Categories
e-ದಿನ

ಜುಲೈ-7

 

ಪ್ರಮುಖ ಘಟನಾವಳಿಗಳು:

1550: ಯೂರೋಪಿನಲ್ಲಿ ಚಾಕೋಲೇಟ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

1753: ಬ್ರಿಟಿಶ್ ವಸ್ತುಸಂಗ್ರಹಾಲಯವನ್ನು ಪಾರ್ಲಿಯಮೆಂಟ್ ಆಕ್ಟ್ ಮೂಲಕ ಸ್ಥಾಪಿಸಲಾಯಿತು.

1753: ಬ್ರಿಟಿಶ್ ಸಂಸತ್ತು ಯಹೂದಿಗಳಿಗೆ ನಾಗರೀಕತ್ವ ನೀಡಿತು.

1754: ನ್ಯೂಯಾರ್ಕಿನಲ್ಲಿ ಕಿಂಗ್ಸ್ ಕಾಲೇಜು ಆರಂಭವಾಯಿತು. ನಂತರ ಇದನ್ನು ಕೊಲಂಬಿಯ ಕಾಲೇಜೆಂದು 30 ವರ್ಷಗಳ ನಂತರ ಮತ್ತೆ ನಾಮಕರಣ ಮಾಡಲಾಯಿತು.

1802: ಮೊದಲ ಹಾಸ್ಯ ಪುಸ್ತಕವನ್ನು ನ್ಯೂಯಾರ್ಕಿನ ಹಡ್ಸನ್ನಿನಲ್ಲಿ ಪ್ರಕಟಿಸಲಾಯಿತು.

1896: ಲೂಮಿಯರ್ ಬ್ರದರ್ಸ್ ಮುಂಬಯಿಯಲ್ಲಿ (ಅಂದಿನ ಬಾಂಬೆ) ವ್ಯಾಟ್ಸನ್ ಹೋಟೆಲ್ಲಿನಲ್ಲಿ ಆರು ಚಲನಚಿತ್ರವನ್ನು ಪ್ರದರ್ಶಿಸಿದರು. ಇದೇ ಭಾರತೀಯ ಸಿನಿ ಚಿತ್ರರಂಗದ ಹುಟ್ಟು ಎಂದು ಪರಿಗಣಿಸಲಾಗಿದೆ.

1905: ವಿಶ್ವದ ಅಂತರರಾಷ್ಟ್ರೀಯ ಕಾರ್ಮಿಕರು ತಮ್ಮ ಕಾರ್ಮಿಕ ಸಂಘಟನೆಯನ್ನು ಚಿಕಾಗೋದಲ್ಲಿ ಸ್ಥಾಪಿಸಿದರು.

1916: ನ್ಯೂಜಿಲ್ಯಾಂಡ್ ಕಾರ್ಮಿಕ ಪಕ್ಷ ರೂಪಿತವಾಯಿತು.

1920: ರೇಡಿಯೋ ದಿಕ್ಸೂಚಿ ಎಂದು ಕರೆಯಲ್ಪಡುವ ಒಂದು ಸಾಧನವನ್ನು ಮೊದಲ ಬಾರಿಗೆ ಅಮೇರಿಕಾದ ನೌಕಾಪಡೆಯ ವಿಮಾನದಲ್ಲಿ ಬಳಸಲಾಯಿತು.

1930: ಕೊಲೊರೆಡಿಯ ನದಿಯ ಕಪ್ಪು ಕಣಿವೆಯಲ್ಲಿನ ಹೂವರ್ ಅಣೆಕಟ್ಟಿನ ನಿರ್ಮಾಣವು ಆರಂಭವಾಯಿತು. ಈ ಯೋಜನೆಯ ಮೂಲ ಹೆಸರು ಬೌಲ್ಡರ್ ಅಣೆಕಟ್ಟು ನಂತರ ಅಧ್ಯಕ್ಷ ಹೂವರವರಿಗೆ ಗೌರವಾರ್ಪಣೆಯಾಗಿ ಇದನ್ನು ಹೂವರ್ ಅಣೆಕಟ್ಟು ಎಂದು ನಾಮಕರಣ ಮಾಡಲಾಯಿತು.

1950: ದಕ್ಷಿಣ ಆಫ್ರಿಕಾದ ಜನಸಂಖ್ಯೆ ನೋಂದಣಿ ಕಾಯಿದೆ ಪ್ರಾರಂಭವಾಯಿತು. ವರ್ಣಭೇದ ನೀತಿಯ ಭಾಗವಾಗಿ ಪ್ರತಿ ನಿವಾಸಿಯೂ ತಮ್ಮ ಜನಾಂಗೀಯ ಗುಣಲಕ್ಷಣಗಳಿಗೆ ಅನುಗುಣವಾಗಿ ವರ್ಗೀಕರಿಸಲ್ಪಟ್ಟು ನೋಂದಾಯಿಸಲ್ಪಡಬೇಕೆಂಬುದು ಅಗತ್ಯವಾಯಿತು.

1981: ಆರಿಜೋನಾದ ನ್ಯಾಯಾಧೀಶರಾಗಿದ್ದ ಸಾಂಡ್ರಾ ಡೇ ಓಕೂನರ್ ಅವರನ್ನು ಅಮೇರಿಕಾದ ಸರ್ವೋಚ್ಛ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.

1981: ಡುಪಾಂಟ್ ಮತ್ತು ಪಾಲ್ ಮಾಕ್ಕರೆಡಿ ಸೇರಿ ಆವಿಶ್ಕರಿಸಿದ ಮೊದಲ ಸೌರ ಶಕ್ತಿ ಚಾಲಿತ ವಿಮಾನವವು ಪ್ಯಾರಿಸಿನಿಂದ ಕ್ಯಾಂಟರ್ಬೆರಿಗೆ ಹಾರಾಡಿತು.

2003: ಆಪರ್ಚುನಿಟಿ ಹೆಸರಿನ ನಾಸಾದ 2ನೇ ಮಾರ್ಸ್ ಲ್ಯಾಂಡರನ್ನು ಹಾರಿಸಲಾಯಿತು.

2007: ನೂತನ 7 ಜಗತ್ತಿನ ಅದ್ಬುತಗಳ ಪ್ರತಿಷ್ಠಾನವು ಆಯೋಜಿಸಿದ್ದ ವಿಶ್ವವಯಾಪಿ ಸಮೀಕ್ಷೆಯಿಂದ ಮಾರ್ಡನ್ ವರ್ಲ್ಡಿನ ಹೊಸ ಏಳು ಅದ್ಬುತಗಳ ಅಧಿಕೃತ ಘೋಷಣೆಯನ್ನು ನಿರ್ಧರಿಸಲಾಯಿತು.

2011: ಸ್ವೀಡೆನ್ನಿನ ಶಸ್ತ್ರವೈದ್ಯರು ವಿಶ್ವದ ಮೊದಲ ಸಿನ್ಥೆಟಿಕ್ ಅಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದರು.

2014: ಇತಿಹಾಸ ಪೂರ್ವ ಪಕ್ಷಿ ಪ್ರಬೇಧಗಳಾದ ಪೆಲಾಗೋರ್ನಿಸ್ ಸ್ಯಾಂಡೆರಿಗಳ ಪಳೆಯುಳಿಕೆಯನ್ನು ಚಾರ್ಲ್ಸ್ಟನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾಯಿತು. ಇಲ್ಲಿಯವರೆಗೆ ಕಂಡ ಅತಿ ದೊಡ್ಡ ಪಕ್ಷಿಯಾಗಿದ್ದು ಅದರ ರೆಕ್ಕೆ 24 ಅಡಿಯಷ್ಟಿದ್ದವೆಂದು ಪತ್ತೆಯಾಯಿತು.

2015: ರಾಷ್ಟ್ರೀಯ ಹೈನು ಅಭೀವೃದ್ಧಿ ಮಂಡಳಿ “ಪಶು ಪೋಷಣೆ” ಎಂಬ ವೆಬ್ ಅಪ್ಲಿಕೇಶನ್ ಮತ್ತು ಆಂಡ್ರಾಯ್ಡ್ ಪ್ಲಾಟ್ಫಾರ್ಮ್ ಅಪ್ಲಿಕೇಶನ್ನನ್ನು ಆರಂಭಿಸಿತು.

ಪ್ರಮುಖ ಜನನ/ಮರಣ:

1752: ನೇಯ್ಗೆ ಮಾದರಿಯನ್ನು ಮಾಡಬಲ್ಲ ಮಗ್ಗವನ್ನು ಕಂಡುಹಿಡಿದ ಸಂಶೋಧಕ ಜೋಸೆಫ್ ಮೇರಿ ಜಾಕ್ವರ್ಡ್ ಜನಿಸಿದರು.

1973: ಭಾರತೀಯ ಖ್ಯಾತ ಗಾಯಕ ಕೈಲಾಶ್ ಖೇರ್ ಜನಿಸಿದರು.

1981: ಭಾರತೀಯ ಪ್ರಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಜನಿಸಿದರು.