Categories
ಕನ್ನಡ ಕರ್ಣಾಟಕ ಕಾದಂಬರಿ ಪ್ರಾಚೀನ ಕೃತಿಗಳು

ಚಂದ್ರಾಪೀಡನ ಜನನ ಮತ್ತು ಬಾಲ್ಯ

ಕೃತಿ: ಚಂದ್ರಾಪೀಡನ ಜನನ ಮತ್ತು ಬಾಲ್ಯ

ಲೇಖಕರು:

ಕೃತಿಯನ್ನು ಓದಿ

Categories
ಕನ್ನಡ ಕರ್ಣಾಟಕ ಕಾದಂಬರಿ ಪ್ರಾಚೀನ ಕೃತಿಗಳು

ಚಂದ್ರಾಪೀಡನ ಜೈತ್ರಯಾತ್ರೆ

ವ|| ಅಂತುಪಾರೂಢ ನವಯೌವನೋದಯನುಂ ಪರಿಸಮಾಪ್ತ ಸಕಲಕಲಾವಿಜ್ಞಾನನುಮಾದ ನಿಜನಂದನನಪ್ಪ ಚಂದ್ರಾಪೀಡನಂ ತಾರಾಪೀಡನರೇಂದ್ರಂ ಬರಿಸಲೆಂದು ಬಲಾಕೃತನಪ್ಪ ಬಲಾಹಕನೆಂಬನಂ ಬೆಸಸೆ ಬಹುತುರಂಗಪದಾತಿಬಲಪರಿವೃತನಾಗಿ ಬಲಾಹಕಂ ಕುಮಾರನಿರ್ದ ವಿದ್ಯಾನಿಕೇತನಕ್ಕೆ ವಂದು ದೌವಾರಿಕನಿವೇದಿತಂ ಪೊಕ್ಕು ವಿಬುಧಚಿಂತಾಮಣಿಯಂ ಕಂಡವನಿತಳನಿಹಿತ ಚೂಡಾಮಣಿಯಾಗಿ ಪೊಡವಟ್ಟು ಸಮುಚಿತಾಸನದೊಳ್ ಕುಳ್ಳಿರ್ದು ವಿನಯಪುರಸ್ಸರನಿಂತೆಂದಂ

ಎನ್ನ ಮನೋರಥಕ್ಕೆ ಪರಿಪೂರ್ತಿಯನೆಯ್ದಿಸೆ ಶಸ್ತ್ರಶಾಸ್ತ್ರಸಂ
ಪನ್ನತೆಯಿಂ ವಿರಾಜಿಸಿ ನಿರೀಕ್ಷಿಸಲು ತ್ಸುಕೆಯರ್ಕಳಾದಪ ರ್
ತನ್ನಯ ತಾಯ್ವಿರೆಂದು ಜನಕಂ ಬೞಯಟ್ಟಿದನೞ್ಕಱಂ ಪುರ
ಕ್ಕಿನ್ನಡೆತಂದು ದೇವಪಡೆ ಪೌರಜನಂಗಳ ಕಣ್ಗೆ ಪರ್ವಮಂ        ೧

ಅದೆ ಪೊಱಗಿಂದ್ರಾಯುಧಮೆಂ
ಬುದೊಂದು ದಿವ್ಯಾಶ್ವಮಟ್ಟಿದಂ ನಿನಗೇಱ
ಲ್ಕದನನಿಲಗರುಡಜವಮೆನಿ
ಸಿದುದಂ ತ್ರಿಜಗಕ್ಕೆ ರತ್ನಮಂ ನಿಜಜನಕಂ                         ೨

ಜಲನಿಜಲದಿಂ ಪೊಱಮ
ಟ್ಟಿಳೆಗವತರಿಸಿದುದಯೋನಿಸಂಭವವೀ ಮಂ
ಗಳಹಯವೆಂದೋಲೈಸಿದ
ನಿಳಾನಾಥಂಗೆ ಪಾರಶೀಕಾಶಂ                                   ೩

ವ|| ಅದಲ್ಲದೆಯುಂ ಮೂರ್ಧಾಭಿಷಿಕ್ತ ಪಾರ್ಥಿವಕುಲಪ್ರಸೂತರುಂ ವಿನಯೋಪಪನ್ನರುಂ ಕೋವಿದರುಂ ಕುಲಕ್ರಮಾಗತರುಮಪ್ಪ ರಾಜಪುತ್ರಸಹಸ್ರಮುಮಂ ನಿನಗೆ ಪರಿವಾರಾರ್ಥ ಮಟ್ಟಿದನವರೆಲ್ಲರುಂ ಪೊಱಗೆ ತುರಗಾರೂಢರ್ ಪ್ರಣಾಮಲಾಲಸರಾಗಿ ಬಾಗಿಲೊಳ್ ಪಾರ್ದಿರ್ಪರೆಂದು ಬಲಾಹಕಂ ಬಿನ್ನವಿಸುವುದುಂ ನೃಪರೂಪಚಂದ್ರಂ ತಂದೆಯಾeಯಂ ತಲೆಯೊಳ್ ತಾಳ್ದು ಪೊಱಮಡಲೆಂದಭಿನವ ಜಳಧರಧ್ವಾನಗಭೀರವಚನದಿನಿಂದ್ರಾಯುಧಮಂ ಪುಗಿಸೆಂದು ಬೆಸಸಿದಾಗಳ್

ವ|| ಹೀಗೆ ನವತಾರುಣ್ಯವನ್ನು ಪಡೆದಿರುವ, ಸಮಸ್ತ ಶಾಸ್ತ್ರಗಳಲ್ಲಿ ಪರಿಪೂರ್ಣವಾದ ಪಾಂಡಿತ್ಯವನ್ನು ಗಳಿಸಿರುವ ತನ್ನ ಮಗನಾದ ಚಂದ್ರಾಪೀಡನನ್ನು ತಾರಾಪೀಡಮಹಾರಾಜನು ಮನೆಗೆ ಕರೆಸಿಕೊಳ್ಳಬೇಕೆಂದು ನಿಶ್ಚಯಿಸಿದನು. ಅಂತೆಯೆ ತನ್ನ ಸೇನಾಪತಿಯಾದ ಬಲಾಹಕನಿಗೆ ಅಪ್ಪಣೆ ಮಾಡಿದನು. ಅವನು ಅನೇಕ ಕುದುರೆ ಮತ್ತು ಕಾಲಾಳುಗಳ ದಂಡಿನಿಂದ ಕೂಡಿಕೊಂಡವನಾಗಿ ರಾಜಕುಮಾರನಿದ್ದ ಪಾಠಶಾಲೆಗೆ ಬಂದು ತನ್ನ ಆಗಮನವನ್ನು ದ್ವಾರಪಾಲಕನಿಗೆ ತಿಳಿಸಿದನು. ದ್ವಾರಪಾಲಕನು ಒಳಗೆ ಹೋಗಿ ಅನುಮತಿ ಪಡೆದು ಸೇನಾಪತಿಯನ್ನು ಒಳಕ್ಕೆ ಕರೆದುಕೊಂಡು ಹೋದನು. ಅಲ್ಲಿ ಪಂಡಿತಪ್ರಕಾಂಡನೆನಿಸಿದ ರಾಜಕುಮಾರನನ್ನು ಕಂಡು ತನ್ನ ತಲೆಮಣಿಯು ಭೂಮಿಗೆ ತಾಕುವಂತೆ ದೀರ್ಘದಂಡ ನಮಸ್ಕಾರವನ್ನು ಮಾಡಿ ಉಚಿತವಾದ ಪೀಠದಲ್ಲಿ ಕುಳಿತುಕೊಂಡು ವಿನಯಪೂರ್ವಕವಾಗಿ ಹೀಗೆ ಅರಿಕೆ ಮಾಡಿದನು. ೧. “ರಾಜಕುಮಾರ, ನಿನ್ನ ತಂದೆಯವರು ‘ಮಗು, ನೀನು ನನ್ನ ಮನಸ್ಸಿಗೆ ತೃಪ್ತಿಯಾಗುವಂತೆ ಆಯುಧ ವಿದ್ಯೆಯಲ್ಲೂ ಉಳಿದ ಎಲ್ಲಾ ಶಾಸ್ತ್ರಗಳಲ್ಲೂ ಪಾಂಡಿತ್ಯವನ್ನು ಗಳಿಸಿಕೊಂಡು ವಿರಾಜಮಾನವಾಗಿರುವೆ. ಇಂತಹ ನಿನ್ನನ್ನು ನೋಡಲು ನಿನ್ನ ತಾಯಂದಿರು ಬಹಳವಾಗಿ ಹಂಬಲಿಸುತ್ತಿದ್ದಾರೆ’ ಎಂದು ಪ್ರೀತಿಯಿಂದ ಹೇಳಿಕಳುಹಿಸಿದ್ದಾರೆ. ಆದ್ದರಿಂದ ಇನ್ನು ಪಟ್ಟಣಕ್ಕೆ ಬಂದು ಪಟ್ಟಣಿಗರ ಕಣ್ಣಿಗೆ ಹಬ್ಬವನ್ನುಂಟುಮಾಡು. ೨. ಅದಲ್ಲದೆ ನಿನ್ನ ತಂದೆಯವರು ನಿನ್ನ ಸವಾರಿಗಾಗಿ ವಾಯುವಿನಂತೆಯೂ ಗರುಡನಂತೆಯೂ ವೇಗವುಳ್ಳ, ಮೂರು ಲೋಕದಲ್ಲೂ ಶ್ರೇಷ್ಠ ಪದಾರ್ಥವೆನಿಸಿಕೊಂಡಿರುವ ಇಂದ್ರಾಯುಧವೆಂದು ಹೆಸರುಳ್ಳ ಒಂದು ದಿವ್ಯಾಶ್ವವನ್ನು ಕಳುಹಿಸಿಕೊಟ್ಟಿದ್ದಾರೆ. ಅದು ಹೊರಗೆ ನಿಂತಿದೆ. ೩. ಆ ಕುದುರೆಯು ಸಮುದ್ರದ ನೀರಿನಿಂದ ಮೇಲಕ್ಕೆ ಬಂದು ಭೂಮಿಯಲ್ಲಿ ಅವತರಿಸಿದೆ. ಅದು ಅಯೋನಿಜ. ಇಂತಹ ಶುಭಲಕ್ಷಣಗಳಿಂದ ಕೂಡಿರುವ ಕುದುರೆಯನ್ನು ಪಾರಸೀಕರಾಜನು ನಮ್ಮ ಪ್ರಭುಗಳಿಗೆ ಕಾಣಿಕೆಯಾಗಿ ಒಪ್ಪಿಸಿದ್ದಾನೆ. ವ|| ಅದಲ್ಲದೆ ಪಟ್ಟಾಭಿಷಿಕ್ತರಾದ ರಾಜವಂಶದಲ್ಲಿ ಹುಟ್ಟಿರುವ ವಿನಯವಂತರಾದ ಮತ್ತು ಪ್ರಾಜ್ಞರಾದ ನಮಗೆ ವಂಶಪರಂಪರೆಯಿಂದ ನಡೆದುಕೊಂಡು ಬಂದಿರುವ ಸಾವಿರಾರು ಅರಸುಮಕ್ಕಳನ್ನು ನಿನಗೆ ಪರಿವಾರಕ್ಕೆಂದು ಮಹಾರಾಜರು ಕಳುಹಿಸಿದ್ದಾರೆ. ಅವರೆಲ್ಲರೂ ಹೊರಗಡೆ ಅಶ್ವಾರೂಢರಾಗಿ ನಿಮಗೆ ನಮಸ್ಕರಿಸಲು ಆಸೆಯುಳ್ಳವರಾಗಿ ಹೊರಬಾಗಿಲಲ್ಲಿ ನಿರೀಕ್ಷಿಸುತ್ತಿದ್ದಾರೆ”

