Categories
e-ದಿನ

ಜೂನ್-11

 

ಪ್ರಮುಖ ಘಟನೆಗಳು:

1644: ಫ್ಲೊರಿಂಟೈನ್ ವಿಜ್ಞಾನಿ ಇವಾನ್ಗೆಲಿಸ್ಟಾ ಟೊರಿಸೆಲ್ಲಿ ಅವರು ಮೈಕೆಲಾಂಜೆಲೊ ರಿಕ್ಕಿ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಆವಿಶ್ಕಾರವಾದ ಪಾದರಸದ ಬ್ಯಾರೋಮೀಟರಿನ ಬಗ್ಗೆ ವಿವರಿಸಿದರು.

1742: ಬೆಂಜಾಮಿನ್ ಫ್ರಾಂಕ್ಲಿನ್ “ಫ್ರಾಂಕ್ಲಿನ ಸ್ಟವ್” ಕಂಡುಹಿಡಿದರು.

1770: ಕ್ಯಾಪ್ಟೆನ್ ಜೇಮ್ಸ್ ಕುಕ್ ಆಸ್ಟ್ರೇಲಿಯಾದ “ಗ್ರೇಟ್ ಬ್ಯಾರಿಯರ್ ರೀಫ್” ಅನ್ನು ಕಂಡುಹಿಡಿದರು.

1793: ಮೊದಲ ಅಮೇರಿಕನ್ “ಸ್ಟವ್” ಪೇಟೆಂಟನ್ನು ರಾಬರ್ಟ್ ಹ್ಯಾಟ್ರಿಕ್ಕಿಗೆ ನೀಡಲಾಯಿತು.

1816: ಬಾಲ್ಟಿಮೋರ್ ದೇಶದ ಗ್ಯಾಸ್ ಲೈಟ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1825: ನ್ಯೂಯಾರ್ಕ್ ಸಿಟಿಯ ಹ್ಯಾಮಿಲ್ಟನ್ ಕೋಟೆಯ ಅಡಿಪಾಯ ಹಾಕಲಾಯಿತು.

1859: ಕಾಂಸ್ಟಾಕ್ ಬೆಳ್ಳಿಯ ಹೊರೆಯೊಂದನ್ನು ನೆವಾಡದ ವರ್ಜಿನಿಯಾ ನಗರದ ಬಳಿ ಪತ್ತೆಯಾಯಿತು.

1866: ಆಗ್ರಾ ಉಚ್ಛ ನ್ಯಾಯಾಲಯ (ಇಂದಿನ ಅಲಹಾಬಾದ್ ಉಚ್ಛನ್ಯಾಯಾಲಯ) ಭಾರತದಲ್ಲಿ ಸ್ಥಾಪಿಸಲಾಯಿತು.

1870: ಮೊದಲ ಸರಾಯಿ ಬಟ್ಟಿಯನ್ನು ಆಂಸ್ಟರ್ ಡ್ಯಾಂನಲ್ಲಿ ತೆರೆಯಲಾಯಿತು.

1891: ಪೋರ್ಟೋ ರಿಕನ್ ಧ್ವಜವನ್ನು ಅಳವಡಿಸಿತು.

1892: ವಿಶ್ವದ ಪ್ರಥಮ ಫಿಲ್ಮ್ ಸ್ಟೂಡಿಯೋಗಳಲ್ಲಿ ಒಂದಾದ “ಲೈಮ್ ಲೈಟ್ ಡಿಪಾರ್ಟ್ಮೆಂಟ್” ಅನ್ನು ಅಧಿಕೃತವಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಸ್ಥಾಪಿಸಲಾಯಿತು.

1895: ಗ್ಯಾಸ್ ಚಾಲಿತ ವಾಹನವೊಂದಕ್ಕೆ ಚಾರ್ಲ್ಸ್ ಇ ಡುರ್ಯಾ ಪೇಟೆಂಟ್ ಪಡೆದರು.

1901: ಕುಕ್ ದ್ವೀಪಗಳನ್ನು ನ್ಯೂಜಿಲ್ಯಾಂಡಿನ ಭಾಗವಾಗಿ ಘೋಷಿಸಲಾಯಿತು.

1927: ಚಾರ್ಲ್ಸ್ ಲಿಂಡ್ ಬರ್ಗ್ ಅವರಿಗೆ ಮೊದಲ ಡಿಸ್ಟಿಂಗ್ವಿಶ್ಡ್ ಫ್ಲೈಯಿಂಗ್ ಕ್ರಾಸ್” ನೀಡಿ ಗೌರವಿಸಲಾಯಿತು.

1939: ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಇಂಗ್ಲೆಂಡಿನ ಮಹಾರಾಜ ಮತ್ತು ಮಹಾರಾಣಿ ಅವರು ಮೊದಲ “ಹಾಟ್ ಡಾಗ್ಸ್” ತಿನಿಸಿನ ರುಚಿ ನೋಡಿದ್ದರು.

1955: ಮೊದಲ ಮಾಗ್ನೀಷಿಯಂ ಜೆಟ್ ವಿಮಾನವು ಹಾರಾಡಿತು.

1960: ಪಾಕಿಸ್ತಾನದಲ್ಲಿ ವಿವಾಹದ ಸಂಭ್ರಮದಲ್ಲಿ ತುಂಬಿದ್ದ ಒಂದು ಮನೆ ಕುಸಿದು ಆ ಮನೆಯಲ್ಲಿದ್ದ 30 ಜನರು ಮೃತಪಟ್ಟರು.

1975: ಉತ್ತರ ಸಮುದ್ರ ತೈಲಕ್ಷೇತ್ರದಿಂದ ಮೊದಲನೇ ಬಾರಿಗೆ ತೈಲವನ್ನು ಹೊರತೆಗಿಯಲಾಯಿತು.

1975: ಗ್ರೀಸ್ ದೇಶವು ಸಂವಿಧಾನವನ್ನು ಅಳವಡಿಸಿಕೊಂಡಿತು.

1978: ಲಂಡನ್ನಿನ ಕ್ರಿಸ್ಟಾ ಟೈಬಸ್ “ಹೂಲಾ-ಹುಪ್” ಅನ್ನು ಸತತವಾಗಿ 24.5 ಗಂಟೆಗಳ ಕಾಲ ಆಡಿ ನೂತನ ವಿಶ್ವದಾಖಲೆ ಮಾಡಿದರು.

1980: ಸ್ಯಾನ್ ಫ್ರಾನ್ಸಿಸಕೊದ ಕಿ-ಐಜೆಲ್ಸೈಡ್ ಸ್ಟ್ರೀಟ್ ಕಾರು “ಮೆಟ್ರೋ ಸೇವೆ”ಯಾಗಿ ಮಾರ್ಪಾಡಾಯಿತು,

1981: ನರಭಕ್ಷಕ ಇಸೈ ಸಾಗಾವಾ ಡಚ್ ವಿದ್ಯಾರ್ಥಿಯನ್ನು ಕೊಂದನು.

1991: ಮೈಕ್ರೋಸಾಫ್ಟ್ ಎಂಎಸ್ ಡಾಸ್ 5.0 ಅನ್ನು ಬಿಡುಗಡೆಮಾಡಿತು.

ಪ್ರಮುಖ ಜನನ/ಮರಣ:

1897: ಭಾರತದ ಸ್ವಾತಂತ್ರ ಹೋರಾಟಗಾರ ರಾಮಪ್ರಸಾದ ಬಿಸ್ಮಿಲ್ಲಾ ಜನಿಸಿದರು.

1948: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಜನಿಸಿದರು.