ಪರಿಷ್ಕರಣೆಗೂ ಆಸ್ಪದವೀಯದ ವೇಗದಲ್ಲಿ ಈ ಕೃತಿ ಹದಿನೈದನೇ ಮುದ್ರಣ ಕಾಣುತ್ತಿದೆ. ನಿಸರ್ಗ ಕೃಷಿಯೆಡೆಗೆ ತಮಗಿರುವ ತಪನೆಗೆ ಇದು ಕುರುಹು. ಸುಭಾಷ್ ಪಾಳೇಕರರ ನಿಸರ್ಗ ಕೃಷಿ ಅರಿಯುವ ಯಾರೂ ಕೂಡ ಇನ್ನು ಮುಂದೆ ಎಂಡೋಸಲ್ಫಾನ್ ಮತ್ತು ಎನ್.ಪಿ.ಕೆ. ಗಳಿಗಾಗಿ ಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದಿಲ್ಲ. ಅವರ ಜೀವಾಮೃತ ಎಲ್ಲರ ಬಾಳಲ್ಲೂ ನೆಮ್ಮದಿ ಮತ್ತು ಸಮೃದ್ಧಿಗಳನ್ನು ತರಲಿದೆ. ಕೃತಿಯನ್ನು ಆದರದಿಂದ ಬರಮಾಡಿಕೊಳ್ಳುತ್ತಿರುವ ತಮ್ಮೆಲ್ಲರಿಗೂ ನನ್ನ ನಮಗಳು.

– ಸ್ವಾಮಿ ಆನಂದ್

೨೦೦೫ನೇ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ.