದರೆ

ಸಾವಧಾನವು ಬಾರದೆ ||1||

ಸಿದ್ಧಿಸಲದೆ ಅನುಭಾವಾನಂದವು

ಶುದ್ಧವಾಗದು ಶಿವಸುಖ ಏಕ ರಸವೊ

ಸಾರಸವೊ ಸಮರಸವೊ ಮಹಾಜಸವೊ

ಬಹು ಹಸವೊ ಬಹು ಹಸವೊ

ಬ್ಯಾಡ ಕೆಡಬ್ಯಾಡೆಲೊ ||2||

ಭುವನ ಭೋಗರ ತ್ಯಾಗ | ತ್ಯಾಗಾಗದೆ

ಹೋ ತ್ಯಾಗಾಗದೆ ಹಾ ತ್ಯಾಗಾಗದೆ

ಮೋಕ್ಷಾಪೇಕ್ಷಾಹುದೆ ಭವದ

ಸಂಗ ಭಂಗ ಹಿಂಗಿಸಿದರೆ

ಅಂಗವು ಲಿಂಗಾಗದೆ ||3||

ಅವರ ಸೊಮ್ಮು ಅವರಿಗೆ ವಿವರಿಸಿದಾಗಳೆ

ಅವರಿವರು ನಾವೂ ನೀವೂ ನೋವು

ಸಾವದೊಂದೊ ಏನ್ಕುಂದೊ | ನೀ ದುಂದೊ

ಬಹುದುಂದೊ ಮಹಾಚೆಂದೊ

ಬ್ಯಾಡ ಕೆಡಬ್ಯಾಡೆಲೊ ||4||

ಅರವು ಕುರುವು ಪರವು ಮರವಾಗದೆ |

ಹೋ ಮರವಾಗದೆ ಹಾ ಮರವಾಗದೆ |

ಜೀವನ್ಮುಕ್ತಾಹುದೆ ಶರೀರ ಧರ್ಮ

ವರ್ಮ ಕರ್ಮಿಲ್ಲಾದರಾ ನಿಜ ತಾನಾಗದೇ

ಕರ್ಮಿಲ್ಲಾದರಾ ನಿಜ ತಾನಾಗದೇ ||5||

ಮೆರೆವ ಚಿಣಮಗೇರಿ ಗುರು ಮಹಾಂತೇಶನ

ಪರಮ ಸ್ವಯಂ ಬ್ರಹ್ಮವು ಬಹು ದಯಾಳು

ಎಲೊ ಸರ್ವೋ ಎಲೋ ಚಿದ್ವಯಲೊ

ಮಹಾಬಯಲೊ ನಿರ್ಬೈಲಬ್ಯಾಡ ಕೆಡಬ್ಯಾಡಲೊ ||6||

ಒಲಿವ ಶ್ರೀಗುರುವಿನ ಒಲಿಸುವದೇನಾಗಾದ |

ಒಲಿಸುವುದು ಬಹು ಹೌರಾಳೆ |

ಕಲಕದೆ ಮನಸಿನೊಳಾದರೆ ಮನ |

ಮೊದಲಾಗಬೇಕು ನೀ ಭಾಳ ನಿರಾಳ ||ಪಲ್ಲ||

ತನ್ನನರ್ಚಿಸುವ ಅಭಿಲಾಷೆಯೊಳಿರುತಿರೆ

ಬಾಣನ ಬಾಗಿಲ ಕಾಯಿದ

ಭಿನ್ನಿಲ್ಲದೆ ನೂಲಿ ಚಂದಯ್ಯನ ಮನಿ ಹುಲ್ಹೊರಿ

ಹೊರುವವನಾದ ||1||

ಹೊನ್ನಯ್ಯನ ಹೊತ್ಹಾಕುವ ದೂರಿನ |

ನೀರಿಗೆ ತಾನಿದುರಾದ |

ಕನ್ನಯ್ಯನು ಕೆರುಗಾಲಿಲೆ ಒದಿಯಲು |

ಎಳ್ಳಷ್ಟಿಲ್ಲವೊ ಕ್ರೋಧ ||2||

ದೊರೆತನದಲಿ ತನ್ನ ಮರಿದೊಕ್ಕಲಿಗನ |

ಸ್ಥಿರವಾಗಿರಲೆಂದ್ಹೋದ |

ಕುರುಡ್ಹೆಂಡತಿ ಕುರುಡೆತ್ತಿನ ಕುರುಡಗೆ

ಗಾಣಾ ಹೊಡೆಯುವವನಾದ ||3||

ಪುರುಷಿಲ್ಲದ ಬಡವಿಯ ಮಗನನುಣಿಸಲು |

ಆಕಳ ಕರುಗಳ ಕಾಯಿದ |

ತ್ವರಿತದ ಈತಂದೊದನದೊಳುಗುಳಲು

ತರುಣಿಯೊಳಿಲ್ಲವು ಭೇದ ||4||

ಮದನ ವಿಕಾರದೊಳಾದರೆ ನೋಡುತ |

ಸೂಳಿಯ ಮನಿಗೋಡಿ ಹ್ವಾದ |

ಚದುರ ಕವೀಶ್ವರ ನಾಚಿಯ ಕಂಡರೆ

ಯೋಚಿಸಿ ಹರುಷಿತನಾದ ||5||

ಮುದದಿ ಸಿರಿಯಾಳನು ಕೋರದುಣ ನೀಡಿದ

ಭಕ್ತಿಗೆ ತಾ ಅನುವಾದ

ಸದಮಲ ಗುರುಗುಡ್ಡದ ಮಾಂತೇಶ್ವರ

ಅವರಿಗೆ ಅವರಂತಾದ ಇವರಿಗೆ ಇವರಂತಾದ ||6||

ಭವಗೆಲಿಸುವ ಗುರುವಿನ ಕೂಡೊ | ಈ

ಭುವನದ ಜನರ ಸಹವಾಸ ಬೇಡೊ | ಎಲೊ ಎಲೊ ||ಪಲ್ಲ||

ನಾಹಂ ಎಂಬುದು ಮೊದಲಳಿಯೋ | ಎಲೊ

ಕೋಹಂ ಎಂಬುದು ನೀ ತಿಳಿಯೋ | ಮತ್ತೆ

ಸೋಹಂ ಎಂಬುದು ಶಿವ ಕಳೆಯೋ | ದಾ

ಸೋಹಂ ಎಂಬುದು ಅಚ್ಚಳಿಯೋ ||1||

ಆಶಪಾಶದ ಕಟ್ಟು ಜಲ್ದ ಹರಿಯೋ | ಒಳ್ಳೆ

ತ್ರಾಸಿನ ವಾಸನೆ ತನುಗುಣ ಜರಿಯೋ | ಆ

ಈಶನಾಡುವ ಲೀಲಾ ಬಹು ಪರಿಯೋ | ಸುಖ

ಸೂಸದೆ ಸುರಿದುಂಡು ಸಲೆ ಮರಿಯೋ ||2||

ತೊಡಕುವ ತೊಡಕಿನ ತೊಡಕು ಉಡಿಯೋ |

ಬುಡ ನಡು ಕಡಿಗಳ ಕಂಡ್ಹಿಡಿಯೊ | ನಿ –

ನ್ನೊಡಲೊಳಡಗಿದ ಒಡವಿಯ ಪಡಿಯೊ | ಮತ್ತೆ

ಮೃಢ ಮಹಾಂತೇಶನ ಅಡಿ ಪಿಡಿಯೊ ||3||

ಭಲೆರೆ ಭಲೆರೆ ಭಲೆ ಶ್ರೀಗುರುವೆ | ನಿನ್ನ

ಒಲುಮೆಯ ನಾನಿನ್ನೇನರಿವೆ |

ಹಲವು ಎಲ್ಲವು ನಿನ್ನಿರುವೆ ಇದು |

ಈ ನೆಲಿ ಅರುಹಿದಿ ಸುಖ ಸಾಗರವೆ ||ಪಲ್ಲ||

ಇಲ್ಲೆನಿಸಿದ ನಿರ್ವೈಲಾತ್ಮಾ | ತಾ

ನಿಲ್ಲದಿರ್ದ ಮಹಾಬಯಲಾತ್ಮಾ |

ಮೆಲ್ಲ ಮೆಲ್ಲನೆ ಸತ್ಯಾತ್ಮ | ತ

ನ್ನಲ್ಲಿ ಬೆಳದ್ದದಿದು ಚಿತ್ತಾತ್ಮ ||1||

ನೆನವಿನೊಳಗ ರೂಪಿಸಿದ ಮಾಯಾ |

ತನ್ನನುವರಿಯದೆ ತೆರದಿತು ಬಾಯ |

ನೆನವಿಗೆ ಮೊದಲರುವಿನ ಗೇಹ | ತಾ

ನನಘ ಬಂದ ಶ್ರೀಗುರುರಾಯ ||2||

ತಂದೆ – ತಾಯಿ ಸತಿ ಸುತರಾಗಿ | ಒಳ್ಳ

ಬಂಧು ವಸ್ತು ವ್ಯಸನೊಸನಾಗಿ |

ಚಂದದಿ ಹರ ಮಂದಿರವಾಗಿ | ನೋಡ

ಬಂದ ಗುರು ಮೇಲಾಗಿ ||3||

ತನು ಮನ ಧನ ವಂಚಿಸಿ ನಾನು | ಹಿಂದೆ

ಸುನಿ ಸೂಕರನಾದೆನು |

ಅನಿತೆಲ್ಲ ಕೊಡುಕೊಳ್ಳುವವ ನೀನು

ಇನಸುತನಂಜಿಕಿ ನನಗೇನು |4||

ಹಲವು ಜನ್ಮ ತಿರುಗುತ ಬಂದೆ | ನಿನ್ನ

ನೆಲೆ ಅರಿಯದೆ ನಾ ಬಹು ನೊಂದೆ |

ಹೊಲಬನರಿಸಲು ದಯದಿಂದೆ | ಎನ್ನ

ಸಲಹು ಬಂದೆ ಶ್ರೀಗುರು ತಂದೆ ||5||

ಪಾತ್ರಾಪಾತ್ರ ಎಂಬುವ ನೀತಿ |

ಸ್ತೋತ್ರ ಶ್ರೋತ್ರದಿ ಕೇಳ್ಯಾದೆನು ಕೋತಿ |

ಕ್ಷೇತ್ರ ಯಾತ್ರಿ ಯಾತರ ಪ್ರೀತಿ |

ಗಾತ್ರ ಮಾತ್ರ ನೀ ಗುರು ಪರ ಜ್ಯೋತಿ ||6||

ಏಕಮೇವಾದ್ವಿತೀಯೆಂದು | ತಾ

ನ್ಯಾಕೆ ಕೂಗುತಾದ ಶೃತಿ ನಿಂದು |

ಬೇಕು ಬ್ಯಾಡೆರಡರದೊಂದು | ನನ

ಗ್ಯಾಕೆ ಬೇಕು ಘನ ಗುರುತೊಂದು ||7||

ಆಗೊ ಈಗೊ ಯಾಗೊ ಸಂಸಾರ |

ಬ್ಯಾಗ ಬ್ಯಾಗ ನೀಗಿಸಿದಿ ಭವಭಾರ |

ಬ್ಯಾಗಿ ಆದೆ ನಿರಹಂಕಾರ | ಶಿವ

ಯೋಗಿ ನಿನಗೆ ನಾ ಸುಕುಮಾರ ||8||

ಅಸ್ತಿ ಭಾತಿ ಪ್ರಿಯ ನಿಃಶೂನ್ಯ ಅದು

ವಸ್ತು ನನಗೆ ಸುಸ್ತಿರ ಮಾನ್ಯ

ವಿಸ್ತರಿಸಿದ ಪ್ರಮಥವರೇಣ್ಯ | ಹಿಂದೆ

ಪುಸ್ತಿಯಿತ್ತು ಪೂರ್ವದ ಪುಣ್ಯ ||9||

ಅಜಹರಿ ಮನು ಮುನಿ ಸುರರೆಲ್ಲ | ಶ್ರೀ

ಗುರುವಿನ ಗುರ್ತವ ಅರಿಲಿಲ್ಲ |

ಮರೆತಿರುವುದು ಹಿರಿತನವೆಲ್ಲಾ | ಮಹಾ

ದರಿವು ಅನಾಮಿಕ ತಾ ಬಲ್ಲ ||10||

ಚಿಣಮಗೇರಿ ಮಾಂತನ ಲೀಲಾ | ಕೇಳೊ

ಘಣಿಪತಿ ಹೇಳಲು ತಾ ಸಾಲ |

ಎಣಿಕೆಗೊಂಬುವೆನೆ ನಾ ಬಾಲ | ಮನ

ದಣಿ ಉಣಕಲತೇನು ಚಿನುಮಯಪಾಲ ||11|

ಲಲನೆ ಬಾ ನಮ್ಮ ನಿಲವುದೋರಿದ ಗುರು |

ಸಲಹಲು ಬಂದಿದೊ |

ಹಲವು ಜಲ್ಮ ನಮ್ಮ ನಲವುದಿನ್ಹೋಯಿತೊ |

ಸಲಹುದಾ ನಿಜಾನಂದೊ ||ಪಲ್ಲ||

ಆಶೆಯೇ ದಾಸಿ ನಿರಾಶಿಯೇ ಈಶತ್ವವೆಂದೋಸು

ಶಾಸ್ತ್ರೋದಿದೇವೆ |

ಕಾಶಿ ರಾಮೇಶ್ವರ ವಾಸ ಹರಿಹರ ಹಂಪಿ |

ಈಸು ತಿರುಗಿದೇವೆ ||

ಆಸೆಯು ನೀಗದೆ ಈಶ ತಾನಾಗದೆ |

ಘಾಸಿಯನೈದಿದೇವೆ ||

ಭಾಸುರಾತ್ಮ ಸರ್ವೇಶ ನೀವೆಂದಿಗೆ |

ಏಸು ಪುಣ್ಯದೊದಗಿದವೆ ||1||

ಅರ್ಥ ಪ್ರಾಣಭಿಮಾನ ಕರ್ತೃ ಶ್ರೀಗುರುವಿಗೆಂ

ಬರ್ಥವ ವೋದಿದೇವೆ |

ಮರ್ತ್ಯ ಲೋಕದ ಮಹದನರ್ಥ ದೈವಂಗಳ |

ವ್ಯರ್ಥಕೆ ಭಜಿಸಿದೆವೆ ||

ಗುರ್ತವರಿಯದೆ ಸದ್ವರ್ತನೆಯವರೆಂದು |

ನಿರ್ತಕೆ ನಿಗರಿದೆವೆ |

ಕರ್ತೃ ಭೃತ್ಯ ನಿವರ್ತಿ ಸಮರ್ತಿಯ |

ಅರ್ತು ತುರ್ತೈದಿದೇವೆ ||2||

ಹಿರಿಯರೀ ನರಜನ್ಮ ಹಿರಿದೆಂದರಲ್ಲಿ ತಮ್ಮ |

ಇರವು ತಿಳಿಯಲಿಲ್ಲೆ |

ಹರಿ ಅಜ ಇಂದ್ರರಿಗರಿಯಬಾರದು | ಮಹ

ದರವು ಮರವಿಗಿಲ್ಲೆ ||

ದುರಿತ ಧರ್ಮವು ಮಾಡಿ ಸ್ವರ್ಗವು ನರ್ಕವು ತಾಗಿ |

ತಿರಗೋ ತ್ರಿತಾಪದಲ್ಲೆ |

ವರದ ಶ್ರೀಮಹಾಂತನ ಕರುಣದಿಂದೆ | ಇಹ

ಪರ ಎರಡೆಮಗಿಲ್ಲೆ ||3||

ನಿರ್ವಂಚನೆ ಹಿಡಿದೊಲಸೊ ಶ್ರೀಗುರುವಿನ

ತವಕಿಸಿ ಮನಸಿಟ್ಟು ಕ್ಷಣ ಮಾತ್ರ |

ಸರ್ವವು ಸಿದ್ಧಿಯು ನಿಜಲಿಂಗೈಕ್ಯವು |

ಭವ ಭಯವುಳಿಯದು ಅಣು ಮಾತ್ರ ||ಪಲ್ಲ||

ನಾ ನೀನೆಂಬುದು ತಾನೆ ತಾನಹುದು |

ಏನು ಹೇಳಲಿ ಗುರು ಸಮರ್ಥ |

ಮಾನಾಭಿಮಾನವು ಸ್ವಾನುಭವ ಸುಖ |

ಹಾನಿಯಾಗದೇನನರ್ಥ ||1||

ಜಡ ತೋರಿಕೆ ಸ್ಥಿರಚರ ಜಗದ್ವಿಸ್ತಾರ |

ಸಡಗರ ಬಿಡದಡಸಿದ ಮಾಯಾ ||

ಅಡಗಿ ಜಳ ಜಳ ಇದ್ದಿಲ್ಲೆನಿಸಿದ |

ಕಡುಗಲಿ ಸುಲಭ ಶ್ರೀಗುರುರಾಯಾ ||2||

ಶಿವಗಣ ಅವಗುಣ ಅವಗುಣ ಶಿವಗುಣ |

ಅವಗುಣಕವಗುಣಿ ಆಭರಣಾ |

ಭವ ಅಭವಾದ ಮಹಾಮಹಾಂತೇಶ್ವರನ

ಶಿವ ಸರ್ವೋತ್ತಮ ಸಂವರಣಾ ||3||

ಸಾಕ್ಷಾತ್ ಸದ್ಗುರು ಪ್ರತ್ಯಕ್ಷವಾಗಲು

ಸ್ಥಿತಿಗತಿಗಳು ಕೇಳುವದ್ಯಾಕೊ |

ಆ ಕ್ಷಣಕಾಗುವದು ಅನಂತ ಸೌಖ್ಯವು |

ಮೋಕ್ಷವ ಪಡಕೊಳ್ಳುವ ಕುದಿಯಾಕೊ ||ಪಲ್ಲ||

ತನ್ನ ನಿಜವು ತಾ ತಿಳಿಬೇಕಾದರೆ |

ಭಿನ್ನಭಾವದ ಭ್ರಮಿ ಬಿಡಬೇಕೊ |

ತನುಮನಧನವನು ಉನ್ನತ ಗುರುವಿಗೆ

ಮನ್ನಿಸಿ ಮೋಹದಿ ಕೊಡಬೇಕೊ ||1||

ಅಲ್ಪಕಲ್ಪ ಸಂಕಲ್ಪನಾದರೆ |

ಅಲ್ಪ ಬುದ್ಧಿಗೆ ನಿಲುಕುವದಲ್ಲ |

ಅಲ್ಪಕಲ್ಪ ಸಂಕಲ್ಪ ನೀಗಿ ಉಪಾಸ್ತಿಕನಾದರೆ

ಒಲಿಮೀಲೆ ಸೆಳೆಕೊಳ್ಳು ತಾ ಬಲ್ಲ ||2||

ಅವರಿವರಾದರೇನೊ ಇವರವರಾದರೇನೊ |

ಅವರೇನ ಕೊಂಬುವರಿವರೇನೊ |

ಅವರಿವರೆಂಬುವ ಮಹಾಂತನೊಳಾದರೆ |

ಅವರ್ದೇನಿವರ್ದೇನಾಯಿತೇನ್ಹೋಯಿತೇನೊ ||3||

ಗುರುಚರಣ ಕಮಲ ಸೇವೆ

ಅನುವಾಗು ಮನುಜ ನೀ ಬೇಗನೆ ||ಪ||

ಗುರುರಾಜ ಯೋಗಿಯ ತೋರೆಲೊ ಹರಪದವಾಗಿಹ

ನಿರುತಲಿದ್ದು ನೀ ನೆರೆ ನಂಬು ಮನುಜ ನೀ ಬೇಗನೆ ||1||

ಸಿದ್ಧರಾಮ ಗುರು ಪ್ರಸಿದ್ಧವಾಗಿಹ

ಯಮುನದಲ್ಲಿದ ಜನರು ಗೆದ್ದರಲ್ಲೊ ಮನುಜ ನೀ ಬೇಗನೆ ||2||

ಅರುಣಚಲದಿ ಶ್ರೀಗುರು ಮಹಾಂತೇಶನ

ಕರುಣಾಮೃತದೊಳು ಮುಳುಗ್ಯಾಡೋ ಮನುಜ ನೀ ಬೇಗನೆ ||3||

ಗುರುಕರುಣವಿಲ್ಲದವನ ಸ್ನೇಹ

ಸಾವುತನಕ ಬೇಡ |

ಸಾಧು-ಸತ್ಪುರುಷರ ಸೇವಾ

ಮಾಡಿರುವುದು ಬಹುಪಾಡ ||ಪಲ್ಲ||

ಮಾತಿನೊಳಗ ಮಾತಿಲ್ಲದವನ ಸ್ನೇಹ

ಜಾತಿ ಜನ್ಮಕ ಬೇಡ |

ಹೀನ ಮನುಷ್ಯನ ಸ್ನೇಹವ ಮಾಡಿ

ನೀನು ಕೆಡಲಿ ಬೇಡ ||1||

ಅಕ್ಕ-ತಂಗಿಯರೆಂದು ಬಾಯಲಿ ಕರೆದು

ಹೊಕ್ಕು ಬಳಸಲಿ ಬೇಡ |

ನಿತ್ಯ ಕಾಲದಲ್ಲಿ ಆಶನವ ಉಂಡ

ಹೊತ್ತು ಗಳಿಯಲಿ ಬೇಡ ||2||

ಹಿರಿದಿಗೆ ಕಿರಿದು ಕಿರಿದಿಗೆ ಹಿರಿದು

ಸರಿಯ ಮಾಡಲಿ ಬೇಡ |

ಗುರು ಮಹಾಂತೇಶನ ಪಾದವ ಪಿಡಿದು

ಇರುವದು ಬಹು ಪಾಡ ||3||

ಗುರುವೆ ನೀ ಬೇಗನೇ ಮೊರೆ ಕೇಳೊ ವ್ಯರ್ಥ

ಹರಿದು ಹೋಗತಿನಿ ಹಿಡಕೋರೊ | ಯಪ್ಪ ||ಪಲ್ಲ||

ಪದರಿಗಿ ಬಿದ್ದಿನಿ ಪಾಪಿಷ್ಠ |

ಗುರು ಮಹಾಂತ ನೋಡೊ ಎನ್ನದೃಷ್ಟ |

ಸೇವಕ ನಿಂತಿನಿ ಗಟಮುಟ್ಟ |

ಗುರುರಾಯ ತಪ್ಪಿಸೊ ಈ ಭವದಾಟ ||1||

ಗುರುವೇ ನೀ ಹಾಕಿದಿ ಬಲಿವೊಂದು |

ಬೇರೆ ನಾ ಹಾಕಿಕೊಂಡೆ ಮತ್ತೊಂದು |

ಬಂಧನ ಬಿಡಿಸೊ ನೀ ಬಂದು |

ನಿನ್ನ ಹೊರ್ತು ಯಾರಿಲ್ಲೊ ಭಾಯಿಬಂಧು ||2||

ಏಸೋ ಜನ್ಮ ತಿಳಿಯಲದ್ಹೋದೆ |

ಈ ಜನ್ಮದಲ್ಲಿ ನಿನ್ನ ಮಗನಾದೆ |

ಯಾರು ತೋರುವರೊ ನಿನ್ಹಾದೆ |

ನೀ ಬಂದು ಹೇಳೊ ನಿಜಗುರು ಬೋಧೆ ||3||

ಸಾಧು ಸಂತರೊಳು ಕೂಡುವದು |

ಯೋಗ ಸಾಧನ ಮಾಡುವದು |

ನಿನ್ನ ಸ್ವರೂಪ ನೋಡುವದು |

ಸುಕೃತ ಪಡೆದು ತಾ ಬಂದದ್ದು ||4||

ಸಂದು ಸಂದಿಗೆ ಸೇರ್ಯಾದೊ |

ನಿನ್ನ ಧ್ಯಾನದೊಳು ನೆಲೆಯಾಗಿ ನಿಂತಾದೊ |

ಹಗಲಿರುಳು ಬಿಡದೆ ನಿನ್ನ ನೆನೆವಾದೊ |

ಗುರು ಮಹಾಂತ ನಿನ್ನ ಪಾದಕ್ಹೊಂದ್ಯಾದೊ ||5||

ಏನಾಗದೇನಾಗದೊ ಹರ

ನಿನ್ನೊಲಿಸುವದೇನಾಗದೊ | ಗುರು

ವಿನೊಲಿಸುವದೇನಾಗದೊ ||ಪಲ್ಲ||

ಹಮ್ಮನಳಿದು ತಾ ಸುಮ್ಮನಿದ್ದರೆ

ಬ್ರಹ್ಮನೊಲಿಸುವದೇನಾಗದೊ | ಪರ

ಬ್ರಹ್ಮನೊಲಿಸುವದೇನಾಗದೊ ||1||

ಆಶಿಯನಳಿದು ತಾ ಹೇಸಿಕೆ ತೊಳಿದರೆ

ಈಶನೊಲಿಸುವದೇನಾಗದೊ | ಜಗ

ದೀಶನೊಲಿಸುವದೇನಾಗದೊ ||2||

ಗರ್ವನಳಿದು ತಾ ಅರವಿನೊಳಾದರೆ

ಗುರುವಿನೊಲಿಸುವದೇನಾಗದೊ | ಗುರು

ಮಹಾಂತನೊಲಿಸುವದೇನಾಗದೊ ||3||

ಎಂಥ ಆಕಳ ಕೊಟ್ಟ ಗುರು ಕಾಮಧೇನ |

ಹಗಲು ಇರಳು ಹಾಲಗರಿವದೊಂದೇ ಸವನ |

ಉಂಡು ನೋಡಿದವನೆ ಬಲ್ಲ ಇದರ ಹೈನ |

ಬೆಲೆ ಮಾಡುವರಿಲ್ಲಪ್ಪ ಅದರ ಸವನ ||ಪಲ್ಲ||

ಭಾಳ ದಿನದ ಆಕಳಪ್ಪ ಹಳಿ ಮುದುಕಿ |

ಮಾಡುತ ಬಂದೆನಪ್ಪ ಅದಕ ಜ್ವಾಕಿ |

ಹಿಡದೇನಂದರ ಸಿಗುವದಿಲ್ಲ ಭಾಳ ಬೆರಕಿ |

ಅದಕ ನನಗ ಆಗಬೇಕು ಅಪಲಾಕಿ ||1||

ಬಾಯಿ ನೋಡಿದರ ಒಂದು ಹಲ್ಲು ಇಲ್ಲ |

ಗುಡ್ಡದಷ್ಟು ಮೇವು ಅದಕ ಸಾಲುವದಿಲ್ಲ |

ಅಷ್ಟು ತಿಂದು ಗಡಬಡಿಸತಾದೊ ಹಗಲೆಲ್ಲ |

ನೀರ ಕುಡಿವ ರಾಟಿ ಅದಕ ಮೊದಲೇ ಇಲ್ಲ ||2||

ಆಕಳಿರುವ ಸ್ಥಲ ಶಿವಪುರದಲ್ಲಿ |

ಬಲ್ಲವರಿಗಿ ತಿಳಿದಿತಪ್ಪ ಅದರ ನೆಲಿ |

ಆಕಳಿಗಿ ಇದ್ದವಪ್ಪ ಸಾವಿರ ಮಲಿ |

ನಮ್ಮ ಮಾಂತನ ಹೆಸರ ಮ್ಯಾಲ ಬಿಟ್ಟೇನ ಕಪಲಿ ||3||

ಹರಹರ ಹರಹರ ಹರಮಂತ್ರ |

ಇದು ನಿಜ ನೋಡು ಗುರುಮಂತ್ರ ||

ಕಾಲಹರ ಕರ್ಮಹರ ದುರಿತಹರ |

ಪಾಪವೆಲ್ಲ ಪರಿಹಾರ ಮಾಡೊ ಭವಾಂತರ ||ಪಲ್ಲ||

ಶಿಕ್ಷಾ ಗುರುವಿಗೆ ಶರಣಾರ್ಥಿ |

ಮೋಕ್ಷ ಗುರುವಿಗೆ ದಯಪೂರ್ತಿ ||

ಗುರುವಿನ ಗುರು ಪರಮಾರಾಧ್ಯರಿಗೆ |

ಮಹಾಮಹಾಂತನಿಗೆ ಶರಣಾರ್ಥಿ ||1||

ನಿರಾಳವಾಗಿ ಕರಗಳ ಮುಗಿದು |

ಬೇಡಿಕೊಂಬುವೆ ನಾ ಗುರುಕರಣ ||

ಬೇಡಿಕೊಂಬುವೆ ನಾ ಮಹಾಪ್ರಸಾದ |

ಪೂರ್ವ ಜನ್ಮದ ಕರ್ಮ ನಿವಾರಣ ||2||

ಅಷ್ಟಾಂಗ ಮುಟ್ಟಿ ಸಾಷ್ಟಾಂಗ ಹಾಕು |

ಶ್ರೇಷ್ಠ ಗುರುವಿಗೆ ಫಣಿ ಬಾಗು ||

ಇಷ್ಟಲಿಂಗದ ಪಾದಪೂಜೆಯ ಮಾಡು |

ಬೇಗನೆ ಮಹಾಂತನ ಒಡಗೂಡು ||3||

ಗುರುವಿನ ನೆನಿ ಮನವೆ ನಿರಂತರ |

ಗುರುವಿನ ನೆನಿ ಮನವೆ |

ಗುರುವಿನ ನೆನಿ ನಿನ್ನ ನಿಜವನು ತಿಳಿದು

ಹರುಷದಿಂದ ಬಹು ಜನ್ಮವ ಕಳೆದು ||ಪಲ್ಲ||

ತಿರುದ್ವಾರ ಮುಚ್ಚಿ ಸರಸಿಜ |

ಮಧ್ಯದಿ ಸ್ಥಿರದೃಷ್ಟಿಯನಿಡು |

ಕೋಟಿ ಅರುಣರುಚಿ ಸ್ಥಿರ |

ಚಿತ್ತದಿ ನೋಡು ಇದನು ||1||

ಆರು ಮೂರು ಚಕ್ರ ಆರು ಮೂರು |

ಲಿಂಗದ ನೆಲೆಯ ಸಾರ ನಾಲ್ಕು ದಳದೊಳು |

ಒಂದು ದಳನಾದೆ ಚಾರು ತರದಿ |

ಸದ್ಗುರುವಿನ ನೆನಿ ಮನವೇ ||2||

ಜಗನ್ಮಿಥ್ಯವೆಂದು ನಿಜತರ ಬ್ರಹ್ಮಸತ್ಯವೆಂದು |

ಝಗಝಗಿಸುವ ಮಹಾ |

ಬೆಳಗಿನೊಳಾತ್ಮನ ರಾಗದಿಂದ ತಿಳಿಸಿದ |

ವರಗುರು ಮಹಾಂತನ ನೆನಿ ಮನವೆ ||3||

ಸತ್ತು ತಿಳಿಯೊ ಗೊತ್ತು ಎತ್ತ ನೋಡಿದರಿತ್ತು |

ಅತ್ತಿತ್ತ ನೋಡಿದರಿಲ್ಲ ಹೊತ್ತು |

ಕತ್ತಲಿಯೊಳಗ ಜಗ ಸುತ್ತುತಲಿತ್ತು |

ಅರ್ತು ತಿಳಿಯೊ ನೀ ಗುರುಪಾದ ಚಿತ್ತು ||ಪಲ್ಲ||

ಮಾಡೇನಂದರ ಇಲ್ಲ ನೋಡೇನಂದರಿಲ್ಲ |

ರೂಢಿಯೊಳಗ ಗುರುದೇವ ಬಲ್ಲ |

ಸಾಕೇನಂದರ ಸಲ್ಲ | ಬೇಕೇನಂದರ ಬೆಲ್ಲ |

ಕಾಡಿನೊಳಗೋಡ್ಯಾಡುವ ಏ ಹುಚ್ಚಮಲ್ಲ ||1||

ಸತ್ತವಗ ಸಾವಿಲ್ಲ ಹೊತ್ತವಗ ಜೀವಿಲ್ಲ |

ಮುಟ್ಟಿಕೊಂಡಾತಗೆ ದೇಹಾನಿಲ್ಲ |

ನೆತ್ತಿಯೊಳಗ ಇಲ್ಲ ಒತ್ತಿ ನೋಡಿದರಿಲ್ಲ |

ಮುತ್ಯಾ ಮಾಂತನೆಂದು ತಿಳಿಯಲೆ ಕಲ್ಲ ||2||

ಗುರುಧ್ಯಾನ ಬಿಡಬ್ಯಾಡ ಪರದೇಶಿ

ಹರಧ್ಯಾನ ಮರಿಬ್ಯಾಡ ಸನ್ಯಾಸಿ ||ಪಲ್ಲ||

ಶ್ವಾನನಂತೆ ಕಂಡ ಕಂಡ ವಸ್ತು ಮೂಸಿ |

ನೀನು ಭವದೆ ಬಿದ್ದಾದಿ ಬಹು ಘಾಸಿ ||ಅ.ಪಲ್ಲ||

ಕೊಟ್ಟ ಭಾಷೆ ತಪ್ಪಬ್ಯಾಡ ಬೇವಾರ್ಸಿ |

ಎಟ್ಟಿತನವ ಬಿಟ್ಟು ನಡಿಯೊ ಹುಕಮಾಸಿ |

ಕೆಟ್ಟ ಗುಣವ ಅಟ್ಟಿ ಕೇಳೊ ಝಕಮಾಸಿ |

ಶ್ರೇಷ್ಠ ಪದವಿ ಪಡೆದು ಬಾಳೊ ನಿಜವಾಸಿ ||1||

ನಂಬಿದವರಿಗೀರಿಯಬ್ಯಾಡ ಮಹಾ ಘಾಸಿ |

ಸಾಂಬ ನಿನ್ನ ನರಕಕೊಗೆಯುವ ಜುಲಮಾಸಿ |

ಶುಂಭನಂತೆ ತಿರುಗಬ್ಯಾಡ ಎಲೆ ಹೇಸಿ |

ಕಂಬಕ್ಕೆ ನಿನ್ನ ಕಟ್ಟಿ ಬಡಿತಾರೊ ಎಲೊ ಯಾಸಿ ||2||

ಕಾಮಕೇಳಿ ಆಡಬ್ಯಾಡೊ ಭವವಾಸಿ |

ಸಾಮಗಾನ ಮರಿಯಬ್ಯಾಡೊ ಸುದರಾಸಿ |

ಸ್ವಾಮಿ ನೇಮಿಗಳಿಗೆ ದೂರಾಗದಿರು ಸೂಸಿ |

ಸುಮ್ಮನೆ ಜಗಳ ಮಾಡಬೇಡ ಮುಡ್ಡಿ ಏರಿಸಿ ||3||

ಸಂತಜನರ ಬೈಯಬ್ಯಾಡ ಪುರಮಾಸಿ |

ಕಂತೆ ಕಟ್ಟಿ ಸುಳ್ಳ ಹೇಳದಿರು ಕೈಬೀಸಿ |

ಕಂತುಹರನ ರೂಪಿ ಚಿಣಮಗೇರಿ ಗುಡ್ಡದ ವಾಸಿ |

ಮಹಾಂತೇಶನ ಪಾದಕೆರಗೊ ನೀ ಭವನಾಶಿ ||4||

ಹ್ಯಾಗೇ ತೀರಿತು ನಿನ್ನುಪಕಾರ

ಇದು ಅಪರಂಪಾರ |

ನೀಗಿಸಿದೀ ಜನುಮದವತಾರ

ಗುರುರಾಜ ಗಂಭೀರ ||ಪಲ್ಲ||

ಭೂತ ಪಂಚಕ ದೇಹವನು ಬಿಡಿಸಿ

ನೂತನ ತನು ತೊಡಿಸಿ |

ಧಾತು ದುರ್ದೈವದ ಭೀತಿ ಕೆಡಿಸಿ

ಖಾತರ ಶಿವನೆನಿಸಿ |

ಯಾತ್ಯಾತರ ಭಯವ ಪರಿಹರಿಸಿ

ಪ್ರೀತಿಲೆ ಪರಮರಿಸಿ ||1||

ಸಕಲ ಸ್ವರೂಪವು ತಾನೆ ಆಗಿ

ನಾನೆಂಬುದು ನೀಗಿ |

ಮುಕುರದಂದದಲಿ ತೋರಿದೆ ಯೋಗಿ

ನಿಖಿಳಸಹ ನಿಜವಾಗಿ |

ಮುಕುತಿ ಮಹದಾಂಗನೆಯ ಮದುವ್ಯಾಗಿ

ಸಂತೈಸಬೇಕಾಗಿ ||2||

ಧರೆಯೊಳುನ್ನತ ಕಡಕೋಳದ ಕ್ಷೇತ್ರ

ಉಪಮಿಲ್ಲದ ಯಾತ್ರಾ |

ನಗಿಯ ಮಾಡವರಿಗೆ ನರಕವೇ ಖಾತ್ರ

ತೋರಿದಿ ಶುಭನೇತ್ರಾ |

ನೀಗಿಸಿದೀ ಭವ ಭವ ಗಾತ್ರಾ ಮಾಡಿದಿ

ಮಹಾ ಮಹಾಂತ ಪವಿತ್ರಾ ||3||

ಏರಲಾರದ ಭಾರಿ ಗುಡ್ಡ ಏರಿಸಿದನು ಗುರುವಾ |

ಆರಾರರಿಯದ ಮೀರಿದ ಗುರುತಿದು |

ಗುರುವು ತೋರಿದ ಅರವಾ ||ಪಲ್ಲ||

ಜಾಗ್ರಸ್ವಪ್ನ ಸುಷುಪ್ತಿ ತೂರ್ಯದ |

ಗುಪ್ತ ತೋರಿದ ಗುರುವಾ |

ಇಪ್ಪತ್ತೊಂದುಸಾವಿರದಾರನೂರು |

ಜಪಿಸೆಂದನೋ ಜಪವಾ ||1||

ಬೈಲಗಿ ಬೈಲಾ ಬೈಲಾಕಾರಾ |

ಹೊಯಿಲದೋರಿದ ಗುರುವಾ |

ಬೈಲಿನೊಳಗೆ ಬಯಲ ಲಯವಾಗುವ |

ಬೈಲ ತೋರಿದ ಗುರುವಾ ||2||

ಎಲ್ಲನು ಬಿಡಿಸಿದ ಬಲ್ಲಿದ ಗುರು ತಾ |

ಕುಲವನು ಕೆಡಸಿದನೈ |

ಇಲ್ಲದ ನಡಿನುಡಿ ಬಲ್ಲಿದ ಮಹಾಂತನು |

ಬೈಲೊಳು ನಿಲ್ಲಿಸಿದನೈ ||3||

ನರನಾದ ಮೇಲೆ ಗುರುವಿನ ನಾಮ

ಜೀವದೊಳು ಇರಬೇಕು ||ಪ||

ಶಾಂತಿ ಸಮಾಧಾನ ಗುಣವಿರಬೇಕು

ಪಾತಕ ಗುಣ ಕಳೆದಿರಬೇಕು

ಮಾತು ಮಾತಿಗೆ ಶಿವಾ ಅನ್ನಬೇಕು ||1||

ಭೂತ ದಯಾಪೂರ ತಿಳಿದಿರಬೇಕು

ಭ್ರಾಂತಿಯ ಮಸಕವ ತೆರದಿರಬೇಕು

ಸುಚಿತ್ತರ ಸಂಗದೊಳ ಇರಬೇಕು ||2||

ತಂದೆ ಮಹಾಂತೇಶನ ದಯ ಪಡೆದಿರಬೇಕು

ಬಂದಿದ ಸುಖ ಉಂಡು ಬಿಡಬೇಕು

ಚಂದನಾಗಿ ಜಗದೊಳು ಇರಬೇಕು ||3||

ನೋಡಿ ಭಜಿಸೊ ಮಾಂತೇಶ್ವರ ಲಿಂಗ |

ಕೂಡಿಕೊಳ್ಳುವ ತಾ ನಿನ್ನಂಗ |

ಮಾಡಬೇಡೊ ಪರ ನಾರಿಯರ ಸಂಗ |

ಥೋಡೆ ದಿವಸದ ಪ್ರಾಯ ಹುಚಮಂಗ ||ಪಲ್ಲ||

ಅಷ್ಟಮದವಳಿದಷ್ಟಪಾಶ ಪರಿ |

ದಷ್ಟಭೂತ ಗುಣಗಳ ನೀಗೊ |

ಅಷ್ಟಾವರಣ ಹಿಡಿದಷ್ಟಾರ್ಚನೆಯಿಂ |

ದಷ್ಟ ದಳದಿ ನೀ ಬೆರಗಾಗೊ |

ದುಷ್ಟ ಮಾನವರ ತಂಟೆಕೆ ಹೋಗದೆ |

ನಿಷ್ಠೆವಂತರಿಗೆ ತಲೆ ಬಾಗೊ ||1||

ಆಶೆ ಬಿಡದೆ ಪರದೇಶವ ತಿರುಗುತ |

ಕಾಶಿಯಾತ್ರೆ ಮಾಡಿದರೇನೊ |

ಸಾಸಿರ ಜನ್ಮದ ದೋಷವ ಕಳೆಯದೆ |

ಏಸು ದಿವಸ ಬದುಕಿದರೇನೊ |

ಕಾಸು ವೀಸುಗಳ ದಾಸೋಹ ಮಾಡುತ |

ಈಶನ ನೆನೆದರೆ ಕಡಿಮೇನೊ ||2||

ಪೊಡವಿಯೊಳಗ ಮಿಗಿಲ ದೃಢ ಸೈದಾಪೂರ |

ದಡವಿ ಗಿಡದ ಮೊರಡಿಗೆ ಬಂದ |

ಮೃಢ ಮಹಾಂತೇಶನ ಬಡಗಲ ದಿಕ್ಕಿನೊಳು |

ಒಡಿಯ ಹಾನ ಪರಮಾನಂದ |

ಮಡಿವಾಳದೇಶಿಕ ಬಿಡದ್ಹೇಳಿದ ಪದ |

ನಡಕೊಂಬವರಿಗೆ ಬಹು ಚಂದ ||3||

ಹರ ಮುನಿದರೆ ಗುರು ಕಾಯುವನೆಂದು

ಸರ್ವಶಾಸ್ತ್ರ ಓದಿ ಹೇಳುತಿರಿ

ವರವ ಕೊಟ್ಟ ಗುರುವು ಮನೆಗೆ ಬಂದರೆ

ಗರುವಿನ ಮಾತೊಂದಾಡುವಿರಿ ||ಪ||

ಹಡೆದ ತಾಯಿ ತಂದೆ ಮಡದಿ ಮಕ್ಕಳು

ಸಂಪತ್ತು ಸಹಿತ ಇರುವರು

ಬಡವ ಗುರು ತನ್ನ ಮನೆಗೆ ಬಂದರೆ

ಒಡೆದಂಬಲಿ ಕಾಸಿ ನೀಡುವರು ||1||

ಸಿಟ್ಟಿನಿಂದ ಭಿಕ್ಷೆ ಬಿಟ್ಟು ಹೋದರೆ

ಥಟ್ಟೆ ಮಾಡಿ ನೀವು ನಗುವಿರಿ

ಹುಟ್ಟಿದ ಮಕ್ಕಳಿಗೆ ಕಷ್ಟ ಬಂದರೆ

ಗುರುವೆ ಕಾಯೋ ಎನ್ನುವಿರಿ ||2||

ಊಚ ಕುಲದವರೆಲ್ಲ ಉಚ್ಚಿ ಬಿದ್ದವರೆಲ್ಲ

ಹೆಚ್ಚಿನ ಕ್ರಿಯೆ ನೀವು ಮಾಡುವಿರಿ

ನಾಚ ಮಾಡುವಳ ಜೊತೆ ಚಾಪೆ ಮೇಲೆ ಕುಂತು

ಕಾಚಾ ಎಲಿ ಸುಣ್ಣ ನೀವು ತಿನ್ನುವಿರಿ ||3||

ಪೊಡವಿಗಧಿಕವಾದ ಸುಲಭ ಚಿಣಮಗೇರಿ

ಸಡಗರ ಮರಡಿಯನೇರಿ

ಮೃಢ ಮಹಾಂತೇಶಗ ಕೂಡಿಕೊಂಡು

ನೀ ಕಳೆದುಕೊಳ್ಳು ಭವ ದಾರಿ ||4||

ಎಲೆಲೆ ಶ್ರೀ ಮಹಾಂತ ಮಾರಾಯ |

ಸಲ್ಲುವದೇನೊ ನಿಮಗ್ಹಿಂತ ನ್ಯಾಯ |

ಅಲಕು ಮಲಕಿಗೆ ತಳಕಿಕ್ಕಿದಾಯ ನೆಲೆಯ

ಅರಿಯದವಗಾಗದೀ ಸಾಯ ||ಪಲ್ಲ||

ಹಡಗದ್ಯಾವರ ಕೊಬ್ಬನಟ್ಟಿ |

ತುಡಗಿಗೊಬ್ಬನ ಬೆನ್ನಿಂದ ಬಿಟ್ಟಿ |

ಕಡಲ ದ್ರವ್ಯ ನೀ ಬಚ್ಚಿಟ್ಟಿ |

ಬಡಿದರೇನವ ಕೊಡುವನೆ ಶೆಟ್ಟಿ ||1||

ಕೋಟಿ ಖಾನಿಗೆ ಕಾವಲಿ ಇಟ್ಟಿ |

ಕೋಟಿ ಇಲಿಗಳಿಗೆ ಅಪ್ಪಣೆ ಕೊಟ್ಟಿ |

ನೇಟಿಸಿದರೇನವ ಕೊಡುವನೆ ತುಟ್ಟಿ |

ಚೀಟಿಯೊಳಗಿದ್ದ ಲೆಕ್ಕ ಮುಂದಿಟ್ಟಿ ||2||

ಸಲಹಿ ಎನ್ನ ಮಾಡಿದಿ ಜಟ್ಟಿ

ಭಲೆರೆ ಹುಲಿಯ ಮೇಲ ಕಾಳಗ ಬಿಟ್ಟಿ |

ಕೊಲ್ಲಲು ಸಾಯಲು ಬ್ಯಾಡೆಂಬೊದಿಟ್ಟಿ |

ಚೆಲುವ ಮಹಂತ ಏನಿದು ತಿಟ್ಟಿ ||3||

ಮಹಾಂತ ಮಹಾಂತಯೆನ್ನಿ |

ಜಯ ಜಯ ಮಹಾಂತ ಮಹಾಂತಯೆನ್ನಿ |

ಆ ನಿರ್ವಯಲಾಗುವ ಬನ್ನಿ |

ಮಹಾಂತ ಮಹಾಂತಯೆನ್ನಿ ||ಪಲ್ಲ||

ದಶನಾಡಿಗಳಿರ್ಯಾ ಮೋಹದ |

ದಶ ಇಂದ್ರಿಯಗಳಿರ‍್ಯಾ |

ನಸಿಮಸಿಯಾಗುವ ಘಸಣಿ ಇದ್ಯಾತಕೆ |

ದಶ ವಾಯುಗಳಿರ‍್ಯಾ ||1||

ನವನಾದಗಳಿರ‍್ಯಾ ಅಲ್ಲಿ |

ನವಮೋದಗಳಿರ‍್ಯಾ |

ಅವ ಇವಯೆಂಬುವ ಭವ ಭ್ರಮಿಯಾತಕೆ |

ನವ ದೈವಗಳಿರ‍್ಯಾ ||2||

ಅಷ್ಟ ಭೂತಗಳಿರ‍್ಯಾ ಎಲೊ ಎಲೊ |

ಅಷ್ಟ ನಾಥಗಳಿರ‍್ಯಾ |

ಅಷ್ಟ ಇಷ್ಟರೊಳು ಕಷ್ಟ ಬಿಡುವದೇನು |

ಅಷ್ಟ ಮದಗಳಿರ‍್ಯಾ ||3||

ಸಪ್ತ ಧಾತುಗಳಿರ‍್ಯಾ ಪತಿವ್ರತ |

ಸಪ್ತ ಮಾತೃಗಳಿರ‍್ಯಾ |

ತಪ್ತವಾದ ಹುಸಿ ಸಪ್ತವಿದ್ಯಾತಕೆ |

ಸಪ್ತ ವ್ಯಸನಗಳಿರ‍್ಯಾ ||4||

ಆರು ವರ್ಗಗಳಿರಾ ಮೇಲಾದ |

ಆರು ಭ್ರಮೆಗಳಿರ‍್ಯಾ |

ತೋರಡಗುವ ತನು ಘೋರಿಸುವದ್ಯಾತಕೆ |

ಆರು ಉರ್ಮಿಗಳಿರ‍್ಯಾ ||5||

ಪಂಚ ಕ್ಲೇಶಗಳಿರ್ಯಾ ಶೋಕದ |

ಪಂಚಕೋಶಗಳಿರ‍್ಯಾ |

ಪಂಚರಿಸುವ ಇಹ ಸಂಚಲವ್ಯಾತಕೆ

ಪಂಚ ಪಾಶಗಳಿರ‍್ಯಾ ||6||

ನಾಲ್ಕು ಜಾತಿಗಳಿರ‍್ಯಾ ಮತ್ತು |

ನಾಲ್ಕು ಗಾತ್ರಗಳಿರ‍್ಯಾ |

ಮೇಲ್ಕಲೆ ಅರಿಯದೆ ಹಿಲ್ಕೂಲ ಯಾತಕೆ |

ನಾಲ್ಕು ಕರಣಗಳಿರ‍್ಯಾ ||7||

ಮೂರು ತಾಪಗಳಿರ‍್ಯಾ ಮರವಿಯ |

ಮೂರು ತಾಪಗಳಿರ‍್ಯಾ |

ಮೂರಾರೊಳಗ ಮೀರುವದ್ಯಾತಕೆ

ಮೂರು ಗುಣಗಳಿರ‍್ಯಾ ||8||

ಎರಡು ಕರ್ಮಗಳಿರ‍್ಯಾ ಸುತ್ತುವ

ಎರಡು ವರ್ಮಗಳಿರ‍್ಯಾ |

ಎರಡೆರಡೆಂಬುವ ಹುರುಡಿನೊಳೇನಾದೆ |

ಎರಡು ಸೊಮ್ಮುಗಳಿರ‍್ಯಾ ||9||

ಒಂದೇ ಜೀವಗಳಿರ‍್ಯಾ ಹಲವು |

ಒಂದೇ ಭಾವಗಳಿರ‍್ಯಾ |

ಒಂದೊಂದಾಗಲು ಅಂದಿಂದ್ಯಾತಕೆ |

ಒಂದೇ ಆತ್ಮಗಳಿರ‍್ಯಾ ||10||

ಸರ್ವಜ್ಞಾನಿಗಳಿರ‍್ಯಾ ಶಿವ ಸುಖ |

ಸರ್ವ ಮೌನಿಗಳಿರ‍್ಯಾ |

ಸರ್ವ ಮಹಾಂತನೇ ಇರ್ವದಿನ್ಯಾತಕೆ

ಸರ್ವ ಅರುವಿಗಳಿರ‍್ಯಾ ||11||

ನುಡಿಯೊ ನುಡಿಯೊ ಶಿವನಾಮವನು | ನೀ

ನುಡಿಯೊ ಇದೇ ಜನ್ಮ ನಿನಗ ಕಡಿಯೊ ||ಪಲ್ಲ||

ಶಾಂತಿಯ ಪಾಠ ಕಲಿಯೊ |

ಸದ್ಧರ್ಮದಿಂದ ನಡಿಯೊ ||1||

ಅಡಿಗಡಿಗೆ ಸತ್ಯ ನುಡಿದು

ನುಡಿದಂತೆ ನೀನು ನಡಿಯೊ ||2||

ಸಾಧುಗಳ ಸೇವೆಗೈದು |

ಗುರು ಕರುಣೆಯನ್ನು ಪಡೆಯೊ ||3||

ಶರಣರ ಭಕ್ತಿಗಾಗಿ | ಶಿವ ತಾ

ತೀರಿಸಿದ ಸಾಲ ||4||

ಕೊಡಗೂಸಿನಾಸಿಗಾಗಿ ಬಿಸಿ

ಹಾಲ ಕುಡದಿ ಯೋಗಿ ||5||

ಬಡವ ಬಂಧು ಎಂದು |

ಪರಿಕಷ್ಟ ತನ್ನದೆಂದು ||6||

ಧನವಿರಲಾದಿನ ಮಾಡು |

ಮೃಢ ಮಹಾಂತನೊಲಿವನು ನೋಡು ||7||

ಛಲವೇನು ಉಮಾವರ ನಿನ್ನ

ಕುಲವೇನು ಗಂಗಾಧರ ||ಪ||

ಬಂಕನ ಸಹವಾಸ ಲಂಕೆಗೆ ಅಳದಿ

ಶಂಖದೊಡೆಯ ಬಮಶಂಕೆಗೆ ಸಿಲುಕಿದಿ ||1||

ಪಿಟ್ಟೆವ್ವನ ಪಾಶವು ಹೊಟ್ಹರೆವುಂಡು

ನೀ ಬಿಟ್ಟಿಗಾಯಸದೊಳು ಕುಟ್ಟಿಸಿಕೊಳ್ಳುವುದು ಛಲವೇನು ||2||

ಚಂಗಳಿ ತನಯನ ಅಂಗವ ಅಡಗಿಸಿದಿ

ಮಂಗಲದೊಳು ಮುಡಿ ಶೃಂಗಾರ ಕೆಡಿಸಿದಿ ಕುಲವೇನು ||3||

ಮಾಡಿದಿ ಕುಂಟಣಿ ಎಮ್ಮನದೊಡೆಯನಿಗೆ

ಬೇಡನ ಪೂಜೆಯು ಪಾಡೆನು ನೀನಗೆ ಛಲವೇನು ||4||

ಬಡಿವಾರದಲಿ ಅಂಬಲಿ ಕುಡಿದೆಲ್ಲೆಲ್ಲೆ

ಮೃಢ ಮಹಾಂತೇಶ ನಿನ್ನ ಬುಡ ನಾ ಬಲ್ಲೆ ನಾ ಬಲ್ಲೆ ||5||

ಎಲಿರೊ ಎಲಿರೊ ಕೆಡಬ್ಯಾಡಿರೋ |

ನಿಮ್ಮ ಒಡಲೊಳಗೆ ಶಿವಹಾನ ನೋಡಿರೋ |

ಕುಲಚಲಕೆ ಹೊಡದಾಟ ಬೇಡಿರೋ |

ಮುಂದ ನೆಲೆ ಮಾಡಿಕೊಳ್ಳುವದು ನೋಡಿರೋ ||ಪಲ್ಲ||

ಸ್ಥಿರವಿಲ್ಲರೋ ಈ ಸಂಸಾರ | ಗಾಳಿ

ಗಿರಿಸಿದ ದೀವಿಗಿ ಪ್ರಕಾರ |

ತಿರುಗಿ ತಿರುಗಿ ಬರುವದು ಘೋರ | ಮುಂದೆ

ಮರಳಿ ದೊರಕೊಂಬುದು ಬಹು ದೂರ ||1||

ಮಕ್ಕಳ ಮೋಹಕ್ಕ ಮರಗೀರಿ | ಒಳ್ಳೆ

ಸೊಕ್ಕಿದ ಹೆಣ್ಣಿಗಿ ಸೊರಗೀರಿ |

ರೊಕ್ಕಕೆಷ್ಟು ನೀವ ತಿರುಗೀರಿ ದಿಮ್ಮ ದಿರಗೀರಿ | ನಾಳೆ

ಡೊಕ್ಕಿ ಮುರಿವ ಯಮಗ ನಲಗೀರಿ ||2||

ದಾನ ಮಾಡಂದರೆ ನೆಳ್ಳತೀರಿ | ತುಸು

ಬ್ಯಾನಿ ಬಂದರ ನೆಲಕುಳ್ಳತೀರಿ |

ಜಾನು ಮಬ್ಬಿನೊಳು ಕುಳತೀರಿ | ನಾಳೆಯ

ಮನು ಬಂದರೇನ್ಹೇಳತೀರಿ ||3||

ಮೃತ್ಯುಂಟೆಂಬುದು ಹೇಳತೀರಿ | ನಿಜ

ಗೊತ್ತು ತಿಳಿಯದಲೆ ಒಳ್ಳತೀರಿ

ಮುತ್ತು ರತ್ನವಿಟ್ಟು ಹೊಳಿತೀರಿ | ನಾಳೆ

ಸತ್ತು ಮೂರ ದಿನಕ ಕೊಳಿತೀರಿ ||4||

ಎರಡು ಮೂರು ಆರು ಅರಿಯಬೇಕರ್ಯೊ | ಆ

ಎರಡು ಮೂರು ಆರು ಜರಿಬೇಕರ್ಯೊ |

ಹೊರಗ ಒಳಗ ಒಂದೆ ತಿಳಿಬೇಕರ್ಯೊ | ಶ್ರೀ

ಗುರು ಮಾಂತೇಶನ ಬೆರಿಬೇಕರ್ಯೊ ||5||

ಶಿವನಾಮವ ಸ್ಮರಿಸೊ | ಈ

ಭವ ಮಾಲೆಯ ಪರಿಹರಿಸೊ

ಜೀವ ಶಿವನ ಬೆರಿಸೊ | ಆತ್ಮನ

ಭೇದವ ಪರಿಹರಿಸೊ ||ಪಲ್ಲ||

ಥೋಡೆ ದಿನದ ಸಂತಿ | ಆತ್ಮನ

ನೋಡದೆ ನೀ ಕುಂತಿ

ಖೋಡಿ ಮರಗಿ | ಭ್ರಾಂತಿ

ನಾಡೊಳು ಕುಣಿಸ್ಯಾಳೊ ಈ ಕಾಂತಿ

ಬೇಡೊ ಪರರ ಚಿಂತಿ | ನಾಳೆ

ಯಮ ಕೇಳಿದರೇನಂತಿ ||1||

ಅರ್ಥ ಪ್ರಾಣಭಿಮಾನ ಅವರವ

ರರ್ತು ನೀಡೋ ಬೋನ |

ಕರ್ತೃ ಶ್ರೀಗುರು ಧ್ಯಾನ | ಅಮೃತ

ತುರ್ತು ಮಾಡೊ ಪಾನ

ಬೆರ್ತುಕೊಳ್ಳೊ ಮಹಾಜ್ಞಾನ | ಅದ್ರೋಳ

ಗಿರ್ತದೊಂದೆ ಖೂನ ||2||

ಕುಲ ಛಲಕ್ಹೋರಾಡಿ | ತಾ ಪ್ರ

ಜ್ವಲಿಸುವ ಮುಖ ಬಾಡಿ

ಹಲಬರ ಹಳಿದಾಡಿ | ಪುಣ್ಯದ

ಫಲ ಹೋಯಿತು ಜ್ಯಾಡಿ

ಕಲಕಿನೊಳಗೆ ಕೂಡಿ | ನಡ

ದೆಲ್ಲ ನೆಲಮನಿಗೆಲೆ ಖೋಡಿ ||3||

ಆಯುಷ್ಯ ಹತ್ತುತ್ತು | ರಾತ್ರಿಗೆ

ಹೋಯಿತು ಐವತ್ತು |

ಪ್ರಾಯಕೆ ಇಪ್ಪತ್ತು | ಕಾಯಜ

ಘಾಯಿಗೆ ಮೂವತ್ತು |

ವಾಯುಗಿಲ್ಲೊ ಹೊತ್ತು | ನೀ

ತಿಳಿಯೊ ವೇಳ್ಯಕೆ ಗೊತ್ತು ||4||

ಆಶಿಯ ಮಾಡಬೇಡ | ಭಾಳ

ನಿರಾಶಿಲೆ ಕೆಡುಬೇಡ

ದ್ವೇಷವ ತೊಡಬೇಡ | ಒಬ್ಬರ

ದೂಷಿಸಿ ನುಡಿಬೇಡ

ಫಾಸಿಲಿ ಬಡಿಬೇಡ | ಶ್ರೀಗುರು

ಮಹಾಂತೇಶನ ಮರಿಬೇಡ ||5||

ಎಲೊ ಎಲೊ ಶಿವಮಂತ್ರವ ನುಡಿಯೋ |

ನೀನದನೊಲಿಸುವ ಸಾಧನ ಪಡಿಯೋ |

ಕುಲಛಲ ಭವ ಬಳ್ಳಿಯ ಕಡಿಯೋ |

ನಿನ್ನ ನೆಲೆ ತಿಳಿಸುವ ಗುರುವಿನ ಹಿಡಿಯೋ ||ಪಲ್ಲ||

ಈ ಲೋಕದ ಸುಖ ಸಂಸಾರ |

ತಾನಾ ಲೋಕಕ್ಕೆ ಆಯಿತು ದೂರ |

ಆ ಲೋಕದ ಸುಖದಾಚಾರ | ಅದು

ಈ ಲೋಕದೊಳಗ ಆದ ಬಹು ಘೋರ ||1||

ಒಂದರ ಸಂಘಕ್ಕೊಂದಿಲ್ಲಾ | ತನು

ಕಂದಿಸುವದು ಕಡೆ ಮೊದಲಿಲ್ಲಾ |

ಬಂಧಿಸುವದು ಭವದೊಳಗೆಲ್ಲಾ | ಅದು

ಒಂದ ಬಿಟ್ಟರೊಂದಿಲ್ಲಾ ||2||

ತ್ಯಾಗದಿಂದ ತಾ ಶಿವಯೋಗ | ಆ

ಯೋಗದಿಂದ ಇಂದ್ರನ ಭೋಗ |

ಭೋಗದೊಳಗಿಲ್ಲದ ರಾಗ | ಆ

ರಾಗದೊಳಗೆ ಈ ಭವರೋಗ ||3||

ಒಂದಿದ್ದರೆ ಒಂದಿರಲಿಲ್ಲಾ | ತ

ಹಿಂದೆ ಮಾಡಿದ್ದಾಗುವದಲ್ಲಾ |

ಮುಂದೆ ಹುಡುಕಿದರದು ಸಿಗುದಿಲ್ಲ |

ಹಿಂದ ಮುಂದರ ಸಂದುಳಿತಲ್ಲಾ ||4||

ಎರಡೊಂದಾಗುವದೇ ತತ್ಸಂಗಾ | ನೀ

ತುರ್ತ ಮಾಡಿಕೊಳ್ಳಲೆ ಮಂಗಾ |

ಎರಡೆರಡಾದುದೆ ಮಹದಂಗಾ | ಆ

ಎರಡೊಂದಾದುದೆ ನಿಜಲಿಂಗಾ ||5||

ಹತ್ತರೊಳಗೆ ಒಂದು ಹನ್ನೊಂದು | ನೀ

ಮತ್ತೆ ಹುಡುಕುವದ್ಯಾತಕೆ ಸಂದು |

ಚಿತ್ತಿನೊಳಗೆ ಚಿತ್ತನ ಹೊಂದು | ಅದು

ಸುತ್ತು ಸುತ್ತು ಸುಳಿಯುವದೊಂದು ||6||

ಬುಡನಡು ಕೊನಿ ಲಕ್ಷಪರೋಕ್ಷ | ನೀ

ಬಿಡದಿರು ನಡಿನುಡಿವುದೇ ಶೀಕ್ಷಾ |

ಅಡರಡಿಸುವ ನಿರ್ವಾಣ ದೀಕ್ಷಾ | ಆ

ಮೃಢ ಮಹಾಂತೇಶನು ಮಾಡುದ ಮೋಕ್ಷಾ ||7||

ಕಾಯೋ ಶ್ರೀ ಸಾಂಬ ಶಿವ ಒಲ್ಲೆ ಭವ ||ಪಲ್ಲ||

ಅಂಡಜ ಪಿಂಡಜ ಸ್ವೇದಜ ಜಾರಜ |

ಲೆಂಡಬಂಡೊ ಈ ಭ್ರಮ ಅದೇ ಶ್ರಮ ||1||

ಚಿತ್ರನು ಸೋತ ಮಿತ್ರಜ ಭೀತ |

ಪತ್ರ ದೋಷಾಹಿಭರ ಅಹೋಹರ ||2||

ಮೃಢ ಮಹಾಂತೇಶ ಹಿಡಿಯದಿರು ಕ್ಲೇಶ

ಕೊಡು ನಿನ್ನೊಳೈಕ್ಯಪದ ನಿರ್ವಾಣವ ||3||

ಶಿವ ಶಿವ ಶಿವ ಶಿವ ಶಂಭೋ |

ಶ್ರೀ ಮಹಾದೇವ ಶಿವಶಂಭೋ ||ಪಲ್ಲ||

ಹಲವು ಜನ್ಮ ತಿರುಗಿದೆ | ನಾ

ಕುಲಛಲಕೆ ಮರಗಿದೆ |

ಅಲ್ಲಿ ನೆಲೆಗಾಣದೆ ಸೊರಗಿದೆ | ನಿನ್ನ

ಹೊಲಬನರಿಯದೆ ಕೊರಗಿದೆ ಕೊರಗಿದೆ ಕೊರಗಿದೆ ||1||

ಮನ್ಮಥಗೊಡಲವ ಕೊಟ್ಟೆ ನಾ |

ಸನ್ಮತ ಮಾರ್ಗವ ಬಿಟ್ಟೆ ನಾ |

ದುರ್ಮತ ನೀತಿಯ ತೊಟ್ಟೆ ನಾ

ಉನ್ಮತ್ತ ಗುಣದಲ್ಲಿ ಕೆಟ್ಟೇ ನಾ ಕೆಟ್ಟೇ ನಾ ಕೆಟ್ಟೇ ನಾ ||2||

ಅಶನ ವ್ಯಸನಕ್ಕೆ ನಾ |

ಪಸರವ ತೋರಿದಾಟಕ್ಕೆ | ಈ

ವಿಷಯದ ಅವನಿಯ ಹೊಕ್ಕೆ | ನಾ

ಬಿಸಜಾಪ್ತಣುಗಗೆ ಸಿಕ್ಕೆ ನಾ ಸಿಕ್ಕೆ ನಾ ಸಿಕ್ಕೆ ನಾ ||3||

ಖಳಜನ ಗೆಳತನ ಮಾಡಿ | ನಾ

ಹಳದೇನು ಹಳಬರ ನೋಡಿ | ನಾ

ಬಳಲಿದೆ ಬಲಕ್ಹೋರ್ಯಾಡಿ | ನಾ

ಕಳೆಗಳೆದುಳದೇನು ಖೋಡಿ ನಾ ಖೋಡಿ ನಾ ಖೋಡಿ ನಾ ||4||

ಪೊಡವಿಯೊಳಗ ಚಿಣಮಗೇರಿ |

ಸಡಗರ ಮರಡಿಯನೇರಿ | ಆ

ಮೃಢ ಮಾಂತೇಶಗ ದೂರಿ | ನಾ

ಬಿಡಿಸಿಕೊಳ್ಳುವೆ ಭವದಾರಿ ಭವದಾರಿ ಭವದಾರಿ ||5||

ಸಾಂಬ ಸದಾಶಿವ ಕಾಯೋ ಹರಾ ||ಪಲ್ಲ||

ಹಲವು ಜನ್ಮದಿ ನಿನ್ನ ಹೊಲಬುದಪ್ಪಿದೆ ನಾ |

ಒಲಿದು ಈ ಭವ ಗೆಲಿಸಯ್ಯಾ ಹರಾ ||1||

ಕಕ್ಕುಲಾತಿಗೆ ಮನ ಸಿಕ್ಕಿ ಬಳಲಿದೆ ನಾ |

ದುಃಖ ಪಡುವದೇನಯ್ಯೊ ಹರಾ ||2||

ಮೃಢ ಮಹಾಂತೇಶ ಹಡೆದ ಕುವರ ನಾ |

ಬಿಡದಿರು ಹಿಡಿ ಬೇಗ ಕೈಯ ಹರಾ ||3||

ಶಿವ ಶಿವ ಶಿವ ಶಿವ ಸದಾ ಸ್ಮರಣ ಶಿವನಾಮವೋವೋ ||ಪ||

ನಡಿ ನುಡಿ ಕೆಡಗುಡದ್ಹಿಡದಾಚರಿಸುವೆ |

ದೃಢ ಸಡಗರ ವ್ಯಾವ್ಹಾರವೋವೋ ||1||

ಲಯ ಗಮನಂಗಳ ಬಯಲ ನಿರ್ವಾಣ |

ದಯಾನಿಧಿ ಗುರುಪಾದ ಸೇವವೋವೋ ||2||

ಅಷ್ಟವಿಧಾರ್ಚನೆ ತೃಷ್ಟಿ ಕರಕಮಲ |

ದೃಷ್ಟಿಸಿ ಲಿಂಗ ಶಿವದೃಷ್ಟಿವೋ ||3||

ಪಾವನ ಜಗದಘದಾವನ

ಮತ್ಸ ಜೀವನ ಜಂಗಮದೇವವೋವೋ ||4||

ಷಡು ಶಕ್ತಿಯ ಷಡುಲಿಂಗ ಷಡುಸ್ಥಲ |

ಷಡು ಸಮರಸ ಸದಾತ್ತವೋವೋ ||5||

ಹಲವಿದಕ್ಹೊಲಬಿನ ನೆಲೆ ಕಲೆ ಅರಿಯಲು |

ಸಲೆ ಬಲು ಸೀಮೆಯೆ ಶಿವಧ್ಯಾನವೋವೋ ||6||

ಭವ ವಿರಹಿತದನುಭವ ಮಹಾಂತೇಶನ |

ಅವಿರಳ ಸುಖ ಮನ ನಲಿವವೋವೋ ||7||

ಶಿವಶಿವ ಶಿವಶಿವ ಅನುವಲ್ಲಿ | ನೀ

ಗುರುವಿನ ಪಾದ ಹಿಡಿವಲ್ಲಿ |

ಹೇಳಿದ ಮಾತೊಂದು ಕೇಳವಲ್ಲಿ | ನಿನ್ನ

ಹೀನ ಗುಣದ ಬುದ್ಧಿ ಬಿಡವಲ್ಲಿ ||ಪಲ್ಲ||

ಹಸ್ತು ಬಂದ ಜಂಗಮ ಯೋಗಿ | ನೀ |

ಕುಸ್ತಿಕಾಳಗ ಮಾಡಿದಿ ಕಾಗಿ |

ಮುಂದಿನ ಮನಿಗ್ಹೋಗಂದಿ ಸಾಗಿ | ನಿನಗ

ಮುಕ್ತಿ ಹ್ಯಾಂಗ ದೊರೆವುದು ಗೂಗಿ ||1||

ಹಿರಿಯರು ಗಳಿಸಿದ ಪುಣ್ಯದ ರೊಕ್ಕ | ಬೆಳ್ಳ

ಬೆಳತನಕ ಮಾಡಿಟ್ಟಿದಿ ಲೆಕ್ಕ |

ಕೊಳ್ಳಿ ತಗೊಂಡು ಕಳ್ಳ ಮನಿ ಹೊಕ್ಕ | ನೀ

ನೆರಳುದು ಕಂಡು ಶಿವ ತಾ ನಕ್ಕ ||2||

ಬರುವಾಗ ಏನೂ ತಂದಿಲ್ಲಾ | ನೀ

ಹೋಗಾಗೇನೂ ಒಯ್ಯೋಣಿಲ್ಲಾ |

ಕರ್ತಗುರು ಮಹಾಂತೇಶನೆ ಬಲ್ಲಾ | ಎಲ್ಲಾ

ಅವನ ಹೊರ್ತು ಮತ್ತ್ಯಾರಿಲ್ಲಾ ||3||

ಶಿವನೇ ನೀ ಬಿಡದೆನ್ನ ಕಾಯೊ | ನಿಮ್ಮಡಿ ಸೇವೆ ಈಯೋ |

ಜಡದೇಹದೋಳು ತೊಡಕಿಸದಿರಯ್ಯಯ್ಯೋ ||ಪಲ್ಲ||

ಹಲವು ಜಲ್ಮದಲಿ ಮರತಿದ್ದೆ ಹೊರಳಿ |

ನಿಲಿಸು ಶ್ರೀಗುರುವೆ ಮುಂದೆ ನಿಮ್ಮ ಪಾದದಲಿ ||1||

ತಾಯ ಬಸುರಲಿ ವಾಯಿ ಹುಳ ಸೇರಲಿ |

ಗಾಯಿಗೊಂಡು ಹೊರಹೊಟ್ಟೆ ಬಾಯಿ ಬಿಟ್ಟೊದರಲಿ ||2||

ಈ ಸುಳ್ಳ ಜಲ್ಮದಿ ಮುಸುಕಿದೆ ಮಲದಿ |

ಶಿಸುವಾಗಿ ಹಸದು ನುಸಿಳಿದೆ ನೆಲದಿ |3||

ನಿನ್ನ ಪಾದದ ಭರವು ಕಾಯಜ ಸುರವು |

ಮಾಯಿ ಮುಸುಕಿದರೆ ಇನ್ನೆಲ್ಲಿ ನಿನ್ನರವು ||4||

ಮೃಢ ಮಹಾಂತೇಶ ಬಿಡಿಸಯ್ಯಾ ಈಶ |

ತಡಿಯದೆ ಹಿಡಿ ಕೈಬೇಗ ಸರ್ವೇಶಾ ||5||

ಶಿವ ಶಿವ ಎನ್ನಿರಿ ಶಿವನಾಮ ಸ್ಮರಣಿಯ ಮರಿಯಬೇಡವ್ವ ತಂಗಿ

ಹರನ ಮರಿಬೇಡವ್ವ ತಂಗಿ ಶಿವನ ಮರಿಯಬೇಡವ್ವ ತಂಗಿ |ಪ||

ಕಲ್ಯಾಣಪುರದೊಳು ಅಮರಗಣಂಗಳು ಬಲ್ಲಿದರೇಳವ್ವ ತಂಗಿ ಏ ತಂಗಿ ||ಉಪ||

ಆಧಾರ ಸ್ವಾದಿಷ್ಟ ಮಣಿಪುರ ಚಕ್ರವು ಏರಿ ನೋಡವ್ವ ತಂಗಿ

ನಾದ ಬಿಂದು ಕಳೆ ಮೂಲವು ತಿಳಿಯದೆ ಸುಮ್ಮನೆ ಕುಳಿತೆವ್ವ ತಂಗಿ ಏ ತಂಗಿ ||1||

ನಾಸಿಕಾಗ್ರದ ಮ್ಯಾಲೆ ಧ್ಯಾಸವು ಹಿಡಿದರೆ ಏಸು ವರ್ಣವು ತಂಗಿ

ಸಹಸ್ರ ಕಮಲದೊಳು ಈಶ್ವರ ಕುಳಿತಾನ ಧ್ಯಾಸವು ಮರಿಬ್ಯಾಡ ತಂಗಿ ಏ ತಂಗಿ ||2||

ದೇಶಕಧಿಕವಾದ ವಾಸುಳ್ಳ ಬಿದನೂರ ಈಶ ಹೇಳ್ಯಾನ ತಂಗಿ ಜಗದೀಶ ಹೇಳ್ಯಾನ ತಂಗಿ

ಈಶ ವಿರೂಪಾಕ್ಷೇಶನ ಖಾಸ ಮಗನ ಮಾತು ಸೊಸಿ ನೋಡವ್ವ ತಂಗಿ ಏ ತಂಗಿ ||3||

ಭವಹರ ಶಂಕರ ಸಾಂಬ ಸದಾಶಿವ |

ಶಿವ ಶಿವನೆಂಬವ ಶಿವನಪ್ಪ |

ಭವನಿವನಿಲ್ಲದೆ ಏನೋ ತಾನಾದುದು |

ಸ್ವಯಂಭೋ ಎಂಬುವವನಪ್ಪ ||ಪಲ್ಲ||

ಷೋಡಷ ಕಳೆಭರಿತಾದ ಬ್ರಹ್ಮಾಂಡವು |

ಕೂಡಿಕೊಳ್ಳುವ ನೋಡಲಾದಪ್ಪ |

ನೋಡಿಕೋ ಅದೇ ತಾನಾದ ಪಿಂಡಾಂಡವು

ಮಾಡೋದು ನಿನ್ನಿಂದೇನಪ್ಪ ||1||

ತಾ ನಿರಾಳಾಗದೆ ಆ ನಿಜ ತಿಳಿಯದು

ನಿಜ ತಿಳಿಯದೆ ನಿರಾಳಿಲ್ಲಪ್ಪ |

ಜ್ಞಾನಾಗದೆ ಅಜ್ಞಾನ ಹೋಗದು |

ಅಜ್ಞಾನ್ಹೋಗದೆ ಸುಜ್ಞಾನಿಲ್ಲಪ್ಪ ||2||

ಭಕ್ತನಾಗದೆ ಭವಿತನ ಹೋಗದು |

ಭವಿ ಹೋಗದೆ ಭಕ್ತನಲ್ಲಪ್ಪ |

ಮುಕ್ತಿ ತಾನಾಗದೆ ಭವ ಬಂದ್ಹೋಗದು

ಭವ ಹೋಗದೇ ಮುಕ್ತಿಲ್ಲಪ್ಪ ||3||

ಮರುವದು ಹೋಗದೆ ಅರುವು ತಾನಾಗದು

ಅರುವು ಆಗದೆ ಮರವು ಹರಿಯದಪ್ಪ |

ಎರಡರ ಸಂದನೊಳಿದ್ದಿಲ್ಲೆಂಬುದು

ಪರಬ್ರಹ್ಮವನೊಳಕೊಳದಪ್ಪ ||4||

ಸ್ವಪ್ನ ನೀನಾದುದು ಸ್ವಪ್ನ ತಾನಾದುದು

ಸ್ವಪ್ನೇನೊ ಸ್ವಪ್ನ ಸ್ವಪ್ನೇ ಲಕ್ಷಪ್ಪ |

ನಿರ್ಗುಣ ಶ್ರೀಗುರು ಮಹಾಂತೇಶನಿಲ್ಲದೆ

ಸ್ವಪ್ನಕ್ಕೆ ಸ್ವಪ್ನ ನಿರ್ಲಕ್ಷಪ್ಪಾ ||5||

ಎಲ್ಲೊ ಹಾನ ಪರಮಾತ್ಮ ಎಲ್ಲೊ ಹಾನ |

ಬಲ್ಲಿದ ಮಹಾತ್ಮರ ಬಲ್ಲೇ ಹಾನೋ ||

ಅಲ್ಲಿ ಇಲ್ಲಿ ಬಲ್ಲಿ ಎಲ್ಲಾ ಒಂದೇ ಹಾನೊ |

ಗುರು ಸರ್ವತ್ರಯಾಮಿ ತಾನೆ ಹಾನೋ ||ಪಲ್ಲ||

ಪೃಥ್ವಿಗೆ ಬೀಜ ಮೊದಲೆ ಕೊಟ್ಟಾನೋ |

ಅವಗ ಸಂರಕ್ಷಣ ಬೇರೆ ಬೇರೆಯಿಟ್ಟಾನೋ ||

ಆಕಾಶ ಬೈಲವಾಣಿ ಆಗ್ಯಾನೋ |

ಗುರು ನಿರಂತರವಾಗಿ ಇರತಾನೋ ||1||

ಯಾರಿಗೆ ಏನಂವ ತೋರ್ಯಾನೋ |

ಗುರು ತೋರಲ್ದೆ ಹ್ಯಾಂಗಿರತಾನೋ ||

ಸೊನ್ನಲಾಪುರದವಗ ತೋರ್ಯಾನೋ |

ಬಲ್ಲಂತ ತುಕಾರಾಮ ಹೋಗ್ಯಾನೋ ||2||

ಪೊಡವಿಯೊಳಗ ಚಿಣಮಗೇರವನೋ |

ಅವ ನಿರಂತರ ಗುಡ್ಡದಾಗ ಇರತಾನೋ ||

ಹಿಂದಕ ನನಗೊಮ್ಮೆ ತೋರ್ಯಾನೋ |

ಗುರು ಸಂದೇಹವಿಲ್ಲದೆ ಇರುತಾನೋ ||3||

ದೇವಿ ಮಾತಾಡಬಾರದೇ ಆಡಬಾರದೇ ಮೂಢರ ಗೂಢ

ಕರಗಳ ಜೋಡಿಸಿ ನಾ ಬೇಡಿಕೊಂಬುವೇನು ಮಾತಾಡಬಾರದೇ ||ಪ||

ಇಂದುಧರನು ಕಾಮಬಾಣದಿಂದ್ರಿಗೆ ಸಿಲುಕಿದನು

ಇಂದ್ರಿಯ ಮೀರಿ ಆನಂದದೊಳಗೆ ನಾನಿರುವೆನು ಮಾತಾಡಬಾರದೇ ||1||

ಸಣ್ಣ ತಂಗಿಯನು ಹರದು ನುಂಗಿಹಳು

ಹರನ ನುಂಗಿದ ಚದುರೆ ತಂಗಿ ನೀನು ಮಾತಾಡಬಾರದೇ ||2||

ದೇಶಕಧಿಕವಾದ ಸದರ ಚಿಣಮಗೇರಿ

ಮೃಢ ಮಹಾಂತೇಶ್ವರನ ಪಾದದಲಿ ಬಿದ್ದು ಮಾತಾಡಬಾರದೇ ||3||

ದೇವಿಯ ನೆನೆಯಿರಿ ಭಾವ ಶುದ್ಧದಲಿ |

ಕೇವಲ ಮೂರುತಿ ಶಂಕರಿಯೊ |

ಆವ ಕಾಲದಲಿ ಹರನೊಳು ಬೆರೆದ |

ಪಾವನಚರಿತ್ರೆ ಪಾರ್ವತಿಯೊ ||ಪಲ್ಲ||

ಅಷ್ಟದೈತ್ಯರನು ಕುಟ್ಟಿ ಬಿಟ್ಟಿಹಳೊ |

ಅಷ್ಟಮೂರ್ತಿಗಳಿಗಾಶ್ರಯಳೊ |

ನಿಷ್ಠವಂತರಿಗಿ ನಿಜವ ತೋರುವಳೊ |

ಶ್ರೇಷ್ಠ ಜನಕೆ ಪರಿಪಾಲಿಪಳೊ | |1||

ಶುಂಭನಿಶುಂಭರ ಮರ್ದನ ಮಾಡಿದ |

ಶಂಭು ಶಂಕರನ ರಾಣಿಯಳೊ |

ನಂಬಿದ ಭಕ್ತರಿಗಿಂಬುಗೊಡುವಳೊ |

ಬಿಂಬಾಧರ ಭ್ರಮರಾಂಬೆಯೊ ||2||

ಗಡಿಯ ಸೂರನಾಡ ಒಡೆಯ ಚಿಣಮಗೇರಿ |

ಮೃಢ ಮಹಾಂತೇಶನ ಮಡದಿಯಳೊ |

ಎಡರ ಕಳಿದು ಜಡರ ಹರಿದು ಕೊಡುವಳೊ |

ತಡ ಮಾಡದಲೆ ಮೋಕ್ಷವನೊ ||3||

ಎಲ್ಲ ಸ್ವರೂಪ ವಲ್ಲಭವನೆಂಬುದು |

ಬಲ್ಲೆನಲ್ಲದೆನಗೆರಡಿಲ್ಲ |

ಹುಲ್ಲು ಕಲ್ಲು ಹೌದಲ್ಲಿ ಇಲ್ಲಿ |

ಹೊಲ್ಲ ಒಳ್ಳೆದೆಂಬೋದು ಸಲ್ಲ ||ಪಲ್ಲ||

ಮೂರು ಸಾವಿರ ಮತ್ತಾರುಸಾವಿರ |

ಆರಾರು ಸಾವಿರ ಶೇಷವನುಂಡೆ |

ವೀರಭಕ್ತಗಣವರ ಮುಡಿದ ಕೊರ |

ಳ್ಹಾರ ಪುಷ್ಪದ್ವಾಸನಗೊಂಡೆ ||1||

