ಮೊದಲೊಳ್ ನಿನಗಾಂ ಪೇೞ್ದಮೃ
ತದಿನುದಯಿಸಿದಪ್ಸರಾಂಗನಾನ್ವಯದೊಳ್ ಪು
ಟ್ಟಿದಳಲ್ಲಿ ಮವನಮದವತಿ
ಮದಿರೇಕ್ಷಣೆ ಮದಿರೆಯೆಂಬ ಕನ್ಯಾರತ್ನಂ       ೧

ಆ ಕನ್ನೆಯ ಕೈವಿಡಿದಂ
ಸ್ವೀಕೃತ ಗಂರ್ಧವರಾಜ್ಯಮಹಿಮೋದಯನ
ಪ್ರಾಕೃತ ನಿಜವಿಭವಕೃತಾ
ರ್ಥೀಕೃತ ಬುಧಜನಮನೋರಥಂ ಚಿತ್ರರಥಂ             ೨

ಆ ವಿಭುಗಂತಪುರಕಾಂ
ತಾವಿಭವಮದೆಂತುಮುಳ್ಳೊಡಂ ತನಗೆ ಮಹಾ
ದೇವಿವೆಸರೆಸೆಯೆ ಮದಿರಾ
ದೇವಿಯೆ ಪಟ್ಟಕ್ಕೆ ತಾನೆ ಮೊದಲೆನಿಸಿರ್ದಳ್             ೩

ಆ ದಂಪತಿಗಕಪ್ರೇ
ಮೋದಯಮೊದವಲ್ಕೆ ಪುಟ್ಟಿದಳ್ ಭುವನಜನಾ
ಹ್ಲಾದಂ ಜನಿಯಿಸುವಿನೆಗಂ
ಕಾದಂಬರಿಯೆಂಬ ಪೆಸರ ಕನ್ಯಾರತ್ನಂ         ೪

ಒಡನುಂಡೋಡನಿರ್ದೊಡವಳೆ
ದೊಡನಾಡಿಗಳಾಗಿ ನೃತ್ಯಗೀತಂ ಮೊದಲಾ
ಗೊಡನೊಡನೆ ಕಲ್ತು ಕಲೆಗಳ
ನೆಡೆವಿಡದಿರ್ವರ್ಗಮಾಯ್ತು ಪರಮಪ್ರೇಮಂ   ೫

ವ|| ಅನಂತರಂ ಶೈಶವಮಂ ಪತ್ತುವಿಟ್ಟಿರ್ಪುದುಮಾ ಕಾದಂಬರೀದೇವಿಯುಂ ಮದೀಯ ಹತವೃತ್ತಾಂತಮಂ ಕೇಳ್ದತ್ಯಂತ ಶೋಕಾಕ್ರಾಂತೆಯಾಗಿ

ಇರಲಿಂತಪ್ಪೊಂದು ಶೋಕಾಕುಲತೆಯೊಳೆ ಮಹಾಶ್ವೇತೆ ಮತ್ತೊರ್ವನಂ ತಾಂ
ನೆರೆದೇನಾನಿಂತು ಕನ್ಯಾವ್ರತದೊಳೆ ಕಳೆವೆಂ ಕಾಲಮಂ ತಂದೆಯಿಂ ತಾ
ನಿರದಾವಂಗೆನ್ನನೀಯಲ್ ಬಗೆದು ಮನದೊಳಂತುಜ್ಜುಗಂಗೆಯ್ವೊಡಂ ಚೆ
ಚ್ಚರಮೆನ್ನೀ ಪ್ರಾಣಮಂ ತಾಂ ಬಿಡದಿರೆನೆನುತಂ ನಿಶ್ಚಯಂಗೆಯ್ದಳಾಗಳ್    ೬

೧. ರಾಜಕುಮಾರ, ಅಮೃತದಿಂದ ಅಪ್ಸರಸ್ತ್ರೀಯರ ಒಂದು ವಂಶವು ಹುಟ್ಟಿತೆಂದು ನಿನಗೆ ಮೊದಲೇ ನಾನು ಹೇಳಿದೆನಷ್ಟೆ. ಅದರಲ್ಲಿ ಮನ್ಮಥನು ಹೆಮ್ಮೆಗೆ ಪಾತ್ರಳಾದ, ಜನರಿಗೆ ಉನ್ಮಾದವನ್ನುಂಟುಮಾಡುವಷ್ಟು ಸುಂದರವಾದ ಕಣ್ಣುಳ್ಳ ಮದಿರೆಯೆಂಬ ಕನ್ಯಾಮಣಿಯು ಹುಟ್ಟಿದಳು. ೨. ಆ ಕನ್ಯೆಯನ್ನು ಗಂಧರ್ವಲೋಕದ ರಾಜ್ಯಭಾರವನ್ನು ನಿರ್ವಹಿಸುವ, ಪ್ರಭಾವದ ಸಮೃದ್ಧಿಯಿಂದ ಕೂಡಿರುವ, ಮಿಗಿಲಾದ ತನ್ನ ಸಂಪತ್ತಿನಿಂದ ವಿದ್ವಾಂಸರ ಮನೋರಥವನ್ನು ಈಡೇರಿಸುತ್ತಿದ್ದ ಚಿತ್ರರಥನೆಂಬ ಗಂಧರ್ವರಾಜನು ಮದುವೆಯಾದನು. ೩. ಆ ಗಂಧರ್ವರಾಜನ ರಾಣೀವಾಸದಲ್ಲಿ ಬೇಕಾದಷ್ಟು ಜನ ರಾಣಿಯರಿದ್ದರು. ಹಾಗಿದ್ದರೂ “ಮಹಾರಾಣಿ” ಎಂಬ ಹೆಸರಿನಿಂದ ಶೋಭಿಸುವ ಮದಿರಾದೇವಿಯೇ ಪಟ್ಟದ ರಾಣಿಯಾಗಿದ್ದಳು. ೪. ಆ ದಂಪತಿಗಳಲ್ಲಿ ಅತ್ಯಕವಾದ ಪ್ರೀತಿಯು ಬೆಳೆಯುತ್ತಿರಲು ಲೋಕದ ಜನರಿಗೆ ಆನಂದವನ್ನುಂಟುಮಾಡುವ ಕಾದಂಬರಿ ಎಂಬ ಕನ್ಯಾರತ್ನವು ಅವರಿಗೆ ಹುಟ್ಟಿದಳು. ೫. ನಾನೂ ಅವಳೂ ಬಾಲ್ಯದಿಂದ ಜೊತೆಯಲ್ಲಿ ಊಟ ಮಾಡುತ್ತಿದ್ದೆವು. ಜೊತೆಯಲ್ಲೇ ಇರುತ್ತಿದ್ದೆವು. ಜೊತೆಯಲ್ಲೇ ಬೆಳೆಯುತ್ತಿದ್ದೆವು. ಯಾವಾಗಲೂ ಒಡನಾಡಿಗಳಾಗಿರುತ್ತಿದ್ದೆವು, ನೃತ್ಯ ಗೀತ ಮೊದಲಾದ ಕಲೆಗಳನ್ನು ಜೊತೆಯಲ್ಲೇ ಕಲಿಯುತ್ತಿದ್ದೆವು. ಇದರಿಂದ ನಮ್ಮಿಬ್ಬರಿಗೂ ಅವಿಚ್ಛಿನ್ನವಾದ ಗಾಢಸ್ನೇಹವುಂಟಾಯಿತು. ವ|| ಬಳಿಕ ಬಾಲ್ಯವು ಕಳೆಯಲಾಗಿ ಆ ಕಾದಂಬರಿಯು ನನ್ನ ಹಾಳುಕತೆಯನ್ನು ಕೇಳಿ ಬಹಳ ದುಖದಿಂದ ಪೀಡಿತೆಯಾಗಿ ೬. ‘ಮಹಾಶ್ವೇತೆಯು ಪುರುಷನ ಪ್ರಣಯಕ್ಕೆ ಬಿದ್ದು ಇಷ್ಟೊಂದು ದುಖದಿಂದ ಪೀಡಿತೆಯಾಗಿರಲಾಗಿ ನಾನೂ

ವ|| ಅಂತುಪಾರೂಢಯವ್ವನೆಯಪ್ಪ ಮಗಳ ನಿಶ್ಚಯಮಂ ಮದಿರಾಮಹಾದೇವಿಯುಮರಸು ಚಿತ್ರರಥನುಂ ಕರ್ಣಪರಂಪರೆಯಿಂ ಪರಿಜನದತ್ತಣಿಂ ಕೇಳ್ದು ಪಿರಿದುಮೞಲ್ದು ಕ್ಷೀರೋದನೆಂಬ ಕಂಚುಕಿಯಂ ಕರೆದೆನ್ನಲ್ಲಿಗಟ್ಟಿದೊಡಾತಂ ಬಂದು

ತನ್ನ ಮಹಾವ್ಯತಿಕರದೊಳ್
ಮುನ್ನವೆ ಬೆಂದವರ್ಗೆ ಮತ್ತೆ ಕಾದಂಬರಿಯಿಂ
ದಂ ನೋವು ಬಂದುದದಱಂ
ದಿನ್ನನುವಿನೊಳಾನೆ ಶರಣಮಾ ವ್ಯತಿಕರದೊಳ್         ೭

ವ|| ಎಂದು ಜನನೀಜನಕರಟ್ಟಿದರೆಂದು ನುಡಿಯೆ

ಗುರುಗಳ್ ತಾವೇನನೊಂದಂ ಬೆಸಸಿದರದನೇ ಕೊಳ್ವುದಿನ್ನೆನ್ನ ಜೀವಂ
ಬೆರಸಾನಿಂತಿರ್ಪುದಂ ತಾಂ ಬಯಸುವ ಬಗೆಯೆಂತೆಂದೊಡೆಂದಿಂತು ಕಾದಂ
ಬರಿಗಾದಂ ಬುದ್ಧಿವೇೞ್ದಟ್ಟದೆನಿರದಕಪ್ರೇಮದಿಂ ಸೌವಿದಲ್ಲಂ
ಬೆರಸತ್ತಲ್ ಪೋದಳಂತಾಗಳೆ ತರಳಿಕೆಯುಂ ನೀವುಮೆೞ್ತಂದಿರೀಗಳ್     ೮

ವ|| ಎಂದು ಪೇೞ್ದಳನ್ನೆಗಮಿತ್ತ ಲಾಂಛನಚ್ಛಲದಿಂ ಶೋಕಾನಲದಗ್ಧಮಪ್ಪ ಮಹಾಶ್ವೇತಾಹೃದಯಮಂ ವಿಡಂಬಿಸುರಂತೆಯುಂ ಮುನಿಕುಮಾರವಧ ಮಹಾಪಾತಕಮಂ ತಾಳ್ದಿದಂತೆಯುಮಾಗಿ

ಇನಿಸಂ ಮುಚ್ಚಿರೆ ಕೃಷ್ಣಾ
ಜಿನಮವಿರಳ ಭಸ್ಮಧವಳಮಗಜಾರಾಮಾ
ಸ್ತನಮಂಡಳಮೊಪ್ಪಿದುದೆಂ
ಬಿನಮುದಯಿಸಿದುದು ಮೃಗಾಂಕಮಂಡಲಮಾಗಳ್    ೯

ವ|| ಅಂತು ನಿಖಿಲಲೋಕನಿದ್ರಾಮಂಗಲಕಲಶದಂತೆ ಕುಮುದೀಬಾಂಧವಂ ಗಗನಾಂಗಣದೊಳೆಸೆಯೆ ಸುಪ್ತೆಯಾದ ಮಹಾಶ್ವೇತೆಯಂ ನೋಡಿ ಚಂದ್ರಾಪೀಡಂ ಪಲ್ಲವ ಶಯನತಲದೊಳ್ ಮೆಯ್ಯನಿಕ್ಕಿ ಬೀಡಂ ನೆನೆದು

ಮದುವೆ ಮಾಡಿಕೊಳ್ಳದೆ ಬ್ರಹ್ಮಚಾರಿಣಿಯಾಗಿಯೇ ಕಾಲವನ್ನು ಕಳೆಯುತ್ತೇನೆ. ಇದಕ್ಕೆ ಅವಕಾಶ ಕೊಡದೆ ನನ್ನ ತಂದೆಯೇನಾದರೂ ನನ್ನನ್ನು ಯಾರಿಗಾದರೂ ಮದುವೆ ಮಾಡಿಕೊಡಲು ಯೋಚಿಸಿ ಪ್ರಯತ್ನಮಾಡಿದರೆ ಆಗ ನಾನು ಖಂಡಿತವಾಗಿಯೂ ಪ್ರಾಣ ಕಳೆದುಕೊಳ್ಳದೆ ಇರುವುದಿಲ್ಲ’ ಎಂದು ಪ್ರತಿಜ್ಞೆಮಾಡಿದ್ದಾಳೆ. ವ|| ಹೀಗೆ ಹರಯಕ್ಕೆ ಬಂದ ಮಗಳ ನಿಶ್ಚಯವನ್ನು ಮದಿರಾಮಹಾದೇವಿಯೂ ಚಿತ್ರರಥನೂ ಕರ್ಣಾಕರ್ಣಿಕೆಯಾಗಿ ಪರಿವಾರದ ಜನರಿಂದ ಕೇಳಿ ಬಹಳವಾಗಿ ದುಖಪಟ್ಟು ಕ್ಷೀರೋದನೆಂಬ ಕಂಚುಕಿಯನ್ನು ಕರೆದು ನನ್ನ ಹತ್ತಿರಕ್ಕೆ ಕಳುಹಿಸಿದರು. ಆಗ ಅವನು ಬಂದು. ೭. ‘ಮಗಳೆ, ನಿನ್ನ ಒಂದು ಪ್ರಸಂಗದಿಂದ ಮೊದಲೆ ಮನಸ್ಸಿನಲ್ಲಿ ಬೇಗುದಿಗೊಳ್ಳುತ್ತಿರುವ ನಮಗೆ ಮತ್ತೆ ಈಗ ಕಾದಂಬರಿಯಿಂದ ವ್ಯಥೆಯು ಬಂದೊದಗಿದೆ. ಆದ್ದರಿಂದ ಇನ್ನು ಈ ವಿಷಯದಲ್ಲಿ ನೀನೇ ನಮಗೆ ದಾರಿ ತೋರಿಸಬೇಕು’. ವ|| ಎಂದು ಕಾದಂಬರಿಯ ತಾಯಿ ತಂದೆಗಳು ಹೇಳಿಕಳುಹಿಸಿದ್ದಾರೆ ಎಂದು ಹೇಳಲಾಗಿ ೮. “ಸಖಿ ಕಾದಂಬರಿ ನಾನು ಜೀವಸಹಿತವಾಗಿರಬೇಕೆಂಬುದನ್ನು ನೀನು ಇಷ್ಟಪಡುವುದಾದರೆ ತಾಯಿತಂದೆಗಳು ಹೇಳಿದಂತೆ ನೀನು ಕೇಳಬೇಕು” ಎಂದು ಕಾದಂಬರಿಗೆ ಅತ್ಯಕ ಪ್ರೀತಿಯಿಂದ ಸರಿಯಾಗಿ ಬುದ್ಧಿ ಹೇಳಿ ಬಾಯೆಂದು ಆ ಕಂಚುಕಿಯ ಜೊತೆಯಲ್ಲಿ ತರಳಿಕೆಯನ್ನು ಕಳುಹಿಸಿಕೊಟ್ಟೆನು. ಅವಳು ಆ ಕಡೆ ಪ್ರಯಾಣ ಮಾಡಿದಳು. ಈ ಕಡೆ ನೀವೂ ಈಗ ಬಂದಿರಿ. ವ|| ಎಂದು ಹೇಳುತ್ತಿರುವಲ್ಲಿ ಆ ಕಡೆ ಚಂದ್ರಮಂಡಲವು ತನ್ನಲ್ಲಿರುವ ಮಚ್ಚೆಯ ರೂಪದಿಂದ ದುಖಾಗ್ನಿಯಿಂದ ಬೆಂದು ಕಪ್ಪಾದ ಮಹಾಶ್ವೇತಾಹೃದಯವನ್ನು ಅನುಕರಿಸುವಂತೆಯೂ, ಮುನಿಕುಮಾರನಾದ ಪುಂಡರೀಕನ ವಧೆಯಿಂದ ಉಂಟಾದ ಮಹಾಪಾತಕವನ್ನು ಧರಿಸಿರುವವನಂತೆಯೂ ಆಗಿ, ೯. ಸ್ವಲ್ಪ ಭಾಗವು ಕೃಷ್ಣಾಜಿನದಿಂದ ಮುಚ್ಚಿದ್ದು ಉಳಿದ ಭಾಗವು ದಟ್ಟವಾದ ಭಸ್ಮಲೇಪನದಿಂದ ಶುಭ್ರವಾಗಿರುವ ಪಾರ್ವತೀದೇವಿಯ ಎಡಮೊಲೆಯಂತೆ ಶೋಭಿಸುತ್ತ ಆಗ ಉದಯಿಸಿತು. ಟಿ. ಅರ್ಧನಾರೀಶ್ವರನಾದ ಪರಮೇಶ್ವರನ ಎಡಭಾಗದಲ್ಲಿರುವ ಪಾರ್ವತಿಯ ಬಲಮೊಲೆಯು ಪರಮೇಶ್ವರನಲ್ಲಿ ಸೇರಿಹೋಗಿರುವುದರಿಂದ ಎಡೆಮೊಲೆಯನ್ನು ಮಾತ್ರ ಉಪಮೇಯವಾಗಿ ಮಾಡಿದ್ದಾನೆ. ಕಳಂಕವಿಶಿಷ್ಟನಾದ ಚಂದ್ರನಲ್ಲಿ ಕಪ್ಪು ಮತ್ತು ಬಿಳಿಯ ಬಣ್ಣವಿರುವುದರಿಂದ ಈ ಹೋಲಿಕೆ ಬಹಳ ಚೆನ್ನಾಗಿ ಒಪ್ಪುತ್ತದೆ. ವ|| ಹಾಗೆ ಸಮಸ್ತ ಜಗತ್ತಿಗೂ ಮಲಗುವಾಗ ಇಡುವ ಮಂಗಳಕಳಶದಂತೆ ಚಂದ್ರನು ಆಕಾಶದಲ್ಲಿ ಶೋಭಿಸುತ್ತಿರಲು, ಮಹಾಶ್ವೇತೆಯು ನಿದ್ದೆವೋದುದನ್ನು ಗಮನಿಸಿ ಚಂದ್ರಾಪೀಡನು

