Categories
e-ದಿನ

ನವೆಂಬರ್-3

 

ಪ್ರಮುಖ ಘಟನಾವಳಿಗಳು:

1838: “ಟೈಮ್ಸ್ ಆಫ್ ಇಂಡಿಯಾ” ದಿನ ಪತ್ರಿಕೆಯನ್ನು ಸ್ಥಾಪಿಸಲಾಯಿತು.

1896: ಸಾಗಿಸಬಹುದಾದ ತೂಕದ ಮಾಪಕಕ್ಕೆ ಜೆ.ಹೆಚ್.ಹಂಟರ್ ಅವರು ಪೇಟೆಂಟ್ ಪಡೆದರು.

1913: ಅಮೇರಿಕಾದಲ್ಲಿ ಮೊದಲ ಬಾರಿಗೆ ಅಮೇರಿಕಾದ ನಾಗರೀಕರು ಆದಾಯ ತೆರಿಗೆಯ ಬಗ್ಗೆ ಮಾಹಿತಿ ಪಡೆದರು.

1930: ಬ್ಯಾಂಕ್ ಆಫ್ ಇಟಲಿ, ಬ್ಯಾಂಕ್ ಆಫ್ ಅಮೇರಿಕಾ ಎಂದು ಮಾರ್ಪಾಡು ಮಾಡಲಾಯಿತು.

1931: ಮೊದಲ ವಾಣಿಜ್ಯಕವಾಗಿ ತಯಾರಿಸಲಾದ ಸಂಶ್ಲೇಷಿತ ರಬ್ಬರನ್ನು ತಯಾರಿಸಲಾಯಿತು.

1954: ಜಪಾನಿನ ವೈಜ್ಞಾನಿಕ ಕಾದಂಬರಿಯ ದೈತ್ಯಾಕಾರದ ರಾಕ್ಷಸನ ಚಲನಚಿತ್ರವಾದ “ಗಾಡ್ಜಿಲ್ಲಾ” ಬಿಡುಗಡೆಯಾಯಿತು.

1955: ಮೊದಲ ಬಾರಿಗೆ “ವೈರಸ್ಸನ್ನು” ಸ್ಪಟೀಕರಣ ಮಾಡಲಾಗಿದೆ ಎಂದು ಘೋಷಿಸಲಾಯಿತು.

1957: ರಷ್ಯಾದ ಬಾಹ್ಯಾಕಾಶನೌಕೆಯಾದ ಸ್ಪುಟ್ನಿಕ್ 2ರಲ್ಲಿ ಮೊದಲ ಪ್ರಾಣಿಯಾದ ನಾಯಿಯನ್ನು ಭೂಮಿಯ ಕಕ್ಷೆಗೆ ರವಾನಿಸಲಾಯಿತು. ಭೂಮಿಯ ಕಕ್ಷೆಯನ್ನು ತಲುಪಿದ ಮೊದಲ ಜೀವಂತ ಪ್ರಾಣಿಯಾಯಿತು.

1975: ಬ್ರಿಟನ್ನಿನ ಮಹಾರಾಣಿ ಬ್ರಿಟನ್ ದೇಶದ ಮೊದಲ ತೈಲ ಸುರಂಗವನ್ನು ಉದ್ಘಾಟಿಸಿದರು.

1984: ಭಾರತದಲ್ಲಿ 3 ದಿನ ಸಿಖ್ಖರ ಮೇಲೆ ನಡೆದ ಗಲಭೆಯಲ್ಲಿ 2733 ಜನರು ನಿಧನರಾದರು.

1984: ಹತ್ಯೆಯಾದ ಭಾರತೀಯ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಅಂತ್ಯಕ್ರಿಯೆ ನಡೆಸಲಾಯಿತು.

ಪ್ರಮುಖ ಜನನ/ಮರಣ:

1618: ಮುಘಲ್ ಸಾಮ್ರಾಟ ಔರಂಗಜೇಬ್ ಜನಿಸಿದರು.

1901: ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ಉದ್ಯಮದ ಪ್ರವರ್ತಕರಾಗಿದ್ದ ಪೃಥ್ವಿರಾಜಕಪೂರ್ ಜನಿಸಿದರು.

1917: ಭಾರತದ ಕಾರ್ಯಕರ್ತೆ ಅನ್ನಪೂರ್ಣ ಮಹಾರಾಣ ಜನಿಸಿದರು.

1933: ನೋಬಲ್ ಪ್ರಶಸ್ತಿ ಪುರಸ್ಕೃತ ಅಮಾರ್ತ್ಯ ಸೆನ್ ಜನಿಸಿದರು.

1937: ಹಿಂದಿ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಜೋಡಿಯಾಗಿದ್ದ ಲಕ್ಷ್ಮಿಕಾಂತ್  ಮತ್ತು ಪ್ಯಾರೆಲಾಲ್ ಜನಿಸಿದರು.

1954: ಹಿಂದಿ ಚಲನಚಿತ್ರ ರಂಗದ ಖ್ಯಾತ ಹಾಸ್ಯ ನಟ ಲಕ್ಷ್ಮಿಕಾಂತ್ ಬೆರ್ದೆ ಜನಿಸಿದರು.

1974: ಖ್ಯಾತ ಹಿಂದಿ ಮತ್ತು ಮರಾಠಿ ನಟಿ ಸೊನಾಲಿ ಕುಲ್ಕರ್ಣಿ ಜನಿಸಿದರು.

1992: ರಾಜಸ್ಥಾನದ ಜಾನಪದ ಗಾಯಕ ಅಲ್ಲಾ ಜಿಲಾಯ್ ಬಾಯಿ ನಿಧನರಾದರು.

2010: ಕವಿ, ಪ್ರಬಂಧಕಾರ, ಅನುವಾದಕ, ಪ್ರಾಧ್ಯಾಪಕ ಮತ್ತು ಪ್ರಕಾಶಕ ಹಾಗೂ ರೈಟರ್ಸ್ ವರ್ಕ್ ಶಾಪಿನ ಸಂಸ್ಥಾಪಕ ಪುರುಷೋತ್ತಮ ಲಾಲ್ ನಿಧನರಾದರು.

2012: ಗುಜರಾತಿನ 18ನೇ ರಾಜ್ಯಪಾಲರಾಗಿದ್ದ ಕೈಲಾಶಪತಿ ಮಿಶ್ರ ನಿಧನರಾದರು.