Categories
ನಾಗೇಶ ಹೆಗಡೆ ಪರಿಸರ ಲೇಖನಗಳು

ಅಂಕಣಗಳು – ನಾಗೇಶ ಹೆಗಡೆ

ಕೃತಿ: ಅಂಕಣಗಳು – ನಾಗೇಶ ಹೆಗಡೆ

ಲೇಖಕರು : ನಾಗೇಶ ಹೆಗಡೆ

ಕೃತಿಯನ್ನು ಓದಿ     |     Download

Categories
ಲೇಖನಗಳು

ಜಿಎಸ್‌ಟಿ ಯ ಪ್ರಶ್ನೋತ್ತರ ಮಾಲೆ

ಕೃತಿ:ಜಿಎಸ್‌ಟಿ ಯ ಪ್ರಶ್ನೋತ್ತರ ಮಾಲೆ
ಲೇಖಕರು: ನಜೀಬ್ ಷಾ
ಕೃತಿಯನ್ನು ಓದಿ

Categories
ಕೊಳ್ಳೇಗಾಲ ಶರ್ಮ ಲೇಖನಗಳು ವಿಜ್ಞಾನ

ವಿಶ್ವದ ಪ್ರಪ್ರಥಮ ನ್ಯಾನೊ-ಕಾರು ಸ್ಪರ್ಧೆ

ಕೃತಿ:ವಿಶ್ವದ ಪ್ರಪ್ರಥಮ ನ್ಯಾನೊ
ಲೇಖಕರು: ಕೊಳ್ಳೇಗಾಲ ಶರ್ಮ
ಕೃತಿಯನ್ನು ಓದಿ

Categories
ಕೊಳ್ಳೇಗಾಲ ಶರ್ಮ ಲೇಖನಗಳು ವಿಜ್ಞಾನ

ಉಷ್ಟ್ರಪಕ್ಷಿ ವಿದೇಶಿ ಅಲ್ಲ!

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” type=”flex”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಕೃತಿ:ಉಷ್ಟ್ರಪಕ್ಷಿ ವಿದೇಶಿ ಅಲ್ಲ

ಲೇಖಕರು: ಕೊಳ್ಳೇಗಾಲ ಶರ್ಮ
ಕೃತಿಯನ್ನು ಓದಿ

[/fusion_text][/fusion_builder_column][/fusion_builder_row][/fusion_builder_container]

Categories
QR-ಕಣಜ ಲೇಖನಗಳು

ದೆಹಲಿ ಕರ್ನಾಟಕ ಸಂಘ

ಕೃತಿ: QR-ಕಣಜ, ಲೇಖನಗಳು
ಲೇಖಕರು: QR-ಕಣಜ, ಲೇಖನಗಳು
ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ (ಹೆಲ್ತ್ ಸೈನ್ಸ್) ಲೇಖನಗಳು ವಿಜ್ಞಾನ

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್)

ಕಾಲವೊಂದಿತ್ತು; ರೋಗಿಯು ವೈದ್ಯರ ಬಳಿ ಹೋದಾಗ, ತನ್ನ ಹಿಂದಿನ ಚಿಕಿತ್ಸೆಯ ವಿವರವನ್ನು ಹಾಗೂ ದಾಖಲೆಗಳನ್ನು ಸರಿಯಾಗಿ ಬಹಿರಂಗಪಡಿಸಲಾಗದೆ ವೈದ್ಯರ ಎದುರಿಗೆ ಅಸಹಾಯಕನಾಗಿ ಕೈಚೆಲ್ಲಿ ಕುಳಿತುಕೊಳ್ಳುವುದು ಒಂದೆಡೆಯಾದರೆ, ಅತ್ತ ರೋಗಿಯ ಪೂರ್ವಾಪರ ಅರಿಯದ ವೈದ್ಯರು ವಿಧಿಯಿಲ್ಲದೇ ರೋಗಿಯ ಪೂರ್ವದ ಚಿಕಿತ್ಸೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ, ಕಡೆಗೂ ಅಲ್ಪ ಸ್ವಲ್ಪ ಮಾಹಿತಿ ಪಡೆದು, ತನ್ನ ಮುಂದಿನ ಚಿಕಿತ್ಸೆ ಆರಂಭಿಸುತ್ತಾನೆ. ಈ ಎರಡೂ ಸಂದರ್ಭಗಳಲ್ಲಿ, ರೋಗಿ ಮತ್ತು ವೈದ್ಯರಿಗಾಗುವ ನಷ್ಟ ಒಂದೆರಡಲ್ಲ; ಒಂದೆಡೆ ಸಮಯದ ಹರಣ ನಡೆದರೆ, ಇನ್ನೊಂದಡೆ ಸರಿಯಾದ ಮಾಹಿತಿಯು ಸಿಗದೇ ವೈದ್ಯರು ರೋಗಿ ಹೇಳಿದನ್ನು ಕೇಳಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ; ಇದರಿಂದ ಚಿಕಿತ್ಸೆಗೆಂದು ಬರುವ ಇತರೆ ರೋಗಿಗಳ ರೋಗದ ತೀವ್ರತೆ ಎಷ್ಟೇ ಇದ್ದರೂ ಬಹಳ ಸಮಯ ಕಾಯಬೇಕಾಗುತ್ತದೆ. ಈ ಸಮಸ್ಯೆಗೆ ಒಂದು ಪರಿಹಾರವನ್ನು ವೈದ್ಯ ವಿಜ್ಞಾನದಲ್ಲಿ ಕಂಡು ಕೊಂಡಿದ್ದಾರೆ. ಅದನ್ನೇ ನಾವು ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್) ಎಂದು ಕರೆಯುತ್ತೇವೆ.

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ ತಂತ್ರಜ್ಞಾನದಿಂದಾಗಿ, ರೋಗಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಹಾಗೂ ಪುನಃ ಬೇಕಾದ ಹಳೆಯ ದಾಖಲೆಗಳನ್ನು ಹಿಂಪಡೆಯಬಹುದು. ಇದರಿಂದಾಗಿ ವೈದ್ಯರ ಹಾಗೂ ರೋಗಿಯ ಅಮೂಲ್ಯ ಸಮಯದ ಉಳಿತಾಯವಾಗುತ್ತದೆ. ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು ಆಸ್ಪತ್ರೆಯಲ್ಲಿ ರೋಗಿಯ ನೋಂದಣಿಯಿಂದ ಆರಂಭವಾಗಿ, ವಿವಿಧ ಹಂತಗಳನ್ನು ದಾಟಿ, ಕಡೆಗೆ ಆಸ್ಪತ್ರೆಯಿಂದ ರೋಗಿಯ ನಿರ್ಗಮನದವವರೆಗೂ ನಡೆಯುವ ಪ್ರಕ್ರಿಯೆ.

ಈ ವ್ಯವಸ್ಥೆಯ ಎಲ್ಲಾ ಹಂತಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆಯುತ್ತವೆ; ಪ್ರತಿಯೊಂದು ಹಂತದಲ್ಲಿಯೂ ರೋಗಿಯು ಆಸ್ಪತ್ರೆಯ ವಿವಿಧ ಇಲಾಖೆಯನ್ನು ಸಂದರ್ಶಿಸಬೇಕಾಗುತ್ತದೆ. ಅಲ್ಲಿ ನಡೆಯುವ ಪರೀಕ್ಷೆಗಳು, ಸಂದರ್ಶನ ಹಾಗೂ ಚಿಕಿತ್ಸೆಗಳ ವಿವರಗಳು, ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ನಲ್ಲಿ ದಾಖಲಾಗುತ್ತದೆ. ಹಾಗಾಗಿ, ಇಲ್ಲಿ ಎಲ್ಲಿಯೂ ಪೇಪರ್ ಬಳಕೆಯಾಗದೆ ಕೇವಲ ಕಂಪ್ಯೂಟರ್ಗಳಲ್ಲಿ ಮಾಹಿತಿಯು ದಾಖಲಾಗುತ್ತಾ, ವರ್ಗಾವಣೆಯಾಗುತ್ತಾ ಹೋಗುತ್ತದೆ. ಪ್ರತಿ ಹಂತ ಹಾಗೂ ಪ್ರತಿ ಇಲಾಖೆಯಲ್ಲಿ ನಡೆಯುವ ಚಟುವಟಿಕೆಗಳು, ವ್ಯವಸ್ಥಿತವಾಗಿ ಒಂದಾದ ಮೇಲೊಂದರಂತೆ ಯೋಜನಾಬದ್ಧವಾಗಿ ನಡೆಯುತ್ತವೆ. ಇದನ್ನೇ ನಾವು ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು ಎನ್ನುತ್ತೇವೆ.

ಸ್ಕ್ಯಾನರ್, ಸುಧಾರಿತ ವೈದ್ಯಕೀಯ ಚಿತ್ರಣ ಅನ್ವಯಿಕೆ (ಅಡ್ವಾನ್ಸಡ್ ಕ್ಲಿನಿಕಲ್ ಇಮೇಜಿಂಗ್ ಅಪ್ಲಿಕೇಶನ್), ಆಸ್ಪತ್ರೆಯ ಮಾಹಿತಿ ವ್ಯವಸ್ಥೆ (ಹಾಸ್ಪಿಟಲ್ ಇನ್ಫಾರ್ಮೆಶನ್ ಸಿಸ್ಟಮ್ಸ್) ಮತ್ತು ಚಿತ್ರ ದಾಖಲಾತಿ ಮತ್ತು ಸಂವಹನಾ ವ್ಯವಸ್ಥೆಗಳನ್ನು (ಪಿಕ್ಚರ್ ಆರ್ಕೈವಲ್ ಅಂಡ್ ಕಮ್ಯುನಿಕೇಷನ್ ಸಿಸ್ಟಮ್ಸ್) ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯು (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್) ಒಳಗೊಂಡಿರುತ್ತದೆ.

ರೋಗಿಯ ಮಾಹಿತಿಯನ್ನು ನಾವು ಆಸ್ಪತ್ರೆಯ ಮಾಹಿತಿ ವ್ಯವಸ್ಥೆಯಲ್ಲಿ ಸಂಗ್ರಹಿಸಿದರೆ, ರೋಗಿಯ ಚಿಕಿತ್ಸೆಯ ಸಮಯದಲ್ಲಿ ತಗೆದ ಕ್ಷ-ಕಿರಣ, ಅಲ್ಟ್ರಾಸೌಂಡ್, ಎಂ ಆರ್ ಐ ಹಾಗು ಇತರೆ ಚಿತ್ರಗಳನ್ನು ಚಿತ್ರ ದಾಖಲಾತಿ ಮತ್ತು ಸಂವಹನಾ ವ್ಯವಸ್ಥೆಯಲ್ಲಿ ಸಂಗ್ರಹಿಸುತ್ತಾರೆ. ಸ್ಕ್ಯಾನರ್ಗಳಿಂದ ಮೂಡಿ ಬರುವ ಚಿತ್ರಗಳನ್ನು ರೇಡಿಯೊಲೊಜಿಸ್ಟ್ಗಳು, ಸುಧಾರಿತ ವೈದ್ಯಕೀಯ ಚಿತ್ರಣ ಅನ್ವಯಿಕೆಗಳನನ್ನು ಬಳಸಿ ಪರಿಷ್ಕರಿಸುತ್ತಾರೆ. ರೇಡಿಯೊಲೊಜಿಸ್ಟ್ ಪರಿಷ್ಕರಿಸಿದ ಚಿತ್ರ ಹಾಗೂ ವರದಿಯನ್ನು ಆಧರಿಸಿ ತಜ್ಞ ವೈದ್ಯರು ಮುಂದಿನ ಚಿಕಿತ್ಸೆಯನ್ನು ನೀಡುತ್ತಾರೆ.

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು :

ರೋಗಿಯ ನೋಂದಣಿಯನ್ನು ಆಸ್ಪತ್ರೆಯ ಸಿಬ್ಬಂದಿ ಹಾಸ್ಪಿಟಲ್ ಇನ್ಫಾರ್ಮೆಶನ್ ಸಿಸ್ಟಮ್ಸ್ನಲ್ಲಿ ಮಾಡುತ್ತಾರೆ. ರೋಗಿಯ ಹೆಸರು, ವಯಸ್ಸು, ಲಿಂಗ, ಜನ್ಮ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಆಸ್ಪತ್ರೆಯ ಮಾಹಿತಿ ವ್ಯವಸ್ಥೆಯಲ್ಲಿ ಸೇರಿಸಿದಾಗ, ರೋಗಿಗೆ ಒಂದು ಗುರುತಿನ ಸಂಖ್ಯೆಯನ್ನು ಅದು ನೀಡುತ್ತದೆ. ಒಮ್ಮೆ ನೋಂದಣಿ ಮಾಡಿಸಿದರೆ ಸಾಕು, ಮುಂದೆ ಈ ಗುರುತಿನ ಸಂಖ್ಯೆಯನ್ನು ಹಾಸ್ಪಿಟಲ್ ಇನ್ಫಾರ್ಮಶನ್ ಸಿಸ್ಟಮ್ಸ್ಗೆನೀಡಿದರೆ, ರೋಗಿಯ ಪೂರ್ವಾಪರದ ಚಿಕಿತ್ಸೆಯ ಜಾತಕವನ್ನು ನಮ್ಮ ಮುಂದಿಡುತ್ತದೆ.

ಒಮ್ಮೆ ರೋಗಿಯ ನೋಂದಣಿಯಾದರೆ ಸಾಕು, ರೋಗಿಯು ಸಂದರ್ಶಿಸಬೇಕಾದ ಇಲಾಖೆಗೆ ಆತನ ಪೂರ್ವಾಪರದ ದಾಖಲೆಗಳು ತಾನಾಗಿಯೇ ಕಂಪ್ಯೂಟರ್ ಮೂಲಕ ವರ್ಗಾವಣೆಯಾಗುತ್ತವೆ. ಆಗ, ವೈದ್ಯರು ರೋಗಿಯ ಹಿಂದಿನ ಚಿಕಿತ್ಸೆಯ ಮಾಹಿತಿಯನ್ನು ಪಡೆದು ರೋಗಿಯೊಂದಿಗೆ ಸಂಭಾಷಣೆ ನಡೆಸಿ, ಪರೀಕ್ಷಿಸಿ, ಏನಾದರೂ ಅನುಮಾನವಿದ್ದಲ್ಲಿ ಸ್ಕ್ಯಾನಿಂಗ್ ಮಾಡಿಸಲು ರೋಗಿಗೆ ಹೇಳಿ, ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯಲ್ಲಿ ಸ್ಕ್ಯಾನ್ ಮಾಡುವ ಕೆಲಸವನ್ನು ನುರಿತ ತಂತ್ರಜ್ಞರಿಗೆ ನಿಯೋಜಿಸಿ ವರ್ಗಾಯಿಸುತ್ತಾರೆ.

ಪ್ರಯೋಗಾಲಯಗಳಲ್ಲಿ ನುರಿತ ತಜ್ಞರು, ವೈದ್ಯರು ಹೇಳಿದ ವಿಧಾನವನ್ನು ಅನುಸರಿಸಿ, ಅಂಗಗಳ ಚಿತ್ರಗಳನ್ನು ತಗೆದು ರೇಡಿಯೊಲೊಜಿಸ್ಟ್ಗೆ ವರ್ಗಾಯಿಸುತ್ತಾರೆ. ಆಗ ಈ ಚಿತ್ರಗಳು ಪ್ಯಾಕ್ಸ್ ನಲ್ಲಿ ಸಂಗ್ರಹಗೊಳ್ಳುತ್ತವೆ. ರೇಡಿಯೊಲೊಜಿಸ್ಟ್ಗಳು ಚಿತ್ರಗಳನ್ನು ಆಧರಿಸಿ ತಮ್ಮ ವರದಿಯನ್ನು ಸಿದ್ದಪಡಿಸಿ ವೈದ್ಯರಿಗೆ ಕಳುಹಿಸಿಕೊಡುತ್ತಾರೆ. ವೈದ್ಯರು ಈ ವರದಿಯ ಆಧಾರದ ಮೇಲೆ, ತಮ್ಮ ಚಿಕಿತ್ಸೆಯನ್ನು ಕೈಗೊಳ್ಳುತ್ತಾರೆ. ಚಿಕಿತ್ಸೆಯೆಲ್ಲಾ ಮುಗಿದು ರೋಗಿಯು ಆಸ್ಪತ್ರೆಯಿಂದ ನಿರ್ಗಮಿಸುವ ಸಮಯದಲ್ಲಿ, ಈ ಎಲ್ಲಾ ಚಿಕಿತ್ಸೆಗೆ ತಗಲುವ ವೆಚ್ಚ ಹಾಗೂ ರೋಗಿಯು ಮುಂದೆ ಅನುಸರಿಸಬೇಕಾದ ವಿಧಾನಗಳೊಂದಿಗೆ ಈ ಕಾರ್ಯದ ಹರಿವು ಮುಕ್ತಾಯವಾಗುತ್ತದೆ.

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯಿಂದಾಗುವ ಲಾಭಗಳು :

೧. ರೋಗಿಯ ಪೂರ್ವಾಪರವನ್ನು ಅರಿತು ನಿಖರವಾದ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ.

೨. ರೋಗಿಯ ಪೂರ್ವಾಪರವನ್ನು ಸುಲಭವಾಗಿ ಅರಿಯುವುದರಿಂದ, ರೋಗಿ ಹಾಗೂ ವೈದ್ಯರ ನಡುವೆ ಉತ್ತಮ ಸಮನ್ವಯತೆ ಮೂಡಿಸುವಲ್ಲಿ ಸಹಕಾರಿಯಾಗಿ ಬಾಂಧವ್ಯ ವೃದ್ಧಿಯಾಗುವುದು.

೩. ರೋಗಿಯ ಬಗ್ಗೆ ನಿಖರವಾದ ಮಾಹಿತಿ ಸಿಗುವುದರಿಂದ, ರೋಗಿಯ ಬಗ್ಗೆ ವಿಶೇಷ ಕಾಳಜಿಯನ್ನು ವೈದ್ಯರು ಮತ್ತು ಅವರ ತಂಡ ತೋರ್ಪಡಿಸಿ, ರೋಗಿಯು ಗುಣಮುಖರಾಗಲು ಸಹಕಾರಿಯಾಗುತ್ತದೆ.

೪. ವೈದ್ಯರಿಗೆ ರೋಗಿಯ ಪೂರ್ವಾಪರದ ಬಗ್ಗೆ ಅರಿಯಲು ಕಡಿಮೆ ಸಮಯ ಸಾಕು ಹಾಗೂ ಮಾಹಿತಿಯು ಸರಿಯಾಗಿದ್ದರೆ ರೋಗಿಯನ್ನು ಅನಗತ್ಯ ಚಿಕಿತ್ಸೆಗೆ ಒಳಪಡಿಸುವುದನ್ನು ತಪ್ಪಿಸಬಹುದು. ಇದರಿಂದ ಸಮಯ ಹಾಗೂ ಹಣದ ಅನಗತ್ಯ ವ್ಯಯವನ್ನು ನಿಲ್ಲಿಸಬಹುದು.

೫. ರೋಗಿಯ ಮಾಹಿತಿಯಾದ ಅಂಗಾಂಗಗಳ ಚಿತ್ರ ಹಾಗೂ ವರದಿಗಳನ್ನು ಅಡಕ ಮುದ್ರಕಗಳಲ್ಲಿ ದಾಖಲಿಸಬಹುದು, ರೋಗಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿ ಎನಿಸದಿದ್ದಲ್ಲಿ, ಬೇರೆ ಆಸ್ಪತ್ರೆಗೆ ಅಡಕ ಮುದ್ರಕಗಳಲ್ಲಿ ಸಂಗ್ರಹಿಸಿದ ವಿವರ ನೀಡಿದರೆ ಸಾಕು; ಅಲ್ಲಿಯೂ ಚಿಕಿತ್ಸೆಯನ್ನು ಮುಂದುವರೆಸಬಹುದು.

ಇಂದು, ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯು, ವೈದ್ಯಕೀಯ ವಿಜ್ಞಾನದ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು, ಕ್ಲಿಷ್ಟಕರ ಸಮಸ್ಯೆಗಳಿಗೆ ಸುಲಭ ಹಾಗೂ ನಿಖರ ಪರಿಹಾರವನ್ನು ನೀಡುವಲ್ಲಿ ಸಫಲವಾಗಿದೆ ಎಂದರೆ ತಪ್ಪಾಗಲಾರದು.]

ಮಧು ಚಂದ್ರ ಹೆಚ್ ಬಿ . ಭದ್ರಾವತಿ

Categories
ಅಂಕಣಗಳು ಟಿ. ಎಸ್. ಗೋಪಾಲ್

ಶಿಕ್ಷಣ ಮಾಧ್ಯಮವಾಗಿ ಕನ್ನಡ

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” type=”flex”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_title hide_on_mobile=”small-visibility,medium-visibility,large-visibility” size=”1″ content_align=”center” style_type=”default”]

ಶಿಕ್ಷಣ ಮಾಧ್ಯಮವಾಗಿ ಕನ್ನಡ

[/fusion_title][fusion_tagline_box content_alignment=”left” link=”” button=”” linktarget=”_self” modal=”” button_size=”” button_type=”” button_border_radius=”” buttoncolor=”default” title=”” description=”” hide_on_mobile=”small-visibility,medium-visibility,large-visibility” class=”” id=”” backgroundcolor=”” shadow=”no” shadowopacity=”0.7″ border=”1″ bordercolor=”” highlightposition=”left” margin_top=”” margin_bottom=”” animation_type=”” animation_direction=”left” animation_speed=”0.3″ animation_offset=””]

ಗ್ರಾಮಾಂತರ ಪ್ರದೇಶದಲ್ಲಿರುವ ನಮ್ಮ ಕಾಲೇಜಿಗೆ ಪ್ರವೇಶ ಕೋರಿ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಬಹುತೇಕ ವಾಣಿಜ್ಯ ವಿಭಾಗಕ್ಕೆ ಸೇರಲು ಬಯಸಿ ಬರುವವರಾಗಿದ್ದರು. ಪ್ರೌಢಶಾಲೆಯಲ್ಲಿ ಕನ್ನಡಮಾಧ್ಯಮದಲ್ಲಿ ಅಭ್ಯಾಸಮಾಡಿ ಕಡಿಮೆ ಅಂಕ ಗಳಿಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳಿಗೂ ಕಲಾ ವಿಭಾಗದ ಬದಲಿಗೆ ವಾಣಿಜ್ಯವಿಭಾಗವನ್ನೇ ಸೇರುವ ತವಕ. ಅಂಥವರನ್ನು ಹಿಮ್ಮೆಟ್ಟಿಸಲು ಒಂದು ಅಸ್ತ್ರವಂತೂ ಸಿದ್ಧವಾಗಿರುತ್ತಿತ್ತು. ಕಾಮರ್ಸ್ ತೆಗೆದುಕೊಂಡರೆ ಅಕೌಂಟೆನ್ಸಿ ವಿಷಯವನ್ನಿಡೀ ಇಂಗ್ಲೀಷ್ ನಲ್ಲೇ ಉತ್ತರಿಸಬೇಕಾಗುತ್ತದೆ ಎಂದು ಹೆದರಿಸಿದರೆ ಆಯಿತು.

ಆದರೆ, ಈ ವಿಷಯ ನನ್ನನ್ನೂ ಕಾಡದಿರಲಿಲ್ಲ. ಈ ಸಮಸ್ಯೆಯ ವಾಸ್ತವ ಅಂಶವೇನೆಂದು ವಾಣಿಜ್ಯವಿಭಾಗದ ಉಪನ್ಯಾಸಕರನ್ನೇ ಕೇಳಿದೆ. ಹೌದು ಸರ್, ಅಕೌಂಟೆನ್ಸಿ ವಿಷಯವನ್ನು ಕನ್ನಡದಲ್ಲಿ ಬರೆಯಲಾಗುವುದಿಲ್ಲ ಎಂದರು. ಸರಿಯಾದ ಪಠ್ಯಗಳೂ ಕನ್ನಡದಲ್ಲಿ ಲಭ್ಯವಿಲ್ಲ. ಪರೀಕ್ಷೆಯಲ್ಲೇನೋ ಕನ್ನಡದಲ್ಲೂ ಪ್ರಶ್ನಪತ್ರಿಕೆ ಸಿದ್ಧಪಡಿಸಿ ಕೊಡುತ್ತಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅಧ್ಯಾಪಕರೂ , ಉತ್ತರಿಸುವ ವಿದ್ಯಾರ್ಥಿಗಳೂ ತೀರಾ ಕಡಿಮೆ ಎಂಬ ವಿವರಣೆಯನ್ನು ಕೇಳಿ ಆಶ್ಚರ್ಯವಾಯಿತು. ನಮ್ಮ ಕಾಲೇಜಿನ ಮಕ್ಕಳಿಗಾದರೂ ಕನ್ನಡಮಾಧ್ಯಮದಲ್ಲಿ ಕಲಿಸಬಹುದಲ್ಲ ಎಂದುದಕ್ಕೆ ಸರಿಯಾದ ಕನ್ನಡಪಠ್ಯಗಳಿಲ್ಲದೆ ಹೇಗೆ ಬೋಧಿಸುವುದೆಂದು ಆತ ನಿಸ್ಸಹಾಯಕತೆಯನ್ನು ವ್ಯಕ್ತಪಡಿಸಿದರು. ಇರಲಿ, ನೋಡೋಣವೆಂದು ಮೈಸೂರಿನ ಪ್ರಸಿದ್ಧ ಅಂಗಡಿಯೊಂದಕ್ಕೆ ಹೋಗಿ ಪಿಯುಸಿಯ ಅಕೌಂಟೆನ್ಸಿ ಕನ್ನಡಮಾಧ್ಯಮದ ಪಠ್ಯಪುಸ್ತಕ ಕೊಡಿ ಎಂದೆ. ಆತ ಅಚ್ಚರಿಯಿಂದ ನನ್ನ ಮುಖವನ್ನೇ ಒಮ್ಮೆ ನೋಡಿದರು. ಯಾಕೆ, ಪುಸ್ತಕ ಇಲ್ಲವೇ ಎಂದುದಕ್ಕೆ ಮೌನವಾಗಿ ಕಪಾಟಿನಿಂದ ಪುಸ್ತಕವೊಂದನ್ನು ಹುಡುಕಿ ತೆಗೆದು ಧೂಳು ಕೊಡವಿದರು. ಪುಸ್ತಕದ ಬೆಲೆ ಹೇಳುವುದರ ಜೊತೆಗೆ ಇನ್ನೊಂದು ಮಾತು ಸೇರಿಸಿದರು: ” ಬೇಡವೆಂದು ವಾಪಸ್ ತಂದರೆ ತೆಗೆದುಕೊಳ್ಳುವುದಿಲ್ಲ”!

ಇದಾಗಿ ಏಳೆಂಟು ವರ್ಷಗಳು ಕಳೆದಿವೆ. ಪಠ್ಯಕ್ರಮವೂ ಬದಲಾಗಿದೆ. ಇವತ್ತಿಗೂ ಹನ್ನೊಂದನೇ ತರಗತಿಯ ಅಕೌಂಟೆನ್ಸಿ ಅಥವಾ ಲೆಕ್ಕಶಾಸ್ತ್ರದ ಪಠ್ಯಪುಸ್ತಕಗಳು ಕನ್ನಡದಲ್ಲಿ ಸಿಗುತ್ತಿಲ್ಲ. ಇತ್ತ ನಾವು ಇಂಜನಿಯರಿಂಗ್ ಹಾಗೂ ವೈದ್ಯಕೀಯ ಮತ್ತಿತರ ಉನ್ನತ ಶಿಕ್ಷಣ ತರಗತಿಗಳನ್ನು ಕನ್ನಡದಲ್ಲಿ ಬೋಧಿಸುವ ದೊಡ್ಡದೊಡ್ಡ ಮಾತುಗಳನ್ನು ಆಡುತ್ತಿದ್ದೇವೆ.

ಕನ್ನಡ ಭಾಷೆಯ ಅಭಿವೃದ್ದಿಯ ಬಗ್ಗೆ ಮಾತನಾಡುವಾಗಲೆಲ್ಲ, ಆಡಳಿತ ಮತ್ತಿತರ ವ್ಯವಹಾರಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಕೊಡುವಷ್ಟು ಮಹತ್ವವನ್ನು ಶಿಕ್ಷಣಕ್ಷೇತ್ರದ ವಿಷಯದಲ್ಲಿ ನೀಡದಿರುವುದು ಅಚ್ಚರಿಯ ವಿಷಯವಾಗಿದೆ. ಇನ್ನು ಗೋಕಾಕ್‌ವರದಿಯ ಅನುಷ್ಠಾನ, ತತ್ಸಂಬಂಧವಾದ ಚಳುವಳಿ, ವಾದ ಪ್ರತಿವಾದ ಮೊದಲಾದವು ಶೈಕ್ಷಣಿಕವಾಗಿ ಕನ್ನಡ ಜಾಗೃತಿಯ ಸೂಚನೆ ನೀಡಿದರೂ ಅವೆಲ್ಲದರ ಒಟ್ಟಭಿಪ್ರಾಯ ಪ್ರೌಢಶಾಲೆಯಲ್ಲಿ ಮಾತೃಭಾಷಾ ಬೋಧನೆಗೆ ಸಂಬಂಧಪಟ್ಟಂತೆ ಎಷ್ಟು ಅಂಕಗಳ ಪ್ರಶ್ನ ಪತ್ರಿಕೆಯಿರಬೇಕು, ಕನ್ನಡ ಪತ್ರಿಕೆಗೆ ಸಂಸ್ಕೃತಕ್ಕಿಂತ ಇಪ್ಪತ್ತೈದು ಅಂಕವಾದರೂ ಹೆಚ್ಚಿಗೆ ನಿಗದಿ ಪಡಿಸದಿದ್ದರೆ ಕನ್ನಡದ ಘನತೆ ಏನಾದೀತು ಎಂಬಷ್ಟಕ್ಕೆ ಸೀಮಿತವಾಗಿದೆಯೇ ಹೊರತು ಸಮಗ್ರ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಜಾರಿಗೆ ತರಬೇಕಾದುದರ ಅವಶ್ಯಕತೆ, ಅನಿವಾರ್‍ಯತೆಗಳ ಬಗೆಗೆ ಏನನ್ನೂ ಹೇಳುವುದಿಲ್ಲ.

