Categories
e-ದಿನ

ಡಿಸೆಂಬರ್-29

ಪ್ರಮುಖ ಘಟನಾವಳಿಗಳು:

1848: ಅಮೇರಿಕಾದ ಅಧ್ಯಕ್ಷ ಜೇಮ್ಸ್ ಪೋಲ್ಕ್ ವೈಟ್ ಹೌಸಿನಲ್ಲಿ ಮೊದಲ ಅನಿಲ ಬೆಳಕನ್ನು ಬೆಳಗಿಸಿದರು.

1862: ಬೌಲಿಂಗ್ ಬಾಲ್ ಅನ್ನು ಕಂಡು ಹಿಡಿಯಲಾಯಿತು.

1891: ಥಾಮಸ್ ಎಡಿಸನ್ ವಿದ್ಯುನ್ಮಾನ ಸಂಕೇತಗಳ ಪ್ರಸರಣ (ರೇಡಿಯೋ)ಗೆ ಪೇಟೆಂಟ್ ಪಡೆದರು.

1908: 4 ಚಕ್ರ ವಾಹನಗಳಿಗೆ ಬ್ರೇಕ್ ಅನ್ನು ಕಂಡುಹಿಡಿದಿರುವುದಕ್ಕೆ ವಿಸ್ಕಸಿನ್ ಅವರಿಗೆ ಪೇಟೆಂಟ್ ನೀಡಲಾಯಿತು.

1916: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಲಖ್ನೋ ಅಧಿವೇಶನ ಪ್ರಾರಂಭವಾಯಿತು.

1937: ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಿಸಿದ ಹೊಸ ಸಂವಿಧಾನದಿಂದ ಐರಿಶ್ ಫ್ರೀ ರಾಜ್ಯ ಎಂಬ ಹೆಸರಿನಿಂದ “ಐರ್ಲೆಂಡ್” ಎಂದು ಮರುನಾಮಕರಣ ಮಾಡಲಾಯಿತು.

1975: ಇಂಗ್ಲೆಂಡಿನಲ್ಲಿ ಲಿಂಗ ತಾರತಮ್ಯ ಮತ್ತು ಸಮಾನ ವೇತನ ಕಾಯಿದೆಗಳು ಜಾರಿಗೆ ತರಲಾಯಿತು.

1984: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮಗ ರಾಜೀವಗಾಂಧಿ ಅವರು ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು.

1988: ಆಸ್ಟ್ರೇಲಿಯಾದಲ್ಲಿ ಇದ್ದ ವಿಕ್ಟೋರಿಯನ್ ಅಂಚೆ ಕಛೇರಿಯ ವಸ್ತುಸಂಗ್ರಹಾಲಯವನ್ನು ಮುಚ್ಚಲಾಯಿತು.

2007: ಅಮೇರಿಕಾದ ಮೃಗಾಲಯದಲ್ಲಿ 55 ವರ್ಷದ ವಿಶ್ವದ ಅತ್ಯಂತ ಹಿರಿಯ ಒರಾಂಗುಟಾನ್ ಕೋತಿ ಸಾವನ್ನಪ್ಪಿತು.

ಪ್ರಮುಖ ಜನನ/ಮರಣ:

1844: ಭಾರತೀಯ ನ್ಯಾಯವಾದಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ವೋಮೇಶ್ ಚಂದರ್ ಬ್ಯಾನರ್ಜಿ ಜನಿಸಿದರು.

1904: ಕನ್ನಡದ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಜನಿಸಿದರು.

1909: ರಾಜಸ್ಥಾನಿ ಭಾಷೆಯಲ್ಲಿ ಮೊದಲ ನಿಘಂಟು ತಯಾರಿಸಿದ ಭಾಷಾಶಾಸ್ತ್ರಜ್ಞ ಡಾ.ಸೀತಾರಾಮ ಲಾಲಸ್ ಅವರು ಜನಿಸಿದರು.

1917: ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಮತ್ತು ನಿರ್ಮಾಪಕ ರಮಾನಂದ್ ಸಾಗರ್ ಜನಿಸಿದರು.

1922: ಶ್ರೇಷ್ಠ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್ ಷಾ ಮೊಹಮ್ಮದ್ ಹುಸ್ಸೈನ್ ಜನಿಸಿದರು.

1925: ಭಾರತದ ಹಾಕಿ ಆಟಗಾರ ಕೇಶವ್ ಚಂದ್ರ ದತ್ ಜನಿಸಿದರು.

1942: ಬಾಲಿವುಡಿನ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಜನಿಸಿದರು.

2013: ಭಾರತದ ಲೇಖಕ ಮತ್ತು ಅನುವಾದಕ ಜಗದೀಶ್ ಮೊಹಂತಿ ಅವರು ನಿಧನರಾದರು.

2014: ಭಾರತ-ಹಾಂಕಾಂಗ್ ಉದ್ಯಮಿ ಹರಿಹರಿಲೀಲಾ ನಿಧನರಾದರು.

2015: ಪಂಜಾಬಿನ 25ನೇ ಗವರ್ನರ್ ಓಂ ಪ್ರಕಾಶ್ ಮಲ್ಹೋತ್ರಾ ನಿಧನರಾದರು.