Categories
e-ದಿನ

ಸೆಪ್ಟೆಂಬರ್-21

ಪ್ರಮುಖ ಘಟನಾವಳಿಗಳು:

1677: ಜಾನ್ ಮತ್ತು ನಿಕೋಲಾಸ್ ವಾನ್ ಡೆರ್ ಹೈಡನ್ ಅಗ್ನಿ ಶಾಮಕ ಯಂತ್ರಕ್ಕಾಗಿ ಪೇಟೆಂಟ್ ಪಡೆದರು.

1746: ಫ್ರೆಂಚ್ ಸೇನೆಯು ಮದ್ರಾಸನ್ನು ಆಕ್ರಮಿಸಿತು.

1784: ಅಮೇರಿಕಾದಲ್ಲಿ ಮೊದಲ ದಿನಪತ್ರಿಕೆ ಮುದ್ರಿಸಲಾಯಿತು

1857: ಬಹಾದೂರ್ ಷಾ ಜಫರ್-II ಬ್ರಿಟಿಷ್ ಪಡೆಗಳ ವಿರುದ್ಧ ಶರಣಾದರು

1895: ಮೊದಲ ವಾಹನ ತಯಾರಕ ಡ್ಯೂರಿಯಾ ಮೋಟಾರ್ ವ್ಯಾಗನ್ ಸಂಸ್ಥೆ ತೆರೆಯಲಾಯಿತು.

1905: ಅಟ್ಲಾಂಟ ಜೀವ ವಿಮಾ ಸಂಸ್ಥೆ ಸ್ಥಾಪಿಸಲಾಯಿತು.

1930: ಜೊಹಾನ್ ಆಸ್ಟರ್ಮೇಯರ್ ಫ್ಲಾಶ್ ಬಲ್ಬಿಗೆ ಪೇಟೆಂಟ್ ಪಡೆದರು .

1945: ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ ನೀಡುವುದಾಗಿ ಭಾಷೆ ನೀಡಿದರು..

1948: ರಾಯಿಟರ್ಸ್ ಮತ್ತು ಭಾರತ ಮತ್ತು ಈಸ್ಟರ್ನ್ ನ್ಯೂಸ್ಪೇಪರ್ ಸೊಸೈಟಿ ನಡುವೆ ಸಹಿ ಹಾಕಿದ ಒಪ್ಪಂದದ ಅಡಿಯಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ರಚಿಸಲಾಯಿತು.

1949: ಮಣಿಪುರವನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು.

1971: ಬ್ರಿಟಿಷ್ ರಾಯಲ್ ಏರ್ಫೋರ್ಸ್ ಕೇಂಬ್ರಿಡ್ಜೆಶ್ ನಗರದಲ್ಲಿ ಅಪ್ಪಳಿಸಿದ ಕಾರಣ 3 ಜನ ಮೃತರಾದರು.

1981: ಸ್ಯಾಂಡ್ರಾ ಡೆ ಓ’ಕಾನರ್ ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಮೂರ್ತಿಯಾದರು

1984: ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆನಿಮಲ್ ಜೆನೆಟಿಕ್ಸ್ ಅನ್ನು ಸ್ಥಾಪಿಸಲಾಯಿತು.

1990: ಮಂಡಲ್ ಆಯೋಗದ ವರದಿ ಜಾರಿಗೊಳಿಸಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿತು.

1994: ಗುಜರಾತಿನ ಸೂರತ್ತಿನಲ್ಲಿ ನ್ಯುಮೋನಿಕ್ ಪ್ಲೇಗ್ ರೋಗ ಹರಡಿತು.

2004: ದುಬೈನ ಬುರ್ಜ್ ನಿರ್ಮಾಣ ಆರಂಭವಾಯಿತು.

2008: 20ನೇ ಶತಮಾನದ ಅತಿದೊಡ್ಡ ಒರಟಾದ ವಜ್ರವನ್ನು ಲೆಥೊಸೋ ಮೈನಿನಲ್ಲಿ ಪತ್ತೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1862: ತೆಲಗು ಕವಿ, ಕಥೆಗಾರ, ವಿಮರ್ಶಕ ವೆಂಕಟ್ ಅಪ್ಪಾರಾವ್ ಗುರ್ಜಾದ್ ಜನಿಸಿದರು.

1895: ಖ್ಯಾತ ಬರಹಾಗಾರ ಅನ್ನಪೂರ್ಣಾನಂದ ಜನಿಸಿದರು .

1898: ಖ್ಯಾತ ಪತ್ರಕರ್ತ ತುಷಾರ್ ಕಂಠಿ ಘೋಷ್ ಜನಿಸಿದರು .

1912: ಭಾರತದ ಖ್ಯಾತ ರಾಜಕಾರಣಿ ಫಿರೋಜ್ ಗಾಂಧಿ ಜನಿಸಿದರು.

1933: ಆನಿ ಬೆಸೆಂಟ್, ಮಹಾನ್ ಸಮಾಜಿಕ ಕಾರ್ಯಕರ್ತೆ ಮತ್ತು ಹೋಮ್ ರೂಲ್ ಚಳವಳಿಯ ಸಂಸ್ಥಾಪಕ ನಿಧನರಾದರು.