ಫ್ರಿಜಿಡಿಟಿ ಅಥವಾ ಬೇಕಾಮನೆ ಕೆಲವು ಸ್ತ್ರೀಯರಲ್ಲಿ ಮಾತ್ರ ಕಂಡು ಬರುವ ತೊಂದರೆಯಾಗಿರುತ್ತದೆ. ಈ ತೊಂದರೆ ಪುರುಷರನ್ನು ಕಾಡುವುದು ವಿರಳ.

ಫ್ರಿಜಿಡಿಟಿ ಬಗ್ಗೆ ವೈದ್ಯರು, ಮನೋವೈದ್ಯರು, ಮನೋವಿಜ್ಞಾನಿಗಳು ಬರೆದಿರುವ ಪುಸ್ತಕಗಳನ್ನು, ಲೇಖನಗಳನ್ನು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಲಾಗಿದೆ. ಫ್ರಿಜಿಟಿಡಿ ಎನ್ನುವ “Sexual Disfunction in Women” ಪದದ ಬದಲಿಗೆ ಈಗ ಲೈಂಗಿಕ ಶಾಸ್ತ್ರಜ್ಞರು ಎಂದರು ಕರೆದಿದ್ದಾರೆ. ಆದರೆ, ಫ್ರಿಜಿಡಿಟಿ ಪದ ಹೆಚ್ಚು ಬಳಕೆಯಲ್ಲಿರುವುದರಿಂದ, ಪುಸ್ತಕ ಶೀರ್ಷಿಕೆಗೆ ಅದನ್ನೆ ಬಳಸಲಾಗಿದೆ.

ಈ ಕೃತಿಯನ್ನು ಸ್ತ್ರೀಯರಿಗಿಂತಲೂ ಪುರುಷರು ಓದುವುದರಿಂದ ಸ್ತ್ರೀ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಕೃತಿಯನ್ನುಪ್ರಕಟಿಸಿದ ಪದ್ಮಶ್ರೀ ಪ್ರಕಾಶನದ ಶ್ರೀರಂಗರವರಿಗೆ ನಾನು ಕೃತಜ್ಞನಾಗಿರುತ್ತೇನೆ.

ಇಂತು ತಮ್ಮ ವಿಶ್ವಾಸಿ,
ಎನ್.ವಿಶ್ವರೂಪಾಚಾರ್
ಬೆಂಗಳೂರು