Categories
ಅಂಕಣಗಳು ಕ್ಷಮಾ ವಿ. ಭಾನುಪ್ರಕಾಶ್ ಜೀವಶಾಸ್ತ್ರ (ಬಯಾಲಜಿ) ವಿಜ್ಞಾನ ವಿಶ್ಲೇಷಣೆ ಮತ್ತು ಸಂಶೋಧನೆ

ಅಂಕಣಗಳು – ಕ್ಷಮಾ ವಿ ಭಾನುಪ್ರಕಾಶ್

ಅಂಕಣ: ಜೀವಕೋಶ

ಲೇಖಕರು : ಕ್ಷಮಾ ವಿ ಭಾನುಪ್ರಕಾಶ್

ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ (ಹೆಲ್ತ್ ಸೈನ್ಸ್) ಲೇಖನಗಳು ವಿಜ್ಞಾನ

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್)

ಕಾಲವೊಂದಿತ್ತು; ರೋಗಿಯು ವೈದ್ಯರ ಬಳಿ ಹೋದಾಗ, ತನ್ನ ಹಿಂದಿನ ಚಿಕಿತ್ಸೆಯ ವಿವರವನ್ನು ಹಾಗೂ ದಾಖಲೆಗಳನ್ನು ಸರಿಯಾಗಿ ಬಹಿರಂಗಪಡಿಸಲಾಗದೆ ವೈದ್ಯರ ಎದುರಿಗೆ ಅಸಹಾಯಕನಾಗಿ ಕೈಚೆಲ್ಲಿ ಕುಳಿತುಕೊಳ್ಳುವುದು ಒಂದೆಡೆಯಾದರೆ, ಅತ್ತ ರೋಗಿಯ ಪೂರ್ವಾಪರ ಅರಿಯದ ವೈದ್ಯರು ವಿಧಿಯಿಲ್ಲದೇ ರೋಗಿಯ ಪೂರ್ವದ ಚಿಕಿತ್ಸೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ, ಕಡೆಗೂ ಅಲ್ಪ ಸ್ವಲ್ಪ ಮಾಹಿತಿ ಪಡೆದು, ತನ್ನ ಮುಂದಿನ ಚಿಕಿತ್ಸೆ ಆರಂಭಿಸುತ್ತಾನೆ. ಈ ಎರಡೂ ಸಂದರ್ಭಗಳಲ್ಲಿ, ರೋಗಿ ಮತ್ತು ವೈದ್ಯರಿಗಾಗುವ ನಷ್ಟ ಒಂದೆರಡಲ್ಲ; ಒಂದೆಡೆ ಸಮಯದ ಹರಣ ನಡೆದರೆ, ಇನ್ನೊಂದಡೆ ಸರಿಯಾದ ಮಾಹಿತಿಯು ಸಿಗದೇ ವೈದ್ಯರು ರೋಗಿ ಹೇಳಿದನ್ನು ಕೇಳಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ; ಇದರಿಂದ ಚಿಕಿತ್ಸೆಗೆಂದು ಬರುವ ಇತರೆ ರೋಗಿಗಳ ರೋಗದ ತೀವ್ರತೆ ಎಷ್ಟೇ ಇದ್ದರೂ ಬಹಳ ಸಮಯ ಕಾಯಬೇಕಾಗುತ್ತದೆ. ಈ ಸಮಸ್ಯೆಗೆ ಒಂದು ಪರಿಹಾರವನ್ನು ವೈದ್ಯ ವಿಜ್ಞಾನದಲ್ಲಿ ಕಂಡು ಕೊಂಡಿದ್ದಾರೆ. ಅದನ್ನೇ ನಾವು ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್) ಎಂದು ಕರೆಯುತ್ತೇವೆ.

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ ತಂತ್ರಜ್ಞಾನದಿಂದಾಗಿ, ರೋಗಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಹಾಗೂ ಪುನಃ ಬೇಕಾದ ಹಳೆಯ ದಾಖಲೆಗಳನ್ನು ಹಿಂಪಡೆಯಬಹುದು. ಇದರಿಂದಾಗಿ ವೈದ್ಯರ ಹಾಗೂ ರೋಗಿಯ ಅಮೂಲ್ಯ ಸಮಯದ ಉಳಿತಾಯವಾಗುತ್ತದೆ. ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು ಆಸ್ಪತ್ರೆಯಲ್ಲಿ ರೋಗಿಯ ನೋಂದಣಿಯಿಂದ ಆರಂಭವಾಗಿ, ವಿವಿಧ ಹಂತಗಳನ್ನು ದಾಟಿ, ಕಡೆಗೆ ಆಸ್ಪತ್ರೆಯಿಂದ ರೋಗಿಯ ನಿರ್ಗಮನದವವರೆಗೂ ನಡೆಯುವ ಪ್ರಕ್ರಿಯೆ.