ಯಾವುದೇ ಭಾಷೆಯ ರೂಢಿ, ಬೆಳವಣಿಗೆಗಳು, ಒಂದು ಮಗು ಮೊದಲಿಗೆ ಮನೆಯಲ್ಲೂ ಅನಂತರ ಶಾಲೆಯಲ್ಲೂ ಏನನ್ನೂ ಹೇಗೆ ಕಲಿಯುತ್ತದೆ ಎಂಬುದನ್ನೇ ಮುಖ್ಯವಾಗಿ ಅವಲಂಬಿಸಿವೆ. `ಮಾತೃಭಾಷೆ’ ಎಂಬ ಪದ, ಮಗು ಶಾಲೆಗೆ ಕಾಲಿರಿಸುವ ಮೊದಲೇ ತನ್ನ ಮನೆಯ ಪರಿಸರದಲ್ಲಿ ಕೇಳಿ ತಿಳಿದು ಕಲಿತ ನುಡಿಗೆ ಅನ್ವಯವಾಗುತ್ತದೆ. ಮಾತೃಭಾಷೆಯೆಂಬುದು `ಮಾತೃ’ ಎಂದರೆ ತಾಯಿಗೇ ಸಂಬಂಧಪಟ್ಟಿರುವುದೆಂದು ಅರ್ಥೈಸಬೇಕಾಗಿಲ್ಲ. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಮಗುವಿಗೆ ಪರಿಚಿತವಾಗುವ ಭಾಷೆ ಪ್ರಾದೇಶಿಕ ಭಾಷೆಯೂ ಆಗಿರಬಹುದು.

ಮಗು ಶಿಕ್ಷಣವನ್ನು ಪಡೆಯಲಿಕ್ಕಾಗಿ ಶಾಲೆಯನ್ನು ಪ್ರವೇಶಿಸುವಾಗ ತಾನು ಮನೆಯಲ್ಲಿ ಕೇಳಿ, ಕಲಿತ ಭಾಷೆಗಿಂತ ಭಿನ್ನವಾದ ಭಾಷೆಯೊಂದು ಮಾಧ್ಯಮವಾಗಿ ಎದುರಾಗುವಾಗ ಮಗುವಿಗೆ ಸಹಜವಾಗಿಯೆ ಕಕ್ಕಾಬಿಕ್ಕಿಯಾಗುತ್ತದೆ. ಭಿನ್ನವಾದ ಭಾಷಾ ಮಾಧ್ಯಮದ ಪರಿಸರಕ್ಕೆ ಒಗ್ಗಿಕೊಳ್ಳಲು ಅದಕ್ಕೆ ಸುಲಭ ಸಾಧ್ಯವೇನಲ್ಲ.

ವಿದ್ಯಾರ್ಥಿಗೆ ತನ್ನ ಮಾತೃಭಾಷಾ ಮಾಧ್ಯಮದ ಮೂಲಕ ಕೊಡಲಾಗುವ ಶಿಕ್ಷಣವನ್ನು ಗ್ರಹಿಸಲು ಸಾಧ್ಯವಾಗುವಂತೆ ಅನ್ಯಭಾಷೆಗಳಿಂದ ಸಾಧ್ಯವಾಗದೆಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದಾರೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತುಕೊಂಡಷ್ಟೂ ವ್ಯಕ್ತಿಯ ತಿಳುವಳಿಕೆ ಮಟ್ಟ, ವ್ಯಾವಹಾರಿಕ ಕೌಶಲ, ಭಾಷಾ ಸಂಪತ್ತು, ಸಾಹಿತ್ಯ ಜ್ಞಾನ ಹೆಚ್ಚುವುದರಲ್ಲಿ ಸಂಶಯವಿಲ್ಲ. ಇದೇನೇ ಇದ್ದರೂ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಮಾತೃಭಾಷೆಯಲ್ಲಿ ವ್ಯವಹರಿಸಬಲ್ಲಷ್ಟು ಸುಲಭವಾಗಿ, ಕಷ್ಟಪಟ್ಟು ಕಲಿಯಬೇಕಾದ ಇತರ ಭಾಷೆಗಳಲ್ಲಿ ವ್ಯವಹರಿಸಲಾರನು.

ಮಗುವಿಗೆ ಅದರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಅತ್ಯುತ್ತಮ ಶಿಕ್ಷಣ ಮಾಧ್ಯಮವೆಂದು ಪ್ರಪಂಚದ ಎಲ್ಲ ಶಿಕ್ಷಣತಜ್ಞರೂ ಅಭಿಪ್ರಾಯ ಪಡುತ್ತಾರೆ. ಒಂದು ವಿದೇಶೀ ಮಾಧ್ಯಮದಲ್ಲಿ ಕಲಿಯುವುದೆಂದರೆ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಬಾಯಿಪಾಠ ಮಾಡುವುದಕ್ಕೇ ಹೆಚ್ಚು ಅವಕಾಶ ನೀಡಿದಂತಾಗುವುದೆಂದು ತಜ್ಞರ ಅಭಿಮತ. “ತಮ್ಮದಲ್ಲದ ಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಂತೆಯೇ” ಎಂದು ಗಾಂಧೀಜಿ ವರ್ಣಿಸಿದ್ದರೆ, “ವಿದ್ಯಾರ್ಥಿಯ ಭಾಷೆಯಿಂದ ಶಿಕ್ಷಣದ ಭಾಷೆಯ ವಿಚ್ಛೇದನಗೊಂಡಿರುವುದು ಭಾರತ ಹೊರತು ಪ್ರಪಂಚದ ಇನ್ನಾವ ದೇಶದಲ್ಲೂ ಕಾಣಸಿಗದು” ಎಂದು ರವೀಂದ್ರನಾಥ ಠಾಕೂರರು ಆಶ್ಚರ್ಯ ಪಟ್ಟಿದ್ದಾರೆ.

ತನ್ನ ಮಾತೃಭಾಷೆಯ ಮೂಲಕ ಮಗು ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಮಗುವಿಗೆ ಅದರ ಪರಿಸರದೊಂದಿಗೆ ಸಂಪರ್ಕ ಕಲ್ಪಿಸಿ ಅದನ್ನು ಸಮಾಜದ ಸಂಸ್ಕೃತಿ ಮತ್ತು ಅನುಭವದಲ್ಲಿ ಪಾಲುದಾರನನ್ನಾಗಿ ಮಾಡುತ್ತದೆ. ಇದನ್ನೇ ಬಿ.ಎಂ. ಶ್ರೀಯವರು ತಮ್ಮ “ಕನ್ನಡ ನಾಡಿಗೆ ಕನ್ನಡವೇ ಗತಿ” ಎಂಬ ಪ್ರಸಿದ್ಧ ಭಾಷಣದಲ್ಲಿ ಹೀಗೆ ಪುಷ್ಟೀಕರಿಸುತ್ತಾರೆ. “ಭಾಷೆಯೆನ್ನುವುದು ನಿತ್ಯಗಟ್ಟಳೆಯ ವ್ಯಾಪಾರಕ್ಕಾಗಿ ಇರುವುದು ಮಾತ್ರವಲ್ಲ, ಅದರ ಮುಖ್ಯಕಾರ್‍ಯ ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುವುದುಈ॒ ಕೆಲಸ ಕಷ್ಟಪಟ್ಟು ನಮ್ಮ ಬುದ್ಧಿ ಶಕ್ತಿಯನ್ನೆಲ್ಲಾ ವೆಚ್ಚ ಮಾಡಿ ಕಲಿಯುವ ಪರ ಭಾಷೆಯಿಂದ ನೆರವೇರುವುದಿಲ್ಲ. ಯಾವುದು ಸರಾಗವಾಗಿ ನಮ್ಮನ್ನು ಒಲಿದು ಬಂದಿರುತ್ತದೆಯೋ, ಯಾವುದು ನಮ್ಮನ್ನು ಬೆನ್ನಟ್ಟಿ ಬಂದು ರಕ್ತಗತವಾಗಿರುತ್ತದೋ ಅಂಥ ಭಾಷೆಯಿಂದ ಮಾತ್ರವೇ ಇದು ಸಾಧ್ಯ.” (ಶ್ರೀ ಸಾಹಿತ್ಯ: ಪುಟ೨೯೧)

ಮುಖ್ಯವಾಗಿ, ಪ್ರಾಥಮಿಕ ಶಾಲಾಹಂತದಲ್ಲಿ ವಿದ್ಯಾರ್ಥಿಯು ತನ್ನ ಮಾತೃಭಾಷೆಯಲ್ಲಿಯೇ ಸಂಪೂರ್ಣ ಶಿಕ್ಷಣವನ್ನು ಪಡೆದದ್ದಾದರೆ, ಆ ಕಾಲದಲ್ಲಿ ತಾನು ರೂಢಿಸಿಕೊಂಡ ಕನ್ನಡ ಭಾಷಾಕೌಶಲವನ್ನು ಅವನು ಮುಂದೆಂದೂ ಮರೆಯಲಾರ. ಅಂದರೆ, ತನ್ನ ಮಾತೃಭಾಷೆಯಲ್ಲಿ ಓದುವುದಕ್ಕೂ ಬರೆಯುವುದಕ್ಕೂ ಮಾತನಾಡುವುದಕ್ಕೂ ಅವನಿಗೆಂದೂ ಅಡಚಣೆಯಾಗದು. ಅಲ್ಲದೆ ತನ್ನ ಮಾತೃಭಾಷಾ ಶಿಕ್ಷಣದೊಂದಿಗೆ ಇಂಗ್ಲಿಷ್ ನಂತಹ ಅನ್ಯಭಾಷೆಯೊಂದರ ಪ್ರಾಥಮಿಕ ಜ್ಞಾನವೂ ಅವನಿಗೆ ಜೊತೆ ಜೊತೆಯಲ್ಲೇ ಲಭಿಸಿದ್ದಾದರೆ, ಉನ್ನತ ವ್ಯಾಸಂಗಕ್ಕಾಗಿ ಅವನು ಅಂತಹ ಅನ್ಯ ಭಾಷೆಯನ್ನು ಆಶ್ರಯಿಸಿದರೂ ತೊಂದರೆಯಾಗದು.

ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳೆಲ್ಲ ಇಂಗ್ಲೀಷ್ ಮಾಧ್ಯಮವನ್ನೇ ಆರಿಸಿಕೊಳ್ಳುವ ಪರಿಸ್ಥಿತಿಯಿರುವುದರಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಓದುವವರೇ ಜಾಣರೆಂಬ, ಅಂತೆಯೇ ಕನ್ನಡ ಮಾಧ್ಯಮವನ್ನು ಆಯ್ಕೆಮಾಡಿಕೊಳ್ಳುವವರು ಅಷ್ಟೇನೂ ಬುದ್ಧಿವಂತರಲ್ಲವೆಂಬ ವಿಪರೀತ ಕಲ್ಪನೆ ಜನಮನದಲ್ಲಿ ಬೇರೂರತೊಡಗಿದೆ. ಈ ಭಾವನೆ ಪೋಷಕರಲ್ಲೂ ಶಿಕ್ಷಕವೃಂದದಲ್ಲೂ ಹರಡುತ್ತ ಕನ್ನಡಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಉಂಟಾಗಲು ಎಡೆಗೊಟ್ಟಿರುವುದು ವರ್ತಮಾನದ ಸಾಮಾಜಿಕ ಅಪಾಯಗಳಲ್ಲಿ ಮುಖ್ಯವಾದುದು.

ಶಿಕ್ಷಣದಲ್ಲಿ ಕನ್ನಡದ ಸ್ಥಾನವು ತೀರಾ ಉಪೇಕ್ಷೆಗೆ ಗುರಿಯಾಗಲು ಸರ್ಕಾರ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಪೋಷಕರೆಲ್ಲರೂ ಸಮಾನ ಹೊಣೆಗಾರರಾಗಿದ್ದಾರೆ. ದೇಶದ ಯಾವುದೇ ಪ್ರಾಂತದಲ್ಲೂ ಆಯಾ ಪ್ರಾದೇಶಿಕ ಭಾಷೆಯ ಸ್ಥಾನಮಾನಗಳು ಕರ್ನಾಟಕದಲ್ಲಿನ ಕನ್ನಡದ್ದಕ್ಕಿಂತ ಶೋಚನೀಯವಾಗಿರಲಾರದು. ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡವು ಶಿಕ್ಷಣ ಮಾಧ್ಯಮವಾಗಿದ್ದರೂ ಸರ್ಕಾರಿ ಶಾಲೆಗಳ ದುರವಸ್ಥೆಯು ಕನ್ನಡದ ಕಲಿಕೆ, ಅಭಿವೃದ್ಧಿಗಳಿಗೆ ಮಾರಕವಾಗಿದೆ. ಇನ್ನು ಊರು, ಪಟ್ಟಣ ಪ್ರದೇಶಗಳಲ್ಲಿ ಭಾಷಾವಾರು, ಜಾತಿವಾರು ಅಲ್ಪಸಂಖ್ಯಾತರೆಂಬ ರಿಯಾಯತಿ ಪಡೆದ ಶಾಲೆಗಳು ಸ್ಥಳೀಯವಾಗಿ ಯಾರ ಮಾತೃಭಾಷೆಯೂ ಆಗಿರದ ಇಂಗ್ಲೀಷ್ ಭಾಷೆಯ ಬಲೆಯೊಳಗೆ ಕನ್ನಡಿಗ ಮಕ್ಕಳನ್ನು ಸೆಳೆದುಕೊಳ್ಳುತ್ತಿವೆ. ಕನ್ನಡವು ದ್ವಿತೀಯ ತೃತೀಯ ಭಾಷಾಸ್ಥಾನದಲ್ಲಿ ಮುಲುಗುತ್ತ ಕ್ಷೀಣಿಸುತ್ತಿದೆ.

ಮಗುವಿಗೆ ಶಾಲಾಶಿಕ್ಷಣ ಹೊರೆಯೆನಿಸದಂತೆ, ಹಿತಕರವೂ ಸರಳವೂ ಆದ ವ್ಯವಸ್ಥೆಯೆಂದು ತೋರಬೇಕಾದರೆ ಮಗುವಿನ ಮಾತೃಭಾಷೆಯೋ ಪ್ರಾದೇಶಿಕ ಭಾಷೆಯೋ ಶಿಕ್ಷಣ ಮಾಧ್ಯಮವಾಗಿರಬೇಕೇ ಹೊರತು ಇಂಗ್ಲೀಷ್ ಅಲ್ಲ. ಮಾತೃಭಾಷೆಯು ಶಿಕ್ಷಣ ಮಾಧ್ಯಮವಾಗಿರುವಂಥ ಕ್ರಮವೂ ಪ್ರಾಥಮಿಕ ಶಾಲಾ ಹಂತದಲ್ಲಿ ಏಳನೆಯ ತರಗತಿಯವರೆಗಾದರೂ ಕಡ್ಡಾಯವಾಗಿ ಜಾರಿಯಲ್ಲಿರಬೇಕು. LKG UKGಗಳ ಹಂತದಲ್ಲೂ ಮಗುವಿಗೆ ಕನ್ನಡದಲ್ಲಿ ಮಾತನಾಡುವ, ಅಕ್ಷರಗಳನ್ನು ಕಲಿಯುವ ವ್ಯವಸ್ಥೆಯಿರಬೇಕು. ಹೀಗಾದಲ್ಲಿ ಎಂಟನೇ ತರಗತಿಯಿಂದ ಮುಂದಕ್ಕೆ ವಿದ್ಯಾರ್ಥಿಯು ಯಾವುದೇ ಭಾಷಾ ಮಾಧ್ಯಮವನ್ನು ಆರಿಸಿಕೊಂಡರೂ ಕನ್ನಡ ಭಾಷೆಯನ್ನು ಕಲಿಯುವ ಅವಕಾಶವೂ ಮುಂದುವರೆಯುವುದರಿಂದ ಮಾತೃಭಾಷೆಯ ನಂಟು ಎಡೆಬಿಡದೆ ಮುಂದುವರಿಯುತ್ತದೆ.

ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೂ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳು ಸುಲಭವಾಗಿ ಲಭಿಸುವಂತಿರಬೇಕು. ಇದಕ್ಕಾಗಿ ಸರ್ಕಾರವೂ ವಿಶ್ವವಿದ್ಯಾನಿಲಯಗಳೂ ವಿಸ್ತಾರವಾದ ಯೋಜನೆಯೊಂದನ್ನು ಕೈಗೊಂಡು ಎಲ್ಲ ಐಚ್ಛಿಕ ವಿಷಯಗಳಿಗೆ ಸಂಬಂಧಪಟ್ಟ ಸರಳ ಪಾರಿಭಾಷಿಕ ಪದಕೋಶಗಳನ್ನೂ ಪಠ್ಯಪುಸ್ತಕಗಳನ್ನೂ ಸಿದ್ಧಪಡಿಸಬೇಕಾಗಿದೆ. ಸಾಧ್ಯವಿದ್ದಷ್ಟೂ ಸರಳವಾದ ಭಾಷಾ ಪ್ರಯೋಗ, ಅನುವಾದ ವಿವರಣೆಗಳುಳ್ಳ ಪಠ್ಯಗ್ರಂಥಗಳೇ ಶಿಕ್ಷಣ ಮಾಧ್ಯಮದ ಜೀವಾಳವೆಂಬುದು ಪಠ್ಯ ಪುಸ್ತಕ ಸಮಿತಿಗಳಿಗೆ ಇನ್ನಾದರೂ ಮನವರಿಕೆಯಾಗಬೇಕಾಗಿದೆ.

ಆಡಳಿತ, ನ್ಯಾಯಾಂಗ, ಬ್ಯಾಂಕಿಂಗ್ ಮೊದಲಾದ ವ್ಯಾವಹಾರಿಕ ಕ್ಷೇತ್ರಗಳಲ್ಲಿ ಮಾತೃಭಾಷೆಯ ಬಳಕೆಯು ವ್ಯವಹಾರವನ್ನು ಸುಲಲಿತವಾಗಿ ನಡೆಸಲು ಎಡೆಮಾಡಿಕೊಡುತ್ತದೆ. ಆದರೆ ಶಿಕ್ಷಣಕ್ಷೇತ್ರದಲ್ಲಿ ಮಾತೃಭಾಷೆಯೇ ಮಾಧ್ಯಮವಾಗುವುದರಿಂದ ವಿದ್ಯಾರ್ಥಿಯ ಗ್ರಹಿಕೆ, ಓದು, ಉಚ್ಚಾರಣೆ, ಮಾತು, ಬರೆಹ ಎಲ್ಲವೂ ಸುಧಾರಿಸುತ್ತ, ಭಾಷಾಭಿವೃದ್ಧಿಯು ಪರಿಣಾಮಕಾರಿಯಾಗಿಯೂ ಸಾರ್ವತ್ರಿಕವಾಗಿಯೂ ಸಾಧಿಸುವುದರಲ್ಲಿ ಸಂಶಯವಿಲ್ಲ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]

[/fusion_tagline_box][/fusion_builder_column][/fusion_builder_row][/fusion_builder_container]

Categories
ಅಂಕಣಗಳು ಕೆ.ಎಸ್. ನವೀನ್ ಪಕ್ಷಿ ಪ್ರಪಂಚ ಪಕ್ಷಿ ಪ್ರಪಂಚ

ಅಂಕಣಗಳು –ಕೆ.ಎಸ್. ನವೀನ್

ಅಂಕಣ : ಪಕ್ಷಿ-ಪ್ರಪಂಚ

 

ಎಲ್ಲ ಭಾಗಗಳನ್ನು ಓದಿ

Categories
ದತ್ತಾಂಶಗಳು ಲೇಖನಗಳು

ಡೇಟಾ ಸೈನ್ಸ್: ದತ್ತಾಂಶದ ಸುತ್ತ ಹೀಗೊಂದು ವಿಜ್ಞಾನ

ಕೃತಿ:ಡೇಟಾ ಸೈನ್ಸ್
ಲೇಖಕರು: ದತ್ತಾಂಶಗಳು, ಲೇಖನಗಳು
ಕೃತಿಯನ್ನು ಓದಿ

Categories
ಕೃಷಿ ಲೇಖನಗಳು

ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016

ಕೃತಿ:ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ
ಲೇಖಕರು :
ಕೃತಿಯನ್ನು ಓದಿ

Categories
ಅಂಕಣಗಳು ರಾ. ಶ್ರೀನಾಗೇಶ್ ವಿಜ್ಞಾನ ವ್ಯಕ್ತಿತ್ವ ವಿಕಸನ

ಖುಷಿಯಾಗಿರಲು ಏನು ಮಾಡಬೇಕು?

03

ಪ್ರತಿ ದಿನ ಮುಂಜಾನೆ ನೀವು ಅನೇಕ ಆಯ್ಕೆಗಳನ್ನು ಮಾಡುವಿರಿ. ಅದರಲ್ಲಿ ಮೊಟ್ಟ ಮೊದಲನೆಯದು ಹಾಸಿಗೆಯಿಂದ ಏಳುವುದು! ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ, ವಿಧಿಯಿಲ್ಲದೆ ಏಳಲೇಬೇಕು ಎಂದು ಎದ್ದಾಗ, ಬೇಸರ ಅಲ್ಲಿಂದ ಪ್ರಾರಂಭ!
ಯಾವುದೇ ಕೆಲಸವನ್ನು ಮಾಡಬೇಕಲ್ಲಪ್ಪ ಎಂದುಕೊಂಡೋ, ಮಾಡದಿದ್ದರೆ ವಿಧಿಯಿಲ್ಲ ಎನ್ನುವ ಕಾರಣಕ್ಕೋ ಮಾಡುವಾಗ ಬೇಸರಿಸಿಕೊಂಡರೆ, ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಅದು ಅಷ್ಟಕ್ಕೇ ಸೀಮಿತವಾಗದೆ ಅನ್ಯ ಕೆಲಸಗಳಿಗೂ, ಸಮಯಕ್ಕೂ ಹರಡಿ ನಿಮ್ಮ ನೆಮ್ಮದಿಯನ್ನು ಸ್ವಲ್ಪ ಸ್ವಲ್ಪವೇ ಹಾಳುಮಾಡುತ್ತಿರುತ್ತದೆ.

ಮಾಡಲೇಬೇಕು ಎಂದಾಗ ಮಾಡಬೇಕು. ಅದರಲ್ಲಿ ನಿಮಗೆ ಆಯ್ಕೆ ಇಲ್ಲ. ಆದರೆ ಮಾಡುವಾಗ ನಿಮ್ಮ ಮನಸ್ಸು ಹೇಗಿರಬೇಕು ಎನ್ನುವುದರಲ್ಲಿ ಆಯ್ಕೆ ಇದೆ. ಬೇಸರದಿಂದಲೇ ಕೆಲಸ ಮಾಡಿದರೆ, ಕೆಲಸದ ಗುಣಮಟ್ಟವೂ ಉತ್ತಮವಾಗಿರುವುದಿಲ್ಲ. ಸಮಯವೂ ಹೆಚ್ಚು ತಗಲುತ್ತದೆ.

ಅಂತಹವರಿಗಾಗಿಯೇ ಒಂದು ಕಥೆ ಇಲ್ಲಿದೆ!

ಹೊಸದಾಗಿ ಮನೆಗೆ ಬಂದ ಸೊಸೆಗೆ ಅತ್ತೆ ಹೇಳಿದಳು, ನಮ್ಮ ಮನೆಯಲ್ಲಿ ದಿನವೂ ಭತ್ತ ಕುಟ್ಟಿ ಅಕ್ಕಿ ಮಾಡಿ ಅಡುಗೆ ಮಾಡಬೇಕು ಎಂದು. ಒನಕೆಯನ್ನೇ ನೋಡದ ಸೊಸೆಗೆ ಎಂತಹ ಕೆಲಸ ಇದು ಎಂದು ಬೇಸರ. ಮಾಡಲು ಇಷ್ಟವಿಲ್ಲ. ಮಾಡದೆ ವಿಧಿಯಿಲ್ಲ. ಕೆಲಸ ಮುಗಿಯುತ್ತಲೇ ಇರಲಿಲ್ಲ.

ಕೊನೆಗೆ ನೆರೆಮನೆಯವಳು ಒಂದು ದಿನ ಸೊಸೆಗೆ ಖುಷಿಯಾಗಿ ಅದೇ ಕೆಲಸವನ್ನೇ ಮಾಡುವ ಉಪಾಯವೊಂದನ್ನು ಹೇಳಿಕೊಟ್ಟಳು. ಮರುದಿನದಿಂದ ಭತ್ತ ಕುಟ್ಟುವಾಗ ಸೊಸೆಯ ಮುಖದಲ್ಲಿ ಆನಂದವೋ ಆನಂದ. ಅದರಿಂದ ಕೆಲಸವೂ ಬೇಗ ಮುಗಿಯುತ್ತಿತ್ತು.

ಅಂತಹ ಪರಿವರ್ತನೆ ತರುವಂತಹ ಉಪಾಯ ಏನಿರಬಹುದು?

ಮಾಡಬೇಕಲ್ಲ ಅಂತ ಬೇಸರದಿಂದಲೇ ಮಾಡುತ್ತಿದ್ದರೆ ನೆಮ್ಮದಿಯೂ ಹಾಳು, ಕೆಲಸವೂ ಮುಗಿಯದು. ಬದಲಿಗೆ ಖುಷಿ ಪಡಲು ಒಂದು ಕಾರಣ ಹುಡುಕಿಕೋ. ಭತ್ತ ಕುಟ್ಟುವಾಗ, ಒರಳಿನಲ್ಲಿ ನಿನ್ನ ಅತ್ತೆಯನ್ನು ಕೂರಿಸಿ ಕುಟ್ಟುತ್ತಿದ್ದೇನೆ ಎಂದುಕೊಂಡು ಕುಟ್ಟಿ ನೋಡು ಎಂದು ನೆರೆಯವರು ಹೇಳಿಕೊಟ್ಟಿದ್ದು! ತನಗೆ ಒಲ್ಲದ ಕೆಲಸವನ್ನು ನೀಡಿದ ಅತ್ತೆಯನ್ನು ಕುಟ್ಟುವುದು ಎಷ್ಟು ಖುಷಿಯ ಕೆಲಸ ಅಲ್ಲವೇ!

ಇಂದು ಭತ್ತ ಕುಟ್ಟಿಸುವ ಅತ್ತೆಯರೂ ಇಲ್ಲ, ಒನಕೆ ಹಿಡಿಯುವ ಸೊಸೆಯರೂ ಇಲ್ಲ. ಆದರೆ, ಮಾಡುವ ಕೆಲಸವನ್ನು ಖುಷಿಯಾಗಿ ಮಾಡಲು ಏನಾದರೂ ಒಂದು ಉಪಾಯ ಕಂಡುಕೊಂಡರೆ, ನಮ್ಮ ನೆಮ್ಮದಿ ಹಾಳಾಗುವುದಿಲ್ಲ ಎನ್ನುವ ಪಾಠ ಮಾತ್ರ ಹಾಗೆಯೇ ಉಳಿದುಕೊಂಡಿದೆ!

* ಅನಿವಾರ್ಯವಾಗಿ ಮಾಡಲೇಬೇಕು ಎಂದಾದಲ್ಲಿ ನಿಮಗೆ ಆಯ್ಕೆ ಇಲ್ಲ. ಅದನ್ನು ಒಪ್ಪಿಕೊಂಡು ಬಿಡುವುದು ಉತ್ತಮ.
* ಇಷ್ಟವಿಲ್ಲದ ಕೆಲಸವನ್ನು ಮುಂದೂಡುವ ಪ್ರವೃತ್ತಿ ಸರ್ವೇ ಸಾಮಾನ್ಯ. ನಿಮ್ಮ ನೆಮ್ಮದಿಯೂ ಅಲ್ಲಿಯ ವರೆಗೆ ಮುಂದೂಡಲ್ಪಡುತ್ತದೆ. ಮೊದಲು ಅದನ್ನು ಮಾಡಿ ಮುಗಿಸಿ ಬಿಟ್ಟರೆ, ಹಾಳು ಕೆಲಸವನ್ನು ಮಾಡಿ ಮುಗಿಸಿಬಿಟ್ಟೆ ಎಂದು ಖುಷಿ ಪಡಬಹುದು.

ನಾನು ಖುಷಿಯಾಗಿ ಇರುವುದಿಲ್ಲ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳುವರು ಅನೇಕರಿದ್ದಾರೆ ಎಂದರೆ, ಅಚ್ಚರಿಯಾಗುವುದೇ? ಐದು ನಿಮಿಷ ತುಂಬ ಖುಷಿಯಾಗಿದ್ದರೆ, ತುಂಬ ಖುಷಿಯಾಗಿ ಇದ್ದುಬಿಟ್ಟೆ, ಏನೋ ಗ್ರಹಚಾರ ಕಾದಿದೆ ನನಗೆ ಎಂದು ಖಿನ್ನತೆಗೆ ಜಾರುವವರನ್ನು ಕಂಡಿದ್ದೇನೆ. ಕೆಲವರ ಆಯ್ಕೆ ಹೇಗಿರುತ್ತದೆ ಎಂದರೆ, ಖಿನ್ನತೆ ಎನ್ನುವುದು ಬೆಂಗಳೂರಿಗೆ ಬಂದು ಬಸ್ ನಿಲ್ದಾಣದಲ್ಲಿ ನಿಂತು ಯಾರ ಮನೆಗೆ ಹೋಗಲಿ ಎಂದು ಯೋಚಿಸುತ್ತಿದ್ದರೆ, ನಮ್ಮ ಮನೆಗೇ ಬಾ ಎಂದು ದುಂಬಾಲು ಬಿದ್ದು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬರುವರೂ ಇದ್ದಾರೆ!

ನಾನು ಖುಷಿಯಾಗಿ ಇರುತ್ತೇನೆ ಎಂಬ ಆಯ್ಕೆಯನ್ನು ನೀವು ಮಾಡಿಕೊಂಡಿದ್ದೇ ಆದರೆ, ಖುಷಿಯಾಗಿ ಇರುವುದು ಸಾಧ್ಯವಿದೆ. ಸುಲಭವಲ್ಲ. ಖುಷಿಗಳ್ಳರಿರುತ್ತಾರೆ. ಅವರ ವಿರುದ್ಧ ರಕ್ಷಣಾ ಕವಚ ಕಟ್ಟಿಕೊಂಡರೆ ಖಂಡಿತ ಸಾಧ್ಯವಿದೆ.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”][ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]

[/fusion_builder_column][/fusion_builder_row][/fusion_builder_container]

Categories
QR-ಕಣಜ ಲೇಖನಗಳು

ರವೀಂದ್ರ ಕಲಾಕ್ಷೇತ್ರ

ಕೃತಿ:ರವೀಂದ್ರ ಕಲಾಕ್ಷೇತ್ರ
ಲೇಖಕರು: QR-ಕಣಜ, ಲೇಖನಗಳು
ಕೃತಿಯನ್ನು ಓದಿ

Categories
ಅಂಕಣಗಳು ಟಿ. ಎಸ್. ಗೋಪಾಲ್ ಭಾಷೆ ವಿಜ್ಞಾನ

ಶಿಷ್ಟತೆಯ ಹಿಡಿತದಲ್ಲಿ ಕನ್ನಡ!

ಕೃತಿ: ಅಂಕಣಗಳು, ಟಿ. ಎಸ್. ಗೋಪಾಲ್
ಲೇಖಕರು: ಅಂಕಣಗಳು, ಟಿ. ಎಸ್. ಗೋಪಾಲ್
ಕೃತಿಯನ್ನು ಓದಿ

Categories
ಪರಿಸರ ಲೇಖನಗಳು ವಿಜ್ಞಾನ

ಕೆರೆ ಪರಿಸರ

ಕೆರೆ ಪರಿಸರ

(ಚಿತ್ರ ಕೃಪೆ:  ನಂದಿ ಮಲ್ನಾಡ್)

ಕೆರೆ ಪರಿಸರ

ಒಳನಾಡು ಜಲಸಂಪನ್ಮೂಲಗಳ ಪೈಕಿ ಕೆರೆಗಳಿಗೆ ಪ್ರಮುಖ ಸ್ಥಾನವಿದೆ. ಭಾರತದಲ್ಲಿ ಮಾನ್ಸೂನ್ ಅನಿಶ್ಚಿತವಾದ್ದರಿಂದ ಮಳೆಗಾಲದಲ್ಲಿ ಮಳೆನೀರು ಹಿಡಿದಿಡುವುದು ಅತ್ಯವಶ್ಯಕವೆಂದು ಪ್ರಾಚೀನ ಕಾಲದಿಂದಲೂ ಜನಸಮುದಾಯ ಯೋಚಿಸಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿತು. ಎಷ್ಟೋವೇಳೆ ಸ್ಥಳೀಯ ಸಮುದಾಯವೇ ಕೆರೆಯ ನಿರ್ಮಾಣವನ್ನು ನಿರ್ಧರಿಸಿದೆ. ಮಳೆನೀರು ಕೊಯ್ಲಿನ ಮೊದಲ ಪಾಠವೇ ಹಿಂದಿನವರು ನಿರ್ಮಿಸಿದ ಕೆರೆಗಳು. ಕೆರೆಗಳನ್ನು ಕಟ್ಟಲು ಅನೇಕ ಕಾರಣಗಳಿದ್ದವು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ, ಪಶುಗಳಿಗೆ, ದೈನಂದಿನ ಬಳಕೆಗೆ ಹೆಚ್ಚು ನೀರಿನ ಅವಶ್ಯಕತೆ ಇತ್ತು. ಸ್ಥಳೀಯ ಬೆಟ್ಟಗುಡ್ಡಗಳಿಂದ ಬರುವ ಸಣ್ಣ ಪುಟ್ಟ ತೊರೆ, ಹಳ್ಳಗಳನ್ನು ಗಮನಿಸಿ, ತಗ್ಗಿನಲ್ಲಿ ಕೆರೆ ಕಟ್ಟುವುದು ಸಾಂಪ್ರದಾಯಕವೆಂಬಂತೆ ಭಾರತೀಯರ ಗ್ರಾಮೀಣ ಬದುಕಿನಲ್ಲಿ ಕಂಡುಬಂದಿದೆ. ಭಾರತಕ್ಕೆ ೩೨೯ ದಶಲಕ್ಷ ಹೆಕ್ಟೇರು ಭೌಗೋಳಿಕ ಪ್ರದೇಶವಿದ್ದರೂ ಎಲ್ಲೆಡೆಯೂ ನದಿ ನೀರಿನ ಹರಿವು ಇಲ್ಲ. ಅದಕ್ಕೆ ಪರ್ಯಾಯವಾಗಿ ಸಣ್ಣ ಪ್ರಮಾಣದಲ್ಲಾದರೂ ಮೈದಾನ ಪ್ರದೇಶಗಳಲ್ಲಿ ನೀರು ಹಿಡಿದಿಡುವ ಯೋಜನೆಯೇ ಕೆರೆ ನಿರ್ಮಾಣ. ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಸ್ಥಭೂಮಿ ಬಹುತೇಕ ಎತ್ತರಿಸಿದ ಭಾಗವಾದ್ದರಿಂದ, ಮೇಲಾಗಿ ಗ್ರನೈಟ್ ಸಂಬಂಧೀ ಗಡಸುಕಲ್ಲಿನಿಂದ ರೂಪಿತಗೊಂಡಿರುವುದರಿಂದ ಇಲ್ಲಿ ಕೆರೆ ನಿರ್ಮಿಸಿದಾಗ ದೊಡ್ಡ ಪ್ರಮಾಣದಲ್ಲಿ ನೀರು ಹಿಂಗಿಹೋಗುವ ಸಂದರ್ಭ ಕಡಿಮೆ. ಐತಿಹಾಸಿಕವಾಗಿ ನೋಡಿದರೆ ಕೆರೆ ಕಟ್ಟೆ ಕಟ್ಟಿಸುವುದು ಪ್ರಜೆಗಳ ಹಿತರಕ್ಷಣೆಯ ರಾಜಧರ್ಮವಾಗಿತ್ತು.

ಕೆರೆ ಮತ್ತು ಕೊಳಗಳು ನೀರಿನ ಮುಖ್ಯ ಆಕರವಾದರೂ ಕೆರೆ ಉದ್ದೇಶಪೂರ್ವಕವಾಗಿಯೇ ನಿರ್ಮಿಸಿದ್ದು. ಕೊಳ ನೈಸರ್ಗಿಕವಾಗಿ ರೂಪಿತವಾಗಿದ್ದು. ಕೆರೆಗಳನ್ನು ಕಟ್ಟುವಾಗ ನಮ್ಮ ಪ್ರಾಚೀನರು ಅತ್ಯಂತ ಯುಕ್ತಮಾರ್ಗ ಅನುಸರಿಸಿದ್ದಾರೆ. ಮಳೆಗಾಲದಲ್ಲಿ ಹೆಚ್ಚುವರಿ ನೀರು ಬಂದು ಕೆರೆ ತುಂಬಿದರೆ ಏರಿ ಒಡೆಯಬಾರದು ಎಂದು, ಹೆಚ್ಚುವರಿ ನೀರು ವ್ಯರ್ಥವಾಗಿ ಹೋಗಬಾರದು ಎಂದು ಕೋಡಿಕಟ್ಟಿದ್ದಾರೆ. ಎಲ್ಲ ಕೆರೆಗಳಲ್ಲೂ ಇದನ್ನು ಗಮನಿಸಬಹುದು. ಕೋಡಿಯಿಂದ ಹರಿದ ಕೆರೆಯ ನೀರು ಮುಂದಿನ ಕೆರೆಗೆ ತುಂಬುವಂತೆ ಸಂಪರ್ಕವಿರುತ್ತಿತ್ತು. ಅಲ್ಲಿಂದ ಮತ್ತೊಂದಕ್ಕೆ, ಇನ್ನೂ ದೊಡ್ಡ ಕೆರೆಯೆಂದರೆ ತೂಬುಗಳನ್ನು ತೆರೆಯುವ ಉಪಾಯ. ಕೃಷಿ, ಜಾನುವಾರುಗಳಿಗೆ, ಕುಡಿಯುವ ನೀರಿಗೆ, ಗೃಹಕೃತ್ಯಕ್ಕೆ ಕೊನೆಗೆ ಶೌಚಕ್ಕೂ ಕೆರೆಯೇ ಆಧಾರ ಎಂಬ ಪರಿಕಲ್ಪನೆ ಲಾಗಾಯ್ತಿಯಿಂದ ಬಂದಿದ್ದರೂ ಕಳೆದ ಶತಮಾನದ ೭೦ರ ದಶಕದ ನಂತರ ಅನೇಕ ಪರಿವರ್ತನೆಗಳಾದವು. ಆ ಮುಂಚೆ ಕೆರೆಗಳಲ್ಲಿ ಹೂಳು ತುಂಬಿದರೆ ಅದನ್ನು ಎತ್ತಲು ಸಮುದಾಯ ಭಾಗವಹಿಸುತ್ತಿತ್ತು. ಸೋಮವಾರದಂದು ಉಳುಮೆಗೆ ಬಿಡುವು ಇದ್ದುದರಿಂದ ಆ ಕಾಲವನ್ನು ಗ್ರಾಮೀಣ ಜನರು ಕೆರೆಗಳ ಹೂಳೆತ್ತಲು, ಏರಿಯನ್ನು ಭದ್ರಪಡಿಸಲು ಬಳಸಿಕೊಳ್ಳುತ್ತಿದ್ದರು. ೭೦ರ ದಶಕದ ನಂತರ ಬದಲಾದ ಕೃಷಿ ಪರಿಸ್ಥಿತಿ, ಅಂತರ್ಜಲದ ಯಥೇಚ್ಛ ಬಳಕೆ, ಕೆರೆಯ ಜಲಾನಯನ ಪ್ರದೇಶದ ಒತ್ತುವರಿ, ಹೂಳನ್ನು ಎತ್ತುವುದರಲ್ಲಿ ನಿರ್ಲಕ್ಷ್ಯ ಇವೆಲ್ಲ ಸೇರಿ ಕೆರೆಯ ಸಂರಕ್ಷಣೆಗೆ ಅನೇಕ ಅಡಚಣೆಗಳು ಎದುರಾದವು.

ಏಷ್ಯ ಅಭಿವೃದ್ಧಿ ಬ್ಯಾಂಕ್ ದೇಶದ ಪ್ರಮುಖ ಕೆರೆಗಳ ಸ್ಥಿತಿಗತಿಗಳನ್ನು ವರದಿಮಾಡಿದೆ. ಕರ್ನಾಟಕದಲ್ಲಿ ೩೦ ಜಿಲ್ಲೆಗಳೂ ಸೇರಿ ಒಟ್ಟು ೩೬,೬೭೮ ಕೆರೆಗಳಿವೆ. ಇವು ವಿಸ್ತರಿಸಿರುವ ಜಾಗ ೬,೯೦,೦೦೦ ಹೆಕ್ಟೇರು. ಆದರೆ ಇವುಗಳಲ್ಲಿ ಶೇ. ೯೦ ಭಾಗ ಕೆರೆಗಳು ೪೦ ಹೆಕ್ಟೇರುಗಳಿಗಿಂತ ಹೆಚ್ಚು ವಿಸ್ತರಿಸಿಲ್ಲ. ಅವುಗಳನ್ನು ಆಧರಿಸಿ ಸದ್ಯದಲ್ಲಿ ಸಾಗುವಳಿ ಮಾಡುತ್ತಿರುವುದು ಶೇ. ೩೫ ಭಾಗ ಮಾತ್ರ. ೧೯೯೭ರಿಂದ ಸಣ್ಣ ನೀರಾವರಿ ಇಲಾಖೆ ಈ ಕೆರೆಗಳು ಉಸ್ತುವಾರಿ ವಹಿಸಿದೆ. ಕೆರೆಗಳ ಅಚ್ಚುಕಟ್ಟು ಪ್ರದೇಶವನ್ನು ಆಧರಿಸಿ ಅವುಗಳ ನಿರ್ವಹಣೆಯನ್ನು ಬೇರೆ ಬೇರೆ ಆಡಳಿತಕ್ಕೆ ವಹಿಸಿದೆ. ೪೦ ರಿಂದ ೨೦೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳ ಉಸ್ತುವಾರಿಯನ್ನು ಸರ್ಕಾರದ ಸಣ್ಣ ನೀರಾವರಿ ಇಲಾಖೆ ವಹಿಸಿಕೊಂಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ಕೆರೆಗಳನ್ನು ಜಿಲ್ಲಾ ಪರಿಷತ್ ಮತ್ತು ಪಂಚಾಯತಿಗಳು ವಹಿಸಿಕೊಂಡಿವೆ. ಅಚ್ಚುಕಟ್ಟು ಪ್ರದೇಶ ೨೦೦೦ ಹೆಕ್ಟೇರಿಗಿಂತ ಹೆಚ್ಚಾಗಿದ್ದರೆ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆಗಳು ಇದನ್ನು ನಿರ್ವಹಿಸುತ್ತವೆ.

ಕೆರೆಗಳನ್ನು ಯುಕ್ತವಾಗಿ ಬಳಸಲು ಕರ್ನಾಟಕ ಸರ್ಕಾರ ನೀರು ಬಳಕೆದಾರ ಸಹಕಾರ ಸಂಘಗಳ ಸ್ಥಾಪನೆಗೆ ಒತ್ತುಕೊಟ್ಟಿದೆ (Water users Co-operative Sociery-W.W.C.S.) ಕರ್ನಾಟಕ ಸರ್ಕಾರ ೧೯೬೫ರ ನೀರಾವರಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ೫೦೦ರಿಂದ ೭೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳನ್ನು ಈ ಸಂಘದ ಸುಪರ್ದಿಗೆ ಕೊಡುವ ಯೋಜನೆ ರೂಪಿಸಿತು. ೨೦೦೨ರಲ್ಲಿ ಮತ್ತೆ ಒಂದು ಕಾಯ್ದೆ ರೂಪಿಸಿ ಕೆರೆ ಬಳಕೆದಾರರ ಗುಂಪಿಗೆ (Tank Users Group-T.U.G.) ಬಿಡಿ ಕೆರೆಗಳನ್ನು ವಹಿಸುವ ಯೋಜನೆಯೊಂದನ್ನು ರೂಪಿಸಿತು. ೨೦೦೪ರಿಂದ ಯಾವ ಕೆರೆಯ ಅಚ್ಚುಕಟ್ಟು ೪೦ ಹೆಕ್ಟೇರಿಗಿಂತ ಹೆಚ್ಚಾಗಿದೆಯೋ ಅದನ್ನು ಗ್ರಾಮ ಪಂಚಾಯಿತಿಯ ಸುಪರ್ದಿಗೆ ನೀಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ೨೦೦೦ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಸಮುದಾಯ ಆಧಾರಿತ ಸಣ್ಣ ಕೆರೆಗಳ ಪುನಶ್ಚೇತನ ಯೋಜನೆಯೊಂದನ್ನು ತಂದಿದೆ. ಹಾಗೆಯೇ ಜಲಸಂವರ್ಧನಾ ಯೋಜನಾ ಸಂಘವೆಂಬ ಸ್ವತಂತ್ರ ಸಂಸ್ಥೆಯನ್ನೂ ಅಸ್ತಿತ್ವಕ್ಕೆ ತಂದಿದೆ. ಬಹು ಮುಖ್ಯವಾದ ಅಂಶವೆಂದರೆ ಇಂಥ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ಒಂದು ಕಾಲಮಿತಿಯಲ್ಲಿ ಇವನ್ನು ಪೂರ್ಣಗೊಳಿಸಬೇಕು. ಅದಕ್ಕೆ ತಕ್ಕ ಅನುಕೂಲತೆಗಳನ್ನು ಕಲ್ಪಿಸಬೇಕು. ಆಡಳಿತಾತ್ಮಕವಾಗಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಅಥವಾ ಅದರ ನಿರ್ವಹಣೆಗೆ ಸ್ಪಷ್ಟ ರೂಪುರೇಖೆಗಳು ನಿರ್ಧಾರವಾಗಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ಪರಿಸರದ ಅವನತಿ

ಸದ್ಯದಲ್ಲಿ ಕರ್ನಾಟಕ ಕೆರೆ ಪರಿಸರ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ. ಕೃಷಿಗಾಗಿ ಕೆರೆಗಳ ಮೇಲಿನ ಅವಲಂಬನೆ ಸ್ವಾತಂತ್ರ್ಯಾನಂತರ ಅದರಲ್ಲೂ ವಿಶೇಷವಾಗಿ ೭೦ರ ದಶಕದ ನಂತರ ಕಡಿಮೆಯಾಗುತ್ತ ಬಂತು. ಕೊಳವೆ ಬಾವಿಗಳು ಆದ್ಯತೆ ಪಡೆದವು, ಕೆರೆಯ ಪರಿಸರದ ಬಗ್ಗೆ ನಿರ್ಲಕ್ಷ್ಯ ಉಂಟಾಯಿತು. ಹಳ್ಳ ಕೂಡುವ ಜಾಗಗಳು ಸೇರಿದಂತೆ ಕೆರೆಯ ಭಾಗವನ್ನು ಒತ್ತುವರಿ ಮಾಡಿದಾಗ ಎರಡು ಸಮಸ್ಯೆಗಳೂ ಏಕಕಾಲಕ್ಕೆ ಎದುರಾದವು. ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾದದ್ದು, ಅದೇ ಕಾಲಕ್ಕೆ ಅಧಿಕ ಹೂಳು ಕೆರೆಯಂಗಳವನ್ನು ತುಂಬಿದ್ದು. ಹೀಗಾಗಿ ಅಧಿಕ ಮಳೆ ಬಂದಾಗ, ಸುಸ್ಥಿತಿಯಲ್ಲಿರದ ಎಷ್ಟೋ ಕೆರೆಯ ಏರಿಗಳು ಒಡೆದುಹೋದವು. ಎಲ್ಲದಕ್ಕೂ ಸರ್ಕಾರದ ಹಣವನ್ನೇ ನಿರೀಕ್ಷಿಸುವ ಜಾಯಮಾನ ಗ್ರಾಮೀಣ ಪ್ರದೇಶದ ಜನರಲ್ಲಿ ಬೆಳೆಯಿತು. ಕೆರೆ ದುರಸ್ತಿ ಸರ್ಕಾರದ ಕೆಲಸ ಎನ್ನುವಂತಾಯಿತು. ಬರಗಾಲ ಬಂದಾಗ ಕೆರೆಗಳು ಬತ್ತಿಹೋದವು. ಹಾಗೆಯೇ ಅಂತರ್ಜಲದ ಮಟ್ಟವೂ ಕೆಳಕ್ಕೆ ಹೋಗುತ್ತ ಬಂತು. ಕೆರೆಗಳನ್ನು ಆಧರಿಸಿದ ಜೀವಿ ವೈವಿಧ್ಯಕ್ಕೆ ಇದು ಮುಳುವಾಯಿತು. ಕೆರೆಗಳ ಪುನಶ್ಚೇತನಕ್ಕಾಗಿ ವಿಶ್ವಬ್ಯಾಂಕ್ ನೆರವನ್ನು ಕೇಳುವ ಸ್ಥಿತಿ ಬಂತು.

ಹಸುರು ಕ್ರಾಂತಿ ನಮ್ಮ ಆಹಾರೋತ್ಪಾದನೆಯಲ್ಲಿ ದೊಡ್ಡ ಬದಲಾವಣೆ ತಂದರೂ ಇನ್ನೊಂದು ದೃಷ್ಟಿಯಿಂದ ಶಾಶ್ವತ ಸಮಸ್ಯೆಯನ್ನು ತಂದೊಡ್ಡಿತು. ಯಥೇಚ್ಛವಾಗಿ ಕೀಟನಾಶಕವನ್ನು ಬೆಳೆಗೆ ಬಳಸಿದ್ದರಿಂದ ಅದು ತಂದ ವಿಪತ್ತುಗಳು ನೂರಾರು. 50ರ ದಶಕದಲ್ಲಿ ಸೊಳ್ಳೆ ನಿರ್ಮೂಲನಕ್ಕಾಗಿ ಬಳಸಿದ ಡಿ.ಡಿ.ಟಿ. ಈಗಲೂ ಕೃಷಿ ನೆಲದಿಂದ ಪೂರ್ಣ ಮರೆಯಾಗಿಲ್ಲ ಎಂಬುದು ಪರಿಸರ ಚಿಂತಕರ ಅಳಲು. ಕೃಷಿ ಬೆಳೆಗೆ ಸಿಂಪಡಿಸುವ ಕೀಟನಾಶಕಗಳಲ್ಲಿ ಪೊಟಾಸಿಯಂ ಸಾರ ಹೆಚ್ಚಾಗಿರುತ್ತದೆ. ಮಳೆ ಬಂದಾಗ ಕೆರೆಯಲ್ಲಿ ಸೇರಿಕೊಂಡು ನೀರಿನ ಆಮ್ಲಾಂಕವನ್ನು (PH) ಏರುಪೇರು ಮಾಡುತ್ತದೆ. ಬೆನ್ಜೀನ್ ಹೆಕ್ಸಾಕ್ಲೋರೈಡ್, ಲಿಂಡೇನ್, ಎಂಡೋಸಲ್ಫಾನ್-ಇವು ನೀರಿನಲ್ಲಿ ಸೇರಿ ಅಲ್ಲಿನ ಜೀವಿಗಳಿಗೆ ಮಾರಕವಾಗತೊಡಗಿತು. ಎಷ್ಟೋ ಸಂದರ್ಭಗಳಲ್ಲಿ ಕ್ಯಾನ್ಸರ್‍ಗೂ ಇವು ಕಾರಣ ಎಂದು ಸಮೀಕ್ಷೆಗಳು ಹೇಳಿದವು. ಕೆರೆಗಳನ್ನು ಶೌಚಕ್ಕೆ ಬಳಸುತ್ತಿದ್ದುದರಿಂದ ನೀರಿನಿಂದ ಹರಡುವ ರೋಗಗಳು ಹೆಚ್ಚಾಗುತ್ತಿದ್ದವು. ಈಗಲೂ ಇಂಥ ಸಂದರ್ಭಗಳು ಕೆಲವು ಹಿಂದುಳಿದ ಗ್ರಾಮಗಳಲ್ಲಿದೆ. ಯಾವ ಕೆರೆಯ ನೀರೂ ಶುದ್ಧವಲ್ಲ, ಅದರಲ್ಲಿ ಹಲವು ಲವಣಗಳು ವಿಲೀನವಾಗಿರುತ್ತವೆ. ಅಷ್ಟೇಕೆ ಕೆರೆಯ ನೀರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಣ್ಣ ಮಣ್ಣಿನ ಕಣಗಳಿಂದಾಗಿ ನೀರಿಗೆ ಕೆಂಪು ಬಣ್ಣ ಬಂದಿರುತ್ತದೆ. ಈ ಸೂಕ್ಷ್ಮ ಕಣಗಳು ನಿಲಂಬಿತ ಸ್ಥಿತಿ (ಸಸ್ಪೆಂಡೆಡ್)ಯಲ್ಲಿರುತ್ತವೆ.

ಸಮುದ್ರಗಳಲ್ಲಿ ಜೀವಿ ವೈವಿಧ್ಯ ಹೇಗಿರುತ್ತದೋ ಕೆರೆಗಳಲ್ಲೂ ಸ್ಥಳೀಯ ಮಟ್ಟದಲ್ಲಿ ಜೀವಿಗಳಲ್ಲಿ ವೈವಿಧ್ಯವಿರುತ್ತದೆ. ಇದಕ್ಕೆ ತುಮಕೂರಿನ ಅಮಾನಿಕೆರೆ ಉದಾಹರಣೆಯಾಗುತ್ತದೆ. ಈ ಕೆರೆಯ ಜೀವಿ ವೈವಿಧ್ಯವನ್ನು ತುಮಕೂರಿನ ಸರ್ಕಾರೇತರ ಸಂಸ್ಥೆ-ವೈಲ್ಡ್ ಲೈಫ್ ಅವೇರ್ ನೆಟ್‍ವರ್ಕ್-ದಾಖಲೆ ಮಾಡಿದೆ. ತುಮಕೂರು ಅಮಾನಿಕೆರೆ ನಗರಕ್ಕೇ ಹೊಂದಿಕೊಂಡಿರುವ ದೊಡ್ಡ ಕೆರೆ. ಇದರ ವಿಸ್ತೀರ್ಣ ೮೩೫ ಎಕರೆ. ಹಾಗೆಯೇ ನೀರು ಹಿಡಿದಿಡುವ ಸಾಮರ್ಥ್ಯ ೧೬೫.೪೪ ದಶಲಕ್ಷ ಘನ ಅಡಿ. ಸಮುದ್ರ ಮಟ್ಟದಿಂದ ೭೮೫ ಮೀಟರ್ ಎತ್ತರದಲ್ಲಿದೆ. ತುಮಕೂರು ತಾಲ್ಲೂಕಿನ ವಾರ್ಷಿಕ ಮಳೆ ಪ್ರಮಾಣ ೬೮೮ ಮಿಲಿ ಮೀಟರ್. ಕೆರೆಯ ಅಚ್ಚುಕಟ್ಟು ಪ್ರದೇಶ ೭೦೫ ಎಕರೆ. ಇದಕ್ಕೆ ಕಟ್ಟಿರುವ ಏರಿಯೇ ೧.೮ ಕಿ.ಮೀ. ಉದ್ದವಿದೆ. ದೇವರಾಯನದುರ್ಗದ ಪಶ್ಚಿಮ ಇಳಿಜಾರು ಪ್ರದೇಶ ಸೇರಿದಂತೆ ಇದರ ಜಲಾನಯನ ಪ್ರದೇಶ ೩೫ ಚದರ ಕಿಲೋ ಮೀಟರ್ ವಿಸ್ತರಿಸಿದೆ. ಈ ಕೆರೆ ತುಂಬಿ ಕೋಡಿ ಬಿದ್ದಾಗ ಅದು ಮುಂದೆ ಭೀಮಸಮುದ್ರ ಕೆರೆಗೆ ಹೋಗುತ್ತದೆ, ಅಲ್ಲಿಂದ ಶಿಂಷಾ ನದಿಗೆ, ಅಂತಿಮವಾಗಿ ಕಾವೇರಿ ನದಿ ಕಣಿವೆಯನ್ನು ಕೂಡಿಕೊಳ್ಳುತ್ತದೆ. ಕ್ರಿ.ಶ. ೧೧೩೦ರಲ್ಲಿ ರಾಜೇಂದ್ರ ಚೋಳ ಈ ಕೆರೆ ಕಟ್ಟಿಸಿದನೆಂಬ ಉಲ್ಲೇಖವಿದೆ. ಈಗ ಇದು ಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿದೆ. ಈ ಕೆರೆಗೆ ಎರಡು ಹಳ್ಳಗಳು ನೀರು ತುಂಬುತ್ತವೆ. ದೇವರಾಯಪಟ್ಟಣ ಹಳ್ಳ ಮತ್ತು ಹನುಮಂತಪುರ ಹಳ್ಳ. ಇವು ಸರ್ವಋತು ಹಳ್ಳಗಳಲ್ಲ, ಮಳೆಗಾಲದಲ್ಲಿ ಮಾತ್ರ ಹರಿಯುವಂತಹವು. ತುಮಕೂರಿನ ಕೆರೆ ಹಿಂಭಾಗದ ಅಂತರ್ಜಲ ಮರುಪೂರಣಕ್ಕೆ ಈ ಕೆರೆಯ ನೀರೇ ಆಧಾರ. ಹಾಗೆಯೇ ಜೀವಿ ವೈವಿಧ್ಯವನ್ನು ಪೋಷಿಸಿರುವ ಈ ಅಮಾನಿಕೆರೆ ಸದಾ ಅಧ್ಯಯನ ಯೋಗ್ಯ. ಈ ಕೆರೆಯನ್ನು ಆಶ್ರಯಿಸಿ ೪೨ ಕುಟುಂಬಕ್ಕೆ ಸೇರಿದ ೧೨೧ ಪಕ್ಷಿ ಪ್ರಭೇದಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಪೈಕಿ ೪೨ ಪಕ್ಷಿ ಪ್ರಭೇದಗಳು ದೂರದಿಂದ ವಲಸೆ ಬರುವಂತಹವು. ಆರು ಕುಟುಂಬಗಳಿಗೆ ಸೇರಿದ ೨೪ ಚಿಟ್ಟೆ ಪ್ರಭೇದಗಳು, ೧೨ ಜೇಡ ಪ್ರಭೇದಗಳು, ೬ ಸ್ತನಿ ಪ್ರಭೇದಗಳು, ೧೧ ಉರಗ ಪ್ರಭೇದಗಳು ಜೊತೆಗೆ ಆಮೆ, ಕಪಿ, ಮುಂಗುಸಿ, ದಂಷ್ಟ್ರಕ ಜೀವಿಗಳು, ಉಭಯ ಜೀವಿಗಳಿಗೆ ಇದು ನೆಲೆಯಾಗಿದೆ. ತುಮಕೂರಿನ ಅಮಾನಿಕೆರೆ ಅನೇಕ ಹಂತಗಳಲ್ಲಿ ಅಳಿವಿನಂಚಿನತ್ತ ಸಾಗಿತ್ತು. ಮುಖ್ಯವಾಗಿ ಹಳ್ಳದ ನೀರು ಒಳಹರಿಯುವ ಭಾಗದಲ್ಲಿ ಪಾತ್ರ ಬದಲಾಯಿಸಿದ್ದು, ಅತಿಕ್ರಮಣ, ಕೆರೆ ಒತ್ತುವರಿ, ಇಟ್ಟಿಗೆ ಕಾರ್ಖಾನೆಗಳ ಸ್ಥಾಪನೆ, ಅತಿರೇಕದ ಬಯಲು ಶೌಚ ಈ ಮೂಲಕ ನೀರಿನಿಂದ ಹರಡುವ ಕಾಯಿಲೆಗೆ ಜನ ತುತ್ತಾಗಿದ್ದರು. ಅನೇಕ ಪಕ್ಷಿಗಳನ್ನು ಕಾನೂನುಬಾಹಿರವಾಗಿ ಕೊಂದದ್ದರಿಂದ ಅವುಗಳ ಸಂಖ್ಯೆ ಇಳಿಮುಖವಾಯಿತು. ತುಮಕೂರಿನ ಚರಂಡಿ ನೀರು ಅಂತಿಮವಾಗಿ ಈ ಅಮಾನಿಕೆರೆಯನ್ನೇ ಸೇರುತ್ತದೆ. ಇಲ್ಲಿನ ಜೀವಿ ಪ್ರಭೇದಗಳಿಗೆ ದೊಡ್ಡ ಕುತ್ತು ತಂದಿರುವ ಸಂಗತಿ ಇದು. ನೀರಿನಲ್ಲಿ ಬೆಳದ ಅಂತರಗಂಗೆ ಕೆರೆಯ ಬಹುಭಾಗದ ನೀರನ್ನೇ ಮರೆಮಾಡಿತ್ತು. ತುಮಕೂರಿನ ನಾಗರಿಕರು ಕ್ರಿಯಾಶೀಲರಾಗಿ, ಸ್ವಯಂಪ್ರೇರಿತರಾಗಿ ಇದನ್ನು ಶುದ್ಧೀಕರಿಸುವ ಕಾರ್ಯ ಕೈಗೊಂಡರು.

