ಪ್ರಮುಖ ಘಟನಾವಳಿಗಳು:

 • 1612: ಗೆಲಿಲಿಯೋ ಮೊದಲ ಬಾರಿಗೆ “ನೆಪ್ಟ್ಯೂನ್ ಗ್ರಹ”ವನ್ನು ನೋಡಿದರು.

 • 1849: ಎಂ.ಜಾಲಿ ಬೆಲ್ಲಿನ್ ಒಣ-ಶುಚಿಗೊಳಿಸುವಿಕೆಯನ್ನು ಕಂಡುಹಿಡಿದರು.

 • 1877: ಜಾನ್ ಸ್ಟೀವಿನ್ಸ್ ಹಿಟ್ಟು ಗಿರಣಿಗಾಗಿ ಪೇಟೆಂಟ್ ಪಡೆದರು.

 • 1885: ವಿಶ್ವದ ಅತೀ ದೊಡ್ಡ ಮತ್ತು ಹಳೆಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಲಾಯಿತು.

 • 1895: ವಿಶ್ವದ ಪ್ರಥಮ ಚಲನಚಿತ್ರ ಮಂದಿರ ಪ್ಯಾರಿಸ್ಸಿನಲ್ಲಿ ತೆರೆಯಲಾಯಿತು.

 • 1981: ಅಮೇರಿಕಾದ ಮೊದಲ “ಟೆಸ್ಟ್ ಟ್ಯೂಬ್” ಮಗು ಆಸ್ಪತ್ರೆಯಲ್ಲಿ ಜನಿಸಿತು.

 • 1984: ರಾಜೀವ್ ಗಾಂಧಿ ಅವರ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಚುನಾವಣೆಯಲ್ಲಿ ಗೆದ್ದಿತು.

 • 1995: ಭಾರತದ ಎರಡನೇ ಪೀಳಿಗೆಯ ದೂರದ ಸಂವೇದನಾ ಉಪಗ್ರಹ IRS-1C ಯನ್ನು ಪ್ರಾರಂಭಿಸಲಾಯಿತು.

 • 2007: ನೇಪಾಳವು ರಾಜಪ್ರಭುತ್ವವನ್ನು ನಿರ್ಮೂಲನೆ ಮಾಡಿತು.

 • 2010: 4,00,000 ವರ್ಷಗಳ ಹಿಂದೆ ಜೀವಿಸಿದ್ದ ಮಾನವರ ಪಳಯುಳಿಕೆಗಳು ಇಸ್ರೇಲಿನಲ್ಲಿ ಪತ್ತೆಯಾದವು.

ಪ್ರಮುಖ ಜನನ/ಮರಣ:

 • 1932: ರಿಲಾಯನ್ಸ್ ಸಂಸ್ಥೆಯ ಸಂಸ್ಥಾಪಕ ಧೀರುಬಾಯ್ ಅಂಬಾನಿ ಜನಿಸಿದರು.

 • 1937: ಟಾಟಾ ಸಂಸ್ಥೆಯ ಅಧ್ಯಕ್ಷರಾದ ರತನ್ ಟಾಟಾ ಜನಿಸಿದರು.

 • 1940: ಭಾರತದ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟೊನಿ ಜನಿಸಿದರು.

 • 1941: ಭಾರತ-ಪಾಕಿಸ್ತಾನದ ಕ್ರಿಕೆಟ್ ಆಟಗಾರ ಮತ್ತು ತರಬೇತುಗಾರ ಇಂತಿಕಾಬ್ ಆಲಂ ಜನಿಸಿದರು.

 • 1951: ಬಾಲಿವುಡ್ ಚಿತ್ರರಂಗದ ನಟ, ನಿರ್ದೇಶಕ ಸಾಜಿದ್ ಖಾನ್ ಜನಿಸಿದರು.

 • 1952: ಭಾರತದ 9ನೇ ಕಾನೂನು ಸಚಿವರಾದ ಅರುಣ್ ಜೇಟ್ಲಿ ಅವರು ಜನಿಸಿದರು.

 • 1977: ಶ್ರೇಷ್ಠ ಕವಿ, ಪ್ರಬಂಧಕಾರ ಮತ್ತು ನಾಟಕಕಾರ ಸುಮಿತ್ರಾನಂದನ್ ಪಂತ್ ನಿಧನರಾದರು.

 • 1966: ಖಂಜರ ವಾದಕ ವಿ.ಸೆಲ್ವಗಣೇಶನ್ ಜನಿಸಿದರು.

 • 1984: ಕನ್ನಡ ಚಿತ್ರರಂಗದ ನಟ ದಿಗಂತ್ ಅವರು ಜನಿಸಿದರು.