ಈ ವ್ಯವಸ್ಥೆಯ ಎಲ್ಲಾ ಹಂತಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆಯುತ್ತವೆ; ಪ್ರತಿಯೊಂದು ಹಂತದಲ್ಲಿಯೂ ರೋಗಿಯು ಆಸ್ಪತ್ರೆಯ ವಿವಿಧ ಇಲಾಖೆಯನ್ನು ಸಂದರ್ಶಿಸಬೇಕಾಗುತ್ತದೆ. ಅಲ್ಲಿ ನಡೆಯುವ ಪರೀಕ್ಷೆಗಳು, ಸಂದರ್ಶನ ಹಾಗೂ ಚಿಕಿತ್ಸೆಗಳ ವಿವರಗಳು, ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ನಲ್ಲಿ ದಾಖಲಾಗುತ್ತದೆ. ಹಾಗಾಗಿ, ಇಲ್ಲಿ ಎಲ್ಲಿಯೂ ಪೇಪರ್ ಬಳಕೆಯಾಗದೆ ಕೇವಲ ಕಂಪ್ಯೂಟರ್ಗಳಲ್ಲಿ ಮಾಹಿತಿಯು ದಾಖಲಾಗುತ್ತಾ, ವರ್ಗಾವಣೆಯಾಗುತ್ತಾ ಹೋಗುತ್ತದೆ. ಪ್ರತಿ ಹಂತ ಹಾಗೂ ಪ್ರತಿ ಇಲಾಖೆಯಲ್ಲಿ ನಡೆಯುವ ಚಟುವಟಿಕೆಗಳು, ವ್ಯವಸ್ಥಿತವಾಗಿ ಒಂದಾದ ಮೇಲೊಂದರಂತೆ ಯೋಜನಾಬದ್ಧವಾಗಿ ನಡೆಯುತ್ತವೆ. ಇದನ್ನೇ ನಾವು ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು ಎನ್ನುತ್ತೇವೆ.

ಸ್ಕ್ಯಾನರ್, ಸುಧಾರಿತ ವೈದ್ಯಕೀಯ ಚಿತ್ರಣ ಅನ್ವಯಿಕೆ (ಅಡ್ವಾನ್ಸಡ್ ಕ್ಲಿನಿಕಲ್ ಇಮೇಜಿಂಗ್ ಅಪ್ಲಿಕೇಶನ್), ಆಸ್ಪತ್ರೆಯ ಮಾಹಿತಿ ವ್ಯವಸ್ಥೆ (ಹಾಸ್ಪಿಟಲ್ ಇನ್ಫಾರ್ಮೆಶನ್ ಸಿಸ್ಟಮ್ಸ್) ಮತ್ತು ಚಿತ್ರ ದಾಖಲಾತಿ ಮತ್ತು ಸಂವಹನಾ ವ್ಯವಸ್ಥೆಗಳನ್ನು (ಪಿಕ್ಚರ್ ಆರ್ಕೈವಲ್ ಅಂಡ್ ಕಮ್ಯುನಿಕೇಷನ್ ಸಿಸ್ಟಮ್ಸ್) ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯು (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್) ಒಳಗೊಂಡಿರುತ್ತದೆ.

ರೋಗಿಯ ಮಾಹಿತಿಯನ್ನು ನಾವು ಆಸ್ಪತ್ರೆಯ ಮಾಹಿತಿ ವ್ಯವಸ್ಥೆಯಲ್ಲಿ ಸಂಗ್ರಹಿಸಿದರೆ, ರೋಗಿಯ ಚಿಕಿತ್ಸೆಯ ಸಮಯದಲ್ಲಿ ತಗೆದ ಕ್ಷ-ಕಿರಣ, ಅಲ್ಟ್ರಾಸೌಂಡ್, ಎಂ ಆರ್ ಐ ಹಾಗು ಇತರೆ ಚಿತ್ರಗಳನ್ನು ಚಿತ್ರ ದಾಖಲಾತಿ ಮತ್ತು ಸಂವಹನಾ ವ್ಯವಸ್ಥೆಯಲ್ಲಿ ಸಂಗ್ರಹಿಸುತ್ತಾರೆ. ಸ್ಕ್ಯಾನರ್ಗಳಿಂದ ಮೂಡಿ ಬರುವ ಚಿತ್ರಗಳನ್ನು ರೇಡಿಯೊಲೊಜಿಸ್ಟ್ಗಳು, ಸುಧಾರಿತ ವೈದ್ಯಕೀಯ ಚಿತ್ರಣ ಅನ್ವಯಿಕೆಗಳನನ್ನು ಬಳಸಿ ಪರಿಷ್ಕರಿಸುತ್ತಾರೆ. ರೇಡಿಯೊಲೊಜಿಸ್ಟ್ ಪರಿಷ್ಕರಿಸಿದ ಚಿತ್ರ ಹಾಗೂ ವರದಿಯನ್ನು ಆಧರಿಸಿ ತಜ್ಞ ವೈದ್ಯರು ಮುಂದಿನ ಚಿಕಿತ್ಸೆಯನ್ನು ನೀಡುತ್ತಾರೆ.

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು :

ರೋಗಿಯ ನೋಂದಣಿಯನ್ನು ಆಸ್ಪತ್ರೆಯ ಸಿಬ್ಬಂದಿ ಹಾಸ್ಪಿಟಲ್ ಇನ್ಫಾರ್ಮೆಶನ್ ಸಿಸ್ಟಮ್ಸ್ನಲ್ಲಿ ಮಾಡುತ್ತಾರೆ. ರೋಗಿಯ ಹೆಸರು, ವಯಸ್ಸು, ಲಿಂಗ, ಜನ್ಮ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಆಸ್ಪತ್ರೆಯ ಮಾಹಿತಿ ವ್ಯವಸ್ಥೆಯಲ್ಲಿ ಸೇರಿಸಿದಾಗ, ರೋಗಿಗೆ ಒಂದು ಗುರುತಿನ ಸಂಖ್ಯೆಯನ್ನು ಅದು ನೀಡುತ್ತದೆ. ಒಮ್ಮೆ ನೋಂದಣಿ ಮಾಡಿಸಿದರೆ ಸಾಕು, ಮುಂದೆ ಈ ಗುರುತಿನ ಸಂಖ್ಯೆಯನ್ನು ಹಾಸ್ಪಿಟಲ್ ಇನ್ಫಾರ್ಮಶನ್ ಸಿಸ್ಟಮ್ಸ್ಗೆನೀಡಿದರೆ, ರೋಗಿಯ ಪೂರ್ವಾಪರದ ಚಿಕಿತ್ಸೆಯ ಜಾತಕವನ್ನು ನಮ್ಮ ಮುಂದಿಡುತ್ತದೆ.

ಒಮ್ಮೆ ರೋಗಿಯ ನೋಂದಣಿಯಾದರೆ ಸಾಕು, ರೋಗಿಯು ಸಂದರ್ಶಿಸಬೇಕಾದ ಇಲಾಖೆಗೆ ಆತನ ಪೂರ್ವಾಪರದ ದಾಖಲೆಗಳು ತಾನಾಗಿಯೇ ಕಂಪ್ಯೂಟರ್ ಮೂಲಕ ವರ್ಗಾವಣೆಯಾಗುತ್ತವೆ. ಆಗ, ವೈದ್ಯರು ರೋಗಿಯ ಹಿಂದಿನ ಚಿಕಿತ್ಸೆಯ ಮಾಹಿತಿಯನ್ನು ಪಡೆದು ರೋಗಿಯೊಂದಿಗೆ ಸಂಭಾಷಣೆ ನಡೆಸಿ, ಪರೀಕ್ಷಿಸಿ, ಏನಾದರೂ ಅನುಮಾನವಿದ್ದಲ್ಲಿ ಸ್ಕ್ಯಾನಿಂಗ್ ಮಾಡಿಸಲು ರೋಗಿಗೆ ಹೇಳಿ, ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯಲ್ಲಿ ಸ್ಕ್ಯಾನ್ ಮಾಡುವ ಕೆಲಸವನ್ನು ನುರಿತ ತಂತ್ರಜ್ಞರಿಗೆ ನಿಯೋಜಿಸಿ ವರ್ಗಾಯಿಸುತ್ತಾರೆ.

