ಬೌದ್ಧಿಕ ಆಸ್ತಿ ಹಕ್ಕು, ಪೇಟೆಂಟ್‌, ಜೈವಿಕ ಚೌರ್ಯ ಮುಂತಾದ ಪದಗಳು ಇಂದು ಹೆಚ್ಚು ಬಳಕೆಯಲ್ಲಿವೆ ಹಾಗೂ ವಿವಾದಾಸ್ಪದ ವಿಷಯಗಳೂ ಆಗಿವೆ. ಸಾಮಾನ್ಯ ಮನುಷ್ಯನ ಹಾಗೂ ಕೃಷಿಕರ ಬದುಕಿನ ಮೇಲೆ ಅವು ಉಂಟುಮಾಡುವ ಪರಿಣಾಮಗಳಾದರೂ ಏನು? ಅವು ವಿವಾದಾಸ್ಪದ ವಿಷಯಗಳಾದರೂ ಆಗಿರುವುದೇಕೆ? ಜೈವಿಕ ಸಂಪನ್ಮೂಲಗಳಿಗೂ ಬೌದ್ಧಿಕ ಆಸ್ತಿ ಹಕ್ಕುಗಳಿಗೂ ಇರುವ ಸಂಬಂಧಗಳೇನು? ಕೆಲ ವರ್ಷಗಳ  ಹಿಂದೆ ಅಮೆರಿಕ ಪೇಟೆಂಟ್‌ಮಾಡಿದ ಅರಿಶಿನದ ಔಷಧೀಯ ಗುಣಗಳಿಗೂ ಭಾರತದ ಸಾಂಪ್ರದಾಯಿಕ ಜ್ಞಾನಕ್ಕೂ ಇರುವ ಸಂಬಂಧವೇನು? ಬಾಸುಮತಿ ಅಕ್ಕಿಯ ಮೇಲಿನ ಅಮೆರಿಕದ ಪೇಟೆಂಟ್‌ಗಳಿಂದಾಗಿ ಜನ ಪ್ರತಿಭಟಿಸುತ್ತಿರುವುದೇಕೆ? ಬೌದ್ಧಿಕ ಆಸ್ತಿ ಹಕ್ಕುಗಳ ನಿಗೂಢ ಜಗತ್ತನ್ನು ಸರಳವಾಗಿ ಪ್ರಶ್ನೋತ್ತರಗಳ ರೂಪದಲ್ಲಿ ಅರ್ಥವಾಗುವಂತೆ ಮಾಡಲು ಈ ಕೃತಿ ಪ್ರಯತ್ನಿಸುತ್ತದೆ.

ಈ ಕೃತಿಯು ಮೂಲತಃ ಇಂಗ್ಲಿಷ್ ನಲ್ಲಿದ್ದು ಇದನ್ನು ನವದೆಹಲಿಯ ಕಲ್ಪವೃಕ್ಷ ಮತ್ತು ಗ್ರೈನ್‌ಎಂಬ ಸರ್ಕಾರೇತರ ಸಂಸ್ಥೆಗಳು ಹಾಗೂ ಲಂಡನ್‌, ಸಂಯುಕ್ತ ಸಂಸ್ಥಾನದಲ್ಲಿನ ಅಂತರರಾಷ್ಟ್ರೀಯ ಕಾರ್ಯನೀತಿ ಸಂಶೋಧನಾ ಹಾಗೂ ಸರ್ಕಾರೇತರ ಸಂಸ್ಥೆಯಾದ ಐ.ಐ.ಇ.ಡಿ. ಸಂಸ್ಥೆಗಳು ಪ್ರಕಟಿಸಿವೆ. ತೇಜಸ್ವಿನಿ ಆಪ್ಟೆ ಈ ಕೃತಿಯ ಮೂಲ ಲೇಖಕರಾಗಿದ್ದು ಈ ಕೃತಿಯ ಅನುವಾದಕ್ಕೆ ಅನುಮತಿ ನೀಡಿದ ಅವರಿಗೆ ಧನ್ಯವಾದಗಳು. ಈ ಕೃತಿಯ ಸಂಕ್ಷಿಪ್ತ ಅನುವಾದವನ್ನು ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ.ಜೆ. ಬಾಲಕೃಷ್ಣ ಮಾಡಿದ್ದಾರೆ ಹಾಗೂ ಅದರ ತಾಂತ್ರಿಕ ಪರಿಶೀಲನಾ ಕಾರ್ಯವನ್ನು ವಿಶ್ವವಿದ್ಯಾನಿಲಯದ ಸಸ್ಯ ತಳಿ ಸಂವರ್ಧಕ ವಿಜ್ಞಾನಿ, ಬೌದ್ಧಿಕ ಆಸ್ತಿ ಹಕ್ಕಿನ ವಿಷಯ ತಜ್ಞರು ಹಾಗೂ ವಿಸ್ತರಣಾ ನಿರ್ದೇಶಕರಾಗಿರುವ ಡಾ.ಆರ್.ಎಸ್‌. ಕುಲಕರ್ಣಿಯವರು ನಡೆಸಿಕೊಟ್ಟಿದ್ದಾರೆ. ಡಿ.ಟಿ.ಪಿ. ಕಾರ್ಯವನ್ನು ವಿಭಾಗದ ಹಿರಿಯ ಬೆರಳಚ್ಚುಗಾರರಾದ ಎಲ್‌.ಆರ್. ದೊಡ್ಡರಂಗಯ್ಯ ಮಾಡಿಕೊಟ್ಟಿದ್ದಾರೆ.

ಈ ಕೃತಿಯ ಪ್ರಕಟಣೆಯಲ್ಲಿ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಕುಲಪತಿಗಳಾದ ಡಾ.ಪಿ.ಜಿ. ಚಂಗಪ್ಪ ಮತ್ತು ವಿಸ್ತರಣ ನಿರ್ದೇಶಕರಾದ ಡಾ.ಆರ್.ಎಸ್‌.ಕುಲಕರ್ಣಿಯವರಿಗೆ ಕೃತಜ್ಞತೆಗಳು.

ಈ ಕೃತಿಯು ರೈತರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಇತರ ಆಸಕ್ತರಿಗೆ ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ. ಉಷಾಕಿರಣ್‌
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ವಿಸ್ತರಣ ನಿರ್ದೇಶನಾಲಯ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ, ಬೆಂಗಳೂರು-೫೬೦೦೨೪