Categories
ಕೃಷಿ ಲೇಖನಗಳು

ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016

ಕೃತಿ:ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ
ಲೇಖಕರು :
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ

ಪದವಿನ್ಯಾಸ

ಕೃತಿ:ಪದವಿನ್ಯಾಸ
ಲೇಖಕರು:
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ಕೃಷಿ ಸಂರಕ್ಷಣೆ ನಿಸರ್ಗ ಪರಿಸರ ವಿಶ್ಲೇಷಣೆ ಮತ್ತು ಸಂಶೋಧನೆ

ಮಣ್ಣು ಪರೀಕ್ಷೆ

ಕೃತಿ:ಮಣ್ಣು ಪರೀಕ್ಷೆ:
ಲೇಖಕರು: ಡಾ. ಅಶೋಕ ಎಸ್. ಆಲೂರ, ಡಾ. ಜಿ.ಎಸ್. ದಾಸೋಗ ಮತ್ತು ಡಾ. ಶಿವಾನಂದ ಬಿ. ಹೊಸಮನಿ
ಕೃತಿಯನ್ನು ಓದಿ

Categories
ಆರ್ಥಿಕ ಅಭಿವೃದ್ದಿ ಕೃಷಿ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು ಗ್ರಾಮೀಣ ಅಭಿವೃದ್ಧಿ ಸಮಾಜ ಮತ್ತು ಅಭಿವೃದ್ಧಿ

ಸಮುದಾಯ ಮತ್ತು ಸಹಭಾಗಿತ್ವ

ಕೃತಿ: ಸಮುದಾಯ ಮತ್ತು ಸಹಭಾಗಿತ್ವ

ಸಂಯೋಜನೆ: ಡಾ.ಎಂ.ಚಂದ್ರ ಪೂಜಾರಿ

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಶಿಕ್ಷಣ ಕೃಷಿ ಸಂರಕ್ಷಣೆ ನಿಸರ್ಗ ಪರಿಸರ ವಿಶ್ಲೇಷಣೆ ಮತ್ತು ಸಂಶೋಧನೆ

ಸಾವಯವ ಕೃಷಿ ಒಂದು ವಿಶ್ಲೇಷಣೆ

ಕೃತಿ: ಸಾವಯವ ಕೃಷಿ ಒಂದು ವಿಶ್ಲೇಷಣೆ

ಲೇಖಕರು: ಶ್ರೀ ತಿಪ್ಪೇಸ್ವಾಮಿ

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಸಂರಕ್ಷಣೆ ಸಮಾಜ ಮತ್ತು ಅಭಿವೃದ್ಧಿ ಸಾಮಾಜಿಕ ಚಳುವಳಿಗಳು

ಸಮಗ್ರ ಕೃಷಿ ಅಭಿವೃದ್ಧಿಗೆ ಬಲಶಾಲಿ ರೈತ ಸಂಘಟನೆಗಳು

ಕೃತಿ:ಸಮಗ್ರ ಕೃಷಿ ಅಭಿವೃದ್ಧಿಗೆ ಬಲಶಾಲಿ ರೈತ ಸಂಘಟನೆಗಳು
ಲೇಖಕರು: – ಡಾ.ಅಶೋಕ ಎಸ್. ಆಲೂರ, ಡಾ.ಸಿ.ಎಲ್. ಲಕ್ಷ್ಮೀಪತಿಗೌಡ ಮತ್ತು ಡಾ. ಶಿವಾನಂದ ಬಿ. ಹೊಸಮನಿ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ಹಣ್ಣುಗಳು

ದಾಳಿಂಬೆ – ಸಮಗ್ರ ಉತ್ಪಾದನೆ ಹಾಗೂ ಮಾರಾಟ ತಂತ್ರಗಳು

ಕೃತಿ-ಹಣ್ಣುಗಳು
ಸರಣಿ-ಕೃಷಿ, ಕೃಷಿ ಶಿಕ್ಷಣ, ಹಣ್ಣುಗಳು
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ಕೃಷಿ ಸಂರಕ್ಷಣೆ ಭೌತಶಾಸ್ತ್ರ (ಫಿಸಿಕ್ಸ) ರಸಾಯನಶಾಸ್ತ್ರ (ಕೆಮಿಸ್ಟ್ರಿ) ವಿಜ್ಞಾನ - ಗಣಿತ

ಬರಡಾಗುತ್ತಿರುವ ನಮ್ಮ ಭೂಸಂಪತ್ತು ಹಾಗೂ ಅದರ ರಕ್ಷಣೆ

ಕೃತಿ:ಬರಡಾಗುತ್ತಿರುವ ನಮ್ಮ ಭೂಸಂಪತ್ತು ಹಾಗೂ ಅದರ ರಕ್ಷಣೆ
ಲೇಖಕರು:ಡಾ. ಅಶೋಕ ಎಸ್. ಆಲೂರ, ಡಾ. ಶಿವಾನಂದ ಬಿ. ಹೊಸಮನಿ ಮತ್ತು ಡಾ. ಜಿ.ಎಸ್. ದಾಸೋಗ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ವಾಣಿಜ್ಯ ಬೆಳೆಗಳು (ಕಮರ್ಶಿಯಲ್ ಕ್ರಾಪ್ಸ್)

ಶೇಂಗಾ ಬೀಜೋತ್ಪಾದನಾ ತಂತ್ರಜ್ಞಾನಗಳು

ಕೃತಿ:ಶೇಂಗಾ ಬೀಜೋತ್ಪಾದನಾ ತಂತ್ರಜ್ಞಾನಗಳು
ಲೇಖಕರು: ಡಾ. ಅಶೋಕ ಎಸ್. ಆಲೂರು, ಡಾ. ಸಿ.ಎಲ್. ಲಕ್ಷ್ಮೀಪತಿಗೌಡ ಮತ್ತು ಡಾ. ಶಿವಾನಂದ ಬಿ. ಹೊಸಮನಿ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ಹಣ್ಣುಗಳು

ಮಾವು ಸಮಗ್ರ ಉತ್ಪಾದನೆ ಹಾಗೂ ಮಾರಾಟ ತಂತ್ರಗಳು

ಕೃತಿ:ಮಾವು ಸಮಗ್ರ ಉತ್ಪಾದನೆ ಹಾಗೂ ಮಾರಾಟ ತಂತ್ರಗಳು
ಲೇಖಕರು: ಕನ್ನಡ ವಿಶ್ವವಿದ್ಯಾಲಯ ಡಾ.ಶಿವಾನಂದ ಬಿ. ಹೊಸಮನಿ, ಡಾ. ಅಶೋಕ ಎಸ್. ಆಲೂರ, ಡಾ. ಎನ್. ಆರ್. ಮಾಮಲೇದೇಸಾಯಿ.
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ನಿಸರ್ಗ ಪರಿಸರ

ಮಣ್ಣು ಮತ್ತು ಮಾನವ

ಕೃತಿ:ಮಣ್ಣು ಮತ್ತು ಮಾನವ
ಲೇಖಕರು ಡಾ. ಟಿ.ಎಸ್. ಚನ್ನೇಶ್
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ

ಹೂವಿನ ಬೆಳೆಗಳು

ಕೃತಿ: ಹೂವಿನ ಬೆಳೆಗಳು

ಲೇಖಕರು: ಡಾ. ವಿರೂಪಾಕ್ಷ ಬಿ. ಬಡಿಗೇರ

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಶಿಕ್ಷಣ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು

ಕರ್ನಾಟಕದಲ್ಲಿ ಕೆರೆ ನೀರಾವರಿ

ಕೃತಿ:ಕರ್ನಾಟಕದಲ್ಲಿ ಕೆರೆ ನೀರಾವರಿ
ಲೇಖಕರು:– ಶ್ರೀ ಜಿ.ಎಸ್. ದೀಕ್ಷಿತ್,– ಶ್ರೀ ಎಸ್.ಕೆ. ಮೋಹನ್
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಕೃಷಿ ಕೃಷಿ ಶಿಕ್ಷಣ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು

