Categories
ಕನ್ನಡ ಕರ್ನಾಟಕ ಇತಿಹಾಸ ಜನಪದ ಜಾನಪದ ಸಂಸ್ಕೃತಿ ಸಂಸ್ಕೃತಿ

ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು

ಕೃತಿ:ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು

ಲೇಖಕರು‍:ಡಾ.ವಿರೂಪಾಕ್ಷಿ ಪೂಜಾರಹಳ್ಳಿ

ಕೃತಿಯನ್ನು ಓದಿ

Categories
ಕನ್ನಡ ಜಾನಪದ ಜಾನಪದ ಹಬ್ಬಗಳು

ಜಾನಪದ ಸಾಹಿತ್ಯ ದರ್ಶನ

ಕೃತಿ-ಜಾನಪದ ಸಾಹಿತ್ಯ ದರ್ಶನ
ಸರಣಿ-ಕನ್ನಡ, ಜಾನಪದ, ಜಾನಪದ ಹಬ್ಬಗಳು
ಕೃತಿಯನ್ನು ಓದಿ

Categories
ಕುಂದನಾಡಿನ ಜಾನಪದ ಹಾಡುಗಳು ಜಾನಪದ

ಹಾಡ್ಗಥೆಗಳು

ಕೃತಿ- ಹಾಡ್ಗಥೆಗಳು

ಜಾನಪದ

ಕೃತಿಯನ್ನು ಓದಿ     |     Download

Categories
ಕುಂದನಾಡಿನ ಜಾನಪದ ಹಾಡುಗಳು ಜಾನಪದ

ಮದುವೆ ಹಾಡುಗಳು

ಕೃತಿ-ಮದುವೆ ಹಾಡುಗಳು
ಕೃತಿಯನ್ನು ಓದಿ

Categories
ಕುಂದನಾಡಿನ ಜಾನಪದ ಹಾಡುಗಳು ಜಾನಪದ

ಸಾಮಾಜಿಕ ಹಾಡ್ಗಥೆಗಳು

ಕೃತಿ-ಸಾಮಾಜಿಕ ಹಾಡ್ಗಥೆಗಳು
ಕೃತಿಯನ್ನು ಓದಿ

Categories
ಉಪನ್ಯಾಸ ಗ್ರಂಥಮಾಲೆ - ೪೮೨ ಕನ್ನಡ ಗಣಿತವಿಜ್ಞಾನ ಜಾನಪದ ವಿಜ್ಞಾನ

ಜನಪದ ಗಣಿತ

ಕೃತಿ: :ಉಪನ್ಯಾಸ ಗ್ರಂಥಮಾಲೆ – ೪೮೨
ಲೇಖಕರು:ಉಪನ್ಯಾಸ ಗ್ರಂಥಮಾಲೆ – ೪೮೨, ಕನ್ನಡ, ಗಣಿತವಿಜ್ಞಾನ, ಜಾನಪದ, ವಿಜ್ಞಾನ
ಕೃತಿಯನ್ನು ಓದಿ

Categories
ಕನ್ನಡ ಜಾನಪದ

ನಿವೇದನೆ

ಕೃತಿ-ಪ್ರಸಾರಾಂಗ-ಉಪನ್ಯಾಸ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಸರಣಿ-ಕನ್ನಡ, ಜಾನಪದ
ಕೃತಿಯನ್ನು ಓದಿ

Categories
ಕನ್ನಡ ಜಾನಪದ ಪರಿಸರ ಸಂಸ್ಕೃತಿ ವಿಜ್ಞಾನ

ಪರಿಸರ ಮತ್ತು ಜನಪದ ಸಂಸ್ಕೃತಿ

ಕೃತಿ: : : ಕನ್ನಡ, ಜಾನಪದ, ಪರಿಸರ ಸಂಸ್ಕೃತಿ, ವಿಜ್ಞಾನ
ಲೇಖಕರು: ಕನ್ನಡ, ಜಾನಪದ, ಪರಿಸರ ಸಂಸ್ಕೃತಿ, ವಿಜ್ಞಾನ
ಕೃತಿಯನ್ನು ಓದಿ

Categories
ಇತಿಹಾಸ ಕನ್ನಡ ಜಾನಪದ ಜಾನಪದ ಸಾಹಿತ್ಯ ಸಂಸ್ಕೃತಿ

ಮೈಲಾರಲಿಂಗ ಜಾತ್ರೆಗಳು

ಕೃತಿ:ಮೈಲಾರಲಿಂಗ ಜಾತ್ರೆಗಳು
ಲೇಖಕರು: ಕನ್ನಡ, ಜಾನಪದ ಸಾಹಿತ್ಯ, ಸಂಸ್ಕೃತಿ
ಕೃತಿಯನ್ನು ಓದಿ

Categories
ಅಂಕಣಗಳು ಜಾನಪದ ಡಾ. ಶಾಲಿನಿ ರಘುನಾಥ್ ಅಂಕಣ

ವೈವಿಧ್ಯಮಯ ಜನಪದ ಶಿಲ್ಪಕಲೆ

ಕೃತಿ: ಅಂಕಣಗಳು, ಜಾನಪದ, ಡಾ. ಶಾಲಿನಿ ರಘುನಾಥ್
ಲೇಖಕರು: ಅಂಕಣಗಳು, ಜಾನಪದ, ಡಾ. ಶಾಲಿನಿ ರಘುನಾಥ್
ಕೃತಿಯನ್ನು ಓದಿ

