Categories
e-ದಿನ

ಜುಲೈ-30

ಪ್ರಮುಖ ಘಟನಾವಳಿಗಳು:

1729: ಬ್ಲಾಟಿಮೋರ್ ನಗರವನ್ನು ಕಂಡುಹಿಡಿಯಲಾಯಿತು.

1739: ಅಲೋವೇಸ್ ಟೌನ್ ನ್ಯೂಜರ್ಸಿಯಲ್ಲಿ ಕಾಸ್ಪರ್ ವಿಸ್ಟರ್ ಗ್ಲಾಸ್ ತಯಾರಿಕೆಯನ್ನು ಪ್ರಾರಂಭಿಸಿದರು.

1792: 500 ಮಾರ್ಸಿಲ್ಲಿಸಿಯನ್ ಪುರುಷರು ಫ್ರಾನ್ಸ್ ರಾಷ್ಟ್ರಗೀತೆಯನ್ನು ಮೊದಲ ಬಾರಿಗೆ ಹಾಡಿದರು.

1825: ಮಾಲ್ಡೆನ್ ದ್ವೀಪವನ್ನುಕಂಡುಹಿಡಿಯಲಾಯಿತು.

1836: ಮೊದಲ ಬಾರಿಗೆ ಹವಾಯಿಯಲ್ಲಿ ಇಂಗ್ಲಿಷಿನಲ್ಲಿ ಪತ್ರಿಕೆಯನ್ನು ಪ್ರಕಟಿಸಲಾಯಿತು.

1869: ವಿಶ್ವದ ಮೊದಲ ತೈಲ ಟ್ಯಾಂಕರ್ 7000 ಬ್ಯಾರೆಲ್ ತೈಲವನ್ನು ಹೊತ್ತು ಅಮೇರಿಕಾದಿಂದ ಯೂರೋಪಿಗೆ ಹೊರಟಿತು.

1872: ಮಹ್ಲಾನ್ ಲೂಮಿಸ್ “ವೈಯರ್ ಲೆಸ್ ಟೆಲಿಗ್ರಫಿ”ಗೆ ಪೇಟೆಂಟ್ ಪಡೆದರು.

1898: ವಿಲ್ ಕೆಲ್ಲಾಗ್ “ಕಾರ್ನ್ ಫ್ಲೇಕ್ಸ್”ಅನ್ನು ಆವಿಷ್ಕರಿಸಿದರು.

1900: ಬ್ರಿಟಿಷ್ ಸಂಸತ್ತು ಹಲವಾರು ಪ್ರಗತಿಪರ ಸಾಮಾಜಿಕ ಕಾರ್ಯಗಳಾದ ಗಣಿ ಕಾಯಿದೆ, ಕೆಲಸಗಾರರ ಪರಿಹಾರ ಕಾಯಿದೆ, ಮತ್ತು ರೇಲ್ವೆ ಕಾಯಿದೆಯಂತಹ ಅನೇಕ ಕಾಯಿದೆಗಳನ್ನು ಅಂಗೀಕರಿಸಿತು.

1907: ಫಿಲಿಪೀನ್ಸಿನವರು ತಮ್ಮ ಮೊದಲ ಶಾಸಕಾಂಗವನ್ನು ಆಯ್ಕೆ ಮಾಡಿತು.

1909: ರೈಟ್ ಬ್ರದರ್ಸ್ ಮೊದಲ ಮಿಲಿಟರಿ ವಿಮಾನವನ್ನು ಸೇನೆಗೆ ಒಪ್ಪಿಸಿದರು.

1928: ಜಾರ್ಜ್ ಈಸ್ಟ್ ಮ್ಯಾನ್ ಅವರು ಥಾಮಸ್ ಎಡಿಸನ್ ಸೇರಿದಂತೆ ಮೊದಲಾದ ಅತಿಥಿಗಳಿಗೆ ಹವ್ಯಾಸಿ ಬಣ್ಣದ ಚಲನಚಿತ್ರವನ್ನು ತಮ್ಮ ನ್ಯೂಯಾರ್ಕಿನಲ್ಲಿ ಪ್ರದರ್ಶಿಸಿದರು.

1935: ಪೇಪರ್ ಬ್ಯಾಕ್ ಕ್ರಾಂತಿಯನ್ನು ಪ್ರಾರಂಭಿಸಿ ಮೊದಲ ಪೆಂಗ್ವಿನ್ ಪುಸ್ತಕವನ್ನು ಪ್ರಕಟಿಸಲಾಯಿತು.

1957: ರಫ್ತು ವಸ್ತುಗಳ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಇದರ ಮೂಲಕ ರಫ್ತು ಮಾಡುವ ವಸ್ತುಗಳನ್ನು ವಿಮೆ ಮಾಡಲಾಗುತಿತ್ತು.

1995: ಜಾರ್ಖಂಡ್ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಸಂವಿಧಾನಕ್ಕಾಗಿ ಪ್ರಕಟಣೆ ಹೊರಡಿಸಲಾಯಿತು.

2012: ಆಂಧ್ರಪ್ರದೇಶದಲ್ಲಿ ತಮಿಳುನಾಡಿನ ರೈಲಿಗೆ ಬೆಂಕಿ ಅನಾಹುತದಿಂದ 32 ಜನ ಪ್ರಯಾಣಿಕರು ಮೃತಪಟ್ಟು 27 ಜನ ಗಾಯಗೊಂಡರು.

2012: ದೆಹಲಿಯಲ್ಲಿ ವಿದ್ಯುತ್ ಗ್ರಿಡ್ ವೈಫಲ್ಯದಿಂದ ಉತ್ತರ ಭಾರತದಲ್ಲಿ 300 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ವಿದ್ಯುತ್ ಇಲ್ಲದಂತಾಯಿತು.

2014: ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ 20 ಜನ ಮೃತ ಪಟ್ಟು 150ಕ್ಕೆ ಹೆಚ್ಚು ಜನ ಸಿಲುಕಿಕೊಂಡಿದರು.

ಪ್ರಮುಖ ಜನನ/ಮರಣ:

1622: ರಾಮಾಯಣ ಬರೆದ ಕವಿ ತುಳಸಿದಾಸ ನಿಧನರಾದರು.

1883: ಖ್ಯಾತ ಕೈಗಾರಿಕೋದ್ಯಮಿ ಬದ್ರಿದಾಸ್ ಗೋಯೆಂಕಾ ಅವರು ಜನಿಸಿದರು.

1920: ಶಿಕ್ಷಣತಜ್ಞ ಮತ್ತು ಸೇನೆಯ ಮಾಜಿ ಅಧಿಕಾರಿ ಜೆನರಲ್ ಇಂದರ್ ಜಿತ್ ಜನಿಸಿದರು.

1960: ‘ಕರ್ನಾಟಕದ ಸಿಂಹ’ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ ಹೋರಾಟಗಾರರು ಗಂಗಾಧರ ಬಾಲಕೃಷ್ಣ ದೇಶಪಾಂಡೆ ನಿಧನರಾದರು.

1973: ಬಾಲಿವುಡ್ ಹಿನ್ನೆಲೆ ಗಾಯಕ ಸೋನು ನಿಗಮ್ ಜನಿಸಿದರು.

1991: ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹಿರಿಯ ಛಾಯಾಚಿತ್ರಗಾರ ಸಬಿ ಫರ್ನಾಂಡಿಸ್ ನಿಧನರಾದರು.