ಈಯವಸರದೊಳ್ ವೈಶಂ
ಪಾಯನನುಂ ಪತ್ರಲೇಖೆಯುಂ ಭೂಪರುಮಾ
ನೀಯಂದದಿನಗಲಲ್ಕೆನಿ
ತಾಯಸಮಂ ಪಡುವರೆಂದು ಚಿಂತಿಸುತಿರ್ದಂ           ೧೦

ವ|| ಅಂತು ಚಿಂತಿಸುತಿರ್ದಿರುಳಂ ಕಳೆದು ಬೆಳಗಪ್ಪುದುಂ ಕೃತಪ್ರಾಭಾತಿಕ ನಿಯಮನಾಗೆ ಮಹಾಶ್ವೇತೆಯುಮಘಮರ್ಷಣ ನಿಯಮ ಜಪಂಗಳಂ ಮಾಡುತಿರ್ದಳನ್ನೆಗಮಿತ್ತ ಷೋಡಶವರ್ಷವಯಸ್ಕನುಂ ಉದಾತ್ತಾಕಾರನುಂ ವಿಭಕ್ತಮಧ್ಯಾಕಾರನುಂ ವಿಪುಲ ವಕ್ಷಸ್ಥಲನುಂ ದೀರ್ಘಾಯುತ ಬಾಹುಯುಗಳನುಂ ಪರ್ಯುಷಿತ ಚಂದನಾಂಗರಾಗಧೂಸರೋರುದಂಡನುಂ ಕುಂಕುಮಾಂಗರಾಗ ಪಿಂಜರರೂಪನುಂ ಚಾಮೀಕರ ಶೃಂಖಲಾಕಲಾಪನುಂ ನಿಬಿಡ ನಿಯಮಿತ ಕಕ್ಷಬಂಧಾತಿರಿಕ್ತಪ್ರೇಖದ್ದುಕೂಲಪಲ್ಲವನುಂ ವಾಮಪ್ರಕೋಷ್ಠ ಡೋಲಾಯಮಾನ ಮಾಣಿಕ್ಯವಲಯನುಂ ಕರ್ಣಾಭರಣ ವಿಕೀರ್ಯಮಾಣಕಿರಣೇಂದ್ರಚಾಪಪ್ರಭಾಜಾಲನುಂ ಅನವರತ ತಾಂಬೂಲ ಬದ್ಧರಾಗಾನುಕಾರಿ ಬಂಧುರಾಧರನುಂ ದೀರ್ಘಧವಳಲೋಚನನುಂ ಕನಕಪಟ್ಟಗ್ರಥಿತ ಪೃಥುಲ ಲಲಾಟಪಟ್ಟನುಮಳಿಕುಲನೀಲ ಕುಟಿಲಕುಂತಳನುಂ ಅಗ್ರಾಮ್ಯಾಕೃತಿಯುಂ ರಾಜ ಕುಲಸೇವನಾತಿಚತುರನುಮಪ್ಪ ಕೇಯೂರಕನೆಂಬ ಗಂಧರ್ವಕುಮಾರಂಬೆರಸು ತರಳಿಕೆ ಮಹಾಶ್ವೇತೆಯಲ್ಲಿಗೆ ಬಂದೀರ್ವರುಂ ದೂರಾವನತೋತ್ತಮಾಂಗರಾಗಿ ಪೊಡಮಟ್ಟು ಕುಳ್ಳಿರ್ದು

ನಾಡಾಡಿಯಲ್ತು ರೂಪಿನ
ಗಾಡಿಯಿದೆಲ್ಲ್ಲಿರ್ದು ಬಂದುದೆನುತಂ ಚಂದ್ರಾ
ಪೀಡನನತಿವಿಸ್ಮಯದಿಂ
ನೀಡುಂ ನೋಡುತ್ತಮಿರ್ದನಾ ಕೇಯೂರಂ     ೧೧

ವ|| ಆಗಳ್ ಮಹಾಶ್ವೇತೆಯುಂ ನಿರ್ವರ್ತಿತಾನುಷ್ಠಿತೆಯಾಗಿ ತರಳಿಕೆಯ ಮೊಗಮಂ ನೋಡಿ

ನುಡಿದಾನಟ್ಟಿದುದನೊಡಂ
ಬಡಿಸಿದೊ ಮತ್ಸಖಿಯನೆಂದೊಡೀತಂಗೀಗಳ್
ನುಡಿ ಪೋಗು ನೀನೆನುತ್ತೆ
ನ್ನೊಡನಟ್ಟಿದಳಲ್ತೆ ತನ್ನ ವೀಣಾಧರನಂ         ೧೨

