.ರಾಗಮಧ್ಯಮಾವತಿ; ತಾಳ

ಶರಣಾಗು ಸಂಪೂರ್ಣ | ಶರಣು ಜಿತಾರ್ಣ
ಕರುಣಾಮೃತಾ ಕೀರ್ಣ | ಕರ ನೀಲವರ್ಣ ||ಪಲ್ಲವಿ||

ಅತಸೀಕುಸುಮಗಾತ್ರ | ಅರವಿಂದನೇತ್ರ
ಚತುರಾಸ್ಯನುತ ಚಿತ್ರ | ಚಾರು ಚಾರಿತ್ರ ||
ಧೃತ ಗೋವರ್ಧನ ಗೋತ್ರ | ದಿವಿಜೇಂದ್ರ ಸ್ತೋತ್ರ
ಶತಯಾಗ ಸುತಮಿತ್ರ | ಸೌಪರ್ಣ ಯಾತ್ರ ||೧||

ಸ್ವರಕೋಟಿ ಲಾವಣ್ಯ || ಪುರಜಿದ್ವರೇಣ್ಯ
ಪುರುಹೂತಾದಿ ಶರಣ್ಯ | ಪುರುಷಾಗ್ರಗಣ್ಯ ||
ದುರಿತಮಹ ರೇಣ್ಯ (?) ದಾನ ಸಾದ್ಗುಣ್ಯ
ಪರಿಣತ ಲಾವಣ್ಯ | ಪರಮ ಕಾರುಣ್ಯ ||೨||

ಕಮಲ ರಮ್ಯ ವಿಲಾಸ | ಕೌಸ್ತುಭೋದ್ಭಾಸ
ಕಮನೀಯ ಸುವಿಭೂಪ | ಕರಪೀತವಾಸ ||
ಅಮಿತೇಂದು ರುಚಿಹಾಸ | ಆದಿಶಂಖೋಲ್ಲಾಸ (?)
ಸುಮನಸ ಪುರಾವಾಸ | ಪಾಹಿ ಲಕ್ಷ್ಮೀಶಾ ||೩||

 

. ರಾಗನಾಟ ; ತಾಳ

ಜಯ ಜಯ ಕೃಪಾಂಬುಧಿಯೆ | ಜಯ ಸುಗುಣ ಶರನಿಧಿಯೆ
ಜಯತು ಸಂಶ್ರುತ ನಿಧಿಯೆ || ವಿಮಳ ಸುಧಿಯೇ || ಪಲ್ಲವಿ ||
ಜಯಸಮಸ್ತೋಪಧಿಯೆ………………
ಜಯ ಜಯತು ಸಲಹೆನ್ನ ಸೌಭಾಗ್ಯ ನಿಧಿಯೆ ||ಅನು||

ಶ್ರುತಿನುತಿ ಪ್ರಖ್ಯಾತ | ನತನಿರ್ಜಿತವ್ರಾತೆ
ಸತತ ಸತ್ಸಮಿತೆ ವರ ಸೌಖ್ಯಪ್ರದಾತೇ ||
ರತಿಪತಿಪಿತ ಪ್ರೀತೆ ರತುನ ಕರ ಸಂಜಾತೆ ||
ನುತಿಸಲೆನ್ನಳವೆ ನಿನ್ನನು ಲೋಕಮಾತೆ ||ಜಯತು||||೧||

ವಿಗಡ ವಿಶ್ರುತ ಮಾಯೆ | ತ್ರಿಗುಣಾನ್ವಿತ ವಿಡಾಯೆ |
ನಿಗಮ ನಿರುತೋಪಾಯೆ | ನಿತ್ಯೆನಿರಪಾಯೆ ||
ಜಗನಮೋಹನ ಕಾಯೆ | ಅಗಣಿತೋಪಮದಾಯೆ
ಪೊಗಳಲೆನ್ನಳವೆ ನಿನ್ನನು ಲೋಕ ಮಾತೇ || ಜಯತು ||  ||೨||

ಪರಮಶಕ್ತಿ ಗುಣಾಢ್ಯೆ | ನಿರುತಾಗ ಮಾವೇದ್ಯೆ
ಸ್ಮರನ ಪೆತ್ತತಿ ಚೋದ್ಯೆ | ಸೌಖ್ಯಪ್ರದಾದ್ಯೆ ||
ಸುರಗನಗರದಧಿನಾಥ | ವರಲಕ್ಷ್ಮೀಕಾಂತನಾ
ಅರಸಿ ಸಿರಿ ಮಾ ಲಕ್ಷ್ಮಿ ಭವರೋಗವೈದ್ಯೇ ||ಜಯತು||||೩||

. ರಾಗನಾಟಿ ; ತಾಳ

ಭಜಿಸಿರೋ ಮನದಣಿಯ | ಸುಜನಾಬ್ಜ ದಿನಮಣಿಯ
ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ || ಪಲ್ಲವಿ ||
ರಜನಿಚರಗುಣಶ್ರೇಣಿಯ (?) | ಅಜಭವ ಸುರಾಗ್ರಣಿಯ
ತ್ರಿಜಗ ಮೋಹನ ಮಣಯ | ಸೊಬಗಿನ ಕಣಿಯ || ಅನು ||

ಪೊಳೆವ ಮಕುಟದ ಫಣೆಯ | ತಿಲಕದಲಿ ರಂಜಿಸುವ
ಪ್ರಣವ ಗೋಚರ ಸುಧಾ | ಮಯದ ಕದಪಿನಲಿ ||
ತೊಳಪ ಕುಂಡಲದ ನಾ | ಸಿಕದ ಮೂಗುತಿಯೆಸೆಯೆ
ಸುಲಿಪಲ್ಲ ನಗೆಮೊಗದ | ಸುಲಭಸೌಂದರನ ||೧||

ಪದಕಮಣಿಮಯ ಮೌಕ್ತಿ | ಕದ ಹಾರ ತ್ರಿಸರ ಕಂ
ಧರ ವೈಜಯಂತಿ ಯೊಲ | ವಿನ ಬಾವುಲಿ ||
ಮುದದ ಕಂಕಣ ಕರದ | ಮುದ್ರೆಯೆಸೆವಾ ಬೆರಳ
ಗದೆ ಸುದರ್ಶನ ಕಂಬು | ಮದನ ಶರಧರನು ||೨||

ಉರದ ಪೊಂಬಣ್ಣ ದಂ | ಬರತರಣಿ ಶತಕೋಟಿ
ಕಿರಣತ್ರಿಶಿ (?) ಕುಮುದ ವ | ರ್ಣದ ತನು ರುಚಿಯಾ ||
ಹರ ಸುರೇಶ್ವರವಿರಂ | ಚ್ಯೌದಿ ವಂದಿತ ಚರಣ
ಸರಸಿರುಹ ವರದೇವ | ಪುರದ ಸಿರಿವರನ

ಸಿರಿಯ ಕರಾಬ್ಚ ಪರಾಗದಿಂ ರಂಜಿಪ
ಸರಸಿಜ ಕುಂಕುಮ ರಜರಮ್ಯವೆಂದೆನಿಪ ||
ನಿರುತ ಯೋಗೀಂದ್ರ ಹೃತ್ಕಮಲವನರಳಿಪ
ತರುಣಾತಪದ ಕಾಂತಿಯೆನೆ ಕಂಗೊಳಿಪ ||

ವರಶ್ರುತಿ ಸೀಮಂತ ಸಿಂಧೂರವೆನೆ ತೋರ್ಪ
ಉರು ಕಾಳಿಯ ಫಣ ರತುನಾರತಿ (?)ಯೆನಿಪ ||
ಸುರುಚಿರ ಶೋಣಪ್ರವಾಳವ ಸೋಲಿಪ
ಅರುಣಾಂಬುರ ಹದಂದದಿ ಥಳಥಳಿಪ || ಐಸಿರಿಯ || ಪ ||

ಚರಣ ತಳಂಗಳೊಪ್ಪುವ ತನಿ ಕೆಂಪಿನ
ಶರಣ ಚಿಂತಾಮಣಿಯ ನಸುಗೆಂಪಿನ
ಧರಣಿಯ ನೀರಡಿ ಮಾಡಿದ ಪೆಂಪಿನ
ಕರುಣದಿ ಕಲ್ಲ ಪೆಣ್ಮಾಡಿದ ಸೊಂಪಿನ
ಅರ ಶಂಖ ಪದ್ಮ ರೇಖಾಂಕಿತದಿಂಪಿನ (?)
ಕುರುನೃಪಗರ್ವ ನಿರ‍್ವಾಹಾಪಗುಂಪಿನ (?)
ಸುರಮಣಿಮಕುಟಿ ನಾಯಕದ ಸೋಂಪಿನ (?)
ಪರಮ ಪಾವನ ಪಾದದುಂಗುಟದಲಂಪಿನ || ಐಸಿರಿಯ ||||೧||

