ಓಂ ಸರ್ವರೂಪಮಯೀ ದೇವೀ ಸರ್ವಂ ದೇವೀಮಯಂ ಜಗತ್

ಅತೋsಹಂ ವಿಶ್ವರೂಪಾಂ ತ್ವಾಂ ನಮಾಮಿ ಪರಮೇಶ್ವರೀಂ!

ಓಂ ಸೃಷ್ಟಿರೂಪಿ ಜಗನ್ಮಾತೆ ನಮೋ ನಮಃ
ಓಂ ದೃಷ್ಟಿರೂಪಿ ಜಗನ್ಮಾತೆ ನಮೋ ನಮಃ
ಓಂ ದಿವಾರೂಪಿ ಜಗನ್ಮಾತೆ ನಮೋ ನಮಃ
ಓಂ ನಿಶಾರೂಪಿ ಜಗನ್ಮಾತೆ ನಮೋ ನಮಃ
ಓಂ ದೃಷ್ಯರೂಪಿ ಜಗನ್ಮಾತೆ ನಮೋ ನಮಃ
ಓಂ ಸಸ್ಯರೂಪಿ ಜಗನ್ಮಾತೆ ನಮೋ ನಮಃ
ಓಂ ವೃಕ್ಷಭವ್ಯೆ ಜಗನ್ಮಾತೆ ನಮೋ ನಮಃ
ಓಂ ಪಕ್ಷಿಮಧುರೆ ಜಗನ್ಮಾತೆ ನಮೋ ನಮಃ
ಓಂ ಸೂರ್ಯರೂಪಿ ಜಗನ್ಮಾತೆ ನಮೋ ನಮಃ
ಓಂ ಚಂದ್ರರೂಪಿ ಜಗನ್ಮಾತೆ ನಮೋ ನಮಃ
ಓಂ ನಭೋರೂಪಿ ಜಗನ್ಮಾತೆ ನಮೋ ನಮಃ
ಓಂ ಧರಾರೂಪಿ ಜಗನ್ಮಾತೆ ನಮೋ ನಮಃ
ಓಂ ಪುಷ್ಪರೂಪಿ ಜಗನ್ಮಾತೆ ನಮೋ ನಮಃ
ಓಂ ಪರ್ಣರೂಪಿ ಜಗನ್ಮಾತೆ ನಮೋ ನಮಃ
ಓಂ ಮೇಘರೂಪಿ ಜಗನ್ಮಾತೆ ನಮೋ ನಮಃ
ಓಂ ನದೀರೂಪಿ ಜಗನ್ಮಾತೆ ನಮೋ ನಮಃ
ಓಂ ವೃಷ್ಟಿ ದಿವ್ಯೆ ಜಗನ್ಮಾತೆ ನಮೋ ನಮಃ
ಓಂ ಆದ್ರಿ ಭವ್ಯೆ ಜಗನ್ಮಾತೆ ನಮೋ ನಮಃ
ಓಂ ಇಕ್ಷುಪುಷ್ಪೆ ಜಗನ್ಮಾತೆ ನಮೋ ನಮಃ
ಓಂ ಉದಯದಿವ್ಯೆ ಜಗನ್ಮಾತೆ ನಮೋ ನಮಃ
ಓಂ ಅಸ್ತರಮ್ಯೆ ಜಗನ್ಮಾತೆ ನಮೋ ನಮಃ
ಓಂ ಸರೋಚಾರು ಜಗನ್ಮಾತೆ ನಮೋ ನಮಃ
ಓಂ ಶಾಲಿಸುಭಗೆ ಜಗನ್ಮಾತೆ ನಮೋ ನಮಃ
ಓಂ ಸರ್ವರೂಪಿ ಜಗನ್ಮಾತೆ ನಮೋ ನಮಃ
ಓಂ ಸರ್ವಶಕ್ತಿ ಜಗನ್ಮಾತೆ ನಮೋ ನಮಃ

೨೫-೩-೧೯೫೮


* ಸಾಧಕ ಕವಿ ಅಧಿಕಾರದ ಕರ್ತವ್ಯನಿರ್ವಹಣೆಯ ಕಾಲದಲ್ಲಿ ಮತ್ತೆ ಮತ್ತೆ ವೇಗವಾಹನಗಳಲ್ಲಿ ಸಂಚರಿಸಬೇಕಾಗಿ ಬಂದಾಗ ಇಂತು ತನ್ನ ಸಾಧನೆಯನ್ನು ಮುಂದುವರಿಸುತ್ತಾನೆ ಹಗಲೂ ಇರಳೂ ಸಂಚಲಿಸುವ ನಾನಾ ದೃಶ್ಯಗಳ ಮಧ್ಯ ಭಗವದ್ಧರ್ಶನ ಅನುಸಂಧಾನ ನಡೆಯುತ್ತಿದೆ. ಉದಾಹರಣೆಗಾಗಿ; ಕಬ್ಬಿನ ಗದ್ದೆಗಳ ನಡುವಣ ರಸ್ತೆಯಲ್ಲಿ ಕಾರು ಚಲಿಸುವಾಗ ಕಬ್ಬಿನ ಹೂವಿನ ಚಾಮರಸಮುದ್ರ ಅಲೆ ಅಲೆ ಚಲಿಸುವ ದಿವ್ಯ ದೃಶ್ಯಕ್ಕೆ ‘ಓಂ ಇಕ್ಷುಪುಷ್ಟ ಜಗನ್ಮಾತೆ ನಮೋ ನಮಃ’ ಎಂಬ ಮಂತ್ರಧ್ಯಾನಪೂಜೆ ಸಲ್ಲುತ್ತಿರುತ್ತದೆ. ಹಾಗೆಯೆ, ಮುಂದೆ ಕ್ಷಣಾಂತರದಲ್ಲಿ, ನೀರು ತುಂಬಿ ಬೆಳ್ಳಿಯಾಗಿ ಹೊಳೆಯುವ ಬಿತ್ತರದ ಕರ ಕಂಗೊಳಿಸೆ ‘ಓಂ ಸರೋಚಾರು ಜಗನ್ಮಾತೆ ನಮೋ ನಮಃ’ ಎಂಬ ಜಪೋಪಾಸನೆಗೆ ಚೇತನ ಶರಣಾಗುತ್ತದೆ ಇತ್ಯಾದಿ ಇತ್ಯಾದಿ ಇತ್ಯಾದಿ.