Categories
e-ದಿನ

ಡಿಸೆಂಬರ್-17

 

ಪ್ರಮುಖ ಘಟನಾವಳಿಗಳು:

1791: ನ್ಯೂಯಾರ್ಕ್ ಸಂಚಾರ ನಿಯಂತ್ರಣ ಮೊದಲ ಬಾರಿಗೆ ಏಕಮುಖ ರಸ್ತೆಯನ್ನು ಸೃಷ್ಟಿಸಿತು.

1792: ಕ್ಯೂಬೆಕ್ ನಗರದ ಕೆಳಗಿನ ಕೆನೆಡಾದ ಮೊದಲ ಶಾಸನ ಸಭೆಯನ್ನು ತೆರೆಯಲಾಯಿತು.

1895: ಕಾಗದದ ಹುರಿ (ಮಾಸ್) ಮಾಡುವ ಯಂತ್ರವನ್ನು ಜಾರ್ಜ್ ಬ್ರೌನೆಲ್ ಪೇಟೆಂಟ್ ಪಡೆದರು.

1923: ಭಾರತದ ಎರಡನೇ ದೊಡ್ಡ ಪೇಂಟ್ ತಯಾರಕರಾದ ಬರ್ಜರ್ ಪೇಂಟ್ಸ್ ಇಂಡಿಯಾ ಲಿಮಿಟೆಡ್ ಕಲ್ಕತ್ತಾದಲ್ಲಿ ಸ್ಥಾಪಿಸಲಾಯಿತು.

1927: ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ರಾಜಗುರು ಬ್ರಿಟಿಷ್ ಸಹಾಯಕ ಪೋಲೀಸ್ ಅಧೀಕ್ಷಕರಾಗಿದ್ದ ಜಾನ್ ಸೌಂಡರ್ಸ್ ಅವರನ್ನು ಗುಂಡಿಕ್ಕಿ ಕೊಂದರು.

1927: ಭಾರತದ ಕ್ರಾಂತಿಕಾರಿ ರಾಜೇಂದ್ರ ಲಾಹಿರಿಯವರನ್ನು ಉತ್ತರ ಪ್ರದೇಶದ ಗೋಂಡಾ ಜೈಲಿನಲ್ಲಿ ನಿಯೋಜಿತ ದಿನಾಂಕ್ಕಿಂತ ಎರಡು ದಿನ ಮುಂಚಿತವಾಗಿಯೇ ಗಲ್ಲಿಗೇರಿಸಲಾಯಿತು.

1931: ಪ್ರೊ.ಪಿ.ಸಿ.ಮಹಲಾನೋಬಿಸ್ ಕಲ್ಕತ್ತಾದಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಸ್ಥಾಪಿಸಿದರು.

1947: ಬ್ರಿಟಿಷ್ ಕೈಗಾರಿಕಾ ಸಂಸ್ಥೆಯು ಡೆನ್ನಿಸ್ ಗ್ಯಾಬರ್ ತಮ್ಮ ಪ್ರಯೋಗಾಲಯದಲ್ಲಿ ಕಂಡು ಹಿಡಿದ ಪೂರ್ಣಲೇಖನ (ಹೋಲೋಗ್ರಾಫಿ)ಗೆ ಪೇಟೆಂಟ್ ಪಡೆದರು.

1965: ಅತ್ಯಂತ ದೊಡ್ಡ ಪತ್ರಿಕೆ ಭಾನುವಾರದ ನ್ಯೂಯಾರ್ಕ್ ಟೈಮ್ಸ್ ಒಟ್ಟು 946 ಪುಟಗಳು ಪ್ರಕಟಣೆ ಆಯಿತು.

1986: ಶ್ರೀಮತಿ ಡೇವಿನಾ ಥಾಂಪ್ಸನ್ ಮೊದಲ ಹೃದಯ, ಶ್ವಾಸಕೋಶ ಮತ್ತು ಯಕೃತ್ತಿನ ಶಸ್ತ್ರಚಿಕಿತ್ಸೆ ಮಾಡಿಕೊಂಡ ಮೊದಲ ಮಹಿಳೆ ಎಂದು ವೈದ್ಯಕೀಯ ಇತಿಹಾಸದ ನಿರ್ಮಿಸಿದರು.

ಪ್ರಮುಖ ಜನನ/ಮರಣ:

1556: ಭಾರತೀಯ-ಪಾಕಿಸ್ತಾನದ ಕವಿ ಅಬ್ದುಲ್ ರಹಿಂ ಖಾನ್ ಜನಿಸಿದರು.

1905: ಭಾರತದ ನಿವೃತ್ತ ಮುಖ್ಯನ್ಯಾಯಮೂರ್ತಿ ಹಾಗೂ 6ನೇ ಉಪರಾಷ್ಟ್ರಪತಿಯಾಗಿದ್ದ ಮೊಹಮ್ಮದ್ ಹಿದಾಯತ್ ಉಲ್ಲಾ ಜನಿಸಿದರು.

1910: ಭಾರತೀಯ-ಅಮೇರಿಕನ್ ಶಿಕ್ಷಕ ಮತ್ತು ಲೇಖಕ ಏಕ್ನಾಥ್ ಈಶ್ವರನ್ ಜನಿಸಿದರು.

1914: ಭಾರತದ ಕ್ರಿಕೆಟ್ ಆಟಗಾರ ಮುಶ್ತಾಖ್ ಅಲಿ ಜನಿಸಿದರು.

1927: ಭಾರತದ ಕ್ರಾಂತಿಕಾರಿ ರಾಜೇಂದ್ರ ಲಹಿರಿ ನಿಧನರಾದರು.

1957: ಕರ್ನಾಟಕದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜನಿಸಿದರು.

1972: ಹಿಂದಿ ಚಿತ್ರರಂಗದ ನಟ ಜಾನ್ ಅಬ್ರಹಾಮ್ ಜನಿಸಿದರು.

1978: ಬಾಲಿವುಡ್ ಖ್ಯಾತ ನಟ ರಿತೇಶ್ ದೇಶಮುಖ್ ಜನಿಸಿದರು.

1987: ಕನ್ನಡ ಚಿತ್ರರಂಗದ ನಟಿ ತೇಜಸ್ವಿನಿ ಪ್ರಕಾಶ್ ಜನಿಸಿದರು.

2008: ಕೇಂದ್ರ ಸಾರಿಗೆ ಸಚಿವರಾಗಿದ್ದ ವೇದಪ್ರಕಾಶ್ ಗೋಯಲ್ ಅವರು ನಿಧನರಾದರು.