ಆಟಗಾರರು ವರ್ತುಳಾಕಾರವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ನಡುವೆ ಕುಳಿತವಳು “ಕಮಲೆ” ಸುತ್ತಕುಳಿತವರೆಲ್ಲ –

“ಚಿಕ್ಕ ಗುಲಾಬಿ ಹೂವೇ
ಬಿಸಿಲಲಿ ಕುಳಿತೇ
ಎದ್ದು ನಿಲ್ಲೇ ಕಮಲೇ
ಸುತ್ತುಮುತ್ತು ತಿರುಗೇ
ಯಾರ್ ಬೇಕಾರ್ ಮುಟ್ಟೇ” ಎಂದು ಹಾಡುವರು.

ಎದ್ದು ನಿಲ್ಲೇ ಕಮಲೇ ಎಂದೊಡನೆ ಕಮಲೆ ಎದ್ದು ಸುತ್ತ ತಿರುಗುತ್ತ ಮುಟ್ಟೇ ಎಂದೊಡನೆ ಕೈ ಸಮೀಪದ ಒಬ್ಬರನ್ನು ಮುಟ್ಟುವಳು. ಅವಳು ಮುಂದಿನ ಆಟಕ್ಕೆ ಕಮಲೆ, ಹಿಂದಿನ ಕಮಲೆ ತೆರವಾದ ಸ್ಥಳದಲ್ಲಿ ಕುಳಿತುಕೊಳ್ಳುವಳು. ಹೀಗೆಯೇ ಈ ಆಟ ಸಾಕಾಗುವ ವರೆಗೆ ನಡೆಯುವದು.