Categories
e-ದಿನ

ಸೆಪ್ಟೆಂಬರ್-27

 

ಪ್ರಮುಖ ಘಟನಾವಳಿಗಳು:

1787: ಅಮೇರಿಕಾದ ಸಂವಿಧಾನವನ್ನು ಧೃಡೀಕರಣಕ್ಕಾಗಿ ಸಲ್ಲಿಸಲಾಯಿತು.

1892: ಡೈಮಂಡ್ ಮ್ಯಾಚ್ ಸಂಸ್ಥೆಯಿಂದ ಪುಸ್ತಕ ಮ್ಯಾಚುಗಳಿಗೆ ಪೇಟೆಂಟ್ ಪಡೆಯಲಾಯಿತು.

1905: ಆಲ್ಬರ್ಟ್ ಐನ್ಸ್ಟೈನ್ ಅವರ ಸಮೀಕರಣ ತತ್ವ E= mc2ಅನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.

1908: ಫೋರ್ಡ್ ಸಂಸ್ಥೆಯ ಮಾಡೆಲ್ ಟಿ ವಾಹನವು ಮೊದಲ ಬಾರಿಗೆ ಮಿಚಿಗಾನ್ ಗೆ ರವಾನಿಸಲು ಹೊರಟಿತು.

1910: ಎರಡು ಇಂಜಿನ್ ಉಳ್ಳ ವಿಮಾನದ ಪರಿಕ್ಷಾ ಹಾರಾಟ ಮಾಡಲಾಯಿತು.

1916: ಅಮೇರಿಕಾದ ಮೊದಲ “ನೇಟಿವ್ ಅಮೇರಿಕನ್ ಡೇ” ಆಚರಿಸಲಾಯಿತು.

1919: ಡೆಮೊಕ್ರಾಟಿಕ್ ನ್ಯಾಷನಲ್ ಕಮಿಟಿ ಮಹಿಳಾ ಸದಸ್ಯರಿಗೆ ಮತ ಚಲಾಯಿಸುವ ಹಕ್ಕಿನ ಅವಕಾಶ ನೀಡಿತು.

1928: ರಾಷ್ಟ್ರೀಯತಾವಾದಿ ಚೀನಿಯ ಸರ್ಕಾರವನ್ನು ಅಮೇರಿಕ ಗುರುತಿಸುವುದಾಗಿ ಘೋಷಿಸಿತು.

1937: ನ್ಯೂಯಾರ್ಕಿನಲ್ಲಿ ಮೊದಲ ಸಾಂಟಾ ಕ್ಲಾಸ್ ತರಬೇತಿ ಶಾಲೆ ತೆರೆಯಲಾಯಿತು.

1937: ಬಾಲಿನೀಸ್ ಹುಲಿ ನಿರ್ನಾಮವಾಗಿರುವುದಾಗಿ ಘೋಷಿಸಲಾಯಿತು.

1960: ಯೂರೋಪಿನ ಮೊದಲ ಚಲಿಸುವ ಪಾದಚಾರಿ ಲಂಡನ್ನಿನಲ್ಲಿ ತೆರೆಯಲಾಯಿತು.

1979: ಅಮೇರಿಕಾದ ಕಾಂಗ್ರೆಸ್ಸಿನಿಂದ ಅನುಮೋದನೆ ಪಡೆದ ನಂತರ ಇತಿಹಾಸದಲ್ಲಿ ಶಿಕ್ಷಣ ಇಲಾಖೆ 13ನೇ ಸಂಪುಟವಾಯಿತು.

ಪ್ರಮುಖ ಜನನ/ಮರಣ:

1833: ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ರಾಜಾರಾಂ ಮೋಹನ್ ರಾಯ್ ನಿಧನರಾದರು.

1932: ಹಿಂದಿ ಚಲನಚಿತ್ರಗಳ ನಿರ್ಮಾಪಕ, ನಿರ್ದೇಶಕ ಯಶ್ ಚೋಪ್ರ ಅವರು ಜನಿಸಿದರು.

1933: ಪ್ರಮುಖ ಬಂಗಾಲಿ ಕವಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಭಾರತದ ಸ್ತ್ರೀವಾದಿ ಕಾಮಿನಿ ರಾಯ್ ನಿಧನರಾದರು.

1953: ಭಾರತೀಯ ಗುರು ಸನ್ಯಾಸಿನಿ ಮಾತಾ ಅಮೃತಾನಂದಮಯಿ ಜನಿಸಿದರು.

1972: ಭಾರತೀಯ ಗಣಿತಜ್ಞ, ಗ್ರಂಥಪಾಲಕ ಮತ್ತು ಶಿಕ್ಷಣ ತಜ್ಞ ಎಸ್.ಆರ್.ರಂಗನಾಥನ್ ನಿಧನರಾದರು.

1981: ಭಾರತೀಯ ಕ್ರಿಕೆಟ್ ಆಟಗಾರ ಲಕ್ಷ್ಮಿಪತಿ ಬಾಲಾಜಿ ಜನಿಸಿದರು.

1997: ಆಂಧ್ರಪ್ರದೇಶದ ಸರ್ಕಾರದ ಸವಿರಾಗಿದ್ದ ಮಂಡಲಿ ವೆಂಕಟ ಕೃಷ್ಣ ರಾವ್ ನಿಧನರಾದರು.

2012: ಭಾರತೀಯ ನಿರ್ದೇಶಕ ಮತ್ತು ಚಿತ್ರಕಥೆಕಾರ ಸಂಜಯ್ ಸುರ್ಕರ್ ನಿಧನರಾದರು.

2015: ಮಣಿಪುರದ 16ನೇ ರಾಜ್ಯಪಾಲರಾಗಿದ್ದ ಸೈಯದ್ ಅಹಮದ್ ನಿಧನರಾದರು.

2015: ಕಾರ್ಯಕರ್ತ ಮತ್ತು ಲೇಖಕ ಕಲ್ಲೇನ್ ಪೊಕ್ಕುದನ್ ನಿಧನರಾದರು.