ಪ್ರಮುಖ ಘಟನಾವಳಿಗಳು:

 • 1772: ವೈದ್ಯವನ್ನು ಅಭ್ಯಾಸ ಮಾಡಲು ಲೈಸೆನ್ಸ್ ಅನ್ನು ಪಡೆಯಬೇಕೆಂದು ನ್ಯೂಜರ್ಸಿ ಮಸೂದೆ ಜಾರಿ ಮಾಡಿತು.

 • 1777: ಫಿಲಾಡೆಲ್ಫಿಯಾವನ್ನು ಸೆರೆಹಿಡಿದ ಬ್ರಿಟಿಷ್ ಸೈನ್ಯವು ಪ್ರಮುಖ ಆಕ್ರಮಣವನ್ನು ಆರಂಭಿಸಿತು.

 • 1786: ಫ್ರಾನ್ಸ್ ಮತ್ತು ಬ್ರಿಟನ್ ಒಂದು ವ್ಯಾಪಾರದ ಒಪ್ಪಂದವನ್ನು ಮಾಡಿದರು.

 • 1829: ಬ್ರಿಟಿಷರ ಅಧಿಕೃತ ಕ್ರಿಮಿನಲ್ ತನಿಖಾ ಸಂಸ್ಥೆಯಾದ ಸ್ಕಾಟ್ಲಾಂಡ್ ಯಾರ್ಡ್ ರಚಿಸಲಾಯಿತು.

 • 1887: ಎಮಿಲಿ ಬರ್ಲೈನರ್ ಗ್ರಾಮಫೋನಿಗಾಗಿ ಪೇಟೆಂಟ್ ಪಡೆದರು.

 • 1910: ಭಾರತೀಯ ಪತ್ರಕರ್ತ ರಾಮಕೃಷ್ಣ ಪಳ್ಳೈ ಅವರು ತಿರುವಾಂಕೂರ್ ಸರ್ಕಾರದ ಟೀಕೆಗಳನ್ನು ಪ್ರಕಟಿಸಿದ ಕಾರಣ ಬಂಧನಕೊಳಗಾಗಿ ಅವರನ್ನು ಗಡಿಪಾರು ಮಾಡಲಾಯಿತು.

 • 1913: ಪನಾಮಾ ಕಾಲುವೆಗಳ ಬೀಗಗಳಲ್ಲಿ ಮೊದಲ ದೋಣಿ ಬೆಳೆಯಿತು.

 • 1914: ವ್ಯವಹಾರಗಳಲ್ಲಿ ಏಕಸ್ವಾಮ್ಯತೆಯನ್ನು ತಡೆಗಟ್ಟಲು ಮತ್ತು ಸ್ಪರ್ಧೆಯನ್ನು ಉತ್ತೇಜಿಸಲು ಫೆಡರಲ್ ಟ್ರೇಡ್ ಕಮಿಷನ್ ಸ್ಥಾಪಿತವಾಯಿತು.

 • 1932: ಶಾಸನ ಸಭೆಯ ಚುನಾವಣೆಯಲ್ಲಿ ಭಾರತೀಯ ಅಸ್ಪೃಷ್ಯರ ಸವಲತ್ತುಗಳಿಗೆ ರಾಜಿ ಯೋಜನೆಯನ್ನು ಬಹುತೇಕ ಬ್ರಿಟಿಷ್ ಸರ್ಕಾರ ಅಂಗೀಕರಿಸಿದ ನಂತರ ಮಹಾತ್ಮ ಗಾಂಧಿಯವರು 6 ದಿನಗಳ ನಂತರ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳ್ಳಿಸಿದರು.

 • 1941: ಅಮೇರಿಕಾದ ಸೈನ್ಯವು ಮಿಲಿಟರಿ ಪೋಲಿಸ್ ಕಾರ್ಪ್ಸ್ ಅನ್ನು ಸ್ಥಾಪಿಸಿತು.

 • 1955: ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ 44 ದಶಲಕ್ಷ ಡಾಲರ್ ನಷ್ಟವನ್ನು ಅನುಭವಿಸಿತು.