Categories
ಕನ್ನಡ ಜಾನಪದ ಸಂಸ್ಕೃತಿ

ಮುಸ್ಲಿಮರ ಹಬ್ಬ ಮತ್ತು ಉರುಸುಗಳು

ಕೃತಿ:ಮುಸ್ಲಿಮರ ಹಬ್ಬ ಮತ್ತು ಉರುಸುಗಳು
ಲೇಖಕರು:
ಕೃತಿಯನ್ನು ಓದಿ

Categories
ಕುಂದನಾಡಿನ ಜಾನಪದ ಹಾಡುಗಳು ಜಾನಪದ

ಕುಂದನಾಡಿನ ಜಾನಪದ ಹಾಡುಗಳು

ಕೃತಿ: : ಕುಂದನಾಡಿನ ಜಾನಪದ ಹಾಡುಗಳು
ಲೇಖಕರು: ಕುಂದನಾಡಿನ ಜಾನಪದ ಹಾಡುಗಳು,
ಕೃತಿಯನ್ನು ಓದಿ

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೧೫ಅ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೮

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೮

ಕೃತಿ- ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೮

ಸಂಪುಟ ಸಂಪಾದನೆ – ಕರ್ನಾಟಕ ಜಾನಪದ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೧೫ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೭

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೭

ಕೃತಿ : ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೭

ಪ್ರಕಟಣೆ: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಜಾನಪದ ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿತರ ಕಿರುಪರಿಚಯ

ಡಾ|| ಎಚ್.ಜೆ. ಲಕ್ಕಪ್ಪಗೌಡ

ಕೃತಿ : : ಜಾನಪದ, ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿತರ ಕಿರುಪರಿಚಯ
ಲೇಖಕರು : ಜಾನಪದ, ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿತರ ಕಿರುಪರಿಚಯ
ಕೃತಿಯನ್ನು ಓದಿ

Categories
ಅಂಕಣಗಳು ಕುರುವ ಬಸವರಾಜ್ ಅಂಕಣ ಜಾನಪದ ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಗರಿಕೆ ಎಂಬ ಜನಪದರ ಬೆನವ

ನಮ್ಮ ನೆಲದಲ್ಲಿ ಎಲ್ಲೆಂದರಲ್ಲಿ ಸಹಜವಾಗಿ ಕಾಣಬರುವ ಹಚ್ಚಹಸುರಿನ ಸಸ್ಯ ಗರಿಕೆ. ಗಾಯಕ್ಕೆ ಔಷಧವಾಗುವ ಈ ಸಸ್ಯ ಸಗಣಿ ಬೆನವ ತಲೆ ಏರಿ ಕೂತು ಪೂಜೆಗೂ ಒಳಗಾಗುತ್ತದೆ. ತೀರ ತೆಳುವಾದ ಗಾತ್ರದಲ್ಲಿ, ನೆಲದಲ್ಲೆ ಹಬ್ಬುವ ಗುಣದ ಇದರ ಕುರಿತು ಜನರಲ್ಲಿ ನಾನಾ ತರಹದ ಪ್ರಕ್ರಿಯೆ ಇದೆ. ಎಷ್ಟು ಕಿತ್ತರೂ ನೆಲೆದಲ್ಲೇ ಉಳಿದ ಕೊಂಚ ತುಂಡು ಚಿಗಿತು ಹಬ್ಬಬಲ್ಲ ಸ್ವರೂಪದ್ದು. ಮಳೆಯಿಲ್ಲದೆ ಎಷ್ಟೋ ವರ್ಷಗಳ ಕಾಲ ಒಣಗಿ, ತುಂಡು ಕಡ್ಡಿಯಾಗಿ ಹಾಗೆಯೇ ಬಿದ್ದಿದ್ದರೂ ಆನಂತರ ಅದ್ಯಾವಾಗಲೋ ಹನಿ ಬಿದ್ದರೂ ಮತ್ತೆ ಚಿಗುರಿ ಬೆಳೆಯಬಲ್ಲ ಸಸ್ಯಜಾತಿ ಇದು. ಹಾಗಾಗಿಯೇ ಜನಪದ ಹಾಡುಗಾರ್ತಿ/ ಕವಿ ಗರಿಕೆಯನ್ನು ತವರಿಗೆ ಹೋಲಿಸುತ್ತಾರೆ. ನನ್ನ ತವರು ಗರಿಕೆಯ ಕುಡಿಯಹಾಗೆ ಹಬ್ಬಲಿ ಎಂದು.

ಎಷ್ಟು ಕಿತ್ತರೂ ಅಷ್ಟು ಸುಲಭದಲ್ಲಿ ಅಳಿಸಲಾಗದಷ್ಟು ಪ್ರಮಾಣಕ್ಕೆ ಉಳಿಯುವ, ರೈತರಿಗೆ ಅದರಲ್ಲೂ ಎರೆ/ ಕಪ್ಪನೆ ಮಣ್ಣಿನ ಹೊಲದವರಿಗೆ ಕಳೆಯ ಸಮಸ್ಯೆಯ ಸಸ್ಯವಾಗಿದ್ದರೆ, ನಗರದವರಿಗೆ ತಂಪಿನ ಹುಲ್ಲುಹಾಸು.

