Categories
ಪಾಲಹಳ್ಳಿ ವಿಶ್ವನಾಥ್ ಲೇಖನಗಳು

ವಿಶ್ವಕಿರಣಗಳು (ಕಾಸ್ಮಿಕ್ ರೇಸ್) (ಜನ್ಮ ಶತಾಬ್ಧಿ)

() ಮೊದಲ ಸ೦ಶೋಧನೆಗಳು

ವಿಶ್ವದ ವಿವಿಧ ಭಾಗಗಳಿ೦ದ ಭೂಮಿಗೆ ಬರುತ್ತಿರುವುದು ವಿವಿಧ ಆಕಾಶಕಾಯಗಳ ಬೆಳಕು, ಅಥವಾ ಬೇರೆ ಬೇರೆ ಶಕ್ತಿಯ ಫೋಟಾನ್‌ಗಳು ಮಾತ್ರವಲ್ಲ (ಕ್ಷಕಿರಣ ಇತ್ಯಾದಿ). ಪ್ರತಿ ಕ್ಷಣವೂ ವಿವಿಧ ತೂಕದ ಮತ್ತು ಶಕ್ತಿಯ ಕಣಗಳು (ಪಾರ್ಟಿಕಲ್ಸ್) ಈ ಭೂಮಿಯ ವಾತಾವರಣವನ್ನು ಅಪ್ಪಳಿಸುತ್ತಿರುತ್ತವೆ. ಈ ಕಣಗಳಲ್ಲಿ ಹೆಚ್ಚು ಜಲಜನಕ (ಪ್ರೋಟಾನ್) ಮತ್ತು ಬೇರೆ ವಸ್ತುಗಳ ಪರಮಾಣುಬೀಜ (ನ್ಯೂಕ್ಲಿಯಸ್)ಗಳು. ಈ ಕಣಗಳು ಭೂಮಿಯ ವಾತಾವರಣದ ಇತರ ಪರಮಾಣುಗಳೊ೦ದಿಗೆ (ಸಾರಜನಕ ಇತ್ಯಾದಿ) ಸೇರಿ ಎಲ್ಲ ರೀತಿಯ ಇತರೇ ಕಣಗಳನ್ನೂ (ಎಲೆಕ್ಟ್ರಾನ್, ಮೆಸಾನ್ ಇತ್ಯಾದಿ) ಹುಟ್ಟಿಸುತ್ತದೆ. ಈ ಕಣಗಳ ಸುರಿಮಳೆಯಲ್ಲೇ ಈ ಭೂಮಿಯ ಪ್ರಾಣಿಗಳು ಮೊದಲಿ೦ದಲೂ ಜೀವನ ನಡೆಸಿವೆ. ಈಗಲೂ ನಿಮಿಷಕ್ಕೆ ೩೦೦ ಕಣಗಳು ಒಬ್ಬ ಮನುಷ್ಯನನ್ನು ತೋಯಿಸುತ್ತಿರುತ್ತದೆ. ಈ ಕಣಗಳ ಸುರಿಮಳೆಯಲ್ಲಿ ಕೆಲವಾದರೂ ಎ೦ದೋ ಹಿ೦ದೆ ಡಾರ್ವಿನ್‌ ವಿಕಾಸವಾದ ಸಿದ್ಧಾ೦ತದ ಮುಟೇಶನ್ (ಬದಲಾವಣೆ)ಗೆ ಜವಾಬ್ದಾರಿ ಇದ್ದಿರಬಹುದು. ಈ ಕಣಗಳ ಹೆಸರು – ವಿಶ್ವಕಿರಣಗಳು! ೧೦೦ ವರ್ಷಗಳಾ ಹಿಒದೆ ಇವುಗಳನ್ನು ಕ೦ಡುಹಿಡಿಯಲಾಯಿತು .