ವಸುಧಿಯಗಲದುಂ ಬೆಸೆವ ಮಹತ್ವದ |

ಪೆಸರುಗೊಳುವದೇನಗಸವಲ್ಲಾ |

ಪಶುಪತಿ ಅಣೋರೇಣು ಅಸಮತೋಮಹಿ |

ವಸೆದು ಸೂಸ್ವದು ವೇದದ ಸೊಲ್ಲಾ ||2||

ಚಂದ್ರಾದಿಯಿಂದ ಮುನೀಂದ್ರ ಗಣೀಂದ್ರ

ವೃಷೀಂದ್ರ ಯತೀಂದ್ರಗೆ ಶರಣಾರ್ಥಿ |

ಇಂದ್ರ ಉಪೇಂದ್ರ ಖಗೇಂದ್ರ ಮೃಗೇಂದ್ರ |

ನಗೇಂದ್ರ ಧಿಗೇಂದ್ರಗೆ ಶರಣಾರ್ಥಿ ||3||

ರಾಗಿಗೆ ರೋಗಿಗೆ ಭೋಗಿಗೆ ಜೋಗಿಗೆ |

ತ್ಯಾಗಿಗೆ ಯೋಗಿಗೆ ಶರಣಾರ್ಥಿ |

ಮಾಗಿಗೆ ಬೇಗಿಗೆ ಕಾಗಿಗೆ ಗೂಗಿಗೆ |

ಸೋಗಿಗೆ ಶೀಗಿಗೆ ಶರಣಾರ್ಥಿ ||4||

ಜಾರಗೆ ಚೋರಗೆ ಬೀರಗೆ ಪೀರಗೆ |

ವೀರಗೆ ಶೂರಗೆ ಶರಣಾರ್ಥಿ |

ಊರಿಗೆ ದಾರಿಗೆ ನಾರಿಗೆ ನೀರಿಗೆ |

ಮಾರಿಗೆ ವಿೂರಿಗೆ ಶರಣಾರ್ಥಿ ||5||

ಹಲವು ನಾಮರಿಗೆ ಹಲವು ರೂಪರಿಗೆ |

ಹಲವು ಕ್ರಿಯರಿಗೆ ಶರಣಾರ್ಥಿ |

ಹಲವು ಜಾಣರಿಗೆ ಹಲವು ಮುಗ್ಧರಿಗೆ

ಹಲವು ಛಲರಿಗೆ ಶರಣಾರ್ಥಿ ||6||

ಸರ್ವ ಶರಣರಿಗೆ ಸರ್ವ ಹರಣರಿಗೆ |

ಸರ್ವ ವರಣರಿಗೆ ಶರಣಾರ್ಥಿ |

ಸರ್ವ ಭರಣರಿಗೆ ಸರ್ವ ಮರಣರಿಗೆ |

ಸರ್ವ ಶರಣರಿಗೆ ಶರಣಾರ್ಥಿ ||7||

ಸರ್ವ ಜೀವರಿಗೆ ಸರ್ವ ಭಾವರಿಗೆ |

ಸರ್ವ ದೇವರಿಗೆ ಶರಣಾರ್ಥಿ |

ಸರ್ವ ಬ್ರಡ್ಮಾಂಡಕೆ ಸರ್ವ ಪಿಂಡಾಂಡಕೆ |

ಸರ್ವ ನಿರ್ವಯರಿಗೆ ಶರಣಾರ್ಥಿ ||8||

ಬಾಯಿಲಿ ಕಲಿತೋದಿದವರು |

ಗೆಲಿದು ಕಳಿವರೆ ಈ ಭವ ದುಃಖವ |

ಸುಲಭ ಚಿಣಮಗೇರಿ ಸಲೆ ಮಹಾಂತೇಶನು |

ಒಲಿದು ಕೊಡುವ ತಾ ಶಿವ ಸುಖವ ||9||

ಶಿವ ಶಿವ ಶಿವ ಶಿವ ಶ್ರೀಮಹಾದೇವ

ಸಿದ್ಧಿಸದೆನಗನುಭಾವ ||ಪಲ್ಲ||

ಮೃಢ ಮಹಾಂತೇಶ ಪರಮ ಪ್ರಕಾಶ

ಬಿಡಿಸಿದೆನ್ನ ಭವಪಾಶಾ ||1||

ಷೋಡಶಾಕಾರ ಸಕಲಾವತಾರ

ಮಾಡಿದೆನ್ನ ಉದ್ಧಾರ ||2||

ಗುರು ಮಹಾಂತಯೋಗಿ ತಾ ದಯವಾಗಿ

ಕರದೊಳು ಬಂದೆನಗಾಗಿ ||3||

ಕರುಣ ಕಟಾಕ್ಷ ಪರಮ ಪರೋಕ್ಷ

ತ್ವರಿತೆನಗಿತ್ತನು ಮೋಕ್ಷ ||4||

ಶ್ರೀಗುರುರಾಯ ತಾ ನಿರುಪಾಯ

ಈಗ ತೋರಿದ ನಿರ್ಮಾಯ ||5||

ಸವೆಯದ ನಾಮ ಅನಘ ನಿಸ್ಸೀಮಾ

ಸವಿಗಲಿಸಿದ ನಿಃಕಾಮಾ ||6||

ಪರುಷದ ಘಟ್ಟಿ ತಾ ಜಗಜಟ್ಟಿ

ಹೊರಸಿದ ನಿರ್ಭವ ಬಿಟ್ಟಿ ||7||

ಚಿನುಮಯ ರೂಪ ಸತ್ಕುಲ ದೀಪ

ನನಗೆ ಮಾಡಿದ ನಿರ್ಲೇಪ ||8||

ಅಲ್ಲಮ ನುಡಿಯ ಎಲ್ಲಕ ಮಹಾಂತ ಒಡೆಯ

ಇಲ್ಲನು ಮಡಿವಾಳ ಪಡಿಯ ||9||

ಈಶ್ವರ ದಯೇ ನಮ್ಮೇಲೆ ಇರುವತನಕ

ವಿಷ ಹಾಕುವರಿದ್ದರಿರಬೇಕು ||ಪ||

ಅಸುವಿಲ್ಲದ ಸರ್ಪ ತನಗೆ ಕಚ್ಚಿದರೆ

ಖುಷಿಲಿಂದ ಹಾಲು ತುಪ್ಪ ಎರಿಬೇಕು ||1||

ತಪ್ಪಿಲ್ಲದೆ ತಪ್ಹಚ್ಚಿ ಬಯ್ಯುವವನಿಗೆ

ಒಪ್ಪದಿಂದ ಅಪ್ಪ ಅನಬೇಕು ||2||

ಅಲ್ಲದ ಮಾತಿಗೆ ನ್ಯಾಯ ನುಡಿದವಗೆ

ಖಾಸಣ್ಣ ಹೌದಂತನಬೇಕು ||3||

ಆಸಿ ಹಚ್ಚಿ ನಿರಾಸಿ ಮಾಡಿದವಗೆ

ಆಸೆವಂತಯನಬೇಕು ||4||

ಮೋಸದಿಂದ ಕುತ್ತಿಗಿ ಕೊಯ್ಯುವವಗ

ಖಾಸ ಮಗ ಹೌದಂತನಬೇಕು ||5||

ಆಸೆಯಂಬುದು ಅಳಿಬೇಕು ನಿರಾಸಿಕನಾಗಿರಬೇಕು

ದೇಶಕಧಿಕವಾದ ಮಹಾಂತೇಶನ ಪಾದಕ ಧ್ಯಾಸಿಡಬೇಕು ||6||

ಪಾಮರತ್ವವು ಬ್ಯಾಡಾತ್ಮಾರಾಮ ನಮೋ ನಮ |

ಕ್ಷೇಮವಂತ ನೀನಾಗು ಸಜ್ಜನ ಪ್ರೇಮ ಸದ್ಗುಣಧಾಮ ||ಪಲ್ಲ||

ಪುರಾತರ ವಚನವ ಬಲ್ಲಿ |

ಕಿರಾತ ನುಡಿ ಕಿವಿಯಲ್ಲಿ ||

ದುರಾತ್ಮ ನೀಗುವಲ್ಲಿ ನೀನು |

ಸ್ಥಿರಾತ್ಮನಾಗೋದೆಲ್ಲಿ ||1||

ಬಲ್ಲಿದತ್ವವು ಬರಲಿ |

ಗುರುಚರಣದಲ್ಲಿ ವಿಶ್ವಾಸವು ಇರಲಿ |

ಬಲ್ಲವಗೇನಿದರ ಹರಲಿ ನೋಡ್ಹುಸಿ |

ಸಲ್ಲದು ಸಂಶ್ರುತಿ ತರಲಿ ||2||

ಕಡಕೋಳ ಮೃಢ ಮಹಾಂತೇಶನೆ ತಾನೆ |

ಮಡಿವಾಳ ಜ್ಞಾನ ಪ್ರಕಾಶ |

ಹಿಡಿಯದಿರು ಮನದೊಳು ಕ್ಲೇಶ |

ನಿಜಸುಖ ಪಡಿ ತೊಡಕದು ಭವಪಾಶ ||3||

ಹೇಸವ್ವ ಬಾಸವ್ವ | ಮಾಯಸಂಸಾರ ತಿಳಿಸವ್ವ ಹೇಸವ್ವ ಬಾಸವ್ವ |

ನಿನ್ನ ನೀನೆ ತಿಳಿದ ನೋಡವ್ವ ಹೇಸೌವ ಬಾಸವ್ವ ||ಪ||

ಗುರುಪಾದ ಸೇವೆಯನ್ನೇ ಮಾಡವ್ವ ಹೇಸವ್ವ

ಆಶಿ ಅಹಂಕಾರ ಹಿಡಿಬೇಡವ್ವ ಹೇಸವ್ವ ಬಾಸವ್ವ

ಒಳ್ಳೆ ಸಾಧು ಸತ್ಪುಷರ ಒಡನಾಡವ್ವ ಹೇಸವ್ವ

ಪರಹಿತಾರ್ಥವು ಬಿಡಬೇಡವ್ವ ಹೇಸವ್ವ ಬಾಸವ್ವ

ಕಾಮ ಪ್ರೇಮವು ಬೇಡವ್ವ ಹೇಸವ್ವ ಬಾಸವ್ವ ||ಉಪ||

ವಿಸ್ಮಯಪುರದಿಂದೆ ಹುಟ್ಟ ಬಂಜೆಯ ಮಗ ಬಂದ |

ಭೀಷ್ಮಾಚಾರ್ಯನ ಮಗಳ ಮದವಿಯಾದ |

ಕೇಳ ಸುಳ್ಳೆನ ಖರೆ ಮಾಡಲೇನಾ

ಭೀಷ್ಮಾಚಾರ್ಯನ ಮಗಳ ಮದವಿಯಾದ ಮದುಮಗನು |

ಭಸ್ಮಾಸುರ ಕ್ಷೇತ್ರಯಾತ್ರಿಗ್ಹೋದನು |

ಕೇಳ ಸುಳ್ಳೆನ ಖರೆ ಮಾಡಲೇನಾ ||1||

ಬಿಸಲ್ತೀರ್ಥ ಮಿಯ್ಯಲಿಕೇ ಸೆಳವಿಗ್ಹೋಗಿ ಸತ್ತನು |

ಜಗವೆಲ್ಲ ಕೂಡಿ ಶ್ರವ ತೆಗೆದಾರು |

ಕೇಳ ಸುಳ್ಳೆನ ಖರೆ ಮಾಡಲೇನಾ

ಜಗವೆಲ್ಲ ಕೂಡಿ ಶ್ರವ ತೆಗೆದು ಶುದ್ಧೈಸಲು |

ಹಸನವಾಗಿ ನಾ ಹೇಳುವೆ ನೀವು ಕೇಳಿರಿ ||

ಕೇಳ ಸುಳ್ಳೆನ ಖರೆ ಮಾಡಲೇನಾ ||2||

ಸತಿ ಸಂಗವಿಲ್ಲದೆ ಶತ ಸಹಸ್ರ ಸುತರು ಹುಟ್ಟಿ |

ಪಿತ ಸತ್ತ ಸುದ್ದಿ ಕೇಳಲ್ಕೊಬ್ಬಿಲ್ಲ |

ಕೇಳ ಸುಳ್ಳೆನ ಖರೆ ಮಾಡಲೇನಾ

ಪಿತ ಸತ್ತ ಸುದ್ದಿ ಕೇಳಲ್ಕೊಬ್ಬಿಲ್ಲದಿರುತಿರಲು |

ಧೃತರಾಷ್ಟ್ರ ಕಂಡು ಹೇಳವ ಓಡಿಬಂದ |

ಕೇಳ ಸುಳ್ಳೆನ ಖರೇ ಮಾಡಲೇನಾ ||3||

ಮೂಕ ಹೇಳಲು ಕಿವುಡ ತಾ ಕೇಳಿ ಬೆರಗಾದ |

ಕಾಕತಾಳ ನ್ಯಾಯವಿದು ವಾಜಿಮಿ |

ಕೇಳ ಸುಳ್ಳೆನ ಖರೆ ಮಾಡಲೇನಾ

ಕಾಕತಾಳನ್ಯಾಯ ವಾಜಿಮಿಯಾದ ಮೇಲೆ |

ಜ್ವಾಕಿಗುಂದದೆ ಸುಮ್ಮನೆ ನಾ ಆಗುವೆ |

ಕೇಳ ಸುಳ್ಳೆನ ಖರೆ ಮಾಡಲೇನಾ ||4||

ಬೆರಗಾದ ನಿಬ್ಬೆರಗಿಗೆ ಒರಳಕ್ಕಿ ಹರವಿದೆ |

ವರ ವರಸಿ ಕೇರಿ ಹಾರಿಸಿದೆ |

ಕೇಳ ಸುಳ್ಳೆನ ಖರೆ ಮಾಡಲೇನಾ

ವರ ವರಸಿ ಕೇರಿ ಹಾರಿಸಿದೆ ತವಡವ ತಗಿದು |

ಪರಮಾನ್ನ ಅಟ್ಟು ಹುಟ್ಟು ಮುರದೇನಾ |

ಕೇಳ ಸುಳ್ಳೆನ ಖರೆ ಮಾಡಲೇನಾ ||5||

ಅಟ್ಟನ್ನ ಉಂಬದಕೇ ಹುಟ್ಟುವರು ಸಾಲರು |

ಹುಟ್ಟವರ್ಹಸವು ಹೋಗದಟ್ಟನ್ನಾಗದು |

ಕೇಳ ಸುಳ್ಳೆನ ಖರೆ ಮಾಡಲೇನಾ

ಹುಟ್ಟುವರ್ಹಸವು ಹೋಗದಟ್ಟನ್ನಾಗದು ನೋಡಿ |

ಅಟ್ಟಿಟ್ಟ ಗಡಗಿಯ ನಾ ವಡದೇನ |

ಕೇಳ್ ಸುಳ್ಳೆನ ಖರೆ ಮಾಡಲೇನಾ ||6||

ಅಡುವ ಗಡಗಿಯ ವಡಿಯಲು ಒಡಲು ತೃಪ್ತಿಯಾಯಿತೆಂದ |

ಒಡಿಯ ಕಡುಕೋಳ್ ಗುಡ್ಡದ ಯೋಗಿ |

ಕೇಳ ಸುಳ್ಳೆನ ಖರೆ ಮಾಡಲೇನಾ

ಒಡಿಯ ಕಡುಕೋಳದ ಗುಡ್ಡದ ಮಹಾಂತಪುರ ಮಹಾಂತೇಶನ |

ಬಿಡದೆ ನೀವು ಹಾಡಿ ಕುಟ್ಟಿ ಬರೇಬಾಯಿ |

ಕೇಳ ಸುಳ್ಳೆನ ಖರೆ ಮಾಡಲೇನಾ ||7||

ವಾಯಿ ಇಲ್ಲದೆ ಬಂದೇವು ಎನ್ನಲು

ಮಾಯಾದ ಭುವನದೊಳಗೆ |

ತಾಯೆಲ್ಲಿ ಕಾಣದೆ ಆವುಮಾಯನೆ |

ವಾಯಿಟ್ಟು ಹಂಸಾಗಿ ಓ ಎಂದೆ ದೆಶಿಗೆ ||ಪಲ್ಲ||

ಅವನಿಯೆಲ್ಲವು ಮಾಡಿದೆ

ಅವನಿಯೊಳು ಅವಯವಂಗಳೊಡಗೂಡಿದೆ |

ಅವಯವಂಗಳೊಡಗೂಡಿ ಅವನಿಯೆಲ್ಲವು ಮಾಡಿ |

ಅವನೆಂಬವ ನೀ ಬಲ್ಲೆ ಅವನೆಂಬೋದರಿಯೇ ||1||

ನೋಡಿದೆಲ್ಲವ ಸೂಡಿದೆ |

ನೋಡಿದರೊಳು ಗಾಡಿಗಾರಿಕಿ ಬೇಡಿದೆ |

ಗಾಡಿಗಾರಿಕಿ ಬೇಡಿ ನೋಡಿದ್ದೆಲ್ಲವು ಸೂಡಿ |

ನೋಡಿದ್ದು ನೋಡದೆ ನೋಡಿದುದರಿಯೆ ||2||

ಮೃಢ ಮಹಾಂತೇಶ್ವರನ್ಹಾಡಿದೆ | ಆ

ಮೃಢನೊಳು ಮಡಿವಾಳ ಬಿದ್ದೆ ಮಾಡಿದೆ |

ಮಡಿವಾಳ ಬಿದ್ದೆ ಮಾಡಿ ಮೃಢ ಮಹಾಂತೇಶ್ವನ್ಹಾಡಿ |

ಮೃಢನ್ಹಾಗೆ ಮೃಡನಾದೆ ಮೃಢನಾಗೋದರಿಯೆ ||3||

ದಾವದೋ ಮಾಯಿ ಚಾಲ | ನಮ್ಮ

ದೇವರ ದೇವ ಮಾಂತನ ಲೀಲ ||ಪಲ್ಲ||

ಮಾಯೆಯು ಎಲ್ಲಿಂದ ಬಂತು | ಆವ

ತಾಯಿಯ ಹೊಟ್ಟೆಯಲ್ಲಿ ಹುಟ್ಟಿತೊ ನಿಂತು |

ಆಯಾಸಗೊಳಿಸುದೆ ಕುಂತು | ತನ್ನ

ತಾಯಿಯ ತಂದಿಯ ತನುಮನ ತಿಂತು ||1||

ಅಲ್ಲನ ತೋರುವ ಮುಸಲ | ಲಿಂಗ

ಕಲ್ಲೆಂದಾತನ ಬಿಡಿಸಿದ ಅಸಲ |

ಅಲ್ಲಾ ಸಿಗುವನೆ ತಾ ಕುಶಲ | ನಾ

ಳಲ್ಲಿ ಕೇಳದೆ ಬಿಡುವನೆ ಏ ಮತ ಶೀಲ ||2||

ಅಲ್ಲ ಅಲ್ಲಯೆಂದು ಕೂಗುವನೊ | ಆ

ಸೊಲ್ಲ ಕೇಳುವ ಕಿವಿಗೆ ಬೆರಳ ಇಡುವನೊ |

ಅಲ್ಲ ಹೇಳುವದು ಇನ್ನೇನೊ | ಆ

ಅಲ್ಲ ದೈವವಾದ ಮೇಲೆ ಯಾತರವ || ತಾನೊ ||3||

ಅಲ್ಲ ಹೌದಾದವ ಬಲ್ಲss | ಆ

ಅಲ್ಲ ಹೌದಾಗದೆ ಆಗೋದೇನಿಲ್ಲ |

ಅಲ್ಲ ಹೌದೆರಡಿಲ್ಲss | ಆ

ಅಲ್ಲ ಹೌದಾದರೆ ಕೇವಲ ಅಲ್ಲ ||4||

ಎಲ್ಲ ಸ್ವರೂಪ ರೂಪಲ್ಲ | ಆ

ಅಲ್ಲನಾಗದೆ ಆದನ್ಯಾತಕೆ ಮುಲ್ಲ |

ಅಲ್ಲಾಗದವ ಏನು ಬಲ್ಲ | ಮಾಂ

ತಲ್ಲಮನಾಚೀಲಿ ಹಾನೊಬ್ಬನಿಲ್ಲ ||5||

ಮಾಯೆ ತಾ ತನ್ನರಿವು ಅರಿಯದಲ್ಲ |

ಬಾಯಿ ಬಿಡುತಲಾದೆ ಮೂಲೋಕವೆಲ್ಲ ||ಪಲ್ಲ||

ತಾನೆ ತನ್ನರಿಯದಿದ್ದರೆ ತನಗೆ ಗತಿಯಿಲ್ಲ |

ತಾನೆ ತನ್ನರಿವದಕೆ ಬಾರದಲ್ಲ |

ತಾನೆ ತನ್ನರಿವದಕೆ ಗುರುವಾಗಿ ಶಿಷ್ಯೆ ಆಗಿ |

ತಾನೆ ಬಂದರಿವು ಅರುವಿಸದೆ ಅರಿವು ಅರಿವುದಲ್ಲ ||1||

ಅರು ಅರಿತ ಗುರುವರನು ಹೇಳಿದ್ಹಾಂಗ ಕೇಳಿದರೆ |

ಅರು ಅರಿದು ಆ ಶಿಷ್ಯೆ ನಿಜಮುಕ್ತನಾಗುವನು |

ಅರುವಿಸುವ ಅರುವು ಅರಿಯದೆ ಹೋದರಾ ಮನುಷ್ಯ |

ಪರಿಪರಿಯ ಭವಬಂಧ ಮರವಿಯಲ್ಲಿಹನು ||2||

ಅವನೊಂದು ಹೇಳಿದರೆ ಇವನೊಂದು ಕೇಳಿದರೆ |

ಅವಿವೇಕಿ ಸುವಿವೇಕಿ ಆಗಲಿಲ್ಲ

ಭುವನದೊಳು ಮೆರೆವ ಕಡಕೋಳ ವಾಸ

ಮಹಾಮಹಾಂತ ಮಡಿವಾಳವನೆ ಇವ ಭ್ರಮಿ ಹೋಗಲಿಲ್ಲಾ ||3||

ಸ್ವಪ್ನ ಸುಖದ ಸ್ವಲ್ಪು ಮಾಯಿ

ಗಲ್ಪುದ್ಯಾತಕೊ ಮೂಢ |

ಸುಪಥ ಶ್ರೀಗುರು ಸೇವಾದಿ

ನಿಪುಣನಾಗಬೇಕೊ ಪಾಡ ||ಪಲ್ಲ||

ಹೆಣ್ಣು ಹೊನ್ನು ಮಣ್ಣು ಮೂರರೋ

ಳ್ಹೆಣ್ಣಿನ ಹಂಬಲ್ಹೆಚ್ಚೋ | ಎಲೊ

ಕಣ್ಣು ಕಿಸ್ತು ನೋಡೊ | ಮೇಲಿನ

ಬಣ್ಣದ ಬುರಕಿ ಉಚ್ಚೊ ||1||

ದುಂಡ ಮೊಲಿಯ ಮುಟ್ಟೊ | ಮುತ್ತಿನ

ಚಂಡೋ ಮಾಂಸದ ಪಿಂಡೊ | ಎಲೊ

ತೊಂಡಿಯ ತುಟಿಯೊ | ಅಮೃತದ

ಗುಂಡೊ ಜೊಲ್ಲಿನ ಕೊಂಡೊ ||2||

ವೋಪುಳ್ಯೋನಿ ಭೋಗದ | ಪುಣ್ಯದ

ರೂಪೊ ನರಕದ ಕೂಪೊ | ಎಲೊ

ಆ ಪರ ಮಹಾ ಮಹಾಂತಯೋಗಿ |

ಪಾಪೋ ಚಿತ್ಕಲಾಪೋ ||3||

ಮಾಯಪುರದ ಅರಸು ತಾ |

ಮೇರೆದಪ್ಪಿ ಬರುತಾನ |

ಅವಿವೇಕಿಗೂಡ ಮಾಡೊ ಲಡಾಯಿ |

ಆಯವರಿದುಕೊಳರೆಲ್ಲರೊ ಶಿವ ಮಂದಿ |

ಬಿಚಗತ್ತಿ ಬತ್ತಲಗುದರಿ ಬಡಾಯಿ ||ಪಲ್ಲ||

ಆಶಿ ಸೈನ್ಯದಧಿಪತಿ ಕಾಮನೆ ಕಾರಭಾರಿ |

ಕೋಪ ಟೋಪಧಾರಿ ಲೋಭ ಲುಬ್ಧಕನು |

ಖಾಸಮೋಹ ಮುಖ್ಯ ನಾಯಕ |

ಮದ ಮುದ ಬಕರೊಡೆಯ |

ಹೊಯಿಲ್ಗಾರ ಹುಸೀ ಸರದಾರ ||1||

ನಿಷ್ಟಿಯು ದಳಪತಿ ವಿರತಿಯು ಕಾರಭಾರಿ |

ಅಷ್ಟಿಷ್ಟೇನೆ ಆನೆ ಹನ್ನೆರಡು ಕುದುರಿ |

ಶಾಂತ ವಜೀರವೇ ದ್ವಾರ ಗುಪ್ತಚಾರ |

ಸ್ವಪ್ರಭುಜ್ಞಾನ ಮಾನದಾತ ತೃಪ್ತ |

ಆಹಾರದಾತ ಕ್ಷಮೆಯೆಂಬ ಸುರಸತ್ಯ ಸರದಾರ ||2||

ಅಷ್ಟಾನೆ ಹತ್ತು ಕುದುರಿ ಆರು ಗಾಡಿ |

ಮೂರು ಮಂದಿ ಬಹಿರಂಗ ಚತುರ |

ಹಾಳ ಹರಟಿ ವಿರಾಟರಾಯ |

ಆನ್ಹೆನ್ನೆರಡು ಕುದುರೆ ನಾಲ್ಕು ಗಾಡಿ ಒಂಟಿ ಪ್ಯಾದೆ

ಅಂತರ ಚತುರ ವಸುಧಿಗೋಷ್ಠಿ ಮಹಾಂತ ಗುರುರಾಯ ||3||

ಮಾಯಿನ ಕುಣಿಸಿದನೆ ಪ್ರಭು ತಾ |

ಬಾಯ್ನುಡಿ ಕೈ ಅಭಿನಿ ಕಾಲ ಗತಿ ||

ಮೈ ತಿರಪು ಕಡೆಗಣ್ಣು ಛಡಾಳಿ ಝಣುತ ಝಣುತ |

ಝಣಣಣ ಣಣಣ ಝಣಾಂದಣಾಂತ ತೈಯೆನುತ ತಾ ||ಪಲ್ಲ||

ಪಂಚಸಂಜ್ಞೆ ಪಂಚತತ್ತ್ವ ಪಂಚಕಲೆ |

ಪಂಚಕೃತ್ಯ ಪಂಚಾನನ ಪರತರ ||

ಪಂಚಪ್ರಾಣ ಪಂಚಾಗ್ನಿಯೋಳಿಹ ಬಹು |

ಪಂಚಯೋಗಿಗಳ ಸಂಚಲಗೊಳಿಸುವ ||1||

ಸರ್ವಜೀವ ಸೂತ್ರವನೆ ತನ್ನಯ |

ಸರ್ವದೇಹದೊಳಗನುಗೊಳಿಸ್ಯಾತ್ಮನ |

ಸರ್ವ ಇಂದ್ರಿಯ ವಿಕರಣಾದಿ ವಿಷಯ ಸುಖ |

ಸರ್ವ ರೂಪು ನಾನೇ ನಾನೆಂಬುವ ||2||

ಎಲ್ಲಿ ನೋಡಲರುವಿಲ್ಲದೆನಗೆ ಸ್ವತಂ |

ತ್ರಿಲ್ಲ ಎಂಬುದು ಸರ್ವಲ್ಲದ ಪ್ರಭು ಮಹಾಂ |

ತ್ವಲ್ಲಬ ತಾನಲ್ಲೆಂದರೆ ನಾ |

ನಿಲ್ಲೆನಲರಿಯದೆ ತಲ್ಲಣಿಸುವ ಹುಸಿ ||3||

ಎಷ್ಟು ನಿನ್ನಗ ಮಾಯದ ಮರವು ಇಷ್ಟಿಲ್ಲೇಳರವು |

ದೃಷ್ಟಾದೃಷ್ಟಾಂತ ಹೇಳುವೆ ದೃಷ್ಟಾ ಎಲೊ |

ಭೃಷ್ಟಾ ಕೇಳರಿಷ್ಟಾ ಈ ಕಷ್ಟಾ ಬಹು |

ನಷ್ಟಾ ಎಂಥಾದದರುಷ್ಟಾ ||ಪಲ್ಲ||

ಹಲವು ಸವಿಗೆ ಮನ ಸೋತಿ | ಮಾಡುಂಡು ಹೇತಿ |

ತೆಲಿಗೆ ಏರಿತು ಒಂದು ರೀತಿ | ಅದು ಸತಿಗೆ ಸೋತಿ |

ಚಲುವ ಮಗನ ಬೇಡಿ ನೊವತಿ | ಹೀಂಗಾಯ್ತು ಖ್ಯಾತಿ |

ಬಲಿದು ದೇಹಾಯಿತು | ಸಪ್ತ ಧಾತು ರೋಗಾಯ್ತು |

ಸತ್ತಿತು ಶವ ಬಾತು ಮೈಕಿತ್ತು ಹೊಲ ಹೊಲಸು ನಾತು ||1||

ವನಿತೆ ನನ್ನವಳೆಂದು ನೆಚ್ಚಿ | ಬಣ್ಣ ಬಿಳಿದು ಹೊಚ್ಚಿ |

ಒನಪು ವೈಯಾರಕ ಮೆಚ್ಚಿ | ನೀ ನಡದವಳಿಚ್ಚಿ |

ಮನದ ಗುಪ್ತಗಳೆಲ್ಲ ಬಿಚ್ಚಿ | ಅಲ್ಲಿಟ್ಯೊ ಬಚ್ಚಿ |

ನಿನಗೆ ವಂಚಿಸಿ ಜಾರನ ನೋಡಿ | ಮಾತಾಡಿ ಮುದ್ದಾಡಿ |

ಮನಿಹಾಳ ಮಾಡಿ ರತಿಗೂಡಿ ಹೋಯಿತೋಡಿ 2||

ಕೃಪಣತನದಲೊಂದು ಪಾಕಿ | ಪಾಕಿ ಕೂಡ್ಹಾಕಿ |

ನಿಪುಣತನದಿಂದುದ್ರಿ ವಾರಹಾಕಿ | ಬರಸಿಟ್ಟಿದಿ ರೋಕಿ |

ಗುಪ್ತದಿಂದಿಟ್ಟೀದ್ಯೊ ಬಂದದ್ದು ಜೋಕಿ | ಬರವಲ್ಲದು ಬಾಕಿ

ಅಪರಿಮಿತ ಮಹಾಂತನ ಲೀಲಾ | ಆ ಸೊಲ್ಲ

ಭವ ಜಾಲ ಮೈ ಲಾಲ ನೃಪ ತಸ್ಕರ ಪಾಲ ||3||

ಭಲರೆ ಮಾಯ ಬಲಿಸಿದಿ ಕಾಯಾ |

ಬಲಿಗುಡದೊ ನಿಜ ನ್ಯಾಯ | ನರರಿಗೆ

ಬಲಿಗುಡದೊ ನಿಜ ನ್ಯಾಯ ||ಪಲ್ಲ||

ಮಲಮೂತ್ರ ಕಾಯ ಮದ ಹೊತ್ತ ಪ್ರಾಯ |

ಬಲವಂತ ಬಲಿ ಕಲಿರಾಯೊ | ನರರಿಗೆ

ಬಲವಂತ ಬಲಿ ಕಲಿರಾಯೊ ||1||

ಶಿವಪಥ ಸಂಗ ಸಿಗುವದು ಲಿಂಗ |

ಭವ ಹರಿವದು ಯಮನ್ಹಂಗೊ | ನರರಿಗೆ

ಭವ ಹರಿವದು ಯಮನ್ಹಂಗೊ ||2||

ಭುವನದಿ ಸಂಗ ಬುದ್ಧಿಯ ಮಂಗ |

ಕವುಲ್ಹೊಡಿವನು ಯಮನ್ಹಿಂಗೊ | ನರರಿಗೆ

ಕವುಲ್ಹೊಡಿವನು ಯಮನ್ಹಿಂಗೊ ||3||

ಕುಲಛಲ ದೋಸ್ತಿ ಕುಹಕ ಜಾಸ್ತಿ |

ನೆಲಿ ತಿಳಿಯದಕ್ಕಿಲ್ಲೊ ಹ್ಯಾಸ್ತಿ | ನರರಿಗೆ

ನೆಲಿ ತಿಳಿಯದಕಿಲ್ಲೊ ಹ್ಯಾಸ್ತಿ ||4||

ಎಲು ತೊಗಲಾಸ್ತಿ ಎಂದಿಗಾದರ್ನಾಸ್ತಿ

ನೆಲಮನಿಗ್ಹೋಗದು ಸ್ವಾಸ್ತಿ | ನರರಿಗೆ

ನೆಲಮನಿಗ್ಹೋಗದು ಸ್ವಾಸ್ತಿ ||5||

ಕಡಿಯವತಾರ ಹುಸಿ ಬೀಳುವರ |

ಮೃಢ ಮಹಾಂತೇಶನ ಸಾರೊ | ನರರಿಗೆ

ಮೃಢ ಮಹಾಂತೇಶನ ಸಾರೊ ||6||

ಮುಕ್ತಿ ಕೊಡುವನು ಧೀರ ಕುಲ ಉದ್ಧಾರ |

ನುಡಿವನು ಶಿವಶಾಸ್ತರ | ನರರಿಗೆ

ನುಡಿವನು ಶಿವಶಾಸ್ತರ ||7||

ಮಾಯಿ ಜ್ವಾಲಿ ಅಳದವನ ಮಾತ ಕೇಳೋದ್ವಾಜಿಮಿ |

ಅನ್ಯಾಯ ನಡಿಸಿದವನಿಗಿ ಮಚ್ಚಿಲ್ಹೊಡಿಯದ್ವಾಜಿಮಿ |

ಇಚ್ಛಾ ಮಾತನಾಡಿದ ಲುಚ್ಛಾ ವಾಜಿಮಿ | ಅಂವಾ

ಸಾಚಾ ಮಾತು ಹೇಳಿದರ ಶಿವ ಮೆಚ್ಚುದ್ವಾಜಿಮಿ ||ಪಲ್ಲ||

ಹಮ್ಮ ದಮ್ಮ ಅಳದ ಮೇಲೆ ಬ್ರಹ್ಮ ವಾಜಿಮಿ | ಇಂಥ

ದಮ್ಮಿಲ್ಲಿಂದ ತಿರುಗು ಮನುಷ್ಯ ರುಮ್ಮ ವಾಜಿಮಿ |

ದಮ್ಮ ಕಾಣಸ್ತಾನ ಕಣ್ಣಿಗಿ ಹುಮ್ಮ ವಾಜಿಮಿ | ಅವ

ಎಮ್ಮಿ ಹೊಟ್ಟಿಲಿ ಕೋಣನಾಗಿ ಹುಟ್ಟೋದ್ವಾಜಿಮಿ ||1||

ತಿಳಿದ ಮೇಲ ಅಳದ ಮೇಲ ಉಳುದುದ್ವಾಜಿಮಿ |

ಮತ್ತ ಕಾಮ ಕ್ರೋಧ ಅಳದ ಮೇಲ ಕೈಲಾಸ ವಾಜಿಮಿ |

ಲಾವ ಲುಚ್ಚ ಮಾತನಾಡುವ ಲೇವಡ್ಪಾಜಿಮಿ |

ಅವಳು ಗಂಡಗ ಮಿಂಡಗ ಕೂಡೇ ಉಣ್ಸಿದೊಂದ್ವಾಜಿಮಿ ||2||

ಭಾವದಲ್ಲಿ ಭಕ್ತಿ ಇರುವದು ಇದು ಒಂದು ವಾಜಿಮಿ

ಮತ್ತೆ ಗುರುವಿನಲ್ಲಿ ಭಕ್ತಿ ಇರೊದೊಂದ್ವಾಜಿಮಿ

ಪೊಡವಿಯೊಳಗ ಚಿಣಮಗೇರಿ ವಾಜಿಮಿ

ಗುರು ಮಹಾಂತೇಶ್ವರಗ ಮುಕ್ತಿ ಬೇಡೋದ್ವಾಜಿಮಿ ||3||

ಎಂಥ ಮಾನವ ಜನ್ಮ ಇದು ಮಾಯಿಗಿ ಸೋತಾದ ||ಪಲ್ಲ||

ಅರುವಿನ ಜನ್ಮ ತಾನೆ ಇದ್ದು ತನ್ನನು ಮರಿತಾದ |

ಅರವು ತಿಳಿಯದೆ ಮರವಿನೊಳು ತಾನೇ ಬಿದ್ದಾದ ||1||

ಜ್ಞಾನ ಎಂಬ ಠುಬಾಕ ಇದಕ ಮೂಬತ್ತಿ ಆಗ್ಯಾದ |

ಅಜ್ಞಾನ ಎಂಬ ಕೊಳ್ಳಿಯಿಂದ ತಾನೇ ಸುಟ್ಟಾದ ||2||

ವೇದಶಾಸ್ತ್ರ ಪುರಾಣ ಆಗಮ ಓದಿ ಹೇಳತಾದ |

ರಾತ್ರಿ ಕಂಡ ಬಾವಿಗಿ ಇದು ಹಗಲೆ ಬೀಳತಾದ ||3||

ಹೆಂಡಾ ಕುಡಿದು ಕಂಡುದ್ದುಂಡು ಭಂಡ ಮಾಡ್ಯಾದ |

ನಮ್ಮ ಪುಂಡ ಮಹಾಂತೇಶನ ಕಂಡು ಭಂಡ ಆಗ್ಯಾದ ||4||

ಮಾಯಿನ ಬಿಟ್ಟೇವೆಂದು

ಬಾಯಿಲೇ ಹೇಳುವರಲ್ಲ

ಹೊತ್ತು ಬಂದ ದೇಹವಿದು

ಮಾಯಿಯಲ್ಲವೋ ಮಾನವ ||ಪ||

ಹೊನ್ನು ಹೆಣ್ಣು ಮಣ್ಣು ಕಂಡು

ನೀ ತಣ್ಣಗಾದೆನೆಂಬೆ

ಕಣ್ಣೀಲೆ ಕಂಡು ಮನದೋಳು

ಮರಗಿ ಕೊರಗಿ ಮರವಿ ಮಾಯೆಯೇ ||1||

ಬಲ್ಲೆ ಬಲ್ಲೆನೆಂದು ನೀ

ಎಲ್ಲ ಶಾಸ್ತ್ರ ನೋಡಿರುವೆನೆಂದು

ಬಲ್ಲ ಮಹಾತ್ಮರಿಗೆ ನೀ

ಖುಲ್ಲ ಮಾಯೆಯೇ ||2||

ಊರ ಮನಿಯ ಬಿಟ್ಟೆನೆಂದು

ಅಡವಿ ಗುಡ್ಡ ಸೇರಿಕೊಂಡು

ಆಹಾರಕ್ಕೆ ಅವ್ವ ಎಂದು ಬಡಿದುಕೊಂಡು

ಖೊಟ್ಟಿ ಮಾಯೆಯೇ ||3||

ದೇಶಕಧಿಕವಾದ ವಾಸುಳ್ಳ ಕಡಕೋಳ

ಈಶ ಮಹಾಂತೇಶನ ದಾಸನಾಗಿ ಇರುವ ಕೂಸು

ಏಸು ಜನುಮ ತಿರುಗಿ ತಿರುಗಿ

ಮರಗಿ ಮರವಿ ಮಾಯೆಯೇ ||4||

ಏ ಏನೋ ನಿನ್ನ ಮಾಯೆಯಂಬ ಕಷ್ಟ ಬಹಳವಾಯಿತ್ತು

ಬಾಯಿಗೆ ಇಷ್ಟಿಲದ್ಹೋಯಿತು ||ಪ||

ವಿಷಯ ಲಂಪಟದಿಂದೆ ಹುಸಿಯನಾಡಲು ಅಳದಿ

ತಾ ಪುಸಿಯಿಂದೆ ವಿಷಯಲಂಪಟ ತೀರದು

ಪುಸಿಯಾಡಿದಂಗೆಲ್ಲ ವಿಷಯ ಪಲ್ಲವಿಸಿತ್ತು

ವಿಷಯ ಪಲ್ಲವಿಸಲು ಹುಸಿ ಬಿಡದಾಗದು ||1||

ವಿಷಯಕ್ಕೋಸ್ಕರವಾಗಿ ಹುಸಿಯಾಗಿ ತ್ರೈಜಗ ಪುಸಿಯಾದರಾಗಲಿ

ವಿಷಯ ಹೋಯಿತ್ಹೋಯಿತೇ

ವಿಷಯ ಹೋಗದಿರಲು ಕಿಸುಕುಳದ ಸ್ತ್ರೀಯರ ಕಾಲದಸಿ ನುಸುಳ್ದರೆ

ವಿಷಯ ಸುಖವಾಯಿತೇ ||2||

ವಿಷಯ ಸೌಖ್ಯವು ಬೇಕಾದರೆ ಪುಸಿಯು ಅಳಿಯಲು ಬೇಕು

ಹುಸಿ ಹೋಗಲು ವಿಷಯ ತಾ ಉಳಿಲಿಲ್ಲ

ಪಶುಪತಿ ಶ್ರೀಗುರು ಮಹಾಂತ

ಸದ್ಗರುವಿಗೆ ವಿಷಯ ಹೋಗಲ್ ಮಾಯಿ ಮುಸುಕಲಿಲ್ಲ ||3||

ಭುವನದ ಮಾನವರ್ಹ್ಯಾಂಗಿರಲಿ ಮಹಾನ್ಭಾವರ‍್ಯಾ |

ನೀವರೆ ಮಾಯಸ್ಥಿತೆ ಬಲ್ಲಿರ‍್ಯಾ ||

ಅಭಿ ಅಭಿ ಎಂಬಭಿಪ್ರಾಯವ ತಿಳಿದಿರ‍್ಯಾ

ಗಾವ ಗುತ್ತಿಗೆತನಕೊಲ್ಲಿರ‍್ಯಾ ||ಪಲ್ಲ||

ಮೂರು ಮೂರೇನು ಮೂರು ಆರಾದದ್ದೇನು |

ಆರಾರಿನ್ನೂರ ಹದಿನಾರಾದುದೇನು |

ತೋರುವ ಜಗದ ವಿಸ್ತಾರ |

ಸುಖ ದುಃಖದ ಕಾರಣ ಕಾರಣಾಕಾರವೇನು ||1||

ಸ್ವರ್ಗ ನರ್ಕಾಗುವ ಧರ್ಮ ಕರ್ಮದುದ್ಯೋಗ |

ಭರ್ಗಭಾನುಜರಿಬ್ಬರೊಂದೆ ಕುಲ ||

ವರ್ಗಷಡ್ವಿಧ ವಿವರವರಿಯಲ್ಪ

ವರ್ಗದೊಳ್ಹೊರಗ್ಹಸು ಸಕೀಲಾ ||2||

ಹೆಣ್ಣಿಗೆ ಗಂಡೇ ಶತ್ರು ಗಂಡಿಗೆ ಹೆಣ್ಣೇ ಶತ್ರು |

ಹೆಣ್ಣಿಗೆ ಗಂಡಿಗೆ ಗಂಡು ಹೆಣ್ಣೇ ಮಿತ್ರ ||

ಬಣ್ಣದ ಮಾತಲ್ಲ ಬಾಳ್ವಸ್ತ್ರೀಗ್ಹೇಳುವೆ |

ಕಣ್ಣಿದ್ದು ಕಾಣ್ವಲ್ರು ಪುತ್ರಪಿತೃ ||3||

ಅವರೊಡವಿವರಲ್ಲಿ ಇವರೊಡವವರಲ್ಲಿ |

ಅವರದಿವರಿಗೆ ಸಾಯತಾಗೋದು ||

ಕವಿ ಗಮಕಿಗಳಿಗ್ವಾದಿಗಳಿಗ್ವಾಙ್ಮುಖಿಗಳಿಗೆ |

ಭವ ಗೆದ್ದೆನೆಂಬ ಹಿರಿಯರಿಗೆ ತೂಗದು ||4||

ಮುಡಿ ಮೊಲೆ ಕಣ್ಮುಖ ಮೂರ್ಛಾಗೊಂಡಿದರಾಗಿ |

ಬಿಡದೆ ಮೂದಲಿಸುತ ನಿಂತಿಹುದು ||

ಮುಡಿ ಕಡಿ ಹಿಡಿಸಲಿಕ್ಕಡಗದು |

ಕಂಡವರ ಕಡೆಗಾಣದಂತಿಹುದು ||5||

ಅರ್ಥಪ್ರಾಣಾಭಿಮಾನ ಕರ್ತೃಕರ್ಮಕ್ರಿಯಾ |

ಅರ್ಥನುಭವಿಸೇ ಸ್ವಪ್ನಾರ್ಥಹುದು ||

ಮರ್ತ್ಯ ಮಾನ್ವರ ಮೋಹ ವ್ಯರ್ಥವಾದುದೆ ಸಹಜ |

ಗುರ್ತಲ್ಲ ನಿಜ ಸುಖ ತುರ್ತಾಹುದೊ ||6||

ಮಾಯಾಯಂಬುದೆ ಮಾಯಾ ನಿರ್ಮಾಯ ಛಾಯ

ಮಾಯ ಸರ್ವತ್ರ ಸಕಲ ಸಂಭ್ರಮ

ಮಾಯಾ ಮಹಾಂತಪೂರ ಮಾಯ ಮಹಾಂತೇಶ್ವರ

ಮಾಯಾ ನಿರ್ಮಾಯ ತಾನೀ ಸುಳ್ಳೆ ಶ್ರಮ ||7||

ಇಲ್ಲದ ಸುಂಟರಗಾಳೆದ್ದು

ಎಲ್ಲ ತಾನಾಯಿತ್ಹ್ಯಾಂಗೆ |

ಬಲ್ಲನುಭವಿಗಳು ತಿಳಿರಿ

ಎಲ್ಲ ಲೋಕಾಗುವದ್ಹ್ಯಾಂಗೆ ||ಪಲ್ಲ||

ಆಯಿತೆ ಆಗ್ತಾಗ್ತ್ಹೋಯಿತು

ಆಯಿತದೂ ಅಗತ್ಯ |

ಆಯಿತೆಂಬೊ ಮಾಯಿತೇನಾಯಿತು |

ಆಯಿತಾಗ್ತಾದ ಸೌಖ್ಯ ಸ್ವಯತಾಗಿ ಆಯ್ತಾಯ್ತು ||1||

ಆಯಿಂತೆಂಬೋದೇನೊ ಆಯಿತಾಯ್ತು |

ಆಯಿತಾಗೋದಾಯ್ತು |

ಕೈಯಿಂದೆ ಮಾಡೋದಾಯ್ತು |

ಬಾಯಿಂದೆ ಹೇಳೋದಾಯ್ತು ||2||

ಆದುದಕೆ ಆದದ್ದಾಯಿತು |

ಆದದಕದೇ ಆಯ್ತು |

ವೇದ ವೇದಾಂತ ಸಿದ್ಧಾಂತವಾಯಿತು |

ಮೋದ ಮುದ್ದ ಮಹಾಂತ ಮಹಾಂತಾಯ್ತು ||3||

ಇಲ್ಲೇ ಆದುದಿದೆಯೆಂದು |

ಸೊಲ್ಲಿದ ಶ್ರೀಗುರು ಬಂದು |

ನಲ್ಲೆ ನೀ ನೋಡಲೆ ಇಂದು |

ಎಲ್ಲವು ಮನಸಿಗೆ ತಂದು ||ಪಲ್ಲ||

ಏನು ಇಲ್ಲದೇನೊ ತಾನೆ |

ಏನಾದರೇನನುಮಾನೆ |

ಮಾನಿನಿ ಮಾಜುದೇನೆ

ನಾ ನಿನ್ನಗ್ಹೇಳುದೇನೆ ||1||

ಇಲ್ಲಾದದ್ದಾದದೊಂದೇ ಕೋಟಿ |

ಇಲ್ಲಾಗಿಲ್ಲಾಯಿತು ಲೂಟಿ |

ಬಲ್ಲವರಿಗೆ ಹೇಳೋ ಸೂಟಿ

ಇಲ್ಲಾಯಿತದಕೇನು ಸಾಟಿ ||2||

ಹರಹರಕಾದುದೊಂದೆ ಹಲವು |

ನೆರವಿಗೆ ಬಂದದ್ದೆ ಬಲವು

ಕುರು ಅರುಹರುವಾದದ್ದೆ ನಿಲವು |

ವರಗುರು ಮಹಾಂತೈಕ್ಯಸ್ಥಲವು | |3||

ಇಲ್ಲೆ ಅಧಿಕ ವಸ್ತು ಇಲ್ಲೆ ಅಧಿಕನಲ್ಲ |

ಸುಳ್ಳೆ ಚಿಂತಿಲಿಂದೆ ಅಲ್ಲಲ್ಲೆ ಹುಡಕ್ಯಾಡಿದೆನ್ಯಾಕೆ ||ಪಲ್ಲ||

ಹಸರು ಹಳದಿ ಕೆಂಪು ಕರಿದು ಮಿಸುಪ ಬಿಳಿದು |

ಮಿಶ್ರವರ್ಣ ಪಸರಿಸಿರ್ಪ ಪ್ರಭೆಗಳಿಂದೆ ||

ಎಸುವ ನನ್ನ ಮೂಗುತಿ ಮುತ್ತ ||1||

ಕಾಸು ಕೊಟ್ಟರೇಸೋಯೆಂಬ ಭಾಷೆಯುಂಟು |

ಆಶೆಯು ಎಷ್ಟು ಭೂಷಣಕೆ ಮೇಲಾದಂಥ |

ಮಾಸಿ ತಾಳಿ ಕರಮಣಿ ದಾರ ||2||

ಮೆಚ್ಚಿ ಬಿದನೂರ ಮಡಿವಾಳಾಖ್ಯ |

ಮುಚ್ಚಿ ಕೊಟ್ಟ ಪಚ್ಚದುಂಗುರ |

ಎಚ್ಚರಿಲ್ಲದ ಹುಚ್ಚಿ ನಾನೆ ಬಚ್ಚಿಟ್ಟಿನಿ ಕರಡಗಿಯೊಳಗೆ ||3||

ಅಲ್ಯಾಕೊ ಹುಡುಕುತಿ | ಇಕೋ |

ಇಲ್ಲ್ಯಾದೊ ಮುಕುತಿ |

ಬಲ್ಲೆ ಬಹು ಹರ ಕಥಿ ತಿಳಿ

ವಲ್ಲಿ ನೀನೆಲೆ ಕೋತಿ ||ಪಲ್ಲ||

ಆಶಿವುಡಿದು ನೋಡೆ | ನಿ

ರಾಶಿ ಹಿಡಿದು ಮಾಡೆ |

ಪಾಶಿ ಈ ಭವದೀಡೆ

ಉಲ್ಲಾಸಿಯಾಗೋದು ಪಾಡೆ ||1||

ನಾನು ನೀನು ನೀನೆ | ಮತ್ತೆ

ನೀನು ನಾನು ನಾನೆ |

ನಾನು ನೀನು ತಾನೆ ಅಕೋ |

ತಾನೆ ನಾನು ನೀನು ನೀನೆ ||2||

ಭಾವೆ ಎರಡು ನೋಟ | ನೀ

ಭಾವಿಸು ಒಂದೆ ಕೂಟ |

ಜೀವ ಪರಮರ ಆಟ ಮಹಾ |

ದೇವ ಮಹಾಂತನಾಟ ||3||

ಇಲ್ಲದ್ದಿಲ್ಲದ್ದಿಲ್ಲ ಇದ್ದುದ್ದೆಲ್ಲ ಅಲ್ಲ

ಇಲ್ಲ ಅಲ್ಲ ಅಲ್ಲ ಇಲ್ಲ ಇಲ್ಲಲ್ಲೊಲ್ಲಿ ಬಲ್ಲ ||ಪಲ್ಲ||

ಕಾಶಿ ರಾಮೇಶ್ವರಗ ಹೋದಿ

ಆಶಿ ಬಿಡದೆ ಘಾಸಿ ಆದಿ

ಏಸೊ ಯೋಗ ಮಾಡಿ ತತ್ವದ

ತಾ ಸಿಗದೊ ಸ್ವರಗದ್ಹಾದಿ ||1||

ವೇದಾಗಮ ಪುರಾಣಗಳೋದಿ

ಗಾದಿ ಹಾದಿಗ್ಹೋದಿ ವಾದಿ

ನಾದ ಬಿಂದು ಕಳೆಗಳಾದೇನಾದಿ

ಆದಿ ತಿಳಿಯದ್ಹಾದಿ ||2||

ಆಯತ ಸ್ವಾಯತ ಸನ್ನಿಹಿ ತಂದಿ

ತಂದಿ ತಾಯಿ ಸಂದೀಲೆ ಬಂದಿ

ಮಾಯತ ಮಾಯತ ಮಹಂತ ಮಹಂತ

ಜ್ಯಾಯತ ಜ್ಯಾಯತನೆಲ್ಲಿ ತಂದಿ ||3||

ಎಲ್ಲಿ ನೋಡಿದರಲ್ಲೆ ತಾನೆ ಎಲ್ಲರೊಳಗ್ಹಾನೆ |

ಎಲ್ಲಿ ನೋಡಿದರಲ್ಲಿ ತಾನೆ |

ಫುಲ್ಲ ನಯನೆ ಹೌದೆಲ್ಲಯೆಂಬುವದೇನೆ ||ಪಲ್ಲ||

ಹತ್ತು ದಿಕ್ಕಿನೊಳಗ್ಹಾನೆ | ಅತ್ತಿತ್ತ ಹಾನೆ |

ನಿತ್ಯ ನಿತ್ಯ ತೋರುತಾನೆ ತನ್ನೊಳು ತಾನೆ |

ಚಿತ್ತ ಬಂದಂತೆ ಹಾನೆ ಸುತ್ತು ಮುತ್ತುಕೊಂಡಿಹಾನೆ ||1||

ಹದಿನಾಲ್ಕು ಲೋಕದೊಳಗ್ಹಾನೆ ಹಲವು ಆಗ್ಯಾನೆ |

ಹದಿನೆಂಟು ಚಕ್ರ ತಿರುಗತಾನೆ | ಹಗರಣದೊಳಗ್ಹಾನೆ |

ಹೆದರುಚೆದರುನೊಳಗ್ಹಾನೆ ಮದನ ಮೋಹವು ತಾನೆ ||2||

ನಿಂತುಕೊಂಡವ ನೋಡುತಾನೆ | ಅಕೊ ಕಿವಿಯೊಡ್ಡಿ ಕೇಳುತಾನೆ |

ಕುಚು ಕುಚು ಅಂತಾನೆ ಇಂತು ಅನಂತ ತಾನೆ |

ಸಂತ ನಿಶ್ಚಿಂತ ತಾನೆ | ನಿಜದ ನಿಲದೊಳಗ್ಹಾನೆ ||3||

ಮಾತುಗಳಾಡುತಾನೆ ಮೂಕನಾಗ್ಯಾನೆ |

ಮೂಢ ಮಾತುಗಳ ತಾನೆ ನಾಡ ಆಳುವ ತಾನೆ |

ಮಾಡಿ ನೀಡುವ ತಾನೆ ಬೇಡಿವುಂಬವ ತಾನೆ ||4||

ಬಳ ಬಳ ಬಳ ಸುರವುತಲ್ಹಾನೆ ಅಲಲಲಲೆಂಬೊತಲ್ಹಾನೆ |

ತಳ ತಳ ತಳ ಹೊಳೆಯುತಲ್ಹಾನೆ ಕಲ ಕಲ ಕಲ ಮಾಡುತಾನೆ |

ಅಳಳಳಳೆಂಬುದು ಅದು ತಿಳಿ ನೀನೇ ||5||

ಎಡಬಲದೋಳಿರುತಾನೆ ಮುಂದೆ ಹಿಂದ್ಹಾನೆ |

ಬುಡಕೆ ಮೇಲಕೆ ಕಾಣುತಾನೆ ನಾಡಿನೊಳಹೊರಗ್ಹಾನೆ |

ನುಡಿವ ಬೆಡಗಿನೊಳಗ್ಹಾನೆ ಮೃಢ ಮಾಂತೇಶ್ವರ ತಾನೆ ||6||

ಅಲ್ಲೆಂಬೊ ಮಾತೊಂದೆಲ್ಲಿ ಇಲ್ಲದಾಯಿತೊ ||ಪಲ್ಲ||

ಕಂಗೊಳಿಸುವ ಭುವನಂಗಳೊಳಗೆ |

ಪಂಚಂಗದ್ಹೊರ್ತ ಒಂದಿಲ್ಲ |

ಈ ಸೊಲ್ಲ ಸುಳ್ಳಲ್ಲ |

ಹ್ಯಾಂಗ್ಹಿಂಗಂಬುದು ಇದು ತರವಲ್ಲ ||1||

ನವಬ್ರಹ್ಮ ಆದದ್ದು ವಿವರವ ಭೇದಿಸಿ |

ಸುವಿಧನದಲ್ಲಿ ನೀ ತಿಳಿಯೊ |

ಸುಖಿ ತಳಿಯೊ ಚಿತ್ತ ಕಳೆಯೊ |

ಅವ ಇವ ನಾ ನೀನೆಂಬೋದಳಿಯೊ ||2||

ಅಣುವಿನೊಳಡಗಿದ ಅಣು ಮಾಂತೇಶನ |

ಗಣನಿಗೆ ಬಾರದೀ ಘನವು | ಆ

ನೆನವು ಈ ಮನವು |

ಘನ ಇಲ್ಲದಾಯಿತು ಬಹು ದಿನವು ||3||

ಅಲ್ಲೆಂಬುದು ಹೌದಾದರೆ

ಮಾರಿ ಆಗ್ಹ್ಯಾಂಗಾಗೋದಪ್ಪ |

ಹೌದೆಂಬುದು ತನ್ನಲ್ಲಿ ಕಂಡು | ಆ

ಪುರಾತನರಾದರು ಗಪ್ಪ ||ಪಲ್ಲ||

ಛಾಯದ ಶಿಶುವಿಗೆ ಭವ

ಎಂಬಂಜಿಕಿ | ತಾಯಿ ತೋರಿದಳಪ್ಪ |

ಪ್ರಾಯದ ಕಾಲಕ ತಾಯಿ ಹೇಳಿದ

ಮಾತ ತಾಯೇನಾದಿತಪ್ಪ ||1||

ಕಣ್ಣ ಮುಚ್ಚಿದ ಕಾಂತಗೆ

ಸ್ತ್ರೀ ತಾ ಅಣ್ಣಪ್ಪಂದಳಪ್ಪ |

ಕಣ್ಣು ತೆರೆದು ನೋಡಲು | ಆ

ಕಾಂತಗೆ ಅಣ್ಣಪ್ಪ ಅನಳ್ಯಾಕಪ್ಪ ||2||

ಕತ್ತಲದೊಳು ಬರುವಪ್ಪನ ಕಂಡ

ಹೆತ್ತವ್ವನ ಬೈದೆಪ್ಪ |

ಉತ್ತಮ ಗುರು ಗುಡ್ಡದ ಮಾಂತೇಶನ

ಮುತ್ಯಾನ ಮೊಮ್ಮಗನಪ್ಪ ||3||

ಇಲ್ಲೇ ನೀ ಮಾಡಿಕೊಳ್ಳೊ ಗೊತ್ತು | ಅಲ್ಲಿಂ

ದಲ್ಲೆ ಹೋಗುತಾದೊ ಬಹಳ ಮಂದಿ ಸತ್ತು | ಛೇ ಛೇ

ಅಲ್ಲಿಂದಲ್ಲೆ ನೋಡಿದಲ್ಲೆ ಯಾಕೆ ಹಲವು ಚಿತ್ತು ||ಪಲ್ಲ||

ಕಂಡ ಕಡಿಗೆ ಹೋಗಬ್ಯಾಡ | ಅಲ್ಲಿ

ಭಂಡಾಗಿ ಮರಳಿ ಮರಳಿ ಬರುವದೇನು ಪಾಡ |

ಹೆಂಡರನುಜರಿಲ್ಲ ಜೋಡ | ಭೂ

ಮಂಡಲದೊಳಗೆಲ್ಲ ಇದೆ ಕೌಲನಾಡ ||1||

ಹಿಂದೆ ನಾನಾ ದೇಶ ತಿರುಗಿ | ಬಹಳ

ನೊಂದು ಬೆಂದು ಕಂದಿ ಕುಂದಿ ಚಂದಗೆಟ್ಟೆನು ಸೊರಗಿ

ಮಂದಿ ಮಕ್ಕಳನು ತಿಂತು ಮರಗಿ | ಇಲ್ಲಿ

ಬಂದು ಮಾಡಿಕೊಂಡೆ ಉಂಡುಟ್ಟು ಹೊನ್ನಿನ ಚರಗಿ ||2||

ಅರಮನಿ ನಿನಗಾಗಿ ಬಿಡತ | ನಮ್ಮ

ಸರಶಟ್ಟಿತನದಲ್ಲಿ ಇದ್ದೇನಂದರಿಡುತ |

ದೊರೆ ಮಹಾಂತೇಶನ ಕೈಯಲಿ ಕುಡುತ | ಮುಂದೀ

ಪುರವು ಹಾಳಾದರೆ ನಿನ್ನ ಕೂಡಿಕೊಂಡು ನಡುತ ||3||

ಬೇಗ ನೀ ಸೇರು ಹೋಗೊ ಗೊತ್ತು | ಅಕೊ

ಈಗ ಸೀಗಿ ಸಾಗಿ ಹೋಗುತಾದ ಮಾಗಿ ಹೊತ್ತು ||ಪಲ್ಲ||

ಸುತ್ತ ಕ್ಯೆಂಜಗ ಕಾರೀಕಳ್ಳಿ | ಅಲ್ಲಿ

ಹತ್ತೆಂಟು ಮಂದಿ ಮುತ್ತಿ ಮಾಡುತಾರ ತಳ್ಳಿ |

ಕೊತ್ತಲಿಲ್ಲದ ಕುರಪನಳ್ಳಿ | ಯಲೋ

ಕತ್ತಲಾದ ಮೇಲೆ ಬಿಡರು ಆಗ ಬಾಳ ನೆಳ್ಳಿ ||1||

ಒಬ್ಬವ ಒಳ್ಳೆವ ಈ ಊರಲ್ಲಿ ನೋಡೊ |

ಹಬ್ಯಾದೆ ಅವನ ಕೀರ್ತಿ ಮೂರು ಲೋಕದಲ್ಲಿ

ಡವಲ ನೀನು ಕೇಳ ಬಲ್ಲಿ | ಇನ್ನಿ

ಬ್ಬರು ಹಾರಬಲ್ಲವರ್ಹೋಗೊದಿಲ್ಲವರಲ್ಲಿ ||2||

ಅಡ್ಡ ಹೆಸರು ಕೇಳುತ ಹೋಗೊ | ಘನ

ಗುಡ್ಡದ ಯೋಗಿ ಮಹಾಂತೇಶನೆಂದು ಕೂಗೊ |

ಹೆಡ್ಡ ಗುಣಗಳೆಲ್ಲ ನೀಗೊ | ಆ ಮಹಾ

ದೊಡ್ಡವರ ಕಂಡು ತಲೆ ಬಾಗಿ ವಸ್ತಿಯಾಗೊ ||3||

ಇಲ್ಲೆ ಇದ್ದದ್ದು ಇದ್ದುದಿಲ್ಲೆ ಅದು |

ಸೊಲ್ಲಲಾಗದು ಸುಮ್ಮನಲ್ಲೆ ನಲ್ಲೆ ||ಪಲ್ಲ||

ಸ್ಥಾಣುವಿನಲ್ಲಿ ಕಂಡ ಚೋರ ಅದು |

ಕಾಣಲು ಮತ್ತೊಂದಾಕಾರ |

ಮಾಣದು ನಾನಾ ವಿಚಾರ | ಅಪ್ರ

ಮಾಣನೆನಿಸುವದಪಾರನಲ್ಲೆ ||1||

ನೋಡಲು ನೋಡಲಾದದ್ದು ಹೋಗಿ |

ನೋಡಲು ಮುಂದಕ್ಕೋಡುದು |

ಗಾಢ ತಿರುಗಲ್ಹಿಂದೆ ಬಾಹುದು

ಕೈಯ ನೀಡಿ ಹಿಡಿಯೊ ಬಯಲಾಗುದು ನಲ್ಲೆ ||2||

ಮೊದಲೆ ಬ್ಯಾರೆಂಬೋದೊಂದುಂಟು |

ಅದಕ್ಹೆದರುವದೆ ವಾಜಿಮಿಗಂಟು |

ನದರಿಕ್ಕುವವ ಯಾವ ತಂಟು | ನೀ

ಚದುರೆ ಹೇಳಿದಕ್ಯಾಕೇಳೆಂಟು ||3||

ಮನಿಯೊಳು ಮಲಗಿಕೊಂಡಲ್ಲಿ |

ನೀನು ಕನಸಿನೋಳೋಡ್ಯಾಡುವದೆಲ್ಲಿ |

ಘನ ಬಿನಗಿನ ದಿನಸಲ್ಲಿ ನೀ ಕಂಡ

ದನ್ನು ತಿಳಿ ಮೊದಲೇನು ಬಲ್ಲಿ ||4||

ಪೊಡವಿಯೊಳಗೆ ಕಡಕೋಳ ತನ್ನ |

ಪಡದವರ ಅವಗುಣ ಹಾಳ |

ಮೃಢ ಮಹಾಂತಪುರ ಮಡಿವಾಳ | ಸಂಸಾರ

ನಡಿಸಿದ ಅಳಳಳ್ಹುಸಿ ಹೇಳನಲೆ ||5||

ಇಲ್ಲಿ ಅಳಿಯದೆ ತಿಳಿಯದೆಂದಿಗೆ ನೀ

ಬಲ್ಲಾಗು ಬಾ ನನ್ನೊಂದಿಗೆ |

ಸಲ್ಲದು ಸುಖ ದುಃಖ ಸರಿಗಾಣದವರಿಗೆ |

ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||ಪಲ್ಲ||

ಅಜಹರಿ ಹರರಾದಂದಿಗೆ ಆ | ನಿಜವು

ತಿಳಿಯ ಬಂದಿ ಎನ್ನೊಂದಿಗೆ |

ಕುಜನ ಕುಹಕ ಕುಮಲ ಕಳಿಯಲದವರಿಗೆ

ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||1||

ಸ್ಥಾಣು ಚೋರ ನ್ಯಾಯದಂದೀಗೆ |

ಕಣ್ಣ ಕಾಣಬೇಕೆಂದಿ ಎನ್ನೊಂದಿಗೆ |

ಜಾಣ ವಿವೇಕ ವಿಚಾರಿಲ್ಲದವರಿಗೆ |

ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||2||

ಹಗ್ಗ ಹಾವಿನ ತಾ ಬಂದಿಗೆ ನೀ

ಹಿಗ್ಗಿನಿಂದ ಬಂದಿಯೆನ್ನೊಂದಿಗೆ |

ಕಗ್ಗು ಮನದ ಮಲಿನನಳಿಯದವರಿಗೆ | ಈ

ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||3||

ಪಾರಿವಾಳವೆ ಕೇಳ್ಬೇಕೆಂದಿಗೆ ನೀ |

ಹಾರೈಸಿ ಬಂದಿ ಎನ್ನೊಂದಿಗೆ |

ಸಾರ ಶ್ರೀಗುರು ಶೇಷ ಸೇವಿಸದವರಿಗೆ |

ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||4||

ಮೃಢ ಮಹಾಂತಪುರ ಮಹಾನಂದಿಗೆ |

ಮುಕ್ತಿ ಪಡಿಯಲು ಬಂದಿ ಎನ್ನೊಂದಿಗೆ |

ಜಡಜಲ ಮೃಗ ತೃಷಿ ಅರಿಯದವರಿಗೆ |

ಇಂದಿಗೆ ನಾಳೆಂದಿಗೆ ನಿಮ್ಮ ತಂದೀಗೆ ||5||

ಅಲ್ಲೆ ಅಲ್ಲೆ ಅಲ್ಲೆ ಬಹು | ಬಲ್ಲವನಾಗಿ

ನೀ ತಿಳಿ ಅಲ್ಲೆ ಇಲ್ಲೆ ||ಪಲ್ಲ||

ಮಣ್ಣು ಮಡಕಿ ಹತ್ತಿ ಹಂಜಿ ಕಾಷ್ಠ ಬೊಂಬೆ |

ಚಿನ್ನದೊಡವೆ ನೀರ್ತೆರೆ ನೊರೆ ಗುರುಳಿ ಎಲ್ಲ ||1||

ಹಗ್ಗವೆ ಹಾವೆ ಕೊರಡು ಕಳ್ಳ ಕರೆವೆ |

ಝಗ್ಗನೆ ಹೊಳೆವ ರಂಗೋಲಿ ಹಚ್ಚಿದ ಚಿಕ್ಕಿ ||2||

ಆದಿ ಎರಡು ಅನಾದಿ ಒಂದೆ ಬಿಸಿಲು |

ಕಾದೂದಕದ ಪರಿ ಕಾಣೊ ಮಹಾಂತನು ||3||

ಇನ್ಯಾಕೆ ಇಹದಾಸೆವ್ವ |

ತನುಮನ ದಾಸಿ ಕಡಿಯವ್ವ |

ಕರುಣುಳ್ಳ ಗುರುವಿನ ಪಿಡಿಯವ್ವ |

ನಾಳೆ ಹೋಗುವ ಹಾದಿ ಹಸನ ಮಾಡವ್ವ ||ಪಲ್ಲ||

ರಜಪೂತ್ರ ಕೇರ್ಯಾಗಿರಬೇಕ | ತಂಗಿ |

ರಾಗರಚಿನ ತಿಳಿದಿರಬೇಕ |

ಹೋಗಿ ಪರ್ವತ ಸೇರಲಿಬೇಕ |

ಗಿರಿಮಲ್ಲರೊಳಗ ನೀನಿರಬೇಕ ||1||

ಶೀಲವಂತರೋಣ್ಯಾಗಿರಬೇಕ | ತಂಗಿ

ಶಿವ ನಾಮವ ಸ್ಮರಿಸಲಿಬೇಕ |

ಹೋಗಿ ಪರ್ವತ ಸೇರಲಿಬೇಕ |

ಗಿರಿಮಲ್ಲರೊಳಗ ನೀನಿರಬೇಕ ||2||

ಹಾರರ ಕೇರ್ಯಾಗಿರಬೇಕ | ತಂಗಿ

ಹರ ನಾಮವ ಸ್ಮರಿಸಲಿಬೇಕ |

ಹೋಗಿ ಪರ್ವತ ಸೇರಲಿಬೇಕ |

ಗುರು ಮಹಾಂತನೊಳಗ ನೀನಿರಬೇಕ ||3||

ಇಂದು ನಾನು ಧಾವತಿ ಮಾಡಿ ದಣದೇನವ್ವ |

ಹಾದಿ ಹಿಡಿದೇನವ್ವ ಹಿಡಿದೊಂದುಳದೇನವ್ವ |

ಗುರುವಿನ ಪಾದ ಹಿಡಿಬೇಕವ್ವ |

ಹೊಂದಿ ನಡಿಬೇಕವ್ವ ||ಪಲ್ಲ||

ಓಂ ನಮಃ ಸ್ಥಳದಲ್ಲಿ ಆದ ಮಾತು |

ಸುಳ್ಳೇನವ್ವ ಅದು ಎಲ್ಲ್ಯಾದವ್ವ |

ಬಲ್ಲಿದ ಗುರುವಿನ ಹಂತಿಲಿ ಹ್ವಾದರ |

ಕಂಡದವ್ವ ಅಲ್ಲಿ ಹಿಂಗೆದವ್ವ ||1||

ಹಿಂದಕ್ಕೆ ಪರಿಪರಿ ಸೀರಿಯನುಟ್ಟು |

ಹರದೇನವ್ವ ನಾ ಬಲು ಮೆರದೇನವ್ವ |

ತಾಯಿ ನಿನ್ನ ಮುಂದ ಆಡಿದ ಮಾತು |

ಸುಳ್ಳೇನವ್ವ ಹೇಳಿದರ ಕೇಳಿದೇನವ್ವ ||2||

ಕಷ್ಟ ಬಿಟ್ಟು ಕಡಕೋಳಕ ಹ್ವಾದರ |

ಕಡಿಮೇನವ್ವ ಅಲ್ಲಿ ತೊಡಕೇನವ್ವ |

ಗುರು ಮಹಾಂತೇಶನ ಪಾದ |

ಹಿಡಿಬೇಕವ್ವ ಅಲ್ಲಿ ದುಡಿಬೇಕವ್ವ ||3||

ಇಹುದೆಲ್ಲಿ ದೇವಾ ಬನ್ನಾ |

ನೆರೆ ನಂಬಿದೆ ನಾ ನಿನ್ನಾ ||ಪಲ್ಲ||

ಸಿರಿ ಸೌಖ್ಯ ಸಕಲ ನೀಡಿ |

ಬರಿಗೈಯ ಮಾಡಿ ಕಾಡಿ |

ಪರಕಿಸುವ ನಿನ್ನ ರೂಢಿ |

ನರ ಬಾಳಬೇಕು ನೋಡಿ ||1||

ಭವ್ಯ ಬಾಳು ಭವ್ಯ ಕನಸು |

ಕೊರಗುವದು ಅರಿತು ಮನಸು |

ಕುವಿಚಾರದೊಡನೆ ಸೆಣಿಸು |

ಸುವಿಚಾರ ಶೀಲನೆನಿಸು ||2||

ನರಜನ್ಮ ಕಿರಿದೆ ದೇವಾ |

ಇರಬೇಕು ಒಂದೇ ಭಾವ |

ಗುರು ಮಹಾಂತನಡಿಯ ಸೇವಾ |

ಮರಿಯದಲೆ ಮಾಡು ಕಾಯುವಾ ||3||

ಇಷ್ಟ್ಯಾಕ ತಿಳಿಬಾರದವ್ವಾ ಗಟ್ಯಾಗಿ |

ಮುಟ್ಟಿ ಗಂಡನ್ನಾದೆನವ್ವಾ |

ಹೊಂದಿದವರನ ಪಟ್ಟಾದೆನವ್ವಾ |

ಬಟ್ಟ ಕುಂಕುಮ ದಂಡಿ ಕಟಿಕೊಂಡೆನವ್ವಾ ||ಪಲ್ಲ||

ಶಳಿಮಂಚ ಹಾಕಿದೇನವ್ವಾ | ಯಡ

ಬಲಸಮೆಗಳ್ಹಚ್ಚಿದೆನವ್ವಾ |

ಕಳಸವ ತುಂಬಿಟ್ಟೆನವ್ವಾ ||

ಮಲ್ಲಿಗಿ ಛೆಳೆ ಕೊಟ್ಟು ಚಲ್ಲಿದೆನವ್ವಾ |

ನಿಲುವಗನ್ನಡಿಯೊಳು ಚಲುವ ಮಹಾಂತೇಶನು

ಸುಳುವಿನೊಳಗ ತನ್ನ ನಿಲವ ತೋರಿದನವ್ವಾ ||1||

ಮುತ್ತೈದಿತನವ್ವಾ ಮೇಲು |

ಮುತ್ತಿನ ಮೂಗುತಿ ಇಡುವಂತಾ ಕೀಲು |

ಸತ್ಯವಂತರನ್ನು ನೀ ಕೇಳು |

ತತ್ಕಾಲ ಸದ್ಗತಿ ಹೊಂದುವರೇಳು || ಅ

ನಂತ ಜನ್ಮವ ಸ್ಥಿರವೇನು ಕೇಳು

ಎತ್ತರಕ ಹಾರೋದು ನೀ ನೋಡು ||2||

ಮೋಕ್ಷಕ ಮಹಾಂತನಾಗಿ | ಪ್ರ

ತ್ಯಕ್ಷ ತೋರಿದ ಶಿವಯೋಗಿ |

ದೀಕ್ಷವೆಂಬುವದೇನು ಹ್ಯಾಗಿ || ಸರ್ವ

ಕಾಂಕ್ಷೆ ಗುಣಗಳನ್ನೇ ನೀಗಿ |

ದೀಕ್ಷೆವುಳ್ಳ ನಮ್ಮ ಚಿಮಣಗಿರೇಶನ

ಶಿಕ್ಷದಿಂದಲೆ ಕಂಡೆ ಮೋಕ್ಷದನುಭವ ||3||

ಎಲ್ಲಾ ತಾನೆಂದು ಬಲ್ಲಾಗಿ ಭಯ ನೀಗಿ | ಏನಲ್ಲೇನಲ್ಲಿ ||

ಇಲ್ಲದಿದ್ದುದು ಇದ್ದುದಿಲ್ಲಾಗೋದೇನುವಲ್ಲಿ ||ಪಲ್ಲ||

ಹೊಲ್ಲೊಳ್ಳೆ ಸಂಚಿತಕಹುದೆಂಬವಗೇನಲ್ಲೇನಲ್ಲಿ

ಎಲ್ಲ ಜಲ್ಮದಿ ತಾ ಮಾಡ್ಪಲ್ಲದಿಲ್ಲೆನದವಗೇನಲ್ಲೇನಲ್ಲಿ ||1||

ಲಕ್ಷವೇ ತನಗೆರಡಕ್ಷ ಎಂದವಗೇನಲ್ಲೇನಲ್ಲಿ |

ಪಕ್ಷಾಪಕ್ಷವ ನುಡಿದಕ್ಷಯ ಬೇಡದವಗೇನಲ್ಲೇನಲ್ಲಿ ||2||

ಶಿವಭಾವ ಸಮನಿಸದೆ ಭವಭವವೆಂಬ ಭವಗೇನಲ್ಲೇನಲ್ಲಿ |

ತವೆ ಮಹಾಂತ್ವಲ್ಲಭನವನಿವನೆಂದವಗೇನಲ್ಲೇನಲ್ಲಿ ||3||

ಇಂಥಾ ನಡತಿ ಯಾರ ಕಲಿಸಿದರ್ಹೇಳೆ ನಮ್ಮವ್ವಾ |

ಭ್ರಾಂತಿಗೇಡಿ ಬ್ರಹ್ಮರ ಮಾತಿಗೆ ಬಹು ಸಿಂತರ ಬಿದ್ದೆವ್ವಾ ||ಪಲ್ಲ||

ಗಂಡನಾಗಿ ನೂರ ಮಿಂಡರ ಮಾಡಿದೀ | ತಿಂಡಿ ತೀರದವ್ವ |

ರಂಡಿಯಾಗಿ ನಿನ್ನ ಮಂಡದೆಲಿಗೆ | ಜೋಡುದಂಡೆ ಕಟ್ಟಿದೆವ್ವಾ ||

ಕಂಡ ಕಂಡವರ ಕರೆಯುವಿ ಅದು ನಿನ್ನೀ |

ತಿಂಡಿಯಷ್ಟಾದವ್ವ ||1||

ಎಷ್ಟೋ ಕುಲದವರು ಮುಟ್ಟಾಲರತಿ ಇನ್ನಿಷ್ಟು ಬಯಸಿದೆವ್ವ |

ಕೆಟ್ಟ ಕೆಟ್ಟವರ ಕಾಲಲಿ ಮುಂದಕ ಪುಟ್ಟಿ ಬಂದೀತವ್ವ |

ಪುಟ್ಟುವಾಗೆ ನೆಲೆಗಟ್ಟು ನೀ ಅಟ್ಟುಂಡು |

ತಟ್ಟಿ ಹಾಕಿದೆವ್ವಾ ||2||

ಕುಂಟುಕುರುಡರ ಔಷಧದಿಂದೆ ಪಿಂಡನಿಳಿಸಿ ಹಾಕಿದೆವ್ವ |

ಕಂಟಕನಾದ ಯಮಧರ್ಮನ ಭಯ ನಿನ್ನ ಶಂಟಕ್ಕಿಲ್ಲವ್ವ |

ಭಂಟನಾದ ಭಂಟನಾದ ಮಡಿವಾಳನಿಗೆ – |

ಗಂಟು ಬಿದ್ದೆವ್ವಾ ||3||

ಭವ ಬಂಧವು ಬೇಕಾಗಿ ಮುಕ್ತಿ ಬಯಸುವ

ಶಿವ ಶರಣರು ಹೇಳಿರಿ

ಇದಕೇನು ಮಾಡುವ ||ಪಲ್ಲ||

ಕೊಡುವೆನಂದರೆ ಕೊಳ್ಳ ಕೊಡದಿದ್ದರೆ ಬಿಡುವಲ್ಲ |

ಬುಡನಡು ಕಡಿಗಾಣದೆ ನುಡಿಗಡಣವು ಬಹು ಬಲ್ಲ ||

ಬಿಡಹೋಗಿ ಗಂಟು ಬಿದ್ದಿತು ಮೂರ್ಬಿಡಿಸಬಲ್ಲ |

ದೃಢ ಭಕ್ತರೆಲ್ಲ ಸಂಹರಿಸಿರಿ ಸುಳ್ಳಲ್ಲ ||1||

ಸತಿಸುತ ಸೊಸಿ ಮಗಳಳಿಯಪಿತ ಮಾತೆ ಪೌತ್ರಾದಿ |

ಶತ ಸಹಸ್ರ ಐಶ್ವರ್ಯ ಆಪ್ತ ಬಂಧು ಬಂದಷ್ಟು ||

ಸತತ ಸೌಭಾಗ್ಯವಾಗಲು ಸುಮ್ಮನಿರನಿಷ್ಟು |

ಗತವಾದರದಕೆ ಸಮ್ಮಿಸನ್ಹ್ಯಾಕೆಳ್ಳಷ್ಟು ||2||

ಭೋಗವ ಬಿಟ್ಟು ಯೋಗವು ಮಾಡೆ ಬೋಳ್ಕೀರ್ತಿ |

ಭೋಗವ ಬಾರದು ಯೋಗದಿ ಮುಕ್ತೆಂದಿಗಿಲ್ಲ ||

ಭೋಗವಿರಲು ಭೋಗಿಸುವನೆ ಭೋಗೇಶ್ವರ |

ತ್ಯಾಗವಾಗಲು ಮಹಾಂತ್ಯೋಗಿಗೆ ರಾಗಿಲ್ಲ ||3||

ಗೋಪ್ಯವಾಗಿದ್ದನುಭವ ಹೇಳೋದೆನ್ನ ಕಡಿಗೆ |

ಆಪ್ಯಾನವನು ಮಾಡಿಕೊಂಬುವದು ನಿಮ್ಮ ಕಡಿಗೆ ||ಪಲ್ಲ||

ಸ್ಮರನ ಕಾಮನ ದ್ರವ್ಯ ವ್ಯವಹಾರವೆಂದು ಇಸ ತಂದು

ಸರಿಪಾಲಿಗೆ ಸತಿ-ಪತಿಗಳು ಮಾಡಿದವ್ಯವ

ಹಾರವು ತರುಣಿಗೇನುಳಿತು ತನಗೇನು ಬಂತು |

ಎರವಿನವರೆರುವಾದರೆ ಮೋರೆ ಆಯಿತು ಹಳೆ ಕೆರವು ||1||

ಇಚ್ಛೆ ಇಲ್ಲದ ಮನವು ಮಚ್ಚುಗೊಳಿಸುವದೇನು |

ಹುಚ್ಚುನಾಯಿಗೆ ಕಚ್ಚು ಕಲಿಸಿದಂತೆ |

ಕಚ್ಚಿಗಡಕರಿಗೆ ನಿಜದೆಚ್ಚರ ಇನ್ನೆಲ್ಲಿಹದೊ |

ಸ್ವಚ್ಛವಾದಾತ್ಮಜ್ಞಾನೊಂದೆ ನಿಶ್ಚಿಂತೊ ||2||

ತಾಯಿ ಮದುವಿಯಾದವಗೆ ವಾಯು ನ್ಯಾಯಗಳುಂಟೆ?

ಬಾಯಿ ಮುಕಳಿಯು ಮುಚ್ಚಿಕೊಂಡಿತು

ಮೂರ್ಲೋಕೊ ಸಾಯದೆ ಸತ್ಯ ಕಡಕೋಳ್

ಗುಡ್ಡದ ಮಹಾಪಾಚ್ಛಾ ಓ ಯೆಂಬೋದಾಗಿ

“ಪಾಣಿಮೇ ಡುಬೆ ನೌ ಲಾಖ” ||3||

ಮೋಕ್ಷ ಅಪೇಕ್ಷಾದವ ಗುರುವಿನ್ಯಾಕ ಹುಡಕ |

ಸಾಕ್ಷಾತವನ ತನ್ನೊಳು ಮಾಡನ್ಯಾಕಡಕ ||ಪಲ್ಲ||

ಅಷ್ಟ ಭೋಗೈಶ್ವರ್ಯ ಕೊಟ್ಟ ಮೇಲವಗೆ |

ನಷ್ಟಾಗೊ ಭವ ಬಂಧ ಹುಟ್ಟುದೆಲ್ಲಿವಗೆ ||1||

ಅರ್ಥ ಪ್ರಾಣಾಭಿಮಾನ ಹೋದ ಮೇಲವಗೆ |

ತುರ್ತ ಜೀವನ್ಮುಕ್ತಿ ಬಾರದ್ಯಾಕಿವಗೆ ||2||

ತನ್ನಾತ್ಮ ಸುಖ ಸಂಭ್ರಮಾಗಲೆಂದವಗೆ |

ಭಿನ್ನ ಭಾವದ ಭ್ರಮಿ ಇದ್ದಿತ್ಯಾಕಿವಗೆ ||3||

ವಾಜಿಮಿ ಅನುಭವ ಮೋಜಾಯಿತವಗೆ |

ಲಾಜಿಮಿ ನಿರ್ವಾಣ ತೇಜಿಸಿತಿವಗೆ ||4||

ಕಡಕೋಳ ಗುಡ್ಡದ ಮಹಾಂತಪುರದವಗೆ |

ವಡಲಾದ ಮೇಲೆ ಠಾವಿರಲೆಲ್ಲ್ಯಾದವಗೆ ||5||

ಕೊಡು ಕೊಳ್ಳುವ ವ್ಯವಹಾರಕೇಕೆ ಅನುಮಾನ |

ಕೊಡದೆ ಕೊಳಬೇಕಾದರದಕೆ ಜಾವಿೂನ ||ಪಲ್ಲ||

ರಜೆಪತ್ರ ರುಜೆಪತ್ರ ಮಧ್ಯಾಸ್ಥಿ ಜಾವಿೂನ |

ಗುಜರಾಣಿ ಘನಮಾತ ಆಗುವದು ಅಜ್ಞಾನ |

ನಿಜವಾದ ಮೇಲೆ ಸರ್ವವು ತಾನೆ ತನ್ಮಯವು |

ವುಜುರುಂಟೆ ತನ್ನರ್ಥ ಪ್ರಾಣಾಭಿಮಾನ ||1||

ಶ್ರದ್ಧೆ ನಿಷ್ಠೆಯು ಸಾವಧಾನನುಭವ ಆನಂದ |

ಶುದ್ಧವಾದರೆ ನಿರಾಳಾಯ್ತು ಬಹು ಚಂದ |

ಮಿದ್ದು ಮುದ್ದಿಯು ಮಾಡುವಿನ್ನೂರ್ಹದಿನಾರಂಗ |

ಕದ್ದು ಮೆದ್ದರೆ ಬಿಡದು ಎಂದೂ ಭವಬಂಧ ||2||

ಸಮರಸದದ ನುಡಿ ಚಂದ ಸಮರಸದ ನಡಿ ಚಂದ |

ಸಮರಸದ ಗುರು-ಶಿಷ್ಯರಾಟ ಚಂದ |

ಸಮರಸವೆ ಸರ್ವ ಸೌಭಾಗ್ಯ ಸುಖ ಸಂಪನ್ನ |

ಸಮರಸವೆ ಮಹಾ ಮಹಾಂತ ಮುಕ್ತಿ ಕಂಡ ||3||

ಭಯವೇಕೋ ಮಗನೆ |

ನಿರ್ವಯಲಾಗುವದಕೆ ಭಯವಿತ್ತು

ಸ್ವಯಂ ಸರ್ವಮಯವಾಗೋತನಕೆ ||ಪಲ್ಲ||

ಸತಿಸುತರು ಪಿತಮಾತೆ | ಅತಿ ಮಿತ್ರ ಶತ್ರುಗಳು |

ಶತಮುಖದಷ್ಟಭೋಗಗಳು ಬಯಲೇ ||

ವ್ರತನೇಮ ಸತ್ಯ ಸತ್ಕರ್ಮ ಸದ್ಗುಣ ಬೈಲೆ |

ನುತಾವರಣಷ್ಟಾಂಗಯೋಗ ಬಯಲೇ ||1||

ತಾರಷ್ಟತಂತ್ರ ಮೇರು | ಸಾಗರ ಬಯಲೇ |

ದ್ವಾರ ವೈಕುಂಠ ಸತ್ಯವು ಸ್ವರ್ಗ ಬಯಲೇ ||

ಮಾರಾರಿ ವಿರಂಚಿಂದ್ರಾದಿ ಮುನಿಕರ |

ಮೂರು ಲೋಕವು ಮೊದಲು ಮುಂಚು ಬಯಲೇ ||2||

ತಾಸು ಮಾಸಾಬ್ದಿಯುಗ ಜಗಾಪ್ರಳಯಾ | ಮಹಾಪ್ರಳಯಾ |

ಸುಸದನಾದಿ ಪರಬೊಮ್ಮ ಬಯಲೇ ||

ಲೇಸೆನಿಪ ತತ್ತ್ವಮಸಿ ಅಸ್ತಿ ಭಾತಿ ಪ್ರೀತಿ |

ಖಾಸ ಮಹಾಂತೋಕ್ತಿ ಮುಕ್ತಿ ಬಯಲೇ ||3||

ಸಾವೇ ಹುಟ್ಟಿತು

ಸಾವೇ ಬೆಳದಿತು ಸಾವೇ ಸತ್ತಿತು |

ಸಾವೇ ಅತ್ತಿತು |

ಸಾವೇ ಅರ್ತಿತು ಸಾವೇ ಬೆರ್ತಿತು |

ಸಾವೇ ಮರ್ತಿತು ತನ್ನ ಮುಂದೆ ||ಪಲ್ಲ||

ಸಾವೇ ಅವಕ್ರ್ಕಾದುದೊ ಅವಕ್ರ್ಕಾದಿ |

ಸಾವೇ ಕಠೋರಾದುದೊ |

ಸಾವೇ ತಾರಕವಾದುದೊ ಚಂದ್ರಾದಿತ್ಯ |

ಸಾವೇ ಅತಿ ಮೋಹವಾದುದೊ |

ಸಾವೇ ಗಗನ ಸಮೀರ ಅಗ್ನಿಯು |

ಸಾವೇ ಜಲ ನೆಲ ಮೇರು ಅಹಿಗಜ |

ಸಾವೇ ಗಿರಿ ಕಮಠ್ಯಾದಿ ಶಕ್ತಿಯು |

ಸಾವೇ ತಾ ಬ್ರಹ್ಮಾಂಡವಾದುದೊ ||1||

ಸಾವೇ ತಾ ಬೀಜಾದುದೊ ಆ ಬೀಜದಿ |

ಸಾವೇ ತಾ ಸಸಿಯಾದುದೊ |

ಸಾವೇ ತಾ ಫಲವಾದುದೊ ಆ ಫಲರಸ |

ಸಾವೇ ತಾ ಜಮವಾದುದೊ |

ಸಾವೇ ಶ್ರೋಣಿತ ಶುಕ್ಲ ಶರೀರವು |

ಸಾವೇ ಮನ ಪವನಾದಿ ವಿಷಯವು |

ಸಾವೇ ಸುಖ-ದುಃಖ ಮೋಹ ಆಶೆಯು |

ಸಾವೇ ತಾ ಪಿಂಡಾಂಡವಾದುದೊ ||2||

ಸಾವೇ ಪರಶಿವನಾದದ್ದೊ ಪರಶಿವನೊಳು |

ಸಾವೇ ಸ್ಥಿರಚರವಾದುದೊ |

ಸಾವೇ ಕರ್ಮೆರಡಾದುದೊ ಪುಣ್ಯವು ಪಾಪವು |

ಸಾವೇ ಸರ್ವ ವ್ಯವಹಾರಾದುದೊ |

ಸಾವೇ ಇಹಪರ ನರಕ ಸ್ವರ್ಗವು |

ಸಾವೇ ಮನುಮುನಿ ಸಕಲ ಸಂಭ್ರಮ |

ಸಾವೇ ಮಂತ್ರ ಮಹಾಂತ ಮುಕ್ತಿಯು |

ಸಾವೇ ಬಯಲಿಗೆ ಬಯಲಾದುದೊ ||3||

ಸರ್ವೇಶ್ವರನೆ ಸರ್ವಾದುದ್ದೆಲ್ಲ |

ಸರ್ವರು ತಿಳಿವದು ಸಾಕ್ಷಿ ತಾ ಇಲ್ಲ ||ಪಲ್ಲ||

ಸರ್ವೇಶ್ವರನ ಗುರು ಸ್ವಯಂಭುಲಿಂಗ |

ಸ್ವಯಂಭುಲಿಂಗನ ಗುರು ಆ ಮುಗ್ಧಸಂಗ |

ಆ ಮುಗ್ಧಸಂಗನ ಗುರು ವಿರಾಟನಂಗ |

ಆ ವಿರಾಟನಂಗನ ಗುರು ತಾನಿದ್ದು ಇಲ್ಲ |

ಇದ್ದು ಇಲ್ಲದವನ ಗುರು ಏನು ಅಲ್ಲ |

ಅಲ್ಲದವನ ಗುರು ಯಾವನು ಇಲ್ಲ |

ಇಲ್ಲಾದವನ ಗುರು ಇಲ್ಲೇ ಇಲ್ಲ ||1||

ಆ ಸರ್ವೇಶನಾದ ಆವರ್ಕಕಾರ |

ಆವರ್ಕದೊಳಗೆ ತಾನಾದ ಕಠೋರ |

ಆ ಕಠೋರದೊಳಗೆ ತಾ ಮಾಯಾಕಾರ |

ಮಾಯಾಕಾರದೊಳಗೆ ತಾರ ವಿಸ್ತಾರ |

ತಾರ ವಿಸ್ತಾರದಿ ಸ್ಥಿರ ಪೂರ್ಣಚಂದ್ರ |

ಚಂದ್ರನಿಂದಿತ್ತಾದ ಆದಿತ್ಯಸಾಂದ್ರ |

ಆದಿತ್ಯನಿಂದಾತ್ಮನಾದಾಕಾಶ |

ಆಕಾಶವೇ ವಾಯು ಅಗ್ನಿ ಪ್ರಕಾಶ |

ಅಗ್ನಿ ಅಪ್ಪು ಪೃಥ್ವಿ ಇವೆ ನವಖಂಡ |

ನವಖಂಡಮಯವಾದುದ್ದೇ ಈ ಬ್ರಹ್ಮಾಂಡ ||2||

ಆ ಸರ್ವೇಶ್ವರನೊಳಗಿದ್ದುದೆ ಚಿತ್ತು |

ಚಿತ್ತುವಿನೊಳಗಾಯ್ತು ಆನಂದ ಗೊತ್ತು |

ಆನಂದಯೆಂಬುದೆ ಅದೆ ನಿತ್ಯ ತೃಪ್ತಿ |

ನಿತ್ಯ ತೃಪ್ತ್ಯಾದದ್ದು ಸುದ್ದಿಯೇ ಸುದ್ದಾಪ್ತು |

ಆಪ್ತವಾದದ್ದು ಸರ್ವಕಾದಿ ಪ್ರಸಾದವಾಯಿತು |

ಆ ಪ್ರಸಾದವೆ ಎಲ್ಲ ಬಿತ್ತು ಬೀಜಾಯಿತು |

ಜೀಜದಿಂದಾಯಿತು ವನೌಷಧಿ ಗುರ್ತ

ಆ ವನೌಷಧಿಯೇ ಸಕಲ ಫಲವು ಪದಾರ್ಥ |

ಫಲ ಪದಾರ್ಥರಸ ಶುಕ್ಲ ಶ್ರೋಣಿತ |

ಶುಕ್ಲ ಶ್ರೋಣಿದೊಳಗಾದ ಸಪ್ತಧಾತು |

ಧಾತುವಿಗೆ ಬೇಕಾಯಿತು ಏಸೊಂದು ಮಾತು |

ಮಾತು ಮಂತ್ರಕೆ ಮೂಲ ಆಕೃತಿಗೊಂಡು |

ಅದೆ ನೋಡೊ ಆಯಿತು ಇದೇ ಪಿಂಡಾಂಡ ||3||

ಆ ಸರ್ವೇಶ್ವರನಾದ ತಾನೇ ಪಿಂಡಾಂಡ |

ಪಿಂಡಾಂಡದೋಳರವತ್ತಾರು ಕೋಟಿ ದಂಡ |

ದಂಡಿನೊಳಗೆ ದಶ ಇಂದ್ರಿಯ ತಂಡ |

ಇಂದ್ರಿಗಳಿಗೆ ಪಂಚಪ್ರಾಣ ಪ್ರಚಂಡ |

ಪಂಚಪ್ರಾಣಕೆ ನಾಲ್ಕು ಕರಣ |

ಕರಣ ಕರಣಕ್ಕೆ ಕರ್ತೃ ತ್ರಿವಿಧಾತ್ಮಚರಣ |

ತ್ರಿವಿಧಾತ್ಮನಿಗೆ ತಾನೇಕಾತ್ಮ ಚೈತನ್ಯ |

ಆ ಚೈತನ್ಯಕ್ಕೆ ಪಂಚಾಮೃತನ್ನ |

ಆ ಅನ್ನದಲ್ಲುಂಟು ಷಡ್ರುಚಿ ಸವಿಯು |

ಸವಿಯಲ್ಲಿ ಸುಖ ಮೋಹದಾಸಿಯ ಹವಿಯು |

ಆಶಿ ಹವಿಗೆ ಷಡ್ವರ್ಗದುಪದ್ರ |

ಷಡ್ವರ್ಗದುಪದ್ರಕೆ ಕರ್ಮ ಸಮುದ್ರ |

ಬಹಳ ಕಷ್ಟಾದರೆ ಆಗದೆ ನೋವ |

ಆ ನೋವಾದ ಮೇಲೇಕೆ ಬಾರದು ಸಾವ |

ಸಾವಾಗುವಾಗ ಸಾಧಿಸು ಸದ್ಭಾವ |

ಭಾವಿಲ್ಲದಿರೆ ಇಲ್ಲ ಗುರು ಮಹಾಂತದೇವ ||4||

ಸೈ ಶಬಾಶ್ ವಾಯುಕೃತಿದೇವಿಯ ಗಂಡ |

ಅಕ್ರಾಳ ವಿಕ್ರಾಳ ರಾಯ ಪ್ರಚಂಡ |

ಐಂಶಿಚಾರಲಾಕ್ ನಿನ್ನ ಪಿಂಡಾಂಡ

ಅಕಟವಿಕಟ ಆದ ಬ್ರಹ್ಮಾಂಡ ||ಪಲ್ಲ||

ರೂಪ ನಿರೂಪಾದದ್ದರಿಯೊ |

ಆ ಸುಂಟರಗಾಳಿ ತಾನಾದ ಪರಿಯೊ |

ಭೂಪ ನಿನಗಿಲ್ಯಾವನು ಸರಿಯೊ |

ಪುಣ್ಯ ಪಾಪವಿಲ್ಲ ಬಹು ಹುಚ್ಚದೊರಿಯೊ ||1||

ಆದದ್ದಾದದ್ದಾಧಾರ ಆಗದಾಗದಿಲ್ಲ ವಿಚಾರ |

ಆದಿಕಾರ್ಯ ಕಾರಣಾಕಾರ |

ಏನೊ ಏನೊ ನಿನ್ನವತಾರ |

ಏನೊ ಏನೊ ನಿನ್ನವತಾರ ||2||

ಸರ್ವಗುಣ ಸಂಪನ್ನನು ಹೌದು |

ಅವಗುಣ ಪರಿಪೂರ್ಣವಾಗಿಹುದು |

ಸರ್ವಬೊಮ್ಮ ಆದನುಭಾವವದು |

ಮಹಂತಪುರ ಮಹಾಂತಲ್ಲೆನಲಹುದು ||3||

ಭಾವ ಭವಭವ ಭಾವ |

ನಿರ್ಭಾವ ದೇವನವ ತಿಳಿ ನೀನೆ ಆ ದೇವ |

ಸಾವಸದೊಳಗಿರು ಗುರುಪಾದ ಸೇವ |

ಜೀವವೇ ಶಿವನೆಂಬುದೇನನುಭಾವ ||ಪಲ್ಲ||

ಆ ವಿರಾಟರಾಯನ್ನ ಆಚಿಲಿಲ್ಲ |

ಆ ವಿರಾಟರಾಯನೆ ಆದುದ್ದೆಲ್ಲ |

ಆ ವಿರಾಟನು ತಾನಾದವಲ್ಲ |

ಆ ವಿರಾಟಾಗದಾಗವ್ಯಾವಿಲ್ಲ ||1||

ಅರುವಿಗಾಶ್ರಯವಾದಾತ್ಮನೆ ಬಾಧ್ಯ |

ಅರವು ಮರವುಗೊಂಡ ಇದ್ಯಾವ ಸಾಧ್ಯ |

ಅರುವು ಅರಹಿಸಿ ಕೊಡುವವನೆ ಆರಾಧ್ಯ |

ಅರುವು ಮರವು ಹಾರಿಸುವದೇ ಮಹಾ ಚೋದ್ಯ ||2||

ಶಿಕ್ಷವೆ ಮೊದಲು ಶ್ರೀಗುರುವಿನಾಪೇಕ್ಷ |

ಆ ಕ್ಷಣಕಾಗುವದು ತನಗಪರೋಕ್ಷ |

ಸಾಕ್ಷಾತನಾದ ಮ್ಯಾಲ್ಯಾತಕೊ ದೀಕ್ಷ |

ಮೋಕ್ಷವೆ ಮಹಾಂತ್ಯೋಗಿ ಕರಣ ಕಟಾಕ್ಷ ||3||

ಆಯಿತು ಅಮವಾಸಿ ಅಕೋ ಇಕೋ

ಹೋಯಿತು ಚತುರ್ದಶಿ |

ಕಾಯಜ ದಹನ ಮಾಡಲು |

ಮೂಡಿದ ಹೋಳಿ ಹುಣ್ಣಿವಿ ಪೂರ್ಣ ಶಶಿ ||ಪಲ್ಲ||

ಹಗಲೆ ಹಗಲಾಯ್ತು ರಾತ್ರಿಯು |

ಹಗಲೆ ಮಿಗಲಾಯ್ತು |

ಬಗಿಯೊಳು ಬಗಿಯಾಯ್ತು ಈ | ತ್ರಿ –

ಜಗಕ್ಕೆ ಸಿಗದ್ಹೋಯ್ತು ||1||

ಜನನಿಯ ಯೋನ್ಹರಿತು | ಅವ ನಮ್ಮ

ಜನಕನ ಮಾಣ್ಮುರಿತು |

ಮನವು ನೆನವು ತೋರಿತು | ನಾ ಕಂಡು

ಜನಿಸುವ ಜಾಗ ಉರಿತು ||2||

ನೆಲಜಲ ಕರಗಿತು

ಅನಲನಿಲನೊಳಗಾರ್ಹೋಯ್ತು

ಸಲೆ ಬಯಲಾತ್ಮಾಯಿತು | ಮಹಾಂತ

ನಿಲವಿಗೆ ತಲವಾಯ್ತು ||3||

ನೆನಪಿರಲಿ ಮಾನವ ಮುಂದಾಗುವದು ನಿನ್ನದರುಷ್ಟವ |

ಹೆಪ್ಪುಗೂಡಿತು ನಾನಾ ಜನ್ಮವ |

ಬ್ರಹ್ಮ ಮಾಡಿದಾಟವ ||ಪಲ್ಲ||

ಕೊಟ್ಟದ್ದು ಕೊಳುವದು ಉಣಸಿದ್ದು ಉಣುವದು |

ಹುಟ್ಟಿಸಿದವಗ್ಯಾಕೆ ನೀ ಬೈತಿ |

ಸಿಟ್ಟಿಗೆ ಬರಲ್ಯಾಕೆ ಸುಳ್ಳಂತ ಬರಿಲ್ಯಾಕೆ |

ಬಿಟ್ಟಿಗೆ ಬಂತೆನೊ ದೌತಿ ಲೆಕ್ಕಣಿಕೆ ||1||

ಹೊತ್ತು ನುಚ್ಚುಯಿಲ್ಲ ಹುಗ್ಗಿಗೆಲ್ಲ್ಯಾದ ಬೆಲ್ಲ |

ಅತ್ತತ್ತು ಸುಳ್ಳೆ ನೀ ಯಾಕ ಬಾಡ್ತಿ |

ಸತ್ತು ಹೋದರೇನು ಸಾಯಲದಿದ್ದರೇನು |

ಬಿತ್ತಲ್ದೆ ಬೆಳಿ ನೀ ಹ್ಯಾಂಗ ಮಾಡ್ತಿ ||2||

ಕನ್ನಡಿಯೊಳು ರೂಪ ಕಡೆಗಿಟ್ಟರದು ಲೋಪ |

ಅನ್ನ ಎಂಬುವದೇನೋ ಎಲೆ ಖೋಡಿ |

ಚಿನ್ನ ಗುಡ್ಡದ ಮಹಾಂತೇಶನ ತಿಳಿದರೆ |

ನಿನ್ನಿಂದೆ ನಿನ್ನ ಭವ ಸುಡ್ತಿ ||3||

ದಾವಪಥ ದಾವನೆಲೆ ದಾವಸುಖ ಬಲ್ಲಿ |

ಮೂವರೊಂದಾದನುವು ತಿಳಿದರ್ಹೇಳಿಲ್ಲಿ ||ಪಲ್ಲ||

ಬ್ರಹ್ಮದಿಂದಲೆ ಜಗವೊ ಜಗದಿಂದವೆ ಬ್ರಹ್ಮೊ |

ಬ್ರಹ್ಮವೆ ಜಗವೊ ಈ ಜಗವೆ ಬ್ರಹ್ಮೊ

ಬ್ರಹ್ಮ ಜಗದಿಂ ನೀನೊ ನಿನ್ನಿಂದೆ ಜಗಬ್ರಹ್ಮೊ

ಬ್ರಹ್ಮಜಗವೆ ನೀನೊ ನೀನೆ ಜಗಬ್ರಹ್ಮೊ ||1||

ಜೀವದಿಂದಲೆ ಅರುವೊ ಅರುವಿನಿಂದಲೆ ಜೀವೊ |

ಜೀವೆ ತಾ ಅರವೊ ಈ ಅರುವೆ ತಾ ಜೀವೊ

ಜೀವ ಅರುವಿನಿಂ ತನುವೊ ತನುವಿಂದರು ಜೀವೊ

ಜೀವರುವೆ ತನುವೊ ಈ ತನುವೆ ಅರು ಜೀವೊ ||2||

ಬುಡದಿಂದೆ ನಡು ಕಡೆಯೊ ಕಡೆಯಿಂದ ನಡು ಬುಡವೊ |

ಬುಡವೆ ನಡು ಕಡೆಯೊ ಈ ಕಡೆಯೆ ನಡು ಬುಡುವೊ ||

ಪೊಡವಿಯೊಳು ಮೆರೆವ ಕಡಕೊಳ ವಾಸೊ |

ಮಹಾ ಮಹಾಂತನ ಮಡಿವಾಳಾಖ್ಯ ಆ ನಾಮೇ ಮಡಿವಾಳನೊ ||3||

ತಂದಿ ಷಂಡಾದರೆ ತಾಯಿ ಯಾಕೆ ಬರುವಳು |

ಅಂದವನು ಕೇಳಿರನುಭಾವ ಬಲ್ಲವರು ||ಪಲ್ಲ||

ತಾಯಿ ತಾ ಬಂಜಾಗೆ ನಾನೆಲ್ಲಿ ಪುಟ್ಟುವೆನು |

ಆಯತದೊಳೆನಗೆ ತಾನೊಬ್ಬ ಸತಿಯು |

ಆಯ ಕಳೆಗೂಂದಿ ಮಗಳ್ಹುಟ್ಟಿ ಮದುವಿಯಾದವಗೆ |

ಮಾಯದೊಳು ಬಿದ್ದ ಮೂಜಗವಾಯಿತಲ್ಲ ||1||

ಹೆತ್ತವಸಗಿಯ ಮನೆಯು ಮುತ್ತಿಕೊಂಡೊಯ್ದೊಸಗೆ |

ಸತ್ತದ್ವಸಗಿಯು ಕೇಳಿ ತಾನೆಯ್ದುವ

ಅತ್ತಿ ಮಾವಳಿಯ ಮೈದುನ ಭಾವ ಬೀಗರಿಗೆ |

ನಿತ್ಯ ದುಡದರ್ಥವದು ಭವದುತ್ತಾಯಿತ್ತಲ್ಲ ||2||

ಮಾನುಣಿಯು ಸತ್ತು ಮಗಳಿಗೆ ರಂಡೆತನಾಗಿ |

ನಾ ನನ್ನ ತಾಯಸವ ಮರೆಸಿ ಸಾಯಲು |

ತಾನು ಸೆರಗ್ಹರಿದು ತಾಯಿಯ ಬಿಟ್ಟು ಮಹಾಂತೇಶ |

ತಾನೆ ತಾನಿರಲೆಂದಿಗ್ಹಿತವಾಯಿತಲ್ಲ ||3||

ಮಾಡೋ ನಿಃಕಾಮದ ಭಕ್ತಿ |

ನಿನಗಾಗುವದು ಆ ನಿಜ ಮುಕ್ತಿ |

ಬ್ಯಾಡೊ ಪರರ ಉಕ್ತಿ |

ತಿಳಿ ಬೇಗ ನೀ ನಿನ್ನ ಯುಕ್ತಿ ||ಪಲ್ಲ||

ನಿರ್ವಂಚಕನಾದ ಶಿಷ್ಯ |

ಅವ ಮರುಳ್ಯಾಕಾದ ಮನುಷ್ಯ |

ಪೂರ್ವಾರ್ಜಿತ ಭವಿಷ್ಯ |

ಈಗವತರಿಸಿ ಕಳಿವನಾಯುಷ್ಯ ||1||

ಉಂಡದ್ದು ಉಣಲಿಬ್ಯಾಡ |

ಉಣವಲ್ಲದ್ದು ಬಯಸೋದು ಕೇಡ |

ಕಂಡದ್ದು ಕಾಣಲ್ಲದು ಪಾಡ ಕಾಣಿಪ |

ದ್ಹುಡಕುದೇನಾದೆ ಗೂಢ ||2||

ಇದ್ದದ್ದು ಎತ್ತೊಲ್ಲ್ಲದು ಖಾಜಿ |

ಇದ್ದದ್ಹೋಗುದುದೆತ್ತಾದು ಫಾಜಿ |

ಇದ್ದದ್ದಿದ್ದದ್ದೆ ಪೂಜಿ ಇಲ್ಲದ್ದಿ |

ಲ್ಲದ್ದೆ ಮಹಾಂತನ ವಾಜಿ ||3||

ನೋಡು ನೋಡಮ್ಮಾ ವಿಶ್ವ ತಾ ಪರಬ್ರಹ್ಮಾ |

ಮಾಡಬಾರದು ಸುಳ್ಳೆ ಮನದೊಳಗ್ಹಮ್ಮಾ ||ಪಲ್ಲ||

ಮೊದಲೇ ನಿರ್ಲಕ್ಷವೇ ನಿಲವಾಗಿತ್ತು |

ಅದರೊಳಗೆ ಅದರಂತಾದೆ ಸತ್ತು |

ಬಿದರಿಸದಿರುವದಿಲ್ಲೆನಿಸುವ ಚಿತ್ತು |

ಅದು ಕಸಕಸಿ ಸಹಸ್ರ ಪಾಲೆನಿಸಿತ್ತು ||1||

ನೆನವುದೋರಲು ತನಗಾಯಿತ್ತನ್ನಂಗ |

ನೆನವು ಇಮ್ಮಡಿಸಿ ತಾ ಕೂಡಲಸಂಗ |

ತನಗಿದರಿಲ್ಲಾದಿದ್ದ ಮಹಾಲಿಂಗ |

ಚಿನುಮಯ ಪ್ರಭೆ ಚಿದ್ರೂಪತರಂಗ ||2||

ಎಲ್ಲಾ ಸ್ವರೂಪವಾದದ್ದು ಆ ಸತ್ತೆ

ಹೊಲ್ಲೊಳ್ಳೆಂಬುದ ಅದಕಿದರಿತ್ತೆ |

ಇಲ್ಲಾಗದಿರಲದು ಭವಕೆ ತಾ ಬಿತ್ತೆ |

ನಲ್ಲೆ ಮಹಾಂತನ ಅರವು ಅತ್ತತ್ತೆ ||3||

ಕಪ್ಪು ಕಡೆಗೊತ್ತಿ ಬಿಳ್ಪಪ್ಪಲರಿದೊ |

ಕಪ್ಪೇ ತಾ ಬಿಳ್ಪಾಗೆ ತಪ್ಪಲರಿದೊ ||ಪಲ್ಲ||

ಕತ್ತಲೆಯ ಮನೆಯೊಳು ಹತ್ತಿಸಿಡೆ ಜ್ಯೋತಿಯನು |

ಸುತ್ತೆ ಪ್ರಭೆ ಕಾಳು ತನ್ನೊತ್ತಿಲಿಹುದೊ |

ಹತ್ತಿ ಬರಲೆಣ್ಣಿ ಪ್ರಣತ್ಹತ್ತಿ ಬತ್ತ್ಯುರಿದರೆ |

ಎತ್ಹೋತೊ ಜ್ಯೋತಿ ತಮ ಮುತ್ತುತಿಹುದೊ ||1||

ಕತ್ತಲೆಯು ತಿಳಿದು ತಾ ಬಿತ್ತರದಿ ಬೆಳಗಾಗೆ |

ಬತ್ತಿ ಪ್ರಣುತೆಣ್ಯಗ್ನಿ ವತ್ತಲೇಕೊ |

ಗೊತ್ತು ತಿಳಿಯದೆ ತನ್ನ ಎತ್ತ ಹುಡುಕಿದರೇನು |

ಚಿತ್ತವೆ ನಿಜವೆಂಬೂ ಚಿತ್ತೆ ಸಾಕೊ ||2||

ಘನ ಉಳಿದು ಅಣುವಾಗೆ ಅಣುವುಳಿದು ಘನವಾಗೆ |

ಘನಕೆ ಅಣು ಅಣುಕೆ ಘನ ಅಣಕವಾಗಿಹುದೊ |

ಘನ ಚಿಣಮಗೇರಿ ದೊರಿ ಅಣಿ ಮಹಾಂತೇಶ್ವರನ |

ಘನವೇ ಸಾವದಣುವಾಗೆ ಅಣು ಘನವಹುದೊ ||3||

ಅಳಳಳಳಳಳಳಳಾವುಮಾ ಈ ಆವು

ನೋಡಿಕೊಂಡು ಹಾಲ ನಾಡಿಗೆಲ್ಲ ನೀಡಮಾ ||ಪಲ್ಲ||

ಮೂಗ ಪೀತ ಬಾಯಿ ಸ್ವೇತ |

ಕಣ್ಣ ರಕ್ತ ಬಣ್ಣ ಮೈಮ್ಯಾಗ |

ಕಪ್ಪ ಮಸುಕು ಕಾಲ ಕಿವಿ |

ಬಾಲ ಬೂದ ಆದಮಾ |

ಯೋಗಿಗೆ ಒಂಬತ್ತು ಸೋಗು|

ಕೊಂಬಿನೊಳಗೆ ತೋರುತಾದೆ |

ಕೋಗಿಲದ ಹಾಗೆ ಕೂಗಿ |

ತನ್ನ ತಾನೇ ಕರೆವುತಾದಮಾ ||1||

ಹಾಲವಿಟ್ಟು ಮೊಸರು ಮಾಡು |

ಮೊಸರುಳಿಸಿ ಬೆಣ್ಣಿ ತೆಗಿದು | ಬಾಲಿ

ಬೆಣ್ಣಿ ಕಾಸಿ ತುಪ್ಪ |

ಪೂರ ಕುಂಭ ತುಂಬಮಾ |

ತಾಲಿ ತುಂಬ ತುಪ್ಪ ಮಾರದೆ

ಚೀಲದ ತುಂಬ ರೂಪಾಯಿ ಮಾಡು |

ಚೀಲ ಮುಟ್ಟದೆ ತಾಳಿ ಮೂಗುತಿ |

ವಾಲಿ ಮಾಡಿಸಿಕೊಳ್ಳಮಾ ||2||

ಪುಚ್ಚಿಲುಚ್ಚಿ ಬಿದ್ದ ಮ್ಯಾಲ |

ಕಚ್ಚಿಗಿ ಕೈಯಿಕ್ಕು ಮೆಲ್ಲನೆ |

ಕಚ್ಚುಗೊಡದೆ ಕರುವಿಗಿ ಮೊಲೆ |

ಪಚ್ಚಿ ಕಾಲ್ದಳೆ ಹಾಕಮಾ |

ಎಚ್ಚರಿರಲಿ ಲತ್ತಿ ಒದ್ದಿತು |

ಮೆಚ್ಚಿದಾನು ಮಹಾಂತದೇವ |

ಹುಚ್ಚಿ ಇವಳೆಂದು ರಚ್ಚಿಗಿಕ್ಕಲು | ನಿನ್ನ

ಇಚ್ಛೆ ನುಡಿವರ‍್ಯಾರಮಾ ||3||

ದೇವರ ದೇವ ಲಾಲಿಸು ವಿಜ್ಞಾಪನ |

ಸತ್ತು ಹೋಹುದು ಹುಟ್ಟಿ ಬಾರದು |

ಭಾವಕರಿಗೆ ಇದು ಭಾವಿಸಬಾರದು |

ನಾವು ನೀವು ಎಂಬುದೆಲ್ಲಿಹುದು ||ಪಲ್ಲ||

ಸತ್ತು ಚಿತ್ತಾದರೆ ಚಿತ್ತು ಹತ್ತಾಯಿತು |

ಹತ್ತು ಒಂದುಗೂಡಿ ಹಲವಾಯಿತು |

ಮತ್ತೆ ಹಲವು ಹತ್ತು ಚಿತ್ತಾಗಲಿಕೆ |

ಚಿತ್ತು ಸತ್ತಿದ್ದು ಹುಟ್ಟಿಲ್ಲಾಯಿತು ||1||

ಚಿತ್ತು ಚಿತ್ತಾಗಲಿಕೆ ಚಿತ್ತು ಚಿದ್ರೂಪಾಯಿತು |

ಚಿತ್ತು ಪಟ್ಟವಾಗೆ ಚಿತ್ತೆಲ್ಲವು |

ಸತ್ತುವಿನ ನಾಮ ಚಿತ್ತುವಿಗಿಲ್ಲಾಯ್ತು |

ಹತ್ತುಕಿದ್ದ ನಾಮ ಹಲವುಗೆಲ್ಲಿಹದು ||2||

ಮುತ್ತ್ಯಾನ ನಾಮ ಮೊಮ್ಮಗನಿಗೆಂಬೊ ಸಾಕ್ಷಿ |

ಚಿತ್ತಿನಿಂದ ಹುಟ್ಟಿ ಸರ್ವವು ಸತ್ತಿತ್ತು |

ನಿತ್ತ್ಯ ನಿಜಾನಂದ ಶ್ರೀ ಮಹಾಂತ ಯೋಗಿ |

ಮತ್ತೆ ಹುಟ್ಟಿ ಹುಟ್ಟಿ ಸತ್ತೇ ಸತ್ತಿತು ||3||

ಆಯಾಸ ಅಣುಯಿಲ್ಲಾವೋ | ಸದ್ಭಾವಿಗೆ |

ಛ್ಯಾಯದ ಭ್ರಮಿಯಿಲ್ಲವೋ |

ಕಾಯ ಕುಜಕರ್ಣಾದಿ ಶಾಖೆಯು | ಉಪಾಯ ಗುಣ |

ಪರ್ಣಾಶಿ ಪಚನದಿ |

ಘಾಯವಡಿಯದೆ ಕಡಿದು | ಗಾದಿಯ ನ್ಯಾಯದಂತಿರೆ ||ಪಲ್ಲ||

ಕಾಲು ಮುಂದಾಗಿ ಹುಟ್ಟಿ | ಸಿದ್ಧರು ಕೂಡಿ |

ಮೂಲ ಮಂತ್ರ ಹಿಡಿದು ಘಟ್ಟಿ |

ಸಾಲು ದಿಕ್ಕವನೆ ಕಟ್ಟೀ | ಸಂಶಯದ |

ಆ ಸ್ಥೂಲ ಭೀತಿಯನೆ ಅಟ್ಟಿ ||

ಆಲಿಗಂಜನ ಹಚ್ಚಿ | ಸಂತಸದಲಿ |

ತನ್ನನುಪಾಲ ಪಣುಜನ ಪಣುಜಾ ಮಡಗಿದ |

ಕೀಲ ಬಗಿದು | ಈ ನೆಲನಗಿದು |

ವಿಶಾಲವಾದ ನಿಧಾನ ತಗಿದರೇ ||1||

ಮೇಲುಗಿರಿಯನ್ನೆ ನೋಡಿ | ಅಲ್ಲಿಗೆ ಹೋಗಿ |

ಮೇಲೊಂದು ಗಡಹ ಮಾಡಿ |

ಕೀಲದಾಕಾರವ ತೋಡಿ | ಧಾನ್ಯಾದಿಯ |

ಜಾಲ ಸಂಗ್ರಾಹನೆ ಕೂಡಿ ||

ಕೀಲಿ ಜಡಿದಗಸಿಗಳ ದಿಡ್ಡಿ | ಸಕೀಲದಲಿ |

ಚರಿಸುತಲಿ ವೀರರ |

ಮೇಳಿಗಳನೋಲೈಸಿ | ಈ ಭೂಪಾಲಕರಿಗೆ |

ತಾ ಪಾಶ್ಚನಾದರೆ ||2||

ತನ್ನರಮನಿಯೊಳಗೆ | ಆರರಿಯದ |

ಮುನ್ನಿರ್ದ ಹೊರವಳಗ |

ಸನ್ನಿಯಿಂದಾಗವಿಗೆ | ಹೋ ಹೇಳಲಾಯಿನ್ನು |

ಬಾರದು ಕಿವಿಗೆ ||

ತನ್ನ ಆಜ್ಞೆಯ ಮೀರಿ ಈ | ಚೆಪ್ಪನ್ನ |

ದೇಶವು ಮುನಿದು ಮುತ್ತಲು |

ಚೆನ್ನ ಗುಡ್ಡದ ಮಹಾಂತ | ಗವಿಗೆ |

ನೀ ಭಿನ್ನಿಲ್ಲದೆ ಸಿಗದೆ ಹೋದರೆ ||3||

ನಾವು ನಡದೇವಮ್ಮ ನಮ್ಮ ತವರೂರಿಗೆ

ಹೇಳಿ ಕೇಳಿ ಎಲ್ಲರಿಗೆ |

ನೀವು ಅಂಜಿ ನಡಿಬೇಕರವ್ವ ನಿಮ್ಮ

ಹಿರಿಯರಿಗೆ ಶಿವಶರಣರಿಗೆ ||ಪಲ್ಲ||

ಒಪ್ಪದಿಂದ ಎರಡು ಮಕ್ಕಳ ಹಡದು ಬೆಳದೆ

ಅವರ್ನ ಸಂಗಕ್ಕೆಳದೆ

ಇಪ್ಪತ್ತೊಂದು ಸಾವಿರದಾರನೂರರಲ್ಲಿ ಇಳದೆ |

ಇನ್ನ ಹರಿಯ ಕಳದೆ ||1||

ಮುತ್ಯಾ ಮಾವ ಮೈದುನರಿಗೆ

ಸುಳ್ಳಿಯಾದೆ ನಾ ಅತ್ತಿಗಿ ಕಳ್ಳಿಯಾದೆ |

ಚಿತ್ತದೊಲ್ಲಭಗೆ ಹಾದರಗಿತ್ತಿಯಾದೆ

ಅತ್ತಿಗೆಗೊಳ್ಳ್ಯಾಕ್ಯಾದೆ ||2||

ಮನಿಯ ಅಳಿಯ ತಾನದವನ ನೋಡಬೇಕು

ಉಡುಕಿಯಾಗಬೇಕೋ

ಚಿಣಮಗೇರಿ ಗುಡ್ಡದಯ್ಯನ ಒಣದಾಕು

ಇನ್ಯಾಕಬೇಕು ಮುಕ್ತಿ ಪಡಿಯಬೇಕೋ ||3||

ಎಲ್ಲರೊಳಗ್ಹಾನ ಶಿವ ತಾನೇಕಾಗಿ |

ತಿಳಿಯೊ ನೀ ಬೇಗಿ |

ನಡಿಯೊ ಬಾಗಿ ಸಾರಿ ಹೇಳುವೆ ಕೂಗಿ ||ಪಲ್ಲ||

ಕೊಡುವವರೊಳಗೆ ಆ ಕೊಡುವದರೊಳಗೆ |

ಕೊಡುಕೊಂಬುವವರೊಳಗೆ |

ಬಡಿವವರೊಳಗೆ ಆ ಬಡಿವುದರೊಳಗೆ |

ಬಡಿಸಿಕೊಳ್ಳುವವರೊಳಗೆ ||1||

ಬೈವವರೊಳಗೆ ಆ ಬೇಗಳೊಳಗೆ |

ಬೇಸಿಕೊಳ್ಳುವವರೊಳಗೆ |

ನ್ಯಾಯದೊಳಗೆ ನ್ಯಾಯ ಹೇಳುವದರೊಳಗೆ |

ನ್ಯಾಯ ಕೇಳುವದರೊಳಗೆ ||2||

ಪೊಡವಿಯೊಳಧಿಕ ಚಿಣಮಗೇರಿಯೊಳಗೆ |

ಮೃಢಮಹಾಂತೇಶ್ವರನೊಳಗೆ |

ಮಡಿವಾಳಾಖ್ಯ ನಾಮರೂಪ ಕ್ರಿಯೆದೊಳಗೆ |

ನುಡಿವ ಬೆಡಗಿನೊಳಗೆ ||3||

ಬಲ್ಲೆನೆಂದು ಬಹಳ ಶಾಸ್ತ್ರ

ಓದಿ ಓದಿ ಕಾಣೊ ಹಾದಿ ಆದಿ |

ಬಲ್ಲವನಾದರ್ಯಾಕ್ಹೀಂಗ ಗರ್ವಿಯಾದಿ

ಹ್ಯಾಂಗ ಗರ್ವಿಯಾದಿ ||ಪಲ್ಲ||

ಇಲ್ಲದಿಲ್ಲದ್ದೆಲ್ಲಿಯಿಲ್ಲ ನೋಡೊ ತಮ್ಮ

ಸುಳ್ಳೆ ಬ್ಯಾಡೋ ಹಮ್ಮ |

ಅಲ್ಲಮನಾಚಿಲ್ಯಾದ ನಿನ್ನ ಸೊಮ್ಮ

ಕೇಳಾದಿ ಬೊಮ್ಮ ||1||

ಗುರು ಎಂಬ ಗುರ್ತ ನಿನಗೆ

ಸಿಕ್ಕೆ ಇಲ್ಲ ಸುಳ್ಳ ಸೊಕ್ಕಿದಲ್ಲ |

ಪರಮಾನಂದ ಸೌಖ್ಯದರುವ

ಹಗರಿಲ್ಲ ಭವ ನೀಗಲಿಲ್ಲ ||2||

ಒಂದೆ ಮೂರು ಆರು ಸಾವಿರಾದರೇನು

ಮೀರಿ ಹೋದರೇನು |

ತಂದಿ ಮಹಾಂತನ ಲೀಲ

ಇದ್ದರೇನು ಇಲ್ಲದಿದ್ದರೇನು ||3||

ಬಲ್ಲೆ ಬಲ್ಲೆ ಬಲ್ಲೆನೆಂಬಿಯಲೆ

ಆತ್ಮ | ನಿನ್ನ

ಬಲ್ಲತನವು ಬಲ್ಲರ್ಹೇಳೆಲೆ ಆತ್ಮ ||ಪಲ್ಲ||

ಅವಲದಲ್ಲಿ ಅವಯ ನಿನಗೆ ಎಲೆ ಆತ್ಮ | ಅದರ |

ವಿವರವನ್ನು ವಿವರಿಸೆನಗೆ ಎಲೆ ಆತ್ಮ ||

ಅವಯವ ಆದವಗೇನಾದಿ ಎಲೆ ಆತ್ಮ |

ಆ ನಿರ್ವೈಲವಯ ನೀನೆಲ್ಲಿಂದೈದಿ ಎಲೆ ಆತ್ಮ ||1||

ಜಗದ ಜೀವನದ ನ್ಯಾಯವು ಎಲೆ ಆತ್ಮ |

ಈ ಜಗದ ಜೀವ ನಿನ್ನ ದೇವ ಎಲೆ ಆತ್ಮ ||

ಜಗವು ತಾನೆ ನೀನು ತಾನೆ ಎಲೆ ಆತ್ಮ |

ಇದರ ಹಗರಣವರಿ ಹಲವು ನೀನೆ ಎಲೆ ಆತ್ಮ ||2||

ಅಡ್ಡ ದ್ಯಾವರಾಗದಂತಿ ಎಲೆ ಆತ್ಮ | ಆ ಮಹಾ |

ದೊಡ್ಡವರ ಕೂಡುಂಡೇನಂತೆ ಎಲೆ ಆತ್ಮ ||

ಗುಡ್ಡದಷ್ಟು ಗುಣವು ಸಾರ್ತಿ ಎಲೆ ಆತ್ಮ | ಮೊಂಡ |

ಸೊಡ್ಡಿನಷ್ಟು ಸವಿಯದಿರ್ತಿ ಎಲೆ ಆತ್ಮ ||3||

ಕೊಟ್ಟುಕೊಂಡು ಕೊಂಡುಕೊಟ್ಟಿ ಎಲೆ ಆತ್ಮ | ನೀನು |

ಹೊಟ್ಟೆ ಹೊರುವದಾಯಿತು ಹುಟ್ಟಿ ಎಲೆ ಆತ್ಮ ||

ಕಟ್ಟಿದ್ದಲ್ಲ ಬಿಟ್ಟಿದ್ದಲ್ಲ ಎಲೆ ಆತ್ಮ | ಸತ್ತು |

ಹುಟ್ಟು ಆಶಿ ಹೋಗಲಿಲ್ಲ ಎಲೆ ಆತ್ಮ ||4||

ತನುವು ತೊಟ್ಟು ತನುವು ವಿರೋಧ ಎಲೆ ಆತ್ಮ | ಈ |

ಮನವು ಬಳಸಿ ಮನ ವಿಭೇದ ಎಲೆ ಆತ್ಮ ||

ತನುವು ನಿನಗೆ ನಿತ್ಯವಹುದೆ ಎಲೆ ಆತ್ಮ |

ಮನವು ಘನವು ನೆನೆಯಲನುವಾಗಿಹುದೆ ಎಲೆ ಆತ್ಮ ||5||

ಯತ್ರ ಜೀವ ತತ್ರ ಶಿವನೆಂದೆ ಎಲೆ ಆತ್ಮ |

ಶತ್ರು ಮಿತ್ರತ್ವ ಮಾಡುತಲೆ ಬಂದಿ ಎಲೆ ಆತ್ಮ ||

ಶತ್ರು ಮಿತ್ರದಾಗೋದ್ಹಾಂಗೋ ಎಲೆ ಆತ್ಮ | ಜಗಕೆ |

ಪುತ್ರ ಪಿತೃದಾಗೋದ್ಹಾಂಗೋ ಎಲೆ ಆತ್ಮ ||6||

ಸರ್ವಮಯ ಶಿವನೆಂಬೋದಂಬಿ ಎಲೆ ಆತ್ಮ |

ಸರ್ವ ಶಿವನೆಂದ್ಹೇಗೆ ನಂಬಿ ಎಲೆ ಆತ್ಮ ||

ಸರ್ವ ಸುಖವು ಬೇಡುವಲ್ಲಿ ಎಲೆ ಆತ್ಮ | ಗರ್ವ

ಸರ್ವರಲ್ಲಿ ಮಾಡುದೆಲ್ಲಿ ಎಲೆ ಆತ್ಮ ||7||

ಹಲವು ನೆನವು ಇರಲು ಹೇಗೆ ಎಲೆ ಆತ್ಮ |

ನಿನ್ನ ನೆಲೆಯು ಕಲಿಯು ತಿಳಿಯುದ್ಹೇಗೆ ಎಲೆ ಆತ್ಮ ||

ನಿಲವಿನಾಶೆ ಒಂದೆಯಾಗಿ ಎಲೆ ಆತ್ಮ |

ಬೈಲ ಸುಲಭ ನಿರಂಕಾರ ತಾಗೆ ಎಲೆ ಆತ್ಮ ||8||

ಸತ್ಯ ಸದಾಚಾರ ಖೂನ ಎಲೆ ಆತ್ಮ | ನಿನಗೆ |

ತೆತ್ತೆವಾಗೆ ಸಮ್ಯಜ್ಞಾನ ಎಲೆ ಆತ್ಮ ||

ನಿತ್ಯ ನಿತ್ಯ ಸಾವಧಾನ ಎಲೆ ಆತ್ಮ | ಜಗ |

ನ್ಮಿಥ್ಯನಾಗಿ ಇರೋ ಮನ ಎಲೆ ಆತ್ಮ ||9||

ಏಕಚಕ್ರದಿಶತನವು ಎಲೆ ಆತ್ಮ | ತನ್ನ |

ಬೇಕು ಬೇಡೆಂಬೋದ್ಯೋಚನ ಎಲೆ ಆತ್ಮ ||

ಏಕಮೇವನೆಂಬೆ ಘನವು ಎಲೆ ಆತ್ಮ | ನಿನ್ನ |

ಜೋಕೆ ಮಾಡುತಿಹುದು ಘನವು ಎಲೆ ಆತ್ಮ ||10||

ಎಲ್ಲಾನು ತಾನಾದನಲ್ಲೊ ಎಲೆ ಆತ್ಮ | ನೀನಿ |

ನ್ನೆಲ್ಲಿ ಬಿದ್ದರೇನು ಇಲ್ಲೋ ಎಲೆ ಆತ್ಮ |

ಅಲ್ಲಿ ಅಹುದು ಅಹುದೆ ಅಲ್ಲೊ ಎಲೆ ಆತ್ಮ | ಮಹಾಂ |

ತೊಲ್ಲಭ ಸ್ವಾನಂದ ಸೊಲ್ಲೊ ಎಲೆ ಆತ್ಮ ||11||

ರೂಪ ನಿರೂಪದೊಳಿರ್ದ ಮಾಂತನ

ರೂಪವು ತಿಳಿವದಿಲ್ಲೆ |

ಆ ಪರಬ್ರಹ್ಮವೆ ತಾನಾದಾತ್ಮಗೆ |

ತಾಪವು ಇನಿತಿಲ್ಲೆ ||ಪಲ್ಲ||

ಯೋಗವು ಮಾಡನು ಭೋಗವು ಬೇಡನು |

ಯೋಗ ಭೋಗವು ಬಿಡನು |

ಸಾಗಿಸುವನು ಸಕಲಾಗಮ ಶಾಸ್ತ್ರವ |

ಮೂಕನಾಗಿರುತಿಹನು ||1||

ಕಾಮವು ಹಿಡಿಯನು ನೇಮವು ನಡಿಯನು |

ಕಾಮವು ನೇಮವು ಬಿಡನು |

ತಾಮಸ ಗುಣದೊಳು ಪ್ರೇಮಾಗಿರುತಿಹನು |

ನಿಸ್ಸೀಮನೆನಿಸುತಿಹನು ||2||

ಕಾನನ ಕೂಡನು ಮಾನವರ ಕೂಡನು |

ಕಾನನ ಮಾನವರ ಬಿಡನು |

ಏನೇನು ಅರಿಯನು ಖೂನವ ಮರೆಯನು |

ಜಾಣನೆನಿಸುತಿಹನು ||3||

ಅಂದವ ಮಾಡನು ಚಂದವ ನೋಡನು |

ಅಂದ ಚಂದವ ಬಿಡನು |

ಬಂಧು ಬಳಗ ತಾ ಹೊಂದಿ ಹೊಂದದೆ |

ನಿಜಾನಂದದೊಳಿರುತಿಹನು ||4||

ನಾನೆಂದರಿಯನು ನೀನೆಂದರಿಯನು |

ನಾನು ನೀನೆಂಬುದು ಬಿಡನು |

ನಾನಾ ವಿನೋದದ ಮೋಹನ ಮಹಾಂತೇಶನು |

ತಾನೆ ತಾನೆನಿಸುತಿಹನು ||5||

ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೊ |

ತನ್ನಂತೆ ಸರ್ವರ ಜೀವ ಮನ್ನಿಸಿ ಮೂಕಾದ ಮೇಲೆ ||ಪಲ್ಲ||

ತಾನೆ ಪೃಥ್ವಿ ಅಪ್ಪು ತೇಜ ತಾನೆ ವಾಯು ಆಕಾಶಾತ್ಮ |

ತಾನೆ ಸೂರ್ಯ ಚಂದ್ರ ತಾರೆ ತಾನೆ ಬ್ರಹ್ಮಾಂಡಾದ ಮೇಲೆ ||1||

ತಾನೆ ಘ್ರಾಣ ಜಿಹ್ವೆ ನೇತ್ರ ತಾನೆ ತ್ವಕ್ಕು ಶ್ರೋತೃ ಹೃದಯ |

ತಾನೆ ಕಾಯ ಕರಣ ಹರಣ ತಾನೆ ಪಿಂಡಾಂಡಾದ ಮೇಲೆ ||2||

ತಾನೆ ಹೆತ್ತ ಸತ್ತ ಅತ್ತ ತಾನೆ ನಿತ್ಯ ನುತ್ಯ ಸತ್ಯ |

ತಾನೆ ಅರ್ತ ಬೆರ್ತ ಮರ್ತ ತಾನೆ ಸರ್ವನಾದ ಮೇಲೆ ||3||

ತಾನೆ ಲಕ್ಷ ಸಾವಿರ ನೂರು ತಾನೆ ಹತ್ತೊಂಬತ್ತೆಂಟೇಳು |

ತಾನೆ ಆರೈದು ನಾಲ್ಕು ಮೂರು ತಾನೆ ಎರಡೊಂದಾದ ಮೇಲೆ ||4||

ತಾನೆ ನೀನು ನೀನೆ ತಾನು ತಾನೆ ಅಲ್ಲ ತಾನೆ ಇಲ್ಲ |

ತಾನೆ ಮಹಾಂತ ತಾನೆ ತಾನು ಏನೊ ಏನೊಂದಾದ ಮೇಲೆ ||5||

ಸರ್ವರ ಸಮದೃಷ್ಟಿಸುವದೊ | ಆ

ನಿರ್ವಾಣ ತಾ ಕೈ ಬೀಸುವದೊ |

ಗರ್ವನಳಿದು ಸ್ವಯಂಜ್ಯೋತಿ ತಾನಾದರೆ |

ನಿರ್ವೈಲವೆ ನಿಜ ನೀನೆನಿಸುವದೊ ||ಪಲ್ಲ||

ರೊಟ್ಟಿಯ ಪುಟ್ಟೆಂದು ಕರದಿ | ಅದರ

ಭೆಟ್ಟಿ ನೀ ಏನೆಂದು ಅರದಿ |

ತೊಟ್ಟಿಲೊಳಗೆ ತನು ತೊಟ್ಟಾಡು ಆತ್ಮನ |

ಹುಟ್ಟಿಸಿದವನ ಹೆಸರಿಟ್ಟು ನೀ ಮರದಿ ||1||

ಹಲವು ಜನ್ಮದೊಳ್ಹೆತ್ತ ಪ್ರಾಣಿ | ಬಂದು

ನಿಲ್ಲಲು ಕಾಲ್ಹಾರಿ ಮುಗುದಾಣಿ |

ಬಲವಗೆಡಿಸಿ ಭವಕ್ಕೀಡು ಮಾಡಿದೆನೆಂದು |

ತಿಳಿವದೆಂದಿಗೆ ನಿನ್ನ ನೆಲೆ ನೀನು ಕಾಣಿ ||2||

ಎಲ್ಲ ಸ್ವರೂಪಕೇನಾದಿ | ಅದ

ರಲ್ಲಿರುವದು ನಿನ್ನ ಹಾದಿ |

ಬಲ್ಲ ಶ್ರೀಗುರು ಮಾಂತೊಲ್ಲಭನಾದರೆ |

ನಿಲ್ಲದೊ ಜನ್ಮೆಂದಿಗೆಲ್ಲೆಮ ಬಾಧಿ ||3||

ಲಾಲ ಬಿಲಾಲದ ಬಾಲ ನಿಜದಾಲಯದೊಳಗನುಗಾಲ |

ಕಾಲ ಕರ್ಮದ ಮೂಲವ ತಿಳಿ ಭವ ಜಾಲ |

ಮೂಲವೂ ಶಿವಲೀಲ ಸಕೀಲ ||ಪಲ್ಲ||

ಅವನ ಕೈಯಾಗ ಕಾಸಿಟ್ಟು ಮತ್ತ

ಇವನಿಗೆ ಜೋಳಿಗಿ ಕೊಟ್ಟು |

ಅವ ಇವನಿಗೆ ಕೊಡ ಇವ ಅವನಿಗೆ ಬಿಡ |

ಅವ ಇವ ಇವ ಅವ ಅವ ಆದವ ಯಾವ ||1||

ಅರವತ್ತಾದವು ಬೊಂಬಿ ಅವ

ಕ್ಕರುವಿಲ್ಲಹೊಯಿತು ಡೊಂಬಿ |

ಅರುವ ಅರುವಿಸುವಿರಿ |

ಅರುವಿನೊಳಿರುತಿರಿ ಎಲ್ಲರಿದ್ದೂ ತನ್ನ ಶಿರವದೂಗುವದು ||2||

ಹತ್ತುವಿಗೊಂದೇ ಬೀಜ ಅದ

ಕ್ಹತ್ತತ್ತಾದವು ಗೋಜ |

ಹತ್ತುವಂದೆ ವಂದೇಹತ್ತು |

ಹತ್ತೊಂದಿಲ್ಲ ಗೊತ್ತು ತಿಳಿಯೊ ಮಹಾಂತುತ್ತುಮನೊಳಗೆ ||3||

ಅ ಹ ಹ ಇದು ಏನು ಸೋಜಿಗಾ |

ತಾನೇ ತಾನಾದ ಮೂಜಗಾ ||ಪಲ್ಲ||

ಆ ಹರಿಬ್ರಹ್ಮರು ಬಹುಯುಗ |

ಸಾಧಿಸಿ ಕಾಣರು ಇಹುದೇ ಯೀಗ ||1||

ಯಶವ ನಾಮ ಹಲವೆಂದು ಇಂದು

ಹೆಸರುಗೊಂಡು ಕರಿಯಲಿಕ್ಕಿಲ್ಲೊಂದು ||2||

ಅಷ್ಟ ರೂಪವಾಗಿಹುದೆ ತಾನು |

ದೃಷ್ಟಿಯಿಟ್ಟರಿಟ್ಟಿಲ್ಲ ಖೂನು ||3||

ಕಾಲಕಾಲ ಮಾಡಿದ ಫಲಪ್ರವರ

ನಾಲಿಗೆ ಕಾಣುದು ಕೊನಿ ಸವಿ ಬೆವರ ||4||

ಭವವಾದವ ತಾನಲ್ಲಾಯೆಲ್ಲಾ

ಅಂವ ಆಗದೆ ಆಗವವ್ಯಾಂವಿಲ್ಲಾ ||5||

ಸರ್ವ ಶೂನ್ಯ ಮಹಾಂತೇಶ ಈಶಾ |

ಸರ್ವತಾನೆ ಆಕಾಶ ರೌಶಾ ||6||

ಭಾವರುದ್ರಕ್ಕಿಗೆ ನಿರ್ಲಕ್ಷವೆ ಲಕ್ಷ |

ಇಕ್ಕೋ ಮಹಾಪೊಕ್ಕೊ | ಸಾವಿನ ಸಾವದು |

ಸಾವಧಾನದೊಳು ಹೊಕ್ಕೊ |

ದಕ್ಕೊ ಬಿಡು ಸೊಕ್ಕೊ ||ಪಲ್ಲ||

ನಿರ್ವೈಲವೆ ನಿಜ ಹುಸಿಯೇ ಸ್ವಯಂಭೋ |

ಸರ್ವ ಜಗವು ತಾನೆ ನಿನಗೆ |

ನಿರ್ವೈಸಲು ಜೀವತನು |

ಕರಣೇಂದ್ರಿಯವು ಸತ್ತೋ ಬಹು ಚಿತ್ತೋ ||1||

ರೂಪಿನ ನೆರಳು ನಿರೂಪೋ ಸ್ವರೂಪೋ |

ನೀ ಪರಕಿಸು ನಿನ್ನ ತನ್ನೊಳಗೆ |

ರೂಪು ನಿರೂಪವಾದರೆ ನೆರಳೋ ಈ |

ಹುರುಳೋ ತಿಳಿಯೋ ಈ ಸುಖ ತಳಿಯೋ ||2||

ಎಲ್ಲಾ ಬಲ್ಲಾದ ರೂಹು ಅರವು ಬಲ್ಲದ್ದೇನದು |

ಬಲ್ಲಾದರ್ಹೇಳ ಅನುಭವ ಒಂದೇ

ಸೊಲ್ಲಿಲರಿಯದು ನಿರ್ವಾಚ ಮಹಾಂತ |

ಪುರದೊಡಿಯ ಎಂದಿಗೂ ಮಡಿಯ ||3||

ಅಷ್ಟು ತಾ ಸುಳ್ಳಲ್ಲ ಒಂದಿಷ್ಟು ತಾ ಖರೆಯಲ್ಲ |

ಅಷ್ಟಾದಶ ಪುರಾಣ ಶೃತಿ ಸ್ಮೃತಿ

ದೃಷ್ಟ ತೋರುವದೊಂದಿಲ್ಲ ||ಪಲ್ಲ||

ಇಲ್ಲದ್ದೇನೊಂದಾಯಿತು ಅದು

ಎಲ್ಲ ತಾನೆ ಎನಿಸಿತ್ತು |

ಹೊಲ್ಲೊಳ್ಳೆಂಬೊದೆಲ್ಲಿತ್ತು ಅದು

ಇಲ್ಲದ್ದಿದ್ದಿಲೆನಿಸಿತ್ತು ||1||

ಸತ್ತಾದರೆ ತಾ ಚಿತ್ತಾಯಿತು ಈ

ಚಿತ್ತ ತಾ ಕತ್ತಲವಾಯಿತು

ಗೊತ್ತು ತಿಳಿದರಾನಂದಾಯಿತು | ನೀ

ಸತ್ಹೋದರೆ ತಾ ಸತ್ಹೋಯಿತು ||2||

ಬ್ರಹ್ಮ ತಾನೆಂಬುದಕೆ ಈ

ಹಮ್ಮಗಿಮ್ಮ ಏನದಕೆ |

ಸುಮ್ಮನೆ ಅಳಳಳಳಳಾದುದಕೆ | ನೀವು

ಉಮ್ಮಳಿಸುವದಿನ್ನೇನಿದಕೆ ||3||

ತಾನೆ ತಾನೆ ಆದಲ್ಲಿ ನಾನು

ನೀನು ಯಾವಲ್ಲಿ |

ತಾನೇನಾಯಿತೆಂದ್ರೇನಲ್ಲಿ | ನಾ

ಖೂನ ಹೇಳುವದೇನಿಲ್ಲದ್ದಿಲ್ಲ ||4||

ಕಡಕೋಳ ಗುಡ್ಡದ ಬಹು ಕಾಸ | ಅಲ್ಲಿ

ಸಡಗರ ಮಹಾಂತಪುರ ವಾಸ

ನಡಿನುಡಿವಾಸರಿಸದೇ ತ್ರಾಸ | ಅದು

ಪಡಕೊಂಬುವರಿಗೆ ಕೈಲಾಸ ||5||

ಆ ಪರಬ್ರಹ್ಮವು ನೋಡೊ ನಿಜ |

ರೂಪದೊಳಗೆ ಲೋಲಾಡೊ |

ಪಾಪವು ಪುಣ್ಯವು ಜೋಡೊ | ಜಗ

ದ್ವ್ಯಾಪಾರವು ಬಹು ಕೇಡೊ ||ಪಲ್ಲ||

ಕಾಣುದು ಕಾಣುದು ಕಾಣೋ |

ಕಣ್ಣಿಗಿ ಕಾಣುದು ಕಾಣುದು ಜಾಣೊ |

ಪ್ರಾಣ ಪ್ರಪಂಚಕೆ ತ್ರಾಣೊ |

ಅಣುರೇಣು ತೃಣಕಾಷ್ಟಾಣೊ ||1||
ಕಂಡದ್ದು ಕೂಡ್ರಿಸಿಕೊಂಡು ಬಹು |

ಬಂಡು ಮಾಡುತಿ ಹೊಯಿಕೊಂಡು |

ಪಿಂಡುಳ ಕೊಳಲರಿ ಶೆಂಡು |

ನಿಂದುಂಡುದ್ದೇನೆಲೆ ಹಂಡು ||2||

ಜೀವ ಮನವು ತನು ತಾಯೋ | ನಿನ

ಗಾವುದು ಇದರೊಳು ವಾಯೋ |

ಭಾವಿಸುವ ನ್ಯಾಯಾನ್ಯಾಯೋ ಮಹಾ

ದೇವ ಮಾಂತನೇ ಕಾಯೋ ||3||

ಎಲೊ ಎಲೊ ಏ ಮಾನವಾ |

ತ್ರಿಜಗದೊಳ್ ನಿನಗಿನ್ಯಾವನುವಾ |

ಸಲುವದು ಸಲ್ಲದು ಹೊಲ್ಲೊಳ್ಳೆಂಬದು |

ಹಿತವಹಿತವರಿ ಇದು ನಿನ್ನನುವ ||ಪಲ್ಲ||

ಸಾಯಲು ನೀ ಬಂದಿ | ಈ

ಮಂದಿಗೆ ಸಾಯವಲ್ಲಿರ್ಯಾಕಂದಿ |

ಕಾಯಕಷ್ಟ ತುಸು ಬಾಯಿಗೆ ಬಾಳೆ ಹಸು |

ಮಾಯತವರಿಯದೆ ಯಾರದರೇ ತಿಂದಿ ||1||

ಹಡದವರ ಹರೆ ಕಳೆತಿಯಾ | ಆ

ತಂದಿಯ ನಡುತಲೆ ಮಡುವಳದಿ

ಷಡುರಸ ಸವಿಹಾಲ್ ಕುಡಿದು |

ತಿಪ್ಪಿಯ ಪಾಲು ತುಡುಗ ಮಾಡಿ ನೀನೆ ಹಳದಿ ||2||

ನೋವು ಸಾವೊಲ್ಲೆಂದಿ |

ಆಗದು ದಾವತಿ ಬಾರದಂದಿ |

ಮಾಯ ಹುಣ್ಣು ಉಗರಿಕ್ಕಿ ಜೀವರಸೊಳು ಸಿಕ್ಕಿ |

ದೇವ ನೀನೇ ಮಹಾಂತ ಎಂಥವನಂದಿ ||3||

ದಾವದಾದೋ ನಿಜದಾವದಾದೊ |

ನಿನ್ನ ದಾಂವತಿ ತೀರದು |

ಸಾವದು ಸನೆ ಬಂತು ||ಪಲ್ಲ||

ಅವನಿವನೆಂಬುವಿ ಮತ್ತಿವನ್ಯಾರು ಅವನ್ಯಾರು |

ಅವನ್ಹೆರಸರೇನೋ ಮತ್ತಿವನ್ಹೆಸರೇನೋ |

ರವಿ ಕಾಣದ ಮುನ್ನ ಕವಿ ಕಂಡೆವೆಂದೆನಿಸಿ |

ದಿವರಾತ್ರಿಯೊಳು ಹೇಯ ಬಿಡರಣ್ಣಾ ||1||

ಅದು ಇದೆಂಬುದು ಬಲ್ಲೆ ಆದುದು ಅರಿವಲ್ಲೆ |

ವೇದವಿನ್ನೇನೋ ಓದುದಿನ್ನೇನೋ |

ಆದಿ ಅನಾದಿಯ ಭೇದವ ತಿಳಿಯದೆ |

ಸಾಧು ಹ್ಯಾಂಗಾದ್ಯೋ ಸದ್ಭಕ್ತ ನೀ ಹ್ಯಾಂಗಾದ್ಯೋ ||2||

ಹೌದೇನು ಅಲ್ಲೇನು ಅಲ್ಲೇನು ಹೌದೇನು |

ಹೌದು ಅಲ್ಲ ಎರಡಿಲ್ಲದಿದ್ದರೇನಾದಿ |

ಮಹಾಂತೇಶ್ವರನೊಲ್ಲಭನೊಲಿಸಲು |

ಅಲ್ಲೇ ಹೌದೊ ಹೌದೇ ಅಲ್ಲ್ಯೋ ||3||

\

ಭಲೆರೆ ಭಲೆರೆ ಭಲೆ ಬ್ರಹ್ಮಾಂಡೆ ನಿನ್ನ

ನೆಲೆ ಕಲೆ ತಿಳಿಯದೇ ನೀ ಪಿಂಡಾಂಡೆ ||ಪಲ್ಲ||

ಸಾಧು ಸಂಗವೆ ವಾಹ್ವ ಓದು

ಅನುಭಾವೆ ವಾಹ್ವ |

ಬೋಧ ಶ್ರೀಮಹಾಂತನ

ವಚನೊಂದು ವಾಹ್ವ ||1||

ಚಿಂತಿಗೆಡುವದೊಂದೊಹ್ವಾ |

ಸಂತರಾಗುವದು ವಾಹ್ವ |

ಅಂತರಂಗ ಹುಡುಕುವ

ಮಹಾಂತರು ವಾಹ್ವ ||2||

ಅರವು ಮರವುದೊಂದೊಹ್ವ

ಕಿರಿಯು ಮೆರೆವುದೊಂದೊಹ್ವಾ |

ಮರೆಯುವ ಮಹಾಂತನ |

ಮರೆವುದೊಂದೊಹ್ವಾ ||3||

ದಾವದು ನಿನಗಿದು ಬೇಕವ್ವ | ಈ

ದಾವತಿ ನಿನಗಿದು ಸಾಕವ್ವ |

ತಾವುದು ಈವುದು ಕಾವುದು | ಕೊವುದು

ಬಾಹುದು ಹೋಹುದು ಯಾಕವ್ವ ||ಪಲ್ಲ||

ಒಂದಾದರೆ ಬಹು ಚಂದವ್ವ | ಅದು

ಒಂದರೊಳೊಂದೊಂದ್ಹೊವ್ವ |

ಮುಂದೆ ಉಣುವದು ಹಿಂದೆ ಪಿಣಿವದು

ಎಂದಿಗೆ ನೀಗುವದಲ್ಲವ್ವ ||1||

ಪುಣ್ಯಾತ್ಮೆಂದೆ ದೇಹ ದಣಿದವ್ವ | ಅವನ

ತುಣ್ಯಾರ್ಯಾರಿಗೆ ಮಣಿದಾದವ್ವ |

ಪುಣ್ಯನಾಗುವದು ಅನ್ಯ ನೀಗುವದು

ಬಣ್ಣತನ ಇನ್ನೇನವ್ವ ||2||

ಹೊಲ್ಲದ ಕೊಳ್ಳೆ ಬಣ್ಣೆವ್ವ | ಅದ

ಅದರಲ್ಲಿ ಹುರುಳಿಡು ಕಣ್ಣವ್ವ |

ಎಲ್ಲಿ ಆಗುವದು ಅಲ್ಲೆ ಹೋಗುವದು

ಎಲ್ಲ ಮಹಾಂತ ನೀ ಇಲ್ಲೆವ್ವ ||3||

ಆ ಪರಬ್ರಹ್ಮವೆ ತಾ ತಾನಾದ |

ನನಗ್ಯಾಕೆ ಈ ಭವದಾದ |

ರೂಪಿದು ಅಪರೂಪ ಆದ ಮೇಲೆ |

ಈ ಪರಿ ಆಡುದೇನಾಗಾಧ ||ಪಲ್ಲ||

ಇಲ್ಲದ್ದೊಂದು ಅಣು ಮಾತ್ರವಾಗಿ ತಾ |

ಇದ್ದದ್ದಾಯಿತು ವಿನೋದ |

ಇಲ್ಲೆಂಬುದ ತಾನಿದ್ದುದ್ದಾದ ಮೇಲೆ |

ಇಲ್ಲಾಗುವದೇನಾಗಾಧ ||1||

ಇಲ್ಲೆಂಬ ನಿಃಕಲ ನಿಜ ತತ್ವವು ನಾ |

ಬಲ್ಲೆಂಬುದು ವಿವಾದ |

ಎಲ್ಲೆಲ್ಲೆಂಬುದು ಒಲ್ಲೆನೆಂಬ ಭ್ರಮೆ | ತಾ

ನ್ನಲ್ಲಾಗುವದೇನಾಗಾಧ ||2||

ಚಿತ್ತು ಸತ್ತಿನಲ್ಲೆ ಹೆತ್ತ ಮಾಂತನು ತಾ |

ನನ್ನಲ್ಲೇನಾದ ವಿಭೇದ |

ಹೆತ್ತಾತ್ಮನೇ ತಾ ಚಿತ್ತೈಸಿದರೆ | ನಾ

ಸತ್ತು ಹೋಗುವದೇನಾಗಾಧ ||3||

ದಾವದೊ ಪರಬ್ರಹ್ಮದಾವ ಭಾವಾದದ್ದು |

ದಾವನಿದ್ದವನ ಬಲ್ಲೆನೆಲೊ ||ಪಲ್ಲ||

ನಿರ್ವೈಲವೇ ನೆನವಿನ ಮಂತ್ರದಿಂದಾದ |

ಸರ್ವ ಜಗವು ನಾನೀನೆಂಬುವದೇನೊ |

ನಿರ್ವೈಲಿಗೆ ನೆನನಿರ್ವಹಿಸಿದವನ್ಯಾವ |

ನಿರ್ವೈಲೆ ನಿಜ ವಸ್ತು ಎಂಬುವದೇನೊ ||1||

ಏನೇನು ಇಲ್ಲದೆ ತಾನೇ ತಾನಾದವ |

ಏನೆಂದನೊ ಸುಳ್ಳೆಂತೆಂದನೊ |

ಸ್ವಾನುಭಾವದಿ ಸಂಧಾನವ ತಿಳಿ ನಿಜ |

ತಾನೆ ಹೌದೆಂಬೆರಡ್ಹಾನ್ಯಾವೇನೊ ||2||

ಎಲ್ಲಿ ನೋಡಲು ಮಾಂತಲ್ಲದಿಲ್ಲೆಂಬುವ |

ಬಲ್ಲಾಗಮವು ತಾವ್ಯಾವಪ್ಪನೊ |

ಸೊಲ್ಲಲಾಗದು ಸುಮ್ಮನಂಜಿಸು |

ಯಲ್ಲಪ್ಪನು ತಾನೇನಿಲ್ಲಪ್ಪನೊ ||3||

ಅಲಲಲಲಲೇನಿದು ಅಪೂರ್ವ |

ಮಹಾ ಮಾಂತ ನಿನ್ನ ನಿಜ ನಿಲವು |

ನೆಲ ಜಲ ಅನಲಾ ನೀಲಾಕಾಶಾತ್ಮ |

ರವಿ ಶಶಿ ತಾನೇ ಹಲವು ||ಪಲ್ಲ||

ಅವಲದೊಳನಾದಿ ಅನಾಮ ಬೀಜ |

ನಿರೂಪಮರ ನಿಃಕ್ರಿಯ ಕಾಯ |

ಅವಯದಿ ಸ್ವಯಂಭು ಸತ್ಕಳೇಸುನಾದ |

ಬಿಂದು ಬಹು ಬಿತ್ತುವಿನ ಹೆತ್ತಾಯಿ ||1||

ಇಲ್ಲದ ನೆನವಿನ ಬಯಲಾದಾತ್ಮನು |

ಮಹಾತ್ಮವು ತಾನೇ ಬಹು ರೂಪಾಗಿ |

ಅಲ್ಲೆಲ್ಲಿಗೆ ಭ್ರಮೆಗೊಳಿಸಿ ನೀ |

ಸಿಗದಿರು ಬಿಡಬ್ಯಾಡೆಂಬುವದು ಮೇಲಾಗಿ ||2||

ಒಂದರು ನೆನವಿನೊಳನಂತ ರೂಪ |

ಒಂದು ರೂಪಿಗಗಣಿತ ನೆನವು |

ಹಿಂದ ಮುಂದಿಡು ಎರಡಡಿ ಒಂದಂಗಕ್ಕೆ |

ದಾವದಕಾದ ಹಿರಿಕಿರಿ ತನವು ||3||

ವಿಭು ನೀ ಇರೆ ಪ್ರಭು ತಾನಲ್ಲೆಂದಾನು |

ತಾನಲ್ಲೆನೇ ಮಾಯಾ ಹ್ಯಾಂಗ್ಹೋಗುವದೊ |

ಆ ಭವ ಭವ ಎಂಬಭಿಪ್ರಾಯವ |

ತಿಳಿಯಲು ಸರ್ವವು ಖರೆ ಹ್ಯಾಂಗಿಹದೊ ||4||

ಅಲ್ಲಿನ ಗುರುವಿನ ಗುರುವಿಲ್ಹಾನ |

ತಾನಲ್ಲ ತಮ್ಮಪ್ಪಲ್ಲ |

ಎಲ್ಲ ಮಾಂತ ಮಾಂತ ನಮೊ ನಮೊ

ನಾನಿದ್ದಿಲ್ಲ ನೀನಿದ್ದಿಲ್ಲ ||5||

ನಿರ್ವಯಲೆಂಬೊ ನಿಜ ಗೊತ್ತು |

ತಾನಿದ್ದು ಇಲ್ಲದೊಂದಲ್ಲಿತ್ತು |

ಅವಾಚ ಬ್ರಹ್ಮ ಎನಿಸಿತ್ತು |

ಆ ಬ್ರಹ್ಮವೆ ಪರಮಾತ್ಮ ಆಗಿತ್ತು ||ಪಲ್ಲ||

ಕದರ ಬಿದರಿಸಿದಂಗೆರಡಾಯಿತು |

ಅದು ಹರಹರಿಯೆಂಬೊ ನಾಮಾಯಿತು |

ಹರಹರಿಯಿಂದೆ ಸ್ವಾತ್ಮಾಯಿತು |

ಆ ಸ್ವಾತ್ಮನೇ ತಾನೆರಡಾತ್ಮಾಯಿತು ||1||

ಎರಡಾತ್ಮನೆ ಅರು ಮರುವಾಯಿತು |

ಆ ಅರುಮರುವೆ ಹಗಲಿರುಳಾಯಿತು |

ಹಗಲಿರುಳೊಳು ಯುಗ ಜಗವಾಯಿತು |

ಈ ಯುಗ ಜಗದೊಳುದಯ ಲಯವಾಯಿತು ||2||

ನೆಲ ಜಲ ಅನಲ ನೀಲಾಕಾಶ |

ಕೇಳು ಪಂಚಾನನ ಪರಮೇಶ |

ಪರಮೇಶನೆ ಗುರು ಮಾಂತೇಶ |

ಗುರು ಮಾಂತೇಶನೆ ಎನ್ನ ಭವನಾಶ ||3||

ಸುಳ್ಳ ಸುಳ್ಳೆ ಸುಳ್ಳೊ ನೀ ಮಾಡಿದ್ದೆಲ್ಲ ||ಪಲ್ಲ||

ಆಶಿ ಬಿಡದೆ ಪರದೇಶವ ತಿರದುಂಡು |

ಶ್ರೀಶೈಲುಳವಿ ಹಂಪಿ ಕಾಶಿಯಾತ್ರೆಗಳೆಲ್ಲ ||1||

ಪಟ್ಟದೈಯ್ಯನು ತಾನು ಕೊಟ್ಟ ಲಿಂಗಕ್ಕೆ ಮನ |

ಮುಟ್ಟಿ ಪೂಜಿಸಿ ನಯನಿಟ್ಟು ನೋಡುವದೆಲ್ಲ ||2||

ಅಷ್ಟಾವರ್ಣ ಪಿಡಿದಷ್ಟಾರ್ಚನೆಯಿಂದ |

ಶ್ರೇಷ್ಠ ಪೂಜಿತನಾಗಿ ದೃಷ್ಟಿ ತೋರುವದೆಲ್ಲ ||3||

ಮೂರು ಮಲವು ಬಿಟ್ಟು ಮೂರು ಮುದ್ರೆ ಅಳವಟ್ಟು |

ಆರು ವರ್ಗವ ಸುಟ್ಟು ಪೂರ ಜ್ಞಾನಾದುದ್ದೆಲ್ಲ ||4||

ಆರು ಮೂರರ ಮೇಲೆ ಏರಿ ನಿಂದ್ರಲು ಮುಂದೆ |

ವಿೂರಿದುನ್ಮನಿ ಪ್ರಭೆ ಸೂರ್ಯಗೊಂಬುವದೆಲ್ಲ ||5||

ಶೇಷನ ಮುಖದೊಳು ಸೂಸುವಮೃತ ಕೊಂಡು |

ಸಾಸಿರೆಸಳಿನಲ್ಲಿ ಘೋಷ ಕೇಳುವದೆಲ್ಲ ||6||

ಅತ್ತಲಿರುವ ಕಲೆ ಇತ್ತ ಸೆಳೆದು ತಂದು |

ಹತ್ತಿಸ್ಯದಕ್ಕಿದೆ ಗೊತ್ತು ಎಂಬುವದೆಲ್ಲ ||7||

ಬಿಳಿದು ಕೆಂಪಕೆ ಬಿತ್ತು ಒಳಗೆ ಬಂದದ್ದು ಚಿತ್ತು |

ಹಳದಿ ಹಸರು ಕಪ್ಪು ತಳಿದು ತಿಳಿಯುವದೆಲ್ಲ ||8||

ನಾನಾ ವಿನೋದದ ಮೋಹನ್ಮಾಂತೇಶನೆ |

ತಾನೆ ತಾನೆಂಬುದೊಂದೆ ನಾನು ನೀನೆಂಬುದೆಲ್ಲ ||9||

ಕಾಡುವ ನಡತಿ ಇದ್ಯಾಕ ಏ ಮನವೆ |

ಕೇಡು ಬಯಸಿ ಮರುಗುವದಿದು ಘನವೆ ||ಪಲ್ಲ||

ಸ್ವಲ್ಪ ಸುಖಕ್ಕೆ ದೊಡ್ಡ ಕಲ್ಪನೆಗಳದ್ಯಾಕೆ |

ಅಲ್ಪಿಸಿ ಅಳಿಸುವೆ ಬಲ್ಪಿದು ತರವೆ ||1||

ಮಾಡುವ ಧರ್ಮವ ಮಾಡಲು ಮರಸಿ |

ಮಾಡದ ಕರ್ಮವ ನೀ ಮಾಡಿಸುವದ್ಹಿತವೆ ||2||

ಸುಲಭ ಚಿಣಮಗೇರಿ ಸಲೆ ಮಹಾಂತೇಶನ |

ಒಲಿಸುವ ಸಮಯ ಬದಲಿಸುವದುಚಿತವೆ ||3||

ಮನವು ಎತ್ಹೋದರ್ಹೋಗಲಿ ಜೀವೆ |

ತನು ನೀನೊಂದಾಗೋದಾಗಲಿ ||ಪಲ್ಲ||

ಘ್ರಾಣಿಲ್ಲದ್ವಾಸನೆ ಗೊಡದು |

ಕಣ್ಣ ಕಾಣದೆ ವರ್ಣವ ನೋಡದು |

ವಾಣಿಯಿಲ್ಲದೆ ಮಾತನಾಡದು | ನಿನ್ನ

ಪಾಣಿಯಿಲ್ಲದೆ ಏನು ಮಾಡದು ಜೀವೆ ||1||

ಮೂಲವ ಕೀಳದೆ ಕೇಳದು |

ಕಿವಿ ಆಲಿಸದಿರ್ದರೆ ಕೇಳದು |

ನಾಲಿಗಿಲ್ಲದೆ ಸವಿ ತಿಳಿಯದು | ನಿನ್ನ

ಕಾಲೇಳದೆ ತಾನೇಳದು ಜೀವೆ ||2||

ಅಂಗಿಲ್ಲದೆ ಲಿಂಗನಾಗದು | ನಿನ್ನ

ಅಂಗವಿಲ್ಲದೆ ಸಂಗಕ್ಹೋಗದು |

ಮಂಗ ತಾನಾಗದೆ ಯತ್ನ ಸಾಗದು | ನಮ್ಮ

ತುಂಗ ಮಾಂತೇಶನ ನೀಗದು ಜೀವೆ ||3||

ಕೆಡಬೇಡೆಂದರೆ ಕೆಟ್ಟೇನಂದರಿಗೆ |

ಹೇಳುವದಿನ್ನೇನಿಲ್ಲ |

ಒಡೆಯ ಶ್ರೀಮಹಾಂತನ ವಚನ ಸಾರಿದೆ |

ನನ್ನಿಂದಾದೊಷ್ಟೆಲ್ಲ ||ಪಲ್ಲ||

ಹಿಡಿದವ ಹಿಡಿಸಿದವ ಹಿಡಿಸಿಕೊಂಡಾನೆಂಬೋ |

ನಡವಳಿ ನುಡಿ ಹಿಂಗಿತ್ತು |

ನಡಿನುಡಿ ಅರಿಯದೆ ಕಡಿ ಹೊಡಿಯೆಂದರೆ |

ಬಿಡಹುವದೆ ಹೆಡತಲಿ ಮಿತ್ತು ||1||

ಕಾಲ ಮುಂದ ನಿಂದು ಕರ್ಮವ ರಚಿಸಲು

ಕಾಲಕರ್ಮ ಸಂದಿಸಿತು |

ಈ ಲೋಕದ ಒಡನಾಡಿ ದೋಷವು |

ಸಾಲದೆ ಸಾಧು ನಿಂದಿಸಿತು ||2||

ತನ್ನ ಮಂತ್ರವದು ತನಗೇ ತಿರುಗುವದು |

ತನ್ನ ಪುಣ್ಯ ಪಾಪ ತನಗೇ |

ಹೊನ್ನು ಜಕಾತಿಗೆ ಒಟ್ಟಿಲಿಸಿಟ್ಟರೆ |

ಹೊನ್ನೊಂದುಳಿಯದೇ ತನಗೆ ||3||

ನೀತಿ ತಪ್ಪಿ ಮಾತಾಡುವ ಮಾನವರು |

ಕೋತಿಯಾಗುವದೇನರಿದೆ |

ಭೀತಿಗೆಟ್ಟು ಹಿಂದು ಮುಂದೊಂದವೆ |

ಗೊತ್ತು ಹಂದಿ ಜನ್ಮಿರದೆ ||4||

ಹೇತು ಬಂದು ತಿಂದಾತುಮೇ ಬಲಿದು |

ಮಾತು ಬಹಳ ಖಚ್ರ್ಯಾಕೆ |

ಕಾತುರದವರಿಗೆ ಯಾತರ ಭಯವದು |

ಜಾತ್ವಮ್ರ್ಹೇಳುವದು ಠೀಕೆ ||5||

ಬೇಕೆಂಬುದು ಭವ ಸಾಕೆಂಬುದು ವೈರಾಗ್ಯ

ಸಾಕುಬೇಕು ಎರಡಿಲ್ಲ |

ಕಾಕಗುಣದ ಜನರ್ಯಾಕಾಡೊಲ್ಲರು |

ಲೋಕೇಶ್ವರ ಬಲ್ಲೆಲ್ಲ ||6||

ಕೆಡಸಿದವರನ ಕೆಡಸಬಾರದೆಂದು |

ಕೆಡಗುಡದ್ಹಿಡಿದನುಮಾನ |

ಕೆಡಸಿದ ದ್ರೋಹ ತನ್ನ ಕೆಡಿಸದೆ ಬಿಡುವದೆ |

ಕೇಡು ಹಿಡಿ ನಿವೃತ್ತಿ ಕೂನ ||7||

ಅದು ಒಲ್ಲೆಂದರೆ ಅದು ಒಳಿತಾಯಿತು |

ಅದು ನರಿ ನಾಯಿಗೆ ಗಂಟು ಬಿತ್ತು |

ಅದು ತಾನಾದವಗದರನುಮಾನವ |

ಅದು ಇದು ನನಗೇನುಂಟು ||8||

ಹಿಡಿ ಹಿಡಿಯನೆ ದೈವ ಹಿಡಿವೆನು ಹಿಡಿದದು |

ಬಿಡು ಬಿಡುವೆನೆ ದೈವ | ಬಿಡುವೆನೆ

ಹಿಡಿಸಿ ಬಿಡಿಸಿದದಗಣಿತ ಮಹಾಂತನ |

ಕಡತದೊಳಗೆ ಬರದಿಡುವೆ ||9||

ಬಯಲ ಬೆರಸಬೇಡೆಲೊ ಆ |

ಬಯಲು ನಿನಗೆ ಕೇಡಲೊ ||ಪಲ್ಲ||

ಹಲವು ನೆನವು ತೋರುವಾ |

ಮಲಿನ ಜನನ ತಾಗುವಾ |

ಕುಲಚಲಕ್ಯಾಕ್ಹೋರುವೆ | ನಿನ್ನ

ನೆಲೆಕಲೆ ತಿಳಿ ಸಾರುವೆ ||1||

ಮನ ಬುದ್ಧಿ ಚಿತ್ತ ಅಹಂಕಾರ |

ತನು ಮನ ಧನ ಭಯಂಕಾರ |

ಘನಕ್ಕೆ ಘನ ಮಹಾ ಓಂಕಾರ | ಮೃದು

ತನದೊಳಿರುವ ಶಂಕರ ||2||

ಮಾಡೋ ಈ ಲೋಕುದಾಸಿನ |

ಬೇಡೋ ಶಿವಲೋಕೇಶನ |

ನೋಡೋ ಶ್ರೀಮಹಾಂತೇಶನ | ಬೇಗ

ಕೂಡೊ ನಿಜ ಪ್ರಕಾಶನ ||3||

ಬಯಕೆ ತುಂಬಿದ ಭಾವ | ನೀ

ಬರಕಿ ಖಾಲಿಯ ಮಾಡೋ |

ಸ್ವಯ ವಿನೋದ ಸಾಕು ಮಾಡಿ |

ಸಕಲ ನಿಷ್ಕಲಗೂಡೋ ||ಪಲ್ಲ||

ಆರು ಚಕ್ರವನೇರೋ | ಮುಂದೆ

ಮೂರು ಚಕ್ರವ ಮೀರೋ |

ಸಾರಿ ಶೂನ್ಯವ ಸೇರೋ | ಆ

ಕಠೋರದಾಚಿಲಿ ಹಾರೋ ||1||

ನಿನ್ನ ನೀನೇ ಅರಿಯೋ | ಮತ್ತೆ

ನಿನ್ನ ನೀನೇ ಮರಿಯೋ ||

ನಿನ್ನ ನೀನೆ ಬೆರಿಯೋ | ಎಲೊ

ನಿನ್ನ ನೀನೇ ಮರಿಯೋ ||2||

ಬಯಲು ಬಯಲಾಗೋ | ಆ

ಬಯಲು ಬಯಲು ನೀಗೋ |

ಬಯಲು ಮಹಾಬೈಲಾಗೋ | ನಿ

ರ್ವಯಲು ಮಹಾಂತನ ಯೋಗೋ ||3||

ಈ ಊರು ಅರವತ್ತು ಒಂದಾಗೆ ನಡೆದರೆ

ಈ ಊರ ಸರಿ ಸುರಪೂರಲ್ಲ |

ಈ ಊರಡವಿ ತನ್ನ ಬೇಕಾದದ್ದು ಬೆಳಿವದು |

ಆ ಊರ ಸುತ್ತ ಮರಡಿಯ ಕಲ್ಲ ||ಪಲ್ಲ||

ಗೌಡರು ಮೂವರು ಕಮತ್ತಗೇರಾರ್ವರು |

ನಾಲ್ವರ್ಹಾರ್ವರು ಹತ್ತು ಮನಗಾರರು |

ಜೋಡಾಗಿ ನಡೆವರಿಪ್ಪತ್ತೈದು ರೈತರು |

ಕಾಡದ್ಹನ್ನೆರಡಾಯಿಗಾರರು ||1||

ಮೂರ ಸುತ್ತಿನ ಕೋಟಿ ಆರಗಸಿಯ ಬಾಗಿಲ |

ಮೂರ್ದಿಡ್ಡಿ ನಾಲ್ಕು ಕಾದುವ ಕೊತ್ತಲ |

ಚೋರವರ ಒಳಗಿರಿಸದೆ ಹೊರ ನೂಕಿ

ಪಾರೆ ತಿರಗುತ ಕಳಿ ಕತ್ತಲ ||2||

ಕೊಡುವಂಥದೆ ಕೊಟ್ಟು ಕೊಳುವಂಥದೆ ಕೊಂಡು |

ನಡಿವದೆ ನುಡಿವದು ನುಡಿದದ್ದೆ ನಡಿವದು |

ಒಡೆಯ ಚಿಣಮಗೇರಿ ಮೃಡ ಮಾಂತೇಶನ |

ಅಡಿಗಳೋಲೈಸಿ ದಯ ಪಡೆದು ||3||

ಈತನೇ ಸಾಕ್ಷಾತ ತನ್ನನೇ ತಾ ತಿಳಿದಾತ |

ಶಿವದಾತ ಸರ್ವಾತ್ಮ ತಾನಾದಾತ ಈತ ||ಪಲ್ಲ||

ನೀತಿಯಲ್ಲಿ ನಡಿವಾತ |

ಸಂಪ್ರೀತಿಯಲ್ಲಿ ಇರುವಾತ |

ಭೀತಿಯನಳಿದಾತ ಪರಂ |

ಜ್ಯೋತಿಯ ಕಾಣುವಾತ ಈತ ||1||

ತ್ಯಾಗಿಯಾಗಿ ಇರುವಾತ ಭವ |

ರೋಗವ ಕಳಿದಾತ |

ರಾಗವ ಅಳಿದಾತ | ಶಿವ

ಯೋಗವ ತಾಳಿದಾತ ಈತ ||2||

ಹಮ್ಮು ಹರಿದಾತ ತಾ |

ಸುಮ್ಮನೆ ಇರುವಾತ |

ಒಮ್ಮನದಿ ಇರುವಾತ | ಪರ

ಬ್ರಹ್ಮವಾಗಿ ಇರುವಾತ ಈತ ||3||

ವೈರಿಗಿ ವೈರಾಗ್ಯದಾತ |

ಸಂಸಾರ ಸೇರದಾತ |

ಮಾರನ ಮೀರಿದಾತ | ಕ

ಠೋರ ಹಾರುವಾತ ಈತ ||4||

ಆಶೆಯವುಡಿದಾತ ನಿ |

ರಾಶೆಯ ಹಿಡಿದಾತ |

ಕ್ಲೇಶವ ಕಡಿದಾತ | ಮಹಾಂ

ತೇಶನ ಪಡಿದಾತ ಈತ ||5||

ಮನವು ನೆನವು ಘನವದಾವುದೋ |

ನೀ ಹೇಳುವದೊ ||ಪಲ್ಲ||

ತಾಳ ತಂತಿ ಸ್ವರವನ್ನು ನೋಡಿ |

ಮೇಳ ಮೃದಂಗವನ್ನು ಕೂಡಿ |

ಹೇಳಿ ಕೇಳಿ ವೇಳೆಗಳದಿ |

ಊಳಗಿದರೋಳೇನು ತಿಳದಿ ||1||

ಬಸವ ಕಲ್ಯಾಣಕೆ ಬಂದು |

ಪಸರಿಸಿದ ಪವಾಡವೆಂದು |

ಉಸರ್ವರಿನ್ನಾಸೆಕ ಬಿತ್ತು |

ಬಸರು ಹಸಿತು ಪುಸ್ತಕ್ಹೇತು ||2||

ಅಡಗಿದವರ ಹಾಡಿಕೊಂಬಿ

ಪೊಡವಿ ಜನರ ಬೇಡಿ ಉಂಬಿ |

ಒಡಲು ಸೌಖ್ಯಾ ಮೆರೆವದೇನು |

ಮಡಿವಾಳಾಖ್ಯ ವರೆದ ಖೂನ ||3||

ನಿನ್ನ ನಿಜವು ನೀ ತಿಳಿವಲ್ಲಿ |

ಬನ್ನ ಬಡುವದೇನು |

ಮಣ್ಣಗೂಡುವದೇ ಬಲ್ಲಿ ||ಪಲ್ಲ||

ಹಲವು ಜನ್ಮದಿ ತಿರುಗುತ ಬಂದಿ |

ಮಲತ್ರಯೊಳಗೆ ಮೋಹಿಸಿ ನಿಂದಿ |

ಹೊಲಿಯೊಳು ಹುಟ್ಟಲಿಕ್ಕೊಲ್ಲೆಂದಿಗಂದಿ |

ಕುಲ ಛಲದಿಂದ ಗೆದ್ದು ಹಿಂದಿಂದೇನು ತಂದಿ ||1||

ಇಲ್ಲದಂತದಕೆ ಆಶೆಯ ಮಾಡಿ |

ಕಲ್ಲುದೇವರಿಗೆ ಭಾಗ್ಯವು ಬೇಡಿ |

ನೆಲ್ಲಿಕಾಯಷ್ಟು ಸಕ್ಕರಿ ನೀಡಿ |

ಇಲ್ಲೇನರಸಿದಿನ್ನೆಲ್ಲಿಂದ ತಂದಿತು ಖೋಡಿ ||2||

ಧರಿಯೊಳಧಿಕ ಶ್ರೀಚಿಣಮಗೇರಿ | ಅಲ್ಲಿ

ಮೆರೆವ ಮಂದಿರ ಮಹಾಂತನ ಸಾರಿ |

ಅರವು ವಿಚಾರಿಸು ಉನ್ಮನಿಗೇರಿ |

ಕುರುಹು ಕಂಡರೆ ನೀನು ಮರಳಿ ಭವಕೆ ಬಾರೀ ||3||

ಅಳಳೊಟ್ಟಿ ಅಳಳೊಟ್ಟಿ ಅಳಳೊಟ್ಟಿ | ನೀ

ಬಳಲುವದ್ಯಾತಕೊ ಹುಚಗೊಟ್ಟಿ |

ಸುಳ್ಳೆ ನೀ ಮಾಡುದೆಲ್ಲ ಭ್ರಮಿ ಬಿಟ್ಟಿ |

ನಿನ್ನಂಗದೊಳಗೆ ಮೂರಾಬಟ್ಟಿ ||ಪಲ್ಲ||

ಹಟ್ಟದ್ಹಳ್ಳಕ್ಹೋಗುವದೊ | ನಿಂತು

ಹುಟ್ಟಿದ ಮಕ್ಕಳು ಸಾಹುವದೊ |

ಕಟ್ಟಿದ ಮನಿ ಬಿದ್ಹೋಗುವದೊ | ಹೊಲ

ನಟ್ಟನಗಸಲು ಬೀಳಾಗುವದೊ ||1||

ಅಟ್ಟುಂಡ್ಹೊರಯಕ್ಹೋಗುವದೊ | ನೀ

ತೊಟ್ಟುಟ್ಟಿದ್ಹರಕಾಗುವದೊ |

ಇಟ್ಟ ವಡವಿ ಸವೆದ್ಹೋಗುವದೊ | ಬ

ಚ್ಚಿಟ್ಟ ಬದುಕು ಬಯಲಾಗುವದೊ ||2||

ಭಕ್ತಿಯೆಲ್ಲ ಬತ್ತದ್ದೊ | ವಿ

ರಕ್ತಿ ಜಾರತ್ವದ್ದೊ

ಮುಕ್ತಿ ಮಾಯಿಗ್ಹತ್ಯಾದೊ | ಸ

ರ್ವಿಕ್ತಿ ಮಹಂತ ನಿತ್ಯಾದೊ ||3||

ಸಾಕ್ಷಿ ತಿಳಿಯೋ ನಿಜದಾ ಏ ವಾದೀ |

ಮೋಕ್ಷದಾಯಕ ವಿರೂಪಾಕ್ಷಗೇನಾದೀ ||ಪಲ್ಲ||

ಆವದರಿಂದಿದು ಆಯಿತು ಬ್ರಹ್ಮಾಂಡ |

ಮೂವರೊಳಗ ಹಾನೆ ಮೋಜಿನ ಪಿಂಡ ||1||

ನೋಡುವ ನಯನಕ್ಕೆ ನಾನಾ ಕಲಾಪ |

ಜೋಡಳಿದರೆ ಅದು ಜ್ಯೋತಿ ಸ್ವರೂಪ ||2||

ಲೋಲ ಶ್ರೀ ಬಿದನೂರ ಮಹಾಂತೇಶ |

ಲೀಲ ಮಡಿವಾಳಾಖ್ಯ ತಾನೇ ಸರ್ವೇಶ ||3||

ಆಯಿತ ಆಯಿತ ಆಯಿತಂತಿ |

ಆಗ ಮಾಡದೇ ನೀ ಕುಂತಿ |

ಹೋಯ್ತು ಹೋಯ್ತು ಹೋಯ್ತೋಯ್ತೆಂಬುದು |

ಹೋಗದೆ ಸುಳ್ಳೇ ಕುಂತಿ ||ಪಲ್ಲ||

ನೀರಡಿಕೆ ಆಯಿತಂತಿ | ನೀರ ಕುಡಿಯಲಾಕೆ ಕುಂತಿ |

ನೀರಡಿಕಿ ನಿನಗಾದ ಮೇಲೆ | ನೀರಿಂದಿನ್ಯಾಕೋ ಚಿಂತಿ ||1||

ಹಸಿವು ಎನಗಾಯತಂತಿ | ಹಸಿದು ಅಶನವೆ ತಿಂತಿ |

ಹಸಿವು ನಿನಗಾದ ಮೇಲೆ | ಅಶನದಿನ್ಯಾಕೊ ಚಿಂತಿ |2||

ರತಿಯ ಮೋಹ ಆಯಿತಂತಿ | ಸತಿಯಳ ಕಾಲ್ದಸಿಲೆ ಕುಂತಿ |

ರತಿಯ ಮೋಹವಾದ ಮೇಲೆ | ಸತಿಯಳದಿನ್ಯಾಕೊ ಚಿಂತಿ ||3||

ನಿದ್ರಿ ಎನಗಾಯಿತಂತಿ | ನಿದ್ರಿ ಜೋಕಿಸುತೆ ಕುಂತಿ |

ನಿದ್ರಿ ನಿನಗಾದ ಮೇಲೆ | ನಿದ್ರಿಸುವದಿನ್ಯಾಕೊ ಚಿಂತಿ | |4||

ಸೊಗಸು ಎನಗಾಯಿತಂತಿ | ನಗುತ ಮಹಾಂತೇಶನಂತಿ |

ಸೊಗಸ ನಿನಗಾದೆ ಮೇಲೆ | ಬಗಿಯುವದಿನ್ಯಾಕೊ ಚಿಂತಿ ||5||

ಕಾಲ ಒದಗಿ ಬರುವಷ್ಟತಿಗೆ ನಿನ್ನ |

ಕರ್ಮವು ತೀರಿರಬೇಕಪ್ಪ |

ಬಾಲಪ್ರಾಯ ಮುಪ್ಪಾಗುವತನಕ

ಆಯುಷ್ಯ ನೆಚ್ಚಿಕಿಲ್ಲಪ್ಪ ||ಪಲ್ಲ||

ಕರ್ಮವು ತೀರಷ್ಟ್ಹೊತ್ತಿಗೆ

ಸಂಶ್ರುತಿ | ಹತ್ತಿಡಬೇಕಪ್ಪ |

ಧರ್ಮ ವಿಚಾರದಿ ಬಯಕೆಯ ತೋರದ |

ಮರ್ಮವನರದಿರಬೇಕಪ್ಪ ||1||

ತನು ಮನ ಧನ ತ್ರಿವಿಧ ವಂಚನಿಲ್ಲದೆ |

ಘನ ಗುರುವಿಗೆ ಸಲ್ಲಿಸುವದಪ್ಪ |

ಅಣು ಹಿಡಿದಣು ಮಹತ್ವೇನಾದುದೆಂಬ |

ಅನುಭವ ಸಾಧಿಸುವದಪ್ಪ ||2||

ನಿರಂಕಾರ ನಿರಾಸತ್ವವೆ ನಿಜದರು |

ಯಿರು ಅರಮನಿ ತಾನಪ್ಪ |

ಮೆರೆವ ಚಿಣಮಗೇರಿ ಗುರು ಮಹಾಂತೇಶನ |

ಪರಮ ನಿರಂಜನ ನೀನಪ್ಪ ||3||

ಭವಮಾಲಿ ಎನಿಸುವ ಭವನೋಡೊ ಮನವೆ |

ಅವನಿಯ ಅವಯವದೊಳಿಹ |

ನವ ನವಗೂಡು ಘನವೆ ||ಪಲ್ಲ||

ಮೂರು ಮೂರು ಮೂರಾರ್ಹೌದು |

ಮುವ್ವತ್ತಾರಾಗಿಹುದು |

ನೂರು ಸಾಸಿರ ಮೀರಿ ಬೇರೆ |

ಆರಿಗಾರೆನಿಸುದೊ ||1||

ಎತ್ತ ನೋಡಿದಡತ್ತೆ ಅದು |

ಹತ್ತೆ ಮಾಡಿದರ್ಹತ್ತೆ |

ಒತ್ತಿ ಹಿಡಿದರೊತ್ತಿಲಿಹುದು |

ಮುತ್ತಲು ತನ್ನ ಸುತ್ತೆ ||2||

ತ್ರಾಸಿಗೂಸುರಲಿಲ್ಲ ಲೋ |

ಕೇಶ್ವರ ಸರಿಯೆಲ್ಲ |

ವಾಸ ಚಿಣಮಗೇರಿ ಮಾಂ |

ತೇಶ ಖಾಸನಲ್ಲ ||3||

ಆ ಯಮಧರ್ಮನೆ ಸಾಧುಯೆಲೊ |

ನೀ ಮಾಡಬೇಡ ವಿಪ್ರ ಭೇದವ ||ಪ||

ನಿಷ್ಠುರನಾಗಿ ಹಳಿವ ನೋಡುವ |

ಭ್ರಷ್ಟರನವ ಕಾಡುವ |

ಅಷ್ಟಾವರಣ ಹಿಡಿದಾಡುವ | ಅವ

ಶ್ರೇಷ್ಠರು ಬರೆ ಎದ್ದೋಡುವ ||1||

ಮಾತೆ ಮೃತ್ಯೇಶ್ವರನೆಂಬುವ |

ಬಾಯ ಬಡಿದು ಮನ ಕೊಂಬುವ |

ನಾಯಕ ನರಕ ತುಂಬುವ |

ಅವ ಸುಗುಣರಿಗೆ ಶಿವನೆಂಬುವ ||2||

ಸುಲಭ ಚಿಣಮಗೇರಿ |

ಸಲೆ ಮಹಾಂತೇಶನ ದಾರಿಯ |

ಒಲಿಸಲು ಹೌದು ಭೈರಿಗೆಯ | ಅವ

ಒಲಿಯುವ ತನ್ನ ತಾ ವೈರಿಯ ||3||

ಸುಳ್ಳೆಂಬುವರಿಗೆ ಹೊಯ್ಯಿ ಬಾಯಿ ಮೇಲೆ | ಸುವ್ವಾಲೆವ್ವಾ ಸುವ್ವಾಲೆ |

ಬೈವರ ಬೈಗಳು ಮುಯ್ಯ ಕೈಯ್ಯ ಮೇಲೆ

ಸುವ್ವಾಲೆವ್ವಾ ಸುವ್ವಾಲೆ ||ಪಲ್ಲ||

ಮಾಡಿದವರಿಗದು ಮಾಡಿದಷ್ಟಾಗುವದು |

ನೀಡಿದವರಿಗದು ನೀಡಿದಷ್ಟಾಗುವದು ||1||

ಕಾಡಿದವರಿಗದು ಕಾಡುವದೆ ಇರುವದು |

ಕೇಡು ಬಯಸಿದವರಿಗದು ಕೇಡೇ ಆಗುವದು ||2||

ಕೊಂದವರಿಗಿ ಕೊಲಿ ಎಂದಿಗಿ ತಪ್ಪದು |

ನಿಂದೆ ಮಾಡಿದವರಿಗೆ ಹಂದಿಯ ಜನ್ಮವು ||3||

ಬಾಯಿಗೆ ಬಂದಂಗೆ ಬೊಗಳುವ ಮಾನವರು |

ನಾಯಾಗಿ ಎಲವಾಯ್ದು ಹಾಳೂರ ಕಾಯುವರು ||4||

ಮಾನವಳಿದಾವ ಮಾನಿಲ್ಲದೆ ಹೋಗುವ |

ಧಾನ್ಯ ದಹಿಸಿದವ ಹಾನ್ಯೊ ಹಾನ್ಯಾಗುವ ||5||

ಲಂಚವ ತಿಂದವ ಹಂಚಾಗಿ ಹೋಗುವ |

ಸಂಚಿತ ಭೋಗವು ವಂಚಿಸಬಾರದು ||6||

ಸಂತಾನನಳಿದವ ನಿಸ್ಸಂತನಾಗುವ |

ಸಂತರ ಹಳಿದವ ಅಂತರ ಪಿಶಾಚಿ ||7||

ನಿಷ್ಠೆಯಿಲ್ಲದವನು ತಾ ನಷ್ಟಾಗಿ ಹೋಗುವ |

ದೃಷ್ಟಿ ಒಳ್ಳೇದಿಲ್ಲದವ ಭ್ರಷ್ಟ ತಾನಾಗುವ ||8||

ಬಡವರ ಬಗಿವಲ್ಲ ನಡುಗೂಲಿ ಸಿಗಲಿಲ್ಲ |

ಉಡುವವರ ಸೇರುವಲ್ಲ ಎಡವಿದುಂಗುಷ್ಟರವಿಲ್ಲ ||9||

ದೈವ ಮನ್ನಿಸುವಲ್ಲ ದೈವತ್ವ ತನಗಿಲ್ಲ |

ಸಾವಧಾನ ನುಡಿಯಿಲ್ಲ ನೋವು ತನ್ನ ಬಿಡಲಿಲ್ಲ ||10||

ತಾ ಪುಣ್ಯದವನಲ್ಲ ಪಾಪದ ಭಯವಿಲ್ಲ |

ಆ ಪರಶಿವ ಮಹಾಂತಪ್ಪನ ದಯವಿಲ್ಲ ||11||

ಜಡದೇಹಿ ನೀನಲ್ಲ ಜಡ ಆತ್ಮ ನಾನೆಂಬಿ |

ಜಡನ ಹೌದೆಂತಲೆ ಜೀವಾತ್ಮ |

ಜಡವಾಗ ಜಡಹೋಗಬಲ್ಲಡಾ ಜಡಜಡ |

ಜಡ ಜಡವಲ್ಲ ನೀ ಪರಮಾತ್ಮ ||ಪಲ್ಲ||

ಇಲ್ಲಾತ್ಮನೆ ನೀನಿದ್ದಾತ್ಮಾಗುವಿ |

ಇದ್ದಾತ್ಮನೆ ನೀನಿಲ್ಲಾತ್ಮಾಗುವಿ |

ಇಲ್ಲದ್ದೊಂದಿದ್ದದೊಂದಿದ್ದರೆ ಇದ್ದದ್ದು |

ಇಲ್ಲಾಗ ಬರದಿರೋದಾಗುವಿ ||1||

ಧರ್ಮ ಒಂದಾಗಲಿಕೆ ಕರ್ಮ ಹತ್ತಾದವು |

ಕರ್ಮವೊಂದಕೆ ಧರ್ಮ ಹತ್ತಾದವು |

ಕರ್ಮ ಹತ್ತರೊಳಗಾದ ಧರ್ಮ ಧರ್ಮೆ ಜಯ |

ಧರ್ಮ ಹತ್ತರಿಂ ಕರ್ಮ ಕರ್ಮೇಲಯ ||2||

ಧರ್ಮಾಗಬಲ್ಲುವಿ ಕರ್ಮಾಗಬಲ್ಲುವಿ |

ಧರ್ಮಾಗಿ ಕರ್ಮಾಗದಿದ್ದರೆ |

ಧರ್ಮವೆ ಧರ್ಮವು ಕರ್ಮವೇ ಕರ್ಮವು |

ಧರ್ಮ ಕರ್ಮಿಲ್ಲಾಗದಿರಬಹುದು ||3||

ಅರುವಾಗುವದಕ್ಕೆ ನೀ ಅರುವಾಗೊ ದಿನಸಾದಿ |

ಮರುವಿಗೆ ಮರುವಾಗೂ ದಿನಸಾದಿ |

ಅರುವಿನ ದಿನಸದು ಮರುವಾಗಬಾರದು |

ಮರುವಿನ ದಿನಸರುವಾಗೆಸದು ||4||

ಅರುಮರುವಾಗುವದು ಮರು ಅರುವಾಗುವದು |

ಅರುವು ತಾನಲ್ಲ ತಾ ಮರವಲ್ಲ |

ಅರುವು ಅರುವಾದರೆ ಅರುವು ಹರಿದಿರಬೇಕು |

ಮರುವಾದ ಮರುವು ಹೋಗದಿರಬೇಕು ||5||

ಅರುವಾಗ ಬಲ್ಲುವಿ ಮರುವಾಗ ಬಲ್ಲುವಿ |

ಅರುವು ಮರುವಾಗದಿದ್ದರೆ |

ಅರುವಿಗೆ ತಾನಧಿಕಾರಿಯೆಂದರೆ ಬೇರೆ |

ಮರುವಿಗೆ ಮತ್ತೊಬ್ಬನೆನಬೇಕೊ ||6||

ಅರುವಾದ ಸುಖವನ್ನು ಅರಿತೊಮ್ಮೆ ನೋಡಿದಿ |

ಮರುವಾದ ಸುಖವು ನೋಡದರಂತೆ |

ಅರುವಾದರರುವಾದಿ ಮರುವಾದರ ಮರುವಾದಿ |

ನೆರೆ ಆದರಾಗದಿದ್ದರಿಲ್ಲ ||7||

ರೂಪಾಗುವದಕೆ ರೂಪಿಗೇನನಬೇಕು |

ರೂಪಾಗೋ ರೂಪಾದಿ ಎಲೆ ಆತ್ಮ |

ರೂಪಾಗೋ ರೂಪು ನಿರೂಪಾದ ಮೇಲೆ |

ಪಾಪ ಪುಣ್ಯಗಳೆರಡೇನಾದುವು ||8||

ಸತ್ತದೊಂದ್ವಿನೋದ ಅತ್ತದೊಂದ್ವಿನೋದ |

ಸತ್ತದ್ದೆ ಅತ್ತದ್ದು, ಅತ್ತದ್ದೇ ಸತ್ತದ್ದು |

ಸತ್ತಾದರೆ ಚಿತ್ತಾಯಿತು, ಚಿತ್ತಾಯಿತು ಸತ್ತಾಯಿತು |

ಮತ್ತೊಂದಿದ್ಹ್ರೇಳು ಮಹಾಂತ ನೀನಲ್ಲದ್ದು ||9||

ಅಲ್ಲಂತ್ಯಾವದ್ಹೇಳಲಿ ನಾನು

ಹೌದಂತ್ಯಾವದ್ಹೇಳಲಿ |

ಅಲ್ಲೆ ಹೌದು ಹೌದೆ ಅಲ್ಲ |

ಬಲ್ಲ ಜಾಣರು ಬಲ್ಲಂತಿರಲಿ ||ಪಲ್ಲ||

ಶಾಸ್ತ್ರ ಓದಿ ಹೇಳೋದ್ಹೌದು |

ಶಸ್ತ್ರ ಹೋಯ್ದು ಹೇಳೋದ್ಹೌದು |

ಶಾಸ್ತ್ರೆ ಶಸ್ತ್ರ ಶಸ್ತ್ರೆ ಶಾಸ್ತ್ರ

ಶಾಸ್ತ್ರ ಶಸ್ತ್ರ ವಸ್ತು ಅಲ್ಲ ||1||

ಧರ್ಮ ಬಿತ್ತಿ ಬೆಳೆವದ್ಹೌದು |

ಕರ್ಮ ಹತ್ತಿ ಅಳಿವದ್ಹೌದು |

ಧರ್ಮೆ ಕರ್ಮ ಕರ್ಮೆ ಧರ್ಮ

ಧರ್ಮ ಕರ್ಮಕೆ ವರ್ಮೆನಿಲ್ಲ ||2||

ನಾವೇ ಐನೋರರೆಂಬುದ್ಹೌದು

ನೀವು ಭಕ್ತರೆಂಬುದುದ್ಹೌದು

ನಾವೇ ನೀವು ನೀವೇ ನಾವು |

ನಾವು ನೀವು ಮಹಾಂತೇಶನಲ್ಲ ||3||

ನ್ಯಾಯ ಹೇಳರಿ ಮಾನಾಡ ದೈವ ||ಪಲ್ಲ||

ಒಬ್ಬವಳ ಹೊಟ್ಟಿಲೆ ಇಬ್ಬರು ಹುಟ್ಟ್ಯಾರ |

ಒಬ್ಬರಿಗೊಬ್ಬರು ಹೋರ್ಯಾಡುತ |

ಒಬ್ಬನವನೊಬ್ಬ ಉಬ್ಬುಬ್ಬಿ ಬೈವಾಗ |

ಇಬ್ಬರ ಹೇಳುವದಲ್ಲ ಒಬ್ಬವನ ತೋರಿರಿ ||1||

ಸೂಳಿಯ ಮಕ್ಕಳು ಏಳೇಳು ಲೋಕವು |

ಕಾಳಗದಲಿ ಬಂದು ಕಾದುತಲಿ |

ಸೂಳೆ ಮಕ್ಕಳಿಗೆ ಸೂಳೆ ಮಕ್ಕಳೆಂಬ |

ಸೂಳೆ ಮಕ್ಕಳಿಗೆ ಸೂಳೆ ಮಕ್ಕಳು ||2||

ಷಂಡನ ಸುಗಡಿಗೆ ಗಂಡನ ಮಾಡಲು |

ಗಂಡಗೆ ಗಂಡಾಸ್ತಾನಿಲ್ಲೆಂಬುವಳು |

ಪುಂಡ ಮಹಾಂತನ ಮುಡಿಗೆ ಸಾಕ್ಷಿಯಾದ |

ಕಂಡ ಮಾತಿಗೆ ಬಹಳ ಭಂಡಾಟವ್ಯಾತಕೆ ||3||

ಬ್ರಹ್ಮಯೆಂಬುವದದು ಬ್ಯಾರಿಲ್ಲ |

ಬ್ರಹ್ಮವೇ ತಾನಹುದೀ ಭುವನವನೆಲ್ಲ ||ಪಲ್ಲ||

ಅಷ್ಟತನುವಿನ ಮರಿವಳಗಾದೆ |

ಅಷ್ಟಮದಗಳ ತಳಿದುಳಿದಾದೆ ||

ಅಷ್ಟಪಾಶಕೆ ಸಿಕ್ಕು ಮಿಕ್ಕ್ಯಾದೆ | ಅದು

ಅಷ್ಟಪರ್ವತಕ್ಕಿಂದತಿ ಸ್ಥೂಲ ಬಹು

ಕಷ್ಟ ಬಿಡಿಸುವ ಕಾಲಗೆ ಕಾಲ | ಅದು

ಇಷ್ಟು ಸಾಸಿವಿ ಸಾವಿರ ಪಾಲ ||1||

ಯೋಗಿ ಭೋಗಿಯು ತಾನಾಗ್ಯಾದೆ |

ಆಗಮಗಳಿಗೆ ಅಣಕಿಸುತಾದೆ |

ತೂಗೊ ತೊಟ್ಟಿಲೋಳೋಲ್ಯಾಡುತಾದ | ಅದು

ಹ್ಯಾಗೊಯೆಂದರೆ ಬಂಧನ ಭಾರ | ನಾ

ಬೇಗ ತಿಳಿವೇನಂದರೆ ಘೋರ | ಈ

ಭೂಗಗನದೊಳು ತುಂಬ್ಯಾದ ಪೂರ ||2||

ಆರು ಮೂರೆರಡಳಿದೊಂದೆ ಆದೆ |

ವಿೂರಿ ಅಗಣಿತ ತೋರುತಲಾದೆ |

ಬಾರೆನುತ ಕರದಾರೋ ಎನುತಾದೆ | ಅದು

ಆರಿಸಿ ನೋಡಲು ಕಾಣುವದಿಲ್ಲ | ವಿ

ಸ್ತಾರ ಹೇಳಲು ಬಾಯಿಗೆ ಬೆಲ್ಲ | ಬಿದ

ನೂರ ಮಡಿವಾಳ ದೇಸಿಕ ಬಲ್ಲ ||3||

ಮೃಢ ಮಹಾಂತೇಶನ ಬೆಡಗಿನ ನಿಜಸುಖ |

ಹುಡಕಿ ಪಡೆದ ಮಡಿವಾಳ ಯೋಗಿ |

ಪೊಡವಿಯೊಳಗೆ ಅರುಪಡೆದು ಸಮಸ್ತಕೆ |

ಹೊಡವಡುವೇನು ಇದೇ ತಲೆ ಬಾಗಿ ||ಪಲ್ಲ||

ಮೇಲುಗಿರಿಗೆ ಹೋದಾ ಲೋಕದವರ ಕಾಲಿಗೆ

ಬೀಳುವದ್ಹ್ಯಾಂಗಲ್ಲೆ |

ಈ ಲೋಕದ ಗಣ ಸಾಲದೆ ಶರಣ್ಹೋಗೆ

ಮೂಲೋಕವು ಅದು ತನಗಿಲ್ಲೆ ||1||

ಚತುರ ಸಿಂಹಾಸನ ಪತಿಗಳು ಪದಯುಗ

ಧೃತ ರಜ ಫಣಿ ತಿಲಕವನಿಟ್ಟೆ |

ನುತಶೆಡು ಕೋಟ್ಯಾಧಿಪತಿಗಳ ಮತ್ತೋರ್ಜಿತ |

ನೀತಿ ಕೀರ್ತಿಗೆ ಕಿವಿ ಕೊಟ್ಟೆ ||2||

ಹಿರಿತನದವರುಟ್ಟರೆ ಹರಿದೊಗೆದೊಸನವ |

ಭರದಿ ಸೆಳೆದು ಮೈಗ್ಹೊದಕೊಂಡೆ |

ಪರಿ ಪರಿ ಬಹುಬಗಿಯ ಮೆರೆವ ಮಹಾಂತರ |

ಚರಣರಕ್ಷಿ ಕಣ್ಣಿಲಿ ಕಂಡೆ ||3||

ತಾನೆ ಬಯಲಾಗುವದೊ ತನ್ನೊಳು |

ತಾ ತಿಳಿದ್ಹೋಗುವದೊ |

ತಾನೆ ನಾನು ನೀನೆಂಬೋಸಾರವ ತಿಳಿದ ಮೇಲೆ ||ಪಲ್ಲ||

ಚಿಕ್ಕವರೆಲ್ಲರು ಕೂಡಿ ಚಿಕ್ಕನೆ ಗ್ರಾಮವನು ಮಾಡಿ |

ಫಕ್ಕನೆ ಹೆತ್ತವರು ಅತ್ತ ಕರಿಯಲು |

ಆಟವೆಲ್ಲ ಲೊಳಲೊಟ್ಟಿ ಆಗಲು ||1||

ಡೊಂಬರೆಲ್ಲರು ಕೂಡಿ ಬೊಂಬಿ ಆಕಾರವ ಮಾಡಿ |

ಅಂಬರದೊಳಗೆ ಗಿಮಿಗಿಮಿ ತಿರುಗುತೆ |

ಸಂಭ್ರಮಾಗಲು ಸರಿದು ಹೋಗಲು ||2||

ಫಲವನೆಲ್ಲವ ಹರಿದು ತಾ ನಲಿದು ಮಟ್ಟಿಯನು ಬಿಗಿದು |

ಸಲೆ ಮಹಾಂತೇಶನು ಮಟ್ಟಿಯನುಳಿಸಲು |

ನೆಲೆಯಿಲ್ಲದೆ ತಾ ನೆಲೆಗಾಣೆಲೊ ||3||

ಯಾವನೋ ಮಹಾ ಮಹಾಂತ

ಬ್ಯಾಡೋ ಬಹುಭ್ರಾಂತ |

ಆದದ್ದೆಲ್ಲನು ತಾನೆ

ನಿನಗ್ಯಾಕೋ ಏಕಾಂತ ||ಪಲ್ಲ||

ಪಹಿಲೆ ಹುಟ್ಟಿದವನ ಹೆಸರು

ಇಟ್ಟವರ್ಯಾರು ಹೇಳು |

ಸೋಹಂ ಎಂಬ ಅರ್ಥವು

ನಿನಗೆ ತಿಳಿಯದಿದ್ದರೆ ಕೇಳು ||1||

ಬ್ರಹ್ಮವೆಂದು ಕೂಗುತಾವ

ಬಲ್ಲವೇನೋ ವೇದವು |

ಬ್ರಹ್ಮ ತಾ ಮುಂಚಿದ್ದ ಮೇಲೆ

ವೇದ್ಯಾಂಗ ಬಲ್ಲಾದವೋ ||2||

ಬ್ರಹ್ಮ ತಾ ತಾನಾಗುವದಕ್ಕೆ

ವೇದ ಅಗಣಿತ ಆದಾವೊ |

ಬ್ರಹ್ಮಾನಂದ ಆದೆನೆಂಬೋ

ಯೋಗಿಗೆ ಏನಾದವೋ ||3||

ನಾಮ ಆತಗೆ ಇರಬೇಕಾದರೆ

ಅಕ್ಷರ ಯಾರಿಂದಾದಾವೋ |

ಆ ಮಹಾತ್ಮನಿಂದಾದಕ್ಷರ

ಆತಗ ನಾಮ್ಯಾಂಗಾದಾವೋ ||4||

ಪಂಚಮುಖ ಸಹಸ್ರಮುಖ

ಅನಂತಮುಖ ಆಗಮಸಿದ್ಧಿ |

ವಂಚನ ಇದ್ದ ಮೇಲೆ

ನಿನಗೆ ಆಗುವದ್ಹ್ಯಾಂಗೋ ಶುದ್ಧಿ ||5||

ಒಂದೇ ಮಂತ್ರ ಒಂದೇ ಜಪವು

ಒಂದೇ ಮನ ಸಾಕಾಗದೆ |

ಸಂದೇಹದಲ್ಲಿದ್ದು ಇದ್ದು

ಸತ್ತುಹೋಗಿ ಜನ್ಮ ನೀಗದೆ ||6||

ವಸ್ತು ನೋಡುವೆವೆಂದು | ಕಣ್ಣು

ಕಿಸ್ತು ನೋಡುತ್ತಿದ್ದಿರೋ |

ವಸ್ತು ನೋಡುವವನ ತಾವೆಲ್ಲಿ

ಬಚ್ಚಿಟ್ಟುಕೊಂಡಿದ್ದಾರೋ ||7||

ಕಂಡವರ ಕಂಡುಂಡುಟ್ಟು

ಎಲ್ಲಾ ಇಲ್ಲೆ ತೊಟ್ಟು |

ಪುಂಡ ಲೆಂಡ ಷಂಡತನವನು

ಎಲ್ಲಾ ಇಲ್ಲೇ ಬಿಟ್ಟು ||8||

ಡಂಭಕರ ಆಡಂಬರ ಕಂಡು

ನಂಬುದಾಯಿತಲ್ಲವೋ |

ಡಂಭಕತನವಂದ್ಹೋದಮೇಲೆ

ಇಂಬು ತನಗಿಲ್ಲಾದವೋ ||9||

ಹರಿಹರರೆಂಬ ಮತವ ಹಿಡಿದು

ಮಥನ ಮಾಡಿ ಪೋದಾರೋ |

ಹರಿಹರ ಅವರ್ಹ್ಯಾಂಗೇ ಇರಲಿ

ತಮ್ಮಾ ನಿನ್ನನ್ನೇ ನೀ ತಿಳಿಕೋರೋ ||10||

ಕಂಜನೆಂದರೆ ಕಂಜನಾದಿ

ಕುಂಜನೆಂದರೆ ಕುಂಜನಾದಿ |

ನಂಜುಂಡನೆಂದರೆ ಅದು ಖಂಡರ್ಥ

ಮುಂದಕ್ಕೆ ನಡಿಯುವ ಧಂದಿ ||11||

ಬಸವ ಎನಗೆ ತಾಯಿ ತಂದಿ

ಬಂಧುವೆಂದು ಸಾರಿದಿ |

ಬಸವ ಪುರಾಣ ಶಿವಪೂಜೆ ಗಂಟು

ಯಾವನ ಮ್ಯಾಲೆ ಹೇರಿದಿ ||12||

ಸ್ವಾಮಿ ಸ್ಮರಣಿ ನೇಮಿಸಿ ನೀನು

ಪರವಶದೊಳಗಾದೇನಂದಿ |

ಕಾಮಿತಾರ್ಥವು ಕೊಡಬೇಕಾದರೆ

ಸ್ವಾಮೀ ಬಂದರೆ ಏನಂದಿ ||13||

ಬಲ್ಲವರು ಕೇಳುವದಲ್ಲಾ

ಅರಿಯದವರಿಗೆ ಹೇಳುವದಲ್ಲಾ |

ಎಲ್ಲಿ ಇಲ್ಲದಂಥಾದ್ದೊಂದು

ಏನೋ ತಾನೇ ಆಗ್ಯಾದಲ್ಲಾ ||14||

ದಡ್ಡನಾಗಿ ದೊಡ್ಡ ಗುಡ್ಡದ

ಯೋಗಿ ಎಂದು ನಲಿದಿ |

ದಡ್ಡನಲ್ಲಾ ಶಹಣೇನಲ್ಲಾ

ಮೊದಲೇ ತಾನೇ ಇಲ್ಲವೋ ||15||

ಗಡಗಿ ತೊಳೆದು ಅಡಿಗಿ ಮಾಡಮ್ಮಾ | ತನು

ಗಡಗಿ ತೊಳೆದು ಅಡಿಗಿ ಮಾಡಮ್ಮಾ ||ಪ||

ಅನುಭಾವದಡಗಿಯ ಮಾಡಿ ಎಡಿಯ ಮಾಡಮ್ಮಾ |

ದೇವರಿಗೆಡಿಯ ಮಾಡಿ ಚರಗಂಡ ಗುಣಿಸಮ್ಮಾ ||ಉ.ಪ||

ಕರ್ಮವೆಂಬ ಜೋಳ ಬೀಸವ್ವ | ನೀ

ಧರ್ಮ ಜಲಡಿಯಿಂದ ಹಿಟ್ಟ ಸೋಸವ್ವ |

ನಿರ್ಮಳಾತ್ಮ ನೀರ ಹಾಕವ್ವಾ | ನೀ

ನೇಮದಿಂದ ಕಣಕ ನಾದವ್ವಾ ||1||

ಗುರುಲಿಂಗ ಜಂಗಮ ಮೂರವ್ವ |

ಪರಸಾಕ್ಷಿ ಒಲಿಗುಂಡ ಹೂಡವ್ವ |

ಪರಿಪರಿ ಕಷ್ಟದ ಕಾಷ್ಟ ಸುಡುವವ್ವ |

ಹರಿದಾಡುವ ಮನಸಿಟ್ಟು ಕೂಡವ್ವ ||2||

ಸಂಚಿತ ಕರ್ಮದ ಹಂಚ ನಿಂದವ್ವ |

ಮುಂಚಲೆದ್ದು ಸ್ವಚ್ಛಾಗಿ ತೊಳಿಯವ್ವ |

ಹಂಚಿಕಿಲಿಂದ ಜ್ಞಾನದಗ್ನಿ ಉರಿಸವ್ವ |

ಸಂಚಿನಿಂದ ಪರ ರೊಟ್ಟಿ ಬೇಸವ್ವ ||3||

ಭಕ್ತಿ ಎಂಬ ಭತ್ತ ಕುಟ್ಟವ್ವ | ನೀ

ಖಟ್ಟ ಅಕ್ಕಿ ಹಿಡಿದು ಹೊಟ್ಟ ತೆಗಿಯವ್ವ |

ನಿಷ್ಠೆಯಿಂದ ಅನ್ನ ಮಾಡಿ ಚರಗಂಡ ಗುಣಿಸವ್ವ |

ಶ್ರೇಷ್ಠ ಮಹಾಂತೇಶಗೊಲಿಸಿ ಮುಕ್ತಿ ಪಡಿಯವ್ವ ||4||

ಕೇಳೋ ಜಾಣ ಜ್ಞಾನದಿಂದ ಶಿವಧ್ಯಾನ ಮಾಡಣ್ಣ ||ಪ||

ಗರ್ವ ಅಹಂಕಾರ ಖಲಾಸ ಮಾಡೊ |

ಕಾಮ ಕ್ರೋಧವನು ಕಡಿಯಾಕ ಮಾಡೊ |

ಖೊಟ್ಟ ಗುಣ ಸುಟ್ಟು ಬೂದಿಯ ಮಾಡೊ |

ಸಿಟ್ಟು ಬಂದರೆ ನಿಧಾನ ಮಾಡೊ |

ನಡಿ ನುಡಿ ಎಂಬುದು ಬಿಗುವು ಮಾಡಣ್ಣ ||1||

ಆರು ಶಾಸ್ತ್ರಗಳ ಸಿದ್ಧಿಯ ಮಾಡೊ |

ಹದಿನೆಂಟು ಪುರಾಣ ಪಠಣ ಮಾಡೊ |

ರೊಕ್ಕ ನೋಡಿ ನೀ ವ್ಯಾಪಾರ ಮಾಡೊ |

ಎಂಟೆಂಟು ದಿನಕ್ಕೊಮ್ಮೆ ಸಂತಿಯ ಮಾಡೊ |

ಹುಣ್ಣಿ ಅಮವಾಸಿಗೆ ಒಂದತ್ತು ಮಾಡೊ |

ಹಸ್ತು ಬಂದವರಿಗೆ ಅನ್ನವ ನೀಡಣ್ಣ ||2||

ದಾನ ಧರ್ಮ ಪರ ಉಪಕಾರ ಮಾಡೊ |

ನಾಡಿಯ ನೋಡಿ ವೈದ್ಯವ ಮಾಡೊ |

ಹೆತ್ತ ತಾಯಿ ತಂದಿಯ ಪೂಜೆಯ ಮಾಡೊ |

ಅತ್ತಿ ಮಾವಗ ಮರ್ಯಾದೆ ಮಾಡೊ |

ಮನಿ ಬಿಚ್ಚಿ ಮ್ಯಾಲ ಮಾಳಿಗೆ ಮಾಡೊ |

ನಿನ್ನೊಳಗ ನೀ ವಿಚಾರ ಮಾಡಣ್ಣ ||3||

ಬೆಳ್ಳಂ ಬೆಳತನ ಭೋಗವು ಮಾಡೊ |

ಬೆಳಗು ಮುಂಜಾನಿ ಗುರು ಭಜನಿಯ ಮಾಡೊ |

ವೈರಿ ಕಂಡಲ್ಲಿ ಧೈರ್ಯವ ಮಾಡೊ |

ಸರಕಾರ ಕಂಡಲ್ಲಿ ಸಲಾಮು ಮಾಡಣ್ಣ |

ಹೊತ್ತು ಮುಣಗಿದಲ್ಲಿ ವಸ್ತಿಯ ಮಾಡೊ

ಧರಿಯೊಳು ಕಡಕೋಳ ಮುಕ್ಕಾಂ ಮಾಡಣ್ಣ ||4|||

ಕಲ್ಪಿತವು ನಿನಗ್ಯಾಕೊ ಕಂದ |

ನಿರ್ವಿಕಲ್ಪಿತವು ತಾ ಬ್ರಹ್ಮಾನಂದ ||ಪಲ್ಲ||

ಒಂದೆಂಬೊ ಸಂದೇಹವೇನೊ ಇದು ಒಂದೆಂಬೊ ಸಂದೇಹವೇನೊ

ಅದು ಏಸೊಂದಾಗುವದಿಲ್ಯಾಕ ತಾನೊ ||1||

ವೇದ ವೇದ ವೇದಾಂತವು ಮಿಥ್ಯ |

ನೀನು ಸಾಧಿಸುವದೇನಾದೊ ಸತ್ಯ ||2||

ಸತ್ಯ ಸುಲಭ ಶ್ರೀಗುರು ಮಹಾಂತ ಅಲ್ಲ |

ಮಹಾ ಚಲುವ ಮುಕ್ತಿ ಎಂಬುದೇನಿಲ್ಲ ||3||

ಓ ಎಂಬುವ ದನಿ ತೋರುವದೇನೊ | ಅಲ್ಲಿ

ಬಾಯೆಂಬೊ ಕರ್ತ ಯಾಂವ್ಹನೊ ||ಪಲ್ಲ||

ಕರೆದರೋಯೆನುವದು ಖರೆಯೊ | ತನ್ನ

ಕರೆದಂವ ಯಾಂವ್ಹನೊ ನಾನದನರಿಯೆ ||1||

ತನ್ನನ್ನೇ ತಾ ಕರಕೊಂಬುತಾನೆ | ಮತ್ತೆ

ತಾನಿದ್ದಿರಲದೋಯೆಂಬ ||2||

ಸ್ವಯವೇ ಶ್ರೀಗುರು ಮಹಾಂತೇಶ | ಕೇಳೊ

ಕ್ರಿಯವೇ ತಾ ಕರ್ಮೋಪದೇಶ ||3||

ಇಲ್ಲೆ ನಿಜ ನಿರ್ವಯಲೋಳು | ತೋರಡಗುವ

ಹುಸೀ ಸ್ವಯಂಭು ತಾನೆ |

ಎಲ್ಲ ರಸಾದ್ರ ವಿಚಿತ್ತ ಕರಣ |

ನೆರಳೆಂಬು ಗುರಳಿ ಜಗ ತಾನೆ ||ಪಲ್ಲ||

ತಾನೆ ಮಹದಾಕಾಶ ಗಗನ ಗುಂಹೆ ಗುಪ್ತ್ತ |

ಅನಾಮಿಕ ತಾನೆ |

ಮಿಸಕು ಸ್ಯಂದೋಳು ನಾ

ಹತ್ತ ರೇಣಣು ಮಹ ಮಹಾತ್ತಾನೆ ||1||

ತಾನೆ ಚಿತ್ಕಳೆ ಚಿನ್ನಾದ ಚಿದ್ಬಿಂದು |

ಎನಿಸುವದು ತಾನೆ |

ತಾನೆ ಅಸ್ತಿ ಭಾತಿ ಪ್ರೀತಿ |

ಅತಿಥಿ ಆದದ್ದು ತಾನೆ ||2||

ಕನ್ನೆ ಶೂನ್ಯರಾಕೃತಿ ಸುಪ್ತ ಭುಜಂಗ |

ಸ್ವರೂಪವು ತಾನೆ |

ಓಂ ನಮಃಶಿವಾಯ ಸಿದ್ಧಂ ಅಂಅಃಳ |

ಕ್ಷರ ಕ್ಷರವು ತಾನೆ ||3||

ಆದಿ ಅನಾದಿ ಸುರಾಳ ನಿರಾಳೆಂದನು |

ಪಮಂ ನಿರೂಪಂ ತಾನೆ |

ವೇದಾಗಮ ಶಾಸ್ತ್ರುಪನಿಷದ್ದೆಂತ್ರವು |

ಮಂತ್ರವು ತಂತ್ರವು ತಾನೆ ||4||

ಒಂದೆರಡ್ಮೂರು ನಾಲ್ಕೈದಾರೇಳೆಂ |

ಟೊಂಬ್ಹತ್ತು ತಾನೆ |

ಮುಂದ್ಹತ್ತು ಶತಸಹಸ್ರ ಅನಂತ |

ಸಂಖ್ಯಗಣಿತಾ ಗಣಿತವು ತಾನೆ ||5||

ತೃಟಿಘಟಿಕಾಲೋ ಎಲೊ ಯುಗ ಜುಗ |

ಪ್ರಳಯ ಪ್ರಳಯವು ತಾನೆ |

ಸ್ಫಟಿಕ ಘಟಾಂತರ ಜ್ಯೋತಿಯೋಳೆಸೆವ |

ತೇಜೋರಾಶಿಯು ತಾನೆ ||6||

ತನು ಕರಣೇಂದ್ರಿಯು ಪ್ರಾಣ ಪ್ರಕೃತಿ |

ಪರಿಪೂರ್ಣವಯವು ತಾನೆ |

ತನ್ಮಯ ಚಿನ್ಮಯ ನಿರುಪಾದಿ ರೂಪಾದಿ |

ಸಹಜ ಸಹಜವು ತಾನೆ ||7||

ದೃಗಮನಭಾವ ವಸ್ತು ಮುದ್ರ |

ಲಕ್ಷಾ ಲಕ್ಷವು ತಾನೆ |

ಬಗೆ ಬಗೆ ಚಿತ್ರ ವಿಚಿತ್ರ ದಶಾಂಗುಲ |

ಪ್ರಮಾಣ ಪ್ರಮಾಣವು ತಾನೆ ||8||

ಕುರುಡ ಕುಂಟಾದರು ಕರಚಲ್ವಾದರು |

ಮರಣರುವಿಲ್ಲವು ತಾನೆ |

ಬರೆಮೈಯಿದ್ದರು ಜರತರ ಹೊದ್ದರು |

ತಿರಿತನ ಧೊರಿತನ ತಾನೆ ||9||

ಘಳಿಗಳಿಯಲು ಸ್ಥಿರವಾಗುಳಿಯಲು |

ಅಳಿಯುವದು ಉಳಿಯುವದು ತಾನೆ |

ಕರಿಮುರಿ ಕರವಿಗೆ ಒಪ್ಪುವ ತಿಪ್ಪಿಗೇ |

ದ್ವಾದಶಕ್ಕೆ ದೋಷನು ತಾನೆ ||10||

ಹುಟ್ಟದ ಮೊದಲಿನದು ಸತ್ತಾಯ್ತು

ಸತ್ತದ್ದು ಹುಟ್ಟಿದ್ದು ತಾನೆ |

ಹುಟ್ಟೋದು ಸಾಯುದು ಭ್ರಾಂತಿಗೆ ಭ್ರಾಂತಿ

ಭ್ರಾಂತಾಭ್ರಾಂತವು ತಾನೆ ||11||

ತಾನೇ ನೀನು ನೀ ತಾನಲ್ಲ ನೀ |

ತಾನಾಗದು ಇಲ್ಲ ತಾನೆ |

ತಾನಾದರಿದು ತಾನಾದ್ದರಿಯದು

ಏನೋ ತಾನಲ್ಲ ತಾನೆ ||12||

ಭುವನದೊಳೊಪ್ಪುವ ಕಡಕೋಳ ಗುಡ್ಡದ

ಮಹಂತಪುರ ಪತಿಯು ತಾನೆ |

ತವನಿಧಿ ನಿಜಸುಖ ಸುಧಾಬ್ದಿ

ಚಂದ್ರಮಭಿ ಮುಕ್ತಾದತಿ ತಾನೆ ||13||

ನೋಡೆ ಆತಪವಾರ್ಧಿ ಇದ್ದದ್ದು ಇಲ್ಲದ್ದು |

ನಾಡ ಹಗರಣವಿದು ಹೌದಾದೊ ಅಲ್ಲಾದೊ ||ಪಲ್ಲ||

ಕ್ಷಣ ತಾಸು ದಿನಮಾಸು |

ಎಣಿಸೊ ಬಹು ಯುಗಗಳೇಸು |

ಅಣುರೇಣು ಜಗವೇಸು |

ಗುಣಿಸು ಭಾಗಿಸು ಓಸು ||1||

ಅದೆ ಬ್ರಹ್ಮವಾಯಿತು ಬಂದು |

ಇದೆ ಹಮ್ಮು ಇದು ದ್ವಂದು |

ಅದು ಇದು ಅಲ್ಲೆಂದು |

ಚದುರೆ ನೀ ತಿಳಿ ಮುಂದು ||2||

ಬಿಸಲ ದೊರೆ ನೀರಿಗೆ |

ತೃಷೆಯಿಂದ ಮೃಗ ಹೋಗೆ |

ಅಸುವಳಿದ್ಹೋಯ್ತು ಹ್ಯಾಗೆ |

ಉಸರಲೇನದು ಈಗೆ ||3||

ದೂರಲು ತೋರಿತು |

ಸಾರಲು ಸಾರಿತು |

ಮಾರಿಗೆ ವಿೂರಿತು |

ಬ್ಯಾರ್ಯಾಗಿ ಬೀರಿತು ||4||

ಅಲ್ಲಿಯೂ ಬಿಸಲಲ್ಲೆ |

ಇಲ್ಲಿಯೂ ಬಿಸಲಲ್ಲೆ |

ಎಲ್ಲ ಮಾಂತನಲ್ಲೆ |

ಅಲ್ಲೆ ನಿಮ್ಮಂತೀಲೆ ||5||

ಆಡಬಾರದ ಮಾತ ಆಡಿದೆ ನಿನಗೊತ್ತು |

ನೋಡಲಾದು ಧಾತು ನಾಡೆಲ್ಲ ಹಬ್ಬೀತು ||ಪಲ್ಲ||

ಬಾಯಿಲ್ಹೇಳುವದಲ್ಲ ಕಿವಿಗೆ ಕೇಳುವದಲ್ಲ |

ಮೈಗೆ ಮುಟ್ಟುವದಲ್ಲ ಕಣ್ಣಿಗೆ ಕಾಣುವದಲ್ಲ ||1||

ಕಾಲಿಂದ ನಡಿಯೋದಲ್ಲ ಕೈಲಿಂದ ಹಿಡ್ಯೋದಲ್ಲ |

ಸೋಲು ಗೆಲುವದಲ್ಲ ಕೂಡಲಿಕ್ಕೆರಡಲ್ಲ ||2||

ಮನವು ನೆನವುದಲ್ಲ ಮನಕೆ ತಾ ಬ್ಯಾರ್ಯಲ್ಲ |

ಘನಕೆ ಗೋಚರವಲ್ಲ ತನಗೆ ತಾ ಮಹಾಂತಲ್ಲ ||3||

ಅಪೂರ್ವ ಎನಗಿಹುದು ಅಪರಂಪಾರಾಯಿತು |

ನಿಪುಣರಿಗಹುದಲ್ಲೋ ಅಪೂರ್ವ |

ಗುಪಿತದಿ ಗುರುಪುತ್ರರು ಸುರೆ ಸೇವಿಸಿ |

ಜಪತಪ ಮಾಡುವದೊಂದಪೂರ್ವ ||ಪಲ್ಲ||

ಸಡಗರದ ಸಂಪತ್ತು ಮಡದಿ ಮಕ್ಕಳ ಬಿಟ್ಟು |

ಒಡಲಿಗೆ ತಿರಿದುಣುವದೊಂದಪೂರ್ವ |

ತಡಬಡಿಸುವ ಮನ ತಡಿಯದೆ

ತಾಮಸಿ ದೃಢವೃತ ನಡೆಸುವದೊಂದಪೂರ್ವ ||1||

ಒಡಲವಗುಣಗಳು ಕಡಿಯದೆ ಮಂತ್ರವ |

ಲೊಡಲೊಡನುಡೊದೊಂದಪೂರ್ವ |

ಪಡುಶಕ್ತಿಯೊಳೊಡಗೂಡದೇ ಮುಕ್ತಿಯ |

ಪಡೆವೆನೆಂಬೋದೊಂದಪೂರ್ವ ||2||

ಮನಿಯೊಳು ಮಾನಿನಿ ಮನವಲಿದನುವಿರೆ |

ಭಿನ್ನ ಸ್ತ್ರೀಯಳಿಗೆ ಹೋಗೋದೊಂದಪೂರ್ವ |

ತನುಮನ ಧನವನು ಘನ ಗುರುವಿಗರ್ಪಿಸಿ

ಅನುಮಾನಿಸಿದೊಂದಪೂರ್ವ ||3||

ಕನಸಿನ ರೋಗಕೆ ಕನಸಿನಲೆಚ್ಛತ್ತವಗೆ

ವೈದ್ಯನ ಕರಸೊದೊಂದಪೂರ್ವ

ತನಗೊದಗಿರೆ ನಿಜದನುಭವ ಸುಖ |

ತನುತಾಪ ಹೋಗುದೊಂದಪೂರ್ವ ||4||

ಪಾತ್ರಾ ಪಾತ್ರ ವಿಶೇಷವನರಿಯದೆ |

ಕ್ಷೇತ್ರ ಯಾತ್ರಿಗ್ಹೋಗುದೊಂದಪೂರ್ವ

ಮೂತ್ರಿಸಲಸಾಧ್ಹ್ಯೆಳವನಂಧಕ ತಾ |

ಜಾತ್ರಿಯ ಬಯಸುವದೊಂದಪೂರ್ವ ||5||

ನೇತ್ರತ್ರಯ ಮಹಾ ಮಹಾಂತನ ಸ್ತೋತ್ರಕ್ಕೆ |

ಶ್ರೋತವ ಕೊಡುವದೊಂದಪೂರ್ವ

ರಾತ್ರಿ ಬೀಳ್ಲಾದ್ರ್ಬಾವಿಗೆ ಹಗಲೆ ಕಂಡು

ಧೋತ್ಹ್ರಾಸ್ಹ್ಯಾರೊಂದಪೂರ್ವ ||6||

ತಾವೆರಡೊಂದಾದ ಸುಖ ಸಾಮ್ರಾಜ್ಯ |

ಮುವ್ವರೊಂದಾದನುಭವವೇ ಸಾಯುಜ್ಯ ||ಪಲ್ಲ||

ಸಾಲೋಕ್ಯ ಸಾಮಿಪ್ಯ ಸಾರೂಪ್ಯ ಆಪೇಕ್ಷಿ |

ಚಿಲ್ಲಾಳ ಶ್ರೀಯಾಳ ಚಂಗಳಿ ಸಾಕ್ಷಿ ||1||

ಚಿತ್ತು ಚಿದ್ರೂಪಾದರದು ಬಹು ಘೋರ |

ಚಿತ್ತು ಚಿತ್ತಾದರೆ ಚಿನ್ಮಯಾಕಾರ ||2||

ಬಲ್ಲನೊ ಮುಕ್ತೆಂದರೆ ಹಿರ್ರನೆ ಹಿಗ್ಗತಿ |

ಮೆಲ್ಲನೆ ಬರವಲ್ಲಿ ಸರ್ರನೆ ಸಗ್ಗತಿ ||3||

ಕಂಡ ಬ್ಯಾಟಕ್ಕಿಂತ ಕಿವಿ ಬ್ಯಾಟಗಳ ಅಗ್ಗಳವೊ |

ಕಂಡುಂಡವನೆ ಬಲ್ಲ ಅದರಳಲ ಬಳಲವೊ ||4||

ಕೆಡುವೆನೆಂಬವನ ವಾಕ್ಯಕೇನು ಪ್ರಮಾಣೆ |

ಕೆಡುವೆವೆಂದು ತಿಕ್ಕೆಗೊಂಡರೇನು ತನ್ನ ತ್ರಾಣೆ ||5||

ತಾ ನಿರಾಳಾಗೋದೆಂದಿಗೆ ಅರಿಯ |

ನೀ ನಿರಾಳಾಗೆಂಬೋದೆಂದೆಂದು ಮರಿಯ ||6||

ಸತ್ಕರ್ಮವೆಂದು ಮಾಡುವ ಬೆಟ್ಟದಷ್ಟು |

ದುಷ್ಕರ್ಮವಾಗುದು ಸುಖವಿಲ್ಲೆಳ್ಳಷ್ಟು ||7||

ಒಳ್ಳೇದ್ಹೊಲ್ಲಾದ ಮೇಲ್ಹೊಳ್ಳಾದಹುದೇ |

ಕಳ್ಳ ನಾಣ್ಯವು ಕಳವಳಿಕ್ಯಾಗದಿಹುದೇ ||8||

ಅಲ್ಲೆಂಬೋ ಶಬ್ದದರ್ಥಾಗದನರ್ಥ |

ಬಲ್ಲೆನೋ ಮಹಾಂತಪುರ ಮಹಾಂತ ಸಮರ್ಥ ||9||

ನಿರ್ಬೈಲೊಳು ಹುಸಿ

ನಿಲವು ತಾನಾಯಿತು ಹಲವು |

ಮಾಡುವದ್ಯಾತಕೆ ಕುಲ ಛಲವು

ಎಲ್ಲ್ಯಾದ ಫಲ ಪದವು ||ಪಲ್ಲ||

ರೂಪ ತಾನಾಯಿತು ಚಿದ್ರೂಪ |

ಶುಕ್ಲ ಶ್ರೋಣಿತ ಕೂಪ |

ತಾಪತ್ರಯದ ಮೂಕ ಸಂತಾಪ |

ಎಲ್ಲ್ಯಾದ ಸುಖ ರೂಪ ||1||

ಜೀವನ ನಿರ್ಜೀವನ ಸ್ವಭಾವ |

ಅದಕೆಲ್ಲ್ಯಾದ ಸಾವ |

ದೇವಾಧಿದೇವನವನ್ಯಾವ |

ತಿಳಿತೇನನುಭಾವ ||2||

ಒಡಲಾತ್ಮದೊಳಗೆ ತಾ ಮನಸು |

ಆಯಿತು ಬಹು ದಿನಸು |

ಮೃಢ ಮಹಾಂತೇಶ್ವರನೆಂದೆನಿಸು |

ಕನಕರಿಸುವ ಕನಸು ||3||

ಕ್ರಿಯೆ ನಿಷ್ಪತ್ತಿ ಜ್ಞಾನ ನಿಷ್ಪತ್ತಿ |

ಶೂನ್ಯ ಸಂಪಾದನೆ ಎಂಬೊ ಭಾವ |

ಆಯತವಾಯ್ತೆ ಪ್ರಮಥರಿಗೆ |

ಪ್ರಭುವಿನ ತಿಳಿ ಪೂರ್ಣನುಭಾವ ||ಪಲ್ಲ||

ಕಾಮವೆ ಕಾರಣ ಬಂದಸ್ತಿ ಮೂಲ |

ಕರ್ಮ ನಿರ್ಮಲಕ್ಕೆಂಥನುಕೂಲ |

ಸ್ವಾಯತವ ಮಾಡ್ಗಂಜಿ ಗೊಂಗಡಿಗೆ |

ನಾಡ ಮಾತಿನೊಳದೆ ಶೀಲ ಶೂಲ ||1||

ಶಿವನ ನಿಜ ತಿಳಿವುದೆ ಮಹಾಜ್ಞಾನ |

ತಿಳಿವವನಾದರ್ಯಾತರ ಧ್ಯಾನ |

ಭವಭವೆಂಬೊದೆಲ್ಲೆದೆಲ್ಲರಿಗೆ |

ಭ್ರಾಂತಿ ಕಲ್ಪಣೆಗಾಯ್ತನುಮಾನ ||2||

ಸರ್ವ ರೂಪಿಗೆ ಶೂನ್ಯಧಿದೈವ |

ಶೂನ್ಯ ಸಂಪಾದನಿಗ್ಯಾವ ಜೀವ |

ನಿರ್ವಯಲಾದ ಮಹಾಂತನಿಗೆ |

ಮರುವರಿವುದಕ್ಕಿನ್ನೆಲ್ಲದ ಕಾವ ||3||

ಎಲ್ಲ ಸ್ವರೂಪವು ತಾನಲ್ಲ ಬ್ರಹ್ಮವೆಂಬುದ ಸೊಲ್ಲ |

ಬಲ್ಲೆ ಬಲ್ಲನೆಂಬುದು ಭ್ರಮಿ ಹೊಲ್ಲ ನಾನು ನೀನಲ್ಲ |

ನಲ್ಲೆ ವೇದಾಗಮ ಓದಿದ ಜಾಣ ಸುಪ್ರವೀಣ

ಪೌರಾಣ ಬಹುರಾಣ ನಿಜವೆಂದಿಗಿ ಕಾಣ ||ಪಲ್ಲ||

ಮಾಯಿಯೆಂಬುದೆ ಮಹಾಂಕಾಳಿ ಗಾಳಿ ಗೋಪಾಳಿ

ಬಾಯಿಗೆ ಬಂದದ್ದೆ ಭೂಪಾಳಿ ರೂಪಿಲ್ಲದ ವಾಳಿ ||

ನ್ಯಾಯ ಅನ್ಯಾಯವಾಯಿತು ಆದದ್ದಾಯಿತ್ತು |

ಮೋಹವು ಮಾಯಿತು ಸುಳುವಿಲ್ಲದೆ ಹೋಯಿತ್ತು ||1||

ಸೂರ್ಯನ ರೂಪ ಸ್ವಲ್ಪಾಕಾರ ಬಿಸಲು ಅಪಾರ |

ಕಾರ್ಯಕಾರಣ ಕಿರಣ ಖೂರ ಇದು ತೋರಿ ತೋರ |

ಎಲ್ಲರಿಗೂ ಮಾಡಿದ ಹೊತ್ತು ಅವನ ಗೊತ್ತು ಯಾವಲ್ಲಿತ್ತು |

ತನ್ನ ಪತ್ತು ತನಗಿಲ್ಲ ಹೊತ್ತು ||2||

ಓಂ ಎಂಬುವದೊಂದೇ ಮಂತ್ರದ ಮೂಲ

ಷಟ್‍ಶಾಸ್ತ್ರದ ಜಾಲ ಆಯಿತಾ ಕಸಕಸಿ ಸಹಸ್ರ ಪಾಲ |

ಅದು ಅವಾಚ್ಯ ಲೀಲ ಏಐ ಎಂಬೋ ಅರುವು ಮಹಾಂತೇಶ |

ಮಹೇಶಾ ಸರ್ವೇಶ ಸುಪ್ರಕಾಶ ಸ್ವಪ್ನನಿವೇಶಾ ||3||

ತನ್ನ ವಿನೋದಕ್ಕೆ ತಾ ಹಲವಾದರೆ

ಬಣ್ಣಿಸಲ್ಯಾಕೆ ಮಹಾ ಮಹಾಂತೇಶ್ವರನ |

ಬಣ್ಣಿಸುವದು ತಾ ಹಲವಿನೊಳಲ್ಲದೆ |

ಮನ್ನಿಸು ನಿನ್ನೊಳು ಸರ್ವಾತ್ಮನ ||ಪಲ್ಲ||

ಕಾಯದ ಕಳವಳ ಕರುಣದೊಳಳಿದರೆ |

ಮಾಯೆಯ ಛಾಯೆಯ ಭ್ರಮೆ ಅದು ಸುಳ್ಳೆ |

ಮಾಯೆಯು ಛಾಯೆಯ ಭ್ರಮೆ ಸುಳ್ಳಾದರೆ |

ಆಯಸವ್ಯಾತಕ್ಕೆ ನೀ ತಿಳಕೊಳ್ಳೆ ||1||

ಅಲ್ಲ ತಾನೆ ತಾನು ತಾನೆ |

ಸೊಲ್ಲಡಗಲಿಬೇಕದೆ ನಿಜಭಕ್ತಿ |

ಸೊಲ್ಲಡಗಲು ನಿಃಶಬ್ದವೆ ಬ್ರಹ್ಮವು |

ಅಲ್ಲಿ ನಿಂದರೆ ಜೀವನ್ಮುಕ್ತಿ ||2||

ನಿರುಪಮ ನಿಃಕಲ ನಿರ್ಗಳ ನಿಚ್ಚಳ

ಸ್ವಯಂಭು ಚಿತ್ಪ್ರಭೆ ಅರುವಿನ ತಿರುಳೆ |

ತಿರುಳೊಳು ಬೆರೆತಿಹ ಗುರ್ತವ ಮರ್ತರೆ |

ಅದರರ್ಥವು ನಿರುತಲೆ ಗುರು ಮಹಾಂತ ||3||

ಬ್ರಹ್ಮೇತಿ ಬ್ರಹ್ಮೇತಿ ಈ ಬ್ರಹ್ಮಾಂಡಿರು ಪರ್ಯಂತರ

ನಿಮಗದು ಬ್ರಹ್ಮೇತಿ ಬ್ರಹ್ಮೇತಿ ||ಪಲ್ಲ||

ಮಾನ್ಯವಂತ ಮನ್ನಣಿ ಸತ್ಕುಲ ಧನಧಾನ್ಯ |

ಅನ್ನ ಸಂಪನ್ನ ಸೌಖ್ಯರಿಗೆ ||

ಮಾನವಂತ ಮನ್ನಣಿ ಸತ್ಕುಲ ಧನಧಾನ್ಯ |

ಅನ್ನ ಸಂಪದನಳಿದವರಿಗೆ ||1||

ರೂಪು ವಿದ್ಯ ತಪ ನಿಷ್ಠೆ ನಿಧಾನ ಸು

ಲಾಪ ಸತ್ಯ ಸತ್ಕ್ರಿಯ ಸಜ್ಜನರಿಗೆ ||

ರೂಪು ವಿದ್ಯ ತಪ ನಿಷ್ಠೆ ನಿಧಾನ ಸು

ಲಾಪ ಸತ್ಯ ಸತ್‌ಕ್ರಿಯ ಸಜ್ಜನರಿಗೆ ||2||

ಶಾಂತ ಪೂಜ್ಯ ಸದ್ಗುಣ ಸಂತಾನ ಮ

ಹಾಂತ ರಾಜ ತೇಜದೊಳಿರುವವರಿಗೆ |

ಶಾಂತ ಪೂಜ ಸದ್ಗುಣ ಸಂತಾನ ಮ

ಹಾಂತ ರಾಜ ತೇಜದೊಳಿರುವವರಿಗೆ ||3||

ಎಲ್ಲಾ ತಾ ನಿರ್ಬಯಲೆ ನೀ |

ನಲ್ಲಿ ತಿಳಿಯೊ ಮೂಢ |

ಸಲ್ಲದಿಂಥ ಗರ್ವ ನಿನಗೆ |

ಸೊಲ್ಲುವೆ ಧರ್ಮದ ಜಾಡ ||ಪಲ್ಲ||

ಸತ್ತು ಚಿತ್ತು ಅರಹು ಮರಹು |

ಎತ್ತಿಂದಾಯಿತೊ ಮೂಢ |

ಗೊತ್ತು ತಿಳಿಯದೆ ಹೋದರೆ |

ವ್ಯರ್ಥ ಹತ್ತದೆ ಮನ ಪೀಡಾ ||1||

ಏಕಮೇವನರಿ ಈ ಮಾತ |

ಅನೇಕವ್ಯಾಕೋ ಮೂಢ |

ಬೇಕು ಬ್ಯಾಡಾದುಳಮೆ ತಿಳಿದ |

ಲೋಕ ನಿಜದ ಗೂಢ ||2||

ಉಪಕಾರಾರ್ಥ ಸುಳಿದ ಸುಳುಹು |

ವಿಪರೀತಾಯ್ತು ಮೂಢ |

ಅಪರಿಮಿತ ಮಹಾಂತಲೀಲಾ |

ಸುಪಥ ಸುಖದ ಬೀಡಾ ||3||

ಅವಾಚ್ಯ ಬ್ರಹ್ಮವು ತಾನೆ

ನಾನು ನೀನು ಅವಾಚ್ಯ ಬ್ರಹ್ಮವು ||ಪಲ್ಲ||

ಅವಾಚಾನಾಹಂ ಅವಾಚ ಕೋಹಂ

ಅವಾಚ ಸೋಹಂ ಹೌದು |

ಭವಾಯಚ ಶಿವಾಧವಾಯಚ

ಸರ್ವೆವಾಯಚ ಆದವದಾವ ತಾನೆ ನಾನು ನೀನು ||1||

ಅಶಬ್ದ ಪ್ರಕೃತ ಶಬ್ದ |

ಜೀವನ ಸುಶಬ್ದ ಶಿವಕಳೆವಾದ |

ಅಶಬ್ದ ಕುಶಬ್ದ ಸುಶಬ್ದ ಓಂ ನಮಃ ಶಬ್ದ |

ಬ್ರಹ್ಮವು ತಾನೆ ನಾನು ನೀನು ||2||

ಅವಾಚ ಸ್ಥಾಣು ಚೋರ ಅವಾಚಾದ |

ಅನುಮಾನ ಅವಾಚಸ್ಥಿರ ಚರವಾದ |

ಅವಾಚ ಸ್ವಯಂಭು ಅವಾಚ ಯಾವನೋ

ಅವಾಚ ಗಿವಾಚ ಮಹಾಂತ ಗಿಹೀಂತ ತಾನೆ ||3||

ನೀನು ತಿಳಿದರ ತಿಳೀತಿ |

ತಿಳಿಯದಿದ್ದರ ತಿಳಿಯುವದುಳೀತೆ |

ಭಾವಿಸಿಕೊಂಡರೇನಳೀತೆ |

ಭಾವಿಸದಿದ್ದರೇನುಳಿತೆ ||ಪಲ್ಲ||

ತಿಳಿದವನು ತಿಳದೇ ಇಲ್ಲ |

ತಿಳಿಲಾರ್ದವ ತಿಳಿದೇನು ಬಲ್ಲ |

ತಿಳಿದವರು ತಿಳಿಲಾರ್ದವರು ಎಲ್ಲ |

ತಿಳಿಯೆಂಬೋದಿದರೊಳಗಿಲ್ಲ ||1||

ಸ್ವಪ್ನಪ್ತೆಂಬೊ ಪುರುಷ |

ಸಂಪತ್ಯಿಪರೀತ ಮಾಡಿದ ಪರುಷ |

ಅಪರಂಪಾರ ಮನ ಹರುಷ |

ತನುವೀಗ ಪುಟ್ಟಿಲ್ಲೊ ಸ್ಪರುಷ ||2||

ಇದ್ದದ್ದು ಇಲ್ಲದ್ದು ತಿಳಿಯೊ |

ಇದು ಎಲ್ಲಾರಿಗಿ ನೀರ ಹೊಳಿಯೊ |

ಬಲ್ಲೆನೆಂಬುದು ಅಳಿಯೊ |

ಬಲ್ಲಾದರೆ ನೀ ಭವ ಕಳಿಯೊ ||3||

ದೇವ ಮಹಾಂತರಾಜಾ |

ಸದ್ಭಾವ ತಿಳಿಸಿದ ಸಹಜ |

ಭಾವ ಭವದ ಬೀಜ |

ನಿರ್ಭಾವವೇ ಸಾಯುಜ್ಯ ||4||

ತಿಳಿದರೆ ತಿಳಿಯುವದಲ್ಲ | ಅದ

ತಿಳಿವಲ್ದವ ತಿಳಿವುದೇನು ಬಲ್ಲ |

ತಿಳಿದವರ್ತಿಳಿಯಲ್ದವರೆಲ್ಲ |

ತಿಳಿ ಅದರೊಳಗಾಗದೆ ಇಲ್ಲ ||ಪಲ್ಲ||

ಮುವ್ವರ ಮಾತು ಮುರಿಯೋ | ಆ

ಮುವ್ವರೇವಲ್ಲ್ಯಾದರು ತಿಳಿಯೋ |

ಮುವ್ವರು ಮೂರು ಚರಿಯೊ |

ಮುವ್ವರಾವರಿಸಿದವ ಧೊರಿಯೊ ||1||

ಅಷ್ಟಾವರಣವಹುದೊ | ಅವ

ರ್ನಿಷ್ಟಿ ಯಾವನಿಗಿಹುದೊ |

ದೃಷ್ಟ ವೇದಾಂತಿಹುದೊ |

ದೃಷ್ಟ ನಷ್ಟ ತನಗ್ಯಾಕಹುದೊ ||2||

ಪಾಪಿಯ ಕಣ್ಣಿಗೆ ಪರುಷ | ಕಲ್ಲು

ರೂಪಾಯಿತವಸ್ಪರುಷ |

ವೋಪ ಮಹಾಂತರು ಹರುಷ |

ತ್ರೈತಾಪ ಅನಂತ ವರುಷ ||3||

ಒಲ್ಲೆನ್ಹೋಗ ನಿನ್ನ ಸಂಗ |

ನಿನ್ನ ನೀನೆ ನೋಡಿಕೊ ||ಪಲ್ಲ||

ಇಲ್ಲದೊಂದು ಹುಟ್ಟಿಸುತಾನೆ |

ಇದ್ದದೊಂದು ಸಾಯಿಸುತಾನೆ |

ಅಲ್ಲದವನ ಮಾತು ಕೇಳಿ |

ಬಲ್ಲಾಂಗೆ ಹೊಯಿದಾಡುತಿ ||1||

ಮನಸಿಕರಾಯನು ಬಂದು |

ಕನಕರಿಸಿ ಸೌಭಾಗ್ಯ ತಂದು |

ತನಗೆ ತನಗಾಗದ ಸೊಮ್ಮು |

ನನಗೆ ನನಗೆಲ್ಲಿಯ ಹಮ್ಮು ||2||

ಸತ್ತವ ಸಾವೋದಿಲ್ಲ |

ಬದುಕಿದವ ಬದುಕೋದಿಲ್ಲ |

ಗೊತ್ತು ತಿಳಿಯದೆ ಸುಮ್ಮನೆ ಇದ್ದಿ |

ಎತ್ತ ಹೋಯಿತು ನಿನ್ನ ಬುದ್ಧಿ ||3||

ಭಾವನ ತಮ್ಮ ಜೀವನ ಗಂಡ |

ಜೀವನ ತಮ್ಮ ಮೈದುನ ಉಂಡ |

ಅವನಿಗವನಿಗೆ ನಿಂದೇನದ |

ಭಾವಿಸಿಕೋ ಅರಿಯದ ನಿನಗೇನದ ||4||

ಸತ್ತವಸಾಯ್ವಲ್ಹಾನ |

ಬದುಕಿದವ ಬದುಕಲ್ಹಾನ |

ಕತ್ತಲಿ ಬೆಳಗು ಕಾಣದಾತ |

ಸತ್ತದ್ದು ಬದುಕಿದ್ದು ನೋಡುವಾತ ||5||

ಸುಳ್ಳಿನ ಸುದ್ದಿ ಸುಳ್ಳಿಗಿಲ್ಲ |

ಸುಳ್ಳು ಸುಳ್ಳೆಂಬುವ ಏನು ಬಲ್ಲ |

ಸುಳ್ಳಿನಾಚಿಲಿ ಯಾವನಿದ್ದ |

ಸುಳ್ಳೆ ತಿಳದೇನೆಂಬವ ಬಹಳ ಬದ್ಧ ||6||

ಏನೋ ಏನೋ ಹ್ಯಾಂಗ್ಯಾಂಗಾಯ್ತೊ |

ಏನೋ ಏನೋ ಹ್ಯಾಂಗ್ಹ್ಯಾಂಗ ಹೋಯ್ತು

ಏನೋ ಆದುದು ಏನೋನೆ ಬಲ್ಲಾ |

ನಾನಿನಗ್ಹೇಳೋ ಸೊಲ್ಲೇ ಇಲ್ಲಾ ||7||

ಅಪ್ಪನ ಪಣಜನ ತಾಯಿ ಮಲ ಅತ್ತಿ |

ತಪ್ಪಿಸಿಕೊಂಡರೆ ಹೊರಳ್ಹೊರಳತ್ತಿ |

ಜಪ್ಪಿಸಿಕೋ ನೀ ಯಾವ ಮಹಾಂತ |

ಬಪ್ಪದು ಹೊಪ್ಪದು ಇಲ್ಲೇ ಭ್ರಾಂತ ||8||

ನನ್ನ ಒಳಗ ನಾ ತಿಳಿಕೊಂಡೆ | ನನಗ

ಬೇಕಾದ ಗಂಡನ ಮಾಡಕೊಂಡೆ |

ಆಜ್ಞೆ ಪ್ರಕಾರ ನಡಕೊಂಡೆ |

ನಾ ಎಲ್ಲರ ಹಂಗೊಂದು ಹರಕೊಂಡೆ ||ಪಲ್ಲ||

ಆರು ಮಕ್ಕಳನು ಅಡವಿಗಟ್ಟಿದೆ |

ಮೂರು ಮಕ್ಕಳ ಬಿಟಗೊಟ್ಟೆ |

ಅವನ ಮ್ಯಾಲ ನಾ ಮನಸಿಟ್ಟೆ |

ನನ್ನ ಬದಕು ಬಾಳುವೆಯಲ್ಲಾ ಬಿಟಗೊಟ್ಟೆ ||1||

ಒಂದನಾಡಿದರ ಕಡಿಮೆ ಎಂದೆ |

ಮತ್ತೊಂದನಾಡಿದರೆ ಅತಿ ಹೆಚ್ಚೆಂದೆ |

ಲಿಗಾಡ ಮಾತಿಗೆ ನಿಜವೆಂದೆ |

ಇದು ಸುಜ್ಞಾನಿಗೆ ತಿಳಿದಿರಬೇಕೆಂದೆ ||2||

ಶಿವನ ಹಾದಿ ನಾ ಬೇಡಿಕೊಂಡೆ |

ಗುರೂಪದೇಶವ ಪಡಕೊಂಡೆ |

ಈ ಭವಕೆ ಬಾರದಂತೆ ಮಾಡಿಕೊಂಡೆ

ಗುರು ಮಹಾಂತನ ಪಾದ ಹಿಡಕೊಂಡೆ ||3||

ಒಲ್ಲೆನಪ್ಪೋ ಹೆಂಡಿರನೊಲ್ಲೆನಪ್ಪೊ |

ಇಬ್ಬರ ಹೆಂಡಿರ ಕಾಟಿಗಾಗಿ |

ಮಗ್ಗದ ಕೋಣಿಯೊಳು ಡೊಗ್ಗಿದೆನಪ್ಪೊ |

ಎಪ್ಪೊ ಸಾಯ್ತೀನರೊ ಸತ್ತು ಹೋಗತೀನರೊ ||ಪಲ್ಲ||

ಗಬ್ಬಿದ ಕುರಿಯಂತೆ ಸೂಳೇರು ಬಂದು |

ಗುದ್ದ್ಯಾಡಿ ಮೈಮ್ಯಾಲ ಬಿದ್ದಾರಪ್ಪೊ |

ಮುದ್ದಿಯಾಗಿ ಮಲಗಿದ ನನ್ನ |

ಗುದ್ದಿ ಗುದ್ದಿ ಎಬ್ಬಿಸ್ತಾರ ||1||

ಮಕ್ಕಳ ಮರಿಗಳ ಕಕ್ಕುಲಾತಿಗಾಗಿ |

ಚಿಕ್ಕ ಹೆಂಡತಿ ಮಾಡಿಕೊಂಡೆ |

ಮಕ್ಕಳ ಮಾರಿಗೆ ಬೆಂಕೀ ಹಚ್ಚಲಿ |

ಒಲ್ಲೇನಪ್ಪ ಮರೇ ನಾ ಒಲ್ಲೆನಪ್ಪೊ ||2||

ಸಂವ ಸಂವತೇರು ಇಬ್ಬರು ಕೂಡಿ |

ಸಣ್ಣಕ್ಕಿ ಬಾನ ನೀಡಿ |

ಸಂವನಾಗಿ ಉಣಸೇನೆಂದು |

ಸ್ವಾಟಿ ಸ್ವಾಟಿ ತಿವಿದಾರಪ್ಪೊ ||3||

ಇಂದ ಒಬ್ಬಕ್ಕಿ ಸಾಯಲಿ |

ನಾಳಿಗೆ ಒಬ್ಬಕ್ಕಿ ಸಾಯಲಿ |

ಚಿಣಮಗೇರಿ ಮಹಾಂತೇಶಗ |

ಜೋಡಕಾಯಿ ಒಡದೇನಪ್ಪೊ ||4||

ಮಗನೊಂದು ಹಡದೇನಲ್ಲ |

ಮದವಿ ಗಂಡ ಮನಿಯಾಗಿಲ್ಲ |

ಎಂಥಾದು ಜಗವೇ ತಾಯಿ |

ಜಾಣಿ ನಾ ಸುಳ್ಳ ಹೇಳೂದಿಲ್ಲ ||ಪಲ್ಲ||

ಜಠರದಲ್ಲಿ ಜನಿಸಲಿಲ್ಲ

ತುಪ್ಪ ಎಣ್ಣೀಲಿ ಎರಿಯಲಿಲ್ಲ |

ಚಪ್ಪಳಿಗಿ ಬಾರಿಸಲಿಲ್ಲ |

ಮುಪ್ಪಿನವರು ಕರಿಯಲಿಲ್ಲ ||1||

ಊರ ಕೇರಿ ತಿರುಗಲಿಲ್ಲ |

ಜಾರತನವು ಮಾಡಲಿಲ್ಲ |

ಪಾರ ಒಂದು ಹುಟ್ಟಿತಲ್ಲ |

ನಾರೇರು ಕೇಳಿರಿ ಸೊಲ್ಲ ||2||

ಉಂಡು ಉಟ್ಟು ತಿರುಗಲಿಲ್ಲ |

ಮಿಂಡಿ ನಾ ಬಸಿರಾಗಲಿಲ್ಲ |

ಪುಂಡ ಮಹಾಂತೇಶ ನಿನ್ನ

ಕಂಡು ಹೆಸರ ಇಟ್ಟೇನಲ್ಲ ||3||

ಏಸೋ ಬಾನ ಲೀಲೆಯಿದು ಐ

ಸೋಜಿಗ ಬಂಗಾಲೆ |

ಸೂಸಿತು ಸುಸುಮ್ನೆ ಸುಳಿಗಾಳೆ |

ಹೇಸಲ್ದ ಹೋಯಿತು ಕುಂಡಿಲೆ ||ಪಲ್ಲ||

ತಾ ಸುಳ್ಳ ಖರೆ ಇಲ್ಲ |

ನೀ ಸುಳ್ಯಾಕೊ ಮುಲ್ಲ |

ದ್ಯಾಸಕ್ಯಾವನು ತರಲಿಲ್ಲ |

ಏಸೋ ಕಾಲಾದಿತಲ್ಲ ||1||

ನಾ ಸುಳ್ಳು ಸಹಜಾದ |

ನೀ ಸುಳ್ಯಾಕೋ ವಾದ |

ನಿಶೂನ್ಯವಾದದ್ದೆ ನಾಲ್ಕು ವೇದ |

ವಾಸನೆ ಹೋದದ್ದೆ ಹಸಾದ ||2||

ಆಗಮಗಳೋದಿ ನಾಳೆ |

ಕೇಳಾಗ ಹಾಯ್ದಿತು ಗೂದಿ |

ಹೋಗುದು ಬರುವದು ತಿಳಿಲಿಲ್ಲ ಹಾದಿ |

ಕೂಗಿ ಹೇಳಿತು ಗುರು ಬೋಧಿ ||3||

ಬ್ರಹ್ಮಾಂಡಾದುದ್ದೆಲ್ಲ ಪರ

ಬ್ರಹ್ಮವು ಮಾಡಿಲ್ಲ |

ಹಮ್ಮು ಹಾರಿಸಿದವನೆ ಬಲ್ಲ |

ನಮ್ಮನ ಹಡದವಳ್ಯಾವಳಿಲ್ಲ ||4||

ದೀಕ್ಷಕೆ ಮಹಾಂತಯೋಗಿ |

ತಾ ಮೋಕ್ಷಕ ಮರಗಿ |

ಸೋಹಂ ಎಂಬುದು ತಾನೆ ಪೋಗಿ |

ಸಾಕ್ಷಾತ್ ತಾನಿದ್ದುದು ಇಲ್ಲದ್ದಾಗಿ ||5||

ಆರು ತನಗೇನಂದರೇನು ಅಗೋ ಸಮಾಧಾನ

ದೇವನು ತಾನಾದ ಮೇಲೆ ವಾಸನೆ ಹೋದುದೇ ಖೂನ ||ಪಲ್ಲ||

ಅರಿಯದೆ ಅಜ್ಞಾನಿ ಮೊದಲು ಎಲ್ಲರೊಂದೆಯಾಗಿ

ಅಲ್ಲದೊಂದು ಮಾತು ಕೇಳಿ ಬಲ್ಲೆನೆಂಬುದು ನೀಗಿ

ಸೊಲ್ಲಿ ಸೊಲ್ಲಿನಲಿ ಒಬ್ಬ ಖುಲ್ಲರ ಹೊಟ್ಟಿಯ ಸೀಳಿ ||1||

ಹತ್ತು ಮಂದಿ ಕೂಡಿ ಒಂದು ಗೊತ್ತಿಗೆ ಹೋಗಲಾಗಿ

ಸತ್ತದ್ದೊಂದು ಕಂಡು ಜನರು ಮುಕರಿಕೊಂಡರು ಭೇಗಿ

ಉತ್ತಮನೊಬ್ಬ ಒಲ್ಲೊಲ್ಲಂದರೆ ಸತ್ತುದೆಂಬುದೆ ಕಾಗಿ ||2||

ಒಡಲೊಳಾತ್ಮ ನೀನೆ ಸರ್ವ ಒಡೆಯನಿಲ್ಲದಲ್ಹೋಗಿ

ಬುಡ ನಡು ಕಡೆಗಾಣದೆ ಯಮ ನರ್ಕದ ಮಡುವಿಗೆ ಬಿದ್ದಿರ್ಹೋಗಿ

ಮೃಢ ಮಹಾನಂದ ಚಿನ್ಮಯ ಮಹಾಗುರು ಮಹಾಂತಯೋಗಿ | |3||

ಆಯತವಾಗೋದೊಂದರಿಯೋ ಮುಂದೆ |

ಸ್ವಾಯತವಾಗೋದಾನಂದವಾ ಹರಿಯೋ ||ಪಲ್ಲ||

ಹಲವು ನೆನೆವ ಮನ ನಿಲಿಸೊ | ನಿನ್ನ

ನೆಲೆ ಆದಾತ್ಮನ ಚಿಂತಿಯ ಬಲಿಸೋ ||

ಸಲುವ ಸತ್ಕರ್ಮವ ಕಲಿಸೋ | ಚಲ್ವ

ಸುಲಭ ಶ್ರೀಗುರು ಕರುಣಾಮೃತ ಸಲಿಸೋ ||1||

ಹಾದರ ಹುಸಿ ಕಳು ಬೇಡೋ | ಅವು

ಮೇದಿನಿಯೊಳು ಪ್ರಾಣಾರ್ಥ ಅಭಿಮಾನಕ್ಕೇಡೋ ||

ಆದಿ ಅನಾದಿಯು ನೋಡೋ | ಒಳ್ಳೇ

ಸಾಧು ಪುರುಷರ ಸಹವಾಸದೊಡನಾಡೋ ||2||

ದೃಢಮತ ನೇಮವ ಹಿಡಿಯೋ | ನಿನ್ನ

ಒಡಲವಗುಣಗಳ ತಡಿಯದೆ ಕಡಿಯೋ ||

ಬಿಡದೆ ಓನಾಮವ ನುಡಿಯೋ | ನಮ್ಮ

ಮೃಢ ಮಹಾಂತೇಶನ ಪಾದ ಪಿಡಿಯೋ ||3||

ನೀ ಕಂಡರೆ ನಿನ ನೆಲಿಗಾಣುವದೊ |

ನೀನೆ ಕಂಡು ನೋಡಮೆ | ಬಹು ಹೀನ ಕೃತಿ ಬ್ಯಾಡಮೆ ||ಪಲ್ಲ||

ಹೆಣ್ಣು ಹೊನ್ನು ಮಣ್ಣು ಮೂರು

ಆಶಿ ಬಿಟ್ಟು ನೋಡಮೆ | ಆಶಿ ಬಿಟ್ಟು | ನೋಡಮೆ |

ನೀನಾಶಿ ಬಿಟ್ಟು ನೋಡಮೆ |

ಪನ್ನಗಶೈನನ ಗುರ್ತು | ಇಲ್ಲೆ ಕಾಣ್ತಾದ ನೋಡಮೆ ||1||

ಅಷ್ಟಾವರ್ಣದಾಗಿನ ಮಾತು |

ಆಚಾರಕ ತರಬ್ಯಾಡಮೆ | ಆಚಾರಕ ತರಬ್ಯಾಡಮೆ

ಬಹು ವಿಚಾರಿಸಿ ನೀ ನೋಡಮೆ |

ಬಹು ವಿಚಾರಿಸಿ ನೀ ನೋಡಮೆ | ನೀ ನೋಡಮೆ ||2||

ಗುರುವಿನ ಗುಲಾಮ ಆಗೂತನಕ |

ಗೌಪ್ಯದೊಳು ಸುಳಿದಾಡವೆ | ಗೌಪ್ಯದೊಳು ಸುಳಿದಾಡಮೆ |

ಗುರು ಮಹಾಂತೇಶನ ಬದಿಲಾಡಮೆ |

ಗುರು ಮಹಾಂತೇಶನ ಬದಿಲಾಡಮೆ | ಬದಿಲಾಡಮೆ ||3||

ಬುಡಕಡಿಯಿಲ್ಲದ ನಿಕ್ಕಲ ನಿಂಗವ್ವ

ಅಡನಾಡಿ ಸಂಗವ್ವ |

ಒಡಲೊಳು ಒಡಿಯನ ನೋಡದು ಪಾಡವ್ವ |

ಜಡ ದೃಶ್ಯಾದೃಶ ಆಗುದು ಸಿದ್ಧವ್ವ |

ಬಿಡು ಭ್ರಮಿ ಮುದ್ದವ್ವ ||ಪಲ್ಲ||

ಜೀವ ತನುವಿನ ಮರುವಿನ ಮಾಳವ್ವ |

ದೇವರ ಬೋಳವ್ವ |

ಭವರಹಿತ ಸಂಪ್ಹರಿ ಕಾಳವ್ವ |

ಪಾವನ ಶ್ರೀಗುರು ಶರಣರ ಧೂಳವ್ವ |

ಸೇವಿಸಿ ಬಾಳವ್ವ ||1||

ಸೋಹಂ ಬ್ರಹ್ಮಾದಿ ಎಂಬುವದೆಲ್ಲವ್ವ |

ಭಯವಿಲ್ಲೇಳವ್ವ |

ಲಯ ನಿರ್ಲಯ ಕಲಕೊಂಬುವದಲ್ಲವ್ವ |

ನಾನೆರಡಿಲ್ಹೇಳೆನ್ನದಿರು ಕಲ್ಲವ್ವ |

ಜಯ ಜಗ ಮಲ್ಲವ್ವ ||2||

ಬಲ್ಲಿದ ಮಹಾ ಮಹಾಂತೇಶ್ವರನಾಗವ್ವ |

ಯಲ್ಲಕ್ಕು ಬಾಗವ್ವ |

ಇಲ್ಲದು ಹುಡುಕದು ಯಾತರ ಯೋಗವ್ವ |

ತಲ್ಲಣಿಸುವರೇನ ಪಾತ್ರದ ಭೋಗವ್ವ |

ಸಲ್ಲದು ರಾಗವ್ವ ||3||

ಮುದ್ದ ಬಾಳಿಯ ರಂಗ ಎದ್ದು ಬಾರನು ಬೇಗ

ಬುದ್ಧಿ ಸಲ್ಲದೊ ಮುದ್ದ ಬಾಳಿ

ಬಿದ್ದುದ ಬಾಯಿ ಹಾರುತಾದಲ್ಲೊ ||ಪಲ್ಲ||

ಜೋಳದ್ಹೊಲವನು ಬಿಟ್ಟೆ |

ಜಾಣ ಗಂಡನ ಬಿಟ್ಟೆ |

ಜೋಳದ್ಬಾನ ಹೆಸರ ಬ್ಯಾಳಿ |

ಗುಸ್ಸು ಗುಸ್ಸು ನುಂಗಲಾರದ ಜೀವ ||1||

ನವಣಿ ಹೊಲವ ಬಿಟ್ಟೆ |

ಹವಣಿ ಗಂಡನ ಬಿಟ್ಟೆ |

ನವಣಿಬಾನ ಹುಣಸಿನ ಕಾಯಿ ಆಂಬ್ರ

ಸರ್‍ಪುರ್ ಸುರಿಯಲಾರದೊ ಜೀವ ||2||

ಸಜ್ಜಿ ಹೊಲನ ಬಿಟ್ಟೆ |

ಗೆಜ್ಜಿ ಕಾಲಿನ ಮಗನ ಬಿಟ್ಟೆ |

ಸಜ್ಜಿರೊಟ್ಟಿ ಚವಳಿಕಾಯಿ |

ಗುಸ್ಸು ಗುಸ್ಸು ನುಂಗಲಾರದು ಜೀವ ||3||

ಸಗರನಾಡ ಸಂತೆಗೆ ಹೋಗಿ ಸಾದಾ ರುಂಬಾಲ ತಂದೆ

ಸುತ್ತಿಕೊಳ್ಳಂದರ್ಯಾಕೊಲ್ಲೆ |

ಯಾರವರು ಹೋಗವರು ಯಾಕ್ಯಾಕ

ಯಾರೂ ಇಲ್ಲ ಬಾ ನನ್ನ ಕಾಣುದ ಜೀವ ||4||

ಜಾಲಳ್ಳ ಸಂತೆಗೆ ಹೋಗಿ |

ಜಾತ ಪರಿಮಳ ತಂದೆ |

ಧರಿಸಿಕೊಳ್ಳಂದರ್ಯಾಕೊಲ್ಲೆ |

ಯಾರವರು ಅಡ್ಡ್ಯಾಡವರು ಯಾಕ್ಯಾಕ ಯಾರೂ ಇಲ್ಲ ||5||

ಕಡಗ ಕಂಕಣ ದೊರೆ |

ಕೊಡನೆ ಹೊತ್ತಾಳು ನಾರಿ |

ನಡಗಿ ನಡದಾಳ ಸುಂದರಿ |

ಯಾರ್ನಿಂತವರು ಯಾಕ್ಯಾಕ ಯಾರು ಇಲ್ಲ |6||

ಗುಡ್ಡದೊರಿಯ ಮಹಾಂತ |

ಬಡ್ಡ ಗಣ್ಣಿನ ಹುಡಿಗಿ |

ದುಡ್ಡು ಕೊಟ್ಟರ್ಯಾಕೊಲ್ಲಿ |

ಯಾರ್ಕುಂತವರು ಯಾಕ್ಯಾಕ ಯಾರು ಇಲ್ಲ ||7||

ನಾವು ನೀವು ಕೂಡಿದ್ದೇವ ಚಿಕ್ಕಂದ ಗೆಳದಿ |

ಕರೆಯಲಿಕ್ಕೆ ಬಂದಾರವ್ವ ದೂರಲಿಂದ ||ಪಲ್ಲ||

ಬಂದು ಭಾವ ಎತ್ತಿ ಹಿಡಿದ ಮುಂದ ಹೊರಗ ಗೆಳದಿ |

ಒಲ್ಲೇನಂದರ ಜಗ್ಗೀ ಒಯ್ತೀನಂದ ಗೆಳದಿ ||1||

ಸಂತಿ ಆದರ ನೆರದಾದ ಒಳ್ಳೆ ಜಾಮರ ಗೆಳದಿ

ಬೇಕಾದ ಕೊಂಡುಕೊರ ಫಳಿಯಾರ ಗೆಳದಿ ||2||

ನೆರದ ಮಂದಿ ಹರದ ಹೋಯ್ತು ಭರರ ಗೆಳದಿ |

ಯಾರಿಗೆ ಯಾರಿಲ್ಲ ನಿರ್ಬ್ಯೆಲ ಗೆಳದಿ ||3||

ಹಿಂದಿನೂರ ಹೆಸರ್ಹೇಳೇನಂದ್ರ ಗೊತ್ತಯಿಲ್ಲಾ ಗೆಳದಿ |

ಮುಂದಿನೂರ ಮಾಡ ಬಂದು ಮರಿಯಾಯ್ತ ಗೆಳದಿ ||4||

ನಾವು ನೀವು ಆಗಲಿ ಈಗ ಹೊಗೋಣಾಯ್ತು ಗೆಳದಿ |

ಗುರು ಮಹಾಂತನ ಪುರದೊಳು ಆಡೋಣಾಯ್ತು ಗೆಳದಿ ||5||

ಆಯಾತವಾಯಿತೆ ಪ್ರಮಥರಿಗೆ |

ಪ್ರಭುವಿನ ತಿಳಿ ಪೂರ್ಣನುಭಾವ ||ಪಲ್ಲ||

ಕಾಯವೆ ಕಾಣ ಬಂದಸ್ಥಿ ಮೂಲ |

ಕರ್ಮ ನಿರ್ಮಲಕೆ ತನ್ನನುಕೂಲ |

ಸ್ವಾಯತ ಮಾಡ್ಗಂಜಿ ಗೊಂಗಡಿಗೆ |

ನಾಡ ಮಾತಿನೊಳಾದೆ ಶೀಲ ಶೂಲ ||1||

ಶಿವನ ನಿಜ ತಿಳಿವುದೆ ಮಹಾಜ್ಞಾನ |

ತಿಳಿಯದವನಾದರ್ಯಾತರ ಜ್ಞಾನ |

ಭವಭವಯೆಂಬುದೆಲ್ಲ್ಯಾದೆಲ್ಲರಿಗಿ |

ಭ್ರಾಂತಿ ಕಲ್ಪನಿಗಾಯಿತನುಮಾನ ||2||

ಸರ್ವ ರೂಪಿಗೆ ಶೂನ್ಯಾದಿ ದೈವ |

ಶೂನ್ಯ ಸಂಪದ ನೀಗ್ಯಾವ ಜೀವ |

ನಿರ್ವಯಲಾದ ಮಹಾಂತನಿಗೆ |

ಮರವರಿವದಕ್ಕೆಲ್ಲಾದ ಢಾವ ||3||

ನಿಲಕಿಸಿಕೊ ಮೇಲಾದ ಕಾಯಿ | ಕೆಳ

ಗ್ಹಲಿಬಿ ತೆರಿವದ್ಯಾತಕೆ ಬಾಯಿ |

ಮೇಲಿರುವದು ಅದು ತಿಳಿ ಕಾಯಿ | ನೀ

ಸುಳ್ಳೆ ವ್ಯರ್ಥ ಮಾಡಬೇಡ ಈ ಕಾಯಿ ||ಪಲ್ಲ||

ಒಂದೆ ಬೇರಿಗೆ ಮೂರೆಲಿಯಾಗಿ | ಅದ

ರ್ಹೊಂದಿಗಿಪ್ಪತ್ತೈದು ಶಾಖೆಗಳಾಗಿ |

ಮುಂದೆ ಮುವ್ವತ್ತಾರು ಆಗಿ |

ಇದರನುಭವ ತಿಳಿದವ ಶಿವಯೋಗಿ ||1||

ಹಣ್ಣಿನೊಳು ರಸಪೂರ್ಣ ತುಂಬ್ಯಾದ | ಆ

ಹಣ್ಣು ಕಾಯ್ಕೊಂಡು ಒಂದು ಗಿಳಿಯಾದ |

ಕಣ್ಣಿಟ್ಟು ನೋಡೋ ಕಾಣಿಸುತಾದ | ಇದು

ಅಣ್ಣಪ್ಪಗಳಿಗೆಲ್ಲ ಬಲ್ಲಾದ ||2||

ನೆಲ ಜಲ ತೇಜ ವಾಯು ಆಕಾಶ |

ಅದರೊಳಗ ಕಾಣಿಸುತಾದೋ ಆ ದೇಶ |

ಸಲೆ ಕಲ್ಪವೃಕ್ಷ ಶ್ರೀಮಹಾಂತೇಶ |

ಇದರನುಭವ ತಿಳಿದವ ಜಗದೀಶ ||3

ಕೊಂಬು ಹೊಲಿಯಂದೊ ಏಕಾಂತ |

ಬಿರುದು ನಿಮ್ಮದೊ ಶ್ರೀಮಾಂತ |

ಪ್ರಜಾಪರರದೊಳು ನಿಂತ |

ಹೊಡೆದು ಪರರ ತಿಳಿಸಿದ ಅದರಂತ ||ಪಲ್ಲ||

ಮೊದಲವೇನಿತ್ತೊ ಅಖಂಡ |

ಮೂಲ ಮಾಯಿ ಮಾಡಿತು ಬಂಡ |

ಓಂಕಾರ ಒದರಿತು ಅಕ್ರ ತಂಡ |

ಜಗ ಹುಟ್ಟಿತು ತಂಡ ತಂಡ ||1||

ಮಸಳಿ ಮಾರಿ ಮಾಯಿಯ ದಂಡ |

ಬಾಣ ಸೊಕ್ಕಿ ಸುರದಾವ ಗುಂಡ |

ದಸಿಗಿ ಬಾಯಿ ಬಿಡುವುದ ಕಂಡ |

ವಸುಧಿ ಒಳಗ ಏನಿದು ಭಂಡ ||2||

ಅಂಧಕಾರ ಎದ್ದಿತು ಗಾಳಿ |

ಮುಚ್ಚಿಕೊಂಡಿತೊ ಕೆಂಧೂಳಿ |

ಆಗತೈತ್ರಿ ಜಗದೊಳು ಹೋಳಿ |

ಬಿರುದು ಹಿಡದೇನೊ ಮಹಾಂತನ ಕಾಳಿ ||3||

ಸಾಕಾಯಿತು ಈ ಊರವ್ವ |

ಭಾಳ ಜ್ವಾಕಿಲಿ ಹೋಗನು ಬಾರವ್ವ |

ಒಂಬತ್ತು ಬಾಗಿಲದೊಳಗವ್ವ |

ನಾನಿರುವ ಮನಿಯು ಭಾಳ ದೂರವ್ವ ||ಪಲ್ಲ||

ಆರು ಮಂದಿ ಗೆಳತೇರವ್ವ |

ತಂಗಿ ಬ್ಯಾರಿದ್ದವರು ಮೂವರವ್ವ |

ಕಂಡರೆ ಎನ್ನ ಬಿಡರವ್ವ |

ಬಹಳ ದಿಡಗಿಲೆ ಹೋಗನು ಬಾರವ್ವ ||1||

ಆಯಿತವಾರ ದಿವಸ ಆಯಿತವ್ವ |

ತಂಗಿ ಬಾಹುದು ಸಾಹುದು ಹೋಯಿತವ್ವ |

ಸಾಯಸ ಎನಗಿದು ಆಯಿತವ್ವ |

ನಿಜ ಭಾವಿಸಿ ನಿರ್ವೈಯಲಾಯಿತವ್ವ ||2||

ಏನು ಹೇಳಲಿ ಅವತಾರವ್ವ |

ತಂಗಿ ಮಹಾಂತಪುರದ ವಿಸ್ತಾರವ್ವ |

ಮಹಾಗುರು ಮಹಾಂತ ಯೋಗೆವ್ವ |

ಆತನ ಪಾದಕೆ ಹೊಂದನು ಬಾರವ್ವ ||3||

ಸಾಕಾಯಿತು ಈ ಊರವ್ವ

ಪರದೇಶಕ ಹೋಗನು ಬಾರವ್ವ

ಕಾಕು ಜನರು ಸೇರರವ್ವ

ಮನ ವಾಕರಿಸಿತು ಕಾಯಪೂರವ್ವ ||ಪ||

ಆರು ಮಂದಿ ಸರದಾರವ್ವ |

ತಂಗಿ ಇದೇ ಊರಾಗ ಇರತಾರವ್ವ

ಸಾರಿ ಜವಾನರು ಬರುತಾರವ್ವ

ನಿನ್ನ ಪಾರೆದೊಳಗ ಕೊಡತಾರವ್ವ ||1||

ಬಂಧು ಬಳಗ ಬಳದ ಹೋಯಿತವ್ವ

ನಿನ್ನ ಕೈಯಾಗ ಜೋಳಿಗಿ ಬಂತವ್ವ

ಕೇಳುವ ಧಣಿ ಯಾರಿಲ್ಲವ್ವ ತಂಗಿ

ಹಾಳಾಯಿತು ಈ ಊರವ್ವ ||2||

ಮುಂದಕ್ಕಿಟ್ಟಿದ ಪಾದವ್ವ ನೀನು

ಹಿಂದಕ್ಕ ತಿರುಗಿಡಬ್ಯಾಡವ್ವ

ಮಹಾಂತಪುರಕ ಕರಿ ಬಂದಾರವ್ವ

ಅಲ್ಲಿ ಆನಂದಪುರಕ ನಡಿರವ್ವ ||3||

ಬರಬಾರದಿತ್ತೊ ಹಿಂತಾ ಊರಿಗೆ |

ಸರಕಾರವಿಲ್ಲದ ಹಾಳಗ್ವಾಡಿಗೆ ||ಪಲ್ಲ||

ಕಳ್ಳಸುಳ್ಳರು ಕೂಡಿ |

ತಳ್ಳಿತನವು ಮಾಡಿ |

ವಳ್ಳೆರಾತರಿ ನೋಡಿ |

ಮೊಳ್ಳು ಮಾಡ್ಯಾರ ಗ್ವಾಡಿ ||1||

ಪಂಜಗಳ್ಳರು ಮೂರು |

ಸಂಜಿಲೆ ಮನಿಹೊಕ್ಕು |

ವಂಚಿಸಿ ಹ್ವಾದರೆನಗೆ |

ಗುಂಜಿ ಭಂಗಾರ ಬಿಡದೆ ||2||

ತರ ತರದಂಗಿ ನಾನು |

ತಿರಿಗೊಮ್ಮೆ ತೊಡಲಿಲ್ಲಾ |

ಮುರಿದು ಕೀಲಿಯ ಮನಿ |

ಬರಿದೆ ಮಾಡಿ ಹೋದರಮ್ಮಾ ||3||

ಸಣ್ಣನಾದಿತೋ ಜೀವ |

ಮಣ್ಣೂಗೂಡಿತೋ ಮೋಹಾ |

ಮಾನ್ಯ ಮಡಿವಾಳ ನೀ |

ಪುಣ್ಯ ಸರಕಾರ ಬಿಟ್ಟು ||4||

ಮುತ್ತಿನ ಮಾಲಿ ಅಂಗಿ |

ಮಹಾಂತೇಶ್ವರ ತೊಟ್ಟಿದ್ದಾನು |

ಯತ್ತಿ ಬಡಿವದು ಕಂಡು |

ಅತ್ತು ಸಾಯಲಿ ಬ್ಯಾಡಾ ||5||

ಭಲೆರೆ ಹುಡುಗ ಹೌದ್ಹೊಡದಿ |

ಗುರಿ ಬಡದಿತು ಟುಬಾಕ ಹಿಡದಿ |

ಮೂರಾರು ಫೌಜಿನೊಳು ಕಡದಿ |

ಭಂಟ ಯಾರಿಗಿ ಸಿಗದಂಗ ನಡದಿ ||ಪಲ್ಲ||

ಏಳು ಗೇಣಿನ ಟುಬಾಕ ಹಿಡದಿ

ಗುರು ವಾಕ್ಯದ ಮದ್ದಗುಂಡು ಜಡದಿ |

ತತ್ತ್ವದ ಮುಜರಿ ಹಿಡದಿ |

ಗುಂಡು ಉರುಳ್ಯಾಡದಂಗ ಗುರಿ ಒಗದಿ ||1||

ನಾಲ್ಕಂಗುಲ ಮದ್ದು ಕಟ್ಟಿ |

ನಿನ್ನ ಮನಿಕೊನಿ ಅದರೊಳಗಿಟ್ಟಿ |

ಜ್ಞಾನದ ಕೊಳ್ಳಿಯ ಕೊಟ್ಟಿ |

ಒಂಬತ್ತು ತೂತಿನೊಳು ಸುಟ್ಟಿ ||2||

ಇಲ್ಲಿರಬೇಡಲ್ಲಿಗಿ ನಡಿ |

ಮಹಾಂತಪುರದಲ್ಲಿ ಹಾನ ನಿನಗಡಿ |

ಹರಿಹರ ಬ್ರಹ್ಮರಿಗೆ ಹೋಗದು ರಾಡಿ |

ಗುರು ಮಹಾಂತನೊಳೊಡಗೂಡಿ ||3||

ಆವ ಭಯವು ಇನ್ನೇನವಗ

ಮಾಯಾ ನಿರ್ಮಾಯನಾದವಗ

ಸಾವುದು ಹುಟ್ಟುದು ಜೀವ ಭಾವ ಭ್ರಮೆ

ಸಾವೇನು ಸಾಯದೇನು ನೋವೇನವಗ ||1||

ಏನೇನು ಇಲ್ಲದಲೊಂದು

ಏನೋ ತಾನಾಯಿತೊಂದು

ಜ್ಞಾನಜ್ಞಾನವು ಯೋಗ ಭೋಗವು

ತಾನದು ಹುಸಿ ಹುಸಿಯೆಂದರಿದವಗ ||2||

ಸ್ಥಾಣುವಿನೊಳು ತಸ್ಕರ ತಾನದು

ಕಾಣಿಸಿಕೊಳ್ಳುವದನುಮಾನವೇನು

ಪ್ರಾಣಪ್ರಪಂಚವು ಅಣುರೇಣು ಮಹಾತ್ಮವು

ಮಾಣದೆ ಹುಸಿ ಕನಸೆಂದವಗ ||3||

ಇದ್ದದ್ದಾಗತಾದ ಹ್ಯಾಂಗ

ಅದು ಇಲ್ಲದ್ದಾಗುವದು ಹ್ಯಾಂಗ

ಇದ್ದದ್ದಾಗದು ಇಲ್ಲದ್ದಾಗದು

ಇದ್ದಿದ್ದಿಲ್ಲಲ್ಲಿಲ್ಲಿಲೆಂದರಿದವಗ ||4||

ಭವಯೆಂಬುವ ಶಿವನಾಮಿಹುದು

ಭವಯೆಂಬ ಅಂಜಿಕೆಲ್ಲಿಹುದೊ

ಭವ ಭವ ಶಂಕರ ಸೋಯೆಂಬೊ ಹರಹರ

ಶಿವ ಅಲ್ಲಾ ಅಲ್ಲಾಯಂದರಿದವಗ ||5||

ದೇಶಧಿಕ ಸುರಪುರದೇಶ

ಕಡಕೋಳ ಗುಡ್ಡದ ಮಹಾಂತೇಶ

ಕೊಡುವರು ಬಿಡದನುಭವ ಕರುಣಾಮೃತ

ಪಡೆದುಕೊಂಡು ಉಂಡಿಲ್ಲಾದವಗ ||6||

ಕ್ವಾಡಗನ ಕೋಳಿ ನುಂಗಿತ ಕೇಳಕ್ಕಯ್ಯ

ಕ್ವಾಡಗನ ಕೋಳಿ ನುಂಗಿತ ||ಪಲ್ಲ||

ಆಡ ಮಾಡವು ನುಂಗಿ |

ಗ್ವಾಡಿ ಸುಣ್ಣವು ನುಂಗಿ |

ಆಡ್ಲಕ ಬಂದ ಪಾತರಗಿತ್ತಿನ ಮದ್ದಲಿ ನುಂಗಿತಕ್ಕಯ್ಯ ||1||

ವಳ್ಳ ವಣಕಿಯ ನುಂಗಿ

ಬೀಸೋಕಲ್ಲ ಗುಂಜಿ ನುಂಗಿ |

ಕುಟ್ಲಾಕ ಬಂದ ಮುದುಕಿನ ನೊಣ ನುಂಗಿತಕ್ಕಯ್ಯ ||2||

ಎತ್ತ ಜತ್ತಿಗಿ ನುಂಗಿ |

ನೇಗಿಲು ಮುಂಜಾವ ನುಂಗಿ |

ಸುತ್ತ ಮುತ್ತ ಗಳಿಯ ಹೊಡೆವ ಅಣ್ಣನ ಮೇಳಿ ನುಂಗಿತಕ್ಕಯ್ಯ ||3||

ತೋಟ ಬೇಲಿಯ ನುಂಗಿ |

ಬೇಲಿ ತೋಟವ ನುಂಗಿ

ಬ್ಯಾಟಿಕಾರಣ್ಣನ ಮೊಲ ನುಂಗಿತಕ್ಕಯ್ಯ ||4||

ಕರಡಿ ಮರಡಿಯ ನುಂಗಿ |

ಮರಡಿ ಮಹಾಂತನ ನುಂಗಿ |

ವಿದ್ಯೆ ಹೇಳ ಗುರುವಿನ ಆತ್ಮ ನುಂಗಿತಕ್ಕಯ್ಯ ||5||

ತಿಳಿ ಬಾಳಿರಬೇಕು ನಿಂಗವ್ವ |

ನಿನ್ನ ಅಂಗದ ಗುಣ ಅಳಿಬೇಕವ್ವ |

ಭಾವ ಭಕ್ತಿ ಬೆರಿಬೇಕವ್ವ |

ಗುರು ಸೇವೆ ಮಾಡಿ ಭವ ನೀಗವ್ವ ||ಪಲ್ಲ||

ಆರು ಮಂದಿ ಮಹಾ ಬೆರಕೆವ್ವ |

ಸುತ್ತಮುತ್ತ ಪಾರೆ ತಿರಗುವರವ್ವ |

ರಮಿಸಿ ಬಲಿಗ್ಹಾಕುವರವ್ವ |

ಬಲು ಹುಶೇರಿಲಿಂದ ಪಾರಾಗವ್ವ ||1||

ಕಾಕುಬುದ್ಧಿ ನಿನಗ್ಯಾಕವ್ವ |

ನಿಜ ಅರವಿನೊಳಗಿರಬೇಕವ್ವ |

ಸುಖದುಃಖ ಒಂದಾಗಿರಬೇಕವ್ವ |

ಪರಿಪಾಕ ಮಾಡಿ ಉಣಬೇಕವ್ವ ||2||

ಸಡಗರ ಸಂಪತ್ತ ಕಾಳವ್ವ |

ಹೋಗಿ ಬುದ್ಧಿವಂತರನ ಕೇಳವ್ವ |

ಸಂತರ ಚರಣದ ಧೂಳವ್ವ |

ನೀ ಸೇವಿಸಿ ವೇಳೆಗಳಿಯವ್ವ ||3||

ದಾರಗೊಡವಿ ನಿನಗೇನವ್ವ |

ಗುರು ಧ್ಯಾನದೊಳಗೆ ಬಲು ಮಾನವ್ವ ||

ಸುಳ್ಳೆ ಸಂಸಾರ ಕನಸವ್ವ |

ಅದು ತಿಳಿದರೆ ದೇವರು ನೀನವ್ವ ||4||

ಬೇಕೆಂಬುವ ಮೊಳಕಿ ಕಡಿಯವ್ವ |

ಬೈಲೂರ ಸೀಮಿ ದಾರಿ ಹಿಡಿಯವ್ವ |

ಸರ್ವಕೆ ಶಿರ ಬಾಗಿ ನಡಿಯವ್ವ |

ಗುರು ಮಹಾಂತನ ಕೂಡಿ ಮುಕ್ತಿ ಪಡಿಯವ್ವ ||5||

ಅಲಗರ್ಜಿ ಅನುಭೋಗ |

ತಳಳಳ ಎನ್ನಿರಿ ಈ ಇಂದ್ರ |

ಜಾಲ ಮಹೀಂದ್ರ ಜಾಲ |

ಬಲು ಮನಸಿಗಿ ತಂದಿರಿ ||ಪಲ್ಲ||

ಏನೋ ತಾನೊಂದಾಗಿ |

ತಾನೊಂದು ಹಲವಾಗಿ |

ಏನೋ ತಾನೊಂದಾದ ಮೇಲೆ |

ನಾನೀನೆಂಬುದ ಅನ್ಯಾಯೊ ||1||

ಎತ್ತು ಮನಿಗಿ ಬಂತು |

ಹತ್ತು ಹೋಳಿಗಿ ತಿಂತು |

ಸತ್ತು ಹೋಗದು ಹೋಗಲಿಲ್ಲ |

ಸತ್ತ ಸತ್ತೆಂಬುದ ಅನ್ಯಾಯೊ ||2||

ದಿಂಡರಕಿ ಉರುಳಲಿ ಹೋದೊ |

ಕಂಡೆನು ಬಂದವನಾದೊ |

ಕೊಂಡದೊಳಗೆ ಬೀಳುವ ಹೆಣ್ಣಿನ |

ರಂಡ್ಯಾಗುವದೊಂದನ್ಯಾಯೊ ||3||

ನಾ ಹೆಚ್ಚು ನೀ ಹೆಚ್ಚು |

ತಾ ಹೆಚ್ಚು ಕಲಗಚ್ಚು |

ಈ ಹುಚ್ಚು ಹೋಗುವತನಕ |

ಮೋಕ್ಷ ಬಯಸುವದನ್ಯಾಯೊ ||4||

ತೆಲಗಾಣಿಲಿ ತೇಲಿಸಿಕೊಂಡಿ |

ಮಲಗಾಣಿಲಿ ಹೂಳಿಸಿಕೊಂಡಿ |

ಹೊಲಿ ದೇಹ ಸಿದ್ಧಿಸಿಕೊಂಡಿ |

ಬಲು ಮಹಾತ್ಮೆಂಬುದನ್ಯಾಯೊ ||5||

ಕಡ್ಡಿನೆ ಗುಡ್ಡವಾಯ್ತು |

ಗುಡ್ಡವೆ ಕಡ್ಡಿಯಾಯ್ತು |

ಗೊಡ್ಡ ಬಂಗಾಲಿಯ ಮಾಯಾ |

ಒಡ್ಡಿ ಬೇಡುವದನ್ಯಾಯೊ ||6||

ಅಪರೂಪ ಜ್ಞಾನ ಶಕ್ತಿ |

ಅಪರೂಪ ಶಕ್ತಿಯುಕ್ತಿ |

ಅಪರೂಪ ಮುಕ್ತಿದೋರಿತು |

ಅಪರೂಪ ಜಗವೆಂಬುದನ್ಯಾಯೊ ||7||

ಪೊಡವಿಯೊಳು ಬಿದನೂರ |

ಒಡೆಯ ಮಹಾಂತನ ಸಾರ |

ಕೊಡುವೆನು ಸವಾಲ ಹಾಕೊ |

ತಡಮಾಡುವದೊಂದನ್ಯಾಯೊ ||8||

ಮೂರು ಸಮಯದೊಳು ಶಿವ

ಸಮಯದವರೊ ನಾವು |

ಮೂರು ಸಮಯದೊಳಗೆ ಶಿವನ

ಭಜಿಸುವರಡಿಗಡಿಗೆ ||ಪಲ್ಲ||

ಮೂರು ಸಮಯದತಿಗೆ

ಬೇರೊಬ್ಬ ಪರ ವಸ್ತು

ಬ್ಯಾರಿಲ್ಲೊ ಏಕ ಸಾಕ್ಷಿ |

ತಾರಕವಾದ ಮೇಲೆ ||1||

ಮೂರು ಲಿಂಗದ ಮಂತ್ರ

ಸಾರ್ಯೆಲ್ಲಾ ಒಂದೆ ಒಂದೆ |

ಏರಿ ಕೊಂಡ್ಹೋಗಿ ಶಿವನ

ಇರವ ಕಂಡೆನು ನಾನು ||2||

ಗುರು ಹಿರಿಯರಿಗೆ ಭೇದ

ಅರವು ಮರವು ಒಂದೆ |

ಪರಕೆ ಪರವಾದ ಮಹಾಂತ

ಪರಬ್ರಹ್ಮನೊಳು ಬೆರಿದ ||3||

ಷಟಸ್ಥಲ ಒಂದಾಗೊ ಸಮಯಕೆ

ಕಡಿ ಸಿಡಿಯುತ್ಯಾಕೆ |

ಮಡಿವಾಳ ಯೋಗಿ ನಾಗಶ್ಯಾಸ

ಸಿದ್ಧರಾಮ ಮಹಾಂತ ಮಡದಿ ||ಪಲ್ಲ||

ಆರು ಸ್ಥಲವು ಲಿಂಗವಾದರೆ ಮೂರು ಲಿಂಗ ಬೇರೆ |

ಮೂರು ಮುದ್ರಿ ಮುಂದಗೊಂಡರೆ ತಾರಾದ್ರಿದೂರೆ |

ಕಾರು ಮಿಂಚಿನೊಳೊಪ್ಪು ಕಣ್ಣಿಗೆ ತೋರಿ

ತೋರದಂಧಕರೆ | ಷಟಸ್ಥಲ ಒಂದಾಗೋ ||1||

ಅಷ್ಟಾವರ್ಣ ಅಂಗವಾಗಲು ಸೃಷ್ಟಿ ಸೇವೆ ಸಿಗಲು |

ನಿಷ್ಠಿವಂತರಾಪ್ತರಾಗಲು ಸೃಷ್ಟಿ ಚಿನ್ನಕ್ಕೆ ಮಿಗಲು |

ಭ್ರಷ್ಟ ಭಯವು ಬಂದು ನೋಡಲು |

ಅಷ್ಟರೊಳಗೆ ದೃಷ್ಟಿ ತಾಗಲು | ಷಟ್‍ಸ್ಥಲ ಒಂದಾಗೋ | |2||

ಬಲ್ಲಿದನೆನಸಿ ಮೆರೆವ ಬಿದನೂರ |ಲ್ಲಿರುವನ್ಯಾರು ಸುಲಲಿತ ಮಹಾಂತ ಮಹಾಗುರು |

ಬಲ್ಲವರೆ ಬಲ್ಲರದು ಎಲ್ಲಿ ಇಲ್ಲದನುಭವಕೆ |

ಬೆಲ್ಲ ಬೇವ ಸವಿಯದ್ಹೋದರು | ಷಟ್‍ಸ್ಥಲ ಒಂದಾಗೋ ||3||

ಜಾರತನವು ನಾ ಮಾಡಿದೆನಮ್ಮ |

ಜಂಗಮನೊಡಗೂಡಿ |

ಹಾದಿ ತಿಳಿಯದೆ ಗಾದಿಯನಾಡುವರು |

ವಾದ ತರ್ಕದಿಂದೆ ||ಪಲ್ಲ||

ಪೂರ್ವದ ಹಾದಿ ಕಡೀಸಿದನ |

ಪುನರಪಿ ಬೋಧಾ ಹೇಳಿದನ |

ಮನಸ್ಸಿನ ಮೈಲಗಿ ಬಿಡಸಿದನ |

ಕನಸಿನ ಎಚ್ಚರ ಮರಸಿದನ |

ಮೆಚ್ಚು ಮಾಡಿ ಹುಚ್ಚು ಹಿಡಿಸಿದನ |

ಸತ್ಯ ಸದ್ಗುರು ವಿರೂಪಾಕ್ಷನ ||1||

ಜಾರತನದಿ ಜಾಣೀ ಕಾಡಿದನ |

ಜಾತಿಯ ಭೇದವು ಹೇಳಿದನ |

ಜನ್ಮರಹಿತ ಜಗಪಾಲನ |

ಸುಜ್ಞಾನ ಸುಜಾತ ಸುಶೀಲನ |

ಐಕ್ಯದೊಳನುಭವ ಜ್ಞಾನವ ತಿಳಿಸಿ |

ಆತ್ಮದೊಳಗ ಅಡಕಾದನ ||2||

ಅಂಗ ಲಿಂಗದ ಸಂಗ ಬಿಡಿಸಿದನ |

ನಿಸ್ಸಂಗ ನಿರಾಳ ಮಾಡಿದನ |

ಶಿವಲಿಂಗ ಶಂಭೋ ರಸಿಕನ |

ಅಂಗದೊಳಡಗಿ ಬೈಲಾದನ |

ಗುರು ಬಿದನೂರ ವಿರೂಪಾಕ್ಷನ |

ಆತನ ಉದರದಿ ಮಡಿವಾಳ ಜನಿಸಿದನ ||3||

ಎಲ್ಲಾ ರೂಪವು ತಾನಂತೆ ತಾನಂತೆ | ಶಿವ

ನೆಲ್ಲೆಲ್ಲಿ ತುಂಬಿಹನಂತೆ ||ಪಲ್ಲ||

ಅಲ್ಲಲ್ಲರಸುತ ಗುಡಿಗಳ ತಿರುಗುವ |

ಕಳ್ಳ ಜನರಿಗೆ ಕಲ್ಲಂತೆ ಶಿವ ||ಪಲ್ಲ||

ಅನ್ಯವೆಂಬುದು ತನಗಿಲ್ಲಂತೆ | ಶಿವ |

ಕಣ್ಣಿಗೆ ಕಾಣದಿಹನಂತೆ |

ಕಣ್ಣನು ತೆರೆದು ಅರಸುವ ಜನರಿಗೆ

ಬಣ್ಣ ಬಣ್ಣವಾಗಿಹನಂತೆ ಶಿವ ||1||

ದೃಶ್ಯಾದೃಶ್ಯವು ತಾನಂತೆ | ಶಿವ

ದೃಶ್ಯಾದೃಶ್ಯಗಳೆರಡಂತೆ |

ದೃಶ್ಯಾದೃಶ್ಯಗಳ ನಡುವೆ |

ಶಾಶ್ವತ ರೂಪವು ತಾನಂತೆ ಶಿವ ||2||

ಶಂಕರನಾದವ ತಾನಂತೆ | ಶಿವ

ಕಿಂಕರರೊಳು ಸೇರಿಹನಂತೆ |

ಬಿಂಕವನಳಿಸುವ ಈ ಮರ್ತ್ಯದ ಪಿರಿ

ಮಂಕರಿಗೆ ಬಲು ದೂರಂತೆ ಶಿವ ||3||

ಕಲ್ಲು ಕಟ್ಟಿಗೆಯೊಳಗಂತೆ | ಶಿವ

ಮುಳ್ಳು ಮೊನೆಗಳಲ್ಲಿಹನಂತೆ |

ಕಲ್ಲು ಕಟ್ಟಿಗೆಯ ನಂಬುತೀ ಜಗದೆ

ಮುಳ್ಳಾದವರಿಗೆ ತಾನಿಲ್ಲವಂತೆ ಶಿವ ||4||

ನಂಬಿದ ಜೀವಕೆ ಇಂಬಂತೆ | ಶಿವ

ನಂಬದ ಜೀವಕೆ ಕಂಬಂತೆ |

ನಂಬಿ ಕರೆದಡೆ ಓ ಎಂದು ಭಕ್ತರ

ತುಂಬಿ ತುಳುಕಿ ಹರಸುವನಂತೆ ಶಿವ ||5||

ಕಲ್ಲಲಿ ಕಲ್ಲಾಗಿಹನಂತೆ | ಶಿವ

ಕಲ್ಲೊಳು ಕಳೆ ತೋರ್ತಾನಂತೆ |

ಕಲ್ಲು ಕಲ್ಲೇ ಲಿಂಗವೆಂದರಿತ |

ಬಲ್ಲಿದ ಶರಣಗೆ ಆಳಂತೆ ಶಿವ ||6||

ಅಣುವಿಗೆ ಅಣುವಾಗಿಹನಂತೆ

ಮಹತ್ತಿಗೆ ಮಹತ್ತಾನಂತೆ |

ನೆನಿಯದ ದುರುಳಗಂತಕನಂತೆ |

ಗುಣಿಗಳ ಮನದಲ್ಲಿಹನಂತೆ ಶಿವ ||7||

ಮಂತ್ರ ಮೂರ್ತಿಯಾಗಿಹನಂತೆ | ಶಿವ

ಮಂತ್ರಾಕ್ಷತೆ ಸುಪ್ರಿಯನಂತೆ

ಮಂತ್ರ ಬಾಯ ತಂತ್ರದ ಕೈಗೆ

ಮಹಾಂತೇಶ ಶಿವ ಸಿಗನಂತೆ ಶಿವ ||8|

ಹೌದಪ್ಪ ಹೌದು ದೇವರು | ನಿಂದು

ನೀ ತಿಳಿದರೆ ಇಲ್ಲಪ್ಪ ದೂರು ||ಪಲ್ಲ||

ನೀರು ಇಲ್ಲದೆ ಜಳಕ ಮಾಡಿರಬೇಕು |

ಮಡಿಯನಿಲ್ಲದೆ ಬಟ್ಟೆ ಉಟ್ಟಿರಬೇಕು ||1||

ಊಟಾ ಮಾಡಲ್ದೆ ಹೊಟ್ಟಿ ತುಂಬಿರಬೇಕು |

ಎಚ್ಚರದೊಳು ನಿದ್ದಿ ಹತ್ತಿರಬೇಕು ||2||

ತಂಬಾಕಿಲ್ಲದೆ ಬತ್ತಿ ಸೇದಿರಬೇಕು |

ಎಬಡ ತಬಡ ನಾಲಿಗಿ ಬಿದ್ದಿರಬೇಕು ||3||

ಶೆರಿಯ ಕುಡಿಯಲ್ದೆ ನಿಶಾ ಆಗಿರಬೇಕು |

ಝೋಲಿ ಹೋಗಿ ಮಹಾಂತನ ಮುಟ್ಟಿರಬೇಕು ||4||

ನಾ ಹೋದಮ್ಯಾಲ ನೀ ಹ್ಯಾಂಗಿರ್ತಿ |

ನಿನ್ನ ಮರಿಯಲ್ಹ್ಯಾಂಗ ಗುಣವಂತಿ ||

ಪೂರ್ವ ಜನ್ಮದ ಹಿಂದಿನ ಗೆಳತಿ |

ನಾ ಮಾಡಿಕೊಂಡಿದ ನಿನ್ನಗ ಹೆಣತಿ ||ಪಲ್ಲ||

ಮಡಿಯಲಿಂದ ಮನಿಮಾರ ಸಾರಸಿ | ನೀ

ಮೈ ತೊಳದಿದಿ ಬಿಸಿ ನೀರ ಕಾಸಿ ||

ಅಷ್ಟಗಂಧ ವಿಭೂತಿ ಧರಿಸಿ |

ಐದು ಬೆರಳಿಲಿಂದೆನ ಗುಣಿಸಿ ||1||

ದೇಶ ದೇಶ ತಿರುಗುತ ಬಂದ |

ವರ ನೋಡಿ ನಿನ್ನಗ ತಂದ |

ಮಾಸಿ ತಾಳಿ ಕಟ್ಟಿನಿ ಮುಂದ |

ಅದು ಕಾಣಿಸ್ತಾದ ಬಹು ಚಂದ ||2||

ದೇಶದೊಳು ಚಿಣಮಗೇರಿ ಸ್ಥಳಕ |

ಮಹಾಗುರು ಮಹಾಂತ ತೋರಿದ ಬೆಳಕ |

ನನಗ ನಿನಗ ಹಾಕ್ಯಾನ ತಳಕ |

ಅಳಬ್ಯಾಡ ಸುಮ್ಮನ ನಡಿ ಒಳ್ಯಾಕ ||3||

ಸವತಿ ಕೇಳ ನಿನ್ನ ಸಲಿಗಿ ಛಲೋದಲ್ಲಗ |

ಬಹಳ ದಿವಸ ಕೂಡಿ ಕೆಟ್ಟ ಕಾಡಿದೆನ್ನಗ |

ಈ ಲೋಕದೊಳು ಆಳಿ ಉಳಿದವರು ಯಾರು ನಿನ್ನಗ |

ನಮ್ಮ ಅಜ್ಜ ಮುತ್ಯಾ ಸತ್ತು ಹೋದರು ನಿನ್ನ ಕಾಲಾಗ ||ಪಲ್ಲ||

ಹುಟ್ಟಿದಪ್ಪನ ಮನಿ ನಿನಗ ನೆಪ್ಪಿಲ್ಲೇನಗ |

ಬಿಟ್ಟು ಗಂಡನ ಕೂಡಿ ಕೆಟ್ಟಿ ಅನ್ಯರ ಹುಡುಗಗ |

ಆರು ಮಂದಿ ಹುಡುಗರ ಹರ್ಯಾ ಬ್ಯಾರೆ ನಿನಗ |

ಅವರ ಕೂಡಿಕೊಂಡು ಕುಂಡಿ ಬಿಟ್ಟು ತಿರಗ್ಯಾಡ್ತಿ ಊರಾಗ ||1||

ಒಂಬತ್ತ ಮನಿಯ ತಪ್ಪು ದಾರಿ ನೋಡತಿ |

ಮುರುಕ ಮನಿಯಾಗ ಹರಕ ಚಾಪ್ಯಾಗ ಬಾಳೆ ಮಾಡತಿ |

ಗಂಡನ ಮನಿಗಿ ಹೋಗಂದರ ಆಗದಂತಿ | ನೀ

ಮಿಂಡನ ಕರಕೊಂಡು ಮುಳ್ಳದೊಡ್ಡ್ಯಾಗ ಹ್ಯಾಂಗ ಉಳ್ಳಾಡತಿ ||2||

ಈಸ ದಿನ ಸಣ್ಣವಳಿದ್ದು ಕಾಡಿದೆನ್ನಗ |

ಹರಿಯ ಬಂದದ ಈಗ ನನಗ ಹಾರಿ ಒದಿಯಂಗ |

ಜಪ್ಪನೆ ನನ್ನ ಮನಿಯ ಬಿಟ್ಟು ಎದ್ದೇಳೆಲ್ಲಗ |

ನಮ್ಮ ಗುಡ್ಡದ ಮಹಾಂತ ಬಂದು ಒದ್ದರ ಓಡಿದೆಲ್ಲಗ | |3||

ಅಜಪ್ತ ತಮಾಸಿ ಪೋರ್ಯಾಳೊ |

ಅಜ ಹರಿ ರುದ್ರಗ ಮೀರ್ಯಾಳೊ |

ಅಜ ಗಜ ಮಾತಿಗೆ ದೂರಾಳೊ |

ಮಜ ಮಹಾಜ್ಞಾನಕೆ ತೋರ್ಯಾಳೊ ||ಪಲ್ಲ||

ಪೋರಿ ನೋಡಿದರ ತುತ್ತ ಹಾಳೊ |

ದಾರಿ ತೆಲಿಮ್ಯಾಲ ಹೊತ್ತಾಳೊ |

ಸೀರಿ ನಿಲಿಗಿ ಮ್ಯಾಲಕ್ಕೆತ್ಯಾಳೊ |

ಮೂರು ಲೋಕ ಮುರಿದು ಒಳಗೊತ್ತ್ಯಾಳೊ ||1||

ಈ ಹೆಣ್ಣ ಯಾರಿಗಿ ಕಾಣ್ಯಾಳೊ |

ಎಲ್ಲರ ಕಣ್ಣಾಗ ಹೂಣ್ಯಾಳೊ |

ತುಣ್ಣಿಗಿ ಹುಟ್ಟಲ್ದ ಹೆಣ್ಣ ಹಾಳೊ |

ಕಣ್ಣ ಕಟ್ಟಿ ನೋಡೊ ಕಾಣಿಸುತಾಳೊ ||2||

ತೊಗಲ ಮ್ಯಾಲ ಬೆಳಸ್ಯಾಳ ಶೆಪ್ಪ |

ಮುಗಿಲಿಗಿ ಮುಟ್ಯಾವ ನೋಡಪ್ಪ |

ಅಗಲಾಡಿತು ಜಗ ಜನರಪ್ಪ | ಈ

ಬುಗಲಿನೊಳಗ ಮಡಿವಾಳನಪ್ಪ ||3||

ಸಾಕು ಸಾಕು ಸಾಕು ಸಾಕವ್ವ

ಕಾಕು ಸಂಸಾರ ಸುಡಲಿನ್ನಾರಿಗೆ ಬೇಕವ್ವ ||ಪಲ್ಲ||

ಎರಡು ಹಿಡಿಗಳೊಂದು ಕೊಡ ನಾ ತಕ್ಕೊಂಡು |

ಸರಸರ ಊರ ಬಾವಿಯ ನೀರಿಗ್ಹೋದೆನವ್ವ ||

ತ್ವರೆಯಿಂದ ಪಾವಟಿ ಇಳಿಯುವಾಗ ಕಾಲು ಜಾರಿ |

ಉರುಳಿ ಬಿದ್ದಾಗೆನ್ನ ನಡ ಮುರಿದ್ಹೋಯಿತು ತಂಗಿ ||1||

ಒಮ್ಮೆ ಇಮ್ಮನ ಗೋದಿ ನಾ ತುಂಬಿಕೊಂಡು |

ಒಮ್ಮಿಲೆ ಬೀಸಲು ಕಲ್ಲಿಗೆ ಕೂತಿದೆ ||

ಗಮ್ಮನೆ ಗರಗರ ಕಲ್ಲು ತಿರುಗುವ ಮೊದಲು |

ಹಮ್ಮಿನ ಗೂಟವು ಕಿತ್ತಿ ಬಡಿದು ಹಲ್ಲು ಉದರಿಸಿತವ್ವಾ ||2||

ಹರಕು ಚಿಂದಿ ಬಟ್ಟೆಗಳ ನಾ ತಕ್ಕೊಂಡು |

ಕರಿ ಕಟ್ಟಿ ಕೌದಿ ನಾ ಹೊಲಿಯಬೇಕೆಂದು ||

ಕರದಿ ಸೂಜಿಯ ಪೋಣಿಸಿ ಹೊಲಿಯಬೇಕೆನ್ನಲು |

ಅರಿಯದೆ ಕೈ ತಪ್ಪಿ ಸೂಜಿ ಕಣ್ಣಿಗೆ ಚುಚ್ಚಿ ಕುರುಡಾದೇನವ್ವ ||3||

ಅಡಗಿ ಮಾಡಲೆಂದು ದಿಡಗಿಲೆ ನೀರಿಟ್ಟು |

ಗಡಗಿಗೆ ಎಸರಿಟ್ಟು ಒಲೆಗೆ ಉರಿ ಹಚ್ಚಿ ||

ಕುದಿಸ್ಹತ್ತಿದೆ ಕುದಿಯುವ ಮೊದಲೆ ಅದ ಹಳಸಿತ್ತು |

ಕೆಡುವದೆಂದು ಇಳಹಿದರೆ ಕೈ ಸುಟ್ಟು ಚೂರಾಯಿತವ್ವ ||4||

ಏನು ಮಾಡಲಿ ಎಂತು ಮಾಡಲಿ ತಾ ಕೈ ಕೊಡತಿಹುದು |

ಅಜ್ಞಾನದ ಬಾಳೆಲ್ಲಾ ಹೀಗೆಂದೇ ತಿಳಿಯುವುದು ||

ಇನ್ನು ದಿನಗಳ ಕಳೆಯದೀ ಸಂಸಾರ ನೆಚ್ಚಿದೆ |

ಜ್ಞಾನಿ ಮಹಾಂತೇಶನ ಸಂಸಾರ ಹೊದ್ದುವೇನವ್ವ ||5||

ಅಲಲಲ ತಾರಿ ಪದ್ಹೆಣ್ಣ |

ಎಲ್ಲರದು ಅದ ನಿನಮ್ಯಾಲ ಕಣ್ಣ |

ಬಲ್ಲವರಿಗೆ ಮುಕ್ಕಿಸಿ ಮಣ್ಣ |

ಬಲು ಮರುಳು ಮಾಡಿ ಹಚ್ಚಿದಿ ಹುಣ್ಣ ||ಪಲ್ಲ||

ಹ್ಯಾಗೆ ಸೇವಿಸಲಿ ಮನದೋಳು | ಹೇಳ

ನಾಗವೇಣಿ ಏನಾದ ಮೇಲು |

ಯೋಗಿ ಜಾರಿ ಬಿದ್ದರು ಕಾಲು | ಹ್ವಾದರ

ಹೋಗಬೇಕು ನಿನ್ನಂಥವಳ ||1||

ಹಾದರ ಮಾಡಿದಿ ಬಲು ಹಬ್ಬ | ನಿನ್ನಗ

ಹ್ವಾದ ಪುರುಷ ಉಳದಿಲ್ಲ ಒಬ್ಬ |

ಗಾದಿ ಜನಕ ಹಿಡದಿತ್ತು ಮಬ್ಬ | ದೊಡ್ಡ

ಸಾಧು ಜನಕ ರಸದಾಳಿ ಕಬ್ಬ ||2||

ನಿನಗ್ಹ್ವಾದ ಪುರುಷರು ಧನ್ಯ |

ಮಾನ್ಯರೆನಿಸಿ ಪಡೆದರು ಪುಣ್ಯ |

ಭಿನ್ನ ಭವಕ ಕಾಮನ ಶೂನ್ಯ |

ಸನ್ನುತ ಮಡಿವಾಳನ ನಾಣ್ಯ ||3||

ಬಿಡು ಬಿಡು ಬಿಡು ಇಂಥ |

ಜಡ ದೇಹದ ಸಂಗ |

ಸುಡುವ್ಯಾತಕೆ ಮರುಳೆ | ಛೀ ||

ಸುಡು ಯಾತಕೆ ಮರುಳೆ |

ದೃಢ ಶರಣರ ನಂಬಿ |

ಪಡೆದವರಿಗೆ ಮುಕ್ತಿ ತಡವೇನಲೆ ಮರುಳೇ ||ಪಲ್ಲ||

ಆನಿಯೇರಿದ ಮಡ್ಡ |

ಕೋಣನೇರಿದವಗ |

ಮಾನಿತವೇ ಮರುಳೇ ಇದು ನಿಮಗೆ ||

ಮಾನಿತವೇ ಮರುಳೇ |

ಜಾಣರಹಿತನಾಗಿ |

ತಾನೆ ನಿಂದಕನಾದರಿನ್ನೇನೆಲೆ ಮರುಳೇ ||1||

ಕುನ್ನಿ ನೀ ಮೋರೆತ್ತಿ |

ಅನ್ಯ ಶಿವನೆಂಬುವದು |

ಅನ್ಯಾಯವೆಲೆ ಮರುಳೆ ನಿಮಗಿದು |

ಅನ್ಯಾಯವೆಲೆ ಮರುಳೇ |

ತನ್ನೋಳಾತ್ಮನ ಬಿಟ್ಟು |

ಪುಣ್ಯಪಡಿಯಲ್ಹೋದರೆ ಇನ್ನೇನೆಲೆ ಮರುಳೆ ||2||

ಚದುರತನದಲಿ |

ಕೆದರಿ ವಿಷದೊಳು |

ಬರಿದಾಗುವದು ಮರುಳೆ ಛೀ ನಿನಗೆ ||

ಬರಿದಾಗುವದು ಮರುಳೇ |

ಚದುರ ಮಹಾಂತೇಶನ |

ಪಾದಕ್ಕೊಂದಿದ ಮೇಲೆ ಕುದಿ ಯಾತಕ್ಕೆ ಮರುಳೆ ||3||

ಬಾಬಾ ಭಲೆ ಭಾವಕ ಹೆಣ್ಣಾ |

ದಾರಿಗೆ ತಿಳಿಯದು ನಿನ ಬಣ್ಣಾ |

ಅನಂತ ಕಾಲದಲಿ ಸಾಧಿಸಿ ಬಂದರೆ | ಕಾಣಲಿಲ್ಲ ಬಣ್ಣಾ ||ಪಲ್ಲ||

ನೆತ್ತಿಲಿ ಕಣ್ಣಾದ ಕಾಲೊಳು ಬೈತಲಿ ತಗದಾದ |

ಮುತ್ತನಿಟ್ಟಾದ ಮೂಗಿನ ಸೊಳ್ಳಿನ ಕೊಯಿದದ |

ಮುತ್ತದ ಬಾಗಿಲ ಎಲ್ಲ್ಯಾದ | ಮುಗಿಲು ಮಗನನ್ನು ಹಡಿದದ ||1||

ಮಲಿಯು ಒಂದಾದ ಹಾಲಿನ ಹೊಳಿಯ ಹರಿಯುತಾದ |

ಹುಲಿಯನೇರ್ಯಾದ ಹಾವಿನ ಹೆಡೆಯ ಎತ್ತೇದ |

ತಳಮಳಗೊಂಬುವ ಕಾಮನ ಕೈಯಲಿ | ಕಠಾರಿ ಹಿಡದದ ||2||

ಹೆಣವನೇರ್ಯಾದ ಹಸ್ತರ ನೊಣವ ನುಂಗ್ತಾದ |

ತೃಣವ ಪಿಡದಾದ ಸತ್ತ ಹೆಣಕ ಜಯಸ್ತಾದ |

ಅನಂತ ಮಹಾಗುರು ಮಾಂತಗೆ | ಅನುಕೂಲದಲ್ಲಾದ ||3||

ನಾಯಿ ಬರುತಾದೋ ಏ ಮನುಜ |

ಎಚ್ಚರಿರಬೇಕೊ ಮನುಜ |

ನಾಯಿ ಅಂದರೆ ನಾಯಿ ಅಲ್ಲ |

ಜ್ಞಾನ ತಪ್ಪಿದೊಂದು ಹೀನ ನಾಯಿ ||ಪಲ್ಲ||

ಉಂಡು ಮಲಗಿಕೊಂಬುವ ನಾಯಿ |

ನಂಬಿದವರನ್ನು ಕೆಡಿಸುವ ನಾಯಿ |

ಅವರ ಕಟ್ಟಿ ಮೇಲೆ ಕುಂತು |

ಅವರ ಇಚ್ಛಾ ಹೇಳುವ ಲುಚ್ಛಾ ನಾಯಿ ||1||

ಪಟ್ಟದ ಸ್ತ್ರೀಯಳಿಗೆ ಬಿಟ್ಟಂವ ನಾಯಿ |

ಹೆಂಡತಿಗೆ ಬಿಟ್ಟು ಅನ್ಯರ ಸಂಗಕ್ಕೆಳಸಂವ ನಾಯಿ |

ಗಂಡನಿಲ್ಲದ ಸ್ತ್ರೀಯಳ ಹಿಂದೆ ಬಿದ್ದು|

ಭಂಡ ಮಾಡುವವ ಹಂಡ ನಾಯಿ ||2||

ತಂದ ಸಾಲ ಕುಡುವಲ್ದಂವ ನಾಯಿ |

ಕೊಟ್ಟ ಭಾಷೆ ತಪ್ಪಂವ ನಾಯಿ |

ಗಟ್ಟಿ ಗುರು ಮಹಾಂತೇಶನ ಪಾದ

ಮರೆತು ಕೂಡುವವ ಮಳ್ಳ ನಾಯಿ ||3||

ತನ್ನಿಂದ್ಹೊರತಿನ್ನಾರವ್ವ ತಂಗೀ |

ನಿನ್ನೊಳು ನೀ ತಿಳಿ ಪೂರವ್ವಾ ||ಪಲ್ಲ||

ತನ್ನೊಳು ಶಿವಮೂರ್ತಿ ಹಾನವ್ವಾ |

ನಿನ್ನ ಬಿಟ್ಟು ಹುಡುಕಬಾರದು ಪೀರವ್ವಾ ||1||

ಕಾಲ ಮುಂದಾಗಿ ಹುಡಕ್ಕೊಳ್ಳವ್ವಾ |

ಸಣ್ಣ ಬಾಲನಾಗಿ ದುಡಕೊಳ್ಳವ್ವಾ | |2||

ಸರ್ವ ರೂಪದಲ್ಲಿ ಸುದ್ದವ್ವಾ |

ನಿರ್ಮಲ ಮನದಲಿ ಎದ್ದೆವ್ವಾ ||3||

ಸರ್ವರಿಗಾದಿ ಅತಿ ಮುದ್ದವ್ವಾ |

ಮಹಾಂತನ ಪಾದಕೆರಗಿ ಬಿದ್ದೆವ್ವಾ ||4||

ಫುಗಡಿಯ ಹಾಕತೀನಿ | ಈತನಗೂಡ

ಇಗಡಿಯ ಮೈಗುಣ |

ಬಿಗಡಿಸಿ ಪೋದನವ್ವ ||ಪಲ್ಲ||

ಜರದ ಸೆಲ್ಯಾನುಟ್ಟು |

ಹಿಂದಿನ ಹಳೆಯ ಹಾದರ ಸುಟ್ಟು |

ಧಡ ಮಾಡಿಸಿದಂತಹ ನತ್ತ-ಬುಗಡಿ ಇಟ್ಟು ||1||

ಕಾಲಕಾಲಕ್ಕ ಸುತ್ತಿ |

ನಿಲಕಿಲ್ಲ ಈಕಿ ಹಾಳೋ ಮಹಾಸತಿ |

ತಳಕ ಹಾಕತೀನಿ ಝಳಕ ಹೊಡಿಯತೀನಿ ||2||

ಬೆಳಕಿನೊಳಗೆ ನಾ ಊರಿಗಿ |

ಹೊಳೆವ ಹೆಣ್ಣ ಬೋಧಿಸಿ ಬಾಳೆಹಣ್ಣ ತಿನಿಸಿ |

ಚಿಣಮಗೇರಿ ಮಹಾಂತ ಇಟ್ಟಾನ ಕಣ್ಣ ||3||

ನಿಶ್ಯಬ್ದ ಬ್ರಹ್ಮನೆಂಬುವ ಶೃತಿಯಿದು ತಿಳಿದಿತ್ತೇನ್ರಯ್ಯ |

ತಿಳಿದರೆ ಧೋರಣ ಹೇಳ್ರಯ್ಯ |

ನಿಃಶ್ಯಬ್ದ ಶಬ್ದ ಅವಾಚ್ಯ ವಾಚ್ಯ ನಿಃಕಾರಣ ಕೇಳ್ರಯ್ಯ ||ಪಲ್ಲ||

ಬುದ್ಧಿ ಸುಬುದ್ಧಿ ಕುಬುದ್ಧಿ ಮೂರಿವು ನಂಬಿಗೇನ್ರಯ್ಯ |

ಶಿವ ಶಿವ ಸಿದ್ಧಾಂತ ಶುದ್ಧವಾದ ಮೇಲೆ ಹಂಬಲವ್ಯಾಕ್ರಯ್ಯ ||1||

ಜ್ಞಾನ ಅಜ್ಞಾನವಾದ ಮೇಲೆ ಯೋಗವು ಯಾಕ್ರಯ್ಯ |

ಶಿವ ಶಿವ ಮಾನಾಪಮಾನಾಗುವಂಥ ಮಾನ್ಯಗಳ್ಯಾಕ್ರಯ್ಯ ||2||

ಧರ್ಮ ಅಧರ್ಮವಾಗುವದು ಅದ್ಯಾತಕ್ರಯ್ಯ |

ಶಿವ ಶಿವ ಕರ್ಮ ಅಕರ್ಮವಾಗುವದು ಅದೇನ್ರಯ್ಯ ||3||

ಹುಟ್ಟುವದೆ ಭವ ಬೆಳೆಯುವದೆ ಬಂಧವಯ್ಯ |

ಶಿವ ಶಿವ ಸಾಯುವದೆ ಸಕಲಕೆ ಸಾಕ್ಷ್ಯವಯ್ಯ ||4||

ಗುರು ಮಹಾಂತೇಶನು ಮಡಿವಾಳಲ್ಲೆನು ಬೆಡಗಿನ ಕನಸಯ್ಯ |

ಶಿವ ಶಿವ ಜಡ ತೋರಿಕೆ ಜಡರಳಿಯರದೃಶ ಬಡಿವಾರ ಮನಸಯ್ಯ ||5||

ಹೊರಸೊಂದು ಹೆಣಿದೇನ ತಂಗಿ ನಾ |

ಗುರುವಿಗೆ ಪವಡಿಸಲು ||ಪಲ್ಲ||

ಚತುರ್ದಿಕ್ಕು ಸಾಗೋಣಿ ಅಂದದಾ ಚೌಕಟ್ಟು |

ಚತುರತನದಲ್ಲಿಗೈದ ಓರಣದಂಬಟ್ಟು ||

ಗತಿಯಲ್ಲಿ ಸುಮತಿ ಸುಗತಿ ರಂಗೋಲಿ ರಂಗಿಟ್ಟು |

ಹಿತದಲ್ಲಿ ಪಂಚತತ್ವ ತೈಲ ಲೇಪಿಸಿ ನಾ ||1||

ನರಜನ್ಮ ನಾರು ಬಿಡಿಸಿ ತೇದು ಸಿಪ್ಪೆ ಮಾಡಿ |

ಕರದೆಡಬಲ ಹೊಸೆದು ಉದ್ದನುಲಿಯನೆ ರಚಿಸಿ ||

ಗುರಿಯೆಂಬ ಗುರಿ ಕಟ್ಟಿ ನೀಟಾಗಿ ದುಂಡ ಸುತ್ತಿ |

ಪರಿಯಿಂದ ಹೆಣೆಹೆಣೆದು ಗುರುದೇವಗೆ ನಾ ||2||

ಕರಪಾದಗಳೊಗ್ಗೂಡಿಸಿ ನಾಲ್ಕು ಪಾದಗಳ ಮಾಡಿ |

ನರನೂರಾರ ಜೋಡಿ ಹುರಿಗೋಲ ಮಾಡಿ ||

ಕರಣ ಚತುಷ್ಟಯ ಎಂಬ ಕಾಚಾವ ಪಿಡಿಸಿ |

ಹಿರಿದಾರು ಗುಣಗಳ ಕಿರಿ ಹಗ್ಗ ಬಿಗಿದು ನಾ ||3||

ಎರಡು ಸಾವಿರ ಸಂದು ನೂಲಿಕೆಯಲಿ ಮುಚ್ಚಿ |

ಆರವಿನಾ ಎಡೆಜೋಡು ಜೋಕೀಲಿ ಬಿಡಿಸಿ ||

ಕರಿಗೊಂಡಲೆಯುವ ಕುಂಡಲಿಯ ತಡಿಯದಲಿರಿಸಿ |

ಬರಿ ಜೋಡು ನುಲಿಕೆಯ ಬಿಗಿದು ಬಯಲಲ್ಲಿ ನಾ ||4||

ನಿರವಯಲೇಕಾಂತದ ಅರಮನೆಯಲ್ಲಿ ಹೊರಸ್ಹಾಕಿ |

ಸಮರ್ಪಣ ಭಾವದ ದಿಂಬು ಗಾದಿಗಳಿರಿಸಿ ||

ಕರ್ಮ ಸಂಚಿತ ಕಳೆದು ಸರ್ವಸ್ವ ಮಡಿ ಮಾಡಿ |

ಸರ್ವೇಶ ಗುರುಮಹಾಂತ ಪತಿಗೂಡಿ ಮಲಗಲು ನಾ ||5||

ಅಲಲಲಲಲ ದೆವ್ವ ಏನ ಬೆರಕಿಯವ್ವ |

ದೇವರ ಹಂತಿಲಿ ವಸ್ತಿ ಮಾಡ್ತಾದವ್ವ ||ಪಲ್ಲ||

ಕೂಡಿಕೊಂಡೇನಂದರ | ಅದು ಕೂಡಲಿಲ್ಲವ್ವ |

ಕಡಿಗೇರ ಅದಾ ಅಂದರ | ಕಡಿಗಿಲ್ಲವ್ವ ||1||

ದೆವ್ವಿನ ಮಹಿಮಾ ಇದು | ಎಂತಹದವ್ವ |

ಮಹಾ ತತ್ವಜ್ಞಾನಿಗೆ | ತಿಳಿದಾದವ್ವ ||2||

ಹಂಡ ದೆವ್ವ ಭಾಳ ಬೆರಕಿ | ಹೆಸರ ಹೇಳದವ್ವ |

ಪುಂಡ ಪುಂಡ ಮಂದಿಗೆಲ್ಲ | ಭಂಡಾಟಕ ಹಚ್ಚ್ಯಾದೆವ್ವ ||3||

ಪುರಾಣ ಪುಸ್ತಕ ಓದವರಲ್ಲಿ | ಕಾರಭಾರ ಮಾಡ್ಯಾದವ್ವ |

ನೀಲಿ ಹೊತ್ತಿಗಿ ಓದಿದವರಲ್ಲಿ | ನಿದ್ದಿ ಮಾಡ್ಯಾದವ್ವ ||4||

ಸಾಧು ಆಗಿ ತಿರಗವರಿಗಿ | ಸಾಲಿಗ್ಹಾಕ್ಯಾದವ್ವ |

ಗುರು ಮಹಾಂತನ ಧ್ಯಾನದೊಳು | ನೆಲಿಯಾಗ್ಯಾದವ್ವ ||5||

ಎಂಥ ಮದವಿ ಮಾಡಿಕೊಂಡೆ ನೋಡಕ್ಕಯ್ಯ |

ಹಂದರದಾಗ ಮಿನಿದವರೆಲ್ಲ ಖರೇ ಬೋಳೇರಯ್ಯಯ್ಯ ||ಪಲ್ಲ||

ತುಂಡ ಮುಂಡರೈವರು ಕೂಡಿ ನೀರ ಮಿನಿದಿದರು |

ಗಂಡನಿಲ್ಲದೆ ಗೈಯ್ಯಾಳೇರು ಐರಣ ಹೊತ್ತಿದರು ||1||

ಕುಂಟರ್ಯಾಳರು ಎಂಟು ಮಂದಿ | ನೆಂಟರು ಮಾಡಿದೇವ

ಬಂಟರೈವರು ಕೂಡಿ ಎನಗೂಡ | ತಂಟ ತೆಗದಿದರೈಯ್ಯಯ್ಯೊ ||2||

ಸಂತಗತ್ತಿ ಶಾಸಿದಾಗ ಒಂದು ಕೂಸ ಸತ್ತಿತು |

ಅಲ್ಲಿದು ಇಲ್ಲಿದು ಬೀಗ ಬೀಗತಿ ಅಳಕೋತ ಹೊಂಟಿತಯ್ಯಯ್ಯೊ ||3||

ಸುಂಟರ ಗಾಳಿ ಸುತಕೊಂಡ ಕೊಂಪಿಗಿ ಬೆಂಕಿ ಹತ್ತಿತೈಯ್ಯಯ್ಯೊ |

ಥೊಂಟ ಮೂತಿ ಬೀಗತಿ ಬೀಗ ಹೊರಗ ನಿಂತಿದರೈಯ್ಯಯ್ಯೊ ||4||

ಏಸೋ ಕಾಲದ ಗುರು ಗುಡ್ಡದ ಮಹಾಂತಗ ನೆನದೀನ |

ಗುಡ್ಡದ ಮಹಾಂತನ ಪಾದದೊಳಗ ಮಾಯವಾಯ್ತಯ್ಯಯ್ಯೊ ||5||

ಧನವ ಗಳಿಸಬೇಕು ಇಂಥಾದ್ದು | ಈ

ಜನರಿಗೆ ತಿಳಿಯದಂಥಾದ್ದು |

ಅನುದಿನ ಅಜಹರಿ ಮನು ಮುನಿಗಳಿಗೆಲ್ಲ |

ಹೌದು ಹೌದು ಹೌದೆಂಬಂಥಾದ್ದು ||ಪಲ್ಲ||

ಕೊಟ್ಟರೆ ಹೋಗದಂಥಾದ್ದು | ಅದು

ಇಟ್ಟರೆ ತೀರದಂಥಾದ್ದು |

ಕಟ್ಟಿದ ಗಂಟು ಬೈಲೊಳಗಿಟ್ಟರೆ |

ಮುಟ್ಟಲಿ ಬಾರದಂಥಾದ್ದು ||1||

ಕರ್ಮ ಬಾರದಂಥಾದ್ದು | ಅದರ

ಮರ್ಮ ತೋರದಂಥಾದ್ದು |

ನಿರ್ಮಳವಾದ ಮನಕೆ | ದಾನ

ಧರ್ಮವನು ಮಾಡುವಂಥಾದ್ದು ||2||

ಮರವಿಗೆ ಬಾರದಂಥಾದ್ದು | ನಿಜ

ಅರುವಿನಲ್ಲಿ ಇರುವಂಥಾದ್ದು |

ಮರವು ಕಳೆದು ಶ್ರೀಗುರು | ಮಹಾಂತೇಶನ

ಕರುಣದಿಂದ ಕಾಯುವಂಥಾದ್ದು ||3||

ಈ ಗಂಡನ ಸುಖವು ಎನಗೆ ತೋರಿತವ್ವ |

ಭವ ನೀಗಿದೆನವ್ವ ನೆರಮನಿ ಸೂಳೇರ |

ಅಂಜಿಕೆ ಏನವ್ವಾ ಗಂಡ ಕೆಟ್ಟವನವ್ವ ||ಪಲ್ಲ||

ಆರು ಮಂದಿಯೆನ್ನ ನೆಗಿಯಣ್ಣಿದೇರವ್ವ |

ಕಾಲ ಕಣ್ಣೇರವ್ವ ನನ್ನ ಕಂಡರೆ | ಮಣ್ಣು ಸೇರರವ್ವ ||

ದೇಶ ದಿಕ್ಕಾಪಾಲಾಗಿ ದೂರ ಹೋದರವ್ವ | ಒಬ್ಬಳುಳದೇನವ್ವಾ ||1||

ಮೂವರು ಗೆಳೆಯರು ಕಣ್ಣು ಇಡುವರವ್ವ |

ಅವರು ಮೋಹವ ಬಿಡರವ್ವ | ಓಡಿ ಮೂಲಿಮನಿ ಸೇರಿಕೊಂಡೆನವ್ವ

ಗಂಡ ಮಾಡಿಸಿಕೊಟ್ಟ ನತ್ತ ಬುಗಡಿಯವ್ವಾ | ನಾನಿಡುವುವೆನವ್ವಾ ||2||

ದೇಶಕಧಿಕವಾಧ ಮಹಾಂತ ಪೂರನವ್ವಾ |

ಅಲ್ಲಿ ಇರಹುವನವ್ವಾ ಮದವಿಯ ಗಂಡ | ಎನ್ನ ಮಹಾಂತೇಶನವ್ವಾ

ತಾಳಿ ಕರಮಣಿ ಕಟಗೊಂಡೆನವ್ವ | ಮುಕ್ತಿ ಪಡದೇನವ್ವಾ ||3||

ಎಂಥ ಕಾಟದವಳೀ ನಮ್ಮತ್ತೆವ್ವ

ಇಂಥ ಕಿಟಿಕಿಟಿ ತಾಳಲಾರೆ ಎನ್ನವ್ವಾ

ಕಟಕಟ ತಿಂತಾಳ ಹಲ್ಲ ತನ್ನವ್ವಾ

ಮಾರಿ ಮಿಟಿಮಿಟಿ ನೋಡತಾಳೆನ್ನವ್ವಾ ||ಪ||

ಆರು ಮೂರು ತೂತಿನ ಕೊಡನವ್ವಾ

ನೀರ ತಾ ಅಂತಿರಿ ಭಡನವ್ವ

ಹ್ಯಾಂಗ ನೀರು ನಿಂತಾವು ತಡದವ್ವ

ಅತ್ತಿ ಹ್ಯಾಂಗ ಮಾಡಬೇಕು ಹೇಳ ಭಡನವ್ವ ||1||

ಹಸಿ ಲದ್ದಿ ಕೊಡದ ನಂಬಿಗೇನ

ಆಸಿ ಬಿದ್ದು ಕೊಡ ತುಂಬಲೇನ

ಫಾಸಿ ಹಾಕುವ ಯಮಧರ್ಮ ತಾನ

ಸೂಸಲಾದ ಮಠ ಗುರುವಿನ ಧ್ಯಾಸವನ್ನ ||2||

ನೆತ್ತೀ ಮ್ಯಾಲ ಹೊತ್ತು ಕೊಡ ಒಡದೀನ

ನೀ ಸತ್ತು ಹುಟ್ಟು ಎಂಥಾದು ಅಳದೀನ

ಮುತ್ಯಾ ಅಜ್ಜನ ಹೆಜ್ಜೀ ಮ್ಯಾಲ ನಡೆದೀನ

ಮುತ್ತು ಮಹಾಂತೇಶ ಯೋಗಿನ ಪಡೆದೀನ ||3||

ಅಲಲಲ ಆಶ್ಚರೀ ಕಂಡಾದಿತು

ಎನ ಜೀವ ಘಾಬರಿ |

ಅರಿಯದ ಮೂರ್ಖರಿಗಿದೇ ಮರಿ

ಗುರುಭಕ್ತರಿಗಿಟ್ಟಾಂಗಿದರ ಗುರಿ ||ಪಲ್ಲ||

ಮಾರಿ ಇಲ್ಲದೆ ಮೈಯ್ಯಾದೋ

ಮೈಯಿಗೆ ಸಹಸ್ರ ಕಾಲಾವೋ |

ಕಾಲಿನ ತುದಿಯಲಿ ಕಣ್ಣಾದೋ | ಆ

ಕಣ್ಣಿನೊಳಗವಂದು ಹೆಣ್ಣಾದೋ ||1||

ಹೆಣ್ಣಿನ ನೆಲಿ ಬಹು ದೂರಾದೋ | ಮೂರು

ಕಣ್ಣಿನವಗ ಭ್ರಮಿಗೊಳಿಸ್ಯಾದೋ |

ಬಣ್ಣಿಸಿ ಬಾಯಿ ತೆರಿಸ್ಯಾದೋ | ಅದು

ಪುಣ್ಯ ಪುರುಷಗ ವಶವಾದೋ ||2||

ಕವಿಗಳ ಕಣ್ಣ ತಗಿಸ್ಯಾದೋ | ದೊಡ್ಡ

ಶಾಸ್ತ್ರಿಕರ ಹಲ್ಲ ಮುರಿಸ್ಯಾದೋ |

ಕಿವಿಯೊಳು ನಾಲಿಗೆ ಚ್ಯಾಚ್ಯಾದೋ

ಗುರು ಮಹಾಂತನವತಾರ ತಾಳ್ಯಾದೋ ||3|

ಜನ್ಮ ಪಾವನ ಆಯಿತವ್ವ |

ತಾಯವ್ವಳವುವದ್ಯಾಕವ್ವ ||ಪಲ್ಲ||

ಸ್ಥೂಲದೇಹ ನಿಂದವ್ವ |

ಒಳಗಿರುವ ವಸ್ತು ಯಾರವ್ವ |

ನಿನ್ನ ಗುರ್ತು ತಿಳಿಯವ್ವ ಮಕ್ಕಳ್ಯಾರು ಸುಳ್ಳವ್ವ ||

ಹಿಂದಿನ ಕರ್ಮದಿಂದವ್ವ |

ನಾದ ಬಿಂದು ರೂಪ ತಾಳಿದೆನವ್ವ |

ಬಂದ್ಯಾ ನಿನ್ನೊಳು ಜನಿಸೆವ್ವ ತಾಯವ್ವ ಅಳವುವದೇಕವ್ವ ||1||

ನೀರ ಮ್ಯಾಲಿನ ಗುರುಳೆವ್ವ |

ಅದರಂತೆ ಈ ಜನ್ಮವ್ವ |

ಹಿಂದೇಸು ಮಂದಿ ತಾಯಿ ತಂದೆವ್ವ ನಾ |

ಬಿಟ್ಟು ಬಂದಿನಿ ಹೊರಟವ್ವ |

ಅದರಂತೆ ಈ ಜಗವವ್ವ |

ತಾಯವ್ವಳವುದು ಯಾಕವ್ವ ||2||

ಹನ್ನೊಂದು ಮಕ್ಕಳ್ಹಡದೆವ್ವ |

ಅವರೆಲ್ಲಿವರೆಲ್ಲಿ ಹಾರವ್ವ |

ಯಾರಿಗೆ ಯಾರಿಲ್ಲ ದೂರವ್ವ ||

ಈ ಸಂಸಾರವು ಬಲು ಕಷ್ಟವ್ವ |

ನಿರ್ಬಯಲ ಮಹಾಂತನ ಕೂಡವ್ವ |

ಮುಕ್ತಿಯ ಪಡಿಯೇ ಹಡದವ್ವ ||3||

ಭೂವರ ಗ್ರಹಕರ ಮನಿಯೆಂಬಿರಿ |

ದಾವ ಪೂರ್ಣಾಲಯವ ನೀವೆಂಬಿರಿ |

ಅವನ ಮನಿ ಭರಿಸೇನು ತುಂಬಿರಿ ||ಪಲ್ಲ||

ಶಿಕ್ಷ್ಯ ಲಕ್ಷ್ಯ ಸುಲಕ್ಷ್ಯ ಸಮಕ್ಷ್ಯದೊಳಿರತಿರಲಾಗಿ |

ಅಕ್ಷಯ ಭೋಗ ನಿರೀಕ್ಷಿಸಿ ಸರ್ವರುಪೇಕ್ಷಿಸುವದು |

ಏನದ ಮಿಗಿಲಾಗಿ ಏನದ ಮಿಗಿಲಾಗಿ ||1||

ಕರ್ಮ ಮುಂದವೋ ಕಾಲ ಮುಂದವೋ |

ಕರ್ಮ ಕಾಲಕೇನಾದಿ ನಿರ್ಮಲರಾಗುವ |

ವರ್ಮವ ತಿಳಿ ನಿಃಕರ್ಮಕಿಸೋದಾವದ್ಹಾದಿ ||2||

ಪಾವನ ಬಿದನೂರ ಓ ಓ ಮಹಾಂತನ |

ಸೇವಕರಾಗೋದ ಅಗಡಾ ಕೇವಲ ಸಮರಸ |

ಭಾವಭರಿತ ಸಂಜೀವ ಕಳಾನಂದೆ ತೋರ್ವದೇ ತಾಬಿತಾ ||3||

ಗಡಗಿ ತೊಳದು ಅಡಗಿ ಮಾಡಮ್ಮಾ| ತನು

ಗಡಗಿ ತೊಳದು ಅಡಗಿ ಮಾಡಮ್ಮಾ ||ಪ||

ಅನುಭಾವದಡಗಿ ಮಾಡಿ ಎಡಿಯ ಮಾಡಮ್ಮಾ |

ದೇವರಿಗೆಡಿಯ ಮಾಡಿ ಗಂಡಗುಣಿಸಮ್ಮಾ ||ಅ.ಪ||

ಕರ್ಮವೆಂಬ ಜೋಳ ಬೀಸವ್ವ | ನೀ

ಧರ್ಮ ಜಲಡಿಯಿಂದ ಹಿಟ್ಟ ಸೋಸವ್ವ |

ನಿರ್ಮಳಾತ್ಮ ನೀರ ಹಾಕವ್ವಾ | ನೀ

ನೇಮದಿಂದ ಕಣಕ ನಾದವ್ವಾ ||1||

ಗುರುಲಿಂಗ ಜಂಗಮ ಮೂರವ್ವ |

ಪರಸಾಕ್ಷಿ ಒಲಿಗುಂಡ ಹೂಡವ್ವ |

ಪರಿಪರಿ ಕಷ್ಟದ ಕಾಷ್ಠ ಸುಡುವವ್ವ |

ಹರಿದಾಡುವ ಮನಸಿಟ್ಟು ಕೂಡವ್ವಾ ||2||

ಸಂಚಿತ ಕರ್ಮದ ಹಂಚ ನಿಂದವ್ವ |

ಮುಂಚಲೆದ್ದು ಸ್ವಚ್ಛಾಗಿ ತೊಳಿಯವ್ವ |

ಹಂಚಿಕಿಲಿಂದ ಜ್ಞಾನದಗ್ನಿ ಉರಸವ್ವ |

ಸಂಚಿನಿಂದ ಪರ ರೊಟ್ಟಿ ಬೇಸವ್ವ ||3||

ಭಕ್ತಿ ಎಂಬ ಭತ್ತ ಕುಟ್ಟವ್ವ | ನೀ

ಖಟ್ಟ ಅಕ್ಕಿ ಹಿಡಿದು ಹೊಟ್ಟ ತೆಗಿಯವ್ವ |

ನಿಷ್ಠೆಯಿಂದ ಅನ್ನ ಮಾಡಿ ಚರಗಂಡ ಗುಣಿಸವ್ವ

ಶ್ರೇಷ್ಠ ಮಹಾಂತೇಶಗೊಲಿಸಿ ಮುಕ್ತಿ ಪಡಿಯವ್ವ ||4||

ಎಂಥ ಊರವ್ವ ತಂಗಿ ಎಂಥ ಊರ

ಸಿಂತರಕೋರ ಮಂದಿ ಇಲ್ಲಿ ಬಹಳ ಹಾರ

ಸಂತಿ ಮಾಡಿಕೊಂಡು ಜಲ್ದಿ ಹೋಗನು ಬಾರ | ಅವರ

ಸಂತಾರಲಿ ನಿಂತಲ್ಲಿ ಸುಳಿಯುತಾರ ||ಪ||

ಎಂಟು ಮಂದಿ ಭಾಳ ತುಂಟ ಹಾರ | ಅಲ್ಲಿ

ಬಂಟರು ಮೂವರು ನಿಂತು ದಾರಿ ಕಾಯುತಾರ

ಘಂಟಿ ಬಾರಿಸುವನೊಬ್ಬ ಸೂತ್ರಧಾರ

ಕುಂತು ಕೇಳುವಂಥ ತುಡುಗರು ಇಬ್ಬರ ಹಾರ ||1||

ಮೂರಿಪ್ಪತ್ತು ನಿಕ್ಕಾ ಎರಡು ದೀಡನೂರ | ಇಂಥ

ಖೋಡಿ ಸೂಳೆಮಕ್ಕಳು ಊರ ತುಂಬ ಹಾರ

ಇವರಿಗಿ ಹದ್ದು ಹರಿದು ತಿನ್ನಲ್ಲಿ ಎಷ್ಟುದ್ದ ಬೆಳದಾರ

ಸದ್ದು ಮಾಡದೆ ಸುಡಗಾಡು ಸೇರತಾರ ||2||

ಕಡೆಯ ಕಡಕೋಳ ಗ್ರಾಮ ನಮ್ಮ ತವರೂರ

ಸುತ್ತ ದೇಶಕ್ಕೆ ಆಯಿತು ಜಾಹಗೀರ

ಎಂಥ ವ್ಯಾಳ್ಯಾ ತಂದ ಮಹಾಂತ ಕರ್ತೃವೀರ

ಆತನ ಸೇವೆ ಮಾಡಿಕೊಂಡು ಭವ ನೀಗನು ಬಾರ ||3||

ಧಡಿಯ ಧೋತರ ಝಮಕೊಂಡಿ

ನೀ ಯಾರ ಮನ್ಯಾಗ ಮನಕೊಂಡಿ

ಕಟ್ಟಿದ ತಾಳಿ ಕಳಕೊಂಡಿ

ನೀ ಫಿರ್ಯಾದಿ ಬಂದೇ ಹುಚರಂಡಿ ||ಪ||

ಖೊಟ್ಟಿ ಗುಣಗಳು ನಿನ್ನಲ್ಲಿ ಇಟಗೊಂಡಿ

ಆ ಖೊಟ್ರಪ್ಪಗ ನೀ ಎತಗೊಂಡಿ

ಕೊಟ್ಟದ್ದು ಕುಡು ಅಂದ್ರ ಬಡಕೊಂಡಿ

ಸುಳ್ಳ ಆಡಿದರ ಒದ್ದೇನು ಕುಂಡಕುಂಡಿ ||1||

ಊರ ಮುಂದಿನ ಗುಡಿ ನಂದಂದಿ

ಆ ಮಸೂತಿ ಬಾವಾಗ ಹೋಗಿ ಹಿಡಕೊಂಡಿ

ದೆವ್ವ ಆಗಿ ಮಂದಿಗಿ ನೀ ಬಡಕೊಂಡಿ

ಘಳಿಗ್ಯಾಗ ಬಾಳ್ಯಾ ಎಲ್ಲ ಬಳಕೊಂಡಿ ||2||

ನಿನ್ನ ನಿಜವು ನೀ ತಿಳಿವಲ್ಲಿ

ನಾ ಹೇಳಿದ ಮಾತ ಕೇಳವಲ್ಲಿ

ಕಳ್ಳ ಗುಣ ಬಿಡು ಹುಚಮಲ್ಲಿ

ಗುರು ಮಹಾಂತ ಪಾದ ನೀ ಬಿಡದಿರು ಅಲ್ಲಿ ||3||

ಭಂವಸೈ ಆಡಿದೆನಾ ಮೋಹರಮ್ಮಕ

ಆಲಾಯಿ ಆಡಿದೆನಾ ಮೋಹರಮ್ಮಕ

ಭವ ಎಂಬ ಭವಸೈ ಅರುವಿನ ಆಲಾಯಿ

ಮೂರು ಕೂಡಿದಲೇ ಮೋರಮ್ಮ ಮಾಡಿದೆನಾ ||ಪ||

ತನು ಮಸೂತಿಯೊಳು ನಾ

ಪಂಚ ತತ್ವ ಪಂಜೆಯ ಕೂಡಿಸಿ

ಈಡಾ ಪಿಂಗಳ ಹಸೇನಿ ಹುಸೇನಿ

ಜೀತ ಪೀರ ಮೌಲಾಲಿಗೆ ತನುವನ್ನು ಒಪ್ಪಿಸಿ ನಾ ||1||

ನಡೆ ನುಡಿ ಲಾಡಿ ಮಾಡಿದೆನಾ

ಹರಕಿಯ ಬೇಡಿ ಕೊರಳೊಳು ಹಾಕಿಕೊಂಡೆ ನಾ

ಪಂಚಾಕ್ಷರಿ ಮಂತ್ರ ಫಾತೆಯ ಕೊಟ್ಟು

ಕಂದೂರಿ ಮಾಡಿ ಫಕೀರಗೆ ಉಣಸಿದೆ ನಾ ||2||

ದುಷ್ಟ ಯಜೀದನು ಸುಖ ಸುಜಾತಿ ಮುಸಲ್ಮಾನನು

ಝರ ಬಾರ ಝಟಪಟಿ ಖತ್ತಲ ರಾತ್ರಿ

ಲಟಪಟ ಘಟವೇರಿ ಪರತರ ದಫನಾಯಿತು ||4||

ಸತ್ಯುಳ್ಳ ಶರಣರು ಪೀರ ಪೈಗಂಬರರು

ಸತ್ಯವ ತೋರಿದರು ಸತ್ತು ಸಾಯಲ್ದಂಗ

ಇದ್ದು ಇಲ್ಲದಂಗ ಮಕ್ಕಾ ಮದೀನದಲ್ಲಿ

ತಾನೆ ಐಕ್ಕವಾದ ಮಡಿವಾಳನು ||5||

ಕುಸ್ತಿಯ ಆಡವನೇ ಜಾಮರ್ದ

ತನ್ನ ಆಶಿಯ ತೊರೆದು

ಕುಸ್ತಿ ಆಡವನೇ ಜಾಮರ್ದ ||ಪ||

ಬೀಳಬಾರದೆಂಬ ಬಿರ್ದವ ಕಟ್ಟಿ

ಬಿಂಕಲೆ ಜಿಗಿದಾಡಿ ಚಡ್ಡಿಯನ್ನುಟ್ಟು

ಸಂಚಿತ ಫಣಿಯಲಿ ಹಳದಿಯ ಬಟ್ಟು

ಟೊಂಕಿನಲಿ ಸತ್ಯದ ನಡುಕಟ್ಟು | |1||

ಮಾಯಾ ಮೋಹವೆಂಬ ಮುಸುಕವ ಹರಿದು

ಭಯ ನಿರ್ಭಯನಾಗಿ ಮೆಲ್ಲನೆ ಜಿಗಿದು

ಸೋಹಂ ಸಹಸ್ರವೆಂಬ ಮುಂಡಿಯ ಸೆಳೆದರೆ

ಭವಗಡಿ ಒಲ್ಲೆಂದು ಅಂಜಿ ಎದಿ ಒಡೆದು ||2||

ಆರು ಮಂದಿಗಿ ಅಡಗಾಲ ಕಟ್ಟಿ

ಎಂಟು ಮಂದಿಗಿ ಹಿಡಿದಾನ ಘಟ್ಟಿ

ಹತ್ತು ಮಂದಿಗಿ ಒಗೆದಾನ ಜಟ್ಟಿ

ಸತ್ಯದ ನುಡಿ ಕೇಳೊ ನೀ ಮನ ಮುಟ್ಟಿ ||3||

ಮೂರು ಮೂರು ಮಂದಿ ಪಂಚರು ಕೂಡಿ

ಬಹಳ ಮಂದಿ ಬೆರಗಾದರು ನೋಡಿ

ಬೆಳೆದ ಗಡಿಗೆ ಮುಯ್ಯವ ಮಾಡಿ

ವರಗುರು ಮಹಾಂತನ ಅಡಿಗಳ ಪಾಡಿ ||4||

ಸೀರಿ ಬಿಟ್ಟು ಉಟ್ಟುಕೊಳ್ಳವ್ವ

ಪರ ಊರಿಗ್ಹೋಗುವೆನೆಂದೇ ಹೇಳವ್ವ

ಸೇರದವರ ಕರಕೊಳ್ಳವ್ವ | ಈ

ಊರ ಬೀಳುವುದು ಹಾಳವ್ವ ||ಪ||

ಭಾಳ ದಿನವು ತೊಟ್ಟು ಬಿಟ್ಟೆವ್ವ

ಗುಳೇವೈದು ಒಂದು ಬಿಟ್ಟಿಲ್ಲವ್ವ

ತಾಳಿ ಕರಮಣಿ ಕೂಡಿ ಕಟ್ಟಿಲ್ಲವ್ವ

ಹೇಳಿ ಕೇಳಿ ದಾರಿ ಮೆಟ್ಟವ್ವ ||1||

ಬುದ್ಧಿವಂತಿ ನೀನಾಗವ್ವ | ತಂಗಿ

ಅಲ್ಲಿ ಹೋಗದ ಜಾಗ ನೋಡವ್ವ

ಮೇಲಿನ ಮನಿ ಸೇರಿಕೊಳ್ಳವ್ವ

ಬೆಲಿ ಇಲ್ಲದ ಪುರುಷನ ಸೇರವ್ವ ||2||

ಘಂಟಿ ಕಟ್ಟಿದ ದ್ವಾರಮ್ಮ

ಮಂಟಪದೊಳು ಮಹಾಂತೇಶ್ವರಮ್ಮ

ವಂಟಿಲ್ಹೋಗಿ ಅವರ ಸೇರಮ್ಮ | ಇಷ್ಟು

ತಂಟಿ ಇಲ್ಲದಲಿ ಇರುವಮ್ಮ ||3||

ಬಾರಯ್ಯ ಬಾರಪ್ಪ ಬಾ ತಂದೆ

ಬ್ಯಾರೆ ಬ್ಯಾರೆ ಎಂಬುದುದು ತೋರ್ಯಾನ ಮುಂದೆ

ತೋರದಿದ್ದರೆ ನಿನ್ನ ಮಾರಿಕೊಂಡು ಬಂದೆ ||ಪ||

ಗಂಧ ಘ್ರಾಣ ಒಂದೆ ರುಚಿ ಜಿಹ್ವೆ ಒಂದೆ

ನಾಭಿ ಕೊರಳ ಫಣಿ ಪದುಳ

ನೆತ್ತಿ ಶ್ರೋತ್ರ ಗಾತ್ರ ಒಂದೆ ||1||

ಮಧುರ ಶಿವಯೋಗ

ಶುದ್ಧ ಸೇವನೆಯ ಸುಖ ಒಂದೆ

ಮಗನ ಮೋಹನ ಸುದತಿ ಸತಿ ಸ್ನೇಹ ಒಂದೆ ||2||

ನೋಟ ಬ್ಯಾಟಗಳು ಒಂದೆ ಊಟ ಖಾರಗಳು ಒಂದೆ

ಚಾಟು ಕಾಟಮಿ ಬಿಂಕ ಒಂದೆ

ಕೂಟ ಕೋಟ ಸಂದು ಸೂಟಿ ಒಂದೆ ||3||

ಎರಡು ಮೂರಾರು ಒಂದೆ

ಮೂರಾರು ಎರಡು ಒಂದೆ

ಪರತಿನ್ನೂರು ಹದಿನಾರು ಒಂದೆ ||4||

ತೆರನಿಲ್ಲದ ಗಣಿತಕ್ಕೆ ಮೆರೆವ

ಸೈದಾಪುರದೊಳಿರುವ

ಮಹಾಂತಯೋಗಿ ಅರಿವು ಒಂದೆ ||5||

ಬಯಲ ಬಯಲ ರೂಪ ಮಾಯ

ಬಯಲ ನಿರೂಪಲ್ಲ

ಸ್ವಯಮೇವ ಬ್ರಹ್ಮವೆಂಬುದು ತಾನು ತಾನೆಲ್ಲ ||ಪ||

ವಾಯು ಇಂದ್ರಿ ಭೂತವರ್ಗ

ವರಣ ಕರಣ ತಾರಾಗ್ನೇಯ

ಜ್ಞಾನ ಜ್ಞಾತ್ರು ಭೋಕ್ತೃ ಸ್ಥಾಣು ಚೋರಾಕಾರ ||1|

ಭಕ್ತ ಮಹೇಶ ಪ್ರಸಾದಿ

ಪ್ರಾಣಲಿಂಗ ಶರಣ ಐಕ್ಯ ನ್ಯಾಯ

ಶಕ್ತಿ ಭಕ್ತಿ ಯುಕ್ತಿ ಮುಕ್ತಿ ಪಾರಿ ಶೇಷ ನ್ಯಾಯ ||2|

ಪೊಡವಿಗಧಿಕ ಮೆರೆವ ಬಿದನೂರೊಡೆಯ

ಮಹಾಂತೇಶ ಕಡಲ ಅಡಪ

ಆಂiiತ ಸ್ವಾಯತ ಸನ್ನಿಹಿತ ಸ್ವಪನ ಈಶ ||3||

ಎವ್ವಾ ಹ್ಯಾಂಗ ಮಾಡಲೇ

ಎಪ್ಪ ಹ್ಯಾಂಗ ಮಾಡಲೇ

ಹತ್ತ್ಯಾದ ಕೆಸರ

ಮೈಯೆಲ್ಲ ಹಸರ ||ಪ||

ಆನಾದಿಯೊಳಗ ಆಗ್ಯಾದ ಬಸರ

ಬ್ರಹ್ಮ ವಿಷ್ಣು ರುದ್ರಗ ಹತ್ತ್ಯಾದ ಕೆಸರ

ನಿಂತಲ್ಲೇ ನಿಂತು ಆಗ್ಯಾದ ಹಸರ

ನೀರ ಹಾಕಿ ತೊಳೆದರ ಹೋದೀತ ಕೆಸರ ||1||

ಬ್ರಹ್ಮ ವಿಷ್ಣು ರುದ್ರ ಮೂವರೂ ಸುಳ್ಳ

ಕನಸಿನೊಳಗ ಆಗಿದ್ದು ಸುಳ್ಳ

ಮುಳ್ಳಿನಿಂದ ಮುಳ್ಳ ತೆಗೆದಾನ ಕಳ್ಳ

ವೇದ ಪುರಾಣ ಆಗ್ಯಾವ ಸುಳ್ಳ ||2||

ಶಬ್ದ ಸುಳ್ಳ ಅಕ್ಷರ ಸುಳ್ಳ

ಮಹಾಂತ ಸುಳ್ಳ ಮಡಿವಾಳ ಸುಳ್ಳ

ಕಡಕೋಳ ಮೊದಲಿಗೇ ಸುಳ್ಳ

ಸುಳ್ಳಿಗಿ ಖರೆ ಮಾಡ್ಯಾನ ಬಾಳ ||3||

ಎಂದೂ ಬಾರದ ಗಂಡ

ಇಂದೇಕೆ ಮನಿಗೆ ಬಂದ

ಖೂನ ಇಲ್ಲ ಗುರುತ ಇಲ್ಲ

ತಾ ಮನಿಗಿ ಬಂದಾನಲ್ಲ ||ಪ||

ಹೊತ್ತು ಗೊತ್ತು ಅರಿಯಲಿಲ್ಲ

ತನ್ನ ಹೊತ್ತಿಗೆ ಬಂದಾನಲ್ಲ

ಕೈಪಿಡಿದ ಗಂಡ ಎನ್ನ

ಕೈ ತಾನು ಬಿಟ್ಟಾನಲ್ಲ ||1||

ಕಣ್ಣ ಮುಂದೆ ಕಂಡ ಗಂಡ

ಕಡಿಗೂ ಸಿಗಲೇ ಇಲ್ಲ

ಮನಸಿನಲ್ಲಿ ಇದ್ದ ಗಂಡ

ಮನಿಗೆ ಬರಲೇ ಇಲ್ಲ ||2||

ಕುಲಗೇಡಿ ಅಲ್ಲ ಗಂಡ

ಕುಲ ಹೊರಗ ಮಾಡಿದನಲ್ಲ

ಕಡೆವಾಕ್ಯ ಹೇಳಿ ಗಂಡ

ತಾ ಕಡೆಗಾಗಿ ಹೋದನಲ್ಲ ||3||

ಯಾರನ್ನು ಕೇಳಲಿ ಎಲ್ಲಿ ಹುಡುಕಲಿ

ಕಂಟಿಕಾರಿ ಕಮರಿ ಹುಡುಕಿದೆ ನಾ

ಗುಡ್ಡ ಗಂವ್ಹರ ತಿರುಗಿದೆ ನಾ

ಗುಡ್ಡದ ಮಹಾಂತ ಎನಗ ಖರೆ ಗಂಡ ||4||

ಕುಡ್ಡಿ ನಿನಗ್ಯಾಕ ಹಾದರ

ಮನಿ ಮಾಡಿದಿ ಹಾಳ ||ಪ||

ಕಾಲ ಸಪ್ಪಳ ಕೇಳಿ

ನೀ ಆದಿ ಕಚಿಬಿಚಿ

ನಾಲ್ಕು ಗುಡ್ಡ ಏರಿ ಬಿದ್ದಿ

ಎಷ್ಟು ನೀನು ಸೊಕ್ಕಿಗಿ ಬಂದಿ ||1||

ಹೋಗುವವರ ಖೂನಿಲ್ಲ

ಹುಚ್ಚ ಮೂಳ ಮಂಗಿ ನೀ

ಕೈ ಮಾಡಿ ಕರೆದೆಯಲ್ಲ

ಕೆಲಸ ಏನ ತಂಗಿ ನಿನ್ನ ||2||

ನಿನ್ನ ನೀನು ತಿಳಿಯಲಿಲ್ಲ

ಕಂಡದ್ದೆಲ್ಲ ನಂದಂದೆಲ್ಲ

ತಿಳಿದ ಮೇಲೆ ಆಗವ್ವ ನೀ

ನಿಜ ರೂಪ ನಿಜಗುಣ ಮಳ್ಳಿ ||3||

ದಿನಗಳೆದು ನೀ ಆದಿ

ಹಳಿ ಹುಚ್ಚ ಮುದುಕಿ

ಅರುವೆಂಬ ಮಕ್ಕಳೂ ಇಲ್ಲ

ಸುಳಗೇಡಿ ಹೆಣ್ಣ ನೀನು ||4||

ಅರುವೆಂಬ ಗುರುವಿನ ಕೂಡು

ಗುರು ಮಂತ್ರದ ಭೋಗ ಬೇಡು

ಗುರು ಗುಡ್ಡದ ಮಹಾಂತನ

ಖಾಸಾ ಹೆಂಡತಿ ಆಗು ನೀನು ||5||

\ ಜಂಗಮನಿಲ್ಲವ್ವ ಜಗದೊಳಗ

ಜಂಗಮನೋಳು ಜಗವೆಲ್ಲ

ತಂಗಿ ಕೇಳ ನೀ ನಿಂಗಮ್ಮ

ಮಂಗಳ ಮಾತಿನ ತಂಗೆಮ್ಮ ||ಪ||

ಶೂನ್ಯ ಸ್ಥಲದಿ ಜಂಗಮನವ್ವ

ಅಂವ ಸ್ನಾನಕ್ಕೆ ಬಂದಾನ ನೋಡವ್ವ

ಕಾನನ ಭವದೊಳಗ ಹಾನವ್ವ

ಸ್ವಾನುಭಾವದಿ ನೀ ತಿಳಿಯವ್ವ ||1||

ಆರು ಬಾಗಿಲದೊಳಗ ಆಡುವನವ್ವ

ಚಂದುಳ್ಳ ಮನಿಗೆ ಬಂದಿದ್ದನವ್ವ

ಅಂದ ಚಂದದಿಂದಲಿ

ಧ್ವನಿ ಮಾಡುವನವ್ವ ||2||

ಧರಿಯೊಳು ಚೌಡಾಪೂರ ಗುಡ್ಡವ್ವ

ಅಲ್ಲಿ ಅರಿವಿನೊಳಿರು ಎಡ್ಡವ್ವ

ಪರಮ ಮಂಗಲಕ್ಕೆ ಕೈ ಒಡ್ಡವ್ವ

ಗುರು ಮಹಾಂತನ ಕೂಡಿ ಮುಕ್ತಿ ಪಡೆಯವ್ವ ||3||

ಸುಳ್ಳೆ ಹಾಳ ಮನೆಗೆ ನ್ಯಾಯ ಮಾಡಲಿ ಬೇಡೊ

ನಮ್ಮನಿ ಹೊರಗಾದ ತಿಳಿದು ನೋಡೊ ||ಪ||

ಗಚ್ಚಿನಮನಿ ಕಟ್ಟಿ ಮೆಚ್ಚಲಿ ಬೇಡ

ನಿನಗಿಚ್ಚಿಸದವರನ್ನು ಮೋಹಿಸಬೇಡ

ಚಿಕ್ಕ ಯಮನರು ಬಂದು ನಿನ್ನ ಕಟ್ಟಿ ಎಳೆದೊಯ್ಯುವಾಗ

ಗಚ್ಚಿನ ಮನೆಯೊಂದು ನಿಜವೇನೊ ಮೂಢ ||1||

ಹಳ್ಳದ ಹೊಲ ಕಂಡು ಹಿಗ್ಗಲಿಬೇಡ

ಸುಳ್ಳೆ ಸೀಮಿಕಲ್ಲು ಸರಿಸಿ ಇಡಲು ಬೇಡ

ಕಳ್ಳ ಯಮನರು ಬಂದು ನಿನ್ನ ಕೊಲ್ಲಿ ಎಳೆದೊಯ್ಯುವಾಗ

ಹಳ್ಳದ ಹೊಲವಂದು ನಿಜವೇನೊ ಮೂಢ ||2||

ಭವದ ಭಾವಿಯ ಕಂಡು ಈಸೆನೆನಬೇಕು

ಒಳ್ಳೆ ಈಸೆನೆಂದವರಿಗೆ ಮುರದೀತು ಕೋಡ

ನಮ್ಮ ಗುರು ಮಹಾಂತೇಶ್ವನ ಮರಿಯಲಿ ಬೇಡ

ನಮ್ಮನೆ ಹೊರಗಾದ ತಿಳಿದು ನೋಡ ||3||

ಕರಿಯ ಹೆಂಟಿಯ ಮೇಲೆ ಬಿಳಿಯ ಬೀಜವು ವೂರಿ

ಶಂಭುವೇ ಶಂಭು ಲಿಂಗವೇ

ಹರಗಲ್ದೆ ಬಿತ್ತಲ್ದೆ ಮೊಳ ಉದ್ದ ತೆನೆಯಾಗಿ

ಶಂಭುವೇ ಶಂಭು ಲಿಂಗವೇ ||ಪ||

ಎರಡು ಕಾಲಿನ ಪಕ್ಷಿ ನೀರೊಳು ನಿಂತಿತ್ತು

ಶಂಭುವೇ ಶಂಭು ಲಿಂಗವೇ

ಹಿಂಡಲಿಕ್ಕೆ ಮೊಲೆಯಿಲ್ಲ ಕೊಡ ಹಾಲು ಕರೆದೀತು

ಶಂಭುವೇ ಶಂಭು ಲಿಂಗವೇ ||1||

ಪಕ್ಷಿಗೆ ಪಕ್ಕಿಲ್ಲ ಹಾರಿತ್ತು ಗಗನಕ್ಕೆ

ಶಂಭುವೇ ಶಂಭು ಲಿಂಗವೇ

ಆರು ಕಾಲಿನ ಪಕ್ಷಿ ಅಂತರಕ್ಕೆ ಹಾರ್ಯಾದ

ಶಂಭುವೇ ಶಂಭು ಲಿಂಗವೇ ||2||

ಒಬ್ಬಳು ಸ್ತ್ರೀಯರಿಗೆ ಇಬ್ಬರು ಪುರುಷರು

ಶಂಭುವೇ ಶಂಭು ಲಿಂಗವೇ

ಪುರುಷರಿಗೆ ರೂಪಿಲ್ಲ ಮಹಾಂತೇಶನೆ ಬಲ್ಲ

ಶಂಭುವೇ ಶಂಭು ಲಿಂಗವೇ ||3||

ಓ ಯಾಕೆ ಮರದಿಯಲೋ

ಅಸಿಪದ ದಾಖಲಿರಲರಿದೆ

ಕಾಕು ಗುಣ ತಿಳಿದ್ಯಾರ ಬಳಲಿಪಿ

ಲೋಕ ನಿನ್ನೊಳಗೇಕ ಯೆಂಬುದು ||ಪ||

ಅಷ್ಟ ತೀರ್ಥದ ಶ್ರೇಷ್ಯಕ್ಕೇಯ್ಯೊ

ಮಮಯಷ್ಟು ನಿನ ಹೀನ ಮುಷ್ಟಿಕ್ಕಿದ್ದರೆ

ಸರಿಯಿಟ್ಟವರು ದಾರಿಷ್ಟು

ನಿನ್ನಿದಿರಿಟ್ಟು ಧರಿ ಶ್ರೇಷ್ಠತ್ವ ನೀನಹ ||1||

ಮಂದಮತಿ ಹೀನಗ್ಹೊಂದಿತ್ಯಾಕೋ

ನನ್ನಿಂದ ತನು ಇಹುದೆಂತರಾಗಲಿ

ಇಂದಿನಂದವ ಶಿಂಧುವಿನ ಪರಿಯೆಂದುಕೊಂಬುವೆ

ಚಂದವಿಪುದದು ನ್ಯಾಯವೇ ||2||

ದಾರಿಯೊಳು ಬರಲೋರ್ವ

ಚೋರನ ಮೀರಿ ಶೂರನೆಂಬುವ ಪರಿಯಲಿ

ಭಾರಿ ಗುಣ ಗಣ ಪಿರಿದನು

ಗಂಭೀರ ಮಡಿವಾಳಾಕಾರ ನೀನಿಹ ||3||

ನಿರ್ವಾಣವಾಗುವುದಕ್ಕೆ ಯರ್ವೇನೊ

ವಿರ್ವದ ಸರ್ವಿ ಹರಿದು ಸತ್ತೆನೆಂಬುವನಂತೆ ||ಪ||

ಕನ್ನಡಿಯೊಳು ರೂಪ ಅನ್ಯವೆಂಬುದು

ಭವಾದರಿಂ ಅರಿವೇನು ನಿಜ ತತ್ವವನು

ಮನ್ನಿಸಿ ಅರಿವಿನೋಳೆನ್ನ ಜಗತ್ತಿದರುನ್ನತ ಹರಿದು

ನೀನಿರುವದೇನು ||1||

ರವಿ ತನ್ನ ಕಿರಣವು ಅರಿತಿನ್ನು ಲೋಕದಿ

ಗತಿ ಮಾಡಿ ಹೇಳುವೆನಂದದಿ ತನ್ನೊಳು

ವಹಿ ಗಟ್ಟಿರದು ಇಹಪರ ಭೋಗ ಸುಖವನು ಮೋಹಿತನು

ಗುಣ ಗಣ ಬಳಲಿಗಳು ||2||

ದಾರಿಯೋಳೂರಿದ ಕಾರಸ್ಥನೋಳ್

ಚೋರಕಾಶ್ರಯಿಸಿ ಮರಳಿ ತಿಳಿಯುವನಂದದಿ

ಮೀರಿತೆ ಭಯ ಬ್ಯಾರೆ ದಾರಿಯೊಳಿರೆ

ಸ್ಥಾಣು ಆರಿದ್ದರಂತು ಭಯ ಗಳದಿ ||3||

ಕನಸಿನೊಳಗೆ ರೋಗ ಘನವಾಗಲಿಕ್ಕೆ

ಕನಸಲೆಚ್ಚರದೊಳ ಉಪಚಾರ ಮಾಡಿ

ಘನ ಮಾತು ತಿಳಿದೆನೆಂಬುವನಂತೆ

ಬಹು ಜನ್ಮವನು ಕಳದಿಯೊ ಹುಸಿ ಜಗವು ಮಾಡಿ ||4||

ಒಂದಿಲ್ಲದಲಿ ಆರು ದ್ವಂದ್ವಾಗಿ

ಒಂದಾದೆನೆಂಬುವೆನಂತೆ ಸುಜ್ಞಾನದೊಳು ಹೊಂದಿ

ಆನಂದನಾದಾನೆಂದು ಮಡಿವಾಳನ

ಮುಂದ್ಹೊಂದಲ್ಲೆಂಬುದರೊಳ ||5||

ನಾನು ನೀನು ಅಲ್ಲ ತಾನೆ ಅಂದರೇನು

ಏನೋ ತಾನೇ ನಾನು ನೀನಾದಲ್ಲಿ

ತಿಳಿಯುವದೆನೋ ಮಾನುನಿ ಸ್ನೇಹದ ಪರಿಣಾಮವೇನು

ಸೊನ್ನಿ ಹಾನಿಯಾಗದಲರೊಳು ಸವಿ ಸುಖವೇನು ||ಪ||

ಮೊದಲೆ ನಾನು ನೀನು ತಾನೇ ಆದಮೇಲೆ

ಕದರಿ ನಾನು ತಾನೆಂಬುದೆಲ್ಲ ಖಾಲೆ

ಸದರಿ ಜಮಿಯು ಜಗವು ಬ್ರಹ್ಮ ಆದಮೇಲೆ

ಮದುವಿಯಾಗವ ಇದ್ದರೆ ಆಗುವುದು ಮೇಲೆ ||1||

ಮುಕ್ತಿಯೇ ಬೇಕೆಂಬುವಾತ ದಾವಾತನೇ

ಆ ಯುಕ್ತಿಯೊಳು ಉಂಟಾದರುಂಟು ಮುಕ್ತಿ ತಾನೇ

ಶಕ್ತಿಯು ಎಂಬುದಕ್ಕೆ ಪುರುಷ ತಾನು

ಶಕ್ತಿ ಇಲ್ಲದಾದ ಮೇಲೆ ಪುರುಷ ಎಲ್ಲಿಯವನು ||2||

ಕಾಕತಾಳ ನ್ಯಾಯದಂತೆ ನಾನು ನೀನು ತಾನೇ

ಏಕ ಮುಖಕಾರ ಆಯಿತೆಂಬುದೇನು

ಸಾಕು ನೀನೆಂದರೆ ಮಡಿವಾಳ ತಾನು

ಸಾಕು ಬೇಕು ಎಂಬುವುದಿಲ್ಲ ತಾನೇ ಏನು ಏನು ||3||

ಪಡಿವೆನೆಂದಿಗೆ ಮುಕುತಿಯನು ಎಂಬುವನವನು

ತಡಿಯದೆ ಒಡಲಾತ್ಮವನು ಅರಿಯುತಲಿಹನು ||ಪ||

ಮೂರ್ತಾಪ ಜನಿತು ಯೌವ್ವನ ವೃದ್ಧನಳಿದು

ಸೇರ್ಪಡಿಯುವುದು ದುರ್ಲಭ

ಮನರ್ಕದೊಳು ಇರ್ಕಿರ್ಕೆ ಕೆಡಿಪುದು

ಆರರ್ಪರಿಪುದು ಬಂದ ವಿರ್ಪನಳಿದು ||1||

ಮಾತ ಕೇಳುತಲಿ ಸತ್ಯರಾಲ್ತಿದು ಆತ್ಮನ

ಜೀತ್ಮರಿದ ಯಾತ್ಕಡಿಲ್ಲದೆ ಸೆಳಿದುಳಿದು

ಇತ್ಸೆವ ಭಕುತಿ ಗುರೋಕ್ತಿಯಲ್ಲಿರಿಸಿ

ವಿದ್ಯಾತ್ಮನಿಂದರಿದು ಅವಿದ್ಯಾತ್ಮನಳಿದು ||2||

ಎಂದಿಗಿದ್ದರಿಂದಿನಂತೆ ಬಂಧನ ಆವರ್ಕದೊಳು

ಕಂದುಕುಂದ್ಯಾವ ಎದೆಗುಂದದೆ ಹೊತ್ತುಗಳೆದೆ

ಬಂಧುರ ಮಡಿವಾಳನು ಕಾಂಬೆನೆಂಬ

ಭಾವದಿಂದ ಹೊಂದುವದು ಒಂದು ಸಂದೇಹಗಳಿಲ್ಲದೆ ||3||

ನಾ ಬರಬಾರದಿತ್ತು ಈ ಊರಿಗ |

ಬಂದು ಬಿದ್ದೇನ ಮಾಯದ ಬಲಿಯೊಳಗ |

ಹೇಸಿಕಿ ಮಲಮೂತ್ರದೊಳಗ ||ಪಲ್ಲ||

ಒಂಬತ್ತು ಬಾಗಿಲ ಊರೊಳಗ |

ನಾ ಹೇಗೆ ದಾಟಲಿ ಇದರೊಳಗ |

ಎಂಟು ಮಂದಿ ಕಳ್ಳರ ಭಯ ಅದೆನಗ |

ಬೇಸರಾಯಿತು ಈ ಊರೆನಗ ||1||

ಮೂವರ ಸಿಟ್ಟು ಅದ ಎನ್ನ ಮ್ಯಾಗ |

ಐದು ಮಂದಿ ಪಾರ್ಯಾಕಾರ ಹಾರೆನಗ |

ಇಷ್ಟು ಎಲ್ಲಾ ತಪ್ಪಿಸಿ ಹೋಗುದರೊಳಗ |

ಇದಿಮಾಯಿ ಗಂಟ ಬಿತ್ತು ಹಾದ್ಯಾಗ ||2||

ಕಾಳಗತ್ತಲೆಗೈದಿತು ಎನಗ |

ಎತ್ತ ನೋಡಿದರತ್ತ ಮುಳ್ಳ ಹಾದ್ಯಾಗ |

ಯಮನಾರು ಕುಂತಾರ ಬಾಗಿಲದೊಳಗ |

ಜಗ್ಗಿ ಝೋಲಿ ಹೊಡಿಯತಾರ ಅವರೆನಗ ||3||

ದೇಶದೊಳು ಚಿಣಮಗೇರಿ ಗುಡ್ಡದೊಳಗ |

ಅಲ್ಲಿ ಇರುವನು ಮಹಾಂತಯೋಗಿ ಮಠದೊಳಗ |

ಭಕ್ತಿಲಿಂದೆ ಪೂಜಿಸು ನೀ ಆತನಿಗ |

ಮುಕ್ತಿ ಬೇಡಿಕೋರೊ ಗುರು ಮಹಾಂತನಿಗ ||4||

ಬಿಡು ಬಿಡು ಬಿಡು ಬಿಡು ಮನಸಿನ ಚಿಂತಿ |

ಮಹಾದೇವ ಮಾಡ್ಯಾನ ಇದಕೇನಂತಿ |

ನೀ ಹುಟ್ಟಿ ಬಂದಿ ಕಲಿಯುಗ ಸಂತಿ |

ಶಿವನ ಭಜನ ಮಾಡದೆ ಕುಂತಿ ||ಪಲ್ಲ||

ಸಾಧುರ ಸಂಗವ ನೀ ಮಾಡೊ |

ಸ್ವರ್ಗದ ಹಾದಿ ಅದೇ ನೋಡೊ |

ಭವಕೆ ಬರುವದು ಬಹು ಕೇಡೊ |

ಭವದ ಬೇರು ಕಿತ್ತುವಂತೆ ಮಾಡೊ ||1||

ತಾಪ ಕೋಪಕೇನು ಭೇದಿಲ್ಲ |

ನಿದ್ರಿ ಸಾವಿಗೇನು ದೂರಿಲ್ಲ |

ಭಕ್ತಿಯೆಂಬುದು ಅಯ್ತೆಲ್ಲಿ |

ಮುಕ್ತಿಯ ತಿಳಿದರೆ ಹಂತೀಲಿ ||2||

ಹುಟ್ಟುದು ಸಾಯುದು ಸಕಲರಿಗಿ |

ಅದರ ಭೇದ ತಿಳದಿಲ್ಲೊ ಯಾರ್ಯಾರಿಗಿ |

ಧರಿಯೊಳು ಬಿದನೂರಲ್ಲಿ

ಮಹಾಂತಯೋಗಿ ಇರುವನು ಅಲ್ಲಿ ||3||

ಯಾಕ ಚಿಂತಿ ಮಾಡತೀದಿ ಎಲೆ ಮನವೆ |

ನಿನಗೆ ಯಾತರ ಸುಖವಿಲ್ಲ ಎಲೆ ಮನವೆ |

ಲೋಕನಾಥನ ಧ್ಯಾನವ ಮಾಡಿ |

ಸಾಕಾರ ಮಾಡಿಕೊಳ್ಳೊ ಎಲೆ ಮನವೆ ||ಪಲ್ಲ||

ಕಳ್ಳತನ ಮಾಡಬಾರದು ಎಲೆ ಮನವೆ | ನೀ

ಸುಳ್ಳತನ ಹೇಳಬಾರದು ಎಲೆ ಮನವೆ |

ಬಲ್ಲಂಥ ಜ್ಞಾನಿಗಳು ಬಲ್ಲಷ್ಟು ಹೇಳಿದರ |

ಅಲ್ಲಂತ ಅನಬಾರದು ಎಲೆ ಮನವೆ ||1||

ಯಾರಿಗೆ ಯಾರಿಲ್ಲ ಎಲೆ ಮನವೆ |

ಇದು ಮೂರು ದಿನದ ಸಂತಿ ಎಲೆ ಮನವೆ |

ಸೇರದವರ ಮುಂದೆ ಜಾರಿ ಬೀಳದಂತೆ |

ಪಾರಾಗಿ ಹೋಗಬೇಕು ಎಲೆ ಮನವೆ ||2||

ಆಶೆ ಅಳಿಬೇಕು ಎಲೆ ಮನವೆ | ಇದು

ಹೇಸಿಕೆ ಸಂಸಾರ ಎಲೆ ಮನವೆ |

ದೇಶದೊಳಗೆ ನಮ್ಮ ಗುಡ್ಡದ ಮಹಾಂತನ |

ಧ್ಯಾಸವ ಮರಿಬ್ಯಾಡ ಎಲೆ ಮನವೆ ||3||

ಯಾಕ ಮಾಡತಿದಿ ನೀ ಒಣ ಚಿಂತಿ |

ನಿನಗ ಬಡಕೊಂಡಾದ ಮಾಯದ ಭ್ರಾಂತಿ |

ಅದಕ ಜೋತುಕೊಂಡು ನೀ ಕುಂತಿ |

ನಾಳೆ ಯಮ ಕೇಳಿದರ ಏನಂತಿ ||ಪಲ್ಲ||

ಮನಿಯ ಕಟ್ಟಿಸಿದಿ ಮಾಳಿಗಿ |

ನಿನಗ ಹೋಗೋದ ಬಂತಲ್ಲೊ ನಾಳಿಗಿ |

ಗೊಂಗಡಿದು ಮಾಡ್ಯಾರ ಜೋಳಿಗಿ |

ನಿನಗೆ ಇಟ್ಟು ಬಂದು ಉಣತಾರಲ್ಲೊ ಹೋಳಿಗಿ ||1||

ಹೆಂಡರು ಮಕ್ಕಳು ಸಂಪತ್ತು |

ನೀ ಹುಟ್ಟಿದಾಗ ಅದು ಎಲ್ಲಿತ್ತು |

ನಟ್ಟನಡುವೆ ಗಂಟ ಬಿದ್ದಿತ್ತು |

ನೀ ತಿಳಿದು ನೋಡೊ ಅದರೊಳು ಕುಂತು ||2||

ಸಂಕಷ್ಟ ಪಡುತಿದಿ ಸಾವುದಕ |

ಅದು ಸಟಪಟ ಹುಣ್ಣಲ್ಲೊ ಮಾಯುದಕ |

ಕರ್ತಗುರು ಮಹಾಂತನೆ ಬಲ್ಲ |

ಅವನ ಹೊರ್ತ ಮತ್ತ್ಯಾರಿಲ್ಲ ||3||

ಆಯಿತು ಹೋಯಿತು ಬಂತು ಬಾರದೆಂಬೊದ್ಯಾಕೊ |

ನಿನಗೀ ಒಣ ಭ್ರಾಂತಿ |

ಕಾಯಲು ಕೊಲ್ಲಲು ದೇವನಲ್ಲದೆ |

ಛೀ ಬಿಡು ನಿನ್ನ ಮನದಾನ ಚಿಂತಿ ||ಪಲ್ಲ||

ಸಂಚಿತ ಕರ್ಮವು ವಂಚಿಸಬಾರದು |

ಮುಂಚಗೊಂಡು ಮನ್ನಿಸೊ ಬೇಗ |

ಸಂಚು ಜನ್ಮವಿದು ಮಿಂಚಿ ಹೋದ ಮ್ಯಾಲ |

ಹಂಚಿಕಿ ಹಾಕುವದು ಆಗ್ಹ್ಯಾಂಗ ||1||

ಪ್ರಾರಬ್ಧ ಫಲ ಸಾಲದೆಂದು | ಅನು

ಕೂಲವಾಗಿ ಭೋಗಿಸೊ ನೀನು |

ಮೇಲವಾದ ನಿಷ್ಕಲವು ತಿಳಿದರೆ |

ಕಾಲ ಕಾಲಕ್ಕಾಗುವದು ತಾನೆ ||2||

ಆಗಲಿಯೆಂಬುದು ಆಗಲೆಂದರೆ | ಅದು

ಈಗ ಆಗಲಿಕ್ಕೆ ನಿನ್ನಿಚ್ಛೆ |

ಆಗಂತನು ಬ್ಯಾಡೆ ಭವರೋಗಯೆಂಬುದು |

ಬೇಗ ಹೋಗುವದು ತಾ ಕೊಚ್ಚೆ ||3||

ತನುಮನ ಧನ ಹಿಡಿದ ಅನುದಿನ |

ನೆನವು ನಾನಾ ಜನ್ಮವು ತಾನೆ | ಇದರ

ನೆನವಡಗಲು ಘನ ಮಾಂತೇಶನೊಳು |

ಚಿನ್ಮಯನೊಳು ತನ್ಮಯನು ತಾನೆ ||4||

ನನ್ನ ಮದುವಿಯ ಚಿಂತೆ ನಿನಗ್ಯಾಕ |

ನನ್ನಂಗಕ ಲಿಂಗ ಕಟ್ಟಿದ ಬಳಿಕ | |ಪಲ್ಲ||

ಹೆಣ್ಣಿಲ್ಲಿ ಬಾಯೆಂದು ಎಣ್ಣೆ ಅರಿಷಿಣ ಮಿಂದು |

ಸಣ್ಣ ಬಚ್ಚಲದೊಳು ಪನ್ನೀರನೆರೆದು |

ಬಣ್ಣ ಬಣ್ಣದ ಚಂದದುಡಿಗೆಯನುಡಿಸಿ |

ಹೊನ್ನ ಹೂದಂಡೆಯ ಮುಡಿಗೆ ಬಿಗಿಸಿ |

ಕಣ್ಣಿಗೆ ಕಾಡಿಗೆ ಕೆನ್ನೆಗೆ ಗಂಧ ಹಚ್ಚಿದ ಬಳಿಕ ||1||

ಕಣ್ಣಿಗೆ ಕಣ್ಣಿಟ್ಟು ಸನ್ನೆ ಮಾಡಿದನಾತ

ತನ್ನ ಮನೆಯ ಯಜಮಾನಕಿ ನೀಡಿದನಾತ

ಅನ್ಯಳು ನೀನಲ್ಲವೆಂದಪ್ಪಿ ಹೇಳಿದಾತ

ಕಣ್ಣು ಮೂಗಿಂದ ಬಲು ಚೆಂದನವನೊಲಿಯುತ್ತ

ಹೊನ್ನ ತಾಳಿಯ ತಂದು ಕಟ್ಟಿದ ಬಳಿಕ ||2||

ಆಸನವೆಂಬುವ ಸ್ಯಾಸಿಯ ಕಟ್ಟಿ

ಸೂಸಲ ಮನದ ಅಕ್ಕಿಯ ಹಾಕಿ

ಏಸೊಂದು ಗೆಳತಿಯರು ಕೂಡಿ ಆರತಿ ಮಾಡಿ

ಯಾಸಿ ಮಾತುಗಳಾಡಿ ಈಶ ದಾಸಿಯ ನೋಡಿ

ಧ್ಯಾನಿಸಿರೆಲ್ಲೆನುತ ಸೋಬಾನ ಹಾಡಿದ ಬಳಿಕ ||3||

ಪಂಚ ತತ್ವಗಳೆಂಬ ಪಂಚ ಕಳಸಗಳ ಹೂಡಿ

ಪಂಚಾಕ್ಷರಿ ಮಂತ್ರ ಕಿವಿಯೊಳಗೂದಿ

ಸಂಚಿತ ಕರ್ಮ ಭವ ವಂಚನೆಗೊಳಿಸಿ | ನಿ

ಶ್ಚಿಂತಳಾಗೆಂದು ಕಾಲಾಂತಕ ಶಿವನವನು

ಕಾಂತ ನಿನಗೆಂದು ಏಕಾಂತ ತಿಳಿಸಿದ ಬಳಿಕ ||4||

ಗುರು ಹಿರಿಯರು ವಿಧಿಯನ್ನು ಸರ್ವಗೂಡಿಸಿ

ಸೆರಗು ಪದರುಗಳ ಗಂಟನ್ನು ಹಾಕಿಸಿ

ಮೆರವಣಿಗೆ ತೆಗೆದು ನಾಗೋಲಿ ತುಂಬಿಸಿ

ವರಪತಿ ಲಿಂಗಯ್ಯನ ಅರ್ಧಾಂಗಿ ನೀನೆಂದು

ಸರಸದಿ ಪ್ರಭು ಮಹಾಂತೇಶ ಹರಸಿದ ಬಳಿಕ ||5||

ಆಹಾ ಗುರುದೇವ ಬಂದು

ಬಹಳ ದಯ ಮಾಡಿದ ಬಹಳ ದಯಮಾಡಿದ

ಬಲು ಜಾಲನಾಗಿ ಕಾಡಿದ ಬಲು ಜಾಲನಾಗಿ ಕಾಡಿದ

ಹೇಳಲಾರದೆ ಸುಖದೊಳಿಟ್ಟು ಬಹಳ ದಯ ಮಾಡಿದ
||ಪಲ್ಲ||

ಹಸ್ತ ಸಿರದಲ್ಲಿಟ್ಟಾನ | ಪರ

ವಸ್ತು ತಾ ನೋಡಂದಾನೆ

ಕಸ್ತು ಹಾಕಿದ ಕರ್ಮವನ್ನು

ಬಹಳ ದಯವು ಮಾಡಿದ ||1||

ಮಾಯಾ ಮೋಹವು ಮರಸಿದನೊ

ನಿರ್ಮೋಹ ಎಂಬುದು ತಿಳುಸುದನೊ

ಸಾಯ ನೋಯದಂತ ಪಾಯತೋರಿ

ಬಹಳ ದಯವು ಮಾಡಿದ ||2||

ಗರವು ಮರವು ಸುಟ್ಟಾನೆ

ಮಹದರಿವು ತೋರಿಕೊಟ್ಟಾನೆ

ಮಹದರಿವು ನಿರ್ವಾಣಾಗು ಎಂದು

ಬಹಳ ದಯವು ಮಾಡಿದ ||3||

ಜೀವ ಭಾವ ತೋರ್ಸಾನೆ

ಪರದೇವನಾಗಿ ಮೆರೆದಾನೆ

ಕಾಯೋ ಕರುಣಸಿಂಧು ದೇವಯೆನುತ

ಬಹಳ ದಯವು ಮಾಡಿದ ||4||

ಖೈನೂರ ಪುರವಾಸನೆ

ಮಮದೈವ ಮಡಿವಾಳೇಶನೆ

ಆತ್ಮಜ್ಞಾನ ತೋರಿಸಿ

ಬಹಳ ದಯವು ಮಾಡಿದ ||5||

ಗುರುವಿನ ಮಗನಾದ ಗುರುತವ ತಿಳಿಬೇಕು

ಗುರುವಿಲ್ಲದೆ ಕರುಹೆಲ್ಲಿದಣ್ಣಾ

ತಾನೇ ಕಂಡು ತಾನೇ ಸತ್ಯ ಆಗದಿದ್ದರ

ಸರ್ವ ಮಾತುಗಳೆಲ್ಲಾ ಸರಸಾದವಣ್ಣ ||ಪಲ್ಲ||

ಆ ಕಡಿಯಿಂದ ಒಬ್ಬ ಬಂದಾ ಈ ಕಡಿಯಿಂದ ಒಬ್ಬ ಬಂದಾ

ನಡು ಹಾದಿ ಖಾಲಿ ಬಿತ್ತಣ್ಣ

ಆ ಕಡಿಂದ ಕಡ್ಹೋದಾ ಈ ಕಡಿಂದಿ ಕಡ್ಹೋದಾ

ಸರಹಾದಿ ಬಂದಾಯ್ತಣ್ಣ

ಸೇರಿ ಇಬ್ಬರು ಒಂದಾಗಿ ನಡು ಹಾದಿ ಹೋದರ

ಮುಂದೆ ಕಾಣಸುತಾದ ಬೈಲ ಬ್ರಹ್ಮಣ್ಣ ||1||

ಆತ್ಮದ ಗುಡಿಯಲಿ ಕಳಸ ಕಾಣಿಸುತಾದ

ಕಳಸಿನ ಮೇಲೆ ಚಿಕ್ಕ್ಯಣ್ಣ

ಚುಕ್ಕಿ ಒಳಗ ಒಂದು ಕುಸುಮ ಕುಣಿದಾಡುತಾದ

ಅದೇ ನಿಜ ರೂಪ ನೋಡಣ್ಣ

ಏರು ನಿಜ ರೂಪದಾತ್ಮನ ನಿಲ್ಲಿಸಿ ನೋಡಿದರ

ಮೇಲೆ ಕಾಣಿಸುತದೆ ಬೈಲ ಬ್ರಹ್ಮಣ್ಣ ||2||

ಒಂದರಿಂದೆ ಎರಡಾಗಿ ಎರಡಿಂದೆ ಮೂರಾಗಿ

ಮೂರಿಂದ ಮುಕ್ತಿ ಕಾಣಣ್ಣ

ಮೂರು ಕಂಗಳ ದೃಷ್ಟಿ ಮೇರು ಮಂಟಪದೊಳು

ಮೂಲ ಗುಟ್ಟ ತಿಳಿಯಣ್ಣ

ಏರು ಗುಟ್ಟಿನ ಒಳಗಿರೋ ಗುರು ಮಡಿವಾಳ್ಯೋಗಿನ

ಗೊತ್ತು ಮಾಡಿಕೊಂಡು ಅತ್ತೆ ಪೋಗಣ್ಣ ||3||

ಅಂತಃಕರುಣಿ ನೋಡಮ್ಮ ಗುರುರಾಯ

ತನ್ನಂತೆ ಮಾಡಿದ ಎನ್ನ ಕಾಯಾ ||ಪಲ್ಲ||

ಎಷ್ಟು ಜನ್ಮ ತಿರುಗಿ ನಾ ಬಳಲಿದೆ

ಇಷ್ಟು ಸುಖ ಎಂಬುದು ಕಾಣದ್ಹೋದೆ

ಸತ್ತು ಹುಟ್ಟಲ್ದ ದಾರಿ ನಾ ಹಿಡಿದೆ

ಗುರು ಮುಟ್ಟಿದ ಕ್ಷಣಕ್ಕೆ ಬ್ರಹ್ಮನಾದೆ ||1||

ಹಾಡಿ ಹರಸಿಕೊಂಡರೆ ತೀರಲಿಲ್ಲ

ದೇಹ ಹಿಡಿದು ರಕ್ಷಿಸಿಕೊಂಡಿರೆಲ್ಲಾ

ಎನ್ನ ಮೂಢತನಕೆ ಸರಿ ಇಲ್ಲಾ

ಕರ ಜೋಡಿಸುವೆನು ಭಯಕೆಲ್ಲಾ ||2||

ಚಿಪ್ಪಿನೊಳಗೆ ಮುತ್ತೊಂದು ಪುಟ್ಟಿದಂತೆ

ಹೊತ್ತುಗಳೆಯದೆ ನೀ ನೋಡಬೇಕಂತೆ

ಚಿತ್ತದೊಳು ಚಿನ್ಮಯ ಬೆರೆದಂತೆ

ಮುತ್ತು ಬಂದವ ಇಟ್ಟುಕೊಳ್ಳಬೇಕಂತೆ ||3||

ದೇಶಕಧಿಕವಾದ ಖೈನೂರ ಪುರದೊಳು

ವಾಸವಾದ ಮಹಾಗುರು ಮಡಿವಾಳ

ಆಶೀರ್ವಾದ ಮಾಡಿದ ಅನುಗಾಲ

ನಾಶವಾಗಿ ಹೋಯಿತು ಭವ ಮೂಲ ||4||

ಎಂಥಾ ದಯಾಳು ಗುರುವು ನೀ

ಕಳದಿ ಬಾಲಾನ ಭಯವು ||ಪಲ್ಲ||

ಜಡಭವದೊಳು ಪರಿಪರಿ ತಿರುಗಿಸಿ

ಬಿಡದೆ ಚರಣಕೆ ನಾ ಶರಣು ಹೋದೆ

ಹೇಳಿದೆ ಕರುಣಾ ನೂಕಿದೆ ಭವವು

ಜನನ ಮರಣ ಈ ವರಣ ||1||

ವಿದ್ಯಾವಿದ್ಯಾದ ಸಂಗವು ತೋರಿನ್ನು

ಮುದ್ದಿ ಕಬ್ಬಿಣದಂಗ ಮುಣಗ್ಯಾಡುತಿದ್ದೆ

ದಾಟುವದ್ಯಾಂಗ ಈ ಪರಿಪರಿಯು

ಉದ್ಧರಿಸ ಬಾರೋ ಶಿಷ್ಯನ ಅಂಗ ||2||

ದೇಶಕಧಿಕ ಮೆರೆವಾ ಗುಡ್ಡದ

ವಾಸ ಮಡಿವಾಳೇಶನ ಪಾದವು

ಏಸು ಪುಣ್ಯದ ಫಲವು ಒದಗಿತೆ

ದಾಸನಾಯಿತು ಮನವು ಈ ಕ್ಷಣವು ||3||

ಗುರುವಿನಾ ದಯ ಪಡೆದವನಿಗೆ | ಭವ

ಮರಣ ಪಾಶಾ ಹೋಯಿತು | ಬೇಗ

ತಿರುಗಿ ಬಾಹೋಣಿಲ್ಲ ಜಗದಾಗ

ಸುಖ ಭರಿತನಾದ ನಿರ್ಬಯಲೊಳಗ ||ಪಲ್ಲ||

ಎಲ್ಲಾ ರೂಪ ವಾಸನಿ ಭ್ರಾಂತಿ

ನಿರುಗುಳ್ಳಿ ತೋರಿ ಮೋಹಿಸುವಂತೆ ||

ಬಲ್ಲರಾರು ಬಯಲಿನ ಖ್ಯಾಂತೆ

ಸುಳ್ಳೆ ಸುಳ್ಳೆ ಮಾಡಿ ಮೋಹಿಸುವಂತೆ ||1||

ವೈರಿ ಗುಣಗಳ ಪಿಡಿ ಸಾರಿ ಹೋಗಿ

ಭ್ರಾಂತಿ ಜರಿದು ಸುವಿಚಾರಿ

ತುಂಬು ಧೈರ್ಯವ ಪಿಡಿದು

ಕವಿತಾ ಪುಟ್ಟವದು ಖೈನೂರ ||2||

ಕೇಳು ಸವಿಯಾಗಾರಗ

ಅಮೃತ ಸಾರಹುದು

ಅಲ್ಲಾ ಮಾತಿನ ಫೇರಾ ತಿಳಿದವನೆ

ಆದ ಮಡಿವಾಳ ಧೀರ ||3||

ಕರುಣಿಲ್ಲವು ಶ್ರೀಗುರು ದಾತಾ

ಮಾಯದಿ ಮರಗಿದೆ ವಿಪರೀತಾ

ಕೊರಳಾಗೈಕರಿ ಕೊಟ್ಟಿದಿ ಖೋತಾ

ಮೊರೆ ಹೊಕ್ಕವರಿಗೆ ಮಾಡಬ್ಯಾಡ ಘಾತಾ ||ಪಲ್ಲ|

ಅನ್ಯರಿಗೆ ವಲಿದಿ ಸಜ್ಜನರಿಗೆ ಮೈ ಮರದಿ

ಲಜ್ಜೆಗಳ ತೋರಿದಿ ಮಾಯದ ಹೆಜ್ಜೆ ತುಳದಿ

ಸಜ್ಜನ ಬಂದರೆ ಮಾನವ ನೀ ಕಳದಿ

ಅರ್ಜಿಕೊಟ್ಟವರ ಖೂನ ಹಿಡದಿ ||1||

ಕುಲಗೇಡಿ ಸಣ್ಣವನು ಛಲದಲಿ ಕಾಡುವನು

ಬಲಿಯ ನುಂಗುವೆನು ಎಂಬ ಅಳದಕಿ ದೇವರನು

ಹುಲಿಯಾದವರನು ಹುರಿಯಗೊಳಿಸುವನು

ನೆಲ ಬಿದ್ದವರಿಗೆ ತಲೆ ತಾ ಹೊಡೆಸುವನು ||2||

ಧರೆಯೊಳು ಶಿವ ತಾ ಹೊತ್ತ

ಸರಸಿಜಾತ ಸುತನು ಉರಿಯಲಿ ಸತ್ತ

ಹರಿ ಅನುದಿನ ಅತ್ತ ಬರು ಅಪವಾದಕ ಇದು ಗೊತ್ತ

ಗುರು ಮಡಿವಾಳನು ಸುಮ್ಮನೆ ತಾ ಮೈ ಮರೆತ ||3||

ಹಿಡಿ ಹಿಡಿ ಗುರುಪಾದವ್ವ ತಂಗಿ

ಹುಡುಗತನದ ಬುದ್ಧಿ ಸಾಕವ್ವ

ಬಿಡದೆ ಪುರಾತನರ ನುಡಿ ನುಡಿಯವ್ವ

ಮುಕ್ತಿ ಪಾವನಳಾಗಬೇಕವ್ವ ||ಪಲ್ಲ||

ಏನು ಸಂಚಿತ ಪುಣ್ಯ ನಿಂದವ್ವ

ಇಂಥ ಮಾನವ ಜನ್ಮಕ ಬಂದೆವ್ವ

ಹೀನ ವಿಷಯದಲ್ಲಿರೆ ಕುಂದವ್ವ

ಮುಕ್ತಿ ಮಾರ್ಗದೊಳಿರೆ ಬಹು ಚಂದವ್ವ ||1||

ಕೆಟ್ಟ ಮಾತಿಲೆ ಏನು ಫಲವವ್ವ

ನಿಜ ನಿಷ್ಠಿವಂತರ ಸಂಗ ಕಲಿಯವ್ವ

ಅಷ್ಟ ವಿಕಾರಗಳೆಲ್ಲ ಅಳಿಯವ್ವ

ನಿಜ ನಿಷ್ಠಿ ಹಿಡಿದು ಭವ ಗೆಲಿಯವ್ವ
||2||

ಆಡಿಕೊಂಡಿದಡಲ್ಲ ಬರದವ್ವ ತಂಗಿ

ತಿಳಿಕೊಂಡ ಬೋಧ ನಿನ್ನಲ್ಲಿಹುದವ್ವ

ಬಿಡದೆ ಭಜಿಸು ಮಡಿವಾಳನವ್ವ

ಜನ ನಕ್ಕರೆ ನಿಂದೇನು ಹೋಯ್ತವ್ವ
||3||

ನಾ ಕಡಕೋಳದ ಗುಲಾಮಾ

ನನ್ನ ಹೆಸರ ತೆಗಿಯಬ್ಯಾಡ ಇನ್ನೊಮ್ಮ | ಗುರು

ಹಾಕಿಕೊಟ್ಟ ಜಾಗೀರ ಇನಾಮ

ಸರ್ವರಿಗೆ ಮಾಡತೀನಿ ಸಲಾಮ ||ಪಲ್ಲ||

ಜನಮೆಚ್ಚಿದಲ್ಲಿ ನಾ ಇರಾಂವ

ಜನ ಅಖಿಳದೊಳು ನಾ ತಿರಗಾಡ್ಯಾಂವ

ಜನರೊಳಗೆ ಸಣ್ಣಾಗಿ ನಾ ನಡ್ಯಾಂವ

ನಾ ಗುರುವಿನ ಘೂಳ್ಯಾಗಿ ಮೆರ‍್ಯಾಂವ ||1||

ದಶೇಂದ್ರಿಯ ಗುಣಗಳ ಆಳ್ಯಾಂವ | ನಾ

ದಶರಥ ರಾಯನಂಗ ಮೆರ‍್ಯಾಂವ

ಕಸರತ್ತ ಕಮಾಯಿ ಮಾಡಾಂವ | ನಾ

ಕಬೀರ ಕಮಾಲನಂಗ ಕವಿ ಹೇಳಾಂವ ||2||

ಕೈಲಾಸದ ಮ್ಯಾಲ ಮನಸಿಡಾಂವ | ನಾ

ರಸರಾಯ ಹೋಳಿಗಿ ತುಪ್ಪ ಹೊಡ್ಯಾಂವ

ಗುಣನಿಧಿ ಗುರುವಿನ ಕೂಡಾಂವ

ಬಹದ್ದೂರ ಮಡಿವಾಳನ ನುಡಿ ನುಡ್ಯಾಂವ ||3||

ನಿರಾಳ ನಿರ್ಗುಣ ನೀ ನಿರುಪಮ ಘನ

ನಿನ್ನಿಂದ್ಹೊರತಿನ್ನೇನಿಲ್ಲಾ ಗುರು ನಿನ್ನಿಂದ್ಹೊರತೆಮಗ್ಯಾರಿಲ್ಲ

ಮರುಳು ಮಾನವರಾಡುವ ಮಾತಿಗೆ

ಮೋಹಿಸಿ ಕೊಂಬುವವ ನಾನಲ್ಲ ಬಹು ನಿರಾಳ ||ಪಲ್ಲ||

ತನುಮನಧನಗಳನ್ನು ನಿನ್ನವೆನ್ನದಲೆ ನಾನು

ದಿನ ದಿನ ಬಳಲಿದೆ ಭವದೊಳಗೆ

ನಾನನುದಿನ ಬಳಲಿದೆ ಭವದೊಳಗೆ

ನಿನಗೊಂಚಕನೆಂದೆನಿಸದೆ ಇದ್ದರೆ ದಣಿಸಲಿ ಬ್ಯಾಡ ಜಗದೊಳಗೆ ||1||

ಪಂಚಕೋಶ ಬಹು ಪಂಚಕ್ಲೇಶದ

ಪಂಚೀಕರಣದ ಫಲವೇನು | ಈ ಪಂಚಂ

ಪಂಚಬ್ರಹ್ಮವಿದ್ದರ್ಹಂಚಿಕಿ ತಿಳಿಯಲು

ಮುಂಚಿಗೆ ಮೊದಲಿದ್ದವ ನೀನು ಬಹು ||2||

ಷಡು ಶಕ್ತಿ ಷಡು ಭಕ್ತಿಗಳೆನಿಸುವ

ಷಡು ವರ್ಣಗಳು ಯಾತಕೆ ಬೇಕು ಈ ಷಡುಂ

ಷಡು ಚಕ್ರ ಷಡು ಮಂತ್ರಕೆ ಮೀರಿದ

ವಡಿಯನ ವಲಿಮಿದ್ದರ ಸಾಕಿ ಬಹು ||3||

ಖೇಚರಿ ಭೂಚರಿ ದಾಚರಿ ಶಾಂಭವಿ

ಯೋಚನೆಯೊಳಗ್ಯಾತರ ಚೋಮ | ಈ ಯೋಚನಂ

ರೇಚಕ ಪೂರಕ ನಿಲಿಸುವ ಕುಂಭಕ

ದಾಚಿಕೆ ನಿಲುಕದ ನಿಸ್ಸೀಮ ಬಹು ||4||

ಕುಂಭಿನಿಯೊಳು ಬಹು ಸಂಭ್ರಮ ತೋರುವ

ತುಂಬಿದ ಖೈನೂರ ಪುರವಾಗಿ ತುಂಬಿದ ಖೈನೂರಂ

ನಂಬಿದ ಭಕ್ತರ ರಂಬಿಸಿ ಕಾಯುವ

ಗಂಭೀರ ಗುರು ಮಡಿವಾಳಯೋಗಿ ||5||

ಗುರುವಿನ ಮರಿಬ್ಯಾಡ ಗುಣಗೇಡಿ

ನಿನ್ನಲ್ಲಿ ಹಾನ ಅಂವ ಚಂದ್ರಚೂಡಿ

ಅತ್ತ ಇತ್ತನೆ ತಿರುಗ್ಯಾಡಿ | ಸುಳ್ಳೇ

ಹೊತ್ತುಗಳಿಯಬ್ಯಾಡ ಸಿರಗೇಡಿ ||ಪಲ್ಲ||

ಯೋನಿಯ ಮುಖದಿಂದ ಬಂದಿ

ಬರುವಾಗ ಖೂನ ಏನೇನು ತಂದಿ

ಬಂದು ಇದ್ದದೆಲ್ಲ ನಂದಂದಿ

ನಾಳೆ ಹೋಗುವಾಗ ಎಲ್ಹೆರಾ ನಿನ್ನ ಮಂದಿ ||1||

ರೊಕ್ಕ ಬಹಳ ಗಳಸೇನಂದಿ

ಬಹು ಉಕ್ಕಿ ಸೊಕ್ಕಿಲೆ ನೀ ಉಂಡಿ

ದಾನ ಮಾಡಂದರ ದಣಕೊಂಡಿ

ನಾಳೆ ಯಮನರು ಒದಿತಾರ ಕುಂಡಿಕುಂಡಿ ||2||

ಮನಸಿನಂತೆ ಮಾತಾಡಬ್ಯಾಡೋ

ನಿನ್ನ ಕನಸಿನ ಪರಿಯಿದು ತಿಳಿದು ನೋಡೋ

ಸಾಧು ಸತ್ಪುರುಷರ ಸಂಗವ ಮಾಡೋ

ಗುರು ಬಹದ್ದೂರ ಮಡಿವಾಳನ ಕೊಂಡಾಡೋ ||3||

ಗುರು ಪಾದ ಭಜನಿ ಮಾಡೆಲೋ ನೀನು

ಇದು ಸ್ಥಿರವಿಲ್ಲೊ ದೇಹ ಸಂಸಾರವು ||ಪಲ್ಲ||

ಮಲಮೂತ್ರದಲ್ಲಿ ನೀನು ಹುಟ್ಟಿ ಬಂದಿ

ಅದರ ನೆಲಿಯ ತಿಳಿಯದೆ ಬಹಳ ಭ್ರಮಿಗೊಂಡಿ ||1||

ಸತಿ ಸುತರೆಲ್ಲ ನನ್ನವರೆಂದಿ ನನ್ನವರೆಂದಿ

ನಿನ್ನ ಗತಿಗೆ ಇಲ್ಲದೆ ಮನವನು ಕಳಕೊಂಡಿ ||2||

ಇನ್ನಾರೆ ತಿಳಿದು ಮಾಡೆಲೋ ಧ್ಯಾನ

ದೇಹ ಮಣ್ಣು ಪಾಲಾಗುವದೇನು ಖೂನ ||3||

ಆವಾಸ ಈವಾಸ ಕಡಕೋಳ ನೆಲೆವಾಸ

ಅಲ್ಲಿ ಮುಕ್ತಿಯ ಪಡಕೊಳ್ಳು ಬಹುಖಾಸ ||4|

ಭಾಗೀರಥಿ ವರವು ಬೇಡಿದೆ ನಿನ್ನ

ಪಾದಕ್ಕೆ ನಾ ಶಿರಬಾಗಿ ಭಾಗೀರಥಿ
||ಪಲ್ಲ||

ಹರನ ಮಸ್ತಕದಲ್ಲಿ ಇರುವಾಳೆ

ಕಾಶಿಪುರದಿ ಪ್ರಯಾಗವೆಂದೆನಿಪಳೆ

ಮೆರೆವ ಪಾತಾಳ ಗಂಗಿ ಗುಪ್ತಳೆ

ಸೊಲ್ಲಾಪೂರದ ಸಿದ್ದರಾಮಗೊಲಿದಾಳೆ ||1||

ಹರಿಹರ ನಾಮವ ಧರಿಸೀದಿ ದೊಡ್ಡ

ಗಿರಿಯ ಸೀಳಿ ವನವು ಚರಿಸೀದಿ

ವರ ಭೀಮಾರತಿಯೆಂದು ಎನಸೀದಿ

ಪಂಪಾಪುರದ ತುಂಗಭದ್ರೆಯೆನಿಸೀದಿ
||2||

ಮೆರೆವಷ್ಟಪುರ ಧರಿಯೊಳು

ಖೈನೂರಾ ಪುರ ನಿಲಯಾಳು

ನಮ್ಮ ದೊರೆ ಮಡಿವಾಳನ ಕರುಣಳು

ಅನುದಿನದಲಿ ನಿಮಗ ಸೌಖ್ಯದಾಯಕಳು ||3||

ತಿಂಡಿಲಿಂದೆ ಹಾದರ ಮಾಡಿ

ತಿಂಡಿಲಿಂದೆ ಹಾದರ ಮಾಡಿ

ಪಂಡಿತ ಮಾತೊಂದು ಹೇಳತೀರಿ

ಪಿಂಡಾಂಡ ಸುದ್ದಿ ನಿಮಗೆ ಗುರ್ತೆ ಇಲ್ಲ

ಗಂಡನ ಬಿಟ್ಟ ಗಾರುಡಗಿತ್ತಿ

ಮಿಂಡನ ಮ್ಯಾಲ ಮನಸನ್ನಿಟ್ಟು

ಕೂಸಿನ ಕೊಂದ ದೋಷ ನಿಮಗ ಹೋಗೇ ಇಲ್ಲ ||ಪಲ್ಲ||

ಒಗತ್ತನೆಲ್ಲಾ ದಾಳಿ ಹರಸಿ

ಜಗತ್ತನೆಲ್ಲಾ ಘೂಳೆ ಹೊರಸಿ

ಬೋಳಿಸಿ ಬಿಟ್ಟಾರಪ್ಪ ನಾಲ್ಕು ದೇಶ

ಬಿರುಸಿನವರು ಆಳಲಿಲ್ಲ

ಹಿರಿಸಿನವರು ಕೇಳಲಿಲ್ಲ

ಘೂಳಿಯಂತೆ ತಿರುಗಿದಲ್ಲಿ ನೆಲಿ ಹತ್ತೆ ಇಲ್ಲ ||1||

ಬಹದ್ದೂರ ಬಹದ್ದೂರ ಹುಡಗರೆಲ್ಲಾ

ಹಾದರದಿಂದ ಹಾದಿಗೆಟ್ಟು ಜಗದೊಳು

ನಿತ್ಯ ಕಣ್ಣಿಗಿ ನಿದ್ರೆ ಹತ್ತೆ ಇಲ್ಲ

ಸಾಧುರ ಸೋಬತಿ ಸುಖ ತಿಳಿಯಲಿಲ್ಲ

ಸೂಳೆರೆಲ್ಲಾ ಸುಮ್ಮನೆ ಬಯ್ತಾರಲ್ಲ

ಸಾಕಿದ ನಾಯಿಯಂತೆ ಬೊಗಳೋದಿ ದೇಶದ ಮ್ಯಾಗ | |2||

ಹಲಕಾ ಮನುಷ್ಯರ ಸ್ನೇಹ ಮಾಡಿ

ಬಡಕೊಂಡು ಜಿಂದಗಾನಿ ಮಾಡುತಾಳ

ಮಾತಿಗಿ ಬಾರದ ರಂಡೆರ ಬದುಕು ತೀರಲಿಲ್ಲ

ಅಪ್ಪಾಗೆ ಅಪ್ಪ ಎಂಬುವದಿಲ್ಲ

ಗಪ್ಪನೆ ಕೊಡ್ರು ಎಂಬುತಾಳೆ

ತಪ್ಪು ಕೇಳ ನೆಂಟರು ಬಂದರೆ ತಿಳಿದೆ ಇಲ್ಲ ||3||

ಪಾತಕರ ಸೂತಕ ತಿಳಿದೆ ಇಲ್ಲ

ಸುಳ್ಳೆ ಅವಳು ಬೈತಾಳಲ್ಲ

ಸಾಕಿದ ನಾಯಿಯಂಗ ಬೊಗಳುವಳಲ್ಲ

ಸಿದ್ಧಾಟಕೆ ಹೋಗಲಿಲ್ಲ

ಶಿವನ ಧ್ಯಾನ ಅವರು ಮಾಡಲಿಲ್ಲ

ಚಾತುರ ಮಡಿವಾಳ ಹೇಳಿದ ಮಾತು ತಿಳಿದಿಲ್ಲ ||4||

ಭಲೆ ಮಾಯಿ ಗಂಟ ಬಿತ್ತಪ್ಪ

ನಿನ್ನ ಮಕ್ಕಳೆಂದು ಕಿತ್ತಿತ್ತು ಗಂಟಪ್ಪ

ಬಾಡಿಗೆತ್ತಿನ್ಹಾಂಗ ದುಡಿದೆಪ್ಪ

ನಿನ್ನ ಬಾಳೆಕ ನಾಚಿಕಿ ಇಲ್ಲಪ್ಪ ||ಪಲ್ಲ||

ಹಗೆ ಹಾಕಿದಿ ಬದುಕೆಲ್ಲಪ್ಪ

ಹಳಿ ಜೋಳಕ ಹಳಾಳಿ ಬಿಟ್ಟಪ್ಪ

ಹೊತ್ತು ಹುಳಿ ನುಚ್ಚ ಉಂಡೆಪ್ಪ

ನಿನ್ನ ಬಾಯಾಗ ಹಿಡಿ ಕೊಚ್ಚಪ್ಪ ||1||

ಬಡ್ಡಿ ಹಾಕಿ ಬಲು ಕೆಟ್ಟೆಪ್ಪ

ಹಳಿ ಬಾಕಿಗಿ ಹಳಾಳಿ ಬಿಟ್ಟೆಪ್ಪ

ಜ್ವಾಕಿಲಿಂದ ಲೆಕ್ಕ ಬರದಿಟ್ಟೆಪ್ಪ

ಕಕುಲಾತಿ ಗುಣದಲಿ ಕೆಟ್ಟಪ್ಪ ||2||

ಪೊಡವಿಯೊಳಗ ಕಡಕೋಳಪ್ಪ

ಅಲ್ಲಿ ಗುರು ಮಡಿವಾಳ ಹಾನಪ್ಪ

ಆತನ ಸೇವಾ ಮಾಡಪ್ಪ | ಈ

ಭವ ದಾಟಿಸುವನು ನೋಡಪ್ಪ ||3||

ಗುರುಭಕ್ತರಲ್ಲ ಇವರು ಗುರುಭಕ್ತರಲ್ಲ

ಗೌಪ್ಯದ ಮಾರ್ಗ ತಿಳಿದಿಲ್ಲ ||ಪಲ್ಲ ||

ಆಶಿ ಹಿಡಿದೆಲ್ಲ | ಕಾಶಿಯಾತ್ರೆಗೆ ನಡೆದೆಲ್ಲ

ದೋಷ ಕಡಿಯಲಿಲ್ಲ | ದೇಹದ ವಾಸನೆ ಬಿಡಲಿಲ್ಲ

ಈಶನ ನೆನೆಯಲಿಲ್ಲ ಮನವು ಮೀಸಲಾಗಲಿಲ್ಲ ||1||

ತಾಳ ತಂಬೂರಿ ಹಿಡಿದು | ಭಜನಿ ಮಾಡತಾರ ನುಡಿದು

ರಾಗಸ್ವರ ಹಿಡಿದು | ಸ್ತ್ರೀಯರ ಒಲಿಸುವ ಭ್ರಮಿ ಹಿಡಿದು

ಎಂದೆಂದಿಗೆ ಭವ ಕಡಿಯದು | ಶಿವ ಶಿವ ಯಾಕ ಬೇಕ ನುಡಿಯದು ||2||

ಹೆಂಡರ ಮಕ್ಕಳ ಬಿಟ್ಟು | ಸಾಧು ಆಗಿ ನಡದೆಲ್ಲ ಹೊಂಟು

ಅರಿವಿ ಅಂಚಡಿ ಸುಟ್ಟು | ಮೈಗೆ ಬೂದಿ ಹಚ್ಚಿದಲ್ಲೊ ಎಷ್ಟು

ಗಡ್ಡ ಜಡಿಯ ಬಿಟ್ಟು | ದುರ್ಗುಣ ಹೋಗಲಿಲ್ಲ ಎಳ್ಳಷ್ಟು ||3||

ಚಿಗರಿ ತೊಗಲ ಹಾಸಿ ಮ್ಯಾಗ ಮೂರ್ತ ಮಾಡತಿರಿ ಉಲ್ಲಾಸಿ

ಗಾಂಜಿಭಂಗಿ ಸೋಸಿ ಪಾನ ಮಾಡತಿರಿ ಒಳ್ಳೆ ಬೇಸಿ

ಧ್ಯಾಸ ಮಾಡತಿದಿ ಹೇಸಿ | ಹಿರಿಭೂತನಾದಿ ಪಿಶಾಚಿ ||4||

ಗುರುಭಕ್ತರಲ್ಲ ಇವರು ಗುಣಗಳಳಿಯಲಿಲ್ಲ

ಅಷ್ಟ ಮದಗಳು ಬಿಡಲಿಲ್ಲ ಕಾಮನ ಸುಟ್ಟ ಬೂದಿ ಹಚ್ಚಲಿಲ್ಲ

ಬಲ್ಲಿದ ಮಡಿವಾಳಯೋಗಿ ಪಾದಕ ಭೃಂಗನಾಗಿರಲಿಲ್ಲ

ಇವರು ಭ್ರಷ್ಟರಾದವರಲ್ಲ ||5||

ತಾ ಪಡದಿದ್ದು ತನ್ನ ಸಂಗಾಟ

ಶಿವಗ್ಯಾಕ ಬೈತಿ ನಿನ್ನ ಸಂಕಟಕ

ನೀ ಮಾಡಿದಿ ಗಂಟ ಹೊರಲಾಕ

ಸವಿ ಸುಖ ಮಾಡಿಕೊಂಡು ಉಳ್ಳಾಕ ||ಪಲ್ಲ||

ನೆಚ್ಚಿಕಿಲ್ಲೆನೊ ನಿನಗ ಇರಲಾಕ

ಮನಿ ಬಿಚ್ಚಿ ಹಾಕಿದಿ ಗಗ್ಗರಿ ಮ್ಯಾಲಕ

ಹೊಂಟು ನಡದಿಯೊ ನೀ ಹೊರಿಯಾಕ

ಬಂದು ದಾರಿ ತರುಬುವರಿಲ್ಲೊ ವ್ಯಾಳ್ಯಾಕ ||1||

ಸಂಕಟಪಡುತಿದೆ ಸಾವುದಕ

ಇದು ಸಟಪಟ ಹುಣ್ಣಲ್ಲೊ ಮಾಯದಕ

ನಾಚಿಕಿಲ್ಲೇನೊ ತಿರುಗಿ ಬರಲಾಕ

ಸ್ವಲ್ಪ ಎಚ್ಚರಿರಬೇಕೊ ನಿನ್ನ ಜನ್ಮಕ ||2||

ವ್ಯಾಪಕ ಮಾಡಿದಿ ಮನದಾಗ

ಏನೇನು ಫಲವಿಲ್ಲೊ ಇದರಾಗ

ಧರಿಯೊಳು ಕಡಕೋಳ ಊರಾಗ

ಗುರು ಮಡಿವಾಳ ಯೋಗಿಯ ದೃಢದಾಗ ||3||

ಎಂಥಿಂಥವರ ಹುಟ್ಟ್ಯಾರ ಇವರಿಗಿ ಏನಂತ ಕರಿಯಬೇಕರೊ

ಅಂತರಂಗದ ಅರಿವಿಕೆ ಇಲ್ಲ ಸಂತಿಯೊಳು ಸುಲಿಸಿಕೊಂಬ

ಭ್ರಾಂತಿಗೆಟ್ಟು ಮಾತಿನೊಳು ಭ್ರಷ್ಟರಾದರಯ್ಯೊಯ್ಯೊಪ್ಪ ||ಪಲ್ಲ||

ಅಕ್ಲದಿಂದ ಮುಂಕಾಲು ಕಟ್ಟುವ ಮೀರಿದ

ಮಾತಿಗೆ ಮುಕಳ್ಯಾಗ ಬಾಲ ಹಾಕ್ಕೊಂಡೋಡುವ

ಅಕ್ಲತನ ಹೆಚ್ಚಾಯಿತು ಶಿಕ್ಲಗೆಟ್ಟಿತೆನ್ನ ಕಾಯ

ನಕಲಿ ಮಾತಿನವರಗೂಡ ಧಕ್ಲಿಯಾಯಿತಯ್ಯೊಯ್ಯೊಯಪ್ಪ ||1||

ಹಿಡದೆನಂದರ ಹಮ್ಮೀಲೆ ಓಡುವ

ಹಿಡಕಿಯೊಳಗ ಸಿಗದಿದ್ದರ ಸುಮ್ಮ ನೋಡುವ

ಹಿಡಿತು ಪಿಡಿತು ಎರಡು ಇಲ್ಲ ನಡತಿ ಒಂದೊಳ್ಳೆದಿಲ್ಲ

ಬಡಿವಾರದ ಮಾತಿನೊಳು ಭ್ರಷ್ಟರಾದರಯ್ಯೊಯ್ಯೊಯಪ್ಪ ||2||

ಇದ್ದೆನಂದ್ರ ಎದ್ಲಘಾಟವೋ ಎದ್ದರ ಸ್ವಾಮಿ

ಪಾದಕ ಬಿದ್ದೆನೆಂಬುದೊಂದೆ ಹಟವೊ

ಅದ್ರತದ್ರ ಮಾತಿನೊಳು ನಿರ್ಧಾರೆಂಬುದು ಕಾಣಲಿಲ್ಲ

ಉದ್ಧಾರಿಕ ಮಡಿವಾಳ ಯೋಗಿಯ ಅದ್ರಾಟೆಂದು ಕಂಡಾರಪ್ಪೊ | |3||

ಶಿವಶಿವ ಅನ್ನುವಲ್ಲಿ ಏನಾದೋ

ಶಿವಧ್ಯಾನ ಮಾಡುವಲ್ಲಿ ಏನಾದೋ ||ಪಲ್ಲ||

ಲಿಂಗ ಕಟ್ಟಿದಲ್ಲಿ ಏನಾದೋ

ಲಿಂಗಪೂಜಿ ಮಾಡಿದಲ್ಲಿ ಏನಾದೋ

ಮನ್ಮಥ ತೆಲಿಗೇರಿ ಮಗಳಿಗೆ ಹೋದ ಮ್ಯಾಲೆ

ಮಲ್ಲಯ್ಯಗ್ಹೋದಲ್ಲಿ ಏನಾದೋ ||1||

ಸ್ನಾನ ಮಾಡಿದಲ್ಲಿ ಏನಾದೋ

ಸಂಧ್ಯಾವಂದನ ಮಾಡಿದಲ್ಲಿ ಏನಾದೋ

ಮಡಿಗಳನ್ನುಟ್ಟುಕೊಂಡು ಮಂತ್ರ ಓದಿ

ಜನಿವಾರ ಹಾಕಿದಲ್ಲಿ ಏನಾದೋ ||2||

ಎಷ್ಟು ಗಳಿಸಿದಲ್ಲಿ ಏನಾದೋ

ನಿನಗಿಟ್ಟು ಬರುವ ಮನಿ ಬ್ಯಾರ‍್ಯಾದೋ

ಸೃಷ್ಟಿಯೊಳು ಉಪಾಯದಿಂದಲ್ಲಿ

ಗುರು ಮಡಿವಾಳಪ್ಪನ ಪಾದಕ್ಹೊಂದಲ್ಲಿ ಮುಕ್ತಿ ಆದೊ ||3||

ಏನೇನು ಬರುವದು ಬರಲಿ ನಮಗ್ಯಾತರ ಹರಲಿ

ಶಂಭು ಶಂಕರನ ದಯಾ ನಮ್ಯಾಲಿರಲಿ

ಮೀರಿದವರು ಬಂದು ನಮ್ಮ ಶಪ್ಪ ಹರಲಿ ||ಪಲ್ಲ||

ಬಂದಿದೇನು ಅಡ್ಡ ಹೋಗೋಣಿಲ್ಲ

ಬಿಡು ಸಂದೇಹ ನಿನ್ನೊಳು ನೀ ತಿಳಿದಿಲ್ಲ

ಮಂಡಲದೊಳು ಬಂದು ತಿಳಿದಿದೆಲ್ಲ

ಒಂದೊಂದು ಎಣಿಸಿ ಕಿತ್ತಂದನಲ್ಲ ||1||

ಇಬ್ಬರದು ಕುಲ ಹೋಯಿತಪ್ಪ | ಹಿಗ್ಗಿ

ಉಬ್ಬಿದೇನಪ್ಪ ಬೊಬ್ಬಿ ಹಚ್ಚಿ ಬೊಗಳುವರಪ್ಪ

ಅಂಜಿ ಅಂಜಿಸಿ ಎನಗೆ ಹೆಬ್ಬುವರಪ್ಪ

ಗರ್ಭ ಸಯಲ ಬಿಟ್ಟು ಓಡುವರಪ್ಪ ||2||

ಚಾಳಕತನ ಬಹಳಪ್ಪ ಕೇಳಿ ತಾಳಿದೆನಪ್ಪ

ಯಾರ ಮುಂದ ನಾನು ಹೇಳಲಪ್ಪ

ಬೇಲಿಯೇ ಹೊಲ ಮೈದರ ಮಾಡಲೇನಪ್ಪ

ನೀ ನೋಡಿಕೊಳ್ಳೊ ಕಡಕೋಳ ಗುರು ಮಡಿವಾಳಪ್ಪ ||3||

ನಿಶ್ಚಿಂತನಾಗ ಬೇಕಂತಿ | ಬಹಳ

ದುಶ್ಚಿಂತಿ ಒಳಗೆ ನೀ ಕುಂತಿ

ಯಾಕೊ ಎಲ್ಲೊ ನಿನಗೆ ಈ ಭ್ರಾಂತಿ

ಆಗಾಗುವದೀಗ ಆಗಂತಿ ||ಪಲ್ಲ||

ಅವರು ಕಂಡರವರವರಂತಿ

ಇವರು ಕಂಡರಿವರಿವರಂತಿ

ಅವರಿವರ ತಿಳಿಯದೇ ನೀ ಕುಂತಿ

ಬಹಳವಿರಲಿ ಗುರುವಿನ ನೆನಿಯಂತಿ ||1||

ಆಶಿಪಾಶಿ ಮಾತು ಬ್ಯಾಡಂತಿ | ಒಳ್ಳೇ

ಮೀಸಲ ನುಡಿ ಮಾತಾಡಂತಿ

ಬಾಷೆ ಕೊಟ್ಟು ತಪ್ಪ ಬ್ಯಾಡಂತಿ ಒಳ್ಳೆಯ

ಈಶನ ಪಾದವು ಕಾಣಂತಿ ||2||

ಪೊಡವಿಯೊಳಗ ಕಡಕೋಳಂತಿ ಅಲ್ಲಿ

ದೃಢ ಮಡಿವಾಳ ಯೋಗಿ ಹಾನಂತಿ

ಬಿಡದೆ ಪಾದ ಸೇವೆ ಮಾಡಂತಿ

ಆತನ ಪಾದಕ್ಕೆ ನಮೋ ನಮೋ ಬಾಗಂತಿ ||3||

ಎಚ್ಚರಿರಬೇಕು ಎಲ್ಲಪ್ಪ ನೀ

ಎಲ್ಲರ ಬಾಯಾಗ ಬೆಲ್ಲಪ್ಪ

ನೀ ನಮ್ಮ ಕುಲದಂವ ಅಲ್ಲಪ್ಪ

ಸುಳ್ಳೇ ಮಾತಿನ ಪುರತಕ ಮಲ್ಲಪ್ಪ ||ಪಲ್ಲ||

ಸತ್ಯ ಸಮರ ಸಂಗಪ್ಪ

ಅತಿ ಮೋಹ ಕಾಣುವದೇ ರಂಗಪ್ಪ

ಸತಿಗತಿ ಹೊಂದಿದ ಗಂಗಪ್ಪ

ಈ ಗತಿಗಿ ಹೊಂದಿದ ಮಹಾಲಿಂಗಪ್ಪ ||1||

ಬಹಳ ಬೆಳಗಬ್ಯಾಡ ಊದಪ್ಪ

ಸಾಕು ಬಿಡು ಸಂಶಯ ಸಿದ್ದಪ್ಪ

ಬುಡ ಘಟ್ಟಿ ಇಲ್ಲದವ ಬುದ್ದಪ್ಪ

ನಿನ್ನ ಗುರ್ತನು ಹೇಳೊ ಗುರುಸಿದ್ದಪ್ಪ ||2||

ನಾನು ನಾನಂತ ಬಂದಿದಿ ನೀನಪ್ಪ

ನಿನ್ನ ಮಾನ ಮನಸ ಹೇಳೊ ಮೋನಪ್ಪ

ಎನಗ ಬುದ್ಧಿ ಹೇಳಿದಿ ಜ್ಞಾನಪ್ಪ

ನೀ ದಯಾಳಗುಣದವ ದಾನಪ್ಪ ||3||

ಮುಕ್ತಿ ಸಾಧನ ಮಾಡೊ ಶೇಷಪ್ಪ

ಭಾವ ಭಕ್ತಿಯೊಳಗಿರು ವೀಶಪ್ಪ

ಮುಕ್ತಿ ಗುಣದವ ಕಾಶಪ್ಪ

ನೀ ಮುಕ್ತನಾದರ ಸರ್ವೆಶಪ್ಪ ||4||

ಬಾರದ ಭ್ರಮೆಯೊಳು ಬಂದೆಪ್ಪ

ಈ ಗೋರಿ ಒಳಗವನು ಛಂದಪ್ಪ

ಮೀರಿದ ಗುರು ಮಡಿವಾಳನ ಹೊಂದಪ್ಪ

ಅಲ್ಲಿ ಹೊಂದಿದ ಮ್ಯಾಲ ಆನಂದಪ್ಪ ||5||

ಎಲ ಎಲ ಎಲ ಹುಟ್ಟಿ ಏನು ಪಡದಿ

ನಿನ್ನ ನೆಲಿ ತಿಳಿಯದೆ ಸುಳ್ಳೆ ದಿನ ಗಳಿದಿ

ಕುಲ ಚಲದೊಳು ಬಂದು ಬಲು ಉರದಿ

ಮುಂದ ಯಮಕೊಲಿ ಆದೋ ನಿನ್ನ ಹಣೆಬರದಿ ||ಪಲ್ಲ||

ದಾನಧರ್ಮವನು ಕೊಡಬೇಕು | ಕೆಟ್ಟ

ಹೀನತನದ ಗುಣ ಬಿಡಬೇಕೊ

ಮಾನಕಂಜಿ ಮಲಗುವದ್ಯಾಕೊ | ದೊಡ್ಡ

ಜ್ಞಾನಿಗಳ ದಯಪಡಿಯಬೇಕೊ ||1||

ಕಾಸಿನ ಕೆಲಸವು ಮಾಡಿಲ್ಲ | ಉರ

ಗೇಶನ ಸರಿ ಬಯಸುವರೆಲ್ಲ

ಆಶಿ ಮಾಡಿದರೆ ಬರುವದಲ್ಲ | ಮುಂದೆ

ಘಾಸಿ ಆಗಿ ಹೋಗುವರೆಲ್ಲ ||2||

ಕುಶಲ ಕವಿತೆ ಇದು ಖೈನೂರ

ಕೇಳೊ ಸಾರಿದ ಮಡಿವಾಳ ಧೀರ

ರಸಿಕ ಜನರಿಗೆ ಅಮೃತ ಸಾರ ನಿನ್ನ

ನಸೀಬದೊಳಗ ಸಂಸಾರ ಘೋರ ||3||

ಎಲೋ ಮನುಜ ನಿಂದೆಲ್ಲಿದಾವ ಠಿಕಾಣಿ

ಪ್ರಪಂಚ ದಾಸಿಯಿದು ಒಣ ಭ್ರಾಂತಿ ಬ್ಯಾನಿ

ನಂದು ನಿಂದು ಅಂಬುವದು ನಿಜವಿಲ್ಲೊ ಪ್ರಾಣಿ

ಧನ ದೌಲತ್ತ ಹೋಗತದ ಒಂದೀನ ಹಾನಿ ||ಪಲ್ಲ||

ಹೆಂಡರು ಮಕ್ಕಳು ಮಾಡಿದಿ ಜ್ವಾಕಿ

ಬಾಡಿಗೆ ಎತ್ತಿನಂಗ ದುಡಿದುಡಿದು ಹಾಕಿ

ನೀ ಕೊಡದಿತ್ತೊ ಅವರ ಹಿಂದಿನ ಬಾಕಿ

ರಿಣ ತೀರದ ಮ್ಯಾಲ ನಿನಗ ಹಾಕ್ಯಾರೋ ನೂಕಿ ||1||

ಬಂಗಾರ ಗಳಿಸಿದ ಮೂಲಿಮೂಲಿ ಕಂಟಿ

ಕಸಗೊಂಡು ದಬ್ಬಿದರ ಬರಿಗೈಲಿ ಹೊಂಟಿ

ನಿನ್ನ ಕೈಯಾಗುಳಿಲಿಲ್ಲೊ ಬಾರಿಸುವ ಘಂಟಿ

ಉಡದಾರ ಹರಕೊಂಡ ಮ್ಯಾಲ ಹೇರಿಸ್ಯಾರ ಹೆಂಟಿ ||2||

ಹೆಂಡರು ಮಕ್ಕಳು ಸರ್ವ ಸಂಪತ್ತು

ಸತ್ತ ಮ್ಯಾಲ ಹೆಣ ಅಂತ ಅಂಜತಾಳ ಹೆಣತಿ

ಹೊಯ್ತಲ್ಲೊ ಆಕಿದು ನಿನ್ನ ಮ್ಯಾಲಿನ ಪ್ರೀತಿ

ಬರತಾರ ನಿನಗೊಯ್ದು ಮಣ್ಣಾಗ ಒತ್ತಿ ||3||

ಜೀವ ಇರುತನಕ ಮಾಡೋ ದಾನ ಧರ್ಮ

ಮುಂದಿನ ಜನ್ಮಕ ಸ್ವರ್ಗ ಸೋಪಾನ

ಇದೆ ನಿಜ ಧ್ಯಾಸ ಹಿಡಿ ನೀ ಕಡಿತಾನ

ಗುರು ಮಡಿವಾಳನ ಪಾದ ಹಿಡಿ ಸಂಪೂರ್ಣ ||4||

ಎಲವೋ ಎಲವೋ ದಿನ ಬಂತು

ನೀವು ನೆಲಮನಿಗಿ ಹೋಗುದು ಸನಿ ಬಂತು

ಹಲವರ ಮಾತಿಗೆ ಭ್ರಮೆ ತಾ ಬಂತು

ನೀವು ನೆಲಗಾಣದೆ ಬಂತು ||ಪಲ್ಲ||

ಹೆಂಡರು ಮಕ್ಕಳು ನನ್ನವರಂತಿ

ಬಲು ಉಲ್ಲಾಸದೊಳಗ ನೀ ಕುಂತಿ

ಯಮನರು ಬಂದು ಎಳೆದೊಯ್ಯುವಾಗ

ಸಾಕೋ ಶಿವನೇ ಒಯ್ಯೊ ಅಚಿತಿ ||1||

ತನು ಮನ ಧನವು ನನದಂತಿ

ಘನ ಗುರುವಿನ ಮನ ನೋಡುವೇನಂತಿ

ಗುರುವಿನ ಸೇವಾ ಮಾಡುವೇನಂತಿ

ಭಲೆ ಸುಜ್ಞಾನಿ ನೀನಾಗುವೇನಂತಿ ||2||

ಕಂಡು ಕಾಣದೇ ಕಡಕೋಳ

ಅಲ್ಲಿ ಗಂಡ ಹಾನ ಗುರು ಮಡಿವಾಳ

ಭಂಡ ಮಾಡಿದವರ ಮನಿ ಹಾಳ

ಗುರುವಿನ ಗುರು ಹನಾ ದಯಾಳ ||3||

ಅರಿದು ನೋಡೋ ಮಾನವಾ

ನೀನರಿದು ನೋಡೋ ಮಾನವಾ

ಮರಣ ಕಾಲ ಒದಗಿ ಬಂತು

ವ್ಯರ್ಥವಾಯಿತು ಜನ್ಮವಾ

ದಾನ ನೀಡೊ ಧರ್ಮ ಮಾಡೋ ||ಪಲ್ಲ||

ದೀನಾಗ ಬ್ಯಾಡೊ ಮಾನವಾ

ಏನು ಕೇಡು ಪ್ರಾಣ ಜೋಡು

ಜ್ಞಾನಗೂಡು ನೀ ಮಾನವಾ ||1||

ಸಮ್ಯಜ್ಞಾನನಾಗು ನೀನು

ಬ್ರಹ್ಮವಾಗು ಮಾನವಾ

ಹಮ್ಮಿಲಿಂದ ಧಮ್ಮನಾದ ಬ್ರಹ್ಮನ

ಹಮ್ಮ ಅಳಿಸಿತು ಕಾಲವು ||2||

ಪೊಡವಿಯಲ್ಲಿ ಮಡಿವಾಳ

ಆರಧ್ಯರಡಿಗಳ ನೀ ಬಿಡುವರೆ

ಅವರು ಕುಡುವ ಮುಕ್ತಿ ಬಿಡದೆ

ನಂಬಿ ಪಾವನಾಯಿತೊ ಜನ್ಮವಾ ||3||

ಜನ್ಮಕ ಬಂದೇನು ಗೊತ್ತಿಲ್ಲ | ನಿನಗ

ಮುಂದ ಹೋಗುವ ದಾರಿ ತಿಳಿದಿಲ್ಲ

ನಡುವೆ ನಿಂತು ಮಾಡತಿದಿ ಗುಲ್ಲ

ಎದಿ ಒಡದು ಹಾರಿತು ಝಲ್ಲ ||ಪಲ್ಲ||

ಇಲ್ಲದ್ದು ಆಗ್ಯಾದ ಇದು ಎಲ್ಲ

ಇದು ಎದ್ದು ಹೋಗದೇನು ಕಾಣಲಿಲ್ಲ

ಮುಗಿಲ ಉದ್ದಾಗ್ಯಾದ ಮೂಲಿಲ್ಲಾ | ಈ

ಪೋರ್ಕರಿಗೆ ಅದು ತೋರಿಲ್ಲ ||1||

ಕಡಕೋಳಕ ಹ್ವಾದರ ಕಡಿಮಿಲ್ಲ

ಅಲ್ಲಿ ಪಡೆದವರಿಗೆ ಪುನಃ ಮರಣಿಲ್ಲ

ಗುರು ಮಡಿವಾಳಯೋಗಿ ದೂರಿಲ್ಲ

ಅವನ ನಂಬಿಕೊಂಡವರಿಗೆ ಭಯವಿಲ್ಲ ||2||

ಛೇ ಹೋಗ ಯಾತರ ಜನ್ಮವು ನಿನ್ನದು

ಸಾವುದು ಹುಟ್ಟುದು ಏನಿದು

ಕೇವಲ ದೇವರ ದೇವನು ಗುರು

ಅವನ ಸೇವಕನಾದೆ ಮರುಳೆ ||ಪಲ್ಲ||

ಕಡು ಸಿಂಹನ ಮರಿ ಬಿಡಿಸಿದ ಶುನಕನ

ತೊಡೆಯ ಮೇಲಾಡಿಸುವದೇನಿದು

ಒಡಿತನ ಒಲ್ಲದೆ ಹಿಡಿಕರ ಜೋಳಿಗಿ

ಬಡಿವಾರ ಬೇಡುವದೇನಿದು

ಅಳವಿಲ್ಲದ ಸುಖ ಪಡೆಯದೆ

ಭವದೊಳು ಬಡವಾಗುವಿ ಮರುಳೆ ||1||

ಬೆಂಡು ಬತ್ತಾಸುಗಳು ಕೊಂಡು ಕುಡಲು

ಹುಸಿ ಕಂಡದ್ದೆ ಬಯಸುವದೇನಿದು

ಪಂಡಿತ ಮನಿಸತಿ ಹೆಂಡತಿ ಇರುತಿರೆ

ರಂಡೇರನು ಹೋಗುವದೇನಿದು

ದಂಡಿಸಿ ದೇಹದೊಳು ಆತ್ಮನ ಕಾಣದೆ

ಕೊಂಡಕೆ ಬೀಳುವುದೇನಿದು ಮರುಳೆ ||2||

ಧರಿಯೊಳು ಮಿಗಿಲಾದ ನರನ ಬಯಕಿ

ಬಹಳ ಪುರ ನಿಲಯನ ಕೇಳಿದು

ಗುರು ಮಡಿವಾಳನ ಕರುಣ ಕವಿತಾ ರಸ

ದುರುಳ ಜನಕೆ ಸರಿ ಬಾರದು

ಪರಿ ಪರಿ ಬಯಕಿಗಳ ಇರಸಿದಿ

ಬರಗತಿ ಬರಿಯುವದು ನಿನ್ನ ಹಣೆಬರವೆ ||3||

ಪ್ರಪಂಚನೆಂಬುವದು ಬಹು ಕಷ್ಟ

ಇದು ಯಾವ ಸೂಳೆ ಮಗ ಮಾಡಿಟ್ಟ

ಹಿಡದಿತೊ ಜೀವನ ಗುಣ ನಷ್ಟ

ನಾಳೆ ಯಮ ಕರೆದರೆ ತಾ ಹೊಂಟ ||ಪಲ್ಲ||

ನಾಜೂಕ ನರದೇಹದ ಸಂತಿ

ಸಂತಿ ಮಾಡುತನ ಬಲು ಚಿಂತಿ

ಹರಲಿ ಮಾತಿಗೆ ನೀ ಕುಂತಿ | ನಾಳೆ

ಯಮ ಕೇಳಿದರ ಇದಕೇನಂತಿ ||1||

ಸತ್ತ ಬಳಿಕ ಬಾರದ ತೊಗಲು

ಯಾತರದೊಳಿದು ಎದೆ ಬುಗಿಲು

ನೀ ನಿಂತು ನೋಡು ಮೇಲಕ ಮುಗಿಲು ||2||

ಪೊಡವಿ ಮೇಲಿನ ಜನರೆಲ್ಲಾ

ಇದರ ನಡೆ ನುಡಿ ಯಾರಿಗೆ ತಿಳಿದಿಲ್ಲ

ಕಡಕೋಳನೆಂಬುವದು ಕಡಿಮೆ ಇಲ್ಲಾ

ಗುರು ಮಡಿವಾಳ ಹೇಳಿದ್ದು ಸುಳ್ಳಲ್ಲ ||3||

ಏನು ಮಾಡಲಿ ಶೋಧ ಎನಗ ತಿಳಿವಲ್ಲದು

ಮನ ನಿಲ್ಲಲಾರದು ಅಂತರ ಭೇದ ||ಪಲ್ಲ||

ಶಿಲೆ ಪೂಜೆ ಮಾಡಿ ಸೂರ್ಯನಿಗೆ ವರ ಬೇಡಿ

ಕಾಶಿಯಾತ್ರವು ಮಾಡಿ ಮುಖವು ಬಾಡಿ ||1||

ಪುರಾಣ ಪುಸ್ತಕ ಓದಿ ತಪ್ಪಿ ನಡದಾರ ಹಾದಿ

ವ್ಯರ್ಥವು ಗುರುಬೋಧಿ ನೀ ಮರ್ತೆ ಹೋದಿ ||2||

ಅರವು ಬರಲಿಲ್ಲ ಗರ್ವ ಅಹಂಕಾರ ಹೋಗಲಿಲ್ಲ

ಸೇವಾ ಮಾಡಿದರೆ ಕಲ್ಲು ಒಲಿಯಲೆ ಇಲ್ಲ ||3||

ಪೂರ್ವ ಜನ್ಮದ ಬಾಕಿ ಚಿತ್ರಗುಪ್ತನು ಬರದ್ಹಾಕಿ

ಗುರು ಮಡಿವಾಳ ಹರದು ಹಾಕಿ ರೋಕಡರೋಕಿ ||4||

ಅಳಿಯನ ಕಾಲ್ಗುಣ ತಾಗಿ

ಅಳಿದ್ಹೋಯ್ತು ನಿನ್ನ ಮನಿ ಮಾರ ನೋಡ ||ಪಲ್ಲ||

ಎಂಟು ಎತ್ತಿನ ಒಕ್ಕಲುತನ ಬಾರಾ ಬೀಗರು

ನೆಂಟರು ಬಹಳ ಮಂದಿ ಸುಲಭತನ ಜೋರ ||1||

ಕಂಟ ಹರಿಲಾರದ ಒಬ್ಬ ಪೋರ

ಗಂಟು ಹಾಕ್ಯಾನ ರಾಯರಿಗೆ ಬಿಚವಲ್ದು ಪೂರ ||2||

ದೀಪಾವಳಿ ಹಬ್ಬ ಬಹು ಚಂದ ಅಲ್ಲಿ

ದೀಪ ಹಚ್ಚತಾರ ಮಂದಿ ಬಳಗ ಮುಂದ ||3||

ಗೋಪಾಳ ಕೈಯೊಳಗಿಂದ | ಅಲ್ಲಿ

ಜವಳ ಹೇಳತಾರ ಒಬ್ಬನಕ್ಕಿಂತ ಒಬ್ಬ ಮುಂದ ||4||

ಕಳ್ಳ ಸುಳ್ಳರು ಸೇರಿದ ಹಳ್ಳಿ | ಅಲ್ಲಿ

ತಂಟತಗಲ ಮಾಡತಾರ ಬಹಳ ಮಂದಿ ತಳ್ಳಿ ||5||

ಗುರು ಮಡಿವಾಳ ಬಿತ್ತೊ ಜಾಗೀರ್ಹಳ್ಳಿ | ನಿನ್ನ

ನಡಿ ತಪ್ಪಿದರ ಕೊಯಿಸ್ಯಾರಿ ಮೂಗಿನ ಸೊಳ್ಳಿ ||6||

ಬಾಲನೇನೊ ನೀ ಬಾಲನೇನೊ

ಜವನರು ಕೇಳುವರೇನೊ ||ಪಲ್ಲ||

ನೀತಿಯಂಬೊ ಮಾತಿನಲ್ಲಿ

ಭೀüತಿಗೆಟ್ಟು ಕೋತಿ ಕಾಮ

ನಾತುರಕ್ಕೆ ದಾತನಂಗನಾತುಕೊಂಡು

ಛಾತಿಖೋರ ನೀ ಬಾಲನೇನೊ ||1||

ವಾಸನಿಲ್ಲ ದಾಸನಾಗಿ

ಲೇಶದುಪದೇಶಗೊಂಡು

ಹೇಸಿ ಮಾಯಿಗಾಸೆ ಬಿದ್ದು

ಫಾಸಿಕೋರ ನೀ ಬಾಲನೇನೊ ||2||

ಜಾಳು ಮಾತು ಕೇಳು ನಿನ್ನ

ಹಾಳು ಮಾಡಬ್ಯಾಡ ಕಾಲ | ಕೃ

ಪಾಳು ಮಡಿವಾಳ ಭೋಳೆನೆಂದು

ಮ್ಯಾಲ ಬಂದಿ ನೀ ಬಾಲನೇನೊ ||3||

ಏಕನಾಥನ ಗುರ್ತ ಯಾಕ ಹಿಡಿಯಲಿಲ್ಲ

ಕೈಲಾಕ ಏಕ ಮಾಡಿ ನಿಜ ತಿಳಿಯಲಿಲ್ಲ

ಬೇಕೆಂಬೊ ಬಯಕೆ ಬಂದು ಅಳಿವಲ್ಲಿ

ಕೈಲಾಸ ಮಂದಿ ಏಕನಾಥನ ಹಿಡಿದಾರ ಇಲ್ಲಿ ||ಪಲ್ಲ||

ಡಿಂಬಯಂಬೊ ಕುಂಬಳವಿಂಡಿನ ಕಾಯಿ ಮಾಡೊ

ಮನಡಂಬಕ್ಷಿ ತುಂಬಿ ನಿಂತು ನೀ ನೋಡೊ

ಧಾವಳಿರಾಯನ ಧಾಡ್ರಿಗಿ ಬಹಳ ನೋಡೊ

ಡಂಗುರ ಹೊಡೆದು ಕಿವಿಗೊಟ್ಟು ಕೇಳೊ ||1||

ಪಂಚಭೂತ ಪಂಚಸ್ವರ ರಾಗ ನುಡಿಸೊ

ಪಂಚ ಐದರೋಳು ನೀ ವಿವರಿಸಿ ನೋಡೊ

ಚಂಚಲ ಗುಣವನು ಬಿಡಿಸೊ ಮನ

ಹಂಚಿಕಲಿಂದ ಗುರುವಿನ ಭಜಿಸೋ ||2||

ಸದಾಶಿವ ಮೂರ್ತಿನ ವಲಿಸೊ

ಮನ ಮುಟ್ಟಿ ಮಾಡಿ ಮೂರು ಲೋಕ ಸಂಚರಿಸೊ

ಗುರು ಮಡಿವಾಳ ಯೋಗಿ ಪಾದವ ಸ್ಮರಿಸೊ

ಏಕನಾಥನ ಗುರ್ತ ಹಿಡಿದು ಭವ ಹರಿಸೊ ||3||

ಹೊತ್ತುಗಳೆಯುವದೇನು ಪಾಡಪ್ಪ

ನಿನಗೊತ್ತು ಮಾಡಿಕೋ ನೋಡಪ್ಪ

ಕತ್ತಲಾದ ಮೇಲೆ ಬಿಡರಪ್ಪ

ಒಂಭತ್ತು ಅಗಸಿಗೆ ಹುಕುಂ ಕೊಟ್ಟರಪ ||ಪಲ್ಲ||

ಹಿಂದಕ್ಕಾದಿತು ಈ ಮನಿ ಖಾಲೇಪ್ಪ | ನಿನಗ

ಮುಂದ ಬರುವದು ಗೋಳಪ್ಪ

ತಿರಗುತದ ಚವಕಿ ಮೇಳಪ್ಪ

ನಿನ್ನ ಸಿಕ್ಕರೆ ಹಾಕ್ಯಾರೊ ಕ್ವಾಳಪ್ಪ ||1||

ದೇಶ ದೇಶ ನೀ ತಿರಗುತೆಪ್ಪ

ನಿನ್ನ ಖೂನ ಏನಾದರೂ ತಂದೆಪ್ಪ

ಮಂದಿ ಬಳಗ ಎಲ್ಲ ನಿನ್ನದಂದೆಪ್ಪ

ಸಂದೇಹದೊಳು ಬಿದ್ದು ನೊಂದೆಪ್ಪ ||2||

ಗರ್ವ ಅಂಹಕಾರ ನೀಗಪ್ಪ ನೀ

ಸರ್ವರಿಗೆ ತಲೆ ಬಾಗಿ ನಡಿಯಪ್ಪ

ಘನಗುರು ಮಡಿವಾಳ ಹಾನಪ್ಪ

ಆತನ ಪಾದಕ ನಮೋ ನಮೋ ಪಾಡಪ್ಪ ||3||

ಬಂಗಾಲಿ ಸಂತಿ ಭಾಳ ಗಡಿಬಿಡಿ

ಸುಳ್ಳೇ ಭ್ರಾಂತಿಗೆಟ್ಟು ತಿರುಗಬ್ಯಾಡೇಲೊ ಖೋಡಿ

ನಾಲ್ಕು ಬಾಜಾರೆಲ್ಲ ಹುಡುಕ್ಯಾಡಿ ನೀ

ಬೇಕಾದ್ದು ಕೊಂಡುಕೊ ತಿಳಿದು ನೋಡಿ ||ಪಲ್ಲ||

ಬಾಜರದೊಳಗ ಬಂದು ನೀ ಹೊಕ್ಕಿ

ಇಲ್ಲಿ ಇಲ್ಲೆನಬೇಡ ಯಾರದಂಜಿಕಿ

ಹತ್ತು ಮಂದಿ ಬಣಜಿಗೇರು ಮೂಬೆರಕಿ

ಇಲ್ಲಿ ವ್ಯಾಪಾರ ಮಾಡಿಕೊ ಬಲು ಜೋಕಿ
ಒಂಬತ್ತು ಅಗಸಿ ಪ್ಯಾಟಿ ಬಾಜಾರ ||1||

ಇಲ್ಲಿ ಇರುವರು ಆರು ಮಂದಿ ದಲಾಲೇರ

ಪಟ್ಟಣಶೆಟ್ಟಿ ಎಂಬುವವ ಸಾಹುಕಾರ

ಇವನ ಹಂತೀಲಿ ಮಾಡಿಕೊ ವ್ಯಾಪಾರ |2||

ಸಂತಿಗಿ ಬರುವಾಗ ಬಹಳ ಪ್ರೀತಿ

ಸಂತಿ ಮಾಡಿಕೊಂಡು ಹೋಗುವಾಗ ಯಾಕ ಚಿಂತಿ

ಏಸು ದಿವಸ ಇಲ್ಲೆ ಇದ್ದೇನಂತಿ

ನಮ್ಮ ಜಕಾತಿ ರೊಕ್ಕಕ ಏನಂತಿ ||3||

ಪೊಡವಿಯೊಳಗ ಕಡಕೋಳದರಿ

ಅಲ್ಲಿ ಪಡೆದವರಿಗೆ ಕೈಲಾಸದರಿ

ಗುರು ಮಡಿವಾಳನ ಪಾದ ಹಸನದರಿ

ಅಲ್ಲಿ ತಿಳಿದವರಿಗೆ ಬಲು ಮಹತ್ವದರಿ ||4||

ಲಾಚರಗೆಟ್ಟಿತು ಸರಕಾರ | ಮುಂದಿನ

ಇಚಾರ ತಿಳಿದಿಲ್ಲ ಮಜಕೂರ

ಸಾಚಾರಂಬುವರಿಲ್ಲೊ ಯಾರ್ಯಾರ

ತುಸು ನಾಚಿಕೆ ಬರುವದು ನಮಗೇರ ||ಪಲ್ಲ||

ಕೈಬಾಯಿ ನೋಡದು ಕಡಿಮಿ ಇಲ್ಲ

ಮೈಮ್ಯಾಲ ಬರುವದು ತಡ ಇಲ್ಲ

ಒಯ್ಯದಿದ್ದರ ಮಾನ ಉಳಿಯುವದಿಲ್ಲ

ಸೈ ಸೈ ಎಂತ ಎಂಬುವರಲ್ಲ ||1||

ಹಿಂದಿನ ವಾಸನೆ ಬಿಡಲಿಲ್ಲ

ಮುಂದೇನೆನುವದು ತಿಳಿಲಿಲ್ಲ

ಬಂಧನ ಬಿಡಿಸುವ ಜನರಿಲ್ಲ

ಗುರುದೇವ ಮಡಿವಾಳ ತಾಬಲ್ಲ | |2||

ಮುಂದ ನೋಡಿ ಬದಕ ಮಾಡ ನೀ ಮೂಳ

ಜಲ್ದಿನೂತ ಹೊಯ್ಯ ನೀ ಒಂದ ಸಿಳ್ಳ ||ಪಲ್ಲ||

ಸಿಳ್ಳಿಗಿ ಮೂರನೂರದಾ ಅರವತ್ತೆರಡೆಳಿ

ಇನ್ನಾರ ವಾಜಮಿ ಲೆಕ್ಕ ತಿಳಿ

ಎಣಕಿ ಕಮ್ಮಾದರ ಒಂದ ಎಳಿ

ನಿನ್ನ ಸೀಳಿ ಮಾಡ್ಯಾರ ಎರಡ ಹೋಳ ||

ದಿವಸಿಗಿ ಸಾವಿರ ಸೀರಿ ಉಟ್ಟಿ

ನಿನ್ನಾ ಮನಸಿಗಿ ಬಂದಂಗ ಹರದಿಟ್ಟಿ

ಏನು ಸುಖ ಬಿಟ್ಟೆವ್ವ ನೀ ಹುಟ್ಟಿ

ನಿನ್ನಾ ಅಂಗದೊಳಗ ಮೂರಾಬಟ್ಟಿ ||

ಉಂಡ ಕೈ ನೀ ಕುಂಡಿಗಿ ಒರಸಬ್ಯಾಡ

ಇಂಥ ತೊಂಡೆತನದ ಮಾತು ಗಂಡಗ ಹೊರಸಬ್ಯಾಡ

ಭಂಡ ಭೂತ ಬಯಲಿಗೆ ತರಸಬ್ಯಾಡ

ನಮ್ಮ ಪುಂಡಗುರು ಮಡಿವಾಳ ಯೋಗಿ ಸರಸಬ್ಯಾಡ ||

ಅಯ್ಯೊಯ್ಯೊ ಮೂಗತಿ ಕಳಕೊಂಡೆ

ಹೊಡಿತಾನ ಯವ್ವ ಎನಗಂಡ

ಒಂದೊಂದು ಬಯ್ಯತಾನ ಹೊಲ ಭಂಡ

ಬಡಿತಾನ ಯವ್ವ ಹುಟ್ಟ ತೊಕ್ಕಂಡ || ||ಪಲ್ಲ||

ನಾಸಿಕಕೊಪ್ಪುವ ನತ್ತವ್ವ | ಅದು

ಆತ್ಮದೊಳಗ ಇರುತಿತ್ತವ್ವ

ಬೆಲೆ ಇಲ್ಲದ ಪುರುಷ ಮಾಡಿದ ನತ್ತವ | ಅದು

ಇಲ್ಲೆ ಕಳದ್ಹೋತು ಗೆಳತೆವ್ವ ||

ಸಿಕ್ಕರೆ ಸುಮ್ಮನೆ ಕೊಡರೆವ್ವ

ಕೊಡದಿದ್ದರೆ ಸರಕಾರಕ ನರೆವ್ವ

ಕಡಕೋಳ ಠಾಣ್ಯಕ್ಕ ನಡಿರೆವ್ವ ಅಲ್ಲಿ

ಮಡಿವಾಳನ ಕೂಡಿ ಮುಕ್ತಿ ಪಡಿರೆವ್ವ ||

ಫಿರಕಿ ಹೊಡಿಯಬ್ಯಾಡ ಪೀರವ್ವ

ನಮ್ಮೂರ ನಿಮ್ಮೂರ ಬ್ಯಾರಿಲ್ಲವ್ವ

ನೀ ನಮ್ಮ ಊರಕ್ಕಿ ಅಲ್ಲವ್ವ

ಸುಳ್ಳೇ ಮಾತಿನ ಪುರತಕ್ಕ ಮಲ್ಲವ || ||ಪಲ್ಲ||

ಹುಟ್ಟಿದ್ದು ಹೊಲಿ ಊರ ಆದವ್ವಾ

ಅಲ್ಲಿಂದಾಯ್ತು ಕಾಯ ಪೂರವ್ವಾ

ನಡುವೆ ಹುಟ್ಟಿತು ಸಂಸಾರವ್ವಾ

ಇದಕ ಸಂಹಾರ ಮಾಡಿದರ ಶಾಣವ್ವಾ ||

ಆದಿ ಅನಾದಿ ಮಾತು ಹೌದವ್ವ

ಇದಕ ಭೇದಿಸಿ ನೋಡ ನೀ ಭಂಡವ್ವ

ಸುಜ್ಞಾನಿ ಉಳ್ಳಕಿ ನೀ ಸಂಗವ್ವ

ಇದು ಸುಳ್ಳು ಅನಬ್ಯಾಡ ಸಿದ್ದವ್ವ ||

ಕರ್ಮದ ಕತ್ತಲೆ ಕಳೆಯವ್ವ

ನಿಜ ಜ್ಞಾನದ ಬೆಳಕಿಲಿ ದುಡಿಯವ್ವ

ಧರಿಯೊಳು ಕಡಕೋಳಕ ನಡಿಯವ್ವ

ಗುರು ಮಡಿವಾಳನ ಪಾದ ಹಿಡಿಯವ್ವ ||

ಹೆಂಡತಿ ನೋಡಣ್ಣ ಈಕಿ ನನ್ನ ಹೆಂಡತಿ ನೋಡಣ್ಣ

ಹಂಡ ಹೋರಿ ಮ್ಯಾಲ ಕುಂತು ತಾ ಬಯಲಿಗಿ ಬರತಾಳಣ್ಣ ||ಪಲ್ಲ||

ನೆತ್ತಿ ನಿಲ್ಲದೆ ಹಾಳ ನಿತ್ಯ ನೀರ ತರತಾಳ

ಕುತ್ತಿಗಿ ಇಲ್ಲದೆ ಹಾಳ ಕುಂತವರ ಖೂನ ಹೇಳತಾಳ

ಹತ್ತೆಂಟು ಸೀರೆ ಹಿಂದೆ ಉಡತಾಳ ಮುಂದೆ ಬತ್ತಲೆ ಹಾಳ ||

ಕರಿಯ ಮಾರಿಯವಳು ಊರೂರು ತಿರಗುವಳು

ಮೂರು ತಾಸಿಗೊಮ್ಮೆ ಮುಸುಕು ತೆರೆಯುವಳು

ಕಿರಿಕಿರಿ ಮಾಡಿ ಮಿಸ್ಕಿದರೇಳುವಳು ||

ಹರಕ ಸೀರೆಯವಳು ಅರಳ ಗುಂಡಿಗೆ ಸ್ಥಲದಲ್ಲಿರುವಳು

ಗುರುಲಿಂಗ ಜಂಗಮ ಸಿಂಗ ಮಾಡಿಕೊಂಡು

ಲಿಂಗದೊಳಗೈಕ್ಯವಾದ ಗುರು ಮಡಿವಾಳನ ಮಡದಿಯವಳು ||

ಹುಚ್ಚೇರಿತು ನಾಯಿಯ ಹಿಂಡು

ಕಚ್ಚಲು ಬರುವದು ನಮ ಕಂಡು

ನೆತ್ತಿಗೇರಿ ಮಾಡಿತೊ ಭಂಡು

ನಿನ್ನ ನೆತ್ತಿ ಒಡಿದು ಮಾಡಲೇನು ತುಂಡು ||ಪಲ್ಲ||

ಹಾಳಗ್ವಾಡಿಯೊಳಗ ಮನಿ ಮಾಡುವದು

ಏಳೂರು ಮಂದಿನ ಕಡಿಯುವದು

ಕಾಳಗದೊಳು ಮುಗಿ ಬೀಳುವುದು

ನಿನ್ನ ಕಾಲ ಮುರಿದು ಎಳೆದೊಗೆಯುವದು ||

ರೊಟ್ಟಿ ಹಾಕಿದರ ತಿನ್ನವಲ್ಲದು

ಮೆಟ್ಟಿಗೆ ತಾ ಬಾಯಿ ಹಾಕುವದು

ಕೆಟ್ಟ ಮಾರಿ ಹಲ್ಲ ತೆಗೆಯುವದು

ಗಟ್ಟಿ ತೂರಿ ಮ್ಯಾಲ ಬರಹುವದು ||

ನಾಯಿಯು ನರರೆಂಬುವದು

ಮಾಯದೊಳಗ ಕುಣಿದಾಡುವದು

ಹಾಯಲ್ದ ಗುಂಡಿಗೆ ಮಣಿವಲ್ಲದು

ಮಹಾಯೋಗಿ ಮಡಿವಾಳಗ ಕೂಡುವದು ||

ನಂಬಿಗುಳ್ಳ ನಾಯಿನ ಸಾಕರಿ

ಹಿಡಿದ್ಹಾಕ ಬ್ಯಾಡರಿ | ನಂಬಿಗುಳ್ಳ ನಾಯಿನ ಸಾಕರಿ ||ಪಲ್ಲ||

ಹಟಕಾಸಿ ಬರುವದು ಹಟಗಾರ ನಾಯಿ

ಮಿಟಿಮಿಟಿ ನೋಡತಾದ ಮೀನಗಾರ ನಾಯಿ

ಕಟಿಪಿಟಿ ಬಿಡುತದ ಕಟಗರ ನಾಯಿ

ಶಟಗೊಂಡು ಹೋಗುತದ ಶೆಟಿಗರ ನಾಯಿ ||

ಹೊರಗ ಇರುವದು ಹೊಲಿಯರ ನಾಯಿ

ಸನೇಕ ಬರುದಿಲ್ಲ ಸಮಗಾರ ನಾಯಿ

ಕುಲ ಹದಿನೆಂಟು ಜಾತಿಯ ನಾಯಿ

ಚಂಗ್ಯಾಭಿಂಗ್ಯಾ ಚಲವಾದಿ ನಾಯಿ ||

ನೋಡಿದ್ದು ಬಿಡವಲ್ಲ ಬ್ಯಾಡರ ನಾಯಿ

ಬಿಟ್ಟಿದ್ದು ಹಿಡವಲ್ಲ ಗೌಡರ ನಾಯಿ

ಏನು ಕೊಟ್ಟರ ಖೂನ ಹಿಡಿಯುವದಿಲ್ಲ

ಖೂನಗೇಡಿ ಕುಲಕರ್ಣಿ ನಾಯಿ ||

ಜಗಳಕ ಬರತದ ಜಾಡರ ನಾಯಿ

ಸುಡಗಾಡ ಸೇರುವದು ಐಗೋಳ ನಾಯಿ

ಬಡಿದಾಡಿ ಸಾಯುವುದು ಬಡಿಗೇರ ನಾಯಿ

ಗಸಿಬಿಸಿ ಮಾಡತಾದ ಬಣಜಿಗೇರ ನಾಯಿ ||

ಹೂಂಕಾಸಿ ಬರುವದು ಹೂಗಾರ ನಾಯಿ

ನೆಳ್ಳ್ಯಾಡಿ ಬರುವದು ನಾಯ್ದರ ನಾಯಿ

ಸಿಟ್ಟಿಗೆ ಬರುವದು ಸಿಂಪಿಗೇರ ನಾಯಿ

ಗುರುಗುರು ಮಾಡತಾದ ಗುಜ್ಜರ ನಾಯಿ ||

ಹಾರ್ಯಾರಿ ಬೀಳತಾದ ಹಾರರ ನಾಯಿ

ಅಲ್ಲಿ ಇಲ್ಲಿ ಬೀಳತಾದ ಅಗಸರ ನಾಯಿ

ಕೆಲಸಕ್ಕೆ ಬರುವದಿಲ್ಲ ಕಂಚಗಾರ ನಾಯಿ

ಕುಣಿಕುಣಿದು ಬೀಳತಾದ ಕುಂಬಾರ ನಾಯಿ ||

ಆರು ಸ್ಥಲದಲ್ಲಿ ಹೋಗುವ ನಾಯಿ

ಮೀರಿದ ಉನ್ಮನಿ ಸೇರುವ ನಾಯಿ

ಸಾರಿ ಸಾರಿ ಇದು ಕೂಗುವ ನಾಯಿ

ಬಹದ್ದೂರ ಮಡಿವಾಳ ಸಾಕಿದ ನಾಯಿ ||

ಎಂಥ ಕುದುರೆ ಕೊಂಡುಕೊಂಡು ನಾ ಬಂದೆ

ಶಂಭು ಕುಂತೇನಂದರ ನಡಿವಲ್ದು ಇದರ ಗುಣ ಕಂಡೆ

ಹತ್ತೇನಂದ್ರ ಎತ್ತರ ತತ್ತರ ಮಾಡತೈತಿ

ಕುದರಿ ಅಲ್ಲೊ ಯಪ್ಪ ಎನಗ ವೈರಿ ಐತಿ ||ಪಲ್ಲ||

ಒಮ್ಮನ ಗೋಧಿ ಕಡ್ಲಿ ಇಟ್ಟರ ಮುಕ್ಕತೈತಿ

ಹೊಟ್ಟ ಕಣಕಿ ತಿಂದು ನೆಲ ನೆಕ್ಕತೈತಿ

ತರತರ ಕುಣಿದು ಲದ್ದಿ ಇಕ್ಕತೈತಿ

ಶಂಭು ಕುದರಿ ಕಂಡರ ಎನ ಮನ ಉಕ್ಕತೈತಿ ||

ಸಾಲ ಸಮದಾ ಮಾಡಿ ಕುದರಿ ತಂದೆ

ಸಾಲದವರ ಕೈಯಲ್ಲಿ ಸಿಕ್ಕು ಒದಿಸಿಕೊಂಡೆ

ಹೇಸಿ ರಂಡಿ ಮಾತು ಕೇಳಿ ಕುದರಿ ತಂದೆ

ಕುದರಿ ತಕ್ಕೊಂಡು ಅದರ ಸುಖ ಏನು ಕಂಡೆ ||

ಊರ ಬಿಟ್ಟು ಕುದರಿ ಹೊರಗ ಹಾಕಿ ಬಂದೆ

ಏಳು ಎಂಟು ಅವರಿ ಜಬರಿ ಮುರಿದು ತಂದೆ

ಹೊಡೆದು ಹೊಡೆದು ಮೈಯಾನ ದಿಮ್ಮ ಬಿಡಿಸಿ ಬಂದೆ

ಸ್ವಾಮಿ ಯೋಗಿ ಮಡಿವಾಳನ ಪಾದಕ ಹಾಕಿ ಬಂದೆ ||

ಕುದರಿ ನೆಲಿಯ ಹತ್ತಿಲ್ಲಪ್ಪ ಮಮ್ಮಟಳಿಯಾಗ

ಇದರ ಕಳಿಯ ಸುಳಿಯ ಭೇದ ಗೊತ್ತು ಬಲ್ಲವಗ

ಜ್ವಾಕಿ ಜತನ ಮಾಡ್ಯಾನಂತ ಕೊಟ್ಟೇನಳಿಯಾಗ

ಈ ಹಡಸಿ ತಮ್ಮ ಒಯ್ದು ಬಿಟ್ಟು ಮಂದಿ ಬೆಳಿಯಾಗ ||ಪಲ್ಲ||

ಜಾಗಾ ನೋಡಿ ಗುಮ್ಮದ ಗೂಟ ಹೊಡಿಯಬೇಕು

ಮನ ತ್ಯಾಗ ಮಾಡಿ ಅದರ ಬೆನ್ನ ಹತ್ತಬೇಕು

ಓಂ ಸೋಹಂ ಎಂಬ ಶಬ್ದ ಎರಡೇ ಸಾಕು

ಮೂರು ಲೋಕ ತಿರಿಗಿ ಮರ್ತ್ಯ ಲೋಕಕ್ಕೆ ಯಾಕ ಬರಬೇಕು ||

ಕಡಕೋಳ ದೇಶಕ್ಕೆ ಹೋಗಬೇಕು

ಗುರು ಮಡಿವಾಳನ ಪಾದ ಹಿಡಿಯಬೇಕು

ಭೇದವಿಲ್ಲದೆ ಭಕ್ತಿಯಲ್ಲಿ ಬೆರಿಯಬೇಕು

ಆ ಮುಕ್ತಿ ಕೊಡುವ ಗುರುವಿನ ಕುದರಿ ಒಂದೆ ಸಾಕು ||

ಇನ್ಯಾತಕ ಬರಲಿ ನಿಮ್ಮೂರಿಗೆ

ಬ್ಯಾಸರಾದೇನ ಎಲ್ಲರಿಗೆ || ||ಪಲ್ಲ||

ಮನಿಯ ಮಾರವು ಮರತೆ

ದನ ಕರುಗಳ ಮರತೆ

ತೊಟ್ಟಲಾನ ಕೂಸು ತೊಟ್ಟಿಲಲ್ಲೆ ಮರತೆ ||

ಕೂಡ ಕುದರಿಯ ಮರತೆ

ಬ್ರಹ್ಮ ಮಾಡಿದ ಕಾಯ ಮರತೆ

ಮಣ್ಣ ಮನಿಯ ತಾ ಮೊದಲೆ ಮರತೆ ||

ಹಿಂದಿನ ಊರ ಹಿಂದೇ ಉಳಿತು

ಮುಂದಿನ ಊರ ಸನಿ ಬಂತು

ನಿರ್ಬಯಲದೊಳಗ ಎರವಾಯತು ಈ ಸಾಯ ||

ಗಾಳಿಗೆ ಗಾಳ್ಯಾಯ್ತು ಬೈಲಿಗೆ ಬೈಲಾಯ್ತು

ಅಡ್ಡ ಮಾಡವ ಬಂದು ಮರೆಯಾಯ್ತು

ವಾಸುಳ್ಳ ಕಡಕೋಳ ಈಶ ಮಡಿವಾಳನ ಹೊಂದಿದಾಯ್ತು ||

ನಿಮ್ಮೂರಿಗೆ ನಾವು ಬರಬೇಕಾದರೆ

ನಮ್ಮ ನಿಮ್ಮ ಮನಸೊಂದಿರಬೇಕು ||ಪಲ್ಲ||

ತನು ಮನ ಧನ ಕೊಟ್ಟ ಗುರುವಿನ ಪಡಕೊಂಡು

ಗರವು ಅಹಂಕಾರವು ಬಿಟ್ಟಿರಬೇಕು ||

ಆರು ಅಳಿದು ಆರೂಢ ಮಾರ್ಗವು

ಅದು ಒಂದು ಪಥವು ಇರಬೇಕು

ರೂಢಿಯೊಳಗೆ ತಾ ಮಾಡಿ ನೀಡಿದರೆ

ನೀಡಿ ನೀಡಲ್ದಂಗ ಇರಬೇಕು ||

ನೆನವಿನೊಳಗೆ ನಿಜರೂಪದ ನುಡಿಗಳು

ಘನವಾಗಿ ತನ್ನಲ್ಲಿ ಇರಬೇಕು

ಅಜ ಹರಿ ಹರ ಸುರ ಮುನಿಗಳೆಲ್ಲರೂ

ಹೌದು ಹೌದು ಎಂಬುವ ಹಾಗಿರಬೇಕು ||

ಹಮ್ಮನಳಿದು ತಾ ಬ್ರಹ್ಮನ ಸ್ಮರಣೆಯು

ಅನುಗಾಲ ತನ್ನಲ್ಲಿ ಇರಬೇಕು

ಮಹಾಗುರು ಮಡಿವಾಳ ಯತಿ ಸಮರಸವಾಗಿ

ದೇವಭಕ್ತನಾಗಿ ತಾ ಇರಬೇಕು

ಬ್ರಹ್ಮ ಮಾಡಿದ ಮನಿಯೋ

ಎಂಟು ಕಂಭದ ಹಿರಿಮನಿ ಪಡಸಾಲಿಯೊ

ಹಿರಿಮನಿ ಪಡಸಾಲಿ ಪಾಯನಿಲ್ಲದ ಗೋಡಿ

ಒಂಭತ್ತು ಕಿಟಕಿಯ ಚಂದ ಕಾಣಿಸುತಾವ ||ಪಲ್ಲ||

ಸುಣ್ಣ ಹಚ್ಚಿದ ಮನಿಯೋ

ಹೊಳೆವಂಥ ಬಣ್ಣ ಹಚ್ಚಿದ ಮನಿಯೋ

ಹಸಿರು ಹಳದಿ ಕೆಂಪ ಮೇಲೆ ಬಿಳಿದು ಹೊಳಪ

ಸಿಸ್ತಿಲಿ ಕಾಣುವದು ಹೊಸ್ತಾಗಿ ಈ ಮನಿಯೊ ||

ಬ್ರಹ್ಮನ ಮನಿ ಸುಖವೋ

ಇದು ಒಮ್ಮೆ ನೋಡಿದ ಗುರು ಮಡಿವಾಳನು

ಆರು ಅಳಿದು ತಾ ಮೂರು ತಿಳಿದ ಮ್ಯಾಲೆ

ಆರು ಮೂರೊಂಭತ್ತು ಬಾಗಿಲ ತಲುಪಿದನೊ ||

ಒಬ್ಬ ಗಂಡನಾಗವ್ವ ಮತ್ತೊಬ್ಬನ ನೀಗವ್ವ

ಒಬ್ಬನ ಠಾವಿಗೆ ಇಬ್ಬರಾದ ಮೇಲೆ

ಡುಬ್ಬ ಬೆಳಗದೇನು ಬಿಡರವ್ವ ||ಪಲ್ಲ||

ಹಸನ ಮನಿ ಕಸವ ಬಿದ್ದರೆ

ಗಸನೆ ಬಳಿದು ಚಲ್ಲವ್ವ

ಆಡಿ ಮಾಡಿ ಮನ ಹೇಸಿ ಆದರೆ

ಘಾಸಿ ಮಾಡದೇನು ಬಿಡರವ್ವ ||

ತಾ ಗರತ್ಯಾದರ ಸೂಳೆಗೇರ‍್ಯಾಗ

ಮನಿಯ ಕಟ್ಟುವದು ಲೇಸವ್ವ

ಅನುಮಾನವ್ಯಾತಕೆ ದಿನಮಾನ ಸನೆ ಬಂತು

ಅನುಮಾನದೊಳಗೆ ಹೊತ್ತು ಹೋಯಿತವ್ವ ||

ಜಪ್ಪಿಸಿ ನಿನ್ನ ಗಂಡನ ಕೈ

ಗಪ್ಪನೆ ಹೋಗಿ ಹಿಡಿಯವ್ವ

ಮುಪ್ಪಿನ ಮಡಿವಾಳ ಯೋಗಿಯ ಹಿಡಿದರೆ

ಮುಕ್ತಿಯಾಗುದೇನು ದೊಡ್ಡದವ್ವ ||

ಗಂಡನ ಮಾಡಿಕೊಳ್ಳಬೇಕವ್ವ

ತಾಳಿ ಕರಮಣಿ ಇದ್ದರ ಮೋಜವ್ವ

ಮುಂದೆ ಕಾಣುತಾದ ಪೂಜೆವ್ವ

ಮುತ್ತೈದಿತನ ಹೆಚ್ಚಿಂದವ್ವ ||ಪಲ್ಲ||

ಸಫಲ ಮಾಡಿಕೊಳಬೇಕವ್ವ ಈ

ಸಕಲದೊಳಗ ಬಹು ತೇಜವ್ವ

ಸತ್ಯ ಮಾತು ತಿಳಿಯವ್ವ ನಿನ್ನ

ಪ್ರತ್ಯಕ್ಷಾಯಿತು ಅನುಮಾನವ್ವ ||

ಮಾಡುಬ್ಯಾಡ ಖಾಲಿ ಗೋಜವ್ವ

ಈ ಕಾಯವು ನೆಚ್ಚಿಕಿಲ್ಲವ್ವ

ಚಿತ್ರಕ್ಪಾಟಿ ಚನ್ನಮಲ್ಲವ್ವ

ಜೀವ ನೀರ ಮೇಲಿನ ಗುರುಳೆವ್ವ ||

ಪೊಡವಿಯೊಳಗ ಕಡಕೋಳವ್ವ ಅಲ್ಲಿ

ಸಂತ ಶಿವಭಕ್ತರ ಮೇಳವ್ವ

ಗುರು ಮಡಿವಾಳ ಯೋಗಿ ಹಾನವ್ವ

ಆತನ ಪಾದ ಬಿಡದೆ ಪೂಜೆ ಮಾಡವ್ವ ||

ಇವ ನೋಡ ಎಂಥ ಮಗನವ್ವ

ಮುಗಿಲಿಗಿ ಮುಟ್ಟ್ಯಾನ ಹಡದವ್ವ

ಎದಿ ಒಡದು ಹಡದಾಳ ಅವರವ್ವ

ಜಗ ಭಂಡಾಯಿತು ಬಿರುದವ್ವ ||ಪಲ್ಲ||

ಕಿವಿಯಲ್ಲಿ ಕೂಟ ಕೂಡುವದು

ಅಂಗಾಲಲ್ಲಿ ಬಸಿರಾಗುವದು

ಅಂಗೈಯಲ್ಲಿ ಬಂಕಿ ಕಾಡುವದು

ಸಿರದಲ್ಲಿ ಮಗ ನಲಿದಾಡುವದು ||

ಈಕಿ ಹ್ಯಾಂಗ ಮಾಡತಾಳ ಕಟಿಪಿಟಿ

ಊರ ಬಿಟ್ಟು ಹೋಗಲಿಕ್ಕೆ ಉಪರಾಟಿ

ಆಕಿ ಇರುವದು ರಂಗನ ಪ್ಯಾಟಿ

ಆಕಿ ಮಾಡ್ಯಾಳ ಸಂಭನ ಭೇಟಿ ||

ಅರ್ಜಿ ಸವಲ್ಲನವ್ವ ಅಂವ ಗಂಡ

ಅರ್ಜಿ ಮಾಡಿಕೋ ನವ ಕಾಂಡ

ದೇಶಕಧಿಕವಾದ ಕಡಕೋಳ ಖಂಡ

ಮಡಿವಾಳ ಯೋಗಿ ಹುಟ್ಟ್ಯಾನ ವರವಿನ ಪಿಂಡ ||

ನಾನೇ ಗೌಡತೆವ್ವ ಈ ಊರಿಗೆ ನಾನೆ ಗೌಡತೆವ್ವ

ಸೂರ್ಯಚಂದ್ರರು ಇಲ್ಲದಂದಿಗೆ ಒಬ್ಬಳಿದ್ದೇನವ್ವ ||ಪಲ್ಲ||

ತನು ಮನ ಧನದಾಸಿ ಕಡಿವೆ

ಹೆತ್ತ ತಾಯಿ ತಂದಿನ ಬಿಡುವೆ

ಮೂರು ಮಕ್ಕಳ ಭ್ರಮಿಗಳ ಸುಡುವೆ

ಶಿವ ಶಿವ ಯಂಬುವ ದಾರಿಯ ಹಿಡಿವೆ ||

ಮಂಡಗಾಲಿನಕ್ಕಿ ಎನ್ನ ಕಂಡರೆ ಸೇರಳಿಕ್ಕಿ

ಬಯಲು ಬ್ರಹ್ಮಾಂಡದ ರೂಪಿನಂತಾಕಿ

ಕೈ ಹಿಡಿದಾತ್ಮಕ ಕರಕೊಂಡಾಳೀಕಿ ||

ಸಾಸಿರ ಜನ್ಮವನು ತಿರುತಿರುಗಿ ಬರಹುವದೇನು

ದೇಶಿಕ ಗುರು ಮಡಿವಾಳನಿಗೆ

ಖಾಸ ಹೆಂಡತಿ ನಾನು ದಾನು ಗೌಡತೆವ್ವ|

ಎನಗೆ ಬಡದಿತವ್ವ ಶಿವಶರಣರ ಮನಿಯ್ಯಾನ ದೆವ್ವ

ಬಿಡಸಲಿಕ್ಕೆ ಕರಿಯವ್ವ ಗುರು ಲೀಲದೊಳಗಿನ ಬವ್ವ ||ಪಲ್ಲ||

ಕತ್ತಲಿ ಎಂಬುದು ಅದು | ನಿತ್ಯ ಜ್ಯೋತಿಯಂತ ತಿಳಿದು

ನೆತ್ತಿಯ ಮ್ಯಾಲಿರುವದು ಅದು ಮುತ್ತು ಮಾಡಿ ಹೊಳೆಯುವದು ||

ಅಂಗದ ಗುಣಗಳ ಬಿಟ್ಟು | ನಿಜಲಿಂಗಕ್ಕೆ ದೃಷ್ಟಿಯ ಕೊಟ್ಟು

ಕೊಟ್ಟಾರೆ ಅವರು ಗುಟ್ಟು | ತಾನೆ ಜಂಗಮ ರೂಪ ತೊಟ್ಟು ||

ಶರೀರದೊಳಗ ಸೇರಿ ಅದು | ಕೂಗುತಲಾದವ್ವ ಭಾರಿ

ನಾದ ಮ್ಯಾಲಕ ಏರಿ | ಗುರು ಮಾಡಿವಾಳ ತೋರಿದ ದಾರಿ ||

ಹಾದರ ಕಲಿತೇನ ಎಂಥಾದೋ

ನಲ್ಲನೆಬ್ಬಿಸಿಕೊಂಡು ಹೋಗುವಂಥಾದೊ

ನಾ ಹುಟ್ಟಿ ಪಡದೇನ ಇಂಥಾದೊ

ತಿರುಗಿ ಈ ಊರಿಗೆ ಬಾರದಂಥಾದೊ ||ಪಲ್ಲ||

ಅತ್ತಿ ಮಾವನ ಮನಿ ಬಿಟ್ಟೇನ

ತಲಬಾಗಿಲ ಬಿಟ್ಟು ಹೊರಗೆ ಹೊಂಟೇನ

ಈ ಊರ ಮಂದಿದು ತಂಟೇನ

ಇವರಪ್ಪಂದು ಹೋಗುವದು ಗಂಟೇನ ||

ಆರು ಮಕ್ಕಳ ಮಲಿ ಬಿಡಿಸಿದನ

ಮದುವಿ ಗಂಡನ ಕರಮಣಿ ಕಡಸಿದನ

ಮುತ್ತಿನ ಮೂಗುತಿ ಇಡಸಿದನ

ನಾ ಒಲ್ಲ ಒಲ್ಲ ಅಂದರ ಕುಲ ಕೆಡಸಿದವ ||

ಹಾದರ ಮಾಡದು ಕದ್ದೇನ

ಈ ಊರಿನ ಮಂದೀದು ಸುದ್ದೇನ

ಬಹದ್ದೂರ ಮಡಿವಾಳನ ಬುದ್ದೇನ

ಅವನ ಹಾದರದೊಳಗ ಮುಳುಮುಳಗೆದ್

ಎನ್ನ ಮನ ಮುರಿದು ಹೋದ ಮೇಲೆ

ಮಾಡಿದೆಲ್ಲ ದಂಡ

ಏನೇನು ಅರಿಯನವ್ವ ಗಂಡ

ಮೂರು ತರದ ಮನಿಯ ಕಟ್ಟಿ | ಅದು ||ಪ||

ಸೋರಿ ಸೋರಿ ಹೋಗುತಾದ ಮಾಡಲಿಲ್ಲ ಘಟ್ಟಿ

ಮುರಕ ಕಂಭಕ್ಕೆ ಪೋಟಗಿ ಕೊಟ್ಟಿ

ನಾನು ಒಳಗೆ ಹೋದೆನೆಂದರೆ ಸಿಗಲಿಲ್ಲವ್ವ ತಟ್ಟಿ ||1||

ಎತ್ತ ನೋಡಿದರತ್ತ ಭತ್ತದ ರಾಶಿ

ನಾ ಒಳ್ಳಿಗಿ ಹಾಕಿ ಕುಟ್ಟಿದೆನವ್ವ ಒಮ್ಮನಕ್ಕಿ ಥಳಸಿ

ಪರಡಿ ಪಾಯಸ ಅನ್ನ ಬಳಸಿ

ತುಸು ಕೂಸಿಗಿಡದ್ಹಾಂಗ ಉಂಡಾನವ್ವ ಹೊತ್ತನುರಿ ಕಲಸಿ ||2||

ಬಹಳ ದಿನಕ್ಕೆ ಮೂಗೂತಿಟ್ಟೆ

ನಾ ಮೂಗೂತಿಟ್ಟು ಮೂರು ದಿನಕ ಮುಟ್ಟಲಿಲ್ಲ ದಿಟ್ಟ

ಕೊರಳ ಮುತ್ತಿನ ತಾಳಿ ಕಟ್ಟಿ

ನಮ್ಮ ಕಡಕೋಳ ಈಶನೆ ಆಗಿದ್ದನವ್ವ ಭೆಟ್ಟಿ ||3||

ತಿಳಕೊ ಮೈ ತೊಳಕೊ

ನಿನ ಮನಸಿನ ಮೈಲಿಗಿ ಕಳಕೊ ||ಪ||

ಆರರ ಆಭಿಮಾನ ಅಳದಿರಬೇಕು

ಮೂರಾರು ಗುಣಗಳು ತಿಳಿದಿರಬೇಕು

ಮೀರಿದ ಉನ್ಮನಿ ಸೇರಿರಬೇಕು ||1||

ನೆಂಟರಿಷ್ಟರ ಕಂಟಕ ಬ್ಯಾಡೊ

ಭಟರೈವರನು ಸುಟ್ಟಿರು ದೌಡೊ

ತೊಂಟರಗೂಡ ನಿನ್ನ ತಂಟ್ಯಾ ಬ್ಯಾಡೊ

ಸೆಂಟದ ಸಮಾನೆಂದು ಸುಮ್ಮನೆ ಕೂಡೊ ||2||

ಭಾಸುರ ಕಡಕೋಳ ಈಶನಲ್ಲಿ

ಧ್ಯಾಸಿಟ್ಟು ನಡೆದರೆ ಸಹಾಯವಾಗುತಲಿ

ಈಶ ಮಡಿವಾಳನ ಪಾದದಲ್ಲಿ

ದಾಸನಾಗಿ ಧ್ಯಾಸ ಇಡುವೊ ಅಲ್ಲಿ ||3||

ಈ ಕಲ್ಲು ಕರಗುವದಕ್ಕೆ

ಎಚ್ಚರಂಬುದು ಬೇಕಲ್ಲ

ಬಲ್ಲಂತ ಗುರುವಿನ ಪಾದ ಹಿಡಿದರೆ

ಕಲ್ಲು ಕರಗಿ ನೀರಾಯಿತಲ್ಲ ||

ಗುದ್ದಲಿ ಹಚ್ಚಿ ಅಗಳುವದಲ್ಲ

ಸುತ್ತಿಗಿ ಹಚ್ಚಿ ಕಡಿಯುವದಲ್ಲ

ಬಂಡಿಯ ಮೇಲೆ ಹೇರುವದಲ್ಲ

ಮಂದಿಯ ಕೈಯಾಗ ಸಿಗುವದಲ್ಲ ||

ಸಣ್ಣದು ದೊಡ್ಡದು ಆಗುವದಲ್ಲ

ಹೂಡ್ಯಾ ಮಾಡ್ಯಾ ಕಟ್ಟುವದಲ್ಲ

ಒಂದು ಟಾಕಿನಾಗ ಇರುವದಲ್ಲ

ಮಂದಿ ಕಣ್ಣಿಗಿ ಕಾಣುವದಲ್ಲ ||

ಬೆಂಕಿಯಾಗ ಹಾಕಿದರ ಸುಡುವದಲ್ಲ

ನೀರಾಗ ಹಾಕಿದರ ಮುಳುಗುವದಲ್ಲ

ಅಂದಿಗೂ ಇಂದಿಗೂ ಒಂದೆ ಕಲ್ಲ

ಗುರು ಮಡಿವಾಳನ ಪಾದಕ ಹೊಂದಿದ ಕಲ್ಲ ||

ಎಂಥ ಮಾತು ಕೇಳಿದನಪ್ಪ ಅಬ್ಬಾ ಇಂವ

ಎಂಥ ಮಾತು ಕೇಳಿದನಪ್ಪ ಅಬ್ಬಾ || ||ಪಲ್ಲ||

ಲೋಕದೊಳು ಐ ಸೋಜಿಗ

ಸುಗಡಿ ಷಂಡರು ಮಕ್ಕಳು ಹಡದು ಅಬ್ಬಾ

ಕುರುಡು ಬಂದು ನೋಡಿದನು

ಕಂಡು ಮೂಕ ಬಂದು ಹೇಳಿದಬ್ಬಾ ||

ಹೋಳಿ ದಂಡಿಯ ಆಚೀಲಿ ಹೋಗಿ

ಆನಿ ಇರುವಿ ಮಲಿಯ ತಿಂತಿತಪ್ಪ ಅಬ್ಬಾ

ಚಪ್ಪ ಚಪ್ಪ ಅನ್ನುವ ಶಬ್ದ ಕೇಳಿ

ಕಿವುಡ ಬಂದು ಹೇಳಿದನಪ್ಪ ಅಬ್ಬಾ ||

ರೆಕ್ಕೆ ಇಲ್ಲದ ಹಕ್ಕಿ ಒಂದು

ಅಂತರಲೇನೆ ಆಡುತಿತ್ತು ಅಬ್ಬಾ

ಲೊಟ್ಟಿಗಣ್ಣಿನ ಹುಡಗಾ ಬಂದು

ಚಡ್ಡಿ ಹಾಕಿ ಬಾರ ಮಾಡಿ ದಿಟ್ಟಿಸಿ ಹೊಡೆದನು ಅಬ್ಬಾ ||

ಕಾಲನಿಲ್ಲದ ಹೆಳವ ಬಂದು

ಏಳು ಮನಿ ಕನ್ನ ಹಾಕಿ ಹೋದನು ಅಬ್ಬಾ

ಆಗಬಾರದ ಅಗಾಧ ಸುದ್ದಿ

ಆಗ ಬೇಗದಿಂದ ಆಗಿ ಯೋಗಿ ಮಡಿವಾಳ ಹೇಳಿದನಬ್ಬಾ ||

ಅಪ್ಪ ಕೇಳಪ್ಪ ಹೇಳಪ್ಪ

ಇದರ ಅರ್ಥ ಮಾಡಿಕೊಡೋ ನಮ್ಮಪ್ಪ

ಆಕಾಶದೊಳು ಜಾಲಿ ಬನ ಸೊಕ್ಕಿತಪ್ಪ

ಬನದೊಳು ಮಲ ಸೇರಿ ಬಯಲಾಯಿತಪ್ಪ || ||ಪಲ್ಲ||

ಅಣುರೇಣು ಅರಗುಂಜಿ ಅರ್ಧ

ಅರ್ಧ ಗುಣಿಸಿ ಭಾಗಿಸಿ ಹೇಳೊ ಮರ್ದಾ

ಅರ್ಧ ಕೂದಲ ಸಣ್ಣ ಎಳಿಕಿಂತ ಕಿರ್ದ

ನವಖಂಡ ಪೃಥ್ವಿ ನುಂಗಿ ಕುಳಿತಿರ್ದ ||

ಇರವಿ ಶಬ್ದಕ್ಕೆ ಹುಲಿ ಬೆದರಿ

ಅಲ್ಲಿ ಗಗನೇಶನ ಪಿತ ಬಿದ್ದ ಕಮರಿ

ಪಾತರದ ಹುಳ ನೋಡೋ ಪೃಥ್ವಿ ಛೀಮಾರಿ

ಪುರುಷ ಹಡದಾನೊ ಎಂಟು ಆನಿಯ ಮರಿ ||

ಸೂಜಿ ಬಾಯೊಳು ಸಮುದ್ರ ಹರದು

ಜಂಬು ದ್ವೀಪದ ಗಡ್ಡೆಯ ಕೊರೆದು

ಮಹಾಗುರು ಮಡಿವಾಳ ಸಾರಿದ್ದು

ಬಲ್ಲವರು ಹೇಳಿರಿ ಅರ್ಥವ ತಿಳಿದು ||

ಆಕಿನಿ ಇಲ್ಲದಂಗಾಯ್ತಪ್ಪ ಮತ್ತು

ಇಕಿನ ಮ್ಯಾಲಿನ ಮನಸು ಹೋಯ್ತಪ್ಪ

ವಾಯಿ ತುಂಬಿ ತಿದಿ ಬಾಯ್ತಪ್ಪ

ಮತ್ತು ಇದ್ದು ಇಲ್ಲದಂಗಾಯ್ತಪ್ಪ || ||ಪಲ್ಲ||

ಸುಗಡಿ ಹಡದಾಳೊ ಸುಂದರ ಹೆಣ್ಣ

ಹುಟ್ಟ ಕುರುಡ ಇಟ್ಟಾನೊ ಆಕಿ ಮ್ಯಾಲ ಕಣ್ಣ

ಷಂಡ ಹೋಗಿ ಹಚಗೊಂಡು ಬಂದ ಹುಣ್ಣ

ಮಂಡ ಮರನೇರಿ ತಿಂದ ಗಾಳಿಯ ಹಣ್ಣ ||

ಷಂಡಗ ಹುಟ್ಟಿತೊ ಈ ಕೂಸ

ಭೂಮಂಡಲ ನುಂಗಿತೊ ಅದರ ಮಾಸ

ಕಂಟಿ ಇರುವಿ ಹೇಳಿತು ಈ ಮಾತು ಖಾಸ

ಕಿವುಡ ಕೇಳಿ ಬೆರಗಾದ ಮೂರ್ನಾಲ್ಕು ತಾಸ ||

ಮೂಕ ಹೇಳಿದ ಮುಗಿಲ ಹರಿತಂತ

ಹುಟ್ಟ ಹೆಳವ ತಂದ ಸುದ್ದಿ ಖರೇ ಅಂತ

ನೀ ತಿಳಿಕೊ ಇದರ ಪರಿ ಹೀಗಂತ

ಗುರು ಮಡಿವಾಳ ಯೋಗಿ ಹೇಳಿದ ಮಾತ ನಿಜವಂತ ||

ಬಸರಿಲ್ಲದ ಮಗನ ಹಡದವ್ವ

ಇದಕ ಹೆಸರೇನು ಇಡಬೇಕ ಹಡದವ್ವ

ಅಸರಂತ ಹಸಿ ಹುಸಿ ನುಡಿದೆವ್ವ

ಹಸಿ ಕೆಸರಿಗಿ ಬೆಂಕಿ ಹಚ್ಚಿ ನಡದೆವ್ವ || ||ಪಲ್ಲ||

ಶಾಸ್ತ್ರ ಪುರಾಣ ಎಲ್ಲಾ ಓದ್ಯಾನ

ಶಾಸ್ತ್ರ ಶಸ್ತ್ರ ಮುರಿದು ಮೂಲಿಗೊತ್ಯಾನ

ಕಾವಿಯ ಬಣ್ಣವು ಧರಿಸ್ಯಾನ

ಆರು ಮೂರು ಲೋಕಕ ಮೀರಿ ನಿಂತಾನ ||

ನಡು ಜಡಿಯಲಿ ಹುಟ್ಟ್ಯಾನ ಸ್ವಾಮಿ

ನಡಗುತಾವ ನವಖಂಡ ಭೂಮಿ

ಮುಂದ ಸಡಗರ ನೋಡಿರಿ ಯಡ್ರಾಮಿ

ಅಂವ ತಿರಗುತಾನ ನಾಲ್ಕೂರ ಸೀಮಿ ||

ಸಾಧುರ ಮೋಹಕ ಹುಟ್ಟ್ಯಾನ

ಮಹಾ ಅರಿವಿಗಿ ಮನಸ ಇಟ್ಟಾನ

ಆಧಾರ ಹಿಡಿದು ಕುಲಗೆಟ್ಟಾನ

ಗುರು ಬಹದ್ದೂರ ಮಡಿವಾಳ ಹುಟ್ಟ್ಯಾನ ||

ಬೈಲ ಬ್ರಹ್ಮವು ಕೇಳಿರಣ್ಣ

ಕೇಳಬೇಕಾದರೆ ಬಾರೊ ನಮ್ಮಣ್ಣ

ಕೇಳದಿದ್ದರೆ ಕಿತ್ತೆಸೆಯೋನು ಕಣ್ಣ

ಸುಳ್ಳ ಪತ್ರ ಬರೆದ ಹಂಗರಗಿ ರೇವಣ್ಣ || ||ಪಲ್ಲ||

ಸುಟ್ಟ ಬೀಜವ ಬಿತ್ತಿದಾನೊ

ಭೂಮಂಡಲಕ್ಕೆ ಮರ ಮುಚ್ಚಿತ್ತಣ್ಣ

ಬಂಜಿಯ ಮಗ ತಾ ಬಿತ್ತಿರುವನೊ

ಮರ ಮುಟ್ಟಿ ಬೀಜ ಹುರದ್ಹೋಯಿತಣ್ಣ ||

ಮಾಣಿಕದ ಹಣ್ಣ ಆದಿತಣ್ಣ | ಆ

ಹಣ್ಣಿಗಿ ಹಣ್ಣು ಒತ್ತಿತಣ್ಣ

ಕಾಯಿ ಬಲತ ಮ್ಯಾಲ ಆಯಿತಾ

ಆ ಹೂವಿನ ವಾಸನ ಬ್ರಹ್ಮಕ್ಕೆ ಸೇರಿತಣ್ಣ ||

ಎಲಿಯ ಬೆಳ್ಳಿ ತೆಲಿಗೇರಿತಣ್ಣ

ಹಲವು ಶಾಸ್ತ್ರ ಪುರಾಣ ನೀವು ಕೇಳಿರಣ್ಣ

ಎಲಿಯ ತುದಿಯ ಮ್ಯಾಲ ಕಾಯಿ ಆದಿತಣ್ಣ

ನಮ್ಮ ದೇಶಿಕ ಮಡಿವಾಳನ ಪಾದ ಹಿಡಿಯಣ್ಣ ||

ನಾನು ಒಂದು ಕೌತುಕ ಕಂಡೇನು

ಹೇಳೆನಂದರೆ ಬಾಯಿಗೆ ಬರವಲ್ಲದು || ||ಪಲ್ಲ||

ಅಡಕಿಯೋಟು ಆಕಳ ಕಂಡೇನು

ಹಿಡಕಿ ತುಂಬ ಕೆಚ್ಚಲ ಕಂಡೇನು

ಅಡಕಿ ಹಿಡಕಿ ಎರಡರ ನಡುವೆ

ಏಳು ಗೇಣಿನ ಹೋರಿಯ ಕಂಡೇನು ||

ಷಂಡ ಮದವಿ ಆಗದು ಕಂಡೇನು

ಸುಗಡಿ ಬಸಿರು ಆಗದು ಕಂಡೇನು

ಪಂಡ ಸುಗಡಿ ಇಬ್ಬರ ನಡುವೆ

ಗಂಡಸ ಮಗನೊಂದು ವಿಪರೀತ ಕಂಡೇನು ||

ದೇಶದೊಳಗ ಕಡಕೋಳ ಕಂಡೇನು

ಗುರು ಮಡಿವಾಳನ ಪಾದ ವಿಪರೀತ ಕಂಡೇನು ||

ಮರಗಿ ತಾರಿಸಮ್ಮ ತಾಯಿ

ತೋರಿಸಿದೆವ್ವ ನಿನ್ನ ಮಯಿ ಅಲಲ ನಿನ್ನಾ ಆರ್ಭಾಟ

ತಾಳದೆ ತೆರೆದರಪ್ಪ ಬಾಯಿ ||ಪಲ್ಲ||

ವಾರ್ತಿ ಕೇಳಿದರೆ ಹೆದರುವರು

ಸನಿಯಾಕ ಬಂದರೆ ಬೆದರುವರು

ಅತ್ತ ಇತ್ತ ನೋಡಿದರ ಕಾರುವರು

ಭೂಮಿ ಸಾಲದಂಗ ಉರಳ್ಯಾಡುವರು ||

ಅಕರಾಳ ವಿಕರಾಳ ನಿನ್ನ ರೂಪ

ಹೊಕ್ಕರೆ ಹೋಯಿತೊ ಮನಿದೀಪ

ಕದಲಿದವರಿಗೆ ಸಂತಾಪ

ಚಿಕ್ಕವರಿಗೆ ನೀ ಅಪರೂಪ ||

ಮನಿಮಾರ ಅಳದಿ ಬಂಧು ಬಳಗ ಕಳದಿ

ಬಾಯಿಮ್ಯಾಲ ಬಡದಿ ಎಳಕೊಂಡ ಸುಡಗಾಡಕ ನಡದಿ

ಚಂದುಳ್ಳ ಶ್ರೀಗುರು ಮಡಿವಾಳಗ

ಒಪ್ಪುವ ಅಪಕೀರ್ತಿಯ ಪಡದಿ ||

ಇದು ಏನು ಮೂಲಾದಿತು ಕೋಣ

ಹೆದರಿಸಿ ಕೊಲ್ಲುವದು ಎನ್ನ ಪ್ರಾಣ

ಮದ ಸೊಕ್ಕಿ ತಿರುಗುವದು ಕೋಣ

ಒಳ್ಳೆ ಚದುರನಾಗಿ ಹೊಡೆದವ ಜಾಣ || ||ಪಲ್ಲ||

ಬಡ ಬಡ ಮನಿಯಾಕ ಬರುವದೊ

ಅಡಕಲ ಮಡಕಲ ಇಳಿಸುವದೊ

ಗೋಧಿ ಕಡಲಿ ಹಾಳ ಮಡುವದೊ ತನ್ನ

ಒಡಲೊಳಗ ಇಟುಕೊಂಡು ಹೋಗುವದೊ ||

ಅಡವಿಗೆ ಹೋದರೆ ಉಳುವಿಲ್ಲ

ಹೊಡಿತಿನಿ ಬಂದರೆ ಬಿಡುವದಿಲ್ಲ

ಬಡ ಜನರ ಉಸರಿಟಗೊಂಡಿತಲ್ಲ

ದೆವ್ವಿಗಿ ಎಡಿ ಮಾಡಿದಂಗಾಯ್ತಲ್ಲ ||

ದಾವದು ತಿಂದರು ಉಳವಿಲ್ಲ

ಇದರ ಜೀವಕ ದಾರೇನು ಧಣಿಯಿಲ್ಲ

ಮಹಾಗುರು ಮಡಿವಾಳ ಹೇಳ್ಯಾನಲ್ಲ

ಇದಕ ಸಾವುದು ಒಂದಿನ ಬಿಟ್ಟಿಲ್ಲ ||

ಆಲಿಸವ್ವ ಮಗನ ಮಾತ

ಮಗನ ಮ್ಯಾಲಿರಲಿ ಮಮತ

ಹೇಳಿಹೋದ ಜಗದೇವ ದಾತ

ಕೇಳಿದಂತ ಜನಕೆ ಇರುವದು ಗುರುತ || ||ಪಲ್ಲ||

ಬಹಳ ಪುಣ್ಯವಂತಿ ತಾಯಿ

ತಾಳಿದಿ ಗುಣ ಶಾಂತಿ

ಏಸು ಕಾಲ ಕೊಂಡಾಡುವ ಖ್ಯಾತಿ

ಭಾಷೆ ಕೊಟ್ಟು ಬೆದರಿಸುವದಲ್ಲ ರೀತಿ ||

ದೇಶದೊಳಗ ದಾತೆ

ಗುರುವಿನ ಮಾತು ನಡಿಸು ಪ್ರೀತೆ

ಖಾಲಿ ಮಾಡದಿರು ನೀ ಒಣ ಚಿಂತೆ

ಗುರುನಾಥ ಮಾಡಿದುದಕೇನಂತೆ ||

ದೇಶಕೆ ಖೈನೂರ ಈಶ

ಮಡಿವಾಳ ಹಾನ ಬಲು ಬೇಸ

ದೇಶಮುಖ ಜಗದೇವನ ರಾಣಿ

ಲೇಸ ಪಡಿಬೇಕವ್ವ ನೀ ದಾನಿ ||

ಮೋಸವಾದೀತೊ ಇಂದಿಗೆ ಬಂದು

ಬಹು ಮೋಸವಾದೀತೊ

ಭಾಷಿ ಹೀನರು ಎಂದು

ಧ್ಯಾಸಕ್ಕಿಲ್ಲದೆ ಬಂದು ಮೋಸವಾದೀತೊ ಇಂದಿಗೆ ಬಹು || ||ಪಲ್ಲ||

ಸುಂದರ ಸುಗುಣ ಬಾರೆಂದು ಕರೆದು

ಒಂದು ಜಮೀನವ ಕೊಟ್ಟು

ಇಂದಿಗೆ ಇಲ್ಲದೆ ಹೋಯಿತೊ

ನಮ್ಮವ್ವ ನಿನಗೆ ಎಂಥ ಬುದ್ಧಿ ಸೇರೀತೆ

ಇದರಿಂದ ಏನು ಭಾಂಡವು ತುಂಬಿತೇ | ಕಂಗೆಟ್ಟಿತೇ

ಪಂಥಗಾರಳು ಕಾಣಿಸುತೆ ಪಾಪಕ್ಕ ಘಾತೆ

ಮೋಸವಾದೀತೊ ಇಂದಿಗೆ ಬಹು ||

ಕಡೆಯ ಕಾಲದಿ ನಡಸಲಿ ಬೇಕೆಂದು

ಮಡದಿಯ ಕೈಯಲ್ಲಿ ಪತ್ರವ ಕೊಡಿಸದೆ

ಪುಣ್ಯವು ತೀರಿ ಬಿಡಿಸಿಕೊಂಬುದು ತರವೇ

ಆತನ ಮಾತು ನುಡಿಯ ಲಾಲಿಸಬಾರದೆ

ಹೇಳಿದ ಪರಿ ಹೊಡದಿ ಹಳ್ಳಕ್ಕೆ ಎಲ್ಲ ನಿಷ್ಫಲವೇ

ಹವಣಸದಿರು ಜೀವವೇ | ಬಡವಾದೀತು ಮನವೆ

ಮೋಸವಾದೀತೊ ಇಂದಿಗೆ ಬಹು ||

ಜಗದೇವಪ್ಪನ ಮಾತ ಅಗದಿ ಲಾಲಿಸಲಿಲ್ಲ

ಉಗಳಿದ ಅನ್ನಕ ಬಗಸಿ ಒಡ್ಡುವರೇನು

ಸಿಗದೊಂದು ಆಶವ ಮಾಡಿದರೇನು

ಬಿದನೂರ ಶೇಷಪ್ಪನ ಪುಣ್ಯವ ಕೇಳಿಕೊಳ್ಳುವದೈಸಿರಿಯೇ

ನಾಲ್ವತ್ತು ಬಿಗ್ಯಾ ಜಮೀನವ ಕೊಟ್ಟಿದು ನೋಡಿರ್ಯಾ

ತೊಗೊ ನೀನು ವ್ಯರ್ಥ ಬದುಕಿದ್ಯಾ | ಜೀವಿಸಿದ್ಯಾ

ಮೋಸವಾದೀತೊ ಇಂದಿಗೆ ಬಹು ||

ದೊರಿಗೋಳು ಹುಟ್ಟಿದ ಮ್ಯಾಲ ದೊರಿತನ ದೌಲತ

ಸ್ಥಿರವಾಗಿ ಇರಬೇಕೆಂದು ಹರಕಿಕೊಳ್ಳಲಿಬೇಕು

ಕರಗಾಲತನವು ಸಲ್ಲುವದೆ ಇಂಥವರಿಗೆ

ಬಾಯಿ ತೆರದರೇನು ಫಲವು

ಮಾಡಿದ ಪುಣ್ಯದ ಫಲವು ಹೋಯ್ತು ಹುರದು | ಕಾಯವರದು

ಬದುಕು ಭಾಗ್ಯವು ಸ್ಥಿರವಲ್ಲವೋ ಒಂದಿನ ಸಾವು ತಪ್ಪದು

ಮೋಸವಾದೀತೊ ಇಂದಿಗೆ ಬಹು ||

ಹಂಗು ಹರಿದ ಮೇಲೆ ಲಿಂಗದ ಪರಿವಿಲ್ಲ

ಜಂಗಮಗೋಳಾದರೇನು

ನುಂಗಿದವಳಿಗೆ ಲಿಂಗಪೂಜೆಗಳ್ಯಾತಕೋ

ಸಂಕಷ್ಟ ಎಂಬ ನುಂಗರಿತನ ಸಾಕು

ಮಾಡಿದಿ ಮಾನ ಭಂಗವಾದೀತೋ ಲೋಕಕ್ಕೆ | ಸಂಕಷ್ಟಕ್ಕೆ

ಮಂಗಲ ಮಾತಿನ ಮಲ್ಕ ಹಾಕಿದಿ ಟೀಕಾಬಾಯಿ

ಮೋಸವಾದೀತೊ ಇಂದಿಗೆ ಬಹು ||

ಶಿವ ಶಿವ ಈ ನುಡಿ ಕಿವಿಯಲ್ಲಿ ಕೇಳದು ಕಷ್ಟ

ಭೂಮಿ ಕಂಪಿಸಿತು ಇವರ ಪ್ರತಾಪಕ್ಕೆ

ದಿವಸ ಕೆಟ್ಟವುಗಳಲ್ಲವೆ | ಮುಂದಾದರೂ

ಶಿವನಲ್ಲಿ ಏನು ಜವಾಬು ನೀಡುವಿರ್ಯಾ

ಮಾನವರಾಡುವ ಮಾತಿಗೆ ಲಜ್ಜಲ್ಲವೆ | ಇದು ಛಲವೇ

ಹವಣಿಸದಿರು ಮನವೇ ಇದು ಸ್ಥಿರವೇ

ಮೋಸವಾದೀತೊ ಇಂದಿಗೆ ಬಹು ||

ಎಷ್ಟು ಹೇಳಲಿ ನಿನಗೆ| ನಿನ್ನ

ನಷ್ಟ ಗುಣವು ಬಹಳ ಕೊಟ್ಟ ದಾನ ಈಗ

ಬಿಟ್ಟು ಹೋಗು ಎಂಬುವಿರ್ಯಾ

ಹೊಟ್ಟೆಗಿಲ್ಲದೆ ಸಾಯುವಿರ್ಯಾ

ಮಡಿವಾಳನ ಗುಟ್ಟುಗಂಜಿ ಅಳದಿರ್ಯಾ

ಕೃಷ್ಣನ ಶಾಪ ಪದರೊಳು ಕಟ್ಟಿಕೊಂಡಿರ್ಯಾ

ಕರ್ಮಿಕರ್ಯಾ ಎಷ್ಟು ಪರಿಯಿಂದ ಕಾಡಿದಿರ್ಯಾ

ಮೋಸವಾದೀತೊ ಇಂದಿಗೆ ಬಹು ||

ಯಾತರ ಮಾತು ಹೋಗರೆವ್ವ ನಿಮ್ಮದಲ್ಲ

ದಾತಾ ಕೊಟ್ಟ ದಾನ ಘಾತ ಮಾಡಿದೆಲ್ಲ

ಪಾತ್ರ ಅಪಾತ್ರ ಎಂಬುದೆಚ್ಚರುಳಿಯಲಿಲ್ಲ | ನರಕ

ಪಾತ್ರಳಾದೆನೆಂಬ ಅಂಜಿಕಿ ಉಳಿಯಲಿಲ್ಲ || ||ಪಲ್ಲ||

ಸಂಚಿತ ಪುಣ್ಯ ಫಲದಿಂದ ರಾಜ್ಯವಾಳುವಿ | ನಿನ್ನ

ವಂಚನ ಗುಣದಿಂದ ಪಾತಕದೋಳು ಬೀಳುವಿ

ಹಂಚಿಕಿದ್ದರ್ಯಾಕ ಪುಣ್ಯ ಫಲ ನೀಗುವಿ | ಇಂಥ

ವಂಚನ ಗುಣದಿಂದ ಘಾತ ಮಾಡುವಿ ||

ಲೆಕ್ಕಪತ್ರದೊಳು ಭಾಳ ಶಾಣ್ಯಾಳಾದಿ

ಸರ್ಕಾರ ಕಾಯ್ದ ಬುಕ್ಕ ಎಲ್ಲ ಓದಿ ನೋಡಿದಿ

ಕಕ್ಕಿದವನ ಕಾರ್ಯದ ಕೂಳಿಗೆ ಕೈಯ ಚಾಚಿದಿ | ನಿನ್ನ

ಒಕ್ಕಲ ಹರದು ಹೋಗೋ ಕೆಲಸ ಮಾಡಿದಿ ||

ದಣಿತನ ದೌಲತಕ ಒಳ್ಳೆ ಒಪ್ಪುತಿದ್ದಿ

ಕೊಟ್ಟು ಕಸಿದು ಹೇಸಿ ಧಾವಂತಿ ಮಾಡಿದಿ

ಹೀನತನದಲ್ಲಿ ಹೆಚ್ಚು ಗುಣಿಸಿ ನೋಡಿದಿ

ಸತ್ತ ಹೆಣದ ಮೇಲೇನು ಹೇರಿಕೊಂಡು ಹೋಗುತಿದಿ ||

ಎಷ್ಟು ದೂರಿಕೊಂಡರೇನು ಫಲವಿಲ್ಲ

ಹೊಲ ಬಿಟ್ಟು ಹೋಗೆಂಬ ಹೊರ್ತ ಮಾತೇ ಇಲ್ಲ

ಕಟ್ಟು ಶೆರಗಿನೊಳು ಬೆಂಕಿ ಬಿಟ್ಟಿದಲ್ಲ

ಹುಟ್ಟು ಬಂಜಿಗೇನು ಕನಿಕರ ಬರಲಿಲ್ಲ ||

ನಾಲ್ಕು ಮಂದಿ ಹೇಳಿದರೇನು ಕೇಳೊಣಿಲ್ಲ

ಬೇಕಾದ ಮಾತಿಗಿ ಪ್ರಾಣ ಕುಡತಿಯಲ್ಲ

ಲೋಕದೊಳಗೆ ಅಪಕೀರ್ತಿ ಹೊತ್ತಿಯಲ್ಲ

ಇಂಥ ಟೀಕಾಬಾಯಿಯಂಥ ಪಾಪೀನ ನೋಡಿದ್ದಿಲ್ಲ ||

ಶ್ರೀನಿವಾಸರಾಯನ ನೋಡಿ ನಾಚಬಾರದೆ

ಅವನು ನಡೆಸಿಕೊಟ್ಟ ಯಾರದೇನು ಅಂಜಿಕಿಲ್ಲದೆ

ಏನು ಭೃಷ್ಟಳಾದೆ ಗಂಡನ ಅಬರು ಕವಡಿಗೆ ಮಾರಿದೆ

ನಿನ್ನ ಪ್ರಾಣ ಹೋಗದ ಮುನ್ನಮಾನ ಕಳಕೊಬಾರದೆ ||

ಫಾಸಿಕೋರ ದೇಶಮುಖ ಆಶಿಹೀನ

ಸೋಸಿ ನೋಡಿದರೆ ಹುಟ್ಟಲಿಲ್ಲ ಜ್ಞಾನ

ಈಶ ಮಡಿವಾಳನಂಥವರಿಲ್ಲ ಖೂನ | ಪರ

ದೇಶದ ಮ್ಯಾಲ ಹಾಡಿ ಕಳಿವೆ ನಿನ್ನ ಮಾನ ||

ನಾಚಿಕಿಲ್ಲೋ ಭಾಡ್ಯಾ ನಮಗ್ಯಾಕ ತಡವತಿ

ಛೀ ಛೀ ಅನಿಸಿಕೊಂಡಲ್ಲಿ ಬಂದು ಯಾಕ ಡೊಗ್ಗತಿ || ||ಪಲ್ಲ||

ಸಾಚಾನಂಗ ಮೋತಿ ಮ್ಯಾಲ ಎತ್ತಿ ತಿರಗತಿ

ಕುಂಬಾರ ರಾಚಿ ನರಕ ತಿಂದು ಏಸು ದಿನ ಬದುಕತಿ ||ಪ||

ಗುರುವಿಗೊಪ್ಪಿಸಿದಂಥ ಚಿಟಕಿ ಹಿಂದಕ ಬೇಡತಿ

ಇಕ್ಕೂಳ ಜ್ವಾಳಾ ತಿಂದು ನೀನು ಕೈ ಬಾಯ್ ಹಾಕತಿ

ಬಟಗೇರಿಲಿಂದ ಸುಳ್ಳೆ ಪತ್ರ ತಂದು ತೋರಸತಿ

ಕರಮಣಿ ಕಟ್ಟಿಕೊಂಡೀನಿ ಅಂತ ನನ್ನ ಹಾಟ ಕುಡಿತಿ ||

ತುಡಗಾ ಮಾಡಿದಂಥ ಭಾಡ್ಯಾಗ ನಾಚಿಕಿಲ್ಲೇಳೊ

ನನ್ನ ಎಳಕೊಂಡ ಹೋಗಾ ಕುರಸಾಲ್ಯಾನ ತಾಯೇನ ಹಡದಾಳೊ

ಪಡಕೊಂಡಂಥ ಕೃಷ್ಣನ ಬಿಟ್ಟವಳಲ್ಲೇಳೋ

ಮುಡದಾರ ಮಲ್ಲ್ಯಾನ ಎದಿಮ್ಯಾಲ ಒದ್ದು ತಿರಗುವ ಖೈನೂರ ಊರವಳೊ ||

ಎತ್ತ ಹೋದೆ ಎನ್ನ ಹಡದವ್ವ

ಮರ್ತ್ಯ ವು ಮುಳುಗಿತು ಎನಗವ್ವ

ಹಸ್ತರ ಕೇಳುವರು ಯಾರವ್ವ

ಮುಂದ ದುಸ್ತರ ದಿನಗಳು ಕಳಿಯಲ್ಹ್ಯಾಂಗವ್ವ || ||ಪಲ್ಲ||

ಏನೇನು ಪರಿಯಿಂದ ನೀ ಉಣಸಿ

ಬಲು ಮೋಹ ಮಾಡಿದಿ ಎನ್ನನು ಬೆಳಸಿ

ಏನು ಸವಿ ಸಂಭ್ರಮ ಬಿಡದೆ ಸುರಿಸಿ

ಹಾನಿ ಮಾಡಿದಿ ಎನ್ನ ನೀ ಹರಸಿ ||

ಪುರಾಣ ಪುಣ್ಯ ಕಥಿ ನೀ ಬಲ್ಲೆವ್ವ

ಶರಣರ ಸಂತತಿ ನೀನವ್ವ

ಕರುಣವರತಿ ತಾಯವ್ವ

ನಿನ್ನನಗಲಿ ನಾ ಹ್ಯಾಂಗ ಜೀವಿಸಲೆವ್ವ ||

ಆಶ್ವಿಜ ಶುದ್ಧ ಏಕಾದಸಿಯೇ

ಈಶ್ವರ ದೇವನ ವರಕತಿಯೇ

ದಾಸನಾಗಿ ಉಳಿತೇ ಹಗಲಿನ ಮಿತಿಯೇ

ಪರವಶವಾದಿ ಪುಣ್ಯವಂತಿ ಗರತಿಯೇ ||

ಆಶೆ ಕಡಿದು ಹೋಗುವರತ್ತ

ಮೀಸಿ ಬೊಳಿಸಿಕೊಂಬುವರಿತ್ತ

ಲೇಸನಾಗಿ ಕಾಣುವದು ಪತ್ತ

ಹರದಾಸನಾಗುವದು ಹಣೆಬಾರವಿತ್ತ ||

ಆಶೆ ಕಡಿಯಿತು ಖೈನೂರಪ್ಪ

ಸೋಸಿದ ಬೆಳ್ಳಿ ತಾಯಿ ಕಾಸವ್ವ

ಈಶ ಮಡಿವಾಳನ ಖೂನವ

ಕೈಲಾಸದ ಪದವಿ ಕೊಟ್ಟಾನವ್ವ ||

ಆರುತಿ ಬೆಳಗುವೆನೆ ನಿರಂಜನದಾರುತಿ ಬೆಳಗುವೆನೆ

ನಮಯ್ಯಗೊಂದಾರುತಿ ಬೆಳಗುವೆನೆ

ಆರುತಿ ಬೆಳಗುವೆನೆ ವೀರ ವೀರಮಹೇಶ

ಗೊಂದಾರುತಿ ಬೆಳಗುವೆನೆ || ||ಪಲ್ಲ||

ಪಂಚಭೂತ ದೇಹದೊಳು ತಾ

ಸಂಚರಿಸುವ ಮಾಯದೊಳು

ಪಂಚಕರಣ ಪಂಚಾಮೃತ

ಪಂಚಮನೋಹರಗಾರುತಿ ಬೆಳಗುವೆನೆ ||

ಯೋಗಿ ಜನದಾನತಗೆ ಈ

ಭವ ರೋಗ ರಹಿತಗೆ

ಸಾಗರ ಸುಖಮಯ

ದಾಗರ ಮೂರುತಿಗಾರುತಿ ಬೆಳಗುವೆನೆ ||

ಖೈನೂರ ಪುರವಾಸ ಕವಿ

ತೇಜಮಯ ಮಾಡಿದಿ ನಿರ್ದೋಷ

ಜಯ ಪದವಿ ಕೊಡೊ

ದಯಾನಿಧಿ ಮಡಿವಾಳಗಾರುತಿ ಬೆಳಗುವೆನೆ ||

ಮಂಗಳಾರುತಿ ಮಾಡುವೆ ಹರಾ

ಜಯ ಗುರುವರಾ || ||ಪಲ್ಲ||

ತನುವೆಂಬ ತವಕಡಿ

ವಿನಯದಾರತಿನಿಟ್ಟು

ನೆನೆವ ನಾಮದ ಬತ್ತಿ ಹೊಸೆದೆ

ದಯಾ ಮೂರ್ತಿ ನಾಮ ಪಠಿಸಿದೆ ||

ಹೊಳೆವ ಜ್ಯೋತಿಯ ಮಾಡಿ

ಬೆಳಗುವೆ ಬ್ರಹ್ಮವ ಕೂಡಿ

ಸುಳಿವ ವಾಸನೆ ಗಾಳಿ ನೀಡ್ಯಾಡಿ

ಹೊಳೆದು ಝಗ ಝಗಿಸಿದೆ ||

ಧರೆಯೊಳು ಮೆರೆವ ಖೈನೂರ

ಪುರಪತಿ ಮಹಾಗುರು

ಮಡಿವಾಳನ್ಹಾಡಿ ಹರಸುವೆ

ತಲೆಬಾಗಿ ನಾ ನಮಿಸುವೆ ||

ತ್ರಾಹಿದೇವ ಜಯ ಜಯ ತ್ರಾಹಿದೇವ

ನತ ಸಂಜೀವ ಭಾವ ಜಯ ಜಯ || ||ಪಲ್ಲ||

ಕಿಂಚಿತಾರೆ ಸಂಚಿತಿಲ್ಲಾ

ಪಂಚಮುಖನಿಗೆ ಮೃಗ

ಮಿಂಚಿನಂತೆ ಪಂಚಾಂಗದೊ

ಳ್ಹಂಚಿ ಹಾಕಿದಂಥ ಗುರುತ್ರಾಹಿ ||

ಅಂಧಕಾರ ನಿಂದಿಸುವವ

ಮಂದ ಜನರೊಂದು ಗೂಡ

ಬಂಧುರ ಬಾರೆಂದು ಆನಂದ

ವಂದಿಸುವೆ ಗುರು ತ್ರಾಹಿ ||

ಬಲ್ಲನಾತನಲ್ಲದನ್ಯರೂಪವಿಲ್ಲಾ

ಅಲ್ಲಾಡಿಸಿದ ಭವ ಮೂಲ

ಬಲ್ಲಿದ ಮಡಿವಾಳ ನಿನ್ನಲ್ಲದಿಲ್ಲಾ

ಸಲ್ಲುವ ಗುರುವಿನ ಪಾದಕೆಲ್ಲಾ ಗುರುತ್ರಾಹಿ ||

ಜಯದೇವ ಜಯದೇವ ಜಯ ನಿರ್ವಿಕಾರ

ಜಯ ಸ್ವಯಂ ಸಿದ್ದಪರುಷ ಶ್ರೀ ಪರಮನವತಾರ || ||ಪಲ್ಲ||

ಮಂಗಳಾಕರ ಮಹಲಿಂಗ ಶುಭಂಗಾ

ಕಂಗೊಳಿಸುವ ಕೋಟಿಕಾಂತಿ ಪ್ರಭಂಗಾ

ಬಂಗಾಳಿತನುಭಾವ ಬಿಡಿಸಿದಿ ನಿರ್ಭಂಗ

ಸಂಗ ಮಾಡಿರೋ ಸಾಧು ಜನರಂತರಂಗ||

ಬಾವೂಲಿ ಬಗಿಯಂತೆ ಭಾವಿಸಿಸಿದ್ದೆನಗೆ ದೇವಾ

ನಿಮ್ಮ ಮಹಿಮೆಗೆ ಸರಿಯೆ ಜಗದೊಳಗೆ

ಭಾವಜಹರ ಹರಿವಿರಂಚಿ ನಿಮ್ಮ ಕೆಳಗೆ

ಜಾವ ಜಾವಕ ನೆನಿಸುವೆ ಮನದೊಳಗೆ ||

ಅರಿವುಳ್ಳವರಿಗೆ ಯಮನ ಸೆರೆ ಬಿಡಿಸಿದೆ

ಹರದಿ ನೀ ಮಾಯದ ಪರದಿ ಮರೆಗಿಡದೆ

ಧರೆಯೊಳು ಮೆರೆವಂಥ ಕರ್ತಾ ಖೈನೂರ ಮೆರೆದೆ

ಧೊರೆ ಮಡಿವಾಳನೆಂಬ ಹಿರಿತಾನ ಪಡದೆ ||

ಜಯದೇವ ಜಯದೇವ ಜಯದೇವ

ಮಹಾಗುರುದೇವ ಸ್ವಾಮಿ ಗುರುದೇವ

ಸಾಯಸದಿಂದಲಿ ತೋರಿದಿ ಅಭವ || ||ಪಲ್ಲ||

ತನುವಿನ ಸಂಗಡ ಮಾಯಾ ಮೋಹದೊಳಗೆ

ಮುಣು ಮುಣುಗಿ ಆಡಿದೆ ಭವದೊಳಗೆ

ಘನ ಮಂತ್ರೋಚ್ಛಾರವಾಗಲು ಕರ್ಣದೊಳಗೆ

ಅನುಪಮಾತೀತ ನಾನಾದೆ ಜಗದೊಳಗೆ ||

ವಂದಾನೊಂದರ ಪುಣ್ಯದ ಬಲವು ನಮಗಿಲ್ಲ

ತಂದೆ ಗುರುವಿನ ಕರುಣದಿ ಹೋಯಿತು ಭಯ ಝಲ್ಲ

ಚಂದಚಂದಾದ ಸುಖವು ತೋರಿತು ಎಮಗೆಲ್ಲ

ಸಂದೇಹನಳಿದು ಸದ್ಗತಿ ತೋರಿದಿಯಲ್ಲ ||

ಬಡ ದೇಹಿ ಬಡ ಪ್ರಾಣಿಗಳ ಭಾಗ್ಯನಾದಿ

ಕಡು ಮೂರ್ಖತನವೆಲ್ಲ ಕಿತ್ತು ಬಿಸಾಡಿದಿ

ಪೊಡವಿಯೊಳಗ ಖೈನೂರ ಪುರದಿ ನೆಲಸಿದಿ

ಮೃಢ ಮಡಿವಾಳನಾಗೆಂಬ ಅಭಯಾ ಕೊಟ್ಟೀದಿ ||

ಜಯದೇವ ಜಯದೇವ ಜಯ ಸದ್ಗುರು ರಾಯ

ಭಯಕರ್ತಾ ಭಯ ನಾಶನೆನಿಸೊ ನಿರ್ಮಾಯಾ ಜಯ || ||ಪಲ್ಲ||್ಲ

ಸಚ್ಚಿದಾನಂದ ಭರಿತ ನಿತ್ಯ ರೂಪ

ಹೊಳೆಯುತಿದೆ ಒಳ ಹೊರಗ ಕಲಾಪ

ಬಿಚ್ಚಿ ಹೇಳಲಿಕಾರಿಗಳವೆ ಪ್ರತಾಪ

ಮುಚ್ಚಿಕೊಂಡಿತು ಕೀರ್ತಿ ಮೂರುಲೋಕ ದೀಪ ||

ನೋಡು ನಯನವಾಚಕನುವಾಗದಾತ

ಮೂಢ ಜನರಿಗ್ಹತ್ತಲಾರದ ಭೇತ

ನಾಡ ಸಾಧನ ಮುದ್ರಿಕಾದೀ ಅತೀತ

ಆಡೇವೆಂದರೆ ಎದುರಿಲ್ಲೊಂದು ಮಾತ ||

ಕಡಿಯಿಲ್ಲದತಿಕಷ್ಟ ಕಡಿದಾಟಿಸೆನಗೆ

ಒಡಿಯಾ ನೀನಿರುವುದು ಖೈನೂರ ಪುರದೊಳಗೆ

ಬಡ ಕವಿ ಕರಪಿಡಿದಾರೆ ಪುಣ್ಯ ನಿಮಗೆ

ಮಡಿವಾಳೇಶನೆ ಮಾಯಾ ತಿಳಿಯದೊಬ್ಬರಿಗೆ ||

ಜಯದೇವ ಜಯದೇವ ಜಯ ಅತಿಹಿತ ಪಾತ್ರ

ಕೀರ್ತ್ಯಾಯಿತು ಪ್ರಖ್ಯಾತ || ||ಪಲ್ಲ||

ಎಷ್ಟು ಪೇಳಲಿ ನಿಮ್ಮ ನಿಷ್ಟಾಪರದೇವ

ನಷ್ಟ ಮಾಡಿದಿರಿ ಎನ್ನ ಕಷ್ಟ ಕರ್ಮವ

ಬಿಟ್ಟು ಹೋಯಿತು ಮುಂದೆ ಪುಟ್ಟು ಜನ್ಮವ

ಪಟ್ಟಗಟ್ಟಿದಿ ಪರತರ ಸೋಹಂ ಭಾವ ||

ಪದ್ಮಾಭವ ಪರವೆಂಬುನವ ಸುಳ್ಳಿನ ಮಟ್ಟಿ

ಪದ್ಮನಾಭನು ಕಳದುಕೊಂಡ ತನ್ನರದಿಟ್ಟಿ

ಪದ್ಮಶರ ಹರನವರೆಲ್ಲ ಮೂರಾಬಟ್ಟಿ

ಪದ್ಮಪದವುಳ್ಳ ಗುರು ನೀನೇ ಜಗಜಟ್ಟಿ ||

ಸರ್ವೋಪಾಸನದೊಳಗೆ ಗುರುವಿನ್ಹೊರತಿಲ್ಲ

ವರ ದೇವ ಪುರಾಣಗಳು ಪೇಳುತಿಹವೆಲ್ಲ

ಧರೆಗೆ ದೊಡ್ಡಿತವಾದ ಖೈನೂರ ಪುರವೆಲ್ಲ

ಗುರು ಮಡಿವಾಳನಾಡಿದ್ದು ಹುಸಿಯಲ್ಲ ||

ಜಯದೇವ ಜಯದೇವ ಜಯಜ್ಞಾನ ಧಾಮ

ದಯದಿಂದ ಸಲಹು ಮಹಾ ಮಡಿವಾಳ ನಾಮ || ||ಪಲ್ಲ||

ಜಂಗಮ ಮೂಲ ಜನ್ಮದವತಾರ ಆದಿಗಾದಿ ಆಧಾರ

ಜಂಗೂಳ ಜನರರಿಯರು ಮೂಲಾಕಾರ

ಲಿಂಗ ಸಮರಸದಿ ಬಹಳ ಬಂಧೂರ

ಅಂಗ ಹೊಳೆಯುತಾದ ಸಂಗ ಸಾಧುರ ||

ಬುದ್ಧಿ ಕರುಣೇಂದ್ರಿ ಗುಣಕೆ ಅತೀತ

ನಿನಗೆ ಉಪಮಿಸಲಿಕ್ಕಿಲ್ಲೊಂದು ಮಾತ

ಕುಣಿ ಕುಣಿದು ಕೂಗೊ ಕಾಲನ ಭಯವು ಅದ್ಭುತ

ನಿನ್ನ ಪುಣ್ಯದಿಂದ ಎಮಗ ಯಮನು ಕೈ ಮರತ ||

ಹರಹಿಲ್ಲ ಕರುಹಿಲ್ಲದ ಭರಿತ ನೀನಾದಿ

ನಿರ್ವಾಣ ಪಥವೆಂಬೊ ರಾಜ್ಯನಾಳಿದಿ

ಧರೆಯೊಳು ಖೈನೂರ ಪುರದಿರುತಿದಿ

ಗುರು ಮಡಿವಾಳನಾಗೆಂದು ಧೈರ್ಯ ಹೇಳಿದಿ ||

ಜಯದೇವ ಜಯದೇವ | ಜಯ ಜಯ ಗುರುವೀರ

ಆರುತಿ ಬೆಳಗುವೆ ಭಕ್ತರ ಭವ ಭಯ ಪರಿಹಾರ || ||ಪಲ್ಲ||

ಶ್ರೀ ಗುರು ಚರಣಾಂಬುಜವನ್ನು ಪಿಡಿದು

ನೀಗಿದೆ ನಿಶ್ಚಿಂತದಿ ಭವ ಸಾಗರ ಗೆಲಿದು

ತಗಲಿಕ್ಕುವ ರಾಗ ರಚನಿಯನೆ ಹೊಡೆದು

ತೂಗಿದೆ ತಲಿ ಆನಂದ ಪದವಿಯೊಳೊಲಿದು ||

ನಾನಾರೆಂಟೊ ಎಚ್ಚರದ ರವಿಕೆಯನು ತಂದು

ಖೂನ ತೊರಿದಿ ಘನ ಪರವಸ್ತು ನೀನೆಂದು

ಸ್ಥಾಣು ತಸ್ಕರ ಭೀತಿಯು ಬಾರದಂತೆ ಕೊಂದು

ತಾನೆ ತಾನಾಗಿ ಮೆರೆದಾಡಿದೆ ಶಿವಶಿವನೆಂದು ||

ಪೊಡವಿಯೊಳಗುತ್ತಮ ಖೈನೂರ ಪುರವಾಧಾರ

ಹುಡುಕಿಕೊಂಡೆನು ಗುರು ಮಡಿವಾಳನ ಕರಣ

ಬೆಡದೆ ತೋರಿದಿ ಘನ ಪರಬ್ರಹ್ಮದ ವಸ್ತು ದೂರ

ಹಿಡಿದು ಮುಳುಗಿದೆ ಅಗಂದದೊಳು ಸಂಪೂರ್ಣ ||

ಸ್ವಾಮಿ ಶ್ರೀ ಗುರುವರ ದೇವಾಗೆ ಮಂಗಲ

ಕಾಮಿತ ಫಲವರವೀವಗೆ ಮಂಗಲ ||ಪ||

ಜನ್ಮಕರ್ಮಂಗಳಳಿದಾತಗೆ ಮಂಗಳ

ಉನ್ಮನಿಯೊಳು ವಾಸವಾದವಗೆ ಮಂಗಳ

ಭಿನ್ನ ಭಾವನೊಂದು ತೊರದಾತಗೆ ಮಂಗಳ

ತನ್ಮಯನಾದನೊ ಜಗದೊಳಗೆ ಮಂಗಳ ||

ಆರು ಆಶ್ರಮಕೆ ಅತೀತಾಗೆ ಮಂಗಳ

ಪಾರಮಾರ್ಥದ ಶಿರೋಮಣಿಗೆ ಮಂಗಳ

ವೀರಶೈವದ ಆಚಾರ್ಯಗೆ ಮಂಗಳ

ಸೂರೆ ಮಾಡಿದ ಸುಖ ಸಾರಾಗೆ ಮಂಗಳ ||

ಧರೆಯೊಳು ಖೈನೂರು ವಾಸಗೆ ಮಂಗಳ

ತರುಳ ಕೃಷ್ಣನ ಕರ ಪಿಡಿದವಗೆ ಮಂಗಳ

ಸ್ಥಿರ ಮುಕ್ತಿ ಕೊಟ್ಟು ಕಾಯಿದಾತಗೆ ಮಂಗಳ

ಪರಕ್ಕೆ ಪರವಾದ ಮಡಿವಾಳೇಶಗೆ ಮಂಗಳ ||

ಮಂಗಲ ಜಯ ಮಂಗಲ

ಮಂಗಲ ಮಹಾದೇವಾರೆ

ಹಿಂಗಿದಿ ಭಕ್ತರ ಮಾಯಾ ಮೋಹ

ಭಂಗಾ ಗುರಾಕುಲ ತುಂಗಾರೆ

ತಿಂಗಳ ತರಣಿ ಅಂಗದಪ್ರಭೆ

ಕಂಗೊಳಿಸುವ ಮಹಾಲಿಂಗರೆ

ಸಂಗಮ ಸಕಲ ಕಳಾನಿಧಿ

ಮಂಗಳಕರ ಮಡಿವಾಳರೆ || ||ಪ||

ಭಾವಜವೈರಿ ನಿರ್ಗುಣಧಾರಿ

ನೀನೆ ನಿರಹಂಕಾರಾರೆ

ನಿರವಯ ನಿರಾಲಂಬದ

ನಿರ್ವಂಚಕ ನಿರ್ವಿಷಯನಾದ

ನಿಲಕದ ಮಹ ನಿಸ್ಸಿಮಾರೆ

ನಿಗಮಾತೀತ ನಿರ್ಗಮದಾತ

ನಗುರೋರಧಿಕಂ ಗೀತಾರೆ ||

ತನು ಕರುಣಾರಿ ಮನ ಸಂಹಾರಿ

ಘನ ಪರಬ್ರಹ್ಮವ ತಾರಾರೆ

ಅನುಭವ ಸೂರಿ ಅನುಪಮ ವಿಚಾರಿ

ಅನಹತನಾದ ಉದ್ಧಾರಾರೆ

ಉನ್ಮತವಾರಿ ಸನುಕುಲ ಭಾರಿ

ಘನ ಅನುಭವ ಶೀರ್ಷಮಣಿರೆ

ಅನುಮಾನದೂರಿ ಅನುಮಿಷ ಧಾರಿ

ಚಿನ್ಮಯಾ ಚಿತ್ಪ್ರಭಾರೆ ||

ದೇಶಕ್ಕೆ ಮಿಗೆ ಮಹಾಲೇಸದ

ಖೈನೂರ ವಾಸ ಮಡಿವಾಳೇ ಸಾರೆ

ದಾಸನ ದೋಷದ ವಾಸನೆ ಕಳಿದು

ಆಶೀರ್ವಾದ ಅನುಗಾಲಾರೆ

ನಾಶವಾಯಿತು ಭವ ಮೂಲವು

ಸೂಸುವ ಬ್ರಹ್ಮದ ರಾಶಿ ತೇಜೋಮೂರ್ತಿರೆ

ಹರಿಸುರಬ್ರಹ್ಮಗರಿಯದ ಮಹಿಮೆಯ

ಪರತರ ಗುರು ಗಂಭೀರಾರೆ ||

ಕರ್ಪೂರದಾರುತಿ ಬೆಳಗುವೆನು ಆತಗೆ

ಸದ್ಗುರುನಾಥಗೆ ತಪ್ಪಿಸಿದನು ಭವ ನಮಗೆ ||

ದೇಹ ತ್ಯಾಗ ಮಾಡುವಂಥ ಸಾಹಿತ್ಯ ಭಾಳ ಘನಂ

ಮೋಹದಿಂದಲಿ ಮಾಡಿಕೊಂಡನು ತನ್ನಂತೆ ಗುರುವರ ||

ಶಕ್ತಿ ಭಕ್ತಿ ಯುಕ್ತೀಲಿ ಸಮರ್ಥ ಸದ್ಗುಣ ಸಾಂ

ಮುಕ್ತಿ ಕೊಟ್ಟು ಮನ್ನಿಸಿದ ಮಾಯಮರ್ದನಾ |

ಖೈನೂರ ಪುರೇಂದ್ರ ಮಹಾ ಮಡಿವಾಳಾರಾಧ್ಯರುಂ

ವೈನದಿಂದ ಭಕ್ತರ ಮಾಡಿದನುದ್ಧಾರ ||

ಗುರುವಿನ ಮಗನಾಗಿ ಅರವಿನೊಳಾಡಿದರೆ

ಅರಿವಿಗೆ ಮರವೆಲ್ಲ್ಯಾದಪ್ಪ

ಕುಲವು ನೀಗಿ ಕುಲಯೋಗಿ ಆದಮ್ಯಾಲ

ಕುಲ-ಛಲ ಮೊದಲೆಲ್ಲ್ಯಾದಪ್ಪ ||ಪಲ್ಲ||

ಆದಿಮಾತಿನೊಳಂತ ತಿಳಿದ ಮ್ಯಾಲ

ಸಾವು ಸಂಕಟ ನಿನಗೆಲ್ಲ್ಯಾದಪ್ಪ

ಆಕಾರ ಸುಳಿವು ನಿರಾಕಾರದೊಳಗ

ನಿರ್ಮಿಸಿ ನಿಜ ತಾನಾದಪ್ಪ ||1||

ನಿಶ್ಯಬ್ದ ಮಾತಿಗೆ ಶಬ್ದವಾಗುತಾದ

ಶಬ್ದ ಸೂತಕ ನಿನಗೆಲ್ಲ್ಯಾದಪ್ಪ

ನಾದ ಬಿಂದು ಕಳೆ ಲುಬ್ದ ಮಾಡಿದರೆ

ಅಬ್ಧಿಯೂ ನಿನಗೆಲ್ಲ್ಯಾದಪ್ಪ ||2||

ಏನೋ ಏನೋ ಆದರ ಗೊತ್ತಪ್ಪ

ಏನೋ ತಾನು ಆಗ್ಯಾದಪ್ಪ

ನಾನು ಹೋದ ಮೇಲ್ಯಾತಪ್ಪ

ಗುರು ಮಡಿವಾಳನ ಧ್ಯಾಸದೊಳಿತಪ್ಪ ||3||

ಗುರು ನನ್ನ ಮಡಿವಾಳ

ಪಡೆದ ಬೋಧವನು

ಬಿಡದೇಳು ಭವ ಮೂಲ

ಕಡಿದು ಹಾಕಿದನು ||ಪಲ್ಲ||

ಲಿಂಗಾಂಗ ಮತದೊಳು

ಸಂಗ ಬೆಳೆಸಿದನು

ಮಂಗಲ ತ್ರಿಕೂಟ

ಬದಿಯಲಿ ನಿಲಸಿದನೊ ||2||

ನಾನು ನೀನೆಂಬುವ

ಖೂನ ಹೇಳಿದನೊ

ಹೀನ ಗುಣಗಳ ಬಿಡಿಸಿ

ಪಾವನ ಮಾಡಿದನೊ ||3||

ಬಗಿಯಿಂದ ನೋಡಿಹನೊ

ಜಗವೆ ತಾನಾಗಿಹನೊ

ಮಿಗಿಲು ಮಹಾಂತೇಶನ

ಭುಗಿಲು ತಾ ಹಿಡಸಿದನೊ ||4||

ಅಂಗದೊಳಗ ಶಿವಲಿಂಗ ಮೂರುತಿ ಹಾನ

ತಂಗಿ ನಿನಗೇನು ಖೂನ

ರಂಗಮಂಟಪದೊಳು ಜಂಗಮಯ್ಯ ಹಾನ

ತಂಗಿ ನಿನಗೇನು ಖೂನ

ಪಿಂಗಳ ಸೂಡಿನ ಮಂಗಳಪ್ರಭು ಬೆಳಗೆ

ಕಂಗಳ ಒಳ ಹೊರಗೆ | ತಂಗಿ ನಿನಗೇನು ಖೂನ ||ಪಲ್ಲ||

ಒಂಭತ್ತು ಬಾಗಿಲ ಕಂಬಿನಿಲ್ಲದ ಗುಡಿಯೇ

ಸಂಭ ಒಳಗ ಹಾನ ಒಡಿಯಾ

ನಂಬಿದ ಭಕ್ತರಿಗೆ ನಾಲ್ಕು ಸಂಪತ್ತು ಪಡೆಯೇ

ಕುಂಭಿನಿ ಜನರೇನು ಬಲ್ಲರು ಈ ನುಡಿಯಾ

ರಂಭಿ ತೋರಿದ ನಿಜ ಜಡಿಯ

ತಂಗಿ ನಿನಗೇನು ಖೂನಾ ||1||

ಅಷ್ಟ ಶ್ರೇಷ್ಠವಾದ ಬಾರ ಜ್ಯೋತಿಯ ಲಿಂಗ

ಕಷ್ಟ ಬಿಡಬ್ಯಾಡ ಮಂಗ

ನಿಷ್ಟಿವಂತರ ಪಾದ ಸೇವೆಯ ಸಂಗ

ದೃಷ್ಟಿಗೆ ಕಾಣಿಸುವದು ತಾ ಇಷ್ಟಲಿಂಗ

ಸ್ಪಷ್ಟವು ತಾ ಕೂಡಲಸಂಗ

ತಂಗಿ ನಿನಗೇನು ಖೂನ ||2||

ದೇಶಕಧಿಕವಾದ ವಾಸ ತೆಲಗಬಾಳ

ಪರಶಿವ ಮಡಿವಾಳ ದಯಾಳ

ಅಜಹರಿ ಮನುಮುನಿ ತಿಳಿಯರು ಇದರ ಮೂಲ

ನೀ ಮಾಡುವಿ ಭವಹಾಳ

ಆರ್ತು ಬೇರ್ತರೆ ಮೂಡುವುದು ಪರಿಮಳ

ತಂಗಿ ನಿನಗೇನು ಖೂನ ||3||

ಶಿವನು ಸಿಕ್ಕನು ಕೈಸೆರಿಯೋ

ಎನ್ನ ಭವ ಹಿಂಗಿ ಹೋಯಿತು ಆನಂದ ಪರಿಯೋ ||ಪಲ್ಲ||

ನಿತ್ಯ ಮಾಡೊ ಗುರುಧ್ಯಾನ | ಅಲ್ಲಿ

ಮುತ್ತ್ಯಾ ಮುತ್ತ್ಯಾನೆಂಬೊ ಧ್ವನಿ | ಕೇಳೊ

ಸತ್ಯ ಹಿಡಿದು ನೀನು ನಡಿಯೋ | ಅಲ್ಲಿ

ತುತ್ತು ತುತ್ತಿಗೊಮ್ಮೆ ಶಿವನೆಂಬ ನುಡಿಯೋ ||1||

ನಾಲಿಗಿ ಗದ್ದಿಗಿ ಹಾಕಿ | ಆ ನಾಲಿಗಿ

ಮ್ಯಾಲಿರುವ ಪಾರನ ಜೋಕಿ

ನಾಲಿಗಿ ತಪ್ಪಿದರ ಧೋಕಿ | ಆ

ನಾಲಿ ಹಿಡಿದು ಹೋಗಬ್ಯಾಡ ಅದು ಬಲು ಜ್ವಾಕಿ ||2||

ನಿಷ್ಠೆ ಒಂದೆ ಇರಬೇಕೋ | ಆ

ಶ್ರೇಷ್ಠಾದವನ ಪೂಜಿಸಬೇಕೋ

ಕೊಟ್ಟು ಕೊಂಡು ಇರಬೇಕು | ನೀ

ಇಟ್ಟು ಮನಸ್ಸೆಲ್ಲಾ ಒಂದಾಗಬೇಕೊ ||3||

ಹಗಲು ಇರುಳು ಕೂಡಿ ಒಂದು | ಈ

ಅಗಲದಿ ಒದಿಗ್ಯಾನ ಕಲ್ಲಾಗ ಬಂದು

ಕಲ್ಲನಾದವು ಬಹಳ ದ್ಪೊಂದು | ಈ

ಕಲ್ಲಾಗ ಗುರು ಮಡಿವಾಳ ದೊರಕಿದನೆಂದು ||4||

ಇಂತು ಷಡಕ್ಷರಿ ಮಂತ್ರ

ಅಂತರಂಗದಲ್ಲಿ ಪಠಿಸಿ

ಭವಭವಾಂತರ ಬಿಟ್ಟು ಹೋದೀತೆ

ಓಂ ನಮೋ ಶಿವ ಎನ್ನಿರೆ

ಭವಭವಾಂತರ ಬಿಟ್ಟು ಹೋದೀತೆ

ಓಂ ನಮೋ ಶಿವ ಎನ್ನಿರೆ ||ಪಲ್ಲ||

ಆರು ಅಕ್ಷರದ ಮಂತ್ರವು ಇದೆ

ಮೂರು ಪ್ರಣಮದ ಮೂಲವು ತಿಳಿದೆ

ಏರಿ ನೋಡಿದೆ ಕೈಲಾಸ ದ್ವಾರವೋ

ಓಂ ನಮೋ ಶಿವ ಎನ್ನಿರೆ ||1||

ಡಿಂಬಿನೊಳಗ ಇಂಬುಗೊಂಡೆ

ಕುಂಭ ಅಂಬಾರ ಗುಮ್ಮಟ ಏರಿದೆ

ಶಂಭು ಶಂಕರನ ಓಲಗದಲಿದ್ದೆ

ಓಂ ನಮೋ ಶಿವ ಎನ್ನಿರೆ ||2||

ಒಂಭತ್ತು ಶಕ್ತಿಯರೊಲಿಸಿದೆ

ಕಂಭ ಸೂತ್ರದ ಮೇಲಾಡಿದೆ

ಸಂಭ್ಹಾರಿಸಿದ್ವಾರವು ನೋಡಿದೆ

ಓಂ ನಮೋ ಶಿವ ಎನ್ನಿರೆ ||3||

ಆರು ಮೂರು ದ್ವಾರವು

ಮೀರಿದುನ್ಮನಿ ಸೇರಿಕೊಂಡೆ

ಸಾರಿ ಬಡಗಲ ಕೊಳಲವು ಪೊಕ್ಕಿದೆ

ಓಂ ನಮೋ ಶಿವ ಎನ್ನಿರೆ ||4||

ಗುರಿಗಟ್ಟಿತು ವಾದ್ಯ ಧ್ವನಿಯು

ಚೀರುತಾವೊ ಚಿನ್ಕಾಳಿಯೊ ಶಂಕರಿಯೆ

ಸೇರಿಕೊಂಡಿತು ಸುಷುಮ್ನವು ಹೌದೆ

ಓಂ ನಮೋ ಶಿವ ಎನ್ನಿರೆ ||5||

ಕಾರಮಿಂಚಿನ ಬೆಳಗಿನ ಪರಿಯೆ

ಸಾರಿ ಹೊಂಟಾನ ಮಡಿವಾಳ ದೊರಿಯೆ

ನಾರಿ ನಾ ನೋಡಲು ಬಯಲಿಗೆ ಬಯಲ ಹರಿಯೊ

ಓಂ ನಮೋ ಶಿವ ಎನ್ನಿರೆ ||6||

ತಿಳಿ ತಿಳಿ ಒಳ್ಳೆ ಜ್ಞಾನ ತಿಳಿ

ಒಳಗ ಗುರುವಿನ ಅನುಭಾವ ತಿಳಿ

ದೇಹದ ಹೊಲಸು ಮಾಯದ ಮೈಲಿಗಿ

ಮನಸಿನೊಳಗ ನೀ ಸೋಸಿ ತಿಳಿ ||ಪಲ್ಲ||

ಆರು ಅಕ್ಷರದ ಅರ್ಥ ತಿಳಿ

ಮೂರು ಅಕ್ಷರದ ಮೂಲ ತಿಳಿ

ಆರು ಮೂರು ಒಂಭತ್ತು ತಿಳಿದ ಮ್ಯಾಲ

ಒಳಗ ನಿಜಗುರು ಹಾನ ತಿಳಿ ||1||

ಹತ್ತು ಅಕ್ಷರದ ಗೊತ್ತ ತಿಳಿ

ಹನ್ನೊಂದು ಅಕ್ಷರದ ಭೇದ ತಿಳಿ

ಭೇದ ತಿಳಿದ ಮ್ಯಾಲ ಯಾವುದು ಉಳಿಯುವುದು

ಸಾಧು ಸಂತರ ಮಾರ್ಗ ತಿಳಿ ||2||

ಪೊಡವಿಯೊಳಗ ಕಡಕೋಳ ತಿಳಿ

ಗುರು ಮಡಿವಾಳನ ಗುರ್ತ ತಿಳಿ

ಗುರ್ತ ತಿಳಿದ ಮ್ಯಾಲ ಯಾವುದು ಉಳಿಯುವುದು

ತಂದಿ ಮಹಾಂತನ ಪಾದ ತಿಳಿ ||3||

ಎಂಥ ಕಳ್ಳನವ್ವ ಈ ಊರ ಗೌಡ

ಎಂಥ ಸುಳ್ಳನವ್ವ

ಕಾಯಪೂರದೊಳು ಮಾಯವಾಗಿ

ಪೋದನವ್ವ ಪೋದನವ್ವ ||ಪಲ್ಲ||

ಎನ್ನ ಮನವು ನೋಡಿ ಉನ್ಮನಿ ಎಲ್ಲ ತಿರುಗ್ಯಾಡಿ

ಅನುಮಾನವಿಲ್ಲದೆ ಕೂಡಿ |

ಮನಿಯೊಳು ಹಿರಿಯರೊಡಗೂಡಿ

ಆಡಬಾರದ ಆಡಿ ಪೋದನವ್ವ

ಮನಸ್ಸು ತೀರಲಿಲ್ಲ ಪ್ರೀತಿ ಕಡಿಯಲಿಲ್ಲ ||1||

ಕಣ್ಣಿಗೆ ಕಾಣಲಿಲ್ಲ ಈ ಊರ ಗೌಡ

ಒಬ್ಬವನೆ ಇಂವ ಕಳ್ಳ

ಖೂನ ಹೇಳಲಿಲ್ಲ ದೇಶ ಹಾಳ ಮಾಡಲಿಲ್ಲ

ಸಾಸಿರ ಜನ್ಮದೊಳು ಈಶ ಮಡಿವಾಳನ

ಖಾಸ ಮಗನೆ ಬಲ್ಲ ಖಾಸ ಮಗನೆ ಬಲ್ಲ ||2||

ಚಿಣಿಯನಾಡಿದೆನೊ ಪರಬ್ರಹ್ಮಕ

ಚಿಣಿಯನಾಡಿದೆನೊ

ಖೊಟ್ಟಿ ಗುಣವೆಂಬೊ ಚಿಣಿಯ ಮಾಡಿ

ಸಿಟ್ಟಿನಿಂದ ನಾ ಹೊಡಿಯುವೆನೊ ||ಪಲ್ಲ||

ಮನವೆಂಬ ಪುಚ್ಚಿಯ ತೊಡಿದೆನೊ

ಘನವೆಂಬೊ ದಾಂಡ ಹಿಡಿದೆನೊ

ಆರು ಮಂದಿಯ ಗಡಿಗಳ ಒಳಗೆ

ಬ್ಯಾರೆ ಬ್ಯಾರೆ ನಾ ಇರುತಿದ್ದೇನೊ ||1||

ಗುರುತಿಟ್ಟು ಗುರಿಯ ಚೀಕಿದೇನೊ

ನಾ ಭಕ್ತಿಲಿಂದೆ ಬುತ್ತಿ ಹಿಡಿದಿದೆನೊ

ಶಕ್ತಿ ಬಲದಿಂದ ಕವಡೆ ಮಾಡಿ

ಮುಕ್ತಿ ಒಳಗೆ ಮುಳುಗ್ಯಾಡಿದೆನೊ ||2||

ಲೋಕದೊಳಗೆ ತಾ ಮೆರೆಯುವನೊ

ಕಡಕೋಳ ಗ್ರಾಮದಲ್ಲಿರುಹನೊ

ಭಕ್ತಿ ಭಕ್ತರನ್ನು ಕರೆಸುವನೊ

ಕೈಲಾಸದ್ಹಾದಿ ತಾ ತೋರಿಸುವನೊ ||3||

ತನುಮನದೊಳಗಾಡುವ ಪಗಡಿ

ಮನಿ ಆವೋ ತಿಗಡಿ ಬಿಗಡಿ

ಕೈಯಲ್ಲಿ ತೊಗೋ ಆರು ಕವಡಿ

ಗುಲು ಗುಲುಸಿ ಒಗಿಯೋ ನೀ ಚಲ್ಲ್ಯಾಡಿ ||ಪಲ್ಲ||

ಪಹಿಲೇ ತಗೋ ಪಂಚವೀಸತೀನಿ

ಬಹುಜ್ಚಾಕಿಯಿಂದ ನಡಿ ಬಾರಾಮನಿ

ಕೈ ಬೀಸಿ ಹಾಕೊ ದಶಾಚಕ್ಕಾಚಾರಿ

ಇವು ಮೂರು ಮನಿ ಬಲು ಜ್ವಾಕಿ ಹುಶೇರಿ ನಡಿ ||1||

ಶೇರಮನಿಯ ಮ್ಯಾಲ ಭರ್ತಿ ಆಟ

ಆ ಎಂಟುಮನಿಯು ದಾಟುವದಕ್ಕೆ ಕಷ್ಟ

ನೀವು ಅಂದದ್ದು ಮೂರು ಮಾತಾ

ನಿಮ್ಮ ಹಣ್ಣಗಾಯಿ ಬಿದ್ದ ಹೋಗತಾವೋ ವ್ಯರ್ಥ ||2||

ಎಲ್ಲಾ ರಾತ್ರಿ ಈ ಕಾಮ ಕ್ರೋಧ ಆಟ

ಈ ಆರು ಗುಣಗಳ ಪೂರಾ ಸುಟ್ಟ

ಗುರುವಿನ ಪಾದ ಹಿಡಿ ಘಟಮುಟ್ಟ

ನಮ್ಮ ಗುರು ಮಡಿವಾಳ ಆಡ್ಸ್ಯಾನ ಈ ಆಟ ||3||

ಆಡೋ ಆಡೋ ಆಲಾಯಿ ಆಡೋ

ಗುರುನಾಮದ ಭಜನಿ ಮಾಡೋ

ಅನುಭಾವದಿಂದ ನೀ ತನು ಮನ ಕೂಡಿ ||ಪ||

ಮನವೆಂಬುದೆ ಪಂಜಾ ಮಾಡಿ

ಘನ ಸುಖವೆಂಬ ಆಟಾ ಆಡೋ | |ಅಪ||

ಸರಸೀ ಆಲಾಯಿ ಅಂಗದವಳಗೆ

ಗುರುನಾಮದ ಗುಂಗಿನವಳಗೆ

ಅಂಗ ಲಿಂಗ ತೋರಿದ ಮ್ಯಾಲೆ ಸಂಗ

ನಿಃಸಂಗವಾಗಿ ನಿಂತು ಬೈಲೊಳಗೆ ||1||

ಒಂದುಗೂಡಿ ನೀ ಎರಡು ಅಳಿದು

ಮುಂದೆ ಮೂರು ನಾಲ್ಕು ಕಳೆಗಳ ತಿಳಿದು

ಐದು ಪ್ರಾಣ ವಿಕಾರ ತೊರೆದು

ಸಪ್ತ ಪಾಶ ಕಿತ್ತೆಲ್ಲಾ ಮುರಿದು ||2||

ಪೀರನ ಮುಂದೆ ಊದನಿಟ್ಟು

ಸುಖ ದುಃಖದ ಲೋಬಾನ ಸುಟ್ಟು

ಅಸ್ತಿರ ದೇಹದ ಆಸೆಯ ಬಿಟ್ಟು

ಪಂಚ ತತ್ವದ ಫಾತೇ ಕೊಟ್ಟು ||3||

ಸ್ಥೂಲ ಸೂಕ್ಷ್ಮ ಕಾರಣ ಸಾಟಾ

ಮಹಾಕಾರಣ ಮಾಡಿದ ಉಲಟಾ

ಅತಿ ಕಾರಣ ಒಳಗಿನ ಗುಟ್ಟಾ

ಫಳಕೊಂಡು ಸದ್ಗುರು ಸತ್ಯದ ಮೆಟ್ಟಾ ||4||

ಗುರು ಮಡಿವಾಳ ಆಲಾಯಿ ಆಡಿ

ಗುರು ನಾಮದ ಭಜನಿ ಮಾಡಿ

ಆತ್ಮದ ಅನುಭವ ತಿಳಿದು ನೋಡಿ

ಸತ್ಯ ಸ್ವರೂಪದೊಳಗೆ ಕೂಡಿ ||5||

ಎಂಥ ಎತ್ತು ಕೊಂಡು ಕೊಟ್ಟ ನಮ್ಮ ಮಾವ

ಎತ್ತಿನಂತಿಲ್ಯಾವಪ್ಪ ಎರಡು ಭಾವ

ಗೊತ್ತು ಇಟ್ಟು ಕಟ್ಟೇನಂದ್ರ ಇಲ್ಲ ಧಾಂವ

ಇದರ ಧಾಳಿ ಹೊಡಿಲಿ ದಾರಿ ಬಿಟ್ಟು ಓಡ್ಯಾದವ್ವ ||ಪಲ್ಲ||

ನಾಲ್ಕು ಕಾಲಿನ ಮ್ಯಾಲ ಆದ ಮೈ ಧಮ್ಮ

ಈದ ಆಕಳ ಎಂಥಕಿದ್ದಳಪ್ಪ ಹಡದಮ್ಮ

ಹೊಡೆದರ ಬಡೆದರ ಹೋಗದೀದರ್ಹಮ್ಮ

ಇದಕ ಪುಸ್ತಿ ಇಲ್ಲ ಪೂರ್ವದ ಪುಣ್ಯಕಮ್ಮ ||1||

ಸೈರೆ ಹೋಗಿ ಮೆಯಿದು ಆಗ್ಯಾದ ದಮ್ಮ

ಇದರ ಪೈಲೆ ನಾನು ಏನು ಮಾಡಿದೆ ಕಮ್ಮ

ಕಾಲ ಕೆದರಿ ಡುರಕಿ ವಗಿತಾದ ಹಿಂದಕೊಮ್ಮೆ

ಸುಳ್ಳೇ ಜಿದ್ದ ಮಾಡಿ ಕೆಟ್ಟು ಹೋಯಿತು ತಮ್ಮ ||2||

ಪೊಡವಿಯೊಳಗೆ ಕಡಕೋಳ ಗ್ರಾಮ

ಅನುಭವಿಗಳಿಗೆ ಈ ಎತ್ತು ಮೋಹ

ಪುಂಡ ಮಡಿವಾಳ ಹಾನ ನಮ್ಮ ದೇವ

ಎತ್ತು ಅಲ್ಲ ತಿಳಿಯೋ ಅನುಭಾವ ||3||

ಕ್ಷಿತಿಯೊಳು ರಥ ಎಳೆಯುವುದು ಕಂಡೆ

ಸಾಕ್ಷಾತ ಶಿವ ಒಳಗಿರುವುದು ಕಂಡೆ ||ಪಲ್ಲ||

ಅತಿ ಹರುಷದಿಂದಲಿ ನಾ ನೋಡಿಕೊಂಡೆ

ಗತಿ ಮುಕ್ತಿ ಶರಣರ ಕೂಡಿಕೊಂಡೆ ||ಉ.ಪ||

ಆರು ಗಾಲಿ ಮೂರುಚ್ಚುಗಳೊ

ಆರೆರಡು ಹನ್ನೆರಡು ಕೀಲಗಳೊ

ಸೇರಿಸಿ ಅಷ್ಟ ಪೈಲಿ ಕಂಭಗಳೊ

ಸೂರ್ಯ ಮುಖದೊಳು ಚಿನ್ನ ಪುತ್ಥಳಿಗಳೊ ||1||

ನಾಲ್ಕು ದ್ವಾರ ನವ ಬೀದಿಗಳೊ

ನಾಲ್ಕು ಇಪ್ಪತ್ತು ಮಿಣಿ ಹಗ್ಗಗಳೊ

ನಿಲುಕಿಸಿ ಜಗ್ಗುವ ಎರಡೂ ಸೋಲಗಳೊ

ಮೇಲೆ ಹಚ್ಚಿದ ಕಳಸದ ತಲೆಗಳೊ ||2||

ನಡಗಂಭದ ಕಳಸವನು

ಎಡಬಲದಲಿ ಸೂರ್ಯ ಚಂದ್ರನು

ಎಡ ಎಡ ಸಹಸ್ರ ಕಮಲವನು

ಸಡಗರದಿಂದಲಿ ಎಳೆದ ಮಡಿವಾಳನು ||3||

ಹಾಲ ಕಾಸವ್ವ ತಂಗಿ ಹಾಲ ಕಾಸ

ನಿಂದು ಒಳ್ಳೆ ಮನಸ

ಹಾಲ ಕಾಸಿ ಹೆಪ್ಪ ಹಾಕಿ ಕೆನಿಯ ಬಲಸ

ಇದು ಬಹಳ ಸೊಗಸ ||ಪಲ್ಲ||

ಕೆಟ್ಟ ಗುಣಗೊಳ ಗೊಬ್ಬರ ಬಳದು ಗ್ವಾಳ್ಯಾಮಾಡ

ಹುಡುಗಿ ಉಡುಗಿ ನೋಡ

ಸತ್ಯ ಶರಣರ ಬೆಂಕಿ ತಂದು ಪುಟುವ ಮಾಡ

ಅಲ್ಲಿ ಸುಟ್ಟ ಬಿಡ ||1||

ಸುಟ್ಟ ಮಡಕಿ ಸಿಂಪಿ ಹಚ್ಚಿ ಖಮ್ಮಗ ತೊಳಿಯ

ಕೆಡುವದಿಲ್ಲ ತಿಳಿಯ

ಮೊಸರ ಬರಕಿ ಕಡಗೋಲ ಇಟ್ಟು

ಕಟದ ಕಟಿಯೆ ಪೂರ್ವದ ||2||

ಪುಣ್ಯನೆಂಬುದು ಬೆಣ್ಣಿ ತೆಗದು ಮುದ್ದಿ ಮಾಡ

ತುಪ್ಪ ಕಾಸಿ ನೋಡ

ಕಡಕೋಳ ಮಡಿವಾಳ ಯೋಗಿಗ ಎಡಿ ಮಾಡ

ಅಲ್ಲಿ ಮುಕ್ತಿ ಬೇಡ ||3||

ನಾ ಹ್ಯಾಂಗ ಮಾಡಲೆವ್ವ ಬಾವುಗಾ

ನಾ ಎಲ್ಲಿ ಹುಡುಕಲೆವ್ವ ಬಾವುಗಾ ||ಪಲ್ಲ||

ಇವಳಕ್ಕ ನೋಡೆ ಬೆಕ್ಕಿಗೆ ಇಷ್ಟ್ಯಾಕ ಕಳವಳಿಕೆ ||ಅ.ಪಲ್ಲ||

ಪಡಿಗೋಧಿ ತೊಗೊಂಡು ಬಿಸಲಕ ಹೋಗಟ್ಲೆ

ನನಕಿಂತ ಮುಂಚೆ ಹೋಗಿ ಕಲ್ಲು ಸವರುವ ಬಾವುಗಾ ||1||

ಕೊಡ ಸಿಂಬಿ ತೊಗೊಂಡು ನಾ ನೀರಿಗಿ ಹೋಗಟ್ಲೆ

ಮುಂಚೆ ಹೋಗಿ ಹಲ್ಲುದ್ದುವ ಬಾವುಗಾ ||2||

ನಿಲವಂಗಿ ತೊಟಕೊಂಡು ನೀಲಗುದರಿ ಏರಿಕೊಂಡು

ಆಹೇರಿ ಸಂತ್ಯಾಗ ನಲಿದಾಡೊ ಬಾವುಗಾ ||3||

ಬೆಳ್ಳನ ಬಿಳಿ ಬೆಕ್ಕ ಬೆಳ್ಳಿ ಬಾಲಿನ ಬೆಕ್ಕ

ನನಂಗಳದಾಗ ಸುಳುದಾಡುವ ಬಾವುಗಾ ||4||

ಹುಟ್ಟಿ ಹಟ್ಟಲ್ದ ಬೆಕ್ಕ ಹುಟ್ಟಿ ತಟಲ್ದ ಬೆಕ್ಕ

ಅಪ್ಪ ಮಡಿವಾಳ ಯೋಗಿಗೆ ಮುಟ್ಟಿಸಿದೆನೆವ್ವ ಬಾವುಗಾ ||5||

ನಾನೆ ನೀನೊ ನೀನೆ ನಾನೊ

ನಾನು ನೀನು ಒಂದಾದರೆ

ಖೂನ ಒಂದಲ್ಲವೇನೊ ||ಪಲ್ಲ||

ನಾದ ಶಬ್ದಗಳಿಂದ ವಾದ ಭೇದವು ತಿಳಿದು

ಸಾಧಿಸಿ ನೋಡಿದರ ಹಾದಿ ಒಂದಲ್ಲವೇನೊ ||1||

ಜಾತಿ ಸೂತಕವನಳಿದು ಜಲ್ಮಜಲ್ಮಕ ಬಂದು

ಮಾತು ಮಾತಿಗೆ ಮನ ಜ್ಯೋತಿ ಒಂದಲ್ಲವೇನೊ ||2||

ಕಡಕೋಳ ಗುರು ಮಡಿವಾಳ ಹೇಳಿದ ನುಡಿಗಳು

ಬಾಯಿಲೆ ತಡತಡ ಬಂದುದೊಂದಲ್ಲವೇನೊ ||3||

ಏನು ಪೂಜಕೆ ಒಯ್ಯಲಿ ಚಂದ್ರನಗರಿಗೆ

ಏನು ಪುಣ್ಯವ ಮಾಡಲಿ ||ಪಲ್ಲ||

ಅದ್ದನ ಗೋಧಿಯ ಬೀಸಿ ಮುದ್ದಿ ಬೆಲ್ಲವ ಕಲಿಸಿ

ಮುದ್ದು ಮೋಹದ ನೊಣವು ಎಂಜಲ ಮಾಡಿತು

ಏನು ಪೂಜಕೆ ಒಯ್ಯಲಿ ||1||

ಆಕಳ ಮಲಿ ಹಾಲು ಬಿಂದಗೆ ಹಿಂಡಿದೆ

ಮೋಹದ ಕರುವು ಹಾಲು ಎಂಜಲು ಮಾಡಿತು

ಏನು ಪೂಜಕೆ ಒಯ್ಯಲಿ ||2||

ಮೂಡಲು ಹರಿಯುವಾಗ ನದಿಯ ನೀರಿಗೆ ಹೋದೆ

ಕಿಡಗೇಡಿ ಮೀನ ಬಂದು ನೀರು ಎಂಜಲು ಮಾಡಿತು

ಏನು ಪೂಜಕೆ ಒಯ್ಯಲಿ ||3||

ಕಂಚಿನ ಆರುತಿ ಕೈಯಲ್ಲಿ ಹಿಡಕೊಂಡು ಹೋದೆ

ಆಕಾಶ ಗಾಳಿ ಬಂದು ದೀಪ ಶಾಂತವು ಮಾಡಿತು

ಏನು ಪೂಜಕೆ ಒಯ್ಯಲಿ ||4||

ಧರೆಯೊಳು ಕಡಕೋಳ ಗುರು ಮಡಿವಾಳೇಶನ

ಭಕ್ತಿಯಿಲ್ಲದೆ ಮನವು ಭಜಿಸಿದರೇನ

ಏನು ಪೂಜಕೆ ಒಯ್ಯಲಿ ||5||

ನಾನರಿತ ಮಾತು ಮರವೀ

ಜನದ ಮನಕೆ ಬಾರದು ||ಪ||

ಅರಿತ ಮಾತಿನ ಅರ್ಥ ಮಾಡಿದರೆ

ತುರ್ತು ಏನೂ ತಿಳಿಯದು

ಇದು ಬಲೆ ಮರವೀ ಜನಕಿದು ||ಅ.ಪ||

ಅರಿತರ ಕನ್ನಡ ಬಾಲಬೋಧ ಓದುವದ್ಯಾತಕೊ

ಓದಿ ಹಾದಿ ತಿಳಿಯದೆ ಮನ ಬಾಧೆಗೆ ಬೀಳುವದು ಇದು ಬಲೆ ||1||

ಗಟ್ಟಿದ್ದ ಅಲಗ ಕತ್ತಿ ಚಾಕು ಮಂಡ ಮಾಡುವುದು

ಮಸಿಯು ಹುಸಿಯು ಬರೆದು ಬಿಳಿಯ ಕಾಗದ ಕೆಡಿಸುವುದು ಇದು ಬಲೆ ||2||

ಖರೆ ಸುಳ್ಳ ಎರಡೂ ಬ್ರಹ್ಮ ಲಿಖಿತದಾಚೀಲಿದ್ದುದು

ಬ್ರಹ್ಮ ಲಿಖಿತ ಮಡಿವಾಳ ಯೋಗಿಗೆ ಸಾಧ್ಯವಾಗಿಹುದು ಇದು ಬಲೆ ||3||

ಜೋಜೋಜೋ ಜೋ ತಿನಬಾಳ

ಜೋಜೋಜೋ ಭವ ವೈಯಾರ ಮೂಲ

ಜೋಜೋ ನಿತ್ಯಶುಭ ಮಂಗಲಪಾಡಿ

ಜೋಜೋ ನಮ್ಮ ಮಹಾಂತ ಮಡಿವಾಳ ಜೋಜೋ ||ಪಲ್ಲ||

ಆಗಾಣಿ ದೇವಾಣಿ ಶಾಸ್ತ್ರಕರೆಂದು

ಬ್ಯಾಗ ಹೊಂಚಿಕಿಲ್ಲ ಧರಣಿ ಧರಣೆಂದು

ಬಾಗಿಣದೊಳು ಕಾಲ ಒಳಕೊಂಡು ಬಂದು

ಹಿಂಗ ಹೊಗಳಿದರಂಗಾಂಗ ಮನ ಕಚ್ಚಿತ್ತೊಂದು ಜೋಜೋ ||1||

ಅಷ್ಟ ತನುಗಳೆಂಬೊ ಆಲಯದಲ್ಲಿ

ಅಷ್ಟವರಣವೆಂಬ ತೊಟ್ಟಿಲ ಕಟ್ಟಿ

ಮುಕ್ತಿ ಸಾಧನೆಂಬೊ ಹಗ್ಗವ ಹಚ್ಚಿ

ಹಿಂಗ ಇಷ್ಟು ಕಾರಣವೆಂಬ ಎಣಕಿರೇ ತಾ ಗಟ್ಟಿ ಜೋಜೋ ||2||

ಆಸಪಾಸಕರೂಟ ಪ್ರೇಮದಿ ಮಾಡಿ

ತಾಸೊತ್ತಿಗೊಮ್ಮೆ ದಾಸೋಹ ನೀಡಿ

ಈಸು ಜಗವೆಲ್ಲ ಜೋಗುಳ ಪಾಡಿ

ನಮ್ಮ ದೇಶಿಕ ಗುರು ಮಡಿವಾಳನ ಕೊಂಡಾಡಿ ಜೋ ಜೋ ||3||

ನೀ ನಿದ್ರಿಯ ಮಾಡೋ ಮಡಿವಾಳ

ತೂಗುವೇನು ಬಾಳ

ಆಡೊ ಆನಂದದಿ ಅವಿರಾಳ

ಭವ ಮಾಡಿದಿ ಹಾಳ | |ಪಲ್ಲ||

ಏನೋ ಏನೆಂಬುದೊಂದಾಗಿ

ವಂದೇ ನೂರಾಗಿ

ಮೀರಿ ಅಪರಿಮಿತ ತೋರುತಲಾಗಿ

ತಾನೇ ತಾನಾಗಿ ||1||

ಅಲ್ಲ ಅಲ್ಲೆಂಬುದು ಆಶ್ಚರಿಯೋ

ಹಲವು ಹಂಬಲ ಪರಿಯೊ

ಅಂಬುಧಿಯೊಳಗಿನ ತೆರೆ ನೊರೆಯೋ

ತೋರಡಗುವ ಪರಿಯೊ ||2||

ಸುಳ್ಳು ಸುಳ್ಳೆಂಬುದು ಸುದ್ದ್ಯಾಗಿ

ಕಳ್ಳರ ಮುದ್ದ್ಯಾಗಿ

ಬೆಳ್ಳಿ ಬಂಗಾರ ಕದ್ದು ಹೋಗಿ

ತಾ ಇದ್ದು ಇಲ್ಲದಂಗಾಗಿ ||3||

ನಾನು ನೀನೆಂಬುದು ವಿಚಾರ

ನೀ ತಿಳಿಯೋ ಪೂರಾ

ಕಸ್ತೂರಿ ಮೃಗದಂತೆ ಆಚಾರ

ಬರಿದೆ ಈ ಸಂಸಾರ ||4||

ಮಹಾಂತಪೂರೆಂಬೊ ಪರ್ವತ

ಅಲ್ಲಿ ಇರಹುವನು ದಾತಾ

ಆತನ ಮಗನಾದಾತಾ

ಯೋಗಿ ಮಡಿವಾಳ ತಾತ ||5||

ಸೋಬಾನವೆನ್ನಿರಿ ಸೋಬಾನವೆನ್ನಿರಿ

ಸೋಬಾನವೆನ್ನಿರಿ ಶುಭದಿಂದೆ

ಈ ಮಡಿವಾಳನ ಶುಭದಿಂದೆ ಸೋಬಾನವೆನ್ನಿರಿ

ನಾನು ತಿಳದೇನು ಸೋಬಾನವೆನ್ನಿರಿ ||ಪಲ್ಲ||

ಬಿಂದು ರೂಪವ ತಾಳಿ ಬಂದು ಭವಗಳದೇನೆಂದು

ಸಂದೇಹವಳಿದು ನಿಂದೆ ನಾ ಕಂದ ಸೋಬಾನವೆ

ಈ ಮಡಿವಾಳನ ಸಂದೇಹಳಿದು

ಬಂದು ನಾ ಬಾಲಾ ಸೋಬಾನವೆ ||1||

ಆರು ಅಕ್ಷರದ ಕೀಲ ದಾರು ಬಲ್ಲರು ಮೂಲ

ಆರು ಅಕ್ಷರದ ಕದ ಮೇಲ ಸೋಬಾನವೆ

ಈ ಮಡಿವಾಳನ ಆರ್ಯೆರಡು ಅಳಿದು

ತಿಳಿದೇನು ನಾ ಬಾಲ ಸೋಬಾನವೆ ||2||

ಮಹಾಂತಪೂರೆಂಬ ಗಿರಿ ಏನು ಹೇಳಲಿ ಪರಿ

ಹೋಗಿ ನೋಡೊದೊಂದೈಶ್ವರ್ಯ ಸೋಬಾನವೆ

ಈ ಪುರದೊಳು ಮಡಿವಾಳ ಯೋಗಿ

ತಾನೆ ಧೊರಿ ಸೋಬಾನವೆ ||3||

ಅಲ್ಲೆನಾದೊ ಇಲ್ಲೆ ನೀ ನೋಡೊ

ಬಲ್ಲ ಬಲ್ಲ ಮಹಾತ್ಮರ ಕೂಡೊ ||ಪಲ್ಲ||

ಇಲ್ಲೆ ತಾಯಿ ಇಲ್ಲೆ ತಂದಿ

ಇಲ್ಲೆ ಹೆಂಡರು ಮಕ್ಕಳು ಮಂದಿ ||1||

ಇಲ್ಲೆ ನರಕ ಇಲ್ಲೆ ವೈಕುಂಠ

ಇಲ್ಲೆ ಕಾಶಿ ರಾಮೇಶ್ವರ ನೋಡೊ ||2||

ನಟ್ಟ ನಡುವೆ ಕಡಕೋಳ ಕ್ಷೇತ್ರ

ಗುರು ಮಡಿವಾಳ ಯೋಗಿ ಮಾಡಿದ ಪವಿತ್ರ ||3||

ಆಹೋ ಈಗ ಇಲದ್ಹೋಯಿತು ಜ್ಞಾನವೆ ||ಪಲ್ಲ||

ಮಾವಿನ ಬನಕ್ಹೋಗಿ ಬೇವಿನ ಹಣ್ಣ ತಿಂಬೊ

ಬಾಲಿ ನಿನ್ನ ಭೋಗ ಹೋಯಿತೆ ||1||

ಕಾಸುವೀಸಕ್ಕಾಗಿ ರೋಸಿ ಕೊಂಡಿತ್ತು ಮನ

ಲೇಸುದೋರದೆ ಹೋಯಿತೆ ||2||

ನೇಮ ನಿತ್ಯವ ನೀಗಿ ಕಾಮಪೂರಿತನಾಗಿ

ಸ್ವಾಮಿನ ಕಾಣಲ್ದೆ ಹೋಯಿತೆ ||3||

ಗಾವಿಲತನದಿಂದೆ ಸಾವಧಾನ ಇಲ್ಲದೆ ನೊಂದು

ಸೇವೆ ಘಟಿಸದೆ ಹೋಯಿತೆ ||4||

ಪೊಡವಿಗಧಿಕವಾದ ಮಡಿವಾಳ ಚರದಯ್ಯನ

ಪಡಿಯಲ್ದೆ ಹೊತ್ತ ಹೋಯಿತೆ ||5||

ಲಿಂಗ ಪೂಜೆಯ ಮಾಡಲಿಲ್ಲಲ್ಲೋ ಮಂಗ

ಅದಕ ನಿನಗ ಒಲಿಯಲಿಲ್ಲೋ ಕೂಡಲಸಂಗ

ಮೊದಲಿಂದ ಕಡಿತನಕ ಬಂದಿದಿ ಹಿಂಗ

ಮಾನವನಾಗಿ ಹಿಂಗ ಮಾಡಿದರ ಹ್ಯಾಂಗ ||ಪಲ್ಲ||

ಈಚಲ ಮರದಂಗ ಉದ್ದಕ ಬೆಳದಿ

ಯೋಚನೆ ಮಾಡದೆ ಅಡ್ಡದಾರಿ ತುಳದಿ

ಆಚಾರವಂತರಿಗೆ ಅತಿಯಾಗಿ ಕಾಡಿದಿ

ನೀಚರೊಳು ಒಂದಾಗಿ ಹೊಂದಿ ಬೆಳದಿ ||1||

ಭಸ್ಮದ ಬೆರಳಚ್ಚು ಇಡಲಿಲ್ಲ ಹಣಿಗೆ

ಭಗವಂತನ ನಾಮ ಸ್ಮರಣೆ ಬರಲಿಲ್ಲ ಬಾಯಿಗೆ

ಭಕ್ತಿಯ ನುಡಿಗಳು ಬೀಳಲಿಲ್ಲ ಕಿವಿಗೆ

ತತ್ವದ ವಿಚಾರ ತಿಳಿಲಿಲ್ಲ ನಿನ್ನ ತಲಿಗೆ ||2||

ಹೊಂದಿ ಹೋದೆಲ್ಲೊ ನಿನ್ನ ಹೊಲಸಾದ ಚಟಕ

ಹಿರಿಯರ ಮಾತ ಮೀರಿ ಬಿದ್ದೀದಿ ಹಟಕ

ಒಮ್ಮ್ಮೆಯಾದರೂ ಬರಲಿಲ್ಲ ಗುರುವಿನ ಮಟಕ

ಗುರುವಿನ ನೆನಿಲಿಲ್ಲ ನೀ ಎಂಥ ಕಟಕ ||3||

ಇನ್ನಾದರೂ ನೀ ಅಡ್ಡ ದಾರಿಯನು ಬಿಟ್ಟು

ದೇವರ ಮೇಲೆ ದಿವ್ಯ ನಂಬಿಗೆ ಇಟ್ಟು

ಶಕ್ತಿ ಕೊಡುವ ಭಕ್ತಿಗೆ ಬೆಲೆಯನು ಕೊಟ್ಟು

ಗುರು ಮಡಿವಾಳನ ನೆನಿಯೊ ಮನವಿಟ್ಟು ||4||

ದಾರಗೊಡವಿ ನಮಗೇನಾದರಿ

ಗುರು ಧ್ಯಾನದೊಳಗ ಬಹುಮಾನ ದಾರಿ

ಆತ್ಮಜ್ಞಾನಕ ಸಂಪೂರ್ಣ ಆದರಿ

ಶಿವಶಿವನ ದಯ ನಮ್ಮ್ಯಾಲ ಆದರಿ ||ಪಲ್ಲ||

ಸಂದುಸಂದಿಗೆ ಸೇರ್ಯಾದರಿ | ಬಹು

ಮಂದಿ ಮಕ್ಕಳಿಗಿ ಮೀರ್ಯಾದರಿ

ಹಿಂದಕ ನಮ್ಮವರನ ಕೊಂದಾದರಿ | ಇದು

ಮುಂದಿನ ಮಜಲನ್ನು ತೋರ್ಯಾದರಿ ||1||

ಪಿಂಡವರ್ಣ ಇದು ಕಂಡಾದರಿ | ಭೂ

ಮಂಡಲದೊಳಗದು ನಿಂತಾದರಿ

ಪುಂಡ ಪುಂಡರನ್ನು ದೂಡ್ಯಾದರಿ

ಅಡಿ ಸೇವೆಯ ಮಾಡಿ ನೀಗ್ಯಾದರಿ ||2||

ಸಾವುತನಕ ನಿನಗೆಲ್ಲ್ಯಾದರಿ

ಸತ್ತು ಹೋದಮ್ಯಾಲ ಮುಕ್ತಿ ಅಲ್ಲೆದರಿ

ಕಡಲೋಡ ಎಂಬುದು ಹಳ್ಳ್ಯಾದರಿ

ಕಡಿ ದಾಟಿಸಿದ ಮಡಿವಾಳನ ಬಿಲ್ಲ್ಯಾದರಿ ||3||

ಶಿವ ಶಿವ ಶಿವ ದೂರಿಲ್ಲ | ಅಂವ

ತನ್ನಲ್ಲೆ ಹಾನ ಅಂವ ತೋರಿಲ್ಲ

ಎಲ್ಲಿಗ್ಹೋದರೇನು ನೆಲಿ ಇಲ್ಲ

ಕಂಡಕಂಡಲ್ಲಿ ತಿರುಗ್ಯಾಡಿದರಿಲ್ಲ ||ಪಲ್ಲ||

ಕಾಲುಮೆಲಕ ಮಾಡಿದರಿಲ್ಲ

ದೇಶದ ಮ್ಯಾಲ ತಿರುಗ್ಯಾಡಿದರಿಲ್ಲ

ಮ್ಯಾಲ ಮುಗಿಲಿಗ್ಹಾರಿದರಿಲ್ಲ | ಮೂರು

ಲೋಕ ತಿರುಗಿ ನೀ ದಣಿದೆಲ್ಲಾ ||1||

ದೃಢವಿಲ್ಲದೆ ತಿರಗ್ಯಾಡಿದರಿಲ್ಲ | ಇದು

ಬಡಿವಾರ ಮನಸಿನ ಬಿಂಕಲ್ಲ

ಮನಸು ದಿನಿಸಿಗೇನು ಕಡಿಮಿಲ್ಲ | ನಿನ್ನ

ಕನಸು ಮನಸಿನೊಳಗೆರಡಿಲ್ಲಾ ||2||

ನಿದ್ರಿ ಸಾವಿಗೇನು ದೂರಿಲ್ಲ | ನೀ

ಬುದ್ಧಿವಂತರನ ಕೇಳೆಲ್ಲ

ಜೀವ ಶಿವಗ ಏನು ಬ್ಯಾರಿಲ್ಲ

ಗೊತ್ತಿದ್ದ ಗುರು ಮಡಿವಾಳನಗೇನು ದೂರಿಲ್ಲ ||3||

ನೂರು ಮಾತುಗಳನಾಡುವದ್ಯಾಕೊ

ಶಿವನಾಮ ಸ್ಮರಣೆ ಒಂದೆ ಸಾಕೊ

ಹಲವು ಚಿಂತಿಸುವದ್ಯಾಕೊ

ಗುಳಿತಾಳಿ ಕರಿಮಣಿ ಕಟ್ಟಿರಬೇಕೊ ||ಪಲ್ಲ||

ಹಲವು ಹಂಬಲಿಸಲಿ ಬ್ಯಾಡೊ

ಆತ್ಮನ ನೆಲಿ ತಿಳಿಯುವದು ಬಲು ಪಾಡೊ

ನೆಲಿ ತಿಳಿಸುವ ಗುರುವಿನ ಕೂಡೊ

ಆತ್ಮನ ಧ್ಯಾಸದೊಳಗ ನೀ ನೋಡೊ ನೋಡೊ ||1||

ಕಾವು ಕ್ರೋಧಗಳು ಕಳಿಯೊ

ಅತಿ ಪ್ರೇಮವೆಂಬ ಮೋಹವನಳಿಯೊ

ನಿಶ್ಚಿಂತನಾಗಿ ನಿಜ ತಿಳಿಯೊ

ಆ ಬೆಳಗಿನೊಳಗ ನೀ ಸುಳಿ ಸುಳಿಯೊ ||2||

ಪೊಡವಿಯಲ್ಲಿ ಕಡಕೋಳ

ಎನ್ನೊಡೆಯ ಯೋಗಿ ಮಡಿವಾಳ

ಬಿಡದೆ ಭಜಿಸುವ ಅವನಾಳ

ನಾಳೆಂದವರ ಮನಿಹಾಳ ಹಾಳೋ ||3||

ಜೀವ ಇರುವತನಕ ಖರೇ ಆಡಬೇಕೊ

ಜೀವ ಶಿವನೆಂಬ ಗೊತ್ತು ತಿಳಿಯಬೇಕೊ

ಸತ್ತು ಪತ್ತು ಮಾಡಿಕೊಂಡಿರಬೇಕೊ

ತಪ್ಪು ತಡಿ ತಗದು ತಪಗಳಿಯಲಿಬೇಕೊ ||ಪಲ್ಲ||

ಬೆಣ್ಣೆ ಕಾಸಿದ ತುಪ್ಪದ್ಹಾಂಗ ಇರಬೇಕೊ

ತುಪ್ಪ ದೀವಿಗ್ಹಚ್ಚಿದ್ಹಾಂಗ ಹೊಳಿಯಬೇಕೊ

ಅಪರೂಪವಾಗಿ ಅಪ್ಪನ್ಹಾಂಗ ಇರಬೇಕೊ

ಬಹು ಪುಂಡನಾಗಿ ಭವಭಾದಿ ಗಳಿಯಬೇಕೊ ||1||

ತನು ಮನ ಧನ ಕೊಟ್ಟು ತಣ್ಣಗಿರಬೇಕೊ

ತಾಯಿತಂದಿ ಪೂಜೆ ನಿತ್ಯ ಮಾಡಬೇಕೊ

ಕಾಶಿ ರಾಮೇಶ್ವರಗ್ಯಾತಕ ಹೋಗಬೇಕೊ

ಖಾಸಖಾಸನಾಗಿ ಇಲ್ಲೆ ಬೇಸಿರುಬೇಕೊ ||2||

ಹುಣ್ಣಿಮಿ ಚಂದ್ರಾಮನ್ಹಂಗಿರಬೇಕೊ

ಚಿತ್ತ ಹಿಡಿದು ಚದುರಂಗಾಡಿರಬೇಕೊ

ಚಿಕ್ಕ ಸಿದ್ದನ ನೋಡಿ ಒಪ್ಪಬೇಕೊ

ನಮಗೆ ಮೋಕ್ಷವ ಕೊಡುವ ಮಡಿವಾಳ ಯೋಗಿ ಲಕ್ಷಬೇಕೊ ||3||

ನಾ ಏನು ಬಲ್ಲೇನಪ್ಪ ನಿಮ್ಮ ಕೂಸ

ಅಂದಿಗಿ ಇಂದಿಗಿ ನಿಮ್ಮ ದಾಸ

ಅಂಬಿಗರ ಚೌಡಯ್ಯನ ವಂಶ | ನಾ

ನಂಬಿ ನಡದೇನವ್ವ ಒಂದೇ ಮನಸ ||ಪಲ್ಲ||

ಶಿವ ಶಿವ ಎಂಬ ನುಡಿ ಮನಧ್ಯಾಸ

ನಮಗ ಉಂಡಂಗಾಯಿತು ಮನ ಉಲ್ಲಾಸ

ಹರಗುರುವಿನ ಮ್ಯಾಲ ಆದ ಮನಸ

ಮಹಾದೇವರ ಮ್ಯಾಲ ನಮ್ಮ ಧ್ಯಾಸ ||1||

ಹಮ್ಮನಳಿದು ಇರಬೇಕೊ ಖಾಸ

ಕಾಶಿ ಉಳವಿ ಗೋಕರ್ಣ ಹೋಗದು ಏನು ಕೆಲಸ

ಬುದ್ಧಿ ಇಲ್ಲದೆ ಗುದ್ದಾಡುವದು ನಾಸ

ಬಲ್ಲನುಭಾವಿಗೆ ಈ ನುಡಿ ಪಾಸ ||2||

ದೇಶಕಧಿಕವಾದ ಕಡಲೊಡ ವಾಸ

ಮಗ ಸಿದ್ದನ ನುಡಿ ಕೇಳೊ ಕವಿಲೇಸ

ನಡೆ-ನುಡಿ ತಪ್ಪಿದರ ಬಹು ತರಾಸ

ತಂದಿ ಮಡಿವಾಳನ ಪಾದ ಹಿಡಿದರ ಕೈಲಾಸ ||3||

ಭಲೆರೆ ಹುಡುಗ ಬಲು ಬಂದ್ಯೊ ನೀನು

ಪೂರ್ವದ ಖೂನ ಹಿಡಿದು ತಂದಿ

ಮತ್ತ ಹುಟ್ಟಿ ಬರದಂಗ ಮಾಡಿಕೊಂಡ

ನೀ ಶಿವನ ಹೋಗಿ ಅಲ್ಲಿ ಸೇರಿಕೊಂಡಿ ||ಪಲ್ಲ||

ಮೂರೋರಿ ಮೊಳ ಮನಿ ಕಟ್ಟಿಕೊಂಡಿ

ಒಂಭತ್ತ ಬಾಗಿಲ ಮುಚಕೊಂಡಿ

ಯಾರಿಗಿ ಸಿಗದಂಗ ಮಾಡಿಕೊಂಡಿ

ನೀ ಸತ್ತ ಹುಟ್ಟಿ ಬರದಂಗ ಮಾಡಿಕೊಂಡಿ ||1||

ಏಳು ಪದರಿನ ತೊಗಲಿನ ಚೀಲಾದಿ

ಅದರೊಳು ಅನುಭವ ತುಂಬುವ ನಡದಿ

ನೀ ಶಿವಮಂತ್ರಗಳ ಪಠಿಸುತ ಮನದಿ

ಯಮಬಾಧಿಗೆ ಸಿಲುಕದಂಗ ನಡದಿ ||2||

ದೇಶದೊಳಗ ಕಡಕೋಳಂದಿ

ಈಶ ಮಡಿವಾಳನ ನೆನಿ ಅಂದಿ

ನೀ ಧ್ಯಾಸವಾದಿತೊ ನಮಗಂದಿ

ನೀ ಕೈಲಾಸದ ಪದವಿ ಪಡಕೊಂಡಿ ||3||

ಎಷ್ಟು ನಿನಗ ಭ್ರಮಿಯೊ ನಿನ್ನ

ದುಷ್ಟಮೋಹಗಳ ಅಳಿಯೊ

ಸತ್ಯವಂತ ಶರಣರ ನುಡಿಯೊ

ನಿತ್ಯಕಾಲದಿ ಅವರನು ನೆನಿಯೊ ||ಪಲ್ಲ||

ಹಗಲು ಇರುಳು ಕುದಿಯೊ | ನಿನ್ನ

ಹೆಂಡರು ಮಕ್ಕಳು ಇದಿಯೊ

ಖೂಳ ಯಮನರು ನಿನ್ನೊಯ್ವಾಗ

ಯಾರು ಇಲ್ಲ ನಿನಗೆ ಬಗಿಯೊ ||1||

ನೀರ ಮೇಲಿನ ತೆರಿಯೋ | ಇದು

ತೋರಿ ಅಡಗಿದ ಪರಿಯೊ

ಮೂರು ದಿನದ ಈ ಸಂಸಾರೊ

ಎಚ್ಚರಿಟ್ಟು ನೀ ನಡಿಯೊ ನಡಿಯೊ ||2||

ಆಶಿಯಂಬುದು ಅಳಿಯೋ

ನಿರಾಶಿಯಂಬುದು ತಿಳಿಯೊ

ವಾಸ ಕಡಕೋಳ ಈಶ ಮಡಿವಾಳನ

ಖಾಸ ಮಗನಾಗಿ ದುಡಿಯೊ ದುಡಿಯೊ | |3||

ಕರೆಸಿಕೊಳ್ಳುವೆ ನಿನಗೊಮ್ಮೆ ನನ ಎಮ್ಮೆ ಬಾ ಬಾ

ತ್ಞೂss ಆಂಞ ಅಂಞ ಹಲೆ ಹಲೆ ಹಲೆ ||ಪಲ್ಲ||

ಠಣಕ ಠುಣಕ ಹಾರ್ಯಾಡಬ್ಯಾಡ ಮಣಕ

ಹಾರ್ಯಾಡಿದರ ಮುರದೀತ ಸೊಣಕ

ಸಣ್ಣಮಣಕ ಎನ್ನ ಮಣಕ

ಕೈ ಮಾಡಿ ಕರೆಯುವೆ ನಿನಗೊಮ್ಮೆ ನನ ಎಮ್ಮೆ

ತ್ಞೂss ಅಂಞ ಅಂಞ ಹಲೆ ಹಲೆ ಹಲೆ ||1||

ನಿನಗೆ ಹಾಕುವೆ ಹಸಿಯ ಹುಲ್ಲು

ಹತ್ತಿಯ ಕಾಳವು ಜೋಳ

ಹಿತಮಾಡಿ ಸವಿ ಮಾಡಿ ನನ ಎಮ್ಮೆ

ಕೈ ಮಾಡಿ ಕರೆಯುವೆ ನನ ಎಮ್ಮೆ

ತ್ಞೂ ಅಂಞ ಅಂಞ ಹಲೆ ಹಲೆ ಹಲೆ ||2||

ನಿನಗೆ ಹಿಂಡಿಯ ಕರಣಿಗಳು

ಹತ್ತಿ ಕಾಳ ಮುಸುರಿಗಳು

ಹಿತ ಮಾಡಿ ಎಮ್ಮೆ ಸವಿ ಮಾಡಿ ಎಮ್ಮೆ

ಕೈ ಮಾಡಿ ಕರೆಯುವೆ ನಿನಗೊಮ್ಮೆ

ಗುರು ಮಡಿವಾಳನ ಎಮ್ಮೆ ಬಾಬಾ ||3||

ಯಾತಕ ಬೇಕಂತಿ ನಾಳಿಗೆ

ವಸ್ತಿ ಹಾದಿ ಹೋದ ಮರು ಘಳಿಗೆ

ಊರ ಹೊರಗಿನ ಗೋರಿಗೆ

ಮಣ್ಣ ಪಾಲನಾಗುವದು ಭಾರಿಗೆ ||ಪಲ್ಲ||

ಒಬ್ಬರಿಗೊಂದು ಪೈ ಕೊಡಲಿಲ್ಲ

ಬಡವ ಹಸ್ತೇನಂದರ ಅನ್ನ ಹಾಕಲಿಲ್ಲ

ಭಕ್ತಿ ವಿಚಾರ ನೀ ತಿಳಿಯಲಿಲ್ಲ | ಮುಂದ

ಮೋಕ್ಷ ಮಾರ್ಗವು ತಾ ದೊರಿಯಲಿಲ್ಲ ||1||

ದಾನ ಮಾಡಂದರ ಬಹು ಕೋಪ

ಮುಂದ ಗಳಿಸಬೇಕೆಂಬುದು ವ್ಯಾಪ

ಧರಣಿಯೊಳಗ ಗಂಟ ಮುಚ್ಚಿಟ್ಟೆಪ್ಪೆ

ಮುಂದ ಗತಿಗಾಣದೆ ಹೋದೆ ನಮ್ಮಪ್ಪ ||2||

ಬರುವಾಗ ಏನು ತಂದಿದಿಯಪ್ಪ

ನಾಳೆ ಹೋಗುವಾಗ ಏನು ಒಯ್ತಿದಿಯಪ್ಪ

ಇರು ಇರುತೆಲ್ಲಾ ನಂದಂದೆಪ್ಪ

ಶ್ರೀ ಮಡಿವಾಳನ ಮರತು ನಡದೆಪ್ಪ ||3||

ಎಷ್ಟು ತೊಳಿಯಲಮ್ಮಾ ಮನಸಿನ ಮೈಲಿಗಿ ಹೋಗದಮ್ಮ

ಕೆಮ್ಮಿ ಖ್ಯಾಕರಿಸಿ ತೊಳಿದರ ದೇಹದ ವಾಸನ ಹೋಗದಮ್ಮ ||ಪಲ್ಲ||

ಏನು ಹೇಳಲಮ್ಮ ಪಂಚಭೂತದ ದೇಹ ನಮ್ಮದಮ್ಮ

ಉದರಕೆ ಅನ್ನ ಹಾಕಿದೆನಮ್ಮ ಹಾಕಿದ್ದು ಹಾಳಾಯಿತಮ್ಮ ||1||

ಶೀಲವಂತರಮ್ಮ ಶೀತಲ ತಂಬಿಗಿ ಒಯ್ವರಮ್ಮ

ಹೊಲ ಹೊಲಸು ನಾರುತ ಜ್ಞಾನಹೀನರ ಸಂಗ ಮಾಡಿದರಮ್ಮ ||2||

ಪೊಡವಿಯೊಳಗ ಕಡಕೋಳ ಮಡಿವಾಳನ ಮಗನಮ್ಮ

ಧ್ಯಾನ ಮಾಡಿ ಆತನ ಪಾದಕ ಮರೆಯ ಹೊಕ್ಕೆನಮ್ಮ ||3||

ಗುರು ಸೇವಾ ಮಾಡಬಾರದೇನು

ಗುದಗಲ್ಲ ಒಡಿಯುವೆ ತಮ್ಮ

ಗುರು ಸೇವೆ ಮಾಡಿದಿದ್ದರ

ಗುಣಗಳ್ಹ್ಯಾಂಗಳಿದಾವು ತಮ್ಮ ||ಪಲ್ಲ||

ಭಸ್ಮವು ಧರಿಸಿದ ಮ್ಯಾಲ

ಬಂಗಾರ ಇಡುವದ್ಯಾಕೊ

ಕಂಡ ಕಂಡಲ್ಲಿ ಕಲ್ಲಿಗಿ

ಶರಣು ಮಾಡುವದ್ಯಾಕೊ ||1||

ದೇಶಕಧಿಕವಾದ ವಾಸುಳ್ಳ

ಕಡಕೋಳ ಮುಪ್ಪಿನಯೋಗಿ

ಮಡಿವಾಳ ಸ್ವಾಮಿಯ ದೃಢ

ಚರಣದೊಳು ಆಡಲಿಬೇಕು ||2||

ಆತ್ಮವ ತಿಳಿಯದೆ ಅನುಭವ ಹೇಳುವವ

ಆನ್ಯಾದನೊ ಮುಂದ ಶ್ವಾನಾದನೋ ||ಪಲ್ಲ||

ಪಟ್ಟದ ಸ್ತ್ರೀಯಳ ಬಿಟ್ಟೊಬ್ಬ ತಿರಗಂವ

ಕಾಗ್ಯಾದನೊ ಮುಂದ ಗೂಗ್ಯಾದನೋ ||1||

ಕೊಡುವಂಥ ದಾನಕ ಅಡ್ಡ ಬಂದು ನಿಂತಂವ

ದಡ್ಡಾದನೊ ಎಮ್ಮಿ ಗೊಡ್ಡಾದನೋ ||2||

ಜಾರ ಕರ್ಮವ ಮಾಡಿ ಜಂಭಿಲೆ ತಿರಂಗವ

ದಡ್ಡಾದನೊ ಎಮ್ಮಿ ಗೊಡ್ಡಾದನೋ ||3||

ಜಾರ ಕರ್ಮವ ಮಾಡಿ ಜಂಭಿಲೆ ತಿರಂಗವ

ಟೊಣ್ಣಾದನೊ ಕೂಡುವ ಕೋಣಾದನೋ ||4||

ಮಡಿವಾಳ ಯೋಗಿ ಮಾತು ಮನ್ನಿಸಿ ಕೇಳಾಂವ

ಭೋಗ್ಯಾದನೊ ಮುಂದ ಯೋಗ್ಯಾದನೋ ||5||

ಮನಸಾದಪ್ಪ ಇದು ಬಹಳ ಬೆರಕಿ

ಸುನಕನಂಗ ಹೊಡಿತಾದ ಪಿರಕಿ ||ಪಲ್ಲ||

ಹಿಡಿದೆನಂದರ ಸಿಗುದಿಲ್ಲ ಬಹಳ ಬೆರಕಿ

ತಿಪ್ಪಿ ಕೆದರಿ ಮೈತಾದಪ್ಪ ಕರಕಿ ||1||

ಸಜ್ಜನರ ಸಂಗ ಮಾಡವಲ್ಲದು ಖೋಡಿ

ದುರ್ಜನರ ಸಂಗಕ ಹೋಗತಾದ ಓಡಿ ||2||

ಧರಿಯೊಳು ಕಡಕೋಳದ ಭಕ್ತಿ

ಗುರು ಮಡಿವಾಳನ ದಯ ಆದ ಪೂರ್ತಿ ||3||

ಏನು ಜಗಸ್ತಾಳೊ ಮಾಯಿ | ಈಕಿ

ನಾನಾ ಎಂಬುವವರಿಗೆ ಮಾಡ್ಯಾಳೊ ನಾಯಿ ||ಪಲ್ಲ||

ಪೋತಿ ಪುಸ್ತಕ ಓದಿ ನೋಡಿ | ಅವರು

ಗತಿಗೆಟ್ಟು ತಿರಗತಾರೊ ಮತಿ ಇಲ್ಲದ ಖೋಡಿ |

ಹಿರಿತನಕ ಕಿರಿಕಿರಿ ಧಾಡಿ | ಅವರು

ಧೂಳೆದ್ದು ಹಾರ್ಯಾರೊ ಪುಡಿ ಹಿಟ್ಟನಾಗಿ ||1||

ಜಡಿಮುಡಿ ತೆಗಿಸ್ಯಾಳೊ ಭರನೆ | ಅವರ

ನಡಿನುಡಿ ಬಿಡಿಸ್ಯಾಳೊ ತಪರಾಕಿ ಝಡಿಸಿ

ಜಪತಪ ಬಿಡಿಸ್ಯಾಳೊ ಎಣಎಣಸಿ

ಅವರಿಗೆ ಅಪಮಾನ ಮಾಡ್ಯಾಳೊ ಭವಹಾದಿಗೆಡಸಿ ||2||

ಅಳುವಿಲ್ಲದವರಿಗೆ ದುಃಖದಿ ಅಳಿಸಿ

ಅಜ ಹರಿ ಸುರ ಎಲ್ಲರಿಗೆ ಕೆಡಿಸಿ

ಈ ಮಾತು ಹೇಳಿದ ನಿಜ ಸೋಸಿ

ಚೆಲ್ವ ಯೋಗಿ ಮಡಿವಾಳನ ಮಗ ಅಂವ ಸಿಲಿಕಿಸಿ || 3||

ಬರಬಾರದು ಬಂದೇವು ಕುಡಗಾನೂರಿಗೆ

ಸ್ವಲ್ಪ ಬುದ್ಧಿ ಇಲ್ಲ ಈ ಊರ ಗೌಡರಿಗೆ

ಶಿವ ಮತದಲ್ಲಿ ಬಂದಿ ಭಾರಿಗೆ

ಶಿವನ ಗುರ್ತಿಲ್ಲ ಇವರೊಳು ಯಾರಿಗೆ ||ಪಲ್ಲ||

ನಿಂದೆ ಆಡುದ್ಹಿಂಗೆಯೇನು ಸಾಧುರಿಗೆ

ಇಬತ್ಹ್ಯೆಚ್ಚುದು ಬಿಟ್ಟು ಮತ್ತೇನ್ಹಚಂತಿದಿ ಅವರಿಗೆ

ಏನ ಹಚ್ಚಂತಿ ಅವರ ಚಂದದ ಹಣಿಗಿ

ಕಾರಭಾರಿ ಮುಳ್ಳ ಬರಲಿ ನಿನ್ನ ಮಾರಿಗೆ ||1||

ನಾಯೇನು ಕಂಬಳಿ ತಂದಿಲ್ಲಪ್ಪ ನಿಮ್ಮನಿಗಿ

ನಿಮ್ಮ ತಮ್ಮ ಹಾಸಿ ಕೂಡ್ರಿಸಿ ಹೋದಾ ನೀರಿಗಿ

ನಿಂದೆ ಆಡುಬಾರದಪ್ಪ ಹಿಂಗ ಮ್ಯಾನರಿಗಿ

ಹಂದಿ ಜಲ್ಮಕ ಹೋಗತಿರಿ ಹಾಳ ಕೇರಿಗಿ | |2||

ಪುಣ್ಯ ಮಾಡಿ ಬಂದಿರೆಪ್ಪ ಊರಿಗಿ

ಊರೆಂಬುವ ಕಾಯ ಪೂರಿಗಿ

ಬಿಟ್ಟ ಹೋಗತಿರಿ ನಾಳ ಗೋರಿಗಿ

ನಿಮ್ಮ ಸಂಸಾರ ಹೆರವರ ಪಾಲಿಗಿ ||3||

ಸತ್ಪುರುಷರ ಖೂನ ಇಲ್ಲ ಇವರಿಗಿ

ಈ ಮಂದಬುದ್ಧಿ ಮನುಷ್ಯರಿಗಿ

ಸತ್ಕರ್ಮದಲ್ಲಿ ಮನಸಿಲ್ಲ ಇವರಿಗಿ

ಜ್ಞಾನವಿಲ್ಲದ ಹುಲು ಮನುಷ್ಯರಿಗಿ ||4||

ಭಲೆ ಉಳದೊ ಸಿದ್ದಪ್ಪ ಇದರೊಳಗ

ಈ ಮಡಿವಾಳನ ಹುಲಿ ಬಾಯೊಳಗ

ಅರುವಿಡಬೇಕು ಈ ಜನ್ಮದೊಳಗ

ಬ್ರಹ್ಮಜ್ಞಾನದ ನುಡಿ ನಿನ್ನ ಪದರೊಳಗ ||5||

ನಾನಾ ಜನ್ಮವು ತಿರುಗಿ ಮಾನವ ಜನ್ಮಕೆ ಬಂದು

ಮಾನವರೊಳಗರುವು ಹಿಡದೈತಿ ||ಪಲ್ಲ||

ನಂದು ತಂದು ಎಂದು ಹೊಂದಿ ನಡೆದರೆ

ಮುಂದೆ ಪುಣ್ಯದ ಮಾರ್ಗವು ಒಂದೈತಿ ||ಅ.ಪಲ್ಲ||

ತನಗ ತಿಳಿಯದಿರಕ ಕರ್ಮದೊಳಗ

ತಿಳಿ ಮಾಡಿ ಬುದ್ಧಿವುಳ್ಳವರ್ಹಂತಿಲಿ ಕೇಳಬೇಕೋ ರೀತಿ

ದಾರಿ ಬಿಟ್ಟು ಅಡ್ಡ ಮಾರ್ಗವ ತುಳಿದರೆ

ಅಲ್ಲೇಳೊ ತಮ್ಮಾ ನಡಿ ನುಡತಿ ||1||

ಮಣ್ಣಿನ ಕಾಯಾ ಇದು ಮಣ್ಣಾಗ ಹುಟ್ಟ್ಯಾದ

ಕಡ ಮಾಡಿ ತಂದ ಕಾಯಾ ಒಂದಿನ ಬಿಡತೈತಿ

ಜೀವ ಗಾಳ್ಯಾಗ ಹೋಯ್ತು ದೇಹ ಮಣ್ಣೊಳು ಕಲೆತು

ಖಾಲೆ ಇದು ಒಣ ಭ್ರಾಂತಿ ||2||

ನೆಚ್ಚಿಕಿಲ್ಲದ ಕಾಯಾ ನೀರ ಮ್ಯಾಳಿನ ಗುರುಳಿ

ಗುರುಳಿ ಒಡದ ಮ್ಯಾಲ ಆಗಿಹೋಯಿತು ಸಂತಿ

ಸಂತಿ ಸರದ್ಹೋಯ್ತು ಕಂತಿ ಕಡದ ಬಿತ್ತು

ಖಾಲೆ ಇದು ಒಣ ಭ್ರಾಂತಿ ||3||

ಇರುತನ ಜಗಳಾಡಿ ಬಡಿದಾಡಿ

ಎಲ್ಲರೂ ಹೋಗುವ ಮಾರ್ಗ ಒಂದೈತಿ

ಗುರು ಮಡಿವಾಳನ ಪಾದಕ ಹೊಂದಿದ ಮ್ಯಾಲ

ಕೊಡುವನು ಚೆಲುವ ಮುಕ್ತಿ ||4||

ಶಿವ ಶಿವ ಶಿವ ಅಂತೀರಿ

ಶಿವ ಹಾನ ತಿಳಿರಿ ನಿಮ್ಮ ಹಂತಿಲಿ

ಆತ್ಮನರಿಯದೆ ಕುಂತೀರಿ

ಜಗಭರಿತ ಜಂಗಮನ್ಹ್ಯಾಂಗರತೀರಿ ||ಪಲ್ಲ||

ನವ ಮಾಸ ತುಂಬಿ ನೀವು ಬರತಿರಿ

ಬಹು ಪ್ರೀತಿಲಿಂದ ಇಲ್ಲಿರುತೀರಿ

ಸಾವಾಗ ನೋವಾಗಿ ಅಳತೀರಿ

ಶಿವನ ನಿಜಧ್ಯಾಸ ನಿಮಗ್ಹಾಂಗ ತಿಳಿದೀತರಿ ||1||

ಹೂವನಿಲ್ಲದ ಬೀಜ ಎಲ್ಲಾದರಿ

ಅದರ ಮೂಲ ತಿಳಿರಿ ನಿಮ್ಮ ಬಲ್ಲ್ಯಾದರಿ

ಅಣುವಿನೊಳಗ ತೃಣ ಒಂದದರಿ

ಅದು ತಿಳಿದವರಿಗೆ ತಿಂದು ನುಂಗ್ಯಾದರಿ ||2||

ಪೊಡವಿಯೊಳಗ ಕಡಕೋಳದರಿ

ಅಲ್ಲಿ ಪಡೆದವರಿಗೆ ಕೈಲಾಸದರಿ

ಗುರು ಮಡಿವಾಳನ ಧ್ಯಾಸದರಿ

ಮಗ ಸಿದ್ಧ ಮಾಡಿದ ಕವಿ ಬೇಸ್ಯಾದರಿ ||3||

ದೇವ ಬೇಡಿಕೊಂಬುವೆ ದಯಮಾಡೊ

ಬಹಳ ಕರುಣದಿ ನೀ ನೋಡೊ ||ಪಲ್ಲ||

ಏನು ಪುಣ್ಯ ಪಾಪದ ಫಲದಿಂದ

ಇಂಥ ಭಿನ್ನ ಶರೀರ ತಾಳಿ ಬಂದೆ

ವ್ಯರ್ಥ ಹಾನಿಯಾಗುವದು ಮುಂದೆ ||1||

ನಾನು ನೀನು ಎಂಬುವ ಅಹಂಕಾರ ಅಳಿದು

ನಿಮ್ಮ ಧ್ಯಾನ ಮಾಡುವೆ ಮನಸ್ಸು ತಿಳಿದು

ಮಹಾಜ್ಞಾನ ಮೂರುತಿ ನಿಮ್ಮನ್ನು ಅರಿದು ||2||

ದೊಡ್ಡ ಧರಿಯೊಳು ಉತ್ತಮ ಕಡಕೋಳ

ಮಹಾಗುರು ಗುಡ್ಡದ ಮಡಿವಾಳನ ಕೃಪ ಬಹಳ

ಭವ ತಿರುಗಿ ಬರುಲಾರೆ ನಾ ತರುಳ ||3||

ಸಬ ಕಹತೆ ಈಶ್ವರ ಅಲ್ಲಾ

ಇದರ ಭೇದ ಯಾರಿಗೆ ತಿಳಿದಿಲ್ಲಾ ||ಪಲ್ಲ||

ನಿರಾಕಾರಸೇ ಆಕಾರ ಹುವೆ

ವೇದಶಾಸ್ತ್ರಕೆ ನಿಲುಕಿಲ್ಲ

ಹಿಂದೂ ಮುಸ್ಲಮಾನ ಶಾಸ್ತ್ರ ಪಡತೆ ಹೈ

ಗುರು ಮನಿ ಕೀಲ ಸಿಗಲಿಲ್ಲ ||1||

ಲಾಯಕ್ ಗುರುಕೋ ಜಬ್ ಢೂಂಡ್ ಲಾಕೆ

ಏನು ಬೇಡಿದ್ದು ಕೊಡಬೇಕಲ್ಲಾ

ತನುಮನಧನ ಲೋಭ ಛೋಡಕರ್

ಆಗಬೇಕು ಗುರುವಿನಾ ಚೇಲಾ ||2||

ಹಮ್‍ಭೀ ಕಹತೆ ತುಮ್ ಭೀ ಕಹತೆ

ಮಾಡಬ್ಯಾಡರಿ ಮ್ಯಾಲಿನ ಶೀಲಾ

ಗುರು ಮಡಿವಾಳನ ಹೋಕರ್

ಬೋಲೆ ತೊಳಿಯಬೇಕರಿ ಒಳಗಿನ ಮೈಲಾ ||3||

ಕಾಮಿಸಲೇನಿದು ಕೆಂವ್‍ಸೈಯಾ

ನಿಜ ಭಾವಿಸಿಕೊ ಇದು ಬಂವ್‍ಸೈಯ್ಯೋ

ಜಾನಿಸಿ ತಿಳಿ ಮನ ದಿನಸಯ್ಯೋ

ಜಗ ಹುಟ್ಟುದು- ಸಾವುದು ಹಿಂಗಸಯ್ಯೋ ||ಪಲ್ಲ||

ಅಜ್ಞಾನೆಂಬುದು ಅಮವಾಸಿ

ಸುಜ್ಞಾನೆಂಬ ಚಂದ್ರನು ಉದಿಸಿ

ರಹಿಮಾಮ್ ರಹಿಮಾಮ್ ಉಚ್ಚರಿಸಿ

ಪರಬ್ರಹ್ಮಕ ದೋಸ್ತರ ಹೌದೆನಿಸಿ ||1||

ಅವಗುಣ ಅಳಿದರೆ ಆಯಿದೋಸೊ

ಶಿವಗುಣ ಹಿಡಿದು ದೇವರನೊಲಿಸೊ

ನಡೆ-ನುಡಿ ತಪ್ಪದೆ ಧುಯಿಲೆನಿಸೊ

ಬಹು ಸಡಗರದಿಂದಲಿ ಅವನನ್ನೊಲಿಸೊ ||2||

ಜೀವ ಪರಮರೆಂಬುವದಿತ್ರಿ

ಭಾವಿಸಿಕೊ ನಿಜ ಖತ್ತಲ್ ರಾತ್ರಿ

ಜೀವನ್ಹೋದ ಮೇಲೆ ಧಫನೈತ್ರಿ

ಗುರುದೇವ ಮಡಿವಾಳ ಅಲ್ಲಾನ ಜಾತ್ರಿ ||3|

ಜಂಗಮನಾಗಬೇಕಾದರೆ ಮನ

ಲಿಂಗ ಮಾಡಿಕೊಂಡಿರಬೇಕು

ಅಂಗಣ ಗುಣ ಅಳಿದಿರಬೇಕು ತಾ

ನಿಸ್ಸಂಗನಾಗಿ ಶರಣರ ಕೂಡಿಕೊಂಡಿರಬೇಕು ||ಪಲ್ಲ||

ಶಿವಾಯನಮಯನುತಲುಸಿರು

ಹೋಗುದು ಕಂಡು ಹಿಡಿದಿರಬೇಕು

ಹಂಬಲಿಸಿದ ಘೋಷ ಝೇಂಕಾರ ತಾಳವಿರಬೇಕು

ದಾಸನಾಗಿ ಮಲ ಕೀಲ ತೊಳೆದು ತಾ ಕುಳಿತಿರಬೇಕು ||1||

ಅಂಗದ ಗುಣಗಳು ಎಲ್ಲವು ಅಳಿದು

ಇಡಾ ಪಿಂಗಳ ಖೂನವಿಟ್ಟಿರಬೇಕು

ಕಂಗಳನು ತಾ ಮುಚ್ಚಿ ನಿರತನಾಗಿ

ಮಂಗಳ ಪ್ರಭೆಯೊಳು ಮುಳುಗಿರಬೇಕು ||2||

ಹಸಿರು ಹಳದಿ ಕೆಳಪು ಬಿಸಲಿನ ಖೂನ

ಹಸುರಾಗಿ ಹೊಳಪು ತಿಳಿ ತೋರಿರಬೇಕು

ಹೊಸ ಧಾತು ಕೋಲು ಮುಂಚು ಹಿಡಿದು

ಈಶ ಗುರು ಬಸವಲಿಂಗೇಶನೊಳು ತಾನರಿತು ನಡೆದಿರಬೇಕು ||3||

ಅಜಪ್ತ ತಮಾಸಿ ಪೋರ್ಯಾಳೊ

ಅತ್ತಿಯ ಮನಿಗೋಗುವಲ್ಲಿ ಊರಾಗ

ಅಪೂರ್ವ ಎನಗಿದು ಅಪರಂಪಾರಾಯಿತು

ಅಲಗರ್ಜಿ ಅನುಭೋಗ

ಅಲಲಲ ಆಶ್ಚರೀ ಕಂಡಾದಿತು

ಅಲಲಲ ತಾರಿಪದ್ಹೆಣ್ಣ

ಅಲಲಲಲಲ ದೆವ್ವ ಏನ ಬೆರಕಿಯವ್ವ

ಅಲಲಲಲಲೇನಿದು ಅಪೂರ್ವ

ಅಲ್ಲಂತ್ಯಾವದ್ಹೇಳಲಿ ನಾನು

ಅಲ್ಲಂಬೊ ಮಾತೊಂದೆಲ್ಲಿ ಇಲ್ಲದಾಯಿತೊ

ಅಲ್ಲೆ ಅಲ್ಲೆ ಅಲ್ಲೆ ಬಹು

ಅಲ್ಲೆಂಬುದು ಹೌದಾದರೆ.

ಅಲ್ಲ್ಯಾಕೊ ಹುಡುಕುತಿ ಇಕೊ

ಅವಾಚ್ಯ ಬ್ರಹ್ಮವು ತಾನೆ

ಅಷ್ಟರೊಳಗಾದ ಮಾತು ಎಲೊ ನಿನ

ಅಷ್ಟು ತಾ ಸುಳ್ಳಲ ಒಂದಿಷ್ಟು ತಾ ಖರೆಯಲ್ಲ

ಅಹಹ ಇದೇನು ಸೋಜಿಗ

ಅಳಳಳಳಳಳಳಳಾವುಮಾ ಈ ಆವು

ಅಳಳೊಟ್ಟಿ ಅಳಳೊಟ್ಟಿ ಅಳಳೊಟ್ಟಿ

ಆ ಪರಬ್ರಹ್ಮವು ನೋಡೋ ನಿಜ

ಆ ಪರಬ್ರಹ್ಮವೆ ತಾ ತಾನಾದ

ಆ ಯಮಧರ್ಮನೆ ಸಾಧುಯೆಲೊ

ಆಡಬಾರದ ಮಾತು ಆಡಿದೆ ನಿನಗೊತ್ತು

ಆಯತವಾಗೋದೊಂದರಿಯೋ ಮುಂದೆ

ಆಯಾತವಾಯಿತೆ ಪ್ರಮಥರಿಗೆ

ಆಯಾಸ ಅಣುಯಿಲ್ಲಾ ವೋ

ಆಯಿತ ಆಯಿತ ಆಯಿತಂತಿ

ಆಯಿತು ಅಮವಾಸಿ ಆಕೋ ಇಕೋ

ಆಯಿತು ಹೋಯಿತು ಬಂತು ಬಾರದೆಂಬೊದ್ಯಾಕೊ

ಆರು ತನಗೇನಂದರೇನು ಆಗೋ ಸಮಾಧಾನ

ಆವ ಭಯವು ಇನ್ನೇನವಗ

ಇಂಥ ನಡತಿ ಯಾರ ಕಲಿಸಿದರ್ಹೇಳೆ ನಮ್ಮವ್ವಾ

ಇಂದು ನಾನು ಧಾವತಿ ಮಾಡಿ ದಣದೇನವ್ವ

ಇನ್ಯಾಕೆ ಇಹದಾಸೆವ್ವ

ಇಲ್ಲದ ಸುಂಟರಗಾಳೆದ್ದು

ಇಲ್ಲದ್ದಿಲ್ಲದಿಲ್ಲ ಇದ್ದುದೆಲ್ಲ ಅಲ್ಲ

ಇಲ್ಲಿ ಅಳಿಯದೆ ತಿಳಿಯದೆಂದಿಗೆ ನೀ

ಇಲ್ಲೆ ಅಧಿಕ ವಸ್ತು ಇಲ್ಲೆ ಅಧಿಕ

ಇಲ್ಲೆ ಆದುದಿದೆಯೆಂದು

ಇಲ್ಲೆ ಇದ್ದದ್ದು ಇದ್ದುದಿಲ್ಲೆ ಅದು

ಇಲ್ಲೆ ನಿಜ ನಿರ್ವಯಲೋಳು

ಇಲ್ಲೆ ನೀ ಮಾಡಿಕೊಳ್ಳೊ ಗೊತ್ತು

ಇಷ್ಟ್ಯಾಕ ತಿಳಿಬಾರದವ್ವಾ ಗಟ್ಯಾಗಿ

ಇಹುದೆಲ್ಲಿ ದೇವಾ ಬನ್ನಾ

ಈ ಊರು ಅರವತ್ತು ಒಂದಾಗಿ ನಡೆದರೆ

ಈ ಗಂಡನ ಸುಖವು ಎನಗೆ ತೋರಿತವ್ವ

ಈ ಪಂಚಾರತಿ ಬೆಳಗಿರಿ ಐವರು

ಈತನೇ ಸಾಕ್ಷಾತ ತನ್ನನೆ ತಾ ತಿಳಿದಾತ

ಈಶ್ವರ ದಯೆ ನಮ್ಮೇಲೆ ಇರೋತನಕ

ಊಚದಾವದೊ ಇದರೊಳು ನೀಚದಾವದೊ

ಎಂತು ವಿರತಿಯೊ ನಿಂದು

ಎಂಥ ಆಕಳ ಕೊಟ್ಟ ಗುರು ಕಾಮಧೇನ

ಎಂಥ ಊರವ್ವ ತಂಗಿ ಎಂಥ ಊರ

ಎಂಥ ಗರುವಿನ ದೇಶ ಈ ನಾಗನಾಳಕ

ಎಂಥ ಕಾಟದವಳೀ ನಮ್ಮತ್ತೆವ್ವ

ಎಂಥಾ ಕಂಡಾಬಟ್ಟೆ ಸೂಳೆ ಮಕ್ಕಳಿವರೊ

ಎಂಥಾ ಮದವಿ ಮಾಡಿಕೊಂಡೆ ನೋಡಕ್ಕಯ್ಯ

ಎಂಥಾ ಮಾನವ ಜನ್ಮ ಇದು ಮಾಯಿಗೆ ಸೋತಾದ

ಎಂದೂ ಬಾರದ ಗಂಡ

ಎತ್ತುವೇನು ಆರತಿಯೇ ಮಹಾಂತೇಶನ

ಎಪ್ಪ ಎಂಥ ಮರವಿಯೊ ಅಬ್ಬಾ

ಎಲಿರೊ ಎಲಿರೊ ಕೆಡಬ್ಯಾಡಿರೋ

ಎಲೆಲೆ ಶ್ರೀ ಮಹಾಂತ ಮಾರಾಯ

ಎಲೊ ಎಲೊ ಏ ಮಾನವ

ಎಲೊ ಎಲೊ ಮಾನವ ಮಾರ್ಗ ತಪ್ಪಿ ನೀ ನುಡಿಯಬೇಡ

ಎಲೋ ಎಲೋ ಶಿವಮಂತ್ರವ ನುಡಿಯೋ

ಎಲ್ಲ ಸ್ವರೂಪ ವಲ್ಲಭವನೆಂಬುದು

ಎಲ್ಲ ಸ್ವರೂಪವು ತಾನೆಲ್ಲ ಬ್ರಹ್ಮವೆಂಬುದೆ ಸೊಲ್ಲ

ಎಲ್ಲರೊಳಗಾನ ಶಿವ ತಾನೇಕಾಗಿ

ಎಲ್ಲಾ ತಾ ನಿರ್ಬಯಲೆ

ಎಲ್ಲಾ ತಾನೆಂದು ಬಲ್ಲಾಗಿ ಭಯ ನೀಗಿ

ಎಲ್ಲಾ ರೂಪವು ತಾನಂತೆ

ಎಲ್ಲಿ ನೋಡಿದರಲ್ಲಿ ತಾನೆ ಎಲ್ಲರೊಳಗ್ಹಾನೆ

ಎಲ್ಲಿಗ್ಹೋದರೇನು ಏನಾದರೇನಾದೊ

ಎಲ್ಲೊ ಹಾನ ಪರಮಾತ್ಮ ಎಲ್ಲೊ ಹಾನ

ಎವ್ವಾ ಹ್ಯಾಂಗ ಮಾಡಲೆ

ಎಷ್ಟು ನಿನ್ನಗ ಮಾಯದ ಮರವು ಇಷ್ಟಿಲ್ಲೇಳರವು

ಏ ಏನೋ ನಿನ್ನ ಮಾಯೆಯೆಂಬ ಕಷ್ಟ ಬಹಳವಾಯಿತು

ಏನಾಗದೇನಾಗದೊ ಹರ

ಏನೇನು ಹಗರಣ ಮಾಡುವರೀ

ಏರಲಾರದ ಭಾರಿ ಗುಡ್ಡ ಏರಿಸಿದನು ಗುರುವಾ

ಏಸೋಬಾನ ಲೀಲೆಯಿದು ಐ

ಐತಾನದ್ಹಮ್ಮೇನೋ ಚುಮ್ಮಾ

ಒಲಿವ ಶ್ರೀ ಗುರುವಿನ ಒಲಿಸುದೇನಾಗಾದ

ಒಲ್ಲೆನಪ್ಪೊ ಹೆಂಡಿರನೊಲ್ಲೆನಪ್ಪೊ

ಒಲ್ಲೆನ್ಹೋಗ ನಿನ್ನ ಸಂಗ

ಒಳ್ಳೇ ಮಾರ್ಗದಿ ಹೋಗಬೇಕು

ಓ ಎಂಬುವ ದನಿ ತೋರುವದೇನೊ

ಓ ಯಾಕೆ ಮರದಿಯಲೊ

ಕಂಡಾಬಟ್ಟಿ ಮಾತುಗಳ ಆಡ ಕಲ್ತಿ

ಕಡ್ಡಿ ಬತ್ತಿ ಬೆಳಗು ಬನ್ನಿರೆ ಕಾರುಣ್ಯ ನಿಧಿಗೆ

ಕಪ್ಪು ಕಡೆಗೊತ್ತಿ ಬಿಳ್ಪಲರಿದೊ

ಕರಿಯ ಹೆಂಟಿಯ ಮೇಲೆ ಬಿಳಿಯ ಬೀಜವೂರಿ

ಕರ್ಪೂರ ಜ್ಯೋತಿ ಶಾಂತ ದೇವನಿಗೆ

ಕಲಿ ಏನು ಮಾಡೀತು ನರರ್ಯಾ

ಕಲ್ಪಿತವು ನಿನಗ್ಯಾಕೊ ಕಂದ

ಕಾಡುವ ನಡತಿ ಇದ್ಯಾಕ ಏ ಮನವೆ

ಕಾಯೋ ಶ್ರೀ ಸಾಂಬಶಿವ ಒಲ್ಲೆ ಭವ

ಕಾಲ ಒದಗಿ ಬರುವಷ್ಟತಿಗೆ ನಿನ್ನ

ಕುಡ್ಡಿ ನಿನಗ್ಯಾಕ ಹಾದರ

ಕುಲ ಛಲವ್ಯಾಕೊ ಎಲೊ ಹುಚ್ಚ ಭೋರಿಗೆ

ಕುಸ್ತಿಯ ಆಡವನೇ ಜಾಮರ್ದ

ಕೆಡಬೇಡಂದರೆ ಕೆಟ್ಟೇನಂದರಿಗೆ

ಕೆಡುಬ್ಯಾಡ ಕೆಡುಬ್ಯಾಡ ಈ

ಕೇಳೋ ಜಾಣ ಜ್ಞಾನದಿಂದ ಶಿವಧ್ಯಾನವ ಮಾಡಣ್ಣ

ಕೊಡು ಕೊಳ್ಳುವ ವ್ಯವಹಾರಕ್ಕೆ ಅನುಮಾನ

ಕೊಂಬು ಹೊಲಿಯಂದೊ ಏಕಾಂತ

ಕ್ರಿಯೆ ನಿಷ್ಪತ್ತಿ ಜ್ಞಾನ ನಿಷ್ಪತ್ತಿ

ಕ್ವಾಡಗನ ಕೋಳಿ ನುಂಗಿತ ಕೇಳಕ್ಕಯ್ಯ

ಖೋಡಿ ಖೋಡಿ ಖೋಡಿ ಎಲೆ ಖೋಡಿ

ಗಡಗಿ ತೊಳೆದು ಅಡಗಿ ಮಾಡಮ್ಮಾ

ಗಡಿಬಿಡಿ ಮಾಡಬ್ಯಾಡ ಗುಂಡವ್ವ

ಗರ್ಜಿನ ಮಾತಾಡುವದ್ಯಾಕೊ

ಗುರು ಕರುಣವಿಲ್ಲದವನ ಸ್ನೇಹ

ಗುರು ಚರಣ ಸೇವೆ ಅನುವಾಗು ಮನುಜ ನೀ ಬೇಗನೆ

ಗುರು ದೀಕ್ಷಾ ಪಡಕೊಂಡು ಗುರ್ತಕ್ಕೆ ಮುಟ್ಟದೆ

ಗುರು ಧ್ಯಾನ ಬಿಡಬ್ಯಾಡ ಪರದೇಶಿ

ಗುರುವಿನ ಒಲಿಸುವ ತನಕ

ಗುರುವಿನ ನೆನಿ ಮನವೆ ನಿರಂತರ

ಗುರುವೆ ನೀ ಬೇಗನೇ ಮೊರೆ ಕೇಳೊ ವ್ಯರ್ಥ

ಗೌಪ್ಯವಾಗಿದ್ದನುಭವ ಹೇಳೋದೆನ್ನ ಕಡಿಗೆ

ಚಂದವೆನಗಿದು ಎಲೆ ಜೀವಾ

ಚಿಂತಿ ಎಂಬುದು ಬಹಳ ಘನವಾಗಲಿ

ಛಲವೇನು ಉಮಾವರ

ಜಂಗಮನಿಲ್ಲವ್ವ ಜಗದೊಳಗ

ಜಡೆ ದೇಹಿ ನೀನಲ್ಲ ಜಡ ಆತ್ಮ ನಾನೆಂಬಿ

ಜನ್ಮ ಪಾವನ ಆಯಿತವ್ವ.

ಜಯ ಜಯ ಜಯತೆ ದಯಾನಿಧಿ ಶಂಭೋವನಿತೆ

ಜಯ ಜಯ ಫಣಿಪತಿ

ಜಯ ಜಯ ಮಂಗಲ ಮೂರತಿಗಾರತಿ

ಜಯ ಜಯ ಮಂಗಲಮಯ

ಜಯ ಜಯ ಮಹಾಂತ ಗುರುವರ ಸುವಿಭೋ

ಜಯ ಜಯ ಮಹಾಂತಮೂರ್ತಿ

ಜಯ ಜಯ ಸರ್ವ ಜಯ ಜಯ

ಜಯ ನಮ ಪಾರ್ವತಿ ಪತಿ ಹರ ಹರತೆ

ಜಯ ವೃಷಭೇಂದ್ರ ಚಿದಾಲಯಮಾಂಪಾಲಯ

ಜಯ ಸಾಂಬ ಜಯಸಾಂಬ ಜಯತೇ ಸ್ವರೂಪ

ಜಯತೆಂದು ನಮಿಸುವೆ ಜಯತೆಂದು ನುತಿಸುವೆ

ಜಯತೊ ಶ್ರೀಗುರು ಸಂಗಮೇಶ

ಜಲ್ದಿ ನೋಡಿಕೊಳ್ಳೊ ಹಿಂದ ಬಂದುದೆಲ್ಲಿ

ಜಲ್ದಿ ನೋಡಿಕೊಳ್ಳೋ ತಮ್ಮ ಬಂದುದೆಲ್ಲಿ

ಜಾರತನವು ನಾ ಮಾಡಿದ್ದೆನಮ್ಮ

ಜೋಜೋ ಮಹಾಂತಲಿಂಗ ಶ್ರೀ ಕಂದ ಜೋಜೋ

ಜ್ಞಾನ ತಿಳಿದು ನೋಡೊ

ಜ್ಞಾನ ಪೂರ್ಣಂ ಜಗಂ ಜ್ಯೋತಿ

ಜ್ಯೋತಿ ಬೆಳಗುತಾದೊ ಜಗಜಗ

ಜ್ಯೋತಿ ಬೆಳಗುತಿದೆ

ತಂಗಿ ಹೋಗನು ಬಾರಮ್ಮ ತಯ್ಯಾರಾಗಮ್ಮ

ತಂದಿ ಷಂಡಾದರೆ ತಾಯಿಯಾಕೆ ಬರುವಳು

ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೊ

ತನ್ನ ವಿನೋದಕ್ಕೆ ತಾ ಹಲವಾದರೆ

ತನ್ನಿಂದ್ಹೊರತಿನ್ನಾರವ್ವ ತಂಗೀ

ತಾನೆ ಬಯಲಾಗುವದೊ ತನ್ನೊಳು

ತಾವೆರಡೊಂದಾದ ಸುಖ ಸಾಮ್ರಾಜ್ಯ

ತಿಳಿ ಬಾಳಿರಬೇಕು ನಿಂಗವ್ವ

ತಿಳಿದರೆ ತಿಳಿಯುವುದಲ್ಲ

ತಿಳಿಯೊ ಬೇಗನೆ ಕಳಿಯ ಬ್ಯಾಡಿದನು

ತುಡುಗಾ ನಿನ್ಹಗಿಂತಾ ಜನ್ಮ

ದಯ ಭಕ್ತಿಯುಳ್ಳವನಿಗೆ ಅದು ಏನು ಕಡಿಮೆಯಿಲ್ಲ

ದಾವದಾದೋ ನಿಜದಾವದಾದೊ

ದಾವದು ನಿನಗಿದು ಬೇಕವ

ದಾವದೊ ಪರಬ್ರಹ್ಮ ದಾವ ಭಾವಾದದ್ದು

ದಾವದೋ ಕುಲ ದಾವದೋ

ದಾವದೋ ಮಾಯಿ ಚಾಲ

ದಾವಪಥ ದಾವನೆಲೆ ದಾವಸುಖ ಬಲ್ಲಿ

ದೇವರ ದೇವ ಲಾಲಿಸು ವಿಜ್ಞಾಪನ

ದೇವಿ ಮಾತಾಡಬಾರದೇ

ದೇವಿಯ ನೆನೆಯಿರಿ ಭಾವಶುದ್ಧದಲಿ

ದೈವದವರು ನೀವು ದಯಮಾಡಿ ಕೇಳಿರಿ ಪಾರಮಾರ್ಥ

ಧಡಿಯ ಧೋತರ ಝಮಕೊಂಡಿ

ಧನವ ಗಳಿಸಬೇಕು ಇಂಥಾದ್ದು

ಧೂಪದ ಘಟ್ಟಿ ದೀಪ ಬೆಳಗುವನೋ

ನಗಬೇಕೋ ಏನಳಬೇಕೊ

ನನ್ನ ಒಳಗ ನಾ ತಿಳಿದುಕೊಂಡೆ

ನನ್ನ ಮದುವಿಯ ಚಿಂತೆ ನಿನಗ್ಯಾಕ

ನಮೋ ಮಂಗಳ ಮಹಿಮ ಕೃಪಾಕರ

ನರನಾದ ಮೇಲೆ ಗುರುವಿನ ನಾಮ

ನಾ ಬರಬಾರದಿತ್ತು ಈ ಊರಿಗ

ನಾ ಹೋದ ಮ್ಯಾಲ ನೀ ಹ್ಯಾಂಗಿರ್ತಿ

ನಾಡ ಮಾತುಗಳ ನೀನಾಡಬಲ್ಲಿ

ನಾನಿತ್ತಲೆಳಿದರೆ ತಾನತ್ತಲೆಳಿವದು

ನಾನು ನೀನು ಅಲ್ಲ ತಾನೆ ಅಂದರೇನು

ನಾಯಿ ಬರುತಾದೋ ಏ ಮನುಜ

ನಾವು ನಡದೆವಮ್ಮ ನಮ್ಮ ತವರೂರಿಗೆ

ನಾವು ನೀವು ಕೂಡಿದ್ದೆವ ಚಿಕ್ಕಂದ

ನಾವ್ಹ್ಯಾಂಗ ಮಾಡಬೇಕರೊ ಜನರ್ಯಾ

ನಿಂದಕರಿದ್ದರಿರಬೇಕೊ ಹತ್ತು

ನಿನ್ನ ನಿಜವು ನೀ ತಿಳಿವಲ್ಲಿ

ನಿರ್ವಂಚನ ಹಿಡಿದೊಲಿಸೊ ಶ್ರೀಗುರುವಿನ

ನಿರ್ವಯಲೆಂಬೊ ನಿಜ ಗೊತ್ತು

ನಿರ್ವಾಣವಾಗುವುದಕ್ಕೆ ಯರ್ವನೊ

ನಿಲಕಿಸಿಕೊ ಮೇಲಾದ ಕಾಯಿ

ನಿವಾಳಿಸುವೆ ದೇಹ ನಿವಾಳಿಸುವೆ ದೇಹ

ನಿಶ್ಯಬ್ದ ಬಹ್ಮನೆಂಬುವ ಶೃತಿಯಿದು ತಿಳಿದಿತ್ರೇನಯ್ಯ

ನೀ ಕಂಡರೆ ನಿನ ನೆಲಿಗಾಣುವದೊ

ನೀತಿಗೇಡಿ ಅಂಗದ ಸಂಗವು

ನೀನು ತಿಳಿದರ ತಿಳೀತಿ

ನುಡಿಯೋ ನುಡಿಯೋ ಶಿವನಾಮವನು

ನೆನಪಿರಲಿ ಮಾನವ ಮುಂದಾಗುವದು ನಿನ್ನದರುಷ್ಟವ

ನೋಡಿ ಭಜಿಸೊ ಮಾಂತೇಶ್ವರ ಲಿಂಗ

ನೋಡು ನೋಡಮ್ಮಾ ವಿಶ್ವ ತಾ ಪರಬ್ರಹ್ಮಾ

ನೋಡೆ ಆತಪವಾರ್ಧಿ ಇದ್ದದ್ದು ಇಲ್ಲದ್ದು

ನಿರ್ಬಯಲೊಳು ಹುಸಿ

ನ್ಯಾಯ ಹೇಳರಿ ಮಾನಾಡ ದೈವ

ಪಡಿವೆನೆಂದಿಗೆ ಮುಕುತಿಯನು ಯಂಬುವನವನು

ಪರಸ್ತ್ರೀಯರ ಸಂಗ ಮಾಡುವದು ಪುಣ್ಯವೇನೊ

ಪಾಮರ ಜನ್ಮ ಇದು ಬಲು ಖೊಟ್ಟಿ

ಪಾಮರತ್ವವು ಬ್ಯಾಡ ಆತ್ಮರಾಮ

ಪೂಜವೇನೆಲೊ ನಿನ್ನ ಪೂಜವೇನೆಲೊ

ಪೂರ್ಣ ಪಾತ್ರ ದೀಪ ನಾನು

ಫಕೀರನಾಗಬೇಕೆಂದರೆ ಈ ಮನ

ಫುಗಡಿಯ ಹಾಕತೀನಿ ಈತನ ಗೂಡ

ಬಂಗಾರ ತೊಟ್ಟಿಲ ಬೆಳ್ಳಿಯ ಸರಪಳಿ

ಬನ್ನಿಕೊಪ್ಪ ಹೆಂಗಸರು ಏನ ಠಕ್ಕ

ಬಯಕೆ ತುಂಬಿದ ಭಾವ

ಬಯಲ ಬಯಲ ರೂಪ ಮಾಯ

ಬಯಲು ಬೆರಸ ಬೇಡಲೊ ಆ

ಬರಬಾರದಿತ್ತೊ ಹಿಂತಾ ಊರಿಗೆ

ಬಲುಬಿರಿ ಧಾವತಿ ಭವ ದಾಟೋದಕ

ಬಲ್ಲಪ್ಪ ದೊಡ್ಡಪ್ಪನ್ಯಾರೋ ಎಲ್ಲಾ ತೋಲ್ತಾಳಿದವರೊ

ಬಲ್ಲೆ ಬಲ್ಲೆ ಬಲ್ಲೆನೆಂಬಿಯಲೆ ಆತ್ಮ

ಬಲ್ಲೆನೆಂದು ಬಹಳ ಶಾಸ್ತ್ರ

ಬಾಬಾ ಭಲೆ ಭಾವಕ ಹೆಣ್ಣಾ

ಬಾಯಿಲೊಂದು ಆಡ್ತೀರಿ

ಬಾರಯ್ಯ ಬಾರಪ್ಪ ಬಾ ತಂದೆ

ಬಾಳೀರಿ ಗುಣವಂತರು ಭಾಳ ಸಂತೋಷ

ಬಿಟ್ಟೆಲ್ಲ ನಡೆದೆಲ್ಲೊ ಸಂಸಾರ ತಮ್ಮಾ

ಬಿಡು ಬಿಡು ಬಿಡು ಇಂಥ

ಬಿಡು ಬಿಡು ಬಿಡು ಬಿಡು ಮನಸಿನ ಚಿಂತಿ

ಬುಡಕಡಿಯಿಲ್ಲದ ನಿಕ್ಕಲ ನಿಂಗವ್ವ.

ಬೇಗ ನೀ ಸೇರು ಹೊಗೋ ಗೊತ್ತು

ಬೊಗಳಿದರೇನಾಗವದೊ ಬೊಗಳಿಸಿ

ಬ್ಯಾಡ ಹೋಗಲೆ ಪ್ರಾಣಿ

ಬ್ಯಾರ್ಯಾದೆನವ್ವ ತಂಗಿ ಬ್ಯಾರ್ಯಾದೆನವ್ವ.

ಬ್ರಹ್ಮಯೆಂಬುವದು ಬ್ಯಾರಿಲ್ಲ

ಬ್ರಹ್ಮೇತಿ ಬ್ರಹ್ಮೇತಿ ಈ ಬ್ರಹ್ಮಾಂಡಿರು ಪರ್ಯಂತರ

ಭಂವಸೈ ಆಡಿದೆನಾ

ಭಯವ್ಯಾಕೊ ಮಗನೇ

ಭಲೆರೆ ಭಲೆರೆ ಭಲೆ ಬ್ರಹ್ಮಾಂಡೆ ನಿನ್ನ

ಭಲೆರೆ ಭಲೆರೆ ಭಲೆ ಶ್ರೀಗುರುವೆ

ಭಲೆರೆ ಮಾಯ ಬಲಿಸಿದಿ ಕಾಯಾ

ಭಲೆರೆ ಹುಡುಗ ಹೌದ್ಹೊಡದಿ

ಭವ ಬಂಧವು ಬೇಕಾಗಿ ಮುಕ್ತಿ ತಾ ಬೇಡುವ

ಭವ ಮಾಲಿ ಎನಿಸುವ ಭವ ನೋಡೊ ಮನವೆ

ಭವ ಗೆಲಿಸುವ ಗುರುವಿನ ಕೂಡೊ

ಭಾವ ರುದ್ರಕ್ಕಿಗೆ ನಿರ್ಲಕ್ಷವೆ ಲಕ್ಷ

ಭವಹರ ಶಂಕರ ಸಾಂಬ ಸದಾಶಿವ

ಭಾವ ಭವ ಭವ ಭಾವ

ಭಿನ್ನ ಮಾಡಿ ಮರತ

ಭುವನದ ಮಾನವರ್ಯಾಂಗಿರಲಿ ಮಹಾನುಭಾವರ್ಯಾ

ಭೂವರ ಗ್ರಹಕರ ಮನಿಯೆಂಬಿರಿ

ಭೂಪತಿಗಳ ಮೆಚ್ಚಿ ಅರಸುಖಃ ತನಗಾಯ್ತು

ಮಂಗನ ತೆರದಲಿ ಕುಣಿಯುವುದು ಮನವು

ಮಂಡಲದೊಳಗೆ ಈ ಮಂದಿ ಮಾಡುದು ಕಂಡು

ಮಗನೊಂದು ಹಡೆದೇನಲ್ಲ

ಮಚ್ಚಿಲಿ ಮಚ್ಚಿಲಿ ಹೊಡಿರಿವಗ

ಮತಿಗೆಡದಿರು ಮರ್ತ್ಯ ದಲಿ

ಮನವು ನೆನವು ಘನವದಾವುದೋ

ಮನವು ಎತ್ಹೋದರ್ಹೋಗಲಿ ಜೀವೆ

ಮರಣ ಬಂದರೇನು ಸಿಟ್ಟಿಲ್ಲಾ

ಮಹಾಂತ ಮಹಾಂತಯೆನ್ನಿ

ಮಾಡಿ ಉಣ್ಣೋ ಬೇಕಾದಷ್ಟು.

ಮಾಡಿ ಕೆಟ್ಟರೋ ಮಾಡಲ್ದೆ ಕೆಟ್ಟರೊ

ಮಾಡುವದ್ಯಾತಕೋ ನೀ ಅವಿಶ್ವಾಸವ

ಮಾಡೊ ನಿದ್ರಿಯ ಶಶಿಮೌಳಿ

ಮಾಡೋ ನಿ:ಕಾಮದ ಭಕ್ತಿ

ಮಾನಗೇಡಿ ಮಂದಿ ಹುಟ್ಟಿ ಮರ್ತ್ಯಾ ಕೆಡಿಸ್ಯಾರೊ

ಮಾನ್ಗೇಡಿ ಸೂಳೆ ಮಕ್ಕಳ್ಯಾವೆಲ್ಲಿದ್ದಾರೋ

ಮಾಯಪುರದ ಅರಸು ತಾ

ಮಾಯಿ ಜ್ವಾಲ ಅಳದವನ ಮಾತ ಕೇಳೋದ್ವಾಜಿಮಿ

ಮಾಯಿ ಯಾವದ್ಹೇಳೋ ಶಾಸ್ತ್ರೀ

ಮಾಯಿನ ಕುಣಿಸಿದನೆ ಪ್ರಭು ತಾ

ಮಾಯಿನ ಬಿಟ್ಟೇವೆಂದು

ಮಾಯೆ ತಾ ತನ್ನರಿವು ಅರಿಯದಲ್ಲ

ಮುಡಚಟ್ಟಿನೊಳು ಬಂದು ಮುಟ್ಟೀತಟ್ಟೀ ಅಂತಿರಿ

ಮುದ್ಧ ಬಾಳಿಯ ರಂಗ ಎದ್ದು ಬಾರನು

ಮುಲ್ಲನುದಯದಿ ಮಸೂತಿಯಲಿ ನಿಂದಲ್ಲಲ್ಲಲ್ಲೆಂದರಲ್ಲಿಲ್ಲ

ಮೂಕನಾಗಬೇಕು ಈ ಜಗದೊಳು ಜ್ವಾಕ್ಯಾಗಿರಬೇಕು

ಮೂರು ಸಮಯದೊಳು ಶಿವ

ಮೂಲ ಹೇಳತಿನಿ ನಾ ಮೂಲ ಹೇಳತಿನಿ

ಮೃಢ ಮಹಾಂತೇಶನ ಬೆಡಗಿನ ನಿಜಸುಖ

ಮೋಕ್ಷ ಅಪೇಕ್ಷಾದವ ಗುರುವಿನ್ಯಾಕ ಹುಡುಕ

ಮೋಹ ತೀರಲಿಲ್ಲ ಮಗನಿಗಿ

ಯಾಕ ಚಿಂತಿ ಮಾಡತಿದಿ ಎಲೆ ಮನವೆ

ಯಾಕ ಮಾಡತಿದಿ ಒಣ ಚಿಂತಿ

ಯಾಕಪ್ಪಾ ಏನು ಬೇಕಪ್ಪಾ

ಯಾಕಿನ್ನು ತಿಳಿವಲ್ಲೆ ಭಾರಿಗೆ

ಯಾಕೆ ಭವ ಸಾಗರಕೆ ಬಂದೆಣ್ಣ

ಯಾತರ ಕಟಿಪಿಟಿ ಒಂದಿನ ಹೋಗುದು ಲಟಿಪಿಟಿ

ಯಾವನೋ ಮಹಾ ಮಹಾಂತ

ರೂಪ ನಿರೂಪದೊಳಿರ್ದ ಮಾಂತನ

ಲಲನೆ ಬಾ ನಮ್ಮ ನಿಲುವದೊರಿದ ಗುರು

ಲಾಲ ಬಿಲಾಲದ ಬಾಲ ನಿಜದಾಲಯದೊಳಗನುಗಾಲ

ವಾಯಿ ಇಲ್ಲದೆ ಬಂದೆವು ಎನ್ನಲು

ವಿಘ್ನೇಶಗೆ ಮಂಗಳಾರ್ತಿ ಬೆಳಗುವೆ. ಮಹಾಮೂರ್ತಿ

ವಿರಕ್ತರಪ್ಪ ಜಂಗಮರಪ್ಪ ಕೇಳಲಾಕ

ವೃಷಭ ಧ್ವಜಾರುತಿ ಬೆಳಗುವೆ ನಾರಿ

ಶರಣೆಂಬೆ ಸರಸ್ವತಿಯೆ

ಶಿವ ಶಿವ ಎನ್ನಿರಿ ಶಿವನಾಮ ಸ್ಮರಣಿಯ

ಶಿವ ಶಿವ ಶಿವ ಶಿವ ಅನುವಲ್ಲಿ

ಶಿವ ಶಿವ ಶಿವ ಶಿವ ಶಂಭೋ

ಶಿವ ಶಿವ ಶಿವ ಶಿವ ಶ್ರೀ ಮಹಾದೇವ

ಶಿವ ಶಿವ ಶಿವ ಶಿವ

ಸದಾ ಸ್ಮರಣಿಯ ಶಿವನಾಮವೋ

ಶಿವನಾಮವ ಸ್ಮರಿಸೊ

ಶಿವನೇ ನೀ ಬಿಡದೆನ್ನೆ ಕಾಯೊ

ಶೀಲವಂತರು ಇವರು ಶಿವಭಕ್ತರೆ

ಶ್ರೀ ಗುರುವಿನೊಲಿಸುವ ಸಾಧನ ಸುಮ್ಮನ್ನಲ್ಲ

ಷಟಸ್ಥಲ ಒಂದಾಗೋ ಸಮಯಕೆ

ಸತ್ತು ತಿಳಿಯೊ ಗೊತ್ತು ಎತ್ತ ನೋಡಿದರಿತ್ತು

ಸರ್ವರ ಸಮದೃಷ್ಟಿಸುವದೊ

ಸರ್ವೇಶ್ವರನೆ ಸರ್ವಾದುದ್ದೆಲ್ಲ

ಸವತಿ ಕೇಳ ನಿನ್ನ ಸಲಿಗಿ ಛೊಲೋದಲ್ಲಗ

ಸಾಂಬ ಸದಾಶಿವ ಕಾಯೋ

ಸಾಕಾಯಿತು ಈ ಊರವ್ವ ಭಾಳ ಜ್ವಾಕಿಲಿ ಹೋಗನು

ಸಾಕಾಯಿತು ಈ ಊರವ್ವ ಪರದೇಶಕೆ ಹೋಗನು

ಸಾಕು ಸಾಕು ಸಾಕು ಸಾಕವ್ವ.

ಸಾಕ್ಷಾತ ಸದ್ಗುರು ಪ್ರತ್ಯಕ್ಷವಾಗಲು

ಸಾಕ್ಷಿ ತಿಳಿಯೋ ನಿಜದಾ ಓ ವಾದೀ

ಸಾವೇ ಹುಟ್ಟಿತು ಸಾವೇ ಬೆಳೆಯಿತು ಸಾವೆ ಸತ್ತಿತ್ತು

ಸೀರಿ ಬಿಟ್ಟು ಉಟ್ಟುಕೊಳ್ಳವ

ಸುಳ್ಳ ಸುಳ್ಳೆ ಸುಳ್ಳೋ ನೀ ಮಾಡಿದ್ದೆಲ್ಲ

ಸುಳ್ಳೆ ಹಾಳ ಮನಿಗೆ ನ್ಯಾಯ ಮಾಡಲಿ ಬೇಡೊ

ಸುಳ್ಳೆಂಬುವರಿಗೆ ಹೊಯ್ಯಿ ಬಾಯಿ ಮೇಲೆ

ಸೈ ಶಬಾಶ್ ವಾಯು ಕೃತಿದೇವಿಯ ಗಂಡ

ಸ್ವಪ್ನ ಸುಖದ ಸ್ವಲ್ಪು ಮಾಯಿ

ಸ್ವಯಂಜ್ಯೋತಿ ತನ್ನ ಬೆಳಗೆ

ಸ್ವಯವಾಗದಗಣಿತ ಭವ ಭಾವ

ಹರ ಮುನಿದರೆ ಗುರು ಕಾಯುವನೆಂದು

ಹರ ಹರ ಹರ ಮಂತ್ರ

ಹರಿಯು ಬ್ಯಾರೆ ಹರನು ಬ್ಯಾರೆ

ಹಾಟ್ಯಾ ಹಾಟ್ಯಾನುಬ್ಯಾಡ ಹಾಟ ಸಣ್ಣದಲ್ಲ

ಹಾಡೋದೆ ಹಾಡು ನೀ ಕಿಸಬಾಯಿ ದಾಸ

ಹಾಲ ಹರವಿ ಒಯ್ಯುವದ್ಯಾಕೊ

ಹಿರಿದು ಕಿರಿದಾವದೊ

ಹುಡುಕಿಕೊಳ್ಳೊ ಮಹಾಜ್ಞಾನ ಅದು ನಿನ್ನ ಖೂನ

ಹುಸೇರಿ ಮನುಷ್ಯಾರೇ ದರೋಡಿ ಬರತಾದ

ಹೆಂತಾ ಬುದ್ದಿವಂತಾಗಿರದಂತಾರಲ್ಲಾ

ಹೇಲು ತಿನ್ನುವ ಹೆಂಡಿ ತಿಂಬುವ ಸುಧೆಗೆ

ಹೇಸವ್ವ ಬಾಸವ್ವಾ ಮಾಯಾ ಸಂಸಾರ ತಿಳಿಸವ್ವ.

ಹೊರಸೊಂದು ಹೆಣೆದೇನ ತಂಗಿ ನಾ

ಹೋಗದಿರು ಅವರಲ್ಲಿ ಹೋಗಿ ಕೂಡದಿರು

ಹೌದಪ್ಪ ಹೌದು ದೇವರು ನಿಂದು

ಹ್ಯಾಂಗ ಭ್ರಾಂತಿ ನಿಗುತಿ ನೀ

ಹ್ಯಾಗೆ ತೀರಿತು ನಿನ್ನುಪಕಾರ

ಹುಷೇರಿ ಮನುಷ್ಯ ದರುಡಿ ಬರುತಾದ

ಅಂತಃಕರುಣಿ ನೋಡಮ್ಮ ಗುರುರಾಯ

ಅಪ್ಪ ಕೇಳಪ್ಪ ಹೇಳಪ್ಪ

ಅಯ್ಯೊಯ್ಯೊ ಮೂಗತಿ ಕಳಕೊಂಡೆ

ಅರಿದು ನೋಡೋ ಮಾನವಾ

ಅಳಿಯನ ಕಾಲ್ಗುಣ ತಾಗಿ

ಆಕಿನೆ ಇಲ್ಲದಂಗಾಯ್ತಪ್ಪ ಮತ್ತು

ಆಲಿಸವ್ವ ಮಗನ ಮಾತ

ಆಹಾ ಗುರುದೇವ ಬಂದು

ಇದು ಏನು ಮೂಲಾದಿತು ಕೋಣ

ಇನ್ಯಾತಕ ಬರಲಿ ನಿಮ್ಮೂರಿಗೆ

ಇವ ನೋಡ ಎಂತ ಮಗನವ್ವ

ಈ ಕಲ್ಲು ಕರಗುವದಕ್ಕೆ

ಎಂಥ ಕುದುರೆ ಕೊಂಡುಕೊಂಡು ನಾ ಬಂದೆ

ಎಂಥ ಮಾತು ಕೇಳಿದನಪ್ಪ ಅಬ್ಬಾ ಇಂವ

ಎಂಥಾ ದಯಾಳು ಗುರುವು ನೀ

ಎಂಥಿಂಥವರ ಹುಟ್ಟ್ಯಾರ ಇವರಿಗಿ ಏನಂತ ಕರಿಯಬೇಕರೊ

ಎಚ್ಚರಿರಬೇಕು ಎಲ್ಲಪ್ಪ ನೀ ಎತ್ತ ಹೋದೆ ಎನ್ನ ಹಡದವ್ವ

ಎತ್ತ ಹೋದೆ ಎನ್ನ ಹಡದವ್ವ

ಎನಗೆ ಬಡದಿತವ್ವ ಶಿವಶರಣರ ಮನಿಯ್ಯಾನ ದೆವ್ವ

ಎನ್ನ ಮನ ಮುರಿದು ಹೋದ ಮೇಲೆ

ಎಲ ಎಲ ಎಲ ಹುಟ್ಟಿ ಏನು ಪಡದಿ

ಎಲೋ ಮನುಜ ನಿಂದೆಲ್ಲಿದಾವ ಠಿಕಾಣಿ

ಎಲವೋ ಎಲವೋ ದಿನ ಬಂತು

ಏಕ ನಾಥನ ಗುರ್ತ ಯಾಕ ಹಿಡಿಯಲಿಲ್ಲ

ಏನು ಮಾಡಲಿ ಶೋಧ ಎನಗ ತಿಳಿವಲ್ಲದು

ಏನೇನು ಬರುವದು ಬರಲಿ ನಮಗ್ಯಾತರ ಹರಲಿ

ಒಬ್ಬ ಗಂಡನಾಗವ್ವ ಮತ್ತೊಬ್ಬನ ನೀಗವ್ವ

ಕರ್ಪೂರದಾರುತಿ ಬೆಳಗುವೆನು ಆತಗೆ

ಕರುಣಿಲ್ಲವು ಶ್ರೀಗುರು ದಾತಾ

ಕುದರಿ ನೆಲಿಯ ಹತ್ತಿಲ್ಲಪ್ಪ ಮಮ್ಮಟಳಿಯಾಗ

ಗಂಡನ ಮಾಡಿಕೊಳ್ಳಬೇಕವ್ವ

ಗುರು ಪಾದ ಭಜನಿ ಮಾಡೆಲೋ ನೀನು

ಗುರು ಭಕ್ತರಲ್ಲ ಇವರು ಗುರು ಭಕ್ತರಲ್ಲ

ಗುರುವಿನ ಮಗನಾದ ಗುರುತವ ತಿಳಿಬೇಕು

ಗುರುವಿನ ಮರಿಬ್ಯಾಡ ಗುಣಗೇಡಿ

ಗುರುವಿನಾ ದಯ ಪಡೆದವನಿಗೆ ಭವ

ಛೇ ಹೋಗ ಯಾತರ ಜನ್ಮವು ನಿನ್ನದು

ಜನ್ಮಕ ಬಂದೇನು ಗೊತ್ತಿಲ್ಲ ನಿನಗ

ಜಯದೇವ ಜಯದೇವ ಜಯದೇವ

ಜಯದೇವ ಜಯದೇವ ಜಯ ಅತಿಹಿತ ಪಾತ್ರ

ಜಯದೇವ ಜಯದೇವ ಜಯಜ್ಞಾನ ಧಾಮ

ಜಯದೇವ ಜಯದೇವ | ಜಯ ಜಯ ಗುರುವೀರ

ಜಯದೇವ ಜಯದೇವ ಜಯ ಸದ್ಗುರು ರಾಯ

ಜಯದೇವ ಜಯದೇವ ಜಯ ನಿರ್ವೀಕಾರ

ತಾ ಪಡದಿದ್ದು ತನ್ನ ಸಂಗಾಟ

ತ್ರಾಹಿದೇವ ಜಯ ಜಯ ತ್ರಾಹಿದೇವ

ತಿಳಕೊ ಮೈ ತೊಳಕೊ

ತಿಂಡಿಲಿಂದೆ ಹಾದರ ಮಾಡಿ

ನಂಬಿಗುಳ್ಳ ನಾಯಿನ ಸಾಕರಿ

ನಾ ಕಡಕೋಳದ ಗುಲಾಮ

ನಾಚಿಕಿಲ್ಲೋ ಭಾಡ್ಯಾ ನಮಗ್ಯಾಕ ತಡವತಿ

ನಾನು ಒಂದು ಕೌತುಕ ಕಂಡೇನು

ನಾನೇ ಗೌಡತೆವ್ವ ಈ ಊರಿಗೆ ನಾನೆ ಗೌಡತೆವ್ವ

ನಿಮ್ಮೂರಿಗೆ ನಾವು ಬರಬೇಕಾದರೆ

ನಿರಾಳ ನಿರ್ಗುಣ ನೀ ನಿರುಪಮ ಘನ

ನಿಶ್ಚಿಂತನಾಗ ಬೇಕಂತಿ | ಬಹಳ

ಪ್ರಪಂಚ ನೆಂಬುವದು ಬಹು ಕಷ್ಟ

ಫಿರಕಿ ಹೊಡಿಯಬ್ಯಾಡ ಪೀರವ್ವ

ಬಂಗಾಲಿ ಸಂತಿ ಭಾಳ ಗಡಿಬಿಡಿ

ಬಸರಿಲ್ಲದ ಮಗನ ಹಡದವ್ವ

ಬಾಲನೇನೊ ನೀ ಬಾಲನೇನೊ

ಬೈಲ ಬ್ರಹ್ಮವು ಕೇಳಿರಣ್ಣ

ಬ್ರಹ್ಮ ಮಾಡಿದ ಮನಿಯೋ

ಭಲೆ ಮಾಯಿ ಗಂಟ ಬಿತ್ತಪ್ಪ

ಭಾಗೀರಥಿ ವರವು ಬೇಡಿದೆ ನಿನ್ನ

ಮಂಗಲ ಜಯ ಮಂಗಲ

ಮಂಗಳಾರುತಿ ಮಾಡುವೆ ಹರಾ

ಮುಂದ ನೋಡಿ ಬದಕ ಮಾಡ ನೀ ಮೂಳ

ಮರಗಿ ತಾರಿಸಮ್ಮ ತಾಯಿ

ಮೊಸವಾದೀತೊ ಇಂದಿಗೆ ಬಂದು

ಯಾತರ ಮಾತು ಹೋಗರೆವ್ವ ನಿಮ್ಮದಲ್ಲ

ಲಾಚರಗೆಟ್ಟಿತು ಸರಕಾರ ಮುಂದಿನ

ಶಿವಶಿವ ಅನ್ನುವಲ್ಲಿ ಏನಾದೋ

ಸ್ವಾಮಿ ಶ್ರೀ ಗುರುವರ ದೇವಾಗೆ ಮಂಗಲ

ಹಿಡಿ ಹಿಡಿ ಗುರುಪಾದವ್ವ ತಂಗಿ

ಹೆಂಡತಿ ನೋಡಣ್ಣ ಈಕಿ ನನ್ನ ಹೆಂಡತಿ ನೋಡಣ್ಣ

ಹಾದರ ಕಲಿತೇನ ಎಂಥಾದೋ

ಹುಚ್ಚೇರಿತು ನಾಯಿಯ ಹಿಂಡು

ಹೊತ್ತು ಗಳೆಯುವದೇನು ಪಾಡಪ್ಪ

ಅಂಗದೊಳಗ ಶಿವಲಿಂಗ ಮೂರುತಿ ಹಾನ

ಅಲ್ಲೆನಾದೊ ಇಲ್ಲೆ ನೀ ನೋಡೊ

ಆಡೋ ಆಡೋ ಆಲಾಯಿ ಆಡೋ

ಆಹೋ ಈಗ ಇಲ್ಲಹ್ದೋಯಿತು ಜ್ಞಾನವೆ

ಇಂತು ಷಡಕ್ಷರಿ ಮಂತ್ರ

ಎಂಥ ಎತ್ತು ಕೊಂಡು ಕೊಟ್ಟ ನಮ್ಮ ಮಾವ

ಎಂಥ ಕಳ್ಳನವ್ವ ಈ ಊರ ಗೌಡ

ಏನು ಪೂಜಕೆ ಒಯ್ಯಲಿ ಚಂದ್ರನಗರಿಗೆ

ಕ್ಷಿತಿಯೋಳು ರಥ ಎಳೆಯುವುದು ಕಂಡೆ

ಗುರು ನನ್ನ ಮಡಿವಾಳ

ಗುರುವಿನ ಮಗನಾಗಿ ಅರವಿನೊಳಾಡಿದರೆ

ಚಿಣಿಯನಾಡಿದೆನೊ ಪರಬ್ರಹ್ಮಕ

ಜೋ ಜೋ ಜೋ ಜೋ ತಿನಬಾಳ

ತನುಮನದೊಳಗಾಡುವ ಪಗಡಿ

ತಿಳಿ ತಿಳಿ ಒಳ್ಳೆ ಜ್ಞಾನ ತಿಳಿ

ನಾನರಿತ ಮಾತು ಮರವಿ ಜನದ ಮನಕೆ

ನಾ ಹ್ಯಾಂಗ ಮಾಡಲೆವ್ವ ಬಾವುಗಾ

ನಾನೆ ನೀನೊ ನೀನೆ ನಾನೊ

ನೀ ನಿದ್ರಿಯ ಮಾಡೋ ಮಡಿವಾಳ

ಲಿಂಗಪೂಜೆಯ ಮಾಡಲಿಲ್ಲಲ್ಲೋ ಮಂಗ

ಶಿವನು ಸಿಕ್ಕನು ಕೈಸೆರಿಯೋ

ಸೋಬಾನವೆನ್ನಿರಿ ಸೋಬಾನವೆನ್ನಿರಿ

ಹಾಲ ಕಾಸವ್ವ ತಂಗಿ ಹಾಲ ಕಾಸ

ಆತ್ಮವ ತಿಳಿಯದೆ ಅನುಭವ ಹೇಳುವವ

ಎಷ್ಟು ತೊಳಿಯಲಮ್ಮಾ ಮನಸಿನ ಮೈಲಿಗಿ ಹೋಗದಮ್ಮ

ಎಷ್ಟು ನಿನಗ ಭ್ರಮಿಯೊ ನಿನ್ನ

ಏನು ಜಗಸ್ತಾಳೊ | ಈಕಿ

ಕರೆಸಿಕೊಳ್ಳುವೆ ನಿನಗೊಮ್ಮೆ ನನ ಎಮ್ಮೆ ಬಾ ಬಾ

ಗುರು ಸೇವಾ ಮಾಡಬಾರದೇನು

ಜೀವ ಇರುವ ತನಕ ಖರೇ ಆಡಬೇಕೊ

ದಾರಗೊಡವಿ ನಮಗೇನಾದರಿ

ದೇವ ಬೇಡಿಕೊಂಬುವೆ ದಯಮಾಡೊ

ನಾ ಏನು ಬಲ್ಲೇನಪ್ಪ ನಿಮ್ಮ ಕೂಸ

ನಾನಾ ಜನ್ಮವು ತಿರುಗಿ ಮಾನವ ಜನ್ಮಕೆ ಬಂದು

ನೂರು ಮಾತುಗಳನಾಡುವದ್ಯಾಕೊ

ಬರಬಾರದು ಬಂದೇವು ಕುಡಗಾನೂರಿಗೆ

ಭಲೆರೆ ಹುಡುಗ ಬಲು ಬಂದ್ಯೊ ನೀನು

ಮನಸಾದಪ್ಪ ಇದು ಬಹಳ ಬೆರಕಿ

ಯಾತಕ ಬೇಕಂತಿ ನಾಳಿಗೆ

ಶಿವ ಶಿವ ಶಿವ ಅಂತೀರಿ

ಶಿವ ಶಿವ ಶಿವ ದೂರಿಲ್ಲ | ಅಂವ

ಅಜ್ಞಾನೆಂಬುದು ಅಮವಾಸಿ

ಜಂಗಮನಾಗಬೇಕಾದರೆ ಮನ

ಸಬ ಕಹತೆ ಈಶ್ವರ ಅಲ್ಲಾ.