ಚಿಗುರಿನ ಹಾಸಿಗೆಯಲ್ಲಿ ಮಲಗಿ ಶಿಬಿರವನ್ನು ನೆನೆಸಿಕೊಂಡು, ೧೦. “ಈ ವೇಳೆಯಲ್ಲಿ ವೈಶಂಪಾಯನನೂ ಪತ್ರಲೇಖೆಯೂ ರಾಜರುಗಳೂ ನಾನು ಹೀಗೆ ಅಗಲಿ ಬಂದುದಕ್ಕೆ ಎಷ್ಟು ಗಾಬರಿಪಡುತ್ತಿರುವರೋ” ಎಂದು ಚಿಂತಿಸುತ್ತಿದ್ದನು. ವ|| ಹಾಗೆ ಚಿಂತಿಸುತ್ತಲೇ ರಾತ್ರಿಯನ್ನು ಕಳೆದನು. ಬೆಳಗಾಗಲು ಪ್ರಾತರ್ವಿಗಳನ್ನು ನೆರವೇರಿಸಿದನು. ಮಹಾಶ್ವೇತೆಯೂ ಎದ್ದು ಅಘಮರ್ಷಣ ಮಂತ್ರಗಳನ್ನು ಜಪಿಸುತ್ತಿದ್ದಳು. ಅಷ್ಟರಲ್ಲಿ ಈ ಕಡೆ ಹದಿನಾರು ವರ್ಷದ ಹರೆಯದ, ಭವ್ಯವಾದ ಆಕಾರವುಳ್ಳ, ತೆಳುವಾದ ಸೊಂಟವುಳ್ಳ, ಪರಿಪುಷ್ಟವಾದ ಎದೆಯುಳ್ಳ, ನೀಳವಾದ ತೋಳುಗಳುಳ್ಳ, ಹಿಂದಿನ ದಿನ ಲೇಪಿಸಿಕೊಂಡಿದ್ದರಿಂದ ಒಣಗಿ ಹೋಗಿದ್ದ ಗಂಧಲೇಪನದಿಂದ ನಸು ಬಿಳುಪಾಗಿರುವ ತೊಡೆಗಳುಳ್ಳ, ಕುಂಕುಮದ ಲೇಪನದಿಂದ ಹೊಂಬಣ್ಣವಾದ ಶರೀರವುಳ್ಳ, ಚಿನ್ನದ ಉಡಿದಾರದ ಸರಪಳಿಯನ್ನು ಕಟ್ಟಿಕೊಂಡಿರುವ, ಗಟ್ಟಿಯಾಗಿ ಸೊಂಟಕ್ಕೆ ಕಟ್ಟಿಕೊಂಡು ಇಳಿಬಿದ್ದಿರುವ ಗಾಳಿಯಿಂದ ಅಲುಗಾಡುತ್ತಿರುವ ನವುರಾದ ರೇಷ್ಮೆಯ ನಡುಕಟ್ಟುಳ್ಳ, ಎಡಮಣಿಕಟ್ಟಿನಲ್ಲಿ ಸಡಿಲವಾಗಿ ಜೋಲಾಡುತ್ತಿರುವ ಮಾಣಿಕ್ಯದ ಬಳೆಯುಳ್ಳ, ಕಿವಿಯ ಕಡಕುಗಳಿಂದ ಹೊರಸೂಸುತ್ತಿರುವ ಕಾಂತಿಗಳಿಂದ ಕಾಮನಬಿಲ್ಲಿನ ಪ್ರಭೆಯ ಸಮೂಹದಿಂದ ಕೂಡಿಕೊಂಡಿರುವವನಂತಿರುವ, ಪದೇಪದೇ ತಾಂಬೂಲಚವರ್ಣದಿಂದ ಕೆಂಬಣ್ಣವನ್ನು ತಾಳಿರುವ ಸುಂದರವಾದ ತುಟಿಯುಳ್ಳ, ವಿಶಾಲವಾಗಿಯೂ ಶುಭ್ರವಾಗಿಯೂ ಇರುವ ಕಣ್ಣುಳ್ಳ, ಚಿನ್ನದ ತಗಡಿನಂತಿರುವ ವಿಶಾಲವಾದ ಹಣೆಯುಳ್ಳ, ದುಂಬಿಗಳ ತಂಡದಂತೆ ಕಪ್ಪಾದ ಕೊಂಕುಕೂದಲುಳ್ಳ, ನಾಗರಿಕನಂದದ ಆಕಾರವುಳ್ಳ, ಅರಮನೆಯ ಊಳಿಗದಲ್ಲಿ ನುರಿತಿರುವ ಕೇಯೂರಕನೆಂಬ ಗಂಧರ್ವತರುಣನೊಂದಿಗೆ ಕೂಡಿಕೊಂಡು ತರಳಿಕೆಯು ಮಹಾಶ್ವೇತೆಯ ಸಮೀಪಕ್ಕೆ ಬಂದಳು. ಇಬ್ಬರೂ ದೂರದಲ್ಲೆ ತಲೆಬಾಗಿ ನಮಸ್ಕರಿಸಿ ಕುಳಿತುಕೊಂಡರು. ೧೧. ‘ಈ ರೂಪದ ಸೊಬಗು ಸಾಮಾನ್ಯವಾದುದಲ್ಲ. ಇವನು ಎಲ್ಲಿಂದ ಬಂದನು?’ ಎಂದು ಕೇಯೂರಕನು ಚಂದ್ರಾಪೀಡನನ್ನು ಬಹಳ ಹೊತ್ತು ನೋಡುತ್ತಾ ಇದ್ದನು. ವ|| ಆಗ ಮಹಾಶ್ವೇತೆಯು ಅನುಷ್ಠಾನಗಳನ್ನು ಮುಗಿಸಿ ತರಳಿಕೆಯ ಮುಖವನ್ನು ನೋಡಿ, ೧೨. “ನಾನು ಹೇಳಿಕಳುಹಿಸಿದ ವಿಷಯವನ್ನು ತನ್ನ ಗೆಳತಿಗೆ ಹೇಳಿ ಒಪ್ಪಿಸಿದೆಯಾ?’ ಎಂದು ತರಳಿಕೆಯನ್ನು ಕೇಳಿದಳು. ಅದಕ್ಕೆ ಅವಳು “ಅಮ್ಮಾ ಕಾದಂಬರಿಯು ತನ್ನ ಉತ್ತರವನ್ನು ಹೋಗಿ ಹೇಳಿಬಾ ಎಂದು ನನ್ನ

ವ|| ಎಂಬುದುಮಾತನಂ ಬೆಸಗೊಳೆ

ಮನಮಂ ನೋಡಲಿದೇಕೆ ತಮ್ಮ ಮನಮಂ ತಾಂ ನೋಡಲೇನಾಂ ತಪೋ
ವನದೊಳ್ ಕೋಟಲೆಗೊಂಡು ದುಖದೆ ತಪಂಗೆಯ್ವುತ್ತಿರಲ್ ಮತ್ತೆಯುಂ
ಮನದೊಳ್ ತಾಂ ಸುಖದಿಂದಮಿರ್ಪಳಿವಳೆಂಬುದ್ವೇಗದಿಂದಕ್ಕನಿಂ
ತಿನಿತೊಂದಂ ನುಡಿದಟ್ಟಿದಳ್ ಪಿರಿದುಮಂತೇನಟ್ಟಲೇಂ ತಕ್ಕುದೋ        ೧೩

ವ|| ಎಂದಿವು ಮೊದಲಾಗಿ ಕಾದಂಬರಿ ನುಡಿದ ನುಡಿಗಳಂ ಕೇಯೂರಕಂ ಬಿನ್ನವಿಸಲದಂ ಕೇಳ್ದು ತನ್ನೊಳೆ ತಾನೆ ಭಾವಿಸಿ

ಬಂದಾನೆ ಪೇೞ್ದಪೆಂ ನಯ
ದಿಂದಲ್ಲಿಗೆ ತಕ್ಕುದೆಲ್ಲಮಂ ಮುನ್ನೀಂ ಪೋ
ಗೆಂದು ಕೞುಪಲ್ಕೆ ಪೋದಂ
ಮುಂದಾ ಕೇಯೂರಕಂ ಸುವಿಲುಳಿತಹಾರಂ    ೧೪

