Categories
e-ದಿನ

ಜುಲೈ-1

 

ಪ್ರಮುಖ ಘಟನಾವಳಿಗಳು:

1200: ಚೀನಾದಲ್ಲಿ “ಸನ್ ಗ್ಲಾಸ್” ಗಳನ್ನು ಕಂಡುಹಿಡಿಯಲಾಯಿತು.

1776: ಬ್ರಿಟನ್ನಿನ ಉತ್ತರ ಅಮೇರಿಕನ್ ವಸಾಹತುಗಳಿಗೆ ಸ್ವಾತಂತ್ರ್ಯದ ಘೋಷಣೆಯನ್ನು ಮತಕ್ಕೆ ಹಾಕಲಾಯಿತು.

1820: ಕರಿಯರ್ ಡೆ ಲಾ ಮ್ಯುಸ್ ಪತ್ರಿಕೆಯ ಮೊದಲ ಆವೃತ್ತಿ ಪ್ರಕಟವಾಯಿತು.

1831: ಅಡ್ಮಿರಲ್ ಜೇಮ್ಸ್ ಸಿ ರಾಸ್ ಕಾಂತೀಯ ಉತ್ತರ ಧ್ರುವವನ್ನು ತಲುಪಿದರು.

1839: ಮಹಮುದ್ II ರ ನಂತರ ಅಬ್ದುಲ್ ಮೆದ್ಜಿದ್ ಟರ್ಕಿಯ ಮುಂದಿನ ಸುಲ್ತಾನನಾಗಿ ಅಧಿಕಾರ ವಹಿಸಿಕೊಂಡರು.

1858: ಮೊದಲ ಕೆನೆಡಿಯನ್ 1,5,10 ಮತ್ತು 20 ಸೆಂಟ್ ಕಾಯಿನ್ನುಗಳನ್ನು ಮುದ್ರಿಸಲಾಯಿತು.

1858: ಚಾರ್ಲ್ಸ್ ಡಾರ್ವಿನ್ ಹಾಗೂ ಆಲ್ಫ್ರೆಡ್ ರಸ್ಸಲ್ ವಾಲ್ಲೇಸ್ ಸೇರಿ ಲಿನ್ನಿಯನ್ ಸಮಾಜದ ವಿಕಸನದ ಬಗ್ಗೆ ಪತ್ರ ಮಂಡಿಸಿದರು.1859: ಮೊದಲ ಅಂತರ ಕಾಲೇಜು ಬೇಸ್ ಬಾಲ್ ಪಂದ್ಯಾವಳಿ ನಡೆಯಿತು.

1862: ರಾಜ ಅಲೆಕ್ಸಾಂಡರ್ II ಯಹೂದಿಗಳಿಗೆ ಪುಸ್ತಕಗಳನ್ನು ಪ್ರಕಟಿಸುವ ಹಕ್ಕು ನೀಡಿದರು.

1862: ರಷ್ಯಾದ ರಾಜ್ಯ ಗ್ರಂಥಾಲಯವನ್ನು ಸ್ಥಾಪಿಸಲಾಯಿತು.

1863: ಸುರಿನಾಮ್ ಮತ್ತು ಡಚ್ ಆಂಟಿಲ್ಸಿನಲ್ಲಿ ಗುಲಾಮಗಿರಿಯನ್ನು ನಿಷೇಧಿಸಲಾಯಿತು.

1869: ಡಚ್ ದಿನಪತ್ರಿಕೆಯ ಅಂಚೆಚೀಟಿಯ ತೆರಿಗೆಯನ್ನು ರದ್ದುಪಡಿಸಲಾಯಿತು.

1869: ನೆವಾಡದ ಕಾರ್ಸನ್ ನಗರದಲ್ಲಿ ಅಮೇರಿಕಾದ ಮುದ್ರಣಾಲಯ ತೆರೆಯಿತು.

1871: ಕೆನಡಾದ ಎಲ್ಲೆಡೆ ಏಕರೀತಿಯ ದಶಾಂಶ ಕರೆನ್ಸಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

1874: ಮೊದಲ ಬಾರಿಗೆ ಬಾಲ ಕಾರ್ಮಿಕ ಪದ್ದತಿಯ ವಿರುದ್ಧ ಕಾನೂನನ್ನು ಜಾರಿಗೆ ತರಲಾಯಿತು.

1874: ಅಮೇರಿಕಾದ ಮೊದಲ ಪಶುಸಂಗ್ರಹಾಲಯ ಫಿಲಾಡೆಲ್ಫಿಯಾದಲ್ಲಿ ತೆರೆಯಿತು.

1875: ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪಿಸಲಾಯಿತು.

1881: ಮೊದಲ ಅಂತರರಾಷ್ಟ್ರೀಯ ದೂರವಾಣಿ ಸಂಭಾಷಣೆಯನ್ನು ಮಾಡಲಾಯಿತು.

1905: ಆಲ್ಬರ್ಟ್ ಐನ್ಸ್ಟೈನ್ ತಮ್ಮ ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸಿದರು.

1920: ಜರ್ಮನಿ ರಾಷ್ಟ್ರದ ಒಟ್ಟು ಸಾಲ 200 ಶತಕೋಟಿಗಳೆಂದು ಘೋಷಿಸಿತು.

1929: ಅಮೇರಿಕಾದ ಕಾರ್ಟೂನಿಸ್ಟ್ ಎಲ್ಜಿ ಸೇಗರ್ “ಪಾಪಯ್” ಕಾರ್ಟೂನನ್ನು ಸೃಷ್ಟಿಸಿದರು.

1963: ಅಮೇರಿಕಾದ ಅಂಚೆ ಕಛೇರಿಯು ಅಂಚೆ ಮೇಲ್ವಿಚಾರಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯವಾಗುವಂತೆ ಪ್ರತಿಯೊಬ್ಬರಿಗೂ ತಮ್ಮ ವಿಳಾಸಗಳಲ್ಲಿ ಜಿಪ್ ಕೋಡುಗಳನ್ನು ಬಳಸಲು ಸೂಚಿಸಿತು.

1997: 156 ವರ್ಷಗಳ ನಂತರ ಬ್ರಿಟೀಷರು ಹಾಂಗ್ ಕಾಂಗನ್ನು ಮತ್ತೆ ಚೀನಿಯರಿಗೆ ಮರಳಿಸಿದರು. ತುಂಗ್-ಚೀ-ವಾ ನೂತನ ನಾಯಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮುಖ ಜನನ/ಮರಣ:

1909: ಸ್ವತಂತ್ರ ಹೋರಾಟಗಾರರಾದ ಮದನಲಾಲ್ ಧಿಂಗ್ರಾ ಅವರನ್ನು ಸರ್ ಕರ್ಜನ್ ವಿಲ್ಲಿಯನ್ನು ಹತ್ಯೆ ಮಾಡಿದರು.

1927: ಭಾರತದ 8ನೇ ಪ್ರಧಾನ ಮಂತ್ರಿಯಾಗಿದ್ದ ಚಂದ್ರಶೇಖರ ಜನಿಸಿದರು.

1938: ಭಾರತದ ಪ್ರಖ್ಯಾತ ಕೊಳಲುವಾದಕರಾದ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅಲಹಬಾದಿನಲ್ಲಿ ಜನಿಸಿದರು.

1961: ಭಾರತದ ಮೊದಲ ಮಹಿಳಾ ಗಗನಯಾತ್ರಿ ಲೇಟ್ ಶ್ರೀಮತಿ ಕಲ್ಪನಾ ಚಾವ್ಲಾ ಜನಿಸಿದರು.