ಕಂಜಭವಾಂಡ ಸೋಂಕದ ಮುನ್ನ ಹೆಳೆಗುವ (?)
ಸಂಜನಿಸಿಹ ಗಂಗೆ ಮುದದಲ್ಲಿ ಮಳುಗುವ
ಭಂಜಿಸಿ ತಮವ ಜಗಂಗಳ ಬೆಳಗುವ
ಮಂಜೀರ ಕಡಗ ಭಾಪುರಿ ಗಳಿಂ ಮೊಳಗುವ
ಮಂಜುಳಾಂಗದಿ ನಖಪಙ್ತಗಳ್ ತೊಳಗುವ
ರಂಜನೆಯಿಂ ಶ್ರೀಮದಂಘ್ರಿಗಳೆಸವ
ಸಂಚಿತ ಸೌಮ್ಯ ಜಂಘೆಗಳಿಂ ಸೊಗಯಿಸುವ
ಕುಂಜರ ರುಚಿಯ ಪೂರ್ಣೇಂದು ರಂಜಿಸುವ ||ಐಸಿರಿಯ ||||೨||

ಆಳವಟ್ವ ಪೀತಾಂಬರದ ಸುಮಧ್ಯದ
ಕಳಕಾಂಚಿ ದಾಮದುನ್ನತ ಕಟಿತಟದ

ನಳಿನಾಲವೋದಿತ (?) ನಾಭಿಪಂಕರುಹದ
ಇಳೆಯ ಜನಂಗಳಿಗೆನಿಸುವವುದರದ (?)
ವಿಳಸದಲಂಕೃತ ಬಾಹು ಚತುಷ್ಕದ
ಮಳೆ ಶಂಖಚಕ್ರ ಸದಬ್ಜ ಸಂಭೃತದ
ಪೊಳೆವ ಕೌಸ್ತುಭಮಣಿ ಶ್ರೀವತ್ಸೋದರದ
ತುಳಸಿ ಮಂದಾರ ಮಾಲೆಗಳ ಕಂಧರದ || ಐಸಿರಿಯ ||||೩||

ಘನ ಸೌಭಗ ಗಂಡ ಮಂಡಲ ಯುಗ್ಮದ
ಮನೋಹರ ಮಕರ ಕುಂಡಲ ಕರ್ಣ ಯುಗ್ಮದ
ವನಜನೇತ್ರಂಗಳ ಕರುಣಾಕಟಾಕ್ಷದ
ವಿನುತ ಮೌಕ್ತಿಕದಿಂದ ಮೆರೆವ ನಾಸಿಕದ
ಸನುಮೋಹನದಿ ಸಮನಿಪ ಚುಬುಕಾಗ್ರದ
ತನಿರಸ ತುಳುಕುವ ಚೆಲುವಿನಧರದ
ಸಲಲಿತ ವದನದ ವರದಂತ ಪಙ್ತಯ
ಇನಿಗೆದರುವೆಳೆ ನಗೆಯ ಸಿರಿಮೊಗದ || ಐಸಿರಿಯ ||||೪||

ಸಿಂಗಾಡಿಯಿಂ ಮಿರಗುವ ಪುರ್ಬುಗಳ ಸ |
ದ್ಭ*ಂಗಾಳಕಂಗಳ ಮಿರುಪ ನಾಸಿಕದೆಳೆ
ದಿಂಗಳ ಪೊಂಗಿನ (?) ಕಸ್ತೂರಿ ತಿಲಕ ರ
ತ್ನಾಂಗದ ರಂಗಿನ ಮಕುಟ ಮಸ್ತಕದ ನೀ
ಲಾಂಗದೊಳಂಗನೆಯರು (?) ಸುರಪುರ ಮಧ್ಯ
ರಂಗದೊಳಂಗನೆಯರು ಕೂಡಿ ನಿಖಿಳ ಜ
ಗಂಗಳ ಹಿಂಗದೆ ಪೊರೆವ ಶ್ರೀ ಲಕ್ಷ್ಮೀಶ
ಮಂಗಳೊತ್ತುಂಗ ಮೂರುತಿಗೆ ನಮೋ ನಮೋ || ಐಸಿರಿಯ ||||೫||

 

. ಕೇಶಾದಿ ಪಾದ ಪರ‍್ಯಂತ ಸ್ತುತಿ. ರಾಗ…; ತಾಳ

ಶ್ರೀ ಮಣಿಮೌಳಿ ಮಸ್ತಕದ ಕಸ್ತುರಿಯ ಲ
ಲಾಮಮೈ ವೆನಿಸುವ ವರ ಪಣೆಯಾ ||

ಭ್ರೂಮಧ್ಯದೊಳ್ವೆರೆಯಿಂದೊಪ್ಪುವ
ನಾಮದ ತುರುಗೆವೆಯ ||

ತಾಮರಸಾಯತ ನೇತ್ರ ದಾನತ ಸು
ಕ್ಷೇಮಂಕರದ ನೋಟದ ||

ರಾಮಣೀಯಕವಾದ ಮಕರ ಕುಂಡಲದ ಸು
ರಾಮಯದಾ ಕದಪಿನ ||

ಚಾಮೀಕರ ಕುಟ್ಮಲನಾಸಿಕದಭಿ
ರಾಮ ಸುಮೌಕ್ತಿದಕಾ ||

ಮಾ ಮನೋಹರ ಚುಬುಕಾಗ್ರದ ನವಪಲ್ಲ
ವಾ ಮಿಳಿತಾಧರದ ||

ಸೋಮ ವದನ ದೆಳನಗೆಯಾ ಮೊಳೆವಲ್ಲ
ಕೌಮುದಿಯಾ ಸೊಬಗಿನ ||

ನೇಮಿತಾಮಗದ ತೋಳುಬಂದಿ ಕಂಕಣದ ಮುಂ
ಗೈ ಮುರಾರಿಯೆ ಮುದ್ರೆ (?) ಯಾ ||

ಐ ಮೊಗದಾ ತೆರೆದ ಕಮಲ
ಕೌಮೋದಕಿ ಖಡ್ಗ ಕಮಲ ಕಂಬುಗಿಸಿ
……………ಚಕ್ರಾಯುಧದ ||

ಶ್ರೀ ಮೆರೆಯುವುದರ ಶ್ರೀ ವತ್ಸ ಕೌಸ್ತುಭದಿ
ವ್ಯಾಮೋದದ ಗಂಧ ಲೇಪನದ ||
ರೋಮಾವಳಿಯ ಪೊಡೆವಲರ ಪಿ
ತಾಮಹ ಸುನೀತ (?) ನಾಭಿಯಾ ||

ಸೌಮಾನಸಿ ತಾಳ್ದು ಪಲಿತ (?) ಮಣಿ
ಸ್ತೋಮಾ ಭರಣಂಗಳಾ ||

ಜೀಮೂಲ ಶಲಿ (?) ಯೆನೆ
ಶ್ಯಾಂಲ ರುಚಿರಾಂಗದ ||
ಹೇಮಾಂಬರದಸಿ ಮಧ್ಯದ ಕಾಂಚೀ
ದಾಮದ ಕಟಿತಟದ ||

ಪ್ರೇಮಿತವಾದ ವೂರುಗಳ ಸು
ಖಾಮಗಳ ಮುದದಿ ತಾಳ್ದುವರ (?)
ಮಾಮ ಜಂಘೆಯ ತೊಡರಿನ ಪೂಂಗೆಜ್ಜೆ
ಯಾ ಮಣಿ ಮಂಜೀರಂಗಳ ||

ಸೋಮಸೂರ್ಯರ ಸೋಲಿಪ ನಖಕಾಂತಿಯ
ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ
ಶೋ ಮೋಹನ ರೂಪಿನ ||
ಕಾಮ ಕೋಟಿ ಲಾವಣ್ಯ ಸುಲಲಿತ ಮ

ಹಾ ಮೋಹನ…………………..
ಪ್ರೇಮದೊಳಾ (ನತ) ಜನರ ಸಲಹುವ ಮ
ಹಾ ಮಾತೆ ಶ್ರೀ ಲಕ್ಷ್ಮೀಪತಿಯ ||

ಶ್ರೀ ಮಣಿ ಮೌಳಿ ಮಸ್ರಕದ ಕಸ್ತೂರಿ ಲ
ಲಾಮವೆನಿಪ ಪಣೆಯ ||

 

. ದಶಾವತಾರದ ಹಾಡು, ರಾಗ…………; ತಾಳ……………..