ಕೆರೆ ನೀರಾವರಿ ನಿರ್ವಹಣೆ – ಚಾರಿತ್ರಿಕ ಅಧ್ಯಯನ

ಕೃತಿ:ಕೆರೆ ನೀರಾವರಿ ನಿರ್ವಹಣೆ

ಲೇಖಕರು ಡಾ. ರಾಜಾರಾಮ ಹೆಗಡೆ

ಕೃತಿಯನ್ನು ಓದಿ     |     Download

Categories
ಇತಿಹಾಸ ಕರ್ನಾಟಕ ಇತಿಹಾಸ ಕೃಷಿ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು ಜನಪದ ಸಾಹಿತ್ಯ ನಿಸರ್ಗ ಪರಿಸರ ಸಾಹಿತ್ಯ

ಕಾವೇರಿ ಜಾನಪದ: ಮರೆಯಲಾಗದ ಮನಸ್ಸುಗಳೊಂದಿಗೆ

ಕೃತಿ-ಕಾವೇರಿ ಜಾನಪದ
ಲೇಖಕರು-ಡಾ. ಹೆಬ್ಬಾಲೆ ಕೆ. ನಾಗೇಶ್
ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಕೃಷಿ ಕೃಷಿ ಅನುಭವ ಗ್ರಾಮೀಣ ಅಭಿವೃದ್ಧಿ ಸಮಾಜ ಮತ್ತು ಅಭಿವೃದ್ಧಿ

ಹೆಬ್ಬಳ್ಳಿ ಭೂಹೋರಾಟ

ಕೃತಿ:ಹೆಬ್ಬಳ್ಳಿ ಭೂಹೋರಾಟ

ಲೇಖಕರು: ಡಾ. ಸತೀಶ್ ಪಾಟೀಲ

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಶಿಕ್ಷಣ ಕೃಷಿ ಸಂಸ್ಕೃತಿ

ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ದಾರಿ

ಕೃತಿ:ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ದಾರಿ
ಲೇಖಕರು : ಡಾ. ಜೆ. ಬಾಲಕೃಷ್ಣ
ಕೃತಿಯನ್ನು ಓದಿ

Categories
ಕಲೆ ಮತ್ತು ಮನರಂಜನೆ ಕೃಷಿ ಕ್ರೀಡೆ ಜನಪದ ಜನಪದ ಜನಪದ ಕೃಷಿ ಜನಪದ ಮತ್ತು ಪ್ರದರ್ಶನ ಕಲೆ ಜನಪದ ಸಾಹಿತ್ಯ ಸಂಸ್ಕೃತಿ-ಪರಂಪರೆ ಸಾಹಿತ್ಯ ವಿಮರ್ಶೆ

ದಕ್ಷಿಣ ಭಾರತೀಯ ಜಾನಪದ ಕೋಶ

ಕೃತಿ:ದಕ್ಷಿಣ ಭಾರತೀಯ ಜಾನಪದ ಕೋಶ
ಲೇಖಕರು:ಪಿ.ಎಸ್.ಟಿ.ಅನುವಾದ ಆರ್.ಎಸ್
ಕೃತಿಯನ್ನು ಓದಿ

Categories
ಕೃಷಿ ಕೃಷಿ ಅನುಭವ ಕೃಷಿ ಶಿಕ್ಷಣ

ಡಾ. ಎಂ ಮಹದೇವಪ್ಪನವರ ಲೇಖನಗಳು: ದೇಸಿಯೊಳ್ ಪುಗುವುದು

ಕೃತಿ-ಡಾ. ಎಂ ಮಹದೇವಪ್ಪನವರ ಲೇಖನಗಳು
ಕುಲಪತಿ-ಡಾ. ಎಂ.ಎಂ. ಕಲಬುರ್ಗಿ
ಸರಣಿ-ಕೃಷಿ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ

ಒಣ ಬೇಸಾಯ ಪದ್ಧತಿಗಳು

ಕೃತಿ:ಒಣ ಬೇಸಾಯ ಪದ್ಧತಿಗಳು
ಲೇಖಕರು: ಡಾ. ಮಲ್ಲಣ್ಣ ಶಂಕರಣ್ಣ ನಾಗರಾಳ
ಕೃತಿಯನ್ನು ಓದಿ

Categories
ಕೃಷಿ

ಅಡಿಕೆ ಮಾರುಕಟ್ಟೆ : ಅಂದು, ಇಂದು, ಮುಂದು

ಕೃತಿ:ಅಡಿಕೆ ಮಾರುಕಟ್ಟೆ : ಅಂದು, ಇಂದು, ಮುಂದು
ಲೇಖಕರು: ಡಾ. ವಿಘ್ನೇಶ್ವರ ವರ್ಮುಡಿ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಸಂಸ್ಕೃತಿ ಜನಪದ ಸಂಸ್ಕೃತಿ-ಪರಂಪರೆ

ವ್ಯವಸಾಯ ಸಂಬಂಧಿ ಆಚರಣೆಗಳು

ಕೃತಿ:ವ್ಯವಸಾಯ ಸಂಬಂಧಿ ಆಚರಣೆಗಳು
ಲೇಖಕರು: ಡಾ. ಸೋಮಣ್ಣ
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಕೃಷಿ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು ಗ್ರಾಮೀಣ ಅಭಿವೃದ್ಧಿ ಪುರಾತತ್ವ ಶಾಸ್ತ್ರ ವಿಶ್ಲೇಷಣೆ ಮತ್ತು ಸಂಶೋಧನೆ ಸಮಾಜ ಮತ್ತು ಅಭಿವೃದ್ಧಿ

ಹಂಪಿ ಪರಿಸರದ ಕೆರೆಗಳು

ಕೃತಿ:ಹಂಪಿ ಪರಿಸರದ ಕೆರೆಗಳು

ಲೇಖಕರು: ಡಾ. ಸಿ.ಎಸ್. ವಾಸುದೇವನ್

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಚಟುವಟಿಕೆಗಳು ಕೃಷಿ ಸಂಸ್ಕೃತಿ

ಕೃಷಿ ಆಚರಣೆಗಳು

ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕದ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದುದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ, ಕರ್ನಾಟಕದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

Categories
ಕಲೆ ಮತ್ತು ಮನರಂಜನೆ ಕೃಷಿ ಜನಪದ ಜನಪದ ಕೃಷಿ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ - ಪರಂಪರೆ

ಜಾನಪದ ಆಯಾಮಗಳು

ಕೃತಿ-ಜಾನಪದ ಆಯಾಮಗಳು
ಲೇಖಕರು-ಡಾ. ಬಸವರಾಜ ಸಬರದ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಕೃಷಿ

ಸಪೋಟ ಮತ್ತು ಸೀಬೆ

ಕೃತಿ-ಸಪೋಟ ಮತ್ತು ಸೀಬೆ
ಸಂಪಾದಕರು-ಡಾ ಬಿ. ಎಸ್. ಸಿದ್ಧರಾಮಯ್ಯ
ಸರಣಿ-ಕೃಷಿ ವಿಶ್ವವಿದ್ಯಾನಿಲಯ
ಕೃತಿಯನ್ನು ಓದಿ

Categories
ಆರೋಗ್ಯ ಔಷಧೀಯ ಸಸ್ಯಗಳು ಕೃಷಿ ಕೃಷಿ ಶಿಕ್ಷಣ ವೈದ್ಯಕೀಯ ಕೃಷಿ

ಔಷಧೀಯ ಸಸ್ಯಗಳು-ಕೃಷಿ ಮತ್ತು ಮಾರುಕಟ್ಟೆ

ಕೃತಿ : ಔಷಧೀಯ ಸಸ್ಯಗಳು-ಕೃಷಿ ಮತ್ತು ಮಾರುಕಟ್ಟೆ

ಲೇಖಕರು : ಡಾ. ವಿಘ್ನೇಶ್ವರ ವರ್ಮುಡಿ.

ಕೃತಿಯನ್ನು ಓದಿ

Categories
ಕೃಷಿ ಕೃಷಿ ಅನುಭವ ಕೃಷಿ ಶಿಕ್ಷಣ ಜನಪದ ಕೃಷಿ

ಸುಭಾಷ್ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ

ಕೃತಿ: ಸುಭಾಷ್ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ

ಲೇಖಕರು: ಸ್ವಾಮಿ ಆನಂದ್

ಕೃತಿಯನ್ನು ಓದಿ     |     Download

Categories
ಕೃಷಿ

ಮಣ್ಣು ನಿರ್ವಹಣೆ

ಕೃತಿ:ಮಣ್ಣು ನಿರ್ವಹಣೆ
ಲೇಖಕರು: ಡಾ|| ಎಸ್.ವಿ. ಪಾಟೀಲ, ಡಾ|| ಲ.ಅ. ದೀಕ್ಷಿತ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ

ಕೃಷಿಯುತ್ಪನ್ನಗಳ ಬೆಲೆಯಲ್ಲೇಕೆ ಏರಿಳಿತ?

