ಹಂಪಾಪುರ ಗ್ರಾಮ, ಗಂಗೂರು ಅಂಚೆ
ರಾಮನಾಥಪುರ ಹೋಬಳಿ
ಅರಕಲಗೂಡು ತಾಲೂಕು, ಹಾಸನ ಜಿಲ್ಲೆ
ಮೊಬೈಲ್ : ೯೯೬೪೬ ೩೩೮೫೫

 

ಕರ್ನಾಟಕದ ಜಾನಪದ ವಿದ್ವಾಂಸರು, ಸೃಜನಶೀಲ ಲೇಖಕರಾಗಿರುವ ಡಾ|| ಎಚ್.ಜೆ. ಲಕ್ಕಪ್ಪಗೌಡ (೧೯೩೯) ಹಾಸನ ಜಿಲ್ಲೆಯ ಹಂಪಾಪುರ ಗ್ರಾಮೀಣ ಪರಿಸರದಲ್ಲಿ ಬೆಳೆದವರು.

ಅಧ್ಯಾಪಕ, ಸಂಶೋಧಕ, ಕಲಾಸಕ್ತರಾಗಿರುವ ಡಾ|| ಎಚ್.ಜೆ. ಲಕ್ಕಪ್ಪ ಗೌಡರಿಗೆ ಜಾನಪದ ಸಾಹಿತ್ಯ ಲೋಕದಲ್ಲಿ ಅಪಾರ ಅನುಭವವಿದೆ. ಮೊದಲಿನಿಂದಲೂ ಸಂಶೋಧಕ ಪ್ರವೃತ್ತಿ ಬೆಳೆಸಿಕೊಂಡಿರುವ ಅವರಿಗೆ ಸೃಜನಶೀಲತೆ ಸಹಜವಾಗಿಯೇ ಮೈಗೂಡಿದೆ.

ಶ್ರೀರಾಮಾಯಣದರ್ಶನಂ ಒಂದು ವಿಮರ್ಶಾತ್ಮಕ ಅಧ್ಯಯನಕ್ಕೆ ಡಾಕ್ಟರೇಟ್ ಪಡೆದಿರುವ ಅವರಿಗೆ ಕಾವ್ಯ, ಸಣ್ಣಕಥೆ, ನಾಟಕ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ಜಾನಪದ ಸಂಶೋಧನೆಗಳು ಆಸಕ್ತಿಯ ವಿಷಯಗಳಾಗಿವೆ.

ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರು ಅದರ ಅನುಷ್ಠಾನಕ್ಕೂ ಸಂಕಲ್ಪ ಮಾಡಿದವರು. ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ (೧೯೯೫-೧೯೯೮) ತಮ್ಮ ಕ್ರಿಯಾಶೀಲತೆಯನ್ನು ಮೆರೆದ ಡಾ|| ಎಚ್.ಜೆ. ಲಕ್ಕಪ್ಪಗೌಡರಿಗೆ ಕನ್ನಡ ನಾಡು ಯಾವಾಗಲೂ ಕೃತಜ್ಞವಾಗಿರುವುದು ಸಹಜ.

ಅಕಾಡೆಮಿ ಬೆಳ್ಳಿ ಹಬ್ಬದ ಪ್ರಯುಕ್ತ ಈ ಅಭಿನಂದನೆ.