ಎರಡುಂ ಪಕ್ಕಂಗಳೊಳ್ ಕಾಂಚನಕಟಕ ಖಲ್ವೀನಾಗ್ರಸಂಲಗ್ನರೀರ್ವರ್
ಭರದಿಂದಂ ಕೀೞನೇಣಂ ತೆಗೆದುಬರೆ ಮಹೋದಗ್ರದೇಹಪ್ರಮಾಣಂ
ಬರೆ ಪೀರ್ವಂತೆತ್ತಮಾಕಾಶಮನನಿಲಜವೋದ್ರೇಕದಿಂ ಪಾಱ ನೀಡುಂ
ಖುರಾಘಾತೋದ್ಧೂತಧಾತ್ರೀರಜಮತಿರುಚಿರಂ  ಬಂದುದಿಂದ್ರಾಯುಧಾಶ್ವಂ         ೪

ಪಿರಿದೆನಿಪ ಭರದೆ ನಡೆಯಲ್
ಘುರುಘುರಿಸಲ್ ಘೋರಘೋಣವಿವರಂ ಕ್ಲಿಳಿರ
ಬ್ಬರದಿಂ ತೀವಿದುದಾಶಾಂ
ತರಮಂ ಜವದಿಂದೆ ಗರುಡನಂ ತರ್ಜಿಪವೋಲ್                    ೫

ಸುರಚಾಪದಂತೆ ಸುಮನೋ
ಹರವರ್ಣಂ ತನ್ನೊಳೊಪ್ಪುತ್ತಿರೆ ರನ್ನದ ಪ
ಕ್ಕರೆಯಿಂದಂ ಕಣ್ಗೊಳಿಸುವ
ಕರಿಕಳಭದ ತೆಱದಿನೆಸೆದುದಾ ದಿವ್ಯಾಶ್ವಂ                      ೬

ಜಲಯೊಳಿರ್ದಮರ್ದಿನ ಮು
ಕ್ಕುಳನುಗುೞುತ್ತಿಳೆಗೆವಂದುದೆನಿಸಿ ಖಲೀನ
ಸ್ಖಲನಭವ ಬಹುಳ ಲಾಲಾ
ಜಲಮುಗುತಿರೆ ತುರುಗರತ್ನಮೆಸೆದತ್ತಾಗಳ್                  ೭

ತೊಡರ್ದುವು ಸಮುದ್ರದಿಂ ಪೊಱ
ಮಡುವವಸರದಲ್ಲಿ ಮೌಕ್ತಿಕಪ್ರಕರಮೆನಲ್
ಕಡುಪಿಂದೆ ರೋಮರೋಮದೆ
ಬಿಡದೆಸೆದುವು ಹರಿಗೆ ಬೆಮರಬಿಂದುಗಳಾಗಳ್                         ೮

ಮೊಗದಿಂದಂ ನೇರ್ಪನಾಳ್ದಂತುರದಿನಗಲಿತಾದಂತೆ ಪಾರ್ಶ್ವಂಗಳಿಂ ನೂ
ಲ್ದೆಗೆದತ್ತೆಂಬಂತೆ ಪ್ಲಾಶ್ಚಾತ್ಯದ್ವೆ ಸವಡಿಸಿತೆಂಬಂತಿರುದ್ಗಿ ವದಿಂ ಪ
ರ್ವುಗೆವೆತ್ತಂತಂಗಕಾಂತಿಪ್ರಕರದೆ ಪಸರಿಪ್ಪಂತೆ ಮುಂಗಾಲ್ಗಳಿಂದಂ
ಮುಗಿಲಂ ಮುಟ್ಟಿಪ್ಪುದೆಂಬಂತತಿಜವಮಿದಿರೊಳ್ ಬಂದುದಿಂದ್ರಾಯುಧಾಶ್ವಂ        ೯

ಎಂದು ಬಲಾಹಕನು ಅರಿಕೆ ಮಾಡಲಾಗಿ ಆ ರಾಜನಾಗಿ ಅವತರಿಸಿರುವ ಚಂದ್ರನು ತಂದೆಯ ಅಪ್ಪಣೆಯನ್ನು ತಲೆಯಲ್ಲಿ ಧರಿಸಿ ಪ್ರಯಾಣಕ್ಕಾಗಿ ಹೊಸಮೋಡದಂತೆ ಗಂಭೀರವಾದ ಧ್ವನಿಯಿಂದ “ಇಂದ್ರಾಯುಧವನ್ನು ಕರೆತನ್ನಿ” ಎಂದು ಅಪ್ಪಣೆ ಮಾಡಿದನು.

೪. ಎರಡು ಕಡೆಗಳಲ್ಲೂ ಚಿನ್ನದ ಕಡಿವಾಣದ ಬಳೆಯ ತುದಿಯನ್ನು ಹಿಡಿದುಕೊಂಡಿರುವ ಇಬ್ಬರು ತಮ್ಮ ಬಲವನ್ನೆಲ್ಲಾ ಉಪಯೋಗಿಸಿ ಕಡಿವಾಣದ ಹಗ್ಗವನ್ನು ಜಗ್ಗಿಸಿ ಎಳೆದುಹಿಡಿದುಕೊಂಡಿರಲಾಗಿ ಬಹಳ ಎತ್ತರವಾದ ಆಕಾರವುಳ್ಳ, ಅಗಲವಾದ ಆಕಾಶವನ್ನು ಕುಡಿದುಬಿಡುವಂತೆ ಕಾಣುವ ಇಂದ್ರಾಯುಧವೆಂಬ ಕುದುರೆಯು ಗಾಳಿಗಿಂತ ಮಿಗಿಲಾದ ವೇಗದಿಂದ ನೆಗೆಯುತ್ತಾ ಗೊರಸಿನ ಹೊಡೆತದಿಂದ ಧೂಳನ್ನು ಎಬ್ಬಿಸುತ್ತಾ ಬಂದಿತು. ೫. ಆ ಕುದುರೆಯು ಬಹಳ ಹೆಚ್ಚಾದ ರಭಸದಿಂದ ಬರುತ್ತಿತ್ತು. ಅದರ ಕಠೋರವಾದ ಮೂಗಿನ ಹೊಳ್ಳೆಗಳಿಂದ ಘುರ ಘುರ ಧ್ವನಿ ಹೊರಡುತ್ತಿತ್ತು. ಅದು ತನ್ನ ವೇಗದ ಹೆಚ್ಚಳದಿಂದ ಗರುಡನನ್ನೇ ಕ್ಕರಿಸುವಂತೆ ಅಬ್ಬರಿಸಿ ಕೆನೆಯುತ್ತಿರಲಾಗಿ ಆ ಧ್ವನಿಯು ಆಕಾಶವನ್ನೆಲ್ಲಾ ತುಂಬುತ್ತಿತ್ತು. ೬. ಕಾಮನಬಿಲ್ಲಿನಂತೆ ಮನೋಹರವಾದ ಬಣ್ಣದಿಂದ ರಮಣೀಯವಾದ ಆ ದಿವ್ಯಾಶ್ವವು ರತ್ನದ ಜೂಲಿನಿಂದ ಕಂಗೊಳಿಸುವ ಆನೆಯ ಮರಿಯಂತೆ ಶೋಭಿಸುತ್ತಿತ್ತು. ೭. ಬಾಯಲ್ಲಿರುವ ಕಡಿವಾಣದ ಚಲನದಿಂದ ಉಂಟಾದ ಜೊಲ್ಲುನೀರು ಬಹಳವಾಗಿ ಸೋರುತ್ತಿತ್ತು. ಇದರಿಂದ ಆ ಕುದುರೆಯು ತಾನು ಸಮುದ್ರದಲ್ಲಿದ್ದಾಗ ಕುಡಿದಿದ್ದ ಅಮೃತವನ್ನು ಉಗುಳುತ್ತಾ ಭೂಮಿಗೆ ಬಂದಿದೆಯೋ ಎಂಬಂತೆ ಶೋಭಿಸುತ್ತಿತ್ತು. ೮. ಬಹಳ ಬಲಶಾಲಿಯಾದ ಆ ಕುದುರೆಗೆ ರಾವುತರು ತನ್ನ ವೇಗಕ್ಕೆ ಅಡ್ಡಿಪಡಿಸುತ್ತಿರುವುದರಿಂದ ರೋಷವುಂಟಾಗಿ ಮೈಬೆವರಿ ರೋಮ ರೋಮಗಳಲ್ಲೂ ಬೆವರುಹನಿಗಳು ಅಂಟಿಕೊಂಡಿದ್ದುವು. ಇದನ್ನು ನೋಡಿದರೆ ಅದು ಸಮುದ್ರದಿಂದ ಮೇಲಕ್ಕೆ ಏಳುವಾಗ ಅಲ್ಲಿದ್ದ ಮುತ್ತುಗಳು ಕೂದಲುಗಳಲ್ಲಿ ಸಿಕ್ಕಿಕೊಂಡಿರುವಂತೆ ಕಾಣುತ್ತಿತ್ತು.

೯. ಬ್ರಹ್ಮನು ತನ್ನನ್ನು ಸೃಷ್ಟಿಸುವಾಗ ಮುಖದಿಂದ ಅಂದವನ್ನು ಪಡೆದಂತೆಯೂ, ಎದೆಯಿಂದ ವಿಸ್ತಾರವಾದಂತೆಯೂ, ಪಕ್ಕಗಳಿಂದ ಸೂತ್ರವನ್ನು ಹಿಡಿದು ಸಮಮಾಡಿದಂತೆಯೂ ಹಿಂಭಾಗದಿಂದ (ರುಂಡಿ) ದ್ವಿಗುಣಿತವಾದಂತೆಯೂ, ಎತ್ತರವಾದ ಕತ್ತಿನಿಂದ ವಿಸ್ತೀರ್ಣತೆ

ಪಿರಿದೆಂದಾಯಿಂದ್ರನುಚ್ಚೈಶ್ರವಮನೆ  ನಡೆನೋಡುತ್ತಮಿರ್ಕೆಂದು ರತ್ನಾ
ಕರಮುಲ್ಲೋಲಂಗಳಿಂದಂ ಮಯಿಸಿ ಜನಪಂಗಿಂದ್ರಚಾಪಪ್ರಭಾಭಾ
ಸುರಮಂ ತ್ರೈಲೋಕ್ಯಸಾಮ್ರಾಜ್ಯದ ಫಳಮೆನಿಪೀ ವಾಜಿಯಂ ಕೊಟ್ಟನೆಂದಾ
ದರದಿಂದಂ ನೋಡಿದಂ ವಿಸ್ಮಯಮೊದವುವಿನಂ ಚಿತ್ತದೊಳ್ ರಾಜಪುತ್ರಂ          ೧೦

ಪರಿಹರಿಸಿದನಿಲ್ಲಿನ್ನುಂ
ಗರುಡನನೇಱುವುದನಜಿತನೆಂದಿಂದೆನಗ
ಚ್ಚರಿಯಾಗುತಿ ರ್ಪುದಿಲ್ಲೀ
ಹರಿಯಂ ತಾನಱದನ್ವಾಗದಿರ್ಕುಮೆ ಪಿರಿದುಂ             ೧೧

ಭುವನತ್ರಯದುರ್ಲಭಮೆನಿ
ಸುವ ವಸ್ತುಗಳಿನ್ನುಮೊಳವೆ ಭುವನದೊಳಿಂತ
ಕ್ಕುವೆ ದಿವಿಜರಾಜವಿಭವ
ಕ್ಕವಿದಗ್ಗಳಮೆನಿಸಿದತ್ತು ತಂದೆಯ ವಿಭವಂ                 ೧೨

ಇದಱ ಮಹಾಪ್ರಾಣತೆಗಿ
ನ್ನಿದದವಿದ ತೇಜದೇೞ್ಗೆಗಚ್ಚರಿಯಾಗಿ
ರ್ದುದು ದೇವತಾತ್ಮನೊ ಪೇ
ೞದು ದಿಟಮೇಱಲ್ಕೆ ಶಂಕೆ ಪುಟ್ಟಿದುದೀಗಳ್                 ೧೩

ವ|| ಮುನ್ನಂ ಸ್ಥೂಳಶಿರನೆಂಬ ತಾಪಸನಿತ್ತ ಶಾಪದಿನಖಿಳಲೋಕದೊಳ್ ರೂಪಿಂದಚ್ಚರಿಯಾದಚ್ಚರಿಯಪ್ಪ ರಂಭೆ ಸುರಲೋಕಮಂ ಬಿಟ್ಟು ಮೃತ್ತಿಕಾವತಿಯೆಂಬ ರಾಜಧಾನಿಯೊಳಿರ್ಪ ಶತಧನ್ವನೆಂಬರಸನ ಮನೆಯೊಳ್ ಗೋಳಿಗೆಯಾಗಿ ಪಲವುಕಾಲಮಿರ್ದಳದುಮಲ್ಲದೆಯುಂ ಪಲಬರ್ ಮಹಾತ್ಮರ್ ಮಹಾಮುನಿಜನಶಾಪದಿಂ ಪರಿಹೃತಪ್ರಭಾವರಾಗಿ  ಪಲವುಮಾಕೃತಿಗಳಂ ತಳೆದು ಮರ್ತ್ಯಲೋಕದೊಳ್ ಚರಿಯಿಸುತಿರ್ಪರೆಂಬುದುಮಂ ಕೇಳ್ದುದಿಲ್ಲಕ್ಕುಮೆ ಎನುತ್ತಮಾ ದಿವ್ಯಾಶ್ವಮನಚ್ಚರಿವಟ್ಟು ನೋಡುತ್ತಮಿರ್ದು