ಕೃತಿ:ಕೃಷಿಯುತ್ಪನ್ನಗಳ ಬೆಲೆಯಲ್ಲೇಕೆ ಏರಿಳಿತ?
ಲೇಖಕರು: – ಡಾ| ವಿಘ್ನೇಶ್ವರ ವರ್ಮುಡಿ
ಕೃತಿಯನ್ನು ಓದಿ

Categories
ಕೃಷಿ ವೈದ್ಯಕೀಯ ಕೃಷಿ

ಸ್ಟಿವಿಯಾ

ಅರಿಕೆ

ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ಬೆಳೆಯುವ ವಿವಿಧ ರೀತಿಯ ಸಾಂಪ್ರದಾಯಿಕ ಬೆಳೆಗಳ ಧಾರಣೆಯು ಕುಸಿಯಲಾರಂಭಿಸಿ ರೈತರು ಕಂಗೆಡುವಂತಾಗಿದೆ. ಇದರಿಂದಾಗಿ ಇಲ್ಲಿಂದು ವಿವಿಧ ಬಗೆಯ ಹೊಸ ಬೆಳೆಗಳ ಪರಿಚಯವಾಗುತ್ತಿದೆ. ಇವುಗಳ ಪೈಕಿ ಸ್ಟಿವಿಯಾವು ಒಂದು. ಆದರೆ ಈ ಬೆಳೆಯ ಬಗ್ಗೆ ನಮ್ಮ ರೈತರಿಗೆ ಸರಿಯಾದ ಮಾಹಿತಿಯಿನ್ನೂ ದೊರಕಿಲ್ಲ. ಅಲ್ಲಲ್ಲಿ ಇದರ ಬಗ್ಗೆ ಚರ್ಚೆಗಳಾಗುತ್ತಿವೆ. ಕೆಲವೊಂದು ರೈತರು ಸ್ಟಿವಿಯಾದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಕೆಲವರು ಮಾಹಿತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.ಈ ದೃಷ್ಟಿಯಿಂದ ಸ್ಟಿವಿಯಾದ ಬಗ್ಗೆ ಪ್ರಕೃತ ಲಭ್ಯವಿರುವ ಮಾಹಿತಿಗಳನ್ನೆಲ್ಲಾ ಕಲೆ ಹಾಕಿ ಇಲ್ಲಿ ಕೊಡುತ್ತಿದ್ದೇನೆ. ಈ ಪುಸ್ತಕವು ನಮ್ಮ ರೈತರಿಗೆ ಉಪಯುಕ್ತ ವಾಗಬಹುದೆಂಬ ನಂಬಿಕೆ ನನ್ನದು. ಈ ಪುಸ್ತಕದ ರಚನೆಗಾಗಿ ಮಾಹಿತಿಗಳನ್ನು ಗ್ರೋಮೋರ್ ಬಯೋಟೆಕ್‌, ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮತ್ತು ವೆಬ್‌ಸೈಟ್‌ಗಳಿಂದ ಸಂಗ್ರಹಿಸಲಾಗಿದೆ. ಈ ಎಲ್ಲಾ ಮಾಧ್ಯಮಗಳಿಗೆ ನಾನು ಋಣಿಯಾಗಿದ್ದೇನ. ಈ ಪುಸ್ತಕವು ಕೇವಲ ಮಾಹಿತಿಯನ್ನೊದಗಿಸುವ ದೃಷ್ಟಿಯಿಂದ ರಚನೆಯಾಗಿದ್ದು, ಇದರ ಪ್ರಯೋಜನವನ್ನು ನಮ್ಮೆಲ್ಲಾ ಕೃಷಿಕರು ಪಡೆಯುವರೆಂಬ ಭಾವನೆ ನನ್ನದು.

ನನ್ನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಿರುವ ವಿವೇಕಾನಂದ ಕಾಲೇಜು ಪುತ್ತೂರು ಇದರ ಆಡಳಿತ ಮಂಡಳಿ, ಪ್ರಾಂಶುಪಾಲರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಕೆ. ಬಾಲಕೃಷ್ಣ, ಸ್ನೇಹಿತ ಡಾ.ಪಿ. ಡಬ್ಲ್ಯೂ ಪ್ರಭಾಕರ್ ಇವರುಗಳಿಗೆ ನಾನು ಋಣಿಯಾಗಿದ್ದೇನೆ.

ಮುದ್ರಣಕ್ಕೆ ಸಹಾಯ ಮಾಡಿದ ಶ್ರೀ ಲಕ್ಷ್ಮೀ ಕಾಂತ್‌ ಶೆಣೈ, ವಿಟ್ಲ ಮತ್ತು ಅಂದವಾಗಿ ಮುದ್ರಿಸಿಕೊಟ್ಟ ಶ್ರೀನಿಧಿ ಆ‌ಫ್‌ಸೆಟ್‌ ಪ್ರಿಂಟರ್ಸ್ ಅಲ್ಲದೆ ಸ್ಟಿವಿಯಾ ಕೃಷಿಯ ಬಗ್ಗೆ ವಿಶೇಷ ಮಾಹಿತಿ ಒದಗಿಸಿದ ಶ್ರೀ ಗೋವಿಂದ ರಾಜ್‌ರವರಿಗೆ ನಾನು ಕೃತಜ್ಞನಾಗಿದ್ದೇನೆ.

ನನ್ನ ಬರಹಗಳಿಗೆ ನಿಜ ಸ್ಫೂರ್ತಿ ತುಂಬುವ ನನ್ನ ಕುಟುಂಬದ ಸದಸ್ಯರುಗಳನ್ನೆಲ್ಲಾ ಇಲ್ಲಿ ನೆನೆಸುತ್ತಿದ್ದೇನೆ.

ಡಾವಿಘ್ನೇಶ್ವರ ವರ್ಮುಡಿ
ವರ್ಮುಡಿ ಗುಂಪೆ
೦೫-೦೭-೨೦೦೩.

ಸ್ಟಿವಿಯಾದ ಇತಿಹಾಸ

ದಕ್ಷಿಣ ಅಮೇರಿಕಾದ ಪೆರುಗ್ವೆಗೆ ವಲಸೆ ಹೋಗಿ ನೆಲೆಸಿದ್ದ ಭಾರತೀಯ ಮೂಲದ ಗೌರಾನಿ ನಿವಾಸಿಗಳು ಹಲವು ಶತಮಾನಗಳ ಹಿಂದೆ ಸ್ಟಿವಿಯಾವನ್ನು ಗುರುತಿಸಿದ್ದರು. ಅವರು ಇದನ್ನು ಕಾ – ಹೆ – ಹಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಕಾ-ಹೆ-ಹಿ ಎಂದರೆ ಸಿಹಿ ಮೂಲಿಕೆ ಎಂದಾಗುತ್ತದೆ. ಈ ಜನರು ಸ್ಟಿವಿಯಾದ ಎಲೆಗಳನ್ನು ಅವರು ಸೇವಿಸುತ್ತಿದ್ದ ಮೇಟ್‌ ಎಂಬ ಪಾನೀಯದಲ್ಲಿ ಬಳಸಿಕೊಳ್ಳುತ್ತಿದ್ದರು. ಇದರೊಂದಿಗೆ ಸ್ಟಿವಿಯಾದ ಎಲೆಗಳನ್ನು ಅದರಲ್ಲಿರುವ ಸಿಹಿಯಿಂದಾಗ ಸೇವನೆಯನ್ನು ಮಾಡುತ್ತಿದ್ದರು. ಅಲ್ಲದೆ ಇದರ ಔಷಧೀಯ ಗುಣಗಳ ಬಗ್ಗೆ ಅವರಿಗೆ ಅರಿವೂ ಇತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಇತಿಹಾಸಕಾರರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುತ್ತಾರೆ. ೧೮೦೦ ವೇಳೆಗೆ ಸ್ಟಿವಿಯಾದ ಬಳಕೆಯು ಪೆರುಗ್ವೆಯಿಂದ ಬ್ರೆಜಿಲ್‌ ಮತ್ತು ಅರ್ಜೆಂಟಿನಾಗಳಿಗೆ ಪಸರಿಸಿತ್ತು.

Categories
ಅಂಕಣಗಳು ಈರಯ್ಯ ಕಿಲ್ಲೇದಾರ ಅಂಕಣ ಕೃಷಿ

ಅಂಕಣಗಳು – ಈರಯ್ಯ ಕಿಲ್ಲೇದಾರ

ಅಂಕಣಗಳು – ಈರಯ್ಯ ಕಿಲ್ಲೇದಾರ

ಎಲ್ಲ ಭಾಗಗಳನ್ನು ಓದಿ

Categories
ಕೃಷಿ ಕೃಷಿ ಸಂಬಂಧಿ ಚಟುವಟಿಕೆಗಳು ಜೇನು ಕೃಷಿ

ಜೇನು ಕೃಷಿ

ಕೃತಿ-ಜೇನು ಕೃಷಿ
ಸಂಪಾದಕ-ಡಾ. ಬಿ. ಎಸ್. ಸಿದ್ಧರಾಮಯ್ಯ
ಸರಣಿ-ಕೃಷಿ, ಕೃಷಿ ಸಂಬಂಧಿ ಚಟುವಟಿಕೆಗಳು
ಕೃತಿಯನ್ನು ಓದಿ

Categories
ಕೃಷಿ ಕೃಷಿ ಸಂರಕ್ಷಣೆ

ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆ

ಕೃತಿ : ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆ

ಪ್ರಕಟಣೆ : ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು

ನೀರು ನಿರ್ವಹಣೆ

ಕೃತಿ: ನೀರು ನಿರ್ವಹಣೆ

ಲೇಖಕರು: ಡಾ. ಲ.ಅ. ದೀಕ್ಷಿತ

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಸಂಬಂಧಿ ಚಟುವಟಿಕೆಗಳು ಹೈನುಗಾರಿಕೆ

ಸುಧಾರಿತ ಹೈನೋತ್ಪಾದನೆ

ಕೃತಿ: ಕೃಷಿ ಸಂಬಂಧಿತ ಚಟುವಟಿಕೆ ಹೈನುಗಾರಿಕೆ

ಲೇಖಕರು: ಡಾ. ಉಷಾಕಿರಣ್

ಕೃತಿಯನ್ನು ಓದಿ     |     ಕೃತಿಯನ್ನು ಓದಿ

Categories
ಕೃಷಿ ಹಿತ್ತಿಲು ಕೃಷಿ

ಕೃಷಿ ಹಿತ್ತಲು

ಕೃತಿ:ಕೃಷಿ ಹಿತ್ತಲು
ಲೇಖಕರು:
ಕೃತಿಯನ್ನು ಓದಿ

Categories
ಕೃಷಿ ಹವಾಮಾನ ಪರಿಣಾಮ

ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯ , ಕೃಷಿಯ ಮೇಲೆ ಬೀರುವ ಪರಿಣಾಮಗಳು

ಕೃತಿ:ಕೃಷಿ ಹವಾಮಾನ ಪರಿಣಾಮ
ಲೇಖಕರು: ಡಾ. ಉಷಾಕಿರಣ್
ಕೃತಿಯನ್ನು ಓದಿ

Categories
ಕೃಷಿ ಕೃಷಿ ಸಂಸ್ಕೃತಿ ಪಾರಂಪರಿಕ ಜ್ಞಾನ

ರೈತರಿಗೆ ಬೇಕಾಗುವ ಕೆಲವು ಪ್ರಮುಖ ಮರಗಳು

ಕೃತಿ: ರೈತರಿಗೆ ಬೇಕಾಗುವ ಕೆಲವು ಪ್ರಮುಖ ಮರಗಳು

ಲೇಖಕರು: ಸಂಗ್ರಹ

ಕೃತಿಯನ್ನು ಓದಿ

Categories
ಕುರಿ ಸಾಕಾಣಿಕೆ ಕೃಷಿ ಗ್ರಾಮೀಣ ಅಭಿವೃದ್ಧಿ

ಕೃಷಿ ಸಾಗಾಣಿಕೆ

ಕೃತಿ:ಕೇಷಿ ಸಾಗಾಣಿಕೆ
ಲೇಖಕರು: ಡಾ. ಉಷಾಕಿರಣ್
ಕೃತಿಯನ್ನು ಓದಿ

Categories
ಕುರಿ ಸಾಕಾಣಿಕೆ ಕೃಷಿ ಗ್ರಾಮೀಣ ಅಭಿವೃದ್ಧಿ

ಗ್ರಾಮೀಣಾಭಿವೃದ್ಧಿಯಲ್ಲಿ ಕುರಿ ಸಾಕಾಣಿಕೆ

ಕೃತಿ-ಗ್ರಾಮೀಣಾಭಿವೃದ್ಧಿಯಲ್ಲಿಕುರಿ ಸಾಕಾಣಿಕೆ :
ಲೇಖಕರು-ಡಾ. ಉಷಾಕಿರಣ್
ಸರಣಿ-ಕೃಷಿ ವಿಶ್ವವಿದ್ಯಾನಿಲಯ
ಕೃತಿಯನ್ನು ಓದಿ

Categories
ಕೃಷಿ ಬಳ್ಳಿ ಮತ್ತು ಸೊಪ್ಪು ತರಕಾರಿಗಳು ಹಿತ್ತಿಲು ಕೃಷಿ

ಬಳ್ಳಿ ಮತ್ತು ಸೊಪ್ಪು ತರಕಾರಿಗಳು

ಕೃತಿ-ಬಳ್ಳಿ ಮತ್ತು ಸೊಪ್ಪು ತರಕಾರಿಗಳು
ಕುಲಪತಿಗಳು-ಡಾ. ಎಂ.ಎನ್. ಶೀಲವಂತರ್
ಸರಣಿ-ಕೃಷಿ ವಿಶ್ವವಿದ್ಯಾನಿಲಯ
ಕೃತಿಯನ್ನು ಓದಿ

Categories
ಕೃಷಿ ಬಳ್ಳಿ ಮತ್ತು ಸೊಪ್ಪು ತರಕಾರಿಗಳು ಹಿತ್ತಿಲು ಕೃಷಿ

ಅವರೆ

ಕೃತಿ:ಕೃಷಿ ಹಿತ್ತಲು ಬಳ್ಳಿ ಮತ್ತು ಸೊಪ್ಪು ತರಕಾರಿಗಳು
ಲೇಖಕರು: ಕೃಷಿ, ಬಳ್ಳಿ ಮತ್ತು ಸೊಪ್ಪು ತರಕಾರಿಗಳು, ಹಿತ್ತಿಲು ಕೃಷಿ
ಕೃತಿಯನ್ನು ಓದಿ

Categories
ಔಷಧೀಯ ಸಸ್ಯಗಳು ಕೃಷಿ ಬೆಟ್ಟದ ನೆಲ್ಲಿ

ಬೆಟ್ಟದನೆಲ್ಲಿ ಮತ್ತು ಕಮರಾಕ್ಷಿ

ಕೃತಿ-ಬೆಟ್ಟದನೆಲ್ಲಿ ಮತ್ತು ಕಮರಾಕ್ಷಿ
ಸಂಪಾದಕರು-ಡಾ. ಬಿ.ಎಸ್. ಸಿದ್ಧರಾಮಯ್ಯ
ಸರಣಿ-ಔಷಧೀಯ ಸಸ್ಯಗಳು, ಕೃಷಿ, ಬೆಟ್ಟದ ನೆಲ್ಲಿ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಕಾನೂನು ಕೃಷಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಸಾಂಪ್ರದಾಯಿಕ ಜ್ಞಾನ ಪುಸ್ತಕಗಳಿಂದ

ಕೃಷಿಯಲ್ಲಿ ಬೌದ್ಧಿಕ ಆಸ್ತಿಹಕ್ಕು ಹಾಗೂ ಸಾಂಪ್ರದಾಯಕ ಜ್ಞಾನ

ಕೃತಿ-ಕೃಷಿಯಲ್ಲಿ ಬೌದ್ಧಿಕ ಆಸ್ತಿಹಕ್ಕು ಹಾಗೂ ಸಾಂಪ್ರದಾಯಕ ಜ್ಞಾನ
ಸಂಪಾದಕರು/ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು-ಡಾ. ಉಷಾಕಿರಣ್
ಸರಣಿ-ಕೃಷಿ ವಿಶ್ವವಿದ್ಯಾನಿಲಯ
ಕೃತಿಯನ್ನು ಓದಿ

Categories
ಅಂಕಣಗಳು ಕೃಷಿ ಜಯಪ್ರಸಾದ್ ಬಳ್ಳೇಕೆರೆ ಅಂಕಣ

ಅನ್ನದ ಅನ್ನ ತಿಪ್ಪೆಗೊಂದು ಹಬ್ಬ

ಕೃತಿ: ಅಂಕಣಗಳು, ಕೃಷಿ, ಜಯಪ್ರಸಾದ್ ಬಳ್ಳೇಕೆರೆ
ಲೇಖಕರು: ಅಂಕಣಗಳು, ಕೃಷಿ, ಜಯಪ್ರಸಾದ್ ಬಳ್ಳೇಕೆರೆ
ಕೃತಿಯನ್ನು ಓದಿ

Categories
ಅಂಕಣಗಳು ಕೃಷಿ ಸ ರಘುನಾಥ ಅಂಕಣ

ಭಯ ನೀಗಿದರೆ ಕೃಷಿ ಬದುಕಿಗೆ ಬಲ

ಕೃತಿ:ಭಯ ನೀಗಿದರೆ ಕೃಷಿ ಬದುಕಿಗೆ ಬಲ
ಲೇಖಕರು: ಅಂಕಣಗಳು, ಕೃಷಿ, ಸ ರಘುನಾಥ
ಕೃತಿಯನ್ನು ಓದಿ

Categories
ಅಂಕಣಗಳು ಕಿಶನ್ ರಾವ್ ಕುಲಕರ್ಣಿ ಅಂಕಣ ಕೃಷಿ

ಅಂಕಣಗಳು – ಕಿಶನ್ ರಾವ್ ಕುಲಕರ್ಣಿ

ಅಂಕಣಗಳು – ಕಿಶನ್ ರಾವ್ ಕುಲಕರ್ಣಿ

ಎಲ್ಲ ಭಾಗಗಳನ್ನು ಓದಿ

Categories
ಕೃಷಿ ನಾಟಿ ಬೆಳೆಗಳು ಬೆಳೆ ವೈವಿಧ್ಯ

ಕಣ್ಮರೆಯ ಹಾದಿಯಲ್ಲಿ ಕೊರಲೆ

ಆಧುನಿಕ ಕೃಷಿಯ ಸುಳಿಗಾಳಿಗೆ ಸಿಲುಕಿ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಬೆಳೆಗಳಲ್ಲಿ ಕಿರುಧಾನ್ಯಗಳಿಗೆ ಅಗ್ರಸ್ಥಾನ. ಎಲ್ಲಾ ಕಡೆಗಳಿಂದಲೂ ಹೊಡೆತ ತಿನ್ನುತ್ತಿರುವ ಅವುಗಳ ಹೆಸರೇ ಇಂದು ಎಷ್ಟೋ ಜನಕ್ಕೆ ಅಪರಿಚಿತ.

ಕಿರುಧಾನ್ಯಗಳಲ್ಲಿ 9 ವಿಧ. ಅವುಗಳೆಂದರೆ ಜೋಳ, ಸಜ್ಜೆ, ರಾಗಿ, ನವಣೆ, ಸಾವೆ, ಹಾರಕ, ಬರಗು, ಊದಲು ಮತ್ತು ಕೊರಲೆ. ಈ ಒಂಭತ್ತರಲ್ಲಿ ಹಾರಕ ಕಣ್ಮರೆಯ ಹಾದಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಎರಡನೆಯ ಸ್ಥಾನ ಕೊರಲೆಯದು.

ಕೊರಲೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಪ್ರಾದೇಶಿಕ ಹಿನ್ನೆಲೆಯ ಕಿರುಧಾನ್ಯ. ಬೇಗ ಕುಯಿಲಿಗೆ ಬರುವ, ಬರ ನಿರೋಧಕ ಗುಣ ಹೊಂದಿದ, ಕಡಿಮೆ ಸಾರಯುಕ್ತ ಬರಡು ಮಣ್ಣಿನಲ್ಲೂ ಬೆಳೆಯುವ ಸಾಮರ್ಥ್ಯವುಳ್ಳ, ಇಬ್ಬನಿಯ ತೇವಕ್ಕೇ ಬೆಳೆಯುವ ಅಪರೂಪದ ಗುಣಗಳ ಕಣಜ ಕೊರಲೆ.

Categories
ಕೃಷಿ ಅನುಭವ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ದ೦ತಕತೆಯಾದ ನನ್ನ ದೊಡ್ಡಣ್ಣ : ಡಾ: ಅಡ್ಡೂರು ತಿಮ್ಮಪ್ಪಯ್ಯ

ಕೃತಿ: ಕೃಷಿ ಅನುಭವಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಲೇಖಕರು: ಕೃಷಿ ಅನುಭವ,ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಕೃತಿಯನ್ನು ಓದಿ

Categories
ಕೃಷಿ ಪುಸ್ತಕಗಳಿಂದ

ಅಜೋಲಾ ಆಂದೋಲನ

ಕೃತಿ-ಕೃಷಿ
ಸರಣಿ-ಕೃಷಿ, ಪುಸ್ತಕಗಳಿಂದ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಋಷಿ ಡಾ. ಎಲ್.ಸಿ. ಸೋನ್ಸ್ ಪುಸ್ತಕಗಳಿಂದ

ಕೃಷಿ ಋಷಿ ಡಾ. ಎಲ್.ಸಿ. ಸೋನ್ಸ್

ಕೃತಿ: ಕೃಷಿ ಋಷಿ ಡಾ. ಎಲ್.ಸಿ. ಸೋನ್ಸ್

ಲೇಖಕರು: ಡಾ. ಎಲ್.ಸಿ. ಸೋನ್ಸ್

ಕೃತಿಯನ್ನು ಓದಿ

Categories
ಕೃಷಿ ಪುಸ್ತಕಗಳಿಂದ

ಹಸಿರು ಹಾದಿ – ಸಾವಯವದಿಂದ ಜೀವವೈವಿಧ್ಯದವರೆಗೆ

ಕೃತಿ-ಹಸಿರು ಹಾದಿ ಸಾವಯವದಿಂದ ಜೀವವೈವಿಧ್ಯದವರೆಗೆ

ಸಂಪಾದಕರು : ನಾ. ಕಾರಂತ ಪೆರಾಜೆ, ಜಯಪ್ರಸಾದ್ ಬಳ್ಳೇಕೆರೆ, ರವಿ ಮೂಡಿಗೆರೆ

ಕೃತಿಯನ್ನು ಓದಿ     |     Download

Categories
ಕೃಷಿ ಪುಸ್ತಕಗಳಿಂದ

ಶತಶೃಂಗದ ಸಾಲಿನಲ್ಲಿ… ಕೃಷಿ ಬರಹಗಳ ಸಂಕಲನ

ಕೃತಿ: ಶತಶೃಂಗದ ಸಾಲಿನಲ್ಲಿ… ಕೃಷಿ ಬರಹಗಳ ಸಂಕಲನ

ಲೇಖಕರು:ಆನಂದತೀರ್ಥ ಪ್ಯಾಟಿ

ಕೃತಿಯನ್ನು ಓದಿ

Categories
ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು ಕೃಷಿ ಪುಸ್ತಕಗಳಿಂದ ಸಹಜ ಸಮೃದ್ಧ ಪ್ರಕಾಶನ

ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು : ಇದೆಂಥ ವಿಪರ್ಯಾಸ ನೋಡಿ ! : ಪ್ರೊ. ದೇವೇಂದ್ರ ಶರ್ಮ : ಕನ್ನಡಕ್ಕೆ: ನಾಗೇಶ ಹೆಗಡೆ

ಇದೆಂಥ ವಿಪರ್ಯಾಸ ನೋಡಿ !

