೧) ಪ್ರೊ. ಎಸ್. ಎಸ್. ಭೂಸನೂರಮಠ ಅವರ ಕೃತಿಗಳು

ಸಂಪಾದಿತ ಕೃತಿಗಳು

೧.         ಭಕ್ತಿ ಸುಧಾಸಾರ
೨.         ಗುರುರಾಜ ಚಾರಿತ್ರ
೩.         ಮೋಳಿಗೆಯ ಮಾರಯ್ಯ ಮತ್ತು ರಾಣಿ ಮಹಾದೇವಿಯವರ ವಚನಗಳು (ರೆ. ಉತ್ತಂಗಿಯವರೊಡನೆ)
೪.         ಲಿಂಗಲೀಲಾವಿಲಾಸ ಚಾರಿತ್ರೆ
೫.         ಮೋಳಿಗೆಯ್ಯನ ಪುರಾಣ
೬.         ಪ್ರೌಢರಾಯನ ಕಾವ್ಯ
೭.         ಪ್ರಭುದೇವರ ಶೂನ್ಯ ಸಂಪಾದನೆ
೮.         ವಚನಸಾಹಿತ್ಯ ಸಂಗ್ರಹ
೯.         Sunysampadane Vol. II
೧೦.       Sunysampadane Vol. III
೧೧.       Sunysampadane Vol. IV
(with Prof. Menezes)
೧೨.       ಏಕೋತ್ತರ ಶತಸ್ಥಲ

ಸ್ವತಂತ್ರ ಕೃತಿಗಳು

೧.         ಶೂನ್ಯ ಸಂಪಾದನೆ : ಪರಾಮರ್ಶೆ
೨.         ಪರಾಮರ್ಶೆ – ಸಂಗ್ರಹ
೩.         ಕಾಶ್ಮೀರದಿಂದ ಕಲ್ಯಾಣಕ್ಕೆ
೪.         ಭವ್ಯ ಮಾನವ

 


ಅನುಬಂಧ ೨ – ಭೂಸನೂರಮಠ ಅವರ ಬದುಕಿನ ಕೆಲವು ವಿವರಗಳು

 

ಜನನ ೭ – ೧೧ – ೧೯೧೦
ಜನ್ಮಸ್ಥಳ ನಿಡುಗುಂದಿ/ಸಾಂತಗೇರಿ ಇಟಗಿ
ತಂದೆ – ತಾಯಿ ಶಿವಮೂರ್ತೆಯ್ಯ – ರಾಚಮ್ಮ
ವಿದ್ಯಾಭ್ಯಾಸ

ವಿವಾಹ

೧. ಪ್ರಾಥಮಿಕ ಶಾಲೆ – ನಿಡುಗುಂದಿ
೨. ಮಾಧ್ಯಮಿಕ ಶಾಲೆ – ಗದಗಿನ ವಿದ್ಯಾದಾನ ಸಮಿತಿಯ ಎ.ವಿ. ಹೈಸ್ಕೂಲ್, ಮುನ್ಸಿಪಾಲ್ ಹೈಸ್ಕೂಲ್ ಮತ್ತು ಹುಬ್ಬಳ್ಳಿಯ ತೊರವಿ ನ್ಯೂ ಇಂಗ್ಲಿಷ್ ಹೈಸ್ಕೂಲ್. ೧೯೩೧ – ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ
೩. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ವ್ಯಾಸಂಗ. ೧೯೩೫ ರಲ್ಲಿ ಪ್ರಥಮ ತರಗತಿಯಲ್ಲಿ ಬಿ.ಎ. ಮುಂಬೈ ವಿಶ್ವವಿದ್ಯಾನಿಲಯದಿಂದ.
೪. ೧೯೩೫ – ಕರ್ನಾಟಕ ಕಾಲೇಜಿನ ಪ್ರತಿಷ್ಠಿತ ಶಿಷ್ಯವೇತನ ದಕ್ಷಿಣಾ ಫೆಲೋಷಿಪ್ ಪಡೆದು ಎಂ.ಎ. ವ್ಯಾಸಂಗಕ್ಕೆ ಸೇರಿಕೊಂಡದ್ದು.
೧೯೩೭ – ಪ್ರೊ. ಕುಂದಣಗಾರ ಅವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ
೫. ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ಮತ್ತು ಸಂಗೀತದಲ್ಲಿ ವಿಶೇಷ ಅಧ್ಯಯನ
೧೭ನೆಯ ವಯಸ್ಸಿನಲ್ಲಿ ಕುಸೂಗಲ್ಲಿನ ಸೌ. ಪಾರ್ವತಮ್ಮ ಅವರೊಂದಿಗೆ ವಿವಾಹ. ೧೯೩೯ – ರಾಜಶೇಖರನ ಜನನ. ಮೂರು ಮಕ್ಕಳ ತಾಯಿಯಾಗಿ ೧೯೪೨ ರಲ್ಲಿ ಪಾರ್ವತಮ್ಮ ಅವರ ಮರಣ. ೧೯೪೪ ಕೊಟಬಾಗಿಯ ಸೌ. ಗೌರಾದೇವಿ ಅವರೊಂದಿಗೆ ವಿವಾಹ
ಸೇವೆ ೧. ೧೯೩೯ರಿಂದ ಮೂರು ವರ್ಷ ಅರೆಕಾಲಿಕ ಅಧ್ಯಾಪಕರೆಂದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ
೨. ೧೯೪೩ ರಿಂದ ೧೯೬೬ ರವರೆಗೆ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ
೩. ೧೯೬೬ ರಿಂದ ೧೯೭೧ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕ.
೪. ೧೯೭೧ – ೭೯ ಯು.ಜಿ.ಸಿ. ಪ್ರಾಧ್ಯಾಪಕ
ಪ್ರಶಸ್ತಿ ಪುರಸ್ಕಾರ ೧೯೭೨ – ಶೂನ್ಯ ಸಂಪಾದನೆಯ ಪರಾಮರ್ಶೆಗೆ ಕೇಂದ್ರ ಸಾಹಿತ್ಯ ಅಕ್ಯಾಡಮಿಯ ಪ್ರಶಸ್ತಿ
೧೯೮೪ – ಭವ್ಯಮಾನವಕ್ಕೆ ರಾಜ್ಯ ಸಾಹಿತ್ಯ ಅಕ್ಯಾಡಮಿಯ ವಿಶೇಷ ಬಹುಮಾನ
– ಪರಾಮರ್ಶೆಗೆ ಪಂಪ ಪ್ರಶಸ್ತಿ
ರಾಜ್ಯದ ಹಲವು ಮಠಮಾನ್ಯಗಳಿಂದ ಸನ್ಮಾನ
೧೯೮೬ – ‘ಗೌರವ’ ಅಭಿನಂದನ ಗ್ರಂಥ ಸಮರ್ಪಣೆ – ಗದುಗಿನ ಜಗದ್ಗುರು ತೋಂಟದಾರ‍್ಯ ಮಠದಿಂದ

 

ಹೆಚ್ಚಿನ ಓದಿಗಾಗಿ

ಪರಾಮರ್ಶೆಯ ವಿಮರ್ಶೆ : ಸಂ. ಡಾ. ಎಸ್.ಎಂ. ವೃಷಬೇಂದ್ರಸ್ವಾಮಿ, ಡಾ. ಚಂದ್ರಶೇಖರ ಕಂಬಾರ

ಗೌರವ : ಸಂ. ಡಾ. ಬಿ.ವಿ. ಶಿರೂರ

ಭವ್ಯಮಾನವ : ಕಾವ್ಯದರ್ಶನ : ಸಂ. ಡಾ. ಗುರುಲಿಂಗ ಕಾಪಸೆ
ಡಾ. ಎಸ್.ಜಿ. ಘಿವಾರಿ
ಪೊ. ಅಣ್ಣಪ್ಪ ಮಟ್ಟಿಕಲ್ಲಿ