Categories
e-ದಿನ

ಸೆಪ್ಟೆಂಬರ್-23

 

ಪ್ರಮುಖ ಘಟನಾವಳಿಗಳು:

1642: ಕೇಂಬ್ರಿಡ್ಜಿನಲ್ಲಿನ ಹಾರ್ವರ್ಡ್ ಕಾಲೇಜು ಮೊದಲ ಬಾರಿಗೆ ಪ್ರಾರಂಭವಾಯಿತು.

1803: ಬ್ರಿಟಿಷ್ ಮೇಜರ್ ಜೆನೆರಲ್ ಸರ್ ಆರ್ಥರ್ ವೆಲ್ಲೆಸ್ಲೆ ಭಾರತದ ಅಸ್ಸಾಯೆಯಲ್ಲಿ ಮರಾಠರನ್ನು ಸೋಲಿಸಿದರು.

1846: ಖಗೋಳಶಾಸ್ತ್ರಜ್ಞ ಜೊಹಾನ್ ಗಾಟ್ಫ್ರೈಡ್ ಗ್ಯಾಲಿ ನೆಪ್ಟ್ಯೂನ್ ಗ್ರಹವನ್ನು ಕಂಡುಹಿಡಿದಿರುವುದಾಗಿ ಘೋಷಿಸಿದರು.

1879: ರಿಚರ್ಡ್ ರೋಡ್ಸ್ ಆಡಿಯೋಫೋನ್ ಎಂಬ ಶ್ರವಣ ಯಂತ್ರವನ್ನು ಕಂಡುಹಿಡಿದರು.

1884: ಅಮೇರಿಕನ್ ಹರ್ಮನ್ ಹಾಲೆರಿತ್ ತನ್ನ ಯಾಂತ್ರಿಕ ಟ್ಯಾಬ್ಯುಲೇಟಿಂಗ್ ಯಂತ್ರಕ್ಕಾಗಿ ಪೇಟೆಂಟ್ ಪಡೆದರು. ಇದು ಡಾಟಾ ಸಂರಕ್ಷಣೆಯ ಆರಂಭವಾಯಿತು.

1887: ಅಲಹಬಾದ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1908: ಆಲ್ಬರ್ಟಾ ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.

1986: ಅಮೇರಿಕದ ಕಾಂಗ್ರೆಸ್ ಸರ್ಕಾರವು ರೋಜಾ ಹೂವನ್ನು ತಮ್ಮ ದೇಶದ ರಾಷ್ಟ್ರೀಯ ಹೂವಾಗಿ ಆಯ್ಕೆ ಮಾಡಿತು.

1998: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಭಾರತದ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಕಾಶ್ಮೀರದ ಬಗ್ಗೆ ಚರ್ಚಿಸಿದರು.

2002: ವೆಬ್ ಬ್ರೌಸರ್ ಮೊಜಿಲ್ಲಾ ಫಯರ್ ಫಾಕ್ಸ್ ಮೊದಲ ಸಾರ್ವಜನಿಕ ಆವೃತ್ತಿ “ಫೀನಿಕ್ಸ್ 0.1” ಬಿಡುಗಡೆಮಾಡಲಾಯಿತು.

2007: ಭಾರತೀಯ ತೈಲ ಮಂತ್ರಿ ಮುರಳಿ ದೇವ್ರಾ ಅವರು ಸರ್ಕಾರಿ ಸ್ವಾಮ್ಯದ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಓ.ಎನ್.ಜಿ.ಸಿ) ಮತ್ತು ಮಯನ್ಮಾರ್ ಆಯಿಲ್ ಮತ್ತು ಗ್ಯಾಸ್ ಎಂಟರ್ ಪ್ರೈಸಸ್ ನಡುವಿನ ಮೂರು ಒಪ್ಪಂದಗಳನ್ನು ಸಹಿ ಮಾಡಿದರು.

2012: ವಿಜ್ಞಾನಿಗಳು ಸ್ತನ ಕ್ಯಾನ್ಸರಿನ ನಾಲ್ಕು ತಳೀಯವಾಗಿ ಬರುವ ವಿಭಿನ್ನ ರೀತಿಗಳನ್ನು ಪತ್ತೆ ಮಾಡಿದರು.

ಪ್ರಮುಖ ಜನನ/ಮರಣ:

1902: ತೆಲಗು ರಂಗಭೂಮಿ ಕಲಾವಿದ ಮತ್ತು ಚಿತ್ರನಟ ಎಸ್.ನರಸಿಂಹರಾವ್ ಜನಿಸಿದರು.

1908: ಖ್ಯಾತ ಹಿಂದಿ ಕವಿ ರಾಮ್ಧಾರಿ ಸಿಂಗ್ ದಿನಕರ್ ಜನಿಸಿದರು.

1912: ಲೇಖಕ ಗುಲಾಮ್ ಮುಸ್ತಫ ಖಾನ್ ಜನಿಸಿದರು.

1935: ಭಾರತೀಯ ನಟ ಪ್ರೇಮ್ ಚೋಪ್ರ ಜನಿಸಿದರು.

1952: ಭಾರತೀಯ ಕ್ರಿಕೆಟ್ ಆಟಗಾರ ಅನ್ಶುಮನ್ ಗಾಯಕವಾಡ್ ಜನಿಸಿದರು.

1957: ಖ್ಯಾತ ಹಿಂದಿ ಹಿನ್ನೆಲೆ ಗಾಯಕ ಕುಮಾರ್ ಸಾನು ಜನಿಸಿದರು.

1967: ಭಾರತೀಯ ಕ್ರಿಕೆಟಿಗ ಪ್ರಶಾಂತ್ ವೈದ್ಯ ಜನಿಸಿದರು.

1974: ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ನಿಧನರಾದರು.

1996: ಖ್ಯಾತ ನಟಿ ಸಿಲ್ಕ್ ಸ್ಮಿತಾ ನಿಧನರಾದರು.

2015: ಭಾರತೀಯ ತತ್ವಜ್ಞಾನಿ ದಯಾನಂದ ಸರಸ್ವತಿ ಅವರು ನಿಧನರಾದರು.