ಯನ್ನು ಪಡೆದಂತೆಯೂ, ಶರೀರದ ಹೊಳಪಿನಿಂದ ಪ್ರಸಾರವನ್ನು ಪಡೆದಂತೆಯೂ, ಮುಂಗಾಲುಗಳಿಂದ ಮುಗಿಲನ್ನು ಮುಟ್ಟುತ್ತಿರುವಂತೆಯೂ ಇರುವ ಬಹಳ ವೇಗದಿಂದ ಕೂಡಿದ ನಡಗೆಯುಳ್ಳ ಇಂದ್ರಾಯುಧವು ಎದುರಿಗೆ ಬಂದಿತು. (ಇಂದ್ರಾಯುಧದ ಮುಖವು ಸುಂದರವಾಗಿಯೂ ಎದೆಯು ವಿಶಾಲವಾಗಿಯೂ ಪಕ್ಕೆಗಳು ಸಮನಾಗಿಯೂ ರುಂಡಿಯು ದಪ್ಪನಾಗಿಯೂ ಕತ್ತು ನೀಳವಾಗಿಯೂ ಶರೀರದ ಕಾಂತಿಯು ಉಜ್ವಲವಾಗಿಯೂ ಇತ್ತು. ಅದು ಮುಂಗಾಲುಗಳನ್ನು ಎತ್ತಿಕೊಂಡಿತ್ತು ಎಂಬುದು ಈ ವರ್ಣನೆಯ ತಾತ್ಪರ್ಯ). ೧೦. ರಾಜಪುತ್ರನು ಆ ಕುದುರೆಯನ್ನು ನೋಡಿದನು. ಅವನಿಗೆ ಬಹಳ ಆಶ್ಚರ್ಯವುಂಟಾಯಿತು. ಆಗ ತನ್ನ ಮನಸ್ಸಿನಲ್ಲಿ “ಇಂದ್ರನು ಈ ಕುದುರೆಗಿಂತ ಮೊದಲು ಹುಟ್ಟಿದ ಉಚ್ಚೆ ಶ್ರವಸ್ಸೆಂಬ ಕುದುರೆಯನ್ನೇ ಬಹಳ ದೊಡ್ಡದೆಂದು ತಿಳಿದುಕೊಂಡು ಅದನ್ನೇ ಚೆನ್ನಾಗಿ ನೋಡಿಕೊಂಡಿರಲಿ” ಎಂದು ಸಮುದ್ರರಾಜನು ಈ ಕಾಮನಬಿಲ್ಲಿನಂತೆ ಕಾಂತಿಯಿಂದ ಪ್ರಕಾಶಿಸುವ ಮತ್ತು ಮೂರುಲೋಕದ ಚಕ್ರಾಪತ್ಯಕ್ಕೆ ಮುಖ್ಯ ಫಲದಂತಿರುವ ಈ ಕುದುರೆಯನ್ನು ದೊಡ್ಡ ದೊಡ್ಡ ಅಲೆಗಳಿಂದ ಇಂದ್ರನಿಗೆ ಕಾಣಿಸಿದಂತೆ ಮರೆಮಾಡಿ ಭೂಲೋಕದ ಚಕ್ರವರ್ತಿಯಾದ ತನ್ನ ತಂದೆಗೆ ಕಾಣಿಕೆಯಾಗಿ ಕೊಟ್ಟಿರಬೇಕು! ಎಂದು ಆಲೋಚಿಸುತ್ತಾ ಬಹಳ ಆದರದಿಂದ ಅದನ್ನೇ ನೋಡುತ್ತಿದ್ದನು. ೧೧. “ಈ ಕುದುರೆ ಇರುವುದು ಶ್ರೀಮನ್ನಾರಾಯಣನಿಗೆ ಗೊತ್ತೇ ಇರಲಿಲ್ಲವೆಂದು ತೋರುತ್ತದೆ? ನನಗೇನೋ ಬಹಳ ಆಶ್ಚರ್ಯವಾಗುತ್ತಿದೆ! ೧೨. ಮೂರು ಲೋಕಗಳಲ್ಲೂ ದುರ್ಲಭವೆನಿಸಿರುವ ಇಂತಹ ವಸ್ತು ಜಗತ್ತಿನಲ್ಲಿ ಬೇರೆ ಇದೆಯೆ? ಇಂತಿಂತಹ ಅಮೋಘ ಪದಾರ್ಥಗಳನ್ನು ಹೊಂದಿರುವ ತಂದೆಯವರ ಸಂಪತ್ತು ಸ್ವರ್ಗಾಪತಿಯ ಐಶ್ವರ್ಯಕ್ಕಿಂತಲೂ ಮಿಗಿಲಾದುದೆನಿಸಿಕೊಂಡಿದೆ. ೧೩. ಇದರ ಅತ್ಯಕವಾದ ಶಕ್ತಿಗೂ ಇದರ ಪ್ರಭಾವದ ಹಿರಿಮೆಗೂ ಬಹಳ ಆಶ್ಚರ್ಯವಾಗುತ್ತದೆ. ಇದೊಂದು ದೇವತಾಕಾರವೇ ಇರಬಹುದೆ? ನಿಜವಾಗಿಯೂ ಇದನ್ನು ಈಗ ಏರುವುದಕ್ಕೆ ಅಳುಕೇ ಉಂಟಾಗುತ್ತಿದೆ. ವ|| ಹಿಂದೆ ಸ್ಥೂಲಶಿರನೆಂಬ ಮಹರ್ಷಿಯು ಕೊಟ್ಟ ಶಾಪದಿಂದ ಜಗತ್ತಿನಲ್ಲೆಲ್ಲಾ ಅದ್ಭುತವಾದ ರೂಪಸಂಪತ್ತುಳ್ಳ ರಂಭೆಯು ದೇವಲೋಕವನ್ನು ಬಿಟ್ಟು ಮೃತ್ತಿಕಾವತಿಯೆಂಬ ರಾಜಧಾನಿಯಲ್ಲಿರುವ ಶತಧನ್ವನೆಂಬ ರಾಜನ ಅರಮನೆಯಲ್ಲಿ ಹೆಣ್ಣು ಕುದುರೆಯಾಗಿ ಕೆಲವು ಕಾಲ ಇದ್ದಳು. ಅಲ್ಲದೆ ಅನೇಕ ಮಹಾಪುರುಷರು ಮಹರ್ಷಿಗಳ ಶಾಪದಿಂದ ತಮ್ಮ ಪ್ರಭಾವವನ್ನು ಕಳೆದುಕೊಂಡವರಾಗಿ ಬೇರೆ ಬೇರೆ ಆಕಾರವನ್ನು ತಾಳಿ ಭೂಲೋಕದಲ್ಲಿ ಸಂಚರಿಸುತ್ತಿದ್ದಾರೆ ಎಂಬುದನ್ನು ನಾವು ಕೇಳಿಲ್ಲವೆ?” ಎನ್ನುತ್ತಾ ಆ ದಿವ್ಯಾಶ್ವವನು

ಇದು ಸಾಮಾನ್ಯದ ವಾಜಿಯಲ್ತು ಪಿರಿದುಂ ನೋಡಲ್ ಮುನೀಂದ್ರೋಗ್ರಶಾ
ಪದಿನೊರ್ವಂ ದಿವಿಜಂ ನಿಜಾಕೃತಿಯನಾದಂ ಬಿಟ್ಟು ದಿವ್ಯಾಶ್ವರೂ
ಪದನೀಲೋಕದೊಳಿರ್ದನೆಂದು ಬಗೆಯುತ್ತಲ್ಲಿಂದಮೆೞ್ತಂದನಂ
ದುದಿತಾರ್ಕಪ್ರಭನೇಱಲೆಂದು ಹಯನಂ ರಾಜಾರಾಜಾತ್ಮಜಂ               ೧೪

ಕ್ಷಮೆಯಂ ಮ್ಲಾಡಶ್ವ ನೀನಾರ‍್ವಱಯೆನದಱನಿಂತೀ ಮದಾರೋಹಣಾತಿ
ಕ್ರಮಕೆಂದಾಮಂತ್ರಣಂಗೆ ಯ್ವುದುಮದು ಬಗೆಗೊಂಡಂತಿರಾ ಕೇಕರಾಲೋ
ಕಮುಖಂ ನೋಡುತ್ತಮೇಱಲ್ ಕರೆವ ತೆಱದೆ ಹೇಷಾರವಂ ಪೊಣ್ಮೆ ಭೂಭಾ
ಗಮನತ್ಯುತ್ಸಾಹದಿಂ ದಕ್ಷಿಣಖುರದೆ ಬೆಱಂಟಿತ್ತು ದಿವ್ಯಾಶ್ವಮಾಗಳ್        ೧೫

ಘನಹೇಷಿತದಿಂ ದತ್ತಾ
ಭ್ಯನುಜ್ಞನಾದಂತೆ ಲಘುತೆಯಿಂದೇಱದನಾ
ಸನದೃಢತೆ ರೂಪುವಡೆದ
ತ್ತೆನಲಿಂದ್ರಾಯುಧಮನಂದು ಚಂದ್ರಾಪೀಡಂ ೧೬

ವ|| ಅಂತದನೇಱ ದಿವ್ಯವಾಜಿಯ ಮಹಾಜವಮಂ ಕಂಡು ಭುವನತ್ರಯಮಂ ಪ್ರಾದೇಶಮಾತ್ರಮಾಗಿ ಬಗೆದು ಪೊಱಮಡುವನ್ನೆಗಮಲ್ಲಿ
ಮಿಸುಗುವ ರವಿಬಿಂಬಂಗಳ್
ಮಸೆದಲಗುಗಳಂ ಪಳಂಚಿ ಮಿಂಚುವ ಕಾಂತಿ
ಪ್ರಸರದೆ ನೀಲೋತ್ಪಲಕುಮು
ದಸಮಾಜಮನಿೞಸಿ ಪೊಳೆದುವಂಬರತಳದೊಳ್        ೧೭

ಪಿರಿದೆನಿಪ ಲಯಸಮುದ್ರದ
ತೆರೆಗಳ್ ನೊರೆವೆರೆದು ನೆರೆದು ನೆಗೆದಪುವೆಂಬಂ
ತಿರೆ ಘೇನಪುಂಜಧವಳಿತ
ತುರಂಗಸಂದೋಹಸೈನ್ಯಮೆಸೆದತ್ತಾಗಳ್                  ೧೮

ವ|| ಅಂತು ಚಂದ್ರೋದಯಕ್ಷುಭಿತಸಾಗರದಂತೆ ಬಾಗಿಲೊಳ್ ಘೂರ್ಣಿಸುತಿರ್ದ ರಾಜಲೋಕಮಹಮಹಮಿಕೆಯಿಂ ಪ್ರಣಾಮಲಾಲ ಸರಾಗೆ ಬಲಾಕಾರಿಯಪ್ಪ ಬಲಾಹಕನವರವರ