ಸಾಮಾನ್ಯವಾಗಿ ಯಾವ ಕೆರೆಯೇ ಆಗಲಿ, ಅದರಲ್ಲಿ ತೇಲುವ ಸಸ್ಯಗಳು, ಮುಳುಗಿರುವ ಸಸ್ಯ, ನೀರಿನ ತಳದಲ್ಲಿ ಆಳ ಬೇರು ಬಿಟ್ಟಿರುತ್ತವೆ. ಅಂತರಗಂಗೆ, ನೀರು ಬ್ರಾಹ್ಮಿ, ಒಂದೆಲಗೆ ಸಸ್ಯ ಅನೇಕ ಕೆರೆಗಳಲ್ಲಿ ತೇಲುವುದನ್ನು ಸಾಮಾನ್ಯವಾಗಿ ಕಾಣಬಹುದು. ಶೈವಲ, ಡಯಾಟಂ ಕೂಡ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಜೀವಿ ವಿಜ್ಞಾನಿಗಳು ಬಹುತೇಕ ಕೆರೆಗಳಲ್ಲಿ ಹದಿನೈದು ಬಗೆಯ ಸಸ್ಯಗಳನ್ನು ದಾಖಲೆ ಮಾಡಿದ್ದಾರೆ. ಹಾಗೆಯೇ ಗುಳುಮುಳುಕ, ನೀರುಕಾಗೆ, ರಾತ್ರಿಬಕ, ಬೂದುಕೊಕ್ಕರೆ, ಮೀಂಚುಳ್ಳಿ, ಚಮಚದ ಕೊಕ್ಕು ಸೇರಿದಂತೆ ಅನೇಕ ಬಗೆಯ ಪಕ್ಷಿಗಳಿಗೆ ಕೆರೆ ಆಶ್ರಯ ಕೊಡುತ್ತದೆ. ಶಂಕದ ಹುಳು, ಏಡಿ, ಸೀಗಡಿ, ನಳ್ಳಿ, ಸಂದಿಪದಿಗಳು, ವಲಯವಂತಗಳು ಆಹಾರ ಸರಪಳಿಯ ಒಂದು ಭಾಗವಾಗಿ ಕೆರೆಯನ್ನು ಆಶ್ರಯಿಸಿರುತ್ತವೆ. ಕೊಡತಿಕೀಟದಿಂದ ಹಿಡಿದು ಜಲಜೀರುಂಡೆಗಳವರೆಗೆ ಅನೇಕ ಕೀಟಗಳಿಗೂ ಕೆರೆಯೇ ಆವಾಸ. ಹಾಗೆಯೇ ಸೂಕ್ಷ್ಮಜೀವಿಗಳು ಕೆರೆಯಲ್ಲಿ ಆಶ್ರಯ ಪಡೆಯುತ್ತವೆ. ಯೂಗ್ಲಿನ, ಸ್ಪೈರೋಗೈರ, ಪ್ಯಾರಮೀಡಿಯಮ್ ಮುಂತಾದವು. ಇದಲ್ಲದೆ ಕೆರೆಗಳಲ್ಲಿ ನೈಸರ್ಗಿಕವಾಗಿರುವ ಮೀನುಗಳೂ ಉಂಟು. ಹಾಗೆಯೇ ಮೀನುಗಳನ್ನು ಬೆಳೆಸುವುದೂ ಉಂಟು. ಸರ್ವಋತು ನೀರಿದ್ದಾಗ ಮಾತ್ರ ಇದು ಸಾಧ್ಯ. ಕಾಟ್ಲಾ, ಮೃಗಾಲ್, ಗೆಂಡೆಮೀನು, ಬಾಳೆಮೀನು ಸೇರಿದಂತೆ ೨೦ ಬಗೆಯ ಮೀನಿನ ತಳಿಗಳನ್ನು ಕೆರೆಗಳಲ್ಲಿ ಬೆಳೆಸುವುದುಂಟು. ಅಂಥ ಕೆರೆಗಳು ಮಲಿನವಾಗಿರಬಾರದು. ಕೆರೆ ಕಲುಷಿತವಾಯಿತೆಂದರೆ ಬಹು ಬೇಗ ಜೀವಿಗಳು ಸಾಯುತ್ತವೆ, ಜೀವಿ ವೈವಿಧ್ಯ ನಷ್ಟವಾಗುತ್ತವೆ. ಹಾಗೆಯೇ ಆಹಾರ ಸರಪಳಿಯ ಕೊಂಡಿ ಕಳಚುತ್ತದೆ. ಇವೆಲ್ಲವನ್ನೂ ಕಾನೂನಿನಿಂದಲೇ ಸರಿಪಡಿಸಲು ಸಾಧ್ಯವಿಲ್ಲ. ಸಂರಕ್ಷಣೆ ಕುರಿತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು.

ಸೂಳೆಕೆರೆ (ಶಾಂತಿಸಾಗರ) ಅಧ್ಯಯನ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಕರ್ನಾಟಕದ ಕೆರೆಗಳಲ್ಲಿ ವಿಶಿಷ್ಟ ಸ್ಥಾನವಿದೆ. ಕ್ರಿ.ಶ. ೧೧೨೮ರಲ್ಲಿ ಶಾಂತವ್ವ ಎಂಬಾಕೆ ಕಟ್ಟಿಸಿದ ಈ ಕೆರೆ ಏಷ್ಯದ ಅತಿದೊಡ್ಡ ಎರಡನೇ ಕೆರೆ ಎಂದು ಪ್ರಸಿದ್ಧಿಯಾಗಿದೆ (ಏಷ್ಯದ ಅತಿದೊಡ್ಡ ಕೆರೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕುಂಬಂ. ಇದರ ನೀರು ಸಂಗ್ರಹಣಾ ಸಾಮರ್ಥ್ಯ ೩,೩೭೮ ಘನ ಅಡಿ). ಸೂಳೆಕೆರೆಯ ನೀರಿನ ವಿಸ್ತೀರ್ಣ ೨,೪೬೬ ಹೆಕ್ಟೇರು, ಜಲಾನಯನ ಪ್ರದೇಶದ ವಿಸ್ತೀರ್ಣ ೮೪,೪೧೬ ಹೆಕ್ಟೇರು. ಕೆರೆಯ ಸುತ್ತಳತೆ ೩೦ ಕಿಲೋ ಮೀಟರು. ಈ ನೀರನ್ನು ಆಧರಿಸಿ ೨,೮೭೬ ಹೆಕ್ಟೇರು ಸಾಗುವಳಿಯಾಗುತ್ತಿದೆ. ಕೆರೆಯ ಕನಿಷ್ಠ ಆಳ ಐದು ಮೀಟರು, ಗರಿಷ್ಠ ಆಳ ಒಂಬತ್ತು ಮೀಟರು. ಕೆರೆಯ ನೀರಿನ ಮಟ್ಟ ಕೆಳಗೆ ಇಳಿಯುವ ಪರಿಸ್ಥಿತಿ ಎದುರಾಗಿತ್ತು. ಆಗ ಭದ್ರಾ ಅಣೆಕಟ್ಟಿನ ಕಾಲುವೆ ಸಂಪರ್ಕ ಕಲ್ಪಿಸಲಾಯಿತು. ಈಗ ಸರ್ವಋತುವಿನಲ್ಲೂ ಇದರಲ್ಲಿ ನೀರಿರುತ್ತದೆ. ಕೆರೆಯ ಅಂಚಿನ ಭಾಗದಲ್ಲಿ ಶೇ. ಸುಮಾರು ೧೫ ಭಾಗ ಒತ್ತುವರಿಯಾಗಿದ್ದರೂ, ಶೇ. ೩೦ ಭಾಗದಲ್ಲಿ ಜಲಸಸ್ಯಗಳು ಬೆಳೆದಿದ್ದರೂ, ಈ ಕೆರೆ ಕಲುಷಿತವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹತ್ತಿರದಲ್ಲಿ ಯಾವುದೇ ಕಾರ್ಖಾನೆಗಳಿಲ್ಲವಾದ್ದರಿಂದ ಕೆರೆಗೆ ಕೊಳಚೆ ಹರಿಯುವ ಸಂಭವವಿಲ್ಲ.

ವೈಜ್ಞಾನಿಕ ದೃಷ್ಟಿಯಿಂದ ಈ ಕೆರೆಯ ನೀರಿನ ಬೇರೆ ಬೇರೆ ಗುಣಗಳನ್ನು ತಜ್ಞರು ವಿಶ್ಲೇಷಿಸಿದ್ದಾರೆ. ಕೆರೆಯ ನೀರಿನ ಉಷ್ಣತೆಗಿಂತ ಇದರ ಮೇಲೆ ಬೀಸುವ ಗಾಳಿಯ ಉಷ್ಣತೆಯೇ ಹೆಚ್ಚು (೨೭.೦-೩೩.೨೦ ಡಿಗ್ರಿ ಸೆಂ.). ಈ ನೀರು ಕುಡಿಯಲು ಯೋಗ್ಯವಾಗಿದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗಕ್ಕೆ ಈ ಕೆರೆಯಿಂದ ದಿನವಹಿ ೩೦ ದಶಲಕ್ಷ ಲೀಟರು ನೀರು ಪೂರೈಕೆ ಸಾಧ್ಯವಾಗಿದೆ. ನೀರಿನಲ್ಲಿ ಯಾವುದೇ ವಾಸನೆ ಇಲ್ಲ, ಮಳೆಗಾಲದಲ್ಲೂ ಪ್ರಕ್ಷುಬ್ದ ಕಣಗಳು ಒಂದು ಲೀಟರ್‍ಗೆ ಮೂರು ಮಿಲಿಗ್ರಾಂಗಿಂತ ಕಡಿಮೆ. ನೀರು ಕ್ಷಾರವಾಗಿದೆ. ಇದರ ಕ್ಷಾರತೆ ೮.೪-೮.೬. ಅತ್ಯಂತ ಗಮನಾರ್ಹ ಅಂಶವೆಂದರೆ ಈ ನೀರಿನಲ್ಲಿ ವಿಲೀನವಾಗಿರುವ ಆಕ್ಸಿಜನ್ ೫.೫ ರಿಂದ ೭.೪ ಮಿಲಿಗ್ರಾಂ/ಲೀಟರ್. ಇದು ವಿಶೇಷವಾಗಿ ಮೀನುಸಾಕಣೆಗೆ ಅತ್ಯಂತ ಪ್ರಶಸ್ತವಾದ ಅಂಶ. ನೀರಿನಲ್ಲಿ ನೈಟ್ರೇಟ್ ಪ್ರಮಾಣ ಅತಿ ಕಡಿಮೆ ಮತ್ತು ಅಮೋನಿಯ ಇಲ್ಲವೇ ಇಲ್ಲ. ತೇಲು ಸಸ್ಯಗಳಿದ್ದರೂ ಅವುಗಳ ಪ್ರಮಾಣ ಕಡಿಮೆ. ಹಾಗೆಯೇ ಕೆರೆಯಲ್ಲಿ ಮುಳುಗಿರುವ ಕಲ್ಲುಗಳ ಮೇಲೆ ಬೆಳೆಯುವ ಸಸ್ಯಗಳ ಪ್ರಮಾಣ ಹೆಚ್ಚು. ಜಲಚರಗಳಲ್ಲಿ ಮೃದ್ವಂಗಿಗಳು, ಕೀಟಗಳು, ಮೀನು ಮತ್ತು ಚಿಪ್ಪುಜೀವಿಗಳು ಕ್ರಮವಾಗಿ ಹೆಚ್ಚು ಪ್ರಮಾಣದಲ್ಲಿವೆ. ಮೃಗಾಲ್, ಕಾಟ್ಲಾ ಮೀನುಗಳಿಗಿಂತ ರೋಹು ಮತ್ತು ಕಾರ್ಪ್ ಮೀನು ತಳಿಗಳನ್ನು ಇಲ್ಲಿ ಹೆಚ್ಚು ಬೆಳೆಸಿದ್ದಾರೆ. ರಾಜ್ಯದ ಮೀನುಗಾರಿಕೆ ಇಲಾಖೆಯ ಮೀನು ಉತ್ಪಾದನಾ ಫಾರ್ಮ್‍ಗಳಲ್ಲಿ ಇದೂ ಒಂದು. ಜಲಾನಯನ ಪ್ರದೇಶದಲ್ಲಿ ಕೃಷಿಗೆ ಬಳಸುತ್ತಿರುವ ಕೃಷಿ ಕೀಟನಾಶಕ ಮುಂದೆ ಈ ಕೆರೆಯನ್ನು ಮಲಿನಗೊಳಿಸಬಹುದೆಂಬ ಎಚ್ಚರಿಕೆಯನ್ನು ತಜ್ಞರು ಕೊಟ್ಟಿದ್ದಾರೆ. ಸ್ಥಳೀಯ ಮೀನುಗಳು ಈ ಕೆರೆಯಿಂದ ಕಣ್ಮರೆಯಾಗಿರುವ ಬಗ್ಗೆ ವರದಿಗಳಿವೆ.

ಒಂದು ಕೆರೆ ಅತ್ಯಂತ ಆರೋಗ್ಯಕರ ಪರಿಸರ ಹೊಂದಿದ್ದರೆ ಅದು ಹೇಗೆ ಒಂದು ಸಂಪನ್ಮೂಲವಾಗುತ್ತದೆ ಎಂಬುದಕ್ಕೆ ಸೂಳೆಕೆರೆ ಒಂದು ಜೀವಂತ ನಿದರ್ಶನ. ಇಲ್ಲಿ ಒಳನಾಡು ಮೀನುಗಾರಿಕೆ ಸಹಕಾರ ಸಂಘವಿದೆ. ಈ ಕೆರೆಯಿಂದ ವಾರ್ಷಿಕ ೩೫ ಲಕ್ಷ ಟನ್ನು ಮೀನು ಸಂಗ್ರಹವಾಗುತ್ತದೆ.

ಕೆರೆ ಪರಿಸರ

ನಗರಗಳ ಕೆರೆಗಳ ಪರಿಸರ

ಕೆರೆಗಳ ಅಸ್ತಿತ್ವಕ್ಕೆ ದೊಡ್ಡ ಕುತ್ತು ಬಂದಿರುವುದು ನಗರಗಳಲ್ಲೇ-ಅದೂ ಮಹಾನಗರಗಳಲ್ಲಿ. ನಗರಗಳು ಬೆಳವಣಿಗೆ ತೋರಿಸಿದಂತೆ ಅವು ಹಾಕುವ ಒತ್ತಡ ಅನೇಕ ಕ್ಷೇತ್ರಗಳ ಮೇಲೆ ನಿಚ್ಚಳವಾಗಿ ಕಂಡುಬರುತ್ತದೆ. ನಗರ ಬೆಳವಣಿಗೆಗೆ ಹಲವು ಆಯಾಮಗಳಿವೆ. ಗ್ರಾಮೀಣ ಭಾಗಗಳಿಂದ ಉದ್ಯೋಗ ಅರಸಿ ಬರುವವರ ಸಂಖ್ಯೆ ದೊಡ್ಡದಾಗಿದೆ. ಕೃಷಿ ತೊರೆದು ನಗರವಾಸಿಗಳಾಗಲು ಜನ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಬಹುಮುಖ್ಯವಾಗಿ ನೆಲ ಮತ್ತು ನೀರಿನ ಮೇಲೆ ಅತ್ಯಂತ ಹೆಚ್ಚು ಒತ್ತಡ ಬೀಳುತ್ತದೆ. ನಿವೇಶನಗಳ ಬೆಲೆ ಕೈಮೀರಿ ಹೋಗುತ್ತದೆ. ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ದೆಹಲಿ, ಚೆನ್ನೈ ಎಲ್ಲ ಕಡೆಯಲ್ಲೂ ನಗರೀಕರಣ ಭರದಿಂದ ಸಾಗಿದೆ. ನೆಲಬಾಕ ಸಂಸ್ಕೃತಿಗೆ ಇದು ಇಂಬುಕೊಟ್ಟಿದೆ. ಕಾನೂನನ್ನು ಮೀರಿ ಸಾಗಿರುವ ಕೆರೆಗಳ ಒತ್ತುವರಿ, ಕೆರೆಯಂಗಳದಲ್ಲೂ ತಲೆ ಎತ್ತಿರುವ ಅನೇಕ ಕಟ್ಟಡಗಳು, ಜಲಾನಯನ ಪ್ರದೇಶ ಕಣ್ಮರೆಯಾಗಿರುವುದು ಇವೆಲ್ಲವೂ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಳೆದ ಹದಿನೈದು ವರ್ಷಗಳಲ್ಲಿ ಹೈದರಾಬಾದ್ ನಗರ ೩,೨೪೫ ಹೆಕ್ಟೇರಿನಷ್ಟು ಕೆರೆಗಳನ್ನು ಕಳೆದುಕೊಂಡಿದೆ. ಚೆನ್ನೈ ಸ್ಥಿತಿ ಇದಕ್ಕಿಂತಲೂ ಘೋರ. ಕಳೆದ ಶತಮಾನದಲ್ಲಿ ಅಲ್ಲಿ ೬೫೦ ಕೆರೆಗಳಿದ್ದವು, ಈಗ ಅವು ೩೦ಕ್ಕೆ ಇಳಿದಿವೆ. ೨೦೧೨ರಲ್ಲಿ ೧,೧೩೦ ಹೆಕ್ಟೇರಿನಿಂದ ೬೪೫ ಹೆಕ್ಟೇರಿಗೆ ಕುಗ್ಗಿಹೋಗಿವೆ. ಇದರ ನೇರ ಪರಿಣಾಮ ಆ ನಗರಕ್ಕೆ ತಟ್ಟಿದೆ. ಅಂತರ್ಜಲ ಮಟ್ಟ ಕೆಳಕ್ಕೆ ಇಳಿದಿದೆ. ಕಳೆದ ಡಿಸೆಂಬರ್‍ನಲ್ಲಿ ಪ್ರಳಯ ರೂಪವಾಗಿ ಕಾಡಿದ ಜಲಪ್ರವಾಹಕ್ಕೆ ಅಲ್ಲಿನ ಕೆರೆಗಳು ನಾಶವಾಗಿರುವುದೂ ಒಂದು ಕಾರಣ. ಏಕೆಂದರೆ ಹೆಚ್ಚುವರಿ ಮಳೆನೀರನ್ನು ಹಿಡಿದಿಡುವ ಸಾಮರ್ಥ್ಯ ಈ ಕೆರೆಗಳಿಗಿತ್ತು. ಅಹಮದಾಬಾದಿನಲ್ಲಿ ೨೦೦೨ ರಲ್ಲಿ ೨೩೫ ಕೆರೆಗಳಿದ್ದವು. ಮುಂದಿನ ಹತ್ತು ವರ್ಷಗಳಲ್ಲಿ ಶೇ. ೬೦ ಭಾಗ ಕೆರೆಗಳು ಕಣ್ಮರೆಯಾದವು. ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಕೆರೆಗಳ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ದೆಹಲಿಯ ಉದ್ಯಾನ ಮತ್ತು ತೋಟಗಳ ಅಭಿವೃದ್ಧಿ ಸಂಘ ವರದಿ ಮಾಡಿರುವಂತೆ ೬೧೧ ಕೆರೆಗಳ ಪೈಕಿ ೨೭೪ ಕೆರೆಗಳು ಬತ್ತಿಹೋಗಿವೆ. ೧೮೦ ಕೆರೆಗಳನ್ನು ಜೀರ್ಣೋದ್ಧಾರ ಮಾಡಲಾಗದ ಸ್ಥಿತಿ ಇದೆ.

ಕೆರೆಗಳನ್ನು ನುಂಗಿ ಬೆಳೆದಿರುವ ಮಹಾ ನಗರಗಳ ಪೈಕಿ ಬೆಂಗಳೂರು ಒಂದು. ೧೯೬೦ರ ದಶಕದಲ್ಲಿ ೨೮೦ ಕೆರೆಗಳಿದ್ದವು. ಇವುಗಳನ್ನು ಪರಸ್ಪರ ಸಂಪರ್ಕಿಸುವ ರಾಜ ಕಾಲುವೆಗಳಿದ್ದವು. ಕೆರೆ ತುಂಬಿದಾಗ ಕೋಡಿ ನೀರು ಹರಿದು ಮುಂದಿನ ಕೆರೆಯನ್ನು ತುಂಬುತ್ತಿತ್ತು. ನಗರದ ಉತ್ತರ ಭಾಗದ ಜಕ್ಕೂರು ಕೆರೆ, ಹೆಬ್ಬಾಳ ಕೆರೆ, ನಾಗವಾರ ಕೆರೆ ತುಂಬಿಬಂದಾಗ ಅವು ದಕ್ಷಿಣ ಭಾಗದ ಕಲ್ಕೆರೆ, ಮಾರಗೊಂಡನಹಳ್ಳಿ ಕೆರೆ, ವರ್ತೂರು, ಬೆಳ್ಳಂದೂರು ಕೆರೆಗಳನ್ನು ತುಂಬುತ್ತಿದ್ದವು. ಈ ನೀರು ಕೃಷಿಗೆ ಬಳಕೆಯಾಗುತ್ತಿತ್ತು. ಸದ್ಯದಲ್ಲಿ ೮೦ ಕೆರೆಗಳನ್ನು ನಗರ ಭಾಗದಲ್ಲಿ ಗುರುತಿಸಬಹುದು. ನೀರು ತುಂಬಿದ ಕೆರೆಗಳು ಬರಿ ೩೪. ಬೆಂಗಳೂರು ಕೆರೆಗಳ ಬಗ್ಗೆ ಸರ್ಕಾರ, ಕಾರ್ಪೋರೇಷನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದವು ಕಾಳಜಿ ವಹಿಸಿದರೂ ಅದು ಬಹು ತಡವಾಗಿತ್ತು. ಆ ಹೊತ್ತಿಗೆ ಎಷ್ಟೋ ಕೆರೆಗಳು ಕಣ್ಮರೆಯಾಗಿದ್ದವು. ‘ಲ್ಯಾಂಡ್ ಮಾಫಿಯಾ’ ಕೆರೆ ಒತ್ತುವರಿಯಲ್ಲಿ ಆಸಕ್ತಿ ತೋರಿ ನ್ಯಾಯಬಾಹಿರವಾಗಿ ಹಣವನ್ನು ಕೊಳ್ಳೆಹೊಡೆಯಿತು. ಬೆಂಗಳೂರಿನ ಎಷ್ಟೋ ಕೆರೆಗಳನ್ನು ನುಂಗಿಹಾಕಿ ಬಡಾವಣೆಗಳು ಬೆಳೆದಿವೆ. ಇದಕ್ಕೆ ೨೮ ಕೆರೆಗಳು ಬಲಿಯಾಗಿವೆ. ಇಂದಿನ ಗಾಂಧಿಬಜಾರು, ಬಸವನಗುಡಿ ಭಾಗದಲ್ಲಿ ಹಿಂದೆ ಕಾರಂಜಿ ಕೆರೆ ಇತ್ತು. ಅಕ್ಕಿತಿಮ್ಮನಹಳ್ಳಿಯ ಕೆರೆಯನ್ನು ಕಬಳಿಸಿ ವಿಲ್ಸನ್ ಗಾರ್ಡನ್ ಹುಟ್ಟಿತು. ತಾವರೆಕೆರೆ, ಭೈರಸಂದ್ರ ಕೆರೆಗಳನ್ನು ನುಂಗಿ ಜಯನಗರ ಬಡಾವಣೆ ಬೆಳೆಯಿತು. ಕೋಡಿಚಿಕ್ಕನಹಳ್ಳಿ ಕೆರೆ, ಅರಕೆರೆ, ಹುಳಿಮಾವು ಕೆರೆ, ರೂಪೇನ ಅಗ್ರಹಾರ ಕೆರೆಗಳನ್ನು ನುಂಗಿ ಬಿ.ಟಿ.ಎಂ. ಬಡಾವಣೆ ತಲೆಯೆತ್ತಿತು. ಉತ್ತರಹಳ್ಳಿ, ಯಲಚೇನಹಳ್ಳಿ, ಹಾಲದೇವನಹಳ್ಳಿ, ಬಿಕಾಸಿಪುರ ಕೆರೆಗಳನ್ನು ಕಬಳಿಸಿ, ಬನಶಂಕರಿ ಐದನೇ ಹಂತ ತಲೆ ಎತ್ತಿದೆ. ಆಲಹಳ್ಳಿ, ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿ ಕೆರೆಗಳು ಜೆ.ಪಿ.ನಗರ ೯ನೇಹಂತಕ್ಕೆ ಬಲಿಯಾಗಿವೆ. ಪ್ರತಿಷ್ಠಿತ ಕೆಂಪೇಗೌಡ ಬಸ್ ನಿಲ್ದಾಣ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಈಗಿರುವ ಸಿಟಿ ಮಾರ್ಕೆಟ್‍ನಲ್ಲಿ ಸಿದ್ಧಿಕಟ್ಟೆ ಎಂಬ ಕೆರೆ ಇತ್ತು. ಸರ್ಕಾರ ಕಣ್ಣುಬಿಟ್ಟು ನೋಡಿದ್ದು ೧೯೮೫ರಲ್ಲಿ. ಸರ್ಕಾರದ ಆದೇಶದಂತೆ ಎನ್. ಲಕ್ಷ್ಮಣರಾವ್ ಅವರು ನೀಡಿದ ವರದಿಯಿಂದ. ಆ ಸಮಯದಲ್ಲಿ ನಗರದ ಸುತ್ತಮುತ್ತಲ ೧೦೮ ಕೆರೆಗಳಿಗೆ ಸಂಬಂಧಿಸಿದಂತೆ ೫೦೦ ಎಕರೆ ಜಾಗ ಒತ್ತುವರಿಯಾಗಿತ್ತು.

ಬೆಂಗಳೂರು ಕೆರೆಯ ನಿರ್ವಹಣೆಯಲ್ಲಂತೂ ಸದಾ ಗೊಂದಲವೇ ತುಂಬಿದೆ. ಆಡಳಿತಾತ್ಮಕವಾಗಿ ಬೆಂಗಳೂರಿನ ಕೆರೆಗಳು ಒಂದು ಸಂಸ್ಥೆಯ ಉಸ್ತುವಾರಿಯಲ್ಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ೧೨೩ ಕೆರೆಗಳನ್ನು, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ೬೦ ಕೆರೆಗಳನ್ನೂ, ಅರಣ್ಯ ಇಲಾಖೆ ೫ ಕೆರೆಗಳನ್ನೂ, ಸಣ್ಣ ನೀರಾವರಿ ಯೋಜನೆ ೧೮ ಕೆರೆಗಳನ್ನು, ಕೆರೆ ಅಭಿವೃದ್ಧಿ ಪ್ರಾಧಿಕಾರ ೪ ಕೆರೆಗಳನ್ನು ನಿರ್ವಹಿಸುವ ಹೊಣೆಯನ್ನು ಹೊತ್ತವು. ಆದರೆ ಈ ಸಂಸ್ಥೆಗಳ ನಡುವ ನಿಜವಾದ ಸಮನ್ವಯ ಇಲ್ಲದೆ ಕೆರೆ ಅಭಿವೃದ್ಧಿ ಬೇರೆ ಬೇರೆ ದಾರಿ ಹಿಡಿಯಿತು.

