ಪ್ರೌಢದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳನ್ನು ಹಲವು ಹತ್ತು ಇಂಗ್ಲಿಷ್, ತೆಲುಗು ಆರೋಗ್ಯ, ಲೈಂಗಿಕ ವಿಜ್ಞಾನ ಪುಸ್ತಕ, ಪತ್ರಿಕೆಗಳಿಂದ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಲಾಗಿದೆ.

ಈ ಕೃತಿಯಲ್ಲಿ ತಿಳಿಸಿರುವ ಸಲಹೆಗಳು ದಂಪತಿಗಳ ಆರೋಗ್ಯಕರ ಲೈಂಗಿಕತೆಗೆ ಪೂರಕ ಹಾಗೂ ಪ್ರೇರಕವಾದುವೇ ಹೊರತು, ತಜ್ಞ ವೈದ್ಯರು ನೀಡುವ ಸಲಹೆ – ಚಿಕಿತ್ಸೆಗೆ ಬದಲಿಯಾದ ಸಲಹೆಗಳಿಲ್ಲ. ಗಂಡ – ಹೆಂಡತಿ ಯಲ್ಲಿ ಆರೋಗ್ಯ ಅಥವಾ ಲೈಂಗಿಕ ಸಮಸ್ಯೆಗಳು ಉಂಟಾದಾಗ, ಮೆಡಿಕಲ್‌ಡಾಕ್ಟರನ್ನು ಸಂಪರ್ಕಿಸಿ, ಸೂಕ್ತ ಸಲಹೆ – ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಈ ಕೃತಿ ತಿಳುವಳಿಕೆಯ ಚಿಕಿತ್ಸೆಯನ್ನು ನೀಡುವುದೇ ಹೊರತು, ತಜ್ಞ ವೈದ್ಯರು ನೀಡಬಹುದಾದ ಚಿಕಿತ್ಸೆಗೆ ಸಮನಾದುದಲ್ಲವೆಂದು ಸ್ಪಷ್ಟವಾಗಿ ತಿಳಿಸಲು ಇಚ್ಛಿಸುತ್ತೇನೆ. ಈ ಕೃತಿ ಸಲಹೆಗಳನ್ನು ದಂಪತಿಗಳಿಗೆ ತಿಳುವಳಿಕೆ ನೀಡುವ ಸಲುವಾಗಿ ಮಾತ್ರ ಪ್ರಕಟಿಸಲಾಗಿರುತ್ತದೆ.

ಇದು ದಂಪತಿಗಳಿಗೆ ಉಪಯುಕ್ತವಾಗುತ್ತದೆಂದು ಭಾವಿಸಿದ್ದೇನೆ.

ಎನ್. ವಿಶ್ವರೂಪಾಚಾರ್
ದಿನಾಂಕ : ೧೨-೦೭-೨೦೦೩