ಪೆಸರ್ಗೊಂಡು ಪೊಡಮಡಿಸೆ

ನೋಡುತ್ತಾ ಇದ್ದು, ೧೪. ‘ಇದು ನಾಡಾಡಿ ಕುದುರೆಯಂತೂ ಅಲ್ಲವೇ ಅಲ್ಲ. ಸರಿಯಾಗಿ ನೋಡಿದರೆ ಯಾವನೋ ಒಬ್ಬ ಮಹರ್ಷಿಯ ಕಠೋರವಾದ ಶಾಪದಿಂದ ಯಾವನೋ ಒಬ್ಬ ದೇವತಾ ಪುರುಷನು ತನ್ನ ನಿಜಸ್ವರೂಪವನ್ನು ಮರೆಸಿ ದಿವ್ಯಾಶ್ವದ ರೂಪವನ್ನು ತಾಳಿ ಈ ಲೋಕಕ್ಕೆ ಬಂದಿದ್ದಾನೆ’ ಎಂದು ಆಲೋಚಿಸುತ್ತಾ ಆ ಚಕ್ರವರ್ತಿಕುಮಾರನು ಬಾಲಸೂರ್ಯನಂತೆ ತೇಜಸ್ಸುಳ್ಳ ಆ ಕುದುರೆಯನ್ನು ಏರಬೇಕೆಂದು ಬಂದನು. ೧೫. “ಎಲೈ ಕುದುರೆಯೆ, ನಿಜವಾಗಿ ನೀನು ಯಾರೆಂದು ನನಗೆ ತಿಳಿಯದು. ಈಗ ನಿನ್ನನ್ನು ಹತ್ತಲು ಬಂದಿದ್ದೇನೆ. ಈ ತಪ್ಪನ್ನು ಕ್ಷಮಿಸು” ಎಂದು ಕುದುರೆಯನ್ನು ಸಂಬೋಸಲಾಗಿ, ಅದು ಅರ್ಥಮಾಡಿಕೊಂಡಂತೆ ಓರೆಗಣ್ಣಿನಿಂದ ರಾಜಕುಮಾರನನ್ನು ನೋಡುತ್ತಾ, ಹತ್ತಲು ಕರೆಯುವಂತೆ ಕೆನೆಯುವ ಧ್ವನಿಯನ್ನು ಹೊರಪಡಿಸುತ್ತಾ, ಬಹಳ ಹುರುಪಿನಿಂದ ಕೂಡಿ ಬಲಗಾಲಿನಿಂದ ಭೂಮಿಯನ್ನು ಕೆರೆಯಲಾರಂಭಿಸಿತು. ೧೬. ಆಗ ಚಂದ್ರಾಪೀಡನು ಇಂದ್ರಾಯುಧದ ಗಂಭೀರವಾದ ಕೆನೆಯುವ ಧ್ವನಿಯನ್ನು ಕೇಳಿ, ಅದು ಏರಲು ತನಗೆ ಅನುಮತಿ ಕೊಟ್ಟಿತೆಂದು ಭಾವಿಸಿದನು. ಬಳಿಕ ಕುಳಿತುಕೊಳ್ಳಲು ಅನುಕೂಲವಾದ ಸ್ಥಿರವಾದ ಪೀಠವೇ ಈ ರೂಪವನ್ನು ತಾಳಿರುವುದೋ ಎಂಬಂತಿರುವ ಆ ಕುದುರೆಯನ್ನು ಚುರುಕಿನಿಂದ ಏರಿದನು. ವ|| ಹೀಗೆ ಅದನ್ನು ಹತ್ತಿ ಆ ದಿವ್ಯವಾದ ಕುದುರೆಯ ಮಿಗಿಲಾದ ವೇಗವನ್ನು ಕಂಡು ಮೂರುಲೋಕವನ್ನೂ ಒಂದೇ ಚೋಟುದ್ದವೆಂದು ತಿಳಿದು ಹೊರಡುತ್ತಿರುವಲ್ಲಿ, ೧೭. ಕುದುರೆಯ ಸವಾರರು ಭರ್ಜಿಗಳನ್ನು ಎತ್ತಿ ಹಿಡಿದಿದ್ದರು. ಅವುಗಳ ಮಸೆದಿರುವ ಅಲಗುಗಳಲ್ಲಿ ಸೂರ್ಯಮಂಡಲವು ಸಂಕ್ರಾಂತವಾಗುತ್ತಿತ್ತು. ಇದರಿಂದ ಉಂಟಾದ ಮಿಂಚುವ ಹೊಳಪಿನಿಂದ ಅವು ಆಕಾಶದಲ್ಲಿ ಕನ್ನೆ ದಿಲೆ ಮತ್ತು ನೈದಿಲೆಗಳ ಸಮೂಹವನ್ನು ಕೀಳುಮಾಡಿ ಶೋಭಿಸುತ್ತಿದ್ದುವು. ಟಿ. ಸರೋವರದಲ್ಲಿ ಕನ್ನೆ ದಿಲೆ ಮತ್ತು ನೈದಿಲೆಗಳು ಶೋಭಿಸುವಂತೆ ಆಕಾಶದಲ್ಲಿ ಕುಂತಗಳು ಶೋಭಿಸುತ್ತಿದ್ದುವು. ೧೮. ಆ ಸೈನ್ಯದ ಬಾಯಿಂದ ಹೊರಡುತ್ತಿರುವ ನೊರೆಗಳಿಂದ ಬೆಳ್ಳಗೆ ಕಾಣುತ್ತಿರುವ ಕುದುರೆಗಳ ಗುಂಪು ಪ್ರಳಯಕಾಲದಲ್ಲಿ ನೊರೆಗಳನ್ನು ಉಗುಳುತ್ತಾ ತುಂಬಿ ತುಳುಕಾಡಿ ನೆಗೆಯುತ್ತಿರುವ ಸಮುದ್ರದ ಅಲೆಗಳಂತೆ ಶೋಭಿಸುತ್ತಿತ್ತು.

ವ|| ಹೀಗೆ ಚಂದ್ರೋದಯದಿಂದ ಅಲ್ಲೋಲಕಲ್ಲೋಲವಾದ ಸಾಗರದಂತೆ ಬಾಗಿಲಲ್ಲಿ ಗದ್ದಲ ಮಾಡುತ್ತಿರುವ ರಾಜರುಗಳ ಗುಂಪು

ಎಱಗುವ ನರೇಂದ್ರನಿಕರದ
ಮಿಱುಗುವ ಮಣಿಮೌಳಿ ಮಂಜುಳ್ವಪ್ರಭೆ ತನ್ನೊಳ್
ತುಱುಗೆ ನೃಪನಂದನಂ ಕೆ
ನ್ನಿಱಮುಗಿಲೊಳ್ ಪೊಳೆವ ಚಂದ್ರಮಂಗೆಣೆಯಾದಂ               ೧೯

ವ|| ತದನಂತರಮಾ ನರೇಂದ್ರಚಂದ್ರಮಂ ಯಥಾಕ್ರಮದಿಂ ತುರಂಗಾರೂಢನಪ್ಪ ವೈಶಂಪಾಯನಂಬೆರಸು ಪುರಾಭಿಮುಖನಾಗಿ ಬಿಜಯಂಗೆಯ್ವಾಗಳ್

ಇದು ರಾಜದ್ರಾಜಲಕ್ಷಿ ನಿವಸನವಿಲಸತ್ಪುಂಡರೀಕೋದಯಂ ಮೇ
ಣಿದು ನಾನಾಕ್ಷೋಣಿಪಾಲೇಕ್ಷಣಕುಮುದವಿಕಾಸೇಂದುಬಿಂಬೋದಯಂ ಮೇ
ಣಿದು ಭೂಭಾರಾರ್ಪಣಪ್ರೋದ್ಧತಫಣಿಪಫಣಾಮಂಡಲಾಭೋಗಮೆಂಬಂ
ದದೆ ರಾಜೇಂದ್ರಾತ್ಮಜಂಗೆತ್ತಿದುದು ಮಣಿಮಯಾದಭ್ರಶುಭ್ರಾತಪತ್ರಂ      ೨೦

ಅಲರ್ದಿರ್ದ ಪುಂಡರೀಕದ
ಕೆಲದೊಳ್ ವರ್ತಿಸುವ ಹಂಸಯಗಮೆನೆ ಭೂಭೃ
ತ್ತಿಲಕನ ಸಿತಾತಪತ್ರದ
ಕೆಲದೊಳ್ ನರ್ತಿಸಿತು ಧವಳಚಾಮರಯುಗಳಂ             ೨೧

ಚಮರೀಜಕಾಂತೆಯರ್ ಸಿತ
ಚಮರದ ವಿಕ್ಷೇಪದಿಂದಮೆಸೆದರ್ ಭೂಪೋ
ತ್ತಮವರತನುವಿಂದಮತಿ
ಕ್ರಮಿಸುವ ಲಾವಣ್ಯರಸದೊಳೋಲಾಡುವವೋಲ್          ೨೨