ಕರುಂಕೆ, ಕರಿಕೆ, ಕರಕಿ, ಕರಿಕಿ, ಕರ್ಕಿ, ಗರಕೆ, ಗರಿಕೆ (ಕನ್ನಡ, ಕನ್ನಡ ನಿಘಂಟು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪುಟ 1661), ಹೀಗೆ ಗರಿಕೆಗಿರುವ ಹಳೆಗನ್ನಡ, ಹೊಸಗನ್ನಡ ಪದಗಳ ಪಟ್ಟಿಯೇ ದೊರೆಯುತ್ತದೆ. ಇದನ್ನೇ ತಮಿಳಿನಲ್ಲಿ ‘ಕರಿಕ’, ತುಳುವಿನಲ್ಲಿ ‘ಕರಿಕೆ’, ತೆಲುಗಿನಲ್ಲಿ ‘ಕರಿಕ’ ಎಂಬ ಸಾಮ್ಯ ಪದಗಳಿರುವುದನ್ನು ಗಮನಿಸಬಹುದು. ಅಂದರೆ ಇಡೀ ದಕ್ಷಿಣ ಭಾರತದ ಮುಖ್ಯ ಭಾಷೆಗಳೆಲ್ಲೆಲ್ಲಾ ಸಮೀಪದ ಪದಗಳಲ್ಲಿ ಬಳಕೆಯಾಗುವುದರಿಂದ ಇದು ಮೂಲ ದ್ರಾವಿಡ ಭಾಷಾ ಪದದ ಮುಂದುವರಿಕೆ ಎನಿಸದಿರದು.ಅಷ್ಟೆ ಅಲ್ಲ ‘ಸಗಣಿ ಬೆನವ’ನ ಮೂರ್ತಿ ಪೂಜೆಯ ಆಚರಣೆಯೂ ಅಂತಹದೆ ವಿಸ್ತಾರತೆಯ ಅಂಶದ್ದೆಂದು ಗುರುತಿಸಬಹುದಾಗಿದೆ.

ಯಾರನ್ನೇ ಕುರಿತಾದರೂ ತಂಬಾ ಬೇಸರಕ್ಕೆ ಒಳಗಾದಾಗ ನೋವಿನಿಂದ ಬೇಸತ್ತು ನುಡಿವ ಹಳ್ಳಿಗಾಡಿನ ಸಾಮಾನ್ಯ ಬೈಗುಳ ‘ನಿನ್ನ ಮನೆ ಎಕ್ಕುಟ್ಟೋಗ’ ಎಂಬುದು. ಅಂದರೆ ನಿನ್ನ ಮನೆ, ಮನೆತನ ನಾಶವಾಗಿ ಇಲ್ಲವಾಗಲಿ ಎಂದರ್ಥ. ವಾಚ್ಯಾರ್ಥದಲ್ಲಿ ನೋಡಿದರೂ ಮನೆಯಲ್ಲಿ ಎಕ್ಕ ಹುಟ್ಟುವುದು ಎಂದರೆ, ಮನೆಯವರು ಯಾರೂ ಇಲ್ಲವಾಗಿ ವಾಸಕ್ಕೂ ಇರಲಾಗದೆ, ಕಸಗುಡಿಸುವವರು ಇಲ್ಲದೆ, ಸಾರಿಸುವವರು ಇಲ್ಲದೆ ಬಹುಕಾಲ ಹಾಳುಬೀಳುವುದು. ಹಾಳುಬಿದ್ದ ಆ ಜಾಗದಲ್ಲಿ ಸ್ವಲ್ಪ ಕಾಲದ ನಂತರ ಹಲವು ಮನೆಗಳಲ್ಲಿ ಎಕ್ಕದ ಗಿಡ ಹುಟ್ಟುವುದು ಸಾಮಾನ್ಯ ಸಹಜ. ಹೀಗೆ ಮನೆಯಲ್ಲಿ ಎಕ್ಕದ ಗಿಡ ಹುಟ್ಟುವುದೆಂದರೆ ಮನೆಯವರೆಲ್ಲ ಹಾಳಾಗಿ ವಾಸವಿಲ್ಲದೆ ಹೋದಾಗ. ಅಂದರೆ ‘ನಿಮ್ಮ ಮನೆ ಹಾಳಾಗಲಿ’ ಎಂಬುದು ಹಳ್ಳಿಗರು ಭಾವಿಸುವ ಅರ್ಥ.

ಇದಕ್ಕೆ ವಿರುದ್ಧವಾಗಿ ‘ಒಳ್ಳೇದಾಗಲಿ’ ಎಂಬುದಕ್ಕೆ ‘ನಿಮಗೆ ಒಳ್ಳೇದಾಗಲಿ’ ಎಂಬ ನೇರ ಪದಗಳ ಬಳಕೆಯೇ ಹೆಚ್ಚು. ಆದರೆ, ಇಲ್ಲಿ ನೋಡಿ ರಾಮನಗರ, ಮಾಗಡಿ, ಕನಕಪುರ ಭಾಗದ ಇರುಳಿಗರು(ಇಲ್ಲಿಗರು) ಬುಡಕಟ್ಟಿನ ಜನರಾದಿಯಾಗಿ ಹೆಚ್ಚಿನ ಜನರಲ್ಲಿ ಸಾವಿನ ನಂತರ ಹೂಳಲು(ಮಣ್ಣಿಗೆ) ಹೋದವರೆಲ್ಲ ಹಿಂದಿರುಗಿ ಬರುವಾಗ ಸತ್ತವರ ಮನೆಯ ಒಳಭಾಕ್ಕೆ ಗರಿಕೆ ಕುಡಿ ಎಸೆದು ದೀಪ ನೋಡಿ ಹೋಗುವ ಪದ್ಧತಿ ಇದೆ. ಅದು ಇವರ ವಂಶ- ಮನೆತನ ಗರಿಕೆ ಕುಡಿಯ ಹಾಗೆ ಹಬ್ಬಲಿ, ಹೆಚ್ಚಲಿ, ಬೆಳೆಯಲಿ ಎಂಬುದರ ಸೂಚಕ- ಸಾಂಕೇತಿಕ ಕ್ರಿಯೆ/ ಆಚರಣೆ.

“ಹಾಲುಂಡ ತವರೀಗೆ ಎನೆಂದು ಹರಸಲೆ
ಹೊಳೆದಂಡೇಲಿರುವ ಕರಕೀಯ| ಕುಡಿಯಂಗ
ಹಬ್ಬಾಲೆ ಅವರ ರಸಬಳ್ಳಿ”
– ಎಂದು ತವರನ್ನು ಹರಸುವ ಸಾಕಷ್ಟು ಜನಪದ ಹಾಡುಗಳಿವೆ.

ಗಣೇಶನ ಪ್ರತೀಕವಾಗಿ ಸಗಣಿಯ ಸಣ್ಣ ಮಿದ್ದೆಯನ್ನು ಮೊಳೆ ಮೇಲಾಗಿರುವ ಬುಗುರಿಯಂತೆ, ಗೋಪುರದ ಆಕಾರದಂತೆ ಮಿದ್ದು, ಅದರ ತುದಿಗೆ ಗರಿಕೆ ಕುಡಿಯನ್ನು ಸಿಕ್ಕಿಸಿದ ರೂಪವನ್ನು ‘ಬೆನವ’, ‘ಸಗಣಿ ಬೆನವ’ ಎಂದು ಕರೆಯುತ್ತೇವೆ. ಯಾವುದೇ ಪೂಜೆಗಳು, ಮಂಗಳಕಾರ್ಯಗಳ ಆರಂಭದಲ್ಲಿ ಈ ಬೆನವನ ಆಕಾರ ಇಟ್ಟು ಪೂಜಿಸುವುದು ಇಂದಿಗೂ ಹಳ್ಳಿಗಾಡಿನಲ್ಲಿ ಆಚರಣೆಯಲ್ಲಿದೆ. ಮಧ್ಯ ಕರ್ನಾಟಕದ ಭಾಗದಲ್ಲಿ ಇದನ್ನು ಕೆರಕ/ ಕೆರಕಪ್ಪ ಎಂದೂ ಕರೆಯಲಾಗುತ್ತದೆ. ಗರಿಕೆ ಪದ ದಕ್ಷಿಣ ಭಾರತದ ಎಲ್ಲಾ ದ್ರಾವಿಡ ಭಾಷೆಗಳಲ್ಲೂ ತುಸು ವ್ಯತ್ಯಾಸದಲ್ಲಿ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಗರಿಕೆಯನ್ನು ಕರಿಕೆ ಎಂದೂ ಕರೆಯುತ್ತೇವೆ. ಈ ಕರಿಕೆಯನ್ನು ಸಿಕ್ಕಿಸಿದ ರೂಪವೆ ಕೆರಕಪ್ಪ. ಕೆರಕ+ ಅಪ್ಪ= ಕೆರಕಪ್ಪ, ಇಲ್ಲಿನ ಅಪ್ಪ ವಿಶೇಷವಾದುದು. ಕನ್ನಡವು ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಮಕ್ಕಳು ತಮ್ಮ ತಂದೆಯನ್ನು ಸಂಭೋಧಿಸುವುದು ‘ಅಪ್ಪ’ ಎಂದೆ. ಸೋಲಿಗರು, ಇರುಳಿಗರು, ಜೇನುಕುರುಬರು ಒಳಗೊಂಡ ನಮ್ಮ ನಾಡಿನ ಇತರ ಅನೇಕ ಸಮುದಾಯಗಳಲ್ಲೂ ಅವರು ಮುಖ್ಯವಾಗಿ ಪೂಜಿಸುವುದು ಕುಲದ ಹಿರಿಯರನ್ನು. ಈ ಹಿನ್ನೆಲೆಯಲ್ಲಿ ಇಟ್ಟು ನೋಡಿದಾಗ ಹಿರಿಯ ಎಂಬ ಅರ್ಥದಲ್ಲಿ ಅಪ್ಪ ಎಂಬ ವಿಶೇಷಣ ಸೇರಿಸಿ ಕೆರಕಪ್ಪ, ಬೆನಪ್ಪ ಹೀಗೆ ಕರೆದಿರುವುದು, ಕರೆಯುತ್ತಿರುವುದನ್ನು ಗಮನಿಸಬಹುದು. ‘ಪಿಳ್ಳಪ್ಪ’ ಎಂಬುದು ಬೆನಪ್ಪನಿಗೆ ಕರೆಯುವ ಇನ್ನೊಂದು ಹೆಸರು. ಪಿಳ್ಳಪ್ಪದಲ್ಲಿ ಪಿಳ್ಳ ಅಥವಾ ಪಿಳ್ಳೆ ಎಂದರೆ ಚಿಕ್ಕದು, ಎಳೆಯದು, ಮಗು ಎಂಬ ಅರ್ಥಗಳಿವೆ.