ವ|| ಅಂತಾತಂ ಪೋಗೆ ಚಂದ್ರಾಪೀಡನನಿಂತೆಂದಳ್

ಇದೆ ಸಾರಿರ್ಪುದು ರಾಜಧಾನಿ ಪಿರಿದುಂ ಚಿತ್ರಾವಹಂ ಬಂದು ನೋ
ೞ್ಪುದು ನೀನೆನ್ನೊಡಸಂದು ಮತ್ಸಖಿಗಮೆಂತುಂ ಬುದ್ಧಿವೇೞಲ್ಕೆವೇ
ೞ್ಪುದು ಮತ್ಪ್ರಾಣಸಮಾನೆಯಾಕೆ ನಿಜದಿಂದಸ್ವಸ್ಥೆ ಗಂಧರ್ವಲೋ
ಕದೊಳಿಂದಕ್ಕೆ ಭವದ್ವಿಲೋಕನಸುಖಂ ಭೂಪಾಲವಿದ್ಯಾಧರಾ     ೧೫

ವ|| ಅದಲ್ಲದೆಯುಂ ಮದೀಯ ಪ್ರಾರ್ಥನೆಯಂ ನಿರರ್ಥಕಂ ಮಾಡದಿಂದು ಬಂದಲ್ಲಿ ವಿಶ್ರಮಿಸಿ ನಾಳೆ ಬೀಡಿಂಗೆ ಬಿಜಯಂಗೆಯ್ವುದೆಂದು ಮತ್ತಮಿಂತೆಂದಳ್

ನಿನ್ನನಕಾರಣಬಾಂಧವ
ನಂ ನೋಡಿಯೆ ಶೋಕವಾಱದುದು ಸುಜನರ ಲೋ
ಕೋನ್ನತರ ಪರಹಿತರ ನಿ
ಮ್ಮನ್ನರ ಬರವಾರ್ಗೆ ಸುಖವನುತ್ಪಾದಿಸದೋ            ೧೬

ಜೊತೆಯಲ್ಲಿ ತನ್ನ ವೀಣಾವಾಹಕನಾದ ಈ ಕೇಯೂರನನ್ನು ಕಳುಹಿಸಿದ್ದಾಳೆ”. ವ|| ಎಂದು ಹೇಳಲಾಗಿ ಮಹಾಶ್ವೇತೆಯು ಅವನನ್ನು ಕೇಳಿದಳು. ೧೩. “ಅಕ್ಕನು ನನ್ನ ಮನಸ್ಸನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಹೇಳಿಕಳುಹಿಸಿರಬೇಕು. ಅವಳ ಮನಸ್ಸೂ ನನ್ನ ಮನಸ್ಸೂ ಒಂದೇ, ಆದ್ದರಿಂದ ತನ್ನ ಮನಸ್ಸನ್ನು ತಾನೇ ಪರೀಕ್ಷಿಸಿಕೊಳ್ಳುವುದೇತಕ್ಕೆ? ಅಥವಾ ನಾನು ತಪೋವನದಲ್ಲಿ ದುಖದಿಂದ ಕೋಟಲೆಗೊಂಡು ತಪಸ್ಸು ಮಾಡುತ್ತಿರುವಾಗ ಇವಳು ಮನಸ್ಸಿನಲ್ಲಿ ಸುಖವಾಗಿದ್ದಾಳಲ್ಲ ಎಂಬ ಒಂದು ಮನಸ್ಸಿನ ದುಗುಡದಿಂದ ಹೀಗೆ ಹೇಳಿ ಕಳುಹಿಸಿರಬೇಕು. ಸುಮ್ಮನೆ ಹೀಗೆ ಹೇಳಿಕಳುಹಿಸುವುದು ಸರಿಯೆ?” (ಟಿ. ಮನೆಯೊಳ್ ಎಂದು ಮೂಲಾನುಸಾರವಾದ ಪಾಠವಿರಬೇಕು). ವ|| ಇವೇ ಮೊದಲಾದ ಕಾದಂಬರಿ ಹೇಳಿದ ಮಾತುಗಳನ್ನು ಕೇಯೂರಕನು ಅರಿಕೆಮಾಡಲಾಗಿ ಕೇಳಿ ತನ್ನಲ್ಲಿ ತಾನು ಆಲೋಚಿಸಿ, ೧೪. “ನಾನೇ ಅಲ್ಲಿಗೆ ಬಂದು ಹೇಳಬೇಕಾದುದನ್ನೆಲ್ಲ ಉಪಾಯದಿಂದ ಹೇಳುತ್ತೇನೆ. ಮುಂದೆ ನೀನು ಹೋಗುತ್ತಿರು” ಎಂದು ಕಳುಹಿಸಲಾಗಿ ಅಳ್ಳಾಡುತ್ತಿರುವ ಹಾರವುಳ್ಳ ಕೇಯೂರಕನು ಮುಂದೆ ಪ್ರಯಾಣ ಮಾಡಿದನು. ವ|| ಹಾಗೆ ಅವನು ಪ್ರಯಾಣ ಮಾಡಲಾಗಿ ಮಹಾಶ್ವೇತೆಯು ಚಂದ್ರಾಪೀಡನನ್ನು ಕುರಿತು ಹೀಗೆ ಹೇಳಿದಳು. ೧೫. “ರಾಜೇಂದ್ರ, ಚಿತ್ರರಥನ ರಾಜಧಾನಿಯಾದ ಹೇಮಕೂಟವು ಸಮೀಪದಲ್ಲೇ ಇದೆ. ಅದು ಬಹಳ ಅದ್ಭುತವಾಗಿದೆ. ನೀನು ನನ್ನ ಜೊತೆಯಲ್ಲಿ ಬಂದು ಅದನ್ನು ನೋಡಬೇಕು. ನನ್ನ ಗೆಳತಿಗೆ ಹೇಗಾದರೂ ಬುದ್ಧಿ ಹೇಳಬೇಕು. ಅವಳು ನನ್ನ ಪ್ರಾಣಸಮಾನಳು, ನಿಜವಾಗಿಯೂ ಅಸ್ವಸ್ಥಚಿತ್ತಳಾಗಿದ್ದಾಳೆ, ಗಂಧರ್ವಲೋಕವು ಇಂದು ನಿನ್ನ ದರ್ಶನಸುಖವನ್ನು ಅನುಭವಿಸಲಿ. ವ|| ಅದಲ್ಲದೆ ನನ್ನ ಪ್ರಾರ್ಥನೆಯನ್ನು ವ್ಯರ್ಥಗೊಳಿಸದೆ ಅಲ್ಲಿಗೆ ಬಂದು ವಿಶ್ರಮಿಸಿಕೊಂಡು ನಾಳೆ ನಿಮ್ಮ ಬಿಡಾರಕ್ಕೆ ದಯಮಾಡಿಸಬಹುದೆಂದು” ಹೇಳಿ ಮತ್ತೆ ಹೀಗೆ ಹೇಳಿದಳು. ೧೬. ಯಾವ ಗೊತ್ತಾದ ನಂಟುತನವಿಲ್ಲದಿದ್ದರೂ ಈಗ ನೀನು ನನಗೆ ಆಪ್ತಬಂಧುವೆನಿಸಿರುವೆ. ಇಂತಹ ನಿನ್ನನ್ನು ನೋಡಿದ ಮಾತ್ರದಿಂದಲೋ ನನ್ನ ಮನಸ್ಸಿನ ಅಳಲು ಬಹುಮಟ್ಟಿಗೆ ನಿವಾರಣೆಯಾಗಿದೆ. ಸತ್ಪುರುಷರಾದ, ಲೋಕೋತ್ತರರಾದ, ಉದಾತ್ತ ಸ್ವಭಾವದ ಪರೋಪಕಾರಿಗಳಾದ ನಿಮ್ಮಂತಹವರ ಆಗಮನ ಯಾರಿಗೆ ತಾನೆ