ಪ್ರಯೋಗಾಲಯಗಳಲ್ಲಿ ನುರಿತ ತಜ್ಞರು, ವೈದ್ಯರು ಹೇಳಿದ ವಿಧಾನವನ್ನು ಅನುಸರಿಸಿ, ಅಂಗಗಳ ಚಿತ್ರಗಳನ್ನು ತಗೆದು ರೇಡಿಯೊಲೊಜಿಸ್ಟ್ಗೆ ವರ್ಗಾಯಿಸುತ್ತಾರೆ. ಆಗ ಈ ಚಿತ್ರಗಳು ಪ್ಯಾಕ್ಸ್ ನಲ್ಲಿ ಸಂಗ್ರಹಗೊಳ್ಳುತ್ತವೆ. ರೇಡಿಯೊಲೊಜಿಸ್ಟ್ಗಳು ಚಿತ್ರಗಳನ್ನು ಆಧರಿಸಿ ತಮ್ಮ ವರದಿಯನ್ನು ಸಿದ್ದಪಡಿಸಿ ವೈದ್ಯರಿಗೆ ಕಳುಹಿಸಿಕೊಡುತ್ತಾರೆ. ವೈದ್ಯರು ಈ ವರದಿಯ ಆಧಾರದ ಮೇಲೆ, ತಮ್ಮ ಚಿಕಿತ್ಸೆಯನ್ನು ಕೈಗೊಳ್ಳುತ್ತಾರೆ. ಚಿಕಿತ್ಸೆಯೆಲ್ಲಾ ಮುಗಿದು ರೋಗಿಯು ಆಸ್ಪತ್ರೆಯಿಂದ ನಿರ್ಗಮಿಸುವ ಸಮಯದಲ್ಲಿ, ಈ ಎಲ್ಲಾ ಚಿಕಿತ್ಸೆಗೆ ತಗಲುವ ವೆಚ್ಚ ಹಾಗೂ ರೋಗಿಯು ಮುಂದೆ ಅನುಸರಿಸಬೇಕಾದ ವಿಧಾನಗಳೊಂದಿಗೆ ಈ ಕಾರ್ಯದ ಹರಿವು ಮುಕ್ತಾಯವಾಗುತ್ತದೆ.

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯಿಂದಾಗುವ ಲಾಭಗಳು :

೧. ರೋಗಿಯ ಪೂರ್ವಾಪರವನ್ನು ಅರಿತು ನಿಖರವಾದ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ.

೨. ರೋಗಿಯ ಪೂರ್ವಾಪರವನ್ನು ಸುಲಭವಾಗಿ ಅರಿಯುವುದರಿಂದ, ರೋಗಿ ಹಾಗೂ ವೈದ್ಯರ ನಡುವೆ ಉತ್ತಮ ಸಮನ್ವಯತೆ ಮೂಡಿಸುವಲ್ಲಿ ಸಹಕಾರಿಯಾಗಿ ಬಾಂಧವ್ಯ ವೃದ್ಧಿಯಾಗುವುದು.

೩. ರೋಗಿಯ ಬಗ್ಗೆ ನಿಖರವಾದ ಮಾಹಿತಿ ಸಿಗುವುದರಿಂದ, ರೋಗಿಯ ಬಗ್ಗೆ ವಿಶೇಷ ಕಾಳಜಿಯನ್ನು ವೈದ್ಯರು ಮತ್ತು ಅವರ ತಂಡ ತೋರ್ಪಡಿಸಿ, ರೋಗಿಯು ಗುಣಮುಖರಾಗಲು ಸಹಕಾರಿಯಾಗುತ್ತದೆ.

೪. ವೈದ್ಯರಿಗೆ ರೋಗಿಯ ಪೂರ್ವಾಪರದ ಬಗ್ಗೆ ಅರಿಯಲು ಕಡಿಮೆ ಸಮಯ ಸಾಕು ಹಾಗೂ ಮಾಹಿತಿಯು ಸರಿಯಾಗಿದ್ದರೆ ರೋಗಿಯನ್ನು ಅನಗತ್ಯ ಚಿಕಿತ್ಸೆಗೆ ಒಳಪಡಿಸುವುದನ್ನು ತಪ್ಪಿಸಬಹುದು. ಇದರಿಂದ ಸಮಯ ಹಾಗೂ ಹಣದ ಅನಗತ್ಯ ವ್ಯಯವನ್ನು ನಿಲ್ಲಿಸಬಹುದು.

೫. ರೋಗಿಯ ಮಾಹಿತಿಯಾದ ಅಂಗಾಂಗಗಳ ಚಿತ್ರ ಹಾಗೂ ವರದಿಗಳನ್ನು ಅಡಕ ಮುದ್ರಕಗಳಲ್ಲಿ ದಾಖಲಿಸಬಹುದು, ರೋಗಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿ ಎನಿಸದಿದ್ದಲ್ಲಿ, ಬೇರೆ ಆಸ್ಪತ್ರೆಗೆ ಅಡಕ ಮುದ್ರಕಗಳಲ್ಲಿ ಸಂಗ್ರಹಿಸಿದ ವಿವರ ನೀಡಿದರೆ ಸಾಕು; ಅಲ್ಲಿಯೂ ಚಿಕಿತ್ಸೆಯನ್ನು ಮುಂದುವರೆಸಬಹುದು.

ಇಂದು, ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯು, ವೈದ್ಯಕೀಯ ವಿಜ್ಞಾನದ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು, ಕ್ಲಿಷ್ಟಕರ ಸಮಸ್ಯೆಗಳಿಗೆ ಸುಲಭ ಹಾಗೂ ನಿಖರ ಪರಿಹಾರವನ್ನು ನೀಡುವಲ್ಲಿ ಸಫಲವಾಗಿದೆ ಎಂದರೆ ತಪ್ಪಾಗಲಾರದು.]

ಮಧು ಚಂದ್ರ ಹೆಚ್ ಬಿ . ಭದ್ರಾವತಿ

Categories
ವಿಜ್ಞಾನ - ಗಣಿತ ವೈದ್ಯಶಾಸ್ತ್ರ

ಜೈನ ವೈದ್ಯಕೀಯ ಪರಂಪರೆ

ಕೃತಿ:ಜೈನ ವೈದ್ಯಕೀಯ ಪರಂಪರೆ:
ಲೇಖಕರು ಡಾ. ಧನ್ಯಕುಮಾರ ಇಜಾರಿ.
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ಕೃಷಿ ಸಂರಕ್ಷಣೆ ಭೌತಶಾಸ್ತ್ರ (ಫಿಸಿಕ್ಸ) ರಸಾಯನಶಾಸ್ತ್ರ (ಕೆಮಿಸ್ಟ್ರಿ) ವಿಜ್ಞಾನ - ಗಣಿತ

ಬರಡಾಗುತ್ತಿರುವ ನಮ್ಮ ಭೂಸಂಪತ್ತು ಹಾಗೂ ಅದರ ರಕ್ಷಣೆ

ಕೃತಿ:ಬರಡಾಗುತ್ತಿರುವ ನಮ್ಮ ಭೂಸಂಪತ್ತು ಹಾಗೂ ಅದರ ರಕ್ಷಣೆ
ಲೇಖಕರು:ಡಾ. ಅಶೋಕ ಎಸ್. ಆಲೂರ, ಡಾ. ಶಿವಾನಂದ ಬಿ. ಹೊಸಮನಿ ಮತ್ತು ಡಾ. ಜಿ.ಎಸ್. ದಾಸೋಗ
ಕೃತಿಯನ್ನು ಓದಿ

Categories
ಇತಿಹಾಸ ಮಕ್ಕಳ ಗಣಿತ ಮಕ್ಕಳ ವಿಜ್ಞಾನ ವಿಜ್ಞಾನ - ಗಣಿತ ವೈಜ್ಞಾನಿಕ ಇತಿಹಾಸ ಸಾಮಾನ್ಯ ಗಣಿತ ಸಾಮಾನ್ಯ ವಿಜ್ಞಾನ (ಜನರಲ್ ಸೈನ್ಸ್)

ವಿಜ್ಞಾನ ವರ್ತಮಾನ

ಕೃತಿ:ವಿಜ್ಞಾನ ವರ್ತಮಾನ
ಲೇಖಕರು : ಜಿ. ಟಿ. ನಾರಾಯಣರಾವ್‌

ಕೃತಿಯನ್ನು ಓದಿ

Categories
ಆರೋಗ್ಯ ವಿಜ್ಞಾನ (ಹೆಲ್ತ್ ಸೈನ್ಸ್) ವಿಜ್ಞಾನ - ಗಣಿತ ಸಮಾಜ ಕಲ್ಯಾಣ ಮತ್ತು ಸಮಾಜ ಸುಧಾರಣೆ ಸಮಾಜ ಮತ್ತು ಅಭಿವೃದ್ಧಿ

ಮಹಿಳಾ ಆರೋಗ್ಯ ಒಂದು ಮರುಚಿಂತನೆ

ಕೃತಿ:ಮಹಿಳಾ ಆರೋಗ್ಯ ಒಂದು ಮರುಚಿಂತನೆ
ಲೇಖಕರು:ಕೆ.ಸರೋಜಾ
ಕೃತಿಯನ್ನು ಓದಿ

Categories
ಜನಪದ ಜನಪದ ಜನಪದ ವಿಜ್ಞಾನ ನಿಸರ್ಗ ಪರಿಸರ ವಿಜ್ಞಾನ - ಗಣಿತ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ

ಹಂಪಿ ಜೀವಜಾಲ ಜಾನಪದ

ಕೃತಿ:ಹಂಪಿ ಜೀವಜಾಲ ಜಾನಪದ

ಲೇಖಕರು: ಮೊಗಳ್ಳಿ ಗಣೇಶ್

ಕೃತಿಯನ್ನು ಓದಿ     |     Download

Categories
ವಿಜ್ಞಾನ - ಗಣಿತ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಾಮಾನ್ಯ ವಿಜ್ಞಾನ (ಜನರಲ್ ಸೈನ್ಸ್)

ಹಸ್ತಪ್ರತಿ ಸಂರಕ್ಷಣೆ

ಕೃತಿ:ಹಸ್ತಪ್ರತಿ ಸಂರಕ್ಷಣೆ

ಲೇಖಕರು: ಡಾ.ಕೆ.ಆರ್. ಕೇಶವಮೂರ್ತಿ

ಕೃತಿಯನ್ನು ಓದಿ     |     Download

Categories
ಜೀವಶಾಸ್ತ್ರ (ಬಯಾಲಜಿ) ಪಕ್ಷಿ ಪ್ರಪಂಚ ಪರಿಸರ ಪ್ರಾಣಿ ಪ್ರಪಂಚ ಮಕ್ಕಳ ವಿಜ್ಞಾನ ವಿಜ್ಞಾನ - ಗಣಿತ

ಪ್ರಾಣಿ – ಪಕ್ಷಿ ಸಂಪುಟ

ಕೃತಿ-ಪ್ರಾಣಿ–ಪಕ್ಷಿ ಸಂಪುಟ:
ಲೇಖಕರು-ಡಾ. ಹಾ. ಬ. ದೇವರಾಜ ಸರ್ಕಾರ್, ಡಾ. ಎನ್.ಎ. ಮಧ್ಯಸ್ಥ & ಡಾ. ಎಚ್. ಎಚ್. ಷಣ್ಮುಖಮ್ಮ
ಕೃತಿಯನ್ನು ಓದಿ

Categories
ಜನಜೀವನದಲ್ಲಿ ವಿಜ್ಞಾನ ಪಕ್ಷಿಗಳ ಪರಿಚಯ ಮಕ್ಕಳ ವಿಜ್ಞಾನ ವಿಜ್ಞಾನ

ಲೈರ್ ಇದು ಮಿಮಿಕ್ರಿ ಹಕ್ಕಿ

ಕೃತಿ: ಜನಜೀವನದಲ್ಲಿ ವಿಜ್ಞಾನ, ಪಕ್ಷಿಗಳ ಪರಿಚಯ, ಮಕ್ಕಳ ವಿಜ್ಞಾನ
ಲೇಖಕರು: ಜನಜೀವನದಲ್ಲಿ ವಿಜ್ಞಾನ, ಪಕ್ಷಿಗಳ ಪರಿಚಯ, ಮಕ್ಕಳ ವಿಜ್ಞಾನ,
ಕೃತಿಯನ್ನು ಓದಿ