ಅಷ್ಟಲ್ಲದೆ ಈ ಬೆನವನ ಆಕಾರ, ಬಳಸಲಾದ ಪರಿಕರ, ಬಳಸುತ್ತಿರುವ ರೂಪ, ಬಳಕೆಯ ಉದ್ದೇಶ, ಪ್ರಾಧಾನ್ಯತೆ ಎಲ್ಲವನ್ನು ಅವಲೋಕಿಸಿದಾಗ ಇದು ಅತ್ಯಂತ ಪ್ರಾಚೀನ ಆಚರಣೆಯ ಇಂದಿನ ಮುಂದುವರಿಕೆಯ ಕುರುಹು ಆಗಿ ಇಲ್ಲಿ ಆಚರಣೆಗೊಳ್ಳುತ್ತಿರುವುದನ್ನು, ಆ ಮೂಲಕ ಭಿತ್ತರಗೊಳ್ಳುತ್ತಿರುವುದನ್ನು ನೋಡಬಹುದು. ನಮ್ಮ ಪುರಾತನ ಮಾನವರು ಆಹಾರ ಧಾನ್ಯಗಳ ಬಳಕೆಯನ್ನು ಕಂಡುಕೊಂಡುದು ಏಳು ಸಾವಿರ ವರ್ಷಗಳ ಹಿಂದೆ ಎಂಬುದು ತಿಳಿಯುತ್ತದೆ. ಅದಾದ ಕೆಲವು ಸಾವಿರ ವರ್ಷಗಳ ನಂತರ; ಅಂದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಬೇಸಾಯ ಪಶುಪಾಲನೆಗೆ ತೊಡಗಿದ ವಿವರಗಳು ನಮ್ಮ ನೆಲೆದಲ್ಲಿ ದೊರೆಯುತ್ತವೆ.

ಈ ಎಲ್ಲವನ್ನು ನೋಡಿದಾಗ ಬೇಸಾಯ ಕಂಡುಕೊಂಡು, ಉಳುಮೆಗೆ ತೊಡಗಿ, ಬೆಳೆ ಬೆಳೆದು, ಸಗಣಿ ಎಂಬುದು ಬರೀ ಸಗಣಿ ಅಲ್ಲ, ಅದು ಫಲವತ್ತಿನ ಗೊಬ್ಬರ/ ಫರ್ಟಿಲಿಟಿ. ಬೆಳೆ ಬೆಳೆಯುವ ನೆಲಕ್ಕೆ ಬಹುಮುಖ್ಯವಾದ ಫಲವತ್ತತೆಯನ್ನು ಅದು ತಂದುಕೊಡುತ್ತದೆ ಎಂದು ಕಂಡುಕೊಂಡುದರ ರೂಪ ಇದು. ತನಗೆ, ತನ್ನ ಬದುಕಿಗೆ ಅತ್ಯಂತ ಮಹತ್ವದ್ದೆಂದು ಭಾವಿಸುದುದೆಲ್ಲವನ್ನು ಅವನು ದೈವವಾಗಿ ಕಂಡಿದ್ದಾನೆ. ಇಂತಹ ರೈತರ ಆಧಾರಿಯಾದ, ಫಲವತ್ತತೆಯ ಪ್ರತೀಕವಾದ ಸಗಣಿಗೆ ಇಡೀ ಸಸ್ಯ ಸಂಕುಲದ ಪ್ರತೀಕವಾದ ಕರಿಕೆ/ ಗರಿಕೆಯ ತುಂಡೊಂದನ್ನು ಸಿಕ್ಕಿಸುವ ಮೂಲಕ ಮಾಡಿಕೊಂಡ ಆಕಾರ/ ಆಕೃತಿಯನ್ನು ತನ್ನೆಲ್ಲಾ ಮುಖ್ಯ ಪೂಜೆಗಳ ಆರಂಭದಲ್ಲಿ ಸಂಕೇತ ರೂಪವಾಗಿ ಬಳಕೆಗೆ ತಂದುಕೊಂಡಿರುವ ಸಾಧ್ಯತೆಯ ಅಂಶವನ್ನು ಗುರುತಿಸಬಹುದು. ಇದು ಮೂರ್ತಿ ಪೂಜೆಯ ಅತ್ಯಂತ ಪ್ರಾಥಮಿಕ ಮತ್ತು ಆದಿಮ ಆರಂಭದ ಮಟ್ಟದ ಒಂದು ಸಂಕೇತ ಆಕಾರ/ ಆಕೃತಿ ಎಂದು ಒಂದು ನೆಲೆಯಿಂದ ಗುರುತಿಸಬಲ್ಲ ಅಂಶ ಇಲ್ಲಿನದು.

ಬೇಸಾಯ ಸಂಬಂಧಿಯಾದ ಎಲ್ಲಾ ಆಚರಣೆಗಲ್ಲೂ ಇರಲೇಬೇಕಾದ, ಈಗಲೂ ಇಡುತ್ತಿರುವ ಆಕೃತಿ ಇದು. ರೈತರ ಬಹುಮುಖ್ಯ ಹಬ್ಬಗಳಲ್ಲೊಂದಾದ ‘ಹೊನ್ನಾರು’ ಅಥವಾ ‘ಹೊನ್ನೇರು’, ಇಲ್ಲವೆ ಯುಗಾದಿಯ ಹಬ್ಬದ ಭಾಗವಾಗಿ ಹೊಲಕ್ಕೆ ಹೋಗಿ ಸಗಣಿ ಬೆನವನ ಇಟ್ಟು, ಉಳುವ ನೇಗಿಲು ಮತ್ತು ಭೂಮಿಯನ್ನು ಪೂಜಿಸಿಯೇ ಬೇಸಾಯ ಆರಂಭಿಸುವ ‘ಮೊದಲ ಬೇಸಾಯ’ದ ಆಚರಣೆಯಲ್ಲಿ ಇಟ್ಟೇ ಇಡುವ ಆಕಾರ ಈ ಗರಿಕೆ ಬೆನವನದು. ಅಲ್ಲದೆ ಬಿತ್ತುವ ಮೊದಲ ದಿನ ಬಿತ್ತುವ ಕೂರಿಗೆ, ಬಿತ್ತುವ ಧಾನ್ಯವ ಇಟ್ಟು ಪೂಜಿಸುವಾಗಲು, ಕಣದ ಪೂಜೆಯ ಸಂದರ್ಭಗಳಲ್ಲೂ ಗರಿಕೆ ಬೆನವ ಇರಲೇಬೇಕಾದ ಮೂರ್ತಿ.

ಮೊದಲ ಪೂಜೆಯ ಈ ಬೆನವ ನಂತರ ಬಳಕೆಗೆ ಬಂದ ಅದೇ ಉದ್ದೇಶದ/ ಪರಿಕಲ್ಪನೆಯ ಗಣೇಶನಿಗೂ ಆರೋಪಿತಗೊಂಡು ಎರಡೂ ಏಕವಾಗಿದೆ. ಈಗಲೂ ಹಳ್ಳಿಗಾಡಿನಲ್ಲಿ ಸಗಣಿ ಬೆನವನ ಪೂಜೆಯೂ ಇದೆ. ಹಾಗೆಯೆ ಮೂರ್ತಿರೂಪದಲ್ಲಿ ಕೂರಿಸುವ ಗಣೇಶನ ಆರಾಧನೆಯೂ ಇದೆ. ಗಣೇಶನೇ ಬೇರೆ ಬೆನವನೆ ಬೇರೆ. ಮೊದಲ ಪೂಜೆಯ ಅರ್ಥದ ಸಾಮ್ಯದಿಂದ ಎರಡೂ ಒಂದರಲ್ಲಿ ಒಂದು ಸೇರಿದಂತಿದೆ.

ಆ ಪೂಜಾರ್ಹ ಎನಿಸಿರುವ ಬೆನಕನಿಗೆ ಎಲ್ಲಾ ಪೂಜೆಗಳ ಮೊದಲು ಇದನ್ನೆ ಪೂಜಿಸುವುದಿದೆ. ಹಲವು ಬುಡಕಟ್ಟುಗಳಲ್ಲಿ ವಿಶೇಷವಾಗಿ ಇರುಳರಲ್ಲಿ ಮೂರ್ತಿರೂಪದ ಸಹಜವಾದ ದೇವರೇ ಇದು. ಇರುಳಿಗರು ತಮ್ಮ ಕಷ್ಟ- ಸುಖ, ಅನಾರೋಗ್ಯದ ಪರಿಹಾರ, ಕಣಿ/ ಭವಿಷ್ಯ ತಿಳಿಯಲು ಮಾಡುವ ‘ಕಣಿಶಾಸ್ತ್ರಕ’ಕ್ಕೆ ಎದುರಿಗೆ ಈ ಗರಿಕೆ ಬೆನವ ಇರಲೇಬೇಕು. ಇದನ್ನು ಅವರು ಪಿಳ್ಳೆ, ಪಿಳ್ಯಪ್ಪ, ಪಿಳ್ಳಾರಿ ಎಂದು ಕರೆಯುತ್ತಾರೆ.

ಫಲವತ್ತತೆಯ ಸಂಕೇತವಾದ ಸಗಣಿ ಹಾಗೂ ಸಸ್ಯ ಸಂಕುಲದ ಸಂಕೇತ ಗರಿಕೆ; ಈ ಎರಡರ ಸಮತೂಕದ ಸಂಯೋಜನೆಯ ಆಕಾರ; ಅಂದರೆ ಇನ್ನೊಂದರ್ಥದಲ್ಲಿ ಸಗಣಿ ಗರ್ಭವಾದರೆ, ಗರಿಕೆ ಮೊಳಕೆ. ಸಗಣಿ ಮೊಟ್ಟೆಯೊಳಗಿನ ಲೋಳೆಯಂತಾದರೆ, ಗರಿಕೆ ಮೊಟ್ಟೆಯೊಳಗಿನ ಭಂಡಾರದಂತೆ; ಜೀವ- ಶಕ್ತಿಗಳ ಪ್ರತೀಕದಂತೆ; ಸೃಷ್ಟಿ ಪ್ರಕೃತಿಯ ಪ್ರತಿಮೆಯಂತೆ. ಇದು ಪ್ರಾಚೀನ ಪಶುಪಾಲಕ ಹಾಗೂ ಕೃಷಿಕರ ಆಶಯವಾಗಿರುವಂತೆ ಕಾಣುತ್ತದೆ.

ಗರಿಕೆ 12-30 ಸೆಂ.ಮೀ. ಎತ್ತರ ಬೆಳೆವ, ಹೆಚ್ಚು ಪೌಷ್ಟಿಕವಾದ ಸಾರ್ವಕಾಲಿಕ ಸಸ್ಯ. ವಿಶಾಲವಾಗಿ ಹರಡುವ, ಮೈದಾನ, ಗುಡ್ಡಪ್ರದೇಶಗಳೆರಡರಲ್ಲಿ ಬೆಳೆವ ಗುಣವಳ್ಳದ್ದು. ಸಂಸ್ಕೃತದಲ್ಲಿ ‘ದೂರ್ವ’ ಎಂದರೆ ಇಂಗ್ಲೀಷಿನಲ್ಲಿ Cynodon Dactyolon ಎಂದೆನಿಸಿಕೊಳ್ಳುವ ಈ ಗರಿಕೆ ಪಾಂಡವರು ವಾರಣಾವತ ಹೊಕ್ಕಾಗ ಎದುರುಗೊಂಡ ಪುರಜನರು ತಂದಿದ್ದ ಮಂಗಳ ವಸ್ತುಗಳಲ್ಲಿ ಇದು ಒಂದಾಗಿದ್ದುದು ಗಮನಾರ್ಹ’ (ಬಿ.ಜಿ.ಎಲ್. ಸ್ವಾಮಿ: ಸಸ್ಯ ಪುರಾಣ).

ನಗರದವರ ಕಣ್ಸೊಬಗಿನ ಗರಿಕೆ, ಹಳ್ಳಿಗರಿಗೆ ಒಂದು ಕಳೆ ಹುಲ್ಲು. ಗರಿಕೆ ಹತ್ತಿದ ಎರೆ ನೆಲದ ಕಳೆ ತೆಗೆವುದು ಕಷ್ಟ. ಆದರೆ, ಇಂತಹ ಕಳೆ ಗರಿಕೆ ಔಷಧಿ ಸಸ್ಯವಾಗಿರುವುದು ಒಂದು ವಿಶೇಷ. ಗೀರಿದ, ತರಚಿದ, ರಕ್ತ ವಸರುವ ಗಾಯಗಳಿಗೆ ಇದರ ರಸ ಒಳ್ಳೆಯ ಔಷಧ. ಸಕ್ಕರೆ ಕಾಯಿಲೆ/ ಸಿಹಿಮೂತ್ರ ರೋಗಕ್ಕೆ ಇದು ಒಳ್ಳೆಯ ಮದ್ದು. ಗರಿಕೆಯ ಹುಲ್ಲು, ಬೇರು, ಎಲೆಗಳಿಂದ ತಯಾರಿಸಿದ ಕಷಾಯವು ರಕ್ತಮೂತ್ರಕ್ಕೆ, ಬಿಳಿ ಸೆರಗು, ಆಮಶಂಕೆಗಳಿಗೆ ಉತ್ತಮ ಔಷಧ.

‘ಬೆಳಗಾಗ ಎದ್ದು ಒಂದು ಹಿಡಿ ಹಸುರು ಕರಿಕೆ ಹುಲ್ಲನ್ನು ಕಲ್ಲಿನಿಂದ ಜಜ್ಜಿ ತೆಗೆದ ರಸವನ್ನು ಕುಡಿದರೆ (40 ದಿನ) ರಕ್ತವೃದ್ಧಿಯಾಗುತ್ತದೆಯೆಂದು ಹೇಳುತ್ತಾರೆ. ಈ ವಿಧಾನವನ್ನು ಅಳಲೆಕಾಯಿ ಪಂಡಿತನ ಕಸುಬು ಎಂದು ತಾತ್ಸಾರ ಮಾಡಬಾರದು. ಅಮೇರಿಕಾದಲ್ಲಿ ಈಚೀಚೆಗೆ ಗ್ರಾಸ್ ಎಕ್ಸಾಟ್ರಾಕ್ಟ್ ಎಂಬುದೊಂದು ಇಂಜಿಕ್ಷನ್ ತಯಾರಿಯಾಗಿದೆ. ಗರಿಕೆಯ ಹುಲ್ಲಿನಿಂದ ಅನೀಮಿಯ ರೋಗಿಗಳಿಗೆ ಐದಾರು ಇಂಜೆಕ್ಷನ್ ನೀಡಿದರೆ ಆರೋಗ್ಯ ಮರುಕಳಿಸುತ್ತದೆ.’*2

ಹೀಗೆ ಗರಿಕೆ ನಮ್ಮಲ್ಲಿ ಹಲವು ಬಗೆಗಳಿಂದ ಉಪಯುಕ್ತವಾಗಿ ಪಾಲ್ಗೊಳ್ಳುತ್ತದೆ. ನಾವು ಕಳೆಯೆನ್ನುವ ಅನೇಕ ಸಸ್ಯಗಳು ಔಷಧಿಗಳಾಗಿರುವುದು ವಿಶೇಷ. ಕಂಡವರಿಗೆ, ಅರಿತವರಿಗೆ ಉಂಟೆಂದರೆ ಉಂಟು.

Categories
ಕನ್ನಡ ಜಾನಪದ ರಂಗಭೂಮಿ ಸಾಹಿತ್ಯ ಪ್ರಕಾರ - ೧ಆ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೧೪

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೪

ಕೃತಿ – ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೪

ಪ್ರಕಟಣೆ – ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೧ಎ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೧

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೧

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೧

ಲೇಖಕರು: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೧೯ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೩೧

ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ

ಕೃತಿ – ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೧

ಸಂಪಾದಕರು – ಶಾಲಿನಿ ರಘುನಾಥ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ರಂಗಭೂಮಿ ಸಾಹಿತ್ಯ ಪ್ರಕಾರ - ೧ಈ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೧೬

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೬

ಕೃತಿ – ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೪

ಪ್ರಕಟಣೆ – ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಮೂಡಲಪಾಯ ಯಕ್ಷಗಾನ ಸಂಪುಟ-೨ ರಂಗಭೂಮಿ ಸಾಹಿತ್ಯ ಪ್ರಕಾರ - ೨ಅ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೩೭

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೭

ಕೃತಿ: : ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೭

ಪ್ರಕಟಣೆ : ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಮೂಡಲಪಾಯ ಯಕ್ಷಗಾನ ಸಂಪುಟ - ೩ ರಂಗಭೂಮಿ ಸಾಹಿತ್ಯ ಪ್ರಕಾರ - 2ಆ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೩೮

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೮

ಕೃತಿ : ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೮

ಸಂಪಾದಕರು : ಡಾ. ಚಕ್ಕೆರೆ ಶಿವಶಂಕರ್

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೧೪ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೬

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೬

ಕೃತಿ : ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೬

ಪ್ರಕಟಣೆ: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ರಂಗಭೂಮಿ ಸಾಹಿತ್ಯ ಪ್ರಕಾರ - ೧ಅ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೩

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೩

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೩

ಪ್ರಕಟಣೆ : ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ರಂಗಭೂಮಿ ಸಾಹಿತ್ಯ ಪ್ರಕಾರ ೪ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೦

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೦

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೦

ಲೇಖಕರು: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಮೂಡಲಪಾಯ ಯಕ್ಷಗಾನ ಸಂಪುಟ-1 ರಂಗಭೂಮಿ ಸಾಹಿತ್ಯ ಪ್ರಕಾರ - ೨ ಸಮಗ್ರ ಕನ್ನಡ ಜನಪದ, ಯಕ್ಷಗಾನ ಸಾಹಿತ್ಯಮಾಲೆ - ೩೬

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೬

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೬

ಪ್ರಕಟಣೆ: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ರಂಗಭೂಮಿ ಸಾಹಿತ್ಯ ಪ್ರಕಾರ-೧ಋ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೧೯

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೧೯

ಕೃತಿ : ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೧೯

ಸಂಪಾದಕರು : ಆರ್.ವಿ. ಭಂಡಾರಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಯಕ್ಷಗಾನ ಸಾಹಿತ್ಯ ಸಂಪುಟ - ೧ಉ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೭

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೭

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೭

ಸಂಗ್ರಹ: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ರಂಗಭೂಮಿ ಸಾಹಿತ್ಯ ಪ್ರಕಾರ ೧ಇ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ -೧೫

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೫

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೫

ಪ್ರಕಟಣೆ : ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ರಂಗಭೂಮಿ ಸಾಹಿತ್ಯ ಪ್ರಕಾರ ೧ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೧೨

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೨

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೨

ಸಂಪಾದಕರು : ಡಾ|| ಕೆ. ಎಂ. ರಾಘವ ನಂಬಿಯಾರ್

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೨೦ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೩೨

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೩೨

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೩೨

ಪ್ರಕಟಣೆ: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೧೮ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೩೦

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೦

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೦

ಲೇಖಕರು: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೦

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ - ೧೭ ಸಮಗ್ರ ಕನ್ನಡ ಸಾಹಿತ್ಯಮಾಲೆ - ೨೯

ಸಮಗ್ರ ಕನ್ನಡ ಸಾಹಿತ್ಯಮಾಲೆ – ೨೯

ಕೃತಿ: ಸಮಗ್ರ ಕನ್ನಡ ಸಾಹಿತ್ಯಮಾಲೆ – ೨೯

ಪ್ರಕಟಣೆ: ಜಾನಪದ ಅಕಾಡೆಮಿ

ಕೃತಿಯನ್ನು ಓದಿ     |     Download

Categories
ಕನ್ನಡ ಜಾನಪದ ಪದ್ಯ ಸಾಹಿತ್ಯ ಪ್ರಕಾರ ೮ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೮

ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೮

ಕೃತಿ: ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೮

ಪ್ರಕಟಣೆ : ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಕೃತಿಯನ್ನು ಓದಿ     |     Download