ನಮೋ ನಮೋ ನಾರದ ವಂದ್ಯ | ನಮೋ ನಮೋ ನಿಗಮನಿಕರ ವೇದ್ಯ ||ಪ||
ನಮೋ ವರದಾದಿಪ ಸುರುಪುರ ಲಕ್ಷ್ಮೀಶ | ಭವಭಯ ರೋಗ ವೈದ್ಯ || ಅನು ||
ಹರಿಚರನಾಗಿ ವೇದವ ತಂದೆ | ಹರಿಪತಿಯನು ಮೇಲಾಂತುನಿಂದೆ |
ಹರಿನಯನನ ಕೊಂದೆ | ಹರಿಯ ರೂಪಾದೆ ನೀ | ಹರಿಪದ ಕಡಿಯನಿಟ್ಟೆ ||
ಹರಿವಂಶಜರನೆಲ್ಲರ ತರಿದೆ ಹರಿವಾಹಿನಿಯ ನೀನಾಳ್ದೆ
ಹರಿಸುತ ಗೊಲಿದು ಹೆಂಗಳ ವ್ರತಕೆಡಿಸಿದೆ | ಹರಿವಾಹನ ಜಯತು ||೧||

ಶಿವವಾಹನ ಧ್ವಜರೂಪ | ಶಿವಧರನೆನಿಪ ಯುಗ ಪ್ರತಾಪ |
ಶಿವಭಕ್ತನ ಕೊಂದೆ ರೂಪಾದೆ | ನೀಂ ಪದ ಕಡಿಯನಿಟ್ಟೆ |
ಶಿವವೈರಿಯ ರಿಪುವೆನಿಸಿದೆ | ಶಿವನ ಬಿಲ್ಲನು ಬಾಗಿಸಿ ಮುರಿದೆ |
ಶಿವನ ತುಳಿದೆ ನೀ ಶಿವನಿಗೆ ಸಖನಾದೆ | ಶಿವವಾಹನ ಜಯತು ||೨||

ಸುರಜ್ಯೇಷ್ಠನಿಗೆ ಶ್ರುತಿಯನಿತ್ತೆ | ಸುರರಿಗೆ ಸುಧೆಯನು ಕರೆದೆರೆದೆ ||
ಸುರನಗ ವರ್ಣ ಹಿರಣ್ಯಕ್ಷನ ಕೊಂದೆ | ಸುರ ಸಿಂಧುವಪಡೆದೆ ||
ಸುರಭಿಯನೆವದಿ ಭೂಪರನೆಲ್ಲ ತರಿದೆ | ಸುರರಿಪು ದಶವದನನ ತರಿದೆ |
ಸುರನಗವರ್ಣ ಸರ್ವಜ್ಞ ಹಯಾರೂಢ | ಸುರಪುರ ಲಕ್ಷ್ಮೀಶ ||೩||

 

. ರಾಗ……; ತಾಳ……..

ಆಕಾರವಿಲ್ಲದ ಅನಾದಿಯೊಳು ಪಂತ
ಸಾಕಾರನಾಗಿಹನು ಶ್ರೀ ಲಕ್ಷ್ಮಿಕಾಂತ ||ಪ||
ಕುಸುಮಶರನ ಪೂವು ಅದರೊಳಗಿಲ್ಲ
ಎಸೆಯ ಕೋದಂಡ ಕಬ್ಬೈಸೆಧನುವಲ್ಲ ||

ಹೊಸ ಬಗೆಯಾಗಿ ನಾಂಟದ ಸರಳಲ್ಲ
ವಿಷಮ ವಿಗ್ರಹಕಿನ್ನು ಕೇಳ್ ಪ್ರಾಣವಿಲ್ಲ ||೧||

ಮುಂದುವರೆವರೆ ಮೋಹರದೊಳು ತನ್ನ
ಚಂದದಿಂ ದೊಪ್ಪುವಂಗನ ಕಾಣೆಮುನ್ನ ||
ಕುಂದ ಕೇಡಗೆಯೆಸಳಿವೆ ನೋಡು ತನ್ನ
ಸಂದಿಸಿತೇನೊ ಚಿದ್ರೂಪ ಗುಣರನ್ನ ||೨||