ವ|| ಅದಲ್ಲದೆಯುಂ ಪಲತೆಱದ ಪಗಳೆಡೆಯೊಳ್ ಬಾಜಿಸುವ ಪದಿರಪಗಳು ಮೊತ್ತುವ ಸನ್ನೆಗಾಳೆಗಳುಂ ಪೂರಿಸುವ ಶಂಖಂಗಳುಂ ಓದುವ ವಂದಿಮಾಗಧರ ಜಯಜಯಾದಿ ಮಧುರರವಂಗಳುಮೆಸೆಯೆ ರಾಜಧಾನಿಗಭಿಮುಖನಾಗಿ ಮನುಜೇಂದ್ರಚಂದ್ರ ನೆೞ್ತರ್ಪಾಗಳ್

ನಾನು ಮುಂದು ತಾನು ಮುಂದು ಎಂದು ನಮಸ್ಕರಿಸಲು ಆಸಕ್ತಿಯನ್ನು ಹೊಂದಿರಲಾಗಿ ದಳವಾಯಿಯಾದ ಬಲಾಹಕನು ಅವರ ಪರಿಚಯ ಮಾಡಿಸಿ ನಮಸ್ಕಾರ ಮಾಡುತ್ತಿದ್ದನು. ೧೯. ನಮಸ್ಕರಿಸುವ ರಾಜರ ಸಮೂಹದ ಹೊಳೆಯುವ ರತ್ನಕಿರೀಟದ ಹೊಳಪು ತನ್ನ ಮೇಲೆ ಆವರಿಸಲಾಗಿ ರಾಜಕುಮಾರನು ಕೆಂಬಣ್ಣದಿಂದ ಕೂಡಿರುವ ಮೇಘಗಳ ಮಧ್ಯದಲ್ಲಿ ಹೊಳೆಯುವ ಚಂದ್ರನಂತೆ ಕಾಣುತ್ತಿದ್ದನು. ವ|| ಬಳಿಕ ಆ ಚಂದ್ರಾಪೀಡನು ತನ್ನಂತೆಯೇ ಕುದುರೆಯನ್ನು ಏರಿರುವ ವೈಶಂಪಾಯನನೊಂದಿಗೆ ರಾಜಧಾನಿಯ ಕಡೆಗೆ ಪ್ರಯಾಣ ಮಾಡುತ್ತಿರಲಾಗಿ, ೨೦. ಆ ಚಕ್ರವರ್ತಿಕುಮಾರನಿಗೆ ರತ್ನನಿರ್ಮಿತವಾದ ದಂಡದಿಂದ ಕೂಡಿರುವ ದೊಡ್ಡದಾದ ಬಿಳಿಯ ಕೊಡೆಯನ್ನು ಎತ್ತಿಹಿಡಿದ್ದರು. ಅದು ಪ್ರಕಾಶಿಸುವ ರಾಜಲಕ್ಷಿ ಯ ನಿತ್ಯವಾಸಕ್ಕೆ ಯೋಗ್ಯವಾದ ಬಿಳಿಯ ಕಮಲವು ಉದಯಿಸಿದಂತೆಯೂ, ಅನೇಕ ರಾಜರುಗಳ ಕಣ್ಣುಗಳೆಂಬ ಕನ್ನೆ ದಿಲೆಗಳನ್ನು ಅರಳಿಸುವ ಚಂದ್ರಬಿಂಬವು ಉದಯಿಸಿದಂತೆಯೂ, ಈ ರಾಜಕುಮಾರನಿಗೆ ಭೂಭಾರವನ್ನು ಒಪ್ಪಿಸಲು ಮೇಲಕ್ಕೆದ್ದು ಬಂದಿರುವ ಆದಿಶೇಷನ ವಿಸ್ತಾರವಾದ ಹೆಡೆಗಳ ವರ್ತುಲದಂತೆಯೂ ಶೋಭಿಸುತ್ತಿತ್ತು. ೨೧. ಅರಳಿರುವ ಬಿಳಿಯ ಕಮಲದ ಹತ್ತಿರ ಕುಣಿದಾಡುತ್ತಿರುವ ಅವಳಿಹಂಸಗಳೋ ಎಂಬಂತೆ ಚಂದ್ರಾಪೀಡನ ಬಿಳಿಯ ಕೊಡೆಯ ಹತ್ತಿರ ಎರಡು ಚಾಮರಗಳು ನರ್ತಿಸುತ್ತಿದ್ದುವು. ೨೨. ಅವನ ಇಕ್ಕೆಲದಲ್ಲೂ ಚಾಮರವನ್ನು ಬೀಸುತ್ತಿದ್ದ ರಮಣಿಯರು ಅವನ ಸುಂದರವಾದ ಶರೀರದಿಂದ ಹೊರಹೊಮ್ಮುತ್ತಿರುವ ಸೌಂದರ್ಯವೆಂಬ ನೀರಿನಲ್ಲಿ ಈಜಾಡುವವರಂತೆ ಕಾಣುತ್ತಿದ್ದರು. ವ|| ಅದಲ್ಲದೆ ಹಲವು ವಿಧವಾದ ತಮ್ಮಟೆಗಳ ಹತ್ತಿರವೇ ಬಾರಿಸಲ್ಪಡುತ್ತಿರುವ ಪದಿರಪರೆ೧ ಗಳೂ ಧ್ವನಿಗೈಯುವ ಸನ್ನೆಗಾಳೆಗಳೂ ಊದಲ್ಪಡುವ ಶಂಖಗಳೂ ಹಾರಾಡುತ್ತಿರುವ ಹೊಗಳುಭಟ್ಟರ ಜಯಕಾರದ ಇಂಪಾದ ಧ್ವನಿಗಳೂ ಶೋಭಿಸುತ್ತಿರಲು ರಾಜಧಾನಿಯನ್ನು ಕುರಿತು ಚಂದ್ರಾಪೀಡನು ಬರುತ್ತಿರಲಾಗಿ,

Categories
ಕನ್ನಡ ಕರ್ಣಾಟಕ ಕಾದಂಬರಿ ಪ್ರಾಚೀನ ಕೃತಿಗಳು

ಕಾದಂಬರಿಯ ಪ್ರಥಮ ಸಂದರ್ಶನ

ಕೃತಿ:ಕಾದಂಬರಿಯ ಪ್ರಥಮ ಸಂದರ್ಶನ
ಲೇಖಕರು:
ಕೃತಿಯನ್ನು ಓದಿ

Categories
ಕನ್ನಡ ಕರ್ಣಾಟಕ ಕಾದಂಬರಿ ಪ್ರಾಚೀನ ಕೃತಿಗಳು

ಚಂದ್ರಾಪೀಡ ಕಾದಂಬರಿಯರ ಪುನಸ್ಸಮಾಗಮ

ಕೃತಿ:ಚಂದ್ರಾಪೀಡ ಕಾದಂಬರಿಯರ ಪುನಸ್ಸಮಾಗಮ
ಲೇಖಕರು: ನಾಗವರ್ಮನ ವಾಗ್ಗುಂಫ
ಕೃತಿಯನ್ನು ಓದಿ

Categories
ಕನ್ನಡ ಕರ್ಣಾಟಕ ಕಾದಂಬರಿ ಪ್ರಾಚೀನ ಕೃತಿಗಳು

ಕಠಿನ ಪದಗಳ ಅರ್ಥ

ಕೃತಿ-ಕಠಿನ ಪದಗಳ ಅರ್ಥ
ಸರಣಿ-ಕನ್ನಡ, ಕರ್ಣಾಟಕ ಕಾದಂಬರಿ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕರ್ಣಾಟಕ ಕಾದಂಬರಿ ಪ್ರಾಚೀನ ಕೃತಿಗಳು

ಕರ್ನಾಟಕ ಕಾದಂಬರಿ

ಕೃತಿ:ಕರ್ನಾಟಕ ಕಾದಂಬರಿ – ಕಥಾವತರಣಂ

ಲೇಖಕರು: ನಾಗವರ್ಮ

ಕೃತಿಯನ್ನು ಓದಿ     |     Download

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಗದಾ ಪರ್ವ

ಕೃತಿ:ಗದಾ ಪರ್ವ
ಲೇಖಕರು ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಶಲ್ಯ ಪರ್ವ

ಕೃತಿ-ಶಲ್ಯ ಪರ್ವ
ಸರಣಿ-ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಸಭಾ ಪರ್ವ

ಕೃತಿ:ಸಭಾ ಪರ್ವ
ಲೇಖಕರು ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ತೋರಣ ನಾಂದಿ

ಕೃತಿ-ತೋರಣ ನಾಂದಿ
ಸರಣಿ-ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಉದ್ಯೋಗ ಪರ್ವ

ಕೃತಿ:ಉದ್ಯೋಗ ಪರ್ವ
ಲೇಖಕರು: ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ವಿರಾಟ ಪರ್ವ

ಕೃತಿ:ವಿರಾಟ ಪರ್ವ
ಲೇಖಕರು ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಅರಣ್ಯಪರ್ವ

ಕೃತಿ-ಅರಣ್ಯಪರ್ವ
ಸರಣಿ-ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಆದಿಪರ್ವ

ಕೃತಿ-ಆದಿಪರ್ವ
ಲೇಖಕರು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಕರ್ಣ ಪರ್ವ

ಕೃತಿ-ಕರ್ಣ ಪರ್ವ
ಸರಣಿ-ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ದ್ರೋಣ ಪರ್ವ

