ಜನನ:೧೯-೮-೧೯೫೧ರಂದು ಮೈಸೂರಿನಲ್ಲಿ.

ಮನೆತನ: ರುದ್ರ ಪಟ್ಟಣದ ಹೆಸರಾಂತ ಸಂಗೀತ ವಿದ್ವಾಂಸರ ಮನೆತನ. ತಾತ ಕೃಷ್ಣಶಾಸ್ತ್ರಿಗಳು ಸಂಗೀತ, ಹರಿಕಥಾ ವಿದ್ವಾಂಸರು. ತಂದೆ ಆರ್.ಕೆ. ಶ್ರೀಕಂಠನ್ (ಸಂಗೀತ ಕಲಾನಿಧಿ), ದೊಡ್ಡಪ್ಪಂದಿರುಗಳಾದ ಆರ್.ಕೆ.ವೆಂಕಟರಾಮಾಶಾಸ್ತ್ರಿ, ಆರ್.ಕೆ.ರಾಮನಾಥನ್, ಆರ್.ಕೆ.ನಾರಾಯಣಸ್ವಾಮಿ, ಅಣ್ಣ ಆರ್. ಎಸ್. ರಮಾಕಾಂತ ಸಂಗೀತ ವಿದ್ವಾಂಸರು, ಪತಿ ಎಂ.ಎಸ್. ಪ್ರಕಾಶ್ ಗಮಕಿ. ತಾಯಿ ಮೈತ್ರೇಯಿ ಸಂಗೀತಾಸಕ್ತರು.

ಗುರುಪರಂಪರೆ: ತಂದೆ ಡಾ|| ಆರ್. ಕೆ. ಶ್ರೀಕಂಠನ್ ಅವರಿಂದಲೇ ಸಂಗೀತ ಪಾಠ, ಸ್ವಯಂ ಪ್ರತಿಭೆಯಿಂದ ಸುಗಮ ಸಂಗೀತದ ಅಭಿವೃದ್ಧಿ.

ಸಾಧನೆ : ೧೯೭೦ ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ಕಾರ್ಯಕ್ರಮ. ಕನ್ನಡದ ಎಲ್ಲಾ ಕವಿಗಳ ರಚನೆಗಳನ್ನು ಹಾಡುವಲ್ಲಿ ನಿಷ್ಣಾರು. ಡಾ|| ಡಿ.ವಿ.ಜಿ. ಯವರ ’ಮಂಕು ತಿಮ್ಮನ ಕಗ್ಗದ’ ಆಯ್ದ ಪದ್ಯಗಳನ್ನು ಸಿ. ಅಶ್ವಥ್ ಅವರ ನಿರ್ದೇಶನದಲ್ಲಿ ಡಾ. ರಾಜಕುಮಾರ್ ಅವರ ಜೊತೆ ಹಾಡಿ ಧ್ವನಿ ಸುರುಳಿ ಹೊರಬಂದಿದೆ. ಆಕಾಶವಾಣಿಯ ಎ ಟಾಪ್ ಕಲಾವಿದೆ. ಪ್ರಭಾತ್ ಕಲಾವಿದರ ನೃತ್ಯ ರೂಪಕಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಮಿಂಚಿರುತ್ತಾರೆ. ನಾದಿನಿ ಗಾಯಕಿ ಮಾಲತಿ ಶರ್ಮಾ ಅವರ ಜೊತೆ ರಾಜಾದ್ಯಂತ ರಾಷ್ಟ್ರಾದ್ಯಂತ ಹಾಗೂ ಹೊರ ರಾಷ್ಟ್ರಗಳಲ್ಲಿ ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿ ದಾಖಲೆಗಳನ್ನೇ ನಿರ್ಮಿಸಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ. ಜೇಸುದಾಸ್ ಇವರೊಡನೆ ಸಹಗಾಯಕಿಯಾಗಿ ಹಾಡಿದ್ದಾರೆ. ದೂರದರ್ಶನ ಕೇಂದ್ರದ ಅನೇಕ ಗೀತ ಚಿತ್ರದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಶಸ್ತಿ- ಸನ್ಮಾನ : ೧೯೯೧ ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ೧೯೯೩-೯೪ ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಸಹ ಇವರಿಗೆ ಸಂದಿದೆ.