ಸರಿಯಲ್ಲದವರೊಳು ಸಮರವ ಮಾಡಿ
ಧುರದೊಳು ಮಿಗೆ ನೊಂದೆನೈಯ ಮೈಬಾಡಿ
ಪರಿಹರಿಸೆಲವೊ ಸುರತ (?) ಮಧ್ಯೆ ಕೂಡಿ
ಸುರಪುರತಿ ಸುರತ (?) ವಿರದೊಂದುಗೂಡಿ ||೩||

 

. ಎಚ್ಚರಿಕೆಉದಯರಾಗರಾಗ ಅರಭಿ, ತಾಳ……………

ಸಚ್ಚಿದಾನಂದಮಯ ಗೆಚ್ಚರಿಕೆ |
ನಿಶ್ಚಯದ ನಿರುಪಮಂ ಗೆಚ್ಚರಿಕೆ |
ಅಚ್ಚರಿಯ ಸೆಚ್ಚಿತ್ತ ಗೆಚ್ಚರಿಕೆ |
ಸಚ್ಚಿದಾನಂದಮಯಗೆಚ್ಚರಿಕೆ  || ಪಲ್ಲ ||

ಕಾಂತೆಯರ ಮನೆಗೆ ಶ್ರೀಕಾಂತ ಪೊರಮಡುತಿಹನು
ಕಾಂತೆಯರು ಕಟ್ಟು ಮೆಟ್ಟದ ವೊಲೆಚ್ಚರಿಕೆ || ಅನು ||

ಸಂಚಿತಾಭರಣಗಳ ಮಿಂಚುಗುರು ಚರಣಗಳ
ಕುಂಚಕಾಳಂಜಿಯವರೆಲ್ಲ ವೆಚ್ಚರಿಕೆ || ೧ ||

ನೀಡೆಸೆವ ಸೆಳ್ಳುಗುರು ಮೂಡುತಿಹ ಮೊಲೆಹೊಗರು
ಆಡಿಸುವ ಹಡಪದವರೀಗ ಎಚ್ಚರಿಕೆ || ೨ ||

ಬಿಂಬಾಧರಂ ಪೊಳಿಯೆಕಂಬು ಕಂಠವು ಹೊಳೆಯ
ವೊಂದಾಳ ದೀವಿಗೆಯ ಜನರು ಎಚ್ಚರಿಕೆ ||೩||

ಚೆನ್ನಸಿರಿಯರ ಮನೆಯ ಚಿನ್ನವಾಗಿಲ ಕೊನೆಯ
ರನ್ನದೋರಣ ತಡಿಯವರೆಚ್ಚರಿಕೆ || ೪ ||

ಇಂದಿರಾದೇವಿಯರ ಮಂದಿರದ ಬೀದಿಯೊಳು
ಸಂದಣಿಯಲತಿ ಜತನವಿರಲಿ ಯಚ್ಚರಿಕೆ || ೫ ||

ದೇವಿಯರ ಮನೆಗೆ ವಿವಾಹ ಲಾಭೇರಿ ಬಂದ (?)
ದೇವಪುರ ಲಕ್ಷ್ಮೀಶ ಗೆಚ್ಚರಿಕೆ ||೬||

 

. ಉದಯರಾಗರಾಗ ಭೂಪಾಳಿ; ತಾಳ…………….

ಏಳಯ್ಯ ರಾಕ್ಷಸಾಂತಕ ದನುಜ ಸಂಹಾರ
ಏಳಯ್ಯ ರಾಜೀವ ನಯನ ನವನೀತ ಚೋರ
ಏಳು ಲಕ್ಷ್ಮೀ ಮನೋಹರ ||ಹರಿಯೆ|| ಏಳಯ್ಯ ||||ಪಲ್ಲ||

ದಿನಪನುದಯಂ ಗೆಯ್ಯ ದಿಕ್ಪಾಲಕರ್ನೆರೆಯೆ
ಕನಕ ಭೂಷಣದ ಕಾಂತೆಯರು ಅರತಿಪಿಡೆಯೆ
ಅನುಪಮಗೆ ಜಯವೆಂದು  ಬಂದು ನಿಂದೈಧಾರೆ
ಇನಕುಲನೆ ನಲಿದುಪ್ಪವಡಿಸು ಶ್ರೀ ಹರಿಯೇ ||೧||