ಜಾಗತೀಕರಣದ ನಂತರ ಇಡೀ ದೇಶ ಶೀಘ್ರ ಗತಿಯಲ್ಲಿ ಅಭಿವೃದ್ಧಿ ಹೊಂದತೊಡಗಿದೆ ಎಂದು ಅಧಿಕಾರದ ಪೀಠದಲ್ಲಿರುವ ಎಲ್ಲರೂ ಹೇಳುತ್ತಿದ್ದಾರೆ. ನಗರಗಳಲ್ಲಿ ಬಹುಮಹಡಿ ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಏರುತ್ತಿದೆ. ಶೇರು ಮಾರುಕಟ್ಟೆಯ ಸೂಚ್ಯಂಕ ಏರುತ್ತಿದೆ. ಹಣದ ವಹಿವಾಟಿನ ಮೊತ್ತ ಏರುತ್ತಿದೆ. ವಿದೇಶೀ ಸಾಮಗ್ರಿಗಳ ರಾಶಿ ಏರುತ್ತಿದೆ. ಕೋಟ್ಯಧೀಶರ ಧನರಾಶಿ ಏರುತ್ತಿದೆ. ದೇಶಕ್ಕೆ ಅನ್ನ ಕೊಡುತ್ತಿದ್ದ ಸಾಮಾನ್ಯ ರೈತರ ಸಂಕಟಗಳೂ ಏರುತ್ತಿವೆ. ವಾಸ್ತವ ಚಿತ್ರಣ ಏನು ಎಂಬುದನ್ನು ಕೃಷಿ ತಜ್ಞ  ಡಾ. ದೇವೇಂದ್ರ ಶರ್ಮಾ ಇಲ್ಲಿ ವಿವರಿಸಿದ್ದಾರೆ.

Categories
ಕೃಷಿ

ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲೇಖನಗಳು

ಕೃತಿ: ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲೇಖನಗಳು

ಲೇಖಕರು: ಮಲ್ಲಿಕಾರ್ಜುನ ಹೊಸಪಾಳ್ಯ

ಕೃತಿಯನ್ನು ಓದಿ     |     Download

Categories
ಕೃಷಿ ಸಂಸ್ಕೃತಿ-ಸಮುದಾಯ

ಗಿರಿಜನರು

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಆದಿವಾಸಿಗಳು ಕಾಡುಗಳಲ್ಲಿ ಬದುಕುತ್ತಿರಲಿಲ್ಲ. ಕೃಷಿ ವಿಸ್ತರಣೆಯ ಒತ್ತಡಗಳಿಂದಾಗಿ ಇವರನ್ನೆಲ್ಲ ತುಂಬ ಹಿಂದೆಯೇ ನಾವು ಕಾಡುಮೇಡುಗಳಿಗೆ ಅಟ್ಟಿಬಿಟ್ಟಿದ್ದೆವು. ಈಗ ಅಲ್ಲಿಂದಲೂ ಅವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಭಾರತದ ಭೂಪಟದ ನಿರಿಗೆಗಳನ್ನೆಲ್ಲ ಇಸ್ತ್ರಿ ಹೊಡೆದು ಸರಿಸಪಾಟು ಮಾಡುವ ಈ ಯತ್ನದಲ್ಲಿ ನಿಸರ್ಗ ಪರಂಪರೆಗಳೇ ಅಳಿಸಿ ಹೋಗುತ್ತವೆ. ಇಷ್ಟು ಮುಂದುವರೆದಿದ್ದು ಸಾಲದೆ? ಕರ್ನಾಟಕದಲ್ಲಿ ಎಲ್ಲೆಲ್ಲಿ ಭತ್ತದ ತಳಿ ವೈವಿಧ್ಯ ಉಳಿದುಕೊಂಡಿದೆ ಎಂಬುದರ ಬಗ್ಗೆ ನಮ್ಮ ನಮ್ಮಲ್ಲಿ ಚರ್ಚೆ ನಡೆಯುತ್ತಿತ್ತು. ಆದಿವಾಸಿಗಳ ಹಾಗೂ ಗಿರಿಜನರ ‘ಹಾಡಿ’ಗಳಲ್ಲಿ ಸಾಕಷ್ಟು ತಳಿ ವೈವಿಧ್ಯ ಇದೆ ಎನ್ನುವಾಗ ನಮ್ಮ ಮಿತ್ರ ಶಿವಾನಂದ ಕಳವೆ, ತೀರಾ ಸಹಜ ಎಂಬಂತೆ, ಒಂದು ಮಾತನ್ನು ಎಸೆದರು: ‘ಹೌದು, ಯಾವ ಯಾವ ಊರಿಗೆ ರಸ್ತೆ ಇಲ್ಲವೋ ಆ ಊರುಗಳಲ್ಲೆಲ್ಲ ತಳಿ ವೈವಿಧ್ಯ ಜಾಸ್ತಿ ಇದೆ’ ಅಂದರು.

ಇಂದಿನ ಬದುಕಿನ ವ್ಯಂಗ್ಯವನ್ನು, ವೈರುಧ್ಯವನ್ನು ಇದಕ್ಕಿಂತ ಸೂಚ್ಯವಾಗಿ ಹೇಳಲು ಸಾಧ್ಯವಿದೆಯೆ? ತಳಿವೈವಿಧ್ಯವನ್ನೂ ಉಳಿಸಿಕೊಳ್ಳಬೇಕು, ಸಂಪರ್ಕ ವ್ಯವಸ್ಥೆಯನ್ನೂ ಸುಧಾರಿಸಬೇಕೆಂದರೆ ಸಾಧ್ಯವೆ? ಗಿರಿಜನರು ನಮ್ಮ ಜೀವ ಖಜಾನೆ ಇದ್ದಂತೆ. ಅವರ ಸಂಸ್ಕೃತಿ, ಪರಂಪರೆ, ಗಿಡ-ಬಳ್ಳಿ-ಪಶು-ಪಕ್ಷಿಗಳ ಬಗೆಗಿನ ಅವರ ಜ್ಞಾನ ಹಾಗೂ ಭಕ್ತಿಪೂರ್ವಕ ಸಂಬಂಧ ಎಲ್ಲವೂ ಗ್ರೇಟ್. ಹಾಗೆಯೇ ಅವರ ಬದುಕೂ ತೀರ ದುರ್ಭರ. ಹತ್ತು ಮಾರು ದೂರ ಸಾಗಲಿಕ್ಕೂ ಅವರು ಹತ್ತಬೇಕು, ಇಲ್ಲವೆ ಇಳಿಯಬೇಕು. ನೀರು ಸುಲಭಕ್ಕೆ ಸಿಗುವುದಿಲ್ಲ. ವರ್ಷದ ಆರಾರು ತಿಂಗಳು ಆಹಾರವೂ ಸುಲಭಕ್ಕೆ ಸಿಗುವುದಿಲ್ಲ. ಮಳೆ ಚಳಿ ಎಲ್ಲವೂ ಅಲ್ಲಿ ಜಾಸ್ತಿ. ಕಾಡುಪ್ರಾಣಿಗಳ ಕಾಟ ತೀರಾ ಜಾಸ್ತಿ ಇದ್ದರೆ ಗರ್ಭಿಣಿ, ಬಾಣಂತಿ, ಅಜ್ಜಿ, ಮೊಮ್ಮಗು ಕೂಡ ಮರ ಹತ್ತಿ ಕೂರಬೇಕು. ಗಾಯ-ರೋಗಗಳಿಗೆ ತುರ್ತು ಔಷಧ ಅಥವಾ ಚಿಕಿತ್ಸೆ ಸಿಗುವುದಿಲ್ಲ. ಇಷ್ಟೆಲ್ಲ ಕಷ್ಟ ಎದುರಿಸಿ ಈ ಗಿರಿಜನರು ಯಾಕೆ ಗಿರಿಜನರಾಗಿಯೇ ಉಳಿದಿದ್ದಾರೆ?

