ಚೇಳು ಕಡಿದಾ ನೋವು ನೋವೆ?
ನಿನ್ನ ವಿರಹದ ನೋವು ನೋವೆ?
ಅಯ್ಯೊ ವಿರಹದ ನೋವನೊಂದು
ಗಳಿಗೆಯಾದರು ಮರೆಸಿತಿಂದು:
ಚೇಳು ಕಡಿದಾ ನೋವೆ ನನಗೆ
ತಣ್ಪು ಸೊಗವಾಯ್ತು!
ಕೊಂದೆನೇತಕೆ ಚೇಳನಯ್ಯೋ
ಎಂಥ ತಪ್ಪಾಯ್ತು!

೧೭. ೧೦. ೧೯೩೮