ಪ್ರಹ್ಲಾದ ನಾರದರು ವಾಸಿಷ್ಠಿ ಗೌತಮರು
ಮಹಮುನಿಗಳತ್ರಿಭಾರದ್ವಾಜ ಗೌತಮರು
ಬಹುವಿಧಧಿ ಕಶ್ಯಪರು ಹನುಮಂತ ತುಂಬುರರು
……….ಪಾಡುತ್ತಲೈಧಾರೆ ಇನಕುಲನೆ ನಲಿದು ||೨||

ದೇವಗಂಗೆಯ ಕೊಂಡು ದೇವರ್ಕಳೈದಿದರು
ದೇವತಾವಳಿ ಬಂದು ದೇವ ಜಯವೆನುತಿಹರು
ದೇವಪುರದಲಿ ನಿಂದ ದೇವಕಿಯ ವರಕಂದ
ದೇವಲಕ್ಷ್ಮೀಪತಿಯ ದೇವ ನೀನೇಳೈ ಹರಿಯೇ ||೩||

 

೧೦. ಉದಯರಾಗ (ಗಜೇಂದ್ರ ಮೋಕ್ಷಣ)-ರಾಗಸಾವೇರಿ: ತಾಳ………..

ನಾರಾಯಣಾ ಯೋಂ ನಮೋ ನಾರಾಯಣಾಯೊಂ ನಮೋ ||
ನಾರಾಯಣಾಯ ವರ ನಾಗೇಂದ್ರ ಶಯನಾಯ
ನಾರದಾದ್ಯಖಿಳ ಮುನಿನುತ ಚರಿತ್ರಾಯ ||
ಘೋರ ಭವ ದುಃಖ ಸಂಹಾರಾಯ ಪಾಹಿಮಾಂ
ಕಾರುಣ್ಯಲೋಚನಾಯ ಹರಯೇ ನಾರಾಯಣಾಯ || ಪ ||

||ವಾ. ಷ|| ಪಾಂಡ್ಯ ದೇಶದಲಿ ಯಿಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಿಂ ಹರಿಪಾದ
ಪುಂಡರೀಕ ಧಾನ ತಪದೊಳಿರೆ ತಾನಾಗ ಚಂಡ ತಾಪಸನಗಸ್ತ್ಯ ||
ಹಿಂಡು ಶಷ್ಯರ್ವೆರಸಿ ಬರಲು ಸತ್ಕರಿಸದಿರೆ
ಕಂಡು ಗಜ ಯೋನಿಯಲಿ ಜನಸು ಪೋಗೆಂದು ವು
ದ್ದಂಡ ಶಾಪವನಿತ್ತು ಮುನಿಪೋಗಲಿತ್ತ ತಾಂ ಶೂಂಡಾಲನಾದನರಸ || ೧ ||

(ಅಚ್ಚಾಗಿರುವ ಉದಯರಾಗದ ಪುಸ್ತಕದಲ್ಲಿ ಇದೇ ಮೊದಲಾದ ೧೦ ಪದ್ಯಗಳು ಇವೆ )

ಅವನಿದನುದಯ ಕಾಲದೊಳೆದ್ದು ಭಕ್ತಿಯಿಂ
ಭಾವ ಶುದ್ಧಿಯಲಿ ಹೇಳುವನೊ ಕೇಳುವನೊ ಅವನ
ಘಾವಳಿಯ ಪರಿಹರಿಸಿ ಸುಜ್ಞಾನ ಪದವೀವ ದೇಹಾವಸಾನದಲ್ಲಿ |
ಶ್ರೀ ವಾಸುದೇವನಾ ಜ್ಞಾಪಿಸಿ ಗಜೇಂದ್ರ ಸಹಿ
ತಂ ವಿಹಂಗಾಧಿಪನ ತಾನೇರಿ ಬಿಜಯಂಗೆಯ್ದ
ದೇವಪುರ ಲಕ್ಷ್ಮೀವರನ ನೆನೆವ ಭಕ್ತರ್ಗೆ ಭಂಗ ಬರ್ಪುದೆ ಲೋಕದಿ ||೨||