ಬೆಂಗಳೂರು ಕೆರೆಗಳಿಗೆ ಕುತ್ತು ತಂದಿರುವುದು ನಮ್ಮ ಒಳಚರಂಡಿ ವ್ಯವಸ್ಥೆ. ಕಲುಷಿತ ನೀರು, ಗೃಹತ್ಯಾಜ್ಯ, ಕಾರ್ಖಾನೆ ತ್ಯಾಜ್ಯ, ಇವೆಲ್ಲವೂ ಕೆರೆಗಳಿಗೇ ಹರಿಯುವಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಯಿತು. ಕೆರೆಗಳು ತುಂಬಿಬರಲು ಜಲಾನಯನದ ಭಾಗ ಸುರಕ್ಷಿತವಾಗಿರಬೇಕು. ಈ ಪ್ರದೇಶವೆಲ್ಲ ವಸತಿ ಕಟ್ಟಡಗಳಿಂದ ತುಂಬಿಹೋದ ಮೇಲೆ ಕೆರೆಗೆ ಹರಿದುಬರುವ ನೀರಿನ ಮೇಲೆ ದೊಡ್ಡ ಪರಿಣಾಮ ಬೀರಿತು. ಇನ್ನು ಲಾಗಾಯ್ತಿನಿಂದ ತುಂಬುತ್ತಿದ್ದ ಹೂಳು ತೆಗೆಯಲು ಕೋಟ್ಯಂತರ ರೂಪಾಯಿ ಬೇಕಾಯಿತು. ಬೆಂಗಳೂರು ನಗರ ಪಾಲಿಕೆ ‘ಕೆರೆಸಿರಿ’ ಯೋಜನೆಯಲ್ಲಿ ಹಲವು ಕೆರೆಗಳ ಪುನಶ್ಚೇತನ ಮಾಡಿದರೂ (ಉದಾ: ಎಡೆಯೂರು ಕೆರೆ), ಆ ಭಾಗ್ಯ ಎಲ್ಲ ಕೆರೆಗಳಿಗೂ ಸಿಕ್ಕಲಿಲ್ಲ. ಹಲಸೂರು ಕೆರೆ ಈಗಲೂ ಮಿಲಿಟರಿ ಆಡಳಿತದಲ್ಲೇ ಇದೆ. ಅಲ್ಲಿ ಆಗಾಗ್ಗೆ ಸತ್ತ ಮೀನುಗಳೂ ರಾಶಿರಾಶಿ ಬೀಳುವುದು ಸರ್ವಸಾಮಾನ್ಯವಾಗಿದೆ. ಅಲ್ಲಿ ನೀರಿನಲ್ಲಿ ವಿಲೀನವಾದ ಆಕ್ಸಿಜನ್ ಪ್ರಮಾಣ ಕಡಿಮೆ. ಹೀಗಾಗಿ ಮತ್ತೆ ಮತ್ತೆ ಈ ಅವಘಡ ಸಂಭವಿಸುತ್ತಿದೆ. ಚರಂಡಿ ನೀರನ್ನು ಇಲ್ಲಿಗೆ ಬಿಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಹೆಬ್ಬಾಳ, ಮಡಿವಾಳ ಮತ್ತು ದೊಡ್ಡ ಬೊಮ್ಮಸಂದ್ರ ಕೆರೆಗಳ ಅಭಿವೃದ್ಧಿಗೆ ಇಂಡೋ ನಾರ್ವೇ ಎನ್ವಿರಾನ್‍ಮೆಂಟಲ್ ಪ್ರಾಜೆಕ್ಟ್ ನೆರವಿಗೆ ಬರಬೇಕಾಯಿತು. ವರ್ತೂರು ಕೆರೆ (೪೧೧.೨೧ ಎಕರೆ) ಕೆಲವು ವರ್ಷಗಳಿಂದ ಭಾರಿ ಸುದ್ಧಿ ಮಾಡುತ್ತಿದೆ. ಕೆರೆಯ ತುಂಬ ನೊರೆ ಕಾಣಿಸಿಕೊಳ್ಳುತ್ತಿದೆ. ಇದರ ಮೂಲ ಹುಡುಕುವುದು ಕಷ್ಟವೇನಲ್ಲ. ಇಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಗೃಹ ತ್ಯಾಜ್ಯ ಬರುತ್ತಿದೆ. ಕಾರ್ಖಾನೆಗಳ ತ್ಯಾಜ್ಯವೂ ಸೇರುತ್ತಿದೆ. ಶುದ್ಧೀಕರಣದ ವ್ಯವಸ್ಥೆ ಸಾಲದು. ಹತ್ತಾರು ರಾಸಾಯನಿಕಗಳು ಇದರಲ್ಲಿ ವಿಲೀನವಾಗಿದೆ. ಮನೆಯಲ್ಲಿ ಬಳಸುವ ಡಿಟರ್ಜೆಂಟಗಳಿಂದಾಗಿ ನೊರೆ ಹೆಚ್ಚುತ್ತಿದೆ. ಫಾಸ್ಪೇಟ್ ಅಂಶ ಕೆರೆಗೆ ಸೇರುತ್ತಿದೆ. ಇದನ್ನೇ ಆಧರಿಸಿ ಭರ್ಜರಿಯಾಗಿ ಕಳೆ ಬೆಳೆಯುತ್ತಿದೆ. ಬೆಂಗಳೂರಿನ ಶೇ.೪೦ ಭಾಗದ ಕೊಳಚೆ ನೀರು ವರ್ತೂರು ಕೆರೆಗೆ ಹರಿಯುತ್ತಿದೆ. ಹಾಗೆಯೇ ಅಮಾನಿಕೆರೆಯ ಸ್ಥಿತಿಯೂ ಹೀನಾಯವಾಗಿದೆ. ಈ ಕೆರೆಗೆ ಅಧಿಕ ಪ್ರಮಾಣದ ಹೈಡ್ರೋ ಕಾರ್ಬನ್ ಸೇರಿರುವುದರಿಂದ ಆಗಾಗ ಬೆಂಕಿ ಕಾಣಿಸಿಕೊಳ್ಳುವ ಅಪರೂಪದ ಘಟನೆಯೂ ನಡೆಯುತ್ತದೆ. ಜೊಂಡು, ಅದನ್ನು ಆಶ್ರಯಿಸಿರುವ ಬ್ಯಾಕ್ಟೀರಿಯಗಳು ಬಿಡುವ ಅಮೋನಿಯ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಈ ನೀರನ್ನು ಯಾವುದಕ್ಕೂ ಬಳಸದ ಸ್ಥಿತಿ ಉಂಟಾಗಿದೆ.

ಹಿಂದೆ ಬೆಂಗಳೂರಿನ ಅನೇಕ ಕೆರೆಗಳು ವಿಗ್ರಹ ವಿಸರ್ಜನೆಯ ಜಾಗಗಳಾಗಿದ್ದವು. ವಿಗ್ರಹಗಳ ಪೇಂಟ್‍ನಲ್ಲಿದ್ದ ಸೀಸದ ಅಂಶವು ನೀರಿಗೆ ಸೇರುತ್ತಿತ್ತು. ಅದನ್ನು ನಿವಾರಿಸಲು ಕೆಲವು ಕೆರೆಗಳಲ್ಲಿ ಪ್ರತ್ಯೇಕ ಸಣ್ಣ ಗುಂಡಿಗಳನ್ನು ತೋಡಿ ವಿಗ್ರಹ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಲಾಲ್‍ಬಾಗ್ ಕೆರೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಅಲ್ಲಿ ಯಥೇಚ್ಛವಾಗಿ ವೃಕ್ಷಗಳಿರುವುದರಿಂದ ಅನೇಕ ಬಗೆಯ ಪಕ್ಷಿಗಳನ್ನು ಅಲ್ಲಿ ಕಾಣಬಹುದು. ಹೆಬ್ಬಾಳ ಕೆರೆ ೧೮೨ ಎಕರೆ ಇದ್ದದ್ದು ರೈಲ್ವೆ ಇಲಾಖೆ ೨೮ ಎಕರೆಯನ್ನು ಸ್ವಾಧೀನಮಾಡಿಕೊಂಡಿತು. ಈ ಕೆರೆಯ ಜೀರ್ಣೊದ್ಧಾರಕಕ್ಕಾಗಿ ೨೭೦ ಲಕ್ಷ ರೂಪಾಯಿಗಳನ್ನು ಮೀಸಲಾಗಿಟ್ಟಿತ್ತು. ಹೆಬ್ಬಾಳ ಕೆರೆಯ ವಿಶೇಷವೆಂದರೆ ಅದು ಹೆದ್ದಾರಿಯ ಬಳಿ ಇದ್ದರೂ, ಕೂಗಳತೆಯೆ ದೂರದಲ್ಲಿ ಪ್ಲೈಓವರ್ ಇದ್ದರೂ, ಕೆರೆ ಪಕ್ಷಿಗಳಿಗೆ ಆಶ್ರಯ ನೀಡಿದೆ. ಕೆರೆಗಳು ಅಂತರ್ಜಲ ಭಂಡಾರವನ್ನು ಹೆಚ್ಚಿಸುವುದು ಸಾಮಾನ್ಯರಿಗೂ ತಿಳಿದ ಸಂಗತಿ. ಕೆರೆಗಳು ಕಣ್ಮರೆಯಾಗುತ್ತಿದ್ದರೆ, ನಗರ ಸ್ಥಳಗಳೆಲ್ಲವೂ ಕಾಂಕ್ರೀಟ್‍ಮಯವಾದರೆ ಮಳೆನೀರು ಹಿಂಗುವುದು ಹೇಗೆ? ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ೨೦೦ ಕಿಲೋ ಮೀಟರ್ ಆಳಕ್ಕೆ ಕೊಳವೆ ಬಾವಿ ತೋಡಿದರೂ ನೀರು ಬರುತ್ತಿಲ್ಲ. ಇದೆಲ್ಲ ನಗರೀಕರಣದ ಪರಿಣಾಮ.

ಈಗ ಬೆಂಗಳೂರಿನ ಕೆರೆಗಳ ಉಸ್ತುವಾರಿ ನೋಡಿಕೊಳ್ಳಲು ಸರ್ಕಾರ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಿದೆ. ಹಾಗಾಗಿ ಹಿಂದೆ ಅರಣ್ಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕೆರೆ ಪ್ರಾಧಿಕಾರ ನಿರ್ವಹಿಸುತ್ತಿದ್ದ ಕೆಲಸವನ್ನು ಒಂದು ಛತ್ರದಡಿ ತರಲಾಗಿದೆ. ಕೆರೆಗಳ ಸಂರಕ್ಷಣೆ ಎಂದರೆ ಅವುಗಳ ದುರಸ್ತಿ, ಏರಿಯ ಸುತ್ತ ಪರಿಸರವನ್ನು ವೃದ್ಧಿಸುವುದು, ಹೂಳು ತೆಗೆಯುವುದು, ಸಾಧ್ಯವಿದ್ದ ಕಡೆ ಮನೋರಂಜನೆಗೆ ಅನುಕೂಲ ಕಲ್ಪಿಸುವ ಹೊಣೆಯೂ ಇರುತ್ತದೆ. ಕೆರೆಗಳ ವಿಸ್ತೀರ್ಣದ ಬಗ್ಗೆ ಮತ್ತೆ ಸಮೀಕ್ಷೆ ಮಾಡಿ ಹೊಸ ಮಾಹಿತಿಯ ಮೇರೆಗೆ ಕೆರೆಗಳ ಅಭಿವೃದ್ಧಿ ಮಾಡುವುದು ಈ ಸಂಸ್ಥೆಯ ಗುರಿ.

ಬೆಳ್ಳಂದೂರು ಮತ್ತು ಅದರ ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಎರಡು ಕಟ್ಟಡ ನಿರ್ಮಾಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳನ್ನು ಕಟ್ಟಿವೆ. ಇದನ್ನು ಗಮನಿಸಿದ ರಾಷ್ಟ್ರೀಯ ಹಸುರು ನ್ಯಾಯಾಧೀಕರಣ (ಎನ್.ಜಿ.ಟಿ.) ಆ ಎರಡೂ ನಿರ್ಮಾಣ ಸಂಸ್ಥೆಗಳಿಗೆ ತಲ್ ೧೧೭ ಕೋಟಿ ರೂಪಾಯಿ ಮತ್ತು ೧೩.೫ ಕೋಟಿ ರೂಪಾಯಿ ದಂಡವಿದಿಸಿದೆ. ಒತ್ತುವರಿಮಾಡಿದ ೩.೭ ಎಕರೆ ಕರೆ ಜಾಗವನ್ನು ಹಿಂತಿರುಗಿಸಲು ಸೂಚಿಸಿದೆ. ರಾಜಾಕಾಲುವೆಯ ೫೦ ಮೀಟರ್ ಪಾಸಲೆಯಲ್ಲಿ ಯಾವುದೇ ನಿರ್ಮಾಣ ಮಾಡಬಾರದೆಂದು ಕಟ್ಟಳೆ ಮಾಡಿದೆ. ಇಂಥ ದಿಟ್ಟ ಕ್ರಮದಿಂದ ಮಾತ್ರ ಬೆಂಗಳೂರಿನ ಕೆರೆಗಳನ್ನು ಉಳಿಸಿಕೊಳ್ಳಬಹುದೇನೋ.

ಕೆರೆ ಪರಿಸರ

——————————————————————————————————————————————-

Categories
ಟಿ. ಜಿ. ಶ್ರೀನಿಧಿ ವಿಜ್ಞಾನ

ಪರಮಾಣು ಸುರಕ್ಷತೆ

ಕೃತಿ:ಟಿ. ಜಿ. ಶ್ರೀನಿಧಿ ಲೇಖನಗಳು
ಲೇಖಕರು ಟಿ. ಜಿ. ಶ್ರೀನಿಧಿ
ಕೃತಿಯನ್ನು ಓದಿ

Categories
ಲೇಖನಗಳು ವ್ಯಕ್ತಿಚಿತ್ರ ಸಾಹಿತ್ಯ

ವ್ಯಕ್ತಿಚಿತ್ರ – ಅನ್ನದಾನಯ್ಯ ಪುರಾಣಿಕ

ಶ್ರೀ ಅನ್ನದಾನಯ್ಯ ಪುರಾಣಿಕಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ನಿಜಾಮ್ ಸೇನೆಯ ಗುಂಡಿಗೆ ಬೆದರದೆ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪೋಲಿಸರ ಮತ್ತು ಕನ್ನಡ ಮತ್ತು ಏಕೀಕರಣ ವಿರೋಧಿಗಳ ಹಿಂಸೆಗೆ ಜಗ್ಗದೆ, ನಾಡು-ನುಡಿಗಾಗಿ ಕಳೆದ 67 ವರ್ಷಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ, ನಿರಂತರ, ಅಪ್ರತಿಮ ಸೇವೆ ಸಲ್ಲಿಸಿದವರು. ಗಾಂಧಿವಾದಿ, ಕನ್ನಡ ಕಣ್ಮಣಿ 87 ವರ್ಷದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ಪ್ರೀತಿ ನನ್ನ ಮತ, ಸೇವೆ ನನ್ನ ವ್ರತ ಎಂದು ಬಾಳಿದ ಈ ಸಜ್ಜನರ ಜೀವನ-ಸಾಧನೆ-ಕನ್ನಡ ಪ್ರೇಮ ಎಲ್ಲಾ ಕನ್ನಡಿಗರಿಗೂ ಪ್ರೇರಣೆಯಾಗಿದೆ.

ಕನ್ನಡ ನುಡಿ, ಗಡಿ ಮತ್ತು ಗುಡಿಗಳ ರಕ್ಷಣೆಗೆ ಮತ್ತು ನಡಕಟ್ಟಿದ ಕಟ್ಟಾಳು, ಚತುರ ಮತ್ತು ಸಮರ್ಥ ಸಂಘಟಕ, ಆರ್ಥಿಕ ಸಂಕಷ್ಟದಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಜೀವ ನೀಡಿದ ಭೂತಪೂರ್ವ ಗೌರವ ಕಾರ್ಯದರ್ಶಿ, ಪರಿಷತ್ತಿನ ಮುಖವಾಣಿ “ಕನ್ನಡ ನುಡಿ”ಯ ಮಾಜಿ ಸಂಪಾದಕ, ಪ್ರಪ್ರಥಮ ಕನ್ನಡ-ನಿಘಂಟು ಪ್ರಕಟಣೆ ಮತ್ತು ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳ ರೂವಾರಿ, ಕರ್ನಾಟಕ ಭಾಷಾ ಆಯೋಗ ಮತ್ತು ಕರ್ನಾಟಕ ಗೆಜೆಟಿಯರ್ ಸಮಿತಿಯ ಮತ್ತು ಅಖಿಲ ಭಾರತ ವಕೀಲರ ಪರಿಷತ್ತಿನ ಮಾಜಿ ಸದಸ್ಯ, ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕ ಮತ್ತು ಪ್ರಥಮ ಪ್ರಧಾನ ಕಾರ್ಯದರ್ಶಿ, ಸಾವಿರಾರು ಜನ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ನ್ಯಾಯ ಒದಗಿಸಿಕೊಟ್ಟ ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ, ಪ್ರಸಿದ್ಧ ವಾಗ್ಮಿ, ಪ್ರಧ್ಯಾಪಕ, ಕವಿ, ಲೇಖಕ, ಚಿಂತಕ, ವಿಮರ್ಶಕ, 3000ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಖ್ಯಾತ ಅಧುನಿಕ ವಚನಕಾರ, ಕಟ್ಟಾ ಗಾಂಧೀವಾದಿ – ಶ್ರೀ ಅನ್ನದಾನಯ್ಯ ಪುರಾಣಿಕರನ್ನು ವರ್ಣಿಸುವುದು ಹೇಗೆ? ಯಾವ ವರ್ಣನೆಯೂ ಕಡಮೆಯೇ !

ಅಂದಿನ ನಿಜಾಂ ಸಂಸ್ಥಾನದ ರಾಯಚೂರು ಜಿಲ್ಲೆಯ, ಇಂದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ( 8 ಮಾರ್ಚ 1928)ರಂದು ಜನಿಸಿದ ಪುರಾಣಿಕರ ತಂದೆ ಖ್ಯಾತ ಪ್ರವಚನಕಾರ, ವೈದ್ಯರು ಮತ್ತು ಕವಿಗಳಾಗಿದ್ದ ಪಂಡಿತ ಕಲ್ಲಿನಾಥಶಾಸ್ತ್ರೀಗಳು ಮತ್ತು ತಾಯಿ ದಾನದ ಪ್ರತಿರೂಪವೇ ಆಗಿದ್ದ ದಾನಮ್ಮ. ಆ ಭಾಗದ ಓರ್ವ ಮಹಾತಪಸ್ವಿಗಳ ಕೃಪಾಶಿರ್ವಾದದ ಬಲ ಪಡೆದುಕೊಂಡೇ ನನ್ನ ಮಗ ಹುಟ್ಟಿದ, ಅದಕ್ಕಂದೇ ಆ ತಪಸ್ವಿಗಳ ಹೆಸರನ್ನೇ ನನ್ನ ಮಗನಿಗೆ ( ಅನ್ನದಾನಯ್ಯ) ಎಂದಿಟ್ಟಿರುವೆ – ಎಂದು ಅವರ ತಾಯಿ ಆಗಾಗ ಹೇಳುತ್ತಿದ್ದರು. ಆ ಮಹಾತಪಸ್ವಿಗಳು ಮೆಚ್ಚುವಂತೆ ಜೀವನ ನೆಡೆಸಿದ್ದಾರೆ ಪುರಾಣಿಕರು. ಕಡುಬಡತನದಲ್ಲಿ ಬೆಳೆದ ಅನ್ನದಾನಯ್ಯ ಅಂದಿನಿಂದ ತಮ್ಮ ಕೊನೆಯುಸಿರಿನವರೆಗೂ ಸಮಾಜದಲ್ಲಿರುವ ಬಡವರ ಮತ್ತು ದಮನಿತರ ನೋವು ಮತ್ತು ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಸಹಾಯ ಮಾಡುವ ತನು-ಮನ-ಧನದ ದಾಸೋಹ ನೆಡೆಸಿದ್ದಾರೆ.

ಕುಗ್ರಾಮವೊಂದರಲ್ಲಿ ಬೆಳೆದ, ಶಿಕ್ಷಣ ಪಡೆದ, ಯಾವುದೇ ಶಿಫಾರಸು ಪತ್ರಗಳೂ ಇಲ್ಲದ ಈ ಹಳ್ಳಿಯ ಹೈದ, ಕನ್ನಡ ಕಣ್ಮಣಿಯಾಗಿ, ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದು ಯಾರಾದರೂ ಬೆರಳು ಕಚ್ಚುವಂತಿದೆ. ಅವರ ಈ ಸಾಧನೆಗೆ ಪ್ರೇರಣೆ, ನಿರಂತರ ಪ್ರಚೋದನೆ, ಗುರಿಯತ್ತ ಗಮನಕ್ಕೆ ಬೆಂಗಾವಲಾದ ಕುಗ್ಗದ ಸ್ಥೈರ್ಯ ಮತ್ತು ಅಪಾರ ಸಹನೆಗಳ ರಹಸ್ಯವನ್ನು ಅರಸುವ ಪ್ರಯಾಸವು ಹೃದಯಂಗಮವಾಗಿರುವಂತೆ ಅದು ಉಜ್ವಲವೂ ಆಗಿರುತ್ತದೆ.

ಅನ್ನದಾನಯ್ಯ ಪುರಾಣಿಕರ ಬಾಳಬಟ್ಟೆಗೆ ದಾರಿದೀಪಗಳಾಗಿ ಬೆಳಗುತ್ತಿರುವ ವ್ಯಕ್ತಿಗಳು ಇಬ್ಬರು : ಒಬ್ಬರು ಹನ್ನೆರಡನೆಯ ಶತಮಾನದಲ್ಲಿ ಕಿರಿಯ ವಯಸ್ಸಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಶರಣ ಚೆನ್ನಬಸವಣ್ಣನವರು, ಮತ್ತೊಬ್ಬರು ಹರನ ಮುಡಿಯಿಂದ ಇಳಿದು ಬಾ ತಾಯಿ ಎಂದು ಗಂಗಾವತರಣ ಮಾಡಿಸಿದ ಭಗೀರಥರು. ಬಾಲ್ಯದಲ್ಲಿಯೇ ಪುರಾಣಿಕರ ಭಾವವನ್ನು ಒಳಹೊಕ್ಕ ಮತ್ತು ಮನದಲ್ಲಿ ನೆಲೆನಿಂತ ಈ ಇಬ್ಬರ ಅಮೋಘ ವ್ಯಕ್ತಿತ್ವ ಮತ್ತು ಗೌರಿಶಂಕರ ಸಾಧನೆಗಳು ಪುರಾಣಿಕರ ವ್ಯಕ್ತಿತ್ವ ವಿಕಸನದಲ್ಲಿ “ಸತ್ವದ” ಪಾರಮ್ಯತೆ ಮತ್ತು ಅಂತರಿಕ ಸತ್ವದ ಅದಮ್ಯತೆಗಳನ್ನು ದೃಢಗೊಳಿಸಿದವು.

ತಾನು ಜೀವಿಸಿದ ಕೇವಲ 25 ವರ್ಷಗಳ ಅವಧಿಯಲ್ಲಿ ಚೆನ್ನಬಸವಣ್ಣ ಮಾಡಿದ್ದು, ಸಾಧಿಸಿದ್ದು ಮತ್ತು ಸಿದ್ಧಿಸಿದ್ದು ‘ದಂತಕತೆ’ಯಂತಾಗಿದೆ. ಶರಣರ ಆಂದೋಲನದ ನಾಯಕ ಬಸವಣ್ಣನ ಬಲಗೈಯಾಗಿ, ಬಸವನ ನಡೆ-ನುಡಿಗಳ, ಗುರಿ-ಗಮ್ಯಗಳ ಸೂಕ್ಷ್ಮ ಪರೀಕ್ಷಕನಾಗಿ, ಅನುಭವ ಮಂಟಪದ ಸಾರಥಿಯಾಗಿ, ಧರ್ಮಸೂಕ್ಷ್ಮಗಳ ಸಂಹಿತೆಯ ರೂಪಕನಾಗಿ ಚೆನ್ನಬಸವಣ್ಣ ತಲುಪಿದ ಎತ್ತರ ಹಾಗೂ ಚಲಿಸಿದ ಬಿತ್ತರಗಳು ಪುರಾಣಿಕರಲ್ಲಿ ಅಪಾರವಾಗಿ ಪ್ರಭಾವ ಬೀರಿದವು ಮತ್ತು ಸದಾ ಜಾಗೃತವಾಗಿದ್ದು ದಾರಿ ತೋರಿಸುತ್ತಲಿವೆ. ಚೆನ್ನಬಸವಣ್ಣನಿಂದ ತಾವು ಪಡೆದ ಜೀವನ-ಸಂಜೀವನಿಯ ಪ್ರೇರಣೆಗೆ ಕಾಣಿಕೆ ಎನ್ನುವಂತೆ ಪ್ರಪ್ರಥಮವಾಗಿ ಆತನ ಕೃತಿಗಳನ್ನು ಪರಿಶ್ರಮದಿಂದ ಕಲೆಹಾಕಿ ಶಾಸ್ತ್ರೀಯವಾಗಿ ಶೋಧಿಸಿ ಸಂಪಾದಿಸಿ “ಚೆನ್ನಬಸವ ಸಾಹಿತ್ಯ” ಎಂಬ ಹೆಸರಿನಲ್ಲಿ 1956ನಲ್ಲಿ ಪ್ರಕಟಿಸಿದರು. ಆಗಿನ್ನೂ ಅವರು ಲಾ ಕಾಲೇಜಿನ ವಿದ್ಯಾರ್ಥಿ. ಆ ಕೃತಿಗೆ ಪಂಡಿತ ಪ್ರಕಾಂಢ ಡಾ.ಎಸ್.ಸಿ.ನಂದೀಮಠರು ಅಮೂಲ್ಯವಾದ ಮುನ್ನಡಿ ಬರೆದಿದ್ದು ಪುರಾಣಿಕರ ಸಾಧನೆಯನ್ನು ಮತ್ತು ಕೃತಿಯ ಸತ್ವವನ್ನು ಸೂಚಿಸುತ್ತದೆ. ಆ ಗ್ರಂಥವು ಶರಣ ಸಾಹಿತ್ಯ ಅಧ್ಯಯನಕ್ಕೆ ಹೊಸ ಬಾಗಿಲನ್ನೇ ತೆರೆದದ್ದು ಇತಿಹಾಸ.

ಭಗೀರಥ ಹರನ ಜಟಾಜೂಟದಿಂದ ಗಂಗೆಯನ್ನು ಪ್ರಯಾಸಪಟ್ಟು ಧರೆಗೆ ಇಳಿಸಿದ ಧೀರ, ಅಸದೃಶ ಸಾಧಕ. ದೃಢ ಸಂಕಲ್ಪ, ಸಂಕಲ್ಪಕ್ಕೆ ಅನುಗುಣವಾದ ಕ್ರಿಯಾಕಲ್ಪ, ಸವೆಯದ ಸಹನೆ, ಯೋಜನೆಯ ಹೆಜ್ಜೆ, ಹೆಜ್ಜೆಗೆ ಅನಿವಾರ್ಯವಾಗಿರುವ ಸಂಪನ್ಮೂಲಗಳ ಶೇಖರಣೆ ಮತ್ತು ಸದೂಪಯೋಗ – ಇವುಗಳ ಸಂಕೇತನಾಗಿದ್ದಾನೆ ಭಗೀರಥ. ಅವನ ಬಗ್ಗೆ ಪುರಾಣಿಕರಿಗೆ ಎಷ್ಟು ಪರಿಯ ಅಭಿಮಾನವೆಂದರೆ, ಅವನ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಒಂದು ಚರಿತ್ರೆಯನ್ನೇ 1960 ರಲ್ಲಿ ಬರೆದರು. ಅದು ಕನ್ನಡ ಯುವಜನಾಂಗಕ್ಕೆ ಪ್ರೇರಣೆಯಾಗಿರಲಿ ಎಂಬ ಆಶಯದಿಂದ ಅರ್ಪಿಸಿದರು. ಅದು ಶಿಕ್ಷಣ ಕ್ರಮ ನಿರ್ಮಿಸುವ ಮಂದಿಗಾಗಲಿ, ಮಕ್ಕಳನ್ನು ಹೆತ್ತ ತಂದೆತಾಯಂದಿರಿಗಾಗಲಿ ಎಂದಿಗೂ ಒಂದು ಪ್ರೇರಣೆಯ ಪಾಠವಾಗಿದೆ. ರಾಜ್ಯ ಸಾಹಿತ್ಯ ಅಕೆಡೆಮಿಯ ಪ್ರಶಸ್ತಿಯನ್ನು ಈ ಪುಸ್ತಕ್ಕೆ ನೀಡಲಾಗಿದೆ.

ಚೆನ್ನಬಸವಣ್ಣ ಮತ್ತು ಭಗೀರಥರಿಂದ ಕಲಿತ ಪಾಠವೆಂದರೆ ಯಾವುದೇ ಸಮಸ್ಯೆಯಿರಲಿ, ಅದನ್ನು ಹಿಮ್ಮೆಟ್ಟದೆ ಎದುರಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಲುವ ಕೌಶಲ, ಆ ಪ್ರವೃತ್ತಿ ಪುರಾಣಿಕರನ್ನು ಬಹಳ ಎತ್ತರದವರೆಗೆ ತಲುಪಿಸಿದೆ.

ಪುರಾಣಿಕರದು ಎಂದೂ ಒಂಟಿ ಸಲಗದ ಬದುಕಲ್ಲ. ಯಾವಾಗಲೂ ಗೆಳೆಯರ, ಆಪ್ತರ ಗುಂಪು ಕಟ್ಟುತ್ತಿದ್ದರು. ಎಲ್ಲರೂ ಸ್ಕೂಲು-ಕಾಲೇಜಿಗೆ ಹೋಗುವುದು ಕಲಿಯಲಿಕ್ಕೆ, ಆಟ ಓಟದಲ್ಲಿ ಒಂದಿಷ್ಟು ನಲಿಯಲಿಕ್ಕೆ. ಪುರಾಣಿಕರ ಹುಟ್ಟುಗುಣವೆಂದರೆ, ಕಲಿಯುವುದಂತೂ ಸರಿಯೆ, ಆಟ-ಓಟಗಳಲ್ಲಿ ಮೆರೆಯುವುದೂ ಸರಿಯೆ, ಆದರೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗುರುತಿಸುವುದು, ಅವುಗಳ ಪರಿಹಾರಕ್ಕೆ ಸಂಬಂಧಿಸಿದವರ ಗಮನ ಸೆಳೆಯುವುದು ಅದು ಅದ್ಯವಾಗಿತ್ತು. ಅದಕ್ಕೆಂದು ಒಂದು ವಿದ್ಯಾರ್ಥಿ ಸಂಘ ಹುಟ್ಟುತ್ತಿತ್ತು, ಅದರ ಕರ್ಣಧಾರತ್ವ ಅವರಿಗೆ ಸಲ್ಲುತ್ತಿತ್ತು. ಅವರು ಕೊಪ್ಪಳದಲ್ಲಿ ಓದಲಿ, ಗುಲಬರ್ಗಾದಲ್ಲಿ ಕಲಿಯಲಿ, ಹೈದರಾಬಾದಿನಲ್ಲಿ ಅಭ್ಯಾಸ ಮಾಡಲಿ, ಅಲ್ಲಲ್ಲಿ ವಿದ್ಯಾರ್ಥಿ ಸಂಘಗಳು ಹುಟ್ಟುತ್ತ ಹೋದವು. ಅಂದಿನ ಪರಿಸರಕ್ಕೆ ಪರಿಸ್ಥಿತಿಗೆ ತಕ್ಕಂತೆ ವಿದ್ಯಾರ್ಥಿಗಳ ಮತ್ತು ವಿಶೇಷವಾಗಿ ಬಡವರ, ದಲಿತರ, ಅಲ್ಪಸಂಖ್ಯಾತರ ಕ್ಷೇಮಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾದವು.