ಕೃತಿ:ದ್ರೋಣ ಪರ್ವ
ಲೇಖಕರು ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕುಮಾರವ್ಯಾಸ ಭಾರತ ಪ್ರಾಚೀನ ಕೃತಿಗಳು

ಭೀಷ್ಮ ಪರ್ವ

ಕೃತಿ:ಭೀಷ್ಮ ಪರ್ವ
ಲೇಖಕರು ಕನ್ನಡ, ಕುಮಾರವ್ಯಾಸ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಪಂಪಮಹಾಕವಿ ವಿರಚಿತ ಪಂಪಭಾರತಂ ಪ್ರಾಚೀನ ಕೃತಿಗಳು

ಉಪೋದ್ಘಾತ

ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ. ೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ ಹಿಂದೆ ಕನ್ನಡ ಸಾಹಿತ್ಯವು ಯಾವುದೋ ಒಂದು ರೀತಿಯಲ್ಲಿದ್ದಿರಬೇಕು. ರಾಜ್ಯದ ಆಡಳಿತಗಳ ಸಂಘಟ್ಟದಿಂದಲೂ ಸಾಮಾಜಿಕ ಜೀವನದ ಚಳುವಳಿಗಳಿಂದಲೂ ಸಾಹಿತ್ಯದಲ್ಲಿ ಕ್ರಮೇಣ ಬದಲಾವಣೆಗಳು ತೋರಿ ಬರತೊಡಗಿದವು. ಒಂದು ಕಾಲವು ಇನ್ನೊಂದು ಕಾಲವಾಗಿ ಪರಿವರ್ತನೆಯಾಗುವಾಗ ಇವೆರಡು ಕಾಲಗಳ ಸಂಘಟನೆಗಳಿಂದಲೂ ಪರಸ್ಪರ ಸಮಾಗಮಗಳಿಂದಲೂ ಸಮಾಜದಲ್ಲಿ ಅನೇಕ ಹೊಸವಿಚಾರಗಳು ತಲೆದೋರಿ ತತಲವಾಗಿ ಕೃತಿಗಳು ಹೊರಬಿದ್ದು ವ್ಯವಹಾರದಲ್ಲಿ ಬರುವುವು. ಆದರೆ ಈ ಎರಡು ಕಾಲಗಳ ಸಂ ಸಮಯದಲ್ಲಿ ಸಿಕ್ಕಿಕೊಂಡಿರುವ ಕಾಲದ ಪರಿಸ್ಥಿತಿಯು ಬಹುವಿಲಕ್ಷಣವಾಗಿರುವುದು. ಜನಾಂಗವು ಪೂರ್ವಕಾಲದ ನಡವಳಿಕೆಗಳನ್ನು ಒಂದೇ ಸಲ ಬಿಟ್ಟು ಬಿಡುವುದಿಲ್ಲ. ಇದಕ್ಕೆ ಹೆಚ್ಚು ಕಾಲ ಬೇಕಾಗುತ್ತದೆ. ಈ ಮಧ್ಯೆ ಪೂರ್ವದ ನಡತೆಗಳನ್ನು ಬಿಡದಂತೆಯೂ ಹೊಸ ಚಳುವಳಿಗಳನ್ನು ಸಂಪೂರ್ಣವಾಗಿ ನಿರಾಕರಿಸದಂತೆಯೂ ಹಾಗೂ ಹೀಗೂ ಇರತಕ್ಕದ್ದು ಸ್ವಭಾವ. ಕ್ರಮೇಣ ಹಳೆಯ ಚಾಳಿಗಳೆಲ್ಲ ಮಾಯವಾಗಿ ನವೀನ ಪದ್ಧತಿಗಳು ಸಮಾಜದಲ್ಲಿ ಊರಿಕೊಳ್ಳುವುವು. ಆಮೇಲೆ ಅವುಗಳಿಗೆ ಪೂರ್ಣ ಆಶ್ರಯವು ದೊರೆತು ಅವುಗಳು ಸರ್ವತೋಮುಖವಾಗಿ ಬೆಳೆದು ತತ್ಕಾಲದ ಪ್ರಚಲಿತ ಪದ್ಧತಿಗಳಾಗಿ ಪರಿಣಮಿಸುವುವು. ಕರ್ನಾಟಕದ ಹತ್ತನೆಯ ಶತಮಾನದ ಸ್ಥಿತಿಯೂ ಹೀಗೆಯೇ. ೯-೧೦ನೆಯ ಶತಮಾನಗಳ ಹಿಂದೆ ಕರ್ನಾಟಕ ಸಾಹಿತ್ಯವು ಹೇಗಿತ್ತೆಂಬುದನ್ನು ಖಚಿತವಾಗಿ ನಿರ್ಧರಿಸಲು ಸಾಕಷ್ಟು ಸಲಕರಣೆಗಳು ಇನ್ನೂ ದೊರೆತಿಲ್ಲ. ಲಬ್ಧವಾದ ಕೆಲವು ಗ್ರಂಥಗಳ ಸಹಾಯದಿಂದಲೂ ಶಾಸನಗಳ ನೆರವಿನಿಂದಲೂ ಹೇಗಿದ್ದಿತೆಂಬುದನ್ನು ಊಹಿಸಲು ಅವಕಾಶವಿದೆ.

