Categories
e-ದಿನ

ಡಿಸೆಂಬರ್-7

 

ಪ್ರಮುಖ ಘಟನಾವಳಿಗಳು:

1909: ಸಂಶೋಧಕ ಲಿಯೋ ಬೇಕ್ಲಾಂಡ್ ಅವರು ಪ್ಲಾಸ್ಟಿಕ್ ಉದ್ಯಮವನ್ನು ಚುರುಕುಗೊಳಿಸುವ ಮೊದಲ ಥರ್ಮೋ-ಸೆಟ್ಟಿಂಗ್ ಪ್ಲಾಸ್ಟಿಕ್ ಆದ ಬಾಕ್ಲೈಟ್ ಅನ್ನು ಪೇಟೆಂಟ್ ಮಾಡಿದರು.

1926: ಅನಿಲದಿಂದ ಕಾರ್ಯನಿರ್ವಸುವ ರೆಫ್ರಿಜಿರೇಟರ್ ಅನ್ನು ದಿ ಎಲೆಕ್ಟ್ರೊಲಕ್ಸ್ ಸರ್ವೆಲ್ ಕಾರ್ಪೊರೇಷನ್ ಸಂಸ್ಥೆ ಪೇಟೆಂಟ್ ಪಡೆಯಿತು.

1934: ವಿಲಿ ಪೋಸ್ಟ್ ಜೆಟ್ ಸ್ಟ್ರೀಮ್ ಅನ್ನು ಕಂಡು ಹಿಡಿದರು.

1937: ಮುಂಬೈಯ ಐತಿಹಾಸಿಕ ಬ್ರಬೌರ್ನ್ ಕ್ರೀಡಾಂಗಣವನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು.

1941: ಜಪಾನಿನ ವಿಮಾನಗಳು ಅಮೇರಿಕಾದ ನೌಕಾ ನೆಲೆಯಾದ ಪರ್ಲ್ ಹಾರ್ಬರ್ ಭೂಪ್ರದೇಶದಲ್ಲಿ ದಾಳಿ ಮಾಡಿದ ಕಾರಣ 2,300 ಅಮೇರಿಕರು ಮೃತಪಟ್ಟರು.

1945: ಮೈಕ್ರೊವೇವ್ ಓವನ್ ಅನ್ನು ಪೇಟೆಂಟ್ ಮಾಡಲಾಯಿತು.

1949: ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಯೋಗಕ್ಷೇಮಕ್ಕಾಗಿ ದೇಶಾದ್ಯಂತ ಜನರಿಂದ ಹಣ ಸಂಗ್ರಹಿಸಲು ಡಿಸೆಂಬರ್ 7 ರಂದು ಪ್ರತಿ ವರ್ಷ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ.

1982: ಮಾರಕ ಚುಚ್ಚುಮದ್ದಿನಿಂದ ಮೊದಲ ಮರಣದಂಡನೆಯನ್ನು ಟೆಕ್ಸಾಸಿನ ಹಣ್ಸ್ವಿಲ್ಲಿನ ರಾಜ್ಯ ಸೆರೆಮನೆಯಲ್ಲಿ ಮಾಡಲಾಯಿತು.

1997: ಒಂದು ಶತಮಾನದ ಹಿಂದೆ 1,00,000 ದಿಂದ ವಿಶ್ವದ ಹುಲಿಗಳ ಸಂಖ್ಯೆ 6000 ಕ್ಕೆ ಇಳಿದಿದೆ ಎಂದು ವರದಿ ಮಾಡಲಾಯಿತು.

2011: ಭಾರತದ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಭಾರತಕ್ಕೆ ವಿದೇಶಿ ಸೂಪರ್ ಮಾರ್ಕೆಟ್ ಗಳನ್ನು ಅನುಮತಿಸಲು ಚಿಲ್ಲರೆ ಸುಧಾರಣೆ ಅನಿರ್ಧಿಷ್ಟವಾಗಿ ಅಮಾನತುಗೊಳಿಸಲಾಗುವುದೆಂದು ಧೃಡಪಡಿಸಿದರು.

ಪ್ರಮುಖ ಜನನ/ಮರಣ:

1902: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಜನಾರ್ಧನ್ ನಾವ್ಲೆ ಜನಿಸಿದರು.

1921: ಸ್ವಾಮಿನಾರಾಯಣನ ಐದನೇ ಉತ್ತರಾಧಿಕಾರಿ ಪ್ರಮುಖ್ ಸ್ವಾಮಿ ಮಹಾರಾಜ್ ಜನಿಸಿದರು.

1923: ಭಾರತದ ಪಾಕಿಸ್ತಾನದ ಲೇಖಕ ಮತ್ತು ವಿದ್ವಾಂಸ ಇಂತೆಜಾರ್ ಹುಸ್ಸೇನ್ ಜನಿಸಿದರು.

1928: ಖ್ಯಾತ ಭಟರನಾಟ್ಯ ನೃತ್ಯಗಾರ್ತಿ ಮತ್ತು ಗುರು ಕಲಾನಿಧಿ ನಾರಾಯಣ್ ಜನಿಸಿದರು.

1939: ತಮಿಳು ಚಿತ್ರರಂಗದ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಲ್.ಆರ್.ಈಶ್ವರಿ ಜನಿಸಿದರು.

1975: ತೆಲುಗು ಚಿತ್ರರಂಗದ ಚಿತ್ರ ನಿರ್ದೇಶಕ ಸುಂದರ್ ರೆಡ್ಡಿ ಜನಿಸಿದರು.

1985: ಭಾರತದ ಟೆನ್ನಿಸ್ ಆಟಗಾರ ಪೂರವ್ ರಾಜಾ ಜನಿಸಿದರು.

1985: ಮಲಯಾಳಂ ಚಿತ್ರರಂಗದಲ್ಲಿ ಭಾರತೀಯ ಚಿತ್ರಕಥೆಗಾರರಾದ ಬಾಬಿ-ಸಂಜಯ್ ಜನಿಸಿದರು.

2001: ಭಾರತೀಯ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕ ಸುಬ್ರತಾ ಮಿತ್ರಾ ನಿಧನರಾದರು.

2013: ತೆಲುಗು ಚಿತ್ರರಂಗದ ನಟ ಮತ್ತು ನಿರ್ದೇಶಕ ಧರ್ಮವರಪು ಸುಬ್ರಮಣ್ಯಂ ನಿಧನರಾದರು.