1942ರಲ್ಲಿ ರಾಜ್ಯದಲ್ಲಿ ನೆಡೆದ ಚಲೇಜಾವ್ ಮತ್ತು ಸ್ವಾತಂತ್ರ್ಯ ಚಳುವಳಿಯ ನಾಯಕರಲ್ಲಿ ಒಬ್ಬರಾಗಿ ಬ್ರಿಟೀಷರ ದೌರ್ಜನ್ಯವನ್ನು ಎದುರಿಸಿದ ಅನ್ನದಾನಯ್ಯ, ನಂತರ 1947-48ರಲ್ಲಿ ಹೈದರಾಬಾದು ಸಂಸ್ಥಾನದ ಪೋಲಿಸರು ಮತ್ತು ಉಗ್ರಗಾಮಿಗಳಾದ ರಜಾಕಾರರ ದೌರ್ಜನ್ಯದ ವಿರುದ್ಧ ಸಿಡಿದ್ದೆದರು. ಭಾರತದೊಡನೆ ಹೈದರಾಬಾದು ಸಂಸ್ಥಾನ ವಿಲೀನವಾಗುವುದನ್ನು ವಿರೋಧಿಸುವ ರಜಾಕಾರರು ಜನಸಾಮಾನ್ಯರ ಮೇಲೆ ನೆಡೆಸಿದ ಹಿಂಸೆ ಮತ್ತು ದೌರ್ಜನ್ಯ ಇಡೀ ಮನುಕುಲದ ಇತಿಹಾಸದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವಂತಿದೆ. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಅನ್ನದಾನಯ್ಯನವರು, ತಮ್ಮ ವಿದ್ಯಾಭ್ಯಾಸ ತೊರೆದು ಸಾವಿರಾರು ಜನ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರನ್ನು ರಜಾಕಾರರಿಂದ ರಕ್ಷಿಸಲು ಮುಂದಾದರು. ಅನ್ನದಾನಯ್ಯನವರ ಹೋರಾಟದ ಬದುಕಿಗೆ ಹೊಸ ಆಯಾಮ ದೊರೆಯಿತು. ಅವರ ಕತೃತ್ವಶಕ್ತಿಗೆಯ ಅವಿಷ್ಕಾರಕ್ಕೆ ಹೊಸ ಕ್ಷೇತ್ರ ಲಭಿಸಿತು. ರಾಯಚೂರು ಜಿಲ್ಲೆಯ ಗಡಿಗಂಟಿದ ಮುಂಬೈ ರಾಜ್ಯದ ಮುಂಡರಗಿ ಮೊದಲಾದ ಗ್ರಾಮಗಳ ಪ್ರದೇಶ ಪುರಾಣಿಕರೂ ಹಾಗೂ ಅವರ ಸ್ನೇಹಿತರ ಪಾತ್ರಕ್ಕೆ ಆಹ್ವಾನ ನೀಡಿತು. ಹೀಗೆ ರಾಜ್ಯದಲ್ಲಿ ನೆಡೆದ ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ಮುನ್ನುಡಿಯನ್ನು ಬರೆದ ಅನ್ನದಾನಯ್ಯನವರು ಮುಂಡರಗಿ ಶಿಬಿರದಲ್ಲಿ ಸಮಾನಮನಸ್ಕರ ಮತ್ತು ಉತ್ಸುಕ ಸ್ನೇಹಿತರ ಒಂದು ಪಡೆಯನ್ನು 1947ರಲ್ಲಿ ಸಂಘಟಿಸಿದರು. ನಿರಾಯುಧವಾಗಿದ್ದ ಈ ಪಡೆ ಯಾರಿಗೂ ತಿಳಿಯದಂತೆ ನಿಜಾಮ ಸಂಸ್ಥಾನದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಧುನಿಕ ಬಂದೂಕುಗಳನ್ನು ಹೊಂದಿದ್ದ ರಜಾಕಾರರ ವಿರುದ್ಧ ಕಾರ್ಯಾಚರಣೆ ನೆಡೆಸುತ್ತಿತ್ತು ಹಾಗೂ ಯಾವ ಹಾನಿಯನ್ನೂ ಅನುಭವಿಸದೆ ಬೆಳಗಾಗುವುದರಲ್ಲಿ ತನ್ನ ನೆಲೆಗೆ ಹಿಂತಿರುಗುತ್ತಿತ್ತು. ಇದು ರಜಾಕಾರರಿಗೆ ಬರೆ ಎಳೆಯುವ ಕೆಲಸವಾಗಿತ್ತು. ಅವರ ಸ್ಥೈರ್ಯ ಕುಗ್ಗಿಸುವ ಹುನ್ನಾರವಾಗಿತ್ತು. ಈ ಪಡೆಗೆಳ ಸಂಘಟನೆ, ಅವುಗಳು ಅನುಸರಿಸಬೇಕಾದ ರಣತಂತ್ರ, ರಹಸ್ಯವರದಿ ವರ್ತಮಾನಗಳ ವಿಲೇವಾರಿ ಮತ್ತು ಪ್ರಚಾರ ಇವು ಅನ್ನದಾನಯ್ಯನವರ ನೇತೃತ್ವದಲ್ಲಿ ರೂಪಗೊಳ್ಳುತ್ತಿದ್ದವು. ಅನ್ನದಾನಯ್ಯನವರ ನೇತ್ರತ್ವದಲ್ಲಿ ಮುಂಡರಗಿ ಶಿಬಿರಾರ್ಥಿಗಳು ನೆಡೆಸಿದ ಹೋರಾಟಕ್ಕೆ ಸೋತು ಕಂಗೆಟ್ಟ ರಜಾಕಾರರು ಮತ್ತು ನಿಜಾಮ್ ಪೋಲಿಸರು ಪಲಾಯನ ಮಾಡಿದರು. ಅನ್ನದಾನಯ್ಯನವರು ಹೈದರಾಬಾದು ಸಂಸ್ಥಾನದ 87 ಹಳ್ಳಿಗಳನ್ನು ಸ್ವತಂತ್ರಗೊಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಈ ಹಳ್ಳಿಗಳು ಸ್ವತಂತ್ರ ಭಾರತದ ಭಾಗವೆಂದು ಘೋಷಿಸಿದರು. ಸಾವಿರಾರು ಕುಟುಂಬಗಳನ್ನು ರಜಾಕಾರರಿಂದ ರಕ್ಷಿಸಿದರು. ಈ ಸೋಲಿನಿಂದ ರಜಾಕಾರರಾಗಲಿ ಅಥವಾ ಹೈದರಾಬಾದಿನ ನಿಜಾಮನಾಗಲಿ ಮತ್ತು ದಕ್ಷಿಣ ಭಾರತದಲ್ಲಿ ಮತ್ತೊಂದು ಪಾಕಿಸ್ತಾನವನ್ನು ಸ್ಥಾಪಿಸುವ ಹುನ್ನಾರದಲ್ಲಿದ್ದ ಭಾರತದ ವಿರೋಧಿಗಳಾಗಲಿ ಚೇತರಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಸರದಾರ ಪಟೇಲ್‍ರು ಅನ್ನದಾನಯ್ಯನವರ ಹೋರಟವನ್ನು ಮೆಚ್ಚಿ, ಕೇಂದ್ರ ಮಂತ್ರಿ ಗಾಡ್ಗೀಲ್‍ರನ್ನು ಮುಂಡರಗಿಯ ಶಿಬಿರಕ್ಕೆ ಕಳುಹಿಸಿದ್ದರು. ನಿಜಲಿಂಗಪ್ಪನವರು ಮೊದಲಾದ ರಾಜ್ಯ ನಾಯಕರು ಅನ್ನದಾನಯ್ಯನವರಿಗೆ ನೈತಿಕ ಬೆಂಬಲ ಸೂಚಿಸಿದರು. ಪುರಾಣಿಕರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಅದೇಶ ಹೊರಡಿಸಿದ ಹೈದರಬಾದು ನಿಜಾಮ, ಮುಂದೆ 1948ರಲ್ಲಿ ಭಾರತಕ್ಕೆ ಸೋತು ಶರಣಾಗಿ ತನ್ನ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿದ. ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ 2 ವರ್ಷಗಳ ಕಾಲ ವಿದ್ಯಾಭ್ಯಾಸ ಕಳೆದು ಕೊಂಡಿದ್ದಲ್ಲದೆ, ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು ಅನ್ನದಾನಯ್ಯನವರು. ಆದರೆ ಅವರಲ್ಲಿ ಹುದುಗಿದ್ದ ಅನೇಕ ಶಕ್ತಿಗಳನ್ನು ಹೊರಹೊಮ್ಮಿ ಅವರ ಸತ್ವವನ್ನು ಸದೃಢಗೊಳಿಸಿದವು. ಮುಂದೆ ರಾಷ್ಟ್ರೀಯ ಮತ್ತು ರಾಜ್ಯದ ಮುತ್ಸದ್ಧಿಗಳ ಹಿತವಾದ ಕೇಳಿ, ಓದು ಮುಂದುವರೆಸಲು ಸಿದ್ಧರಾದ ಪುರಾಣಿಕರಿಗೆ , ಹೈದರಾಬಾದಿಗೆ ಹಿಂತಿರುಗಿ ಉಳಿದ ಸ್ನೇಹಿತರು ತಾವು ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ ಭಾಗವಹಿಸಿದೆವೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆದ ಸನ್ಮಾನ ಮತ್ತು ಸವಲತ್ತುಗಳ ಲಾಭ ಪಡೆಯುವ ಮನಸ್ಸಾಗಲಿಲ್ಲ. ತಮ್ಮ ಶಿಕ್ಷಣಕ್ಕೆ ಒಂದು ಹೊಸ ತಿರುವು ಕೊಟ್ಟು ವಿಜ್ಞಾನದ ಬದಲಾಗಿ ವಾಣಿಜ್ಯ ಕಲಿಯಲಿಕ್ಕೆಂದು ಹುಬ್ಬಳ್ಳಿಗೆ ಬಂದಿಳಿದರು.

ಹುಬ್ಬಳ್ಳಿಯ ಜೆ.ಜೆ.ಕಾಮರ್ಸ ಕಾಲೇಜಿನ ಮೊದಲನೆಯ ವರ್ಷದ ವಿದ್ಯಾರ್ಥಿಯಾದ ಪುರಾಣಿಕರಿಗೆ ಎಲ್ಲವೂ ಅಪರಿಚಿತವೆ. ಸಾಲದ್ದಕ್ಕೆ “ಮುಗಲಾಯಿ”ಯಿಂದ ಬಂದ ಕಡುಬಡವ ಮತ್ತು ಹಿಂದುಳಿದವನೆಂದು ಅವಮಾನಿಸುವ ಜನರ ಕಿರುಕುಳ ಬೇರೆ. ಈ ನಿಷೇಧಸ್ವರೂಪದ ವಿಷಮ ಪರಿಸ್ಥಿತಿಯಲ್ಲಿ ಅನೇಕ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೊಂದು-ಬೆಂದಿರುವುದನ್ನು ಕಂಡು ಕೆರಳಿದ ಅನ್ನದಾನಯ್ಯನವರು, ವಿದ್ಯಾರ್ಥಿಗಳ ಸಂಘಟನೆಗೆ ಮುಂದಾದರು. ಸೂಕ್ತ ಪಾಠಕ್ಕೆ ಆಗ್ರಹ, ಬಡ ವಿದ್ಯಾರ್ಥಿಗಳಿಗೆ ಆಸನ, ವಸನ ಮತ್ತು ವಾಸಗಳ ಏರ್ಪಾಡು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಹುಬ್ಬಳ್ಳಿ ನಗರಸಭಾಗೃಹದಲ್ಲಿ ವಿದ್ವಾಂಸರ, ಸಾಧಕರ, ಸಿದ್ಧಪ್ಮರುಷರ ವ್ಯಾಖ್ಯಾನಗಳು ಮೊದಲಾದ ಕೆಲಸಗಳನ್ನು ಪುರಾಣಿಕರ ನೇತೃತ್ವದಲ್ಲಿ ಈ ಸಂಘಟನೆಯು ನೆಡೆಸಿತು. ಕರ್ನಾಟಕ ಏಕೀಕರಣ ಆಗ್ರಹಕ್ಕೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಪುರಾಣಿಕರು ನೆಡೆಸಿದ ಬೃಹತ್ ವಿದ್ಯಾರ್ಥಿ ಸಮಾವೇಶ ಮತ್ತು ಮೆರವಣಿಗೆಯಂತಹ ಮತ್ತೊಂದು ಜನಪರ ಕಾರ್ಯಕ್ರಮವನ್ನು ಇದುವರೆಗೂ ಹುಬ್ಬಳ್ಳಿ ಇನ್ನೂ ಕಂಡಿಲ್ಲ. ಪುರಾಣಿಕರಿಗೆ ಹುಬ್ಬಳ್ಳಿ-ಧಾರವಾಡಗಳ ‘ನಾ’, ‘ನೀ’ ಎನ್ಮ್ನವ ಎಲ್ಲಾ P್ವ್ಷೀತ್ರದ ನಾಯಕರೊಂದಿಗೆ ಸಂಪರ್ಕ ದೊರೆಯಿತು. ಎಲ್ಲ ಮತಭಾಂದವರು, ಭಾಷಿಕರೂ ಪುರಾಣಿಕರೊಡನೆ ಕೈಗೋಡಿಸಿದರು. ಒಬ್ಬ ಯುವ ನಾಯಕ ಉದಯಿಸಿದ ಎಂದು ದಿನಪತ್ರಿಕೆಗಳು ಗುರುತಿಸಿ ಬೆನ್ಮ್ನ ತಟ್ಟಿದವು. ಆದರೆ ಹೊರಗಿನಿಂದ ಬಂದ ಮೊಗಲಾಯಿ ಪ್ರದೇಶದ ಒಬ್ಬ ಹ್ಶೆದ ನಮ್ಮೂರಲ್ಲಿ ಧ್ವಜ ಹಾರಿಸಿದನಲ್ಲ ಎಂಬ ಕೆಲವರ ಹೊಟ್ಟೆಯುರಿಗೂ ಅನ್ನದಾನಯ್ಯನವರು ಗುರಿಯಾದರು. ‘ ಕರ್ನಾಟಕ ಏಕೀಕರಣ’ ಆಗಲೇ ಬೇಕೆಂಬ ಆಗ್ರಹದ ಉಪವಾಸ ಹ್ರಡಿದ್ದ ಗಾಂಧಿವಾದಿ ಅದರಗುಂಚಿ ಶಂಕರಗೌಡರ ಉಪವಾಸದ ಅಂತ್ಯದಲ್ಲಿ ಸಂಭವಿಸಿದ ಅನೀರಿಕ್ಷಿತ ಗಲಭೆಯಲ್ಲಿ ಪೋಲಿಸರು ಗುಂಡು ಹಾರಿಸಿದರು. ಗಲಭೆಗೆ ವಿದ್ಯಾರ್ಥಿ ನಾಯಕ ಪುರಾಣಿಕ ಕಾರ್ಯಕರ್ತನೆಂದು ಸುಳ್ಮ್ಳ ಆರೋಪ ಹೊರಸಿ ಕೆಲ ರಾಜಕೀಯ ವ್ಯಕ್ತಿಗಳು ಅವರನ್ಮ್ನ ಬಂಧನಕ್ಕೆ ಒಳಪಡಿಸಿದರು. ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ನಾಯಕನೊಬ್ಬನನ್ನು ಸುಳ್ಳು ಆರೋಪದಡಿ ಬಂಧಿಸಿ, 1954ರಲ್ಲಿ ಸೆರೆಮನೆಗಟ್ಟಿದ ಕೀರ್ತಿ ಸ್ವತಂತ್ರ್ಯ ಭಾರತದ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ್ದಾಯಿತು.

ಸೆರೆಮನೆ ಸೇರಿದ ಗಾಂಧಿವಾದಿ ಪುರಾಣಿಕರ ಉಪವಾಸ ವ್ರತ ಕೈಗೊಂಡರು. ಯಾರ ಬೆದರಿಕೆಗೂ ಜಗ್ಗದೆ ಅನ್ನ ಸತ್ಯಾಗ್ರಹ ನೆಡೆಸಿ, ಜೈಲಿನಲ್ಲಿ ಪೋಲಿಸರ ಹಿಂಸೆ-ದೌರ್ಜನ್ಯಕ್ಕೀಡಾದ ಅಮಾಯಕರ ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸಿದರು. ಪುರಾಣಿಕರ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಸಾಬೀತಾಗಿ ಅವರನ್ನು ಗೌರವಾನ್ವಿತವಾಗಿ ಬಿಡುಗಡೆ ಮಾಡಿದ ಘನ ನ್ಯಾಯಾಲಯವು, ಪೋಲಿಸರಿಗೆ ಮತ್ತು ಸರ್ಕಾರಕ್ಕೆ ಛೀಮಾರಿ ಹಾಕಿತು.

ಹುಬ್ಬಳ್ಲಿಯಿಂದ ಬಿ.ಕಾಮ್ ಪದವಿ ಪಡೆದ ಪುರಾಣಿಕರು ಲಾ ಓದಲೆಂದು ಹ್ಶೆದರಾಬಾದಿಗೆ ಹಿಂದಿರುಗಿದರು. “ಆಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು” ಆಯೋಗಿಸ ಬೇಕು. ಅದರ ಮೂಲಕ ಇಡೀ ಕರ್ನಾಟಕದ ವಿದ್ಯಾರ್ಥಿ ವೃಂದಕ್ಕೆ ಒಂದು ಸೂಕ್ತ ವೇದಿಕೆ ಲಭಿಸುವುದು ಎಂದು ಯೋಚಿಸಿದ ಪುರಾಣಿಕರು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಪರಿಷತ್ತಿನ ಪಾತ್ರ ಬಹಳ ದೊಡ್ಡದೆಂದು ಮನದಟ್ಟು ಮಾಡಿ ಕೊಡಲು ಕರ್ನಾಟಕದಾದಂತ್ಯ ಪ್ರಯಾಣ ಮಾಡಿದರು. ವಿದ್ಯಾರ್ಥಿಗಳಂತೂ ಸರಿಯೇ ಅವರಿಗೆ ಪ್ರಚೋದನೆ ಪ್ರೇರಣೆ, ಫ್ರೋಫೆಸರ್ ಗಳು, ಪ್ರಿನ್ಸಿಪಾಲರು, ಸಾಹಿತಿಗಳು, ಸಮಾಜ ಚಿಂತಕರನ್ಮ್ನ ಸಂಪರ್ಕಿಸಿ ಅವರ ಬೆಂಬಲ, ಮಾರ್ಗದರ್ಶನ ಪಡೆಯುವ್ಯದರಲ್ಲಿ ಪುರಾಣಿಕರು ಯಶಸ್ವಿಯಾದರು. ಪುರಾಣಿಕರು ಭೇಟಿಯಾಗಿ ಮಾತನಾಡಿದ ನಂತರ ರಾಷ್ಟ್ರಕವಿ ಕುವೆಂಪು ಈ ಸಂಘಟನೆಗೆ ಮುಕ್ತ ಬೆಂಬಲ ನೀಡಿದರು. ಪ್ರಪ್ರಥಮ ಅಖಿಲ ಕರ್ನಾಟಕ ವಿದ್ಯಾರ್ಥಿ ಸಮ್ಮೇಳನವು ಯಶಸ್ವಿಯಾಗಿ 1954ನಲ್ಲಿ ಹ್ಶೆದರಾಬಾದಿನಲ್ಲಿ ನೆಡೆಯಿತು. ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು ಪುರಾಣಿಕರು. ಕರ್ನಾಟಕದ ಎಲ್ಲಾ ಭಾಗದ ವಿದ್ಯಾರ್ಥಿಗಳು, ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಹೀಗೆ ಇಡೀ ರಾಜ್ಯದ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸಂಘಟಿತರಾಗಿದ್ದು ಇದೇ ಮೊದಲು ಮತ್ತು ಇದಕ್ಕೆ ರೂವಾರಿಯಾದರು ಪುರಾಣಿಕರು. ಇಡೀ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಒಂದು ವಿದ್ಯುತ್ ಸಂಚಾರದ ಅನುಭವವಾಯಿತು. ಅವರಿಗೆ ಸಂಘಟನೆಯ ಇನ್ನಷ್ಟು ಸೂಕ್ಷ್ಮ ಸುಳುಹುಗಳು ಮನೋಗತವಾದವು.

ಗಡಿನಾಡಿನಲ್ಲಿ ಕನ್ನಡ ಮತ್ತು ಕನ್ನಡ ಸಾಹಿತ್ಯದ ಪ್ರಚಾರಕ್ಕಾಗಿ ಸ್ವಂತ ಹಣ ವಿನಯೋಗಿಸಿ ಹೈದರಾಬಾದಿನಲ್ಲಿ ಭಾರತೀ ಪ್ರಿಂಟರಿ ಎಂಬ ಅಚ್ಚುಕೂಟವನ್ನು ತನ್ಮೂಲಕ “ಸಹಜೀವನ ಪ್ರಕಾಶನ” ಎಂಬ ಸಂಸ್ಥೆಯನ್ನು ಪುರಾಣಿಕರು ಪ್ರಾರಂಭಿಸಿದರು. ಪ್ರಮುಖ ಸಾಹಿತಿಗಳ ಹಲವಾರು ಪುಸ್ತಕಗಳು ಇಲ್ಲಿ ಪ್ರಕಟವಾಗಿರುವುದು ಇಲ್ಲಿ ಗಮನಾರ್ಹವಾಗಿದೆ.

ನವೆಂಬರ್ 1, 1956ರಂದು ಕರ್ನಾಟಕ ಏಕೀಕರಣಗೊಂಡು ಮೈಸೂರು ರಾಜ್ಯವಾಗಿ ಹೊರಹೊಮ್ಮುವ ಹಿಗ್ಗಿನ ಸುದ್ಧಿ ಪುರಾಣಿಕರನ್ನು ರೋಮಾಂಚನಗೊಳಸಿತ್ತು. ಆಗ ಅವರು ಹೈದರಾಬಾದಿನಿಂದ ಬೆಂಗಳೂರಿಗೆ ಹೋಗಿ ಅಲ್ಲಿ ನ್ಯಾಯವಾದಿಯಾಗಿ ವೃತ್ತಿ ಆರಂಭಿಸುವ ತೀರ್ಮಾಣ ಕೈಗೊಂಡರು. ‘ಹೊಸ ಮಾಲೆಗಿತ್ತಿ’ಯಾಗಿ ಅದೇ ಬಂದಿದ್ದ ಪತ್ನಿ ನೀಲಾಂಬಿಕೆಯೊಡನೆ, ಅಷ್ಟಿಷ್ಟು ಮನೆ ಸಾಮಾನುಗಳು ಮತ್ತು ಕಿಸೆಯಲ್ಲಿ ಪುಡಿಗಾಸು ಇಟ್ಟುಕೊಂಡು. ಅರಿಯದ ನಗರಕ್ಕೆ, ತಲೆಯಲ್ಲಿ ಯೋಜನೆ, ಎದೆಯಲ್ಲಿ ಧೈರ್ಯ, ಹಿಡಿಯಲ್ಲಿ ಸ್ಥೈರ್ಯ ತುಂಬಿಕೊಂಡು ಬೆಂಗಳೂರಿಗೆ ಬಂದಿಳಿದರು. ದೂರಾತಿದೂರದ ಸಂಬಂಧವಾದರೂ ಅತ್ಯಂತ ಆಪ್ತರಾಗಿ ಸ್ವಾಗತಿಸಿದ ಶ್ರೀನೀಲಕಂಠಾರಾಧ್ಯರ ಅತಿಥಿಯಾಗಿ “ಸನ್ಯಾಸಿಯ ಮದುವೆಗೆ ಜುಟ್ಟು ಜನಿವಾರಗಳಿಂದ ಆರಂಭ” ಎನ್ನುವಂತೆ ಪುರಾಣಿಕರು ತಮ್ಮ ನ್ಯಾಯವಾದಿ ವೃತ್ತಿ ಆರಂಭಿಸಲು ಒಬ್ಬ ಹಿರಿಯ ನ್ಯಾಯವಾದಿಯ ಬಳಿ ತರಬೇತಿಗಾಗಿ ಹುಡುಕಾಟ ಆರಂಭಿಸಿದರು. ಹೈದರಾಬಾದಿನಲ್ಲಿ ಪಡೆದಿದ್ದ ಅಂತಹ ಅನುಭವ, ಅವರು ನ್ಯಾಯವಾದಿಯಂದು ಸನದು ಪಡೆಯಲು ಕಡಿಮೆಯಾಗಿತ್ತು. ಶ್ರೀ ವಿ.ಕೃಷ್ಣಮೂರ್ತಿ ಎಂಬ ಸಹೃದಯದ ಹಿರಿಯ ನ್ಯಾಯವಾದಿಯ ಕಚೇರಿಯಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕೆಲ ಸಮಯದಲ್ಲೇ ತಂದೆ, ತಾಯಿ, ತಮ್ಮ, ತಂಗಿ ಮತ್ತು ಅಳಿಯ ಬೆಂಗಳೂರಿನಲ್ಲಿದ್ದ ಅನ್ನದಾನಯ್ಯನವರ ಜೊತೆಗೆ ವಾಸಿಸಲು ಬಂದರು. ಪ್ರತಿದಿನ ಬರುವ ಪರಿಚಿತರು, ಸಂಬಂಧಿಗಳು ಬೇರೆ. ಆಗ ನ್ಯಾಯವಾದಿಯಾಗಿ ಸಂಜೆಯವರೆಗೆ ಕೆಲಸ ಮಾಡಿದರೆ ರಾತ್ರಿಯೀಡಿ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಮಾಡಿ, ಕುಟುಂಬ ವೆಚ್ಚ ನಿರ್ವಹಿಸುವ ಸಾಹಸ ಮಾಡಿದರು ಪುರಾಣಿಕರು. 1957ರಿಂದ ನ್ಯಾಯವಾದಿಯಾದರೂ, ಗಾಂಧೀಜಿಯವರಂತೆ ಕೇಸಿನಲ್ಲಿ ಅನ್ಯಾಯವಾದದ್ದು ಖಾತ್ರಿ ಎನಿಸಿ ಅದನ್ನು ನೆಡೆಸಿದರೆ ನ್ಯಾಯ ದೊರೆಯಲು ಶಕ್ಯ ಎಂದು ಅನ್ನುವಂಥಹ ಕೇಸುಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅಂತಿಂಥ ಕೇಸುಗಳನ್ನು “ಬಂದಷ್ಟು ಬಂತು ಬಂಡಿವಾಡದ ಸುಂಕ” ಎಂದು ಫೀಸಿಗಾಗಿ ಹಾತೊರೆದು ಎಂದೂ ನೆಡೆಸಲಿಲ್ಲ. ಅವುಗಳನ್ನು ವಾಪಸ್ಸು ಕಳುಹಿಸಿ ಕೊಡುತ್ತಿದ್ದರು. ಅವರಲ್ಲಿ ಕೆಲವರು ಬೇರೆ ವಕೀಲರತ್ತ ಧಾವಿಸುತ್ತಿದ್ದರು. ಬಡವರಿಗೆ ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲೇ ಊಟ, ವಸತಿ ನೀಡಿ ಮತ್ತು ಊರಿಗೆ ಹಿಂದಿರುಗಲು ಪುರಾಣಿಕರೇ ಹಣಕೊಟ್ಟು ಕಳುಹಿಸುತ್ತಿದ್ದರು. ಕೇಸ್ ನೆಡೆಸಿ ಗೆದ್ದು ಕೊಟ್ಟರೂ ಏನನ್ನೂ ಕೊಡದ ಕಕ್ಷಿದಾರಗಳಿಗಾಗಿ ಅವರು ಎಂದೂ ತಲೆಕೆಡೆಸಿ ಕೊಳ್ಳಲಿಲ್ಲ. ಸುಮಾರು 12 ವರ್ಷ ಸರ್ಕಾರಿ ನ್ಯಾಯವಾದಿಯಾಗಿ(1969-81), ಕೋಟ್ಯಾಂತ ಮೌಲ್ಯದ ಸರ್ಕಾರಿ ಆಸ್ತಿಯನ್ನು ಉಳಿಸುಕೊಡುವಲ್ಲಿ ಅಮೂಲ್ಯ ಸೇವೆ ಸಲ್ಲಿಸಿದರು. ಸಾವಿರಾರು ಜನ ಬಡವರಿಗೆ, ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಉಚಿತವಾಗಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ನ್ಯಾಯ ನಿಷ್ಟುರಿ, ನಿರ್ಭಿತ ನ್ಯಾಯವಾದಿಯಾಗಿ 50 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಹೈಕೋರ್ಟ ನ್ಯಾಯಧೀಶರಾಗುವ ಅವಕಾಶಗಳು ಬಂದರೂ ಅದನ್ನು ಸ್ವೀಕರಿಸದೆ ಅವರು ನ್ಯಾಯವಾದಿಯಾಗಿ ಮುಂದುವರೆದಿದ್ದು ಇಲ್ಲಿ ಗಮನಾರ್ಹವಾಗಿದೆ. ನ್ಯಾಯವಾದಿಯ ವೃತ್ತಿಯು ಪುರಾಣಿಕರಿಗೆ ಉಪಾಸನೆಯಾಗಿತ್ತು ಮತ್ತು ಸಮಾಜ ಸೇವೆಯ ಸಾಧನವಾಗಿತ್ತು.

