Categories
e-ದಿನ

ಡಿಸೆಂಬರ್-31

ಪ್ರಮುಖ ಘಟನಾವಳಿಗಳು:

1600: ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1861: ಚಿರಾಪುಂಜಿಯಲ್ಲಿ 22,990 ಮಿ.ಮೀ ಮಳೆಯಾಗಿ ವಿಶ್ವ ದಾಖಲೆಯಾಯಿತು.

1879: ಸಾರ್ವಜನಿಕವಾಗಿ ವಿದ್ಯುತ್ ಪ್ರಕಾಶಮಾನ ದೀಪದ ಮೊದಲ ಪ್ರದರ್ಶನವನ್ನು ಥಾಮಸ್ ಆಲ್ವಾ ಎಡಿಸನ್ ಅವರು ನೀಡಿದರು.

1929: ಜವಹರಲಾಲ್ ನೆಹರು ಅವರ ನೇತೃತ್ವದ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ “ಪೂರ್ಣಸ್ವರಾಜ್” ನಿರ್ಣಯವನ್ನು ಅಳವಡಿಸಿಕೊಂಡಿತು.

1938: ಅಮೇರಿಕಾದಲ್ಲಿ ಚಾಲಕರಿಗೆ ಮೊದಲ ಬಾರಿಗೆ ಉಸಿರಾಟದ ಪರೀಕ್ಷೆಯ ಮೂಲಕ ಮದ್ಯಪಾನವನ್ನು ಮಾಡಿರುವುದರ ಬಗ್ಗೆ ಪತ್ತೆ ಮಾಡುವುದನ್ನು ಪರಿಚಯಿಸಲಾಯಿತು.

1944: ಹಂಗೇರಿ ಜರ್ಮನಿಯ ಮೇಲೆ ಯುದ್ದ ಘೋಷಿಸಿತು.

1984: ರಾಜೀವ್ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

1996: ಭಾರತದಲ್ಲಿ ಚಿನ್ನದ ಅಮದು ನೀತಿಯನ್ನು ಉದಾರಿಕರಣ ಮಾಡಲಾಯಿತು.

1999: ಹೈಜಾಕ್ ಮಾಡಲಾದ ಇಂಡಿಯನ್ ಏರ್ಲೈನ್ಸ್ ವಿಮಾನ 814ನ್ನು ಬಿಡಿಸಲು ಮಾತುಕಥೆಗಳು ತೀರ್ಮಾನಕ್ಕೆ ಬಂದವು.

1999: ಥೇಮ್ಸ್ ನದಿಯ ದಂಡೆಗಳ ಮೇಲೆ ವಿಶ್ವದ ಅತಿ ದೊಡ್ಡ ಫೆರ್ರಿಸ್ ಚಕ್ರ ‘ಲಂಡನ್ ಐ’ಯನ್ನು ತೆರೆಯಲಾಯಿತು.

ಪ್ರಮುಖ ಜನನ/ಮರಣ:

1706: ಪಾಂಡಿಚೆರ್ರಿಯ ಸಂಸ್ಥಾಪಕ ಫ್ರಾಂಕಾಯಿಸ್ ಮಾರ್ಟಿನ್ ನಿಧನರಾದರು.

1738: ಭಾರತದ ಗವರ್ನರ್ ಜೆನರಲ್ ಆಗಿದ್ದ ಲಾರ್ಡ್ ಚಾರ್ಲ್ಸ್ ಕಾರ್ನವಾಲಿಸ್ ಜನಿಸಿದರು.

1898: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕಂದಾಯ ಸಚಿವರಾಗಿದ್ದ ಕೆ.ಬಿ.ಸಹಾಯ್ ಜನಿಸಿದರು.

1908: ಮೊದಲ ಮಹಿಳಾ ಐಎಎಸ್ ಅಧಿಕಾರಿಯಾದ ಇಶಾ ಬಸಂತ್ ಜೋಷಿ ಜನಿಸಿದರು.

1925: ಶ್ರೇಷ್ಠ ಹಿಂದಿ ಸಾಹಿತಿ ಮತ್ತು ಮಾಜಿ ಐಎಎಸ್ ಅಧಿಕಾರಿ ಶ್ರೀಲಾಲ್ ಶುಕ್ಲಾ ಜನಿಸಿದರು.

1936: ಪ್ರಖ್ಯಾತ ಸಾಗರ ಜೀವಶಾಸ್ತ್ರಜ್ಞ ಡಾ.ಸೈಯದ್ ಝಹೂರ್ ಖಾಸಿಂ ಜನಿಸಿದರು.

1965: ಭಾರತದ ಕ್ರಿಕೆಟ್ ಆಟಗಾರ ಲಕ್ಷ್ಮಣ ಶಿವರಾಮಕೃಷ್ಣನ್ ಜನಿಸಿದರು.

1971: ಭಾರತೀಯ ಭೌತಶಾಸ್ತ್ರಜ್ಞ ವಿಕ್ರಂ ಸಾರಾಭಾಯ್ ಅವರು ನಿಧನರಾದರು.

1986: ಭಾರತದ ಕೇಂದ್ರ ಸರ್ಕಾರದ ಆರೋಗ್ಯ ಸಚಿವರಾಗಿದ್ದ ರಾಜ್ ನಾರಾಯಣ್ ನಿಧನರಾದರು.

2001: ತಮಿಳು ಭಾಷೆಯ ಲೇಖಕ, ಪತ್ರಕರ್ತ ಮತ್ತು ವಿಮರ್ಶಕ ಟಿ.ಎಂ.ಚಿದಂಬರ ರಘುನಾಥನ್ ನಿಧನರಾದರು.

One reply on “ಡಿಸೆಂಬರ್-31”

ಮಾನ್ಯತೆ, ಕಣಜದಲ್ಲಿ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ, ಸ್ಪರ್ಧೆಾಥಿಗಳಿಗೆ ಹಾಗೂ ಜ್ಞಾನಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.