Categories
e-ದಿನ

ಡಿಸೆಂಬರ್-30

ಪ್ರಮುಖ ಘಟನಾವಳಿಗಳು:

1861: ಅಮೇರಿಕಾದ ಬ್ಯಾಂಕುಗಳು ಚಿನ್ನದ ಪಾವತಿಗಳನ್ನು ನಿಲ್ಲಿಸಿತು.

1873: ಅಮೇರಿಕನ್ ಮೆಟ್ರೊಲಾಜಿಕಲ್ ಸೊಸೈಟಿ ಸ್ಥಾಪಿಸಲಾಯಿತು.

1922: ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ (ಯು.ಎಸ್.ಎಸ್.ಆರ್)ವನ್ನು ಸ್ಥಾಪಿಸಲಾಯಿತು.

1924: ಎಡ್ವಿನ್ ಹಬ್ಬಲ್ ಇತರ ಗ್ಯಾಲಾಕ್ಸಿಯ ವ್ಯವಸ್ಥೆಗಳ ಅಸ್ತಿತ್ವವನ್ನು ಘೋಷಿಸಿದರು.

1932: ಅಖಿಲ ಭಾರತ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆ (AIIHPH) ಅನ್ನು ಸ್ಥಾಪಿಸಲಾಯಿತು.

1943: ಪೋರ್ಟ್ ಬ್ಲೇರಿನ ಬಳಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಘೋಷಣೆ ಮಾಡಿ ಧ್ವಜವನ್ನು ಹಾರಿಸಿದರು.

1949: ಭಾರತವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಗುರುತಿಸಿತು.

1953: ಮೊದಲ ಬಣ್ಣದ ಟಿವಿ ಸೆಟ್ ಗಳನ್ನು ಮಾರಾಟಕ್ಕೆ ಬಂದವು.

1984: ಮೆಕ್ಸಿಕೋದಲ್ಲಿ ಸ್ಪೆಲೆಲೋಲೊಜಿಸ್ಟ್ ವಿಶ್ವದ ಅತ್ಯಂತ ಆಳವಾದ ಗುಹೆಯೊಂದನ್ನು ಕಂಡುಹಿಡಿದರು.

2006: ಇರಾಕಿನಲ್ಲಿಸರ್ವಾಧಿಕಾರಿ ಸದ್ದಾಮ್ ಹುಸ್ಸೇನ್ ಅವರನ್ನು ಗಲ್ಲಿಗೇರಿಸಲಾಯಿತು.

ಪ್ರಮುಖ ಜನನ/ಮರಣ:
1879: ವಿಶ್ವದಾದ್ಯಂತ ಅನುಯಾಯಿಗಳನ್ನು ಆಕರ್ಷಿಸಿದ ಭಾರತದ ಆಧ್ಯಾತ್ಮಿಕ ಗುರು ರಮಣ ಮಹರ್ಷಿ ಜನಿಸಿದರು.

1887: ಖ್ಯಾತ ಲೇಖಕ, ವಕೀಲರು ಮತ್ತು ರಾಜಕಾರಣಿ ಕೆ.ಎಂ.ಮುನ್ಷಿ ಜನಿಸಿದರು.

1923: ಭಾರತದ ಶಿಕ್ಷಣ ತಜ್ಞ ಮತ್ತು ರಾಜಕಾರಣಿ ಪ್ರಕಾಶವೀರಶಾಸ್ತ್ರಿ ಜನಿಸಿದರು.

1948: ಭಾರತದ ಕ್ರಿಕೆಟ್ ಆಟಗಾರ ಸುರಿಂದರ್ ಅಮರನಾಥ್ ಜನಿಸಿದರು.

1979: ಮಲಯಾಳಂ ಮತ್ತು ತಮಿಳು ಚಿತ್ರರಂಗದ ನಾಯಕಿ ಕೌಸಲ್ಯ ಜನಿಸಿದರು.

1987: ಹಿಂದಿ ಚಲನಚಿತ್ರಗಳ ಸಂಗೀತ ಸಂಯೋಜಕ ದತ್ತಾನಾಯಕ್ ನಿಧನರಾದರು.

1990: ಭಾರತೀಯ ಲೇಖಕ, ಕವಿ ಮತ್ತು ವಿಮರ್ಶಕ ರಘುವೀರ್ ಸಹಾಯ್ ನಿಧನರಾದರು.

2009: ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್ ನಿಧನರಾದರು.

2010: ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿ.ಬಾಲಕೃಷ್ಣ ಇರಾಡಿ ನಿಧನರಾದರು.

2015: ಭಾರತೀಯ ಕವಿ, ನಾಟಕಕಾರ ಮತ್ತು ಅನುವಾದಕ ಮಂಗೇಶ್ ಪದ್ಗಾಂವಕರ್ ಅವರು ನಿಧನರಾದರು.