ಪುರಾಣಿಕರು ಮುಂಜಾನೆ 9ರಿಂದ ಸಂಜೆಯ 5ರವರೆಗೆ ಹೈಕೋರ್ಟ ಕೆಲಸ ಮತ್ತು ಸಂಜೆ ಒಂದೆರಡು ತಾಸು ಕೇಸ್ ತಯಾರಿಗೆ, ಇತ್ಯಾದಿಗಳಿಗೆ ಬಳಸಿದರೆ, ಉಳಿದ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟರು. ಅವರ ಹೋರಾಟ ಮನೋಭಾವ, ರಚನಾತ್ಮಕ ಯೋಜನೆ, ಸಮಾಜ ನಿಷ್ಠೆ, ಕತೃತ್ವ ಶಕ್ತಿಗಳು ಹೊರಹೊಮ್ಮಿದವು. ಬೆಂಗಳೂರಿನ ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವೇಶಿಸಿದರು ಮತ್ತು ಜನತೆಯ ಬೆಂಬಲ ಗೆದ್ದರು. ಈ ಕೆಲಸಗಳಲ್ಲಿ ತಮ್ಮ ಛಾಪು ಸ್ಥಾಪಿಸಿದರು. ಎತ್ತರದಿಂದ ಎತ್ತರಕ್ಕೆ ಬೆಳೆಯುತ್ತಾ ಹೋದರು. ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕರಾಗಿ (1969ರಿಂದ), 27 ವರ್ಷಗಳ ಕಾಲ ಅದರ ಪ್ರಧಾನ ಕಾರ್ಯದರ್ಶಿಯಾಗಿ (1964-91) ಅವರು ತನು-ಮನ-ಧನದ ಸೇವೆ ಸಲ್ಲಿಸಿರುವುದರಿಂದ ಈ ಸಂಸ್ಥೆ ಇಂದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯಲು ಸಾಧ್ಯವಾಗಿದೆ. ಪುರಾಣಿಕರ ಪ್ರಯತ್ನದಿಂದಾಗಿ ಬಸವಣ್ಣನವರ 8ನೆ ಶತಮಾನೋತ್ಸವ ಮತ್ತು ಪಾದಯಾತ್ರೆ (1967-68) ಮತ್ತು ಕನ್ನಡ ಮತ್ತು ಬೇರೆ ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲೀಷ್, ರಷ್ಯಾ ಮೊದಲಾದ ಭಾಷೆಗಳಲ್ಲಿ ವಚನ ಸಾಹಿತ್ಯದ ಪ್ರಕಟಣೆ ಮೊದಲಾದ ಕೆಲಸಗಳನ್ನು ಬಸವ ಸಮಿತಿ ಮಾಡಲು ಸಾಧ್ಯವಾಯಿತು. ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದರ ಗೌರವ ಕಾರ್ಯದರ್ಶಿಯಾಗಿ ( 1960-68) ಸೇವೆ ಸಲ್ಲಿಸಿ, ಅದರ ಸಮಸ್ಯೆಗಳನ್ನು ಪರಿಹರಿಸಿ ಮತ್ತೆ ಈ ಸಂಸ್ಥೆಗೆ ಪುರ್ನಜನ್ಮ ನೀಡಿದವರು ಪುರಾಣಿಕರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಗ್ರಂಥಾಲಯ, ಸ್ವಂತ ಮುದ್ರಣಾಲಯದ ಆರಂಭ, ಪ್ರಪಥಮವಾಗಿ ಕನ್ನಡ ನಿಘಂಟು ಮುದ್ರಣ, ರಾಜ್ಯ ಸರ್ಕಾರದಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಅನುದಾನ, ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳು ಹೀಗೆ ಹಲವಾರು ರೀತಿಯಲ್ಲಿ ಶ್ರೀಪುರಾಣಿಕರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇವೆ ಸಲ್ಲಿಸಿದ್ದಾರೆ.

ಕನ್ನಡ, ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ಅನ್ನದಾನಯ್ಯ ಪುರಾಣಿಕರು 35ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವರ ನೂರಾರು ಲೇಖನಗಳು ದೇಶ-ವಿದೇಶಗಳಲ್ಲಿ ಪ್ರಕಟವಾಗಿವೆ. ಜನಜಾಗೃತಿಗಾಗಿ ಅವರು ¨ರೆಯುವ ಸಾವಿರಾರು ಅಧುನಿಕ ವಚನಗಳು ಅಪಾರ ಮನ್ನಣೆ ಗಳಿಸಿವೆ. ಅವರಿಗೆ ಅಖಿಲ ಕರ್ನಾಟಕ ವಚನ ಪರಿಷತ್ತಿನ ಪ್ರಥಮ ಅಧಿವೇಶನದ ಅಧ್ಯಕ್ಷತೆಯ ಗೌರವ ದೊರೆತಿದೆ. ಕರ್ನಾಟಕದ ಶ್ರೀಷ್ಟ ವಚನಕಾರನೆಂಬ ಪ್ರಶಸ್ತಿ ಗೌರವ ದೊರೆತಿದೆ. ಕರ್ನಾಟಕ ರಾಜ್ಯ ಸರ್ಕಾರವು ಅವರಿಗೆ 2006ರಲ್ಲಿ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಲವಾರು ಸಾಂಸ್ಕøತಿಕ ಸಂಸ್ಥೆಗಳು ಮತ್ತು ಸಂಘಟನೆಗಳು ಅವರ ಸೇವೆಯ ಘನತೆ ಮನ್ನಿಸಿ ಸತ್ಕರಿಸಿವೆ.

ನಿರ್ಬಲರಿಗೆ ಬಲವನ್ನು, ಬಲವಂತರಿಗೆ ವಿದ್ಯೆಯನ್ನು
ಸೋತವರಿಗೆ ತಲೆಯೆತ್ತಿ ನಿಲ್ಲುವ ಕೆಚ್ಚನ್ನು,
ಸೋಲುವವರಿಗೆ ಗೆಲುವೆನೆಂಬ ನಂಬಿಕೆಯನ್ನು
ಏಗಿದವರಿಗೆ ಎತ್ತರವನ್ನು, ಬೀಗಿದವರಿಗೆ ಬಾಗುವುದನ್ನು
ಕೊಡುತ್ತಲೆ ತಮ್ಮ ಸಂಸಾರವನ್ನು ಸವೆಯಬಳಸುತ್ತಿರುವ ತ್ರಿವಿಧ ದಾಸೋಹ ಗುಣದ ಅನ್ನದಾನಯ್ಯನವರಿಗೆ ಜನಮನ್ನಣೆಯ ದಾಹವಿಲ್ಲ, ಮಾನ ಸಮ್ಮಾನದ ಲೋಭವಿಲ್ಲ, ಕೀರ್ತಿ ಪ್ರಶಸ್ತಿಗಳ ಭ್ರಮೆಯಿಲ್ಲ, ಅತ್ತ ಹೊರಳಿ ನೋಡುವ ಜಾಯಮಾನ ಅವರದಲ್ಲ.

ಇಳೆಯ ಕೊಳೆ ಕಳೆದು ಶಿವಕಳೆ ಬೆಳಗಲಿ ಎಂಬ ಚಿಂತನೆಯನು ಹಾಸಲು, ಹೊದೆಯಲು ಬಳಸಿಕೊಂಡು ಹದುಳಿಗರಾಗಿದ್ದ ಶ್ರೀ ಅನ್ನದಾನಯ್ಯ ಪುರಾಣಿಕರು ೨೦-೧೦-೨೦೧೫ರಂದು ಶಿವಾಧೀನರಾದರು.

Categories
ಕೇಶವ ಕುಡ್ಲ ಲೇಖನಗಳು

ಕಂಬಳದ ಕೋಣ

ಕೃತಿ:ಕೇಶವ ಕುಡ್ಲ, ಲೇಖನಗಳು
ಲೇಖಕರು ಕೇಶವ ಕುಡ್ಲ,
ಕೃತಿಯನ್ನು ಓದಿ

Categories
ಕುಮಾರ್ ಪೆರ್ನಾಜೆ ಲೇಖನಗಳು

ಜೇಡನ ಜಾದು (ಮಡೆಚ್ಚಾಲಿ)

ಕೃತಿ-ಲೇಖನಗಳು
ಸರಣಿ-ಕುಮಾರ್ ಪೆರ್ನಾಜೆ, ಲೇಖನಗಳು
ಕೃತಿಯನ್ನು ಓದಿ

Categories
ಗಣೇಶ ಭಟ್ ಲೇಖನಗಳು

ಏರ್ ಇಂಡಿಯಾ – ಮೊದಲ ಅಂತರರಾಷ್ಟ್ರೀಯ ಯಾನ

ಕೃತಿ: ಗಣೇಶ ಭಟ್, ಲೇಖನಗಳು
ಲೇಖಕರು: ಗಣೇಶ ಭಟ್
ಕೃತಿಯನ್ನು ಓದಿ

Categories
ಡಾ. ರಾಮಲಿಂಗಪ್ಪ ಟಿ. ಬೇಗೂರು ವಿಶ್ಲೇಷಣೆ ಮತ್ತು ಸಂಶೋಧನೆ ವ್ಯಕ್ತಿಸಾಹಿತ್ಯ ಸಂಸ್ಕೃತಿ-ಪರಂಪರೆ ಸಾಹಿತ್ಯ

ಅಲ್ಲಮಪ್ರಭು ಕುರಿತ ಅನುಸಂಧಾನಗಳು (ಆಧುನಿಕಪೂರ್ವ)

ಕೃತಿ-ಅಲ್ಲಮಪ್ರಭು ಕುರಿತ ಅನುಸಂಧಾನಗಳು (ಆಧುನಿಕಪೂರ್ವ)
ಲೇಖಕರು-ಡಾ.ಎ.ಮುರಿಗೆಪ್ಪ
ಸರಣಿ- ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಲೇಖನಗಳು ವಿ.ಎನ್. ಲಕ್ಷ್ಮೀನಾರಾಯಣ

ಸಿನಿಮಾಂತರಂಗ – ಒಳ್ಳೆಯ ಸಿನಿಮಾ ವೀಕ್ಷಣೆಗೆ ಒಂದು ಮುನ್ನುಡಿ

ಸಿನಿಮಾ ಬಗ್ಗೆ ಮಾತನಾಡುವಾಗ ಅದು ಅತ್ಯಂತ ಪ್ರಭಾವಶಾಲೀ ಜನಪ್ರಿಯ ಸಮೂಹಮಾಧ್ಯಮ; ಆದ್ದರಿಂದ ಅದನ್ನು ಎಚ್ಚರಿಕೆಯಿಂದ ಬಳಸಬೇಕು ಎಂಬ ಅಭಿಪ್ರಾಯ ಸರ್ವೇಸಾಧಾರಣವಾಗಿ ಕೇಳಿಬರುತ್ತದೆ. ಒಂದುಕಡೆ ಸಿನಿಮಾ ಎನ್ನುವುದೇ ಒಂದು ವಿಶಿಷ್ಟಭಾಷೆ; ಅದಕ್ಕೆ ತನ್ನದೇ ಆದ ವ್ಯಾಕರಣವೊಂದಿದೆ; ಅದರಲ್ಲಿ ಮೂರ್ತಗೊಳ್ಳುವ ಕೃತಿಗಳಿಗೆ ಸಮಗ್ರವಾದ, ಸಂಕೀರ್ಣವಾದ ಮೀಮಾಂಸೆಯೂ ಇದೆ ಎಂದು ಅರಿಯದ ಪ್ರೇಕ್ಷಕರಿದ್ದಾರೆ. ಮತ್ತೊಂದೆಡೆ ಈ ಅಂಶಗಳನ್ನು ಗೌಣವಾಗಿಸಿ, ಸಿನಿಮಾವನ್ನು ಗ್ರಾಹಕರ ಅಪೇಕ್ಷೆಗನುಗುಣವಾಗಿ ತಯಾರಿಸಿದ ಔದ್ಯಮಿಕ ಸರಕೆಂದು ನಂಬುವ ಬಂಡವಾಳಗಾರರು, ತಯಾರಕರು, ತಂತ್ರಜ್ಞರು, ವಿತರಕರು, ಮತ್ತು ಪ್ರದರ್ಶಕರು ಇದ್ದಾರೆ. ಸಿನಿಮಾವನ್ನು ತಮ್ಮ ವೃತ್ತಿಯಾಗಿಸಿಕೊಂಡಿರುವ ನಿರ್ದೇಶಕರು ಮತ್ತು ಕಲಾವಿದರೆನಿಸಿಕೊಂಡ ಜನ ಈ ಎರಡು ಧ್ರುವಗಳ ಮಧ್ಯದ ಕೊಂಡಿಯಂತಿದ್ದಾರೆ. ಈ ಇಡೀ ವ್ಯವಸ್ಥೆಯನ್ನು ಆಳುವವರ್ಗವು, ಸರ್ಕಾರದ ಮುಖೇನ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ, ಮುನ್ನೊತ್ತುವ, ರಾಜಕೀಯ- ನೈತಿಕತೆ ಮತ್ತು ಸಾಮಾಜಿಕ ನ್ಯಾಯಗಳನ್ನು ಆಧರಿಸಿದ ನಿಯಂತ್ರಣಕ್ಕೆ ಒಳಪಡಿಸುತ್ತದೆ. ಸಿನಿಮಾ ಕುರಿತು ಮಾತನಾಡುವಾಗ ಇದೆಲ್ಲವನ್ನೂ ಪರಿಗಣಿಸಬೇಕು.

Categories
ಲೇಖನಗಳು ವಿ.ಎನ್. ಲಕ್ಷ್ಮೀನಾರಾಯಣ

ನಾವು ತಲೆಕೆಳಗು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆಯೆ? – ಹೀಗೊಂದು ಸರ್ವವ್ಯಾಪಿ ವೈಚಾರಿಕ ‘ಸಾಮರ್ ಸಾಲ್ಟ್’ ವ್ಯಾಯಾಮ!

ವ್ಯಾಸರು ತಮ್ಮ ಕೃತಿಯಾದ ಮಹಾಭಾರತ, ಅದರ ಭಾಗವಾದ ಭಗವದ್ಗೀತೆಯಲ್ಲಿ, ಅದರ ಒಂದು ಪಾತ್ರವಾದ ಕೃಷ್ಣನ ಹೇಳಿಕೆಯಾಗಿ ವಿಶ್ವವನ್ನು, ಆಕಾಶದಲ್ಲಿ ಬೇರುಗಳು ಮತ್ತು ನೆಲದಲ್ಲಿ ಕೊಂಬೆಗಳು ಇರುವ ಮರಕ್ಕೆ ಹೋಲಿಸುತ್ತಾರೆ.

ರುಡಾಲ್ಫ್ ಸ್ಟೇನರ್ ಎಂಬ ಜರ್ಮನ್ ಶಿಕ್ಷಣತಜ್ಞ ಮಗುವಿನ ಬೆಳವಣಿಗೆಯನ್ನು ವಿವರಿಸುತ್ತಾ ನಾವು ಬೆಳೆಯುತ್ತೇವೆನ್ನುವುದು ಕೆಳಗಿನಿಂದ ಮೇಲಕ್ಕೆ ಅಲ್ಲ, ಮೇಲಿನಿಂದ ಕೆಳಕ್ಕೆ ಎನ್ನುತ್ತಾರೆ. ಅಂದರೆ ಹುಟ್ಟಿದಾಗ ಕೂರಲಾಗದ, ನಿಲ್ಲಲಾರದ, ಓಡಾಡಲಾಗದ, ಕೈಯಲ್ಲಿ ಏನನ್ನೂ ಹಿಡಿಯಲಾಗದ ಒಂದು ಮೆದುಳಿನ ಮುದ್ದೆಯಾದ ಮಗು ಕ್ರಮೇಣ ತನ್ನ ಅಂಗಾಂಗಗಳಿಗೆ, ಮುಖ್ಯವಾಗಿ ಕೈ, ಕಾಲುಗಳಿಗೆ ಮೆದುಳಿನ ನಿಯಂತ್ರಣವನ್ನು ಹರಿಸುವುದರ ಮೂಲಕ ಕೂರಲು, ನಿಲ್ಲಲು, ದೇಹದ ಸಮತೋಲನ ಸಾಧಿಸಿ ಓಡಾಡಲು, ಕುಣಿದಾಡಲು, ಶಕ್ತವಾದಾಗ ಮಗು ಬೆಳೆಯಿತು ಎಂದು ಹೇಳುವುದು ವಾಡಿಕೆಯಾಗಿದೆ. ಹೀಗೆ, ಮೆದುಳಿನ ಶಕ್ತಿ ಕೈಕಾಲುಗಳಿಗೆ ಇಳಿಯದ ಮಕ್ಕಳನ್ನು ಬೆಳವಣಿಗೆ ಕುಂಠಿತಗೊಂಡ ಮಗು ಎಂದು ಹೇಳುತ್ತಾರೆ.

Categories
ಡಾ. ರಾಮಲಿಂಗಪ್ಪ ಟಿ. ಬೇಗೂರು ಲೇಖನಗಳು

ಕನ್ನಡ ಭಾಷೆ – ಸಾಹಿತ್ಯಗಳ ಸಂಶೋಧನೆ – ಒಂದು ದಶಕದ (೨೦೦೧ – ೨೦೧೧) ಕಿರುನೋಟ

ಕೃತಿ-ಕನ್ನಡ ಭಾಷೆ – ಸಾಹಿತ್ಯಗಳ ಸಂಶೋಧನೆ

ಸರಣಿ-ಹಂಪಿ ವಿಶ್ವವಿದ್ಯಾಲಯ

ಕೃತಿಯನ್ನು ಓದಿ

Categories
ಬಿ ಎಸ್ ಶೈಲಜಾ ಲೇಖನಗಳು

ಹಿಗ್ಸ್ ಬೋಸಾನ್ – ಹೊಸ ಹಾದಿಯತ್ತ ಭೌತ ವಿಜ್ಞಾನ

ಹಿಗ್ಸ್ ಬೋಸಾನ್ – ಹೊಸ ಹಾದಿಯತ್ತ ಭೌತ ವಿಜ್ಞಾನ
ನಮ್ಮ ಸುತ್ತಲಿನ ಜಗತ್ತು ಯಾವ ಮೂಲಭೂತ ಕಣಗಳಿಂದ ಆಗಿದೆ ಎಂಬುದು ಬಹಳ ಕಾಲದಿಂದಲೂ ಮಾನವನನ್ನು ಕಾಡುತ್ತಿರುವ ಸಮಸ್ಯೆ. ಪಂಚಭೂತಗಳ ಸಿದ್ಧಾಂತ ಎಲ್ಲ ನಾಗರಿಕತೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರೂಪುಗೊಂಡಿರುವುದು ಇದೇ ಕಾರಣದಿಂದ.

ಸುಮಾರು ಇನ್ನೂರು ವರ್ಷಗಳ ಹಿಂದೆ ಮೂಲಭೂತ ವಾದ ಅಣುಗಳಿಂದ ಎಲ್ಲ ವಸ್ತುಗಳೂ ಉಂಟಾಗಿವೆ ಎಂಬ ಅಂಶವನ್ನು ಹಂತ ಹಂತವಾಗಿ ತಿಳಿದುಕೊಂಡೆವು. ಅಣು ಎಂದರೆ ಮಾಲೆಕ್ಯೂಲ್ ಎಂದು. ಅದರ ರಚನೆಯನ್ನೂ ಬಿಡಿಸಿ ಪರಮಾಣು ಅಂದರೆ ಆಟಂ ಎಂಬುದರ ಬಗ್ಗೆ ತಿಳುವಳಿಕೆ ಮೂಡಿತು. ಮುಂದೆ ಎಲೆಕ್ಟ್ರಾನ್ ಪತ್ತೆಯಾಯಿತು. ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇದೆ ಎಂಬ ವಿಷಯವೂ ತಿಳಿಯಿತು. ಹೀಗೆ ಮುಂದುವರೆದ ಅಧ್ಯಯನ ಪರಮಾಣುವಿನ ನ್ಯೂಕ್ಲಿಯಸ್ ನಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು ಇವೆ ಎಂಬಲ್ಲಿಗೆ ಮುಟ್ಟಿತು.

ಈ ಸಣ್ಣ ಕಣಗಳ ಗುಣ ವಿಶೇಷಗಳನ್ನು ಸೈದ್ಧಾಂತಿಕವಾಗಿ ಅಧ್ಯಯನ ಮಾಡಿ ಅವುಗಳನ್ನು ಪನಃ ವರ್ಗೀಕರಣ ಮಾಡಲಾಯಿತು. ಸ್ಪಿನ್ ಎಂಬ ಗುಣವನ್ನು ವಿವರಿಸುವ ಸೂಚ್ಯಂಕ ಅರ್ಧ ಇರುವ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಸಾಮೂಹಿಕ ವರ್ತನೆಯನ್ನು ಎನ್ರಿಕೋ ಫರ್ಮಿಯವರ ಸಿದ್ಧಾಂತ ವಿವರಿಸಿತು. ಅವನ್ನು ಫರ್ಮಿಯಾನ್ ಎಂದು ಕರೆದರು. ಈ ಸೂಚ್ಯಂಕ ಅರ್ಧ ಇಲ್ಲದಿರುವ ಕೆಲವು ಕಣಗಳ ವರ್ತನೆಯನ್ನು ಸತ್ಯೇಂದ್ರನಾಥ ಬೋಸ್ ಮತ್ತು ಆಲ್ಬರ್ಟ್ ಐನ್‌ಸ್ತೈನ್ ಅವರ ಸಿದ್ಧಾಂತ ವಿವರಿಸಿತು. ಇವುಗಳನ್ನು ಬೋಸಾನ್ ಎಂದು ಕರೆದಿದ್ದೇವೆ.

ಕಳೆದ ಐವತ್ತು ವರ್ಷಗಳಲ್ಲಿ ಈ ಅಧ್ಯಯನ ಮುಂದುವರೆದು ಕ್ವಾರ್ಕ್ ಎಂಬ ಇನ್ನೂ ಪುಟ್ಟ ಕಣಗಳು ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳ ಮೂಲ ವಸ್ತುಗಳು ಎಂದು ತೋರಿಸಿಕೊಟ್ಟಿತು. ಇವನ್ನು ಟಾಪ್, ಬಾಟಂ, ಅಪ್, ಡೌನ್, ಚಾರ್ಮ್ ಮತ್ತು ಸ್ಟ್ರೇಂಜ್ ಹೀಗೆ ಪುನಃ ವರ್ಗೀಕರಿಸಲಾಯಿತು.

ಬಿಗ್ ಬ್ಯಾಂಗ್ ಸಿದ್ಧಾಂತದ ಪ್ರಕಾರ ವಿಶ್ವದ ಆದಿ ಕಾಲದ ಒಂದು ಬಹು ಮುಖ್ಯ ಹಂತದಲ್ಲಿ ಈ ಎಲ್ಲ ಬಗೆಯ ಪುಟ್ಟ ಕಣಗಳ ಪರಸ್ಪರ ಕ್ರಿಯೆ ಅತಿ ಅವಶ್ಯವಾಗಿತ್ತು. ಈ ಕ್ರಿಯೆ ಹೇಗೆ ನಡೆದಿರಬಹುದು ಎಂಬುದನ್ನು ವಿವರಿಸುವ “ಸ್ಟಾಂಡರ್ಡ್ ಮಾಡೆಲ್” ಈಗ ಬಹುತೇಕ ವಿಜ್ಞಾನಿಗಳ ಮನ್ನಣೆ ಪಡೆದಿದೆ. ಇದರ ಪ್ರಕಾರ ಆರು ಬಗೆಯ ಮೂಲಭೂತ ಕಣಗಳು ಲೆಪ್ಟಾನ್ ಎಂಬ ವರ್ಗದವು ಮತ್ತು ಇನ್ನು ಆರು ಕ್ವಾರ್ಕ್ ಎಂಬ ವರ್ಗದವು ವಿಶ್ವದ ಇಂದಿನ ಸ್ವರೂಪಕ್ಕೆ ಕಾರಣವಾದವು. ಆದರೆ ಅವುಗಳನ್ನು ಒಂದುಗೂಡಿಸಲು ನಾಲ್ಕು ಬಲಗಳು (ಗುರುತ್ವ, ವಿದ್ಯುತ್ ಕಾಂತಿಯ ಬಲಗಳಲ್ಲದೆ ವೀಕ್ ಮತ್ತು ಸ್ಟ್ರಾಂಗ್ ಎಂಬ ಬಲಗಳು) ಬೇಕು. ಜೊತೆಗೆ ವರ್ಗಾವಣೆ ನಡೆಸಲು ಅವಶ್ಯವಾದ ಕೆಲವೊಂದು ವಿಶಿಷ್ಟ ಕಣಗಳೂ ಬೇಕು. ಆಯಾ ಬಲಗಳಿಗೆ ಅಗತ್ಯವಾದ ಮಧ್ಯಂತರ ಕಣಗಳನ್ನು ಸೈದ್ಧಾಂತಿಕವಾಗಿ ಊಹಿಸಿ ಅದೇ ದ್ರವ್ಯರಾಶಿಯ ಕಣಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿದ್ದು ಇತ್ತೀಚೆಗೆ.

ಈ ಕಣಗಳಿಗೆ ಇರುವ ದ್ರವ್ಯರಾಶಿ ಅವುಗಳ ಮೂಲಭೂತ ಗುಣ. ಅದು ಹೇಗೆ ನಿರ್ಧಾರವಾಗುತ್ತದೆ? ಎಂಬುದರ ಬಗ್ಗೆ ದೀರ್ಘ ಅಧ್ಯಯನ ನಡೆಸಿದ್ದು ಬಹಳ ಹಿಂದೆ, ಪೀಟರ್ ಹಿಗ್ಸ್ ಅವರ ತಂಡ. ಎಲ್ಲೆಲ್ಲೂ ಒಂದು ಕ್ಷೇತ್ರ ನಿರ್ಮಾಣವಾಗಿರುತ್ತದೆ. ಪ್ರತಿಯೊಂದು ಕಣವೂ ಈ ಕ್ಷೇತ್ರದಲ್ಲಿ ನಡೆಸುವ ಕ್ರಿಯೆಯೇ ದ್ರವ್ಯರಾಶಿಗೆ ಕಾರಣವಾಗುತ್ತದೆ. ಆದರೆ ಈ ಕ್ರಿಯೆಗೆ ಇನ್ನೊಂದು ಸಣ್ಣ ಕಣ ಅವಶ್ಯವಾಗುತ್ತದೆ. ಈ ಕ್ಷೇತ್ರಕ್ಕೆ ಹಿಗ್ಸ್ ಕ್ಷೇತ್ರ ಎಂದು ಹೆಸರು. ಈ ಕಣಕ್ಕೆ ಹಿಗ್ಸ್ ಬೋಸಾನ್ ಎಂದು ಹೆಸರು. ಇದರ ಗುಣವನ್ನಾಗಲೀ, ದ್ರವ್ಯರಾಶಿಯನ್ನಾಗಲೀ ಲೆಕ್ಕಹಾಕಿ ತಿಳಿಯುವುದು ಸಾಧ್ಯವಾಗಿರಲಿಲ್ಲ. ಅಲ್ಲದೆ ಇದು ಬಹಳ ಅಸ್ಥಿರ ; ಅಂದರೆ ಮಿಲಿ ಸೆಕೆಂಡುಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಇತರ ಕಣಗಳೊಡನೆ ಕ್ರಿಯೆಯಲ್ಲಿ ತೊಡಗಿಬಿಡುವುದು. ಇನ್ನು ಹುಡುಕುವುದಾದರೂ ಹೇಗೆ? ಇದೇ ದೊಡ್ಡ ಸವಾಲು.

ಈ ವಿಷಯವನ್ನು ಕುರಿತು ಲೆಡರ್ ಮನ್ ಎಂಬ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪುಸ್ತಕವನ್ನು ರಚಿಸಿದರು. ತರಲೆ ಕಣ ಎಂಬರ್ಥ ಬರುವ “ಗಾಡ್ ಡ್ಯಾಮ್ ಪಾರ್ಟಿಕಲ್” ಎಂದು ಶೀರ್ಷಿಕೆ ಕೊಟ್ಟರು. ಆದರೆ ಅದರ ಪ್ರಕಾಶಕರು ಡ್ಯಾಮ್ ಎಂಬ ಪದವನ್ನು ತೆಗೆದು ಹಾಕಿದರು. ಹೀಗೆ ಅದು ಗಾಡ್ ಪಾರ್ಟಿಕಲ್ ಎಂಬ ಅಡ್ಡ ಹೆಸರು ಪಡೆಯಿತು.

(ಇದು ಮಾಧ್ಯಮಗಳನ್ನು ಜನ ಸಾಮಾನ್ಯರನ್ನು ಆಕರ್ಷಿಸಿದ್ದು ಇದೇ ಕಾರಣಕ್ಕೆ.)

ಈ ಹಂತದಲ್ಲಿ ಸೆರ್ನ್ ಪ್ರಯೋಗ ಬಹಳ ಅಪೂರ್ವವಾದ ಅವಕಾಶ ಒದಗಿಸಿತು. ಸುಮಾರು ೩.೭ ಮಿಲಿಯನ್ ಹಿಗ್ಸ್ ಬೋಸಾನ್ ಗಳ ಪೈಕಿ ಒಂದು ಮಾತ್ರ ಉಂಟುಮಾಡಬಹುದಾದ ಕ್ರಿಯೆಯ ಆಧಾರದ ಮೇಲೆ ಅದನ್ನು ಪತ್ತೆ ಮಾಡುವ ಅಭೂತ ಪೂರ್ವ ಅವಕಾಶ ಅಲ್ಲಿ ದೊರೆಯಿತು.