(ಇದು ಸಿಲ್ಲಿ ಪ್ರಶ್ನೆ ಎನ್ನಿಸಬಹುದು. ‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು, ಮಂಡಾರಿನ್ ಭಾಷಿಕರನ್ನು ಬಿಟ್ಟರೆ ಬೇರೆ ಯಾರೂ ಉಳಿಯದ ಹಾಗೆ ಸಾವಿರ ವರ್ಷಗಳ ಹಿಂದೆಯೇ ಬಹುದೊಡ್ಡ ಜನಾಂಗೀಯ ನರಮೇಧ ನಡೆದುಹೋಗಿತ್ತು. ಅದು ಹಿಟ್ಲರನ ನರಮೇಧಕ್ಕಿಂತ ವಿಶಾಲ ವ್ಯಾಪ್ತಿಯದೇ ಇದ್ದೀತ್ತೇನೊ.)

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಅವರೆಲ್ಲ ನಮ್ಮ ನಿಮ್ಮ ಪೂರ್ವಜರ ಹಾಗೆಯೇ ಹಾಯಾಗಿ ನದಿತೀರಗಳಲ್ಲೋ ಜಲಸಿರಿಯುಳ್ಳ ಮೈದಾನಗಳಲ್ಲೋ ಗಡ್ಡೆಗೆಣಸು, ಹಣ್ಣುಹಂಪಲು ತಿನ್ನುತ್ತ, ಬೇಟೆಯಾಡುತ್ತ ಸರಳವಾಗಿ ಬದುಕಿದ್ದವರು. ಮುಂದೆ ಏನಾಯ್ತು ಅಂದರೆ ಪ್ರಬಲ ಕೋಮಿನವರು ಕೃಷಿಗಾಗಿ ಜಮೀನು ಹುಡುಕುತ್ತ, ತಳವೂರುತ್ತ, ನೆಲವಿಸ್ತರಣೆ ಮಾಡುತ್ತ ಬಂದರು. ಫೈಟ್ ಮಾಡಲು ಶಕ್ತಿಯಿಲ್ಲದ, ಅಥವಾ ಮನುಷ್ಯರ ವಿರುದ್ಧ ಶಸ್ತ್ರ ಎತ್ತದ ಬಡಪಾಯಿಗಳೆಲ್ಲ ದೂರ ಸರಿಯುತ್ತ, ಸರಿಯುತ್ತ ಗುಡ್ಡ ಏರಬೇಕಾಯಿತು. ಆಥವಾ ಘನಘೋರ ಅರಣ್ಯದೊಳಕ್ಕೆ ನುಗ್ಗಿ ಅಲ್ಲೇ ಹೇಗೋ ಬದುಕಲು ಕಲಿತು ಆದಿವಾಸಿಗಳೆನಿಸಿಕೊಳ್ಳಬೇಕಾಯಿತು. ಅವರಿಗೆ ಕತ್ತಿ ದೊಣ್ಣೆ ಹಿಡಿದ ಮನುಷ್ಯರ ಸಹವಾಸಕ್ಕಿಂತ ಹುಲಿ-ಚಿರತೆ-ಆನೆಗಳ ಸಹವಾಸವೇ ಮೇಲೆಂದು ಅನ್ನಿಸಿರಬೇಕು. ಏಕೆಂದರೆ ವನ್ಯಪ್ರಾಣಿಗಳು ವಿನಾಕಾರಣ ಹಿಂಸೆಗೆ ಇಳಿಯುವುದಿಲ್ಲ. ಮರಿಗಳು ಬೆಳೆದಿದ್ದರೆ, ಹೊಟ್ಟೆ ತುಂಬಿದ್ದರಂತೂ, ನೀವು ಹತ್ತಿರ ಸುಳಿದರೂ ಗುರ್ರೆನ್ನುವುದಿಲ್ಲ. ಮನುಷ್ಯ ಹಾಗಲ್ಲವಲ್ಲ.

ಅಂತೂ ಆಧುನಿಕ ನಾಗರಿಕತೆಯೇ ಗಿರಿಜನ-ಆದಿವಾಸಿಗಳನ್ನು ಸೃಷ್ಟಿಸಿದೆ ಅಂದಂತಾಯಿತು. ಈಗ ಅವರನ್ನು ಕಾಡುಮೇಡುಗಳಿಂದಲೂ ಒಕ್ಕಲೆಬ್ಬಿಸುವ ಯತ್ನ ನಡೆದಿದೆ. ಕಳೆದ ಐದಾರು ವರ್ಷಗಳಲ್ಲಿ ಗಣಿಗಾರಿಕೆಯ ಹುಚ್ಚುಪೈಪೋಟಿ ಅದೆಷ್ಟು ತೀವ್ರವಾಗಿದೆ ಎಂದರೆ ಅಂಥ ತೀರ ಒಳನಾಡುಗಳನ್ನೂ ಹುಡುಕಿಕೊಂಡು ಹೋಗಿ ಬುಲ್ಡೋಜರ್‌ಗಳು, ಅರ್ಥ್‌ಮೂವರ್‌ಗಳನ್ನು ನುಗ್ಗಿಸಿ ಅಲ್ಲಿದ್ದ ಜೀವಿ ವೈವಿಧ್ಯವನ್ನು ಬಗ್ಗು ಬಡಿದು ಗಣಿಧನಿಗಳ ‘ಸಾಮ್ರಾಜ್ಯ ವಿಸ್ತರಣೆ’ ನಡೆಯುತ್ತಿದೆ.

ಬೇಕಿದ್ದರೆ ಗಮನಿಸಿ. ನಮ್ಮ ದೇಶದಲ್ಲಿ ಗಣಿ ಸಂಪತ್ತು ಎಲ್ಲೆಲ್ಲಿದೆ ಎಂಬುದನ್ನು ಸೂಚಿಸುವ ಒಂದು ನಕಾಶೆ ತಯಾರಿಸಿ. ಹಾಗೆಯೇ ಜೀವಿವೈವಿಧ್ಯ, ವನ್ಯಸಂಪತ್ತು ಎಲ್ಲುಳಿದಿದೆ ಎಂಬುದರ ಗುರುತಿಸಿ. ಖನಿ
ಜವನ್ನು ಗುರುತಿಸಿದ ಸ್ಥಳದಲ್ಲೇ ಇವೂ ಬರುತ್ತವೆ-ತುಸು ಹೆಚ್ಚುಕಮ್ಮಿ. ಹಾಗೆಯೇ ನಮ್ಮ ದೇಶದ ಆದಿವಾಸಿಗಳು ಹಾಗೂ ಗಿರಿಜನರು ವಾಸಿಸುವ ತಾಣವನ್ನೂ ಅದೇ ನಕಾಶೆಯ ಮೇಲೆ ಗುರುತಿಸಿ. ಬಹುಮುಖ್ಯ ಜಲಮೂಲಗಳು ಎಲ್ಲಿವೆ ಎಂಬುದನ್ನೂ ಗುರುತಿಸಿ. ಎಲ್ಲವೂ ಒಂದೇ ಕಡೆ ಕಾಣುತ್ತವೆ. ಅಂದರೆ, ಎಲ್ಲಿ ಗಿರಿಜನರು- ಆದಿವಾಸಿಗಳು ಇದ್ದಾರೋ ಅಲ್ಲೇ ಅಳಿದುಳಿದ ವನ್ಯ ಸಂಪತ್ತು/ಜೀವಿ ವೈವಿಧ್ಯ ಇದೆ, ಅಲ್ಲೇ ಜಲಮೂಲಗಳೂ ಇವೆ. ಅಲ್ಲೇ ಅಳಿದುಳಿದ ಖನಿಜ ಸಂಪತ್ತೂ ಇದೆ. ಹಿಂದೆ ಮುಂದೆ ನೋಡದೆ ನೀವು ಅಲ್ಲಿ ಡೈನಮೈಟ್ ಇಟ್ಟರೆ ಒಂದೇ ಏಟಿಗೆ ನಾಲ್ಕಾರು ಬಗೆಯ ಸಂಪತ್ತಿಗೆ ನೀವು ಕೊಳ್ಳಿ ಇಟ್ಟಂತಾಗುತ್ತದೆ. ಈಗಂತೂ ಸಾರಾ ಸಗಟಾಗಿ ಡೈನಮೈಟ್‌ಗಳನ್ನು ಇಡುವ ಕೆಲಸ ನಡೆದಿದೆ.

ಆಧುನಿಕ ಬದುಕಿನ ಬಹುದೊಡ್ಡ ವ್ಯಂಗ್ಯದೊಂದಿಗೆ ನಾವೀಗ ಮುಖಾಮುಖಿ ಆಗುತ್ತಿದ್ದೇವೆ. ನಮಗೆ ರಸ್ತೆ ಬೇಕು. ಹೊರಜಗತ್ತಿನೊಂದಿಗೆ ಕುಗ್ರಾಮಗಳನ್ನು ಬೆಸೆಯಬಲ್ಲ ಸಂಚಾರ ಸಾಧನ ಬೇಕು. ಬಸ್ ಇಲ್ಲದಿದ್ದರೆ, ಟೆಂಪೊ, ಲಾರಿಗಳಾದರೂ ಚಲಿಸಬಲ್ಲ ಸರ್ವಋತು ರಸ್ತೆ, ಸೇತುವೆ ಬೇಕು.

ಅದೇ ಕಾಲಕ್ಕೆ ನಮ್ಮ ಮುಂದಿನ ಪೀಳಿಗೆಗಾಗಿ ಜೀವಿ ವೈವಿಧ್ಯ ಉಳಿಯಬೇಕು. ಅದು ಕುದುರೆಮುಖದಲ್ಲಿ, ಸಂಡೂರಿನಲ್ಲಿ, ಒರಿಸ್ಸಾದ ಋಷ್ಯಮೂಕ ಪರ್ವತದಲ್ಲಿ, ಝಾರ್ಖಂಡದಲ್ಲಿ, ವಿದರ್ಭದಲ್ಲಿ ಮಾತ್ರ ಉಳಿದಿದ್ದರೆ ಅವನ್ನು ಉಳಿಸಿಕೊಳ್ಳಬೇಕು. ಅದು ಸಾಧ್ಯವಾಗಬೇಕು ಎಂದರೆ ಅಲ್ಲಿ ರಸ್ತೆ ನಿರ್ಮಾಣ ಆಗಕೂಡದು. ಬುಲ್‌ಡೋಜರ್ ಹೋಗಕೂಡದು. ಜಗತ್ತಿನ ಜೀವವೈವಿಧ್ಯವನ್ನು ಉಳಿಸಬೇಕೆಂದಿದ್ದರೆ ರಸ್ತೆಯೇ ಸಾಧ್ಯವಿಲ್ಲದ ತಾಣವನ್ನು ನೀವು ಹುಡುಕಬೇಕು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಇದೀಗ ಉತ್ತರ ಧ್ರುವದಿಂದ ೯೬೬ ಕಿಮೀ ದೂರದ ಸ್ವಾಲ್‌ಬಾರ್ಡ್ ಎಂಬಲ್ಲಿ ಹಿಮಪರ್ವತವನ್ನು ಕೊರೆದು ಒಂದು ಬಹುದೊಡ್ಡ ಜೀವಖಜಾನೆಯನ್ನು ಸೃಷ್ಟಿಸಲಾಗುತ್ತಿದೆ. ಶೂನ್ಯದ ಕೆಳಗೆ ೧೮ ಡಿಗ್ರಿ ಸೆ. ತಂಪಿರುವ ಅಲ್ಲಿ ೩೦ ಲಕ್ಷ ತಳಿಗಳ ಬೀಜಗಳನ್ನು ಇಡಲೆಂದು ಹಿಮವನ್ನು ಕೊರೆಯಲಾಗಿದೆ. ಅಲ್ಲಿನ ನಿರ್ಜನ, ಶೀತಲನರಕಕ್ಕೆ ಹೋಗಲು ರಸ್ತೆಯೇ ಇಲ್ಲವಾದ್ದರಿಂದ ಆ ಖಜಾನೆಗೆ ಬೀಗ ಕೂಡ ಬೇಕಿಲ್ಲವಂತೆ.

ಇತ್ತ ಭಾರತದ ಕುಗ್ರಾಮಗಳನ್ನು ಆಧುನಿಕಗೊಳಿಸುವ ಯತ್ನ ನಡೆದಿದೆ. ಅಲ್ಲಿಗೆ ಮೂಲ ಸೌಕರ್ಯ ಒದಗಿಸಿದರೆ ‘ನಿಮಗೇ ಅನುಕೂಲ’ ಎಂದು ಬಹುರಾಷ್ಟ್ರೀಯ ಬಿಗ್ ಬಿಸಿನೆಸ್ ಕಂಪನಿಗಳಿಗೆ ಅರ್ಥತಜ್ಞ ಅಮರ್ತ್ಯ ಸೆನ್ ಸಲಹೆ ನೀಡುತ್ತಾರೆ. ಹಳ್ಳಿಗಳತ್ತ ಉತ್ತಮ ರಸ್ತೆಗಳಾದರೆ ಕೃಷಿ ಉತ್ಪನ್ನಗಳ ಸಾಗಾಟ ಸುಲಭ, ಉದ್ಯೋಗ ನಿರ್ಮಿತಿಯೂ ಸುಲಭ ಎಂದು ಕೃಷಿತಜ್ಞ ಸ್ವಾಮಿನಾಥನ್ ಹೇಳುತ್ತಾರೆ. ಹಾಗೆ ಹಳ್ಳಿಗರನ್ನು ನಗರಗಳತ್ತ ಸೆಳೆಯುವ ಹೆದ್ದಾರಿಗಳನ್ನು ನಿರ್ಮಿಸುವ ಬದಲು, ನಗರಕ್ಕೆ ಬಂದ ಹತವಾಸಿಗಳನ್ನು ಹಳ್ಳಿಗಳತ್ತ ಹೊರಡಿಸುವ ಕಿರುದಾರಿಗಳನ್ನು ನಿರ್ಮಿಸಿದರೆ ಹೇಗೆ? ರಾಳೆಗಾಂವ್ ಸಿದ್ದಿಯಲ್ಲಿ, ರೂಪಾರೆಲ್ ನದಿತಟಾಕದಲ್ಲಿ ಅಂಥ ಯತ್ನಗಳು ಸಫಲವಾಗಿವೆ. ನಿಸರ್ಗವನ್ನು ಧೂಲೀಪಟಗೊಳಿಸುವ ಯಂತ್ರಗಳನ್ನು ಗುಡ್ಡಕ್ಕೆ ಅಟ್ಟುವ ಬದಲು ಬೋಳುಗುಡ್ಡಗಳನ್ನು ಸಮೃದ್ಧಗೊಳಿಸುವ ಕೈಗಳು ನಮಗಿಂದು ಬೇಕಾಗಿವೆ. ನಾವಿಂದು ಎಷ್ಟು ಲಕ್ಷ ಟನ್ ಅದುರನ್ನು ರಫ್ತು ಮಾಡುತ್ತಿದ್ದೇವೆಯೋ ಸುಮಾರು ಅಷ್ಟೇ ಲಕ್ಷ ಟನ್ ಜೈವಿಕ ಸಾಮಗ್ರಿ ನಮ್ಮ ನಗರಗಳಿಗೆ ಅಗತ್ಯವಿದೆ. ಕಾಗದ, ಬಟ್ಟೆ, ಔಷಧ, ಇಂಧನ, ಕಟ್ಟಡ ಸಾಮಗ್ರಿ, ಪ್ಲಾಸ್ಟಿಕ್ ಎಲ್ಲವನ್ನೂ ಒದಗಿಸಬಲ್ಲ, ಕೋಟ್ಯಂತರ ಕೈಗಳಿಗೆ ಉದ್ಯೋಗ ನೀಡಬಲ್ಲ, ಋತುಮಾನಗಳನ್ನು ಸಮತೋಲ ಇಡಬಲ್ಲ, ಯಾವ ಕೃತಕ ಒಳಸುರಿಯಿಲ್ಲದೆ ಬೆಳೆಯಬಲ್ಲ ಸಹಜ ಜೀವಧಾಮಗಳನ್ನು, ಜೀವವೈವಿಧ್ಯ ರಕ್ಷಣೆಯ ಚಿರಂತನ ಖಜಾನೆಗಳನ್ನು ನಾವು ಸೃಷ್ಟಿಸಲಾರೆವೆ?

ಸೌಜನ್ಯ: ‘ಅಡಿಕೆ ಪತ್ರಿಕೆ’ಯ ಸೆಪ್ಟೆಂಬರ್ ೨೦೦೯ರ ಸಂಚಿಕೆಯ ‘ರಿಕ್ತ-ವ್ಯತಿರಿಕ್ತ’ ಅಂಕಣ ಬರಹ