ಸುಮಾರು ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಉತ್ತರ ದೇಶದಲ್ಲಿ ತಲೆದೋರಿದ ವೀರಕ್ಷಾಮದ ನಿಮಿತ್ತ ದಕ್ಷಿಣಕ್ಕೆ ವಲಸೆ ಬಂದ ಭದ್ರಬಾಹುವಿನ ತಂಡದವರು ಅಲ್ಲಿಂದ ಮುಂದಕ್ಕೆ ತಮ್ಮ ದಿಗಂಬರ ಪಂಥವನ್ನು ದಕ್ಷಿಣದಲ್ಲಿ ಬೆಳೆಸಿಕೊಂಡು ಬಂದರು. ಶ್ರವಣ ಬೆಳುಗೊಳವು ಅವರ ಕೇಂದ್ರವಾಯಿತು. ಅಲ್ಲಿಂದ ಅವರು ತಮ್ಮ ಧರ್ಮಪ್ರಸಾರವನ್ನು ಉದಾರವಾಗಿ ಮಾಡತೊಡಗಿದರು. ವೈದಿಕ ಧರ್ಮಕ್ಕೆ ನೇರವಿರೋಧವಾಗಿದ್ದ ಬೌದ್ಧ ಜೈನಧರ್ಮಗಳಲ್ಲಿ ಬೌದ್ಧಮತವು ಜನರ ಮೇಲೆ ವಿಶೇಷ ಪ್ರಭಾವಶಾಲಿಯಾಗದೆ ೮-೯ನೆಯ ಶತಮಾನದ ವೇಳೆಗೆ ನಾಮಾವಶೇಷವಾಗಿರಬೇಕು. ಜೈನರಿಗೆ ಹಿಂದೆ, ಕರ್ನಾಟಕದಲ್ಲಿ ದ್ರಾವಿಡಸಂಸ್ಕೃತಿಯೂ ಒಂದು ಬೌದ್ಧಸಾಹಿತ್ಯವೂ ಇದ್ದಿರಬೇಕು. ಇವೆರಡು ಆ ಕಾಲಕ್ಕೆ ಹಿಂದೆಯೇ ಮಾಯವಾಗಿರಬೇಕು. ಜೈನರಾದರೋ ಬೌದ್ಧರಂತಲ್ಲದೆ ತಮ್ಮ ಮತ ಧರ್ಮಗಳನ್ನು ದೇಶಕಾಲಕ್ಕೆ ಅನ್ವಯಿಸುವಂತೆ ಮಾರ್ಪಡಿಸಿಕೊಂಡು ಅವುಗಳಿಂದ ತಾವೂ ಪ್ರಭಾವಿತರಾಗಿ ದೇಶೀಯರ ಮನಸ್ಸನ್ನು ಆಕರ್ಷಿಸಿದರು. ಜೈನ ಸಂನ್ಯಾಸಿಗಳು ವಿರಕ್ತರೂ ಆಚಾರಶೀಲರೂ ಆಗಿದ್ದುದರಿಂದ ರಾಜ ನಿರ್ಮಾಪಕರಾಗಿ ಅವರ ಆದರ ಪೋಷಣೆಗೂ ಅವರ ಸಾಮಂತರ ಮತ್ತು ಅಕಾರಿಗಳ ಗೌರವಕ್ಕೂ ಪಾತ್ರರಾದರು. ಜೈನರ ಪಂಚಾಣುವ್ರತಗಳೂ, ದಾನಧರ್ಮಗಳೂ, ಪ್ರಜಾಸಮೂಹದ ಆದರ ಗೌರವಗಳಿಗೆ ಪಾತ್ರವಾಗಿ ಅವರ ಜೈನಧರ್ಮವು ಮನರಂಜಕವಾಯಿತು. ವೈದಿಕ ಪಂಥಕ್ಕೆ ಸರಿಹೋಗುವ ಅವರ ಆಚಾರ ವ್ಯವಹಾರಗಳೂ, ಜಾತಿಪದ್ಧತಿಗಳೂ ಕಾಲಾನುಕ್ರಮದಲ್ಲಿ ವೈದಿಕ ಆಕಾರಗಳನ್ನೇ ತಾಳಿದವು. ಜೈನಪಂಡಿತರೂ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿದ್ದ ತಮ್ಮ ಮತಗ್ರಂಥಗಳನ್ನು ಸಂಸ್ಕ ತ ಮತ್ತು ದೇಶೀಯ ಭಾಷೆಗಳಿಗೆ ಅಳವಡಿಸಿ ಪರಿವರ್ತಿಸಿ ತಮ್ಮ ಶಾಸ್ತ್ರಗ್ರಂಥಗಳನ್ನು ಆಗ ಪ್ರಚಾರದಲ್ಲಿದ್ದ ಇತರ ಶಾಸ್ತ್ರಗ್ರಂಥಗಳ ಮಾದರಿಯಲ್ಲಿ ರಚಿಸಿ ಇತರ ಪಂಡಿತರೊಡನೆ ವಾಕ್ಕಾರ್ಥಮಾಡಿ ಅವರನ್ನು ಜಯಿಸಿ ಅವರಿಂದ ತಾವೂ ಜಯಿಸಲ್ಪಟ್ಟು ತಮ್ಮ ಶಾಸ್ತ್ರಗ್ರಂಥಗಳನ್ನು ಜೀವಂತವಾಗಿ ಬೆಳೆಸಿಕೊಂಡು ಬಂದರು.ಜೈನರು ಕರ್ನಾಟಕದಲ್ಲಿ ಕಾಲೂರಿದ ಮೇಲೆ ಅವರ ಪ್ರಾಬಲ್ಯವು ಕ್ರಮಕ್ರಮವಾಗಿ ಹೆಚ್ಚುತ್ತ ಹೋಗಿ ಕಾಲಕ್ರಮದಲ್ಲಿ ಕರ್ನಾಟಕವು ಅವರ ಒತ್ತಂಬಕ್ಕೆ ಒಳಪಟ್ಟು ತನ್ನ ನಿಜವಾದ ದ್ರಾವಿಡ ಸಂಸ್ಕೃತಿಯನ್ನು ತ್ಯಜಿಸಿರಬೇಕೆಂದು ಹೇಳಬಹುದು. ಮತಾಭಿಮಾನಿಗಳಾದ ಜೈನರು ತಮಗಿಂತ ಹಿಂದೆ ಇದ್ದ ಗ್ರಂಥಗಳನ್ನು ಇಲ್ಲದ ಹಾಗೆ ಮಾಡಿದುದರಿಂದಲೋ ಸರಿಯಾಗಿ ರಕ್ಷಿಸದೇ ಇದ್ದುದರಿಂದಲೋ ಆಗಿನ ಗ್ರಂಥಗಳೆಲ್ಲ ನಾಶವಾಗಿರಬೇಕು. ಆದರೆ ಒಂದು ವಿಷಯವನ್ನುಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರಬೇಕು. ಅದುವರೆಗಿದ್ದ ಗ್ರಂಥಗಳಲ್ಲಿ ಅನಾದರಣೆಯನ್ನು ತೋರಿದರೂ ಜೈನರು ಕನ್ನಡದಲ್ಲಿ ಅನಾದರಣೆಯನ್ನು ತೋರಲಿಲ್ಲ. ಅವರು ಕನ್ನಡ ಭಾಷೆಯನ್ನು ಮೆಚ್ಚಿ ಅದನ್ನು ಚೆನ್ನಾಗಿ ವ್ಯಾಸಂಗ ಮಾಡಿ ಅದರಲ್ಲಿ ಪಾಂಡಿತ್ಯವನ್ನು ಪಡೆದು ತನ್ಮೂಲಕವಾಗಿ ತಮ್ಮ ಮತತತ್ತ್ವಗಳನ್ನು ಜನಸಾಮಾನ್ಯರಿಗೆ ಬೋಸತೊಡಗಿದರು. ಕರ್ನಾಟಕದ ದ್ರಾವಿಡ ಸಂಸ್ಕ ತಿಯ ಸ್ಥಾನದಲ್ಲಿ ತಮ್ಮ ಸಂಸ್ಕೃತಿಯನ್ನು ನೆಲೆಗೊಳಿಸಿದರು. ಮೇಲೆಯೇ ತಿಳಿಸಿರುವಂತೆ ತಮ್ಮ ಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷಾಂತರಿಸಿ ಪಂಡಿತಪಾಮರರಿಗೆ ಸುಲಭವಾಗಿ ದೊರಕುವಂತೆ ಮಾಡಿದರು. ಸಮಂತಭದ್ರ ಕವಿಪರಮೇಷ್ಠಿ ಪೂಜ್ಯಪಾದ ಮೊದಲಾದವರು ಸಂಸ್ಕೃತ ಭಾಷೆಯಲ್ಲಿಯೇ ತಮ್ಮ ಗ್ರಂಥಗಳನ್ನು ರಚಿಸಿ ತಮ್ಮ ಪ್ರಭಾವವನ್ನು ನೆಲೆಗೊಳಿಸಿದಂತೆ ಕಾಣುತ್ತದೆ. ಅವರಿಂದ ಮುಂದೆ ಬಂದವರು ಸಂಸ್ಕೃತ ಕನ್ನಡ ಭಾಷೆಗಳೆರಡನ್ನೂ ಮತಪ್ರಚಾರಕ್ಕಾಗಿ ಉಪಯೋಗಿಸಿಕೊಂಡು ಕರ್ನಾಟಕವನ್ನು ಸ್ವಾನ ಪಡಿಸಿಕೊಂಡರು. ಒಂಬತ್ತನೆಯ ಶತಮಾನದಲ್ಲಿದ್ದ ನೃಪತುಂಗನು ಕನ್ನಡದಲ್ಲಿ ಅನೇಕ ಗದ್ಯಪದ್ಯಾತ್ಮಕ ಗ್ರಂಥಗಳು ತನ್ನ ಕಾಲದಲ್ಲಿದ್ದವೆಂದು ಹೇಳಿ ಕೆಲವು ಕವಿಗಳ ಹೆಸರನ್ನು ಸೂಚಿಸಿದ್ದಾನೆ. ಆದರೆ ಆ ಕವಿಗಳ ಕೃತಿಗಳಾವುವೂ ಉಪಲಬ್ದವಾಗಿಲ್ಲ.

Categories
ಕನ್ನಡ ಪಂಪಮಹಾಕವಿ ವಿರಚಿತ ಪಂಪಭಾರತಂ ಪ್ರಾಚೀನ ಕೃತಿಗಳು

ಪಂಪಭಾರತಂ

ಕೃತಿ-ಪಂಪಭಾರತಂ
ಸರಣಿ-ಕನ್ನಡ, ಪಂಪಮಹಾಕವಿ ವಿರಚಿತ ಪಂಪಭಾರತಂ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಜೈಮಿನಿ ಭಾರತ ಪ್ರಾಚೀನ ಕೃತಿಗಳು

ಕವಿ ಲಕ್ಷ್ಮೀಶನ ಕೀರ್ತನೆಗಳು

ಕೃತಿ-ಜೈಮಿನಿ ಭಾರತ
ಸರಣಿ-ಕನ್ನಡ, ಜೈಮಿನಿ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಜೈಮಿನಿ ಭಾರತ ಪ್ರಾಚೀನ ಕೃತಿಗಳು

ಲಕ್ಷ್ಮೀಶನ ಕಾವ್ಯ ಸಂಪತ್ತು

ಕೃತಿ:ಜೈಮಿನಿ ಭಾರತ, ಪ್ರಾಚೀನ ಕೃತಿಗಳು
ಲೇಖಕರು ಕನ್ನಡ, ಜೈಮಿನಿ ಭಾರತ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಪ್ರಾಚೀನ ಕೃತಿಗಳು ವಡ್ಡಾರಾಧನೆ

ಗುರುದತ್ತ ಭಟಾರರ ಕಥೆ

ಕೃತಿ-ವಡ್ಡಾರಾಧನೆ
ಸರಣಿ-ಕನ್ನಡ, ಪ್ರಾಚೀನ ಕೃತಿಗಳು, ವಡ್ಡಾರಾಧನೆ
ಕೃತಿಯನ್ನು ಓದಿ

Categories
ಕನ್ನಡ ಕರ್ಣಾಟಕ ಪಂಚತಂತ್ರಂ ಪ್ರಾಚೀನ ಕೃತಿಗಳು

ಪಂಚತಂತ್ರದ ಶೈಲಿ

ಕೃತಿ-ಕರ್ಣಾಟಕ ಪಂಚತಂತ್ರಂ
ಸರಣಿ-ಕನ್ನಡ, ಕರ್ಣಾಟಕ ಪಂಚತಂತ್ರಂ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ

Categories
ಕನ್ನಡ ಕವಿರಾಜಮಾರ್ಗ ಪ್ರಾಚೀನ ಕೃತಿಗಳು

ಕವಿರಾಜಮಾರ್ಗ

ಕೃತಿ-ಕವಿರಾಜಮಾರ್ಗ
ಸರಣಿ-ಕನ್ನಡ, ಕವಿರಾಜಮಾರ್ಗ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