ಜುಲೈ ೪ರಂದು ವಿಜ್ಞಾನಿಗಳು ಈ ಕಣದ ಅಸ್ತಿತ್ವವನ್ನು ಗುರುತಿಸಿರುವುದಾಗಿ ಘೋಷಿಸಿದರು.

ಇದೀಗ ವಿಜ್ಞಾನಿಗಳು ಹೊಸ ಬಗೆಯ ಸೈದ್ಧಾಂತಿಕ ಚಿಂತನೆಗಳತ್ತ ಗಮನ ಹರಿಸಬೇಕು. ವಿಶ್ವದಲ್ಲಿ ಇರುವ ಒಟ್ಟು ದ್ರವ್ಯ ರಾಶಿಯ ಶೇಕಡಾ ೪ ಮಾತ್ರ ಗೋಚರ ವಸ್ತು ಎಂದು ವಿಶ್ವವಿಜ್ಞಾನಿಗಳು ಸಾರಿದ್ದಾರೆ. ಶೇಕಡಾ ೭೦ಕ್ಕೂ ಹೆಚ್ಚು ಭಾಗ ಅವ್ಯಕ್ತ ಚೈತನ್ಯ ಎಂದಿದ್ದಾರೆ. (ಇದು ಶೇಕಡಾ ೨೦ ರಷ್ಟು ಇರಬಹುದಾದ ಅವ್ಯಕ್ತ ವಸ್ತು ಡಾರ್ಕ್ ಮ್ಯಾಟರ್ ಅಲ್ಲ.) ಈ ದಿಕ್ಕಿನಲ್ಲಿ ಹಿಗ್ಸ್ ಬೋಸಾನ್ ಹೊಸ ಬೆಳಕು ಚೆಲ್ಲ ಬಹುದು ಎಂಬುದು ಆಶಯ.

http://www.youtube.com/watch?v=9Uh5mTxRQcg

http://www.exploratorium.edu/origins/cern/ideas/higgs.html

http://www.youtube.com/watch?v=9Uh5mTxRQcg

http://www.bbc.co.uk/news/science-environment-19076355

http://www.cpepweb.org/images/chart_2006_4.jpg

http://particleadventure.org/

***

ಲೇಖಕರು: ಬಿ ಎಸ್ ಶೈಲಜಾ

Categories
ಲೇಖನಗಳು ವಿ.ಎನ್. ವೆಂಕಟಲಕ್ಷ್ಮಿ

ಸ್ವರ್ಗದೊಳೀ ಸ್ನೇಹ ದೊರೆವುದೇನು? (ವಿ.ಸೀ, ಮಧುರಚೆನ್ನ, ಕಡೆಂಗೋಡ್ಲು, ಎಸ್.ವಿ. ಪರಮೇಶ್ವರ ಭಟ್ಟ)

ಕೃತಿ:ಅಂಕಣಗಳು ವಿ.ಎನ್. ವೆಂಕಟಲಕ್ಷ್ಮಿ
ಲೇಖಕರು ವಿ.ಎನ್. ವೆಂಕಟಲಕ್ಷ್ಮಿ
ಕೃತಿಯನ್ನು ಓದಿ

Categories
ಡಾ. ಆರ್. ತಾರಿಣಿ ಶುಭದಾಯಿನಿ ಲೇಖನಗಳು

ಭಾರತೀಯ ಡಯಾಸ್ಪೊರಾ – ಒಂದು ಪ್ರಾಥಮಿಕ ವಿಶ್ಲೇಷಣೆ

ಕೃತಿ: ಡಾ. ಆರ್. ತಾರಿಣಿ ಶುಭದಾಯಿನಿ, ಲೇಖನಗಳು
ಲೇಖಕರು: ಡಾ. ಆರ್. ತಾರಿಣಿ ಶುಭದಾಯಿನಿ,
ಕೃತಿಯನ್ನು ಓದಿ

Categories
ಚಿದಂಬರ ಬೈಕಂಪಾಡಿ ಲೇಖನಗಳು

ಮಂಗಳೂರು ರಾಷ್ಟ್ರೀಯ ಯುವಜನೋತ್ಸವ ೨೦೧೨

ಕೃತಿ:ಮಂಗಳೂರು ರಾಷ್ಟ್ರೀಯ ಯುವಜನೋತ್ಸವ ೨೦೧೨
ಲೇಖಕರು: ಚಿದಂಬರ ಬೈಕಂಪಾಡಿ, ಲೇಖನಗಳು
ಕೃತಿಯನ್ನು ಓದಿ

Categories
ಲೇಖನಗಳು ಸುಧೀಂದ್ರ ದೇಶಪಾಂಡೆ

ಬೇಂದ್ರೆ ಕಾವ್ಯಶೈಲಿ

ಕೃತಿ: ಸುಧೀಂದ್ರ ದೇಶಪಾಂಡೆ ಲೇಖನಗಳು
ಲೇಖಕರು: ಸುಧೀಂದ್ರ ದೇಶಪಾಂಡೆ
ಕೃತಿಯನ್ನು ಓದಿ

Categories
ಆನಂದ ದೇಶಪಾಂಡೆ ಲೇಖನಗಳು

ಬೆವರು

ಕೃತಿ: ಆನಂದ ದೇಶಪಾಂಡೆ, ಲೇಖನಗಳು
ಲೇಖಕರು: ಆನಂದ ದೇಶಪಾಂಡೆ,
ಕೃತಿಯನ್ನು ಓದಿ

Categories
ಎ. ಓ. ಆವಲ ಮೂರ್ತಿ ಲೇಖನಗಳು

ಜಾಲರಹಿತ ಶಕ್ತಿಮೂಲದ ಹುಡುಕಾಟದಲ್ಲಿ…

ಕೃತಿ: ಎ. ಓ. ಆವಲ ಮೂರ್ತಿ, ಲೇಖನಗಳು
ಲೇಖಕರು: ಎ. ಓ. ಆವಲ ಮೂರ್ತಿ
ಕೃತಿಯನ್ನು ಓದಿ

Categories
ಲೇಖನಗಳು ಸರೋಜಾ ಪ್ರಕಾಶ

ಕ್ಷುದ್ರಗ್ರಹಗಳ ಅಧ್ಯಯನ

‘ನಾವಿಂದು ವೆಸ್ತಾದ ಕಕ್ಷೆಯನ್ನು ಸೇರಲಿದ್ದೇವೆ!!’ ಸೆಕ್ಯುರಿಟಿ ಚೆಕ್ ಮಾಡಲು ಬಂದವನಿಗೆ ಮುಖದ ತುಂಬಾ ನಗು ತುಂಬಿದ ಇಂಜಿನಿಯರ್ ಮಾರ್ಕ್ ರೇಮಂಡ್ ಹೇಳಿದ. ಆ ನಗು ಸಾಂಕ್ರಾಮಿಕವಾಗಿ ಬಿಗುಮುಖದ ಗಾರ್ಡ್‌ನನ್ನೂ ಆವರಿಸಿಕೊಂಡುಬಿಟ್ಟಿತು. ಆತನಿಗೆಷ್ಟು ಅರ್ಥವಾಯಿತೋ ಬಿಟ್ಟಿತೋ, ‘ಹೌದೇ ಸರ್?’ ಎಂದು ಆತನೂ ಸಂಭ್ರಮಿಸುತ್ತ ತಪಾಸಣೆ ನಡೆಸತೊಡಗಿದ.

ಅಂದು ಜುಲೈ ೧೬, ೨೦೧೧. ಮುಂಜಾನೆಯೇ ತಂತ್ರಜ್ಞರು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯ ಕಚೇರಿಯೊಳಗೆ ನುಗ್ಗುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹಾರಿಬಿಟ್ಟ ‘ಡಾನ್’ ಅಂದು ತನ್ನ ಗುರಿಯನ್ನು ತಲುಪಲಿದೆ.

Categories
ಡಾ|| ಕೆ. ಮಂಜಪ್ಪ ಲೇಖನಗಳು

ಸಿಹಿನೀರು ಸೀಗಡಿ ಮತ್ತು ಮೀನು ಸಾಕಣೆ

ಸಿಹಿನೀರು ಸೀಗಡಿ ಮತ್ತು ಮೀನು ಸಾಕಣೆ

ಭಾರತದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಸಿಹಿನೀರು ಸೀಗಡಿ ಪ್ರಭೇದಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಮ್ಯಾಕ್ರೋಬೇಕಿಯಂ ರೋಸೆನ್ ಬರ್ಗಿ ಎಂಬ ತಳಿಯು ವಾಣಿಜ್ಯ ಬೆಳೆಗೆ ಸೂಕ್ತವಾಗಿ ಕಂಡುಬಂದಿರುತ್ತದೆ. ಇದು ತನ್ನ ಜೀವಿತದ ಹೆಚ್ಚು ಕಾಲ ಸಿಹಿ ನೀರಿನಲ್ಲಿ ಬೆಳಯಲ್ಪಟ್ಟರೂ ವಂಶಾಭಿವೃದ್ಧಿಯ ಸಮಯದಲ್ಲಿ ಉಪ್ಪುನೀರಿನ ಸಹಯೋಗದೊಂದಿಗೆ ಮರಿಮಾಡುವ ಗುಣಲಕ್ಷಣಗಳನ್ನು ಪಡೆದುಕೊಂಡಿರುತ್ತದೆ. ಇದರ ಕೋಶಾವಸ್ಥೆಯ ಮರಿಗಳು ಉಪ್ಪುನೀರಿನಲ್ಲಿ ಬೆಳೆಯಲ್ಪಟ್ಟು ಅವುಗಳು ಸಣ್ಣ ಮರಿಗಳಾಗುತ್ತಿದ್ದಂತೆ ಸಿಹಿನೀರಿನೊಂದಿಗೆ ಬೆಳೆಯುವ ಗುಣವಿಶೇಷತೆಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿಯೇ ಇದನ್ನು ಸಿಹಿನೀರು ಸೀಗಡಿ ಎಂದು ಕರೆಯಲಾಗುವುದು. ಮ್ಯಾಕ್ರೊಬ್ರೇಕಿಯಂ ರೋಸೆನ್ ಬರ್ಗಿ ಸೀಗಡಿಯು ಮಿಶ್ರಹಾರಿಯಾಗಿದ್ದು, ಕೃತಕ ಆಹಾರವನ್ನು ಸಹ ಸೇವಿಸಬಲ್ಲದು. ಈ ಸೀಗಡಿಯನ್ನು ಏಕತಳಿ ಹಾಗೂ ಮಿಶ್ರತಳಿಯಾಗಿಯೂ ಮೀನುಗಳೊಂದಿಗೆ ಪಾಲನೆ ಮಾಡಬಹುದು. ಈ ಸೀಗಡಿಯು ಒಂದು ವರ್ಷದಲ್ಲಿ ೨೫೦ ಗ್ರಾಂವರೆಗೂ ಬೆಳೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿದೇಶ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಭಾರತದಲ್ಲಿ ೩೦ ಸಾವಿರ ಟನ್‌ಗೂ ಹೆಚ್ಚು ಸಿಹಿನೀರು ಸೀಗಡಿ ಉತ್ಪಾದನೆಯಾಗುತ್ತಿದ್ದು, ಕೃಷಿಗೆ ಪೂರಕವಾದ ಜಲ ಸಂಪನ್ಮೂಲಗಳು ಲಭ್ಯವಿರುವುದರಿಂದ ಇದರ ಕೃಷಿಯನ್ನು ಮೀನು ಕೃಷಿಕರು ಅಳವಡಿಸಿಕೊಳ್ಳಬೇಕಾಗಿದೆ.

Categories
ಚಿದಂಬರ ಬೈಕಂಪಾಡಿ ಲೇಖನಗಳು

ಎರ್ಮಾಳ್ ಜಪ್ಪು-ಖಂಡೇವು ಅಡೆಪು

ಕೃತಿ: ಚಿದಂಬರ ಬೈಕಂಪಾಡಿ, ಲೇಖನಗಳು
ಲೇಖಕರು: ಚಿದಂಬರ ಬೈಕಂಪಾಡಿ
ಕೃತಿಯನ್ನು ಓದಿ

Categories
ನಾ. ಕಾರ೦ತ ಪೆರಾಜೆ ಲೇಖನಗಳು

ಬಹುರೂಪ ಕೊಡಬಲ್ಲ ಹಳ್ಳಿರುಚಿ ಬಾಳೆಕಾಯಿ ಶ್ಯಾವಿಗೆ

ಕೃತಿ:ಅಂಕಣಗಳು ನಾ. ಕಾರ೦ತ ಪೆರಾಜೆ
ಲೇಖಕರು: ನಾ. ಕಾರ೦ತ ಪೆರಾಜೆ
ಕೃತಿಯನ್ನು ಓದಿ

Categories
ಪಾಲಹಳ್ಳಿ ವಿಶ್ವನಾಥ್ ಲೇಖನಗಳು

ವಿಶ್ವಕಿರಣಗಳು (ಕಾಸ್ಮಿಕ್ ರೇಸ್) (ಜನ್ಮ ಶತಾಬ್ಧಿ)

() ಮೊದಲ ಸ೦ಶೋಧನೆಗಳು

ವಿಶ್ವದ ವಿವಿಧ ಭಾಗಗಳಿ೦ದ ಭೂಮಿಗೆ ಬರುತ್ತಿರುವುದು ವಿವಿಧ ಆಕಾಶಕಾಯಗಳ ಬೆಳಕು, ಅಥವಾ ಬೇರೆ ಬೇರೆ ಶಕ್ತಿಯ ಫೋಟಾನ್‌ಗಳು ಮಾತ್ರವಲ್ಲ (ಕ್ಷಕಿರಣ ಇತ್ಯಾದಿ). ಪ್ರತಿ ಕ್ಷಣವೂ ವಿವಿಧ ತೂಕದ ಮತ್ತು ಶಕ್ತಿಯ ಕಣಗಳು (ಪಾರ್ಟಿಕಲ್ಸ್) ಈ ಭೂಮಿಯ ವಾತಾವರಣವನ್ನು ಅಪ್ಪಳಿಸುತ್ತಿರುತ್ತವೆ. ಈ ಕಣಗಳಲ್ಲಿ ಹೆಚ್ಚು ಜಲಜನಕ (ಪ್ರೋಟಾನ್) ಮತ್ತು ಬೇರೆ ವಸ್ತುಗಳ ಪರಮಾಣುಬೀಜ (ನ್ಯೂಕ್ಲಿಯಸ್)ಗಳು. ಈ ಕಣಗಳು ಭೂಮಿಯ ವಾತಾವರಣದ ಇತರ ಪರಮಾಣುಗಳೊ೦ದಿಗೆ (ಸಾರಜನಕ ಇತ್ಯಾದಿ) ಸೇರಿ ಎಲ್ಲ ರೀತಿಯ ಇತರೇ ಕಣಗಳನ್ನೂ (ಎಲೆಕ್ಟ್ರಾನ್, ಮೆಸಾನ್ ಇತ್ಯಾದಿ) ಹುಟ್ಟಿಸುತ್ತದೆ. ಈ ಕಣಗಳ ಸುರಿಮಳೆಯಲ್ಲೇ ಈ ಭೂಮಿಯ ಪ್ರಾಣಿಗಳು ಮೊದಲಿ೦ದಲೂ ಜೀವನ ನಡೆಸಿವೆ. ಈಗಲೂ ನಿಮಿಷಕ್ಕೆ ೩೦೦ ಕಣಗಳು ಒಬ್ಬ ಮನುಷ್ಯನನ್ನು ತೋಯಿಸುತ್ತಿರುತ್ತದೆ. ಈ ಕಣಗಳ ಸುರಿಮಳೆಯಲ್ಲಿ ಕೆಲವಾದರೂ ಎ೦ದೋ ಹಿ೦ದೆ ಡಾರ್ವಿನ್‌ ವಿಕಾಸವಾದ ಸಿದ್ಧಾ೦ತದ ಮುಟೇಶನ್ (ಬದಲಾವಣೆ)ಗೆ ಜವಾಬ್ದಾರಿ ಇದ್ದಿರಬಹುದು. ಈ ಕಣಗಳ ಹೆಸರು – ವಿಶ್ವಕಿರಣಗಳು! ೧೦೦ ವರ್ಷಗಳಾ ಹಿಒದೆ ಇವುಗಳನ್ನು ಕ೦ಡುಹಿಡಿಯಲಾಯಿತು .

Categories
ಲೇಖನಗಳು ಸಿದ್ದಿಕ್ ನೀರಾಜೆ

ಆಕರ್ಷಕ ಚಾರಣ ತಾಣ…. ಏಕ ಶಿಲಾ ಪರ್ವತ ಬೆಳ್ತಂಗಡಿಯ “ಗಡಾಯಿ ಕಲ್ಲು…”

ಕೃತಿ: ಸಿದ್ದಿಕ್ ನೀರಾಜೆ ಲೇಖನಗಳು,
ಲೇಖಕರು: ಸಿದ್ದಿಕ್ ನೀರಾಜೆ,
ಕೃತಿಯನ್ನು ಓದಿ

Categories
ಎ.ವಿ. ಗೋವಿಂದ ರಾವ್ ಲೇಖನಗಳು

ಚಲನೆಯ ಸಮೀಕರಣಗಳು (ಇಕ್ವೇಷನ್ಸ್ ಆಫ್ ಮೋಷನ್)

ಕೃತಿ:ಅಂಕಣಗಳು ಎ.ವಿ. ಗೋವಿಂದ ರಾವ್
ಲೇಖಕರು: ಎ.ವಿ. ಗೋವಿಂದ ರಾವ್
ಕೃತಿಯನ್ನು ಓದಿ

Categories
ಲೇಖನಗಳು ಸಿ.ಎಸ್. ಸುರೇಶ್

ಕಾಫಿ ಸೊರಗುವ ತೋಟ ಕರಗುವ ಕನಸು

ಕೃತಿ:ಅಂಕಣಗಳು ಸಿ.ಎಸ್.ಸುರೇಶ್
ಲೇಖಕರು: ಸಿ.ಎಸ್. ಸುರೇಶ್
ಕೃತಿಯನ್ನು ಓದಿ

Categories
ಜಿ.ವಿ. ನಿರ್ಮಲ ಲೇಖನಗಳು

ಚಂದ್ರ ಕುಗ್ಗುತ್ತಿದ್ದಾನೆಯೆ?

ಕೃತಿ:ಜಿ.ವಿ. ನಿರ್ಮಲ ಲೇಖನಗಳು
ಲೇಖಕರು ಜಿ.ವಿ. ನಿರ್ಮಲ,
ಕೃತಿಯನ್ನು ಓದಿ

Categories
ಅನುಸೂಯ ಶರ್ಮ ಲೇಖನಗಳು

ಲೇಖನಗಳು – ಅನುಸೂಯ ಶರ್ಮ

ಕೃತಿ:ಅನುಸೂಯ ಶರ್ಮ ಲೇಖನಗಳು
ಲೇಖಕರು: ಅನುಸೂಯ ಶರ್ಮ
ಕೃತಿಯನ್ನು ಓದಿ

Categories
ಲೇಖನಗಳು ಸಿದ್ಧರಾಮ ಹಿರೇಮಠ

ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಕೂಡ್ಲಿಗಿ ತಾಲೂಕಿನ ಅಲಕ್ಷಿತ ವಿಶೇಷ ಐತಿಹಾಸಿಕ ಗ್ರಾಮ ವಲಸೆಯ ಆರಾಧ್ಯ ದೈವ ಯರಗಟ್ಟೆನಾಯಕನ ದೇಗುಲ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಇಲ್ಲಿನ ಜರಿಮಲೆ, ಗುಡೇಕೋಟೆ, ಓಬಳಶೆಟ್ಟಿಹಳ್ಳಿ ಮುಂತಾದ ಭಾಗಗಳು ಪಾಳೆಗಾರರ ಕುರುಹುಗಳನ್ನು ಒಳಗೊಂಡಿವೆ. ಹೀಗಾಗಿ ಇಲ್ಲಿನ ಪ್ರತಿಯೊಂದು ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊಂದಿವೆ. ಇವುಗಳಲ್ಲಿ ವಿಶೇಷವಾದ ಐತಿಹಾಸಿಕ ಕುರುಹುಗಳಿರುವ ಅಲಕ್ಷಿತ ಗ್ರಾಮ ವಲಸೆ.

Categories
ಜಿತೇಂದ್ರ ಕುಂದೇಶ್ವರ ಲೇಖನಗಳು

ಅನನ್ಯ ಜೀವಜಲ ಸಂಕುಲಕ್ಕೆ ಮೂಲ ಕಾರ್ಕಳದ ಆನೆಕೆರೆ

ಕೃತಿ:ಜಿತೇಂದ್ರ ಕುಂದೇಶ್ವರ ಲೇಖನಗಳು
ಲೇಖಕರು ಜಿತೇಂದ್ರ ಕುಂದೇಶ್ವರ,
ಕೃತಿಯನ್ನು ಓದಿ

Categories
ಲೇಖನಗಳು ಸರೋಜಾ ಪ್ರಕಾಶ

ಬಾನಕಸ (ಸ್ಪೇಸ್ ಜಂಕ್)

ಬಾನಕಸ ಅಥವಾ ಸ್ಪೇಸ್ ಜಂಕ್ ಎಂದರೆ ಭೂಮಿಯ ಸುತ್ತಲೂ ತಿರುಗುತ್ತಿರುವ ವಿವಿಧ ಆಕಾರ, ಗಾತ್ರಗಳ ಅಸಂಖ್ಯಾತ ಕಸ ಮತ್ತು ಲೋಹದ ಚೂರುಗಳು. ಬೇರೆ ಬೇರೆ ಎತ್ತರಗಳಲ್ಲಿ, ಬೇರೆ ಬೇರೆ ವೇಗಗಳಲ್ಲಿ ತಿರುಗುತ್ತಿರುವ ಇವುಗಳಲ್ಲಿ ಹೆಚ್ಚಿನವು ಮಾನವ ನಿರ್ಮಿತ ಉಪಗ್ರಹಗಳ ಭಗ್ನಾವಶೇಷಗಳು. ಮೊದಮೊದಲು ಅಗಾಧವಾದ ಭೂಸುತ್ತಲ ಅವಕಾಶದಲ್ಲಿ ಈ ಚಿಕ್ಕ, ಪುಟ್ಟ ಕಸಗಳು ಏನೂ ಮಾಡಲಾರವು ಎಂಬ ಭಾವನೆ ಇತ್ತು. ಆದರೆ ಯಾವುದೇ ಗುರಿಯಿಲ್ಲದೆ ಬಾಹ್ಯಾಕಾಶದಲ್ಲಿ ಗಿರಕಿ ಹೊಡೆಯುತ್ತಿರುವ ಬಾನಕಸ ಭೂಮಿಯಿಂದ ಉಡಾವಣೆಯಾಗುತ್ತಿರುವ ಈಗಿನ ಕೃತಕ ಉಪಗ್ರಹಗಳಿಗೆ ಅಪಾಯಕಾರಿ ಎಂಬುದು ಸಾಬೀತಾಗಿದೆ. ಬಾಹ್ಯಾಕಾಶ ಸಂಶೋಧನೆ, ಭೂ ಮತ್ತು ಹವಾಮಾನ ಅಧ್ಯಯನ, ದೂರಸಂಪರ್ಕ ಇತ್ಯಾದಿ ಹಲವಾರು ಕ್ಷೇತ್ರಗಳ ಪ್ರಗತಿಯಿಂದಾಗಿ ದಿನದಿಂದ ದಿನಕ್ಕೆ ಉಪಗ್ರಹಗಳ  ಹಾರಾಟ ಹೆಚ್ಚುತ್ತಿದೆ, ಮಾನವಸಹಿತ ಮತ್ತು ಮಾನವರಹಿತ ಬಾನನೌಕೆಗಳು ಬಾಹ್ಯ ಜಗತ್ತಿನ ಶೋಧಕ್ಕೆ ಮುನ್ನುಗ್ಗುತ್ತಿವೆ, ಹಾಗೆಯೇ ಹಳೆಯ, ಆಯಸ್ಸು ಮುಗಿದ ಉಪಗ್ರಹಗಳನ್ನು ಕೈಬಿಡುವುದು ಕೂಡ ಅನಿವಾರ್ಯವಾಗಿದೆ. ಅವು ಭೂಸಂಪರ್ಕ ಕಳೆದುಕೊಂಡರೂ, ಅವುಗಳ ಬಿಡಿಭಾಗಗಳು ಕಳಚಿ ಚೂರಾಗಿ, ಅತಿನೇರಳೆ ಕಿರಣಗಳಿಗೆ ಸತತ ಸಿಕ್ಕು ಸವೆದರೂ ಲಕ್ಷಗಟ್ಟಲೆ ವರ್ಷಗಳವರೆಗೆ ಭೂಮಿಯ ಸುತ್ತ ತಮ್ಮ ಕಕ್ಷೆಯಲ್ಲಿ ಸುತುತ್ತಲೇ ಇರುತ್ತವೆ.

Categories
ರಮಾ ಎಸ್. ಅರಕಲಗೂಡು ಲೇಖನಗಳು

ಅಂಕಣಗಳು – ರಮಾ ಎಸ್. ಅರಕಲಗೂಡು

ಕೃತಿ: ಅಂಕಣಗಳು – ರಮಾ ಎಸ್. ಅರಕಲಗೂಡು

ಲೇಖಕರು: ರಮಾ ಎಸ್. ಅರಕಲಗೂಡು

ಕೃತಿಯನ್ನು ಓದಿ     |     Download

Categories
ಲೇಖನಗಳು ಸರೋಜಾ ಪ್ರಕಾಶ

ಬಾನಲ್ಲಿನ ಇನ್ನೊಂದು ಚಂದ್ರ

ಈಗಿರುವ ನಮ್ಮ ಚಂದ್ರನ ಹೊರತಾಗಿ ಇನ್ನೊಂದು ಚಂದ್ರನೂ ಭೂಮಿಯನ್ನು ಸುತ್ತುತ್ತಿರುವನೆಂದರೆ ನಿಮಗೆ ಆಶ್ಚರ್ಯವಾದೀತು! ಆದರಿದು ನಿಜ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಕೃತಕ ಚಂದ್ರನನ್ನು ಆಕಾಶಕ್ಕೆ ಹಾರಿಬಿಟ್ಟಿದೆ . ಕಳೆದ ವರ್ಷದ ಜುಲೈ ತಿಂಗಳಲ್ಲಿ ಈ ಚಂದ್ರ ಒಂದು ದಶಕದ ಸಾರ್ಥಕ ಸೇವೆಯನ್ನು ಪೂರೈಸಿತೆಂದು ಸಂತೋಷದ ಆಚರಣೆಯೂ ನಾಸಾದಲ್ಲಿ ನಡೆಯಿತು. (ದಾಖಲೆಗಳ ಪ್ರಕಾರ ಗೆಲಿಲಿಯೋ ಎಂಬ ವಿಜ್ಞಾನಿ ೧೬೦೯ರಲ್ಲಿ ಮೊಟ್ಟಮೊದಲಬಾರಿ ದೂರದರ್ಶಕದ ಮೂಲಕ ಬಾಹ್ಯ ಆಕಾಶವನ್ನು ವೀಕ್ಷಿಸಿದ್ದ. ಆದ್ದರಿಂದ ೨೦೦೯ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಆಚರಣಾ ವರ್ಷ’ ಎಂದು ಆಚರಿಸಲಾಯಿತು. ಭೂಮಿಯ ಮೇಲ್ಮೈನಿಂದ ನೂರು ಕಿಮೀ ಆಚೆಯ ಆಕಾಶವನ್ನು ಬಾಹ್ಯ ಆಕಾಶ ಎಂದು ಗುರುತಿಸಲಾಗುತ್ತಿದೆ. ಹಾಗಾಗಿ ಬಾಹ್ಯ ಆಕಾಶದ ವೈಚಿತ್ರ್ಯಗಳ ಬಗ್ಗೆ ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಿಸುವುದೇ ಈ ಆಚರಣೆಯ ಗುರಿ.)

Categories
ಜಿ.ಕೃಷ್ಣಪ್ರಸಾದ ಪುಸ್ತಕಗಳಿಂದ ಸಹಜ ಸಮೃದ್ಧ ಪ್ರಕಾಶನ

ಅನ್ನ ಕೊಡುವ ಅನನ್ಯ ತೋಟ ತದ್ರೂಪಿ ಕಾಡು

ಕೃತಿ: ಅನ್ನ ಕೊಡುವ ಅನನ್ಯ ತೋಟ ತದ್ರೂಪಿ ಕಾಡು
ಪ್ರಕಾಶನ : ಸಹಜ ಸಮೃದ್ಧ
ಲೇಖಕರು: ಜಿ. ಕೃಷ್ಣಪ್ರಸಾದ್, ಶಿವಾನಂದ ಕಳವೆ

ಕೃತಿಯನ್ನು ಓದಿ

Categories
ಜಿ.ಕೃಷ್ಣಪ್ರಸಾದ ಪುಸ್ತಕಗಳಿಂದ ಸಹಜ ಸಮೃದ್ಧ ಪ್ರಕಾಶನ

ಬಿ.ಟಿ.ಗೆ ಒತ್ತು – ಬದನೆಗೆ ಕುತ್ತು

ಕೃತಿ: ಬಿ.ಟಿ.ಗೆ ಒತ್ತು – ಬದನೆಗೆ ಕುತ್ತು
ಪ್ರಕಾಶನ : ಸಹಜ ಸಮೃದ್ಧ
ಸಂಪಾದಕ : ಜಿ.ಕೃಷ್ಣಪ್ರಸಾದ

ಕೃತಿಯನ್ನು ಓದಿ