Categories
e-ದಿನ

ಜೂನ್-5

 

ಪ್ರಮುಖ ಘಟನೆಗಳು:

1659: ದಾರೋ ಶಿಕೋಹ್ ಅವರು ತಮ್ಮ ಪಟ್ಟಾಭಿಷೇಕವನ್ನು ಡಿಯೋರೈನಲ್ಲಿ ಆಚರಿಸಿದರು.

1661: ಐಸಾಕ್ ನ್ಯೂಟನ್ ಅವರನ್ನು ಕೇಂಬ್ರಿಡ್ಜ್ ನಲ್ಲಿನ ಟ್ರಿನಿಟಿ ಕಾಲೇಜಿಗೆ ಪ್ರವೇಶ ನೀಡಲಾಯಿತು.

1833: ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದ ಆಡಾ ಲವ್ ಲೇಸ್ ಅವರು ಚಾರ್ಲ್ಸ ಬಾಬೇಜ್ ಅವರನ್ನು ಭೇಟಿ ಮಾಡಿದರು,

1857: ವಾಲ್ಟರ್ ವುಡ್ಬರಿ ಹಾಗೂ ಜೇಮ್ಸ್ ಪೇಜ್ ಸೇರಿ ಬಟಾವಿಯಾದಲ್ಲಿ ಒಂದು ಫೋಟೋ ಸ್ಟುಡಿಯೋ ತೆರೆದರು.

1873: ಸುಲ್ತಾನ್ ಬರ್ಗಶ್ ಜಂಜಿಬಾರಿನ ಗುಲಾಮರ ಮಾರುಕಟ್ಟೆಯನ್ನು ತೆರವುಗೊಳಿಸಿದರು.

1876: ಅಮೇರಿಕಾದಲ್ಲಿ ಬಾಳೆಹಣ್ಣು ಬಹಳ ಪ್ರಸಿದ್ದಿ ಪಡೆಯಿತು.

1882: ಅರಬ್ಬಿ ಸಮುದ್ರದಲ್ಲಿ ಉಂಟಾದ ಚಂಡಮಾರುತದಿಂದ ಬಾಂಬೆನಲ್ಲೆ ಪ್ರವಾಹ ಉಂಟಾಗಿ ಸುಮಾರು 1,00,000 ಜನ ಮುಳುಗಿದರು.

1913: ಡಚ್ ದೇಶದ ಅಂಗವಿಕಲರ ಕಾನೂನನ್ನು ಜಾರಿಗೆ ತರಲಾಯಿತು.

1915: ಡೆನ್ಮಾರ್ಕಿನ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು.

1922: ಬ್ಯಾಂಕರ್ಸ್ ಕಮಿಟಿ ಆಫ್ ದ ರಿಪ್ರೇಷನ್ಸ್ ಕಮಿಷನ್ ಜರ್ಮನಿ ದೇಶಕ್ಕೆ ಅಂತರಾಷ್ಟ್ರೀಯ ಸಾಲ ನೀಡಲು ನಿರಾಕರಿಸಿತು.

1933: ಚಿನ್ನದ ಗುಣಮಟ್ಟದ ಮಾನಕವನ್ನು ರದ್ದುಗೊಳಿಸಲಾಯಿತು.

1937: ಹೆನ್ರಿ ಫೋರ್ಡ್ ಮೊದಲ ಬಾರಿ ವಾರಕ್ಕೆ 32 ಕೆಲಸದ ಗಂಟೆಯ ಪರಿಕಲ್ಪನೆ ಪರಿಚಯಿಸಿದರು.

1940: ಗುಡ್ ಇಯರ್ ಟೈಯರ್ ಮತ್ತು ರಬ್ಬರ್ ಸಂಸ್ಥೆ ಸೇರಿ ಒಂದು ಸಿನ್ಥೆಟಿಕ್ ರಬ್ಬರ್ ಟೈಯರ್ ಅನ್ನು ಪ್ರದರ್ಶಿಸಲಾಯಿತು.

1952: ಮೊದಲ ಕ್ರೀಡಾಕೂಟವನ್ನು ರಾಷ್ಟ್ರೀಯವಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು.

1963: ಯುವರಾಣಿ ಮರಿಜ್ಕೆ ತನ್ನ ಹೆಸರನ್ನು ಕ್ರಿಸ್ಟೀನಾ ಎಂದು ಬದಲಾಯಿಸಿಕೊಂಡರು.

1966: ಭಾರತದ ರೂಪಾಯಿ ಮೌಲ್ಯವು ಶೇಕಡ 36.5 ರಷ್ಟು ಕಡಿಮೆಯಾಯಿತು.

1967: ಕೊಲೆಗಾರ ರಿಚರ್ಡ್ ಸ್ಪೆಕ್ ಅವರನ್ನು ಎಲೆಕ್ಟ್ರಿಕ್ ಚೇರಿನಲ್ಲಿ ಮರಣದಂಡನೆ ನೀಡಲಾಯಿತು.

1974: ಭಾರತ ದೇಶದಲ್ಲಿ “ಸಿಡುಬು” ಸಾಂಕ್ರಾಮಿಕ ರೋಗ ಪತ್ತೆಯಾಗಿತ್ತು.

1980: ಮಣಿಪುರ ವಿಶ್ವವಿದ್ಯಾಲಯವು ಸ್ಥಾಪಿತವಾಯಿತು.

1981: ಮೊದಲ ಬಾರಿಗೆ “ಏಡ್ಸ್” ರೋಗವನ್ನು ಗುರುತಿಸಲಾಯಿತು.

1984: ಅಮೃತಸರದಲ್ಲಿನ ಸಿಖ್ ದೇವಾಲಯವಾದ  ಸ್ವರ್ಣಮಂದಿರದಲ್ಲಿ ಅಡಗಿದ್ದ ಉಗ್ರಗಾಮಿಗಳ ವಿರುದ್ದ ಅಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.

1989:ಯುದ್ಧ ಕ್ಷಿಪಣಿ “ತ್ರಿಶೂಲ್” ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.

1995: ಮೂರು ವಾರಗಳ ಕಾಲದ ಮೊಟ್ಟ ಮೊದಲ ಇಂಡೋ-ಅಮೇರಿಕಾ ಜಂಟಿ ಸೈನ್ಯದ ಕವಾಯತು ಆರಂಭವಾಯಿತು.

1998: ಉರ್ದು ಲೇಖಕರಾದ ಅಲಿ ಜಫ್ರಿ ಅವರಿಗೆ 1997ರ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2003: ಪಾಕಿಸ್ತಾನ ಮತ್ತು ಭಾರತದ ಹಲವು ಪ್ರದೇಶಗಳಲ್ಲಿ ತೀವ್ರವಾದ ಶಾಖ ತರಂಗವು ಉತ್ತುಂಗಕ್ಕೇರಿ ತಾಪಮಾನವು 50o ಸೆಲ್ಸಿಯಸ್ ತಲುಪಿತು.

ಪ್ರಮುಖ ಜನನ/ಮರಣ:

1865: ಪ್ರಖ್ಯಾತ ಭಾರತೀಯ ಶಿಕ್ಷಣ ತಜ್ಞ ಸತೀಶ್ ಚಂದ್ರ ಮುಖರ್ಜಿ ಜನಿಸಿದರು.

1893: 1945-47 ದಲ್ಲಿ ಜಮ್ಮು ಕಾಶ್ಮೀರದ ಪ್ರಧಾನ ಮಂತ್ರಿ ಆಗಿದ್ದ ರಾಮಚಂದ್ರ ಕಕ್ ಜನಿಸಿದರು.

1952: ಭಾರತದ ಚಲನಚಿತ್ರ ನಿರ್ಮಾಪಕರಾದ ಮುಕೇಶ್ ಭಟ್ ಜನಿಸಿದರು.

1961: ಭಾರತದ ಟೆನ್ನುಸ್ ಆಟಗಾರ ರಮೇಶ್ ಕೃಷ್ಣನ್ ಜನಿಸಿದರು.

1973: ಹಿಂದೂ ರಾಷ್ಟ್ರೀಯತಾವಾದಿ ನಾಯಕರಾದ ಎಂ.ಎಸ್.ಗೋಲ್ವಾಲ್ಕರ್ ನಿಧನರಾದರು.