Categories
e-ದಿನ

ನವೆಂಬರ್-11

 

ಪ್ರಮುಖ ಘಟನಾವಳಿಗಳು:

1647: ಮಾಸಚೂಸೆಟ್ಸ್ ಅಮೇರಿಕಾದ ಮೊದಲ ಕಡ್ಡಾಯ ಶಾಲಾ ಹಾಜರಾತಿ ಕಾನೂನನ್ನು ಅಂಗೀಕರಿಸಿತು.

1851: ಟೆಲಿಸ್ಕೋಪ್ ಅನ್ನು ಅಲ್ವನ್ ಕ್ಲಾರ್ಕ್ ಅವರು ಪೇಟೆಂಟ್ ಪಡೆದರು.

1865: ಸಿಂಚುಲಾ ಒಡಂಬಡಿಕೆಯು ಭುತಾನ್ ‍ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ತೀಸ್ತಾ ನದಿಯ ಪೂರ್ವದ ಪ್ರದೇಶಗಳನ್ನು ಬಿಟ್ಟುಕೊಡಲು ಮಾಡಲಾಯಿತು.

1888: ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಆಜಾದ್ ಅವರ ಜನುಮ ದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತದೆ.

1889: ವಾಷಿಂಗ್ಟನನ್ನು ಅಮೇರಿಕಾದ 42ನೇ ರಾಜ್ಯವಾಗಿ ಸೇರಿಸಲಾಯಿತು.

1890: ಡಿ.ಮೆಕ್ರೀ ಕೊಂಡೊಯ್ಯಬಲ್ಲ ಅಗ್ನಿ ಅನಾಹುತದಿಂದ ಪಾರಾಗಬಹುದಾದ ಅಗ್ನಿ ಶಾಮಕಕ್ಕೆ ಪೇಟೆಂಟ್ ಪಡೆದರು.

1922: ಅಮೇರಿಕಾದ ಅತ್ಯಂತ ದೊಡ್ಡ ಧ್ವಜವನ್ನು ಪ್ರದರ್ಶಿಸಲಾಯಿತು.

1940: ಮೋಟಾರು ವಾಹನಗಳಲ್ಲಿ “ಜೀಪ್” ಅನ್ನು ಪರಿಚಯಿಸಲಾಯಿತು.

1952: ಮೊದಲ ವೀಡಿಯೋ ರೆಕಾರ್ಡರ್ ಅನ‍್ನು ಜಾನ್ ಮುಲ್ಲಿನ್ ಮತ್ತು ವೈನೇ ಜಾನ್ಸನ್ ಪ್ರದರ್ಶಿಸಿದರು.

1990: ವಿಶ್ವದ ಮೊದಲ ಹೃದಯ ಮತ್ತು ಯಕೃತ್ತು ಕಸಿ ಸ್ವೀಕರಿಸಿದ ಸ್ಟಾರ್ಮಿ ಜೋನ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಮುಖ ಜನನ/ಮರಣ:

1888: ಭಾರತದ ಸ್ವಾತಂತ್ರದ ಚಳವಳಿಯ ಪ್ರಮುಖ ನಾಯಕ, ಹಿಂದೂ-ಮುಸ್ಲಿಂ ಏಕತೆಯ ವಿದ್ವಾಂಸ ಮತ್ತು ಸಂಕೇತವಾಗಿದ್ದ ಮೌಲಾನಾ ಆಜಾದ್ ಅವರು ಜನಿಸಿದರು.

1888: ಭಾರತದ ವಕೀಲ ಮತ್ತು ರಾಜಕಾರಣಿ ಜೆ.ಬಿ.ಕೃಪಲಾನಿ ಜನಿಸಿದರು.

1918: ಖ್ಯಾತ ಉದ್ಯಮಿ ಕೃಷ್ಣ ಕುಮಾರ್ ಬಿರ್ಲಾ ಜನಿಸಿದರು.

1924: ಭಾರತದ ರಿಸರ್ವ್ ಬ್ಯಾಂಕಿನ 14ನೇ ಗವರ್ನರ್ ಆಗಿದ್ದ ಐ.ಜಿ.ಪಟೇಲ್ ಜನಿಸಿದರು.

1936: ಖ್ಯಾತ ಹಿಂದಿ ಚಲನಚಿತ್ರ ನಟಿ ಮಾಲಾ ಸಿನ್ಹಾ ಜನಿಸಿದರು.

1953: ಬಾಲಿವುಡ್ ಖ್ಯಾತ ಹಿಂದಿ ಚಿತ್ರೊಧ್ಯಮದ ನಿರ್ಮಾಪಕ ಬೋನಿ ಕಪೂರ್ ಜನಿಸಿದರು.

1980: ಖ್ಯಾತ ಕತಕಲಿ ಕಲಾವಿದರಾಗಿದ್ದ ಚೆಂಗನೂರ್ ರಾಮನ್ ಪಿಳ್ಳೈ ನಿಧನರಾದರು.

1985: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ ಜನಿಸಿದರು.

1994: ಭಾರತದ ರಾಷ್ಟ್ರ ಕವಿ ಕುವೆಂಪು ಅವರು ನಿಧನರಾದರು.

2004: ಖ್ಯಾತ ಫ್ಯಾಷನ್ ಡಿಸೈನರ್ ರಿತು ಕುಮಾರ್ ಜನಿಸಿದರು.

2005: ಭಾರತದಲ್ಲಿ ಅತ್ಯಂತ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದರೆಂದೇ ಖ್ಯಾತಿ ಪಡೆದ, ಗಿನ್ನಿಸ್ ಬುಕ್ ದಾಖಲೆ ನಿರ್ಮಿಸಿದ ವೈದ್ಯ ಮುರುಗಪ್ಪ ಚನ್ನವೀರಪ್ಪ ಮೋದಿ ನಿಧನರಾದರು.