 • 1973: ಕಾಂಕಾರ್ಡ್ ಪ್ಯಾಸೆಂಜರ್ ವಿಮಾನ ಅಟ್ಲಾಂಟಿಕ್ ಪ್ರಯಾಣವನ್ನು ಕೇವಲ 3 ಗಂಟೆ 32 ನಿಮಿಷಗಳಲ್ಲಿ ಪೂರ್ಣಗೊಳಿಸಿತು.

 • 2004: ನಾಗರೀಕ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಭಾರತಕ್ಕೆ ತಂತ್ರಜ್ಞಾನವನ್ನು ನೀಡಲು ಅಮೇರಿಕಾ ನಿರ್ಧರಿಸಿತು.

 • 2007: ಬರ್ಮಾದಲ್ಲಿ ಪ್ರತಿಭಟನೆಗೆ ಸಾತ್ ಕೊಡಲು ಸನ್ಯಾಸಿಗಳು ಸೇರಿದರಿಂದ ಕೇಸರಿ ಕ್ರಾಂತಿ ಆರಂಭವಾಯಿತು.

 • 2008: 1500ರ ದಶಕದ ಪೋರ್ಚುಗೀಸ್ ನೌಕಾಘಾತವು ನಮೀಬಿಯಾ ವಜ್ರದ ಗಣಿ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು.

ಪ್ರಮುಖ ಜನನ/ಮರಣ:

 • 1820: ಮಹಿಳಾ ಶಿಕ್ಷಣ ಮತ್ತು ವಿಧವೆ ಮರುಮದುವೆಗಾಗಿ ಶ್ರಮಿಸಿದ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರು ಜನಿಸಿದರು.

 • 1876: ಭಾರತೀಯ ಕವಿ, ವಕೀಲ ಮತ್ತು ರಾಜಕಾರಣಿ ಗುಲಾಂ ಭಿಕ್ ನೈರಂಗ್ ಜನಿಸಿದರು.

 • 1895: ಕ್ರಿಯಾ ಯೋಗದ ಯೋಗ ವಿಜ್ಞಾನ ಪ್ರತಿಪಾದಿಸಿದ ಯೋಗಿರಾಜ್ ಎಂದೇ ಖ್ಯಾತಿ ಪಡೆದ ಶ್ಯಾಮಚರಣ ಲಾಹಿರಿ ನಿಧನರಾದರು.

 • 1923: ಹಿಂದಿ ಚಲನಚತ್ರ ಖ್ಯಾತಿಯ ನಟ, ನಿರ್ಮಾಪಕ, ನಿರ್ದೇಶಕ ದೇವ್ ಆನಂದ್ ಜನಿಸಿದರು.

 • 1931: ಭಾರತೀಯ ಕ್ರಿಕೆಟ್ ಆಟಗಾರ ವಿಜಯ್ ಮಂಜೇರ್ಕರ್ ಜನಿಸಿದರು.

 • 1932: ಭಾರತದ 13 ನೇ ಪ್ರಧಾನ ಮಂತ್ರಿ ಆಗಿದ್ದ ಮನಮೋಹನ್ ಸಿಂಗ್ ಜನಿಸಿದರು.

 • 1962: ಹಿಂದಿ ಭಾಷೆಯ ನಟ ಚಂಕಿ ಪಾಂಡೆ ಜನಿಸಿದರು.

 • 1977: ಭಾರತೀಯ ನೃತ್ಯ ಪಟು, ನೃತ್ಯ ಸಂಯೋಜಕ ಉದಯ್ ಶಂಕರ್ ನಿಧನರಾದರು.

 • 1989: ಗಾಯಕ, ಗೀತ ರಚನೆಕಾರ ಮತ್ತು ನಿರ್ಮಾಪಕ ಹೇಮಂತ ಕುಮಾರ್ ಮುಖ್ಯೋಪಾಧ್ಯಾಯ ನಿಧನರಾದರು.

 • 2010: ರಾಜಕಾರಣಿ, ಶಿಕ್ಞಣ ತಜ್ಞ, ಆರ್ಥಿಕ ನೀತಿ ನಿರ್ವಾಹಕರಾಗಿದ್ದ ಅರ್ಜುನ್ ಕುಮಾರ್ ಸೇನ್ ಗುಪ್ತಾ ನಿಧನರಾದರು.