Categories
e-ದಿನ

ಜುಲೈ-2

 

ಪ್ರಮುಖ ಘಟನಾವಳಿಗಳು:

1505 : ಚಂಡಮಾರುತವನ್ನು ಎದುರಿಸಿದ ನಂತರ ಮಾರ್ಟಿನ್ ಲೂಥರ್ ಸನ್ಯಾಸಿಯಾಗುವುದಾಗಿ ಘೋಷಿಸಿದರು.

1698: ಮೊದಲ ಉಗಿಯಂತ್ರಕ್ಕೆ ಥಾಮಸ್ ಸೇವರಿ ಪೇಟೆಂಟ್ ಪಡೆದರು.

1777: ವರ್ಮಾಂಟ್ ಗುಲಾಮಗಿರಿಯನ್ನು ನಿಷೇಧಿಸಿದ ಅಮೇರಿಕಾದ ಮೊದಲ ವಸಾಹತು.

1843: ಚಾರ್ಲ್ಸನ್ ದಕ್ಷಿಣ ಕಾರೋಲಿನಾದ ಚಂಡಮಾರುತದ ಸಮಯದಲ್ಲಿ ಮೊಸಳೆಯೊಂದು ಆಕಾಶದಿಂದ ಬಿದ್ದಿತ್ತು.

1850: ಉಸಿರಾಟದ ಉಪಕರಣ ಹೊಂದಿರುವ ಅನಿಲ ಮುಖವಾಡಕ್ಕೆ ಬೆಂಜಮಿನ್ ಲೇನ್ ಪೇಟೆಂಟ್ ಪಡೆದರು.

1862: ರಾಜ್ಯ ಕೃಷಿ ಕಾಲೇಜುಗಳಿಗೆ ಭೂಮಿಯನ್ನು ನೀಡುವ ಒಪ್ಪಂದಕ್ಕೆ ಲಿಂಕನ್ ಸಹಿ ಹಾಕಿದರು.

1867: ಅಮೇರಿಕಾದಲ್ಲಿ ಮೊದಲ ಎತ್ತರಿಸಿದ ರೈಲು ರಸ್ತೆಯ ಸೇವೆಯನ್ನು ನ್ಯೂಯಾರ್ಕಿನಲ್ಲಿ ಆರಂಭಿಸಲಾಯಿತು.

1916: ಬಂಡವಾಳ ಶಾಹಿತ್ವದಿಂದ ಸಾಮ್ರಾಜ್ಯಶಾಹಿತ್ವ ಉಂಟಾಗುತ್ತದೆ ಎಂದು ಲೆನಿನ್ ಹೇಳಿದರು.

1940: ಸಿಯಾಟೆಲ್ಲಿನ ಲೇಕ್ ವಾಷಿಂಗ್ಟನ್ನಿನ ಮೇಲೆ ಇರುವ ತೇಲುವ ಸೇತುವೆಯನ್ನು ಸಮರ್ಪಣೆ ಮಾಡಲಾಯಿತು.

1940: ಭಾರತದ ಸ್ವಾತಂತ್ರ ನಾಯಕ ಸುಭಾಷ್ ಚಂದ್ರ ಬೋಸ್ ಅವರನ್ನು ಕಲ್ಕತ್ತಾದಲ್ಲಿ ಬಂಧಿಸಲಾಯಿತು.

1951: ಲೀಡ್ಸ್ ಖಗೋಳಶಾಸ್ತ್ರಜ್ಞರು ಕ್ಷೀರ ಪಥ ವ್ಯವಸ್ಥೆಯಿಂದ ರೇಡಿಯೋ ಸಿಗ್ನಲನ್ನು ಪತ್ತೆ ಮಾಡಿದರು.

1952: ಯುವರಾಣಿ ಬಿಟ್ರಿಸ್ ಮಡುರೋಡಮ್ಮಿನ ಚಿಕಣಿ ನಗರವನ್ನು ಉದ್ಘಾಟಿಸಿದರು.

1957: ಮಾರ್ಗದರ್ಶಿ ಕ್ಷಿಪಣಿಗಳನ್ನು ಉಡಾಯಿಸಲು ಮೊದಲ ಜಲಾಂತರ್ಗಾಮಿಯನ್ನು ವಿನ್ಯಾಸಗೊಳಿಸಲಾಯಿತು.

958: ಅಮೇರಿಕಾ ಬಿಕಿನಿ ದ್ವೀಪದಲ್ಲಿ ವಾತಾವರಣದ ಪರಮಾಣು ಪರೀಕ್ಷೆಯನ್ನು ನಡೆಸಿತು.

1967: ಕ್ಯಾಥೆರೀನ್ ಲಕೊಸ್ಟೆ ಅಮೇರಿಕಾದ ಮಹಿಳಾ ಮುಕ್ತ ಗಾಲ್ಫ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಮೊದಲ ಅತ್ಯಂತ ಕಿರಿಯ, ವಿದೇಶಿ ಮತ್ತು ಹವ್ಯಾಸಿ ಆಟಗಾತಿಯಾಗಿದರು.

1972: ಭಾರತದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕಾರ್ ಅಲಿ ಭುಟ್ಟೊ ಅವರು ಶಿಮ್ಲಾ ಒಪ್ಪಂದಕ್ಕೆ ಸಹಿ ಮಾಡಿದರು.

1976: ಉತ್ತರ ಮತ್ತು ದಕ್ಷಿಣ ವಿಯೆಟ್ನಂ ಅಧಿಕೃತವಾಗಿ ಪುನಃ ಏಕೀಕರಣವಾಯಿತು.

1976: ಸರ್ವೊಚ್ಛ ನ್ಯಾಯಾಲಯವು ಮರಣದಂಡನೆ ಅಂತರ್ಗತವಾಗಿ ಕ್ರೂರ ಅಥವಾ ಅಸಾಮಾನ್ಯವಲ್ಲ ಎಂದು ನಿರ್ಣಯಿಸಿತು.

1990: ಮೆಕ್ಕಾದ ಸುರಂಗದಲ್ಲಿ ಕಾಲ್ತುಳಿತದಿಂದಾಗಿ 1426 ಯಾತ್ರಿಗಳು ಸಾವನ್ನಪ್ಪಿದರು.

1992: ಬ್ರಾನಿಫ್ ವಿಮಾನ ಸಂಸ್ಥೆಯು ವ್ಯಾಪಾರವಿಲ್ಲದೆ ನಷ್ಟದಲ್ಲಿ ಮುಳುಗಿತು.

ಪ್ರಮುಖ ಜನನ/ಮರಣ:

1757: ಮುಹಮದ್ ಬೇಗ್ ನವಾಬ ಸಿರಾಜ್-ಉದ್-ದೌಲಾನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದರು.

1905: ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಶಾಂತಿಸ್ವರೂಪ್ ಧವನ್ ಜನಿಸಿದರು.

1926: ಸಾಮಾಜಿಕ ಸುಧಾರಕ, ರಾಜಕಾರಣಿ ಮತ್ತು ನಾಯಕರಾದ ರಾಮ್ ಸೇವಕ್ ಯಾದವ್ ಉತ್ತರ ಪ್ರದೇಶದ ತಾಲಾ ಗ್ರಾಮದಲ್ಲಿ ಜನಿಸಿದರು.

1928: ಹಿರಿಯ ಒಡಿಯಾ ಕವಿ ನಂದಕಿಶೋರ್ ಬಾಲ್ ನಿಧನರಾದರು.

1929: ಪ್ರಖ್ಯಾತ ಬೆಂಗಾಲಿ ಚಿತ್ರಕಥೆಕಾರರಾಗಿದ್ದ ಅಮೃತಲಾಲ್ ಬಸು ನಿಧನರಾದರು.