ವ|| ಎಂದು ನುಡಿದೊಡೆ

ಇನಿತಂ ಪ್ರಾರ್ಥಿಸಲೇಂ ನೀ
ನಿನಿತೆಸಗುವುದೆಂದು ಬೆಸಸುವುದು ಸಾಲ್ಗುಂ ನೀ
ಮೆನಗೆಂದು ವಿನಯದೊಳ್ ಕಾ
ಮಿನಿ ಪಿಂತನೆ ನಡೆದನಂದು ಚಂದ್ರಾಪೀಡಂ  ೧೭

ವ|| ಅಂತು ಬರುತ್ತಂ ಹೇಮಕೂಟಮನೆಯ್ದಿ ವಿಚಿತ್ರಮೆನಿಸಿದ ಚಿತ್ರರಥರಾಜಧಾನಿಯಂ ಪೊಕ್ಕು ಸಪ್ತಕಕ್ಷಾ ಂತರಂಗಳಂ ಕಾಂಚನಮಯ ತೋರಣಂಗಳಂ ನುಸುಳ್ದು ಕನ್ಯಾಂತಪುರದ್ವಾರಮನೆಯ್ದೆ ವರ್ಪಾಗಳ್

ಪರಿತಂದು ಮಹಾಶ್ವೇತಾ
ನಿರೀಕ್ಷಣೋತ್ಸುಕದೊಳೆಮಗೆ ತಮಗೆನುತಂ ತ
ಚ್ಚರಣ ಸರಸಿರುಹಯುಗದೊಳ್
ಸರಭಸಮಿದಿರೆಱಗಿದರ್ ಪ್ರತೀಹಾರಕಿಯರ್   ೧೮

ವ|| ಆಗಳರಸನುಂ ಪ್ರತೀಹಾರಿಕಾಜನೋಪದಿಶ್ಯಮಾನಮಾರ್ಗನಾಗಿ ಪೊಕ್ಕು ನೋೞ್ಪನ್ನೆಗಮಲ್ಲಿ

ಇದು ನಾರಿಮಯಮಪ್ಪ ಲೋಕಮಿದು ಬೇಂದಂಗನಾದ್ವೀಪಮಿಂ
ತಿದು ನಿಷ್ಟೂರುಷಜೀವಲೋಕಮಿದು ಸರ್ಗಕ್ಕೆಂದು ಪದ್ಮೋದ್ಭವಂ
ಸುದತೀರತ್ನಸಮೂಹಮಂ ಪದಪಿನಿಂದ ಬೈಚಿಟ್ಟ ಭಂಡಾರಮ
ಪ್ಪುದೆನಲ್ ಸಂದಣಿಸಿರ್ದ ಸುಂದರಿಯರಂ ಕಂಡಂ ನರೇಂದ್ರಾತ್ಮಜಂ      ೧೯

ಭುವನಾಂತರಮಂ ಸಿಂಪಿಸು
ವವೊಲಾಶಾವನಿತೆಯರುಮನೋಲಾಡಿಸುವಂ
ತೆವೊಲೆಸೆದರಂಗನೆಯರು
ಣ್ಮುವ ನಿಜಲಾವಣ್ಯರಸದ ಪೆರ್ವೊನಲಿಂದಂ   ೨೦

ವ|| ಅಂತು ವದನದ್ಯುತಿಯಿನಿಂದುಬಿಂಬವೃಷ್ಟಿ ಸುರಿವಂತೆಯುಂ ಅಪಾಂಗ ವಿಕ್ಷೇಪಂಗಳಿಂ ಕುವಲಯವನ ವಿಕಾಸಮಾದಂತೆಯುಂ ಕಪೋಲತಲಂಗಳ ಬೆಳಗುಗಳಿಂ ಮಣಿದರ್ಪಣಂಗಳ್ ಪೊಳೆವಂತೆಯುಂ ಭ್ರೂಲತಾವಿಭ್ರಮಂಗಳಿಂ ಕಾಮಕಾರ್ಮುಕವಿಸರಂ ಪಸರಿಸಿದಂತೆಯುಂ

ಸುಖವನ್ನುಂಟುಮಾಡುವುದಿಲ್ಲ? ವ|| ಎಂದು ಹೇಳಲಾಗಿ, ೧೭. “ನೀವು ನನಗೆ ಇಷ್ಟುಮಟ್ಟಿಗೆ ಬೇಡಿಕೊಳ್ಳುವುದೇತಕ್ಕೆ? ‘ನೀನು ಹೀಗೆ ಮಾಡು’ ಎಂದು ಅಪ್ಪಣೆ ಮಾಡಿದರೆ ಸಾಕು” ಎಂದು ವಿನಯದಿಂದ ಹೇಳಿ ಚಂದ್ರಾಪೀಡನು ಆ ಮಹಾಶ್ವೇತೆಯನ್ನು ಹಿಂಬಾಲಿಸಿ ನಡೆದನು. ವ|| ಹಾಗೆ ಬರುತ್ತ ಹೇಮಕೂಟವನ್ನು ಸೇರಿ, ಚಿತ್ರರಥನ ಆಶ್ಚರ್ಯಕರವಾದ ರಾಜಧಾನಿಯನ್ನು ಹೊಕ್ಕು ಚಿನ್ನದ ಬಾಗಿಲುಗಳುಳ್ಳ ಏಳು ತೊಟ್ಟಿಗಳನ್ನು ದಾಟಿ ಕನ್ನೆವಾಡದ ಬಾಗಿಲಿಗೆ ಬರಲಾಗಿ ೧೮. ಬಾಗಿಲು ಕಾಯುವ ಹೆಂಗಸರು ಮಹಾಶ್ವೇತೆಯನ್ನು ನೋಡಬೇಕೆಂಬ ಉತ್ಸಾಹದಿಂದ ಬಂದು, ನಾನು ಮುಂದು ತಾನು ಮುಂದು ಎಂದು ಅವಳ ಪಾದಕಮಲದಲ್ಲಿ ಬೇಗಬೇಗನೆ ನಮಸ್ಕರಿಸಿದರು. ವ|| ಆಗ ಚಂದ್ರಾಪೀಡನೂ ಬಾಗಿಲುಕಾಯುವವಳಿಂದ ತೋರಿಸಲ್ಪಡುತ್ತಿರುವ ದಾರಿಯುಳ್ಳವನಾಗಿ ಹೊಕ್ಕು ನೋಡುತ್ತಿರವಲ್ಲಿ ೧೯. ಇದು ಬರೀ ಹೆಂಗಸರಿಂದಲೇ ತುಂಬಿಕೊಂಡಿರುವ ಬೇರೆ ಲೋಕವೆಂಬಂತೆಯೂ, ಇದು ಕೇವಲ ಹೆಂಗಸರೇ ವಾಸಿಸುವ ಬೇರೊಂದು ನಡುಗಡ್ಡೆ ಎಂಬಂತೆಯೂ, ಇದು ಗಂಡಸರೇ ಇಲ್ಲದ ಪ್ರತ್ಯೇಕ ಜಗತ್ತು ಎಂಬಂತೆಯೂ, ಬ್ರಹ್ಮನು ಮುಂದಿನ ಅನೇಕ ಸೃಷ್ಟಿಗಳಿಗೆ ಬೇಕಾಗುವುದೆಂದು ಸುಂದರಿಯರೆಂಬ ರತ್ನಗಳನ್ನು ಆಸಕ್ತಿಯಿಂದ ಮೀಸಲಾಗಿ ಮುಚ್ಚಿಟ್ಟಿರುವ ಭಂಡಾರವೆಂಬಂತೆಯೂ ಇರುವ ಹೆಂಗಸರ ಗುಂಪಿನಿಂದ ನಿಬಿಡವಾಗಿದ್ದ ಕನ್ನೆವಾಡವನ್ನು ಚಂದ್ರಾಪೀಡನು ನೋಡಿದನು. ೨೦. ಹೊರಚೆಲ್ಲುತ್ತಿರುವ ಸೌಂದರ್ಯರಸದ ಮಹಾಪ್ರವಾಹದಿಂದ ಪ್ರಪಂಚವನ್ನೆಲ್ಲ ತೋಯಿಸುವಂತೆಯೂ, ದಿಕ್ಕುಗಳೆಂಬ ವನಿತೆಯರನ್ನು ಜಳಕವಾಡಿಸುವಂತೆಯೂ, ಇದ್ದ ರಮಣಿಯರು ಅಲ್ಲಿ ಶೋಭಿಸುತ್ತಿದ್ದರು. ವ|| ಹಾಗೆಯೆ ಮುಖಗಳ ಕಾಂತಿಯಿಂದ ಚಂದ್ರಮಂಡಲಗಳ ಮಳೆಯು ಸುರಿಯುತ್ತಿರುವಂತೆಯೂ, ಕಡೆಗಣ್ಣ ನೋಟದಿಂದ ಕನ್ನೆ ದಿಲೆಗಳ ವನವು ಅರಳಿದಂತೆಯೂ, ಕೆನ್ನೆಗಳ ಶೋಭೆಯಿಂದ ರನ್ನಗನ್ನಡಿಗಳು ಹೊಳೆಯುವಂತೆಯೂ, ಬಳ್ಳಿಹುಬ್ಬುಗಳ ಬೆಡಗುಗಳಿಂದ ಮನ್ಮಥನ ಬಿಲ್ಲುಗಳ ಸಮೂಹವು ಹರಡಿರುವಂತೆಯೂ, ತಲೆಗೂದಲುಗಳ ಕತ್ತಲೆಯಂತಿರುವ ಕಪ್ಪಿನಿಂದ ಕಗ್ಗತ್ತಲೆಯು ಕವಿದಂತೆಯೂ, ಸುವಾಸನೆಯುಳ್ಳ ನಿಶ್ವಾಸಗಳಿಂದ ತೆಂಕಲಗಾಳಿಯ ಬೀಸಿದಂತೆಯೂ

ಕೇಶಕಲಾಪಾಂಧಕಾರದಿಂ ಕಾರಿರುಳ್ ಕವಿದಂತೆಯುಂ ಸುರಭಿನಿಶ್ವಾಸಂಗಳಿಂ ಮಲಯಮಾರುತಂ ತೀಡಿದಂತೆಯುಂ ಮುಗುಳ್ನಗೆಯ ಬೆಳಗುಗಳಿಂ ವಸಂತಸಮಯಮಾದಂತೆಯುಂ ಕಲತಲರಾಗದಿಂ ಕೆಂದಾವರೆಗಳಲರ್ದಂತೆಯುಂ ಕರರುಹಕಿರಣಂಗಳಿಂ ಕುಸುಮಾಯುಧ ಶರಶತಂಗಳ್ ಸುರಿವಂತೆಯುಮಾದುದಲ್ಲದೆಯುಂ